ದೂರವಾಣಿ : 080-69999676
ಇಮೇಲ್ : Info@Vijayataranga.com


44  ಸುಳ್ಳು ಹೇಳಿ ಬೆಂಕಿ ಹಚ್ಚುವ ಬಿಜೆಪಿ ಆಶ್ವಾಸನೆ ಈಡೇರಿಸಿಲ್ಲ : ಸಿಎಂ
 ಡಿಸೆಂಬರ್-19
ಬಾಗಲಕೋಟೆ : ಸುಳ್ಳು ಹೇಳಿ ಬೆಂಕಿ ಹಚ್ಚುವ ಬಿಜೆಪಿಯವರು ನೀಡಿದ ಆಶ್ವಾಸನೆ ಈಡೇರಿಸಿಲ್ಲ. ಅಸಂಸದೀಯ, ಅವಾಚ್ಯ ಪದ ಬಳಸುವ ಯಡಿಯೂರಪ್ಪ ಸಂಸ್ಕೃತಿ ಬಗ್ಗೆ ಬೋಧನೆ ನೀಡುತ್ತಾರೆ, ರಾಜಕಾರಣಿಗಳು ಸಂಸದೀಯ ಪದ ಬಳಸದಿದ್ದರೆ ರಾಜಕೀಯ ಕಲುಷಿತವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜಮಖಂಡಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾಗಿದ್ದರೂ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವ ಮೋದಿ ಸರ್ಕಾರ ಕಿಸಿದಿದ್ದಾರೂ ಏನು ಎಂದು ಸಿಎಂ ಪ್ರಶ್ನೆಸಿದ್ದಾರೆ.
ಇನ್ನು ಮಿಶನ್ 150 ಎಂದು ಬಾಯಿ ಬಡಿದುಕೊಳ್ಳು ಯಡಿಯೂರಪ್ಪನವರು ಈಗ ಮಿಶನ್ 50 ಕ್ಕೆ ಇಳಿದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

 

 

    521 

 ಬದುಕಿರುವಾಗಲೇ ತಾಯಿಗೆ ಸಮಾಧಿ ಸಿದ್ಧ ಮಾಡಿದ ಮಕ್ಕಳು

 ಡಿಸೆಂಬರ್.12

 ಬಾಗಲಕೋಟೆ: ತಾಯಿ ಬದುಕಿರುವಾಗಲೇ ಆಕೆಯ ಸಮಾಧಿಗೆ ಜಾಗ ಹುಡುಕಿ, ಆ ಜಾಗಕ್ಕೆ ಪೂಜೆ ಮಾಡಿದ ಬಗ್ಗೆ ಸುದ್ದಿಯಾಗಿ, ಆ ವಿಚಾರ ಬಹಳ ಚರ್ಚೆಯಾಗುತ್ತಿದ್ದು, ಬಾಗಲಕೋಟೆಯಲ್ಲಿ ನಡೆದಿರುವ ಇಂಥ ಅಮಾನವೀಯ ನಡವಳಿಕೆಗೆ ಟೀಕೆ ಕೂಡ ವ್ಯಕ್ತವಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಉಪಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 106 ವರ್ಷದ ಪಾರ್ವತೆವ್ವ ಹಿರೇಮಠ ಎಂಬ ಹಿರಿಯ ಜೀವದ ಸಮಾಧಿಗಾಗಿ ಮಕ್ಕಳು ಸ್ಥಳ ಗೊತ್ತು ಮಾಡಿಟ್ಟಿದ್ದಾರೆ. ಆಕೆಗೆ ಕಳೆದ ಒಂದು- ಒಂದೂವರೆ ತಿಂಗಳಿಂದ ಅನಾರೋಗ್ಯ. ಅದು ಸ್ವಲ್ಪ ವಿಪರೀತ ಎನಿಸಿದ್ದರಿಂದ ಊರ ಹೊರಗಿನ ಜಮೀನಿನಲ್ಲಿ ಸಮಾಧಿಗೆ ಸ್ಥಳ ಹುಡುಕಿದ ಮಕ್ಕಳು, ಶಾಸ್ತ್ರೋಕ್ತವಾಗಿ ಪೂಜೆ ಸಹ ಮಾಡಿದ್ದಾರೆ. ಪಾರ್ವತೆವ್ವನಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣುಮಗಳು ಗಂಡು ಮಕ್ಕಳ ಪೈಕಿ ಒಬ್ಬರು ಎಲ್ ಐಸಿಯಲ್ಲಿ ಮ್ಯಾನೇಜರ್, ಮತ್ತೊಬ್ಬರು ವೈದ್ಯ. ಇನ್ನೊಬ್ಬರು ಊರಿನಲ್ಲಿದ್ದು ಜಮೀನು ನೋಡಿಕೊಳ್ಳುತ್ತಾರೆ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಈ ಮಕ್ಕಳನ್ನು ಆಕೆ ತುಂಬ ಶ್ರಮಪಟ್ಟು ಬೆಳೆಸಿದ್ದಾರೆ. ಇಂಥ ತಾಯಿ ಬದುಕಿರುವಾಗಲೇ ಸಮಾಧಿಗೆ ಸ್ಥಳ ಹುಡುಕುವುದು, ಅದಕ್ಕೆ ಪೂಜೆ ಮಾಡುವುದು ಹೇಯ ಕೃತ್ಯ. ಯಾರಾದರೂ ತಾಯಿಯ ಆಯುಷ್ಯವನ್ನು ಕೋರುತ್ತಾರೆ ವಿನಾ ಸಾವನ್ನು ನಿರೀಕ್ಷಿಸುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. 

 

 

                              

ಶಾಲೆಯಲ್ಲಿ ಮಲಗಿದ್ದವನ ಕೊಲೆ

ಡಿಸೆಂಬರ್-8 

ಬಾಗಲಕೋಟೆ: ತಲೆ ಮೇಲೆ ಕಲ್ಲು ಎತ್ತಿಹಾಕಿ ದುಷ್ಕರ್ಮಿಗಳು ಯುವಕನನ್ನು ಕೊಲೆ ಮಾಡಿರುವ ಘಟನೆ ಜಮಖಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಲ್ಯಾಳ ಗ್ರಾಮದ ನಿವಾಸಿ ಸದಾಶಿವ ಕೆಸರಗೊಪ್ಪ(22) ಕೊಲೆಯಾದ ಯುವಕ. ಹುಲ್ಯಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸದಾಶಿವ ಕೆಸರಗೊಪ್ಪ ಮಲಗಿದ್ದ ವೇಳೆ ತಡರಾತ್ರಿ ದುಷ್ಕರ್ಮಿಗಳು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಜಮಖಂಡಿ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

44 ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಸಿಗುವುದು ಖಚಿತ:ಎಂ.ಬಿ.
 ಡಿಸೆಂಬರ್-7
 ಬಾಗಲಕೋಟೆ : ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಗುವುದು ಖಚಿತ ಎಂದು ಸಚಿವ ಎಂ.ಬಿ.   ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟ   ನಡೆಯುತ್ತಿದೆ.  ಡಿ. 10 ರಂದು ವಿಜಯಪುರದಲ್ಲಿ ನಡೆಯುವ ಲಿಂಗಾಯತ ಧರ್ಮದ ಸಮಾವೇಶದಲ್ಲಿ ಈ ಕುರಿತು   ಹಲವು ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಹಾಗಾಗಿ ಎಲ್ಲಾ ಪಕ್ಷದ ಲಿಂಗಾಯತ ಮುಖಂಡರನ್ನು ಆಹ್ವಾನ  ಮಾಡಲಾಗಿದೆ. ಯಾರೂ ಬೇಕಾದರೂ ಬರಬಹುದು ಎಂದು ಎಲ್ಲರಿಗೂ ಆಹ್ವಾನ ನೀಡಿದರು.

 

45  ಕುರುಬ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ: ಈಶ್ವರಪ್ಪ
 ಡಿಸೆಂಬರ್-5
 ಬಾಗಲಕೋಟೆ : ಕುರುಬ ಸಮಾಜದ ಕೆಲ ಮುಖಂಡರನ್ನು ಇಟ್ಟುಕೊಂಡು ರಾಜಕೀಯ ಕುತಂತ್ರ  ಹಾಗೂ ಓಟ್ ಬ್ಯಾಂಕ್ ಗೋಸ್ಕರ ಶಾಸಕ ಕಾಶಪ್ಪನವರ ಸಮುದಾಯ ಇಬ್ಬಾಗ ಮಾಡುತ್ತಿದ್ದಾರೆ  ಎಂದು ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
 ಹುನಗುಂದದಲ್ಲಿ ಹಮ್ಮಿಕೊಂಡಿದ್ದ 530 ನೇ ಕನಕದಾಸ ಜಯಂತೋತ್ಸ ಮತ್ತು ಹಿಂದುಳಿದ ವರ್ಗಗಳ  ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಕುತಂತ್ರ ನಡೆಸಿ,  ಅನುದಾನ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಕುರುಬ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಸಹಿಸಲು  ಅಸಾಧ್ಯಿ ಎಂದರು.

 

555  ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ : ಯಡಿಯೂರಪ್ಪ
 ಡಿಸೆಂಬರ್-2
 ಬಾಗಲಕೋಟೆ: ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಸೇರಲು ಕೆಲವರು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ  ಅಂಥವರ ಹೆಸರನ್ನು ಜನವರಿ 15ರ ನಂತರ ಬಹಿರಂಗ ಪಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ  ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಪಕ್ಷಗಳ ಕೆಲ ಮುಖಂಡರು ಪಕ್ಷ ಸೇರಲು ನನ್ನ ಜೊತೆ  ಮಾತುಕತೆ ನಡೆಸಿದ್ದಾರೆ. ಕೆಲವು ತಾಂತ್ರಿಕ ಕಾರಣಗಳಿಂದ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ. ಜ.15ರ ನಂತರ  ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಅವರು ಭವಿಷ್ಯ ನುಡಿದರು.
 ಯಾರು ಯಾರು ಪಕ್ಷಕ್ಕೆ ಬರಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ  ನಾಯಕತ್ವವನ್ನು ಮೆಚ್ಚಿ ಅನೇಕರು ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಲವು ದಿನಗಳವರೆಗೂ ಕಾದು ನೋಡಿ ಎಂದು  ಸೂಚ್ಯವಾಗಿ ಹೇಳಿದರು. ನಮ್ಮ ಪಕ್ಷಕ್ಕೆ ಬಂದವರೆಲ್ಲರಿಗೂ ಟಿಕೆಟ್ ನೀಡುವ ಖಾತರಿಯನ್ನು ಕೊಡುವುದಿಲ್ಲ. ಪಕ್ಷದ ನಾಯಕತ್ವ  ಹಾಗೂ ಸಿದ್ದಾಂತಗಳನ್ನು ಒಪ್ಪಿಕೊಂಡು ಯಾರೇ ಬಂದರೂ ಅಂಥವರಿಗೆ ಮುಕ್ತ ಸ್ವಾಗತ ನೀಡಲಾಗುವುದು.  ನಾಯಕತ್ವಕ್ಕಾಗಿಯೇ ಪಕ್ಷ ಸೇರ್ಪಡೆಯಾಗುವವರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
 ಎಂ.ಬಿ.ಪಾಟೀಲ್ ಭ್ರಷ್ಟಾಚಾರಿ: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಒಬ್ಬ ಭ್ರಷ್ಟಾಚಾರಿ. ನೀರಾವರಿ ಇಲಾಖೆಯಲ್ಲಿ ಕೊಳ್ಳೆ  ಹೊಡೆಯುತ್ತಿರುವ ಅವರು ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದರೂ ಅದನ್ನು ಕಾನೂನಾತ್ಮಕವಾಗಿಯೇ  ಎದುರಿಸುತ್ತೇನೆಂದು ಹೇಳಿದರು. ನೀರಾವರಿ ಇಲಾಖೆಯ ಅನೇಕ ಯೋಜನೆಗಳಲ್ಲಿ ಕಮಿಷನ್ ಏಜೆಂಟ್ನಂತೆ ಪಾಟೀಲ್ ಕೆಲಸ  ಮಾಡುತ್ತಿದ್ದಾರೆ. ತುಂಡು ಗುತ್ತಿಗೆ ಕಾಮಗಾರಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಅನೇಕ ಕಾಮಗಾರಿಗಳಲ್ಲಿ  ಮುಖ್ಯಮಂತ್ರಿಗಳ ಕಮೀಷನ್ ಏಜೆಂಟ್ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
 ನನ್ನ ವಿರುದ್ದ ಎಂ.ಬಿ.ಪಾಟೀಲ್ ಮಾನನಷ್ಟ ಮೊಕದ್ದಮೆ ಹೂಡಿದರೆ ಅದರನ್ನು ಎದುರಿಸಲು ಸಿದ್ದನಿದ್ದೇನೆ. ಇಂಥ ಪಾಟೀಲ್ಗಳನ್ನು  ನಾನು ಸಾಕಷ್ಟು ನೋಡಿದ್ದೇನೆ. ಇವರ ಗೊಡ್ಡು ಬೆದರಿಕೆಗಳಿಗೆ ಯಡಿಯೂರಪ್ಪ ಜಗ್ಗುವ ಅಸಾಮಿಯಲ್ಲ ಎಂದು ಗುಡುಗಿದರು.  ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಕಮಿಷನ್ ಬರುವ  ಕಾಮಗಾರಿಗಳನ್ನು ತ್ವರಿತವಾಗಿ ಮಾಡಿ ಹಣ ಲೂಟಿ ಮಾಡುವ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ  ಸಿದ್ದರಾಮಯ್ಯ ಕೂಡ ಇಂಥ ಭ್ರಷ್ಟರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

  

222 ಅಧಿಕಾರಿ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಬಸ್ ಚಾಲಕ
ನವೆಂಬರ್-27
 ಬಾಗಲಕೋಟೆ : ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ, ಸಾರಿಗೆ ಸಂಸ್ಥೆ ಬಸ್ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ   ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
 ತನ್ನ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಚಾಲಕ ಡಿಪೋದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ನನ್ನನ್ನು   ಕೆಲಸಕ್ಕೆ ನಿಯೋಜಿಸಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಪ್ರತಿ ಬಾರಿ ಕೆಲಸಕ್ಕೆ ನಿಯೋಜಿಸುವ ಸಂದರ್ಭದಲ್ಲಿ ಅವರಿಂದ   ಮಾನಸಿಕ ವೇದನೆ ಅನುಭವಿಸುತ್ತಿದೆ. ಇದರಿಂದ ನನಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಿಷ ಸೇವಿಸಿದ್ದೇನೆ   ಎಂದು ಹೇಳಿದ್ದಾರೆ.
 ಇನ್ನು ವಿಷ ಸೇವಿಸಿರುವುದು ತಿಳಿಯುತ್ತಿದ್ದಂತೆ ಇನ್ನಿತರ ಸಿಬ್ಬಂದಿಗಳು ಶ್ರೀಕಾಂತ್ ಅವರನ್ನು ನಗರದಲ್ಲಿನ ಕುಮಾರೇಶ್ವರ ಆಸ್ಪತ್ರೆಗೆ   ದಾಖಲಿಸಿದ್ದಾರೆ. ಹೀಗಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  

222  ಲವ್ವರ್ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಮಗಳು
 ನವೆಂಬರ್ -24
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಮಹಿಳೆ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮಹಿಳೆಯನ್ನು ಸ್ವಂತ ಮಗಳೇ ಲವ್ವರ್ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕೆರೂರು ಪಟ್ಟಣದಲ್ಲಿ ಅಕ್ಟೋಬರ್ 31 ರಂದು 50 ವರ್ಷದ ಸಂಗವ್ವ ಎಂಬ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರು ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದಾಗ ಭಯಾನಕ ಸತ್ಯ ಗೊತ್ತಾಗಿದ್ದು, ಮೃತ ಮಹಿಳೆಯ ಮಗಳಾದ ಹರ್ಷಾ ಬನ್ನೂರ ಮತ್ತು ಪ್ರಿಯಕರ ಶ್ರೀಕಾಂತ್ ಚಮ್ಮಾರ ಸೇರಿ ಕೊಲೆ ಮಾಡಿದ್ದಾರೆ ಎಂಬುದು ಬಯಲಾಗಿದೆ.
ಸಂಗವ್ವ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದಾರೆಂದು ಮನೆಯವರು ನವೆಂಬರ್ 2 ರಂದು ಪೊಲೀಸರಿಗೆ ದೂರು ನೀಡಿದ್ದರು. ಆಗ ಹರ್ಷಾಳ ಮೇಲೆ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು ಹಾಗೂ ಪೊಲೀಸರು ಆಕೆಯ ಫೋನ್ ಟ್ರೇಸ್ ಮಾಡಿದ್ದರು. ನಂತರ ಹರ್ಷಾ, ಪ್ರಿಯಕರ ಶ್ರೀಕಾಂತ್, ಮಾವ ನವಲಪ್ಪನನ್ನು ಕೆರೂರು ಪೊಲೀಸರು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

        ಕುಡಿವ ನೀರಿನ ಘಟಕಗಳು ಶುದ್ಧ ಬಂದ್
ನವೆಂಬರ್-22
 ಬಾಗಲಕೋಟೆ : ನಗರದ ಜನತೆಯ ಆರೋಗ್ಯ ಕಾಪಾಡು ನಿಟ್ಟಿನಲ್ಲಿ ಅವರಿಗೆಲ್ಲ ಶುದ್ಧ ಕುಡಿವ ನೀರು ಕೊಡಬೇಕು ಎನ್ನವ ಉದ್ದೇಶದಿಂದ ನಗರದ ಆಯಕಟ್ಟಿನ ಸ್ಥಳಗಳಲ್ಲಿ   ಶಾಸಕರ ಅನುದಾನದಡಿ ಲಕ್ಷಾಂತರ ರುಪಾಯಿಗಳ ವೆಚ್ಚದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಲಾಗಿದೆ. ಆರಂಭದಲ್ಲಿ ಬಹುತೇಕ ಎಲ್ಲ ಕಡೆಗಳಲ್ಲೂ ಶುದ್ಧ ಕುಡಿವ ನೀರಿನ   ಘಟಕಗಳು ಉತ್ತಮವಾಗಿಯೇ ಇದ್ದವು. ಇತ್ತೀಚಿನ ದಿನಗಳಲ್ಲಿ ನಿರ್ವಹಣೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಕೆಲ ಕಡೆ ಘಟಕಗಳು ಬಂದ್'ಆಗಿವೆ.
 ಆಯಾ ಪ್ರದೇಶಗಳಲ್ಲಿನ ಜನತೆ ಮತ್ತೇ ಕೊಳವೆಬಾವಿ ಮತ್ತು ಬಿಟಿಡಿಎ ಪೂರೈಕೆ ಮಾಡುವ ನೀರನ್ನೇ ಕುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶುದ್ಧ ಕುಡಿವ ನೀರು ಬೇಕು   ಎನ್ನುವವರು ಇತರ ಪ್ರದೇಶಗಳಲ್ಲಿನ ಘಟಕಗಳಿಗೆ ಹೋಗಿ ನೀರು ತರಬೇಕಾಗಿದೆ.
 ಉತ್ತಮವಾಗಿ ಕಾರ್ಯ ನಿರ್ವಹಿಸುವ ಘಟಕಗಳೂ ಸರಿಯಾಗಿ ತೆರೆಯುತ್ತಿಲ್ಲ. ಮಧ್ಯಾಹ್ನ ಹೊತ್ತಲ್ಲಿ ಜನ ಬರುತ್ತಿಲ್ಲ ಎನ್ನುವ ನೆಪದಲ್ಲಿ ಅವುಗಳನ್ನು ಬಂದ್ ಮಾಡಲಾಗುತ್ತಿದೆ.   ಬೆಳಗಿನ ಹೊತ್ತು ಒಂದೆರಡು ತಾಸು, ಸಂಜೆ ವೇಳೆ ಆರಂಭಿಸಿ ಉಳಿದ ಸಮಯದ ಬಂದ್ ಮಾಡಲಾಗುತ್ತಿದೆ. ಇದು ಕೂಡ ಜನತೆಗೆ ತೊಂದರೆ ಎನ್ನುವಂತಾಗಿದೆ. ತಾಂತ್ರಿಕ   ಕಾರಣಗಳ ನೆಪ ಹೇಳಿಕೊಂಡು ಘಟಕಗಳ ಆರಂಭಕ್ಕೆ ಸಂಬಂಧ ಪಟ್ಟವರು ಮನಸ್ಸು ಮಾಡುತ್ತಿಲ್ಲ. ಕೇಳಿದರೆ ಘಟಕದ ಯಂತ್ರಗಳಲ್ಲಿನ ಸಾಮಗ್ರಿ ಬರಬೇಕಿದೆ.
 ಅದು ಬಂದ ಕೂಡಲೇ ಘಟಕ ಆರಂಭಿಸಲಾಗುವುದು ಎಂದು ಸಮಜಾಯಿಷಿ ನೀಡಲಾಗುತ್ತಿದೆ. ಇದರಿಂದ ಬೇಸತ್ತ ಜನ ಕಚೇರಿಗೆ ಅಲೆಯುವುದೇ ಬೇಡ. ಯಾವಾಗ   ಬೇಕಾದರೂ  ಘಟಕಗಳನ್ನು ಆರಂಭಿಸಲಿ ಎಂದು ಬೇಸರದ ಭಾವಕ್ಕೆ ಶರಣಾಗಿದ್ದಾರೆ. ನವನಗರದ ಕೆಲ ಕಡೆಗಳಲ್ಲಿ ಖಾಸಗಿಯವರು ಶುದ್ಧ ಕುಡಿವ ನೀರಿನ ಘಟಕಗಳನ್ನು   ನಡೆಸುತ್ತಿದ್ದು,ಅಲ್ಲಿಯೂ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಟ್ಟರೂ ನೀರು ಸಿಗದಂತಾಗಿದೆ. ಅಲ್ಲಿ ಮನೆಮನೆಗೆ ನೀರು ಹಾಕುವ ವಾಹನಗಳು ಬಂದು ನೀರು ತುಂಬಿಸಿಕೊಳ್ಳುತ್ತ   ನಿಲ್ಲುತ್ತಾರೆ.
 ಅಲ್ಲಿ ನಾಲ್ಕು ನಲ್ಲಿಗಳು ಇದ್ದರೂ ಒಂದೇ ನಲ್ಲಿ ಕಾರ್ಯ ಆರಂಭವಿರುತ್ತದೇ. ಎಲ್ಲಿ ಅಲ್ಲಿ ತಾಸುಗಟ್ಟಲೇ ನಿಲ್ಲುವುದು ಎಂದು ಅಲ್ಲಿಗೆ ಬರುವ ಜನ ವಾಪಸಾಗುತ್ತಿದ್ದಾರೆ. ಇದರಿಂದ   ಸಾರ್ವಜನಿಕರಿಗೆ ಸಮರ್ಪಕ ಶುದ್ಧ ಕುಡಿವ ನೀರು ಕೊಡಬೇಕು. ಜನತೆ ಆರೋಗ್ಯವಂತರಾಗಿರಬೇಕು ಎನ್ನುವ ಶಾಸಕರ ಕಲ್ಪನೆ ಸಾಕಾರಗೊಳ್ಳದೇ ಹಾಳಾಗುತ್ತಿದೆ. ನಗರದ   ಬಹುತೇಕ ಜನತೆ ಇಂದು ಶುದ್ಧ ಕುಡಿವ ನೀರಿನ್ನೇ ಕುಡಿಯಲು ಬಳಕೆ ಮಾಡುತ್ತಿರುವುದರಿಂದ ಶುದ್ಧ ಕುಡಿವ ನೀರಿನ ಘಕಟಗಳ ನಿರ್ವಹಣೆ ಉತ್ತಮವಾಗಿರುವಂತೆ ಸಂಬಂಧ ಪಟ್ಟ   ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ.
 ಇಂದು ಎಲ್ಲಡೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಡೆಂಗೆ, ಚಿಕೂನ್ ಗುನ್ಯಾ ಹಾಗೂ ವೈರಲ್ ಹಾವಳಿ ಹೇಳ ತೀರದು. ನಗರದ ಬಹುತೇಕ   ಆಸ್ಪತ್ರೆಗಳಲ್ಲಿ  ಇಂದು ಇದೇ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ರೋಗ ನಿಯಂತ್ರಣ ಮತ್ತು ಜನರ ಆರೋಗ್ಯ ಕಾಳಜಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಆದಷ್ಟು   ಬೇಗ ಬಂದ್ ಆಗಿರುವ ಘಟಕಗಳನ್ನು ಆರಂಭಿಸುತ್ತ ಗಮನ ಹರಿಸಬೇಕಿದೆ. ಶಾಸಕರೂ ಈ ನಿಟ್ಟಿನಲ್ಲಿ ನೀಗಾವಹಿಸುವ ಮೂಲಕ ತಾಂತ್ರಿಕ ಸಮಸ್ಯೆಗಳಿಂದಾಗಿ ಬಂದ್ ಆಗಿರುವ   ಶುದ್ಧ ಕುಡಿವ ನೀರಿನ ಘಕಟಗಳ ಆರಂಭಕ್ಕೆ ಒತ್ತು ನೀಡಬೇಕಿದೆ.

 

22 

 ಶೀಲ ರಕ್ಷಿಸಿಕೊಳ್ಳಲು ಈ ಮಹಿಳೆ ಮಾಡಿದ್ದೇನು!
 ನವೆಂಬರ್-16
ಬಾಗಲಕೋಟೆ: ಅತ್ಯಾಚಾರ ಎಸಗಲು ಮುಂದಾದ ಕಾಮುಕನಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡ ಘಟನೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ನಡೆದಿದೆ.
ಕಾಮುಕನೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಮಹಿಳೆ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡುದ್ದಳು, ಆಗ ಕಾಮುಕನು ಮಹಿಳೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಕೆರೂರು ಪಟ್ಟಣದ 33 ವರ್ಷದ ಮಹಿಳೆ ದೇಹ ಸುಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಈಕೆ ಗಂಡನನ್ನು ಕಳೆದುಕೊಂಡು ಮಕ್ಕಳೊಂದಿಗೆ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು.
ಸುರೇಶ್ ಭಜಂತ್ರಿ ಎಂಬಾತ ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿದಾಗ ಇದನ್ನು ವಿರೋಧಿಸಿದ ಮಹಿಳೆ ಅತನನ್ನು ಹೆದರಿಸಲು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡಿದ್ದಾಳೆ. ಘಟನೆಯಿಂದಾಗಿ ಮಹಿಳೆಯ ದೇಹ ಬಹುತೇಕ ಭಾಗ ಸುಟ್ಟುಹೋಗಿದ್ದು, ಮಹಿಳೆಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

                                                                 

ಎಸಿಬಿ ಬಲೆಗೆ ಬಿದ್ದ ಎಫ್‍ಡಿಸಿ ನೌಕರ

ನವೆಂಬರ್-15


ಬಾಗಲಕೋಟೆ: ಆರೋಪದಿಂದ ಖುಲಾಸೆಗೊಳಿಸಲು ತಹಸೀಲ್ದಾರ್ ಅವರಿಗೆ ಶಿಫಾರಸು ಮಾಡಲು ಅರ್ಜಿದಾರನಿಂದ ಲಂಚ ಪಡೆಯುತ್ತಿದ್ದ ಎಫ್‍ಡಿಸಿ ನೌಕರನೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿಬಿದ್ದಿದ್ದಾನೆ.


ತಹಸೀಲ್ದಾರ್ ಕಚೇರಿ ಎಫ್‍ಡಿಸಿ ನೌಕರ ವಿನೋದ್ ಕೃಷ್ಣಪ್ಪ ಪತ್ತಾರ ಸಿಕ್ಕಿಬಿದ್ದಿದ್ದಾನೆ. ಬಾಗಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರ ಆರೋಪಿಗೆ ಆರೋಪದಿಂದ ಖುಲಾಸೆಗೊಳಿಸಲು ತಹಸೀಲ್ದಾರ್‍ಗೆ ಶಿಫಾರಸು ಮಾಡುತ್ತೇನೆ ಎಂದು ಕೃಷ್ಣಪ್ಪ ಪತ್ತಾರ 50 ಸಾವಿರ ಲಂಚ ಕೇಳಿದ್ದ. ನಿನ್ನೆ 25 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಕೃಷ್ಣಪ್ಪಪತ್ತಾರನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

11  ಬಿಎಸ್ ವೈ ಬಣ್ಣ ಬದಲಿಸುವ ಊಸರವಳ್ಳಿ : ತಿಮ್ಮಾಪುರ್
 ನವೆಂಬರ್-10
ಬಾಗಲಕೋಟೆ : ಬಿಜೆಪಿಯವರು ವಸಾಹತು ಶಾಹಿ ಹಾಗೂ ಜಮೀನ್ದಾರರ ಪರವಾಗಿದ್ದವರು, ಹಾಗಾಗಿ ಅವರು ಟಿಪ್ಪು ಜಯಂತಿಯನ್ನು ವಿರೋಧ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವರಿ ಸಚಿವ ಆರ್.ಬಿ. ತಿಮ್ಮಾಪುರ್ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬಗ್ಗೆ ಮಾತನಾಡಿದ ತಿಮ್ಮಾಪುರ್ ಅವರು, ಬಿಎಸ್ ವೈ ಬಣ್ಣ ಬದಲಿಸುವ ಊಸರವಳ್ಳಿ, ಅವರಿಗೆ ನ್ಯಾಯ, ನೀತಿ, ಬಡತನ ಗೊತ್ತಿಲ್ಲ. ದಲಿತರು ಎಲ್ಲಿದ್ದರು. ಅವರನ್ನು ಸುಧಾರಣೆ ಮಾಡಿದ್ದು, ಯಾರು ಎನ್ನುವ ಕಲ್ಪನೆ ಇಲ್ಲ. ಅಂಥವರ ಜೊತೆ ಕೆಲವು ದಲಿತ ನಾಯಕರು ಓಡಾಡುತ್ತಿರುವುದು ದುರ್ದೈವದ ಸಂಗತಿ ಎಂದು ಎಂದು ಹೇಳಿದ್ದಾರೆ.

 

11  ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು ಸಾವು
 ನವೆಂಬರ್-4
ಬಾಗಲಕೋಟೆ: ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ, ಜನಿಸಿದ ಕೂಡಲೇ ಮಗು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾದಾಮಿ ತಾಲ್ಲೂಕಿನ ಹಲಕುರ್ಕಿಯ 31 ವರ್ಷದ ಭಾರತಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದ ರಿಂದ ಕುಟುಂಬದವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ.
ಆದರೆ, ಅಲ್ಲಿ ವೈದ್ಯರಿಲ್ಲದ ಕಾರಣ 2 ಗಂಟೆಗಳ ಕಾಲ ಕಾದಿದ್ದಾರೆ. ಕೊನೆಗೆ ಆಂಬುಲೆನ್ಸ್ ನಲ್ಲಿ ಬಾದಾಮಿ ತಾಲ್ಲೂಕು ಆಸ್ಪತ್ರೆಗೆ ಹೊರಟಿದ್ದು, ಹೆರಿಗೆ ನೋವು ಜಾಸ್ತಿಯಾಗಿ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿದೆ.
ಮಗು ಮೃತಪಟ್ಟಿದ್ದು, ಇದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

  

 

 

ಮುಷ್ಕರ ಮರೆತು ಮಾನವೀಯತೆ ಮೆರೆದ ವೈದ್ಯ

ನವೆಂಬರ್:3
ಬಾಗಲಕೋಟೆ: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದಿಂದಾಗಿ ರಾಜ್ಯಾದ್ಯಂತ ರೋಗಿಗಳು ಪರದಾಡುತ್ತಿರುವಂತೆಯೇ ಅತ್ತ ಬಾಗಲಕೋಟೆಯಲ್ಲಿ ವೈದ್ಯರೊಬ್ಬರು ಗರ್ಭಿಣಿ ಮಹಿಳೆಗೆ ನೆರವಾಗುವ ಮೂಲಕ ಆಕೆಯ ಜೀವ ಉಳಿಸಿದ್ದಾರೆ.ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ನಡುವೆಯೇ ಇಂದು ಬಾಗಲಕೋಟೆಯಲ್ಲಿ ಗರ್ಭಿಣಿ ಮಹಿಳೆ ಚೈತ್ರಪವಾರ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮುಷ್ಕರದ ಹಿನ್ನಲೆಯಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನ ಗುಂದ ತಾಲ್ಲೂಕಿನ ಚಿಕ್ಕಕೊಡಗಲಿ ತಾಂಡಾ ನಿವಾಸಿ ಚೈತ್ರಾ ಪವಾರ 10.30ಕ್ಕೆ ಆಸ್ಪತ್ರೆಗೆ ಬಂದಿದ್ದರು. ಮಹಿಳೆ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯವುಳ್ಳ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ. ಏತನ್ಮಧ್ಯೆ ಮಹಿಳೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ, ಗರ್ಭದಲ್ಲಿದ್ದ ಮಗುವಿನ ಕಾಲು ಮುಂದೆ ಬಂದ ಸ್ಥಿತಿ ಕಂಡುಬಂದಿದ್ದು, ಆಕೆಯ ಪೋಷಕರು ದಾರಿಕಾಣದೇ ಅತಂತ್ರಸ್ಥಿತಿಯಲ್ಲಿದ್ದ ವೇಳೆ ಆಸ್ಪತ್ರೆಯ ಸಂಶೋಧನಾ ವಿದ್ಯಾರ್ಥಿಗಳು, ದಾದಿಯರು ಆಕೆಯ ನೆರವಿಗೆ ಮುಂದಾಗಿದ್ದಾರೆ.ಕೂಡಲೇ ಈ ವಿಚಾರವನ್ನು ಖಾಸಗಿ ವೈದ್ಯ ಡಾ.ಮನೋಹರ್ ಅವರಿಗೆ ತಿಳಿದಿದ್ದು, ತಕ್ಷಣವೇ ಆಪರೇಷನ್ ಥಿಯೇಟರ್ಗೆ ಧಾವಿಸಿದ ಅವರು ಮಹಿಳೆಗೆ ಚಿಕಿತ್ಸೆ ಆರಂಭಿಸಿದ್ದಾರೆ. ಬಳಿಕ ಮಹಿಳೆ ಚೈತ್ರಾ ಪವಾರ ಅವರಿಗೆ ಗಂಡುಮಗುವಾಗಿದ್ದು, ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಮನೋಹರ್ ಅವರು, ಮಹಿಳೆಗೆ ನಾರ್ಮಲ್ ಹೆರಿಗೆಯಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.ಚೈತ್ರಾ ಅವರ ಕುಟುಂಬಸ್ಥರು ಹೇಳಿರುವಂತೆ ಮೊದಲ ಎರಡು ಮಗು ಕಳೆದುಕೊಂಡಿದ್ದ ಚೈತ್ರಾಳನ್ನು ನೋಡಿಕೊಳ್ಳಲು ಯಾರು ಇಲ್ಲ, ಮೂರನೇ ಮಗು ಹೆರಿಗೆ ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ, ದೇವರಂತೆ ಬಂದು ಡಾ.ಮನೋಹರ್ ಅವರು ಕಾಪಾಡಿದರು. ಮಗುವಿಗೆ ವೈದ್ಯರ ಹೆಸರನ್ನೇ ಇಡುತ್ತೇವೆ ಎಂದು ಚೈತ್ರಾ ಸಂಬಂಧಿ ಸುರೇಶ್ ಹೇಳಿದ್ದಾರೆ.

 

  

  

ಸರಕಾರ ಮತ್ತು ರಾಜಕಾರಣಿಗಳಿಗೆ ನಡುಕ ಸೃಷ್ಟಿಸಲಿರುವ:ನ್ಯಾಯಮೂರ್ತಿ

 

ನವೆಂಬರ್.1

ಬಾಗಲಕೋಟ: ಬಳ್ಳಾರಿ ಗಣಿ ಕುರಿತು ಶೀಘ್ರದಲ್ಲೇ ಒಂದು ವಿಷಯ ಬಹಿರಂಗಗೊಳಿಸುವೆ. ಎಲ್ಲ ಮಾಧ್ಯಮಗಳ ಮುಂದೆ ಮಹತ್ವದ ವಿಚಾರ ಹೊರ ಹಾಕುವೆ ಎಂದು ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಸರಕಾರ ಮತ್ತು ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಸಿಬಿಯನ್ನು ಮುಚ್ಚಬೇಕು. ಲೋಕಾಯುಕ್ತವನ್ನು ಬಲಪಡಿಸಬೇಕು. ಲೋಕಾಯುಕ್ತಕ್ಕೆ ಅಧಿಕಾರ ವಾಪಸ್ ಕೊಡಬೇಕು. ಲೋಕಾಯುಕ್ತ ಸಂಸ್ಥೆ ಇರುವುದು ಯಾವುದೇ ರಾಜಕೀಯ ಪಕ್ಷಗಳಿಗೂ ಬೇಕಿಲ್ಲ ಎಂದರು. ರಾಜಕಾರಣಿಗಳು ರಕ್ತದ ರುಚಿಕಂಡ ಹುಲಿಗಳು, ಹೀಗಾಗಿ ಲೋಕಾಯುಕ್ತ ಸಂಸ್ಥೆ ಬಲಪಡಿಸುವುದು ಅವರಿಗೆ ಬೇಕಿಲ್ಲ. ಜನ ಸೇವಕರು ಎನ್ನುವುದನ್ನು ಮರೆತು ಜನತಾ ಮಾಲೀಕರಂತಾಗಿದ್ದಾರೆ.ಶಾಸಕಾಂಗದ ಹಸ್ತ ಕ್ಷೇಪ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಾಗುತ್ತಿದೆ. ನ್ಯಾಯಾಂಗದ ಕೆಲಸವನ್ನು ಶಾಸಕಾಂಗ ಮಾಡುತ್ತಿದೆ. ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದು ಹೇಳಿದರು.
ನೋಟ್ ಬ್ಯಾನ್ನಿಂದ ಕಪ್ಪು ಹಣ ಕಡಿವಾಣ ಬಿದ್ದಿದೆ. ಈಗಲ್ಲದಿದ್ದರೂ ಭವಿಷ್ಯದಲ್ಲಿ ನೋಟ್ ಬ್ಯಾನ್ನ ಪರಿಣಾಮ ಒಳ್ಳೆಯದಾಗುತ್ತದೆ. ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುವುದು ಒಳ್ಳೆಯದು ಎಂದರು.
                                                                                                                                      

  

44   ಚಿಕಿತ್ಸೆಗಾಗಿ ಬಾಗಲಕೋಟೆಗೆ ಆಗಮಿಸಿದ ನಟ
 ಅಕ್ಟೋಬರ್-25
 ಬಾಗಲಕೋಟೆ : ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಸತ್ಯಜಿತ್ ಅವರು ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಬಾಗಲಕೋಟೆ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು ಐದು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ಸತ್ಯಜಿತ್ ಅವರು, ಬಾಗಲಕೋಟೆಯಲ್ಲಿ ಕೃತಕ ಕಾಲು ಜೋಡಣೆಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕಷ್ಟಕಾಲದಲ್ಲಿ ಸತ್ಯಜಿತ್ ಗೆ ಹಿರಿಯ ಕಲಾವಿದರೇ ಸರಿಯಾಗಿ ಪ್ರೋತ್ಸಾಹ ಸ್ಪಂದನೆ ಮಾಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕೃತಕ ಕಾಲು ಜೋಡಣೆಗೆ ಬೆಂಗಳೂರಿನಲ್ಲಿ 4.60 ಲಕ್ಷ ರೂ.ಗಳ ವೆಚ್ಚವಾಗುತ್ತದೆ. ಅದೇ ಮಾದರಿಯಲ್ಲಿ ಜರ್ಮನ್ ಕಂಪನಿಯ ಕೃತಕ ಕಾಲು ಜೋಡಣೆಗೆ ಬಾಗಲಕೋಟೆ ನಗರದಲ್ಲಿ 2.20 ಲಕ್ಷ ರೂ. ವೆಚ್ಚವಾಗುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಂಡು ಸತ್ಯಜಿತ್ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

 

55    ತಾಯಿಗೆ ತುಲಾಭಾರಿ ಮಾಡಿ ಆದರ್ಶ ಮೆರೆದ ಮಕ್ಕಳು
 ಅಕ್ಟೋಬರ್ -24
ಬಾಗಲಕೋಟೆ : ಇಂದಿನ ಕಾಲದಲ್ಲಿ ದಿನೇ ದಿನೇ ಒಂದಿಲ್ಲೊಂದು ಕಾಯಿಲೆಗಳು ಗುರುತಾಗುತ್ತಿರುವಾಗ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ ಬದುಕುವುದೇ ಕಷ್ಟ ಎಂಬಂತಾಗಿದೆ. ಅವಿಭಕ್ತ ಕುಟುಂಬವೇ ಮರೆಯಾಗುತ್ತಿರುವ ಈ ಕಾಲದಲ್ಲೂ ಬಾಗಲಕೋಟೆ ನಗರದ ವೃದ್ಧೆಯೋರ್ವರು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಬಂಧುಗಳೊಂದಿಗೆ ಅವಿಭಕ್ತ ಕುಟುಂಬವನ್ನು ಉಳಿಸಿಕೊಂಡು ಬಂದಿದ್ದಾರೆ. ಕುಟುಂಬಸ್ಥರೆಲ್ಲರೂ ಒಂದೇ ಸೂರಿನಡಿ ಬದುಕುವಂಥ ಸೌಹಾರ್ದ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಈ ವೃದ್ಧೆಗೆ ಕುಟುಂಬದ ಸದಸ್ಯರೆಲ್ಲ ಸೇರಿ ಚಿನ್ನಾಭರಣ ಪುಷ್ಪದ ತುಲಾಭಾರ ಮಾಡಿ ಕೃತಜ್ಞತೆ ಅರ್ಪಿಸಿದರು.
ಬಾಗಲಕೋಟೆ ನಗರದಲ್ಲಿರುವ ಗಂಗಾಧರ ಕಾಟವಾ ಎಂಬುವವರು ತಮ್ಮ 92 ವರ್ಷದ ತಾಯಿ ಪಾರ್ವತಿಬಾಯಿಯವರಿಗೆ ವಿಶೇಷ ರೀತಿಯಲ್ಲಿ ಗೌರವ ನೀಡಿದರು. ತಾಯಿಯ ಶ್ರೇಷ್ಠತೆಯನ್ನು ಮನವರಿಕೆ ಮಾಡಿಕೊಂಡು ಅವರಿಗೆ ಕೃತಜ್ಞತೆ ಅರ್ಪಿಸುವ ಮೂಲಕ ಮಕ್ಕಳ ನಿಜವಾದ ಕರ್ತವ್ಯವೇನು ಎಂಬುದನ್ನು ತೋರಿಸಿಕೊಟ್ಟರು.
ಸುಮಾರು ಮೂವತ್ತಕ್ಕೂ ಹೆಚ್ಚು ಜನ ಒಂದೇ ಸೂರಿನಡಿ ಬದುಕುತ್ತಿರುವ ಅವಿಭಕ್ತ ಕುಟುಂಬದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲಾಯಿತು. ಸಕಲ ಬಂಧು ಬಾಂಧವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

  

22  ಬಾಗಲಕೋಟೆಯಲ್ಲಿ ಒಂದು ಮಾತನಾಡುವ ಕಂಪ್ಯೂಟರ್
 ಅಕ್ಟೋಬರ್-23
ಬಾಗಲಕೋಟೆ : ಇಲ್ಲೊಂದು ಮಾತನಾಡುವ ಕಂಪ್ಯೂಟರ್ ಇದೆ. ನೀವು ಏನೇ ಪ್ರಶ್ನೆ ಕೇಳಿದರೂ ಥಟ್ ಅಂತ ಉತ್ತರ ಕೊಟ್ಟು ಬಿಡುತ್ತದೆ. ಗಣಿತದಲ್ಲಂತೂ ಎತ್ತಿದ ಕೈ. ಏನೇ ಲೆಕ್ಕ ಕೊಟ್ಟರೂ ಕ್ಷಣಾರ್ಧದಲ್ಲಿ ಉತ್ತರ ನಿಮ್ಮ ಕಣ್ಮುಂದೆ ಇರುತ್ತದೆ. ಈ ಕಂಪ್ಯೂಟರ್ ಈಗ ರಾಷ್ಟ್ರ ಪ್ರಶಸ್ತಿಗೂ ಶಿಫಾರಸಾಗಿದೆ.
ಪಟಪಟನೆ ಗಣಿತದ ಲೆಕ್ಕಾಚಾಗಳನ್ನು ಬಿಡಿಸಿ ಉತ್ತರ ನೀಡುವ ಬಾಲಕನ ಹೆಸರು ರಾಹುಲ್. ಈ ಬಾಲಕನ ಪ್ರತಿಭೆಗೆ ಪ್ರಶಸ್ತಿಗಳ ಸರಮಾಲೆ ಬಂದಿದೆ. ರಾಹುಲ್ ತಂದೆ-ತಾಯಿ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ಕೋಟೆನಾಡು ಬಾಗಲಕೋಟೆಯ ಬಾಲಕನೊಬ್ಬನ ಅದ್ಭುತ ನೆನಪಿನ ಶಕ್ತಿಯ ಸ್ಟೋರಿ.
ಬಾಗಲಕೋಟೆ ಬಸವೇಶ್ವರ ನ್ಯೂ ಮಾಧ್ಯಮಿಕ ಶಾಲೆಯ 9ನೇ ತರಗತಿ ವಿದ್ಯಾರ್ಥಿ ರಾಹುಲ್ ಪಾರ್ವತಿಮಠ್. ಇತನ ನೆನಪಿನ ಶಕ್ತಿಗೆ ಬೆರಗಾಗದವರೇ ಇಲ್ಲ. 300 ವರ್ಷದ ಕ್ಯಾಲೆಂಡರ್ನಲ್ಲಿ ಯಾವ ದಿನ, ಯಾವ ದಿನಾಂಕದಂದು ಬರುತ್ತೆ ಅಂತ ಕೇಳಿದರೆ ಥಟ್ ಅಂತ ಸರಿಯಾದ ಉತ್ತರ ಕೊಡುತ್ತಾನೆ.
50 ಪದಗಳ ಸ್ಪೆಲ್ಲಿಂಗ್ ಗಳನ್ನು ಸೀದಾ ಮತ್ತು ಉಲ್ಟಾ ಹೇಳುವುದರಲ್ಲಿಯೂ ರಾಹುಲ್ ನಿಸ್ಸೀಮ. ರೂಬಿಕ್ ಕ್ಯೂಬ್ ಜೋಡಿಸುವುದರಲ್ಲಿಯೂ ಈತ ಎತ್ತಿದ ಕೈ. ಅಂದಹಾಗೆ ಮೂರನೇ ತರಗತಿಯಲ್ಲಿದ್ದಾಗ ನೆನಪಿನ ಶಕ್ತಿಯ ಒಂದು ಕೋರ್ಸ್ ಕಲಿತಿದ್ದ ರಾಹುಲ್, ಈಗ ಅಘಾದ ನೆನಪಿನ ಶಕ್ತಿಯನ್ನು ಹೊಂದಿದ್ದಾನೆ.
ಯಾವುದೇ ವಿಷಯವನ್ನು ಎರಡು ನಿಮಿಷ ನೋಡಿದರೂ ಸಾಕು, ಕ್ಷಣಾರ್ಧದಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ಅದರ ಬಗ್ಗೆ ಉತ್ತರ ಹೇಳುತ್ತಾನೆ. ರಾಹುಲ್ ದಿನಕ್ಕೆ ಕೇವಲ ಒಂದೇ ಒಂದು ತಾಸು ಓದುತ್ತಾನೆ. ಉಳಿದ ಸಮಯದಲ್ಲಿ ಆಟ, ಹರಟೆ ಅಷ್ಟೆ. ಆದರೂ ಈತ ಕ್ಲಾಸಿನಲ್ಲಿ ಫಸ್ಟ್. ಪ್ರತಿವರ್ಷ ಗಣಿತದಲ್ಲಿ 100ಕ್ಕೆ 100 ಅಂಕ ಪಡೆಯುತ್ತಾನೆ. ಎಲ್ಲಾ ವಿಷಯಗಳಲ್ಲೂ ನೂರಕ್ಕೆ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಮಾದರಿ ವಿದ್ಯಾರ್ಥಿಯಾಗಿದ್ದಾನೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶದಿಂದಲೇ ನೋಟಗಳನ್ನು ಗುರುತಿಸಿ ಅವುಗಳ ನಂಬರ್ಗಳನ್ನು ಹೇಳುವ ಕಲೆ ರಾಹುಲ್ ಅಲ್ಲಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಓಡಿಸುವುದು, ಚೆಸ್ ಆಡುವುದು, ರೀಡಿಂಗ್, ರೈಟಿಂಗ್ ಎಲ್ಲವೂ ಮಾಡುತ್ತಾನೆ. ರಾಹುಲ್ ಅಗಾದ ನೆನಪಿನ ಶಕ್ತಿಗೆ ಎಲ್ಲರೂ ಫಿದಾ ಆಗಿದ್ದು ರಾಹುಲ್ಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ.
ಇನ್ನು ರಾಜ್ಯ ಸರ್ಕಾರದಿಂದ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ನಮ್ಮ ವಿದ್ಯಾರ್ಥಿ ರಾಹುಲ್ ಬಗ್ಗೆ ನಮಗೆ ಹೆಮ್ಮೆಯಿದೆ ಅಂತಾರೆ ಸಹಪಾಠಿಗಳು, ಶಿಕ್ಷಕರು.

 

11 


 ಟಿಪ್ಪು ಜಯಂತಿಗೆ ತೀವ್ರ ವಿರೋಧ:ಮುತಾಲಿಕ್
ಅಕ್ಟೋಬರ್-21
ಬಾಗಲಕೋಟ: ನವೆಂಬರ್ 10ರಂದು ಸರಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಸುಲ್ತಾನ್ ಜಯಂತಿಗೆ ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಟಿಪ್ಪು ಹಿಂದೂ ದ್ರೋಹಿ, ಕನ್ನಡ ದ್ರೋಹಿ, ದೇವಸ್ಥಾನಗಳನ್ನು ಒಡೆದು ಹಾಕಿದ್ದಾನೆ. ಟಿಪ್ಪು ಜಯಂತಿ ಆಚರಣೆ ಹೇಯ ಕೆಲಸ, ಇದು ಕನ್ನಡಿಗರನ್ನು ಅವಮಾನಿಸಿದಂತೆ ಎಂದು ಮುತಾಲಿಕ್ ಪ್ರತಿಪಾದಿಸಿದರು.
ಓಟಿಗಾಗಿ, ರಾಜಕೀಯಕ್ಕಾಗಿ, ಅಧಿಕಾರಕ್ಕಾಗಿ ಟಿಪ್ಪುವಿನ ಇತಿಹಾಸ ತಿರುಚಿದ ಸರಕಾರ ಈ ಜಯಂತಿ ಆಚರಣೆ ಮಾಡುತ್ತಿದೆ ಎಂದು ಅವರು ಟೀಕಿಸಿದರು. ಮುಂದಿನ ದಿನಗಳಲ್ಲಿ ಟಿಪ್ಪು ಹೇಗಿದ್ದ? ಅವನ ನಿಜವಾದ ಇತಿಹಾಸ ಏನು ಎಂಬುದರ ಕುರಿತು ಲಕ್ಷಾಂತರ ಪುಸ್ತಕಗಳನ್ನು ತಯಾರಿಸಿ ರಾಜ್ಯಾದ್ಯಂತ ಹಂಚಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಮುತಾ

 

 

                                                                                                                                                                                                                                                                                                                                                    aa   ಸಂಜನಾ ಆರೋಗ್ಯ ವಿಚಾರಿಸಿದ: ರಾಮಲಿಂಗಾ ರೆಡ್ಡಿ
ಅಕ್ಟೋಬರ್ 19
ಬೆಂಗಳೂರು, : ಸಚಿವ ರಾಮಲಿಂಗಾ ರೆಡ್ಡಿ ಅವರು ಇಂದು ಈಜಿಪುರ ಕಟ್ಟಡ ದುರಂತದಲ್ಲಿ ಗಾಯ ಗೊಂಡವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅವಶೇಷಗಳಡಿ ಸಿಲುಕಿದ್ದ 3 ವರ್ಷದ ಸಂಜನಾ ಸೇರಿದಂತೆ ಹಲವರನ್ನು ರಕ್ಷಣೆ ಮಾಡಲಾಗಿತ್ತು.
ಗುರುವಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಸಂಪತ್ ರಾಜ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸಂಜನಾ ಪೋಷಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ವೈದ್ಯರ ಜೊತೆ ಸಂಜನಾ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.
ಆಕ್ಟೋಬರ್ 16ರ ಮುಂಜಾನೆ ಬೆಂಗಳೂರಿನ ಈಜಿಪುರದಲ್ಲಿ ಮೂರು ಅಂತಸ್ತಿಕ ಕಟ್ಟಡ ಕುಸಿದು ಬಿದ್ದಿತ್ತು. ಈ ದುರಂತದಲ್ಲಿ 7 ಜನರು ಮೃತಪಟ್ಟಿದ್ದರು. ಅಶೇಷಗಳಡಿ ಸಿಲುಕಿದ್ದ ಹಲವರನ್ನು ರಕ್ಷಣೆ ಮಾಡಲಾಗಿತ್ತು. ದುರಂತದಲ್ಲಿ ಅಶ್ವಿನಿ ಮತ್ತು ಶರವಣ ದಂಪತಿಯ 3 ವರ್ಷದ ಮಗು ಸಂಜನಾಳನ್ನು ರಕ್ಷಣೆ ಮಾಡಲಾಗಿತ್ತು.
ಸುಟ್ಟ ಗಾಯಗಳಾಗಿರುವ ಸಂಜನಾಗೆ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಗುರುವಾರ ಆಕೆಯನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ರಾಮಲಿಂಗಾ ರೆಡ್ಡಿ ಅವರು ಸಂಜನಾ ಪೋಷಕರನ್ನು ಭೇಟಿ ಮಾಡಿದರು.
ಸೋಮವಾರ ನಡೆದ ಕಟ್ಟಡ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ5 ಲಕ್ಷ ರೂ. ಪರಿಹಾರ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಘೋಷಣೆ ಮಾಡಿದ್ದಾರೆ.

 

                                                                                                                                                  aa

ಪೊಲೀಸ್ ಸಿಬ್ಬಂದಿ ಬೈಕ್ ಜಾಥಾ:ಹೆಲ್ಮೆಟ್ ಕಡ್ಡಾಯ

ಅಕ್ಟೋಬರ್.19
ಬಾಗಲಕೋಟ: ಹೆಲ್ಮೆಟ್ ಕಡ್ಡಾಯ ನಿಯಮದ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ಮಂಗಳವಾರ ಪೊಲೀಸ್ ಸಿಬ್ಬಂದಿ ಬೈಕ್ ಜಾಥಾ ನಡೆಸಿದರು.
ಹಳೆಯ ನಗರ, ವಿದ್ಯಾಗಿರಿ ಹಾಗೂ ನವನಗರದಲ್ಲಿ ಜಾಥಾ ಮೂಲಕ ಸಂಚರಿಸಿ ಸಾರ್ವಜನಿಕರು ಹೆಲ್ಮೆಟ್ ಧರಿಸಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು. ಮೂರು ಪೊಲೀಸ್ ಠಾಣೆಗಳ 50ಕ್ಕೂ ಹೆಚ್ಚು ಪೊಲೀಸರು ಬೈಕ್ ಜಾಥಾದಲ್ಲಿ ಭಾಗವಹಿಸಿದ್ದರು.
ನಗರದ ಪ್ರಮುಖ ವೃತ್ತಗಳಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಸಾರ್ವಜನಿಕರಿಗೆ ಪೊಲೀಸರು ಮಾಹಿತಿ ನೀಡಿದರು. 'ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರೆ ಎಂದು ಭಯ ಪಡುವ ಬದಲು ಹೆಲ್ಮೆಟ್ ಧರಿಸಿಕೊಳ್ಳಬೇಕು. ಹೆಲ್ಮೆಟ್ ಧರಿಸದಿದ್ದರೆ ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟಾಗುತ್ತದೆ. ಗಂಭೀರವಾಗಿ ಗಾಯವಾದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ನಿಮ್ಮ ಹಾಗೂ ನಿಮ್ಮ ಕುಟುಂಬದ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ' ಎಂದು ಮನವಿ ಮಾಡಿಕೊಂಡರು. ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ನವನಗರ ಪಿಎಸ್ಐ ಸಂತೋಷ ಹಳ್ಳೂರ, ಟ್ರಾಫಿಕ್ ಪಿಎಸ್ಐ ರೊಳ್ಳಿ ನೇತೃತ್ವ ವಹಿಸಿದ್ದರು.
ಬಂಕ್ ಮಾಲೀಕರ ಸಭೆ :
ಹೆಲ್ಮೆಟ್ ಕಡ್ಡಾಯವಾಗಿ ಜಾರಿಗೊಳಿಸುವ ಕುರಿತು ಎಸ್ಪಿ ರಿಷ್ಯಂತ್ ಪೆಟ್ರೋಲ್ ಬಂಕ್ ಮಾಲೀಕರ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು 'ಬಂಕ್ಗಳಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ಕಳ್ಳತನ ತಡೆಗೆ ಕ್ರಮ ಕೈಗೊಳ್ಳಬೇಕು. ಪೆಟ್ರೋಲ್, ಡೀಸೆಲ್ ಕಳುವಾಗದಂತೆ ಸುರಕ್ಷತೆ ವಹಿಸಿ ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕು. ಹೆಲ್ಮೆಟ್ ಧರಿಸುವಂತೆ ಬೈಕ್ ಸವಾರರಿಗೆ ತಿಳಿವಳಿಕೆ ನೀಡಬೇಕು. ನಂತರ ಹೆಲ್ಮೆಟ್ ಹಾಕಿಕೊಂಡವರಿಗೆ ಮಾತ್ರ ಪೆಟ್ರೋಲ್ ವಿತರಿಸಬೇಕು' ಎಂದು ಸಲಹೆ ನೀಡಿದರು. ಸಭೆಯಲ್ಲಿ 50ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳ ಮಾಲೀಕರು ಭಾಗವಹಿಸಿದ್ದರು.

 

Ads
;