ದೂರವಾಣಿ : 080-69999676
ಇಮೇಲ್ : Info@Vijayataranga.com


 

            ಹಹ   ಬಸವಕಲ್ಯಾಣದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕಾಗಿ ಅನುದಾನ
ಡಿಸೆಂಬರ್.14
ಬೀದರ್: ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಸವಕಲ್ಯಾಣದಲ್ಲಿ 600 ಕೋಟಿ ರೂ.ಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅನುಭವ ಮಂಟಪಕ್ಕಾಗಿ ಮುಂಗಡಪತ್ರದಲ್ಲೇ ಅನುದಾನ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಬಸವಕಲ್ಯಾಣದಲ್ಲಿ ಬುಧವಾರ ಜಿಲ್ಲಾಡಳಿತದಿಂದ ನಡೆದ 265 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿ, ಗೋರುಚ ನೇತೃತ್ವದ ಸಮಿತಿಯು ಅನುಭವ ಮಂಟಪ ರಚನೆ ಸಂಬಂಧ ವರದಿ ನೀಡಿದ್ದು, ಅದು ಸರಕಾರದ ಪರಿಶೀಲನೆಯಲ್ಲಿದೆ ಎಂದರು.
''ಬಸವಕಲ್ಯಾಣದ ಅಭಿವೃದ್ಧಿ ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯೂ ಹೌದು. ಇದು ಬಸವಣ್ಣನವರ ಕರ್ಮಭೂಮಿ, ಸಾಮಾಜಿಕ, ಧಾರ್ಮಿಕ ಕ್ರಾಂತಿ ನಡೆದ ತಾಣ. ಬಸವಣ್ಣನವರು ಸಾಮಾಜಿಕ ನ್ಯಾಯದ ಬೀಜವನ್ನು ಇಲ್ಲಿಂದಲೆ ಬಿತ್ತಿದ್ದಾರೆ. ಜಾತಿ ರಹಿತ, ವರ್ಗ ರಹಿತ, ಸಮ ಸಮಾಜದ ಕನಸು ಕಂಡಿದ್ದರು. ಕಾಯಕ, ದಾಸೋಹದ ತತ್ವಗಳನ್ನು ನೀಡುವ ಮೂಲಕ ಎಲ್ಲರೂ ದುಡಿದು, ಹಂಚಿಕೊಂಡು ತಿನ್ನುವ ಸಂದೇಶ ಬಸವಣ್ಣ ನೀಡಿದ್ದಾರೆ. ಬಸವ ಜಯಂತಿಯಂದೇ ನಾನು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಬಸವಾದಿ ಶರಣರ ತತ್ವಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿದ್ದೇನೆ, ಶರಣರ ತತ್ವಾದರ್ಶಗಳ ಮೇಲೆ ಸರಕಾರ ನಡೆಯುತ್ತಿದೆ ''ಎಂದರು.
'''2004ರಲ್ಲಿ ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಬಿಕೆಡಿಬಿ ರಚಿಸಿ ಬಜೆಟ್ನಲ್ಲಿ 5 ಕೋಟಿ ರೂ. ನೀಡಿದ್ದೆ, ಅಲ್ಲದೆ, ಕೂಡಲ ಸಂಗಮವನ್ನು ಅಕ್ಷರಧಾಮದ ಮಾದರಿಯಲ್ಲಿ ನಿರ್ಮಿಸಲು 260 ಕೋಟಿ ರೂ. ಮೀಸಲಿಡಲಾಗಿದೆ,''ಎಂದು ನುಡಿದರು.
ಬಿಎಸ್ವೈಗೆ ಸಿಎಂ ತಿರುಗೇಟುಬೀದರ್ ಜಿಲ್ಲೆಗೆ ನೀರಾವರಿ ಯೋಜನೆಗಳಿಗಾಗಿ 932 ಕೋಟಿ ರೂ. ನೀಡಲಾಗಿದೆ. ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸಾಲ ಮನ್ನಾ ಮಾಡಲಾಗಿದೆ. ಇಷ್ಟೆಲ್ಲ ಮಾಡಿದ ಮೇಲೆ ನೀವೇನು ಮಾಡಿದ್ದೀರಿ ಎಂದು ಕೇಳುತ್ತೀರಲ್ಲ ಯಡಿಯೂರಪ್ಪ ಎಷ್ಟು ಸುಳ್ಳು ಹೇಳ್ತೀರ್ರೀ, ಇತಿ ಮಿತಿ ಬೇಡ್ವಾ '' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು.
''ನಿಮ್ಮ ಅವಧಿಯಲ್ಲಿ ಸಿಎಂ ಸ್ಥಾನ ಯಾಕೆ ಬಿಡಬೇಕಾಯಿತು ಎಂದು ಜನರಿಗೆ ಹೇಳ್ತಿರಾ ? ಭ್ರಷ್ಟಾಚಾರ ಮಾಡಿ, ಸಿಕ್ಕಿ ಹಾಕಿಕೊಂಡು, ಜೈಲಿಗೆ ಹೋಗಿರುವ ನಿಮಗೆ ನಮ್ಮ ಬಗ್ಗೆ ಕೇಳಲು ನೈತಿಕತೆ ಇದೇನಾ ? ಕೆಸಿರೆಡ್ಡಿಯಿಂದ ಈವರೆಗೆ ಜೈಲಿಗೆ ಹೋದ ಮುಖ್ಯಮಂತ್ರಿ ಎಂದರೆ ಅದು ಶ್ರೀಮಾನ್ ಯಡಿಯೂರಪ್ಪ . ನಮ್ಮ ಅವಧಿಯಲ್ಲಿ ಹಗರಣ ಮುಕ್ತ, ಭ್ರಚ್ಟಾಚಾರ ರಹಿತ ಆಡಳಿತ ನೀಡಿದ್ದೇವೆ''ಎಂದರು.
''ಸಮಾಜದಲ್ಲಿ ಶಾಂತಿ ಕದಡಲು, ಸತ್ತ ಹೆಣದ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಜನರ ನಡುವೆ ವಿಷ ಬೆರೆಸಿ, ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಸಾಧನೆಯ ಕುರಿತು ಚರ್ಚೆಗೆ ಬನ್ನಿ ಎಂದರೆ ಬಿಜೆಪಿಯವರು ಬರುತ್ತಿಲ್ಲ, ಅವರಿಗೆ ದಮ್ ಇಲ್ಲ ''ಎಂದು ವ್ಯಂಗ್ಯವಾಡಿದರು.
''ಎಚ್ಕೆಆರ್ಡಿಬಿ ರಚನೆ ಹಾಗೂ 371(ಜೆ) ತಿದ್ದುಪಡಿಯ ಶ್ರೇಯಸ್ಸು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು. ಟಿಪ್ಪು ಜಯಂತಿಯನ್ನು ವಿರೋಧಿಸುವ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಅವರು ಟಿಪ್ಪು ಟೋಪಿ ಹಾಕಿಕೊಂಡು, ಜಯಂತಿ ಆಚರಿಸಿದ್ದು ಮರೆತಿದ್ದಾರಾ ?, ಅವರಿಗೆ ಎರಡು ನಾಲಿಗೆಗಳಿವೆ ''ಎಂದು ಸಿಎಂ ಜರಿದರು.
''ಬಿಜೆಪಿಯವರು ಕಾಂಗ್ರೆಸ್ ಸಾಧನೆಗಳನ್ನು ಕಂಡು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರದ್ದು ಮಿಶನ್ 150 ಅಲ್ಲ, ಕೇವಲ 50 ಅಷ್ಟೇ. ಯಡಿಯೂರಪ್ಪಗೆ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ಸಂವಿಧಾನ ಗೊತ್ತಿಲ್ಲ. ಮಾನವ ಧರ್ಮದ ವಿರೋಧಿಗಳು ಅವರು, ಅವರೇ ರಾಕ್ಷಸರು, ಮನುಷ್ಯ ಮನುಷ್ಯರಲ್ಲಿ ಬೆಂಕಿ ಹಚ್ಚುವ ಹಾಗೂ ಮನುಷ್ಯರಲ್ಲಿ ನಂಬಿಕೆ ಇಲ್ಲದವರು ''ಎಂದು ಹೇಳಿದರು.

 

456   ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ ಬಿಎಸ್ ವೈ
 ಡಿಸೆಂಬರ್-8
ಬೀದರ್ : ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಔರಾದನ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಔರಾದ್ ನ ಮುಂದಿನ ಅಭ್ಯರ್ಥಿ ಪ್ರಭು ಚವಾಣ್ ಎಂದು ಘೋಷಿಸಿದ್ದಾರೆ.
ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಎಸ್ ವೈ, ಬಿಜೆಪಿಯಲ್ಲಿ ಉಳಿದುಕೊಂಡು ಯಾರೇ ಪಕ್ಷದ ವಿರುದ್ಧ ಮಾತನಾಡುವುದು ಹಾಗೂ ಕೆಜೆಪಿ ಹೆಸರು ಹೇಳಿ ಗೊಂದಲ ಸೃಷ್ಟಿಸುವವರನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಎಸ್ ವೈ ಅವರು, ಸಂಸದ ಭಗವಂತ ಖೂಬಾ ಸೇರಿದಂತೆ ಔರಾದ ನಲ್ಲಿ ಬಿಜೆಪಿ-ಕೆಜೆಪಿ ಮುಖಂಡರ ವಿರುದ್ಧ ಗರಂ ಆಗಿದ್ದರು.

 

 

456     ಸಿದ್ದರಾಮಯ್ಯ ತಲೆ ತಿರುಕ : ಯಡಿಯೂರಪ್ಪ ಕಿಡಿ
 ಡಿಸೆಂಬರ್-7
 ಬೀದರ್: ಸಿದ್ದರಾಮಯ್ಯ ತಲೆ ತಿರುಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿ   ಮುಳುಗುವ ಹಡಗು ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
 ಪರಿವರ್ತನಾ ಯಾತ್ರೆ ವೇಳೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತಲೆ   ತಿರುಕ  ಸಿಎಂಗೆ ಉತ್ತರ ನೀಡಲ್ಲಾ. ಬಿಜೆಪಿ ಏನು-ಎತ್ತ ಎಂಬುದು ಚುನಾವಣೆ ಬಳಿಕ ತಿಳಿಯಲಿದೆ ಎಂದು   ವಾಗ್ದಾಳಿ ನಡೆಸಿದರು.
 ಸಿದ್ದರಾಮಯ್ಯ ಮತ್ತು ಜಿ.ಪರಮೇಶ್ವರ್ ಅವರಿಗೇ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಎಂಬುದು ಒಡೆದ   ಮನೆಯಾಗಿದೆ. ಬೇರೆಯವರ ಬಗ್ಗೆ ಮಾತನಾಡುವುದು ಬಿಟ್ಟು ಮೊದಲು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಎಸ್ವೈ ಲೇವಡಿ ಮಾಡಿದರು.

 

 

ii   ಅಪರಿಚಿತನ ಶವದ ಮೇಲೆಯೇ ಸಂಚರಿಸಿದ ನೂರಾರು ವಾಹನಗಳು
 ನವೆಂಬರ್- 11
ಬೆಂಗಳೂರು: ನಗರದಮಡಿವಾಳದ ಬಳಿ ಇರುವ ಬಿ ಎಟಿಪಿಎಲ್ ಎಲಿವೇಟೇಡ್ ಫ್ಲೈಓವರ್ನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವದ ಮೇಲೆ ನೂರಾರು ವಾಹನಗಳು ಸಂಚರಿಸಿವೆ.
ಶನಿವಾರ ನಸುಕಿನ 3 ಗಂಟೆಯ ವೇಳೆಗೆ ಅಪರಿಚಿತವಾಹನ ಢಿಕ್ಕಿಯಾಗಿ ಪರಾರಿಯಾಗಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಯಾರ ಗಮನಕ್ಕೂ ಬಂದಿಲ್ಲ. ಶವದ ಮೇಲೆಯೇ ನೂರಾರು ವಾಹನಗಳು ಸಂಚರಿಸಿ ಛಿದ್ರ ಛಿದ್ರವಾಗಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಅಂಬುಲೆನ್ಸ್ನಲ್ಲಿ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಮಡಿವಾಳ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

   ಗಗ ಕನ್ನಡ ಭಾಷೆಯನ್ನು ಶಾಲೆ-ಕಾಲೇಜು ಸೇರಿದಂತೆ ಎಲ್ಲಡೆ ಕಡ್ಡಾಗೊಳಿಸಿ
ನವೆಂಬರ್.1
ಬೀದರ್: ಭಾಲ್ಕಿ ಪಟ್ಟಣದಲ್ಲಿನ ಎಲ್ಲ ಅಂಗಡಿ ಮುಗ್ಗಟು ಮತ್ತು ಶಾಲಾ-ಕಾಲೇಜುಗಳಿಗೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮಕೈಗೊಳ್ಳುವಂತೆ ಕರ್ನಾಟಕ ರಕ್ಷ ಣಾ ವೇದಿಕೆ ತಾಲೂಕು ಘಟಕದ ಪದಾಧಿಕಾರಿ ಒತ್ತಾಯಿಸಿದ್ದಾರೆ. ಈ ಕುರಿತು ಪುರಸಭೆ ಕಚೇರಿಯಲ್ಲಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಮರಾಠಿ ಹಾಗೂ ಉರ್ದು ಪ್ರಾಬಲ್ಯದ ಮಧ್ಯೆ ನಲುಗಿದ ಈ ಭಾಗ ಡಾ.ಚನ್ನಬಸವ ಪಟ್ಟದ್ದೇವರು, ಮಾಜಿ ಸಚಿವ ಭೀಮಣ್ಣ ಖಂಡ್ರೆ ಸೇರಿ ಮುಂತಾದವರ ಹೋರಾಟದ ಫಲವಾಗಿ ಗಡಿಭಾಗ ಇಂದು ಕರ್ನಾಟಕದಲ್ಲಿ ಉಳಿದಿದೆ. ಆದರೆ, ಇಂದಿನ ಆಂಗ್ಲ ವ್ಯಾಮೋಹದಲ್ಲಿ ಕನ್ನಡ ಮರೆಯಾಗುತ್ತಿರುವುದು ದುರಂತ. ಕನ್ನಡ ಆಡಳಿತ ಭಾಷೆ ಆಗಿದ್ದರೂ ಕನ್ನಡಕ್ಕಾಗಿ ಹೋರಾಡುವ ಪರಿಸ್ಥಿತಿ ಇದೆ. ಕೂಡಲೇ ಪಟ್ಟಣದ ಎಲ್ಲ ಮಳಿಗೆಗಳ, ಶಾಲಾ-ಕಾಲೇಜುಗಳ, ಕಚೇರಿಗಳ ಮೇಲೆ ಕನ್ನಡ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಕರ್ನಾಟಕ ರಕ್ಷ ಣಾ ವೇದಿಕೆ ತಾಲೂಕು ಅಧ್ಯಕ್ಷ ರಮೇಶ ಚಿದ್ರಿ, ತಾಲೂಕು ಅಧ್ಯಕ್ಷ ಗಣೇಶ ಪಾಟೀಲ್, ಉಪಾಧ್ಯಕ್ಷ ಸುರೇಶ ಚವ್ಹಾಣ, ಸಂಜುಕುಮಾರ ಡೋಳೆ, ಕಾರ್ಯದರ್ಶಿ ಹಣಮಂತ ಮೇತ್ರೆ, ಖಜಾಂಚಿ ಶಿವಕುಮಾರ ಕಾಪಸೆ, ಸಂಘಟನಾ ಕಾರ್ಯದರ್ಶಿ ಬಾಲಾಜಿ ಜಬಾಡೆ, ಇನ್ನಿತರರಿದ್ದರು.

 

 

ff      ಲಾರಿ ಡಿಕ್ಕಿಯಿಂದ ವ್ಯಕ್ತಿ ಸಾವು
ಅಕ್ಟೋಬರ್.26
ಬೀದರ್: ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಲಾರಿ ಮತ್ತು ಬೈಕ್ ನಡುವೆ ಮಂಗಳವಾರ ಸಂಜೆ ಡಿಕ್ಕಿ ಸಂಭವಿಸಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ.
ನಗರದ ಕೆಇಬಿ ಕಾಲೊನಿ ಸಂಜಯ ಹುಡ್ಗೆ (42) ಮೃತ. ಬೈಕ್ ಮೇಲೆ ಬೊಮ್ಮಗೊಂಡೇಶ್ವರ ವೃತ್ತದಿಂದ ಗುಂಪಾ ಕಡೆಗೆ ಹೋಗುವಾಗ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ತೀವೃ ಗಾಯಗೊಂಡ ಪರಿಣಾಮ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

tt    ಆಸ್ಪತ್ರೆ ಸಿಬ್ಬಂದಿ ವರ್ತನೆಗೆ ಜನರ ಆಕ್ರೋಶ
 ಅಕ್ಟೋಬರ್ :24
ಬೀದರ್ : ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಪರದಾಡುವಂತಾಗಿದೆ.
ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ಸಂಗಪ್ಪ ಭೀಮಣ್ಣ ಬಿರಾದಾರ (97) ಮಂಗಳವಾರ ಚಿಕಿತ್ಸೆಗೆಂದು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಗೆ ಬಂದಿದ್ದರು. ಭೀಮಣ್ಣ ಅವರಿಗೆ ಎರಡು ಕಣ್ಣು ಕಾಣುವುದಿಲ್ಲ, ನಡೆಯಲೂ ಸಾಧ್ಯವಿಲ್ಲ.
ಆದರೆ, ಆಸ್ಪತ್ರೆಗೆ ಬಂದ ವೃದ್ಧನಿಗೆ ಆಸ್ಪತ್ರೆ ಸಿಬ್ಬಂದಿ ವೀಲ್ ಚೇರ್ ನೀಡಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳು ವೃದ್ಧನನ್ನು ದಾಖಲು ಮಾಡಲು ಯಾವುದೇ ಸಹಕಾರ ನೀಡಿಲ್ಲ. ಇದರಿಂದಾಗಿ ಮೊಮ್ಮಗ ಕೈಲಾಸ ಬಿರಾದಾರ ಆಸ್ಪತ್ರೆಯ ಹೊರಗಡೆಯಿಂದ ಅಜ್ಜನನ್ನು ಎತ್ತಿಕೊಂಡು ಬಂದು ಮೊದಲನೇ ಅಂತಸ್ತಿನ ಕಟ್ಟಡಕ್ಕೆ ಕರೆದುಕೊಂಡು ಬಂದಿದ್ದಾರೆ.
ಈ ಸಮಯದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಇದನ್ನು ನೋಡುತ್ತಾ ನಿಂತಿದ್ದರು. ಆದರೆ, ಯಾರೂ ಸಹಾಯಕ್ಕೆ ಬರಲಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿಯೂ ಇಂತಹ ಘಟನೆ ನಡೆದಿತ್ತು. ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗಲು ಸಹಕಾರ ನೀಡದ ಸಿಬ್ಬಂದಿ ಕೈಕಟ್ಟಿ ಕೂತಿದ್ದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

 

 

      ಸಿದ್ದರಾಮಯ್ಯನವರು ಕಮಾಯಿ ಕೀ ಬಾತ್ ಎಂದು ಲೇವಡಿ
ಅಕ್ಟೋಬರ್.23
ಬೀದರ್: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನರ ಸಮಸ್ಯೆ, ಪರಿಹಾರವುಳ್ಳ 'ಮನ್ ಕೀ ಬಾತ್' ಆಗಿದ್ದರೆ, ರಾಜ್ಯದ ಸಿಎಂ ಸಿದ್ದರಾಮಯ್ಯನವರದು 'ಕಮಾಯಿ ಕೀ ಬಾತ್' (ಗಳಿಸುವ ಮಾತು) ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಮಾಜಿ ಶಾಸಕ ಮಾರುತಿರಾವ್ ಮುಳೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿರುವುದು ಹುಚ್ಚರ ಸರಕಾರ. ಕಲ್ಲಿದ್ದಲು ಹಗರಣದಲ್ಲಿ 400 ಕೋಟಿ ರೂ. ಭ್ರಷ್ಟಾಚಾರವಾಗಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಮುಖಕ್ಕೆ ಮಸಿ ಬಳಿದುಕೊಂಡಿದ್ದಾರೆ. ಸಿಬಿಐ ತನಿಖೆಯಾದರೆ ರಾಜ್ಯ ಸರಕಾರದ ಹೊಲಸು ಹೊರ ಬರುತ್ತದೆ ಎಂದರು.
''ರಾಜ್ಯದ ಸಿಎಂ ಆಗಿ ಸಚಿವರು ಹಣ ವಸೂಲಿಯಲ್ಲಿ ತೊಡಗಿದ್ದಾರೆ. 2018ರ ಚುನಾವಣೆ ಸಮೀಸುತ್ತಿದ್ದಂತೆ, ರಾತ್ರಿಯಲ್ಲಿ ಹಣ ಹಂಚಲು ಈಗಿನಿಂದಲೇ ಹಣ ಸಂಗ್ರಹಿಸುವ ಕಾರ್ಯ ಕ್ಕೆ ಮುಂದಾಗಿದ್ದಾರೆ. ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ನಂಬರ್ 1 ಸ್ಥಾನದಲ್ಲಿದೆ,'' ಎಂದು ದೂರಿದರು.
''ಇಡೀ ರಾಜ್ಯ ಸರಕಾರ ಅಂಧಕಾರದಲ್ಲಿದೆ. ಇಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಸಾಧನಾ ಸಮಾವೇಶವನ್ನು ಯಾವ ಪುರುಷಾರ್ಥಕ್ಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ನಾಲ್ಕೂವರೆ ವರ್ಷದಲ್ಲಿ ಯಾವ ಸಾಧನೆ ಮಾಡಿದ್ದೀರಿ, ಯಾತಕ್ಕಾಗಿ ಸಾಧನಾ ಸಮಾವೇಶ,'' ಎಂದು ಕೇಳಿದರು.
''ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಡೆಯುತ್ತಿದೆ. ಜಾತಿ, ಸಮಾಜಗಳನ್ನು ರಾಜ್ಯ ಸರಕಾರ ಒಡೆದಾಳುತ್ತಿದೆ. ಜನರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ. ಜನರ ಯಾವೊಂದು ಸಮಸ್ಯೆಗೆ ಸ್ಪಂದಿಸದ ನಿಷ್ಕ್ರಿಯ ಸರಕಾರವಿದು. ರೈತರ ಸಾಲ ಮನ್ನಾ ಕುರಿತು ಪ್ರಚಾರ ಪಡೆದಿದ್ದೇ ಬಂತು. ಇನ್ನೂ ಸಾಲ ಮನ್ನಾದ ಒಂದು ನಯಾ ಪೈಸೆಯೂ ರೈತರ ಖಾತೆಗೆ ಜಮೆಯಾಗಿಲ್ಲ,'' ಎಂದು ಆಪಾದಿಸಿದರು.

 

 

 

                                                                                                         

   

  

ಅಭಿವೃದ್ಧಿ ಕಾಮಗಾರಿ

ಅಕ್ಟೋಬರ್-21

ಬೀದರ್‌: ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮಾರ್ಚ್‌ ಒಳಗೆ ಮುಗಿಸಿ, ಸರಕಾರ ನೀಡಿರುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು ಎಂದು ಪೌರಾಡಳಿತ, ಸಾರ್ವಜನಿಕ ಉದ್ದಿಮೆಗಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

33 ಜನರ ಬಂಧನ: 18 ಬೈಕ್, 5ಕಾರ್ ವಶ

ಅಕ್ಟೋಬರ್-21

ಚಿಟಗುಪ್ಪ:ಹುಮನಾಬಾದ ತಾಲೂಕಿನ ವಿಠಲಪೂರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿರುವ ನಿಖರ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ ಹಾಗೂ ಹೆಚ್ಚುವರಿ ಎಸ್ಪಿ ಶ್ರೀಹರಿಬಾಬು ಅವರ ತಂಡ ದಾಳಿ ನಡೆಸಿ, 33 ಜನರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಂದು 1.30 ಲಕ್ಷ ರೂ., 18ಬೈಕ್, 5 ಕಾರ್ಗ್ಥಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ವಿಕಗೆ ತಿಳಿಸಿವೆ. ಸಿಪಿಐ ಬಿಬಿ ಪಟೇಲ, ಎಎಸ್ಐ ಮನೋಹರ ಸಿಬ್ಬಂದಿ ವರ್ಗದವರು ಹಾಜರಿದ್ದರು. ಬೇಮಳಖೇಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

    

ಬಸವೇಶ್ವರ ಪ್ರತಿಮೆಗೆ ಮಾಡಿದ ಮಾಲಾರ್ಪಣೆ ಕಿತ್ತೆಸೆದ ಕಿಡಿಗೆಡಿಗಳು

ಅಕ್ಟೋಬರ್:17

ಬೀದರ್‌: ನಗರದ ಬಸವೇಶ್ವರ ಪ್ರತಿಮೆಗೆ ಶಾಸಕ ಮಲ್ಲಿಕಾರ್ಜುನ್ ಖೂಬಾ ಮಾಲಾರ್ಪಣೆ ಮಾಡಿದ್ದನ್ನು ಕಿಡಿಗೆಡಿಗಳು ಕಿತ್ತೆಸೆದ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಯಿತು.

ದುಡ್ಡು ಪಡೆದು ಕೆಲ ಯುವಕರು ಎಲ್ಲರ ಎದುರೇ ಇಂಥ ಹೇಯ ಕೆಲಸ ಮಾಡಿದ್ದಾರೆ, ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಾ. ಮಾತೆ ಮಹಾದೇವಿ ಆಗ್ರಹಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಲಿಂಗಾಯತ ಸಮನ್ವಯ ಸಮಿತಿಯ ಆನಂದ್‌ ದೇವಪ್ಪ , ನಮ್ಮ ಹೋರಾಟಕ್ಕೆ ಅಡೆ ತಡೆಗಳನ್ನು ಮಾಡಿದರೂ ಹಿನ್ನಡೆಯಾಗದು. ರಾರ‍ಯಲಿಗಳ ಯಶಸ್ವಿಯಿಂದಾಗಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಇದಕ್ಕಾಗಿ ಎಲ್ಲಿಂದ ಹಣ ಬಂದಿದೆ, ಯಾರ ಕೈವಾಡ ಎಂಬುದೂ ಗೊತ್ತು. ಇವರು ಬಸವಣ್ಣನವರ ಭಕ್ತರಲ್ಲ ಎಂದರು.

ಲಿಂಗಾಯತ ಸಮನ್ವಯ ಸಮಿತಿಯ ಬಾಬು ವಾಲಿ ಮಾತನಾಡಿ, ಇವರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಆಗ್ರಹಿಸಿದರು.

Ads
;