ದೂರವಾಣಿ : 080-69999676
ಇಮೇಲ್ : Info@Vijayataranga.com


     123 

 ಕೊನೆ ಆಸೆ ಬರೆದಿಟ್ಟು ನೇಣಿಗೆ ಶರಣಾದ ಅಪ್ರಾಪ್ತ ಜೋಡಿ

 ಡಿಸೆಂಬರ್.12

 ಚಿಕ್ಕಬಳ್ಳಾಪುರ: ಪ್ರೇಮಿಗಳಿಬ್ಬರು ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗಾನವಿ (16) ಮತ್ತು ಗಿರೀಶ್ (18) ಆತ್ಮಹತ್ಯೆಗೆ ಶರಣಾದ ಜೋಡಿ. ಅಂತ ತಿಳಿದು ಬಂದಿದ್ದು. ಮೃತರಿಬ್ಬರು ಕೂಡ ಆತ್ಮಹತ್ಯೆಗೂ ಮುನ್ನ ತಮ್ಮ ಕೊನೆಯ ಆಸೆಯನ್ನು ಬರೆದಿಟ್ಟಿದ್ದು, ಇಬ್ಬರನ್ನು ಮರಣೋತ್ತರ ಪರೀಕ್ಷೆ ಮಾಡದೇ ಮಣ್ಣು ಹಾಕಿ ಒಂದೇ ಸಮಾಧಿ ಮಾಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡಿರುವ ಮೃತ ಗಾನವಿ ಗೌರಿಬಿದನೂರು ನಗರದ ಮುನಿಸಿಪಾಲ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದು, ಗಿರೀಶ್ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.ಇಂದು ಬೆಳಿಗ್ಗೆ ಮನೆಯಿಂದ ಶಾಲಾ-ಕಾಲೇಜಿಗೆ ಅಂತ ಹೋದ ಇಬ್ಬರು ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಣಸೆ ಮರದ ಬುಡದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಡೆತ್ ನೋಟ್ ನಲ್ಲಿ ನಮ್ಮ ಕೊನೆಯ ಆಸೆ ಒಂದೇ ನಮ್ಮಿಬ್ಬರನ್ನ ಒಂದೇ ಗುಣಿಗೆ ಹಾಕಿ, ಪೋಸ್ಟ್ ಮಾರ್ಟಂ ಗೆ ಕೊಡಬೇಡಿ, I ಂm Soಡಿಡಿಥಿ ಅಂತ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಾಲಕಿಯ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕಗಳು ಲಭ್ಯವಾಗಿವೆ.ಘಟನ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹಗಳನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.ಅಪ್ರಾಪ್ತ ವಯಸ್ಕರಾದ ಕಾರಣ ಸದ್ಯ ಪ್ರೀತಿ ಪ್ರೇಮ ಎಲ್ಲಾ ಬೇಡ. ಚೆನ್ನಾಗಿ ಓದಿ ನಾವೇ ನಿಮಗೆ ಮದುವೆ ಮಾಡುತ್ತೇವೆ ಅಂತ ಬದ್ದಿವಾದ ಹೇಳಿದ್ದೀವಿ.ಆದ್ರೆ ಅಷ್ಟರಲ್ಲೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಮೃತರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

45  ಮದುವೆಯಾಗಿ 15 ದಿನಕ್ಕೆ ಓಡಿ ಹೋದ ಪತಿ!
 ಡಿಸೆಂಬರ್-9
ಚಿಕ್ಕಬಳ್ಳಾಪುರ : ಯುವತಿಯನ್ನು ಪ್ರೀತಿಸಿ ಮದುವೆಯಾಗಿ 15 ದಿನಕ್ಕೆ ಪತಿರಾಯ ಪತ್ನಿಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಬಾಗೇಪಲ್ಲಿ ತಾಲೂಕಿನ ಕಲ್ಲಪಲ್ಲಿ ಗ್ರಾಮದ ಯುವಕ ವಿನೋದ್ ಕುಮಾರ್ ಎಂಬ ಯುವಕ ನಗರದ ರಜನಿ ಎಂಬ ಯುವತಿಯನ್ನು 15 ದಿನಗಳ ಹಿಂದೆ ಪ್ರೀತಿ ಅಂತರ್ ಜಾತಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಯಲಹಂಕದಲ್ಲಿ ಮನೆ ಮಾಡಿ 15 ದಿನ ಸಂಸಾರ ಮಾಡಿ ವಿನೋದ್ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಪರಾರಿಯಾಗಿದ್ದಾನೆ.
ಯುವತಿಯು ತನ್ನ ಪತಿಯನ್ನು ಅವರ ಪೋಷಕರೇ ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದಾರೆ ಎಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

 

 

00  ಮದುವೆ ಬಳಿಕ ಜನರನ್ನು ಕರೆತರುತ್ತಿದ್ದ ಬಸ್ ಪಲ್ಟಿ
 ಅಕ್ಟೋಬರ್-2
ಚಿಕ್ಕಬಳ್ಳಾಪುರ: ಮದುವೆ ಬಳಿಕ ಜನರನ್ನು ಕರೆತರುತ್ತಿದ್ದ ಖಾಸಗಿ ಬಸ್ ವಾಪಸ್ಸಾಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗೇಟ್ ಬಳಿ ಸಂಭವಿಸಿದೆ.
ಬಾಗೇಪಲ್ಲಿಯ ಮಿಟ್ಟೆಮರಿ ಗ್ರಾಮದವರು ಬೆಂಗಳೂರಿನ ಸರ್ಜಾಪುರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯನ್ನ ಮುಗಿಸಿಕೊಂಡು ವಾಪಸ್ಸಾಗುತ್ತಿದ್ರು. ಈ ವೇಳೆ ಮಧ್ಯರಾತ್ರಿ 12.30 ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರವೊಂದಕ್ಕೆ ಬಸ್ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಳಾಗಿವೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ರಭಸಕ್ಕೆ ಖಾಸಗಿ ಬಸ್ನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

55  ಗೌರಿ ಹಂತಕರು ಯಾರೆಂದು ಗೊತ್ತಾಗಿದೆ ; ರೆಡ್ಡಿ
 ಅಕ್ಟೋಬರ್-31
ಚಿಕ್ಕಬಳ್ಳಾಪುರ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಮುಕ್ತಾವಾಗಿದ್ದು, ಗೌರಿ ಹಂತಕರು ಯಾರೆಂದು ಗೊತ್ತಾಗಿದೆ. ಶೀಘ್ರದಲ್ಲೇ ಆರೋಪಿಗಳು ಯಾರೆಂಬುದನ್ನು ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗೌರಿ ಹಂತಕರು ಯಾರು ಎಂಬುದನ್ನು ಶೀಘ್ರವೇ ಬಹಿರಂಗಗೊಳಿಸುವುದಾಗಿ ಹೇಳಿದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತು ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ನಡೆಸುತ್ತಿತ್ತು. ಪೊಲೀಸರು ಗೌರಿ ಲಂಕೇಶ್ ಮನೆಯಿಂದ ಸಿಸಿಟಿವಿ ದೃಶ್ಯವನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದರು.

 

 

 

 

಻ಅ  ಮೀನು ತಿಂದಿದ್ದು ನಿಜ.ಆದರೆ,ಗರ್ಭಗುಡಿಗೆ ಹೋಗಲಿಲ್ಲ : ಸಿ ಎಂ
 ಅಕ್ಟೋಬರ್-30
ಚಿಕ್ಕಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಮುನ್ನ ಮಂಗಳೂರಿನಲ್ಲಿ ಮೀನು ತಿಂದು ಸಿ.ಎಂ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಬಗ್ಗೆ ಕೆಲವು ಮಂದಿ ವಿರೋಧ ವ್ಯಕ್ತಡಿಸಿದ್ದರು.
ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಸಿ.ಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಮೀನು ತಿಂದಿದ್ದು ನಿಜ. ಆದರೆ, ಗರ್ಭಗುಡಿಗೆ ಹೋಗಲಿಲ್ಲ. ಹೊರಗಡೆಯಿಂದಲೇ ದೇವರ ದರ್ಶನ ಮಾಡಿಕೊಂಡು ಬಂದೆ. ಒಂದು ವೇಳೆ ಒಳಗೆ ಹೋಗಿ ದರ್ಶನ ಮಾಡಿದ್ದರೆ ದೇವರಿಗೆ ಅಪವಿತ್ರ ಆಗುತ್ತಿತ್ತೇ ? ಎಂದು ಪ್ರಶ್ನಿಸಿದರು.
ಇದೇ ವೇಳೆ ಅವರು ನಾನು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಹೋಗಿದ್ದೆ. ಅಲ್ಲಿಯ ಧರ್ಮಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರು ದೇವಾಲಯಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಹೋಗುವಂತೆ ತಿಳಿಸಿದರು. ಬೆಂಗಳೂರಿಗೆ ತುರ್ತಾಗಿ ತೆರಳಬೇಕಿದೆ ಅಂತ ಅವರ ಬಳಿ ಹೇಳಿಕೊಂಡ ವೇಳೆಯಲ್ಲಿ ಅವರು ಹೊರಗಡೆಯಿಂದಲೇ ನಮಸ್ಕಾರ ಮಾಡಿಕೊಂಡು ಹೋಗಿ ಅಂತ ಹೇಳಿದ್ದಾರೆ ಅಂತ ಅವರು ಹೇಳಿದರು.
ಇದೇ ವೇಳೆ ಅವರು ಒಂದು ಬಾರಿ ಮಾಂಸ ಸೇವಿಸಿದರೆ ಅದು 48 ಗಂಟೆಗಳ ಕಾಲ ನಮ್ಮ ಶರೀರದಲ್ಲಿ ಇರುತ್ತದೆ. ಈವತ್ತು ತಿಂದವರು ನಾಳೆ ದೇವಾಲಯಕ್ಕೆ ಹೋಗುವಂತೆಯೇ ಇಲ್ಲವಲ್ಲ ಅಂತ ಪ್ರಶ್ನಿಸಿದ್ದಾರೆ.
ಇನ್ನು ದೇವರಿಗೆ ಬೇಕಾದ್ದು ಶುದ್ಧವಾದ ಮನಸ್ಸು.
ಆ ಶುದ್ಧವಾದ ಮನಸ್ಸಿನಿಂದ ಯಾರು ಪೂಜೆ ಮಾಡುತ್ತಾರೆ. ಅವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ಆ ಜನರು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ನಾವು ದೇವರಿಗೆ ಸಲ್ಲಿಸುವ ದೊಡ್ಡ ಪ್ರಾರ್ಥನೆ ಎಂದು ಮುಖ್ಯಮಂತ್ರಿಯವರು ಹೇಳಿದರು.

 

 

                                                                                                          

ಚಿಕ್ಕಬಳ್ಳಾಪುರ ಶಾಸಕರ ಕಾರು ಜಖಂ

ಅಕ್ಟೋಬರ್ 30

ಚಿಕ್ಕಬಳ್ಳಾಪುರ: ಸಿಎಂ ಕಾರ್ಯಕ್ರಮಕ್ಕೆ ಬಂದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರ ಕಾರು ಅಪಘಾತಗೊಂಡಿದ್ದು ಘಟನೆಯಲ್ಲಿ ಶಾಸಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಮಂಚನಬೆಲೆ ಗ್ರಾಮದಲ್ಲಿ ಅಯೋಜಿಸಿದ್ದ ಕಾರ್ಯಕ್ರಮ ಮುಗಿಸಿಕೊಂಡು ನಗರಕ್ಕೆ ಹಿಂತಿರುಗುತ್ತಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಅವರ ಕಾರು ಸಿಎಂ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಹಿಂದಿನಿಂದ ಆಂಬೂಲೆನ್ಸ್ ವಾಹನ ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ.

ಹೀಗಾಗಿ ಕಾರಿ ಜಖಂ ಆಗಿದ್ದು ಸುಧಾಕರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಶಾಸಕರ ಬದಲಿಗೆ ಅವರ ಪಿಎ ಕಾರಿನಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ.

Ads




;