ದೂರವಾಣಿ : 080-69999676
ಇಮೇಲ್ : Info@Vijayataranga.com


45  ಡಿ.11ರಂದು ಅಂಚೆ ಕಛೇರಿಗಳ ಸೇವೆ ಇರಲ್ಲ
ಡಿಸೆಂಬರ್-9
ಕೋಲಾರ: ಕೋಲಾರ ಅಂಚೆ ವಿಭಾಗದ ವ್ಯಾಪ್ತಿಯಲ್ಲಿರುವ ಪ್ರಧಾನ ಅಂಚೆ ಕಛೇರಿಗಳು ಹಾಗೂ ಉಪ ಅಂಚೆ ಕಛೇರಿಗಳಲ್ಲಿ ಉನ್ನತ ತಂತ್ರಜ್ಞಾನದ ಅನುಷ್ಟಾನ ಮಾಡಲಿರುವುದರಿಂದ ಡಿ.11ರಂದು ಅಂಚೆ ಕಛೇರಿಯ ಯಾವುದೇ ವ್ಯವಹಾರಗಳು ನಡೆಯುವುದಿಲ್ಲ. ಡಿ.12ರಿಂದ ಎಂದಿನಂತೆ ಸಾರ್ವಜನಿಕರು ವ್ಯವಹರಿಸಬಹುದಾಗಿದೆ. ಕೆಲವು ದಿನಗಳ ಕಾಲ ಹೊಸ ವ್ಯವಸ್ಥೆಗೆ ಹೊಂದಾಣಿಕೆ ಆಗುವವರೆಗೂ ಅಂಚೆ ಸೇವೆಗಳಲ್ಲಿ ಸ್ವಲ್ಪ ಮಟ್ಟಿನ ಅಡೆತಡೆಗಳಾಗಬಹುದು. ಸಾರ್ವಜನಿಕರು ಸಹಕರಿಸಬೇಕೆಂದು ಕೋಲಾರ ಅಂಚೆ ಕಛೇರಿಯ ವರಿಷ್ಠ ಅಧೀಕ್ಷಕರು ತಿಳಿಸಿದ್ದಾರೆ.

 

 

456  ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ- ಸ್ಥಳದಲ್ಲೇ 3 ಯುವಕರ ದುರ್ಮರಣ
 ಡಿಸೆಂಬರ್-8
ಕೋಲಾರ: ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಯುವಕರು ಮೃತಪಟ್ಟಿರುವ ಘಟನೆ ಕೋಲಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ತಂಬಿಹಳ್ಳಿ ಗೇಟ್ ಬಳಿ ತಡರಾತ್ರಿ ನಡೆದಿದೆ.
ಮಹಿಂದ್ರ ಕಂಪನಿಗೆ ಸೇರಿದ ಕೆಎ04 ಎಬಿ1081 ನಂಬರಿನ ಕಾರು ಅಪಘಾತಕ್ಕೆ ಒಳಗಾಗಿದೆ. ಮುಳಬಾಗಿಲಿನಿಂದ ಕೋಲಾರದ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಗೆ ವೇಗವಾಗಿ ಬಂದ ಕಾರು ತಂಬಿಹಳ್ಳಿ ಗೇಟ್ ಸಮೀಪದಲ್ಲಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಕಾರಿನಲ್ಲಿದ್ದ ಯುವಕರು ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಮೃತರ ವಿಳಾಸ, ಹೆಸರು ಇನ್ನೂ ಪತ್ತೆಯಾಗಿಲ್ಲ.

 

 

     45 

ಪ್ರವಾಸಕ್ಕೆ ಹಣ ಕೊಡಲಿಲ್ಲವೆಂದು ವಿದ್ಯಾರ್ಥಿ ನೇಣಿಗೆ ಶರಣು

ಡಿಸೆಂಬರ್-7

ಕೋಲಾರ : ಪ್ರವಾಸಕ್ಕೆ ಹೋಗಲು ಪೋಷಕರು ಹಣ ನೀಡಿಲ್ಲವೆಂದು ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಕ್ಯಾಸಂಬಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ವಿನಯ್ ಕುಮಾರ್ (15) ನೇಣು ಬಿಗಿದು ಕೊಂಡು ಸಾವನ್ನಪ್ಪಿದ್ದಾರೆ. ಕೆಆರ್ ಎಸ್ ಶಾಲೆಯಲ್ಲಿ ವಿನಯ್ ಕುಮಾರ್ ಓದುತ್ತಿದ್ದ. ಶಾಲೆಯವರು ಮಕ್ಕಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರಿಂದ ನಾವು ಮಗನಿಗೆ ಹಣ ಕೊಡಲಿಲ್ಲ. ಆದರಿಂದಲೇ ನಮ್ಮ ಮಗ ಸಾವನ್ನಪ್ಪಿದ್ದಾನೆಂದು ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಆರೋಪಿಸುತ್ತಿದ್ದಾರೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

555  ಅತ್ಯಾಚಾರಿ ಆರೋಪಿಗೆ 7 ವರ್ಷ ಜೈಲು ಶಿಕ್ಷೆ
 ನವೆಂಬರ್-29
 ಕೋಲಾರ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 7 ವರ್ಷ  ಜೈಲು ಹಾಗೂ 15 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯದ ಆದೇಶ ನೀಡಿದೆ.
 2014 ರಲ್ಲಿ ತಾಲೂಕಿನ ಹೊದಲಿ ಗ್ರಾಮದ ರೆಡ್ಡಪ್ಪ ಎನ್ನುವ ವ್ಯಕ್ತಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ  ಅತ್ಯಾಚಾರ ನಡೆಸಿದ್ದ . ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ  2 ನೇ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶೆ ರೇಖಾ ಅವರು ಅಪರಾಧಿಗೆ 7 ವರ್ಷ ಶಿಕ್ಷೆ ಹಾಗೂ 15 ಸಾವಿರ  ರೂ. ದಂಡ ವಿಧಿಸಿ ಮಹತ್ವದ ಆದೇಶ ನೀಡಿದ್ದಾರೆ.

 

4444  ಚುನಾವಣೆಗೆ ಸ್ಪರ್ಧಿಸಲು ಸರ್ಕಾರಿ ಉದ್ಯೋಗ ಬಿಟ್ಟ: ರಮೇಶ್
 ನವೆಂಬರ್ -28
 ಕೋಲಾರ : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಚುನಾವಣೆಯಲ್ಲಿ ಸ್ಪರ್ಧಿಸಲು  ಸರ್ಕಾರಿ ವೈದ್ಯರೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
 ಕೋಲಾರದ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ.ಡಿ.ಕೆ.ರಮೇಶ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ  ನೀಡಿದ್ದಾರೆ. 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
' ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ನನಗೆ ಆದರ್ಶ, ಅವರಂತೆ ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಚುನಾವಣೆಗೆ  ಸ್ಪರ್ಧಿಸಲು ಬಯಸಿದ್ದೇನೆ. ಆದ್ದರಿಂದ, ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
 ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಡಾ.ಡಿ.ಕೆ.ರಮೇಶ್  ಸಕ್ರಿಯವಾಗಿ ತೊಡಗಿಕೊಂಡಿದ್ದರು. ಸದ್ಯ, ಸರ್ಕಾರಿ ಕೆಲಸ ಬಿಟ್ಟಿದ್ದು, ಸಂಪೂರ್ಣವಾಗಿ ರಾಜಕಾರಣದಲ್ಲಿ ತೊಡಗಿಕೊಳ್ಳಲಿದ್ದಾರೆ.
 ಡಿ.ಕೆ.ರಮೇಶ್ ಅವರು ಯಾವ ಪಕ್ಷದಿಂದ, ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಅವರು ಫೇಸ್  ಬುಕ್ ಪುಟದಲ್ಲಿಯೂ ತಮ್ಮ ಹೋರಾಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

 

 

11
 ಜನವರಿ 1 ರಿಂದ ಹೊಸ ತಾಲೂಕಾಗಿ ಆರಂಭ : ರಮೇಶ್
 ನವೆಂಬರ್-4
ಕೋಲಾರ : ಜನವರಿ 1 ರಿಂದ ಕೆಜಿಎಫ್ ಹೊಸ ತಾಲೂಕಾಗಿ ವಿದ್ಯುಕ್ತವಾಗಿ ಆರಂಭವಾಗಲಿದೆ ಎಂದು ಉಸ್ತುವರಿ ಸಚಿವ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.
ಗದ್ದೀಗೌಡರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯು ಮಾಡಿರುವ ಶಿಫಾರಸ್ಸಿನಂತೆ ಕೆಜಿಎಫ್ ಹೊಸ ತಾಲೂಕೆಂದು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಘೋಷಣೆ ಮಾಡಿದೆ. ಅದರಂತೆ ರಾಜ್ಯ ಬಜೆಟ್ ನಲ್ಲಿಯೂ ಅದಕ್ಕೆ ಬೇಕಾದ ಸವಲತ್ತುಗಳನ್ನು ಒದಗಿಸಲಾಗಿದೆ ಎಂದು ರಮೇಶ್ ಕುಮಾರ್ ವಿವರಿಸಿದರು.
ಕೆಜಿಎಫ್ ನಗರಕ್ಕೆ ಸಮೀಪವಿರುವ ಹೋಬಳಿ ಮತ್ತು ಪಂಚಾಯಿತಿಗಳನ್ನು ಹೊಸ ತಾಲೂಕಿಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. ಬಂಗಾರಪೇಟೆ ವ್ಯಾಪ್ತಿಯಲ್ಲಿದ್ದ 6 ಹೋಬಳಿಗಳ ಪೈಕಿ 3 ಹೋಬಳಿಗಳನ್ನು ಸೇರ್ಪಡೆ ಮಾಡಲಾಗುವುದು ಎಂದರು.

 

 dd ಎಲೆಕ್ರ್ಟಿಕಲ್ ಟ್ರಾನ್ಸ್ ಫಾರ್ಮರ್ಗಳ ಸರ್ವಿಸ್
ಅಕ್ಟೋಬರ್.26
ಕೋಲಾರ: ಗೌರಿಬಿದನೂರು ಪಟ್ಟಣದ ಹೊರವಲಯದಲ್ಲಿರುವ ಹಿರೇಬಿದನೂರು ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ ಎಲೆಕ್ರ್ಟಿಕಲ್ ಟ್ರಾನ್ಸ್ ಫಾರ್ಮರ್ಗಳ ಸರ್ವಿಸ್ ಗೋದಾಮಿಗೆ ಬೆಂಕಿ ಬಿದ್ದಿದೆ.
ಬೆಂಕಿಯಿಂದಾಗಿ ವಸ್ತುಗಳು ಹಾನಿಗೊಂಡು ಅಪಾರ ನಷ್ಟವಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಗೋದಾಮು ಅಶ್ವತ್ಥನಾರಾಯಣ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

 

 

 

44   ಪ್ರವಾಸಿ ಮಂದಿರದಲ್ಲಿ ಮೋಜುಮಸ್ತಿ ಮಾಡುತ್ತಿದ್ದವರಿಗೆ ಶಾಕ್
 ಅಕ್ಟೋಬರ್-25
 ಕೋಲಾರ: ಪ್ರವಾಸಿ ಮಂದಿರ(ಐಬಿ)ಯ ಮೇಲೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ದಾಳಿ ಮಾಡಿ ಏಳು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡು ನಗರದ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಮಧ್ಯಭಾಗದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆ ಸುಮಾರಿನಲ್ಲಿ ಜಿಲ್ಲಾಧಿಕಾರಿ ಸತ್ಯವತಿ ಐಬಿ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಮೋಜುಮಸ್ತಿಯಲ್ಲಿ ತೊಡಗಿದ್ದವರು ಅಧಿಕಾರಿಗಳು ಬರುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಐಬಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ನಿಲುಗಡೆ ಸ್ಥಳದಲ್ಲಿದ್ದ ಏಳು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಂಡು ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಿಎಸ್ಐ ಮುನೇಗೌಡ, ನಗರಸಭಾ ಕಮೀಷನರ್ ರಾಮ್ಪ್ರಸಾದ್, ಲೋಕೋಪಯೋಗಿ ಇಂಜಿನಿಯರ್ ಮುನಿ ಅಂಜನಪ್ಪ ಹಾಗೂ ಸಿಬ್ಬಂದಿ ಜಿಲ್ಲಾಧಿಕಾರಿಗಳು ಜೊತೆಯಲ್ಲಿದ್ದರು.

 

 

    

 ಟಿಪ್ಪು ಸುಲ್ತಾನ ಒಬ್ಬ ಹೋರಾಟಗಾರ: ಕೆ.ಎಚ್.ಮುನಿಯಪ್ಪ

 ಅಕ್ಟೋಬರ್.21

ಕೋಲಾರ: ಟಿಪ್ಪು ಸುಲ್ತಾನ ಒಬ್ಬ ಹೋರಾಟಗಾರ ಅವರ ಜಯಂತಿಯನ್ನು ನಾವು ಮಾಡುತ್ತೇವೆ. ಅವರಿಗೆ ಗೌರವ ಕೋಡುವುದನ್ನು ಬಿಜೆಪಿ ನಾಯಕರು ಕಲಿಯಬೇಕು ಎಂದು ಕಾಂಗ್ರೆಸ್ ಸಂಸದ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿಗೆ ವಿರೋಧ ಮಾಡಿದರೆ ಕೋಮು ಗಲಭೆಗೆ ಕಾರಣವಾಗುತ್ತದೆ. ಟಿಪ್ಪು ಜಯಂತಿ ಹೆಸರಲ್ಲಿ ರಾಜಕೀಯ ಮಾಡುವುದನ್ನು ಬಿಜೆಪಿಯವರು ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ಜಾತ್ಯಾತೀತ ರಾಷ್ಟ್ರ. ಎಲ್ಲ ಧರ್ಮಗಳಿಗೂ ಗೌರವ ನೀಡಬೇಕು. ಟಿಪ್ಪು ಸುಲ್ತಾನ್ ಜಯಂತಿಗೆ ವಿರೋಧ ಮಾಡುವ ಬಿಜೆಪಿಯವರು ಸಂವಿಧಾನದ ವಿರೋಧಿಗಳು ಎಂದು ಕಾಂಗ್ರೆಸ್ ಸಂಸದ ಕೆ.ಎಚ್.ಮುನಿಯಪ್ಪ ಕಿಡಿಕಾರಿದ್ದಾರೆ.

 

Ads
;