ದೂರವಾಣಿ : 080-69999676
ಇಮೇಲ್ : Info@Vijayataranga.com


   ಕಳೆದ 18 ವರ್ಷಗಳಿಂದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿದ್ದ ಕತ್ತರಿಯನ್ನು ವೈದ್ಯರು ಯಶಸ್ವಿ ಚಿಕಿತ್ಸೆ ನಡೆಸಿ ತೆಗೆದುಹಾಕಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಳೆದ ಡಿಸೆಂಬರ್‌ನರೆಗೆ ವ್ಯಕ್ತಿಗೆ ತನ್ನ ಹೊಟ್ಟೆಯಲ್ಲಿ ಕತ್ತರಿಯಿದೇ      ಎನ್ನುವುದೇ ತಿಳಿದಿರಲಿಲ್ಲ. ಆತನಿಗೆ ರಸ್ತೆ ಅಪಘಾತ ಸಂಭವಿಸಿದಾಗ ವೈದ್ಯರು ಎಕ್ಸ್‌-ರೇ ತೆಗೆದಾಗ ಆತನ ಹೊಟ್ಟೆಯಲ್ಲಿ ಕತ್ತರಿಯಿರುವುದು ಕಂಡು ಬಂದಿದೆ. ಉತ್ತರ ವಿಯಟ್ನಾಂನ ನುಗುವಾಯಾನ್ ಥಾಯಿ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಮೂರು    ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 15 ಸೆಂಟಿಮೀಟರ್ ಉದ್ದದ ಕತ್ತರಿಯನ್ನು ಹೊರತೆಗೆದಿದ್ದಾರೆ.
 ಳೆದ 1998 ರಲ್ಲಿ ಬಾಕ್ ಕಾನ್ ಜನರಲ್ ಆಸ್ಪತ್ರೆಯಲ್ಲಿ ಆಪರೇಶನ್‌ಗೆ ಒಳಗಾಗಿದ್ದಾಗ ಕತ್ತರಿ ಆತನ ಹೊಟ್ಟೆಯಲ್ಲಿಯೇ ಉಳಿದಿತ್ತು. 54 ವರ್ಷದ ವ್ಯಕ್ತಿಗೆ ಹೊಟ್ಟೆಯಲ್ಲಿರುವ ಕತ್ತರಿಯಿಂದ ಯಾವುದೇ ನೋವು ಅನುಭವಿಸಿರಲಿಲ್ಲವಂತೆ.  ಘಟನೆಯ ಬಗ್ಗೆ ಆರೋಗ್ಯ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.

Ads
;