ದೂರವಾಣಿ : 080-69999676
ಇಮೇಲ್ : Info@Vijayataranga.com


 

      ಪಾರಂಪರಿಕ ಆಯುರ್ವೇದ ಗುಣಮಟ್ಟವುಳ್ಳದ್ದು:ದೊಡ್ಡಮನಿ
ಡಿಸೆಂಬರ್.15
ಗದಗ: ದೇಶದ ಇತಿಹಾಸ ಅವಲೋಕಿಸಿದಾಗ ಆಯುರ್ವೇದ, ಪಾರಂಪರಿಕ ವೈದ್ಯಕೀಯ ವೃತ್ತಿಗೆ ಬಹಳ ಮಹತ್ವ ಇದ್ದು ಆಸ್ಪತ್ರೆಗಳಲ್ಲಿ ಗುಣಮುಖವಾಗದ ಕೆಲವು ರೋಗಗಳು ಪಾರಂಪರಿಕ ಆಯುರ್ವೇದದಿಂದ ವಾಸಿಯಾಗಿವೆ, ಹೀಗಾಗಿ ಸಸ್ಯಗಳ ಗಿಡಮೂಲಿಕೆಗಳಿಂದ ತಯಾರಾಗುವ ಔಷಧಿ ಎನಿಸಿಕೊಂಡಿವೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪುರಸಭೆ ಗಾಂಧಿ ಭವನದಲ್ಲಿ ಗುರುವಾರ ಜರುಗಿದ ಪಾರಂಪರಿಕ ಆಯುರ್ವೇದದ ಉಚಿತ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಪ್ಪತಗುಡ್ಡ ದೇಶದಲ್ಲಿಯೇ ಅಪರೂಪದ ಔಷಧಿಯ ಗಿಡಮೂಲಿಕೆಗಳನ್ನು ಹೊಂದಿದ ಅದರಲ್ಲಿಯೂ ಕಾರೆ, ಕಕ್ಕಿ, ಬಿಕ್ಕಿ, ಬಾರಿ, ಪೇರಲ ಹಣ್ಣುಗಳು ಯಾವುದೇ ಕಸಿ ಮಾಡದೆ ನೈಸರ್ಗಿಕವಾಗಿ ಬೆಳೆದಿವೆ. ಇವುಗಳ ರಕ್ಷ ಣೆ ಅಗತ್ಯ ಇದ್ದು ಇಲ್ಲಿ ಲಭ್ಯ ಇರುವ ಗಿಡಮೂಲಿಕೆಗಳೇ ಆಯುರ್ವೇದ, ಔಷಧಿಗಳ ತಯಾರಿಕೆಗೆ ಮೂಲವಾಗಿವೆ. ಇಲ್ಲಿ ಹೇರಳವಾಗಿ ಸಿಗುವ ತಾಮ್ರ, ಚಿನ್ನ ಇತರ ಲೋಹಗಳು ನೀರಿನಲ್ಲಿ ಬೆರೆತು ಅದರ ಖನಿಜಾಂಶಗಳು ಸಸ್ಯಗಳು ಸತ್ವಯುತವಾಗಿ ಬೆಳೆಯಲು ಸಹಾಯವಾಗುತ್ತವೆ, ಹೀಗಾಗಿ ಆಯುರ್ವೇದ ವೈದ್ಯರು ತಾವು ಕೊಡುವ ಔಷಧಿಗಳ ಬಗ್ಗೆ ಪುಸ್ತಕ ರೂಪದಲ್ಲಿ ಸಂಗ್ರಹಿಸಿಡಬೇಕು ಎಂದರು.
ಆಯುರ್ವೇದ ವೈದ್ಯರು ಮುಖ್ಯವಾಹಿನಿಯಲ್ಲಿ ಮತ್ತು ಮುಕ್ತವಾಗಿ ಕೆಲಸ ಮಾಡಲು ಸರಕಾರದ ಗಮನಕ್ಕೆ ತರಲಾಗುವುದು, ಅವರಿಗೆ ಸಿಗಬೇಕಾದ ಮಾನ್ಯತೆ ಬಗ್ಗೆಯೂ ಸರಕಾರದ ಚಿಂತನೆಯಲ್ಲಿದೆ. ನಾಟಿ ವೈದ್ಯರು ಪ್ರತಿಭಾವಂತರಿದ್ದರೂ ಅವರನ್ನು ಗುರ್ತಿಸುವ ಕಾರ್ಯ ನಡೆದಿಲ್ಲ, ಮುಂಬರುವ ದಿನಗಳಲ್ಲಿ ಅಂತಹದೊಂದು ಪ್ರಯತ್ನ ಮಾಡಲಾಗುವುದು ಎಂದರು.
ವಿವಿಧ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ರೋಗ ನಿರೋಧಕ ಜಲಸಂಜೀವಿನಿ ಕಷಾಯವನ್ನು ವಿತರಿಸಲಾಯಿತು. ವೈದ್ಯ ಎಚ್.ಡಿ.ಪೂಜಾರ ಪ್ರಾಸ್ತಾವಿಕ ಮಾತನಾಡಿ, ಪಾರಂಪರಿಕೆ ವೈದ್ಯರ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರ ಗಮನಕ್ಕೆ ತಂದರು.
ಪಾರಂಪರಿಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ಎಲ್, ರಾಜುಪಂಡಿತ ಮಾತನಾಡಿ, ಆಯುರ್ವೇದ ಸಸ್ಯಗಳ ಮಹತ್ವ ಕುರಿತು ವಿವರಿಸಿದರು. ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿಗೇರಿ ಅಧ್ಯಕ್ಷ ತೆ ವಹಿಸಿದ್ದರು.
ಡಾ.ಬಸವರಾಜ ಕುಂಬಾರ, ಡಾ.ಪಿ.ಬಿ.ಹಿರೇಗೌಡರ, ವಿ.ಎಲ್.ನಾಡಗೌಡ್ರ,ಶಿವಪ್ಪ ಗಡಾದ, ಮಹಾಮುನಿ, ಮಲ್ಲಪ್ಪ ಬಂಗಾರಿ, ವಿಷ್ಣಪ್ಪ, ಹೇಮಯ್ಯ ಜಂಗರ, ಎ.ವೈ.ನವಲಗುಂದ, ಗುಲ್ಬರ್ಗಾ, ರಾಯಚೂರ ಇತರ ಕಡೆಯಿಂದ ಆಗಮಿಸಿದ ಆಯುರ್ವೇದ ಪಂಡಿತರು ಪಾಲ್ಗೊಂಡಿದ್ದರು.

 

555  ಈರುಳ್ಳಿ ಬೆಲೆ ಕುಸಿತ : ಗಾಹಕನಿಗೆ ಹರ್ಷ, ರೈತನಿಗೆ ಸಂಕಷ್ಟ
 ಡಿಸೆಂಬರ್-1
 ಗದಗ: ಎರಡು ತಿಂಗಳ ಹಿಂದೆ ಪ್ರತಿ ಕೆಜಿಗೆ 36 ರೂಪಾಯಿ ಇದ್ದ ಈರುಳ್ಳಿ ಬೆಲೆ ಇಗೀಗ 67 ರೂಪಾಯಿಯಾಗಿದೆ.  ಈ ನಡುವೆ ಗಗನದ ಕಡೆಗೆ ಮುಖ ಮಾಡಿದ್ದ ಈರುಳ್ಳಿ ಬೆಲೆ ಕಡಿಮೆಯಾಗುವುದರತ್ತ ಮುಖ ಮಾಡಿದ್ದು, ಒಂದು ಕಡೆ  ಗ್ರಾಹಕರಿಗೆ ನೆಮ್ಮದಿ ಸಿಕ್ಕಿದೆ, ಆದರೆ ಈ ನಡುವೆ ಗದಗದಲ್ಲಿ ಎರಡು ದಿನಗಳಿಂದ ಕ್ವಿಂಟಾಲ್ಗೆ 4500 ರೂ.ನಂತೆ  ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಗುರುವಾರ ಪ್ರತಿ ಕ್ವಿಂಟಾಲ್ಗೆ 800-3600 ರೂ.ಗೆ ಕುಸಿದರೆ  ಬಾಗಲಕೋಟೆಯಲ್ಲಿ 400-4500 ರೂ.ವರೆಗೆ ಮಾರಾಟವಾಗಿದೆ.
 ಇದೇ ವೇಳೆ ಗದಗದಲ್ಲಿ ಈರುಳ್ಳಿ ಬೆಲೆ ಕಡಿಮೆಯಾದ ನಷ್ಟದಿಂದ ಕಂಗೆಟ್ಟ ರೈತರು ಎಪಿಎಂಸಿ ರಸ್ತೆ ಸಂಚಾರ ತಡೆದು  ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
 ದಲಾಲರು ಪ್ರತಿ ಕ್ವಿಂಟಾಲ್ ಈರುಳ್ಳಿಗೆ ಕನಿಷ್ಠ ಬೆಲೆ 1000-1200 ರೂ.ವರೆಗೆ ನಿಗದಿ ಮಾಡುವ ಮೂಲಕ ರೈತರ  ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆಂಬ ಆರೋಪ ಕೇಳಿಬಂದಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ರೈತರ  ಸಮಸ್ಯೆ ಬಗೆ ಹರಿಸಬೇಕೆಂದು ಆಗ್ರಹಿಸಿದ್ದಾರೆ.
 ಇನ್ನು ಬೆಲೆ ಕುಸಿತ ಕಾರಣಗಳ ಬಗ್ಗೆ ವಿಶ್ಲೇಷಣೆ ಮಾಡಿದರೆ ಎಪಿಎಂಸಿ ಮಾರುಕಟ್ಟೆಗೆ15 ದಿನಗಳಿಂದ ಹೆಚ್ಚು  ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತಿದೆ. ಇಳುವರಿ ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿಪಡಿಸುತ್ತಿಲ್ಲ ಎನ್ನುವ ಮಾತು  ಕೇಳಿ ಬರುತ್ತಿವೆ. ಇದಲ್ಲದೇ ಮಧ್ಯವರ್ತಿಗಳು ಸಹ ರೈತರು ಮಾರುಕಟ್ಟೆಗೆ ತಂದ ಉತ್ತಮ ಗಡ್ಡೆಗೂ ಕಡಿಮೆ ದರ  ನಿಗದಿಪಡಿಸಿ ಮೋಸ ಮಾಡುತ್ತಿದ್ದಾರೆ. ಅಕಾಲಿಕ ಮಳೆ ಯಿಂದ ಈರುಳ್ಳಿ ಬಹುತೇಕ ಕೊಳೆತು ಹೋಗಿದೆ.
 ಸೊಲ್ಲಾಪುರ , ನಾಸಿಕ್ನ ಹೊಸ ಈರುಳ್ಳಿ ಮಾರುಕಟ್ಟೆಗೆ ಪೂರೈಕೆ. ರಫ್ತು ಈರುಳ್ಳಿ 1 ಮೆಟ್ರಿಕ್ ಟನ್ಗೆ 55 ಸಾವಿರ  ರೂ.ಗಿಂತ ಕಡಿಮೆ ಬೆಲೆಗೆ ಮಾರುವ ಹಾಗಿಲ್ಲ ಶೇ.50 ರಫ್ತು ಕುಸಿದಿರುವುದೂ ಬೆಲೆ ಇಳಿಕೆಗೆ ಕಾರಣವಾಗಿದೆ ಅಂಥ  ವಿಶ್ಲೇಣೆ ಮಾಡಲಾಗಿದೆ.

 

 

   ್್ ಬಿಜೆಪಿಗೆ ಸುಳ್ಳು ಹೇಳುವುದೇ ಕಸುಬು: ಸಿಎಂ
ನವೆಂಬರ್.27
ಗದಗ: ಸಚಿವ ವಿನಯ್ ಕುಲಕರ್ಣಿ ಅವರ ಇಮೇಜ್ ಕೆಡಿಸುವ ಕುತಂತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡುತ್ತಿದ್ದಾರೆ. ಬಿಜೆಪಿಗೆ ಸುಳ್ಳು ಹೇಳುವುದೇ ಕಸುಬು. ಬಿಜೆಪಿಯ ಹಲವು ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ. ಅವರಲ್ಲಿ ಕೆಲವರು ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಕುತಂತ್ರ ಮಾಡುತ್ತಿದೆ. ಲಿಂಗಾಯತ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಸಚಿವ ವಿನಯ್ ಕುಲಕರ್ಣಿ ಅವರ ವಿರುದ್ಧ ಬಿಎಸ್ವೈ ಕುತಂತ್ರ ನಡೆಸಿದ್ದಾರೆ ಎಂದರು.
ನರಗುಂದ ಪಟ್ಟಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಿಂಗಳೊಳಗೆ ಮಹದಾಯಿ ವಿವಾದ ಇತ್ಯರ್ಥದ ಭರವಸೆ ನೀಡಿದ ಬಿಜೆಪಿ ನಡೆ ಸ್ವಾಗತಾರ್ಹ. ಬಿ.ಎಸ್.ಯಡಿಯೂರಪ್ಪ ಅವರಿಂದ ಮಹದಾಯಿ ವಿವಾದ ಇತ್ಯರ್ಥ ಅಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಮಹದಾಯಿ ಸಮಸ್ಯೆ ಪರಿಹಾರ ಸಾಧ್ಯ ಎಂದರು.
ಮಹದಾಯಿ ಕುರಿತು ರಾಜ್ಯ ಬಿಜೆಪಿ ನಾಯಕರು ಮನೆಪಾಠದ ಮೂಲಕ ಪ್ರಧಾನಿಯ ಹಾದಿ ತಪ್ಪಿಸಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಜಲ ಸಮಸ್ಯೆ ಪರಿಹರಿಸಿದ್ದರು. ತೆಲಗು ಗಂಗಾ, ನರ್ಮದಾ ವಿಚಾರದಲ್ಲಿ ಸ್ವತಂತ್ರ ನಿರ್ಧಾರ ಕೈಗೊಂಡಿದ್ದರು. ಬಿಜೆಪಿ ಪಕ್ಷದ ಹಾಗೆ ನಿಮ್ಮ ಪಕ್ಷದವರನ್ನು ನೀವು ಮನವೊಲಿಸಿ ಅಂತ ಹೇಳಲಿಲ್ಲ. ವಿವಾದ ಇತ್ಯರ್ಥದಲ್ಲಿ ಬಿಜೆಪಿ ಕುಂಟುನೆಪ ಹೇಳುತ್ತಿದೆ. ಕುಣಿಯೋಕೆ ಬರದಿದ್ದರೆ ನೆಲ ಡೊಂಕು ಅನ್ನುವ ಪ್ರವೃತ್ತಿ ಬೇಡ . ಡಿಸೆಂಬರ್ 15ರೊಳಗೆ ಮಹದಾಯಿ ವಿವಾದ ಇತ್ಯರ್ಥಗೊಳಿಸಿದರೆ ಬಿಜೆಪಿಯವರನ್ನು ಅಭಿನಂದಿಸುತ್ತೇನೆ ಎಂದು ಪಾಟೀಲ್ ಹೇಳಿದರು.
ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ಏನು ಆರೋಪವಿದೆ, ಬಿಜೆಪಿಯವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ವಿನಯ್ ಕುಲಕರ್ಣಿ ಜತೆ ಕೆಂಪಯ್ಯ ಅವರನ್ನೂ ತಳಕು ಹಾಕಿಕೊಂಡಿದ್ದಾರೆ. ಕೆಂಪಯ್ಯನವರಿಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ನಾನು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಾಕಷ್ಟು ಪತ್ರ ಬರೆದಿದ್ದೇನೆ. ಸಂಧಾನಕ್ಕೆ ಬಿಜೆಪಿಯವರು ಮುಂದೆ ಬರುತ್ತಿಲ್ಲ. ಮೂರು ವರ್ಷದಿಂದ ಯಡಿಯೂರಪ್ಪ ಸುಮ್ಮನಿದ್ದು ಒಂದು ತಿಂಗಳಲ್ಲಿ ಬಗೆಹರಿಸುವುದಾಗಿ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ಯಡಿಯೂರಪ್ಪ ಏನೇ ಭರವಸೆ ನೀಡಿದರೂ ಪ್ರಧಾನಿ ಎಂಟ್ರಿ ಆದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ನರಗುಂದ ಹಾಗೂ ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಎಂಜಿನಿಯರಿಂಗ್ ಮಹಾವಿದ್ಯಾಲಯದ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಕೃಷಿಭಾಗ್ಯ ಯೋಜನೆಯಡಿ ನಿರ್ಮಾಣಗೊಂಡ 5111 ಕೃಷಿ ಹೊಂಡಗಳಿಗೆ ಸಾಂಕೇತಿಕವಾಗಿ ಬಾಗಿನ ಅರ್ಪಿಸಿದರು.

 

 

55  ಅಕ್ರಮ ಮರಳು ದಂಧೆಗೆ 5 ಜನ ಪೇದೆಗಳು ಅಮಾನತು
 ನವೆಂಬರ್-11
ಗದಗ : ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅಕ್ರಮ ಮರಳು ದಂಧೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ 5 ಜನ ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಡಿವೈಎಸ್ ಪಿ ಗುರು ಮತ್ತೂರು ಆದೇಶ ಹೊರಡಿಸಿದ್ದಾರೆ.
ಗಜೇಂದ್ರಗಡ ಪೊಲೀಸ್ ಠಾಣೆಯ ಕನಕಯ್ಯ ಜಮಾದಾರ್, ಮಹೇಶ್ ಬಳ್ಳಾರಿ, ಕುಮಾರ್ ತಿಗರಿ, ಚಂದ್ರು ಪಾಟೀಲ್ ಮತ್ತು ಸಿ.ವೈ. ಪೂಜಾರ್ ಅಮಾನತಾಗಿರೋ ಪೊಲೀಸ್ ಪೇದೆಗಳು. ಹಲವು ದಿನಗಳಿಂದ ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆಗೆ ಈ ಐವರು ಪೇದೆಗಳು ಕುಮ್ಮಕ್ಕು ನೀಡಿದ್ದಾರೆ ಎನ್ನುವ ಆರೋಪದ ಅಮಾನತು ಮಾಡಲಾಗಿದೆ.
ಇನ್ನು ಇದೇ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಾನಂದ ಲಮಾಣಿ ಅವರು ಅಕ್ರಮ ದಂಧೆ ಕೋರರಿಂದ ಲಂಚ ಸ್ವೀಕರಿಸುವ ದೃಶ್ಯವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

 

22  ಹೆದ್ದಾರಿಯಲ್ಲೊಂದು ಡೇಂಜರಸ್ ಅಂಗನವಾಡಿ
 ನವೆಂಬರ್-8
 ಗದಗ : ಅಪಾಯಕಾರಿ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಿ. ಅಪಾಯಕಾರಿ ಸ್ಥಳಗಳ ಬಗ್ಗೆ ಗಮನ ಹರಿಸಿ. ಅನಾಹುತ, ಸಾವು ಸಂಭವಿಸುವ ಬಗ್ಗೆ ಜಾಗ್ರತೆ ಇರಲಿ ಎಂದು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಆಗಾಗ ಅನಾಹುತ ನಡೆದಾಗು, ಅನಾಹುತ ಪೂರ್ವದಲ್ಲಿ ಎಚ್ಚರಿಕೆ ಕೊಡುತ್ತಾರೆ. ಆದರೇ ಇಂತಹ ಎಚ್ಚರಿಕೆ ವಹಿಸಬೇಕಾದ ಜನರೇ, ಅನಾಹುತಕ್ಕೆ ಎಡೆಮಾಡಿಕೊಟ್ಟಂತಿಗೆ, ಗದಗ ಜಿಲ್ಲೆಯ ಬೆಟಗೇರಿಯ ಟರ್ನಲ್ ಪೇಟೆಯಲ್ಲಿ ಅಂಗನವಾಡಿಯಿದೆ. ಕಲಿಯೋಕೆ ನಲಿಯೋಕೆ ಎಂದು ಈ ಅಂಗನವಾಡಿಗೆ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದಾರೆ. ಆದರೆ ಇದರ ಸ್ಥಿತಿ ಆ ದೇವರಿಗೆ ಪ್ರೀತಿ.
ಈ ಅಂಗನವಾಡಿಯಲ್ಲಿ ಮಕ್ಕಳಿಗೆ ಕೂರಕ್ಕೆ ಜಾಗ ಸಾಕಾಗಲ್ಲ ಅಂತಾದರಲ್ಲಿ ಅಲ್ಲೇ ಅಡುಗೆ ಕೂಡ ಮಾಡುತ್ತಾರೆ. ಸಿಲಿಂಡರ್ ಅಲ್ಲಿಯೇ ಇರೋದರಿಂದ ಅಗ್ನಿ ಅವಘಡ ಸಂಭವಿಸೋ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಪಾಲಾ ಬದಾಮಿ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಈ ಅಂಗನವಾಡಿ ಇರೋದ್ರಿಂದ ವಾಹನ ಸಂಚಾರ ಕೂಡ ಯಥೇಚ್ಚವಾಗಿದೆ. ಇಂದರಿಂದಾಗಿ, ದೂಳಿನಿಂದ ಇಲ್ಲಿನ ಮಕ್ಕಳ ಆರೋಗ್ಯ ಕೂಡ ಹಾಳಾಗುತ್ತಿದೆ.
ಡೇಂಜರ್ ಝೋನ್ ನಲ್ಲಿರುವ ಈ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿ, ಮಕ್ಕಳ ಜೀವ ಕಾಪಾಡಿ ಎಂದು ಸಿಡಿಪಿಒ ಸೇರಿದಂತೆ ಹಲವು ಅಧಿಕಾರಿಗಳಿಗೆ ಇಲ್ಲಿನ ಸಾರ್ವಜನಿಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹಾಗಾಗಿ ನಾವು ಮಕ್ಕಳನ್ನು ಅಂಗನವಾಡಿಗೆ ಕಳಿಸೋಕೆ ಹಿಂದು-ಮುಂದು ನೋಡುವಂತಾಗಿದೆ ಎಂದು ಪೋಷಕರು ಹೇಳುತ್ತಾರೆ.
ಇನ್ನು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಕುರಿತು ಸಿಡಿಪಿಓ ಅವರಿಗೆ ತಿಳಿಸಿದ್ದೇನೆ. ಶೀಘ್ರದಲ್ಲಿ ನಾನು ಭೇಟಿ ನೀಡಿ ಪರಿಶೀಲಿಸಿ ಒಂದು ವಾರದಲ್ಲಿ ಈ ಅಂಗನವಾಡಿ ಕೇಂದ್ರವನ್ನ ಸ್ಥಳಾಂತರ ಮಾಡಿಸುತ್ತೀವಿ ಎಂದು ಹೇಳುತ್ತಾರೆ.

 

 

99  ಸಾಲಭಾದೆಯಿಂದ ರೈತ ಆತ್ಮಹತ್ಯೆ
 ನವೆಂಬರ್-2
ಗದಗ : ಸಾಲಭಾದೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ನಡೆದಿದೆ.
ಫಕೀರಪ್ಪ ಕುರಿ (55) ಆತ್ಮಹತ್ಯೆಗೆ ಶರಣಾದ ರೈತ. ಕುಟುಂಬದ ಜವಾಬ್ದಾರಿಯೊಂದಿಗೆ ಕೃಷಿ ಕಾಯಕ ಮಾಡಿಕೊಂಡು ಜೀವನಸಾಗಿಸುತ್ತಿದ್ದ. ಕೃಷಿ ಕಾರ್ಯಕ್ಕಾಗಿ ಕೆವಿಜೆ ಬ್ಯಾಂಕ್ ನಲ್ಲಿ 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾನೆ.

 

  

ಗಾಂಧಿ ಗ್ರಾಮ ಪುರಸ್ಕಾರ ದೊರೆತರು ಕುಡ್ಯಾಕ ನೀರಿಲ್ಲ...!

ಅಕ್ಟೋಬರ್-31

ಗದಗ: ಶಿರಹಟ್ಟಿ ತಾಲೂಕು ಪ್ರದೇಶವನ್ನು ಬಯಲು ಬಹಿರ್ದೆಸೆ ಮುಕ್ತ ಘೋಷಣೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆಂದು ಅ.17ರಂದು ಮಾಗಡಿ ಗ್ರಾಮಕ್ಕೆ ಆಗಮಿಸಿದ್ದ ಸಚಿವ ಎಚ್.ಕೆ.ಪಾಟೀಲ ಅವರಿಗೆ ಗ್ರಾಮದ ಸಾರ್ವಜನಿಕರು ಕೆಲವು ತಿಂಗಳುಗಳಿಂದ ಗ್ರಾಮದಲ್ಲಿ ಸ್ಥಗಿತಗೊಂಡಿರುವ ಶುದ್ಧ ನೀರಿನ ಘಟಕ ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವ ಎಚ್.ಕೆ.ಪಾಟೀಲ ಅವರು ತಮ್ಮ ಭಾಷಣದಲ್ಲಿಯೇ ಇನ್ನೂ 72 ತಾಸಿನಲ್ಲಿ ಸ್ಥಗಿತಗೊಂಡಿರುವ ಶುದ್ಧ ನೀರಿನ ಘಟಕ ದುರಸ್ತಿಗೆ ಕ್ರಮ ವಹಿಸಬೇಕು. ಇಲ್ಲವೇ ಹೊಸದಾಗಿ ಆದರೂ ಘಟಕವನ್ನು ಸ್ಥಾಪಿಸಿ ಜನತೆಗೆ ಶುದ್ಧ ನೀರನ್ನು ಪೂರೈಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಅದಾಗಿ 336 ಗಂಟೆಗಳಾದರೂ ಗ್ರಾಮದ ಜನತೆಗೆ ಶುದ್ಧ ನೀರಿನ ಭಾಗ್ಯ ದೊರೆಯುತ್ತಿಲ್ಲ. ಸಧ್ಯ ಘಟಕ ದುರಸ್ತಿಯಾಗದೇ ಬಿಕೋ ಎನ್ನುತ್ತಿದೆ.
ವಿದೇಶಿ ವಲಸೆ ಪಕ್ಷಿಗಳ ತಾಣವಾಗಿರುವ ಮಾಗಡಿಗೆ ಈ ಹಿಂದೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿದೆ. ಗ್ರಾಮ ವಿಕಾಸ ಯೋಜನೆಯಲ್ಲಿ ಈ ಗ್ರಾಮ ಕೂಡಾ ಆಯ್ಕೆಯಾಗಿದ್ದು, ಹಲವು ಯೋಜನೆಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಗ್ರಾಮದಲ್ಲಿ ನಡೆಯುತ್ತಿವೆ. ಕೋಟ್ಯಂತರ ರೂ. ಅನುದಾನ ಗ್ರಾಮಕ್ಕೆ ಹರಿದು ಬಂದರೂ ಜನತೆಗೆ ಅಗತ್ಯವಿರುವ ಶುದ್ಧ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡದೇ ಇರುವುದು ಜನತೆಯ ಕೋಪಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗುರಿಯಾಗಿದ್ದಾರೆ. ಸುಮಾರು 8 ರಿಂದ 9 ಸಾವಿರ ಜನಸಂಖ್ಯೆಯುಳ್ಳ ಗ್ರಾಮವಾಗಿದ್ದು, ಇಡೀ ಗ್ರಾಮಕ್ಕೆ ಒಂದೇ ಶುದ್ಧ ನೀರಿನ ಘಟಕವಿದ್ದು, ಇದು ಕೂಡಾ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಜನತೆ ಅನಿವಾರ್ಯವಾಗಿ ಫೊ್ಲೕರೈಡ್ ನೀರನ್ನೇ ಸೇವಿಸುತ್ತಿದ್ದಾರೆ.
                                                                                                               

 

 

66  ಡಕಾಯಿತರ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
 ಅಕ್ಟೋಬರ್-30
ಗದಗ : ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 7 ಮಂದಿ ಡಕಾಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿಗಳಾದ ದಿನೇಶ್, ಮಂಜುನಾಥ್ ಜಾಧವ್, ಅಮಿತ್, ಸುನಿಲ್, ಮಂಜುನಾಥ್, ಸಚಿನ್ ಮತ್ತು ರಾಜು ಬಂಧಿತ ಡಕಾಯಿತರು.
ಬಂಧಿತರಿಂದ ಖಾರದ ಪುಡಿ ಸೇರಿದಂತೆ ಮಾರಾಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

11   ಕಾಮುಕನ ಬಂಧನ
 ಅಕ್ಟೋಬರ್ 25
ಗದಗ : ಯಾರು ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಬುಧವಾರ ಗದಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ಒಬ್ಬಳೆ ಇದ್ದ ವೇಳೆ ಒಳ ನುಗ್ಗಿದ ಯುವಕ 11 ವರ್ಷದ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಅಕ್ಟೋಬರ್ 23 ರಂದು ಘಟನೆ ನಡೆದಿದ್ದು, ಮಂಗಳವಾರ ರಾತ್ರಿ ಸಂತ್ರಸ್ಥೆಯ ಸಂಬಂಧಿಕರು ದೂರು ದಾಖಲಿಸಿದ್ದರು.
ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

 

 

     gg          ಮಧ್ಯ ಪಾಟಿಕ್ ಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು
ಅಕ್ಟೋಬರ್.24
ಗದಗ: ತಾಲೂಕಿನ ಹಾತಗೇರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದರು.
ಮಧ್ಯದಿಂದ ಸಂಸಾರ ಹಾಳಾಗುತ್ತವೆ. ಅಕ್ರಮ ಮದ್ಯ ಮಾರಾಟ ಮಾಡದಂತೆ ತಿಳಿ ಹೇಳಿದರೂ ಕೇಳದೆ ಇನ್ನೂ ಏನೇನು ಮಾಡಬೇಕು ಅಂದ್ಕೊಂಡಿದ್ದೀರಿ ಎಂದು ಮದ್ಯ ಮಾರಾಟಗಾರನನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮನೆಗೆ ನುಗ್ಗಿ ಮದ್ಯದ ಪ್ಯಾಕೆಟ್ಗಳನ್ನು ಹೊರತಂದು ರಸ್ತೆಯಲ್ಲಿ ಬೆಂಕಿ ಹಚ್ಚಿದರು.
ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ ಎಂದು ಮಹಿಳೆಯರು ದೂರಿದರು. ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದರು.

 

Ads
;