ದೂರವಾಣಿ : 080-69999676
ಇಮೇಲ್ : Info@Vijayataranga.com


 

    12  

 ಹಸಿವಿನಿಂದ ಸತ್ತ ಚಿರತೆ, ಒಂದೇ ದಿನ 2 ಚಿರತೆ ಸಾವು

 ಡಿಸೆಂಬರ್ -22

 ಉಡುಪಿ: ಮೂರು ತಿಂಗಳ ವಯಸ್ಸಿನ ಚಿರತೆಯೊಂದು ಹಸಿವಿನಿಂದ ನರಳಿ ಸಾಯುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮೂರು ಚಿರತೆಗಳ ಪೈಕಿ ಒಂದು ಈ ರೀತಿ ನರಳಿ ಸಾಯುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ. ಇಲ್ಲಿನ ಅರಣ್ಯ ಇಲಾಖೆ ವ್ಯಾಫ್ತಿಗೆ ಸೇರಿದ ರಕ್ಷಿತಾರಣ್ಯದಲ್ಲಿ ಈ ರೀತಿ ಎರಡು ಚಿರತೆಗಳು ಸಾವನ್ನಪ್ಪಿದ್ದು, ಒಂದು ಆನೆ ಕೂಡ ಉಸಿರುಗಟ್ಟಿ ಆಘಾತದಿಂದ ಸಾವಿಗೀಡಾಗಿದೆ ಎನ್ನಲಾಗಿದೆ. ಮೇಲ್ನೋಟಕ್ಕೆ ಈ ಚಿರತೆಗಳು ಆಹಾರವಿಲ್ಲದೆ ಸತ್ತಿವೆ ಎನ್ನಲಾಗುತ್ತಿದೆ. ಹೊಟ್ಟೆಯಲ್ಲಿ ಕೇವಲ ಹುಲ್ಲು ಪತ್ತೆಯಾಗಿದೆ ಅಂತಾರೆ ಅರಣ್ಯಾಧಿಕಾರಿಗಳು. ಹೊಟ್ಟೆ ನೋವಿನ ಕಾರಣಕ್ಕೆ ಚಿರತೆ ಹುಲ್ಲು ತಿಂದಿರುವ ಸಾಧ್ಯತೆಯೂ ಇದೆ. ಏಕಕಾಲದಲ್ಲಿ ಎರಡು ಚಿರತೆಗಳು ಸತ್ತಿರುವ ಕಾರಣ ವಿಷಾಹಾರ ಸೇವಿಸಿರಬೇಕು ಅನ್ನೋ ಸಂಶಯವೂ ಇದೆ. ಮರಣೋತ್ತರ ವರದಿ ಬಂದ ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ. ಆದರೆ, ನಡೆಯಲಾಗದೆ ಒದ್ದಾಡುವ ಚಿರತೆಯನ್ನು ಕಂಡರೆ ಮರುಕಹುಟ್ಟುತ್ತೆ.

 

    123 

 ನಾಳೆ, ನಾಡಿದ್ದು ರಾಜ್ಯಾದ್ಯಂತ ವಿಎಚ್ ಪಿ ಪ್ರತಿಭಟನೆ

 ಡಿಸೆಂಬರ್.12

 ಉಡುಪಿ: ಹೊನ್ನಾವರದಲ್ಲಿ ಪರೇಶ್ ಮೇಸ್ತ ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಗಾಗಿ ಆಗ್ರಹಿಸಿ ಹಾಗೂ ಹೊನ್ನಾವರದ ಗುಡ್ ಲಕ್ ಹೋಟೆಲ್ ಓನರ್ ಆಜಾದ್ ಅಣ್ಣಿಗೆರೆಯನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಬುಧವಾರ ಮತ್ತು ಗುರುವಾರ ರಾಜ್ಯಾದ್ಯಂತ ವಿಶ್ವಹಿಂದೂ ಪರಿಷತ್ ಪ್ರತಿಭಟನೆ ನಡೆಸಲಿದೆ ಎಂದು ವಿಎಚ್ ಪಿ ಮುಖಂಡ ವಿ.ಗೋಪಾಲ್ ತಿಳಿಸಿದ್ದಾರೆ. 
ಹೊನ್ನಾವರದಲ್ಲಿ ಪರೇಶ್ ಮೇಸ್ತನ ಸಾವಿನ ತನಿಖೆಯನ್ನು ರಾಜ್ಯ ಸರ್ಕಾರ ನಿಷ್ಪಕ್ಷಪಾತವಾಗಿ ಮಾಡುವ ಭರವಸೆ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಎಂಬ ಒತ್ತಾಯದೊಂದಿಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ವಿಎಚ್ ಪಿ ಹಿಂದೂ ಸಂಘಟನೆಗಳ ಜತೆ ಸೇರಿಕೊಂಡು 2 ದಿನಗಳ ಕಾಲ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಬಳಿಕ ರಾಜ್ಯಪಾಲರಿಗೆ ಮನವಿಯನ್ನು ನೀಡಲಾಗುವುದು ಎಂದು ಗೋಪಾಲ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಹೊನ್ನಾವರದ ಗುಡ್ ಲಕ್ ಹೋಟೆಲ್ ಮಾಲೀಕ ಆಜಾದ್ ಅಣ್ಣಿಗೆರೆ ಕೆಲವರಿಗೆ ಕುಮ್ಮಕ್ಕು ನೀಡುತ್ತಿದ್ದು, ಕೂಡಲೇ ಬಂಧಿಸಬೇಕು ಎಂದರು.

 

 

                                      

ಐದೇ ವರ್ಷದಲ್ಲಿ ಬೆಂಗಳೂರು ಡೆಡ್ಲಿ ಸಿಟಿ..!

ಡಿಸೆಂಬರ್-9 

ಉಡುಪಿ: ಕೇವಲ 200 ವರ್ಷಗಳ ಹಿಂದೆ ಬೇಸಗೆಯಲ್ಲಿ 14 ಡಿಗ್ರಿ ಸೆ. ಉಷ್ಣಾಂಶವನ್ನು ಅನುಭವಿಸಿದ್ದ ಬೆಂಗಳೂರಿಗರು ಇಂದು 34 ಡಿಗ್ರಿ ಸೆ. ಉಷ್ಣಾಂಶದಲ್ಲಿ ಕಂಗೆಡುವ ಸ್ಥಿತಿ ಇದೆ. ಡಿಸೆಂಬರ್ನಲ್ಲಿ ಶೂನ್ಯ ಡಿಗ್ರಿ ಉಷ್ಣಾಂಶವನ್ನು ಹೊಂದಿ ಸೇಬು ಹಣ್ಣುಗಳನ್ನು ಬೆಳೆಯುತ್ತಿದ್ದ ಬೆಂಗಳೂರು, ಇದೀಗ ಕಾಂಕ್ರೀಟ್ ಕಾಡಾಗಿ ಮಾರ್ಪಟ್ಟಿದೆ.
ಪ್ರಕೃತಿ ವಿರೋಧಿ ಚಟುವಟಿಕೆಗಳು ಹೀಗೆಯೇ ಮುಂದುವರೆದರೆ ಇನ್ನೈದು ವರ್ಷಗಳಲ್ಲಿ ರಾಜಧಾನಿ ಸಮಾಧಿ ನಗರವಾಗಿ (ಡೆಡ್ಲಿ ಸಿಟಿ) ಮಾರ್ಪಡುತ್ತದೆ ಎಂದು ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಹಿರಿಯ ವಿಜ್ಞಾನಿ ಪ್ರೊ. ಟಿ.ವಿ. ರಾಮಚಂದ್ರ ಭವಿಷ್ಯ ನುಡಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಸಹಯೋಗದೊಂದಿಗೆ ಶುಕ್ರವಾರ ನಡೆದ "ಶಕ್ತಿ ಮೂಲಗಳ ಸಮಸ್ಯೆ-ಪರ್ಯಾಯ ಆಯ್ಕೆಗಳು' ಕುರಿತು ಜರಗಿದ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 

                                              

ಮಾತೃಪೂರ್ಣ ಯೋಜನೆ: ಕುಸಿದ ಫಲಾನುಭವಿಗಳ ಸಂಖ್ಯೆ

ಡಿಸೆಂಬರ್-9

ಉಡುಪಿ: ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಗೆ 15,000 ಗರ್ಭಿಣಿ ಹಾಗೂ ಬಾಣಂತಿಯರನ್ನು ಗುರುತಿಸಲಾಗಿದೆ. ಆದರೆ ಅಕ್ಟೋಬರ್ ತಿಂಗಳಲ್ಲಿ ಕೇವಲ 890 ಗರ್ಭಿಣಿಯರು ಮತ್ತು 658 ಬಾಣಂತಿಯರು ಮಾತೃ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಈ ಹಿಂದೆ ಇದ್ದ ಯೋಜನೆಯಲ್ಲಿ ತಿಂಗಳಿಗೆ 11,000 ಮಂದಿ ಫಲಾನುಭವಿಗಳು ಪ್ರಯೋಜನ ಗಳಿಸುತ್ತಿದ್ದರು. ಮಾತೃಪೂರ್ಣ ಯೋಜನೆಯ ಫಲಾನುಭವಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಶುಕ್ರವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಅವರು, ತನ್ನ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ, ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿಯ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಅವರಿಂದ ಮಾಹಿತಿ ಪಡೆದು ಸಭೆಗೆ ತಿಳಿಸಿದರು.
ಒಟ್ಟು 15,000 ಮಂದಿಯ ಫಲಾನುಭವಿಗಳ ಪೈಕಿ 7,500 ಗರ್ಭಿಣಿಯರು ಮತ್ತು 7,500 ಬಾಣಂತಿಯರಿದ್ದಾರೆ. ಜಿಲ್ಲೆಯ ಭೌಗೋಳಿಕ ವ್ಯವಸ್ಥೆ ಹಾಗೂ ಜನರ ಮನೋಭಾವ ಅರಿಯದೆ ಈ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಅನೇಕ ಮಂದಿ ಸೌಲಭ್ಯ ವಂಚಿತರಾಗಿದ್ದಾರೆ. ಯೋಜನೆ ಶೇ.10ರಷ್ಟು ಮಾತ್ರ ಯಶಸ್ವಿಯಾಗಿದೆ. ನವೆಂಬರ್ ತಿಂಗಳಲ್ಲಿ 1,642 ಗರ್ಭಿಣಿಯರು ಮತ್ತು 1,393 ಬಾಣಂತಿಯರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆ ಬಯಲು ಸೀಮೆಯ ಜಿಲ್ಲೆಗಳಿಗೆ ಮಾತ್ರ ಪೂರಕವಾಗಿದೆ ಎಂದರು.

 

                                                         

ಸೌಹಾರ್ದದಿಂದ ಭವ್ಯ ರಾಮಮಂದಿರ ನಿರ್ಮಾಣ

ಡಿಸೆಂಬರ್ -7

ಉಡುಪಿ: ಸಂಘರ್ಷದ ಬದಲಾಗಿ ಶಾಂತಿ - ಸೌಹಾರ್ದದಿಂದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ರಾಮಮಂದಿರ ನಿರ್ಮಾಣ ಕುರಿತು ಸಂಧಾನಕಾರ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದಾರೆ.
ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅನಂತರ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಸಹಮತದ ಆಶಯಎರಡು ಸಮುದಾಯಗಳ ಮೈತ್ರಿಯ ಪ್ರತೀಕವಾಗಿ ಮಂದಿರ ನಿರ್ಮಾಣವಾಗಲಿದೆ. ಸಂಧಾನಕಾರರಾಗಿ ನಾನು ಮುಸ್ಲಿಂ ಬಾಂಧವರು ಸೇರಿದಂತೆ ಯಾರೊಂದಿಗೆಲ್ಲ ಮಾತುಕತೆ ನಡೆಸಿದ್ದೇನೆಯೋ ಅವರೆಲ್ಲರೂ ಸಹಮತ ವ್ಯಕ್ತ ಪಡಿಸಿದ್ದಾರೆ. ಯಾರೂ ವಿರೋಧ ಸೂಚಿಸಿಲ್ಲ. ಸೌಹಾರ್ದಯುತವಾಗಿಯೇ ಮಂದಿರ ನಿರ್ಮಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
"ಧರ್ಮಸಂಸದ್' ನಿರ್ಣಯದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿಶಂಕರ್ ಗುರೂಜಿ ಅವರು, "ಸಂತರು ಮತ್ತು ಆರ್ಎಸ್ಎಸ್ನವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಪೇಜಾವರ ಶ್ರೀಗಳು ಕೂಡ ಸೌಹಾರ್ದದ ಮಾತುಗಳನ್ನೇ ಆಡಿದ್ದಾರೆ' ಎಂದು ಹೇಳಿದರು.

 

    46

ಚುನಾವಣೆಯಲ್ಲಿ ಗೆಲ್ಲಲು ನನ್ನ ಬಳಿ ಕಾಸಿಲ್ಲ ಆದ್ರೆ ಕನಸಿದೆ: ಉಪ್ಪಿ

ಡಿಸೆಂಬರ್-7

 ಉಡುಪಿ: 'ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ ಗಂಟೆ ಬಾರಿಸುವ ಜನ ಬೇಕಾಗಿದೆ' ಎಂದು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಸಂಸ್ಥಾಪಕ ನಟ ಉಪೇಂದ್ರ ತಮ್ಮ ಪಕ್ಷ ಸೇರಲು ಕರೆ ನೀಡಿದ್ದಾರೆ. ಕೆಪಿಜೆಪಿ ಪ್ರಚಾರದ ಸಲುವಾಗಿ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ, 'ನರೇಂದ್ರ ಮೋದಿಯೊಬ್ಬರಿಂದ ಬದಲಾವಣೆ ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ. ನಾನು ಪ್ರಾಕ್ಟಿಕಲ್ ಇಲ್ಲ ಅಂತ ಜನ ನಗುತ್ತಿದ್ದಾರೆ. ಆದರೆ ಪ್ರಜೆಗಳು ಮಾತನಾಡುವ ಕಾಲ ಬಂದಿದೆ. ಎಂಎಲ್ ಎ ಸೀಟು ಗೆಲ್ಲಲು 50 ಕೋಟಿ ಬೇಕಂತೆ. ನನ್ನ ಬಳಿ ಕಾಸಿಲ್ಲ ಆದರೆ ಕನಸಿದೆ' ಎಂದು ತಿಳಿಸಿದರು. ದೇಶದಲ್ಲಿ ಸತ್ಯ ಸಾಯಲ್ಲ- ಸತ್ಯನೇ ಗೆಲ್ಲೋದು ಎಂದು ಹೇಳಿದ ಅವರು ಹಣ ಇಲ್ಲದಿದ್ದರೂ ಸ್ಮಾರ್ಟ್ ಆಗಿ ನಾನು ಪಕ್ಷ ಬಲಪಡಿಸುತ್ತೇನೆ. ಆಪ್ ಪಾರ್ಟಿ ಪಾರ್ಟಿ ಫಂಡ್ ನಿಂದ ಹಾಳಾಯ್ತು. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್ ಗೆ ಇತ್ತು. ಆದರೆ, ಅರವಿಂದ ಕೇಜ್ರಿವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು . ನನಗೆ ರಾಷ್ಟೀಯ ಪಕ್ಷಗಳಿಂದ ಪಕ್ಷ ಸೇರಲು ಬೇಡಿಕೆ ಬಂದಿದೆ. 15 ವರ್ಷಗಳಿಂದ ಆಹ್ವಾನ ಬರ್ತಾನೇ ಇದೆ. ನನ್ನ ಕಲ್ಪನೆ ಅವರ ಜೊತೆ ಹೊಂದಾಣಿಕೆಯಾಗುತ್ತಿಲ್ಲ. ನನಗೆ ಈವರೆಗೆ 50 ಸಾವಿರ ಇ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ. ಆತ್ಮತೃಪ್ತಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

 

 

 

525    ರೈಲಿನಲ್ಲಿ ಚಿನ್ನ ದರೋಡೆ : 7 ಜನ ಖದೀಮರು ಅರೆಸ್ಟ್
 ಡಿಸೆಂಬರ್-6
 ಉಡುಪಿ : ಮುಂಬೈ-ತ್ರಿವೆಂದ್ರಮ್ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ರಾಜೇಂದ್ರ ಸಿಂಗ್ ಎಂಬುವರನ್ನು   ಗಾಯಗೊಳಿಸಿ, ಚಿನ್ನಾಭರಣ ದೋಚಿದ್ದ ತಂಡವನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
 ಮಿಥುನ್, ಪಿಂಟೂ ಅರ್ಜುನ್, ಯೋಗಿಶ್ವರ್ ಸಿಂಗ್, ಮುಖ್ತಾರ್ ಇಬ್ರಾಹಿಂ, ರಿಯಾಜ್, ಪಿ.ಕೆ. ಮುರಗನ್,   ಪ್ರಭುಲಾಲ್ ಬಂಧಿತರು. ಎರಡುವರೆ ತಿಂಗಳ ಹಿಂದೆ ಚಲಿಸುತ್ತಿದ್ದ ರೈಲಿನಲ್ಲೇ ಜಿ.ಎಂ ಗೋಲ್ಡ್ ಸೇಲ್ಸ್ ಮ್ಯಾನ್   ಆಗಿದ್ದ ರಾಜೇಂದ್ರ ಸಿಂಗ್ ಎಂಬುವರನ್ನು ಗಾಯಗೊಳಿಸಿ 4.112 ಕೆ.ಜಿ. ಚಿನ್ನಾಭರಣಗಳನ್ನು ಸೂಟ್ ಕೇಸ್   ಗಳನ್ನು ಬಂಧಿತರು ಕದ್ದೊಯ್ದಿದ್ದರು. ಈ ಕುರಿತು ಉಡುಪಿಯ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 ಬಂಧಿತರಿಂದ 1.60 ಕೆಜಿ ಚಿನ್ನ, ಒಂದು ರಿವಾಲ್ವರ್, 2 ಜೀವಂತ ಗುಂಡು, ಒಂದು ಕಾರು, ಮೊಬೈಲ್,   ಚಾಕುವನ್ನು ವಶಕ್ಕೆ

 

123  ದಲಿತರಿಗೂ ಶಾದಿ ಭಾಗ್ಯ ಸಿಗಲಿ : ಪೇಜಾವರ ಶ್ರೀ
 ನವೆಂಬರ್-27
 ಉಡುಪಿ : ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ , ವಿಭಜನೆ ಸಲ್ಲದು ಶಾದಿ ಭಾಗ್ಯ ಸೌಲಭ್ಯ   ದಲಿತರಿಗೂ  ಸಿಗಲಿ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರು ಹೇಳಿದ್ದಾರೆ.
 ಧರ್ಮ ಸಂಸದ್ ನಲ್ಲಿ ನಿನ್ನೆ ಮಾತನಾಡಿದ ಅವರು, ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯವನ್ನು   ಬಹುಸಂಖ್ಯಾತರಿಗೂ ನೀಡಿದರೆ ದಲಿತ, ಹಿಂದುಳಿದ ವರ್ಗಕ್ಕೂ ಅನುಕೂಲವಾಗಲಿದೆ ಎಂದರು.
 ಸರ್ಕಾರಿ ಸೌಲಭ್ಯ ಎಲ್ಲರಿಗೂ ಸಿಗಬೇಕು. ಇದರಿಂದ ಅಲ್ಪಸಂಖ್ಯಾತರಿಗೆ ಸೌಲಭ್ಯ ನಷ್ಟವಾಗದು. ಈ ನಿಟ್ಟಿನಲ್ಲಿ  ಸಂವಿಧಾನ ಬದಲಿಸಬೇಕೆಂದು ಹೇಳಿಲ್ಲ ತಿದ್ದುಪಡಿಯಾಗಬೇಕೆನ್ನುವುದಷ್ಟೇ ನಮ್ಮ ಬಯಕೆ ಎಂದು ಹೇಳಿದರು.

 

 

   ಕಕ ಎದೆಹಾಲು ಕುಡಿದಿದ್ದರೇ ಬನ್ಸಾಲಿ ಸಿನಿಮಾ ನಿರ್ಮಿಸಲಿ: ತೊಗಾಡಿಯಾ
ನವೆಂಬರ್.27
ಉಡುಪಿ:'ಪದ್ಮಾವತಿ' ಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ತಾಯಿಯ ಹಾಲು ಕುಡಿದಿದ್ದೇ ಆಗಿದ್ದರೆ ಮೊಹಮ್ಮದ್ ಪೈಗಂಬರನ ಸಿನಿಮಾ ಮಾಡಲಿ ನೋಡೋಣ ಎಂದು ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ಭಾಯಿ ತೊಗಾಡಿಯಾ ಬಹಿರಂಗ ಸವಾಲು ಹಾಕಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಉಡುಪಿ ಧರ್ಮ ಸಂಸದ್ ಅಂಗವಾಗಿ ಎಂಜಿಎಂ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಭಗವತಿ ಪದ್ಮಾವತಿಯ ಬಲಿದಾನವನ್ನು ತಿರುಚಿದ 'ಪದ್ಮಾವತಿ' ಚಿತ್ರ ಪ್ರದರ್ಶನಕ್ಕೆ ಪಂಜಾಬ್ ಕಾಂಗ್ರೆಸ್ ಸರಕಾರ, ರಾಜಸ್ಥಾನದ ಬಿಜೆಪಿ ಸರಕಾರ ನಿರ್ಬಂಧ ಹೇರಿದ್ದು, ಎಲ್ಲ ರಾಜ್ಯಗಳ ಸಹಿತ ಕೇಂದ್ರ ಸರಕಾರ ಕೂಡಲೇ ಪ್ರತಿಬಂಧ ಹೇರಬೇಕು ಎಂದು ಡಾ. ತೊಗಾಡಿಯಾ ಆಗ್ರಹಿಸಿದರು.
ಹಿಂದೂಗಳ ಸ್ವಾಭಿಮಾನ ರಕ್ಷಣೆ ಬಯಸುವ ನಮಗೆ ಯಾವುದೇ ಸಂಸದ, ಶಾಸಕ, ಮಂತ್ರಿ, ಟಾಟಾ/ಬಿರ್ಲಾ ಶ್ರೀಮಂತಿಕೆ ಬೇಡ. ಅಯೋಧ್ಯೆಯ ಗುಡಿಸಲಿನಲ್ಲಿ ರಾಮನಿಗೊಂದು ಮಂದಿರ ನಿರ್ಮಾಣವಾದರಷ್ಟೇ ಸಾಕು. ಉತ್ಖನನದಿಂದ ಮಂದಿರದ ಸಾಕ್ಷ್ಯ ದೊರೆತ ಬಳಿಕ ಸಂಧಾನಕ್ಕೆ ಯಾರೂ ಮುಂದೆ ಬಂದಿಲ್ಲ. ನಮಗೆ ಸಂಧಾನ ಬೇಡ. ಹಿಂದೂಗಳ ಭುಜಬಲದ ಆಧಾರದಲ್ಲಿ ಮಂದಿರ ಮಾಡುತ್ತೇವೆ.
'ರಾಮಜನ್ಮ ಭೂಮಿ ಮೇ ಕ್ಯಾ ಬನೇಗಾ' ಎಂದು ಸಭಿಕರನ್ನು ಪ್ರಶ್ನಿಸಿ 'ಮಂದಿರ್ ಬನೇಗಾ' ಎನ್ನುವ ಉತ್ತರ ಪಡೆದರು. ಮಂದಿರವನ್ನು ಅಯೋಧ್ಯೆಯಲ್ಲೇ ನಿರ್ಮಿಸುತ್ತೇವೆ ಎನ್ನುವುದು ಸಂತರ ಸಂಕಲ್ಪವಾಗಿದೆ. ದೇಶದಲ್ಲಿ 3.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಕೃಷಿ ಸಂಕಷ್ಟ ಸ್ಥಿತಿಯಲ್ಲಿದೆ. ನಿರುದ್ಯೋಗಿಗಳಿಗೆ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕು. 1 ಕೋಟಿ ಮಂದಿಗೆ ಮನೆ ನಿರ್ಮಾಣವಾಗಬೇಕು. ಋುಣ ಮುಕ್ತ ರೈತರು, ಬಡತನ ಮುಕ್ತ ಭಾರತ, ಪ್ರಗತಿ ಸಮೃದ್ಧಿಯ ರಾಮ ರಾಜ್ಯವಾಗಬೇಕು. ವಿಹಿಂಪ 50 ಲಕ್ಷ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದು ಸಮಾಜ ಸೇವೆಗೆ ಕೈಜೋಡಿಸಿದ 10 ಸಾವಿರ ವೈದ್ಯರ ಪ್ರಮಾಣವನ್ನು 50 ಸಾವಿರಕ್ಕೇರಿಸುವ ಗುರಿಯಿದೆ ಎಂದು ತೊಗಾಡಿಯಾ ಹೇಳಿದರು.
2008ರ ದಾಳಿಕೋರ ಕಸಬ್ನನ್ನು ಕಳುಹಿಸಿದ ಉಗ್ರ ಹಫೀಜ್ ಸಯೀದ್ ಪಾಕ್ನಲ್ಲೇ ಕೂತು ಭಾರತ ವಿರೋಧಿ ಚಟುವಟಿಕೆ ಮುಂದುವರಿಸಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಲಾಡೆನ್ನನ್ನು ಅಮೆರಿಕ ಹೊಸಕಿ ಹಾಕಿದಂತೆ ಪಾಕಿಸ್ತಾನ ನಿರ್ನಾಮದ ದಿನಗಳು ದೂರವಿಲ್ಲ ಎಂದರು.
ಇದೇ ಸಂದರ್ಭ ಡಾ. ಪ್ರವೀಣ್ಭಾಯಿ ತೊಗಾಡಿಯಾ ಅವರು ಸಭಿಕರಿಗೆ ಸಂಕಲ್ಪ ಬೋಧಿಸಿದರು. ಜಾಗೃತ, ಸಕ್ರಿಯ ಹಿಂದೂ ಆಗುವ ಮೂಲಕ ನಾವೆಲ್ಲ ಒಂದಾಗಬೇಕು ಎಂದ ಡಾ. ತೊಗಾಡಿಯಾ, ಯುವಕರು ಶಾಂತಿಯಿಂದ ಮನೆಗೆ ಹಿಂತಿರುಗಿದರೆ ಅದುವೇ ಹಿಂದೂ ವಿಜಯ ಎಂದರು. ಬಳಿಕ ಶಾಂತಿ ಮಂತ್ರ ಪಠಿಸಲಾಯಿತು.


 

444  ಆರ್ಥಿಕ ಸುಭದ್ರ ರಾಷ್ಟ್ರವಾಗುತ್ತಿರುವ ಭಾರತದ ಜನರಿಗೆ ಭದ್ರ ನೆಲೆ ಬೇಕು
 ನವೆಂಬರ್-22
 ಉಡುಪಿ : ಭಾರತವು 2030ರ ವೇಳೆಗೆ ತೃತೀಯ ಅತಿದೊಡ್ಡ ಆರ್ಥಿಕ ಸುಭದ್ರ ರಾಷ್ಟ್ರವಾಗಲಿದ್ದು, ಎಲ್ಲರಿಗೂ ಶೀಕ್ಷಣ,   ಸೂರು,  ಮೂಲಸೌಲಭ್ಯ ನೀಡುವತ್ತ ಗಮನಹರಿಸಬೇಕು ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಟಿ.ವಿ   ಮೋಹನ್ ದಾಸ್ ಪೈ ಹೇಳಿದರು.
 ಉಡುಪಿಯ ಕಲ್ಸಂಕ ರಾಯಲ್ ಗಾರ್ಡನ್ ನಲ್ಲಿ ನಡೆಯುವ ಧರ್ಮ ಸಂಸತ್ ಅಂಗವಾಗಿ ಸಂಪರ್ಕ ಕಾರ್ಯಾಲಯವನ್ನು   ಮಂಗಳವಾರ(ನ.21)ರಂದು ಉದ್ಘಾಟಿಸಿ ಮಾತನಾಡಿದರು. ಆಯಾ ದೇಶಗಳಲ್ಲಿ ಬಹುಸಂಖ್ಯಾತ ಧರ್ಮ ಮೆರೆದರೆ,   ಭಾರತದಲ್ಲಿ ಹಿಂದೂ ಎಂದರೆ ಕೋಮುವಾದಿ ಹಣೆಪಟ್ಟಿ ಕಟ್ಟಲಾಗುತ್ತಿದೆ. ಹಿಂದೂ ಸಮಾಜದಲ್ಲಿ ಎಲ್ಲರೂ ಒಂದಾದರೆ   ರಾಜಕೀಯ ಒಡೆದು ಆಳುವ ನೀತಿಯನ್ನು ಮೆಟ್ಟಿ ನಿಲ್ಲಬಹುದು ಎಂದರು.
 ಸಮಾಜದ ಸಮಸದಯೆಗಳಿಗೆ ಪ್ರಶನೆ, ಪರಿಹಾರ ಜತೆಗೆ ಯುವಜನರಲ್ಲಿ ಧರ್ಮದ ಅರಿವು ಮೂಡಿಸಬೇಕು. ದೇಶದಲ್ಲಿ   ಬಹುಸಂಖ್ಯಾತ ಹಿಂದೂಗಳ ಪ್ರಮಾಣ ಸ್ವಾತಂತ್ರ್ಯ ಬಂದ ಸಂದರ್ಭ ಶೇ.85ರಷ್ಡಿದ್ದರೆ ಈ ಶೇ. 77ಕ್ಕೆ ಇಳಿದಿದೆ.   ಮತಾಂತರದ ಪರಿಣಾಮ ಕ್ರೈಸ್ತರ ಸಂಖ್ಯೆ 3.50 ಕೋಟಿ ಇದ್ದರೂ 7.5ಕೋಟಿಗೇರಿದೆ. ಮತಾಂತರಕ್ಕೆ ಅಮೆರಿಕ,   ಯುರೋಪ್ 17,500 ಕೋಟಿ ರೂ. ಹರಿದುಬರುತ್ತಿದೆ ಎಂದು ಹೇಳಿದರು.
 ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥರು, ವಿಶ್ವ ಹಿಂದೂ ಪರಿಷತ್ ಅಖಿಲ ಭಾರತ   ಕೇಂದ್ರೀಯ ಪರಿಷತ್ ನ ಕಾರ್ಯದರ್ಶಿ ರಾಜೇಂದ್ರ ಪಂಕಜ್, ವಿಹಿಂಪ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ   ಗೋಪಾಲ್, ವಿಹಿಂಪ ಜಿಲ್ಲಾಧ್ಯಕ್ಷ ಪಿ. ವಿಲಾಸ್ ಇದ್ದರು.


 

     

ಕೃಷ್ಣ ಮಠಕ್ಕೆ ರಾಜಸ್ಥಾನ ಮುಖ್ಯಮಂತ್ರಿ: ವಸುಂಧರಾ ಭೇಟಿ

 ನವೆಂಬರ್-20
ಉಡುಪಿ: ರಾಜಸ್ತಾನ ಸಿಎಂ ವಸುಂಧರಾ ರಾಜೇ ಉಡುಪಿಯ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಶ್ರೀ ಕೃಷ್ಣ ಮಠಕ್ಕೆ ಇಂದು ಭೇಟಿ ನೀಡಿದರು.
ಈ ಸಂದರ್ಭ ಕೊಲ್ಲೂರು ಆಡಳಿತ ಮಂಡಳಿಯಿಂದ ಸಿಎಂ ವಸುಂಧರಾ ರಾಜೇ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ದೇವಿ ದರ್ಶನ, ನವ ಚಂಡಿಯಾಗದಲ್ಲಿ ಸಿಎಂ ಭಾಗವಹಿಸಿದರು.ನಂತರ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಪೇಜಾವರ ಶ್ರೀ ಗಳೊಂದಿಗೆ ಮಾತುಕತೆ ನಡೆಸಿ, ಮಂತ್ರಾಕ್ಷತೆ ಸ್ವೀಕಾರ ಮಾಡಿದರು.ಈ ಸಂದರ್ಭ ಅವರೊಂದಿಗೆ ಉಡುಪಿ ಜಿಲ್ಲಾ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

 

66   ಮರಳು ಅಡ್ಡೆ ಮೇಲೆ ಕಂದಾಯ ಅಧಿಕಾರಿಗಳ ದಾಳಿ
 ನವೆಂಬರ್-18
 ಉಡುಪಿ : ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ಕಂದಾಯ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಅಪಾರ  ಪ್ರಮಾಣದ ಮರಳನ್ನು ವಶಪಡಿಸಿಕೊಂಡಿದ್ದಾರೆ.
 ತಾಲೂಕಿನ ಕೊಳಲಗಿರಿಯ ಮೂರು ಕಡೆ ದಾಳಿ ನಡೆಸಿದ ಬ್ರಹ್ಮಾವರಂ ಠಾಣೆ ಪೊಲೀಸರು ಸುಮಾರು 645 ಮೆಟ್ರಿಕ್ ಟನ್  ಮರಳು ವಶಕ್ಕೆ ಪಡೆದುಕೊಂಡಿದ್ದಾರೆ.
 ಘಟನೆ ಸಂಬಂಧ ಕರವೇ ಜಿಲ್ಲಾಧ್ಯಕ್ಷ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

 

 

33  ಸುಧರ್ಮ ರಥ ಪ್ರಚಾರಕ್ಕೆ ಚಾಲನೆ ನೀಡಿದ ಪೇಜಾವರ ಶ್ರೀ
 ನವೆಂಬರ್-16
ಉಡುಪಿ : ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ವಿಶ್ವ ಹಿಂದೂ ಪರಿಷತ್ ವತಿಯಿಂದ ಉಡುಪಿಯಲ್ಲಿ ನ. 24 ರಿಂದ 3 ದಿನಗಳ ಕಾಲ ನಡೆಯುವ ಧರ್ಮ ಸಂಸದ್ ಅಂಗವಾಗಿ ಸುಧರ್ಮ ರಥ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಶ್ರೀಕೃಷ್ಣ ಮಠದ ಎದುರು ಆರತಿ ಬೆಳಗಿದ ಶ್ರೀಪಾದರು ಆಶೀರ್ವಚನ ನೀಡಿ, ಅರ್ಜುನನಿಗೆ ಶ್ರೀಕೃಷ್ಣ ಸಾರಥಿಯಾಗಿ ಮಹಾಭಾರತ ಯುದ್ಧವನ್ನು ಪಾಂಡವರು ಕೌರವರ ವಿರುದ್ಧ ಜಯಿಸಿದ್ದಾರೆ. ಧರ್ಮ ಸಂಸದ್ ಹಿನ್ನೆಲೆಯಲ್ಲಿ ವಿಹಿಂಪ ರಥವಾದರೆ, ಹಿಂದೂ ಸಮಾಜ ಬಾಂಧವರು ಅರ್ಜುನರಾಗಬೇಕು ಎಂದರು.

 

 

 

22     ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ಹೈಡ್ರಾಮಾ
 ನವೆಂಬರ್-13
ಉಡುಪಿ : ಜಿಲ್ಲೆಯ ಕುಂದಾಪುರದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಹೈಡ್ರಾಮಾ ನಡೆದಿದೆ. ಹಾಲಡಿ ಶ್ರೀನಿವಾಸಶೆಟ್ಟಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಕೆಲ ಬಿಜೆಪಿ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಶ್ರೀನಿವಾಸ್ಶೆಟ್ಟಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಹಾಲಡಿ ಶ್ರೀನಿವಾಸಶೆಟ್ಟಿ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲು ಸಿದ್ಧರಾಗಿದ್ದರು. ಈ ಸಂದರ್ಭದಲ್ಲಿ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೂಲ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಮುಖಂಡರ ವಿರುದ್ಧ ಹರಿಹಾಯ್ದರು. ವೇದಿಕೆ ಮೇಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶ್ರೀನಿವಾಸ್ಶೆಟ್ಟಿ ಬಿಜೆಪಿ ಸೇರ್ಪಡೆ ವಿರೋಧಿಸುತ್ತಿರುವವರ ವಿರುದ್ಧ ಗರಂ ಆದರಲ್ಲದೆ, ಶ್ರೀನಿವಾಸ್ಶೆಟ್ಟಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಯೇ ಮಾಡಿಕೊಳ್ಳುತ್ತೇವೆ. ಅವರೇ ಮುಂದಿನ ಶಾಸಕ. ಅವರನ್ನು ವಿರೋಧಿಸುವವರು ಬೇಕಾದರೆ ಪಕ್ಷ ಬಿಟ್ಟು ಹೋಗಬಹುದು ಎಂದು ಖಡಕ್ಕಾಗಿ ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಶ್ರೀನಿವಾಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಾಗ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದರು

 

 

22

 ಹೆಲ್ಮೆಟ್ ಹಾಕದೇ ಸಚಿವರ ಜಾಲಿ ರೈಡ್

 ನವೆಂಬರ್- 11
ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೆಲ್ಮೆಟ್ ಹಾಕದೇ ಬೈಕ್ ನಲ್ಲಿ ಜಾಲಿ ರೈಡ್ ಮಾಡಿದ್ದು ಇದಕ್ಕೆ ಪ್ರತಿಯಾಗಿ ಪೊಲೀಸರಿಗೆ ದಂಡ ಕಟ್ಟಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಹೆಲ್ಮೆಟ್ ಬಳಸದೇ ಪ್ರಮೋದ್ ಮಧ್ವರಾಜ್ ಅವರು ಬೈಕ್ ನಲ್ಲಿ ಜಾಲಿ ರೈಡ್ ಮಾಡಿದ್ದರು. ಇದನ್ನು ಸ್ಥಳೀಯರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು. ಇನ್ನು ಸಚಿವರ ನಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲ ಪೊಲೀಸರು ಮಧ್ವರಾಜ್ ಅವರು ವಿರುದ್ಧ ದೂರು ದಾಖಲಿಸಿದ್ದರು.
1988ರ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಆರೋಪದಡಿ ಸೆಕ್ಷನ್ 177ರ ಅಡಿಯಲ್ಲಿ ಸಚಿವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸುಯೋ-ಮೊಟೋ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಹೆಲ್ಮೆಟ್ ಧರಿಸದೇ ಸಂಚಾರಿ ನಿಯಮ ಉಲ್ಲಂಘಿಸಿದ ಸಚಿವರು ಸ್ವತಃ ಪೊಲೀಸ್ ಠಾಣೆಗೆ ಬಂದು 100 ರುಪಾಯಿ ದಂಡ ತೆತ್ತಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

 

66         ನೂತನ ಬರಹಗಾರರಿಗೆ ಪುರಸ್ಕಾರ
ನವೆಂಬರ್- 11
ಉಡುಪಿ : ಕನ್ನಡದ ಯುವ ಬರಹಗಾರರನ್ನು ಉತ್ತೇಜಿಸುವ ಉದ್ದೇಶದಿಂದ 'ಹೊಸ ತಲೆಮಾರಿನ ಪ್ರತಿಭಾವಂತ ಸಣ್ಣಕಥೆಗಾರ' ಪುರಸ್ಕಾರಕ್ಕೆ ಸ್ವತಂತ್ರವಾಗಿ ಬರೆದಿರುವ ಸಣ್ಣಕಥೆಗಳನ್ನು ಆಹ್ವಾನಿಸಲಾಗಿದೆ.
ಪ್ರೊ. ಉಪೇಂದ್ರ ಸೋಮಯಾಜಿಯವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 'ಲೇಖಕರ ಹಿತರಕ್ಷಣಾ ವೇದಿಕೆ (ರಿ), ಚಿತ್ರಪಾಡಿ, ಸಾಲಿಗ್ರಾಮ (ಉಡುಪಿ ಜಿಲ್ಲೆ)' ಪ್ರತಿವರ್ಷವೂ ಆಯ್ದ ತರುಣ ಕಥೆಗಾರರಿಗೆ ಈ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ನೀಡಲಾಗುವ ಈ ಪುರಸ್ಕಾರವು ಸಾರ್ವಜನಿಕ ಸನ್ಮಾನ, ಆಕರ್ಷಕ ಪ್ರಶಸ್ತಿ ಪತ್ರ/ಸ್ಮರಣಿಕೆ ಮತ್ತು ಆರು ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಈ ಸಾಲಿನ (2017) 'ಹೊಸ ತಲೆಮಾರಿನ ಪ್ರತಿಭಾವಂತ ಸಣ್ಣಕಥೆಗಾರ' ಪುರಸ್ಕಾರಕ್ಕಾಗಿ ಆಯ್ಕೆ ಪ್ರಕ್ರಿಯೆ ಈಗ ಆರಂಭವಾಗಿದೆ.
ಈ ಕಥಾಸ್ಪರ್ಧೆಗೆ ನಿಯಮ, ನಿಬಂಧನೆಗಳು ಕೆಳಗಿನಂತಿವೆ
1. 2016 ಜನವರಿ ಒಂದರಿಂದ 2017 ಡಿಸೆಂಬರ್ ತನಕದ (ಎರಡು ವರ್ಷಗಳ) ಅವಧಿಯಲ್ಲಿ ಮೊದಲ ಮುದ್ರಣ ಕಂಡ (ಸ್ವತಂತ್ರ/ಅನುವಾದಿತವಲ್ಲ) ಕಥಾ ಸಂಕಲನಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುತ್ತದೆ.
2. ಕಥೆಗಾರರ ವಯಸ್ಸು 35 ವರ್ಷ ಮೀರಿರಬಾರದು. (01.01.1982ರ ನಂತರ ಜನಿಸಿದವರಷ್ಟೇ ಈ ವರ್ಷದ ಸ್ಪರ್ಧೆಯಲ್ಲಿ ಭಾಗವಹಿಸಬಹುದು.)
3. ಈಗಾಗಲೇ ತಮ್ಮ ಸಾಹಿತ್ಯ ಕೃತಿಗಳಿಗೆ ರಾಜ್ಯಮಟ್ಟದ ಪುರಸ್ಕಾರ ಗಳಿಸಿದವರನ್ನು ಈ ಪುರಸ್ಕಾರಕ್ಕೆ ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
4. ಸ್ಪರ್ಧೆಯಲ್ಲಿ ಭಾಗವಹಿಸುವ ಲೇಖಕರು ನಾಲ್ಕಕ್ಕಿಂತ ಹೆಚ್ಚು (ಮುದ್ರಿತ) ಸಾಹಿತ್ಯಕೃತಿಗಳನ್ನು ಪ್ರಕಟಿಸಿರಬಾರದು.
ಈ ಪುರಸ್ಕಾರವು ಹೊಸತಲೆಮಾರಿನ, ತರುಣ ಲೇಖಕರಿಗೇ ಮೀಸಲಿಡಬೇಕೆಂಬ ಉದ್ದೇಶದಿಂದ ಈ ನಿಯಮಗಳನ್ನು ರೂಪಿಸಲಾಗಿದೆ. ಅರ್ಹ ಸಣ್ಣ ಕಥೆಗಾರರು ತಮ್ಮ ಕಥಾಸಂಕಲನದ ಎರಡು ಪ್ರತಿಗಳನ್ನು ಡಿಸೆಂಬರ್ ಮೊದಲ ವಾರಕ್ಕೆ (07.12.2017 ಕ್ಕೆ) ಮುನ್ನ, ಕೆಳಕಾಣಿಸಿದ ವಿಳಾಸಕ್ಕೆ ಕಳುಹಿಸಬಹುದು.
ಬೆಳಗೋಡು ರಮೇಶ ಭಟ್
5-109 ಂ/1; 'ಭಾಗೀರಥಿ'
ಇಂದ್ರಾಳಿ ದೇವಸ್ಥಾನದ ರಸ್ತೆ
ಅಂಚೆ: ಕುಂಜಿಬೆಟ್ಟು
ಉಡುಪಿ - 576 102

 

 

    

   ಬೈಕಿಗೆ ಲಾರಿ ಮುಖಮುಕಿ ಢಿಕ್ಕಿ; ಯುವಕನ ಸಾವು

 ನವೆಂಬರ್ 4

ಕುಂದಾಪುರ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕೋಟ ಠಾಣಾ ವ್ಯಾಪ್ತಿಯ ಬಿದ್ಕಲ್ ಕಟ್ಟೆ ಸಮೀಪದ ಗಾವಳಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.ಮೃತರನ್ನು ಹಾಲಾಡಿಯ ಶಂಕರ್ ಕುಲಾಲ್ ಎಂಬವರ ಪುತ್ರ ಶಬರೀಶ್ (20) ಎಂದು ಗುರುತಿಸಲಾಗಿದೆ.ಇವರು ಇಂದು ಬೆಳಗ್ಗೆ ಮನೆಯಿಂದ ಮಣಿಪಾಲಕ್ಕೆ ವೈಯಕ್ತಿಕ ಕೆಲಸಕ್ಕೆ ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ ಬಾರ್ಕೂರುನಿಂದ ಹಾಲಾಡಿಗೆ ಬರುತ್ತಿದ್ದ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ, ಶಬರೀಶ್ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಈತ ಇತ್ತೀಚೆಗೆ ಹೋಟೆಲ್ ಮ್ಯಾನೇಜ್ಮೆಂಟ್ ಶಿಕ್ಷಣ ಪೂರೈಸಿದ್ದರು.ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

   hh ಕೃಷ್ಣನ ಸನ್ನಿಧಿಯಲ್ಲಿ 206 ದಿನಗಳ ನಿತ್ಯೋತ್ಸವ ಸಂಭ್ರಮ
ಅಕ್ಟೋಬರ್.31
ಉಡುಪಿ: ಭಾಗೀರಥಿ ಜಯಂತಿಯಿಂದ 159 ದಿನಗಳ ಕಾಲ ಶ್ರೀಕೃಷ್ಣನ ಸನ್ನಿಧಿಯಲ್ಲಿದ್ದ ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಇನ್ನು 206 ದಿನಗಳ ನಿತ್ಯೋತ್ಸವ ಸಂಭ್ರಮ.
ನ.1 ರಿಂದ 4ರ ತನಕ ಲಕ್ಷ ದೀಪೋತ್ಸವದ ಅಂಗವಾಗಿ ತೆಪ್ಪೋತ್ಸವ ಸಹಿತ ರಥೋತ್ಸವ ನಡೆಯಲಿದೆ. ಭಕ್ತರ ಸೇವಾ ರೂಪದಲ್ಲಿ ಸ್ವರ್ಣ ರಥೋತ್ಸವ, ನವರತ್ನ ರಥೋತ್ಸವ ಸಹಿತ ನಾನಾ ಉತ್ಸವಗಳು ಜರುಗಲಿವೆ.
2017ರ ಜೂ.4ರಂದು ಭಾಗೀರಥಿ ಜಯಂತಿಯಂದು ಮಧ್ವ ಸರೋವರದ ತೆಕ್ಕೆಯಲ್ಲಿರುವ ಭಾಗೀರಥಿ ಗುಡಿಯಲ್ಲಿ ತೊಟ್ಟಿಲ ಪೂಜೆ, ಅಷ್ಟಾವಧಾನ ಉತ್ಸವದೊಂದಿಗೆ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಶ್ರೀಕೃಷ್ಣನ ಸನ್ನಿಧಿಯಲ್ಲಿಡಲಾಗಿದೆ.
ಚಾತುರ್ಮಾಸದ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಗೆ ಯಾವುದೇ ಉತ್ಸವವಿಲ್ಲ. ಅಷ್ಟಮಿ ಸಂದರ್ಭ ಶ್ರೀಕೃಷ್ಣನ ಉತ್ಸವ ಮೂರ್ತಿ ಹೊರ ತೆಗೆಯಲಾಗದ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿ ರಚಿಸಿ ಉತ್ಸವ ಆಚರಿಸಲಾಗುತ್ತದೆ. ಶಯನೀಯ ಕೃಷ್ಣನನ್ನು ಎಬ್ಬಿಸುವ ನಿಟ್ಟಿನಲ್ಲಿ ಅ.1ರಿಂದ ಪಶ್ಚಿಮ ಜಾಗರ ಪೂಜೆ ನಡೆಯುತ್ತಿದ್ದು, ಉತ್ಥಾನ ದ್ವಾದಶಿಯಂದು ಶ್ರೀಕೃಷ್ಣ(ವಿಷ್ಣು) ಏಳುತ್ತಾನೆನ್ನುವ ನಂಬಿಕೆಯಿದೆ. ಪಶ್ಚಿಮ ಜಾಗರ ಪೂಜೆ ಅಂಗವಾಗಿ ನಿತ್ಯ ಬೆಳಗ್ಗೆ 4ರಿಂದ ವಿಧ ವಿಧದ ವಾದ್ಯಘೋಷ, ದೀಪಗಳನ್ನು ಬೆಳಗಲಾಗುತ್ತದೆ.
ಚಾತುರ್ಮಾಸ್ಯದ ಏಕಾದಶಿಯಿಂದ ಉತ್ಥಾನ ಏಕಾದಶಿ ತನಕ ರಾತ್ರಿ ಪೂಜೆ ಬಳಿಕ ವಾದ್ಯ ಘೋಷ, ಸಂಕೀರ್ತನೆ, ಪುರಾಣ ಪ್ರವಚನ, ಆರತಿ ಬೆಳಗಿ ತುಳಸಿ ನಿರ್ಮಾಲ್ಯವನ್ನು ಪರ್ಯಾಯ ಯತಿಗಳ ಸಹಿತ ಅನ್ಯ ಯತಿಗಳು ತಲೆಯಲ್ಲಿಟ್ಟು ಡಂಗುರವ ಸಾರಿ ಹರಿಯ ಹಾಡಿಗೆ ನರ್ತಿಸುತ್ತಾರೆ. ತುಳಸಿಯನ್ನು ಭಕ್ತರಿಗೆ ಪ್ರಸಾದವಾಗಿ ನೀಡಾಗುತ್ತದೆ.

 

 

                                                                                       

ಮಠಕ್ಕೆ ಮರಳಿದ ಪೇಜಾವರ ಶ್ರೀ

ಅಕ್ಟೋಬರ್-28

ಉಡುಪಿ: ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದ ಕಿರು ಶಸ್ತ್ರಚಿಕಿತ್ಸೆ ಬಳಿಕ ಪೂರ್ಣ ಗುಣಮುಖರಾಗಿದ್ದು ನಿನ್ನೆ
ಸಂಜೆ ಮಠಕ್ಕೆ ಮರಳಿದ್ದಾರೆ.

ತಿಂಗಳ ಹಿಂದಷ್ಟೇ ಶ್ರೀಪಾದರು ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಸ್ಕ್ಯಾನಿಂಗ್ ಮಾಡಿದಾಗ ಸಣ್ಣ ಹುಣ್ಣಿರುವುದು ಗೋಚರಿಸಿತ್ತು.

ಹರ್ನಿಯಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದರೂ ಹೊಟ್ಟೆನೋವು ಸಮಸ್ಯೆ ತಲೆದೋರಿತ್ತು. ವೈದ್ಯರ ಸಲಹೆಯಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದು ಹರ್ನಿಯಾ ಫೆಮರಾಲ್ ನಿಟ್ಟಿನಲ್ಲಿ ರಂಧ್ರ ಕೊರೆದು ಹುಣ್ಣನ್ನು ನಿವಾರಿಸಿ ಬ್ಯಾಂಡೇಜ್ ಅಳವಡಿಸಲಾಗಿದೆ.

ನಿನ್ನೆ ಮಧ್ಯಾಹ್ನ ತನಕ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದಿರುವ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ನಿತ್ಯ ಕರ್ಮಾನುಷ್ಠಾನ ಮಾಡಿ ಮಠದಿಂದ ಬಂದ ಸಿಬ್ಬಂದಿ ನೆರವಿನಿಂದ ಮಡಿ ಆಹಾರ ಸೇವಿಸಿದ್ದಾರೆ.

 

44  ಪ್ರೇಜಾವರ ಶ್ರೀ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾದ
 ಅಕ್ಟೋಬರ್-26
ಉಡುಪಿ : ಪೇಜಾವರ ಶ್ರೀ ಆರೋಗ್ಯ ತಪಾಸಣೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನ ಆಸ್ಪತ್ರೆಯಲ್ಲೇ ಉಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತೀಚೆಗೆ ಪೇಜಾವರ್ ಶ್ರೀ ಗಳು ಹರ್ನಿಯಾ ಅಪರೇಷನ್ ಗೆ ಒಳಗಾಗಿದ್ದರು. ಹಾಗಾಗಿ ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನುಷ್ಠಾನಗಳನ್ನು ಪೂರೈಸಿ ಶ್ರೀಗಳು ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದಾರೆ. ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಆತಂಕ ಬೇಡವೆಂದು ಮಠದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

 

12  ಮೂಕಾಂಬಿಕೆಗೆ ಬಂದ ಹರಕೆ ಮೊತ್ತ 1 ಕೋಟಿಗೂ ಅಧಿಕ
 ಅಕ್ಟೋಬರ್-26
ಉಡುಪಿ: ಅಕ್ಟೋಬರ್ ತಿಂಗಳು ಒಂದರಲ್ಲಿಯೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ 1,10,66,278 ರೂಪಾಯಿ ಆದಾಯ ಬರುವ ಮೂಲಕ ಅತಿ ಹೆಚ್ಚಿನ ಗಳಿಕೆಯ ದೇವಸ್ಥಾನ ಎಂಬ ದಾಖಲೆಗೆ ಪಾತ್ರವಾಗಿದೆ.
ದೇವಸ್ಥಾನದ ಹುಂಡಿಗೆ ಕಳೆದ 18 ತಿಂಗಳು ಹಿಂದೆ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯ ಬಂದು ದಾಖಲೆಯಾಗಿತ್ತು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಈ ತಿಂಗಳ 1ರಿಂದ 24ರವರೆಗೆ ಹುಂಡಿಗೆ 1,10.66,278 ಕೋಟಿ ರೂಪಾಯಿ ಬಂದರೆ ಭಕ್ತರು 870 ಗ್ರಾಂ ಚಿನ್ನ, 3.2 ಕೆಜಿ ಬೆಳ್ಳಿ ದಾನ ನೀಡಿದ್ದಾರೆ. ಇದುವರೆಗೆ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚಿನ ಆದಾಯ ಇದಾಗಿದೆ. ದೇವಸ್ಥಾನಕ್ಕೆ ಬಂದ ಹರಕೆಯನ್ನು ನಿನ್ನೆ ಎಣಿಸಲಾಯಿತು.
2014 ಮೇ ತಿಂಗಳಲ್ಲಿ ಇದಕ್ಕೂ ಮುನ್ನ ಅತಿ ಹೆಚ್ಚು 1.07 ಕೋಟಿ ರೂಪಾಯಿ ಆದಾಯ ಬಂದಿತ್ತು. 2013ರಲ್ಲಿ ಕೊಲ್ಲೂರು ದೇವಸ್ಥಾನದ ಹುಂಡಿಗೆ 84 ಲಕ್ಷ ರೂಪಾಯಿ ಆದಾಯ ಬಂದಿತ್ತು.
ದೇವಸ್ಥಾನದ ಹುಂಡಿಗೆ ಪ್ರತಿ ತಿಂಗಳು 60ರಿಂದ 70 ಲಕ್ಷ ರೂಪಾಯಿ ಬರುತ್ತಿದ್ದು ಪ್ರತಿ ತಿಂಗಳು ಹೆಚ್ಚು ಕಡಿಮೆ ಇಷ್ಟೇ ಹಣ ಬರುತ್ತದೆ.
2008-09ರಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆದಾಯ 2013-14ಕ್ಕೆ 26.95 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಭಕ್ತರ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಕೇರಳ, ತಮಿಳು ನಾಡುಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ತಿಂಗಳು ದಸರಾ ಮತ್ತು ದೀಪಾವಳಿಗೆ ಸಾಲು ಸಾಲು ರಜೆಗಳಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಯಿತು ಎನ್ನುತ್ತಾರೆ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಎಂ ಶೆಟ್ಟಿ.

 

     

ಬೈಕ ಸವಾರನ ದುರ್ಮಣ

ಅಕ್ಟೋಬರ್.21

ಉಡುಪಿ: ಬೈಕ ಸವಾರನ ನಿಯಂತ್ರಣ ತಪ್ಪಿ ಚರಂಡಿ ಬಿದ್ದು ಸ್ಥಳದಲ್ಲೆ ಮೃತಪಟ್ಟ ಘಟನೆ ಕಟಪಾಡಿಯ ಮೂಡು ಮಟ್ಟಾರು ಗ್ರಾಮದಲ್ಲಿ ನಡೆದಿದೆ.

ಸಾವನ್ನಪ್ಪಿ ವ್ಯಕ್ತಿ ಗೌಡೇಶ(19) ಎಂಬುದು ತಿಳಿದು ಬಂದಿದೆ.

ಅಜಾಗರೂಕತೆಯಿಂದ ವೇಗವಾಗಿ ಬೈಕ್‌ ಚಲಾಯಿಸಿಕೊಂಡು ಬಂದು ರಸ್ತೆ ಬದಿಯ ಬಂಡೆಕಲ್ಲುಗಳಿದ್ದ ಚರಂಡಿಗೆ ಬಿದ್ದ ಪರಿಣಾಮ ಮುಖ, ಕೆನ್ನೆಗೆ ಗಂಭೀರ ಗಾಯಗೊಂಡಿದ್ದರು. ತಕ್ಷ ಣ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಚಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.

ಮೂಲತಃ ಹನಗುಂದ ನಿವಾಸಿ ಭೀಮಪ್ಪ ಗೌಡ ಎಂಬವರ ಪುತ್ರರಾದ ಇವರು ಮೂಡು ಮಟ್ಟಾರು ಎಂಬಲ್ಲಿ ಹುಟ್ಟಿ ಬೆಳೆದಿದ್ದು ಬೆಳ್ಮಣ್ಣಿನ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದರು.

ಪ್ರಕರಣ ಶಿರ್ವ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

 

 

     

ಲಿಂಗಾಯತ, ವೀರಶೈವ ಒಂದೇ: ಪೇಜಾವರಿ ಶ್ರೀಗಳು

ಅಕ್ಟೋಬರ್:18

ಉಡುಪಿ: ಲಿಂಗಾಯತರಲ್ಲಿ ಎರಡು ತರಹದ ಸಂಪ್ರದಾಯ, ಭಿನ್ನಾಭಿಪ್ರಾಯವಿದ್ದರೂ ಎರಡೂ ಬೇರೆ ಬೇರೆ ಧರ್ಮಗಳಲ್ಲ. ಒಂದಾಗಿದ್ದರೆ ಲಿಂಗಾಯತ ಸಮಾಜಕ್ಕೆ ಒಳಿತು, ಹೆಚ್ಚು ಬಲ ತರುತ್ತದೆ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಹಿಂದೂ ದೇವರನ್ನು ಒಪ್ಪಿದ ಮೇಲೆ ನಾವು ಹಿಂದೂಗಳಲ್ಲ ಎನ್ನಲು ಕಾರಣವೇ ಇಲ್ಲ. ಬಸವಣ್ಣನವರ ಕಾಲದಲ್ಲಿ ನಡೆದ ದುರಂತಕ್ಕೆ ಈಗಿನ ಕಾಲದ ಅಲ್ಪಸಂಖ್ಯಾತ ಬ್ರಾಹ್ಮಣರನ್ನು ದೂರುವುದು ಸರಿಯೇ? ಬ್ರಾಹ್ಮಣರಿಂದ ಯಾವುದೇ ಅನ್ಯಾಯವಾಗಿಲ್ಲ, ದ್ವೈತ, ಅದ್ವೈತದಲ್ಲಿ ಇದಕ್ಕಿಂತ ಮೂಲಭೂತವಾದ ತಾತ್ವಿಕ ಭೇದಗಳಿದ್ದರೂ ಒಂದೇ ವೈದಿಕ ಧರ್ಮದ ಪ್ರಭೇದಗಳಾಗಿರುವಂತೆ ಶಿವನೇ ಪರದೈವವೆನ್ನುವ ಲಿಂಗಾಯತ, ವೀರಶೈವ ಸಂಪ್ರದಾಯಗಳು ಬೇರೆ ಬೇರೆ ಧರ್ಮವಾಗಿರಲು ಸಾಧ್ಯವೇ ಇಲ್ಲ.

ಆದರೆ ವೀರಶೈವ, ಲಿಂಗಾಯತ ಧರ್ಮಗಳ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ಇವೆರಡನ್ನೂ ಒಂದೇ ಧರ್ಮದ ಪ್ರಭೇದವೆಂದಾಗಲಿ, ಒಂದೇ ಧರ್ಮವೆಂದಾಗಲಿ ಸ್ವೀಕರಿಸಿದರೆ ಸಮಗ್ರ ವೀರಶೈವ ಲಿಂಗಾಯತ ಸಮಾಜ ಬಲವರ್ಧನೆಯಾಗಲಿದ್ದು ಈ ವಿಷಯವನ್ನು ಆ ಸಮಾಜಕ್ಕೆ ಬಿಟ್ಟಿದ್ದೇನೆ ಎಂದರು.

 

Ads
;