ದೂರವಾಣಿ : 080-69999676
ಇಮೇಲ್ : Info@Vijayataranga.com


11  ಕರ್ನಾಟಕದಲ್ಲಿ ಕಾಂಗ್ರೆಸ್ ಅಂತ್ಯ : ಯಡಿಯೂರಪ್ಪ
ಡಿಸೆಂಬರ್-19
ಕೊಪ್ಪಳ: ಕಾಂಗ್ರೆಸ್ ಮುಕ್ತ ಭಾರತದ ಕನಸು ದೂರವಿಲ್ಲ. ಈಗಾಗಲೇ ಗುಜರಾತ್ ಮತ್ತು ಹಿಮಾಚಲದ ಜನತೆ ವಿಕಾಸಕ್ಕೆ ಜನಾದೇಶ ನೀಡುವ ಮೂಲಕ ಬಿಜೆಪಿಯನ್ನು ಬೆಂಬಲಿಸಿದ್ದಾರೆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಅಂತ್ಯ ಸನ್ನಿಹಿತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕುಕನೂರಿನಲ್ಲಿಂದು ಪರಿವರ್ತನಾ ಯಾತ್ರೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ಶಿವಕುಮಾರ್ ಉದಾಸಿ, ರಾಜು ಗೌಡ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

 

 

    123 

'ನನ್ನನ್ನು ಕಂಡ್ರೆ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ'

 ಡಿಸೆಂಬರ್-19

ಕೊಪ್ಪಳ: ಗುಜರಾತ್ ಚುನಾವಣೆ ಫಲಿತಾಂಶ ನೋಡುತ್ತಿದ್ದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಕ್ಕೆ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ನನಗೆ ಏನೂ ಆಗಿಲ್ಲ. ಆರಾಮಾಗಿದ್ದೇನೆ. ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದ್ದಾರೆ. ಫಲಿತಾಂಶ ನೋಡಿ ನನಗೇಕೆ ಹೃದಯಾಘಾತವಾಗುತ್ತೆ? ನನ್ನನ್ನು ನೋಡಿ ಬೇರೆಯವರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ, ನಾನು ಆರಾಮಾಗೇ ಇದ್ದೀನಿ ಎಂದು ಹೇಳಿದ್ದಾರೆ.

 

 

 

                                                                                        

ಕೊಟ್ಟೂರೇಶ್ವರ ಸ್ವಾಮೀಜಿ ವಿರುದ್ಧ ರಾಸಲೀಲೆ ಆರೋಪ

ಡಿಸೆಂಬರ್-7 

ಕೊಪ್ಪಳ: ‘ಗಂಗಾವತಿಯ ಕಲ್ಲುಮಠದ ಕೊಟ್ಟೂರೇಶ್ವರ ಸ್ವಾಮೀಜಿ ಅವರು ರಾಸಲೀಲೆಯಲ್ಲಿ ತೊಡಗಿದ್ದು ಮಠವು ಅನೈತಿಕ ಚಟುವಟಿಕೆಗಳ ತಾಣವಾಗಿದೆ’ ಎಂದು ಅವರ ಕಾರು ಚಾಲಕ ಮಲ್ಲಯ್ಯ ಸ್ವಾಮಿ ಆರೋಪಿಸಿದ್ದಾರೆ.
ಲಾಡ್ಜ್ನ ಕೊಠಡಿಯಲ್ಲಿ ಮಹಿಳೆಯೊಂದಿಗೆ ಸ್ವಾಮೀಜಿ ಇದ್ದಾರೆ ಎನ್ನಲಾಗಿರುವ ವಿಡಿಯೊ ತುಣುಕುಗಳನ್ನು ಮಲ್ಲಯ್ಯ ಸ್ವಾಮಿ ಬಹಿರಂಗಗೊಳಿಸಿದ್ದಾರೆ. ‘ಈ ವಿಚಾರದಲ್ಲಿ ಸ್ವಾಮೀಜಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಅವರು ದೂರಿದ್ದಾರೆ.
ಚಾಲಕ ಮಲ್ಲಯ್ಯ ಮತ್ತು ಸ್ವಾಮೀಜಿ ನಡುವೆ ಉಂಟಾದ ಭಿನ್ನಾಭಿಪ್ರಾಯ ಹಾಗೂ ಸ್ವಾಮೀಜಿ ಮಲ್ಲಯ್ಯ ಅವರನ್ನು ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಒಡ್ಡಿದ್ದು ಪ್ರಕರಣ ಬಯಲಾಗಲು ಕಾರಣ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೊಟ್ಟೂರೇಶ್ವರ ಸ್ವಾಮೀಜಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಸ್ವಾಮೀಜಿ ಸಂಪರ್ಕಕ್ಕೆ ಸಿಗಲಿಲ್ಲ.

 

789  ದಂಪತಿಗಳ ಅನುಮಾನಾಸ್ಪದ ಸಾವು
 ಡಿಸೆಂಬರ್-5
 ಕೊಪ್ಪಳ : ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿಗಳು ಅನುಮಾನಾಸ್ಪದ ರೀತಿಯಲ್ಲಿ  ಸಾವನ್ನಪ್ಪಿದ್ದು, ದಂಪತಿ ಸಾವಿನ ಕುರಿತು ಪತಿಯೇ ಪತ್ನಿಯನ್ನು ಕೊಂದಿರುವ ಶಂಕೆ ಮೂಡಿದೆ.
 ನಗರದ ವಡ್ಡರ ಕ್ಯಾಂಪ್ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಫ್ರೋಜ್ (30) ಮತ್ತು ಮೆಹಬೂಬಿ  (28) ಮೃತ ದಂಪತಿಗಳು. ಕೌಟುಂಬಿಕ ಕಲದಿಂದಾಗಿಯೇ ಪತಿಯೇ ಪತ್ನಿಯನ್ನು ಕೊಂದು, ಕೊನೆಗೆ  ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
 ಗಂಗಾವತಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

222 ನನ್ನ ಮೇಲೆ ಐಟಿ ದಾಳಿಗೆ ರಾಜಕೀಯ ಪ್ರೇರಿತ : ಜಾರಕಿಹೊಳಿ
ನವೆಂಬರ್-27
ಕೊಪ್ಪಳ : ಬಿಜೆಪಿಯವರು ಕೇವಲ ಮುಸ್ಲಿಮರನ್ನು ವಿರೋಧಿಸುವುದಿಲ್ಲ. ದಲಿತರು, ತುಳಿತಕ್ಕೊಳಗಾದವರು, ಹಿಂದುಳಿದವರನ್ನು ವಿರೋಧಿಸುತ್ತಾರೆ ಎಂದು ಸಹಕಾರ ಸಚಿವ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀ ಅವರ ಸಂವಿಧಾನ ಬದಲಾಗಬೇಕು ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂವಿಧಾನ ಬದಲಾಗಬೇಕೆನ್ನುವ ಹೇಳಿಕೆ ಖಂಡನೀಯ. ಸಂವಿಧಾನ ಬದಲಾಗುವುದರಿಂದ ಮತ್ತೆ ಜೀತಪದ್ಧತಿ ಜೀವಂತವಾಗುತ್ತದೆ ಎಂದು ವ್ಯಾಖ್ಯಾನಿಸಿದರು.
ಇನ್ನು ತಮ್ಮ ಐಟಿ ದಾಳಿ ನಡೆಸಿದ್ದು, ರಾಜಕೀಯ ಪ್ರೇರಿತ ಎಂದು ಆರೋಪಿಸಿದರು. ಬಿಜೆಪಿ ರಾಜ್ಯಾಧ್ಯರಕ್ಷ ಅವರ ಅಣತಿ ಮೇರೆಗೆ ನನ್ನ ಮೇಲೆ ಐಟಿ ದಾಳಿಯಾಗಿದೆ ಎಂದ ಅವರು ನನ್ನ ಹಾಗೂ ಸಹೋದರ ಸತೀಶ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

 

 

111

 ಸಾವಿನಲ್ಲೂ ಒಂದಾದ ಕೊಪ್ಪಳದ ದಂಪತಿ
 ನವೆಂಬರ್ -18

ಕೊಪ್ಪಳ, ನವೆಂಬರ್ 18 : ಗಂಡ-ಹೆಂಡತಿಯ ಪ್ರೀತಿನೇ ಹಾಗೇ. ಇವರಲ್ಲಿ ಒಬ್ಬರಿಗೆ ಏನಾದರೂ ಆದರೆ ಒಂದು ಹೃದಯ  ಮಿಡಿಯುತ್ತದೆ. ಅಂತಹದ್ದೇ ಒಂದು ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಯನಗರದಲ್ಲಿ ಇಂದು ನಡೆದಿದೆ.
 ಹಲವು ವರ್ಷಗಳ ಕಾಲ ಕಷ್ಟ ಸುಖಗಳ ಮಧ್ಯೆ ಜತೆ-ಜತೆಯಾಗಿ ಸಂಸಾರವೆಂಬ ಬಂಡಿ ಸಾಗಿಸುತ್ತಿದ್ದ ದಂಪತಿ ಜತೆಯಾಗಿಯೇ  ಇಹಲೋಕ ತ್ಯಜಿಸಿದ್ದಾರೆ. ಜಯನಗರದ ನಿವಾಸಿ ದುರ್ಗಪ್ಪ ನಾಯಕ(65) ಇಂದು ಬೆಳಿಗ್ಗೆ ಇಂದು ನಿಧನರಾಗಿದ್ದು, ಅವರ  ಸಾವಿನ ಸುದ್ದಿ ತಿಳಿದ ಪತ್ನಿ ಹುಲಿಗೆಮ್ಮ(55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
 ಪತಿ ತೀರಿಕೊಂಡ ಬಳಿಕ ಅವರ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದ ಪತ್ನಿ ರಾತ್ರಿ 8 ಗಂಟೆ ಸುಮಾರಿಗೆ ದುಃಖದಿಂದ  ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

 

 

 

22  ಹಸುಗಳ ಮೇಲೆ ಹುಲಿ ದಾಳಿ, ಗ್ರಾಮಸ್ಥರ ಆತಂಕ
  ನವೆಂಬರ್ -18
  ಕೊಡಗು : ಕಾಫಿ ತೋಟದಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದ್ದು, ಗ್ರಾಮದ ಜನರಲ್ಲಿ ಆತಂಕ    ಮೂಡಿಸಿದೆ.
ಜಿಲ್ಲೆಯ ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮದಲ್ಲಿ ಇತ್ತೀಚಿಗೆ ಹುಲಿಯೊಂದು ಓಡಾಡುತ್ತಿದ್ದು, ಜನರಲ್ಲಿ ಆತಂಕದ ವಾತಾವರಣ  ಮನೆ ಮಾಡಿದೆ. ಈಗಾಗಲೇ ಗ್ರಾಮದಲ್ಲಿ 15 ಕ್ಕೂ ಹೆಚ್ಚು ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ.
 ಇನ್ನು ಅರಣ್ಯಾಧಿಕಾರಿಗಳು ಗ್ರಾಮದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ಹುಲಿ  ಓಡಾಡುತ್ತಿರುವ ದೃಶ್ಯ ಸೆರೆಸಿಕ್ಕಿದೆ.

 

 

                                                                                               

ಟೀ ಗಾಗಿ ಮುಖ ಊದಿಸಿದ ಆಂಜನೇಯ

ನವೆಂಬರ್- 13

ಕೊಪ್ಪಳ: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸಿಟ್ಟು ಮಾಡಿಕೊಂಡು, ಕೆಟ್ಟ ಮಾತುಗಳಿಂದ ಬಯ್ದಿದ್ದಾರೆ. ಈ ರೀತಿ ಅವರು ಸಿಟ್ಟಾಗಿ ಬಯ್ಯುವುದಕ್ಕೆ ಕಾರಣ ಏನು ಗೊತ್ತೆ? ಟಿ ಮಾಡುವುದು ಹಾಗೂ ಅದನ್ನು ಆ ನಂತರ ವಿತರಿಸುವುದು ತಡವಾಯಿತು ಎಂಬುದೇ ಸಚಿವರ ಸಿಟ್ಟಾಗಲು ಕಾರಣವಾಗಿದೆ.
ಕೊಪ್ಪಳದಲ್ಲಿ ಸಮಾವೇಶವೊಂದು ನಡೆಯುತ್ತಿದ್ದು, ಅದರಲ್ಲಿ ಮೀರಾ ಕುಮಾರ್ ಸಹ ಭಾಗವಹಿಸಿದ್ದರು. ಈ ಸಮಾವೇಶದ ವೇಳೆ ವ್ಯಕ್ತಿಯೊಬ್ಬರು ಟೀ ಮಾಡುವುದಕ್ಕೆ ಮತ್ತು ಅದನ್ನು ವಿತರಿಸುವುದಕ್ಕೆ ತಡವಾಗಿದೆ. ಈ ಕಾರಣದಿಂದ ವಿಪರೀತ ಸಿಟ್ಟಾದ ಸಚಿವ ಎಚ್.ಆಂಜನೇಯ ಆ ವ್ಯಕ್ತಿಯನ್ನು ಸಿಕ್ಕಾಪಟ್ಟೆ ಬಯ್ದಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಆಂಜನೇಯ ಅವರ ಬಳಿ ವಿಚಾರಿಸಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿದ ಅವರು, ಆತ ನಮ್ಮ ಹುಡುಗ. ಹೌದು ಕೋಪದದಲ್ಲಿ ಅಂಥ 'ಭಾಷೆ' ಬಳಸಿದ್ದು ನಿಜ. ಅದಕ್ಕಾಗಿ ಆತನಲ್ಲಿ ಕ್ಷಮೆ ಕೂಡ ಕೇಳಿದ್ದೇನೆ. ಈ ವಿಚಾರವನ್ನು ಇನ್ನಷ್ಟು ಎಳೆಯುವುದು ಬೇಡ ಎಂದು ಹೇಳಿದ್ದಾರೆ.
ಹೌದು, ಸಾಮಾಜಿಕ ನ್ಯಾಯದ ಬಗ್ಗೆ ಅಷ್ಟೊಂದು ಕಾಳಜಿ ಇರುವ ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿ, ಸಮಾಜ ಕಲ್ಯಾಣ ಸಚಿವರು ಅಪ್ಪಣೆ ಕೊಟ್ಟ ಮೇಲೆ ಈ ವಿಚಾರ ಮತ್ತೂ ದೊಡ್ಡದು ಮಾಡುವ ಅಗತ್ಯ ಏನಿದೆ?

                                                                

ನ್ಯಾಯ ಕೇಳಿದರೆ ಹಲ್ಲೆ ಮಾಡಿದ ಪ್ರಾಚಾರ್ಯ

ನವೆಂಬರ್-11

ಕೊಪ್ಪಳ: ವಿದ್ಯಾರ್ಥಿಗಳ ಪರೀಕ್ಷೆ ಸಮೀಪಿಸುತ್ತಿದ್ದರು ತರಗತಿ ನಡೆಯದೆ ವಿದ್ಯಾರ್ಥಿಗಳಿಗೆ ಆತಂಕವಾದದ್ದರಿಂದ ಕಾಲೇಜಿನ ಪ್ರಾಚಾರ್ಯರ ಬಳಿ ನ್ಯಾಯ ಕೇಳಿದ್ದಕ್ಕೆ ವಿದ್ಯಾಥಿಗಳಿಗೆ ಅವ್ಯಾಚ್ಯ ಶಬ್ಧದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.
ಜಿಲ್ಲೆಯ ಗಂಗಾವತಿಯ ಕೊಲ್ಲಿ ನಾಗೇಶ್ವರ್ ರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯ ಪ್ರೊ. ಹಸನ್ಮಿಯ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇಂದು ಪದವಿ ಪರೀಕ್ಷೆ ನಡೆಯೋ ವೇಳೆಗೆ ಸ್ನಾತ್ತಕೋತ್ತರ ವಿದ್ಯಾರ್ಥಿಗಳು ರಮೇಶ್ ಮತ್ತು ಆನಂದ ಮೇಲ್ಭಾಗದ ಅವರ ತರಗತಿಯ ಕೊಠಡಿಯೊಳಗೆ ಪ್ರವೇಶಿಸಿದ್ದಕ್ಕೆ ನೆಪವಾಗಿಟ್ಟುಕೊಂಡು ಹಲ್ಲೆ ನಡೆಸಿದ್ದಾರೆ.
ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನೆಡಸಿ ಪ್ರಾಚಾರ್ಯರ ವಿರುದ್ಧ ಧಿಕ್ಕಾರಹಾಕಿ ಪ್ರತಿಭಟಿಸಿದರು. ಇದೇ ಸಂದರ್ಭದಲ್ಲಿ ಎಬಿವಿಪಿಯವರಿಗೆ ವಿಷಯ ತಲುಪಿದ ತಕ್ಷಣ ಪ್ರಾಚಾರ್ಯರಿಗೆ ಕರೆ ಮಾಡಿದರೆ ಅವರಿಗೂ ಅವ್ಯಾಚ್ಯ ಪದ ಬಳಸಿ ನಿಂದಿಸಿದ್ದಾರೆ.

99

 ರಕ್ಷೆ ಕೊಟ್ಟ ಅಮ್ಮಂಗೆ: ಭಿಕ್ಷೆಕೊಟ್ಟ ಮಗ

ನವೆಂಬರ್-10
ಗಂಗಾವತಿ: ಹೆತ್ತವ್ವನನ್ನು ಪೋಷಣೆ ಮಾಡಲು ನಿರಾಕರಿಸಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಜಾಮೀಯಾ ಮಸೀದಿ ಸಮೀಪದ ನಿವಾಸಿ ಶಾಂತಾಬಾಯಿ ಎಂಬ 70 ವರ್ಷ ವೃದ್ಧೆ ತನ್ನ ಕಿರಿಯ ಪುತ್ರ ಬೆಂಗಳೂರಿನ ಗುರುಗುಂಟಾ ಪಾಳ್ಯದಲ್ಲಿ ನೆಲೆಸಿರುವ ಶಿವರಾಜ ಪಾಟೀಲ್ ಎಂಬುವವರ ಬಳಿ ಕೆಲ ದಿನವಿದ್ದು ಗುರುವಾರ ನಗರಕ್ಕೆ ಆಗಮಿಸಿದ್ದರು.
ಖಾಸಗಿ ಸಂಸ್ಥೆಗೆ ಸೇರಿದ ಸುಖಾಸೀನ ವಾಹನದಲ್ಲಿ ಬೆಂಗಳೂರಿನಿಂದ ಬಂದ ವೃದ್ಧೆಯನ್ನು ಕರೆದೊಯ್ಯಲು ಹಿರಿಯ ಪುತ್ರ ಸುರೇಶ ಎಂಬುವವರಿಗೆ ವಾಹನ ಚಾಲಕ ಕಳಕಪ್ಪ ವೀರಶೆಟ್ಟಿ ದೂರವಾಣಿ ಕರೆ ಮಾಡಿದ್ದಾರೆ. ಆದರೆ ತಕ್ಷಣಕ್ಕೆ ವೃದ್ಧೆಯ ಹಿರಿಯ ಮಗನಿಂದ ಸ್ಪಂದನೆ ಸಿಕ್ಕಿಲ್ಲ. ಬಳಿಕ ವಾಹನ ಚಾಲಕ ಎರಡು ಗಂಟೆ ಕಾಯ್ದರು ಮಗ ಬಾರದಿದ್ದಾಗ ಅನಿವಾರ್ಯವಾಗಿ ವಾಹನವನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾನೆ.
ಹಸಿವಿ ನಿಂದ ಕಂಗಾಲಾಗಿದ್ದ ವೃದ್ಧೆಗೆ ಚಾಲಕನೇ ತನ್ನ ಜೇಬಿನಿಂದ ಹಣ ವ್ಯಯಿಸಿ ತಿನ್ನಲು ಆಹಾರ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಮಗ ಬಾರದ ಹಿನ್ನೆಲೆ ಅಸ್ವಸ್ಥಳಾಗಿದ್ದ ವೃದ್ಧೆಯನ್ನು ಸಾರ್ವಜನಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇದೇ ವೇಳೆ ತಮ್ಮ ತಾಯಿ ಸಿಕ್ಕಿರುವ ಬಗ್ಗೆ ವೃದ್ದೆ ಮಕ್ಕಳಾದ ಗುರುನಾಥ್ ಮತ್ತು ಸುರೇಶ್ ಅವರಿಗೆ ಫೋನ್ ಮಾಡಿದಾಗ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಚಾಲಕ ಕಳಕಪ್ಪ ಹೇಳಿದ್ದಾ

 

 

                                                                  

ಎಚ್.ಆರ್.ಜಿ ರಾಮುಲುಗೆ ಅನ್ಸಾರಿ ಅವ್ಯಾಚ ಪದದಿಂದ ನಿಂದನೆ

ನವೆಂಬರ್-8 

ಗಂಗಾವತಿ: ಇಕ್ಬಾಲ್ ಅನ್ಸಾರಿಗೆ ರಾಜಕೀಯದ ಅ ಆ ಇ ಈ ಕಲಿಸಿದ್ದು ಎಚ್.ಆರ್.ಜಿ ಕುಟುಂಬ. ಈಗ ಅದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಎಂ ಎಲ್ಸಿ ಎಚ್.ಆರ್. ಶ್ರೀನಾಥ ಹೇಳಿದರು. 

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಕ್ಬಾಲ್ ಅನ್ಸಾರಿ ಅವರು ಹಿರಿಯ ರಾಜಕಾರಣಿಗಳಾದ ಎಚ್.ಜಿ. ರಾಮುಲು ಅವರ ಬಗ್ಗೆ ಏಕವಚನದಲ್ಲಿ ಮಾತನಾಡುವ ಮೂಲಕ ಅಪಮಾನ ಮಾಡಿದ್ದಾರೆ. ಇದು ಉಂಡ ಮನೆಗೆ ದ್ರೋಹ ಬಗೆದಂತೆ.

ಗಂಗಾವತಿ ಕ್ಷೇತ್ರಕ್ಕೆ ಎಚ್.ಆರ್.ಜಿ ಕುಟುಂಬ ಏನು ಮಾಡಿದೆ? ಎನ್ನುವುದು ಇಡೀ ತಾಲೂಕಿನ ಜನರಿಗೆ ಗೊತ್ತಿದೆ. ನಮ್ಮ ಮುಂದೆ ಕೈ ಕಟ್ಟಿಕೊಂಡು ನಿಲ್ಲುತ್ತಿದ್ದ ಅನ್ಸಾರಿ, ತಿನ್ನುತ್ತಿರುವ ಅನ್ನ, ನಾವು ಕೊಟ್ಟ ಭಿಕ್ಷೆ. ಅಷ್ಟು ಜ್ಞಾನ ಇಲ್ಲದೇ ಬಾಯಿಗೆ ಬಂದ ರೀತಿ ಶಾಸಕ ಅನ್ಸಾರಿ ಮಾತನಾಡುತ್ತಿರುವುದು ಸರಿಯಲ್ಲ. ಅನ್ಸಾರಿ ತಂದೆಯ ಮುಖ ನೋಡಿ ಇಕ್ಬಾಲ್ ಅನ್ಸಾರಿಯನ್ನು ಬೆಳೆಸಲಾಗಿದೆ. ಅದು ಅವರಿಗೂ ಗೊತ್ತಿದೆ. ಹಿಂದೆ ಏನಾಗಿದ್ದೇ? ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಮಾತನಾಡಬೇಕು. ಹಿರಿಯರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು. ಇದನ್ನು ನೋಡಿದರೆ ಅನ್ಸಾರಿಗೆ ನಿಷ್ಠೆ ಇಲ್ಲ ಎನ್ನುವುದು ವೇಥ್ಯೆ ಪಡುವಂತಾಗಿದೆ, ರಾಜಕೀಯ ಲಾಭಕ್ಕಾಗಿ ಏನು ಮಾಡಲು ಹಿಂಜರಿಯದ ರೀತಿ ವಿಕೃತ ಮನಸ್ಸು ಅನ್ಸಾರಿಯದ್ದಾಗಿದೆ. ಕೋಮು ಗಲಭೆ ಹೆಚ್ಚುತ್ತಿರುವುದೇ ಅನ್ಸಾರಿಯಿಂದ. ಮುಂದಿನ ದಿನಗಳಲ್ಲಿ ಜನರು ಇವರಿಗೆ ಬುದ್ಧಿ ಕಲಿಸಬೇಕಿದೆ ಎಂದು ಹೇಳಿದರು.

 

 

 

 

 

 

 

 

 

 

   

 ಕಾಂಗ್ರೆಸ್ ಮುಖಂಡನ ಮನೆಗೆ ದುಷ್ಕರ್ಮಿಗಳಿಂದ ವಾಮಚಾರ

ನವೆಂಬರ್ 07

ಕೊಪ್ಪಳ : ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮುಖಂಡನ ಮನೆ ಎದುರು ವಾಮಾಚಾರ ನಡೆದಿದೆ.ಕಾಂಗ್ರೆಸ್ ಮುಖಂಡ ದಾಸರೆಡ್ಡಿ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ದುಷ್ಕರ್ಮಿಗಳು ಬಾಗಲಿಗೆ ವಾಮಚಾರದ ವಸ್ತುವನ್ನು ಪ್ಲಾಸ್ಟಿಕ್ ಚೀಲದಲ್ಲಿ ನೇತು ಹಾಕಿದ್ದಾರೆ.ಸಂಶಯಾಸ್ಪದ ವಸ್ತುಗಳನ್ನು ಕಂಡು ದಾಸರೆಡ್ಡಿ ಕುಟುಂಬ ಆತಂಕಕ್ಕೆ ಒಳಗಾಗಿದೆ. ದುಷ್ಕರ್ಮಿಗಳು ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ, ಬಟ್ಟೆ, ಬಾಳೆಹಣ್ಣು, ಎಲೆ ಅಡಿಕೆ, ಕೊಬ್ಬರಿ, ಬಟ್ಟಲು ಹಾಗೂ ನಾಣ್ಯಗಳನ್ನು ಇರಿಸಿದ್ದಾರೆ.ಈ ಪ್ರಕರಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

 

 

                                                                                                                                                                                                                                                      

ಆರೋಪ ಮಾಡುವವರಿಗೆ ತಲೆ ಸರಿ: ರಾಯರಡ್ಡಿ

ನವೆಂಬರ್.2

ಕೊಪ್ಪಳ: ಕಂಪ್ಯೂಟರ್ ಖರೀದಿ ಟೆಂಡರ್ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಹಿಂದಿನ ಆಯುಕ್ತ ಅಜಯ್ ನಾಗಭೂಷಣ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘‘ಹಲವು ವರ್ಷಗಳಿಂದ ಒಂದೇ ಕಡೆ ಗೂಟ ಹೊಡೆದುಕೊಂಡು ಕುಳಿತ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡುತ್ತದೆ. ಪ್ರತಿ 2 ವರ್ಷಗಳಿಗೊಮ್ಮೆ ವರ್ಗಾವಣೆ ಪ್ರಕ್ರಿಯೆ ನಡೆಸುವುದು ಸರಕಾರದ ನಿಯಮವಾಗಿದೆ. ದಾಖಲೆಗಳಿಲ್ಲದೇ ಆರೋಪ ಮಾಡುವುದು ಸರಿಯಲ್ಲ. ಅವ್ಯವಹಾರ ನಡೆದಿದ್ದರೆ ಪೊಲೀಸ್, ನ್ಯಾಯಾಲಯಕ್ಕೆ ದೂರು ಸಲ್ಲಿಸಲಿ ಬೇಡ ಎನ್ನುವುದಿಲ್ಲ. ಆರೋಪ ಮಾಡುವವರಿಗೆ ತಲೆ ಸರಿ ಇಲ್ಲವೆಂದರೆ ನಾನೇನು ಮಾಡ್ಲಿ?’’ ಎಂದು ಪ್ರಶ್ನಿಸಿದರು.

 

 

 

  gg ಪೊಲೀಸರಿಗೆ ಸಹನೆ ಅಗತ್ಯ: ಐಜಿಪಿ ಮುರುಗನ್
ಅಕ್ಟೋಬರ್.31
ಕೊಪ್ಪಳ: ವೃತ್ತಿ ಜೀವನದಲ್ಲಿ ಪೊಲೀಸರಿಗೆ ಸಹನೆ ಅವಶ್ಯವಾಗಿದ್ದು, ಸಹನೆ ಕಳೆದುಕೊಳ್ಳದೇ ಸಾರ್ವಜನಿಕರೊಂದಿಗೆ ಶಾಂತಿಯುತವಾಗಿ ವರ್ತಿಸಬೇಕು ಎಂದು ಐಜಿಪಿ ಎಸ್.ಮುರುಗನ್ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಜರುಗಿದ ಸಶಸ್ತ್ರ ಮೀಸಲು ಪೊಲೀಸ್ ಪಡೆಯ 6ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಸಹನೆ ಅತ್ಯಂತ ಅವಶ್ಯವಾಗಿದೆ. ಪೊಲೀಸ್ ಪೇದೆಯಿಂದ ಅಧಿಕಾರಿಗಳು ಯಾವುದೇ ಸಂದರ್ಭದಲ್ಲೂ ಸಹನೆ ಕಳೆದುಕೊಳ್ಳಬಾರದು. ಪ್ರಶಿಕ್ಷ ಣಾರ್ಥಿಗಳು 8-9 ತಿಂಗಳಿನಿಂದ ನಾನಾ ರೀತಿಯ ಶಿಕ್ಷ ಣ ಪಡೆದಿದ್ದು, ಶಿಸ್ತು, ಶ್ರದ್ಧೆ ಕಲಿಸಲಾಗಿದೆ. ಇಲ್ಲಿಂದ ನಿರ್ಗಮಿಸಿದ ಬಳಿಕ ಸೇವಾ ಸ್ಥಳದಲ್ಲಿ ಮುಂದುವರಿಸಬೇಕು. ಕೆಲಸದಲ್ಲಿ ಪರಿಶ್ರಮ ವಹಿಸಿದರೆ ಯಶಸ್ಸು ದೊರೆಯುತ್ತದೆ. ಪೊಲೀಸ್ ಇಲಾಖೆ ಉಳಿದ ಇಲಾಖೆಗಳಿಗಿಂತ ಭಿನ್ನವಾಗಿದೆ. ಪೊಲೀಸ್ ಠಾಣೆಗೆ ಎಲ್ಲ ರೀತಿಯ ಜನರು ಆಗಮಿಸುತ್ತಾರೆ. ಮೊದಲು ಅವರ ಸಮಸ್ಯೆ ಆಲಿಸಿ ಪರಿಹರಿಸಬೇಕು. ಕೆಲ ಸಂದರ್ಭದಲ್ಲಿ ಪ್ರಭಾವಿ ಬಂಧಿಸಬೇಕಾಗುತ್ತದೆ. ಆಗ ಒತ್ತಡಕ್ಕೆ ಮಣಿಯದೇ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಎಸ್ಪಿ ಡಾ.ಅನೂಪ್ ಶೆಟ್ಟಿ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ, ನಿರ್ಗಮನ ಪಥ ಸಂಚಲನ ನಡೆಯಿತು.
ಬೆಂಗಳೂರು ನಗರದಿಂದ 46, ಮೈಸೂರು ನಗರದಿಂದ 15, ಕಲಬುರಗಿ- 15, ಹುಬ್ಬಳ್ಳಿ-ಧಾರವಾಡ- 7 ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಒಬ್ಬ ಪ್ರಶಿಕ್ಷಣಾರ್ಥಿ ಸೇರಿ 84 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದರು. ಇದರಲ್ಲಿ 8 ಸ್ನಾತಕೋತ್ತರ ಪದವಿ, 49 ಪದವಿ ಶಿಕ್ಷ ಣ, 27 ಪಿಯು ಮುಗಿಸಿದವರಿದ್ದರು.

 

 

  

                ಆನ್ಲೈನ್ ಮೂಲಕ ಸರಕಾರಿ ಸೇವೆ

ಅಕ್ಟೋಬರ್.30

ಕೊಪ್ಪಳ: ಎಲ್ಲ ಸೇವೆಗಳ ಸೌಲಭ್ಯ ಆನ್ಲೈನ್ ಮೂಲಕವೇ ಜನರ ಹಿತಕ್ಕಾಗಿ ಜಾರಿಗೊಳಿಸುವಗಬೇಕು. ಸರಕಾರಿ ನೌಕರರ ಕಾರ್ಯದಕ್ಷ ತೆಯ ಮೌಲ್ಯಮಾಪನ ಪ್ರತಿ ವರ್ಷ ನಡೆಯುವಂತಾಗಬೇಕು ಎಂಬ ಅಭಿಪ್ರಾಯ ಸಾರ್ವಜನಿಕರು, ವಿಷಯ ತಜ್ಞರಿಂದ ವ್ಯಕ್ತವಾಯಿತು.
ಜಿಲ್ಲಾಡಳಿತ ಭವನದ ಎನ್ಐಸಿ ಸಭಾಂಗಣದಲ್ಲಿ ಕರ್ನಾಟಕ ವಿಷನ್-2025 ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅಭಿವೃದ್ಧಿಗಾಗಿ ಜನರ ಅಭಿಪ್ರಾಯ ಸಂಗ್ರಹಣೆ ಕುರಿತು ನಡೆದ ವಿಷಯಾಧಾರಿತ ಗುಂಪು ಚರ್ಚೆಯಲ್ಲಿ ಶನಿವಾರ ಅಭಿಪ್ರಾಯ ವ್ಯಕ್ತವಾಯಿತು.
ಕಚೇರಿಗಳಲ್ಲಿ 2025 ರೊಳಗೆ ಕಾಗದ ರಹಿತ (ಪೇಪರ್ ಲೆಸ್) ಕಾರ್ಯನಿರ್ವಹಿಸಬೇಕು. ಸರಕಾರಿ ಸೌಲಭ್ಯಗಳನ್ನು ಆನ್ ಲೈನ್ನಲ್ಲಿ ಜನ ಸಾಮಾನ್ಯರು ಪಡೆಯುವಂತಾಗಬೇಕು. ಸರಕಾರಿ ನೌಕರರ ಕಾರ್ಯದಕ್ಷ ತೆಯ ಮೌಲ್ಯಮಾಪನ ಪ್ರತಿ ವರ್ಷ ಜರುಗಬೇಕು. ಪ್ರತಿ ಗ್ರಾ.ಪಂ.ಗಳಿಗೆ ಆನ್ಲೈನ್ ಸೌಲಭ್ಯ, ಸಿಸಿ ಕ್ಯಾಮೆರಾ ಅಳವಡಿಸಬೇಕು. ಸರಕಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸುವ ನಿಯಮ ಜಾರಿಗೊಳ್ಳಬೇಕು. ಪದವಿ ಕಾಲೇಜುಗಳಲ್ಲೂ 18 ವರ್ಷಕ್ಕಿಂತ ಮೇಲ್ಪಟ್ಟ ಯುವಕ-ಯುವತಿಯರಿಗೆ ಚುನಾವಣಾ ಗುರುತಿನ ಚೀಟಿ ಮತ್ತು ಚಾಲನಾ ಪರವಾನಗಿ ಪ್ರಮಾಣ ಪತ್ರ, ಸಂದರ್ಶನ ಮಾಡಿ ವಿತರಿಸುವಂತಾಗಬೇಕು. ಪ್ರತಿ ಇಲಾಖೆಯ ನೌಕರರ ವರ್ಗಾವಣೆ ನಿಗದಿತ ಅವಧಿ ಏಪ್ರಿಲ್-ಮೇ ಒಳಗೆ ಕಡ್ಡಾಯವಾಗಿ ಕೌನ್ಸೆಲಿಂಗ್ ಮೂಲಕವೇ ಪೂರ್ಣಗೊಳ್ಳಬೇಕು. ಎಲ್ಲ ಗ್ರಾಮಗಳು ಇಂಟರ್ನೆಟ್ ಸೌಲಭ್ಯ ಪಡೆದು, ಗ್ರಾಮಗಳಿಂದಲೇ ಸರಕಾರಿ ಸೌಲಭ್ಯಗಳನ್ನು ಪಡೆಯುವಂತಾಗಬೇಕು. ಚುನಾವಣೆಯಲ್ಲಿ ಎಲ್ಲ ಮತದಾನ ಆನ್ಲೈನ್ ಹಾಗೂ ಮೊಬೈಲ್ ಮೂಲಕ ಮತದಾನ ಮಾಡುವಂತಾಗಬೇಕು ಎಂಬ ಸಲಹೆಗಳು ಸಾರ್ವಜನಿಕ ವಲಯದಿಂದ ಕೇಳಿಬಂದವು.
                                                                                                 

 

 

                                                                                          

ರೈಲ್ವೆ ಗೇಟ್ ಪರಿಶೀಸಿದ:ಸಂಸದ ಸಂಗಣ್ಣ ಕರಡಿ

ಅಕ್ಟೋಬರ್.28

ಕೊಪ್ಪಳ: ನಗರದ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಅಂಚಿನಲ್ಲಿರುವ ಹಾಗೂ ಗಣೇಶ ನಗರ ಸಂಪರ್ಕಿಸುವ ರೈಲ್ವೆ ಗೇಟ್ ನಂ. 63ಕ್ಕೆ ಕೆಳಸೇತುವೆ ನಿರ್ಮಾಣ ಸಾಧ್ಯತೆ ಕುರಿತು ಸಂಸದ ಸಂಗಣ್ಣ ಕರಡಿ ಗುರುವಾರ ಸ್ಥಳ ಪರಿಶೀಲಿಸಿದರು.
ಈ ಪ್ರದೇಶದ ನಿವಾಸಿಗಳು, ಕೆಳ ಸೇತುವೆ ನಿರ್ಮಿಸುವಂತೆ ಇತ್ತೀಚೆಗೆ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಈಗಾಗಲೇ ಸಂಬಂಧಿಸಿದ ಸಂಪರ್ಕ ನಿರ್ಮಾಣದ ಪ್ರಸ್ತಾವನೆ ರೈಲ್ವೆ ಇಲಾಖೆ ಬಳಿಯಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಕುರಿತು ಚರ್ಚಿಸಲಾಯಿತು

 

 

 

 

                                                                                                                                                                                                              

ವಿಶಿಷ್ಟ ಸಂಸ್ಕೃತಿ: ಲಂಬಾಣಿ ಸಮುದಾಯ

ಅಕ್ಟೋಬರ್.21
ಕುಷ್ಟಗಿ: ತಾಲೂಕಿನ ನಾನಾ ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಪಾಡ್ಯವನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.
ಲಂಬಾಣಿ ಸಮುದಾಯ ತನ್ನದೇ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಹೊಂದಿದ್ದು ಅವರು ಆಚರಿಸುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಈ ಹಬ್ಬ ಆಚರಣೆಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಭ್ರಮವೇ ಹೆಚ್ಚು. ನರಕ ಚತುರ್ದಶಿ ದಿನ ತಮ್ಮ ಪೂರ್ವಜರನ್ನು ಗೌರವಿಸುವ ಮತ್ತು ಪೂಜಿಸುವ ಹಿರಿಯರ ಹಬ್ಬ ನಡೆಯುತ್ತದೆ. ಮರುದಿನ ಅಮವಾಸ್ಯೆಯಂದು ಸಂಜೆ ತಾಂಡಾದ ಪ್ರತಿ ಮನೆಗಳ ಎದುರು ಹಣತೆ ಇಡಲಾಗಿರುತ್ತದೆ. ತಾಂಡಾದ ಯುವತಿಯರು ಗುಂಪು ಗುಂಪಾಗಿ ಕೈಯಲ್ಲಿ ಹಣತೆ ಹಿಡಿದು ಪ್ರತಿ ಮನೆಗೂ ತೆರಳಿ ಅವರ ಮನೆ ಎದುರು ಇರಿಸುವ ದೀಪಗಳನ್ನು ಬೆಳಗಿ, ಮನೆಯವರಿಗೆ ಶುಭವಾಗಲೆಂದು ಹಾರೈಸುತ್ತಾರೆ. ನಂತರ ತಾಂಡಾದಲ್ಲಿನ ಎಲ್ಲ ದೇವಾಲಯಗಳಿಗೆ ಹೋಗಿ ಹಣತೆ ಹಚ್ಚುವುದು, ಸೇವಾಲಾಲ ದೇವಾಲಯದ ಎದುರು ಎಲ್ಲ ಯುವತಿಯರು, ಮಹಿಳೆಯರು ಸಮಾವೇಶಗೊಳ್ಳುವುದು ಸಂಪ್ರದಾಯ. ದೇವಾಲಯದ ಎದುರು ಆಹೋರಾತ್ರಿ ಲಂಬಾಣಿ ಸಂಪ್ರದಾಯದ ನೃತ್ಯ, ಹಾಡುಗಾರಿಕೆ ನಡೆಯುತ್ತದೆ

 

 

 

 

hh

 

ಪ್ರಿಯಕರನಿಗಾಗಿ  ಹೆತ್ತ ಮಗಳನ್ನೆ                          ಥಳಿಸಿದ ತಾಯಿ

ಅಕ್ಟೋಬರ್.18
ಕೊಪ್ಪಳ: ಮಹಿಳೆಯೊಬ್ಬರು ಪ್ರಿಯಕರನಿಗಾಗಿ ಹೆತ್ತ ಮಗಳನ್ನೇ ಬಾಸುಂಡೆ ಬರುವಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. ಬಾಲಕಿಗೆ ಬಾಸುಂಡೆ ಬರುವ ಹಾಗೆ ಥಳಿಸಿದ್ದ ಮಹಿಳೆ ವ್ಯಕ್ತಿಯೊಬ್ಬನೊಂದಿಗೆ ಅನೈಕಿಕ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದು ಫಾತಿಮಾ ಪತಿ ಈಕೆಗೆ ವಿಚ್ಛೇದನ ನೀಡಿದ್ದರು. ಆ ನಂತರ ಫಾತಿಮಾ ತಮ್ಮ ಮಕ್ಕಳೊಂದಿಗೆ ಪ್ರಿಯಕನೊಂದಿಗೆ ವಾಸಿಸುತ್ತಿದ್ದರು. ಅನೈತಿಕ ಸಂಬಂಧಕ್ಕೆ ಮಕ್ಕಳಿಂದ ತೊಂದರೆಯಾಗುತ್ತದೆ ಎಂದು ಈ ರೀತಿಯಾಗಿ ಮಕ್ಕಳಿಗೆ ಥಳಿಸಿರುವ ಆರೋಪ ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

ಕಲಾಪಕ್ಕೆ ಹಾಜರಾಗುಷ್ಟು ಬಡತನ ರಾಜ್ಯದ ಶಾಸಕರಿಗೆ ಬಂದಿದೆಯೇ? 

 

ಅಕ್ಟೋಬರ್.17

ಗಂಗಾವತಿ: ಚಿನ್ನದ ಉಡುಗೊರೆ, ಬಿಸಿಯೂಟ ಕೊಟ್ಟರೆ ಮಾತ್ರ ಕಲಾಪಕ್ಕೆ ಹಾಜರಾಗುಷ್ಟು ಬಡತನ ರಾಜ್ಯದ ಶಾಸಕರಿಗೆ ಬಂದಿದೆಯೇ? ಇಂತಹ ಅವೈಜ್ಞಾನಿಕ ನಿರ್ಧಾರ ಕೈಗೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಭಂಡ ಸರಕಾರವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಆನೆಗೊಂದಿಯ ಶಮಾ ಪವಾರ್ ಕಿಷ್ಕಿಂದ ಟ್ರಸ್ಟ್ಗೆ ಸೋಮವಾರ ಭೇಟಿ ನೀಡಿ, ಇಲ್ಲಿನ ಗೃಹ ಬಳಕೆ ವಸ್ತುಗಳ ತಯಾರಿಕೆ ವಿಧಾನವನ್ನು ವೀಕ್ಷಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ, ಅತ್ಯಾಚಾರ, ಕೊಲೆಯಂತಹ ಪ್ರಕರಣ ಹೆಚ್ಚಾಗುತ್ತಿವೆ. ವಜ್ರ ಮಹೋತ್ಸವದ ಹೆಸರಲ್ಲಿ ಚಿನ್ನದ ಉಡುಗೊರೆ ನೀಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬರ ಮತ್ತು ನೆರೆ ಆವರಿಸಿದೆ. ಇಂತಹ ಸಮಯದಲ್ಲಿ ಚಿನ್ನ, ಬೆಳ್ಳಿ ನೀಡುವುದು ಸಮಂಜಸವಲ್ಲ. ಬಿಜೆಪಿಯ ಯಾವ ಶಾಸಕರೂ ಇದನ್ನು ಸ್ವೀಕಾರ ಮಾಡುವುದಿಲ್ಲ. ವಿಧಾನ ಸಭೆ ಕಲಾಪಗಳಿಗೆ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲು ಶಾಸಕರು ಆಗಮಿಸಬೇಕು. ಆದರೆ ಬಿಸಿಯೂಟ ಜಾರಿ ಮಾಡಿದರೆ ಶಾಸಕರು ಬರುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಇದು ಸರಕಾರದ ಅವಿವೇಕಿತನ ಪ್ರದರ್ಶನ ಮಾಡುತ್ತದೆ..

Ads
;