ದೂರವಾಣಿ : 080-69999676
ಇಮೇಲ್ : Info@Vijayataranga.com


 

11  ಬಂದ್ ಗೆ ಉತ್ತಮ ಪ್ರತಿಕ್ರಿಯೆ
 ಡಿಸೆಂಬರ್-25
ಮೂಡಿಗೆರೆ: ಇತ್ತೀಚೆಗೆ ವಿಜಯಪುರದಲ್ಲಿ ನಡೆದ 9ನೆ ತರಗತಿಯ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಸೋಮವಾರ ಮೂಡಿಗೆರೆ ಬಂದ್ ಗೆ ವಿವಿಧ ಸಂಘಟನೆಗಳು ನೀಡಿದ್ದ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗಿನಿಂದಲೇ ವರ್ತಕರು ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೆಡಿಕಲ್, ಪೆಟ್ರೋಲ್ ಬಂಕ್ ನ್ನು ಹೊರತುಪಡಿಸಿದರೆ ಬೇರೆ ಯಾವುದೇ ಅಂಗಡಿಗಳು ಬಾಗಿಲುಗಳು ತೆರೆದಿಲ್ಲ.
ಪ್ರತಿನಿತ್ಯ ಜನಜಂಗುಳಿಯಿಂದ ಇರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಎಂ.ಜಿ.ರಸ್ತೆ, ಕೆ.ಎಂ. ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿದೆ. ಆದರೆ ವಾಹನ ಸಂಚಾರ ಎಂದಿನಂತಿದೆ.
11:30ರ ಸುಮಾರಿಗೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ವಿವಿಧ ಸಂಘಟನೆಗಳ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಮೆರವಣಿಗೆ ಹೊರಟಿದ್ದು, ದಾನವ್ವ ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 

 

                                                             

ಪಾಕ್ ಗೆ ಹೋಗಲ್ಲ, ಭಾರತದಲ್ಲೇ ಇರ್ತೇವೆ: ಫಾರೂಕ್

ಡಿಸೆಂಬರ್- 11 

ತುಮಕೂರು: ಈ ದೇಶದಲ್ಲಿರುವ ಮುಸ್ಲಿಮರು ಎಂದಿಗೂ ಭಾರತದ ಮುಸಲ್ಮಾನರು. ಅವರೆಂದೂ ಚೀನಾ, ಪಾಕಿಸ್ತಾನದವರಲ್ಲ. ನಾವು ಸುಳ್ಳು ಹೇಳುತ್ತಿಲ್ಲ. ಅಂದಿನಿಂದ ಇಂದಿನವರೆಗೆ ನಾವೆಲ್ಲರೂ ಒಂದೇ ಜಾತಿಯಲ್ಲಿ ಬದುಕುತ್ತಿದ್ದೇವೆ. ಇದಕ್ಕೆ ಸಾಕ್ಷಿ ನೀಡುವ ಅಗತ್ಯವಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಸಮಾಜಘಾತುಕ ಶಕ್ತಿಗಳು ನಮ್ಮನ್ನು ವಿವಿಧ ರೀತಿಯಲ್ಲಿ ವಿಭಜಿಸಿ, ಒಂದಾಗಲು ಬಿಡುತ್ತಿಲ್ಲ. ಮುಸ್ಲಿಮರು ಹಿಂದುತ್ವದ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಅದರಲ್ಲಿಯೂ ಮೂಲ ನಿವಾಸಿಗಳು ವಾಸವಾಗಿರುವ ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ಇತರ ವರ್ಗದವರನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ನಾವು ಎಂದಿಗೂ ಪಾಕಿಸ್ತಾನಕ್ಕೆ ಹೋಗುವವರಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಾವು ಪಾಕಿಸ್ತಾನದಿಂದ ಪಡೆದುಕೊಳ್ಳಬೇಕಿದೆ. ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಕೇವಲ 12 ಗಂಟೆಯೊಳಗೆ ಬಗೆಹರಿಸಿಕೊಳ್ಳಬಹುದು. ಆದರೆ, ಅಗೋಚರ ಶಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿವಾದವನ್ನು ಜೀವಂತಗೊಳಿಸಿದ್ದಾರೆ ಎಂದು ವಿಷಾದಿಸಿದರು.
ಭಾರತ, ಪಾಕಿಸ್ತಾನ ವಿಭಜನೆಯಾದಾಗ ಬಹುತೇಕ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು. ಆದರೆ, ಕಾಶ್ಮೀರದ ಶೇ.99ರಷ್ಟು ಮುಸ್ಲಿಮರು ಗಾಂಧಿ, ನೆಹರೂ ಕೈಹಿಡಿದು ಭಾರತದಲ್ಲಿಯೇ ಉಳಿದರು. ಆದರೆ, ಇಂದು ಗಾಂಧಿಯನ್ನು ಗುಂಡಿಟ್ಟು ಕೊಂದ ಘೋಡ್ಸೆಗೆ ದೇವಾಲಯ ಕಟ್ಟಿರುವ ವ್ಯಕ್ತಿಗಳು ನಮ್ಮ ದೇಶಭಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಇವರಿಗೆ ಉತ್ತರ ನೀಡುವ ಅಗತ್ಯ ನಮಗಿಲ್ಲ. ಪ್ರತಿ ಬಾರಿಯೂ ಭಾರತ-ಪಾಕ್ ಯುದ್ಧ ನಡೆದಾಗ ಹೆಚ್ಚಿನ ಸಂಕಷ್ಟಕ್ಕೆ ಸಿಲುಕುವವರು ಮುಸ್ಲಿಮರು ಎಂದರು.

 

    123 

ಸಾಲ ವಾಪಸ್ ಕೊಡದಿದ್ದಕ್ಕೆ ಬೆರಳಿಗೆ ಕತ್ತರಿ

 ಡಿಸೆಂಬರ್- 11
ತುಮಕೂರು: ಸಾವಿರ ರೂಪಾಯಿ ಸಾಲ ವಾಪಸ್ ಕೊಡದೇ ಇದ್ದುದಕ್ಕೆ ವ್ಯಕ್ತಿಯೋರ್ವನ ಬೆರಳನ್ನೇ ಕತ್ತರಿಸಿದ ಅಮಾನುಷ ಘಟನೆ ತುಮಕೂರಿನಲ್ಲಿ ನಡೆದಿದೆ. ಘಟನೆಯಲ್ಲಿ ತುಮಕೂರು ತಾಲೂಕಿನ ನಿಡುಹೊಳಲು ಗ್ರಾಮದ ನಿವಾಸಿ ಶಿವಣ್ಣ ಎನ್ನುವವರು ಬೆರಳನ್ನು ಕಳೆದುಕೊಂಡಿದ್ದಾರೆ.
ಶಿವಣ್ಣ ಇದೇ ನಿಡುಹೊಳಲು ಗ್ರಾಮದ ಕುಮಾರ್ ಎನ್ನುವವರಿಂದ ಕಳೆದ 15 ದಿನದ ಹಿಂದೆ ಒಂದು ಸಾವಿರ ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಹಿಂದಿರುಗಿಸುವಂತೆ ನಿನ್ನೆ ಕುಮಾರ್ ಶಿವಣ್ಣಗೆ ತಾಕೀತು ಮಾಡಿದ್ದಾನೆ. ಆದರೆ ದುಡ್ಡು ಹೊಂದಿಸಲು ಆಗದೇ ಇದ್ದುದರಿಂದ ಇಂದು ಮರಳಿಸುವುದಾಗಿ ಹೇಳಿದ್ದಾನೆ. ಇದಕ್ಕೆ ಒಪ್ಪದ ಕುಮಾರ ಹಾಗೂ ಆತನ ಪತ್ನಿ ವೀಣಾ, ಶಿವಣ್ಣ ಜೊತೆ ಜಗಳ ಮಾಡಿದ್ದಾರೆ. ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಶಿವಣ್ಣನ ಬಲಗೈಯ ಮಧ್ಯದ ಬೆರಳು ತುಂಡಾಗಿ ಬಿದ್ದಿದೆ. ಅಲ್ಲದೆ ಎದೆ ಭಾಗಕ್ಕೂ ಏಟಾಗಿದ್ದು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

     123 

ಪಾಕ್ ಗೆ ಹೋಗಲ್ಲ, ಭಾರತದಲ್ಲೇ ಇರ್ತೇವೆ: ಫಾರೂಕ್

 ಡಿಸೆಂಬರ್- 11

 ತುಮಕೂರು: ಈ ದೇಶದಲ್ಲಿರುವ ಮುಸ್ಲಿಮರು ಎಂದಿಗೂ ಭಾರತದ ಮುಸಲ್ಮಾನರು. ಅವರೆಂದೂ ಚೀನಾ, ಪಾಕಿಸ್ತಾನದವರಲ್ಲ. ನಾವು ಸುಳ್ಳು ಹೇಳುತ್ತಿಲ್ಲ. ಅಂದಿನಿಂದ ಇಂದಿನವರೆಗೆ ನಾವೆಲ್ಲರೂ ಒಂದೇ ಜಾತಿಯಲ್ಲಿ ಬದುಕುತ್ತಿದ್ದೇವೆ. ಇದಕ್ಕೆ ಸಾಕ್ಷಿ ನೀಡುವ ಅಗತ್ಯವಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಸಮಾಜಘಾತುಕ ಶಕ್ತಿಗಳು ನಮ್ಮನ್ನು ವಿವಿಧ ರೀತಿಯಲ್ಲಿ ವಿಭಜಿಸಿ, ಒಂದಾಗಲು ಬಿಡುತ್ತಿಲ್ಲ. ಮುಸ್ಲಿಮರು ಹಿಂದುತ್ವದ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಅದರಲ್ಲಿಯೂ ಮೂಲ ನಿವಾಸಿಗಳು ವಾಸವಾಗಿರುವ ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ಇತರ ವರ್ಗದವರನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ನಾವು ಎಂದಿಗೂ ಪಾಕಿಸ್ತಾನಕ್ಕೆ ಹೋಗುವವರಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ನಾವು ಪಾಕಿಸ್ತಾನದಿಂದ ಪಡೆದುಕೊಳ್ಳಬೇಕಿದೆ. ಕಾಶ್ಮೀರ ಸಮಸ್ಯೆಯನ್ನು ಮಾತುಕತೆ ಮೂಲಕ ಕೇವಲ 12 ಗಂಟೆಯೊಳಗೆ ಬಗೆಹರಿಸಿಕೊಳ್ಳಬಹುದು. ಆದರೆ, ಅಗೋಚರ ಶಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿವಾದವನ್ನು ಜೀವಂತಗೊಳಿಸಿದ್ದಾರೆ ಎಂದು ವಿಷಾದಿಸಿದರು.
ಭಾರತ, ಪಾಕಿಸ್ತಾನ ವಿಭಜನೆಯಾದಾಗ ಬಹುತೇಕ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು. ಆದರೆ, ಕಾಶ್ಮೀರದ ಶೇ.99ರಷ್ಟು ಮುಸ್ಲಿಮರು ಗಾಂಧಿ, ನೆಹರೂ ಕೈಹಿಡಿದು ಭಾರತದಲ್ಲಿಯೇ ಉಳಿದರು. ಆದರೆ, ಇಂದು ಗಾಂಧಿಯನ್ನು ಗುಂಡಿಟ್ಟು ಕೊಂದ ಘೋಡ್ಸೆಗೆ ದೇವಾಲಯ ಕಟ್ಟಿರುವ ವ್ಯಕ್ತಿಗಳು ನಮ್ಮ ದೇಶಭಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಇವರಿಗೆ ಉತ್ತರ ನೀಡುವ ಅಗತ್ಯ ನಮಗಿಲ್ಲ. ಪ್ರತಿ ಬಾರಿಯೂ ಭಾರತ-ಪಾಕ್ ಯುದ್ಧ ನಡೆದಾಗ ಹೆಚ್ಚಿನ ಸಂಕಷ್ಟಕ್ಕೆ ಸಿಲುಕುವವರು ಮುಸ್ಲಿಮರು ಎಂದರು.

 

 

 

23  ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಎಲ್ಲಾ ಬ್ಯಾಂಕುಗಳ ಸಾಲ ಮನ್ನಾ
 ಡಿಸೆಂಬರ್-9
ತುಮಕೂರು : 'ಮುಂದಿನ 2018 ವಿಧಾನಸಬಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ ಮಾಡುವುದಾಗಿ'ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.
ತಮಕೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 'ಕಾಂಗ್ರೆಸ್ ಸರ್ಕಾರ ಸಹಕಾರಿ ಸಂಘಗಳ ಸಾಲ ಮನ್ನಾ ಮಾಡಿದರೂ ರಾಜ್ಯದಲ್ಲಿ ರೈತರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ, ಸಹಕಾರ ಗ್ರಾಮೀಣ ಬ್ಯಾಂಕುಗಳ ಸಾಲ ಮನ್ನಾ ಹಾಗು ಹೊಸ ಕೃಷಿ ಪದ್ಧತಿ ಅನುಷ್ಠಾನ ಮಾಡಲಾಗುವುದು' ಎಂದು ಹೇಳಿದರು.
ಡಿಸೆಂಬರ್ 10ರಂದು ತುಮಕೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಸಮಾವೇಶ, ಡಿಸೆಂಬರ್ 13ರಂದು ಬೆಂಗಳೂರಿನಲ್ಲಿ ಎಸ್ಸ್ ಎಸ್ಟ್ ಸಮಾವೇಶ, ಜನವರಿ 9ರಂದು ಮಂಗಳೂರಿನಲ್ಲಿ ಸಮಾವೇಶ ನಡೆಯಲಿದೆ ಎಂದರು.
ತುಮಕೂರು ನಗರದಿಂದಲೇ ಚುನಾವಣಾ ಪ್ರಚಾರದ ಆರಂಭವಾಗಲಿದೆ. ಡಿಸೆಂಬರ್ 15ಕ್ಕೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು. ತುಮಕೂರಿನ 11 ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

 

 

     45 

ನಿಲ್ಲದ ಕಾಮುಕರ ಅಟ್ಟಹಾಸ

ಡಿಸೆಂಬರ್-7

 ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತುಮಕೂರಿನಲ್ಲಿ ನಿನ್ನೆ ನಡೆದಿದೆ. 17 ವರ್ಷ ಬಾಲಕಿಯನ್ನು ಕರೆದೊಯ್ದ ಐದು ಜನ ಸ್ನೇಹಿತರು ತುಮಕೂರಿನ ಯಲ್ಲಾಪುರ ಸಮೀಪದಲ್ಲಿ ಸ್ಥಗಿತಗೊಂಡಿದ್ದ ಫ್ಯಾಕ್ಟಿಯಲ್ಲಿ ಅತ್ಯಾಚಾರವೆಸಗಿದ್ದಾರೆ. ಐದು ಜನ ಸ್ನೇಹಿತರು, ಹರೀಶ್, ಮಧು, ಕೇಶವ್, ಚಿದಾನಂದ, ಚಂದು ಅತ್ಯಾಚಾರ ಮಾಡಿದ ಆರೋಪಿಗಳು, ಆರೋಪಿಗಳು ಯಲ್ಲಾಪುರದ, ಅಂತರಸನಹಳ್ಳಿ, ತಿಮ್ಲಾಪುರ ಗ್ರಾಮದವರು ಎಂದು ತಿಳಿದುಬಂದಿದೆ. ಪ್ರಕರಣ ಯಲ್ಲಾಪುರದ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು,ಆರೋಪಿ ಹರೀಶ್ ಹಾಗೂ ಚಿದಾನಂದ ಅವರನ್ನು ಬಂಧಿಸಲಾಗಿದೆ, ಇನ್ನು ಮೂವರು ಆರೋಪಿಗಳ ಹುಡುಕಾಟ ಮುಂದುವರೆದಿದೆ.

 

 

 

555  ಬ್ಯಾಂಕ್ ನೋಟಿಸ್ ನೋಡಿ ಹೃದಯಾಘಾತದಿಂದ ಸಾವನ್ನಪ್ಪಿದ ರೈತ!
 ನವೆಂಬರ್-28
 ತುಮಕೂರು : ಬ್ಯಾಂಕಿನಿಂದ ಬಂದ ಸಾಲದ ನೋಟಿಸ್ ನೋಡಿ ರೈತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ  ತಾಲೂಕಿನ ಎಂ. ದಾಸರಹಳ್ಳಿಯಲ್ಲಿ ನಡೆದಿದೆ.
 ಬಡಯ್ಯ (65) ಸಾವನ್ನಪ್ಪಿದ ರೈತ. ಕೃಷಿ ಕೆಲಸಕ್ಕಾಗಿ ವಿವಿಧ ಬ್ಯಾಂಕುಗಳಿಂದ 6 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಬೆಳೆ  ಹಾನಿಯಾದ ಕಾರಣ ತೀವ್ರ ನಷ್ಟ ಅನುಭವಿಸಿದ್ದ ಕಾರಣ ಸಾಲ ತೀರಿಸಲು ಸಾಧ್ಯೂವಾಗಿರಲಿಲ್ಲ. ಸಾಲ ತೀರಿಸುವಂತೆ ಬಡಯ್ಯ  ಅವರಿಗೆ ಬ್ಯಾಂಕಿನಿಂದ ನೋಟಿಸ್ ಬಂದಿದೆ ಇದನ್ನು ನೋಡುತ್ತಿದ್ದಂತೆ ಹೃದಯಾಘಾತವಾಗಿದೆ.
 ತಕ್ಷಣ ಕುಟುಂಬದವರು ರೈತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೈತ  ಸಾವನ್ನಪ್ಪಿದ್ದಾರೆ. ಹೀಗಾಗಿ ರೈತನ ಸಾವಿಗೆ ಬ್ಯಾಂಕುಗಳೇ ಕಾರಣ ಎಂದು ವಿವಿಧ ರೈತ ಸಂಘಟನೆಗಳು ಆಸ್ಪತ್ರೆ ಮುಂದೆ  ಪ್ರತಿಭಟನೆ ನಡೆಸಿವೆ.

 

 

 

    

ಖಾಸಗಿ ಬಸ್ ಡಿಕ್ಕಿ 25 ಮಂದಿ ಗಾಯ

ನವೆಂಬರ್ 16
ತುಮಕುರು: ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಚಲಿಸುತ್ತಿದ್ದ ಕಂಟೇನರ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಶಿರಾ ಕಡೆಗೆ ತೆರಳುತ್ತಿದ್ದ ಹನುಮಾನ್ ಟ್ರಾನ್ಸ್ ಪೋರ್ಟ್ ಗೆ ಸೇರಿದ ಖಾಸಗಿ ಬಸ್ ಇದಾಗಿದ್ದು, ಹಿಂಬಂದಿಯಿಂದ ಕಂಟೇನರ್ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ತುಮಕೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

       

ಕಾಂಗ್ರೆಸ್ ಜಿಪಂ ಸದಸ್ಯನಿಂದ ಹೊಸ ಬಾಂಬ್

ನವೆಂಬರ್ -7

ತುಮಕೂರು : ಸಿಎಂ ಸಿದ್ದರಾಮಯ್ಯ ನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಾಗ ನಡೆದಂತಹ ಉಪಚುನಾವಣೆಯಲ್ಲಿ ನಾನೇ ಸ್ವತಃ ದುಡ್ಡು ಹಂಚಿದ್ದೇನೆ ಎಂದು ಜಿಲ್ಲೆಯ ಹೊನವಳ್ಳಿ ಕ್ಷೇತ್ರದ ಜಿಲ್ಲಾಪಂಚಾಯತಿ ಕಾಂಗ್ರೆಸ್ ಸದಸ್ಯ ಜಿ. ನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ.
ಉಪಚುನಾವಣೆ ಸಂದರ್ಭದಲ್ಲಿ ನನ್ನಲ್ಲಿದ್ದ ಕಾರಿನ ಟೈರ್ ನಲ್ಲಿ 4 ಲಕ್ಷ ರೂ. ತೆಗೆದುಕೊಂಡು ಹೋಗಿ ಹಂಚಿದ್ದೇನೆ ಎಂದು ಹೇಳಿದ ಅವರು, ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಕನಸು ಕಂಡಿದ್ದೆ. ಆದರೆ ಕಾಂಗ್ರೆಸ್ ನವರೇ ದ್ವೇಷ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

 

 

 

 

 

 

    

 ತುರುವೆಕೆರೆ ಬಿಜೆಪಿ ಯಾತ್ರೆಯಲ್ಲಿ ಹಣ, ಹೆಂಡ ಹಂಚಿಕೆ

 ನವೆಂಬರ್ -3

ತುಮಕೂರು : ಮುಂಬರುವ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಬಿಜೆಪಿ ಕೈಗೊಂಡಿರುವ ಯಾತ್ರೆಯಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಹೆಂಡ, ಹಣ ಹಂಚುತ್ತಿರುವುದು ಬಹಿರಂಗವಾಗಿದೆ. ಬೆಂಗಳೂರಿನಿಂದ ಆರಂಭಗೊಂಡು ನಿನ್ನೆ ತುರುವೆಕೆರೆಯನ್ನು ತಲುಪಿದ್ದ ಬಿಜೆಪಿಯ ನವ ಕರ್ನಾಟಕ ರ್ಯಾಲಿಯಲ್ಲಿ ಈ ದೃಶ್ಯ ಕಂಡು ಬಂದಿದೆ.ತುರುವೇಕೆರೆಯಲ್ಲಿ ನವ ಕರ್ನಾಟಕ ಬಿಜೆಪಿ ಯಾತ್ರೆಯ ಸಮಾವೇಶ ಉದ್ದೇಶಿಸಿ, ಬಿಜೆಪಿಯ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ವೇದಿಕೆಯ ಮೇಲೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೇ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರೊಬ್ಬರು ಹಣ ಹಂಚಿಕೆ ಮಾಡುತ್ತಿದ್ದ ದೃಶ್ಯ ಲಭ್ಯವಾಗಿದೆ. ಯಡಿಯೂರಪ್ಪ ಭಾಷಣ ಮಾಡ್ತಾ ಇದ್ದರೇ, ವೇದಿಕೆಯ ಹಿಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಯಾತ್ರೆಗೆ ಆಗಮಿಸಿದ್ದ ಜನರಿಗೆ ಹಣ, ಹೆಂಡ ಹಂಚುತ್ತಿದ್ದರು ಎನ್ನಲಾಗುವ ದೃಶ್ಯ ಲಭ್ಯವಾಗಿದೆ.ಬಿಜೆಪಿಯ ನವ ಕರ್ನಾಟಕ ಪರಿವರ್ತನಾ , ಯಾತ್ರೆ, ಬೆಂಗಳೂರಿನಲ್ಲಿ ಪ್ರಾರಂಭಗೊಂಡ ದಿನವೇ, ಸಮಾವೇಶಕ್ಕೆ ಜನರು ಬಂದಿರಲಿಲ್ಲ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ, ಅಮಿತ್ ಷಾ, ಯಡಿಯೂರಪ್ಪನವನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಯಾತ್ರೆಗೆ ಬರುವ ಜನರಿಗೆ ಇಂತಹ ಆಮಿಷ ಒಡ್ಡಿ, ಯಶಸ್ಸುಗೊಳಿಸಲು ಪ್ರಯತ್ನ ಪಡುತ್ತಿದೆಯಾ ಎನ್ನುವಂತಿದೆ ದೃಶ್ಯ.

 

 

 

 

77  ಪರಿವರ್ತನಾ ರಥಯಾತ್ರೆಗೆ ಮೇಲೆ ಕಲ್ಲುತೂರಾಟ
 ನವೆಂಬರ್ -3
ತುಮಕೂರು : ಬಿಜೆಪಿ ಅತೃಪ್ತ ಕಾರ್ಯಕರ್ತರು ಕರ್ನಾಟಕ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ ಮೇಲೆ ಕಲ್ಲೆಸೆದಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆಯ ಬಾಣಸಂದ್ರದಲ್ಲಿ ನವಕರ್ನಾಟಕ ರಥಯಾತ್ರೆ ಆಗಮಿಸುತ್ತಿದ್ದಂತೆಯೇ ಬಿಜೆಪಿ ಉಚ್ಚಾಟಿತ ಮುಖಂಡ ಚೌಧರಿ ನಾಗೇಶ್ ಬೆಂಬಲಿಗರು ನವಕರ್ನಾಟಕ ರಥಯಾತ್ರೆ ಮೇಲೆ ಕಲ್ಲೆಸೆದಿದ್ದಾರೆ. ಘಟನೆಯಲ್ಲಿ ಕಲ್ಲು ರಥಯಾತ್ರೆಗೆ ಬಿದ್ದಿದ್ದು, ಪಕ್ಕದಲ್ಲಿದ್ದ ಸ್ಕಾರ್ಪಿಯೋ ಕಾರಿನ ಗಾಜು ಪುಡಿ-ಪುಡಿಯಾಗಿದೆ.
ಬಿಎಸ್ ಯಡಿಯೂರಪ್ಪ ಅವರು ಬಾಣಸಂದ್ರದಲ್ಲಿ ಕಾರು ನಿಲ್ಲಿಸದಿದ್ದಕ್ಕೆ ಇತ್ತೀಚೆಗೆ ಬಜೆಪಿಯಿಂದ ಉಚ್ಚಾಟಿತವಾಗಿರುವ ನಾಗೇಶ್ ಬೆಂಬಲಿಗರು ರಥಯಾತ್ರೆ ಮೇಲೆ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದರು.
ಸಿಕ್ಕಿದ್ದೇ ಚಾನ್ಸ್ ಅಂತ ಜೆಡಿಎಸ್ ಕಾರ್ಯಕರ್ತರು ಸಹ ಬಿಜೆಪಿ ನವಕರ್ನಾಟಕ ರಥಯಾತ್ರೆ ಮೇಲೆ ಕಲ್ಲೆಸೆದಿದ್ದಾರೆ ಎಂದು ಹೇಳಿಲಾಗುತ್ತಿದೆ.

 

                                                                                        

ಎಡೆಯೂರು ಸಿದ್ಧಲಿಂಗೇಶ್ವರ ಕ್ಷೇತ್ರಕ್ಕೆ ಬಿಎಸ್ವೈ ಭೇಟಿ

ನವೆಂಬರ್.3

ಕುಣಿಗಲ್: ಪರಿವರ್ತನಾ ಯಾತ್ರೆಯ ಮೊದಲ ದಿನದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮನೆ ದೇವರಾದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದ ದರ್ಶನ ಮಾಡಿದರು.

ನಿನ್ನೆ ರಾತ್ರಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದ ಯಡಿಯೂರಪ್ಪ ಅವರು ಮುಂಜಾನೆ ವಿಶೇಷ ಪೂಜೆ ಸಲ್ಲಿಸಿ ಯಾತ್ರೆಯ ಯಶಸ್ಸಿಗಾಗಿ ಪ್ರಾರ್ಥನೆ ಮಾಡಿದರು.

ಸಂಸದೆ ಶೋಭಾ ಕರಂದ್ಲಾಜೆ. ನರೇಂದ್ರ ಬಾಬು. ಡಿ.ಕೃಷ್ಣಕುಮಾರ್ ಹಾಗೂ ಹೆಚ್.ಡಿ.ರಾಜೇಶ್ ಗೌಡಜತೆಗಿದ್ದರು. ನಂತರ ಯಾತ್ರೆ ತುರುವೇಕೆರೆ ಕಡೆ ಪ್ರಯಾಣ ಬೆಳೆಸಿತು.

ಬಿಎಸ್ ವೈ ಯಾವುದೇ ನೂತನ ಹೆಜ್ಜೆ ಹಾಗೂ ಹೋರಾಟ ಅರಂಭಿಸುವ ಮುನ್ನ ಮನೆ ದೇವರಾದ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುವ ಪರಿಪಾಟ ರೂಢಿಸಿಕೊಂಡು ಬಂದಿದ್ದಾರೆ.

                                                                          

ರಾಜ್ಯಕ್ಕೆ ಇಂತಹ ಸಿಎಂ ಸಿಕ್ಕಿದ್ದಾರಲ್ಲಾ !

ಅಕ್ಟೋಬರ್ -31

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದು, 'ಸುಳ್ಳು ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ' ಎಂದು ಗುಡುಗಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಶ್ರೀಗಳ ಭೇಟಿ ನಡೆಸಿ ಹೊರಬಂದ ವೇಳೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ 'ಸಿಎಂ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದು ಸೊಕ್ಕಿನಿಂದ ಮೆರೆಯುತ್ತಿದ್ದಾರೆ'ಎಂದು ಕಿಡಿ ಕಾರಿದರು.
'ಎಲುಬಿಲ್ಲದ ನಾಲಿಗೆ ಅಂದರೆ ಅದು ಸಿದ್ದರಾಮಯ್ಯರದ್ದು, ಅವರು ಯಾರು ನನ್ನನ್ನು ಜೈಲಿಗೆ ಕಳುಹಿಸಲು' ಎಂದು ಹರಿಹಾಯ್ದರು.
'ಪ್ರಧಾನಿ ಮೋದಿ ಅವರಿಗೆ ನನ್ನನ್ನು ಕಂಡರೆ ಭಯವೆಂದು ಹೇಳುತ್ತಾರೆ. ಇದು ಸಿದ್ದರಾಮಯ್ಯ ಅವರ ಮೂರ್ಖತನದ ಪರಮಾವಧಿ' ಎಂದರು.
'ಪ್ರಧಾನಿ ಮೋದಿ ಧರ್ಮಸ್ಥಳಕ್ಕೆ ಬಂದಾಗ ಉಪವಾಸವಿದ್ದರು. ಆದರೆ ಈ ಮನುಷ್ಯ ಕೋಳಿ, ಮೀನು ತಿಂದು ಹೋಗಿ ಭಕ್ತರಿಗೆ ಅಪಮಾನ ಮಾಡಿದ್ದಾರೆ. ರಾಜ್ಯಕ್ಕೆ ಇಂತಹ ಸಿಎಂ ಸಿಕ್ಕಿದ್ದಾರಲ್ಲಾ ಎಂದು ನೋವಾಗುತ್ತಿದೆ'ಎಂದರು.

 

zz  ತ್ರಿವಳಿ ಕೊಲೆ ಪ್ರಕರಣ, ಸೈಕೋ ಜೈ ಶಂಕರ್ ಖುಲಾಸೆ
 ಅಕ್ಟೋಬರ್ -30
ತುಮಕೂರು : ತುಮಕೂರಿನ ತ್ರಿವಳಿ ಕೊಲೆ ಪ್ರಕರಣದಲ್ಲಿ ಸೈಕೋ ಜಯಶಂಕರ್ ಖುಲಾಸೆಗೊಂಡಿದ್ದಾನೆ. ಚಿತ್ರದುರ್ಗದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಜಯಶಂಕರ್ನನ್ನು 2017ರ ಸೆಪ್ಟೆಂಬರ್ನಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಸೋಮವಾರ ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಭಟ್ ಸೈಕೋ ಜಯಶಂಕರ್ನನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. 2011ರ ಮಾರ್ಚ್ 29ರಂದು ತುಮಕೂರಿನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಜೈಶಂಕರ್ ಆರೋಪಿಯಾಗಿದ್ದ.
ತುಮಕೂರಿನ ಗಿರಿಯನಹಳ್ಳಿಯಲ್ಲಿ ದೊಡ್ಡಯ್ಯ, ಪುಟ್ಟಮ್ಮ ದಂಪತಿಗಳು ಹಾಗೂ ಅವರ ಪುತ್ರಿ ರಾಜಮ್ಮ ಕೊಲೆ ಮಾಡಿದ ಆರೋಪ ಸೈಕೋ ಜಯಶಂಕರ್ ಮೇಲಿತ್ತು. ಸೂಕ್ತ ಸಾಕ್ಷಿಗಳು ದೊರೆಯದ ಹಿನ್ನಲೆಯಲ್ಲಿ ಖುಲಾಸೆಗೊಳಿಸಲಾಗಿದೆ.
ಜೋಡಿ ಕೊಲೆ ಪ್ರಕರಣದಲ್ಲಿಯೂ ಖುಲಾಸೆ : 2011ರ ಏಪ್ರಿಲ್ 27ರಂದು ಚಿತ್ರದುರ್ಗದ ಎಂ.ಕೆ.ಹಟ್ಟಿಯಲ್ಲಿ ಚಂದ್ರಮ್ಮ ಎಂಬುವವರ ಮೇಲೆ ಜೈಶಂಕರ್ ಅತ್ಯಾಚಾರ ನಡೆಸಿದ್ದ. ಬಳಿಕ ಅಲ್ಲಿಗೆ ಆಕೆಯ ಪತಿ ಹನುಮಂತಪ್ಪ ಬಂದಿದ್ದರು. ಇಬ್ಬರನ್ನು ಕೊಲೆ ಮಾಡಿದ ಆರೋಪ ಜೈಶಂಕರ್ ಮೇಲಿತ್ತು.
ಬೆಂಗಳೂರು ಗ್ರಾಮಾಂತರ ಸೆಷನ್ಸ್ ನ್ಯಾಯಾಲಯ 2017ರ ಸೆಪ್ಟೆಂಬರ್ನಲ್ಲಿ ಈ ಕೊಲೆ ಪ್ರಕರಣದಲ್ಲಿಯೂ ಜಯಶಂಕರ್ನನ್ನು ಖುಲಾಸೆಗೊಳಿಸಿತ್ತು. ಈಗ ತುಮಕೂರಿನ ತ್ರಿವಳಿ ಕೊಲೆ ಪ್ರಕರಣದಲ್ಲಿಯೂ ಆತ ಖುಲಾಸೆಗೊಂಡಿದ್ದಾನೆ.
ವಿಜಯಪುರದಲ್ಲಿ ಜೈ ಶಂಕರ್ನನ್ನು ಪೊಲೀಸರು ಬಂಧಿಸಿದಾಗ ಹಲವು ಕೊಲೆ ಪ್ರಕರಣಗಳು ಹೊರಬಂದಿದ್ದವು. ಕರ್ನಾಟಕದ ಮೂರು ಪ್ರಕರಣಗಳಲ್ಲಿ ಜೈ ಶಂಕರ್ ಈಗಾಗಲೇ ಖುಲಾಸೆಗೊಂಡಿದ್ದು, ಇನ್ನೂ 2 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಮಿಳುನಾಡಿನಲ್ಲಿಯೂ ಜೈ ಶಂಕರ್ ಮೇಲೆ ಹಲವು ಕೇಸುಗಳಿವೆ.
ಜೈಲಿನಿಂದ ಪರಾರಿಯಾಗಿದ್ದ : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸೈಕೋ ಜಯಶಂಕರ್ 2013ರ ಸೆಪ್ಟೆಂಬರ್ನಲ್ಲಿ ಪರಾರಿಯಾಗಿದ್ದ. ಕಾಲಿಗೆ ಗಾಯ ಮಾಡಿಕೊಂಡಿದ್ದ ಆತ, ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

 

 

  

 

ವಾಸವಿರುವವನೇ ಮನೆಯ ಒಡೆಯ: ಟಿ.ಬಿ.ಜಯಚಂದ್ರ          

ಅಕ್ಟೋಬರ್ -30

ತುಮಕೂರು: ಲಂಬಾಣಿ ತಾಂಡ ಗೊಲ್ಲರಹಟ್ಟಿ, ನಾಯಕರ ಹಟ್ಟಿ ಸೇರಿದಂತೆ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವವರಿಗೆ ಮಾಲೀಕತ್ವ ನೀಡುವ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ-ವಾಸವಿರುವವನೇ ಮನೆಯ ಮಾಲೀಕ-2016ಕ್ಕೆ ರಾಷ್ಟ್ರಪತಿಗಳಿಂದ ಅಂಗೀಕಾರ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ನಗರ, ಗ್ರಾಮೀಣ ವಸತಿ ಮತ್ತು ನಿವೇಶನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 50-60 ವರ್ಷಗಳಿಂದ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಹಾಡಿ, ಪಾಳ್ಯ, ಕಾಲೋನಿ, ಮಜರೆ, ಮತ್ತಿತರ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದರು. ಇವರನ್ನು ಜಮೀನು ಮಾಲೀಕರು ಒಕ್ಕಲೆಬ್ಬಿಸಲು ಮುಂದಾಗುತ್ತಿದ್ದರು. ಇದನ್ನು ತಡೆಯಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ -2016(ತಿದ್ದುಪಡಿ)ಕ್ಕೆ ರಾಷ್ಟ್ರಪತಿಗಳಿಂದ ಅಂಕಿತ ದೊರೆತಿದ್ದು,ಇದರ ಪ್ರತಿ ಇದೀಗ ಕೈಸೇರಿದೆ. ರಾಜ್ಯ ಸರಕಾರವೂ ಅಧಿಸೂಚನೆ ಹೊರಡಿಸಿ ಎಂದರು.ಹೊಸ ಕಾಯ್ದೆಯ ಪ್ರಕಾರ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಒಂದು ವರ್ಷಗಳ ಕಾಲ ಇಂತಹ ಜಾಗಗಳಲ್ಲಿ ವಾಸವಿರುವ ಜನರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಖಾಸಗಿ ಜಮೀನಿನಲ್ಲಿ ವಾಸಿಸುತ್ತಿರುವವರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸದರಿ ಅರ್ಜಿಗಳನ್ನು ಪರಿಶೀಲಿಸಿ, ಆರ್ಹರಿಗೆ ಮಾಲೀಕತ್ವ ನೀಡುವ ಬಗ್ಗೆ ಆದೇಶ ಹೊರಡಿಸುವ ಗುರುತರ ಜವಾಬ್ದಾರಿಯನ್ನು ಆಯಾ ತಾಲೂಕಿನ ತಹಶೀಲ್ದಾರರಿಗೆ ವಹಿಸಲಾಗಿದೆ ಎಂದರು.ಶಿರಾ ತಾಲ್ಲೂಕಿನ ಗೊಲ್ಲರಹಟ್ಟಿಗಳೇ ಸ್ಫೂರ್ತಿ ತಾಲ್ಲೂಕಿನ ಗೊಲ್ಲರಹಟ್ಟಿಗಳಲ್ಲಿ ಹಲವಾರು ವರ್ಷಗಳಿಂದ ಜನರು ಅಲ್ಲಿಯೇ ವಾಸಿಸುತ್ತಿದ್ದರು. ಅಲ್ಲಿ ಯಾವುದೇ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಆಗುತ್ತಿರಲಿಲ್ಲ. ಈ ರೀತಿ ವಾಸಿಸುತ್ತಿರುವ ರಾಜ್ಯದ ಎಲ್ಲರಿಗೂ ಮಾಲೀಕತ್ವ ನೀಡಬೇಕು ಎನ್ನುವ ಉದ್ದೇಶದಿಂದ ಕಾಯ್ದೆ ರೂಪಿಸಲು ಸಾಧ್ಯವಾಯಿತು. ರಾಜ್ಯ ಸರಕಾರಕ್ಕಿರುವ ಬದ್ಧತೆಯಿಂದಾಗಿ ಈ ಕಾಯ್ದೆ ಜಾರಿಗೆ ತರಲು ಸಾಧ್ಯವಾಯಿತು.ಈ ಕಾಯ್ದೆಯ ಜಾರಿಯಿಂದ ರಾಜ್ಯದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.ಡಿಸೆಂಬರ್ ವೇಳೆಗೆ 10ಸಾವಿರ ಮಂದಿಗೆ ನಿವೇಶನ ಜಿಲ್ಲೆಯ ಶಿರಾ ತಾಲೂಕಿನಲ್ಲಿ ಬರುವ ಡಿಸೆಂಬರ್ ಮಾಹೆಯೊಳಗೆ 10ಸಾವಿರ ನಿವೇಶನಗಳನ್ನು ವಿತರಿಸಲಾಗುವುದು. ಶಿರಾದಲ್ಲಿ ಬೀಡಿ ಕಾರ್ಮಿಕರ ಕಾಲೋನಿಯ ರೀತಿಯಲ್ಲಿಯೇ ಇತರೆ ವರ್ಗದ ಬಡವರಿಗೂ ನಿವೇಶನ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್, ಜಿಪಂ ಸಿಇಒ ಕೆ.ಜಿ.ಶಾಂತರಾಮ್ ,ಸೇರಿದಂತೆ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

 

 

 

 

11  ತಾಕತ್ತಿದ್ದರೆ ಹಂದಿ ತಿಂದು ಮಸೀದಿಗೆ ಹೋಗಲಿ : ಶಿವಣ್ಣ
 ಅಕ್ಟೋಬರ್-24
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸದೂಟ ಮಾಡಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅದು ಆಹಾರ ಪದ್ಧತಿ ಎಂದು ಸಮರ್ಥನೆ ಮಾಡಿಕೊಂಡಿರುವುದು ಭಕ್ತರ ಭಾವನೆಗೆ ವಿರುದ್ಧವಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೇಡರ ಕಣ್ಣಪ್ಪನನ್ನು ಉದಾಹರಣೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ತಿಂದು ತಿಂದು ಮಸೀದಿಗೆ ಪ್ರವೇಶ ಮಾಡಿ ಇದೂ ಕೂಡಾ ಆಹಾರ ಪದ್ಧತಿ ಎಂದು ಸಮರ್ಥನೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.
ನೂರಾರು ವರ್ಷ ಇತಿಹಾಸವಿರುವ ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ರಾಜ್ಯ, ರಾಷ್ಟ್ರಾದ್ಯಂತ ಕೋಟಿ ಕೋಟಿ ಭಕ್ತರಿದ್ದಾರೆ. ಅವರ ಭಾವನೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡು ಮಾಂಸದೂಟ ಮಾಡಿ ದೇವಾಲಯ ಪ್ರವೇಶಿಸಿರುವುದು ತೀವ್ರ ಆಕ್ರೋಶ ತರುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಾತಿ ಜಾತಿಗಳ ನಡುವೆ ಒಡಕು ಮೂಡಿಸುವುದು ಯಾವ ಲಾಭಕ್ಕಾಗಿ. ಇದು ರಾಜಕೀಯ ಲಾಭಕ್ಕಾಗಿ ಯಾರನ್ನು ಬೇಕಾದರೂ ನಿರ್ನಾಮ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

22  ಕಾಂಗ್ರೆಸ್, ಜೆಡಿಎಸ್ ಹಾಲಿ ಶಾಸಕರು ಶೀಘ್ರ ಬಿಜೆಪಿಗೆ:ಆರ್.ಅಶೋಕ್
 ಅಕ್ಟೋಬರ್-23
ತುಮಕೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹಾಲಿ ಶಾಸಕರುಗಳು ಸದ್ಯದಲ್ಲಿಯೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ನವೆಂಬರ್ 2 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಬಂದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 10 ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮುನ್ಸೂಚನೆ ನೀಡಿದ್ದಾರೆ. ಇದಲ್ಲದೇ ಡಿ.15 ರ ಬಳಿಕ ಇನ್ನೂ ಹೆಚ್ಚಿನ ಬೇರೆ ಪಕ್ಷದ ಶಾಸಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಆರ್.ಅಶೋಕ್ ಹೇಳಿದ್ದಾರೆ.

 

33
 ಜೆಡಿಎಸ್'ಗೆ ಮತ ನೀಡಿಲ್ಲವೆಂದು ಕುಡಿಯುವ ನೀರು ಬಂದ್!: ಯೋಧನ                   ಕುಟುಂಬಕ್ಕೆ ಇದೆಂಥಾ ದುಸ್ಥಿತಿ
ಅಕ್ಟೋಬರ್-23
ತುಮಕೂರು: ಮಗನ ಫೋಟೋ ಹಿಡಿದು ಅಸಹಾಯಕತೆಯಿಂದ ನಿಂತಿರೋ ಈ ವೃದ್ಧ ದಂಪತಿ ತುಮಕೂರು ಜಿಲ್ಲೆಯ ಪಾವಗಡದವರು. ಕೋಣನಕುರಿಕೆ ಗ್ರಾಮದ ಗಿರಿಯಪ್ಪ ಹಾಗೂ ನಾಗಮ್ಮ ದಂಪತಿ. ಇವರ ಮಗ ವೆಂಕಟೇಶ್ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸ್ತಾ ಇದ್ದಾರೆ. ಆದ್ರೆ ಈ ದಂಪತಿಗೆ ಗ್ರಾಮದಲ್ಲಿ ಕುಡಿಯಲು ಗುಟುಕು ನೀರು ಸಿಗುತ್ತಿಲ್ಲ. ಕುಡಿಯೋ ನೀರಿಗಾಗಿ ಇವರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಕಳೆದ ಐದಾರು ತಿಂಗಳಿನಿಂದ ದೂರದಿಂದ ನೀರು ಹೊತ್ತು ತಂದು ಜೀವನ ನಡೆಸ್ತಾ ಇದ್ದಾರೆ. ರಾಜಕೀಯ ದುರುದ್ದೇಶದಿಂದ ಗುಜ್ಜನೂಡು ಗ್ರಾಮಪಂಚಾಯಿತಿ ಅಧಿಕಾರಿಗಳು ನೀರಿನ ಸಂಪರ್ಕ ನೀಡದೆ ಸತಾಯಿಸುತ್ತಿದ್ದಾರೆ. ಸ್ಥಳೀಯರು ಹೇಳೋ ಪ್ರಕಾರ ಇವರು ಜೆಡಿಎಸ್ ಗೆ ಮತ ಹಾಕಿಲ್ಲ ಹೀಗಾಗಿ ಇವರಿಗೆ ನೀರಿನ ವ್ಯವಸ್ಥೆ ಮಾಡ್ತಿಲ್ಲ ಅಂತಿದ್ದಾರೆ.
ಗ್ರಾ. ಪಂಚಾಯಿತಿ ಈ ಧೋರಣೆಗೆ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿ ಕೇಳಿದ್ರೆ ಖಾಸಗಿ ಕೊಳವೆ ಬಾವಿ ಬಾಡಿಗೆ ತೆಗೆದುಕೊಂಡು ಗ್ರಾಮಕ್ಕೆ ನೀರು ಪೂರೈಸುತ್ತಿದ್ದೇವೆ. ಇನ್ನೆರೆಡು ದಿನದಲ್ಲಿ ಯೋಧನ ಕುಟುಂಬಕ್ಕೂ ನೀರು ಕೊಡ್ತೀವಿ ಅಂತ 6 ತಿಂಗಳಿಂದ ಹೇಳಿದ್ದನ್ನೇ ಮತ್ತೆ ಮತ್ತೇ ಹೇಳ್ತಿದ್ದಾರೆ.
ಒಟ್ಟಾರೆ ಗಡಿ ಕಾಯುವ ಯೋಧನ ಹೆತ್ತವರು ನೀರಿಗೂ ಗತಿಯಿಲ್ಲದೆ ಒದ್ದಾಡುತ್ತಿದ್ದಾರೆ. ಈ ವರದಿ ನೋಡಿಯಾದರೂ ಅಧಿಕಾರಿಗಳು ಎಚ್ಚೆತ್ತು ನೀರಿನ ಸಮಸ್ಯೆ ಬಗೆಹರಿಸುತ್ತಾರಾ ಕಾದು ನೋಡಬೇಕಿದೆ.

 

 

 

 

66

 ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು ಜನರು

 ಅಕ್ಟೋಬರ್-12
 ತುಮಕೂರು: ಬಿಟ್ಟಿಯಾಗಿ ಸಿಗುವುದಾದರೇ ಯಾರು ತಾನೇ ಸುಮ್ನೆ ಇರ್ತಾರೆ ಹೇಳಿ. ಬಿಟ್ಟಿಯಾಗಿ ಸಿಗುವುದಾರೇ ನನಗೂ ಇರಲಿ, ಸಾಧ್ಯವಾದರೇ ನಮ್ಮ ವಂಶಕ್ಕೂ ಇರಲಿ ಅಂತಾ ಹೇಳುವುದರಲ್ಲಿ ನಮ್ಮಲ್ಲಿ ಸಿಗುವುದರಲ್ಲಿ ಸಂಶಯವಿಲ್ಲ. ಅಂದ ಹಾಗೇ ಕೋಳಿಮೊಟ್ಟೆಯನ್ನು ಸಾಗಿಸುತಿದ್ದ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕೋಳಿ ಮೊಟ್ಟೆ ರಸ್ತೆಪಾಲಾದ ಘಟನೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಹೊಸಪೇಟೆಯಿಂದ ಬೆಂಗಳೂರಿಗೆ ಕೋಳಿ ಮೊಟ್ಟೆಯನ್ನು ತುಂಬಿಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಟೈರ್ ಪಂಚರ್ ಆಗಿ ನಿಂತ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು, ಮೊಟ್ಟೆ ವಾಹನ ಪಲ್ಟಿಯಾಗಿದೆ.
ಈ ವೇಳೆ ಲಕ್ಷಾಂತರ ಮೌಲ್ಯದ ಕೋಳಿ ಮೊಟ್ಟೆ ರಸ್ತೆ ಪಾಲಾಗಿದ್ದು, ಮೊಟ್ಟೆಗಾಗಿ ಜನರು ಮುಗಿಬಿದ್ದು ನಾ ಮುಂದು ತಾ ಮುಂದು ಎಂದು ಮೊಟ್ಟೆ ಹೊತ್ತೊಯ್ದಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಪ್ರಕರಣ ದಾಖಲಿಸಿಕೊಂಡಿರುವ ಕಳ್ಳಂಬೆಳ್ಳ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

 

 

 

Ads
;