ದೂರವಾಣಿ : 080-69999676
ಇಮೇಲ್ : Info@Vijayataranga.com


 

     12


ದಾಖಲೆ ವೀರನಿಗೆ ಸನಿಹದಲ್ಲಿದೆ ಮತ್ತೊಂದು ವಿನೂತನ ದಾಖಲೆ

 ಡಿಸೆಂಬರ್-22

ಇಂಧೋರ್: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಹಾಗೂ ಟಿ20 ವಿಶ್ವಕಪ್(2007ಟಿ20 ಹಾಗೂ 2011ರ ಏಕದಿನ) ಜಯಿಸಿರುವ ಏಕೈಕ ಭಾರತದ ನಾಯಕ. ಭಾರತದ ಈ ಸ್ಫೋಟಕ ಆಟಗಾರ ಮತ್ತೊಂದು ವಿನೂತನ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಕೇವಲ 3 ಕ್ಯಾಚುಗಳನ್ನು ತಮ್ಮ ಮುಡಿಗೆ ಸೇರ್ಪಡಿಸಿಕೊಂಡರೆ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 50 ಕ್ಯಾಚ್ ಕಬಳಿಸಿದ ವಿಕೇಟ್ ಕೀಪರ್ ಇವರಾಗುತ್ತಾರೆ. ಧೋನಿ 84 ಟಿ20 ಪಂದ್ಯಗಳಿಂದ 47 ಕ್ಯಾಚುಗಳನ್ನು ಹಿಡಿದಿದ್ದಾರೆ. ಇಂಧೂರ್'ನಲ್ಲಿ ನಡೆಯುವ 2ನೇ ಟಿ20 ಪಂದ್ಯದಲ್ಲಿ ಎದುರಾಳಿಗಳ 3 ಕ್ಯಾಚುಗಳನ್ನು ಕೈಗೆ ಸೇರಿಸಿಕೊಂಡರೆ ಮತ್ತೊಂದು ಹೊಸ ದಾಖಲೆ ಬರೆದಂತಾಗುತ್ತದೆ. ಟಿ20ಯಲ್ಲಿ ಅತೀ ಹೆಚ್ಚು ಕ್ಯಾಚು ಹಿಡಿದವರಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದರೆ ವೆಸ್ಟ್ ಇಂಡೀಸಿನ ದಿನೇಶ್ ರಾಮ್'ದಿನ್ ಮೂರನೇ ಸ್ಥಾನದಲ್ಲಿ ಕಮ್ರಾನ್ ಅಕ್ಮಲ್ ಇದ್ದಾರೆ. ಕಟಕ್'ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 22 ಎಸತಗಳಲ್ಲಿ 39 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 

    123

ಇಂಗ್ಲೆಂಡ್ ವಿರುದ್ದ ಭರ್ಜರಿ ಜಯ: ಆಸ್ಟ್ರೇಲಿಯಕ್ಕೆ ಆಯಶಸ್ ಸರಣಿ

 ಡಿಸೆಂಬರ್-18

 ಪರ್ತ್: ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಇನಿಂಗ್ಸ್ ಹಾಗೂ 41 ರನ್ಗಳ ಅಂತರದಿಂದ ಮಣಿಸಿರುವ ಆಸ್ಟ್ರೇಲಿಯ ತಂಡ ಇನ್ನು ಎರಡು ಪಂದ್ಯಗಳು ಬಾಕಿ ಇರುವಾಗಲೇ ಆಯಶಸ್ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. 
ಐದನೇ ದಿನದಾಟವಾದ ಇಂದು ಟೀ ವಿರಾಮಕ್ಕೆ ಮೊದಲೇ ಆಸೀಸ್ ವೇಗದ ಬೌಲರ್ ಜೋಶ್ ಹೇಝಲ್ವುಡ್ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು 218 ರನ್ಗೆ ಆಲೌಟ್ ಮಾಡಿದರು. ನಾಲ್ಕು ವರ್ಷಗಳ ಹಿಂದೆ ಅಲಿಸ್ಟರ್ ಕುಕ್ ನೇತೃತ್ವದ ಇಂಗ್ಲೆಂಡ್ ವಾಕಾ ಸ್ಟೇಡಿಯಂನಲ್ಲೇ 3-0 ಅಂತರದಿಂದ ಸರಣಿ ಸೋತಿತ್ತು. ಒದ್ದೆ ಪಿಚ್ನಿಂದ ಇಂದು ಪಂದ್ಯ ಮೂರು ಗಂಟೆ ವಿಳಂಬವಾಗಿ ಆರಂಭವಾಯಿತು. 4 ವಿಕೆಟ್ಗಳ ನಷ್ಟಕ್ಕೆ 132 ರನ್ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ಕೊನೆಯ 6 ವಿಕೆಟ್ಗಳನ್ನು 85 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಜಾನಿ ಬೈರ್ಸ್ಟೊವ್ ನಿನ್ನೆಯ ಸ್ಕೋರ್ಗೆ ಒಂದೂ ರನ್ ಗಳಿಸದೇ ಔಟಾದರು. ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಡೇವಿಡ್ ಮಲಾನ್ ನಾಲ್ಕನೇ ಅರ್ಧಶತಕ ಪೂರೈಸಿದರು. ಆದರೆ, 54 ರನ್ಗೆ ಹೇಝಲ್ವುಡ್ಗೆ ವಿಕೆಟ್ ಒಪ್ಪಿಸಿದರು.

 

 

 

                             

ಹಾಕಿ ವಿಶ್ವ ಲೀಗ್ ಸೆಮಿಫೈನಲ್ನಲ್ಲಿ ಭಾರತಕ್ಕೆ ಸೋಲು

ಡಿಸೆಂಬರ್-9 

ಭುವನೇಶ್ವರ: ವಿಶ್ವದ ನಂಬರ್ ವನ್ ಖ್ಯಾತಿಯ ಆರ್ಜೆಂಟೀನಾ ವಿರುದ್ಧ ಭಾರತ ತಂಡ ಹಾಕಿ ವಿಶ್ವ ಲೀಗ್ ಫೈನಲ್ ಕೂಟದ ಸೆಮಿಫೈನಲ್ ಪಂದ್ಯದಲ್ಲಿ 0-1 ಗೋಲಿನಿಂದ ಸೋಲುಂಡಿದೆ. ಆದರೂ ತನ್ನ ಪ್ರಬಲ ಹೋರಾಟದಿಂದ ಅಭಿಮಾನಿಗಳ ಮನಗೆದ್ದಿದೆ. ಪಂದ್ಯದ ಕೊನೆಯವರೆಗೆ ಭಾರತ ಪ್ರಬಲವಾಗಿ ಹೋರಾಟ ಸಂಘಟಿಸಿತು. ಸದ್ಯ ಭಾರತ ಡಿ.10ರಂದು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದೆ.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತವರಿನ ಅಂಕಣದ ಲಾಭ ಪಡೆದು ಫೈನಲ್ ಪ್ರವೇಶಿಸುವ ಭರವಸೆ ಮೂಡಿಸಿತ್ತು. ಆದರೆ ಪಂದ್ಯ ಆರಂಭವಾಗಿ 17ನೇ ನಿಮಿಷದಲ್ಲಿಯೇ ಭಾರತದ ಆಸೆಗೆ ಹಿನ್ನಡೆ ಉಂಟಾಯಿತು. ಈ ಹಂತದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಆರ್ಜೆಂಟೀನಾ ಅತ್ಯುತ್ತಮವಾಗಿ ಬಳಸಿಕೊಂಡಿತು. ಗೊಂಜಾಲೊ ಪಿಲ್ಲಟ್ ಚೆಂಡನ್ನು ಆಕರ್ಷಕವಾಗಿ ಬಲೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರು. ಇದರಿಂದ ಆರ್ಜೆಂಟೀನಾ 1-0 ಗೋಲಿನಿಂದ ಮುನ್ನಡೆ ಪಡೆಯಿತು. ಇದೊಂದೇ ಪಂದ್ಯದಲ್ಲಿ ದಾಖಲಾದ ಗೋಲೆನ್ನುವುದು ಗಮನಾರ್ಹ. ಅನಂತರದ ಹಂತದಲ್ಲಿ ತುಂತುರು ಮಳೆಯಲ್ಲಿಯೇ ಉಭಯ ತಂಡಗಳು ಭರ್ಜರಿ ಹೋರಾಟ ಪ್ರದರ್ಶಿಸಿದವು. ಆದರೆ ಯಾವುದೇ ಗೋಲು ದಾಖಲಾಗಲಿಲ್ಲ.

 

            ರೋಹಿತ್ ಶರ್ಮಾ,  ಹಾರ್ದಿಕ್ ಪಾಂಡ್ಯ ನಡುವೆ ತಿರ್ವ ಸ್ಫರ್ಧೆ
ಡಿಸೆಂಬರ್.8
ಚೆನ್ನೈ: ಭಾರತೀಯ ಕ್ರಿಕೆಟ್ ತಂಡ ಮಹತ್ವದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುತ್ತಿರುವಂತೆಯೇ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಈಗಿನಿಂದಲೇ ನಿಕಟ ಪೈಪೋಟಿ ಏರ್ಪಟ್ಟಿದೆ.
ಪ್ರಮುಖವಾಗಿಯೂ ನಂ.6ನೇ ಸ್ಥಾನಕ್ಕಾಗಿ ರೋಹಿತ್ ಶರ್ಮಾ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.
ಅತ್ತ ಅಗ್ರ ಕ್ರಮಾಂಕದಲ್ಲಿ ಶಿಖರ್ ಧವನ್, ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ನಡುವೆ ನಿಕಟ ಪೈಪೋಟಿ ಕಂಡುಬರಲಿದೆ.
ತದಾ ಬಳಿಕ ಮೂರು ಸ್ಥಾನಗಳನ್ನು ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೋಹ್ಲಿ ಮತ್ತು ಅಜಿಂಕ್ಯ ರಹಾನೆ ತುಂಬಲಿದ್ದಾರೆ. ಇತ್ತೀಚೆಗಿನ ಸರಣಿಗಳಲ್ಲಿ ರಹಾನೆ ಕಳಪೆ ಪ್ರದರ್ಶನ ನೀಡುತ್ತಿದ್ದರೂ ವಿದೇಶದಲ್ಲಿನ ನಿರ್ವಹಣೆ ಅವರನ್ನು ನೆಚ್ಚಿಕೊಳ್ಳಲು ಕಾರಣವಾಗಿದೆ.
ಬಳಿಕದ ಆರನೇ ಸ್ಥಾನಕ್ಕೆ ರೋಹಿತ್ ಹಾಗೂ ಹಾರ್ದಿಕ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬರಲಿದೆ. ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿರುವ ರೋಹಿತ್ ಸತತ ಎರಡು ಶತಕ ಹಾಗೂ ಅರ್ಧಶತಕಗಳ ಸಾಧನೆ ಮಾಡಿದ್ದರು.
ಅತ್ತ ಲಂಕಾ ಸರಣಿಯಿಂದ ಹೊರಗುಳಿಯುವ ಮೂಲಕ ವಿಶ್ರಾಂತಿಯಲ್ಲಿದ್ದ ಪಾಂಡ್ಯ, ನಾಯಕ ಕೊಹ್ಲಿಗೆ ಹೆಚ್ಚಿನ ಬೌಲಿಂಗ್ ಆಯ್ಕೆಯನ್ನು ನೀಡಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.
ಅಂತೆಯೇ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವೃದ್ಧಿಮಾನ್ ಸಹಾ ನಿಭಾಯಿಸಲಿದ್ದಾರೆ. ಅಂತಿಮವಾಗಿ ನಾಲ್ವರು ಬೌಲರುಗಳ ಪೈಕಿ ಓರ್ವ ಸ್ಪಿನ್ನರ್ ಹಾಗೂ ಮೂವರು ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಇದರಿಂದ ದಕ್ಷಿಣ ಆಫ್ರಿಕಾದ ವೇಗಿ ಪಿಚ್ನಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವಿಂದ್ರ ಜಡೇಜಾ ಪೈಕಿ ಓರ್ವ ಆಟಗಾರ ಹೊರಗುಳಿಯುವ ಸಾಧ್ಯತೆಯಿದೆ.
ಮೂವರು ವೇಗಿಗಳ ಸ್ಥಾನಕ್ಕೆ ಇಶಾಂತ್ ಶರ್ಮಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ನಡುವೆ ಪೈಪೋಟಿ ಕಂಡುಬರಲಿದೆ.

 

  ಗಗ ಹಾಂಕಾಂಗ್ ಫೈನಲ್ ಸೀರಿಸ್ ನಲ್ಲಿ ಸೋಲುಂಡ ಪಿ.ವಿ.ಸಿಂಧೂ
ನವೆಂಬರ್.27
ಹಾಂಕಾಂಗ್: ರಿಯೊ ಒಲಿಂಪಿಕ್ಸ್ ಹಾಗೂ ವಿಶ್ವಚಾಂಪಿಯನ್ಷಿಪ್ ಬೆಳ್ಳಿ ಪದಕ ವಿಜೇತೆ ಭಾರತದ ಪಿ.ವಿ ಸಿಂಧೂ, ಹಾಂಕಾಂಗ್ ಓಪನ್ ಸೂಪರ್ ಸೀರೀಸ್ ಫೈನಲ್ನಲ್ಲಿ ಸೋಲುಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ವಿಶ್ವದ 3ನೇ ರಾಯಂಕ್ ರ ಸಿಂಧೂ, ನಂ.1 ತಾರೆ ಚೈನೀಸ್ ತೈಪೆಯ ತಾಯ್ ಜು ಯಿಂಗ್ ವಿರುದ್ಧ 18-21, 18-21ರ ನೇರ ಗೇಮ್ಗಳ ಸೋಲುಂಡರು.
ಈ ಮೂಲಕ ಸಿಂಧೂ 9.81 ಲಕ್ಷ ರೂ. ನಗದು ಬಹುಮಾನಕ್ಕೆ ತೃಪ್ತಿ ಪಟ್ಟರೆ, ಜು ಯಿಂಗ್ 19.36 ಲಕ್ಷ ರೂ.ಗಳನ್ನು ತಮ್ಮದಾಗಿಸಿಕೊಂಡರು.
ಏಷ್ಯನ್ ಚಾಂಪಿಯನ್ ತಾಯ್ ಈ ಮೂಲಕ 2017ರಲ್ಲಿ 5ನೇ ಸೂಪರ್ ಸೀರೀಸ್ ಕಿರೀಟ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಚೈನೀಸ್ ತೈಪೆ ಆಟಗಾರ್ತಿ ಆಲ್ ಇಂಗ್ಲೆಂಡ್, ಮಲೇಷ್ಯಾ, ಸಿಂಗಪುರ್ ಮತ್ತು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು.
ಭಾರತದ ಅಗ್ರಮಾನ್ಯ ಆಟಗಾರ್ತಿಯ ವಿರುದ್ಧ ಜು ಯಿಂಗ್ ಮೊದಲ ಗೇಮ್ನಲ್ಲಿ 7-2ರ ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದರು. ಆದರೆ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಸಿಂಧೂ ಸತತ ನಾಲ್ಕು ಅಂಕ ಗಳಿಸಿ ತಿರುಗೇಟು ನೀಡಿದರು. ಆದರೆ ವಿರಾಮದ ವೇಳೆಗೆ 11-8ರಲ್ಲಿ ಮೇಲುಗೈ ಸಾಧಿಸಿದ ವಿಶ್ವದ ನಂ.1 ಆಟಗಾರ್ತಿ ಸಮಚಿತ್ತದ ಆಟದೊಂದಿಗೆ ಕೊನೆಯವರೆಗೂ ಈ ಮುನ್ನಡೆಯನ್ನು ಉಳಿಸಿಕೊಂಡು ಗೇಮ್ ವಶ ಪಡಿಸಿಕೊಂಡರು.
ತಮ್ಮ ಪಾಲಿಗೆ ನಿರ್ಣಾಯಕವಾಗಿದ್ದ 2ನೇ ಗೇಮ್ನಲ್ಲಿ ಉತ್ತಮವಾಗಿ ಆಟ ಆರಂಭಿಸಿದ ಸಿಂಧೂ 4-1ರಲ್ಲಿ ಮುನ್ನಡೆ ಪಡೆದರು. ಆದರೆ ಬಿರುಸಿನ ಸ್ಮ್ಯಾಷ್ಗಳ ಮೂಲಕ ಸತತ ತಾಯ್ 3 ಪಾಯಿಂಟ್ ಗಳಿಸಿ ತಿರುಗೇಟು ನೀಡಿದರು. ಆದರೂ ವಿರಾಮದ ವೇಳೆಗೆ ಸಿಂಧೂ 11-10ರ ಅಲ್ಪ ಮುನ್ನಡೆ ಗಳಿಸಿ ಗೇಮ್ ಗೆಲ್ಲುವ ಭರವಸೆ ಮೂಡಿಸಿದು. ಆದರೆ ವಿರಾಮದಿಂದ ಮರಳಿದ ನಂತರ ನಿರಂತರವಾಗಿ 6 ಅಂಕಗಳನ್ನು ಗಳಿಸಿ 18-12ರ ದೊಡ್ಡ ಮುನ್ನಡೆ ಗಳಿಸಿದ್ದಷ್ಟೇ ಅಲ್ಲದೆ ಸಿಂಧೂ ಮೇಲೆ ಒತ್ತಡ ಹೇರಿದರು. ಅಂತಿಮವಾಗಿ 21-18ರಲ್ಲಿ ಗೇಮ್ ಗೆದ್ದು ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು. ಇದರೊಂದಿಗೆ 23 ವರ್ಷದ ತಾಯ್ ವಿರುದ್ಧ ಸಿಂಧೂ ಸತತ 4ನೇ ಬಾರಿ ಮುಗ್ಗರಿಸಿದಂತಾಗಿದೆ.

 

                                              

ಚೀನಾ ಯುವ ಆಟಗಾರ್ತಿಗೆ ಶರಣಾದ ಸಿಂಧೂ

ನವೆಂಬರ್ -17

ಹೊಸದಿಲ್ಲಿ: ವಿಶ್ವ ನಂ.2 ರ್ಯಾಂ ಕ್ ಹಾಗೂ ಮಾಜಿ ಚಾಂಪಿಯನ್ ಭಾರತದ ಹೆಮ್ಮೆ ಪಿವಿ ಸಿಂಧೂ, ಶಾಂಘೈನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಚೀನಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಕ್ವಾರ್ಟರ್ ಫೈನಲ್ ಹಂತದಿಂದಲೇ ಹೊರನಡೆದಿದ್ದಾರೆ.
ಭಾರತದ ಪದಕ ಆಸೆಯು ಕಮರಿ ಹೋಗಿದೆ. ಮಹಿಳಾ ಸಿಂಗಲ್ಸ್ ಅಂತಿಮ ಎಂಟರ ಘಟ್ಟದ ಹೋರಾಟದಲ್ಲಿ ಸಿಂಧೂ ಅವರು ಚೀನಾದ ಯುವ ಪ್ರತಿಭೆ 19ರ ಹರೆಯದ ಗಾವೊ ಫಾಂಗ್ಜೆ ವಿರುದ್ಧ 11-21, 10-21ರ ಅಂತರದಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿದರು. ತವರಿನ ಅಭಿಮಾನಿಗಳ ಬೆಂಬಲದ ಸ್ಪಷ್ಟ ಲಾಭವೆತ್ತಿದ 89ನೇ ರ್ಯಾಂಕ್ ಗಾವೊ, ಎದುರಾಳಿಗೆ ಅವಕಾಶವನ್ನೇ ನೀಡಲಿಲ್ಲ. ಇದರೊಂದಿಗೆ ಸಿಂಧೂ ಸೋಲಿನ ಆಘಾತ ಎದುರಿಸುವಂತಾಗಿದೆ.
ಟೂರ್ನಿಯಲ್ಲಿ ಎರಡನೇ ಶ್ರೇಯಾಂಕಿತೆಯಾಗಿರುವ ಸಿಂಧೂ ವಿರುದ್ಧ ಪ್ರಬಲ ಆಟದ ಪ್ರದರ್ಶನ ನೀಡುವ ಮೂಲಕ ಸೋಲಿನ ರುಚಿ ತೋರಿಸಿಕೊಟ್ಟಿದ್ದಾರೆ.ಇದಕ್ಕೂ ಮೊದಲು ದ್ವಿತೀಯ ಸುತ್ತಿನಲ್ಲೇ ಮುಗ್ಗರಿಸಿದ್ದ ಭಾರತದ ಸೈನಾ ನೆಹ್ವಾಲ್ ಹಾಗೂ ಎಚ್ಎಚ್ ಪ್ರಣೋಯ್ ಸಹ ಕೂಟದಿಂದ ನಿರ್ಗಮನದ ಹಾದಿ ಹಿಡಿದಿದ್ದರು.

                                   

ತಂಡಕ್ಕೆ ರಾಹುಲ್ ದ್ರಾವಿಡ್ ರಾಯಭಾರಿ

ನವೆಂಬರ್ -15

ಬೆಂಗಳೂರು: ಇದೇ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನಲ್ಲಿ ಬೆಂಗಳೂರು ಎಫ್ಸಿ ಪದಾರ್ಪಣೆ ಮಾಡುತ್ತಿದೆ. ಬೆಂಗಳೂರು ಎಫ್ ಸಿ ಪರ ರಾಯಭಾರಿಯಾಗಿ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಕಾಣಿಸಿಕೊಳ್ಳಲಿದ್ದಾರೆ.
ನವೆಂಬರ್ 17ರಂದು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮುಂಬೈ ಎಫ್ಸಿ ವಿರುದ್ಧ ಅಭಿಯಾನ ಆರಂಭಿಸಲಿದೆ. ಭಾರತದ ಕಿರಿಯದ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಬೆಂಗಳೂರು ಎಫ್ ಸಿ ತಂಡದ ನೀಲಿ ಬಣ್ಣದ ಜರ್ಸಿ ತೊಟ್ಟು ಬೆಂಬಲ ಸೂಚಿಸಿದರು. ಈ ಸೀಸನ್ ಪೂರ್ತಿ ದ್ರಾವಿಡ್ ಅವರು ಬ್ಲೂ ಬಾಯ್ ಪರ ಚಿಯರ್ಸ್ ಮಾಡಲಿದ್ದಾರೆ.
ತವರಿನಂಗಳದಲ್ಲಿ ಜರುಗಲಿರುವ ಇಂಡಿಯನ್ ಸೂಪರ್ ಲೀಗ್ನ ಒಟ್ಟು ಒಂಬತ್ತು ಪಂದ್ಯಗಳ ಪೈಕಿ ಮೆನ್ ಇನ್ ಬ್ಲೂ ತಂಡ, ವಾರಂತ್ಯ ಭಾನುವಾರ ನಾಲ್ಕು ಪಂದ್ಯಗಳನ್ನಾಡಲಿದೆ.
ಉಳಿದಂತೆ, ಮೂರು ಪಂದ್ಯಗಳು ಗುರುವಾರ ನಡೆದರೆ ಇತರ ಎರಡು ಪಂದ್ಯಗಳು ಶುಕ್ರವಾರ ನಡೆಯಲಿವೆ. ಇದಲ್ಲದೆ ಚೆನ್ನೈಯಿನ್ ಎಫ್ಸಿ (ಡಿ.17) ಮತ್ತು ಎಟಿಕೆ ( ಜ.7) ವಿರುದ್ಧ ತವರಿನ ಎರಡು ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳು ಸಂಜೆ 5.30ಕ್ಕೆ ಆರಂಭವಾಗಲಿವೆ. ಇತರ ಎಲ್ಲಾ ಪಂದ್ಯಗಳು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ರಾತ್ರಿ 8ಕ್ಕೆ ಆರಂಭವಾಗಲಿವೆ.

 

                                                                                    

ಬಾಕ್ಸಿಂಗ್ ಚಾಂಪಿಯನ್‍ಶಿಪ್:ಮೇರಿಗೆ ಚಿನ್ನ
ನವೆಂಬರ್-7

ವಿಯೆಟ್ನಾಂ: ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತದ ಹೆಮ್ಮೆಯ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ನಲ್ಲೂ ಐದನೆ ಪ್ರಶಸ್ತಿ ಗೆದ್ದು ದೇಶದ ಗೌರವ ಹೆಚ್ಚಿಸಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಒಲಂಪಿಕ್ ಕಂಚು ಪದಕ ವಿಜೇತ ಮೇರಿಕೋಂ ಉತ್ತರ ಕೊರಿಯಾದ ಚಿಮ್ ಹ್ಯಾಂಗ್ ಮಿ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದರು.
2014ರ ಏಷ್ಯನ್ ಗೇಮ್ ನಂತರ ಇದು ಮೇರಿಕೋಮ್ಗೆ ಮೊದಲ ಅಂತಾರಾಷ್ಟ್ರೀಯ ಬಂಗಾರದ ಪದಕವಾಗಿದೆ ಮತ್ತು ಈ ವರ್ಷದ ಚೊಚ್ಚಲ ಮೆಡಲ್ ಆಗಿದೆ. ಮಂಗಳವಾರ ನಡೆದ ಸೆಮಿಫೈನಲ್ನಲ್ಲಿ ಅವರು ಜಪಾನ್ ತ್ಸುಬಾಸ ಕೊಮುರ ಅವರನ್ನು 5-0ಯಿಂದ ಮಣಿಸಿ ಅಂತಿಮ ಹಣಾಹಣಿಗೆ ಪ್ರವೇಶಿಸಿದ್ದರು.

 

 

                                                                                                                      

ಭಾರತೀಯ ಕ್ರಿಕೆಟ್ನಲ್ಲಿ ದಿಗ್ಗಜರಿಗೆ ಸಿಗದ ಗೌರವ

 

ನವೆಂಬರ್-3


ಬೆಂಗಳೂರು: ದಿಗ್ಗಜ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ನೀಡಿರುವ ಭಾರತದಲ್ಲಿ ಆ ದಿಗ್ಗಜರಿಗೆ ಅವರು ಬಯಸಿದ ಅರ್ಹ ವಿದಾಯ ಸಿಕ್ಕಿರುವುದು ತೀರಾ ವಿರಳ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಬುಧವಾರ ನಿವೃತ್ತಿಯಾದ ಎಡಗೈ ವೇಗಿ ಆಶಿಶ್ ನೆಹ್ರಾ ಹೊರತು ಪಡಿಸಿದರೆ, ಭಾರತೀಯ ದಿಗ್ಗಜರಲ್ಲಿ ಹೆಚ್ಚಿನವರಿಗೆ ಮನೆಯಂಗಳದಲ್ಲಿ ವೈಭವಯುತ ವಿದಾಯ ಸಿಕ್ಕಿಲ್ಲ.
ದಿ ಗ್ರೇಟ್ ವಾಲ್ ಆಫ್ ಇಂಡಿಯಾ ರಾಹುಲ್ ದ್ರಾವಿಡ್, ವೆರಿ ವೆರಿ ಸ್ಪೆಷಲ್ ಲಕ್ಷ ್ಮಣ್ ಸುದ್ದಿಗೋಷ್ಠಿ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿದರೆ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಹಾಗೂ ಬಂಗಾಳದ ಹುಲಿ ಸೌರವ್ ಗಂಗೂಲಿ ತವರಿನ ಹೊರಗೆ ವಿದಾಯದ ಪಂದ್ಯವಾಡಿದ್ದರು. ಡ್ಯಾಶಿಂಗ್ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಮತ್ತು ಎಡಗೈ ವೇಗಿ ಜಹೀರ್ ಖಾನ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದು ಟ್ವಿಟರ್ ಮೂಲಕ.

 

 

 

                                                                                                                                 

ಜಪಾನ್ ಮಣಿಸಿದ ಭಾರತ ಫೈನಲ್‍ಗೆ

 

ನವೆಂಬರ್.3

ಹೊಸದಿಲ್ಲಿ: ಮಹಿಳೆಯರ ಏಷ್ಯಾ ಕಪ್ ಟೂರ್ನಮೆಂಟ್ನಲ್ಲಿ ಹಾಲಿ ಚಾಂಪಿಯನ್ ಜಪಾನ್ ಮಣಿಸಿರುವ ಭಾರತೀಯ ವನಿತಾ ತಂಡ ಫೈನಲ್‍ಗೆ ಪ್ರವೇಶಿಸಿದೆ.

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಜಪಾನ್ ತಂಡವನ್ನು ಭಾರತ 4-2ರ ಗೋಲುಗಳ ಅಂತರದಿಂದ ಮಣಿಸಿತ್ತು.

ಇದೀಗ ಭಾನುವಾರ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ಚೀನಾ ಸವಾಲನ್ನು ಭಾರತ ಎದುರಿಸಲಿದೆ. ಪಂದ್ಯ ಆರಂಭದಿಂದಲೇ ಬಿರುಸಿನ ಆಟವನ್ನು ಪ್ರದರ್ಶಿಸಿದ ಭಾರತೀಯ ಮಹಿಳೆಯರು ಮೊದಲಾರ್ಧದ ಪ್ರಥಮ ಕ್ವಾರ್ಟರ್ನಲ್ಲೇ 3-0 ಗೋಲುಗಳ ಮುನ್ನಡೆಯನ್ನು ದಾಖಲಿಸಿತ್ತು. ಬಳಿಕ ದಿಟ್ಟ ಹೋರಾಟ ನೀಡಿದ ಜಪಾನ್ ಮೊದಲಾರ್ಧ ದ ವೇಳೆ ಮುನ್ನಡೆಯನ್ನು 3-2ಕ್ಕೆ ಇಳಿಸಿತ್ತು.

 

 

 

33    ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ
 ಅಕ್ಟೋಬರ್-28
ಕಾನ್ಪುರ: ನಾಳೆ ಇಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ದದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ನ 3ನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿರುವ ಭಾರತಕ್ಕೆ ಕಿವೀಸ್ ಪ್ರಬಲ ಎದುರಾಳಿಯಾಗಿದೆ. ಈಗಾಗಲೇ ಈ ಎರಡೂ ತಂಡಗಳು 1-1 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿದೆ. ಹೀಗಾಗಿ ನಾಳೆ ನಡೆಯಲಿರುವ ಪಂದ್ಯ ಹೈವೋಲ್ಟೇಜ್ ಕುತೂಹಲ ಕೆರಳಿಸಿದೆ.
ನಾಯಕ ವಿರಾಟ್ ಕೊಹ್ಲಿ ಮತ್ತು ತಂಡಕ್ಕೆ ನ್ಯೂಜಿಲೆಂಡ್ ನಾಳೆ ಇಲ್ಲಿನ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ದಿಟ್ಟ ಉತ್ತರ ನೀಡಿ ಸರಣಿ ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಕೊಹ್ಲಿ ಬಳಗ ಕೇನ್ ವಿಲಿಯಮ್ಸನ್ ನೇತೃತ್ವದ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ, ಮೊದಲ ಪಂದ್ಯದಲ್ಲಿ ಭಾರತವನ್ನು ಮಣಿಸಿದ ನ್ಯೂಜಿಲೆಂಡ್ ಎರಡನೇ ಹಣಾಹಣಿಯಲ್ಲಿ ಜಯ ಸಾಧಿಸಿ ಸರಣಿ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಭಾರತದ ಬೌಲರ್ಗಳ ದಿಟ್ಟ ಮತ್ತು ಸಮಯೋಚಿತ ಆಟದಿಂದ ಎರಡನೇ ಪಂದ್ಯದಲ್ಲಿ ಭಾರತ ಜಯ ಸಾಧಿಸಿತು. ಹೀಗಾಗಿ ನಾಳಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.
ತಂಡಗಳು:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯಾ ರಹಾನೆ, ಮನೀಶ್ ಪಾಂಡೆ, ಖೇದರ್ ಜಾದವ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ(ವಿಕೆಟ್ಕೀಪರ್) ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರ , ಭುವನೇಶ್ವರ್ ಕುಮಾರ್ ಮತ್ತು ಶಾರದ್ ಠಾಕೂರ್ ತಂಡದಲ್ಲಿದ್ದಾರೆ.

 

 

 

hh

 ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡದ                      ವಿರಾಟ್ ಕೊಹ್ಲಿ

ಅಕ್ಟೋಬರ್-23
ನವೆಂಬರ್-ಡಿಸೆಂಬರ್ ನಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ ನಡುವಣ ಕ್ರಿಕೆಟ್ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಆಡುವುದು ಅನುಮಾನವಾಗಿದೆ. ಕೆಲವೊಂದು ವೈಯಕ್ತಿಕ ಕಾರಣಗಳಿಂದ ವಿರಾಟ್ ಈ ಸರಣಿಯಲ್ಲಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೊಹ್ಲಿ ಬಿಸಿಸಿಐಗೂ ಈ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಕಳೆದ ಹಲವು ತಿಂಗಳುಗಳಿಂದ ಕೊಹ್ಲಿ ಸಾಲು ಸಾಲು ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಹಾಗಾಗಿ ಕೊಂಚ ವಿಶ್ರಾಂತಿ ತೆಗೆದುಕೊಳ್ಳಲು ಸಹ ಬಯಸಿದ್ದಾರಂತೆ. ಸ್ವಲ್ಪ ವಿರಾಮದ ನಂತರ ಜನವರಿಯಲ್ಲಿ ನಡೆಯಲಿರೋ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗಲು ಟೀಂ ಇಂಡಿಯಾ ನಾಯಕ ನಿರ್ಧರಿಸಿದ್ದಾರೆ. ನವೆಂಬರ್ 16ರಿಂದ ಡಿಸೆಂಬರ್ 24ರವರೆಗೆ ಭಾರತ ಶ್ರೀಲಂಕಾ ನಡುವೆ 3 ಟೆಸ್ಟ್, 3 ಏಕದಿನ ಹಾಗೂ ಟಿ-20 ಪಂದ್ಯಗಳು ನಡೆಯಲಿವೆ. ಈ ಸರಣಿ 2019ರಲ್ಲಿ ನಡೆಯಬೇಕಿತ್ತು. ಆದ್ರೆ ಇದನ್ನು ಲಂಕಾ ಮನವಿ ಮೇರೆಗೆ ಪ್ರಿಪೋನ್ ಮಾಡಲಾಗಿದೆ. ಲಂಕಾ ಸರಣಿ ಬಳಿಕ ಭಾರತ ತಂಡ, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

 

 

 

hh 

 ಕೊಹ್ಲಿಮತ್ತುಪಾಂಡ್ಯ ನಡುವೆ       ಶುರುವಾಗಿದೆ ರೇಸ್

ಅಕ್ಟೋಬರ್-21
ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಈಗ ಕೋಲ್ಡ್ ವಾರ್ ಶುರುವಾಗಿದೆ. ಇಬ್ಬರಲ್ಲಿ ಯಾರು ಗ್ರೇಟ್ ಅನ್ನೋದೇ ಈ ವಾರ್ಗೆ ಕಾರಣ. ಹೌದು, ವರ್ಲ್ಡ್ ಕ್ರಿಕೆಟ್ನಲ್ಲಿ ಈಗ ಇವರಿಬ್ಬರದ್ದೇ ಮಾತು. ವಿರಾಟ್ ಕೊಹ್ಲಿ ಕ್ಯಾಪ್ಟನ್ಸನಲ್ಲಿ ಬೆಳಕಿಗೆ ಬಂದ ಹಾರ್ದಿಕ್ ಪಾಂಡ್ಯ ಈಗ ನಾಯಕನಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ನಾಯಕನಿಗಿಂತ ನಾನೇ ಗ್ರೇಟ್ ಅಂತ ಮರೆಯುತ್ತಿದ್ದಾರೆ. ಇದೇ ಈಗ ವಿರಾಟ್ ಕೊಹ್ಲಿಯನ್ನ ಸಿಟ್ಟಿಗೇರಿಸಿದೆ. ನಾಯಕನಿಗೆ ಸೆಡ್ಡು ಹೊಡಿತಿದ್ದಾರೆ ಪಾಂಡ್ಯ..! 'ಈಗ ವಿಶ್ವ ಕ್ರಿಕೆಟ್ನಲ್ಲಿ ಒಂದು ಚರ್ಚೆ ಶುರುವಾಗಿದೆ. ಈ ವರ್ಷ ಒಂಡೇ ಕ್ರಿಕೆಟ್ನಲ್ಲಿ ಯಾರು ಗ್ರೇಟ್ ಅನ್ನೋದು. ವಿರಾಟ್ ಕೊಹ್ಲಿ ಮೇಲೆ ರನ್ ಗುಡ್ಡೆ ಹಾಕ್ತಿದ್ದಾರೆ. ಸೆಂಚುರಿ ಮೇಲೆ ಸೆಂಚುರಿ ಹೊಡಿತಿದ್ದಾರೆ. ಆದ್ರೂ ಬರೋಡ ಆಲ್ರೌಂಡರ್ ಮಾತ್ರ ಕೊಹ್ಲಿಗೆ ಸೆಡ್ಡು ಹೊಡೆಯುವ ಪ್ರದರ್ಶನ ನೀಡ್ತಿದ್ದಾರೆ. ಆಲರೌಂಡ್ ಆಟದಿಂದ ಮಿಂಚುತ್ತಿದ್ದಾರೆ. ಏಕದಿನ ಆಟಗಾರ ಲಿಸ್ಟ್ನಲ್ಲಿ ಇವರಿಬ್ಬರೇ ಟಾಪ್2017ರ ಐಸಿಸಿ ಏಕದಿನ ಕ್ರಿಕೆಟ್ನ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಆಗ್ಲೇ ರೇಸ್ ಶುರುವಾಗಿದೆ. ಸಂಭವ್ಯ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಪ್ರಶಸ್ತಿ ದಕ್ಕಲಿದೆ. ವಿರಾಟ್ಗೆ ಸೆಡ್ಡು ಹೊಡೆದು ಪ್ರಶಸ್ತಿ ಬಾಚಿಕೊಳ್ಳಲು ಪಾಂಡ್ಯ ರೆಡಿಯಾಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಮಾಲ್ ಮಾಡಿರುವ ಹಾರ್ದಿಕ್ ಪ್ರಶಸ್ತಿ ನನ್ನದೇ ಅಂತಿದ್ದಾರೆ. ಹಾರ್ದಿಕ್ ಪಾಂಡ್ಯ ಈ ವರ್ಷ 22 ಏಕದಿನ ಪಂದ್ಯಗಳನ್ನಾಡಿದ್ದು 44.09ರ ಸರಾಸರಿಯಲ್ಲಿ 485 ರನ್ ಹೊಡೆದಿದ್ದಾರೆ. 123.09ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 4 ಅರ್ಧಶತಕವನ್ನೂ ದಾಖಲಿಸಿದ್ದಾರೆ. 28 ಸಿಕ್ಸ್ಗಳನ್ನ ದಾಖಲಿಸಿದ್ದಾರೆ. 25 ವಿಕೆಟ್ ಸಹ ಪಡೆದಿದ್ದಾರೆ. ಸಾವಿರ ರನ್ ಸರದಾರ ಕೊಹ್ಲಿಈ ವರ್ಷವೂ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಂಗ್ಲಾ ಒಂಡೇ ಕ್ರಿಕೆಟ್ನಲ್ಲಿ ಈ ವರ್ಷ ಒಂದು ಸಾವಿರ ರನ್ ಗಡಿ ದಾಟಿದ್ದಾರೆ. ಈ ವರ್ಷ ಗರಿಷ್ಠ ರನ್ ಹೊಡೆದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಸದ್ಯ ಅವರ ಫಾರ್ಮ್ ನೋಡಿದ್ರೆ ಈ ವರ್ಷ ಅವರ ರನ್ ಒಂದುವರೆ ಸಾವಿರ ಗಡಿ ದಾಟಲಿದೆ. ಈ ವರ್ಷ ವಿರಾಟ್ ಕೊಹ್ಲಿ 23 ಒಂಡೇ ಮ್ಯಾಚ್ನಿಂದ 74.81ರ ಸರಾಸರಿಯಲ್ಲಿ 1197 ರನ್ ಬಾರಿಸಿದ್ದಾರೆ. 98.68ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿರುವ ಅವರು, 4 ಶತಕ, 7 ಅರ್ಧಶತಕಗಳನ್ನ ಸಿಡಿಸಿದ್ದಾರೆ. ಪಾಂಡ್ಯ-ಕೊಹ್ಲಿ ಜೊತೆ ಇನ್ನೂ ಮೂವರು ರೇಸ್ನಲ್ಲಿದ್ದಾರೆ. ಆದ್ರೆ ಈ ಇಬ್ಬರು ರೇಸ್ ನಲ್ಲಿ ಟಾಪ್ನಲ್ಲಿದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರಿಗೆ ಬೆಸ್ಟ್ ಪ್ಲೇಯರ್ ಅವಾರ್ಡ್ ದಕ್ಕಲಿದೆ. ವಿರಾಟ್ ಕೊಹ್ಲಿಗೆ ಸೆಡ್ಡು ಹೊಡೆದ ಹಾರ್ದಿಕ್ ಪಾಂಡ್ಯ ಪ್ರಶಸ್ತಿ ಗೆದ್ರೂ ಆಶ್ಚರ್ಯವಿಲ್ಲ.

 

 

 

 

12 

 ಬಾಂಗ್ಲಾ ವಿರುದ್ಧ ಎಬಿಡಿ ಸ್ಫೋಟಕ 179 ರನ್
 ಅಕ್ಟೋಬರ್-19
ಪಾರ್ಲ್: ಬಾಂಗ್ಲಾದೇಶ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕದ ಎಬಿಡಿ ವಿಲಿಯರ್ಸ್ ಸ್ಫೋಟಕ 176 ರನ್ ಸಿಡಿಸಿದ್ದಾರೆ. ಬೊಲಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಬಿಡಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ದಕ್ಷಿಣ ಆಫ್ರಿಕ 104 ರನ್ಳ ಜಯ ಗಳಿಸಿದೆ. 104 ಎಸೆತಗಳಲ್ಲಿ 15 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ 176 ರನ್ ಗಳಿಸಿ ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾದರು.
ಎಬಿಡಿ ವಿಲಿಯರ್ಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ದಕ್ಷಿಣ ಆಫ್ರಿಕ ತಂಡ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 353 ರನ್ ಗಳಿಸಿತ್ತು. 354 ರನ್ಗಳ ಗೆಲುವಿನ ಸವಾಲನ್ನು ಪಡೆದ ಬಾಂಗ್ಲಾದೇಶ ತಂಡ ಮಧ್ಯಮವೇಗಿ ಅಯಂಡ್ಲೆ ಫೆಹ್ಲುಕ್ವೇವೊ (40ಕ್ಕೆ 4) ಮತ್ತು ಇಮ್ರಾನ್ ದಾಳಿಗೆ ಸಿಲುಕಿ 47.5 ಓವರ್ಗಳಲ್ಲಿ 219 ರನ್ಗಳಿಗೆ ಆಲೌಟಾಗಿದೆ.
ಬಾಂಗ್ಲಾದ ಇಮ್ರುಲ್ ಕೈಸ್(68) ಮತ್ತು ಮುಶ್ಫಿಕುರ್ರಹೀಮ್(60) ಅರ್ಧಶತಕಗಳನ್ನು ದಾಖಲಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ದಕ್ಷಿಣ ಆಫ್ರಿಕ ತಂಡದ ಪರ ಹಾಶೀಮ್ ಅಮ್ಲ ಮತ್ತು ಕ್ವಿಂಟನ್ ಡಿ ಕಾಕ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್ 90 ರನ್ಳ ಜೊತೆಯಾಟ ನೀಡಿದರು. ಹಾಶೀಮ್ ಅಮ್ಲ (85) ಶತಕ ವಂಚಿತಗೊಂಡರು. ಡಿ ಕಾಕ್ (46) ಅರ್ಧಶತಕ ವಂಚಿತಗೊಂಡರು. ನಾಯಕ ಎಫ್ಡು ಪ್ಲೆಸಿಸ್(0) ಅವರು ಶಾಕಿಬ್ ಎಸೆತದಲ್ಲಿ ಬೌಲ್ಡ್ ಆಗಿ ಖಾತೆ ತೆರೆಯದೆ ನಿರ್ಗಮಿಸಿದಾಗ ಎಬಿಡಿ ಅವರು ಕ್ರೀಸ್ಗೆ ಆಗಮಿಸಿ ಅಮ್ಲಗೆ ಸಾಥ್ ನೀಡಿದರು. ಮೂರನೆ ವಿಕೆಟ್ಗೆ ಅಮ್ಲ ಮತ್ತು ಎಬಿಡಿ 136 ರನ್ಳ ಜೊತೆಯಾಟ ನೀಡಿದರು.
ಅಮ್ಲರನ್ನು ರುಬೆಲ್ ಹುಸೈನ್ ಶತಕ ದಾಖಲಿಸಲು ಬಿಡಲಿಲ್ಲ. ಆದರೆ ಎಬಿಡಿ 68 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 25ನೆ ಏಕದಿನ ಶತಕ ಪೂರ್ಣಗೊಳಿಸಿದರು. 2 ರನ್ ಗಳಿಸಿದ್ದಾಗ ಎಬಿಡಿ ಔಟಾಗುವ ಅವಕಾಶದಿಂದ ಪಾರಾಗಿದ್ದರು. ಇದರ ಪ್ರಯೋಜನ ಪಡೆದ ಅವರು 224ನೆ ಪಂದ್ಯದಲ್ಲಿ 54ನೆ ಅರ್ಧಶತಕ ದಾಖಲಿಸಿದರು. 34 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಲ್ಲಿ ಅವರು ಅರ್ಧಶತಕ ದಾಖಲಿಸಿದ್ದರು.
93ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ ಎಬಿಡಿ 150 ರನ್ ಗಳಿದರು. ಎಬಿಡಿ ದ್ವಿಶತಕ ದಾಖಲಿಸುವ ಭರವಸೆ ಮೂಡಿಸಿದ್ದರು. ಆದರೆ 176ರನ್ ಗಳಿಸಿದ್ದಾಗ ಅವರಿಗೆ ರುಬೆಲ್ ಪೆವಿಲಿಯನ್ ಹಾದಿ ತೋರಿಸಿದರು.
ಎಬಿಡಿ ಮತ್ತು ಡುಮಿನಿ 4ನೆ ವಿಕೆಟ್ಗೆ 117 ರನ್ಳ ಜೊತೆಯಾಟ ನೀಡಿದರು.
ಈ ಪಂದ್ಯದಲ್ಲಿ 7 ಸಿಕ್ಸರ್ ಸಿಡಿಸಿದ ಎಬಿಡಿ ಏಕದಿನ ಕ್ರಿಕೆಟ್ನಲ್ಲಿ 200ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ವಿಶ್ವದ 5ನೆ ದಾಂಡಿಗ ಎನಿಸಿಕೊಂಡಿದ್ದಾರೆ. ಧೋನಿ ಬಳಿಕದ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನದ ಶಾಹಿದ್ ಅಫ್ರಿದಿ (351), ಶ್ರೀಲಂಕಾದ ಜಯಸೂರ್ಯ(270), ವಿಂಡೀಸ್ನ ಕ್ರಿಸ್ ಗೇಲ್(252), ಎಂಎಸ್ ಧೋನಿ(213) ಎಬಿಡಿ ವಿಲಿಯರ್ಸ್( 201) ಅವರು 200ಕ್ಕೂ ಅಧಿಕ ಸಿಕ್ಸರ್ ಸಿಡಿಸಿದ್ದಾರೆ. ನ್ಯೂಝಿಲೆಂಡ್ನ ಬ್ರೆಂಡನ್ ಮೆಕಲಮ್ (200) ಇನ್ನೂರು ಸಿಕ್ಸರ್ ದಾಖಲಿಸಿದ್ದಾರೆ.

 

 

11


  ಡೆನ್ಮಾರ್ಕ್ ಓಪನ್: ಸಿಂಧು ಹೊರಕ್ಕೆ

ಅಕ್ಟೋಬರ್-19
ಒಡೆನ್ಸಾ: ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಮಹಿಳೆಯರ ಸಿಂಗಲ್ಸ್ನ ಪ್ರಥಮ ಸುತ್ತಿನಲ್ಲೇ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪಡೆದ ಭಾರತದ ಮಹಿಳಾ ತಾರೆ ಪಿ.ವಿ.ಸಿಂಧು ಸೋತು ನಿರ್ಗಮಿಸಿದ್ದಾರೆ.
ಸಿಂಧು ಅವರು ಚೀನಾದ ಚೆನ್ ಯೂಫೀ ವಿರುದ್ಧ 17-21, 21-23 ಅಂತರದಲ್ಲಿ ಸೋತು ಹೊರ ನಡೆದಿದ್ದಾರೆ.
ಸಿಂಧು ಮತ್ತು ಚೆನ್ ಅವರ ನಡುವಿನ ಹಣಾಹಣಿ ಕೇವಲ 43 ನಿಮಿಷಗಳಲ್ಲಿ ಕೊನೆಗೊಂಡಿತು.
ಕೊರಿಯಾ ಓಪನ್ನಲ್ಲಿ ಪ್ರಶಸ್ತಿ ಜಯಿಸಿದ್ದ ಸಿಂಧು ಅವರು ಕಳೆದ ತಿಂಗಳು ಜಪಾನ್ ಓಪನ್ನಲ್ಲಿ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು. ಇದೀಗ ಡೆನ್ಮಾರ್ಕ್ ಓಪನ್ನಲ್ಲಿ ಆರಂಭಿಕ ಸುತ್ತಿನಲ್ಲೇ ಸೋತು ಮತ್ತೊಮ್ಮೆ ನಿರಾಶೆಯನ್ನುಂಟು ಮಾಡಿದ್ದಾರೆ.
ಪಂದ್ಯದಲ್ಲಿ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದ್ದ ಸಿಂಧು ಬಳಿಕ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಲು ವಿಫಲರಾದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೆನ್ ಅವರು ಭಾರತೀಯ ಆಟಗಾರ್ತಿ ವಿರುದ್ಧ ಸೋತಿರುದಕ್ಕೆ ಇದೀಗ ಸೇಡು ತೀರಿಸಿಕೊಂಡಿದ್ದಾರೆ

 

 

aaa

ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿ ಸಿಂಧು, ಶ್ರೀಕಾಂತ್

ಅಕ್ಟೋಬರ್-16
ಒಡೆನ್ಸ್: ನಾಳೆಯಿಂದ 7.50 ಲಕ್ಷ ಡಾಲರ್ ಬಹುಮಾನ ಮೊತ್ತದ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದ್ದು, ಪಿ.ವಿ.ಸಿಂಧು ಮತ್ತು ಕಿಡಾಂಬಿ ಶ್ರೀಕಾಂತ್ ಭಾರತದ ಭರವಸೆಯ ತಾರೆಯರಾಗಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಜಪಾನ್ ಒಪನ್ ಪಂದ್ಯಾವಳಿಯಲ್ಲಿ ಆರಂಭಿಕ ಸುತ್ತುಗಳಲ್ಲೇ ನಿರ್ಗಮಿಸಿದ್ದ ಸಿಂಧು ಮತ್ತು ಶ್ರೀಕಾಂತ್ ಡೆನ್ಮಾರ್ಕ್ ಓಪನ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.
ರಿಯೋ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ಶಿಪ್ನ ರಜತ ಪದಕ ವಿಜೇತೆ ಸಿಂಧು ಮೇಲೆ ಭಾರತೀಯರು ಅಪಾರ ವಿಶ್ವಾಸ ಹೊಂದಿದ್ದಾರೆ. ಇಂಡಿಯಾ ಓಪನ್ ಮತ್ತು ಕೊರಿಯಾ ಓಪನ್ನಲ್ಲಿ ಈಗಾಗಲೇ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿರುವ ಹೆಮ್ಮೆಯ ಆಟಗಾರ್ತಿ ಈ ಪಂದ್ಯಾವಳಿಯಲ್ಲೂ ಪ್ರಬಲ ಎದುರಾಳಿಗಳೊಂದಿಗೆ ಸೆಣಸಲಿದ್ದಾರೆ.

 

 aaa  ಎರಡನೆ ಟ್ಟೆಂಟಿ-ಟ್ಟೆಂಟಿ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 8 ವಿಕೆಟ್ಗಳ ಜಯ
ಗುವಾಹತಿ,10: ಭಾರತ ವಿರುದ್ಧದ ಎರಡನೆ ಟ್ಟೆಂಟಿ-20 ಅಂತಾರಾಷ್ಟೀಯ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯ 8 ವಿಕೆಟ್‍ಗಳ ಜಯಗಳಿಸಿದೆ ಬರ್ಸಪಾರದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 119 ರನ್ಸಗಳು ಬೆನ್ನಟ್ಟಿದ ಅಸ್ಟ್ರೇಲಿಯಾ ಇನ್ನೂ 27 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟದಲ್ಲಿ 122 ರನ್‍ಗಳಿಸಿತು. ಆಸ್ಟ್ರೇಲಿಯ ತಂಡದ ಮೊಯ್ಸಿಸ್ ಹೆನ್ನಿಕ್ಸ್ ಔಟಾಗದೆ 62 ರನ್ ಮತ್ತು ಟ್ರಾವಿಸ್ ಹೆಡ್ ಔಟಾಗದೆ 4 ರನ್‍ಗಳಿಸಿ ತಂಡವನ್ನು ಸುಲಭವಾಗಿ ಗೆಲ್ಲಿಸಿದರು.

 

 

Ads
;