ದೂರವಾಣಿ : 080-69999676
ಇಮೇಲ್ : Info@Vijayataranga.com


     12 

 ಭಗ್ನ ಪ್ರೇಮಿಯಿಂದ ನಡು ರಸ್ತೆಯಲ್ಲಿ ಯುವತಿಗೆ ಬೆಂಕಿ

 ಡಿಸೆಂಬರ್-22

 ಹೈದ್ರಾಬಾದ್ : ಇಲ್ಲಿನ ಸಿಕಂದರಾಬಾದ್ನ ಲಲ್ಲಾಗುಡ್ಡಾ ಎಂಬಲ್ಲಿ ಭಗ್ನ ಪ್ರೇಮಿಯೊಬ್ಬ 25 ವರ್ಷ ಪ್ರಾಯದ ಯುವತಿಯ ಮೇಲೆ ನಡು ರಸ್ತೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಿನ್ನೆ ನಡೆದಿದೆ. 
ವರದಿಯಾದಂತೆ ಸಂಧ್ಯಾರಾಣಿ ಎಂಬ ಖಾಸಗಿ ಸಂಸ್ಥೆಯ ಉದ್ಯೋಗಿಯ ಪರಿಚಯಸ್ಥನೇ ಆಗಿದ್ದ ಕಾರ್ತಿಕ್ ಎಂಬ ಯುವಕ ಕಳೆದೊಂದು ವರ್ಷದಿಂದ ಪ್ರೀತಿಸುವಂತೆ ಬೆನ್ನು ಬಿದ್ದಿದ್ದ. ಸಂಧ್ಯಾ ಪ್ರೀತಿ ನಿರಾಕರಿಸಿ ನಾವಿಬ್ಬರು ಸ್ನೇಹಿತರಾಗಿ ಇರುವ ಎಂದಿದ್ದಳು ಎಂದು ಹೇಳಲಾಗಿದೆ. ಪ್ರೀತಿ ನಿರಾಕರಿಸಿದ್ದರಿಂದ ಕುಪಿತನಾಗಿ ಕಾರ್ತಿಕ್ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ದೌಡಾಯಿಸಿ ಬೆಂಕಿ ನಂದಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಧ್ಯಾ ದೇಹದ 70 % ಚರ್ಮ ಸಂಪೂರ್ಣ ಸುಟ್ಟು ಹೋಗಿದ್ದು ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಲಲ್ಲಾಗುಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಕಾರ್ತಿಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

 

    12

 ರೌಡಿಗಳ ಅಟ್ಟಹಾಸಕ್ಕೆ ಯುವಕ ಬಲಿ

 ಡಿಸೆಂಬರ್-22

 ಬೆಂಗಳೂರು : ನಗರದ ಡಿ.ಜೆ ಹಳ್ಳಿಯ ನೂರ್ ಮಸೀದ್ ಬಳಿ ರಾತ್ರಿ 12 ರ ಸುಮಾರಿಗೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಡ್ರಾಗನ್ ನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. 
ರಿಜ್ವಾನ್ (23) ಕೊಲೆಯಾದ ವ್ಯಕ್ತಿಯಾಗಿದ್ದು, ನಿನ್ನೆ ರಾತ್ರಿ ರಿಜ್ವಾನ್ ಅಣ್ಣನ ಮದುವೆ ಇತ್ತು ಈ ವೇಳೆ ಚೋಟ ಶಾಹಿದ್ ಮತ್ತು ಆತನ ಸಹಚರರು ಮನೆಯಲ್ಲಿದ್ದ ರಿಜ್ವಾನ್ ನನ್ನು ಆಚೆ ಕರೆದು ಡ್ರಾಗನ್ ನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ರಿಜ್ವಾನ್ ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾನೆ.ಘಟನಾ ಸ್ಥಳಕ್ಕೆ ಡಿ.ಜೆ. ಹಳ್ಳಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ಪರಾರಿಯಾಗಿರುವ ಅರೋಪಿಗಳನ್ನು ಪೊಲೀಸರು ಬಲೆ ಬೀಸಿದ್ದಾರೆ

 

 

 

    12 

 ಐವರು ಬಾಲಕರಿಂದ ಸಾಮೂಹಿಕ ಅತ್ಯಾಚಾರ

 ಡಿಸೆಂಬರ್-22

 ನವದೆಹಲಿ: ಅತ್ಯಾಚಾರಗಳ ರಾಜಧಾನಿ ಎಂದೇ ಕುಖ್ಯಾತಿ ಪಡೆದಿರುವ ದೆಹಲಿಯಲ್ಲಿ ಗ್ಯಾಂಗ್-ರೇಪ್ ಪ್ರಕರಣಗಳು ಮರುಕಳಿಸುತ್ತಿವೆ. 20 ವರ್ಷದ ಯುವತಿ ಮೇಲೆ ಐವರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಹಂಗಿರ್ಪುರಿಯಲ್ಲಿ ನಡೆದಿದ್ದು, ಮಹಿಳೆಯರು ಬೆಚ್ಚಿ ಬೀಳುವಂತಾಗಿದೆ. ಐದು ದಿನಗಳ ಹಿಂದಷ್ಟೇ ದೆಹಲಿ ಶಾಲಿಮಾರ್ ಭಾಗ್ನಲ್ಲಿ ಮೂವರು ಯುವಕರಿಂದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ ನಡೆದಿದೆ.ಜಹಂಗೀರ್ಪುರಿಯಲ್ಲಿನ ನಗರಸಭೆ ಕಸ ಸುರಿಯುವ ಪ್ರದೇಶದ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರನ್ನು ಆಧರಿಸಿ ಜಹಂಗೀರ್ಪುರಿ ಠಾಣೆ ಪೊಲೀಸರು ಐವರು ಬಾಲಕರನ್ನು ಬಂಧಿಸಿದ್ದಾರೆ. ಶಾಲೆಯನ್ನು ಅರ್ಧಕ್ಕೆ ತ್ಯಜಿಸಿರುವ ಈ ಬಾಲಕರು ಕಸ ಸುರಿಯುವ ಸ್ಥಳದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಅಲ್ಲಿ ಕಾಲೋನಿ ಬಳಿ ವಾಸವಾಗಿರುವ ಇವರಿಗೆ ಯುವತಿಯ ಪರಿಚಯವಿತ್ತು. ಬುಧವಾರ ರಾತ್ರಿ 10 ಗಂಟೆಯಲ್ಲಿ ಆಕೆ ಮನೆಯಿಂದ ಹೊರಗೆ ಬಂದಾಗ ಐವರು ಬಾಲಕರು ಆಕೆಯನ್ನು ಹತ್ತಿರದ ಅಪಾರ್ಟ್ಮೆಂಟ್ನ ನಿರ್ಜನ ಪ್ರದೇಶಕ್ಕೆ ಎಳೆದೊಯ್ಡು ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದರು. ನಂತರ ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಎಚ್ಚರಿಕೆ ನೀಡಿದ್ದರು. ಬಂಧಿತ ಬಾಲಕರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಘಟನೆ ಸಂಬಂಧ ಆಕೆಯ ಗೆಳೆಯನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

 

 

    123 

 ಪತಿಯ ಸಹೋದರ, ಸ್ನೇಹಿತನಿಂದ ಗ್ಯಾಂಗ್ ರೇಪ್

 ಡಿಸೆಂಬರ್-22

 ಮೀರುತ್: ತ್ರಿವಳಿ ತಲಾಖ್ ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಅಂತಿಮ ಸಿದ್ಧತೆಯಲ್ಲಿರುವಾಗಲೇ ಉತ್ತರ ಪ್ರದೇಶದಲ್ಲಿ ಪತಿಯ ನೀಚ ಕೃತ್ಯಕ್ಕೆ ಮಹಿಳೆಯೋರ್ವಳ ಜೀವನ ಹೀನಾಯ ಸ್ಥಿತಿಗೆ ತಲುಪಿದೆ. ಮದುವೆಯಾದ ಬೆನ್ನಲ್ಲೇ ನೀಚ ಪತಿ ಸೇರಿದಂತೆ ಮೂವರು ಕಾಮುಕರು 24 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ನಡೆದಿದೆ. ಅಷ್ಟು ಮಾತ್ರವಲ್ಲದೇ ಮದುವೆಯಾದ ಒಂದೇ ವಾರಕ್ಕೆ ಪತ್ನಿಗೆ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಪತಿ ಹಾಗೂ ಆತನ ಸಹೋದರರು ಸೇರಿದಂತೆ ಮೂವರ ವಿರುದ್ಧ ಸಂತ್ರಸ್ತ ಮಹಿಳೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದೇ ಡಿಸೆಂಬರ್ 1ರಂದು ಮಹಿಳೆ ಆರೋಪಿ ಮೊಹಮ್ಮದ್ ರಶೀದ್ ಎಂಬುವನನ್ನು ವಿವಾಹವಾಗಿದ್ದರು. ಘಚನೆ ಸಂಬಂಧ ದೂರಿನಲ್ಲಿ ಪತಿ ಸಹೋದರ ಮತ್ತು ಆತನ ಸ್ನೇಹಿತನ ವಿರುದ್ಧ ಅತ್ಯಾಚಾರ ದೂರು ನೀಡಿರುವ ಮಹಿಳೆ, "ಮದುವೆಯಾದ ಮಾರನೇ ದಿನ ಬೆಡ್ ರೂಮ್ ನಲ್ಲಿ ಪತಿಗಾಗಿ ಕಾಯುತ್ತಿದ್ದೆ. ಈ ವೇಳೆ ಪತಿಯ ಸಹೋದರ ಮೊಹಮ್ಮದ್ ರಖೀಬ್ ಹಾಗೂ ಆತನ ಸ್ನೇಹಿತ ಬೆಡ್ ರೂಮ್ ಗೆ ನುಗ್ಗಿ ಅತ್ಯಾಚಾರ ಎಸಗಿದರು. ಅಲ್ಲದೆ ಕೃತ್ಯದ ವೀಡಿಯೋ ಮಾಡಿದ್ದಾರೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಘಟನೆ ಸಂಬಂಧ ಪತಿ ರಶೀದ್ ಗೆ ದೂರು ನೀಡಿದರೆ, ಆತ ಪತ್ನಿಯ ಸಹಾಯಕ್ಕೆ ನಿಲ್ಲದೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಈಗಾಗಲೇ ಮಹಮದ್ ರಶೀದ್ ಗೆ ವಿವಾಹವಾಗಿದ್ದು, ಆತನ ಇನ್ನೊಂದು ವಿವಾಹದ ಬಗ್ಗೆ ಮಾಹಿತಿಯೇ ಇಲ್ಲ. ಆತನಿಗೆ ಮೊದಲ ಪತ್ನಿ ಇರುವಾಗ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರು ಬುಲಂದ್ ಶಹರ್ ಪೊಲೀಸರು ಪ್ರಾಥಮಿಕ ನಡೆಸಿದ್ದು, "ಆರೋಪಿ ರಶೀದ್ ಹಾಗೂ ಸಂತ್ರಸ್ತ ಮಹಿಳೆಯ ನಡುವೆ ನಿಖಾನಾ ಮಾತ್ರ ನಡೆದಿದೆ. ಇವರಿಬ್ಬರ ವಿವಾಹದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಪ್ರಕರಣ ಸಂಬಂಧ ತನಿಖೆ ಮಾಡುತ್ತೇವೆ ಎಂದು ಬುಲಂದ್ ಶಹರ್ನ ಕೊಟ್ಟಾಲಿ ಪೊಲೀಸ್ ಠಾಣಾಧಿಕಾರಿ ಧನಂಜಯ್ ಮಿಶ್ರಾ ತಿಳಿಸಿದ್ದಾರೆ.

 

 

hh

 


ಕುಡಿದ ಅಮಲಿನಲ್ಲಿ ಸ್ನೇಹಿತನ ಹತ್ಯೆ

 ಅಕ್ಟೋಬರ್ 23
ಮೈಸೂರು : ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಯುವಕನ ಹತ್ಯೆ ನಡೆದಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ತಾಲೂಕಿನ ಚಲ್ಲಹಳ್ಳಿ ಗ್ರಾಮದ ಯೋಗೇಶ್ (28) ಕೊಲೆಯಾದ ಯುವಕ. ನಿನ್ನೆ ರಾತ್ರಿ ಕುಡಿದು ವಾಪಸ್ ಬರುವ ಸಂದರ್ಭದಲ್ಲಿ ಸ್ನೇಹಿತರು ಜಗಳ ತೆಗೆದಿದ್ದಾರೆ. ಈ ವೇಳೆ ಯೋಗೇಶನ ಕೈ, ಕಾಲುಗಳನ್ನು ಕಟ್ಟಿ ಕತ್ತನ್ನು ತಿರುಗಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಗ ರಾತ್ರಿಯಾದರೂ ಮನೆಗೆ ಬಾರದ್ದರಿಂದ ಗಾಬರಿಗೊಂಡ ತಂದೆ ಹುಡುಕಲು ಆರಂಭಿಸಿದಾಗ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಳಿಕೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

 

Ads
;