ದೂರವಾಣಿ : 080-69999676
ಇಮೇಲ್ : Info@Vijayataranga.com


    12

ಸಿಎಂ ಒಂದು ಹೊತ್ತಿನ ಊಟದ ಬೆಲೆ ಎಷ್ಟು ಗೊತ್ತಾ?

ಡಿಸೆಂಬರ್-25

 ಕಲಬುರಗಿ: ಸಿಎಂ ಸಿದ್ದರಾಮಯ್ಯ ಕಲಬುರಗಿಗೆ ಬಂದಿದ್ದಾಗ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಒಂದು ಹೊತ್ತಿನ ಊಟಕ್ಕೆ ಬರೋಬ್ಬರಿ 10 ಲಕ್ಷ ರೂ ಖರ್ಚು ಮಾಡಿರುವುದು ಟೀಕೆಗೆ ಗುರಿಯಾಗಿದೆ. ಕಲಬುರಗಿ ಬಿಜೆಪಿ ಘಟಕ ಮಾಜಿ ಅಧ್ಯಕ್ಷ ರಾಜಕುಮಾರ್, ಶರಣ ಪ್ರಕಾಶ್ ವಿರುದ್ಧ ಆರೋಪ ಮಾಡಿದ್ದಾರೆ. ಡಿ.16 ರಂದು ಕಲಬುರಗಿ ಐವಾನ್ ಇ ಶಾಹಿ ಗೆಸ್ಟ್ ಹೌಸ್ ನಲ್ಲಿ ಊಟವನ್ನು ಆಯೋಜಿಸಲಾಗಿತ್ತು. ಸಿಎಂಗೋಸ್ಕರ ಶರಣ ಪ್ರಕಾಶ್ ಪಾಟೀಲ್ ಬೆಳ್ಳಿ ತಟ್ಟೆಯಲ್ಲಿ ಊಟ ಆಯೋಜಿಸಿದ್ದರು. 1 ಊಟಕ್ಕೆ 800 ರೂಪಾಯಿಯಂತೆ 1000 ಜನರಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು. ಉಸ್ತುವಾರಿ ಸಚಿವರು 10 ಲಕ್ಷ ರೂಗಳನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ರೈತರ ಉದ್ದು, ಹೆಸರು, ತೊಗರಿ ಬೆಳೆಗೆ ಉತ್ತಮ ಬೆಲೆ ಕೊಡಿಸಲು ಆಗಿಲ್ಲ. ಸಿಎಂ ಮೆಚ್ಚಿಸುವುದಕ್ಕೆ ಬೆಳ್ಳಿ ತಟ್ಟೆಯಲ್ಲಿ ಭರ್ಜರಿ ಭೋಜನ ವ್ಯವಸ್ಥೆ ಮಾಡಿದ್ದು ಸರಿನಾ? ಸರ್ಕಾರಿ ಖರ್ಚಿನಲ್ಲಿ ಮೋಜಿ ಮಸ್ತಿ ಮಾಡಿದ್ದಾರೆ ಎಂದು ರಾಜಕುಮಾರ ಪಾಟೀಲ್ ಆರೋಪಿಸಿದ್ದಾರೆ.

 

44  ತಾಯಿಇದ್ದರೂ ಎದೆ ಹಾಲಿನಿಂದ ವಂಚಿತರಾದ ಮಕ್ಕಳು
 ಡಿಸೆಂಬರ್-19
ಕಲಬುರಗಿ :ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳು ಅದಲು ಬದಲಾಗಿ 4 ದಿನ ಕಳದಿದ್ದರೂ ಪ್ರಕರಣ ಸುಖಾಂತ್ಯ ಕಂಡಿಲ್ಲ. ಎರಡು ಕುಟುಂಬದ ಪೋಷಕರು ಪರದಾಡುವಂತಾಗಿದೆ.
ಡಿಸೆಂಬರ್ 14 ರಂದು ಜೇವರ್ಗಿ ತಾಲೂಕಿನ ಕೋಣಶಿರಸಗಿ ಗ್ರಾಮದ ನಂದಮ್ಮ ಮತ್ತು ಶಹಾಪುರ ತಾಲೂಕಿನ ಕಾಡಮ್ಮಗೇರ ನಿವಾಸಿ ನಾಜ್ ಮೀನ್ ಗೆ ಮಕ್ಕಳು ಜನಿಸಿದ್ದವು. ಈ ವೇಳೆ ಮಕ್ಕಳ ಹಸ್ತಾಂತರ ಸಮಯದಲ್ಲಿ ಅದಲು ಬದಲು ಮಾಡಿದ್ದ ಆಸ್ಪತ್ರೆ ಸಿಬ್ಬಂದಿಗಳು.
ಗಂಡು ಮಗು ಜನನವಾದ ಮಹಿಳೆಗೆ ಹೆಣ್ಣು ಮಗು, ಹೆಣ್ಣು ಮಗು ಜನನವಾದ ಮಹಿಳೆಗೆ ಗಂಡು ಮಗು ನೀಡಿ ಎಡವಟ್ಟು ಮಾಡಿದ್ದರು.
ಇದೀಗ ಗಂಡು ಮಗು ನಮಗೆ ಬೇಕು ಅಂತಾ ಪೋಷಕರು ಪಟ್ಟುಹಿಡಿದಿದ್ದಾರೆ. ಮಕ್ಕಳ ಅದಲು ಬದಲಿನಿಂದ ಹಾಲು ಕುಡಿಸದೆ ತಾಯಂದಿರು ಸುಮ್ಮನಾಗಿದ್ದಾರೆ. ತಾಯಿಯಿದ್ದರೂ ಸಹ ಶಿಶುಗಳು ಎದೆ ಹಾಲಿನಿಂದ ವಂಚಿತವಾಗಿದೆ.

 

 

     gg  ಹಂತಕ ಮೋನಪ್ಪ ಮೇಲೆ ಪೊಲೀಸ್ ಫೈರಿಂಗ್
ಡಿಸೆಂಬರ್.15
ಕಲಬುರಗಿ: ತಾಲೂಕಿನ ಬೆಣ್ಣೆತೊರಾ ಡ್ಯಾಂ ಬಳಿ ಕುಖ್ಯಾತ ಸುಪಾರಿ ಹಂತಕ ಮೋನಪ್ಪ ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕೆಇಬಿ ಗುತ್ತಿಗೆದಾರನಾಗಿದ್ದ ಸುಲ್ತಾನಪುರ ಗ್ರಾಮದ ಯಶವಂತ ಎಂಬಾತನನ್ನು ಹಣಕ್ಕಾಗಿ ಹತ್ಯೆ ಮಾಡಿದ್ದ.
ಈ ಹಿನ್ನಲೆಯಲ್ಲಿ ಪೊಲೀಸರು ಈತನ ಬಂಧನಕ್ಕೆ ಕಾರ್ಯಾಚರಣೆಗೆ ನಡೆಸಿದ್ದರು. ಈ ಕಾರ್ಯಚರಣೆ ವೇಳೆ ಆರೋಪಿಯು ಕಮಲಾಪುರ, ತಾವರಗೇರಾ ಬಳಿ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದ. ಆಗ ಸ್ವಯಂ ರಕ್ಷಣೆಗಾಗಿ ಗ್ರಾಮೀಣ ಠಾಣೆಯ ಪಿಎಸ್ಐ ಚಂದ್ರಶೇಖರ್ ತಿಗಡಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪೇದೆಗಳಾದ ಕುಶಣ್ಣ, ಕುಪೇಂದ್ರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಆರೋಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಕೊಲೆ, ಸುಲಿಗೆ ಸೇರಿದಂತೆ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.

 

    123 

ಸಿದ್ದರಾಮಯ್ಯ ಕೊಡುಗೆ ಶೂನ್ಯ : ವರ್ತೂರ್ ಪ್ರಕಾಶ್

ಡಿಸೆಂಬರ್.12 

ಕಲಬುರಗಿ: ಅಹಿಂದದಿಂದ ಗೆದ್ದು ಬಂದ ಸಿಎಂ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಮಹಾನ್ ದ್ರೋಹ ಬಗೆದಿದ್ದಾರೆ ಎಂದು ಕೋಲಾರ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರ್ ಪ್ರಕಾಶ್, ಓಟ್ ಬ್ಯಾಂಕ್ ಗಾಗಿ ಅಹಿಂದ ಮರೆತು ಮೇಲ್ವರ್ಗದ ಓಲೈಕೆಯಲ್ಲಿದ್ದಾರೆ. ಅಹಿಂದ ವರ್ಗದ ನಾಯಕರನ್ನು ರಾಜಕೀಯವಾಗಿ ದಮನ ಮಾಡಲು ಸಿಎಂ ಮುಂದಾಗಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.13 ಜನ ಕುರುಬ ಶಾಸಕರಿದ್ದರೂ ಮಂತ್ರಿ ಮಂಡಲದಲ್ಲಿ ಪ್ರಾಧಾನ್ಯತೆ ನೀಡಿಲ್ಲ. ಕುರುಬ ಸಮಾಜಕ್ಕೆ ಸಿಎಂ ಸಿದ್ದರಾಮಯ್ಯ ಕೊಡುಗೆ ಶೂನ್ಯ ಎಂದು ಕುಟುಕಿದರು. ಕಾಂಗ್ರೆಸ್ ಗೆ ಪರ್ಯಾಯವಾಗಿ ಡಿಸೆಂಬರ್ 27 ರಂದು ಕೂಡಲಸಂಗಮದಲ್ಲಿ 'ನಮ್ಮ ಕಾಂಗ್ರೆಸ್' ನೂತನ ಪಕ್ಷ ಉದಯವಾಗಲಿದೆ ಎಂದು ಹೇಳಿದರು.

 

 

           ಲೋಕಕಲ್ಯಾಣಕ್ಕಾಗಿ 41 ದಿನ ಮುಚ್ಚಿದ ಗವಿಯಲ್ಲಿ ವ್ರತ ಕೈಗೊಂಡ ಶ್ರೀಗಳು
ಡಿಸೆಂಬರ್.12
ಗುಲ್ಬರ್ಗಾ: ಸ್ವಾಮೀಜಿಯೊಬ್ಬರು ಮುಚ್ಚಿದ ಗವಿಯೊಳಗೆ 41 ದಿನಗಳ ಕಠಿಣ ವೃತವನ್ನು ಸೋಮವಾರ ಆರಂಭಿಸಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವೂರು ಗ್ರಾಮದಲ್ಲಿ ನಡೆದಿದೆ.
ಅಚಲ ಸನಾತನ ವಿಶ್ವ ಯೋಗಾಶ್ರಮದ ಗಂಗಾಧರಯ್ಯ ಶ್ರೀಗಳು ಈ ವೃತ ಕೈಗೊಂಡಿದ್ದಾರೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀಗಳು ಗುಹೆ ಸೇರಿದ್ದಾರೆ. ಭಕ್ತರೆ ಸ್ವಾಮೀಜಿಯನ್ನು ಗುಹೆಯೊಳಗೆ ಕೂಡಿಸಿ ಸಿಮೆಂಟ್ ಮತ್ತು ಇಟ್ಟಿಗೆಗಳಿಂದ ಮುಚ್ಚಿ ಪ್ಲಾಸ್ಟರ್ಇಂತಹ ವೃತ ಬೇಡವೆಂದು ಭಕ್ತರು ಮನವಿ ಮಾಡಿದ್ದರೂ ಲೋಕಕಲ್ಯಾಣಕ್ಕಾಗಿ ಈ ವೃತ ಮಾಡುವಂತೆ ಗುರುಗಳ ಪ್ರೇರಣೆಯಾಗಿದೆ ಎಂದು ಶ್ರೀಗಳು ಹೇಳಿ ಗುಹೆ ಸೇರಿದ್ದಾರೆ. ಶಿವೂರ್ನಲ್ಲಿ ಈ ಪವಾಡ ನೋಡಲು ಜನ ಜಾತ್ರೆಯಂತೆ ಬರುತ್ತಿದ್ದಾರೆ.

 

 

12  ಸಿದ್ದರಾಮಯ್ಯ ಕೈ ಇಟ್ಟಲ್ಲಿ ಬರೀ ಬೂದಿ: ಅನಂತ್
 ಡಿಸೆಂಬರ್-9
ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಭಸ್ಮಾಸುರ ಸರ್ಕಾರ. ಅವರು ಕೈ ಇಟ್ಟಲ್ಲಿ ಬರೀ ಬೂದಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ಮಧ್ಯೆ ಯಾವುದೇ ಹೊಂದಾಣಿಕೆ ಇಲ್ಲ. ಅವರಿಬ್ಬರು ನಾನೊಂದು ತೀರ, ನೀನೊಂದು ತೀರ ಆಗಿದ್ದಾರೆ. ಎತ್ತು ಏರಿಗೆ ಎಳೆದರೆ ಕೋಣ ಕೆರೆಗೆ ಎಂಬಂತೆ ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ್ ಅವರ ದಾರಿ ಬೇರೆ ಬೇರೆ ಆಗಿವೆ ಎಂದು ಅನಂತ್ ಕುಮಾರ್ಆರೋಪಿಸಿದರು.

 

 

55  ಜಾತ್ರೆಯಲ್ಲಿ ನಾಡಪಿಸ್ತೂಲ್ ಮಾರಾಟ: 9 ಮಂದಿ ಸೆರೆ
 ಡಿಸೆಂಬರ್-5
 ಕಲಬುರ್ಗಿ : ಜಿಲ್ಲೆಯ ಹಲವು ಕಡೆ ಅಕ್ರಮವಾಗಿ ನಾಡಪಿಸ್ತೂಲ್ ಮಾರಾಟ ಮಾಡುತ್ತಿದ್ದ ದಿ.ಚಂದಪ್ಪ  ಹರಿಜನ ಅವರ ಇಬ್ಬರು ಸಹಚರರು ಸೇರಿದಂತೆ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.
 ಬಂಧಿತರಿಂದ 20 ನಾಡ ಪಿಸ್ತೂಲ್, ಮತ್ತು 54 ಗುಂಡುಗಳನ್ನು ಪೊಲೀಸರು  ವಶಪಡಿಸಿಕೊಂಡಿದ್ದಾರೆ. ಅಫಜಲಪುರ ತಾಲೂಕು ಗೊಬ್ಬೂರ ಬಳಿ ಸೋಮವಾರ ನಡೆಸಿದ ಗುಂಡಿನ  ದಾಳಿಯಲ್ಲಿ ಅರ್ಜುನ ಭೋಸಗಾ (45) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ  ಚಿಕಿತ್ಸೆ ನೀಡಲಾಗುತ್ತಿದೆ.
 ಅಫಜಲಪುರ ತಾಲ್ಲೂಕಿ ದೇವಲ ಗಾಣಗಾಪುರದಲ್ಲಿ ದತ್ತ ಜಯಂತಿ ಅಂಗವಾಗಿ ಜಾತ್ರೆ ನಡೆಯುತ್ತಿದೆ.  ಅಲ್ಲಿಗೆ ಮಹಾರಾಷ್ಟ್ರದ ಭಕ್ತರು ಹೆಚ್ಚಾಗಿ ಬರುತ್ತಿದ್ದು, ಅಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡುವ  ಸಂಚು ಅರ್ಜುನ ಮಾಡಿದ್ದನು ಎಂದು ಐಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

  

222 ಅಡುಗೆಗೆ ಎಣ್ಣೆ ಜಾಸ್ತಿ ಹಾಕಿದ್ದಕ್ಕೆ ಸೀಮೆ ಎಣ್ಣೆಸುರಿದು ಸುಟ್ಟ ಪತಿ
 ಡಿಸೆಂಬರ್-1
 ಕಲಬುರಗಿ : ವ್ಯಕ್ತಿಯೊಬ್ಬ ತನ್ನ ಪತ್ನಿ ಅಡುಗೆಗೆ ಹೆಚ್ಚು ಎಣ್ಣೆ ಬಳಸಿದ್ದಾಳೆ ಎಂದು ಪತ್ನಿಯ ಮೇಲೆ ಎಣ್ಣೆ  ಎರಚಿದ್ದಲ್ಲದೆ, ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಜೀವರ್ಗಿ ತಾಲೂಕಿನ ನೆಲೋಗಿ  ಗ್ರಾಮದಲ್ಲಿ ನಡೆದಿದೆ.
 ಪ್ರಿಯಾಂಕ (22) ಪತಿಯ ದುಷ್ಕೃತ್ಯಕ್ಕೆ ಒಳಗಾದದ ಮಹಿಳೆ. ಸದ್ಯ ಮಹಿಳೆ ಬಸವೇಶ್ವರ ಆಸ್ಪತ್ರೆಯ ತುರ್ತು  ಚಿಕಿತ್ಸಾ ಘಟಕದಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾಳೆ. ಶೇ. 50 ಕ್ಕೂ ಹೆಚ್ಚು ಪ್ರಮಾಣದ  ಸುಟ್ಟುಗಾಯಗಳಾಗಿದ್ದು, ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಈ ಕೃತ್ಯ ಎಸಗಿರುವ ಮಹಿಳೆಯ ಪತಿ ಭೀಮಾಶಂಕರ್ ನರಸಕ್ಕಿಯನ್ನು ನೆಲೋಗಿ ಪೊಲೀಸರು ಬಂಧಿಸಿದ್ದಾರೆ.

  

444    ದರೋಡೆಕೋರನ ಮೇಲೆ ಫೈರಿಂಗ್
 ಡಿಸೆಂಬರ್-1
 ಕಲಬುರಗಿ : ನಗರದಲ್ಲಿ ಇಂದು ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಪೊಲೀಸರ ಮೇಲೆಯೇ  ದಾಳಿ ಮಾಡಲು ಯತ್ನಿಸಿದ ಕುಖ್ಯಾತ ದರೋಡೆಕೋರನೋರ್ವನ ಮೇಲೆ ಪೊಲೀಸರು ಗುಂಡಿನ  ದಾಳಿ ನಡೆಸಿದ್ದಾರೆ.
 ದರೋಡೆಕೋರ ಇರ್ಫಾನ್ ಎಂಬಾತನ ಮೇಲೆ ಈ ಫೈರಿಂಗ್ ನಡೆದಿದ್ದು, ಇರ್ಫಾನ್ ನಿನ್ನೆ ರಾತ್ರಿ  ವೈನ್ಸ್ ಮಾಲೀಕರಿಂದ ಬೈಕ್, ಮೊಬೈಲ್ ಹಾಗೂ ನಗದು ಸೇರಿ ದರೋಡೆ ಮಾಡಿ    ಪರಾರಿಯಾಗಿದ್ದ.
 ಪೊಲೀಸರು ಮಾಹಿತಿ ಪಡೆದು ನಗರದ ಹೊರವಲಯದ ರಿಂಗ್ ರಸ್ತೆಯಲ್ಲಿ ಇರ್ಫಾನ್ ಇರುವ ಬಗ್ಗೆ  ಮಾಹಿತಿ ಪಡೆದ ಪೊಲೀಸರು ಆತನ ಬಂಧನಕ್ಕೆ ತೆರಳಿದ್ದರು. ಈ ವೇಳೆ ಇರ್ಫಾನ್  ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆಯೇ ಹಲ್ಲಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
 ಆತ್ಮರಕ್ಷಣೆಗಾಗಿ ಪಿಎಸ್ಐ ವಾಹಿದ್ ಕೊತ್ವಾಲ್ ಅವರು ದರೋಡೆಕೋರ ಇರ್ಫಾನ್ ಮೇಲೆ ಒಂದು  ಸುತ್ತು ಗುಂಡು ಹಾರಿಸಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಇರ್ಪಾನ್ ಚಿಕಿತ್ಸೆ ಪಡೆಯುತ್ತಿದ್ದಾನೆ.  ಘಟನೆಯಲ್ಲಿ  ಗಾಯಗೊಂಡಿರುವ ಪಿಎಸ್ ಐ ಕೊತ್ವಾಲ್ ರನ್ನು ಬಸವೇಶ್ವರ್ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ  ನೀಡಲಾಗುತ್ತಿದೆ

   

333  ನನ್ನ ಮೇಲಿನ ಭಾರ ಕಡಿಮೆಯಾಗಿದೆ : ರಮೇಶ್
ನವೆಂಬರ್-28
 ಕಲಬುರಗಿ: ಕೆಪಿಎಂಇ ವಿಧೇಯಕ ಮಂಡನೆಯಲ್ಲಿ ಮುಖ್ಯಮಂತ್ರಿಯವರು ಪ್ರಮುಖ ಪಾತ್ರ ನಿರ್ವಹಿಸಿದರು.  ಅವರು ಇಲ್ಲದಿದ್ದರೆ ವಿಧೇಯಕ ಮಂಡನೆ ಕ್ಲಿಷ್ಟಕರವಾಗುತಿತ್ತು ಎಂದು ಆರೋಗ್ಯ ಸಚಿವ ರಮೇಶ್ಕುಮಾರ್  ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಂಇ ವಿಧೇಯಕ ಮಂಡನೆ ವಿಚಾರದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಲುಬಂಡೆಯಂತೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡರು. ಅವರು ಈ  ರೀತಿ ನನಗೆ ಬೆಂಬಲವಾಗಿ ನಿಲ್ಲದಿದ್ದರೆ ವಿಧೇಯಕ ಮಂಡಿಸುವುದು ತುಂಬಾ ಕಷ್ಟವಾಗುತ್ತಿತ್ತು ಎಂದರು.  ಇದೀಗ ಕೆಪಿಎಂಇ ವಿಧೇಯಕ ಮಂಡನೆಯಾಗಿರುವುದರಿಂದ ನನ್ನ ಮೇಲಿನ ಭಾರ ಕಡಿಮೆಯಾಗಿದೆ. ಈ  ವಿಷಯದಲ್ಲಿ ಮುಖ್ಯಮಂತ್ರಿಗಳು ಬಹುಮುಖ್ಯಪಾತ್ರ ನಿರ್ವಹಿಸಿದರು ಎಂದು ಶ್ಲಾಘಿಸಿದರು.

  

33

ಟಿಪ್ಪು ಜಯಂತಿ: ಕಲಬುರಗಿ ಪೋಲಿಸ್ ಇಲಾಖೆ ಹದ್ದಿನ ಕಣ್ಣು

 ನವೆಂಬರ್-10
ಕಲಬುರಗಿ: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಿರುವ ಪೊಲೀಸರು ನಿಷೇಧಾಜ್ಞೇ ಘೋಷಿಸಿದ್ದಾರೆ. ಶುಕ್ರವಾರ ನವೆಂಬರ್ 10 ಬೆಳಿಗ್ಗೆ 6 ರಿಂದ ಜಾರಿಬರುವಂತೆ 24 ಗಂಟಗಳ ಕಲ ಕಲಬುರಗಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಕಾನೂನು ಸುವ್ಯವಸ್ಥೆ ಕಾಪಡುವ ದೃಷ್ಠಿಯಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದು, ಪ್ರತಿಭಟನೆ, ಸಭೆ, ಮೆರವಣಿ, ಗುಂಪು ಸೇರುವುದಕ್ಕೆ ನಿರ್ಭಂದ ಹೇರಲಾಗಿದೆ. ಅಷ್ಟೇ ಅಲ್ಲ ಹೋಟೆಲ್, ಬಾರ್ ಮತ್ತು ಪಬ್ ಗಳಲ್ಲಿ ಮದ್ಯ ಮರಾಟ ನಿಷೇಧ ಮಾಡಲಾಗಿದೆ.
ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಹೆದರಿರುವ ಜನ ಅಂಗಡಿಮುಂಗಡುಗಳನ್ನು ತೆರೆದಿಲ್ಲ. ಶಾಲಾ ಕಾಲೇಜುಗಳಿಗೆ ಸಹಜವಾಗಿಯೇ ರಜೆ ಇರುವುದರಿಂದ ಕಲಬುರ್ಗಿಯಲ್ಲಿ ರಸ್ತೆಗಳು ಭಣಗುಡುತ್ತಿವೆ.
ಮುನ್ನೆಚ್ಚರಿಕಾ ಕ್ರಮವಾಗಿ ನವೆಂಬರ್ 09ರಂದು ಪೊಲೀಸರು ಜಗತ್ ವೃತ್ತದಿಂದ ಸಮರ್ ಮಾರ್ಕೆಟ್ ವರೆಗೆ ಆಯುಧ ಸಮೇತ ಪಥಸಂಚಲನ ನಡೆಸಿದ್ದಾರೆ.

  

00  ಪ್ರಮೋದ್ ಮುತಾಲಿಕ್ ಗೆ ಜಿಲ್ಲಾಧಿಕಾರಿ ನಿರ್ಬಂಧನೆ
 ನವೆಂಬರ್-8
ಕಲಬುರ್ಗಿ : ಇನ್ನು 15 ದಿನಗಳ ಕಾಲ ಕಲಬುರ್ಗಿ ಪ್ರವೇಶಿಸದಂತೆ ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಗೆ ಜಿಲ್ಲಾಧಿಕಾರಿ ನಿರ್ಭಂಧ ಹೇರಿದ್ದಾರೆ.
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದ್ದು, ಪ್ರಮೋದ್ ಮುತಾಲಿಕ್ ಆಗಮನದಿಂದ ಪರಿಸ್ಥಿತಿ ಬಿಗಡಾಯಿಸಿ, ಕೋಮು ಸೌಹಾರ್ಧ ಹದಗೆಡುವ ಸಾಧ್ಯತೆ ಇರುವ ಕಾರಣ ಜಿಲ್ಲಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಶ್ರಿರಾಮ ಸೇನೆ ಅಧ್ಯಕ್ಷ ಪ್ರಮೋಧ್ ಮುತಾಲಿಕ್ ಅವರು ಟಿಪ್ಪುಜಯಂತಿಗೆ ತೀರ್ವ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಘಟನೆ ಮೂಲಕ ರಾಜ್ಯಾದ್ಯಂತ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿಕೆ ನೀಡಿದ್ದರು.
ಪ್ರಮೋದ್ ಮುತಾಲಿಕ್ ಅವರಿಗೆ ಈ ರೀತಿಯ ನಿಷೇಧಗಳು ಹೊಸದೇನಲ್ಲ ಹಿಂದೆ ಅನೇಕ ಭಾರಿ ಕರಾವಳಿ ಜಿಲ್ಲೆಗಳು, ಮೈಸೂರು ಮುಂತಾದ ಜಿಲ್ಲೆಗಳಿಗೆ ಪ್ರವೇಶಿಸದಂತೆ ಅವರಿಗೆ ನಿಷೇಧ ಹೇರಲಾಗಿತ್ತು.
ಪೋಲಿಸ್ರ ಭದ್ರಗಾವಲಿನಲ್ಲಾದರೂ ಟಿಪ್ಪು ಜಯಂತಿ ಜಯಂತಿಯನ್ನು ಆಚರಿಸಿಯೇ ತೀರುವುದಾಗಿ ಪಣತೊಟ್ಟಿರುವ ರಾಜ್ಯ ಸರ್ಕಾರ ಅನೇಕ ಕಠಿಣ ನಿರ್ಧಾರಗಳನ್ನು ತಳೆಯುತ್ತಿದೆ, ಅನೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆಗಳನ್ನು ಜಾರಿ ಮಾಡಿ ಟಿಪ್ಪು ಜಯಂತಿಯಂದು ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಗಳು ಹರಸಾಹಸ ಮಾಡುತ್ತಿದ್ದಾರೆ.

  

33   ಅಂದೋಲಾ ಮಠದ ಸ್ವಾಮೀಜಿ ಬಂಧನ
 ಅಕ್ಟೋಬರ್ -31
ಕಲಬುರಗಿ : ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಕರಣೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯನ್ನು ಕೊಲೆಯತ್ನಕ್ಕೆ ಪ್ರಚೋದನೆ ಆರೋಪದಲ್ಲಿ ಬಂಧಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜೇವರ್ಗಿ ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದು, ಅವರು ಶ್ರೀರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಕೂಡಾ ಆಗಿದ್ದಾರೆ. ಇದೇ ತಿಂಗಳು ಹದಿನಾಲ್ಕ ರಂದು ಆಂದೋಲಾ ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಅಂಗಡಿಗಳ ತೆರವು ಸಂಬಂಧ ಗಲಾಟೆಯಾಗಿತ್ತು. ಘಟನೆಯಲ್ಲಿ ನಸಿರುದ್ದೀನ್ ಎಂಬಾತ ಗಾಯಗೊಂಡಿದ್ದ.
ಈ ಘಟನೆಗೆ ಸ್ವಾಮೀಜಿ ಪ್ರಚೋದನೆಯೇ ಕಾರಣ ಎಂದು ನಸಿರುದ್ದೀನ್ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಆದರೆ ಬಂಧನದ ಕ್ರಮ ಖಂಡಿಸಿ ಗ್ರಾಮಸ್ಥರು ಹಾಗೂ ಬೆಂಬಲಿಗರು, ಅಭಿಮಾನಿಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ, ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೊಂದು ಕಡೆ ಸ್ವಾಮೀಜಿಯನ್ನು ಹಿಂಬಾಲಿಸಿ ಗುಂಪು ಗುಂಪಾಗಿ ಬರುತ್ತಿದ್ದ ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಹೆಚ್ಚುವರಿ ಎಸ್.ಪಿ ಸೇರಿ ಐವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ ಎರಡು ಪೊಲೀಸ್ ವಾಹನಗಳು ಜಖಂ ಆಗಿವೆ ಎಂದು ಎಸ್.ಪಿ ಶಶಿಕುಮಾರ್ ತಿಳಿಸಿದ್ದಾರೆ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಬಂಧಿಸಿದ ನಂತರ ಜೇವರ್ಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ಸ್ವಾಮೀಜಿಯನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯಕ್ಕೆ ಸ್ವಾಮೀಜಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಸ್ವಾಮೀಜಿ ಬೆಂಬಲಿಗರು ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡುವ ಸಾದ್ಯತೆ ಇದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಜೇವರ್ಗಿ ಬಂದ್ ಕರೆ ಕೊಡುವ ಸಾಧ್ಯತೆ ಕೂಡ ಇದೆ.

  

                                                                                                                                    

1.36 ಕೋಟಿ ದುರುಪಯೋಗ: ಕ್ರಮಕ್ಕೆ ಪಟ್ಟು
ಅಕ್ಟೋಬರ್.28
ಕಲಬುರಗಿ: ಕಲಬುರಗಿ,ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರ ದೃಢಪಟ್ಟಿದ್ದರಿಂದ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಹಾಲು ಒಕ್ಕೂಟದ ಸದಸ್ಯ ಸಂಘಗಳ ಪದಾಧಿಕಾರಿಗಳು, ಕಾರ್ಯಕರ್ತರು ಒಕ್ಕೂಟದ ಕಚೇರಿ ಮುಂದೆ ಧರಣಿ ನಡೆಸಿದರು.
ಸರಕಾರ ಹಾಲು ಉತ್ಪಾದಕರಿಗೆ ನೀಡುವ 4 ರೂ. ಪ್ರೋತ್ಸಾಹ ಧನ ದುರುಪಯೋಗ ಮಾಡಿಕೊಂಡ ಬಗ್ಗೆ ವಿಚಾರಣೆ ನಡೆಸಿದ ವರದಿಯಲ್ಲಿ ಸರಕಾರದ ಪ್ರೋತ್ಸಾಹಧನ 1.36 ಕೋಟಿ ರೂ.ಒಕ್ಕೂಟದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ನಿಯಮ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದ್ದರೂ ಪೊಲೀಸ್ ಕಂಪ್ಲೇಂಟ್ ಯಾಕೆ ಕೊಡುತ್ತಿಲ್ಲ ಎಂದು ಹೋರಾಟಗಾರರು ಪ್ರಶ್ನಿಸಿದರು.

 

   

ff ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ
ಅಕ್ಟೋಬರ್.25
ಕಲಬುರಗಿ: ನಾನು ಮನುಷ್ಯ ಇದ್ದೇನೆ, ನನಗೂ ನಾಚಿಕೆ ಶರಮ್ ಇದೆ ಹೀಗೆಂದು ಲೇವಡಿ ಮಾಡಿದವರು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ.
ಅ. 29ರಂದು ಬೀದರ್-ಕಲಬುರಗಿ ರೈಲು ಮಾರ್ಗ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದರು. ಆಹ್ವಾನವೇ ನೀಡದ ಕಾರ್ಯಕ್ರಮಕ್ಕೆ ಹೋಗಲು ನನಗೂ ನಾಚಿಕೆ ಶರಮ್ ಇದೆ ಎಂದರು.
ಉದ್ದೇಶ ಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿಲ್ಲ. ಶಿಷ್ಟಾಚಾರ ಪಾಲನೆಯೂ ಮಾಡುತ್ತಿಲ್ಲ. ನಾನು ರೈಲ್ವೆ ಸಚಿವನಾಗಿ ಕೆಲಸ ಮಾಡಿರುವೆ. ಈ ಕಾಮಗಾರಿಗೆ ಅತೀ ಹೆಚ್ಚು ಹಣ ನೀಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಶಕ್ತಿಮೀರಿ ಪ್ರಯತ್ನ ಮಾಡಿದ್ದೆ. ಆದರೆ ನನಗೆ ಆಹ್ವಾನಿಸಿಲ್ಲ. ನನಗೆ ಬಿಡಿ, ಈ ಯೋಜನೆಗೆ ರಾಜ್ಯ ಸರಕಾರ ತನ್ನ ಪಾಲಿನ ಶೇ 50ರಷ್ಟು ಹಣ ನೀಡಿದೆ. ಶಿಷ್ಟಾಚಾರಕ್ಕಾದರೂ ಸಿಎಂ ಜತೆ ಕಾರ್ಯಕ್ರಮದ ಬಗ್ಗೆ ಮಾತಾಡಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಈಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ನಮಗೆ ಆಹ್ವಾನಿಸಿದರೆ ಕ್ರೆಡಿಟ್ ಕಾಂಗ್ರೆಸ್ಗೆ ಹೋಗುತ್ತದೆ ಎಂಬ ಕಾರಣಕ್ಕೆ ಹೊರಗೆ ಇಡಲಾಗಿದೆ. ಆದರೆ ಈ ಕೆಲಸ ಯಾರು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ನುಡಿದರು.

  

11 ಮೊದಲು ಹೊಗಳಿ ಈಗ ವಿರೋಧಿಸುವುದೇಕೆ:ಸಚಿವ ರಾಮಲಿಂಗ ರೆಡ್ಡಿ
 ಅಕ್ಟೋಬರ್-23
ಕಲಬುರಗಿ : ಬಿ.ಎಸ್. ಯಡಿಯೂರಪ್ಪನವರು ಕೆಜಿಪಿಯಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಟಿಪ್ಪು ಸುಲ್ತಾನ್ ರನ್ನು ಹಾಡಿ ಹೊಗಳಿ ಇದೀಗ ಜಯಂತಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ತಮ್ಮ ಪಕ್ಷದಲ್ಲಿ ಗೊಂದಲ ಹುಟ್ಟುಹಾಕಿದ್ದಾರೆ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ವಾಗ್ದಾಳಿ ನಡೆಸಿದರು.
ಸಂಸದೆ ಶೋಭಾ ಕೂಡಾ ಆಗ ಟಿಪ್ಪು ಬಗ್ಗೆ ಗುಣಗಾನ ಮಾಡಿದ್ರು, ಈಗ ವಿರೋಧಿಸುವ ಮೂಲಕ ಬಿಜೆಪಿ ಪಕ್ಷದಲ್ಲೇ ಯಡಿಯೂರಪ್ಪ ಗೊಂದಲ ಮೂಡಿಸುತ್ತಿದ್ದಾರೆಂದು ಕಿಡಿಕಾರಿದ ಅವರು, ರಾಜ್ಯ ಸರ್ಕಾರದಿಂದ 26 ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಅದರಂತೆ ಟಿಪ್ಪು ಜಯಂತಿ ನಡೆಯಲಿದೆ. ಆಮಂತ್ರಣದಲ್ಲಿ ಶಿಷ್ಟಾಚಾರದಂತೆ ಹೆಸರು ನಮೂದಿಸಲಾಗುವುದು. ಇಷ್ಟ ಇದ್ದರೆ ಜಯಂತಿಯಲ್ಲಿ ಭಾಗವಹಿಸಲಿ, ಇಲ್ಲಾಂದ್ರೆ ಬೇಡ ಎಂದರು.
ಟಿಪ್ಪು ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಲಾಗುತ್ತದೆ ಎಂದು ವಿರೋಧಿಸುವುದು ಸರಿಯಲ್ಲ. ಆಚರಣೆಗೆ ಅಡ್ಡಿಪಡಿಸಿದರೆ ಯಾರೆ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದಾಗಿಯೂ ಎಚ್ಚರಿಸಿದರು.

Ads
;