ದೂರವಾಣಿ : 080-69999676
ಇಮೇಲ್ : Info@Vijayataranga.com


 

    12

 ಹೆಗ್ಡೆ ಕೊಳಕು ಮಾತು : ಆಂಜನೇಯ

 ಡಿಸೆಂಬರ್ 25

 ಚಿತ್ರದುರ್ಗ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಬರೇ ಕೊಳಕು ಮಾತನಾಡುತ್ತಾರೆ. ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಚಿವ ಆಂಜನೇಯ ಹೇಳಿದ್ದಾರೆ. ಅಪ್ಪ-ಅಮ್ಮ ಇಲ್ಲದವರು ಎಂದು ಜಾತ್ಯಾತೀತರ ಬಗ್ಗೆ ಹೇಳಿದ್ದು ತಪ್ಪು, ಭಾರತದ ಸಂವಿಧಾನವನ್ನು ಯಾರು ಬದಲಿಯಿಸಲು ಸಾಧ್ಯವಿಲ್ಲ, ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಾಮಾಜಿಕ ನ್ಯಾಯಾದ ಸಂವಿಧಾನ ರಚಿಸಿದ್ದಾರೆ, ಅದರಂತೆ ಜಾತಿಗಣತಿ ಮಾಡಿಸಿ ಸಾಮಾಜಿಕ ನ್ಯಾಯದಡಿ ಒಳ ಮೀಸಲಾತಿ ಕೊಡಿಸುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದರು. ಇನ್ನು ವೀರಶೈವ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವೀರಶೈವರು ಮತ್ತು ಲಿಂಗಾಯತರು ಒಟ್ಟಾಗಿ ಬರುವಂತೆ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಒಟ್ಟಾಗಿ ಬಂದರೆ ನಮ್ಮ ಸರ್ಕಾರ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲಿದೆ ಎಂದು ತಿಳಿಸಿದರು.

 

     12

 ಅತ್ಯಾಚಾರಕ್ಕೆ ಒಳಗಾದ ಒಂಭತ್ತು ವರ್ಷದ ಬಾಲಕಿ

 ಡಿಸೆಂಬರ್-25

 ಚಿತ್ರದುರ್ಗ: ಒಂಭತ್ತು ವರ್ಷದ ಬಾಲಕಿಯನ್ನು ಚಾಕೊಲೆಟ್ ಕೊಡಿಸುವ ನೆಪದಲ್ಲಿ ಕರೆದೊಯ್ದ ಕಾಮುಕ ಆಕೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ವಿಷಯವನ್ನು ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದನೆಂದು ಬಾಲಕಿ ತಿಳಿಸಿದ್ದಾಳೆ. ಸಂತ್ರಸ್ತ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಮುಕನ ಬೇಟೆಗೆ ಮುಂದಾಗಿದ್ದಾರೆ.

 

    56 

ಕಾಡಾನೆ ದಾಳಿ ರೈತನಿಗೆ ಗಂಭೀರ ಗಾಯ

 ಡಿಸೆಂಬರ್-6

 ಚಿತ್ರದುರ್ಗ: ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿ ಆಯಿತೋಳು ಗ್ರಾಮದಲ್ಲಿ ನಡೆದಿದೆ.ಗಾಯಾಳುವನ್ನು ಕಾಟಪ್ಪ (60) ಎಂದು ಗುರುತಿಸಲಾಗಿದೆ. ಕಾಟಪ್ಪ ಇಂದು ಬೆಳಗ್ಗೆ ಜಮೀನಿಗೆ ಹೋದಾಗ ಕಾಡಾನೆ ದಾಳಿ ನಡೆಸಿದ್ದು, ವ್ಯಕ್ತಿಯ ಹೊಟ್ಟೆಯಿಂದ ಕರಳು ಕಿತ್ತು ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಕಾಟಪ್ಪಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶಾಸಕ ಜಿ.ಹೆಚ್, ತಿಮ್ಮಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ.

 

 

44   ಆನೆಗಳು ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ
 ಡಿಸೆಂಬರ್-5
 ಚಿತ್ರದುರ್ಗ : ಚಿತ್ರದುರ್ಗದ ತಿಮ್ಮಪ್ಪಯ್ಯನಹಳ್ಳಿ ಬಳಿ ಎರಡು ಆನೆಗಳು ಇಂದು ಬೆಳಗ್ಗೆ ಪ್ರತ್ಯಕ್ಷವಾಗಿದ್ದು    ಜನರಲ್ಲಿ ಅತಂಕ ಮನೆ ಮಾಡಿದೆ.
 ಚಿತ್ರದುರ್ಗ ಜಿಲ್ಲೆ ಚಳ್ಳಕರೆರೆ ತಾಲೂಕಿನ ಗ್ರಾಮದ ಜಮೀನದಲ್ಲಿ ಇಂದು ಎರಡು ಆನೆಗಳು  ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲದೆ ಜಮೀನನಲ್ಲಿದ್ದ ಗಿಡಮರಗಳನ್ನು ಹಾಳು ಮಾಡುತ್ತಿದೆ. ಸಾರ್ವಜನಿಕರು  ಅದನ್ನು ಜಮೀನಿನಿಂದ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಬೆಳಗ್ಗೆಯಿಂದಲೇ ನೂರಾರು ಜನರು ಆನೆ  ನೋಡಲು ಜಮಾಯಿಸಿದ್ದಾರೆ.
 ಜನರಿಗೆ ಹೆದರಿ ಆನೆಗಳು ಜಮೀನಿನ ತುಂಬಾ ಓಡಾಡಿ ಬೆಳೆ ನಾಶ ಮಾಡುತ್ತಿವೆ. ಸ್ಥಳಕ್ಕೆ  ಅರಣ್ಯಾಧಿಕಾರಿಗಳು ಭೇಟಿ ನೀಡಿ. ಆನೆಗಳನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಪ್ರಯತ್ನ  ನಡೆಯುತ್ತಿದೆ. ಆನೆಗಳು ಗುಂಪಿನೊಂದಿಗೆ ಬಂದಿದೆ ಆದರೆ ಎರಡು ಆನೆಗಳು ಅದರಿಂದ ತಪ್ಪಿಸಿಕೊಂಡು  ಹಳ್ಳಿಯೊಳಗೆ ಬಂದಿದೆ ಎಂದು ಹೇಳಲಾಗುತ್ತಿದೆ.

 

44  ಆಟೋ ಚಾಲಕರಿಂದ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ
 ಡಿಸೆಂಬರ್-2
 ಚಿತ್ರದುರ್ಗ: ಸರ್ಕಾರಿ ಬಸ್ ಚಾಲಕನೋರ್ವನ ಮೇಲೆ ಆಟೋ ಚಾಲಕರು ಹಲ್ಲೆ ಮಾಡಿರುವ ಘಟನೆ  ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ನಡೆದಿದೆ. ರಸ್ತೆ ಮಧ್ಯದಲ್ಲೇ ಇಬ್ಬರೂ ಕೂಡ ಕುತ್ತಿಗೆ ಹಿಡಿದು  ಕುಸ್ತಿಯಾಡಿಕೊಂಡಿದ್ದಾರೆ. ನಗರ ಸಾರಿಗೆ ಚಾಲಕ ಲಕ್ಷ್ಮಣ್ ಮೇಲೆ ಆಟೋ ಚಾಲಕ ರಾಜು ಹಾಗೂ  ರವಿ ಮತ್ತು ಅವರ ಸಹಚರರಿಂದ ಹಲ್ಲೆ ನಡೆದಿದೆ. ಮೂಖ ಪ್ರೇಕ್ಷಕರಂತೆ ಪ್ರಯಾಣಿಕರು ಕುಸ್ತಿಯನ್ನು  ನೋಡಿದ್ದಾರೆ.
 ಐಯುಡಿಪಿ ಬಡಾವಣೆಯ 10ನೇ ಕ್ರಾಸ್ ಬಸ್ ನಿಲ್ದಾಣದಲ್ಲಿ ಬಸ್'ನಿಂದ ಪ್ರಯಾಣಿಕರು ಇಳಿಯುತ್ತಿದ್ದ  ಹಿನ್ನೆಲೆಯಲ್ಲಿ ರಸ್ತೆ ಬದಿ ಬಸ್ಸನ್ನು ನಿಲ್ಲಿಸಿದ್ದರಿಂದ ಆಕ್ರೋಶಗೊಂಡ ಆಟೋ ಚಾಲಕರು ಬಸ್ ಚಾಲಕನಿಗೆ  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮದ್ಯಪಾನ ಮಾಡಿದ್ದ ಆಟೋ ಚಾಲಕರು ಮನಬಂದಂತೆ  ವರ್ತಿಸಿದ್ದಾರೆ.

 

   ಗಗ ದುರ್ಗದ ಅಭ್ಯರ್ಥಿ ಶಶಿಕುಮಾರ್ ಚುನಾವಣೆಗೆ ಸ್ಪರ್ಧೆ
ನವೆಂಬರ್.29
ಚಿತ್ರದುರ್ಗ: ಮಾಜಿ ಸಂಸದ, ನಟ ಶಶಿಕುಮಾರ್ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗುತ್ತಿದ್ದಾರೆ. 'ಯಾವ ಪಕ್ಷದಿಂದ ಸ್ಪರ್ಧಿಸಬೇಕು' ಎಂದು ಇನ್ನೂ ತೀರ್ಮಾನಿಸಿಲ್ಲ ಎಂದು ಅವರು ಹೇಳಿದ್ದಾರೆ.ಚಳ್ಳಕೆರೆ ಪಟ್ಟಣದಲ್ಲಿ ಮಂಗಳವಾರ ಮಾತನಾಡಿದ ಶಶಿಕುಮಾರ್, 'ಮುಂದಿನ ವಿಧಾನಸಭೆ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ತೀರ್ಮಾನ ಕೈಗೊಂಡಿಲ್ಲ' ಎಂದು ಹೇಳಿದರು.'ಸದ್ಯ, ಕುರುಕ್ಷೇತ್ರ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಒಂದು ತಿಂಗಳಿನಲ್ಲಿ ಚಿತ್ರೀಕರಣ ಮುಗಿಯಲಿದೆ. ನಂತರ ಕ್ಷೇತ್ರ ಪ್ರವಾಸ ಕೈಗೊಂಡು, ಚುನಾವಣೆಗೆ ನಿಲ್ಲುವ ಕುರಿತು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ' ಎಂದು ಶಶಿಕುಮಾರ್ ತಿಳಿಸಿದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಶಶಿಕುಮಾರ್ 13ನೇ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಆದ್ದರಿಂದ, ಕಾಂಗ್ರೆಸ್ ಸೇರಿದ್ದರು.2008ರ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 42,302 ಮತಗಳನ್ನು ಪಡೆದು ಬಿಜೆಪಿಯ ತಿಪ್ಪೇಸ್ವಾಮಿ ಅವರ ವಿರುದ್ಧ ಸೋಲು ಕಂಡಿದ್ದರು. ನ.28ರಂದು ಬಿಜೆಪಿ ನಾಯಕರೊಂದಿಗೆ ಚಳ್ಳಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.ನಿರ್ಮಾಪಕ ಮುನಿರತ್ನ ಅವರು ಬಹುಕೋಟಿ ವೆಚ್ಚದಲ್ಲಿ ಕುರುಕ್ಷೇತ್ರ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹುತಾರಾಗಣದ ಚಿತ್ರದಲ್ಲಿ ಶಶಿಕುಮಾರ್ ಧರ್ಮರಾಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

223  ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ
 ನವೆಂಬರ್-27
ಚಿತ್ರದುರ್ಗ : ಹೊಸದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದದ್ದು, ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.
ಹೊಸದುರ್ಗ ನಗರದ ಹೊರವಲಯದಲ್ಲಿ ಟ್ರಾಕ್ಟರ್ ಉರುಳಿ ಬಿದ್ದು ಪ್ರದೀಪ್ ಎಂಬುವರು ಗಾಯಗೊಂಡಿದ್ದರು. ಆವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದಾಗ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಪ್ರದೀಪ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ಆಸ್ಪತ್ರೆಯ ಕಿಟಕಿ ಗಾಜು ಹಾಗೂ ಬಾಗಿಲುಗಳು ಧ್ವಂಸವಾಗಿದ್ದು ಹಲವು ಪೀಠೋಪಕರಣಗಳು ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  

11  ಟಿಪ್ಪು ಸಮಾಜಕ್ಕೆ ನೀಡಿದ ಕೊಡುಗೆ ಏನು: ಪ್ರತಾಪ್ ಸಿಂಹ
 ನವೆಂಬರ್-8
ಚಿತ್ರದುರ್ಗ: ಐತಿಹಾಸಿಕ ಕೋಟೆಯ ಮೇಲೆ ದಾಳಿ ನಡೆಸಿ ವೀರ ವನಿತೆ ಒನಕೆ ಓಬವ್ವನನ್ನು ಚೂರಿಯಿಂದ ಇರಿದ ಹೈದರಾಲಿಯ ಮಗ, ಮದಕರಿ ನಾಯಕನನ್ನು ವಿಷ ಹಾಕಿ ಸಾಯಿಸಿದ ಟಿಪ್ಪು ಸುಲ್ತಾನರ ಜಯಂತಿಯನ್ನು ನಾವು ಏಕೆ ಮಾಡಬೇಕು ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವ ಅವರು ನಾವು ಕಳೆದ ಮೂರು ವರ್ಷಗಳಿಂದಲೂ ಶಾಂತಿಯುತವಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾ ಬಂದಿದ್ದೇವೆ. ಆದರೆ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಟಿಪ್ಪು ಜಯಂತಿ ಆಚರಿಸುತ್ತಿದೆ. ಕನ್ನಡ ಸಂಸ್ಕಂತಿ ಇಲಾಖೆಗೆ ಟಿಪ್ಪು ನೀಡಿದ ಕೊಡುಗೆ ಏನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಬೇಕು ಎಂದಿದ್ದಾರೆ.

 

                    

ಸಿದ್ದರಾಮಯ್ಯರನ್ನು ಭಯೋತ್ಪಾದಕರಿಗೆ ಹೋಲಿಸಿದ: ಕಲ್ಯಾಣ ಸಚಿವ

ಅಕ್ಟೋಬರ್.30
ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯರನ್ನು ಭಯೋತ್ಪಾದಕರಿಗೆ ಹೋಲಿಸಿರುವವರು ದರೋಡೆಕೋರರು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.
''ಸಿಎಂ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಯಾರೇ ಆಗಲಿ ಎಚ್ಚರಿಕೆಯಿಂದ ಮಾತನಾಡಬೇಕು. ಅಸ್ತಿತ್ವ ಇಲ್ಲದವರು ಹೀಗೆಲ್ಲ ಹೇಳುತ್ತಾರೆ,'' ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು.
''ನಾವು ಟಿಪ್ಪು ಜಯಂತಿ ಆಚರಣೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾರು ಏನೇ ಹೇಳಿದರೂ ಆಚರಣೆ ನಿಲ್ಲುವುದಿಲ್ಲ,'' ಎಂದರು.
''ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಈ ಸತ್ಯ ಅವರಿಗೆ ತಿಳಿದು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅನಗತ್ಯ ವಿಚಾರದಲ್ಲಿ ಪ್ರಚೋದನೆ ನೀಡುತ್ತಿದ್ದಾರೆ. ಮುಂದೆಯೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ. ಮುಂದಿನ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ,'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

  

  gg ಹುಚ್ಚು ನಾಯಿ ಕಡಿತದಿಂದ ಕಂಗಾಲಾದ ಜನ
ಅಕ್ಟೋಬರ್.28
ಚಿತ್ರದುರ್ಗ : ಹಿರಿಯೂರು ತಾಲೂಕಿನ ಯಲ್ಲದಕೆರೆ ಪಂಚಾಯಿತಿ ವ್ಯಾಪ್ತಿಯ ಕೆ.ಕೆ. ಹಟ್ಟಿ ಗ್ರಾಮದಲ್ಲಿ ಹುಚ್ಚು ನಾಯಿವೊಂದು ಶುಕ್ರವಾರ 16ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ.
ಗ್ರಾಮದ ಈಶ್ವರಪ್ಪ, ನಾಗರಾಜ್, ಬುಳ್ಳಪ್ಪ, ಗೋವಿಂದರಾಜ್, ಪುರುಷೋತ್ತಮ, ಲಕ್ಷ್ಮಣಜ್ಜ, ಮಹಾಲಿಂಗಪ್ಪ, ವಿಶಾಲಮ್ಮ, ಕೃಷ್ಣಪ್ಪ, ಅರ್ಪಿತಾ ಹಾಗೂ ಮತ್ತಿತರರು ಗಾಯಗೊಂಡಿದ್ದು, ಹಿರಿಯೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಹುಚ್ಚು ನಾಯಿ ಉಪಟಳ ಹೆಚ್ಚಿದ ಪರಿಣಾಮ ಆಕ್ರೋಶಗೊಂಡ ಗ್ರಾಮಸ್ಥರು ಹೊಡೆದು ಸಾಯಿಸಿದ್ದಾರೆ. ಗ್ರಾಮದಲ್ಲಿ ಹುಚ್ಚುನಾಯಿ ಕಡಿತದ ಭೀತಿ ಕಡಿಮೆ ಆಗಿಲ್ಲ. ಯಾವ ನಾಯಿಯನ್ನೂ ಕಂಡರೂ ಹುಚ್ಚುನಾಯಿ ಇರಬಹುದೆಂದು ಭಾವಿಸಿ, ಹೆದರುವಂತ ಸ್ಥಿತಿ ಇದೆ.

  

rr        ಹೆಣ್ಣು ಮಗುವನ್ನು ಬಿಟ್ಟು ಹೋದ ಪೋಷಕರು
 ಅಕ್ಟೋಬರ್-24
ಚಿತ್ರದುರ್ಗ: ತಿಪ್ಪೇರುದ್ರಸ್ವಾಮಿ ದೇವಾಲಯದ ಬಳಿ ಪೋಷಕರು ಉದ್ದೇಶಪೂರ್ವಕವಾಗಿ 11 ತಿಂಗಳ ಮಗುವನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಪುರಾಣ ಪ್ರಸಿದ್ಧ ತಿಪ್ಪೇರುದ್ರಸ್ವಾಮಿ ದೇವಾಲಯದ ಬಳಿ ಹೆಣ್ಣು ಮಗು ಅನಾಥವಾಗಿರುವುದನ್ನು ಗಮನಿಸಿ ದೇವಾಲಯದ ಆಡಳಿತ ಮಂಡಳಿ ಮಗುವನ್ನು ವಶಕ್ಕೆ ಪಡೆದಿದ್ದಾರೆ.
ರಾತ್ರಿ ದೇಗುಲಕ್ಕೆ ಭೇಟಿ ನೀಡಿದ್ದ ಮಹಿಳೆ ಮಗುವನ್ನು ಬಿಟ್ಟು ಹೋಗಿರುವ ಶಂಕೆ ವ್ಯಕ್ತಪಡಿಸಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಸದ್ಯ ದೇವಾಲಯದ ಆಡಳಿತ ಮಂಡಳಿಯ ವಶದಲ್ಲಿ ಮಗುವಿದ್ದು, ಪೋಷಕರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

  

                                                                                                            

ಮೂವರು ಮಕ್ಕಳು ಶವವಾಗಿ ಪತ್ತೆ

ಅಕ್ಟೋಬರ್-21

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಹೆಗ್ಗೆರೆ ಗ್ರಾಮದ ಕೆರೆಯಲ್ಲಿ ನಿನ್ನೆ ಈಜಾಡಲು ಹೋಗಿ ನೀರುಪಾಲಾಗಿದ್ದ ಮೂವರು ಮಕ್ಕಳ ಮೃತದೇಹಗಳು ಇಂದು ಪತ್ತೆಯಾಗಿವೆ.

ಹೆಗ್ಗೆರೆ ಗ್ರಾಮದ ಕೆಂಪರಾಜ್ (14), ಕಾಂತರಾಜ್ (14), ಮಹಾಂತೇಶ್ ನೀರುಪಾಲಾದ ದುರ್ದೈವಿಗಳು. ನಿನ್ನೆ ಮೂವರು ಮಕ್ಕಳು ಕೆರೆಯಲ್ಲಿ ಈಜಾಡಲು ತೆರಳಿದ್ದರು. ಈಜಲು ಕೆರೆಗೆ ಇಳಿದ ಮಕ್ಕಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮಕ್ಕಳ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದರು. ನಿನ್ನೆಯಿಂದ ಇಂದು ಮುಂಜಾನೆಯವರೆಗೂ ಶೋಧ ಕಾರ್ಯ ನಡೆಸಿದ್ದು, ಇಂದು ಮುಂಜಾನೆ ಮೂವರು ಮಕ್ಕಳ ಮೃತದೇಹವನ್ನು ಹೊರತೆಗೆದಿದ್ದಾರೆ.

ಘಟನೆ ಸಂಬಂಧ ಶ್ರೀರಾಂಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಾಗಿದೆ. ಮಕ್ಕಳ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.

Ads
;