ದೂರವಾಣಿ : 080-69999676
ಇಮೇಲ್ : Info@Vijayataranga.com


 

11

 ತಲೆ ಎತ್ತಿದೆ ಮಕ್ಕಳ ಮಾರಾಟದ ಬೃಹತ್ ಜಾಲ

 ಡಿಸೆಂಬರ್ 25 

ದಾವಣಗೆರೆ: ಜಿಲ್ಲೆಯಲ್ಲಿ ಮಕ್ಕಳ ಮಾರಾಟದ ಬೃಹತ್ ಜಾಲ ಪತ್ತೆಯಾಗಿದೆ. ಹುಟ್ಟಿದ ಮೂರು ದಿನದಲ್ಲಿ ಮಾರಾಟವಾಗಿದ್ದ ಹೆಣ್ಣು ಮಗುವನ್ನು ರಕ್ಷಿಸಲಾಗಿದೆ.
ಮಗು ಮಾರಾಟವಾದ ಬಗ್ಗೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾ ಣ ಇಲಾಖೆ ಅಧಿಕಾರಿಗಳು ಇಲಾಖೆಯ ಡಿಡಿ ವಿಜಯಕುಮಾರ ನೇತೃತ್ವದಲ್ಲಿ ಪ್ರಕರಣವನ್ನು ಪತ್ತೆ ಮಾಡಿದ್ದಾರೆ.
ದಾವಣಗೆರೆಯ ಅಜಾದ್ ನಗರದಲ್ಲಿ ಘಟನೆ ನಡೆದಿದ್ದು, ಕೇವಲ 20 ಸಾವಿರ ಮಗುವನ್ನು ಹೆತ್ತವರು ಮಾರಾಟ ಮಾಡಿದ್ದರು ಎನ್ನಲಾಗಿದೆ.ಶಭೀನಾ ಹಾಗೂ ಸಿಕಂದರ್ ಎಂಬುವರು ಮಗು ಮಾರಾಟ ಮಾಡಿದ ಆರೋಪಿಗಳು. ಮುಕ್ತಾರ್ ಎಂಬ ವ್ಯಕ್ತಿಗೆ 20 ಸಾವಿರ ರೂಪಾಯಿಗೆ ಮಾರಿದ್ದರು. ಮಗುವನ್ನು ರಕ್ಷಿಸಿರುವ ಅಧಿಕಾರಿಗಳು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನ ಮಹಿಳಾ ಠಾಣೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

 

    12

 ಜನವರಿ 15ರ ಒಳಗೆ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ

 ಡಿಸೆಂಬರ್ 25

 ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲ ವರ್ಷಕ್ಕೆ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಜನವರಿ 15ರ ಒಳಗೆ ಉಚಿತ ಲ್ಯಾಪ್ಟಾಪ್ ವಿತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡದ 36 ಸಾವಿರ ವಿದ್ಯಾರ್ಥಿಗಳಿಗೆ ಮೊದಲ ಹಂತವಾಗಿ ಲ್ಯಾಪ್ಟಾಪ್ ವಿತರಿಸಲಾಗುವುದು. ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸಾಮಾನ್ಯ ವರ್ಗದ 1.50 ಲಕ್ಷ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ವಿತರಿಸಲು ನಿರ್ಧರಿಸಲಾಗಿದೆ. ಗುಣಮಟ್ಟದ ಪೆಂಟಿಯಮ್ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿರುವ ಲ್ಯಾಪ್ಟಾಪ್ಗಳನ್ನೇ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿ ತರಗತಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ವಿತರಿಸುವ ಚಿಂತನೆ ನಡೆಸಿದ್ದು, ಮುಂಬರುವ ಬಜೆಟ್ನಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

 

    45+

ಪಾನಮತ್ತ ಚಾಲಕನಿಗೆ ಟ್ರಾಫಿಕ್ ಪೊಲೀಸರಿಂದ ಥಳಿತ

 ಡಿಸೆಂಬರ್-9

 ದಾವಣಗೆರೆ: ಪಾನಮತ್ತ ಆಟೋ ಚಾಲಕನೊಬ್ಬನಿಗೆ ಟ್ರಾಫಿಕ್ ಪೊಲೀಸರು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಆಟೋ ಚಾಲಕ ಗ್ರಾಹಕರ ಜತೆ ಜಗಳ ಮಾಡುತ್ತಿದ್ದನಲ್ಲದೇ, ನಡುರಸ್ತೆಯಲ್ಲಿ ಆಟೋ ನಿಲ್ಲಿಸಿ, ಅನುಚಿತವಾಗಿ ವರ್ತಿಸುತ್ತಿದ್ದ. ಆ ವೇಳೆ ಟ್ರಾಫಿಕ್ ಪೊಲೀಸರು ಆತನಿಗೆ ಬುದ್ಧಿ ಹೇಳಲು ಮುಂದಾದಾಗ ಪಾನಮತ್ತ ಚಾಲಕ ಪೊಲೀಸರನ್ನು ನಿಂದಿಸಲು ಆರಂಭಿಸಿದ.ಆಗ ತಾಳ್ಮೆ ಕಳೆದುಕೊಂಡ ಪೊಲೀಸರು ಕುಡುಕ ಚಾಲಕನಿಗೆ ನಾಲ್ಕು ಬಾರಿಸಿದರು. ಇದಕ್ಕೆ ಉತ್ತರವಾಗಿ ಚಾಲಕನಿಗೂ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿರುವ ವಿಡಿಯೋ ವೈರಲ್ ಆಗಿದೆ. 


 

                                   

ದಾವಣಗೆರೆಯಲ್ಲಿ ಗ್ಯಾಂಗ್ವಾರ್ ಹತ್ಯೆಗೆ ಯತ್ನ

ಡಿಸೆಂಬರ್-9 

ದಾವಣಗೆರೆ: ಹರಿಹರದ ಕುಮಾರಪಟ್ಟಣಂ ಸೇತುವೆ ಬಳಿ ಶುಕ್ರವಾರ ರಾತ್ರಿ ಗ್ಯಾಂಗ್ವಾರ್ ನಡೆದಿದ್ದು, 15 ಕ್ಕೂ ಹೆಚ್ಚು ಜನ ದುಷ್ಕರ್ಮಿಗಳ ತಂಡ ಬುಳ್ಳನಾಗ ಮತ್ತು ತಂಡದ ಮೇಲೆ ಮಾರಾಕಾಸ್ತ್ರಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಸುಪಾರಿ ಪಡೆದಿದ್ದ ತಂಡ ಬುಳ್ಳನಾಗ ಮತ್ತು ತಂಡ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಮಾರಕಾಯುಧಗಳಿಂದ ದಾಳಿ ನಡೆಸಿದ್ದು, ಕಾರನ್ನು ಶರವೇಗದಲ್ಲಿ ಚಲಾಯಿಸಿದ್ದರಿಂದ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಳ್ಳನಾಗ ಮತ್ತು ಇಬ್ಬರು ಸಹಚರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನ ಗಾಜುಗಳು ಜಖಂಗೊಂಡಿವೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಣಮ ಅಲಿಯಾಸ್ ಸಂತೋಷ್ ನನ್ನ ಹತ್ಯೆಗೆ ಸುಪಾರಿ ನೀಡಿದ್ದಾನೆ ಎಂದು ಬುಳ್ಳನಾಗ ಆರೋಪಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 2 ತಿಂಗಳ ಹಿಂದೆ ದಾವಣಗೆರೆ ಪೊಲೀಸರು 7 ಮಂದಿ ಸುಪಾರಿ ಹಂತಕರನ್ನು ವಶಕ್ಕೆ ಪಡೆದಿದ್ದರು.

 

    456 

ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಅರೆಸ್ಟ್

ಡಿಸೆಂಬರ್-7

ಹುಬ್ಬಳ್ಳಿ : ಗಣೇಶ ಪೇಟೆ ಪಾಕಿಸ್ತಾನದಂತೆ ಕಾಣುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈದ್ ಮಿಲಾದ್ ಸಂದರ್ಭದಲ್ಲಿ ಮೌಲ್ವಿ ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದ ಹಾಗೆ ಕಾಣಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಮೌಲ್ವಿ ವಿರುದ್ಧ ಶರಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರ ನಿನ್ನೆರಾತ್ರಿ ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ.

 

 

    45

ಭೀಕರ ರಸ್ತೆ ಅಪಘಾತ : ಇಬ್ಬರು ಯುವಕರು ಸ್ಥಳದಲ್ಲೇ ಸಾವು

 ಡಿಸೆಂಬರ್-6

ದಾವಣಗೆರೆ : ಹರಿಹರ ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಬುಲೆರೊ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ದರ್ಶನ (22) ಹರೀಶ್ (32) ಮೃತಪಟ್ಟ ಯುವಕರು. ಹೊನ್ನಾಳಿ ತಾಲೂಕಿನ ಅರೆಕೆರೆ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ. ಮೃತಪಟ್ಟ ಇಬ್ಬರೂ ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದ ನಿವಾಸಿಗಳು. ಘಟನಾ ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ಸಿನಲ್ಲಿದ್ದ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

 

55  ಶೌಚಾಲಯಕ್ಕಾಗಿ ಯುವತಿ ಆತ್ಮಹತ್ಯೆ : ಪಿಡಿಒ ಅಮಾನತು
 ಡಿಸೆಂಬರ್-5
 ದಾವಣಗೆರೆ : ಪಂಚಾಯತಿ ಜಾಗದಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡಿರುವ ಸಂಬಂಧ ಪಂಚಾಯತಿ ಅಧ್ಯಕ್ಷ  ಹಾಗೂ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ  ಶರಣಾಗಿರುವ ಘಟನೆ ನಡೆದಿದೆ.
 ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿ ಹಳ್ಳಿ ಗ್ರಾಮದ ಯುವತಿ ಅನ್ನಪೂರ್ಣ ಆತ್ಮಹತ್ಯೆಗೆ ಶರಣಾದ ಯುವತಿ.  ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಒ ವಿರೇಶ್ ಮತ್ತು ಕಾರ್ಯದರ್ಶಿಯನ್ನು ಅಮಾನತು ಮಾಡಲಾಗಿದೆ.
 ಘಟನೆ ಸಂಬಂಧ 14 ಮಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

222

 ಶೌಚಾಲಯ ನಿರ್ಮಾಣಕ್ಕೆ ವಿರೋಧ; ಯುವತಿ ಆತ್ಮಹತ್ಯೆ

 ನವೆಂಬರ್-30
 ದಾವಣಗೆರೆ: ಶೌಚಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ತೀವ್ರವಾಗಿ ಮನನೊಂದ ಯುವತಿಯೊಬ್ಬಳು   ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಹರಪ್ಪನಹಳ್ಳಿ ತಾಲೂಕಿನ ಮತ್ತಹಳ್ಳಿ ಗ್ರಾಮದಲ್ಲಿ ನಡೆದಿದೆ.
 ಅನ್ನಪೂರ್ಣ (21) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. ಯುವತಿ ಮನೆಯ ಹತ್ತಿರ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ   ಗ್ರಾಮ  ಪಂಚಾಯಿಸಿ ಆದೇಶ ನೀಡಿತ್ತು. ಆದರೆ, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಗ್ರಾಮ   ಪಂಚಾಯಿತಿಯಲ್ಲಿ ದೂರು ಕೂಡ ದಾಖಲಾಗಿತ್ತು. ಪ್ರಕರಣ ಸಂಬಂಧ ಗ್ರಾಮಸ್ಥರು ಹಾಗೂ ಯುವತಿ ತಂದೆ ಸುರೇಶಪ್ಪ ನಡುವೆ ಮೈಮನಸ್ಸು   ಏರ್ಪಟ್ಟಿತ್ತು. ಇದರಿಂದ ತೀವ್ರವಾಗಿ ಮನನೊಂದ ಯುವತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.
 ಕುಟುಂಬಸ್ಥರಿಗೆ ಪರಿಹಾರ ಧನವನ್ನು ನೀಡಲಾಗುತ್ತದೆ ಊರಿನ ನಾಯಕ ಚೆನ್ನನಾಯಕ್ ಅವರು ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮ   ಕೈಗೊಳ್ಳಲಾಗುತ್ತದೆ ಎಂದು ಉಪ ಆಯುಕ್ತ ರಮೇಶ್ ಕುಮಾರ್ ಅವರು ಭರವಸೆ ನೀಡಿದ ಬಳಿಕ ಪೋಷಕರು ಅಂತಿಮ ಸಂಸ್ಕಾರವನ್ನು   ನೆರವೇರಿಸಿದ್ದಾರೆ.
 ಪ್ರಕರಣ ಸಂಬಂಧ ಪಿಡಿಒ ವೀರೇಶ್ ಹಾಗೂ 13 ಮಂದಿಯ ವಿರುದ್ಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  

  ಬಬ       ಮಂಗಳಮುಖಿ ವೇಶದಲ್ಲಿದ್ದ ಯುವಕನ ಬಂಧನ
ಅಕ್ಟೋಬರ್.30
ದಾವಣಗೆರೆ: ಮಂಗಳಮುಖಿಯರ ವೇಷದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನಿಗೆ ಅಸಲಿ ಮಂಗಳಮುಖಿಯರು ಧರ್ಮದೇಟು ನೀಡಿದ ಘಟನೆ ನಗರದ ಗಡಿಯಾರ ಕಂಬದ ಬಳಿ ಸೋಮವಾರ ನಡೆದಿದೆ.
ರಾಜಶೇಖರ್ ಎಂಬುವನು ಕಾವ್ಯ ಎಂಬ ಹೆಸರಿನಲ್ಲಿ ಮಂಗಳಮುಖಿ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ. ಅಸಲಿ ಮಂಗಳಮುಖಿರಾದ ಅಲಿಯಾ, ಜೋಯಾ ಎಂಬುವರು ಇವರ ಮೇಲೆ ಅನುಮಾನ ವ್ಯಕ್ತಪಡಿಸಿ ಪರಿಶೀಲಿಸಿದ್ದಾರೆ. ಆಗ ರಾಜಶೇಖರ್ ಅಲಿಯಾಸ್ ಕಾವ್ಯ ನಕಲಿ ಮಂಗಳಮುಖಿ ಎಂದು ಬಯಲಾಗಿದೆ.
ಆಗ ಎಲ್ಲಾ ಮಂಗಳಮುಖಿಯರು ಸೇರಿಕೊಂಡು ಧರ್ಮದೇಟು ನೀಡಿ ಅಸಲಿ ಬಣ್ಣವನ್ನು ಬೀದಿಯಲ್ಲಿ ಹೊರಹಾಕಿ ಬಸವನಗರ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

  

                                                                                                                                        222  

    ಭೂ ಮಸೂದೆಗೆ ರಾಷ್ಟ್ರಪತಿ ಅಂಗೀಕಾರ

 ಅಕ್ಟೋಬರ್-28

 ದಾವಣಗೆರೆ: ದಾಖಲೆ ರಹಿತ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ   ಮಸೂದೆಗೆ ರಾಷ್ಟ್ರಪತಿಗಳು ಅಂಗೀಕಾರ ನೀಡಿದ್ದಾರೆ ಎಂದು ಮಾಯಕೊಂಡ ಶಾಸಕ ಕೆ.ಶಿವಮೂರ್ತಿ ನಾಯ್ಕ   ಹರ್ಷ ವ್ಯಕ್ತಪಡಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಸೂದೆ ಜಾರಿಗಾಗಿ ವಿಧಾನಸಭೆ ಒಳಗೆ-ಹೊರಗೆ ಸಾಕಷ್ಟು ಹೋರಾಟ  ಮಾಡಿದ್ದೇನೆ. ಮಸೂದೆಯನ್ನು ಶಾಸನವಾಗಿ ಜಾರಿ ಮಾಡುವಲ್ಲಿ ಕಾರ್ಯಾಂಗದ ಪಾತ್ರ ಮುಖ್ಯವಾಗಿದೆ. ಸೂಕ್ತ ನೀತಿ-ನಿಯಮ ರೂಪಿಸುವ ಮೂಲಕ ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಮಾಡಬೇಕಿದೆ. ಇದರಿಂದ 62 ಸಾವಿರ ಜನವಸತಿ ಪ್ರದೇಶಗಳಿಗೆ ಅನುಕೂಲವಾಗಲಿದೆ ಎಂದರು.

ಹಿಂದೆ ದೇವರಾಜ ಅರಸು ಉಳುವವನೇ ನೆಲದೊಡೆಯ ನೀತಿಯಡಿ ಭೂರಹಿತ ಕೃಷಿಕರಿಗೆ ಜಮೀನು ಸಿಗುವಂತೆ ಮಾಡಿದ್ದರು. ಇದೀಗ ಸಿದ್ದರಾಮಯ್ಯ ಸರಕಾರ ಭೂ ಸುಧಾರಣಾ ತಿದ್ದುಪಡಿ ಮಸೂದೆ ಜಾರಿಗೊಳಿಸುವ ಮೂಲಕ ವಾಸಿಸುವವನೇ ನೆಲದೊಡೆಯ ಎಂಬುದನ್ನು ಸಾಕಾರಗೊಳಿಸಿದೆ. ಸರಕಾರಿ ಹಾಗೂ ಖಾಸಗಿ ಜಾಗದಲ್ಲಿ ವಾಸಿಸುತ್ತಿರುವ ಬಡಜನರಿಗೆ ನಿವೇಶನ ಹಕ್ಕು ದೊರೆಯಲಿದೆ. ಅಧಿಕಾರಿಗಳು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಸರಕಾರ ಕೂಡ ಇದಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಿ, ಜನರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Ads
;