ದೂರವಾಣಿ : 080-69999676
ಇಮೇಲ್ : Info@Vijayataranga.com


 

66  ಧರ್ಮದ ಪ್ರತಿಪಾದನೆಗೆ ಐವರ ತಂಡ ರಚನೆ
 ಡಿಸೆಂಬರ್-29
ಹುಬ್ಬಳ್ಳಿ: ಲಿಂಗಾಯತ ಧರ್ಮ ಪ್ರತಿಪಾದನೆಗಾಗಿ ಐವರ ತಂಡವನ್ನು ಮಾಜಿ ಸಚಿವ, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ರಚನೆ ಮಾಡಿದ್ದಾರೆ. ನಗರದ ಮೂರು ಸಾವಿರ ಮಠದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ವೀರಶೈವ-ಲಿಂಗಾಯತ ಧರ್ಮ ಕುರಿತ ಚರ್ಚೆ ನಡೆಯಲಿದೆ. ಮಾಜಿ ಸಚಿವ ಬಸವರಾಜ್ ಹೊರಟ್ಟಿ ನೇತೃತ್ವದ ತಜ್ಞರ ಸಮಿತಿಯಲ್ಲಿ ಬೈಲೂರು ನಿಷ್ಕಲಾ ಮಠದ ನಿಜಗುಣಾನಂದ ಸ್ವಾಮೀಜಿ, ಸಾಹಿತಿ ರಂಜಾನ್ದರ್ಗಾ, ಡಾ.ಮಹದೇವಪ್ಪ, ವಿಶ್ವಾರಾಧ್ಯ ಸತ್ಯಂಪೇಟೆ ಅವರುಗಳು ಇದ್ದಾರೆ.

 

 

22   ರಾಜಕೀಯ ನಾಯಕರ ಮಾನ ಹರಾಜ
 ಡಿಸೆಂಬರ್-27
ಹುಬ್ಬಳ್ಳಿ : ಮಹದಾಯಿ ನದಿ ನೀರಿಗಾಗಿ ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಗರದ ವಿವಿಧ ಕನ್ನಡ ಪರ ಸಂಘಟನೆಗಳು ಮತ್ತು ಕಳಸಾ ಬಂಡೂರಿ ಹೋರಾಟ ಸಮತಿಗಳು ವಿನೂತ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಆಟೋಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ಪ್ರಧಾನಿ ಮೋದಿ, ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ, ಮನೋಹರ್ ಪರಿಕ್ಕರ್, ಸಿಎಂ ಸಿದ್ದರಾಮಯ್ಯರನ್ನು 5, 10,20 ರೂ. ನಂತೆ ಹರಾಜು ಹಾಕಿದರು.
ಇನ್ನು ಮಹದಾಯಿ ನೀರು ತರುವುದಾಗಿ ಹೇಳಿ ಮಾತಿಗೆ ತಪ್ಪಿದ ಯಡಿಯೂರಪ್ಪ ಅವರನ್ನು ಯಾರೂ ಬೇಕಾದ್ರು ಕೊಳ್ಳಬಹುದು, ಅವರಿಗೆ ಯಾವುದೇ ಬೆಲೆ ಇಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

 

  99  ಮಹದಾಯಿ ವಿವಾದ ಇತ್ಯಾರ್ಥಪಡಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು: ಸಿಎಂ
 ಡಿಸೆಂಬರ್-26
ಹುಬ್ಬಳ್ಳಿ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮತ್ತೆ ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮಾತುಕತೆಗಾಗಿ ತಮಗೆ ಪತ್ರ ಬರೆಯುವ ಬದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆಯುವ ಮೂಲಕ ಬಿಜೆಪಿ ಕುತಂತ್ರ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆಯೂ ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದ ಸಿಎಂ ಈಗ ಮತ್ತೆ ಮಹದಾಯಿ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಕ್ಕರ್ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದರಿಂದ ಅದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಕೇಂದ್ರ ಸರ್ಕಾರ ರಾಜಕೀಯ ನಾಟಕವಾಡುತ್ತಿವೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಅವರು ಸಿಎಂ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಘೋಷಿಸಬೇಕು ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರೇನು ಚುನಾವಣಾ ಅಧಿಕಾರಿಯೇ? ನಮಗೆ ಐದು ವರ್ಷ ಜನಾದೇಶ ಇದೆ. ಬಿಜೆಪಿ ಮೇ ನಲ್ಲಿ ಚುನಾವಣೆ ಎದುರಿಸಲಿ ಎಂದರು.

 

    12

ಅನಂತಕುಮಾರ ಹೆಗ್ಡೆ ನಾಲಾಯಕ್: ಸಿಎಂ ವಾಗ್ದಾಳಿ

 ಡಿಸೆಂಬರ್ 25

 ಧಾರವಾಡ: ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ನಾಲಾಯಕ್ ಎಂದು ಲ್ಲಿ ಸಿಎಂ ಸಿದ್ದರಾಮಯ್ಯ ಅವರು ಧಾರವಾಡದ ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದ ಸಾಧನಾ ಸಮಾವೇಶದ ವಾಗ್ದಾಳಿ ನಡೆಸಿದ್ದಾರೆ.ಇದೇ ವೇಳೆ ಅವರು ಅನಂತಕುಮಾರ ಹೆಗ್ಡೆ ಅವರಿಗೆ ಎರಡು ಮುಖವಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆ ಯಾವತ್ತೂ ಗೌರವ ಇಲ್ಲ. ಅದನ್ನ ಬದಲಾವಣೆ ಮಾಡೋಕೆ ಆರ್ಎಸ್ಎಸ್ ಪ್ಲಾನ್ ಮಾಡುತ್ತಿದೆ ಅಂತ ಆರೋಪಿಸಿದರು.ಇನ್ನು ಭಾರತವನ್ನು ಕೇವಲ ಹಿಂದೂಸ್ತಾನವನ್ನು ಮಾಡೋದು, ಏಕರೂಪ ಸಂಹಿತೆ ತರಿಸೋದು, ರಾಮ ಮಂದಿರ ಕಟ್ಟೊದೇ ಅವರ ಉದ್ದೇಶವಾಗಿದೆ. ಅವರಷ್ಟು ಕೀಳುಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ. ನಮಗೆ ಸಂಸದೀಯ ಮತ್ತು ಸಂಸ್ಕೃತಿ ಭಾಷೆ ಗೊತ್ತಿದೆ ಅಂತ ಸಿಎಂ ಕಿಡಿಕಾರಿದ್ರು.

 

    12

 ವೇಶ್ಯಾವಾಟಿಕೆ ದಂಧೆ ಆರೋಪದಲ್ಲಿ ಮೂವರು ಅರೆಸ್ಟ್

 ಡಿಸೆಂಬರ್ 25

 ಹುಬ್ಬಳ್ಳಿ : ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಾಡ್ಜ್ ವೊಂದರ ಮೇಲೆ ಉಪನಗರ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪನಗರ ಪೊಲೀಸರು. ಲಾಡ್ಜ್ ನ ಮಾಲೀಕ ಸಂತೋಷ್ ಶೆಟ್ಟಿ, ವ್ಯವಸ್ಥಾಪಕ ಅನಂತ್ ಭಟ್ಟ ಮತ್ತು ಗ್ರಾಹಕ ಪವನ್ ಬಡಿಗೇರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

    12

 ಸಂವಿಧಾನವನ್ನು ಬದಲಾವಣೆ ಮಾಡುವ ವಿಚಾರ ಆರ್ ಎಸ್ ಎಸ್ ಗೆ ಇದೆ !

 ಡಿಸೆಂಬರ್ 25

 ಧಾರವಾಡ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಗೌರವ ನೀಡಿಲ್ಲ. ಹೆಗೆಡೆಗೆ ಎರಡು ಮುಖ ಇವೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದ ಸಂವಿದಾನ ಬದಲಾವಣೆ ಮಾಡುವ ವಿಚಾರ ಆರ್ ಎಸ್ ಎಸ್ ಗೆ ಇದೆ. ಏಕರೂಪ ಸಮಿತಿ ತರುವುದು ಹಾಗೂ ರಾಮಮಂದಿರ ಕಟ್ಟುವುದೇ ಅವರ ವಿಚಾರವಾಗಿದೆ. ಕೇಂದ್ರ ಸಚಿವ ಅನಂತ್ ಕುಮಾರ್ ಗ್ರಾಮ ಪಂಚಾಯ್ತಿ ಸದಸ್ಯರಾಗಲೂ ನಾಲಾಯಕ್ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

 

44  ಪರಿವರ್ತನಾ ಯಾತ್ರೆ ಕೈಬಿಡಿ, ಮೊದಲು ನೀರು ಕೊಡಿ
 ಡಿಸೆಂಬರ್-20
ನವಲಗುಂದ: ಕಳಸಾ ಬಂಡೂರಿ ಮಹದಾಯಿ ಯೋಜನೆ ಹಾಗೂ ಇತರ ಬೇಡಿಕೆಗಳಿಗೆ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ಇಂದು ಕರೆ ಕೊಟ್ಟಿದ್ದ ನವಲಗುಂದ ಬಂದ್ ಯಶಸ್ವಿಯಾಗಿದೆ. ಬಿಜೆಪಿ ಪರಿವರ್ತನಾ ಯಾತ್ರೆ ಕೈಬಿಡಿ. ಮೊದಲು ನೀರು ಕೊಡಿ ಎಂದು ಪ್ರತಿಭಟನಾ ಸಂದರ್ಭದಲ್ಲಿ ರೈತರು ಆಗ್ರಹಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇವಲ ಭರವಸೆಗಳನ್ನು ಮಾತ್ರ ಬಿಜೆಪಿ ನೀಡುತ್ತಿದೆ. ಯೋಜನೆ ಯಶಸ್ವಿಗೆ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಗುಡುಗಿದರು. ಯೋಜನೆಗೆ ಜಾರಿಗೆ ಆಗ್ರಹಿಸಿ ನಿರಂತರ ಧರಣಿ ಸತ್ಯಾಗ್ರಹ 875ನೆ ದಿನಕ್ಕೆ ಕಾಲಿಟ್ಟಿದ್ದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ನವಲಗುಂದ ಬಂದ್ಗೆ ಕರೆ ನೀಡಲಾಗಿದೆ ಎಂದು ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ, ವರ್ತಕರ ಸಂಘದ ಅಧ್ಯಕ್ಷ ಆರ್.ಎನ್.ಧಾರವಾಡ, ಸುಭಾಷ್ಚಂದ್ರ ಪಾಟೀಲ ಮುಂತಾದವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಡಿ.15ರೊಳಗಾಗಿ ಕಳಸಾ ಬಂಡೂರಿ ಸಮಸ್ಯೆಯನ್ನು ಗೋವಾ-ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಇತ್ಯರ್ಥಪಡಿಸಿದ ನಂತರವೇ ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಮಾತು ಕೊಟ್ಟಿದ್ದರು. ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಪರಿವರ್ತನೆ ಯಾತ್ರೆ ಕೈಗೊಂಡು ರೈತರನ್ನು ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮೊದಲು ಗೋವಾ ಚುನಾವಣೆ ಮುಗಿದ ನಂತರ ಬಗೆಹರಿಸುತ್ತೇನೆ ಎಂದಿದ್ದರು. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದಾಗ ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆ ಮುಗಿದ ನಂತರ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.
ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮನೆ ಎದುರು ಧರಣಿ ನಡೆಸಿದಾಗ ಯಡಿಯೂರಪ್ಪನವರು ಡಿ.15ರೊಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಈವರೆಗೂ ಚಕಾರವೆತ್ತದ ಕಾರಣ ಬಂದ್ ಹಾದಿ ಹಿಡಿಯಬೇಕಾಯಿತು. ನಮ್ಮ ಹೋರಾಟಕ್ಕೆ ಪಕ್ಷಾತೀತವಾಗಿ ವಿವಿಧ ರೈತಪರ ಕನ್ನಡಪರ ಸಂಘಟನೆಗಳು ಭಾಗವಹಿಸಿವೆ. ಮಲಪ್ರಭಾ ನೀರು ಕುಡಿಯುತ್ತಿರುವ ಹುಬ್ಬಳ್ಳಿ-ಧಾರವಾಡ ಜನತೆಯು ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.ಡಿ.21 ರಂದು ಬಿಜೆಪಿಯವರು ನಡೆಸಲು ಉದ್ದೇಶಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಕಪ್ಪು ಪಟ್ಟಿ ಧರಿಸಿಕೊಂಡು ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಐ.ಡಿ.ಬಾಗವಾನ್, ಎ.ಎಸ್.ಭಾಗಿ, ಡಾ.ಎಂ.ಜೆ.ಜಾಡರ, ಮಲ್ಲಮ್ಮ ರಡ್ಡೇರ, ಬಿ.ಐ.ಧಾರವಾಡ, ಲಕ್ಷ್ಮಣ ಮಳ್ಳಿ, ಫಕೀರಪ್ಪ ಮಳಗಿ, ಜಿ.ಡಿ.ಹೂಗಾರ್, ಭಗವಂತಪ್ಪ ಪುಟ್ಟಣ್ಣನವರ್, ಮಲ್ಲಿಕಾರ್ಜುನಗೌಡ ಪಾಟೀಲ್, ಕುಲಕರ್ಣಿ, ಶಶಿಧರ್ ಸಾಂಬ್ರಾಣಿ, ಎಸ್.ಕೆ.ಮಠಪತಿ, ನಿಂಗಪ್ಪ ಪಲ್ಲೇದ, ಸಿದ್ಧಪ್ಪ ಮುಪ್ಪೈನವರ್ ಮತ್ತಿತರರು ಪಾಲ್ಗೊಂಡಿದ್ದರು.

 

 

                  ಹಿರಿಯ ಪತ್ರಕರ್ತರಿಗೆ ಪದ್ಮರಾಜ ಪ್ರಶಸ್ತಿ
ಡಿಸೆಂಬರ್.15
ಹುಬ್ಬಳ್ಳಿ: ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಸೇರಿದಂತೆ 14 ಸಾಧಕರಿಗೆ ಅವ್ವ ಪ್ರಶಸ್ತಿಯನ್ನು ಡಿಸೆಂಬರ್ 16ರಂದು ಹುಬ್ಬಳ್ಳಿಯಲ್ಲಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ನ ಉಪಾಧ್ಯಕ್ಷ, ಶಾಸಕ ಎನ್.ಎಚ್.ಕೋನರಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿ ವಿಜೇತರ ಹೆಸರು :
ಡಾ. ವಿ.ಪಿ.ಐರಸಂಗ, ಸುಜಾತ ಗುರುವ, ಬಿ.ವಿ.ಲಕ್ಷ್ಮೀದೇವಿ, ಬಿ.ಎಲ್.ಪಾಟೀಲ, ರಾಮಿಗೌಡ, ಅನ್ನಪೂರ್ಣ, ಸೀತಾ ಡಿ.ಛಪ್ಪರ, ಡಿ.ಟಿ.ಪಾಟೀಲ, ಪಂಚಯ್ಯ ಹಿರೇಮಠ, ಶ್ರೀಕಾಂತ ದೇಶಪಾಂಡೆ, ದೇವಪ್ಪ ಮೋರೆ, ಶಾಂತಿಲಾಲ್ ಓಸ್ತವಾಲ, ಪ್ರವೀಣ ಶಿವೇಗೌಡ ಮತ್ತು ಆರ್.ಎಂ.ದರಗದ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರೂ 5 ಸಾವಿರ ನಗದು, ಪ್ರಶಸ್ತಿ ಫಲಕ, ಶಾಲನ್ನು ಪ್ರಶಸ್ತಿ ಒಳಗೊಂಡಿದೆ ಎಂದು ಅವರು ತಿಳಿಸಿದರು.

 

             ಹೊಸ ತಿರುವು ಪಡೆದ ನವಲೂರು ಗುಂಡು ಹಾರಿಸಿದ ಪ್ರಕರಣ
ಡಿಸೆಂಬರ್.14
ಧಾರವಾಡ: ಇಲ್ಲಿನ ನವಲೂರ ಸಮೀಪದ ರೆಸಾರ್ಟ್ ಬಳಿ ಮಂಗಳವಾರ ರಾತ್ರಿ ಕೆಲವರು ಗುಂಡು ಹಾರಿಸಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಆರೋಪಿಗಳು ಸಚಿವ ವಿನಯ ಕುಲಕರ್ಣಿ ಇಲ್ಲವೆ ಯೋಗೀಶಗೌಡ ಗೌಡರ ಕೊಲೆ ಆರೋಪಿ ಬಸವರಾಜ ಮುತ್ತಗಿ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಪೊಲೀಸ್ ಇಲಾಖೆ ಸಂಶಯ ವ್ಯಕ್ತಪಡಿಸಿದೆ.
ಗುಂಡು ಹಾರಿಸಿದ ಪ್ರಕರಣ ಕುರಿತಂತೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಬುಧವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
''ಮೂವರು ಆರೋಪಿಗಳು ಏಕಾಏಕಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ರೆಸಾರ್ಟ್ನಲ್ಲಿ ಬಸವರಾಜ ಮುತ್ತಗಿ ಇದ್ದರು. ಸಚಿವರೂ ಮದುವೆ ಆರತಕ್ಷತೆಗೆ ಇನ್ನೇನು ಬರುವವರಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ ಏತಕ್ಕೆ ಗುಂಡು ಹಾರಿಸಲಾಯಿತು ಎಂಬುದರ ಕುರಿತು ತನಿಖೆ ನಂತರ ಸ್ಪಷ್ಟತೆ ಸಿಗಲಿದೆ,'' ಎಂದು ತಿಳಿಸಿದರು.
''ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಮಲಪ್ರಭಾ ನಗರದ ಹನುಮಂತಗೌಡ ಪಾಟೀಲ, ಆರೋಗ್ಯ ನಗರದ ರಾಘವೇಂದ್ರ ಹಾಗೂ ನಾಗರಾಜ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ 307 (ಕೊಲೆಗೆ ಯತ್ನ) ಪ್ರಕರಣ ದಾಖಲಿಸಲಾಗಿದೆ. ಬಂಧಿತರ ಬಳಿ 5.4 ಲಕ್ಷ ರೂ. ಸಿಕ್ಕಿದೆ. ಈ ಹಣ ಎಲ್ಲಿಯದು ಎಂಬುದರ ಕುರಿತೂ ವಿಚಾರಣೆ ನಡೆದಿದೆ. ಆರೋಪಿಗಳಿಂದ ಒಂದು ರಿವಾಲ್ವರ್, 4 ಜೀವಂತ ಗುಂಡು, 2 ಹಾರಿದ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ,'' ಎಂದರು.

 

     123 

 ಕಣ್ಣೇ ಇಲ್ಲದ ಕುಟುಂಬಕ್ಕೆ ಆತ್ಮಸ್ಥೈರ್ಯವೇ ಆಸರೆ

 ಡಿಸೆಂಬರ್.12

 ಹುಬ್ಬಳ್ಳಿ: ಒಂದೇ ಕುಟುಂಬ, 6 ಜನ ಅಂಧರು.! ಸಹಾಯ ಮಾಡಲು ನಾ ಮುಂದೆ ತಾ ಮುಂದೆ ಎಂದು ಬಂದವರು ಹೆಚ್ಚು , ಆದರೆ ಬರೀ ಪ್ರಚಾರ ಪಡೆದುಕೊಂಡರೆ ಹೊರತು, ಸಹಾಯದ ಹಸ್ತ ಮಾತ್ರ ಚಾಚಲಿಲ್ಲ. ಅಂಧರಾದರೂ ಎಲ್ಲರಂತೆ ಬದುಕು ರೂಪಿಸಿಕೊಂಡು ಜೀವನ ಬಂಡಿ ಸಾಗಿಸುತ್ತಿದ್ದಾರೆ. ಇದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿನ ಬಾಣಕರ ಕುಟುಂಬ. ಈ ಕುಟುಂಬದ ಮುಖ್ಯಸ್ಥ ಕರೆಪ್ಪ ಬಾಣಕರ ಎಂಬಾತನಿಗೆ ನಾಲ್ಕು ಜನ ಹೆಣ್ಣು ಮಕ್ಕಳು. ಆದರೆ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಬೆಳಕು ನೋಡುವ ಸೌಭಾಗ್ಯವೇ ಇಲ್ಲ. ಇತನ ಸಹೋದರ ಹಾಗೂ ಸಹೋದರಿ ಸಹ ಅಂಧರು. ಇದಕ್ಕೂ ಮೇಲಾಗಿ ಕಿತ್ತು ತಿನ್ನುವ ಬಡತನ. ಜಿಲ್ಲೆಗೆ ಯಾರಾದರೂ ನಾಯಕರು, ಅಧಿಕಾರಿಗಳು ಆಗಮಿಸಿದ್ದಾರೆಂದರೆ ಸಾಕು, 6 ಜನ ಅಂಧರು ಸಾಲಾಗಿ ನಿಂತು ಸಹಾಯಕ್ಕೆ ಅಂಗಲಾಚಿದ್ದಾರೆ. ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದ ನಾಯಕರನ್ನು, ಅಧಿಕಾರಿಗಳನ್ನು ತಮ್ಮ ಬದುಕಿಗೆ ಆಶಾಕಿರಣ ನೀಡಿ ಎಂದು ಕೇಳಿಕೊಂಡಿದ್ದಾರೆ .ಆದರೆ ಕೇಳಿದ ಪ್ರತಿಯೊಬ್ಬರು ನಾನಿದ್ದೇನೆ ಎಂಬ ಭರವಸೆ ನೀಡಿದ್ದಾರೆಯೇ ಹೊರತು ಸಹಾಯದ ಕರುಣೆಯ ಮಾತ್ರ ಪ್ರದರ್ಶಿಸಿಲ್ಲ. ಇಂತಹ ಪೊಳ್ಳು ಭರವಸೆ ಮಾತುಗಳಿಂದ ರೋಸಿ ಹೋಗಿದ್ದಾರೆ.ಇತ್ತ ಬಾಡಿಗೆ ಮನೆಯಲ್ಲಿ ಮಾಲೀಕರು ಬದುಕು ಸಾಗಿಸಿದರು ಬದುಕಿನಲ್ಲಿ ಆಶಾಭಾವನೆ ಹೊಂದಿದ್ದಾರೆ. ಕಾಂಗ್ರೆಸ್ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಧಾರವಾಡದ ಕಲಾಭವನದಲ್ಲಿ ಅಭಿಯಾನ ಸದಸ್ಯತ್ವದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದಾಗ, ಈ ಅಂಧರನ್ನು ಕಂಡು ಅಂದಿನ ರಾಜ್ಯಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣಭೈರೇಗೌಡ ಹಾಗೂ ಅಂದಿನ ಜಿಲ್ಲಾಧಿಕಾರಿಗೆ ಇವರ ಯೋಗಕ್ಷೇಮದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ತಿಳಿಸಿದ್ದರು.ಆದರೆ ಭರವಸೆ ಮಾತ್ರ ಮತ್ತೆ ಕನಸಾಗಿಯೇ ಅಂಧರ ಪಾಲಿಗೆ ಉಳಿಯಿತು. ಇಂತಹ ಭರವಸೆ ಮಾತಿಗೆ, ಜನರ ಕೆಟ್ಟ ಅನುಕಂಪಕ್ಕೆ ಮನನೊಂದ ಅಂಧ ಕುಟುಂಬ ಸದ್ಯ ರಾಮನಗರದ ಆದಿ ಚುಂಚನಗಿರಿ ಆಶ್ರಮದಲ್ಲಿದೆ. ಕುಟುಂಬ ಮುಖ್ಯಸ್ಥ ಕರೆಪ್ಪ ಅಲ್ಲಿಯೇ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಆತನ ನಾಲ್ಕು ಜನ ಅಂಧ ಮಕ್ಕಳು ರೇಖಾ (14), ಸುರೇಖಾ(12), ಚಂದ್ರಿಕಾ (8), ರೇಖಾ (6) ರಾಮನಗರ ಜಿಲ್ಲೆಯ ಅಂಬಾಲ ಗಂಗಾಧರನಾಥ ಅಂಧ ಮಕ್ಕಳ ಶಾಲೆಯಲ್ಲಿದ್ದಾರೆ. ಬರುವ ನಾಲ್ಕೂವರೆ ಸಾವಿರ ಸಂಬಳದಲ್ಲಿ ಅಂಧ ಸಹೋದರ ಸಣ್ಣಕರೆಪ್ಪ (30), ಸಹೋದರಿ ಮಂಜುಳಾ (26), ತನ್ನ ಕುಟುಂಬ ಹಾಗೂ ಹೆಬ್ಬಳ್ಳಿಯಲ್ಲಿನ ವೃದ್ಧ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.

 

 

   456 

ಆಸ್ತಿ ಕೇಳಿದ್ದಕ್ಕೆ ಮಗನನ್ನೇ ಕೊಂದ ತಾಯಿ

ಡಿಸೆಂಬರ್-11

ಹುಬ್ಬಳ್ಳಿ: ಆಸ್ತಿಗಾಗಿ ಹೆತ್ತ ತಾಯಿಯೇ ಮಗನನ್ನು ಕೊಲೆ ಮಾಡಿರೋ ಘಟನೆ ಹುಬ್ಬಳ್ಳಿಯ ನಗರದ ಅರಳಿಕಟ್ಟೆ ಕಾಲೋನಿಯ ನಡೆದಿದೆ. 30 ವರ್ಷದ ಇಮ್ರಾನ್ ನೂರ್ ಅಹ್ಮದ್ ಕೊಲೆಯಾದ ದುರ್ದೈವಿಯಾಗಿದ್ದು. ತಾಯಿ ಮೌಸಂಬಿ ಹಾಗೂ ಸಂಬಂಧಿಕರು ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ಇಮ್ರಾನ್ ನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ. ಇಮ್ರಾನ್ ನನ್ನು ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಸಹಜ ಸಾವು ಎಂದು ಬಿಂಬಿಸಲಾಗಿತ್ತು. ಹಾಗಾಗಿ ಮೃತನ ಪತ್ನಿಯ ಸಂಬಂಧಿಕರು ಶಹರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶವವನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.

 

 

 

    456 

ಗೋವಾದಲ್ಲಿ ನಾಪತ್ತೆಯಾದದ್ದು, ಹುಬ್ಬಳ್ಳಿಯಲ್ಲಿ ಪತ್ತೆ

ಡಿಸೆಂಬರ್-11
ಹುಬ್ಬಳ್ಳಿ : ಉಪನಗರ ಠಾಣೆ ಪೊಲೀಸರು ಸ್ವಿಟ್ಜರ್ಲೆಂಡ್ ಪ್ರವಾಸಿಯೊಬ್ಬರು ಗೋವಾದಲ್ಲಿ ಕಳೆದುಕೊಂಡಿದ್ದ ಕ್ಯಾಮರಾವನ್ನು ಅವರಿಗೆ ವಾಪಸ್ ತಲುಪಿಸಿದ್ದಾರೆ. ಡಿ. 6 ರಂದು ಭಾರತ ಪ್ರವಾಸದಲ್ಲಿರುವ ಹಲ್ಡಿಮನ್ ಅವರು 64 ಸಾವಿರ ರೂ. ನ ನಿಕಾನ್ ಕ್ಯಾಮರಾ ಕಳೆದುಕೊಂಡಿದ್ದರು. ಆ ಕ್ಯಾಮರಾ ಸಿಕಂದ್ರಾಬಾದ್ ನ ಪ್ರಭಾಕರ್ ಅವರಿಗೆ ಸಿಕ್ಕಿತ್ತು. ಸ್ಥಳೀಯ ಠಾಣೆಗೆ ವಿಷಯ ತಿಳಿಸಿದ ಅವರು, ವಾರಸುದಾರರು ಬಂದರೆ ತಮ್ಮನ್ನು ಸಂಪರ್ಕಿಸುವಂತೆ ಹೇಳಿ ಬಂದಿದ್ದರು. ಹಲ್ಡಿಮನ್ ಅವರು ಹುಬ್ಬಳ್ಳಿಗೆ ಬಂದು ದೂರು ನೀಡಿದ್ದರು. ಬಳಿಕ ಗೋವಾದಲ್ಲಿ ಕಾನ್ಸ್ ಟೇಬಲ್ ಆಗಿರುವ ತಮ್ಮ ಸ್ನೇಹಿತನಿಗೆ ಇಲ್ಲಿನ ಕಾನ್ಸ್ ಟೇಬಲ್ ಆರ್. ಎಸ್. ಗುಂಜಾಳ ದೂರವಾಣಿ ಕರೆ ಮಾಡಿ ಈ ಬಗ್ಗೆ ವಿಚಾರಿಸಿದರು.ಶ್ರೆರೇಯಸ್ ಅವರು ನೀಡಿದ ಮಾಹಿತಿ ಮೇರೆಗೆ ಪ್ರಭಾಕರ್ ಅವರಿಗೆ ಕರೆ ಮಾಡಿದಾಗ ಅವರೂ ಹುಬ್ಬಳ್ಳಿಯಲ್ಲಿದ್ದರು. ಇದರಿಂದಾಗಿ ಅವರಿಂದ ಕ್ಯಾಮರಾ ಪಡೆದುಕೊಂಡ ಉಪನಗರ ಠಾಣೆ ಪೇದೆಗಳಾದ ಅರ್.ಜಿ. ನಾಯಕ ಹಾಗೂ ಆರ್.ಎಸ್. ಗುಂಜಾಳ ಅವರು ಹಲ್ಡಿಮನ್ ಅವರಿಗೆ ಅದನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

 

 

                                                                                       

ತಪ್ಪು ಮಾಡಿಲ್ಲ ನಿರ್ದೋಷಿಯಾಗಿ ಹೊರಬರುತ್ತಾರೆ: ಭಾವನಾ

ಡಿಸೆಂಬರ್-9 

ಧಾರವಾಡ: ನನ್ನ ತಂದೆ ಮಹಾನ್ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿಲ್ಲ. ಹೋರಾಟದ ಮೂಲಕವೇ ಬೆಳೆದು ಬಂದವರು. ಹೋರಾಟದ ಮೂಲಕವೇ ಪ್ರಕರಣದಲ್ಲೂ ನಿರ್ದೋಷಿಯಾಗಿ ಹೊರಬರುತ್ತಾರೆ ಎಂದು ರವಿ ಬೆಳಗೆರೆ ಅವರ ಪುತ್ರಿ ಭಾವನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಬೆಳಗೆರೆ ವಿರುದ್ಧ ಯಾರೂ ದೂರು ನೀಡಿಲ್ಲ. ಶಶಿಧರ್ ಮುಂಡೇವಾಡಗಿ ಎಂಬ ವ್ಯಕ್ತಿಯ ಹೇಳಿಕೆ ಆಧರಿಸಿ ನಮ್ಮ ತಂದೆಯನ್ನು ಬಂಧಿಸಿದ್ದಾರೆ. ನನ್ನ ತಂದೆಯ ವಿರುದ್ಧ ಸುನಿಲ್ ಹೆಗ್ಗರವಳ್ಳಿ ಕೂಡ ದೂರು ನೀಡಿಲ್ಲ. ಕೇವಲ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೇ ದೂರಿಲ್ಲದೆ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಲಾಗಿದೆ. ಇದು ನ್ಯಾಯಾಲಯದಲ್ಲಿ ಸಾಬೀತಾಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಸರಿಯಾದ ಸಾಕ್ಷಿಗಳಿಲ್ಲ ಎಂಬುದು ನಮ್ಮ ವಾದ. ಕೇವಲ ಹೇಳಿಕೆ ಆಧರಿಸಿ ಬಂಧಿಸಿರುವುದು ಸರಿಯಲ್ಲ. ನಮ್ಮ ತಂದೆ ಅತಿದೊಡ್ಡ ವ್ಯಕ್ತಿಯಾಗಿದ್ದು , ಇಷ್ಟೆಲ್ಲ ಸಾಧನೆ ಮಾಡಿದ ಮೇಲೆ ಸುಪಾರಿ ಕೊಟ್ಟು ಕೊಲೆ ಮಾಡಿಸುವ ಮಟ್ಟಕ್ಕೆ ಇಳಿಯುವವರಲ್ಲ. ಜೊತೆಗೆ ಕೊಲೆ ಮಾಡಿಸುವ ಅಗತ್ಯವೂ ಅವರಿಗೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಲು ಹೋಗುವುದಿಲ್ಲ. ಎರಡನೇ ಸಂಬಂಧ ಇರಬಹುದು, ಇಲ್ಲದೇ ಇರಬಹುದು, ಅದಕ್ಕೂ ಸುನಿಲ್ ಹೆಗ್ಗರವಳ್ಳಿಗೂ ತಳಕು ಹಾಕಿಕೊಂಡಿರಬಹುದು. ಇದ್ಯಾವುದು ನಮಗೆ ಮುಖ್ಯ ಅಲ್ಲ. ನಮ್ಮ ತಂದೆ ಪ್ರಾಮಾಣಿಕವಾಗಿ ಪ್ರೀತಿ ಕೊಟ್ಟಿದ್ದಾರೆ. ನಮ್ಮ ಮೂರು ಜನ ಮಕ್ಕಳಿಗೂ ಅವರು ಒಳ್ಳೆಯ ತಂದೆ. ಅವರ ಬೆಂಬಲಕ್ಕೆ ನಾವಿದ್ದೇವೆ. ನಮ್ಮ ತಂದೆಯ ಪತ್ರಿಕೋದ್ಯಮದಲ್ಲಿ ಕೆಲವರಿಗೆ ತೊಂದರೆಯಾಗಿದ್ದರೂ ಬಹಳಷ್ಟು ಮಂದಿಗೆ ಒಳ್ಳೆಯದಾಗಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಅವರ ದೈಹಿಕವಾಗಿ ಕುಗ್ಗಿದ್ದು , ಬರವಣಿಗೆ ಅವರ ಕೆಚ್ಚು ಕಡಿಮೆಯಾಗಿಲ್ಲ. ಈಗಲೂ ಅವರು ದಾಂಡೇಲಿ ಮನೆಯಲ್ಲಿ ಕುಳಿತು ಬರೆಯುತ್ತಲೇ ಇರುತ್ತಾರೆ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ನಾನು ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡುವ ಅಗತ್ಯವಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಲಿ. ಸತ್ಯ ತಾನಾಗಿಯೇ ಹೊರಬರಲಿದೆ. ನಿನ್ನೆ ಸಿಸಿಬಿ ಪೊಲೀಸರು ನಮ್ಮ ತಂದೆಯನ್ನು ಬಂಧಿಸಲು ಬಂದಾಗ ಅವರ ಆರೋಗ್ಯ ಸರಿಯಿರಲಿಲ್ಲ. ಮೊದಲು ಚಿಕಿತ್ಸೆ ಪಡೆಯಿರಿ ನಂತರ ವಿಚಾರಣೆಗೆ ಹಾಜರಾಗಿ ಎಂದು ನಾನು ಸಲಹೆ ಮಾಡಿದ್ದೆ. ಆದರೆ ಅವರು ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ. ಚಿಕಿತ್ಸೆಗೂ ಮುನ್ನ ವಿಚಾರಣೆ ಮುಖ್ಯ. ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ನನಗೆ ಹೇಳಿದರು. ಪೊಲೀಸರು ನಮ್ಮ ತಂದೆಯನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅವರ ದೇಹದಲ್ಲಿ ಯಾವುದೆ ಆಲ್ಕೋಹಾಲ್ ಅಂಶಗಳಿಲ್ಲ. ಎಲ್ಲವೂ ಸಮಸ್ಥಿತಿಯಲ್ಲಿದೆ. ಅವರಿಗೆ ದಿನನಿತ್ಯ ಕಾಡುವಂತೆ ಮಧುಮೇಹ ಮತ್ತು ಥೈರಾಡ್ ಸಮಸ್ಯೆಗಳಿವೆ. ಆರೋಗ್ಯ ಸರಿಯಿಲ್ಲ ಎಂದು ಭಾವನ ಹೇಳಿದರು.

 

    123 

ಉಪೇಂದ್ರ ನೇತೃತ್ವದ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆ

 ಡಿಸೆಂಬರ್-9

 ಹುಬ್ಬಳ್ಳಿ: ನಮ್ಮ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆ ದೊರೆತಿದೆ. ಆ ಕಾರಣಕ್ಕೆ ಸುದ್ದಿಗೋಷ್ಠಿಗೆ ಆಟೋ ಮೂಲಕ ಬಂದಿರುವುದಾಗಿ ನಟ ಉಪೇಂದ್ರ ಹೇಳಿದರು. ಹುಬ್ಬಳ್ಳಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಓರ್ವ ನಾಗರಿಕನಾಗಿ ಸುಮ್ಮನೆ ಕುಳಿತುಕೊಳ್ಳಬಾರದು ಎಂಬ ಕಾರಣಕ್ಕೆ ಬಂದಿದ್ದೇನೆ. ಎಂದ ಅವರು, ರಾಜ್ಯದ ೨೨೪ಕ್ಷೇತ್ರಗಳಲ್ಲಿ ಪ್ರಜಾಕೀಯ ಪಕ್ಷ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆ, ಅವರ ಸರಿ-ತಪ್ಪುಗಳಿಗೆ ನಾನೇ ಹೊಣೆ ಎಂದು ನಟ ಉಪೇಂದ್ರ ಹೇಳಿದರು.ನಮ್ಮ ಪ್ರಜಾಕೀಯ ಪಕ್ಷಕ್ಕೆ ಆಟೋ ಚಿಹ್ನೆ ದೊರೆತಿದೆ. ಆ ಕಾರಣಕ್ಕೆ ಸುದ್ದಿಗೋಷ್ಠಿಗೆ ಆಟೋ ಮೂಲಕ ಬಂದಿರುವುದಾಗಿ ಹೇಳಿದರು. ಆಟೋ ಎಂದಾಕ್ಷಣ ಎಲ್ಲರಿಗೂ ಶಂಕರ್ ನಾಗ್ ನೆನಪಾಗುತ್ತಾರೆ. ಶಂಕರ್ ನಾಗ್ ಅವರಿಗೆ ಕರ್ನಾಟಕದ ಅಭಿವೃದ್ಧಿ ಬಗ್ಗೆ ಕನಸಿತ್ತು.ನಮ್ಮೆಲ್ಲರ ನೆಚ್ಚಿನ ನಟ ಶಂಕರ್ ನಾಗ್ ಕನಸನ್ನು ನನಸು ಮಾಡಬೇಕಿದೆ. ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಜಾಕೀಯ ಕೆಲಸ ಮಾಡಲಿದೆ ಎಂದರು.ಜಾತಿ, ಧರ್ಮ, ಭಾವನಾತ್ಮಕ ವಿಚಾರಗಳಿಂದ ಚುನಾವಣೆ ವ್ಯವಸ್ಥೆ ದೂರವಿರಬೇಕು. ಅಭಿವೃದ್ಧಿ, ಶಿಕ್ಷಣ, ವೈದ್ಯಕೀಯ ಸೇವೆ, ಜನ ಸೇವೆ ಉದ್ದೇಶವನ್ನು ಪ್ರಜಾಕೀಯ ಪಕ್ಷ ಹೊಂದಿದೆ ಎಂದು ನಟ ಉಪೇಂದ್ರ ಹೇಳಿದರು.

 

 

44  ಸಿದ್ದರಾಮಯ್ಯರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಲಿ: ಪ್ರಹ್ಲಾದ್
 ಡಿಸೆಂಬರ್-9
ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಕ್ಕೆ ಮಣಿಶಂಕರ ಅಯ್ಯರ್ ಅವರನ್ನು ಉಚ್ಛಾಟಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಉಚ್ಚಾಟಿಸಲಿ ಎಂದು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ''ನರೇಂದ್ರ ಮೋದಿ ಅವರನ್ನು ನೀಚ ಎಂದು ನಿಂದಿಸಿದ್ದ ಮಣಿಶಂಕರ ಅಯ್ಯರ್ ಅವರನ್ನು ಉಚ್ಚಾಟಿಸಿದಂತೆ ಮೋದಿಯವರನ್ನು ನರಹಂತಕ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಿ ಎಂದು ಅಗ್ರಹಿಸಿದರು.
2014, ಮಾ.23ರಂದು ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ, ಬಿಜೆಪಿ ಪ್ರಧಾನಿ ಅಭ್ಯರ್ಥಿ 'ನರೇಂದ್ರ ಮೋದಿ ಒಬ್ಬ ನರಹಂತಕ' ಎಂದು ಟೀಕಿಸಿದ್ದರು.
ಗುಜರಾತ್ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ವೇಳೆ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ಕರೆದಿದ್ದಲ್ಲದೆ 'ಸಭ್ಯತೆ' ಇಲ್ಲದವನು ಎಂದು ಹೇಳಿದ್ದರು. ಈ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗಿತ್ತು.
ಈ ಹಿನ್ನೆಯಲ್ಲಿ ಕಾಂಗ್ರೆಸ್ ಮಣಿಶಂಕರ್ ಅಯ್ಯರ್ ಪಕ್ಷದಿಂದ ಅಮಾನತು ಮಾಡಿತು.

 

 

     456 

ಪ್ರತಾಪ್ ಸಿಂಹರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ: ವಿನಯ್ ಕುಲಕರ್ಣಿ

 ಡಿಸೆಂಬರ್-6

 ಧಾರವಾಡ: ಪ್ರತಾಪ್ ಸಿಂಹ ಹನುಮ ಜಯಂತಿ ವಿವಾದ ಕಾಂಗ್ರೆಸ್, ಬಿಜೆಪಿ ಉಭಯ ಪಕ್ಷದ ನಾಯಕರಿಗೆ ಪರಸ್ಪರ ಮೂದಲಿಸಿಕೊಳ್ಳಲು ವಿಷಯ ಒದಗಿಸಿದೆ.ನಿನ್ನೆಯಿಂದಲೂ ಪರಸ್ಪರ ಕೆಸೆರೆರಚಾಟದಲ್ಲಿ ತೊಡಗಿರುವ ಉಭಯ ಪಕ್ಷಗಳ ನಾಯಕರ ಪಟ್ಟಿಗೆ ಇಂದು ಗಣಿ ಸಚಿವ ವಿನಯ್ ಕುಲಕರ್ಣಿ ಸೇರ್ಪಡೆಗೊಂಡಿದ್ದಾರೆ.ಧಾರವಾಡದಲ್ಲಿ ಮಾತನಾಡಿದ ಅವರು 'ಪ್ರತಾಪ್ ಸಿಂಹ ಅವರಿಗೆ ಒಳ್ಳೆಯ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೆ ಒಳಿತು' ಎನ್ನುವ ಮೂಲಕ ಪ್ರತಾಪ್ ಸಿಂಹ ಅವರನ್ನು ಹುಚ್ಚನಿಗೆ ಹೋಲಿಸಿದ್ದಾರೆ.
'ಪ್ರತಾಪ್ ಸಿಂಹ್ ಈ ಹಿಂದೆ ಚನ್ನಮ್ಮ, ಓಬವ್ವ ಬಗ್ಗೆ ಮಾತಾಡಿದ್ರು ಈಗ ಮತ್ತೊಂದು ಅವಾಂತರ ಮಾಡಿಕೊಂಡಿದ್ದಾರೆ ಬಿಜೆಪಿಯವರು ಪ್ರತಾಪ್ ಸಿಂಹ್ ವಿರುದ್ಧ ಯಾಕೆ ಕ್ರಮ ಕೈಗೊಳ್ತಾ ಇಲ್ಲ ಎಂದು ಪ್ರಶ್ನಿಸಿದ ಅವರು. ಇತಿಹಾಸದ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಮಾತಾಡಿದಾಗ ಇವರಿಗೆ ದೇಶ ಪ್ರೇಮ ನೆನಪಿಗೆ ಬರೊಲ್ಲ, ಎಂದು ಅವರು ಬಿಜೆಪಿ ಮೇಲೆ ಹರಿಹಾಯ್ದರು.ಆದರೆ ಪ್ರತಾಪ್ ಸಿಂಹ ಅವರು 'ಕಿತ್ತೂರು ಚೆನ್ನಮ್ಮ, ಓಬವ್ವ ಅವರ ಹಾಕಲಾಗಿದ್ದ ಪೋಸ್ಟ್ಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅವರ ಮೇಲೂ ಹರಿಹಾಯ್ದ ವಿನಯ್ ಕುಲಕರ್ಣಿ ಪ್ರಹ್ಲಾದ ಜೋಶಿ ಬರಲಿರುವ ಚುನಾವಣೆ ಮುಂದಿಟ್ಟುಕೊಂಡು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಚುನಾವಣೆ ಸಮೀಪ ಇದ್ದರಿಂದ ಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಜೊತೆ ನನ್ನ ಹೆಸರು ತಳಕು ಹಾಕಲು ನೊಡುತ್ತಿದ್ದಾರೆ ಎಂದು ಆರೋಪಿಸಿದರು.ಸಂಸದ ಪ್ರಹ್ಲಾದ ಜೋಷಿ ಅವರಿಗೆ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದ ಅವರು ಧಾರವಾಡ ಜಿಲ್ಲೆಯಲ್ಲಿ 100 ಕೋಟಿ ಅನುದಾನ ಹಾಗೆ ಇದೆ. ಆ ಕುರಿತು ಚರ್ಚೆ ಮಾಡುವುದನ್ನು ಬಿಟ್ಟು ನನ್ನ ವಿರುದ್ಧ ಷಡ್ಯಂತ್ರ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿನಯ್ ಕುಲಕರ್ಣಿ, ಬಿಜೆಪಿಗೆ ಲಿಂಗಾಯತರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು. ಬಿಜೆಪಿಯಲ್ಲಿ 9 ಲಿಂಗಾಯತ ಸಂಸದರು ಇದ್ದಾರೆ ಅವರಲ್ಲಿ ಒಬ್ಬರನ್ನಾದರೂ ಕೇಂದ್ರದಲ್ಲಿ ಸಚಿವರನ್ನಾಗಿಸಬೇಕಿತ್ತು ಎಂದರು.ಡಿಸೆಂಬರ್ 10 ಕ್ಕೆ ವಿಜಯಪುರ ಜಿಲ್ಲೆಯಲ್ಲಿ ಬ್ರಹತ್ ಲಿಂಗಾಯತ ಸಮಾವೇಶ ನಡೆಸಲಾಗುವುದು. ಲಿಂಗಾಯತ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.ಚುನಾವಣೆ ಬಗ್ಗೆ ಮಾತನಾಡಿದ ಅವರು ಗ್ರಾಮೀಣ ಕ್ಷೇತ್ರದಿಂದ ಚುನಾವಣೆ ನಿಲ್ಲುತ್ತೆನೆ, ಕ್ಷೇತ್ರ ಬಿಟ್ಟು ಕೊಡು ಎಂದರೆ ಅದಕ್ಕೂ ಸಿದ್ದನಾಗಿದ್ದೇನೆ, ಒಟ್ಟಿನಲ್ಲಿ ಹೈಕಮಾಂಡ್ ಆದೇಶದಂತೆ ನಡೆಯುತ್ತೇನೆ ಎಂದರು.

 

 

 

444  ಕುಲಕರ್ಣಿ ವಿರುದ್ಧ ಪ್ರತಾಪ್ ಸಿಂಹ ಪ್ರಶ್ನೆ
 ಡಿಸೆಂಬರ್-6
 ಧಾರವಾಡ : ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಪ್ರಶ್ನೆಯೊಂದನ್ನು   ತೇಲಿಬಿಟ್ಟು ಸಚಿವ ವಿನಯ್ ಕುಲಕರ್ಣಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
 ಫೇಸ್ ಬುಕ್ ನಲ್ಲಿ ತಮ್ಮ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಸಂಸದರು ಕೇಳಿದ್ದು, ಈ ವೇಳೆ   ಅವರ ಅಭಿಮಾನಿಗಳಿಂದ ಉತ್ತರವಾಗಿ ಧಾರವಾಡ ವಿನಯ್ ಕುಲಕರ್ಣಿ ಹೆಸರು   ಬಳಕೆಯಾಗಿದೆ. ಕೆಲವರು ಆಕ್ಷೇಪಾರ್ಹ ರೀತಿಯ ಉತ್ತರಗಳನ್ನು ಸಹ ನೀಡಿದ್ದಾರೆ.
 2007 ರಲ್ಲಿ ಶೂಟೌಟ್ ನಲ್ಲಿ ಪ್ರಕರಣದ ಆರೋಪಿ ಯಾರು? ವೈದ್ಯರಿಗೆ ಕಪಾಳಕ್ಕೆ   ಹೊಡೆದವರು ಯಾರು? ಜಿ.ಪಂ ಸದಸ್ಯ ಹತ್ಯೆಲ್ಲಿ ಭಾಗಿಯಾಗಿರುವ ಶಂಕೆ   ಎದುರಿಸುತ್ತಿರುವವರು ಯಾರು? ಹೀಗೆ ಫೇಸ್ ಬುಕ್ ನಲ್ಲಿ ಪ್ರಶ್ನೆಗಳ ಮೂಲಕ ಚರ್ಚೆಗೆ   ನಾಂದಿ  ಹಾಡಿದ್ದಾರೆ.

 

    45

ಮೃತ ರೈತ ಕುಟುಂಬಕ್ಕೆ ಪರಿಹಾರ ಚೆಕ್ : ಸಚಿವ ಕುಲಕರ್ಣಿ

ಡಿಸೆಂಬರ್-5

ಧಾರವಾಡ : ಸಾಲಭಾದೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಕುಟುಂಬಗಳಿಗೆ ಸಚಿವ ವಿನಯ್ ಕುಲಕರ್ಣಿ ಚೆಕ್ ವಿತರಿಸಿದರು. ಮಾರಡಗಿ ಗ್ರಾಮದ ಸೈದುಸಾಬ್ ಮಕ್ತಂಸಾಬ್ ದರಗದ ಅವರ ಪತ್ನಿ ರೆಹಮತ್ ಬಿ ಸೈದುಸಾಬ್ ದರಗದ ಅವರಿಗೆ ಸಚಿವರು 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು. ಸೋಮಾಪುರ ಗ್ರಾಮದ ಹನುಮಂತಪ್ಪ ನಾವಳ್ಳ ಮತ್ತು ವನಳ್ಳಿ ಗ್ರಾಮದ ರಾಮಪ್ಪ ನಾಗಪ್ಪ ಅವರ ಕುಟುಂಬಕ್ಕೆ 5 ಲಕ್ಷ ರೂ.ಗಳ ಚೆಕ್ ವಿತರಿಸಿದರು

 

88  ಮೌಲ್ವಿ ತಲೆ ಕಡಿದವರಿಗೆ 10 ಲಕ್ಷ ರೂ.: ಯಂಕಂಚಿ
ಡಿಸೆಂಬರ್-5
 ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶಪೇಟೆಯೇ ನನಗೆ ಪಾಕಿಸ್ತಾನದಂತೆ ಕಾಣುತ್ತದೆ ಎಂದು  ಮೌಲ್ವಿಯೊಬ್ಬರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
 ಹುಬ್ಬಳ್ಳಿ ಗಣೇಶಪೇಟೆಯ ದೊಡ್ಡ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ, ಪಾಕಿಸ್ತಾನವನ್ನು  ನೋಡಲು ಪಾಕಿಸ್ತಾನಕ್ಕೇ ಹೋಗಬೇಕಿಲ್ಲ. ಹುಬ್ಬಳ್ಳಿಯ ಗಣೇಶಪೇಟೆಯೇ ಪಾಕಿಸ್ತಾನದಂತೆ ಇದೆ  ಎಂದು ಹೇಳಿದ್ದು, ಈ ವಿಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿದೆ.
 ಮೌಲ್ವಿ ಹೇಳಿಕೆ ನೀಡಿ 2 ದಿನಗಳಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ  ಬಿ.ಜೆ.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಗಲಕೋಟೆಯ ಬಸವರಾಜ ಯಂಕಂಚಿ, ಮೌಲ್ವಿಯ  ತಲೆ ಕಡಿದು ತಂದವರಿಗೆ 10 ಲಕ್ಷ ರೂ. ಕೊಡುವುದಾಗಿ ಘೋಷಿಸಿದ್ದಾರೆ.
 ಮೌಲ್ವಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ, ಅಲ್ಲಿಗೇ ಹೋಗಲಿ. ಅವರು ಇಲ್ಲಿರುವುದು ಬೇಡ.  ರಾಷ್ಟ್ರೀಯತೆಗೆ ಧಕ್ಕೆ ತರುವ ಹೇಳಿಕೆ ನೀಡಿರುವ ಅವರ ತಲೆ ತಂದವರಿಗೆ 10 ಲಕ್ಷ ರೂ.  ಕೊಡುತ್ತೇನೆ ಎಂದು ತಿಳಿಸಿದ್ದಾರೆ.

 

 

22  ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾರೆ: ಅರವಿಂದ್ ಬೆಲ್ಲದ
 ಡಿಸೆಂಬರ್-5
 ಹುಬ್ಬಳ್ಳಿ : ಸಚಿವ ವಿನಯ್ ಕುಲಕರ್ಣಿ ಧರ್ಮ ಮುಖವಾಡ ಮೂಲಕ ಪ್ರಕರಣ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ  ಎಂದು ಶಾಸಕ ಅರವಿಂದ್ ಬೆಲ್ಲದ ಆರೋಪ ಮಾಡಿದರು.
 ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡದ ಬಗ್ಗೆ  ಅನುಮಾನ ಇದೆ. ಹೀಗಾಗಿ ವಿನಯ್ ಕುಲಕರ್ಣಿ ಧರ್ಮ ಮುಖವಾಡ ಮೂಲಕ ಪ್ರಕರಣ ದಾರಿ ತಪ್ಪಿಸುವ ಕೆಲಸ  ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್, ಸೋಮಣ್ಣ ಬೇವಿನ ಮರದ, ಅಮೃತ ದೇಸಾಯಿ ಜಂಟಿ  ಸುದ್ದಿಗೋಷ್ಟಿಯಲ್ಲಿ ಗಂಭೀರವಾದ ಆರೋಪ ಮಾಡಿದರು.
 ಧರ್ಮ ರಾಜಕಾರ ಮಾಡುವದನ್ನು ಬಿಟ್ಟು ವಿನಯ್ ಕುಲಕರ್ಣಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು  ಎಂದು ಆಗ್ರಹಿಸಿದರು. ಅವರ ವಿರುದ್ದ ತನಿಖೆಯನ್ನು ನಡೆಸಬೇಕು. ಅದರ ಜೊತೆಗೆ ಸಂಧಾನಕ್ಕೆ ಯತ್ನಿಸಿದ ಡಿವೈಎಸ್  ಪಿ  ಸುಲ್ಪಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
 ಪ್ರಕರಣವನ್ನು ದಾರಿ ತಪ್ಪಿಸಲು ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಈ ಮೂಲಕ  ಪ್ರಕರಣ ತಿರುಚುವ ಕುತಂತ್ರ ನಡೆದಿದೆ. ಬೇರೆ ಬೇರೆಯವರನ್ನ ಕರೆತಂದು ಲಿಂಗಾಯತ ಟೋಪಿ ಹಾಕಿ ಜೋಶಿ ವಿರುದ್ದ  ಪ್ರತಿಭಟನೆ  ಮಾಡಿಸುತ್ತಿದ್ದಾರೆ. ಇಂದು ಪ್ರತಿಭಟನೆಯಲ್ಲಿ ಭಾಗಿಯಾದವರು ಲಿಂಗಾಯತ ರಲ್ಲ ಎಂದರು.
 ಇದೇ ವೇಳೆ ಮಾತನಾಡಿದ ಅಮೃತ ದೇಸಾಯಿ, ವಿನಯ್ ಕುಲಕರ್ಣಿ ವಿರುದ್ದ ನಮ್ಮ ಕಾನೂನು ಹೋರಾಟ  ಆರಂಭವಾಗಿದೆ. ಈಗಾಗಲೇ ವಿನಯ್ ಕುಲಕರ್ಣಿ ವಿರುದ್ಧ ಗುರುನಾಥ ಗೌಡ ದೂರು ನೀಡಿದ್ದಾರೆ. ಆದ್ರೆ ಪೊಲೀಸರು  ಇದುವರೆಗೂ ದೂರು ದಾಖಲಿಸಿಕೊಂಡಿಲ್ಲ. ನಾನು ವಿನಯ್ ಕುಲಕರ್ಣಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು  ತಯಾರಿ ನಡೆಸಿದ್ದೇನೆ ಎಂದರು.

 

232  ಬ್ಯಾಂಕ್ ಸಿಬ್ಬಂದಿಗಳನ್ನು ಹೊರ ಹಾಕಿ ರೈತರು ಪ್ರತಿಭಟನೆ
 ಡಿಸೆಂಬರ್-2
 ಹುಬ್ಬಳ್ಳಿ : ರೈತರೊಂದಿಗೆ ಬ್ಯಾಂಕ್ ಸಿಬ್ಬಂದಿ, ರೈತನೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು  ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿರುವ ವಿಜಯಾ ಬ್ಯಾಂಕ್ ನೌಕರರನ್ನು  ಹೊರಹಾಕಿ, ಬ್ಯಾಂಕ್ ಬೀಗ ಜಡಿದು ರೈತರು ಪ್ರತಿಭಟನೆ ಮಾಡಿದ್ದಾರೆ.
 ಬ್ಯಾಂಕ್ ಸಿಬ್ಬಂದಿಗಳು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಏನೇ ಕೇಳಿದರೂ  ಬೇಜವಾಬ್ದಾರಿತನದಿಂದ ಉತ್ತರ ನೀಡುತ್ತಾರೆ ರೈತರು ಮತ್ತು ಸಾರ್ವಜನಿಕ ಆಕ್ರೋಶ  ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
 ಇನ್ನು ಬ್ಯಾಂಕ್ ಸಿಬ್ಬಂದಿಗೆ ಸೋಮವಾರದವರೆಗೆ ಗಡುವು ನೀಡಿದ ರೈತರು ಪ್ರತಿಭಟನೆ  ಹಿಂಪಡೆದಿದ್ದಾರೆ

 

333     ಮೊಟ್ಟೆ ಸ್ಥಗಿತಕ್ಕೆ ಆಕ್ರೋಶ
 ನವಂಬರ್- 30
 ಹುಬ್ಬಳ್ಳಿ : ಅಂಗನವಾಡಿಗಳಲ್ಲಿ ಶಿಶು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಸರ್ಕಾರದ ಯೋಜನೆಯಲ್ಲಿ ಮಹತ್ವಪೂರ್ಣ '   ಮಾತೃಪೂರ್ಣ' ಯೋಜನೆಯಡಿ ನೀಡಲಾಗುತಿದ್ದ ಮೊಟ್ಟೆ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.
 ಬೆಲೆ ಏರಿಕೆಯಿಂದ ಈಗ ಧಾರವಾಡ ಜಿಲ್ಲೆಯ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮೊಟ್ಟೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಈಗ   ಒಂದು ಮೊಟ್ಟೆ 5 ರೂಪಾಯಿಂದ 6.50 ಯಿಂದ 7 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಕೇಲ ಅಂಗನವಾಡಿ ಕೇಂದ್ರಗಳಲ್ಲಿ   ಮೊಟ್ಟೆ ವಿತರಣೆ ಸ್ಥಗಿತಗೊಳಿಸಿದ್ದರೆ ಇನ್ನು ಕೇಲ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರಿಗೆ 5 ರೂಪಾಯಿಗಿಂತ ಹೆಚ್ಚಿಗೆ ಹಣ   ತಾವೇ ಸಂದಾಯ ಮಾಡಿ ಮಕ್ಕಳಿಗೆ ನೀಡಬೇಕೆಂದು ಅಲಿಖಿತ ಆದೇಶ ಸಹ ಹೊರಡಿಸಿದೆ. ಇದರಿಂದಾಗಿ ಅಂಗನವಾಡಿ   ಕಾರ್ಯಕರ್ತೆಯರಿಗೆ ಏನು ಮಾಡಬೇಕೆಂದು ತಿಳಿಯುತಿಲ್ಲ.
 ಸರ್ಕಾರ ತಾವೇ ಜಾರಿಗೆ ತಂದ ಯೋಜನೆಗಳ ಬಗ್ಗೆ ಅಷ್ಟೊಂದು ಕಾಳಜಿವಹಿಸತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು   ಅಸಮಧಾನ ವ್ಯಕ್ತಪಡಿಸುತಿದ್ದಾರೆ . ತಮ್ಮ ಸಂಬಳಸಲ್ಲಿಯೇ ಹಣ ನೀಡಿ ಮೊಟ್ಟೆ ಖರೀದಿಸಿ ಮಕ್ಕಳಿಗೆ ನೀಡಿ ಎಂದು ಇಲಾಖೆಯ   ಅಧಿಕಾರಿಗಳು ಹೇಳುತ್ತಾರೆ, ಆದರೆ ನಮಗೆ ಇರುವ ಅಲ್ಪ ಸ್ವಲ್ಪ ಸಂಬಳದಲ್ಲಿ ಹೇಗೆ ಹಣ ನೀಡಿ ಮೊಟ್ಟೆ ತರಬೇಕು ಎನ್ನುತ್ತಾರೆ   ಅಂಗನವಾಡಿ ಶಿಕ್ಷಕಿಯರು..
 ಕಾರ್ಯಕ್ರಮದ ಉದ್ದೇಶಕ್ಕೆ ಎಳ್ಳು ನೀರು; ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚು ಪೌಷ್ಠಿಕತೆ ಅಂಶಗಳನ್ನು ಒಳಗೊಂಡ   ಮಧ್ಯಾಹ್ನದ ಪೌಷ್ಠಿಕ ಊಟ ಒದಗಿಸುವ ಜೊತೆ ಮೊಟ್ಟೆ ವಿತರಣೆ ಮಾಡುವ ಮೂಲಕ ಅವರ ಪೌಷ್ಠಿಕಾಂಶದ ಪ್ರಮಾಣವನ್ನು ಹೆಚ್ಚಿಸಿ,   ಕಡಿಮೆ ತೂಕದ ಮಕ್ಕಳ ಜನನ ಶಿಶು ಮರಣ ಪ್ರಮಾಣ ಮತ್ತು ಮಾತೃತ್ವ ಮರಣ ಪ್ರಮಾಣಗಳನ್ನು ಮತ್ತು ಕಡಿಮೆ ತೂಕದ ಮಕ್ಕಳ   ಜನನ ಪ್ರಮಾಣವನ್ನು ಕಡಿಮೆ ಮಾಡುವುದಾಗಿತ್ತು.

 

222 ಹುತಾತ್ಮಯೋಧನ ಸೋದರನಿಗೆ ಸರ್ಕಾರಿ ನೌಕರಿಯ ಭರವಸೆ:ಕುಲಕರ್ಣಿ 
 ನವೆಂಬರ್ -30
 ಧಾರವಾಡ : ಮಹಾರಾಷ್ಟ್ರದ ಗ್ಯಾರಾವತಿಯಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ ಧಾರವಾಡ   ತಾಲೂಕಿನ ಮನಗುಂಡಿಯ ಸಿ. ಆರ್.ಪಿ.ಎಫ್. ವೀರಯೋಧ ಮಂಜುನಾಥ ಜಕ್ಕಣ್ಣವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ   ವಿನಯ ಕುಲಕರ್ಣಿ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
 ನಿನ್ನೆ ಸಂಜೆ ವೇಳೆ ಬೇಟಿ ನೀಡಿದ ಅವರು ಘಟನೆ ಕುರಿತು ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು ,   ಅಲ್ಲದೆ ಮೃತ ಯೋಧನ ಎರಡು ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿ ಮಕ್ಕಳಿಗೂ ಸಮಾಧಾನ ಹೇಳಿದರು.
 ಕಷ್ಟ-ಸುಖಗಳಿಗೆ ಸದಾಕಾಲವೂ ನಿಮ್ಮೊಂದಿಗೆ ನಾವಿದ್ದು ಸರ್ಕಾರದಿಂದ ಸಿಗಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು   ಒದಗಿಸುವ ವ್ಯವಸ್ಥೆ ಮಾಡುಲಾಗುವುದು ಎಂದು ಕುಟುಂಬಕ್ಕೆ ಭರವಸೆ ನೀಡಿದರು.
 ಮಂಜುನಾಥ ಜಕ್ಕಣವರ್ ಅವರ ಸಹೋದರನಾದ ಪುಂಡಲಿಕನಿಗೆ ಸಾಧ್ಯವಾದರೆ ಸರ್ಕಾರದಿಂದ ನೌಕರಿ ಕೊಡಿಸುವುದಾಗಿ   ಭರವಸೆ ನೀಡಿದರು.ಯಾವುದೇ ಕಾರಣಕ್ಕೂ ದೃತಿಗೇಡಬೇಡಿ ನಿಮ್ಮ ಜೊತೆಯಲ್ಲಿ ಸದಾ ಕಾಲ ನಾ ಇದ್ದೇನೆ ಎಂದು ಧೈರ್ಯ ಹೇಳಿದರು.

 

 

333 3  ಮತ್ತೆ ಗರಿ ಗೆದರಿದ ಮಹಾದಾಯಿ-ಕಳಸಾ ಬಂಡೂರಿ ಹೋರಾಟ
 ನವಂಬರ್ -30
 ಹುಬ್ಬಳ್ಳಿ: ಒಂದು ಕಡೆ ಮಹದಾಯಿ ಮತ್ತು ಕಳಸಾ ಬಂಡೂರಿ ಹಾರಾಟಗಾರರ ಮೇಲೆ ಹಾಕಲಾಗಿದ್ದ ಕೇಸ್ ಗಳನ್ನು   ಹಿಂಪಡೆಯುವುದಾಗಿ   ಆಡಳಿತಾ ರೂಡ ಕಾಂಗ್ರೆಸ್ ಸರ್ಕಾರ ಹೇಳಿತ್ತು .
 ಆದರೆ ಗದಗ ಜಿಲ್ಲಾ ಜೆ ಎಮ್ ಎಫ್ ಸಿ ಕೋರ್ಟ್ ರೈತ ಹೋರಾಟಗಾರರಿಗೆ ಸಮಮ್ಸ್ ಜಾರಿ ಮಾಡಿದೆ . ಹೀಗಾಗಿ ರೈತರು   ಸರ್ಕಾರದ   ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇತ್ತ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ಧಾರವಾಡ ಜಿಲ್ಲೆಯ ನವಲಗುಂದ   ತಾಲೂಕಿನಲ್ಲಿ   ಹೋರಾಟಗಾರರು ಮತ್ತೆ ರಸ್ತೆ ತಡೆದು ಹೋರಾಟ ನಡೆಸಿದರು.
 ಪಟ್ಟಣದ ರೈತ ಭವನದ ಬಳಿ ವಿಜಯಪುರ ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ರೈತ ಸೇನಾ ಕರ್ನಾಟಕ   ಕಾರ್ಯಕರ್ತರು,   ಕೇಂದ್ರ  ಹಾಗು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಮಾತನಾಡಿದ ರೈತ ಸೇನಾ   ಅಧ್ಯಕ್ಷ, ಮಹದಾಯಿ   ಸಮಸ್ಯೆ ಇತ್ಯರ್ಥದ ಜೊತೆಗೆ ಮಹದಾಯಿ ಉಗ್ರ ಹೋರಾಟದ ನಂತರ ಸಾವನ್ನಪ್ಪಿದ ಹೋರಾಟಗಾರರನ್ನ   ಪರಿಹಾರ ನೀಡಬೇಕು ಎಂದು   ಆಗ್ರಹಿಸಿದರು.
 ಇದೇ ಬೆಳೆ ವಿಮೆ ಹಾಗೂ ರೈತರು ಬೆಳೆದ ಬೆಳಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು. ಇನ್ನೊಂಡೆದೆ ಅಣ್ಣಿಗೇರಿ   ಪಟ್ಟಣದಲ್ಲಿ   ಮಹದಾಯಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಪ್ರಹ್ಲಾದ ಜೋಶಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆಯಲ್ಲಿ   ಮಹದಾಯಿ ನೀರು   ತರಿಸುವ  ಭರವಸೆ ನೀಡಿದರು. ಈ ಸಮಸ್ಯೆಯನ್ನು ಕೂಡಲೆ ಬಗೆಹರಿಸಿ ಈ ಭಾಗದ ರೈತರ ಸಮಸ್ಯೆಯನ್ನು   ಬಗೆಹರಿಸುವುದಾಗಿ   ಹೇಳಿದ್ದಾರೆ .

  

2662 2  ಬೀದಿ ನಾಯಿ ದಾಳಿಗೆ ತುತ್ತಾಗಿದ್ದ ಬಾಲಕ ಸಾವು
 ನವೆಂಬರ್-30
 ಹುಬ್ಬಳ್ಳಿ : ಬೀದಿ ನಾಯಿ ದಾಳಿಗೆ ತುತ್ತಾಗಿದ್ದ ಬಾಲಕ ಇಂದು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
 ಹುಬ್ಬಳ್ಳಿಯ ಮಂಟುರ್ ರಸ್ತೆಯ 7 ವರ್ಷದ ಆಫ್ರೀದಿ ಬೇಪಾರಿ ಮೃತ ಬಾಲಕನಾಗಿದ್ದು .ಈತ ನವೆಂಬರ್ 9 ರಂದು , ಬೆಳಿಗಿನ   ಜಾವ ಶಾಲೆಗೆಂದು ಹೊರಟಿದ್ದ ,ಆದ್ರೆ ಮಾರ್ಗ ಮದ್ಯೆ ಬಾಲಕನನ್ನು ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಯೊಂದು ಕೆನ್ನೆಗೆ   ಕಚಿತ್ತು , ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ . ವಿಷಯ ತಿಳಿದ ಬಾಲಕನ ಪೊಷಕರು, ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ   ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
 ಆದ್ರೆ ಇಂದು ಮತ್ತೆ ಬಾಲಕನಿಗೆ ಆರೋಗ್ಯದಲ್ಲಿ ಏರು ಪೇರುಪೇರಾಗಿದ್ದು ಕೂಡಲೆ ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ,  ಆದ್ರೂ ಚಿಕಿತ್ಸೆ ಫಲಿಸಿದ ಆಫ್ರೀದಿ ಬೇಪಾರಿ ಮೃತಪಟಿದ್ದಾನೆ. ಇನ್ನು ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.   ಆದ್ರೆ ಪಾಲಿಕೆ ಮಾತ್ರ ಕೈ ಕಟ್ಟಿ ಕುಳಿತಿದೆ. ಹೀಗಾಗಿ ಪಾಲಿಕೆ ವಿರುದ್ಧ ಮೃತ ಬಾಲಕನ ಸಂಬಂಧಿಗಳು ಆಕ್ರೋಶ   ವ್ಯೆಕ್ತಪಡಿಸಿದ್ದಾರೆ  ಇನ್ನಾದ್ರೂ ಪಾಲಿಕೆ ಬೀದಿ ನಾಯಿಗಳ ಹಾವಳೀಯನ್ನು ತಪ್ಪಿಸಬೇಕು ಎಂದು ಬಾಲಕನ ಸಂಬಂಧಿಗಳು   ಆಗ್ರಹಿಸಿದ್ದಾರೆ

 

 

555    ಕೇಂದ್ರಕ್ಕೆ ಸವಾಲು ಹಾಕಿದ: ಡಿಕೆಶಿ
 ನವೆಂಬರ್ -28
 ಹುಬ್ಬಳ್ಳಿ : ವಿದ್ಯುತ್ ಖರೀದಿ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ' ಎಂದು  ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದರು.
 ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 'ಕೇಂದ್ರ ಸರ್ಕಾರ 2 ರೂಪಾಯಿ 50 ಪೈಸೆಗೆ ವಿದ್ಯುತ್ ನೀಡಲು ಸಿದ್ಧವಿದೆ ಎಂದು  ಹೇಳಿಕೆ ನೀಡುತ್ತಿದ್ದಾರೆ. ಈ ದರಕ್ಕೆ ವಿದ್ಯುತ್ ನೀಡಿದ್ದೇ ಆದಲ್ಲಿ ನನ್ನ ವೈಯಕ್ತಿಕ ಕೆಲಸ ಬಿಟ್ಟು ಅವರ ಹಿಂದೆ ಅಲೆಯುವೆ' ಎಂದು ಟಾಂಗ್  ನೀಡಿದರು.
 'ಒಂದು ವೇಳೆ ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದರೆ, ಎಲ್ಲ ಖರೀದಿ ಪ್ರಕ್ರಿಯೆ ರದ್ದು ಮಾಡುವೆ' ಎಂದು  ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
 'ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲೋಡ್ ಶಡ್ಡಿಂಗ್ ಮಾಡುವುದಿಲ್ಲ. ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಸಂಪೂರ್ಣ ವಿದ್ಯುತ್  ನೀಡಲಾಗುತ್ತದೆ' ಎಂದು ಸ್ಪಷ್ಟಪಡಿಸಿದರು.
 ಯೋಗೇಶ್ ಗೌಡ ಕೊಲೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, 'ಇದು ಬಿಜೆಪಿಯವರು ಮಾಡುತ್ತಿರುವ ಸುಳ್ಳು ಆರೋಪ. ನಮ್ಮ  ಯಾವೊಬ್ಬ ಸಚಿವರು ಅಕ್ರಮವನ್ನು ಎಸಗಿಲ್ಲಾ' ಎಂದು ಹೇಳಿದರು.
 'ಪ್ರತಿಪಕ್ಷಗಳು ನಮ್ಮ ಬೆಳವಣಿಗೆ ಕಂಡು ಹತಾಶರಾಗಿದ್ದಾರೆ. ಹೀಗಾಗಿ ಕೆ.ಜೆ.ಜಾರ್ಜ್ ಹಾಗೂ ವಿನಯ ಕುಲಕರ್ಣಿ ಅವರ ಮೇಲೆ ಸುಳ್ಳು  ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಐಟಿ ದಾಳಿ ನಡೆದಾಗಲೂ ಅದೊಂದು ದೇಶದ ದೊಡ್ಡ ಹಗರಣ ಎನ್ನುವಂತೆ ಬಿಂಬಿಸಿದ್ದರು' ಎಂದರು.

  

444   ನಕ್ಸಲ್ ದಾಳಿ: ರಾಜ್ಯದ ಯೋಧ ಹುತಾತ್ಮ
 ನವೆಂಬರ್-28
 
ಧಾರವಾಡ : ಛತ್ತೀಸ್ ಗಢದಲ್ಲಿ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ತಾಲ್ಲೂಕಿನ ಮನಗುಂಡಿ ಗ್ರಾಮದ ಸಿಆರ್ಪಿಎಫ್ ಯೋಧ ಮಂಜುನಾಥ  ಶಿವಲಿಂಗಪ್ಪ ಜಕ್ಕನವರ (31) ಹುತಾತ್ಮರಾಗಿದ್ದಾರೆ.
 ಛತ್ತೀಸ್ ಗಢದಲ್ಲಿ ಸಿಆರ್ಪಿಎಫ್ನ 133 ಕೋಬ್ರಾ ಬಟಾಲಿಯನ್ದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ತಲ್ವಾರ್ಘಡಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ  ಭಾಗಿಯಾಗಿದ್ದರು. ಭಾನುವಾರ ಸಿಆರ್ಪಿಎಫ್ ಶಿಬಿರದ ಮೇಲೆ ನಕ್ಸಲರು ಹಠಾತ್ ದಾಳಿ ನಡೆಸಿದ್ದರಿಂದ ಕೆಲ ಯೋಧರು ಹುತಾತ್ಮರಾಗಿದ್ದರು. ಅವರಲ್ಲಿ  ಮಂಜುನಾಥ ಕೂಡ ಒಬ್ಬರಾಗಿದ್ದಾರೆ.
 ಹುತಾತ್ಮ ಯೋಧ ಮಂಜುನಾಥ ಅವರು, ತಂದೆ ಶಿವಲಿಂಗಪ್ಪ, ತಾಯಿ ರತ್ನವ್ವ, ಪತ್ನಿ ಕವಿತಾ (ಲಲಿತಾ) ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ. ಸುದ್ದಿ  ತಿಳಿಯುತ್ತಿದ್ದಂತೆ ತಹಶೀಲ್ದಾರ ಪ್ರಕಾಶ ಕುದರಿ, ಕಂದಾಯ ನಿರೀಕ್ಷಕ ಕೆ.ಶ್ರೀಧರ, ಗ್ರಾಮ ಲೆಕ್ಕಾಧಿ ಕಾರಿ ಅಶೋಕ ಮಾಡಳ್ಳಿ ಮಂಜುನಾಥನ  ಕುಟುಂಬದವರನ್ನು ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ.
 ಗ್ರಾಮದಲ್ಲೇ ಒಂದು ಕಡೆ ಜಾಗ ಒದಗಿಸಿ, ಅಲ್ಲೇ ಮಂಜುನಾಥನ ಅಂತಿಮ ಸಂಸ್ಕಾರ ಮಾಡಿ ಸ್ಮಾರಕ ಕಟ್ಟುತ್ತೇವೆ ಎಂಬುದಾಗಿ ಗ್ರಾಮದ ಹಿರಿಯರು  ತಹಶೀಲ್ದಾರ್ಗೆ ಮನವಿ ಮಾಡಿದರು. ಆದರೆ ಇದಕ್ಕೊಪ್ಪದ ತಹಶೀಲ್ದಾರರು, ಗ್ರಾಮದಲ್ಲಿ ಅಂತಿಮ ಸಂಸ್ಕಾರ ಮಾಡಲು ಬರುವುದಿಲ್ಲ. ಹೀಗಾಗಿ  ರುದ್ರಭೂಮಿಯಲ್ಲೇ ಅಂತಿಮ ಸಂಸ್ಕಾರ ಮಾಡಿ, ಸ್ಮಾರಕ ಕಟ್ಟಲು ಗ್ರಾಮದಲ್ಲಿ ಜಾಗ ನೀಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ. ಮೃತ ಯೋಧನ ಪಾರ್ಥಿವ  ಶರೀರ ಮಂಗಳವಾರ ಬೆಳಿಗ್ಗೆ ಮನಗುಂಡಿ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ.
 ಕುಟುಂಬದ ಹಿನ್ನೆಲೆ: ಮನಗುಂಡಿ ಗ್ರಾಮದ ಶಿವಲಿಂಗಪ್ಪ ಹಾಗೂ ರತ್ನವ್ವ ದಂಪತಿಯ 2ನೇ ಪುತ್ರನೇ ಮಜುನಾಥ. 3ನೇ ಮಗ ಉಳವಪ್ಪ ಸಹ ಭಾರತೀಯ  ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದಂಪತಿಗೆ ಒಟ್ಟು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದು, ಈ ಪೈಕಿ ಇಬ್ಬರು ಸೇನೆಯಲ್ಲಿ ಸೇವೆ  ಸಲ್ಲಿಸುತ್ತಿದ್ದರು.
 ಧಾರವಾಡದ ಅಂಜುಮನ್ ಕಾಲೇಜಿನಲ್ಲಿ ಬಿಎ ಪದವಿ ಮುಗಿಸಿದ್ದ ಮಂಜುನಾಥನಿಗೆ ಸೇನೆ ಸೇರುವ ಇಚ್ಚೆ ಇತ್ತು. ಅದರಂತೆ 2005ರಲ್ಲಿ ಸಿಆರ್ಪಿಎಫ್  ಸೇನೆಗೆ ಆಯ್ಕೆಯಾಗಿದ್ದರು. ಶಿವಮೊಗ್ಗ ಮೂಲದ ಕವಿತಾ ಎಂಬುವರನ್ನು ಮದುವೆ ಆಗಿದ್ದು,ಅವರಿಗೆ ಇಬ್ಬರು ಮಕ್ಕಳಿದ್ದಾರೆ.

  

222  ಮುಖಂಡ ಯೋಗೇಶ್ ಪರ ವಕೀಲನಿಗೆ ಸಚಿವನಿಂದ ಧಮ್ಕಿ
ನವೆಂಬರ್ -24
ಧಾರವಾಡ : ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿ
ಯೋಗೇಶ ಗೌಡ ಪರ ವಕೀಲ ಆನಂದ್ ಎನ್ನುವರಿಗೆ ಧಾರವಾಡ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ದೂರವಾಣಿ ಮೂಲಕ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಸಚಿವರ ವಿನಯ್ ಕುಲಕರ್ಣಿ ಅವರು ವಕೀಲ ಆನಂದ್ ಅವರಿಗೆ ದೂರವಾಣಿ ಮೂಲಕ ಧಮ್ಕಿ ಹಾಕಿರುವ ಆಡಿಯೋ ತುಣುಕು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದನ್ನು ನೋಡಿದರೆ ಯೋಗೇಶ್ ಗೌಡ ಹತ್ಯೆಯಲ್ಲಿ ವಿನಯ್ ಕುಲಕರ್ಣಿ ಕೈವಾಡವಿದೆಯೇ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಬಗ್ಗೆ ಸ್ವತಃ ವಕೀಲ ಆನಂದ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಚಿವರಿಂದ ತಮಗೆ ಬೆದರಿಕೆ ಇದೆ ಎಂದು ಹೇಳಿದರು. 'ನಿನ್ನೆ ನನ್ನನ್ನು ನಾಲ್ಕು ಕಾರುಗಳಲ್ಲಿ ಕೆಲವು ಅಪರಿಚಿತರು ಧಾರವಾಡ ದಿಂದ ಹಂಗರಕಿವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ. ನಾನು ಹೆದರಿಕೆಯಿಂದಲೇ ಮನೆಗೆ ಹೋದೆ' ಎಂದು ಆನಂದ್ ಹೇಳಿಕೊಂಡಿದ್ದಾರೆ.
ನಾನು ಹತ್ಯೆಯಾದ ಯೋಗೀಶ್ ಅವರ ಕುಟುಂಬಕ್ಕೆ ಕಾನೂನು ನೆರವು ನೀಡುತ್ತಿದ್ದೆ. ಇದಕ್ಕೆ ಸಚಿವರಿಂದ ವಿರೋಧ ವ್ಯಕ್ತವಾಗಿತ್ತು. ನನಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದೆಲ್ಲಾ ನಿಂದಿಸಿದ್ದಾರೆ. ಹಾಗಾಗಿ ಕೂಡಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದರು.
ಆದರೆ, ಈ ಆರೋಪವನ್ನು ವಿನಯ್ ಕುಲಕರ್ಣಿ ಅಲ್ಲಗಳೆದಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಕೈವಾಡವಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು

  

     ವಿನಯ್ ರಾಜಿನಾಮೆ ಆಗ್ರಹ: ಬಿಜಡಪಿ ಪ್ರತಿಭಟನೆ
ನವೆಂಬರ್.24
ಧಾರವಾಡ: ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡವಿದ್ದು, ಸತ್ಯ ಹೊರಬರಬೇಕಾದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ವಿನಯ ಕುಲಕರ್ಣಿ ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಆಸ್ಪತ್ರೆಯಿಂದ ಪ್ರತಿಭಟನಾ ಸ್ಥಳಕ್ಕೆ ನೇರವಾಗಿ ಬಂದು ಭಾಗವಹಿಸಿದರು.
ಇದೇ ವೇಳೆ ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

 

222  9 ಸಾವಿರ ಮೊಟ್ಟೆ ಕದ್ದ ಕಳ್ಳರು : ಸಿಕ್ಕಿಬಿದ್ದು ಜೈಲ ಕಂಬಿ ಹಿಂದೆ ಬಿದ್ದರು
 ನವೆಂಬರ್-22
 ಧಾರವಾಡ : ಇದೊಂದು ವಿಚಿತ್ರವಾದ ಘಟನೆ. ಬಂಗಾರ, ಚಿನ್ನ, ಬೆಳ್ಳಿ, ಅಂಗಡಿ, ಮನೆ, ಹಾಗೇ ಹೀಗೆ ಅಂತ ಕಳ್ಳರು ನುಗ್ಗಿ,   ಕದಿಯೋದು ನಾವು ನೀವೆಲ್ಲಾ ಕೇಳಿದ್ದೀರಿ. ಆದರೇ ಇದಕ್ಕೆ ವ್ಯತಿರಿಕ್ತವಾದ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಕಳ್ಳರು ಕೋಳಿ   ಫಾರಂ ಒಂದಕ್ಕೆ ನುಗ್ಗಿ, ಬರೋಬ್ಬರಿ 9 ಸಾವಿರ ಕೋಳಿ ಮೊಟ್ಟೆ ಕದ್ದಿದ್ದಾರೆ. ವಿಚಿತ್ರ ಎನಿಸಿದರು ಇದು ಸತ್ಯ.
 ಧಾರವಾಡದ ಗ್ರಾಮೀಣ ಭಾಗದ ಮನಗುಂಡಿ ಗ್ರಾಮದ ಶ್ರೀನಿವಾಸಮೂರ್ತಿ ಕುಲಕರ್ಣಿ ಎನ್ನುವವರ ಕೋಳಿ ಫಾರಂ ಇದೆ. ಈ ಕೋಳಿ   ಫಾರಂಗೆ ಲಗ್ಗೆ ಹಾಕಿದ ಖದೀಮ, 45 ಸಾವಿರ ರೂಪಾಯಿ ಮೌಲ್ಯದ 9 ಸಾವಿರ ಕೋಳಿ ಮೊಟ್ಟೆಗಳನ್ನು ಕದ್ದೊಯ್ದಿದ್ದಾರೆ. ಈ   ಸಂಬಂಧ  ಶ್ರೀನಿವಾಸಮೂರ್ತಿ, ಧಾರವಾಡದ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.
  ಈ ದೂರಿನ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಮೈಲಾರಪ್ಪ ಕಲ್ಲೂರ, ಶಂಕರ ಜಾಧವ ಹಾಗೂ ಕಲ್ಲಪ್ಪ ಗುಡಿಹಾಳರು   ಎಂಬುವರನ್ನು ಬಂಧಿಸಿದ್ದಾರೆ. ಅಲ್ಲದೇ ಕದ್ದ 9 ಸಾವಿರ ಮೊಟ್ಟೆಗಳನ್ನು ಮಾಲ್ ಸಮೇತ ಪತ್ತೆ ಹಚ್ಚಿ ಮಾಲೀಕರಿಗೆ ಮರಳಿ   ಹಿಂತಿರುಗಿಸಿದ್ದಾರೆ.

 

22  ಸೂಕ್ತ ಚಿಕಿತ್ಸೆ ಸಿಗದೆ ಯುವಕ ಸಾವು
 ನೆವೆಂಬರ್-16
 ಧಾರವಾಡ : ನಗರದ ಹೊಸ ಯಲ್ಲಾಪುರ ಬಡಾವಣೆಯಲ್ಲಿ ಹೃದಯಾಘಾತದಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಸೂಕ್ತ  ಚಿಕಿತ್ಸೆ ಸಾವನ್ನಪ್ಪಿರುವ ಘಟನೆ ನಡೆದಿದೆ.
 ಕಾರ್ತಿಕ್ ರೋಕಡೆ (24) ಮೃತ ಯುವಕ. ಕಾರ್ತಿಕ್ ಗೆ ಇಂದು ಬೆಳಗ್ಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ  ಕುಟುಂಬಸ್ಥರು ಕಾರ್ತಿಕ್ ನನ್ನು ಕರೆದುಕೊಂಡು ನಗರದ ಖಾಸಗಿ ಆಸ್ಪತ್ರೆಗಳಿಗೆ ಸುತ್ತಿದ್ದಾರೆ. ಆದರೆ ಪ್ರತಿಭಟನೆಯಲ್ಲಿರುವ  ವೈದ್ಯರು ಸಿಗದೇ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಯುವಕ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ.

  

     

ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ : ದೇವೇಗೌಡ

ನವೆಂಬರ್-16
ಹುಬ್ಬಳ್ಳಿ: ಅಂಕೋಲಾ ರೈಲ್ವೆ ಯೋಜನೆಗೆ ಅನುದಾನ ಸಿಗಬೇಕು. ನೈಋತ್ಯ ರೈಲ್ವೆ ವಲಯಕ್ಕಾಗಿ ನಾನು ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಇಂದು ನಡೆಯಲಿರುವ ಜೆಡಿಎಸ್ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರಧಾನಿಯಾಗಿದ್ದಾಗ ಹುಬ್ಬಳ್ಳಿಯ ರೈಲ್ವೆ ವರ್ಕ್ಶಾಪ್ಗೆ 50 ಕೋಟಿ ರೂ. ಅನುದಾನ ನೀಡಿದ್ದೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಎನ್ಡಿಎ ಅಡಿಗಲ್ಲು ಹಾಕಿತು. ಆದರೆ, ಎನ್ಡಿಎ ಮತ್ತೆ ಅಧಿಕಾರಕ್ಕೆ ಬಂದರೂ ಈ ಯೋಜನೆಗೆ ಏನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇನ್ನು ಮಹದಾಯಿ ವಿವಾದ ಇತ್ಯರ್ಥಪಡಿಸಲು ಪ್ರಧಾನಿಯಿಂದ ಸಾಧ್ಯ ಎಂದ ಅವರು, ನಾನು ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದು ವೈಯಕ್ತಿಕವಾಗಿ ಮನವಿ ಮಾಡಿದ್ದೆ. ಪ್ರಧಾನಿ ನರೇಂದ್ರಮೋದಿಯವರು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾರೆ. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ ಎಂದರು. ಮಧ್ಯಂತರವಾಗಿ 8 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಬಿಡಬೇಕು. ಕಾವೇರಿ ವಿವಾದದಲ್ಲಿ ನಾನು ತೆಗೆದುಕೊಂಡ ಕ್ರಮ ಮೋದಿಗೆ ತೆಗೆದುಕೊಳ್ಳಲು ಏಕೆ ಆಗುವುದಿಲ್ಲ ಎಂದು ಪ್ರಶ್ನೆ ಮಾಡಿದರು. ಸಿಎಂ ಆಗಿದ್ದ ವೇಳೆ ಯಡಿಯೂರಪ್ಪ ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕಾಮಗಾರಿ ನಡೆಸುವುದಿಲ್ಲ ಎಂದು ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು ಎಂದರು.ಖಾಸಗಿ ಆಸ್ಪತ್ರೆಗಳ ಪ್ರತಿಬಂಧಕ ಕಾಯ್ದೆ ವಿರುದ್ಧ ವೈದ್ಯರ ಮುಷ್ಕರ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಈ ಮಸೂದೆಯನ್ನು ಇನ್ನೂ ಸದನದಲ್ಲಿ ಮಂಡಿಸಿಯೇ ಇಲ್ಲ. ಕೆಎಂಪಿಎ ಮಸೂದೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಈ ಸರ್ಕಾರ ಇಷ್ಟೊಂದು ತರಾತುರಿ ಮಾಡಬಾರದಿತ್ತು ಎಂದು ಅವರು ಕೆಎಂಪಿಎ ತಿದ್ದುಪಡಿ ಮಸೂದೆಗೆ ಜೆಡಿಎಸ್ ಸಂಪೂರ್ಣ ವಿರೋಧವಿದೆ ಎಂದರು.
ಈ ಬಗ್ಗೆ ಸದನದಲ್ಲಿ ಜೆಡಿಎಸ್ ವಿರೋಧ ವ್ಯಕ್ತಪಡಿಸಲಿದ್ದು, ಯಾರು ನಕಲಿ ವೈದ್ಯರಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಿ. ಈ ಕಾಯ್ದೆ ಜಾರಿಯಾದರೆ ವೈದ್ಯರ ಗತಿ ಏನಾಗುತ್ತದೆ. ಈ ಸರ್ಕಾರ ಏನು ಮಾಡಲು ಹೊರಟಿದೆ ಎಂದು ಅವರು ಪ್ರಶ್ನಿಸಿದರು.

 

45

ಮುಷ್ಕರಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ: ಶೆಟ್ಟರ್

 ನವೆಂಬರ್-16
ಹುಬ್ಬಳ್ಳಿ: ಖಾಸಗಿ ವೈದ್ಯರ ಮುಷ್ಕರದ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಸಮಸ್ಯೆ ಉದ್ದ್ ಬವಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 12ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ರಮೇಶ್ಕುಮಾರ್ ಅವರು ಆರೋಗ್ಯ ಮಂತ್ರಿಯಾಗಿ ಜನರ ಆರೋಗ್ಯ ಕಾಪಾಡುತ್ತಿಲ್ಲ ಎಂದು ಆರೋಪಿಸಿದರು. ಒಬ್ಬ ಮಂತ್ರಿಯ ಪ್ರತಿಷ್ಠೆಯ ಕಾರಣ ವೈದ್ಯರು ಬೀದಿಗಿಳಿದಿದ್ದಾರೆ. ಒಂದು ವಿಧೇಯಕ ಪಾಸ್ ಮಾಡುವುದರಿಂದ ದೊಡ್ಡ ಬದಲಾವಣೆಯಾಗುವುದಿಲ್ಲ. ಇದು ಸರಿಯಾದ ಕ್ರಮ ಅಲ್ಲ ಎಂದು ಅವರು ಹೇಳಿದರು. ಸರ್ಕಾರ ಮೊದಲು ತಮ್ಮ ಸ್ವಂತ ವ್ಯವಸ್ಥೆ ಸುಧಾರಿಸಲಿ ಎಂದು ಸಲಹೆ ನೀಡಿದ ಶೆಟ್ಟರ್ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು. ಆಡಳಿತ ಪಕ್ಷದ ಶಾಸಕರು ಕೂಡ ಮಸೂದೆಗೆ ವಿರುದ್ಧವಿದ್ದು, ಒಬ್ಬ ವ್ಯಕ್ತಿಯಿಂದ ಸಮಸ್ಯೆಯಾಗಿದೆ ಎಂದು ನಮ್ಮ ಬಳಿ ಬಂದು ಹೇಳುತ್ತಾರೆ ಎಂದರು. ವಿಧೇಯಕವನ್ನು ಸದ್ಯ ತಡೆಹಿಡಿಯುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರೆ ವಿವಾದ ಬಗೆಹರಿಯುತ್ತದೆ. ಆದ್ದರಿಂದ ಸರ್ಕಾರ ವೈದ್ಯರ ಜತೆ ಕುಳಿತು ಮಾತುಕತೆ ನಡೆಸಲಿ. ಕೆಲವು ಡಾಕ್ಟರ್ ಮತ್ತು ಕಾಪೋರೇಟ್ ಆಸ್ಪತ್ರೆಗಳು ತಪ್ಪು ಮಾಡುತ್ತವೆ.ಹಾಗಂತ ಎಲ್ಲ ವೈದ್ಯರೂ ತಪ್ಪು ಮಾಡುತ್ತಾರೆ ಎನ್ನುವುದು ಸರಿಯಲ್ಲ ಎಂದು ಹೇಳಿದರು.

 

22     ಬಿಜೆಪಿ ಕಾರ್ಯಕರ್ತರ ಬಂಧನ
 ನವೆಂಬರ್-10
ಹುಬ್ಬಳ್ಳಿ : ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಟಿಪ್ಪುಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ತಾಲೂಕು ಆಡಳಿತ ಹುಬ್ಬಳ್ಳಿ ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸಲು ಬರುತ್ತಿದ್ದಾಗ, ನಗರದ ಕೋರ್ಟ್ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ಟಿಪ್ಪು ಜಯಂತಿ ಆಚರಣೆ ಮೂಲಕ ಸೌಹಾರ್ದತೆ ಹಾಳು ಮಾಡುತ್ತಿದೆ. ಟಿಪ್ಪು ಒಬ್ಬ ಮತಾಂಧನಾಗಿದ್ದು, ಇಂತಹ ವ್ಯಕ್ತಿಯ ಜಯಂತಿ ಮಾಡುವುದು ತಪ್ಪು ಎಂದು ಆರೋಪಿಸಿದರು.

  

77

 ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿ : ಜಗದೀಶ್ ಶೆಟ್ಟರ್
 ನವೆಂಬರ್ - 6
ಹುಬ್ಬಳ್ಳಿ :ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೆಯ ಮುಖ್ಯಮಂತ್ರಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ' ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು.
ಹುಬ್ಬಳ್ಳಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವೋ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಡೆಯುವುದೂ ಅಷ್ಟೇ ಸತ್ಯ. ಈ ಭಯದಿಂದಲೇ ಜಾತಿ ರಾಜಕಾರಣ ಮಾಡಿ ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ' ಎಂದು ಆರೋಪಿಸಿದರು.
'ಕಾಂಗ್ರೆಸ್ ಅಧಿಕಾರಲ್ಲಿದ್ದು 4 ವರ್ಷ ಕಳೆದರೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಮಾತನಾಡಿರಲಿಲ್ಲ. ಈಗ ಚುನಾವಣೆಗೆ ಕೇವಲ 6 ತಿಂಗಳು ಬಾಕಿ ಇದೆ ಎನ್ನುವ ಸಂದರ್ಭದಲ್ಲಿಯೇ ಸಮಾವೇಶ ಆಯೋಜನೆ ಮಾಡಿ ಜನರ ದಾರಿ ತಪ್ಪಿಸುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರವೇ, ಕಾಂಗ್ರೆಸ್ ಲಿಂಗಾಯತ ಮತಗಳನ್ನು ಒಡೆಯುವ ಹುನ್ನಾರದಿಂದ ಪ್ರತ್ಯೇಕ ಲಿಂಗಾಯತ ಧರ್ಮದ ಹಿಂದೆ ಬಿದ್ದಿದೆ' ಎಂದು ಕಿಡಿಕಾರಿದರು.
'ಲಿಂಗಾಯತರನ್ನು ಅಲ್ಪಸಂಖ್ಯಾತರನ್ನಾಗಿ ಘೋಷಣೆ ಮಾಡುವುದು ರಾಜ್ಯ ಸರಕಾರದ ಕೈಯಲ್ಲಿಯೇ ಇದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಅಲ್ಲಿನ ಸರ್ಕಾರ ಈಗಾಗಲೇ ಲಿಂಗಾಯತರನ್ನು ಅಲ್ಪಸಂಖ್ಯಾಂತರೆಂದು ಘೋಷಣೆ ಮಾಡಿವೆ. ಅದರಂತೆಯೇ ಲಿಂಗಾಯತರನ್ನು ರಾಜ್ಯ ಸರ್ಕಾರ ಕೂಡಾ ಘೋಷಣೆ ಮಾಡಲಿ. ಅದು ಬಿಟ್ಟು ಫೆಬ್ರವರಿ, ಜನವರಿ ಗಡುವು ನೀಡಿ ಕೇಂದ್ರ ಸರಕಾರದ ವಿರುದ್ಧ ಹಾಗೂ ಬಿಜೆಪಿ ವಿರುದ್ಧ ಜನರನ್ನು ಎತ್ತಿ ಕಟ್ಟುವುದು ಸರಿಯಲ್ಲ' ಎಂದರು.
'ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಆರಂಭಿಸುವ ಮುನ್ನ ನಮ್ಮನ್ನು ಸಂಪರ್ಕ ಮಾಡಿ ಚರ್ಚೆ ಮಾಡದ ಕಾಂಗ್ರೆಸ್ ನಾಯಕರು, ಈಗ ವೇದಿಕೆಯಲ್ಲಿ ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದರೂ ಅವರು ಬಂದಿಲ್ಲ ಎಂದು ಬೊಬ್ಬೆ ಹಾಕುವುದು ನಾಚಿಕೆಗೇಡಿತ ಸಂಗತಿ. ಲಿಂಗಾಯತ ಪ್ರತ್ಯೇಕ ಧರ್ಮವನ್ನು ವೈಯಕ್ತಿಕ ನಿಂದನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಸಮಾಜಕ್ಕೆ ಮಾದರಿಯಾಗಬೇಕಿದ್ದ ಸ್ವಾಮೀಜಿಗಳು ಅವಾಚ್ಯ ಶಬ್ದಗಳನ್ನು ಬಳಿಸಿ ಮಾತನಾಡುತ್ತಿರುವುದು ಕಳವಳಕಾರಿ ಸಂಗತಿ' ಎಂದು ಬೇಸರ ವ್ಯಕ್ತಪಡಿಸಿದರು.
'ಲಿಂಗಾಯತ ಪ್ರತ್ಯೇಕ ಧರ್ಮದ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಮೈಂಡ್ ಕೆಲಸ ಮಾಡುತ್ತಿದೆ. ಸಚಿವರು ಅಧಿಕಾರ ವಹಿಸಿಕೊಳ್ಳುವ ಮುನ್ನ ಎಲ್ಲ ಜಾತಿ-ಜನಾಂಗ ಒಂದೇ ಎಂದು ತಿಳಿದುಕೊಂಡು ಕೆಲಸ ನಿರ್ವಹಿಸುತ್ತೇನೆ ಎಂಬ ಪ್ರಮಾಣ ವಚನ ಮಾಡಿರುತ್ತಾರೆ. ಆದರೆ, ಹೀಗೆ ಒಂದು ಜಾತಿಗಾಗಿ ಹೋರಾಟ ಮಾಡುವುದು ಸರಿಯಲ್ಲ' ಎಂದರು.

 

 

44 

 ಬಸ್ ಪಲ್ಟಿ,ಓರ್ವ ಬಲಿ, 6 ಮಂದಿಗೆ ಗಾಯ

ನವೆಂಬರ್-3
ಧಾರವಾಡ : ನಗರದ ಪ್ರಭುನಗರದ ಹೊನ್ನಾಪುರ ಎಂಬಲ್ಲಿ ಇಂದು ಬೆಳಗ್ಗೆ ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಈ ಅವಘಡದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಿನ ಜಾವ 5 ಗಂಟೆಯ ವೇಳೆ ಅವಘಡ ಸಂಭವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕಾಗಮಿಸಿದ ಧಾರವಾಡ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

 

                                                                                                                              

ಕೈಗಾರಿಕೆಗಳು ಅಭಿವೃದ್ಧಿ ಹೇಗೆ:ಹನುಮಂತೇಗೌಡ

ನವೆಂಬರ್.2

ಹುಬ್ಬಳ್ಳಿ: ಹೆಸ್ಕಾಂ, ಬೆಸ್ಕಾಂ ಕಚ್ಚಾಟದ ಪರಿಣಾಮ ಸಣ್ಣ ಕೈಗಾರಿಕೆಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಕೆಲ ಕೈಗಾರಿಕೆಗಳು ಜನರೇಟರ್ ಸಹಾಯದಿಂದ ಕೆಲಸ ನಡೆಸುತ್ತಿವೆ. ಅತ್ಯವಶ್ಯಕವಾದ ವಿದ್ಯುತ್ ಸರಿಯಾಗಿ ಸಿಗದಿದ್ದರೇ ಕೈಗಾರಿಕೆಗಳು ಅಭಿವೃದ್ಧಿ ಆಗುವುದು ಹೇಗೆ ಎಂದು ಕಾಸಿಯಾ ಅಧ್ಯಕ್ಷ ಆರ್. ಹನುಮಂತೇಗೌಡ ಪ್ರಶ್ನಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಮಂಗಳವಾರ ನಡೆದ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗ ಸಭೆ-2017 ಪ್ರಯುಕ್ತ ಹಮ್ಮಿಕೊಂಡಿದ್ದ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ನೋಂದಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಕಾನೂನಾತ್ಮಕ ತೊಡಕಿನಿಂದ ಅನೇಕ ಅಭಿವೃದ್ಧಿ ಕಾರ್ಯಗಳು ನನೆಗುಂದಿಗೆ ಬಿದ್ದಿವೆ. ರಾಜ್ಯಾದ್ಯಂತ ಇಂತಹ ಸಮಸ್ಯೆಗಳು ಇರುವುದರಿಂದ ಸರಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಕಾಸಿಯಾ ಅಸೋಶಿಯೇಷನ್ ವತಿಯಿಂದ ಪ್ರತಿ ಜಿಲ್ಲೆಗೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿದ್ದ 22 ಬೇಡಿಕೆಯಲ್ಲಿ 20 ಬೇಡಿಕೆ ಈಡೇರಿಸಿದ್ದು, ಪೀಣ್ಯ ಮತ್ತು ಕಾಮಾಕ್ಷಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ 20 ಕೋಟಿ ರೂ ಅನುದಾನ ನೀಡಿದೆ ಎಂದು ವಿವರಿಸಿದರು.

   

   ಗಗ ಸುಳ್ಳು ಭರವಸೆ ನೀಡಿದ ಬಿಜೆಪಿ ವಿರುದ್ಧ ಪ್ರತಿಭಟನೆ
ನವೆಂಬರ್.1
ಹುಬ್ಬಳ್ಳಿ: ಕೇಂದ್ರ ಬಿಜೆಪಿ ಸರಕಾರ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಿದೆ ಎಂದು ಆರೋಪಿಸಿ ಹುಬ್ಬಳ್ಳಿ, ಧಾರವಾಡ ಪೂರ್ವ ವಿಧನಾಸಭಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಅಂಚೆ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಯಿತು.
ಹು-ಧಾ ಪೂರ್ವ ವಿಧನಾಸಭಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ನಾಗಾರ್ಜುನ್ ಕತ್ರಿಮಲ್ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಚುನಾವಣೆ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ವರ್ಷ 2ಕೊ. ಉದ್ಯೋಗ ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ ಇಂದು ಉದ್ಯೋಗ ಸೃಷ್ಟಿಸಿದೇ ತನ್ನ ಪ್ರಣಾಳಿಕೆಯನ್ನು ಹುಸಿಗೊಳಿಸುತ್ತಾ ಬಂದಿದ್ದಾರೆ. ಕೇಂದ್ರ ಸರಕಾರ ಸರ್ವಾಧಿಕಾರಿ ಧೋರಣೆ ಬಿಟ್ಟು ಅಭಿವೃದ್ಧಿ ಕಾರ್ಯದ ಕಡೆ ಗಮನಹರಿಸಬೇಕು. ಬರಿ ಭಾಷಣ ಮಾಡುವುದರಿಂದ ದೇಶ ಉದ್ಧಾರವಾಗುವುದಿಲ್ಲ ಎಂದು ಆರೋಪಿಸಿದರು.
ನಂತರ ಅಂಚೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗರಾಜ ಗೌರಿ, ಪ್ರವೀಶ ಶಲವಡಿ, ಮುಸ್ತಾಕ್ ಮುದಗಲ್, ಅರ್ಬಾಜ್ ಮನಿಯಾರ್, ಪಿ.ಸುರೇಶ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇನ್ನಿತರರಿದ್ದರು.

  

55   ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
 ಅಕ್ಟೋಬರ್-31
ಹುಬ್ಬಳ್ಳಿ : ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಹಾಗೂ ಕಿರುಕುಳಗಳನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವಂತೆ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಹಿಂದೂ ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧವನ್ನು ಹಾಕುತ್ತಿದ್ದಾರೆ. ಕೆಲವು ಹಿಂದೂ ಧಾರ್ಮಿಕ ಕಾರ್ಯಗಳಿಗೆ ನಿಷೇಧ ಹೇರುವ ಮೂಲಕ ಅವರ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಆರೋಪಿಸಿದರು.
ಅಲ್ಲದೇ ಸರ್ಕಾರ ಟಿಪ್ಪು ಜಯಂತಿ ಹೆಸರಿನಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿದೆ. ಟಿಪ್ಪು ಜಯಂತಿಯನ್ನು ಆಚರಿಸಿದಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು

 

gg ಬಾಲಕಿಯರನ್ನು ಮಾರಾಟಕ್ಕೆ ಒಯ್ಯುತ್ತಿದ್ದ ಮಹಿಳೆ ಬಂಧನ
ಅಕ್ಟೋಬರ್.31
ಹುಬ್ಬಳ್ಳಿ: ಇಬ್ಬರು ಬಾಲಕಿಯರನ್ನು ಅಪಹರಿಸಿ ಅಂಗಾಂಗ ಮಾರಾಟಕ್ಕೆ ಕರೆದೊಯ್ಯುತ್ತಿದ್ದ ಮಹಿಳೆಯನ್ನು ನಗರದ ರೈಲ್ವೆ ಸುರಕ್ಷಾ ದಳ(ಆರ್ಪಿಎಫ್)ದ ಪೊಲೀಸರು ಧಾರವಾಡ ರೈಲು ನಿಲ್ದಾಣದಲ್ಲಿ ಸೋಮವಾರ ಬಂಧಿಸಿ ಬಾಲಕಿಯರನ್ನು ರಕ್ಷಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ರಾಮನಗರದ ನಿವಾಸಿ ಅನಿತಾ ಬಳ್ಳಾರಿ ಬಂಧಿತ ಮಹಿಳೆ. ಈಕೆ ಧಾರವಾಡ ದಾನೂನಗರದ ಮೂರ್ತಿ ಜಾಧವ್ ಎಂಬುವರ 13 ವರ್ಷದ ಪುತ್ರಿ ತಾರಾ ಜಾಧವ್ ಹಾಗೂ ರಾಜು ರೇವಳಿ ಎಂಬುವರ ಪುತ್ರಿ 12 ವರ್ಷದ ಗೌರಿ ರೇವಳಿ ಎಂಬುವರನ್ನು ಅಪಹರಿಸಿ ಮೈಸೂರಿಗೆ ತೆರಳಲು ಯತ್ನಿಸುತ್ತಿದ್ದಾಗ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್ಪಿಎಫ್ ಸಿಬ್ಬಂದಿ ಮಹಿಳೆಯನ್ನು ವಿಚಾರಣೆ ಒಳಪಡಿಸಿದಾಗ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ. ಈ ಮಹಿಳೆ ಬಾಲಕಿಯರನ್ನು ಮಾರಾಟಕ್ಕೆ ಕರೆದೊಯ್ಯುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆಂದು ಮೂಲಗಳು ತಿಳಿಸಿವೆ. ಇಬ್ಬರು ಬಾಲಕಿಯರ ಪೈಕಿ ಒಬ್ಬಳು ಶಾಲಾ ಸಮವಸ್ತ್ರ ಧರಿಸಿದ್ದರಿಂದ ಆರ್ಪಿಎಫ್ ಸಿಬ್ಬಂದಿಗೆ ಅನುಮಾನ ಬಂದಿದೆ. ಖಚಿತ ಮಾಹಿತಿ ಮೇರೆಗೆ ರೈಲ್ವೆ ಸುರಕ್ಷಾ ದಳ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಹರಣ ಜಾಲ ಭೇದಿಸಿದ್ದಾರೆ. ಬಾಲಕಿಯರನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ.
ಅಪಹರಣ ಪ್ರಕರಣದಲ್ಲಿ ಬಂಧಿತ ಮಹಿಳೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ.

 

 

aa   ಮಕ್ಕಳ ಮಾರಾಟ ಜಾಲ ಪತ್ತೆ: ಮಹಿಳೆ ಬಂಧನ
 ಅಕ್ಟೋಬರ್-30
ಧಾರವಾಡ: ನಗರದಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಧಾರವಾಡ ರೈಲ್ವೆ ಸುರಕ್ಷಾ ದಳ ಪೊಲೀಸರು ಓರ್ವ ಮಹಿಳೆಯನ್ನ ಬಂಧಿಸಿದ್ದಾರೆ. ಹುಬ್ಬಳ್ಳಿಯ ರಾಮನಗರ ನಗರದ ನಿವಾಸಿ ಅನಿತಾ ಬಂಧಿತ ಮಹಿಳೆ. ಅನಿತಾ ಧಾರವಾಡದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಧಾರವಾಡ ರೈಲ್ವೆ ನಿಲ್ದಾಣದಿಂದ ಕರೆದುಕೊಂಡು ಮಾರಾಟಕ್ಕೆ ಹೊರಟಿದ್ದಳು. ಹೆಣ್ಣು ಮಕ್ಕಳನ್ನು ಧಾರವಾಡದಿಂದ ಮೈಸೂರಿಗೆ ಕರೆದುಕೊಂಡು ಹೊರಟಿದ್ದಳು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ರೈಲ್ವೆ ಸುರಕ್ಷಾ ಪೊಲೀಸರು ಕಾರ್ಯಾಚರಣೆ ಮಾಡಿ, ಧಾರವಾಡದ ರೇಲ್ವೆ ನಿಲ್ದಾಣ ಬಳಿ ಬಾಲಕಿಯರನ್ನು ರಕ್ಷಿಸಿ, ಮಹಿಳೆಯನ್ನು ಬಂಧಿಸಿದ್ದಾರೆ.

  

                                       

ಬಾನುಲಿ ಗ್ರಾಮ ದರ್ಶನ

ಅಕ್ಟೋಬರ್.30

ಧಾರವಾಡ : ಕೃಷಿ ವಿಶ್ವವಿದ್ಯಾಲಯ ಕೃಷಿ ಸಮುದಾಯ ಬಾನುಲಿಕೇಂದ್ರ 90.4 ಕಂಪನಾಂಕದಲ್ಲಿ ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಗ್ರಾಮಗಳನ್ನು ಬೇಟಿ ಮಾಡಿ ಗ್ರಾಮದರ್ಶನ ಎಂಬ ಕಾರ್ಯಕ್ರಮದ ಮುಖಾಂತರ ಧ್ವನಿಮುದ್ರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯ ಮರೇವಾಡ ಗ್ರಾಮದಲ್ಲಿ ಇತ್ತೀಚೆಗೆ ಗ್ರಾಮ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮರೇವಾಡದ ಮೂಲ ಹೆಸರು ಬರಲು ಕಾರಣ ಏನು? ಎಂದು ಗ್ರಾಮದ ಹಿರಿಯರನ್ನು ಕೇಳಿದಾಗ 11ನೇ ಶತಮಾನದಲ್ಲಿ ಮರೇವಾಡ ಗ್ರಾಮಕ್ಕೆ ಚನ್ನಬಸವಣ್ಣನವರು ಬಂದು ಬಸವಣ್ಣನ ದೇವಸ್ಥಾನ ಮತ್ತು ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಉಳಿದು ಹೋದುದ್ದರಿಂದ ಮರೇವಾಡ ಹೆಸರು ಬರಲು ಕಾರಣವಾಯಿತು ಎಂದು ತಿಳಿಸಿದರು.

 

                                                                 

  

                                                                                                                                     

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ: ಬಿಎಸ್ವೈ

ಅಕ್ಟೋಬರ್.28

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಖಜಾನೆಯನ್ನು ದರೋಡೆ ಮಾಡುತ್ತಿದ್ದು, ಅವರ ಸರಕಾರದ ಆಯುಷ್ಯ ಮುಗೀತಾ ಇದೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆಯಬೇಕಿತ್ತು. ಆದರೆ, ಚಾರ್ಚ್ಸೀಟ್ ಆಗುವವರೆಗೂ ಕಾಯುತ್ತೇವೆ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಜಾರ್ಜ್ಗೆ ನೈತಿಕತೆ ಇದ್ದರೆ ಇಂದೇ ರಾಜೀನಾಮೆ ನೀಡಲಿ ಎಂದರು.

ಬೆಂಗಳೂರು ನಗರವನ್ನು ಬಿಬಿಎಂಪಿಯಿಂದ ಒತ್ತೆ ಇಡುತ್ತಿದ್ದು, ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ. ದೇಶ ಕಂಡರಿಯದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  

     

ಸಿದ್ದರಾಮಯ್ಯ ಸುಳ್ಳಿನ ಸರದಾರ: ಶೆಟ್ಟರ್

ಅಕ್ಟೋಬರ್.24

ಹುಬ್ಬಳ್ಳಿ: ಹಿಂದೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ಸುಳ್ಳಿನ ಸರದಾರ ಎನ್ನಲಾಗುತ್ತಿತ್ತು ಆದರೆ ಇವತ್ತು ಮಹಾ ಸುಳ್ಳುಗಾರ ಎಂದು ಸಿದ್ದರಾಮಯ್ಯ ಅವರನ್ನು ಕರೆಯಬಹುದು ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಜನರಿಗೆ ಆಮಿಷ ತೋರಿಸಿ ಕರೆದುಕೊಂಡು ಬಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ಸಾಧನಾ ಸಮಾವೇಶ ವ್ಯರ್ಥ ಸಮಾವೇಶ, ಕೋಟ್ಯಾಂತರ ರೂ. ವೆಚ್ಚದಲ್ಲಿ ಮಾಡುವುದು ವ್ಯರ್ಥ. ಅದು ರಾಜ್ಯ ಸರಕಾರದ ಸಾಧನಾ ಸಮಾವೇಶ ಅಲ್ಲ, ಕಾಂಗ್ರೆಸ್ ಪಕ್ಷದ ಸಮಾವೇಶ ಎಂದು ಶೆಟ್ಟರ್‌ ಹೇಳಿದರು.ಚುನಾವಣೆ ಬಂದಾಗ ಬೇಕಾಬಿಟ್ಟಿ ಖರ್ಚು ಮಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರ ಯಾವುದೇ ಸಾಧನೆ ಮಾಡಿಲ್ಲ. ಕೆಲಸ ಮಾಡಲಾರದೆ ಸಾಧನೆ ಬಗ್ಗೆ ಹೇಳಿಕೊಳ್ಳತ್ತಿದ್ದಾರೆ. ಯಾವುದೇ ಸಾಧನೆಯನ್ನು ಮಾಡಲಾರದೆ ಸಮಾವೇಶ ಮಾಡಿಕೊಂಡು ಹಣ ಖರ್ಚು ಮಾಡುತ್ತಿದ್ದಾರೆ ಎಂದು ದೂರಿದರು.

ನಮ್ಮ ಪಕ್ಷದವರಿಗೆ ಈ ಹಿಂದೆ ಅಲ್ಪಸಂಖ್ಯಾತ ಘಟಕದಲ್ಲಿ ಸನ್ಮಾನ ಮಾಡಿದ್ದಾರೆ. ಆ ಪೋಟೊ ಇಟ್ಟುಕೊಂಡು ಹೀಗೆ ಮಾಡುತ್ತಾ ಇದ್ದಾರೆ. ರಾಜ್ಯದಲ್ಲಿ ವೈಯಕ್ತಿಕವಾಗಿ ಯಾರಾದರೂ ಆಚರಣೆ ಮಾಡಲಿ, ರಾಜ್ಯ ಸರಕಾರದಿಂದ ಟಿಪ್ಪು ಜಯಂತಿ ಆಚರಣೆ ಬೇಡ ಎಂದರು. ವಿಧಾನ ಸೌಧದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ, ಆದರೆ ಅದ್ಧೂರಿ ಖರ್ಚಿಗೆ ನಮ್ಮಿಂದ ವಿರೋಧವಿದೆ. ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ಯಾರು ಗಿಪ್ಟ್ ಕೊಡಿ ಎಂದು ಶಾಸಕರು ಕೇಳಿಲ್ಲ. ಹಣ ಕೊಳ್ಳೆಹೊಡೆಯಲು ಈ ರೀತಿ ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ. ನಮ್ಮ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡುವ ಬದಲು ಸಾಧನೆ ಮಾಡಿ ತೋರಿಸಿ ಎಂದ ಶೆಟ್ಟರ್‌ ಅವರು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.

   

rr      ಟಿಪ್ಪು ಸುಲ್ತಾನ್ ಮತಾಂಧನಾಗಿರಲಿಲ್ಲ : ಪುಟ್ಟಪ್ಪ
  ಅಕ್ಟೋಬರ್-24
ಧಾರವಾಡ : ಟಿಪ್ಪು ಸುಲ್ತಾನ್ ಮತಾಂಧನಾಗಿದ್ದರೆ, ತನ್ನ ಆಸ್ಥಾನದಲ್ಲಿ ದಿವಾನ್ ಪೂರ್ಣಯ್ಯನನ್ನು ಏಕೆ ದಿವಾನನ್ನಾಗಿ ಮಾಡಿಕೊಳ್ಳುತ್ತಿದ್ದ ಎಂದು ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಶೃಂಗೇರಿಯ ಶಾರದಾ ಮಾತೆ ದೇಗುಲದ ಕೆಲಗೆ ದ್ರವ್ಯ ಇದೆ ಎನ್ನುವ ಹುಚ್ಚು ಭಾವನೆಯಿಂದ ಪೇಶ್ವೆಗಳು ಅದನ್ನು ಕೆಡವಿ ಹಾಕಿದರು. ಶೃಂಗೇರಿಯ ಜಗದ್ಗುರುಗಳು ಕೆಳದಿ ರಾಜ್ಯವಾದ ಮಂಗಳೂರಿಗೆ ಓಡಿ ಹೋಗಿದ್ದರು.
ಟಿಪ್ಪು ಸುಲ್ತಾನ್ ಮತಾಂಧನಾಗಿದ್ದರೆ, ಶಾರದಾ ಮಾತೆಯ ದೇವಾಲಯವನ್ನು ಪುನಃ ಕಟ್ಟಿ ಶಾರದಾ ಮಾತೆಯ ವಿಗ್ರಹವನ್ನು ಅಲ್ಲಿ ಏಕೆ ಮತ್ತೆ ಸ್ಥಾಪಿಸುತ್ತಿದ್ದರು. ಕೆಳದಿ ರಾಜ್ಯಕ್ಕೆ ಓಡಿ ಹೋಗಿದ್ದ ಶೃಂಗೇರಿಯ ಜಗದ್ಗುರುಗಳನ್ನು ಮತ್ತೆ ಶೃಂಗೇರಿಗೆ ಕರೆಸಿಕೊಂಡು ಅವರನ್ನು ಮತ್ತೆ ಫೀಠದ ಮೇಲೆ ಏಕೆ ಕೂರಿಸುತ್ತಿದ್ದ ಎಂದು ಪ್ರಶ್ನಿಸಿದ್ದಾರೆ.

   

99

  ಧೈರ್ಯವಿದ್ದರೆ ಭ್ರಷ್ಟಾಚಾರ ಪ್ರಕರಣ ಸಿಬಿಐಗೆ ಒಪ್ಪಿಸಲಿ: ಜೋಶಿ
ಅಕ್ಟೋಬರ್ -23
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರವಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ಹಗುರವಾಗಿ ಮಾತನಾಡಿರುವ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ , ಪ್ರಕರಣವನ್ನು ತಕ್ಷಣ ಸಿಬಿಐಗೆ ಒಪ್ಪಿಸಲಿ ಎಂದು ಸಂಸದ ಪ್ರಹ್ಲಾದ ಜೋಶಿ ಸವಾಲೆಸೆದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಸಿಬಿ, ಸರ್ಕಾರದ ಕೈಗೊಂಬೆ. ಎಸಿಬಿಯಿಂದ ಸತ್ಯ ಹೊರಬರುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತವನ್ನ ಹಲ್ಲು ಕಿತ್ತ ಹಾವು ಮಾಡಿದ್ದಾರೆ. ಮುಖ್ಯಮಂತ್ರಿಗಳ ನೈತಿಕತೆಯ ಮೇಲೆ ಸವಾಲಿದೆ.
ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ರಾಜಿನಾಮೆ ನೀಡಲಿ. ಸಚಿವ ವಿನಯ್ ಕುಲಕರ್ಣಿ ಕೈಲಾಗದವರು, ಕೈಲಾಗದವನು ಮೈ ಪರಚಿಕೊಂಡ ಎಂಬಂತಾಗಿದೆ ವಿನಯ್ ನಡೆ. ವಿನಯ್ ಕುಲಕರ್ಣಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ತಾಕತಿದ್ದರೆ ನನ್ನ ಎದುರು ಚುನಾವಣೆ ಎದುರಿಸಲಿ ಎಂದು ಹುಚ್ಚು ಹುಚ್ಚುವಾಗಿ ಮಾತನಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಿದ್ದು ಮರೆತಿದ್ದಾರೆ ಅನ್ನಿಸುತ್ತೆ ಎಂದರು.
ಧಾರವಾಡ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಯಾಗಲು ಸಚಿವ ವಿನಯ್ ಕುಲಕರ್ಣಿ ಅವರೇ ಕಾರಣ. ಅಲ್ಪಸಂಖ್ಯಾತ ಓಲೈಕೆಗಾಗಿ ಹಿಂದುಗಳ ವಿರೋಧವಾಗಿ ನಿಲ್ಲುತ್ತಿದ್ದಾರೆ. ವಿನಯ್ ಕುಲಕರ್ಣಿಗೆ ನಿಜವಾಗಿ ನಿಮಗೆ ತಾಕತ್ತಿದ್ದರೆ ನಮ್ಮ ಮಹಾನಗರ ಪಾಲಿಕೆಗೆ ಬರುವ 137 ಕೋಟಿ ಪಿಂಚಣಿ ಹಣ ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದರು.
ರಾಹುಲ್ ಗಾಂಧಿ ತರಹ ಮಾತನಾಡಬೇಡಿ, ಯಾರೋ ಬರೆದು ಕೊಟ್ಟಿದ್ದನ್ನು ಓದಬೇಡಿ, ಸ್ವಂತ ಬುದ್ಧಿ ಉಪಯೋಗಿಸಿ ಮಾತನಾಡಿ. ಸಚಿವ ದೇಶಪಾಂಡೆ ಜೋಶಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ, ಮೊದಲು ದೇಶಪಾಂಡೆ ಅವರು ಮುಂದಿನ ಚುನಾವಣೆಗೆ ಯಾವ ಪಕ್ಷದಲ್ಲಿ ಇರುತ್ತಾರೆ ಎಂದು ಮೊದಲು ಜನರಿಗೆ ತಿಳಿಸಲಿ. ರಾಜ್ಯ ಸರ್ಕಾರ ಧಾರವಾಡದಲ್ಲಿ ಸಾಧನಾ ಸಮಾವೇಶ ಮಾಡಲು ಹೋರಟಿದೆ. ಇದು ಸಾಧನಾ ಸಮಾವೇಶ ಅಲ್ಲ, ಕಾಂಗ್ರೆಸ್ ಸಮಾವೇಶ ಎಂದರು.

 

 

hh 

 ಪಿಟ್ಸ್ ರೋಗಕ್ಕೆ ಬಲಿಯಾದ ಬಾಲಕಿ

 ಅಕ್ಟೋಬರ್.21
ಹುಬ್ಬಳ್ಳಿ: ಬೈಲಹೊಂಗಲ ತಾಲೂಕಿನ ತುರಮರಿ ಗ್ರಾಮದಲ್ಲಿ ಪಿಟ್ಸ್ ಬಂದು ಒಲೆ ಮೇಲೆ ಬಿದ್ದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಗ್ರಾಮದ ಅಕ್ಷ ತಾ ಶಂಕರೆಪ್ಪ ನೇಸರಗಿ (16) ಮೃತ ಬಾಲಕಿ. ಈಕೆ ಅಡುಗೆ ಮಾಡಲು ಒಲೆ ಮುಂದೆ ಕುಳಿತಾಗ ಪಿಟ್ಸ್ ಬಂದಿದ್ದು, ಒಲೆ ಮೇಲೆ ಬಿದ್ದ ಪರಿಣಾಮ ದೇಹದ ಶೇ.70 ರಷ್ಟು ಭಾಗ ಸುಟ್ಟು ಹೋಗಿತ್ತು. ತಕ್ಷಣ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

    

ಟಿಪ್ಪು ಜಯಂತಿ ಬ್ಯಾನ್: ಸಚಿವ ಕುಲಕರ್ಣಿ

ಅಕ್ಟೋಬರ್.21
ಧಾರವಾಡ: ಸಮಾನತೆಯಿಂದ ಇರುವುದು ನಮ್ಮ ಕರ್ತವ್ಯ, ನಮ್ಮ ಸರಕಾರ ಬಂದರೆ ಟಿಪ್ಪು ಜಯಂತಿ ಬ್ಯಾನ್ ಮಾಡುತ್ತೇನೆ ಅನ್ನುವುದು ಸರಿಯಲ್ಲ ಎಂದು ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ಟಿಪ್ಪು ಜಯಂತಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಲಕರ್ಣಿ, ಜೋಶಿಯವರಿಗೆ ಪಾಲಿಕೆ ಚುನಾವಣೆ ಗೆಲ್ಲುವುದಕ್ಕೂ ಆಗಿರಲಿಲ್ಲ. ಜಾತಿ ಗಲಭೆ ಸೃಷ್ಟಿಸಿ ಈದ್ಗಾ ಮೈದಾನ ವಿಷಯದ ಮೇಲೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಜೋಶಿಯಂಥವರ ಮೇಲೆ ಕೇಸ್ ಇಲ್ಲ, ಆದರೆ ಹಿಂದೂ ಹುಡುಗರ ದಾರಿ ತಪ್ಪಿಸಿ ಧರ್ಮದ ಗಲಭೆ ಸೃಷ್ಟಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿಯೇ ಇವರಿಂದ ಅನೇಕ ಹಿಂದೂ ಯುವಕರ ಭವಿಷ್ಯ ಹಾಳಾಗಿದೆ ಎಂದರು.
                                                                                    

  

       ವಿದ್ಯುತ್ ಸ್ಫರ್ಶದಿಂದ ವ್ಯಕ್ತಿ ಸಾವು
ಅಕ್ಟೋಬರ್.18
ಹುಬ್ಬಳ್ಳಿ: ನಗರದ ಜನತಾ ಕಾಲೊನಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರವಿಕುಮಾರ ಕೋರ್ಲಪಾಟಿ (24) ಮೃತಪಟ್ಟಿದ್ದಾರೆ. ಇವರು ಬಿಜೆಪಿ ಮುಖಂಡ ಲಕ್ಷ್ಮಣ ಕೊರ್ಲಪಾಟಿ ಅವರ ಮಗನಾಗಿದ್ದಾರೆ.
ರವಿಕುಮಾರ ಕೋರ್ಲಪಾಟಿ ಅವರು ಬ್ಯಾನರ್ ಕಟ್ಟುತ್ತಿದ್ದ ಸಂದರ್ಭ ವಿದ್ಯುತ್ ತಂತಿ ತಗುಲಿತ್ತು.

Ads
;