ದೂರವಾಣಿ : 080-69999676
ಇಮೇಲ್ : Info@Vijayataranga.com


55  ಪತ್ನಿ ಅಂದವಾಗಿದ್ದಾಳೆ ಎಂದು ಪತಿ ಮಾಡಿದ್ದೆನ್ನು ಗೋತ್ತಾ?
 ಡಿಸೆಂಬರ್-22
ಬಳ್ಳಾರಿ : ತನ್ನ ಪತ್ನಿ ಅಂದವಾಗಿದ್ದಾಳೆ ಅವಳಿಗೆ ಮೊಬೈಲ್ ನೀಡಿದ್ರೆ ಬೇರೆಯವರ ಜೊತೆ ಮಾತನಾಡುತ್ತಾಳೆಂದು ಅನುಮಾನ ಪಡುತ್ತಿದ್ದ ಶಿಕ್ಷಕನೊಬ್ಬ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹೂವಿನಹಡಗಲಿ ತಾಲೂಕಿನ ಕುಂಬಳಿ ಸರ್ಕಾರಿ ಹಿರಿಯ ಪ್ರಾಥಮಿ ಪ್ರೌಢ ಶಾಲೆಯ ಶಿಕ್ಷಕ ನಾಗರಾಜ್, ತನ್ನ ಪತ್ನಿಯನ್ನು ನೇಣು ಬಿಗಿದು ನಂತರ ಹೃದಯಾಘಾತವೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಾನೆ.
ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಶಿಕ್ಷಕ ಮದುವೆಯಾದ ನಂತರ ಪತ್ನಿಯನ್ನ ಸದಾ ಅನುಮಾನಿಸುತ್ತಿದ್ದ ನಾಗರಾಜ್, ಪತ್ನಿಯನ್ನು ತವರು ಮನೆಗೂ ಸಹ ಕಳುಹಿಸದೇ ಪೀಡಿಸುತ್ತಿದ್ದ ಎನ್ನಲಾಗಿದೆ.
ಘಟನೆ ಕುರಿತು ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

44   ಮತಾಂತರಕ್ಕೆ ಯತ್ನ: ಆರೋಪಿಗಳಿಗೆ ವಾರ್ನಿಂಗ್
 ಡಿಸೆಂಬರ್-20
ಭದ್ರಾವತಿ: ನಗರದ ಜೇಡಿಕಟ್ಟೆಯಲ್ಲಿ ಮಂತಾಂತರಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರು ದಾಖಸಿಕೊಂಡ ನ್ಯೂಟೌನ್ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿ ಎಚ್ಚರಿಕೆ ಕೊಟ್ಟಿದ್ದಾರೆ.
ಜೇಡಿಕಟ್ಟೆಯಲ್ಲಿ ಮಂತಾತರಕ್ಕೆ ಒಳ ಸಂಚುಗಳಿ ನಡೆಯುತ್ತಿವೆ ಎಂದು ಮಾಹಿತಿ ಪಡೆದ ಹಿಂದೂ ಪರ ಸಂಘಟನೆಗಳು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕ್ರಮ ಕೈಕೊಂಡ ಪೊಲೀಸರು ಮತಾಂತರಕ್ಕೆ ಯತ್ನ ಮಾಡುತ್ತಿದ್ದರು ಎನ್ನಾಲಾದ ಸಂತೋಷ್, ಪ್ರಶಾಂತ್ ಹಾಗೂ ಮೋಹನ್ ಎಂಬುವವರನ್ನು ಹಾಗೂ ಹಿಂದೂ ಸಂಘಟನೆ ಸದಸ್ಯರ ಮಾತುಕತೆ ನಡೆಸಿ ಆರೋಪಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ಕೊಟ್ಟಿದ್ದಾರೆ.

 

 

 

    ್್   ಬಿಜೆಪಿಗೆ ಸೋಲುವ ಭೀತಿ: ಸಿಎಂ
ಡಿಸೆಂಬರ್.16
ಹೊಸಪೇಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಸೋಲುವ ಭೀತಿಯಿಂದ ಹತಾಶರಾಗಿದ್ದು, ಕರಾವಳಿಯಲ್ಲಿ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಇಲ್ಲಿನ ಮುನ್ಸಿಪಲ್ ಮೈದಾನದ ಹೆಲಿಪ್ಯಾಡ್ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಮೇಸ್ತ ಸಾವಿನ ಕುರಿತ ಪೋಸ್ಟ್ ಮಾರ್ಟಂ ಹಾಗೂ ತನಿಖಾಧಿಕಾರಿಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಆದರೆ, ಬಿಜೆಪಿಯವರು ತಾವೇ ಮುಸ್ಲಿಂ ಸಮುದಾಯದ ವಿರುದ್ಧ ಸರ್ಟಿಫಿಕೇಟ್ ನೀಡುತ್ತಿದ್ದಾರೆ’’ ಎಂದು ದೂರಿದರು.
ಅಲ್ಪಸಂಖ್ಯಾತ ಧರ್ಮದ ಪಟ್ಟಿಯಲ್ಲಿ ಸೇರಿಸಲು ಐದು ಮನವಿ ಪತ್ರಗಳು ಬಂದಿವೆ. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತ ವಿಷಯದಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ ಎಂದ ಅವರು, ಒಳ ಮೀಸಲಾತಿ ಕುರಿತ ಎ.ಜೆ.ಸದಾಶಿವ ಆಯೋಗದ ವರದಿ ಕುರಿತು ಶೀಘ್ರವೇ ಒಂದೆಡೆ ಕುಳಿತು ಬಗೆಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ದೀಪಕ್ಕುಮಾರ್ ಸಿಂಗ್, ಎಚ್ಎನ್ಎಫ್ ಇಮಾಮ್ ನಿಯಾಜಿ, ಅಯ್ಯಾಳಿ ತಿಮ್ಮಪ್ಪ, ಸಾಲಿ ಸಿದ್ದಯ್ಯಸ್ವಾಮಿ, ವೆಂಕಟೇಶ್ವರ ರೆಡ್ಡಿ, ನಿಂಬಗಲ್ ರಾಮಕಷ್ಣ ಇತರರಿದ್ದರು.

 

 

          ಬಳ್ಳಾರಿತಿಂದ ಬೆಂಗಳೂರಿಗೆ ಶೀಘ್ರವೇ ವಿಮಾನ ಪ್ರಯಾಣ ಲಭ್ಯ
ಡಿಸೆಂಬರ್.15
ಬಳ್ಳಾರಿ: ಜಿಲ್ಲೆಯ ವಿದ್ಯಾನಗರದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಈ ಭಾಗದ ಜನರ ಕನಸು ಶೀಘ್ರ ನನಸಾಗಲಿದೆ. ಆದರೆ, ಈ ಕನಸಿಗೆ ಸದ್ಯ ಡೈರಕ್ಟರ್ ಜನರಲ್ ಸಿವಿಲ್ ಏವಿಯೇಷನ್ (ಡಿಜಿಸಿಎ)ನಿಂದ ನೈಟ್ ಲ್ಯಾಂಡಿಂಗ್ ಪರವಾನಗಿ ದೊರೆಯದೇ ಇರುವುದು ತೊಡಕಾಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯಡಿ, ಬಳ್ಳಾರಿಯಿಂದ ಹೈದರಾಬಾದ್ಗೆ 2017, ಸೆ.21ರಿಂದ ವಿಮಾನ ಹಾರಾಟ ನಡೆದಿದೆ. ಈ ಯಶಸ್ಸು ಮನಗಂಡಿರುವ ಹೈದರಾಬಾದ್ ಮೂಲದ ಟ್ರೂಜೆಟ್ ಕಂಪನಿ, ಬಳ್ಳಾರಿಯಿಂದ ಬೆಂಗಳೂರಿಗೂ ವಿಮಾನ ಸಂಚಾರ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ. ಜಿಂದಾಲ್ ವಿದ್ಯಾನಗರದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ನೈಟ್ ಲ್ಯಾಂಡಿಂಗ್ ಪರವಾನಗಿಯನ್ನೇ ಎದುರು ನೋಡುವಂತಾಗಿದೆ. ಇದಕ್ಕೆ ಒಪ್ಪಿಗೆ ದೊರೆಯುತ್ತಿದ್ದಂತೆಯೇ ವಿದ್ಯಾನಗರದಿಂದ ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಚಾಲನೆ ಸಿಗಲಿದೆ.
ವಿದ್ಯಾನಗರದಿಂದ ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಟ್ರೂಜೆಟ್ ಕಂಪನಿಯು ಈಗಾಗಲೇ ಸಮಯ ಮತ್ತು ಹೆಚ್ಚುವರಿ ವಿಮಾನ ಗೊತ್ತುಮಾಡಿದೆ. ವಿದ್ಯಾನಗರದಲ್ಲಿ ಖಾಸಗಿ ನೈಟ್ ಲ್ಯಾಂಡಿಂಗ್ಗೆ ಜಿಂದಾಲ್, ಈಗಾಗಲೇ ಪರವಾನಗಿ ಪಡೆದಿದೆ. ಆದರೆ, ವಾಣಿಜ್ಯ ಉದ್ದೇಶಕ್ಕೆ ಪರವಾನಗಿ ಪಡೆದಿಲ್ಲ. ಬೆಂಗಳೂರಿಗೆ ರಾತ್ರಿ ವೇಳೆ ವಿಮಾನ ಹಾರಾಟಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೈಟ್ ಲ್ಯಾಂಡಿಂಗ್ ಪರವಾನಗಿ ಪಡೆಯುವುದು ಅಗತ್ಯವಾಗಿದೆ. ಇದುವೇ ಬೆಂಗಳೂರಿಗೆ ವಿಮಾನ ಹಾರಾಟ ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಜಿಲ್ಲೆಯ ವಿದ್ಯಾನಗರದಿಂದ ಹೈದರಾಬಾದ್ಗೆ ವಿಮಾನ ಹಾರಾಟದ ಸಮಯವನ್ನು ಟ್ರೂಜೆಟ್ ಕಂಪನಿ, ಈ ಹಿಂದೆ ಬೆಳಗಿನ ಬದಲು ಮಧ್ಯಾಹ್ನಕ್ಕೆ ಬದಲಿಸಿತ್ತು. ಬೆಂಗಳೂರಿಗೆ ವಿಮಾನ ಹಾರಾಟ ಆರಂಭಿಸಿದರೆ, ಮತ್ತೊಮ್ಮೆ ಈ ಸಮಯ ಬದಲಾಗುವ ಸಾಧ್ಯತೆಯಿದೆ. ಬೆಂಗಳೂರಿಗೆ ವಿಮಾನ ಹಾರಾಟ ಆರಂಭವಾದರೆ, ಬೆಳಗ್ಗೆ 8ಕ್ಕೆ ಹೈದರಾಬಾದ್ನಿಂದ ಹೊರಡಲಿರುವ ವಿಮಾನ, ಬೆಳಗ್ಗೆ 9ಕ್ಕೆ ವಿದ್ಯಾನಗರ ತಲುಪಲಿದೆ. ಅದೇ ವಿಮಾನ 9.30ಕ್ಕೆ ಬೆಂಗಳೂರಿಗೆ ಹೊರಡಲಿದೆ. ಬೆಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು, ವಿದ್ಯಾನಗರವನ್ನು 9ಕ್ಕೆ ತಲುಪಲಿದೆ. 9.30ಕ್ಕೆ ವಿದ್ಯಾನಗರದಿಂದ ಹೈದರಾಬಾದ್ಗೆ ತೆರಳಲಿದೆ ಎಂಬ ವೇಳಾಪಟ್ಟಿಯನ್ನು ಟ್ರೂಜೆಟ್ ಕಂಪನಿ ಸಿದ್ಧಪಡಿಸಿದೆ.
ಜಿಲ್ಲೆಯಲ್ಲಿ ಹೈದರಾಬಾದ್ಗಿಂತ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬೆಂಗಳೂರು ವಿಮಾನ ಪ್ರಯಾಣಕ್ಕೆ ಸಾಕಷ್ಟು ಬೇಡಿಕೆ ವ್ಯಕ್ತ ವಾಗಿದೆ. ಇದನ್ನೆಲ್ಲ ಗಮನಿಸಿದ ಜೆಎಸ್ಡಬ್ಲ್ಯು ಹಾಗೂ ಟ್ರೂಜೆಟ್ ಕಂಪನಿ, ಡಿಜೆಸಿಎಯಿಂದ ನೈಟ್ ಲ್ಯಾಂಡಿಂಗ್ ಪರವಾನಗಿ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸಿವೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರಿಗೆ ವಿಮಾನ ಹಾರಾಟ ಆರಂಭವಾಗುವ ಸಾಧ್ಯತೆ ಇದೆ.

 

                hhhh ಬಿಎಸ್ಎನ್ಎಲ್ ನೌಕರರ ಬೇಡಿಕೆ ಈಡೇರಿಸುವಂತೆ ಮುಷ್ಕರ
ಡಿಸೆಂಬರ್.13
ಹೊಸಪೇಟೆ: ಬಿಎಸ್ಎನ್ಎಲ್ ನೌಕರರ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನೌಕರರು ಇಲ್ಲಿನ ಬಿಎಸ್ಎನ್ಎಲ್ನ ಕಚೇರಿ ಎದುರು ಮಂಗಳವಾರ ಮುಷ್ಕರ ನಡೆಸಿದರು.
ಕರ್ನಾಟಕ ವಲಯದ ಎಲ್ಲ ಬಿಎಸ್ಎನ್ಎಲ್ ಮತ್ತು ಅಸೋಸಿಯೇಶನ್ನ ವತಿಯಿಂದ ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ಬಿಎಸ್ಎನ್ಎಲ್ನ ಸಂಚಾಲಕ ಬಿ.ನಾಗೇಂದ್ರ ಮಾತನಾಡಿ, ಇಂದಿನಿಂದ ದೇಶದಾದ್ಯಂತ ಡಿ.12 ಮತ್ತು 13ರಂದು ಎರಡು ದಿನಗಳ ಕಾಲ ನೌಕರರ ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸಲಾಗುತ್ತಿದೆ. ಪ್ರಮುಖವಾಗಿ ಜನವರಿ 1, 2017ರಿಂದ ಜಾರಿಯಾಗಬೇಕಿರುವ 3ನೇ ವೇತನ ಪರಿಷ್ಕರಣೆ ಮಾಡಬೇಕು. ಶೇ.15 ಪ್ರತಿಶತ ಫಿಟ್ಮೆಂಟ್ನೊಂದಿಗೆ ಎಲ್ಲ ಭತ್ಯೆಗಳನ್ನು ಪರಿಷ್ಕರಿಸಬೇಕು ಎಂದರು. ಈಗಾಗಲೇ ಪರಿಷ್ಕರಣೆಯಾಗದೇ ಉಳಿದಿದ್ದ 2ನೇ ವೇತನದಲ್ಲಿ ಉಳಿದಿರುವ ಎಲ್ಲಾ ಭತ್ಯೆಗಳನ್ನು ಇತ್ಯರ್ಥ ಪಡಿಸಬೇಕು. ಜತೆಗೆ ಪ್ರತ್ಯೇಕ ಸಹಾಯಕ ಟವರ್ ಕಂಪನಿಯನ್ನು ರಚಿಸಲು ಹೊರಟಿರುವ ಸರಕಾರ ತನ್ನ ಪ್ರಸ್ತಾಪವನ್ನು ಕೂಡಲೇ ಕೈ ಬಿಡಬೇಕು. ಕೇಂದ್ರ ಸರಕಾರ ಬಿಎಸ್ಎನ್ಎಲ್ ನೌಕರರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಮುಷ್ಕರನಿರತರು ಆಗ್ರಹಿಸಿದರು. ಮುಷ್ಕರದಲ್ಲಿ ಎಲ್ಲ ಏಳು ಯೂನಿಯನ್ ಹಾಗೂ ಅಸೋಸಿಯೇಶನ್ನ ಪದಾಧಿಕಾರಿಗಳಾದ ಎಸ್.ಮಧುಸೂಧನ ಭಟ್, ಸಣ್ಣಕ್ಕಿ ವೆಂಕೋಬ ಎಚ್.ಎಸ್.ಕೆಂಚರಡ್ಡಿ, ಕೆ.ನಾಗರಾಜ್, ಪಿ.ದೀಪ್ತಿ, ಕೆ.ಗೋಪಾಲ್, ಮಹಮ್ಮದ್ ಇಲಿಯಾಸ್, ಸಿದ್ದೇಶ್ ಸೇರಿದಂತೆ ಮತ್ತಿತರರಿದ್ದರು.

 

    213 

ಕುಮಾರಸ್ವಾಮಿ ಉಳಿವಿಗಾಗಿ ಇಂದು ಸಂಡೂರು ಬಂದ್

 ಡಿಸೆಂಬರ್- 11

ಬಳ್ಳಾರಿ : ಕುಮಾರಸ್ವಾಮಿ ದೇವಸ್ಥಾನದ ಉಳಿವಿಗಾಗಿ ಇಂದು ಸಂಡೂರು ಪಟ್ಟಣ ಬಂದ್ ಕರೆಯಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಬಂದ್ಗೆ ಬೆಂಬಲ ನೀಡಲಾಗಿದೆ. ಸಂಡೂರು ಪಟ್ಟಣದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಐತಿಹಾಸಿಕ ದೇವಸ್ಥಾನವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಹಾಗೂ ಸುತ್ತಲಿನ 2 ಕಿ.ಮೀ. ವ್ಯಾಪ್ತಿಯ ಕುಮಾರಸ್ವಾಮಿ ಬೆಟ್ಟವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಲು ಒತ್ತಾಯಪಡಿಸಿ ಬಂದ್ ನಡೆಸಲಾಗುತ್ತಿದೆ.
ಬೆಳಿಗ್ಗೆ 11 ಗಂಟೆಗೆ ಸಂಡೂರಿನಿಂದ ಕುಮಾರಸ್ವಾಮಿ ದೇವಸ್ಥಾನಕ್ಕೆ ಪಾದಯಾತ್ರೆ, ಕುಮಾರಸ್ವಾಮಿ ದೇವಸ್ಥಾನ ಉಳಿಸಿ ಹೋರಾಟ ಸಮಿತಿಯಿಂದ ಸಂಡೂರು ಬಂದ್'ಗೆ ಕರೆ ನೀಡಲಾಗಿದೆ.

 

 

                                                                 

ಗಡಿ ಧ್ವಂಸ ಪ್ರಕರಣದ ಮಾಹಿತಿಗೆ: ಸುಪ್ರೀಂ ಆದೇಶ

ಡಿಸೆಂಬರ್.7

ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ಧ್ವಂಸಗೊಂಡಿದ್ದರೂ ಇದುವರೆಗೂ ಇತ್ಯರ್ಥವಾಗದ ಕರ್ನಾಟಕ-ಆಂಧ್ರಪ್ರದೇಶ ಗಡಿ ಗುರುತಿಸುವಿಕೆ ಕಾರ್ಯಕ್ಕೆ ಇರುವ ಅಡ್ಡಿ ಆತಂಕಗಳೇನು? ವಿವಾದ ಬಗೆಹರಿಸುವ ತಡವಾಗುತ್ತಿರುವ ಬಗ್ಗೆ ತಿಳಿಸುವಂತೆ ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠ ಸರ್ವೇ ಆಫ್ ಇಂಡಿಯಾಗೆ ಆದೇಶಿಸಿದೆ.
ಗಡಿ ಸಮಸ್ಯೆ ಕುರಿತಂತೆ ಆಂಧ್ರ ಸರ್ಕಾರ ಹಾಗೂ ಓಬಳಾಪುರಂ ಗಣಿ ಕಂಪನಿಗಳ ನಡುವೆ ಇರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ.ಮದನ್ ಬಿ.ಲೋಕೂರ್, ನ್ಯಾ. ದೀಪಕ್ ಗುಪ್ತಾ ಅವರಿದ್ದ ವಿಭಾಗೀಯ ಪೀಠ ಕಳೆದ ನ.14ರಂದು ಈ ಕುರಿತು ವಿಚಾರಣೆ ನಡೆಸಿ ಈ ಮಹತ್ವದ ಆದೇಶ ಹೊರಡಿಸಿದೆ.

ಆದೇಶ: ಅಕ್ರಮ ಗಣಿಗಾರಿಕೆ ಕುರಿತ ಪ್ರಕರಣದಲ್ಲಿ ಕರ್ನಾಟಕ-ಆಂಧ್ರ ರಾಜ್ಯಗಳ ನಡುವಿನ ಗಡಿ ಗುರುತಿಸುವಿಕೆ ಇತ್ಯರ್ಥವಾಗದೆ ಉಳಿದಿದೆ. ಈ ಕುರಿತಂತೆ ಸರ್ವೇ ಆಫ್ ಇಂಡಿಯಾದ ಉನ್ನತ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕಿದೆ. ಜೊತೆಗೆ, ಗಡಿ ಗುರುತಿಸುವಿಕೆ ಕುರಿತಂತೆ ಯಾವಾಗ ಈ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎನ್ನುವುದನ್ನು ತಿಳಿಸಬೇಕು ಹಾಗೂ ಈ ಕುರಿತಂತೆ ಇರಬಹುದಾದ ಅಡ್ಡಿ ಗಳೇನಾದರೂ ಇದ್ದರೆ ಡಿ. 8ರೊಳಗೆ ಸಮಗ್ರ ಮಾಹಿತಿ ಸಲ್ಲಿಸುವಂತೆ ವೀಭಾಗೀಯ ಪೀಠ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಬಳ್ಳಾರಿ ಜಿಲ್ಲೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ 32 ಕಿ.ಮೀ. ಉದ್ದದ ಗಡಿ ಭಾಗವಿದ್ದು, ಇದರಲ್ಲಿ ಸಮೃದ್ಧ ಕಬ್ಬಿಣದ ಅದಿರಿನ ನಿಕ್ಷೇಪಗಳಿವೆ. 2004ರಲ್ಲಿ ಆಂಧ್ರದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದ ಓಬಳಾಪುರಂ ಮೈನಿಂಗ್ ಕಂಪನಿ ಈ ಗಡಿ ಭಾಗದಲ್ಲಿರುವ ಅನಂತಪುರಂ ಜಿಲ್ಲೆಯ ಮಲಪನಗುಡಿ, ಸಿದ್ದಾಪುರ ಹಾಗೂ ಬಳ್ಳಾರಿ ಜಿಲ್ಲೆಯ ತುಮಟಿ, ವಿಟuಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 1000 ಮೀ. ಉದ್ದ, 500 ಮೀ. ಅಗಲ ಗಡಿ ಪ್ರದೇಶವನ್ನು ಧ್ವಂಸಗೊಳಿಸಿತ್ತು ಎಂದು ಆರೋಪಿಸಲಾಗಿತ್ತು. ಇನ್ನೊಂದು ಕಡೆ ಕರ್ನಾಟಕದ ಬೆಳಗಲ್ಲು, ಹಲಕುಂದಿ, ಹೊನ್ನಳ್ಳಿ-ಆಂಧ್ರಪ್ರದೇಶದ ಓಬಳಾಪುರಂ, ಸಿದ್ದಾಪುರ ಗಡಿ ಪ್ರದೇಶದಲ್ಲಿಯೂ 1000 ಮೀ., ಉದ್ದ 500ಮೀ., ಅಗಲದ ಗಡಿ ಭಾಗವನ್ನು ಧ್ವಂಸಗೊಳಿಸಿತ್ತು ಎಂಬ ಆರೋಪವಿದೆ. ಈ ಕುರಿತಂತೆ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿರುವ ಸಮಾಜ ಪರಿವರ್ತನಾ ಸಮುದಾಯಗಳ ಜೊತೆಗೆ, ಆಂಧ್ರಪ್ರದೇಶ ಸರ್ಕಾರ, ದಿ|ಎಸ್.ಕೆ. ಮೋದಿ ಒಡೆತನದ ವಿಜಿಎಂ ಮೈನಿಂಗ್ ಕಂಪನಿ ಮುಂತಾದವು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದವು.

 

44

ದೇವೇಗೌಡರ ಸಭೆ: ಭರ್ಜರಿಯಾಗಿ ಸ್ವಾಗತಿಸಿದ ಕಾರ್ಯಕರ್ತರು

 ಡಿಸೆಂಬರ್-5
 ಬಳ್ಳಾರಿ : ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರವಾಸ ಆರಂಭಿಸಿರುವ ಮಾಜಿ ಪ್ರಧಾನ ಹೆಚ್.ಡಿ  ದೇವೇಗೌಡ ಇಂದು ನಗರದ ಕಮ್ಮ ಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.
 ದೇವೇಗೌಡ ಭೇಟಿ ಹಿನ್ನೆಲೆಯಲ್ಲಿ ಹಂಪಿ ಎಕ್ಸ್ ಪ್ರೆಸ್ ಮೂಲಕ ಬಳ್ಳಾರಿಗೆ ಆಗಮಿಸಿದ ಅವರನ್ನು ಪಕ್ಷದ ಕಾರ್ಯಕರ್ತರು ರೈಲ್ವೆ  ನಿಲ್ದಾಣದಲ್ಲಿ ಘೋಷಣೆಗಳೊಂದಿಗೆ ದೇವೇಗೌಡ ಅವರನ್ನು ಭರ್ಜರಿಯಾಗಿ ಬರ ಮಾಡಿಕೊಂಡರು.
 ಈಗಾಗಲೇ ದೇವೇಗೌಡರು ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲವು ಮುಖಂಡರಿಗೆ ಗಾಳ ಹಾಕಿದ್ದು, ಮಾತುಕತೆ ಕೂಡ  ನಡೆಸಿದ್ದಾರಂತೆ. ಇದನ್ನು ಹೊಸಪೇಟೆ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಹೆಚ್. ಆರ್ ಗವಿಯಪ್ಪ ಅವರು  ಒಪ್ಪಿಕೊಂಡಿದ್ದಾರೆ.

 

 

88  ವಿದ್ಯುತ್ ಸ್ಪರ್ಶ : ಲೈನ್ ಮ್ಯಾನ್ ಸಾವು
 ಡಿಸೆಂಬರ್-5
 ಹೊಸಕೋಟೆ : ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಬೆಸ್ಕಾಂ ನ ನ ಲೈನ್ ಮ್ಯಾನ್  ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
 ಮೃತರನ್ನು ಸಿದ್ದರಾಜು (40) ಎಂದು ಗುರುತಿಸಲಾಗಿದೆ. ಅವರು ಬೆಸ್ಕಾಂನ  ಸುಂಕದಕಟ್ಟೆ ನಿವಾಸಿ ಯಾಗಿದ್ದು, ಪಿಳ್ಳಂಗುಪೆ ಕೈಗಾರಿಕೆ ಪ್ರದೇಶದಲ್ಲಿನ ಬೆಸ್ಕಾಂ  ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಬೀಮಕ್ಕನಹಳ್ಳಿ ಗ್ರಾಮದ ರೆಸಾರ್ಟ್ ಗೆ ವಿದ್ಯುತ್  ಸರಬರಾಜು ಮಾಡುವ ಜಂಕ್ಷನ್ ಪೆಟ್ಟಿಗೆ ರಿಪೇರಿಗಾಗಿ ಹೋಗಿದ್ದಾಗ ಘಟನೆ ನಡೆದಿದೆ.

 

 

333  ಜನರ ಒಳಿತಿಗಾಗಿ ಪಾದಯಾತ್ರೆ ಕೈಗೊಂಡ: ರೆಡ್ಡಿ
 ನವೆಂಬರ್-30
 ಬಳ್ಳಾರಿ : ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಜಗತ್ತಿನ ಪ್ರತಿಯೊಬ್ಬರಿಗೂ ಒಳಿತಾಗಬೇಕು ಎಂಬ   ಉದ್ದೇಶದಿಂದ ಬಳ್ಳಾರಿಯಿಂದ ಆಂಧ್ರದ ಕಸಾಪುರಕ್ಕೆ ಪಾದಯಾತ್ರೆಯನ್ನು ನಡೆಸಲಿದ್ದಾರೆ.
 ಹನುಮಂತ ದೇವರ ಭಕ್ತರಾಗಿರುವ ಸೋಮಶೇಖರ್ ರೆಡ್ಡಿ, ದೇವರು ಆರೋಗ್ಯ, ಸಂಪತ್ತು ಕೊಟ್ಟಾಗ ಅದನ್ನು   ಒಳ್ಳೆಯ ರೀತಿ ಉಪಯೋಗಿಸಿಕೊಳ್ಳರಬೇಕು. ದೇಹವನ್ನು ದಂಡಿಸಿದಾಗ ದೈವಭಕ್ತಿಗೆ ಪ್ರೇರಣೆ ಸಿಗುತ್ತದೆ ಎಂದು   ಹೇಳಿದರು.
 ಈಗಾಗಲೇ ಹನುಮ ಮಾಲಾಧಾರಿಯಾಗಿರುವ ಮಾಜಿ ಶಾಸಕರು ಸರ್ವೇ ಜನೋ ಸುಖೀನೋಭವಂತು ಎಂಬ  ಸಂಕಲ್ಪದಿಂದ ಪಾದಯಾತ್ರೆ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.

 

 

  ಗಗ ಆ್ಯಂಬುಲೆನ್ಸ್ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ನವೆಂಬರ್.25
ಹೊಸಪೇಟೆ: 108 ಆ್ಯಂಬುಲೆನ್ಸ್ನಲ್ಲಿಯೇ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿಯಲ್ಲಿ ನಡೆದಿದೆ.
ಲಕ್ಷ್ಮಿ ಅವಳಿ ಮಕ್ಕಳಿಗೆ ಜನ್ಮ ನೀಡದ ತಾಯಿ. ಅಯ್ಯನಹಳ್ಳಿಯಿಂದ ಹೊಸಪೇಟೆಯ ಸರಕಾರಿ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯನ್ನ ಕರೆದೊಯ್ಯುವ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ಬಳಿ ಹೆರಿಗೆಯಾಗಿದೆ.
ಆ್ಯಂಬುಲೆನ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇ.ಎಂ.ಟಿ. ಅನಿಲ್ ಮತ್ತು ಚಾಲಕ ಸುರೇಶ್ ಅವರ ಸಮಯ ಪ್ರಜ್ಞೆಯಿಂದ ಗರ್ಭಿಣಿಗೆ ಸುರಕ್ಷಿತ ಹೆರಿಗೆಯಾಗಿದೆ. ಮಹಿಳೆ ಒಂದು ಗಂಡು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಾಣಂತಿ ಮಹಿಳೆಗೆ ಹೊಸಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

 

22 ಮಗಳ ಮದುವೆ ತಂದ ಕಂಟಕ
 ನವೆಂಬರ್-8
ಬಳ್ಳಾರಿ : ಮಾಜಿ ಸಚಿವ ಜನಾರ್ದನರೆಡ್ಡಿ ಪುತ್ರಿಯ ಮದುವೆ ಮುಗಿದು ವರ್ಷವೇ ಕಳೆದಿದೆ. ಆದ್ರೆ ರೆಡ್ಡಿ ಮಗಳ ಮದುವೆಯ ವಿವಾದ ಮಾತ್ರ ಇನ್ನೂ ಮುಗಿಯುತ್ತಿಲ್ಲ. ಇದೀಗ ತನ್ನ ಮಗಳ ಮದುವೆಗೆ ಖರ್ಚು ಮಾಡಿದ್ದ ಖರ್ಚು ವೆಚ್ಚದ ಬಗ್ಗೆ ತನಿಖೆ ನಡೆಸಿದ, ಕೇಂದ್ರ ಜಾಗೃತ ಆಯೋಗ, ಸಿಬಿಐಗೆ ಪತ್ರ ಬರೆದಿದೆ. ಇದು ಇದೀಗ ಕುತೂಹಲ ಸೂಡಿಸಿದ್ದು, ಮತ್ತೆ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಮುಳುವಾಗಲಿದೆಯಾ ಎಂಬುವಂತಾಗಿದೆ.
ಪುತ್ರಿ ಬ್ರಹ್ಮಣಿಯ ವಿವಾಹಕ್ಕೆ ನೂರಾರು ಕೋಟಿ ಖರ್ಚು ಮಾಡಿದ ಬಗ್ಗೆ ದೂರು ನೀಡಿದ್ರೂ ತನಿಖೆ ನಡೆಸದ ಸಿಬಿಐ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಸೆಕ್ಷನ್ ಆಫೀಸರ್ ಅರವಿಂದ ಕುಮಾರ್ ಸಿಬಿಐನ ಜಂಟಿ ನಿರ್ದೇಶಕ ಎ.ಕೆ ಶರ್ಮಾರವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಅಕ್ಟೋಬರ್ 25ರಂದು ಬರೆದಿರುವ ಪತ್ರದ ಪ್ರತಿ ಇದೀಗ ನಮ್ಮ ನ್ಯೂಸ್ ನೌ ವೆಬ್ ಸೈಟ್ ಗೆ ಲಭ್ಯವಾಗಿದೆ.
ಮಾಜಿ ಸಚಿವ ಜನಾರ್ದನರೆಡ್ಡಿ ತಮ್ಮ ಪುತ್ರಿಯ ಮದುವೆಗೆ ನೂರಾರು ಕೋಟಿ ಹಣ ಖರ್ಚು ಮಾಡಿದ್ದರು. ಈ ಮದುವೆ ಖರ್ಚಿಗೆ ಓಬಳಾಪುರ ಮೈನಿಂಗ್ ಕಂಪನಿಯ ಅಂಗಸಂಸ್ಥೆಯಾದ ಟ್ಯೂಬೂಲಾರ್ ರೆವಿಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಮಿದಿತಾ ಎಂಟರ್ ಪ್ರೈಸಸ್ ಕಂಪನಿಗಳ ಆದಾಯವೇ ಮೂಲವೆಂದು ತಿಳಿಸಿದ್ದರು.

 

 

99

  ಮೂರು ದಿನಗಳ ಹಂಪಿ ಉತ್ಸವಕ್ಕೆ ಸಿಎಂ ಚಾಲನೆ
 ನವೆಂಬರ್-4
ಹಂಪಿ : ರಾಜಕೀಯಕ್ಕಾಗಿ ಇತಿಹಾಸ ತಿರುಚಬಾರದು. ಚರಿತ್ರೆಯನ್ನು ಧಾರ್ಮಿಕ ಕಣ್ಣುಗಳಿಂದ ನೋಡಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಇತಿಹಾಸಕ್ಕೆ ದ್ರೋಹ ಮಾಡಿದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಶ್ವಖ್ಯಾತ ಪ್ರವಾಸಿ ತಾಣವಾದ ಹಂಪಿಯ ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಮೂರು ದಿನಗಳ ಹಂಪಿ ಉತ್ಸವಕ್ಕೆ ಶುಕ್ರವಾರ ರಾತ್ರಿ ಚಾಲನೆ ನೀಡಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು.
ಇತಿಹಾಸ ಗೊತ್ತಿಲ್ಲದವರು ಟಿಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು. ಬ್ರಿಟಿಷರಿಗೆ ಮಕ್ಕಳನ್ನು ಒತ್ತೆ ಇಟ್ಟವರು ಟಿಪ್ಪು. ಅಂತಹವರನ್ನು ವಿರೋಧ ಮಾಡುವುದೇಕೆ. ನಮ್ಮವರಿಂದಲೇ ಒಳ ಸಂಚು ನಡೆಯದೇ ಹೋಗಿದ್ದರೆ ಟಿಪ್ಪು ಸುಲ್ತಾನ್ ಸೋಲಿಸಲು ಆಗುತ್ತಿರಲಿಲ್ಲ. ಕಿತ್ತೂರು ರಕ್ಷಣೆಗಾಗಿ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೋರಾಡಿದ ರೀತಿ ಟಿಪ್ಪು ಹೋರಾಟ ಮಾಡಿದರು. ಅವರು ಹಿಂದೂ ವಿರೋಧಿ ಆಗಿದ್ದರೆ ಶೃಂಗೇರಿ ಮಠಕ್ಕೆ, ನಂಜನಗೂಡು ದೇವಾಲಯಕ್ಕೆ ಸಹಾಯ ಮಾಡುತ್ತಿರಲಿಲ್ಲ. ಹಿಂದೂ ಧರ್ಮದ ಪೂರ್ಣಯ್ಯ ಅವರನ್ನು ದಿವಾನರಾಗಿ ನೇಮಕ ಮಾಡಿಕೊಳ್ಳುತ್ತಿರಲಿಲ್ಲ.

ಅವರು ಎಲ್ಲ ಧರ್ಮದವರನ್ನು ಪ್ರೀತಿಸುತ್ತಿದ್ದರು ಎಂದು ಸಿದ್ದರಾಮಯ್ಯ ನುಡಿದರು.
ನಾವು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಆಡಳಿತ ನಡೆಸುತ್ತಿದ್ದೇವೆ. ಎಲ್ಲರಿಗೂ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕಾಗಿ ಹಲವಾರು ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯಾವುದೋ ಪಕ್ಷದಿಂದ ರಾಜ್ಯವನ್ನು ಮುಕ್ತ ಮಾಡುವುದು ನಮ್ಮ ಗುರಿಯಲ್ಲ. ರಾಜ್ಯವನ್ನು ಹಸಿವು ಮುಕ್ತ, ಅನಕ್ಷರತೆಯ ಮುಕ್ತ, ಗುಡಿಸಲು ಮುಕ್ತ ಮಾಡುವುದು ನಮ್ಮ ಉದ್ದೇಶ ಎಂದರು.
ಮೂರು ದಿನಗಳ ಈ ಉತ್ಸವದಲ್ಲಿ ದೇಶ, ವಿದೇಶದ ಪ್ರವಾಸಿಗರು ಭಾಗವಹಿಸಲಿದ್ದಾರೆ. ಇದು ಜನರ ಉತ್ಸವ. ಯಾವುದೇ ಉತ್ಸವ ಯಶಸ್ವಿ ಆಗಬೇಕಾದರೆ ಜನ ಮತ್ತು ಕಲಾವಿದರು ಹೆಚ್ವಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದ ಉತ್ಸವಕ್ಕೂ ಮೆರುಗು ಬರುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದರು. ಹಂಪಿ ಉತ್ಸವ ಎಂದಾಕ್ಷಣ ವಿಜಯನಗರ ಸಾಮ್ರಾಜ್ಯದ ಗತ ವೈಭವ ನೆನಪಿಗೆ ಬರುತ್ತದೆ.
ಅಂದಿನ ಸಿರಿವಂತ ಸಂಸ್ಕೃತಿ, ಕಲೆ, ಸಾಹಿತ್ಯ, ಈ ಎಲ್ಲವನ್ನೂ ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಸರ್ಕಾರ ಮತ್ತು ಜನರ ಜವಾಬ್ದಾರಿ. ಮೈಸೂರು ದಸರಾ ಮಹೋತ್ಸವ ಸಹ ವಿಜಯನಗರ ಅರಸರ ಕೊಡುಗೆ. ಮೈಸೂರಿನಲ್ಲಿ ಆರಂಭವಾಗುವ ಮೊದಲು ಇಲ್ಲಿ ದಸರಾ ಮಹೋತ್ಸವ ನಡೆಯುತ್ತಿತ್ತು. ಬಳಿಕ ಮೈಸೂರಿನ ರಾಜ ವಂಶಸ್ಥರು ಪ್ರಾರಂಭಿಸಿದರು ಎಂದವರು ಹೇಳಿದರು. ಹಂಪಿ ಉತ್ಸವ ವೈಭಯುತವಾಗಿ ನಡೆಯಲು ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿದ್ದ ದಿವಂಗತ ಎಂ.ಪಿ.ಪ್ರಕಾಶ್ ಕಾರಣ.

1987ರಲ್ಲಿ ಉತ್ಸವಕ್ಕೆ ನಾಂದಿ ಹಾಡಿದವರು ಅವರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಹಂಪಿ ವಿಶ್ವ ಪರಂಪರೆಯ ತಾಣವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

 

 

                                                                                                                                                                                    

ಇಂಗ್ಲಿಷ್ ಕಲಿತವರು ಬುದ್ಧಿವಂತರೆಂಬ ಭ್ರಮೆ: ಲಾಡ್

ನವೆಂಬರ್.2

ಬಳ್ಳಾರಿ: ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿ ಇಂಗ್ಲಿಷ್ ಕಲಿತವರು ಬುದ್ಧಿವಂತರೆಂಬ ಭ್ರಮೆಯಿಂದ ನಾವು ಹೊರಬರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ಲಾಡ್ ಹೇಳಿದರು.

ನಗರದ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿಗೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು. ನಮ್ಮಲ್ಲಿ ಇಂಗ್ಲಿಷ್ ಕಲಿತವರು ಬುದ್ಧಿವಂತರು, ನಮಗೆ ಇಂಗ್ಲಿಷ್ ಬರುವುದಿಲ್ಲ, ನಾವು ದಡ್ಡರೆಂಬ ಕೀಳರಿಮೆ ಬಿಡಬೇಕು ಎಂದರು.

ಕುಸಿಯುತ್ತಿರುವ ಜೀವನ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ಕರ್ತವ್ಯ ಪ್ರತಿಯೊಬ್ಬರ ಮೇಲಿದೆ. ನಮ್ಮದು ಕೇವಲ ಭಾಷೆಗೆ ಸೀಮಿತವಾದ ರಾಜ್ಯವಲ್ಲ. ಕನ್ನಡವು ನಮ್ಮದೆಯಾದ ಸಂಸ್ಕೃತಿಯನ್ನು ಹೊಂದಿದೆ, 2000 ವರ್ಷಗಳ ಇತಿಹಾಸವಿರುವ, ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಹಲವು ಸಂಸ್ಕೃತಿಗಳ ಸಾರ್ವಭೌಮ ಸಂಗಮವಾಗಿದೆ ಎಂದರು.
ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಡುಗೆ ಅಪಾರ. ಇಂತಹ ಸಾಹಿತ್ಯ ಲೋಕವನ್ನು ಮತ್ತಷ್ಟು ಶ್ರೀಮಂತ ವಾಗಬೇಕು, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು. ನಮ್ಮ ರಾಜ್ಯವು ಶಾಂತಿ ಸಹಬಾಳ್ವೆಗೆ ಹೆಸರಾಗಿದ್ದು, ಇದನು ್ನ ನಾವೆಲ್ಲ ಮುಂದುವರಿಸಿ ಕೊಂಡು ಹೋಗೋಣ ಎಂದರು. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹಾನೀಯರನ್ನು ಇದೇ ಸಂದರ್ಭ ದಲ್ಲಿ ಸ್ಮರಿಸಿದರು.

ಈಶಾನ್ಯ ಸಾರಿಗೆ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ಹಲವಾರು ಇಲಾಖೆ ಮತ್ತು ಸಂಘಗಳು ಸಿದ್ಧಪಡಿಸಿದ ಸ್ತಬ್ಧಚಿತ್ರಗಳು ಗಮನ ಸೆಳೆಯಿತು, ಈಶಾನ್ಯ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದ ಸಿಬ್ಬಂದಿಗಳು ವಿಧಾನ ಸಭೆಯ ವಜ್ರಮಹೋತ್ಸವ ನಿಮಿತ್ತ ಸಿದ್ಧಪಡಿಸಿದ ವಿಧಾನಸಭೆ ಸ್ತಬ್ಧ ಚಿತ್ರವೂ ಎಲ್ಲರ ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಬಳ್ಳಾರಿ ಹೊಸಪೇಟೆ ತಡೆರಹಿತ ಹೊಸದಾದ ಬಸ್ಗಳಿಗೆ ಚಾಲನೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆ ಚಾನಾಳ್ ಶೇಖರ್ ಸೇರಿದಂತೆ ನಾನಾ ಸಂಘಟನೆಗಳು ಹಂಪಿಯಿಂದ ಜ್ಯೋತಿಯನ್ನು ತಂದು ಸಚಿವರಿಗೆ ನೀಡಿದರು. ಉತ್ತಮ ಸೇವೆ ಸಲ್ಲಿಸಿದ ನಾನಾ ಇಲಾಖೆಯ ಅಧಿಕಾರಿಗಳಿಗೆ ಪ್ರಶಂಸನಾ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಿದರು.
ಸಮಾರಂಭದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ, ಮೇಯರ್ ಜಿ.ವೆಂಕಟರಮಣ, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ಎಸ್ಪಿ ಆರ್. ಚೇತನ್, ಜಿ.ಪಂ.ಸಿಇಒ ಡಾ.ಕೆ.ವಿ. ರಾಜೇಂದ್ರ, ಪಾಲಿಕೆ ಆಯುಕ್ತ ಎಂ.ಕೆ. ನಲವಡಿ, ಎಡಿಸಿ ಸೋಮಶೇಖರ್, ಎಸಿ ಕುಮಾರಸ್ವಾಮಿ ಇದ್ದರು.

 

 

 

                                                                                                                                                                                                          

ಹಂಪಿ ಉತ್ಸವವನ್ನು ಈ ಬಾರಿ ಅದ್ಧೂರಿ:ಎಸ್. ಲಾಡ್ 

 ನವೆಂಬರ್.1

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ಹಂಪಿ ಉತ್ಸವವನ್ನು ಈ ಬಾರಿ ಅದ್ಧೂರಿಯಿಂದ ಆಚರಿಸಲಾಗುತ್ತಿದ್ದು, ಬಾಲಿವುಡ್ ಗಾಯಕರು ಕೂಡ ಆಗಮಿಸಲಿದ್ದಾರೆ ಎಂದು ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಹಂಪಿಯ ಮಯೂರಭುವನೇಶ್ವರಿ ಹೋಟೆಲ್ ಆವರಣದಲ್ಲಿ ಮಂಗಳವಾರ ನಡೆದ ಆಗಸದಿಂದ ಹಂಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.3,4 ಮತ್ತು 5ರ ವರೆಗೆ ನಡೆಯಲಿರುವ ಹಂಪಿ ಉತ್ಸವದ ಅದ್ಧೂರಿ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 8 ಕೋಟಿ ರೂ. ನೀಡಿದೆ. ಪ್ರವಾಸೋದ್ಯಮ ಇಲಾಖೆಯ 1.5 ಕೋಟಿ ರೂ. ಅನುದಾನಕ್ಕೆ ಪತ್ರ ಬರೆಯಲಾಗಿದೆ. ಜತೆಗೆ ದಾನಿಗಳಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದರು.
ಕನ್ನಡದ ಗಾಯಕರಾದ ಗುರುಕಿರಣ, ಮನೋಮೂರ್ತಿ, ಟಿಪ್ಪು ಹಾಗೂ ಬಾಲಿವುಡ್ ಗಾಯಕರಾದ ನಿತಿಮೋಹನ್, ಕುನಾಲ್ ಗಾಂಜಾವಾಲಾ, ಶಾನ್ ಖ್ಯಾತನಾಮ ಗಾಯಕರು ಆಗಮಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ 8 ಕಲಾ ತಂಡಗಳು ಆಗಮಿಸಲಿವೆ ಎಂದು ಹೇಳಿದರು.

 

 

 

 

                                                               

ಟಿಯುಸಿಐನಿಂದ ಪುರಸಭೆ ಮುಂದೆ ಧರಣಿ

ಅಕ್ಟೋಬರ್.31

ಮಸ್ಕಿ: ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 65 ಸಿಬ್ಬಂದಿಗೆ 4 ತಿಂಗಳ ವೇತನ ಹಾಗೂ 8 ತಿಂಗಳ ಹಿಂಬಾಕಿ ವೇತನ ಪಾವತಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಟಿಯುಸಿಐನಿಂದ ಪುರಸಭೆ ಕಾರ್ಯಾಲಯದ ಮುಂದೆ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
ಧರಣಿ ನಿರತರನ್ನು ಉದ್ದೇಶಿಸಿ ಟಿಯುಸಿಐ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರಿಕಿ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿಗಳಿಗೆ ಸಿಬ್ಬಂದಿಗಳ 4 ತಿಂಗಳ ವೇತನ ಹಾಗೂ 8 ತಿಂಗಳ ಹಿಂಬಾಕಿ ವೇತನ ಪಾವತಿಸದಿದ್ದರೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು 5 ಬಾರಿ ಪತ್ರ ಬರೆಯಲಾಗಿದ್ದರೂ, ಯಾವುದೇ ರೀತಿಯ ಪ್ರತಿಕ್ರಿಯೆ ಬರದ ಕಾರಣ ಅನಿವಾರ್ಯವಾಗಿ ಹೋರಾಟ ನಡೆಸಲಾಗುತ್ತಿದೆ. ಕಳೆದ ಆಗಸ್ಟ್ನಲ್ಲಿ ವೇತನ ಹಾಗೂ ಹಿಂಬಾಕಿ ಪಾವತಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಮುಷ್ಕರ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು 2ಹಂತದಲ್ಲಿ ವೇತನ ಹಾಗೂ ಹಿಂಬಾಕಿ ಪಾವತಿಸಲಾಗುತ್ತದೆ ಎಂದು ಪತ್ರ ಬರೆದಿದ್ದರಿಂದ ಮುಷ್ಕರವನ್ನು ಕೈ ಬಿಡಲಾಗಿತ್ತು. ಆದರೆ ವೇತನ ಪಾವತಿಗೆ ನೀಡಿದ್ದ ಗಡುವು ಮುಗಿದಿದೆ. ಪೌರ ಕಾರ್ಮಿಕರಿಕೆ 4 ತಿಂಗಳ ವೇತನ ಪಾವತಿಸಲು ಪುರಸಭೆಯಲ್ಲಿ ಅನುದಾನವಿಲ್ಲವೆಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

 

 

    

ಹಂಪಿ ಉತ್ಸವ ನಿಮಿತ್ತ ಗಾಳಿಪಟ, ಚಿತ್ರಕಲಾ ಶಿಬಿರಕ್ಕೆ ಚಾಲನೆ

ಅಕ್ಟೋಬರ್.30

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ನ.3 ರಿಂದ 5ರವರೆಗೆ ನಡೆಯುವ ಉತ್ಸವದಲ್ಲಿ ದೇಶ, ವಿದೇಶ ಸೇರಿ ರಾಜ್ಯದ ಹಲವಾರು
ಭಾಗಗಳಿಂದ ಸಾವಿರ ಕಲಾವಿದರು ಭಾಗವಹಿಸಲಿದ್ದು, ಉತ್ಸವ ನಿಮಿತ್ತ ಒಟ್ಟು 11 ವೇದಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಹಂಪಿ ಉತ್ಸವ ನಿಮಿತ್ತ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಾಳಿಪಟ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಹಂಪಿ ಉತ್ಸವದಲ್ಲಿ ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡಿರುವ ಗಾಳಿಪಟ ನುರಿತ ಕೆ.ವಿ. ರಾವ್ ನೇತೃತ್ವದ ತಂಡ ಗಾಳಿಪಟ ಹಾರಾಟ ನಡೆಸುತ್ತಿದೆ ಎಂದರು.
ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡುವುದಕ್ಕಾಗಿ ಹೆಚ್ಚುವರಿಯಾಗಿ ಎರಡು ವೇದಿಕೆ ಮಾಡಲಾಗುತ್ತಿದ್ದು, ಉತ್ಸವದ ನಿಮಿತ್ತ ಇದೇ ಮೊದಲ ಬಾರಿಗೆ ಒಟ್ಟು 11 ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೊದಲ ಬಾರಿಗೆ ರಾಯಲ್ ಲೇಸರ್ ಶೋ ಪ್ರದರ್ಶನ ಹಾಗೂ ಉಳಿದೆರಡು ವೇದಿಕೆಯಲ್ಲಿ ಕರ್ನಾಟಕ ವೈಭವ ಪ್ರದರ್ಶನವಾಗಲಿದೆ. ರಾಯಲ್ ಲೇಸರ್ ಶೋ ಜನರಲ್ಲಿ ಕುತೂಹಲವನ್ನುಂಟುಮಾಡಲಿದೆ ಎಂದು ಹೇಳಿದರು.
                                                                                                               

 

 

 

  ರಾಜಕೀಯಕ್ಕೆ ಇಳಿದ ಮಾಜಿ ಡಿವೈಎಸ್ಟಿ ಅನುಪಮ
ಅಕ್ಟೋಬರ್.30
ಬಳ್ಳಾರಿ: ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರು ಹೊಸ ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದು, ಇದೇ ನವೆಂಬರ್ 1ರಂದು ಜಿಲ್ಲೆಯ ಕೂಡ್ಲಗಿ ಪಟ್ಟಣದಲ್ಲಿ ಮೊದಲ ಸಭೆ ಕರೆದು ಹೆಸರು ಘೋಷಣೆ ಮಾಡಲಾಗುತ್ತದೆ.
ಈ ಕುರಿತು ಸುದ್ದಿಗೋಷ್ಠಿ ಕರೆದಿದ್ದ ಅನುಪಮಾ ಶೆಣೈ ' ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ 224 ಕ್ಷೇತ್ರಗಳ ಪೈಕಿ 80 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ, ಆದರೆ ಕ್ಷೇತ್ರ ನಿಗದಿಯಾಗಿಲ್ಲ' ಎಂದು ಹೇಳಿದ್ದಾರೆ.
ಇದೇ ವೇಳೆ ತನಗೆ ಪ್ರಾಣಭೀತಿಯಿರುವುದಾಗಿ ಹೇಳಿದ್ದ ಶೇಣೈ ಈ ವಿಚಾರವಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿಯಾಗಿರುವುದಾಗಿ ಹೇಳಿದ್ದಾರೆ. ' ರಾಜ್ಯದಲ್ಲಿ ಭ್ರಷ್ಟಾಚಾರ, ದುಷ್ಟಾಚಾರ ಎರಡೂ ಇದೆ. ನಾನೊಬ್ಬಳೇ ಹೊಸ ಪಕ್ಷ ಮಾಡುತ್ತಿಲ್ಲ, ನನ್ನ ಹಿಂದೆ ಬಹಳಷ್ಟು ಜನರಿದ್ದಾರೆ' ಎಂದು ಶೇಣೈ ಹೇಳಿದ್ದಾರೆ.

 

 

   gg ನಂಬಿಸಿ ಕೈ ಕೊಟ್ಟ ಯುವಕ
ಅಕ್ಟೋಬರ್.28
ಬಳ್ಳಾರಿ: ಮದುವೆಯಾಗುವುದಾಗಿ ನಂಬಿಸಿ ಬಾಲಕಿಗೆ ವಂಚಿಸಿದ ಆರೋಪ ಆಧರಿಸಿ, ಯುವಕನೊಬ್ಬನ ವಿರುದ್ಧ ಗುಡೇಕೋಟೆ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಗುರುಮೂರ್ತಿ, ಬಾಲಕಿಗೆ ಕೈಕೊಟ್ಟ ಯುವಕ. ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಈತ, ಆಗಾಗ್ಗೆ ಗ್ರಾಮಕ್ಕೆ ಭೇಟಿನೀಡಿ, ಬಾಲಕಿ ಜತೆ ಸಲುಗೆ ಬೆಳೆಸಿದ್ದ. ಆಕೆಯ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಬಾಲಕಿಯನ್ನು ಮದುವೆಯಾಗುವಂತೆ ಬಾಲಕಿಯ ಪಾಲಕರು ಪಟ್ಟುಹಿಡಿದಾಗ ಈತನ ಕುಟುಂಬದವರು ಜಗಳತೆಗೆದಿದ್ದಾರೆ. ಬಾಲಕಿಯ ದೂರು ಆಧರಿಸಿ, ಪ್ರಕರಣ ದಾಖಲಾಗಿದೆ

 

 

 

                                                                                                                             

ಸರಕಾರಿ ನೌಕರರು ಅಕ್ರಮ: ಎಸಿಬಿ ಅಧಿಕಾರಿ ಭೇಟಿ

ಅಕ್ಟೋಬರ್-28

ಸಿರುಗುಪ್ಪ: ಅಂಗನವಾಡಿ ಕಾರ್ಯಕರ್ತೆಯರ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಆರ್.ನಾಗರಾಜ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ಭೇಟಿ ನೀಡಿ ವಿವರ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸಿಬಿ ಅಧಿಕಾರಿಗಳು, ಲೋಕಾಯುಕ್ತ ಇಲಾಖೆಯಂತೆ ಪ್ರತಿ ತಿಂಗಳ ಕೊನೆಯ ವಾರದಲ್ಲಿ ತಾಲೂಕಿಗೆ ಒಂದು ದಿನ ಭೇಟಿ ನೀಡಿ, ಸಾರ್ವಜನಿಕರಿಂದ ಸಮಸ್ಯೆಗಳ ಬಗ್ಗೆ ದಾಖಲೆಗಳನ್ನು ಸ್ವೀಕರಿಸಲಾಗುವುದು. ಸರಕಾರಿ ಕಚೇರಿಗಳಲ್ಲಿ ಅನಗತ್ಯವಾಗಿ ಅರ್ಜಿ ವಿಲೇವಾರಿ ವಿಳಂಬವಾಗುತ್ತಿರುವುದು. ಹಣದ ಅಮಿಷಕ್ಕಾಗಿ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ಸರಕಾರಿ ನೌಕರರು ಅಕ್ರಮ ಆಸ್ತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ದೂರು ಸಲ್ಲಿಸಬಹುದು. ತಾಲೂಕಿನಿಂದ ಕಳೆದ ನಾಲ್ಕು ತಿಂಗಳಲ್ಲಿ ಕೇವಲ 5 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.

  

 

 

 

00     2ನೇ ಪಾಕಿಸ್ತಾನ ಹುಟ್ಟು ಹಾಕೋಕೆ ಆಗುತ್ತಾ: ದೇವೇಗೌಡ
 ಅಕ್ಟೋಬರ್-24
ಬಳ್ಳಾರಿ: ಮಹದಾಯಿ ವಿಚಾರದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡಿದ್ದೇನೆ. ಆದರೆ ಪ್ರಧಾನಿ ಅವರು ಕಣ್ಣಿದ್ದು ಕುರುಡರಾಗಿ, ಕಿವಿ ಇದ್ದು ಕಿವುಡರಾಗಿದ್ದಾರೆ. ಅದಕ್ಕೆ ನಾವೇನೂ ಮಾಡಕ್ಕಾಗಲ್ಲ. ಹೀಗಾಗಿ ಎರಡೂ ರಾಷ್ಡ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಮಂಗಳವಾರ ಬಳ್ಳಾರಿ ಹೂವಿನಹಡಗಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಜಯಂತಿ ವಿಷಯ ಮತ್ತು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಟಿಪ್ಪು ಜಯಂತಿ ವಿಷಯದಲ್ಲಿ ಅನಗತ್ಯ ಪೈಪೋಟಿ ನಡೆಯುತ್ತಿದೆ. ಈ ವಿಷಯದಲ್ಲಿ ಬಿಜೆಪಿಯವರು ಅನಗತ್ಯ ಅತಿರೇಕಕ್ಕೆ ಹೋಗಬಾರದು. ಟಿಪ್ಪು ಜಯಂತಿ ಬಗ್ಗೆ ಪರ, ವಿರೋಧ ಚರ್ಚೆ ಅಗತ್ಯವಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು ಮುಸ್ಲಿಮರ ಓಟು ನನಗೆ ಬೇಕಾಗಿಲ್ಲ ಎಂದು ಹೇಳೋದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗುತ್ತದೆ. ಹಾಗಾದ್ರೆ ಮುಸ್ಲಿಂ, ಕ್ರೈಸ್ತರನ್ನು ಎಲ್ಲಿಗೆ ಕಳುಹಿಸುತ್ತೀರಾ? 2ನೇ ಪಾಕಿಸ್ತಾನ ಹುಟ್ಟು ಹಾಕೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.

  

     

ಬೋನಿಗೆ ಬಿದ್ದ ಚಿರತೆ

ಅಕ್ಟೋಬರ್.23

ಹೂವಿನಹಡಗಲಿ: ತಾಲೂಕಿನ ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.

ಅರಣ್ಯ ಪ್ರದೇಶದ ಪಕ್ಕದಲ್ಲಿ ಇತ್ತೀಚೆಗೆ ದಾಳಿ ಮಾಡಿದ್ದ ಚಿರತೆ, ಕುರಿಗಾಹಿಗಳು ಹಾಕಿರುವ ಹಟ್ಟಿಯಲ್ಲಿ ದಾಳಿ ಮಾಡಿ ಭೀತಿ ಹುಟ್ಟಿಸಿತ್ತು. ಈ ಹಿನ್ನಲೆಯಲ್ಲಿ ಇಲ್ಲಿನ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಬೋನು ಅಳವಡಿಸಿದ್ದರು. ಚಿರತೆ ಬೋನಿಗೆ ಬಿದ್ದಿದ್ದು, ಬಳ್ಳಾರಿಗೆ ಸ್ಥಳಾಂತರ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ರವೀಂದ್ರ ನಾಯ್ಕ ತಿಳಿಸಿದರು.

  

     

ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ಅಕ್ಟೋಬರ್.21

ಬಳ್ಳಾರಿ: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ.

ಶ್ರೀನಿವಾಸ್ (45), ನಳಿನಿ (33), ವೆಂಕಟಮ್ಮ (55) ಮತ್ತು ಸರಸ್ವತಿ (53) ಮೃತ ದುರ್ದೈವಿಗಳಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರೆಲ್ಲರೂ ಚಿತ್ರದುರ್ಗ ಜಿಲ್ಲೆ ಹಿರಿಯೂರಿನವರಾಗಿದ್ದು, ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಹೊಸಪೇಟೆಗೆ ತೆರಳುತ್ತಿದ್ದರು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಗಾದಿಗನೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

   

h

 

 

 ಪಟಾಕಿ ತಗುಲಿತು ಹುಷಾರ್!

ಅಕ್ಟೋಬರ್.18

ಬಳ್ಳಾರಿ: ಬಾಲಕನೊಬ್ಬ ಪಟಾಕಿ ಸಿಡಿಸುವ ವೇಳೆ ಗಂಭೀರವಾಗಿ ಗಾಯಗೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಇಂದು ಮಂಜಾನೆ ಬಳ್ಳಾರಿಯ ಬೆಂಗಳೂರು ರಸ್ತೆಯ ನಾಲ್ ಕಮಾನ್ ಬಳಿ 11 ವರ್ಷದ ಬಾಲಕ ನರಸಿಂಹ ಎಕಕಾಲಕ್ಕೆ ಸಾಕಷ್ಟು ಪಟಾಕಿಗಳನ್ನು ಒಟ್ಟಾಗಿ ಸೇರಿಸಿ ಸಿಡಿಸುವ ವೇಳೆ ಬಾಲಕ ಗಾಯಗೊಂಡಿದ್ದಾನೆ. ಇದೇ ವೇಳೆ ಘಟನೆಯಲ್ಲಿ ಬಾಲಕ ನರಸಿಂಹನಿಗೆ 2 ಕಣ್ಣು ಮತ್ತು ಕೈ ಕಾಲುಗಳು ಸಹ ಸಾಕಷ್ಟು ಸುಟ್ಟಿದ್ದು, ಗಾಯಾಳು ಬಾಲಕನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಸ್ಥಿತಿ ಗಂಭೀರವಾಗಿದ್ದು ಪೊಷಕರು ಕಂಗಾಲಾಗಿದ್ದಾರೆ.

 

  ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧ

ಅಕ್ಟೋಬರ್.17

ಬಳ್ಳಾರಿ: ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯ ಅನುಸೂಚಿತ ಮತ್ತು ಬುಡಕಟ್ಟು ಆಯೋಗದ ಅಧ್ಯಕ್ಷ ಎ.ಮುನಿಯಪ್ಪ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ನಜೀರ್‌ ಸಭಾಂಗಣದಲ್ಲಿ ಸೋಮವಾರ ನಡೆದ ನಾನಾ ದಲಿತ ಸಂಘಟನೆ, ಸ್ಥಳೀಯ ಸಂಸ್ಥೆಗಳ ಮುಖಂಡರ ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನಕ್ಕಾಗಿ ಭೂಮಿಯನ್ನು ನಿಗದಿಪಡಿಸಿ ಅಭಿವೃದ್ಧಿ ಪಡಿಸಬೇಕು. ಸ್ಮಶಾನದ ಸುತ್ತಲೂ ಕಾಂಪೌಂಡ್‌ ಗೋಡೆ ನಿರ್ಮಿಸಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚೆ ನಡೆಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ದುರುಗಪ್ಪ ತಳವಾರ ಮಾತನಾಡಿ, ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ದಲಿತ ಸಮುದಾಯದವರ ಮೇಲೆ ದೌರ್ಜನ್ಯ ನಡೆಸಿ, ಸಮುದಾಯದವರ ವಿರುದ್ಧವೇ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸ್‌ ಇಲಾಖೆಯು ದಲಿತರ ಮೇಲಿನ ದೌರ್ಜನ್ಯ ಪ್ರಕರಣ ತಡೆಯುವಲ್ಲಿ ವಿಫಲವಾಗಿದೆ ಎಂದು ದೂರಿದರು. 

 

Ads
;