ದೂರವಾಣಿ : 080-69999676
ಇಮೇಲ್ : Info@Vijayataranga.com


 

    12

 ಮಧ್ಯರಾತ್ರಿ ಕಾರಿನ ಟಯರ್ ಪಂಕ್ಚರ್ ಸಂಕಷ್ಟದಲ್ಲಿದ್ದವರಿಗೆ ನೆರವಾದ ಅಣ್ಣಾಮಲೈ

 ಡಿಸೆಂಬರ್ 25

 ಚಿಕ್ಕಮಗಳೂರು: ರಾತ್ರಿ ರಸ್ತೆ ಮಧ್ಯೆ ಕಾರಿನ ಟಯರ್ ಪಂಕ್ಚರ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರಿಗೆ ನೆರವಾಗುವ ಮೂಲಕ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಘಟನೆ ನಿನ್ನೆ ರಾತ್ರಿ ನಡೆದಿದ್ದು, ಬೆಂಗಳೂರಿನ ಪ್ರವಾಸಿಗರಿದ್ದ ಕಾರೊಂದು ಚಿಕ್ಕಮಗಳೂರು-ಶೃಂಗೇರಿ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಮತ್ತಾವರ ಎಂಬ ಗ್ರಾಮವನ್ನು ತಲುಪಿದಾಗ ಕಾರಿನ ಟಯರ್ ಪಂಕ್ಚರ್ ಆಗಿತ್ತು. ಜನಸಂಖ್ಯೆ ವಿರಳವಾಗಿದ್ದ, ಸುತ್ತಮುತ್ತ ಮರಗಳೇ ಅಧಿಕವಾಗಿದ್ದ ಈ ಪ್ರದೇಶದಲ್ಲಿ ಪ್ರವಾಸಿಗರು ತುಂಬಾ ಆತಂಕಕ್ಕೆ ಒಳಗಾಗಿದ್ದರು. ಅಷ್ಟರಲ್ಲಿ ಆ ದಾರಿಯಾಗಿ ಕೊಪ್ಪದಿಂದ ಚಿಕ್ಕಮಗಳೂರಿಗೆ ಎಸ್ಪಿಅಣ್ಣಾಮಲೈ ಆಗಮಿಸಿದ್ದಾರೆ. ಪ್ರವಾಸಿಗರ ಸಮಸ್ಯೆ ಅರಿತ ಅವರು ತಾವೇ ಸ್ವತಃ ಸಹಾಯಕ್ಕಿಳಿದರು. ಸ್ಪಾನರ್ ಹಿಡಿದು ಪಂಕ್ಚರ್ ಆಗಿರುವ ಕಾರಿನ ಟಯರ್ ಅನ್ನು ಬಿಚ್ಚಲು ಯತ್ನಿಸಿದರು. ಅದು ಸಾಧ್ಯವಾಗದಾಗ ಪ್ರವಾಸಿಗರನ್ನು ತಮ್ಮ ಕಾರಿನಲ್ಲೇ ನಗರಕ್ಕೆ ತಂದು ಬಿಟ್ಟರು. ಎಸ್ಪಿ ಅಣ್ಣಾಮಲೈಯವರ ಈ ದೊಡ್ಡತನಕ್ಕೆ ಬೆಂಗಳೂರಿನ ಪ್ರವಾಸಿಗರು ತುಂಬಾ ಖುಷಿಯಾದರು.

 

    12

 ಟ್ರಾನ್ಸ್ಫಾರ್ಮರ್ಗೆ ಪೊಲೀಸ್ ಜೀಪ್ ಢಿಕ್ಕಿ: ಇಬ್ಬರಿಗೆ ಗಾಯ

 ಡಿಸೆಂಬರ್ 25

 ಚಿಕ್ಕಮಗಳೂರು: ಪೊಲೀಸ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಢಿಕ್ಕಿಯಾದ ಪರಿಣಾಮ ವಿದ್ಯುತ್ ಕಂಬಗಳು ಜೀಪ್ ಮೇಲೆ ಉರುಳಿ ಬಿದ್ದ ಘಟನೆ ಕಡೂರು ತಾಲೂಕಿನ ಸೂರಾಪುರ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೀಡಾದ ಜೀಪ್ ಕಡೂರು ತಾಲೂಕು ಯಗಟಿ ಪೊಲೀಸ್ ಠಾಣೆಗೆ ಸೇರಿದ್ದಾಗಿದೆ. ಕಡೂರಿನಿಂದ ಯಗಟಿಗೆ ಹೋಗುವಾಗ ಸೂರಾಪುರ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಈಶ್ವರ್ ಎಂಬ ಪೊಲೀಸ್ ಪೇದೆ ಗಂಭೀರ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಗಾಯಾಳು ಪೊಲೀಸ್ ಪೇದೆಯನ್ನು ಕಡೂರಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

 

78  ಸಿಟಿ ರವಿ ಮನೆಗೆ ನಾಗಾ ಸಾಧು ಭೇಟಿ
 ಡಿಸೆಂಬರ್-18
ಚಿಕ್ಕಮಗಳೂರು: ಅದ್ಯಾಕೋ ಗೊತ್ತಿಲ್ಲಾ ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕಾರಣಿಗಳ ಮನೆಗಳಿಗೆ ನಾಗಾ ಸಾಧು ಭೇಟಿ ಹಲವು ಕುತೂಹಲಗಳು ಮೂಡಿಸುತ್ತಿವೆ.
ಇತ್ತೀಚೆಗೆ 18 ನಾಗಾ ಸಾಧುಳು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದ ಬೆನ್ನಲ್ಲಿಯೇ ಇದೀಗ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರ ಮನೆಗೆ ಭೇಟಿ ನೀಡಿದ್ದಾರೆ.
ಇಂದು ನಾಗಾ ಸಾಧುವೊಬ್ಬರು ಶಾಸಕ ಸಿಟಿ ರವಿ ಅವರ ಮನೆಗೆ ಭೇಟಿ ನೀಡಿ ಆಶೀರ್ವದಿಸಿ ಹೋಗಿದ್ದಾರೆ. ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಸಿಟಿ ರವಿ ಅವರು, 'ಇಂದು ನಾಗಾ ಸಾಧುಗಳು ನಮ್ಮ ಮನೆಗೆ ಆಗಮಿಸಿದ್ದು ನನ್ನ ಅದೃಷ್ಟ. ಸಾಧುಗಳ ಆಶೀರ್ವಾದ ಪಡೆಯಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುವೆ. ಅವರ ಆಶೀರ್ವಾದ ನಾಡಿನ ಸಮಸ್ತ ಜನರಿಗೆ ಇರಲಿ ಎಂದು ಕೇಳಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ವಾರಣಾಸಿಯಿಂದ ದೇಶ ಸಂಚಾರ ಮಾಡಿಕೊಂಡು ಬಂದಿದ್ದ ಹದಿನೆಂಟು ನಾಗಾ ಸಾಧುಗಳು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಆಶೀರ್ವದಿಸಿ ಹೋಗಿದ್ದರು.
ಇದಾದ ಬಳಿಕ ಮೈಸೂರು ಕಾಂಗ್ರೆಸ್ ಮುಖಂಡ ಕಂಸಾಳೆ ರವಿ ಎನ್ನುವರು ನಾಗಾ ಸಾಧುಗಳನ್ನು ತಮ್ಮ ಮನೆಗೆ ಕರೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೋಲಾರ ಶಾಸಕ ಪಕ್ಷೇತರ ವರ್ತೂರು ಪ್ರಕಾಶ್ ಅವರ ಒಳಿತಿಗಾಗಿ ಸಾಧುಗಳಿಂದ ಪೂಜೆ ಮಾಡಿಸಿದ್ದರು.
ಅಷ್ಟೇ ಅಲ್ಲದೇ ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಕೇದಾರನಾಥ್ ನಿಂದ ಆಗಮಿಸಿದ್ದ ನಾಗಾ ಸಾಧುಗಳನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಜೊತೆಯಾಗಿ ಹೋಗಿ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದರು. ಈ ವೇಳೆ ಕೈ ಮುಷ್ಟಿಕಟ್ಟಿ, ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು ಎಂದು ಒಗಟಿನ ರೂಪದಲ್ಲಿ ನಾಗಸಾಧು ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ದೂರವಾಣಿ ಮೂಲಕ ಭವಿಷ್ಯ ನುಡಿದಿರುವುದನ್ನು ಇಲ್ಲಿ ಸ್ಮರಿಸಬಹುದು.

 

 

 

   ಹಹಹ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣ ಬಿಡುಗಡೆಗೆ ಮನವಿ
ಡಿಸೆಂಬರ್.16
ಚಿಕ್ಕಮಗಳೂರು:ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಚಿಕ್ಕಮಗಳೂರು ಪರಿಶಿಷ್ಟ ಜಾತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ಯು.ಆರ್. ಹೊನ್ನಪ್ಪ ಮಾತನಾಡಿ, ಜಿಲ್ಲೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 1 ವರ್ಷದ ಹಿಂದೆ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಕೇಂದ್ರ ಸರಕಾರದಿಂದ ಆದೇಶ ಪತ್ರ ಬಂದಿದೆ. ಆದರೆ, ಈವರೆಗೂ ಈ ಯೋಜನೆಯಡಿ ಒಂದು ಮನೆಗೆ ನೀಡಬೇಕಾದ ಅನುದಾನ ಮಂಜೂರು ಮಾಡಿಲ್ಲ. ಫಲಾನುಭವಿ ರಾಜ್ಯಸರಕಾರದ ಅಂಬೇಡ್ಕರ್ ಯೋಜನೆಯಡಿ ನೀಡಿರುವ 1.80 ಲಕ್ಷ ರೂ. ಮಾತ್ರ ಪಡೆದಿದ್ದಾರೆ ಎಂದು ಹೇಳಿದರು.
ಇದರಿಂದ ಮನೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕೆಲಸ ಪೂರ್ಣಗೊಳಿಸದೆ ಫಲಾನುಭವಿಗಳು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆದಷ್ಟು ಬೇಗ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಮಹಿಳಾ ಘಟಕದ ವಕ್ತಾರರಾದ ಚೇತನ, ಮುಖಂಡರಾದ ಜಗದೀಶ್, ಪ್ರವೀಣ, ವಿಷ್ಣು, ವಸಂತಕುಮಾರ್, ಲೋಕೇಶ್, ಸಚಿನ್, ಧರ್ಮೇಶ, ಸುರೇಶ, ಕೇಶವ ಮೂರ್ತಿ, ವಿಜಯ್ ಮತ್ತಿತರರು ಹಾಜರಿದ್ದರು.:15ರುದ್ರ-ಪಿ 7
ಚಿಕ್ಕಮಗಳೂರು ಪರಿಶಿಷ್ಟ ಜಾತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ ನೀಡಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

 

        ಖಾಸಗಿ ಬಸ್ ಚಕ್ರಕ್ಕೆ ಸಿಲುಕಿ 2ವರ್ಷದ ಬಾಲಕಿ ಸಾವು
ಡಿಸೆಂಬರ್.13
ಚಿಕ್ಕಮಗಳೂರು: ಖಾಸಗಿ ಬಸ್ ಚಕ್ರಕ್ಕೆ ಸಿಲುಕಿ 2 ವರ್ಷದ ಬಾಲಕಿ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ಕುಂದನಹಳ್ಳಿಯಲ್ಲಿ ನಡೆದಿದೆ.
ಪುಟ್ಟ ಬಾಲಕಿ ತಾಯಿಯೊಂದಿಗೆ ಅಂಗನವಾಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

456  ನನಗೆ ಗೋರಿಗಳಿಗಿಂತ ನನ್ನ ಪೊಲೀಸರೇ ಮುಖ್ಯ : ಅಣ್ಣಾ
 ಡಿಸೆಂಬರ್-8
ಚಿಕ್ಕಮಗಳೂರು : ನಿಮಗೆ ಗೋರಿಗಳು ಎಷ್ಟು ಮುಖ್ಯವೋ, ನನಗೆ ನನ್ನ ಪೊಲೀಸರು ಅಷ್ಟೇ ಮುಖ್ಯ ಎಂದು ಚಿಕ್ಕಮಗಳೂರು ಎಸ್ ಪಿ ಅಣ್ಣಾಲಮಲೈ ತಮ್ಮ ಸಿಬ್ಬಂದಿಗಳ ಪರ ಬ್ಯಾಟ್ ಬೀಸಿದ್ದಾರೆ.
ದತ್ತ ಜಯಂತಿಯ ವೇಳೆ ಬಜರಂಗದಳ ಹಾಗೂ ವಿಶ್ವವ ಹಿಂದೂ ಪರಿಷತ್ ಕಾರ್ಯಕರ್ತರು ದತ್ತ ಪೀಠದಲ್ಲಿ ಗೋರಿಗಳನ್ನು ವಿರೂಪಗೊಳಿಸಿದರು. ಅವುಗಳನ್ನು ದುರಸ್ಥಿಗೊಳಿಸಿ, ಎರಡು ಸಮುದಾಯದವರು ಜೊತೆ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ದತ್ತ ಪೀಠಕ್ಕೆ ಎಸ್ಪಿ ಅಣ್ಣಾ ಮಲೈ ಘಟನೆಯ ಪರಾಮರ್ಶನೆ ನಡೆಸಿದರು.
ನಂತರ ಮಾತನಾಡಿದ ಅಣ್ಣಾ ಮಲೈ ನನ್ನ ಪ್ರಕಾರ ಪೀಠದ ಬಂದೋಬಸ್ತ್ ಪರ್ಫೆಕ್ಟ್ ಇದೆ. ನೂರಕ್ಕೆ ನೂರು ಸರಿ ಮಾಡುವದುಕ್ಕೆ ಸಾಧ್ಯವಿಲ್ಲ. ನಿಮ್ಮ ಮನೆಯಲ್ಲೂ ತಪ್ಪಾಗುತ್ತೆ. ನನಗೆ ನನ್ನ ಪೊಲೀಸರು ಮುಖ್ಯ ನಂತರ ಗೋರಿಗಳು ಎಂದರು.

 

 

   45 

ಹುಲಿಗಳ ಓಡಾಟಕ್ಕೆ: ಬೆಚ್ಚಿ ಬಿದ್ದ ಜನ!

 ಡಿಸೆಂಬರ್-5

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಹುಲಿಗಳ ಓಡಾಟದ ಭೀತಿಯಿಂದ ಗ್ರಾಮಸ್ಥರು ಭಯಬೀತರಾಗಿರುವ ಘಟನೆ ನಡೆದಿದೆ.ಹುಲಿಗಳ ಓಡಾಟದಿಂದ ಗ್ರಾಮದಲ್ಲಿ ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ. ಇನ್ನು ಕಳೆದ 3 ದಿನಗಳ ಹಿಂದೆ ಬೇಟೆಯಾಡಿದ್ದ ದನವನ್ನು ಹುಲಿಗಳು ಮತ್ತೆ ಬೇರೆ ಸ್ಥಳಕ್ಕೆ ಕೊಂಡೊಯ್ದಿರುವುದು ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹುಲಿ ಇರುವ ದೃಶ್ಯ ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, 2 ರಿಂದ 3 ಹುಲಿಗಳು ಇರುವುದಾಗಿ ಶಂಕೆ ವ್ಯಕ್ತವಾಗಿದೆ.

 

55     ದತ್ತ ಜಯಂತಿ: ಭಿಕ್ಷೆ ಬೇಡಿದ ಸಿ.ಟಿ.ರವಿ
 ಡಿಸೆಂಬರ್-2
 ಚಿಕ್ಕಮಗಳೂರು : ದತ್ತಮಾಲೆ ಧರಿಸಿರುವ ಶಾಸಕ ಸಿ.ಟಿ.ರವಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು  ಮಂಗಳೂರಿನ ಬಸವನಹಳ್ಳಿ ಮುಖ್ಯರಸ್ತೆಯ ಮನೆಗಳಲ್ಲಿ ಭಿಕ್ಷಾಟನೆ ಮಾಡಿ ಪಡಿ(ಅಕ್ಕಿ, ಬೆಲ್ಲ) ಸಂಗ್ರಹಿಸಿದರು.
 ದತ್ತ ಜಯಂತಿ ಅಂಗವಾಗಿ ಪಾದುಕೆ ದರ್ಶನಕ್ಕೆ ದತ್ತ ಪೀಠಕ್ಕೆ ತೆರಳುವ ಹಿಂದಿನ ದಿನ ಭಿಕ್ಷಾಟನೆ ಮಾಡುವುದು ಸಂಪ್ರದಾಯ ಇರುವ  ಕಾರಣ ದತ್ತಮಾಲಾಧಾರಿಗಳು ಸಂಪ್ರದಾಯ ಪಾಲಿಸಿದರು.
 ಭಿಕ್ಷಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಟಿ. ರವಿ, 'ದತ್ತ ಜಯಂತಿ ಹಿಂದಿನದಿನ ಭಿಕ್ಷಾಟನೆ ಮಾಡಿ, ಇರುಮುಡಿ  ಕಟ್ಟಿ ದತ್ತಪೀಠಕ್ಕೆ ತೆರಳಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅದರಂತೆ, ದತ್ತಮಾಲೆ ಧಾರಣೆ ಆರಂಭಿಸಿದ ವರ್ಷದಿಂದಲೂ ಈ   ಪದ್ಧತಿ ಅನುಸರಿಸುತ್ತಿದ್ದೇವೆ. ಐದು ಮನೆಗಳಲ್ಲಿ ಭಿಕ್ಷಾಟನೆ ಮಾಡಿದ್ದೇವೆ. ನಾಳೆ ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ, ಪಾದಯಾತ್ರೆ  ಮೂಲಕ ದತ್ತಪೀಠಕ್ಕೆ ತೆರಳುತ್ತೇವೆ' ಎಂದರು.
 'ಡಿ.1ರಂದು ಅನಸೂಯಾ ಜಯಂತಿಗೆ ಹೆಚ್ಚು ಭಕ್ತಾದಿಗಳು ಬಂದಿದ್ದರಿಂದ, ವಾಹನಗಳು ಹೆಚ್ಚಾಗಿದ್ದರಿಂದ ದತ್ತಪೀಠದ ಮಾರ್ಗದಲ್ಲಿ  ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ಸಮಸ್ಯೆಯಾಯಿತು. ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡದ ಕಾರಣ ಈ ಸಮಸ್ಯೆ ಸೃಷ್ಠಿಯಾಗಿತ್ತು.  ಡಿ.3ರಂದು ದತ್ತ ಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಕ್ರಮ ವಹಿಸಲು ಜಿಲ್ಲಾಡಳಿತ ಮುಂದಾಗಿದೆ. ಈ   ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ' ಎಂದು  ಪ್ರತಿಕ್ರಿಯಿಸಿದರು.
 'ಐ.ಡಿ ಪೀಠ ಗ್ರಾಮದ ಸರ್ವೆ ನಂ 195ರಲ್ಲಿ ದತ್ತಾತ್ರೇಯ ಪೀಠ ಇದೆ, ನಾಗೇನಹಳ್ಳಿಯ ಸರ್ವೆಯ 57ರಲ್ಲಿ ಬಾಬಾಬುಡನ್ ದರ್ಗಾ ಇದೆ  ಎಂದು ಸರ್ಕಾರಿ ದಾಖಲೆಯ ಪಹಣಿಯಲ್ಲಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದತ್ತ ಪೀಠ ಸಮಸ್ಯೆ ಪರಿಹರಿಸಲು  ಮುಂದಾಗಬೇಕು. ಸತ್ಯ ಹೇಳುವುದಕ್ಕೆ ಹಿಂಜರಿಯಬಾರದು. ನ್ಯಾಯ ದೊರಕಿಸಿಕೊಡಬೇಕು' ಎಂದು ಒತ್ತಾಯಿಸಿದರು.
 ತಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕೇವಲ ಒಂದೇ ತಿಂಗಳಿನಲ್ಲಿ ದತ್ತಪೀಠ ವಿವಾದ ಬಗೆಹರಿಸುವುದಾಗಿಯೂ ಅವರು ಹೇಳಿದರು.  ಭಿಕ್ಷಾಟನೆ ನಂತರ ಭಾರಿ ಸಂಖ್ಯೆಯ ಹಿಂದೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದರು.

 

33  ಯುವತಿಯರ ಮೈ ಕೈ ಮುಟ್ಟಿ ಗೂಸಾ ತಿಂದ ಟೈಲರಪ್ಪ
 ನವೆಂಬರ್-15
 ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪ ತಾಲೂಕಿನ ನಾರ್ವೆ ಗ್ರಾಮದಲ್ಲಿ ಟೈಲರಿಂಗ್ ಕಲಿಸುವ ನೆಪದಲ್ಲಿ ಯುವತಿರೊಂದಿಗೆ  ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಜನರು ಧರ್ಮದೇಟು ಕೊಟ್ಟಿದ್ದಾರೆ.
 ಹಸನಬ್ಬ ಸಾರ್ವಜನಿಕರಿಂದ ನಡು ಬೀದಿಯಲ್ಲಿ ಸಖತ್ತಾಗಿ ಗೂಸಾ ತಿಂದ ವ್ಯಕ್ತಿ. ಮುತ್ತಿನಕೊಪ್ಪದಲ್ಲಿ ಟೈಲರಿಂಗ್ ಶಾಪ್  ಇಟ್ಟಿಕೊಂಡಿದ್ದ ಈತ, ನಾನು ಉಚಿತವಾಗಿ ಟೈಲರಿಂಗ್ ಕಲಿಸಿಕೊಡಿಸುತ್ತೇನೆಂದು ಸುತ್ತಮುತ್ತಲಿನ ದಲಿತ ಕಾಲೋನಿ  ಯುವತಿಯರನ್ನು ಮರಳು ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ಅಸಭ್ಯವ ವರ್ತನೆ ಬಗ್ಗೆ ತಿಳಿದ ಸ್ಥಳೀಯರು  ಟೈಲರಪ್ಪನ ಮುಖಮೂತಿ ನೋಡದೆ ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ.
 ಇನ್ನು ಹಸನಬ್ಬನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿ ಜೊತೆ ಸಂಸಾರ ಮಾಡೋದ ಬಿಟ್ಟು ಒಬ್ಬಂಟಿಯಾಗಿದನಂತೆ.
 ಇದನ್ನೇ ಬಂಡವಾಳ ಮಾಡಿಕೊಂಡಿರೋ ಹಸನಬ್ಬ ಟೈಲರಿಂಗ್ ಕಲಿಸುವ ನೆಪದಲ್ಲಿ ಯುವತಿಯರನ್ನು ಮಾರಾಟ  ಮಾಡುತ್ತಿದ್ದ ಎನ್ನುವ ಆರೋಪ ಸಹ ಕೇಳಿ ಬಂದಿದೆ.

   

     

 ಕುಮಾರಸ್ವಾಮಿಗೆ ಕೈಕೊಟ್ಟ 'ವಿಕಾಸವಾಹಿನಿ'

ನವೆಂಬರ್-8
ಚಿಕ್ಕಮಗಳೂರು: ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಪರ ಪ್ರಚಾರಕ್ಕಾಗಿ ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿದ್ದ ಐಷಾರಾಮಿ ಬಸ್ 'ವಿಕಾಸವಾಹಿನಿ' ಯಾತ್ರೆಯ ಆರಂಭದಲ್ಲೇ ಬುಧವಾರ ಕೆಟ್ಟು ನಿಂತಿದೆ.ಮೈಸೂರಿನಲ್ಲಿ ಪ್ರಚಾರ ಮುಗಿಸಿ ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಅವರು ಶಿವಮೊಗ್ಗಕ್ಕೆ ಪ್ರಯಾಣಿಸಬೇಕಿತ್ತು. ಬಸ್ ಕೆಟ್ಟಿರುವುದರಿಂನ ಸಂಚಾರ ಸಾಧ್ಯವಾಗದೆ ಪರದಾಡಬೇಕಾಗಿದೆ. ಮೆಕಾನಿಕ್ ಆಗಮಿಸಿದ್ದು ರಿಪೇರಿ ಕಾರ್ಯ ಮಾಡುತ್ತಿದ್ದಾರೆ. ಕುಮಾರ ಸ್ವಾಮಿ ಅವರು ಬಸ್ನಲ್ಲೇ ಕುಳಿತಿದ್ದಾರೆ.

 

                                                                                                                                                                                                                        

ಕಾಗ್ರೇಸ್ ವಿರುದ್ಧ ಝಾಹಿರ್ ಟೀಕೆ ನೀಡಿದ ಎಚ್.ಡಿ.ಕೆ
ನವೆಂಬರ್-8
ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಚಾರಕ್ಕಾಗಿ ಜಾಹೀರಾತು ನೀಡುವ ಸರ್ಕಾರವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಚಾರಕ್ಕಾಗಿ ಕೋಟಿ ಕೋಟಿ ರೂ. ವೆಚ್ಚದ ಜಾಹಿರಾತುಗಳನ್ನು ನೀಡುತ್ತಿದೆಯೇ ಹೊರತು ರಾಜ್ಯದ ಜನರಿಗೆ ಯಾವುದೇ ರೀತಿಯ ಅನುಕೂಲ ಕಲ್ಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಜನಸಾಮಾನ್ಯರಿಗೆ ಬೇಕಾಗಿರುವ ಸಣ್ಣ ಕೆಲಸಗಳೂ ಕೂಡ ಸರ್ಕಾರ ಮಾಡುತ್ತಿಲ್ಲ. ಕೇವಲ ಜಾಹಿರಾತುಗಳ ಮೂಲಕ ಪ್ರಚಾರ ಪಡೆಯುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದ ಜನರಿಗೆ ಸಾಲದ ಭಾಗ್ಯ ನೀಡಿರುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಧನೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಜೆಡಿಎಸ್ ಅಧಿಕಾರಿದಲ್ಲಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳಿಗೆ ಭಾಗ್ಯದ ರೂಪ ನೀಡಿ ಪಡೆಯುತ್ತಿದೆ. ಸಿದ್ದರಾಮಯ್ಯನವರು ತಮ್ಮ ದುರಹಂಕಾರದ ಮಾತುಗಳ ಮೂಲಕ ಜನರ ಸಂಯಮವನ್ನು ಪರೀಕ್ಷೆ ಮಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

  

33   ಪ್ರಧಾನಿ  ಕೊಟ್ಟ ಭರವಸೆ ಈಡೇರಿಲ್ಲ:ಕುಮಾರಸ್ವಾಮಿ  
 ನವೆಂಬರ್-8
ಚಿಕ್ಕಮಗಳೂರು : ನೋಟ್ ಬ್ಯಾನ್ ಆಗಿ ಒಂದು ವರ್ಷ ಆಗಿದೆ. ಆದರೆ ದೇಶದ ಜನತೆಗೆ ಪ್ರಧಾನಿ ಮೋದಿ ಕೊಟ್ಟ ಭರವಸೆ ಈಡೇರಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಹಿಂದೆ ನೋಟು ಬ್ಯಾನ್ ಗೆ ಬೆಂಬಲ ನೀಡಿದವರು ಇಂದು ಅದರ ವಿರುದ್ಧವೇ ಮಾತನಾಡುತ್ತಿದ್ದಾರೆ. ಇದರಿಂದ ವ್ಯಾಪಾರಸ್ಥರು ಮತ್ತು ರೈತರ ಮೇಲೆ ಕೆಟ್ಟ ಪರಿಣಾಮ ಬೀರಿದೆ. ವರ್ಡ್ ಬ್ಯಾಂಕ್ ನೀಡುವ ಸರ್ಟಿಫಿಕೆಟ್ ನಲ್ಲಿ ಕೃತಕತೆ ಇರುತ್ತದೆ. ನೋಟ್ ಬ್ಯಾನ್ ಬಗ್ಗೆ ಪ್ರಧಾನಿ ಮಂತ್ರಿ ಅತ್ಯಂತ ಬಾಲಿಶ ಹೇಳಿಕೆ ನೀಡಿದ್ದು, ತಿಳಿವಳಿಕೆ ಇಲ್ಲದವರು ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.
ಇನ್ನು ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಮುಗುವಳ್ಳಿ ಗ್ರಾಮದಲ್ಲಿ ದಲಿತ ಕುಟುಂಬ ಧರ್ಮಪಾಲ್ ಅವರ ಮನೆಯಲ್ಲಿ ಕಳೆದ ರಾತ್ರಿಯಿಂದ ವಾಸ್ತವ್ಯ ಮಾಡಿದ್ದಾರೆ.

  

    

 ಪರಿಶೀಲನೆ ನಂತರ ಫೋನ್ ಟ್ಯಾಪಿಂಗ್ ತಿಳಿಯಲಿದೆ: ಪರಮೇಶ್ವರ್    ನೆವಂಬರ್07

ಚಿಕ್ಕಮಗಳೂರು : ಫೋನ್ ಕದ್ದಾಲಿಕೆ ವಿಚಾರವನ್ನು ಸಚಿವ ಎಂ.ಬಿ.ಪಾಟೀಲ್ ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಕೆಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಂಟ್ರಲ್ ಏಜೆನ್ಸಿಸ್ ಗಳು ಈ ಕೃತ್ಯ ಮಾಡುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಐಟಿ, ಇಡಿ ಅಥವಾ ಸಿಬಿಐ ಮಾಡುತ್ತಿದೆಯೇ ಎಂಬುದು ಗೊತ್ತಿಲ್ಲ. ಅದೆಲ್ಲಾ ತಿಳಿದ ಮೇಲೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದರು.ಕೇಂದ್ರ ಸರ್ಕಾರ ಸಿಬಿಐ, ಐಟಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ನಾವು ಅನೇಕ ಬಾರಿ ಆರೋಪಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಚಲನವಲನಗಳನ್ನು ನೋಡಲಾಗುತ್ತಿದೆ ಎಂದು ಕಾಣುತ್ತೆ. ಅದಕ್ಕಾಗಿ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಪರಿಶೀಲನೆ ನಂತರ ಎಲ್ಲವೂ ತಿಳಿಯಲಿದೆ ಎಂದರು.

 

 


 

11  ಗಂಟಲಲ್ಲಿ ಚಕ್ಕುಲಿ ಸಿಕ್ಕಿಕೊಂಡು ಮಗು ಸಾವು
 ಅಕ್ಟೋಬರ್-31
ಮಂಗಳೂರು : ಗಂಟಲಲ್ಲಿ ಚಕ್ಕುಲಿ ಸಿಕ್ಕಿಕೊಂಡು ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗೇರುಕಟ್ಟೆಯ ನಿವಾಸಿ ವಿಠಲ್ ಎಂಬುವವರ ಪುತ್ರ ಆರುಷ್ ಸಾವಿಗೀಡಾಗಿರುವ ದುರ್ದೈವಿ, ಪೋಷಕರು ನೀಡಿದ್ದ ಚಕ್ಕುಲಿ ಬಾಯಿಗೆ ಹಾಕಿಕೊಂಡಾಗ ಮಗುವಿನ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು ಮಗು ಸಾವನ್ನಪ್ಪಿದೆ.

 

ರರ    ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ
 ಅಕ್ಟೋಬರ್-30
ಚಿಕ್ಕಮಗಳೂರು : ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ರಕ್ಷಣೆ ಒದಗಿಸುವ ಮೂಲಕ ದಲಿತರಿಗೆ ಸಾಮಾಜಿಕ ನ್ಯಾಯ ನೀಡಿ ವಿವಿಧ ಭೇಡಿಕೆ ಈಡೇರಿಸಿಕೊಡುವಂತೆ ಒತ್ತಾಯಿಸಿ ದಲಿತ-ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಸೋಮವಾರ ನಗರದ ಆಝಾದ್ ಪಾರ್ಕ್ನಲ್ಲಿ ಬೃಹತ್ ಧರಣಿ ನಡೆಸಿ ಡಿಸಿ ಮೂಲಕ ಸಮಾಜ ಕಲ್ಯಾಣ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿತು.
ಹಾದಿಹಳ್ಳಿ ಗ್ರಾಮದಲ್ಲಿ ಈ ಹಿಂದೆ ನಿಗದಿಪಡಿಸಿದ್ದ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ ಕೊಡಬೇಕು. ಹಾದಿಹಳ್ಳಿ ದಲಿತರಿಗೆ ನಿವೇಶನ ಮೂಲಭೂತ ಸೌಲಭ್ಯವನ್ನು ನೀಡಬೇಕು. ದಲಿತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಮಳಲೂರು ಗ್ರಾಪಂ ಸದಸ್ಯ ಪ್ರಸನ್ನಗೌಡ ಎಂಬವರ ಗ್ರಾಪಂ ಸದಸ್ಯತ್ವ ರದ್ದುಪಡಿಸಬೇಕು. ಹಾದಿಹಳ್ಳಿ ಘಟನೆಯಲ್ಲಿ ಮೇಲ್ವರ್ಗದವರಿಗೆ ನೆರವಾಗುತ್ತಿರುವ ಅಧಿಕಾರಿಗಳನ್ನು ತಕ್ಷಣ ಅಮಾಮತ್ತುಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಾದ್ಯಂತ ಎಲ್ಲಾ ಅಂಬೇಡ್ಕರ್ ಭವನ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ನಿವೇಶನ ರಹಿತರಿಗೆ ತಕ್ಷಣ ನಿವೇಶನ ಒದಗಿಸಿಕೊಡಬೇಕು. ಫಾರಂ ನಂ.50, 53ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ಮಂಜೂರಾತಿಯನ್ನು ಮಾಡಬೇಕು. ಭೂಹೀನ ಬಡವರು ಮತ್ತು ದಲಿತರಿಗೆ ಮೊದಲ ಆದ್ಯತೆ ನೀಡಬೇಕು. ವಜಾಗೊಳಿಸಿರುವ ಅರ್ಜಿಯನ್ನು ಮರುಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಭೂಮಾಲಿಕರು ದಲಿತರಿಗೆ ಮೋಸ ಮಾಡಿ ಪಡೆದಿರುವ ಭೂಮಿಯನ್ನು ವಾಪಾಸ್ ಕೊಡಿಸಬೇಕು. ಪ್ರತಿ ಗ್ರಾಮಗಳಿಗೂ ಕಡ್ಡಾಯವಾಗಿ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಪಿಟಿಸಿಎಲ್ ಕಾಯ್ದೆ ಅನುಷ್ಠಾನ ಜಾರಿಯಾಗಬೇಕು. ಜನರ ಸಂವಿಧಾನಬದ್ಧ ಹಕ್ಕನ್ನು ಕಿತ್ತುಕೊಳ್ಳದಂತೆ ಕಾನೂನು ರೂಪಿಸಬೇಕು. ಪಂಚಯವಳ್ಳಿ ಸ.ನಂ.218ರಲ್ಲಿ ಒತ್ತುವರಿ ತೆರವುಗೋಲಿಸಿ ಸ್ಥಳೀಯ ಕಲ್ಲುಗುದ್ದೆ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಕಸಬಾ ಹೋಬಳಿ ದಂಟರಮಕ್ಕಿ ಗ್ರಾಮದ ಭೂಗಳ್ಳರಿಂದ ಒತ್ತುವರಿಯಾಗಿರುವ ಕೃಷಿ ಭೂಮಿ ನೀರುಗಾಲುವೆ ಜಾಗ ತೆರವುಗೊಳಿಸುವಂತೆ ಧರಣಿನಿರತರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಧರಣಿನಿಯಲ್ಲಿ ಡಿಎಸ್ಪಿಒ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಗೌಸ್ ಮೊಹಿದ್ದೀನ್, ಕೆ.ಪಿ.ರಾಜರತ್ನಂ, ಲಕ್ಷಣ್, ಮಂಜುನಾಥ್, ಕೃಷ್ಣಮೂರ್ತಿ, ಗಣೇಶ್, ಅಂಗಡಿ ಚಂದ್ರು ಮತ್ತಿತರರಿದ್ದರು.

  

gg 6ನೇ ವೇತನ ಶಿಫಾರಸ್ಸು ಅನುಷ್ಠಾನಕ್ಕೆ ಪ್ರತಿಭಟನೆ
ಅಕ್ಟೋಬರ್.26
ಚಿಕ್ಕಮಂಗಳೂರು: ಆರನೇ ವೇತನ ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘದವತಿಯಿಂದ ಬುಧವಾರ ತರೀಕೆರೆಯಲ್ಲಿ ಪ್ರತಿಭಟನೆ ನಡೆಯಿತು.
ನೆರೆ ರಾಜ್ಯದ ಸರಕಾರಿ ನೌಕರರಿಗೂ ರಾಜ್ಯ ಸರಕಾರಿ ನೌಕರರ ವೇತನದಲ್ಲಿ ತಾರತಮ್ಯವಿದ್ದು, ನೆರೆ ರಾಜ್ಯದವರು ಕೇಂದ್ರಸರಕಾರದ ವೇತನ ಆಯೋಗದ ವರದಿ ಅನುಸರಿಸಿ ವೇತನ ನೀಡಿದರೆ ನಮ್ಮ ರಾಜ್ಯದಲ್ಲಿ ವೇತನ ಪರಿಷ್ಕರಣೆಯಲ್ಲಿ ತಾರತಮ್ಯತೆಯಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
ಡಿಸೆಂಬರ್ ಅಂತ್ಯದೊಳಗೆ 6ನೇ ವೇತನ ಆಯೋಗದ ಅನುಷ್ಠಾನವಾಗಬೇಕು ಮತ್ತು ತಕ್ಷಣನ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಸರಕಾರಿ ನೌಕರರು ನೀಡಿದ ಮನವಿಯನ್ನು ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ಗೋವಿಂದಪ್ಪನವರಿಗೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಚಂದ್ರಪ್ಪ, ಮತ್ತಿತರ ಪದಾಧಿಕಾರಿಗಳು, ನೌಕರವರ್ಗದ ಶಿವರುದ್ರಯ್ಯ, ಉಪನ್ಯಾಸಕ ರುದ್ರೇಶ್ ಮತ್ತಿತರರು ಪಾಲ್ಗೊಂಡಿದ್ದರು

  

        ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದು ಸಿಎಂ ಸ್ವಂತ ವಿಚಾರ
ಅಕ್ಟೋಬರ್.24
ಚಿಕ್ಕಮಗಳೂರು: ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದು ಮುಖ್ಯಮಂತ್ರಿಗಳ ವೈಯಕ್ತಿಕ ವಿಚಾರ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಹೇಳಿದ್ದಾರೆ.
ಸಿಎಂ ಮಾಂಸ ತಿಂದು ಧರ್ಮಸ್ಥಳ ದೇವರ ದರ್ಶನ ವಿಚಾರಕ್ಕೆ ಸಂಬಂಧಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಸಿಎಂ ಸಿದ್ದರಾಮಯ್ಯ ಅವರೇನು ದೈವ ಭಕ್ತರಲ್ಲ. ಸಿದ್ದರಾಮಯ್ಯ ಯಾವಾಗಲೂ ಪರಂಪರೆ, ಆಚರಣೆ, ಧರ್ಮದ ವಿರೋಧಿ. ಅವರ ನಡೆನುಡಿಗಳು ಬಗ್ಗೆ ನಾವೇನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಮಾಂಸ ತಿಂದು ಹೋಗಲಿ ಅಥವಾ ಮಾಂಸ ಕೊರಳಿಗೆ ನೇತುಹಾಕಿಕೊಂಡು ಹೋಗಲಿ ನಮಗೆ ಬೇಜಾರಿಲ್ಲ. ನಮ್ಮ ದೇವರುಗಳು ಕೂಡ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತೇಜಸ್ವಿನಿ ಹೇಳಿದರು.

  

     

ಸಂಭ್ರದ ದೀಪಾವಳಿ ಆಚರಣೆ

ಅಕ್ಟೋಬರ್:18

ಚಿಕ್ಕಮಗಳೂರು: ರಾಜ್ಯದಾದ್ಯಂತ ಸಂಭ್ರದಿಂದ ದೀಪಾವಳಿ ಆಚರಿಸುವಲ್ಲಿ ಜನರು ತಯಾರಿ ನಡೆಸುತ್ತಿದ್ದಾರೆ. ಇಲ್ಲಿನ ದೇವೀರಮ್ಮ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ದೇವೀರಮ್ಮ ಬೆಟ್ಟಕ್ಕೆ ಬಂದಿದ್ದಾರೆ. ಬುಧವಾರ ಬೆಳಿಗ್ಗೆ ಭಕ್ತರು ಬೆಣ್ಣೆ-ಬಟ್ಟೆ ಕೈಂಕರ್ಯ ನೆರವೇರಿಸಿದರು. ಅಲ್ಲದೆ, ದೇವಿರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Ads
;