ದೂರವಾಣಿ : 080-69999676
ಇಮೇಲ್ : Info@Vijayataranga.com


pp 

 ಏಪ್ರಿಲ್ ಕೊನೆಯ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ?

 ಮಾರ್ಚ್ 21

 

ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಸ್ ಎಸ್ ಎಸ್ ಸಿ ಮತ್ತು ಪಿಯುಸಿ ಪರೀಕ್ಷೆಯ ಫಲಿತಾಂಶಗಳೂ ಬೇಗನೇ ಹೊರಬೀಳುವ ನಿರೀಕ್ಷೆ ಇದೆ. ದ್ವಿತಿಯ ಪಿಯುಸಿ ಪರೀಕ್ಷೆಯ ಫಲಿತಾಂಶ ಏಪ್ರಿಲ್ ಕೊನೆಯ ವಾರದಲ್ಲೇ ಪ್ರಕಟಗೊಳ್ಳುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಈಗಾಗಲೇ ಮುಕ್ತಾಯವಾಗಿದ್ದು, ಒಟ್ಟು 1004 ಪರೀಕ್ಷಾ ಕೇಂದ್ರಗಳಲ್ಲಿ, 6.90 ಲಕ್ಷ ವಿದ್ಯಾರ್ಥಿಗಳು ತಮ್ಮ ಬದುಕಿನ ಪ್ರಮುಖ ಘಟ್ಟವಾದ ಪಿಯುಸಿ ಪರೀಕ್ಷೆಯನ್ನು ಬರೆದಿದ್ದಾರೆ. ಈ ಪೈಕಿ 3.52 ಲಕ್ಷ ವಿದ್ಯಾರ್ಥಿಗಳು ಹಾಗೂ 3.37 ವಿದ್ಯಾರ್ಥಿನಿಯರಿದ್ದಾರೆ. ಮಾ.1 ರಿಂದ 16 ರವರೆಗೆ ನಡೆದ ಪರೀಕ್ಷೆಯ ಮೌಲ್ಯಮಾಪನ ಮಾ.26 ರಂದು ಆರಂಭವಾಗಲಿದೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಪ್ರತಿವರ್ಷ ನಡೆಯುತ್ತಿದ್ದ ಉಪನ್ಯಾಸಕರ ಮುಷ್ಕರಗಳು ಈ ಬಾರಿ ನಡೆಯದಿರುವುದು ವಿದ್ಯಾರ್ಥಿಗಳನ್ನು ನಿರಾಳವಾಗಿಸಿದೆ. ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತೇ ಆದರೆ ಏಪ್ರಿಲ್ ಅಂತ್ಯದ ಹೊತ್ತಿಗೆ ಫಲಿತಾಂಶ ಹೊರಬೀಳಲಿದೆ.

 

 

 

                                                                       

ರವಿ ಬೆಳೆಗೆರೆ ಕುರಿತು ಅಗ್ನಿಶ್ರೀಧರ್ ಹೇಳಿದ್ದೇನು..?

ಡಿಸೆಂಬರ್.11

ಬೆಂಗಳೂರು: ಕ್ರೈಂ ಸುಳಿಯಲ್ಲಿ ಸಿಕ್ಕಿದ್ರೆ ಹೊರಬರೋದು ಅಷ್ಟು ಸುಲಭ ಅಲ್ಲ. ಆದರೆ, ಇದೀಗ ಆಗಿರುವ ಕಲುಷಿತ ವಾತಾವರಣವನ್ನು ಬಿಟ್ಟು ರವಿಬೆಳಗೆರೆ ಬೇಗ ಹೊರಬರಲಿ ಎಂದು ಪತ್ರಕರ್ತ ಅಗ್ನಿಶ್ರೀಧರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗೆರೆ ಅವರು ಕ್ರೈಂನ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುವುದು ಸರಿಯಲ್ಲ. ಕೆಳಕ್ಕೆ ಬಿದ್ದವರಿಗೆ ಇನ್ನೊಂದು ಕಲ್ಲು ಹಾಕಬಾರದು. ಪರದೆಯ ಬದುಕು ನಮ್ಮದು. ಆದರೆ, ಬೆಳಗೆರೆ ಅವರು ತಮ್ಮ ಮೂಲ ಉದ್ದೇಶವನ್ನೇ ಮರೆತಿದ್ದಾರೆ.
ಎರಡು ವರ್ಷದ ಹಿಂದೆ ಆದ ಒಂದು ಪ್ರಕರಣದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದ. ಮಹಿಳೆಯರ ಬಗ್ಗೆ ಬೆಳಗೆರೆ ಬಳಸುವ ಪದ ಅತ್ಯಂತ ಕೀಳಾದ್ದು, ಇಷ್ಟೆಲ್ಲಾ ಆದ ಮೇಲಾದ್ರೂ ಈಗಲಾದ್ರೂ ಬದಲಾಗಲಿ ಅನ್ನೋದೆ ನನ್ನ ಆಶಯ ಎಂದರು. ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಗೆ ಮಾತಿನ ಮೂಲಕ ಸಮಾಧಾನ ಮಾಡಬಹುದಿತ್ತು. ಆದರೆ, ದೂರವಾಣಿ ಕರೆ ಮಾಡಿ ಮಾತನಾಡಿರುವುದು ಸರಿಯಲ್ಲ. ಬೆಳಗೆರೆ ಭೂಗತ ಲೋಕದಲ್ಲಿ ಮಾಡಿಸಿದ ಕಥೆಗಳು ಹಲವು, ತಲೆ ಓಡಿದಾಗ ಸುನಿಲ್ ಗೆ ಕೊಲೆ ಮಾಡಲು ಸುಪಾರಿ ನೀಡಿರಬಹುದು. ಕ್ರಿಮಿನಲ್ ಮತ್ತು ಕೆಡಕುಗೆ ಬಹಳ ವ್ಯತ್ಯಾಸವಿದೆ. ಒಮ್ಮೆ ಮಿಸ್ ಆದರೆ ಮತ್ತೆ ಹೊಡಿರಿ ಅನ್ನೋದು ಅವನ ಮಾನಸಿಕ ಸ್ಥಿತಿ ಹೇಗಿದೆ ಅನ್ನೋದನ್ನು ಗಮನಿಸಬಹದು. ಬೆಳಗೆರೆ ಡೆವಿಲ್ ಇದ್ದಹಾಗೆ. ಆದರೆ, ರವಿ ದೆವ್ವಗಳನ್ನು ಹುಡುಕ್ತಾಹೋಗಿದ್ದಾರೆ ಎಂದರು.
ರಸ್ತೆಗಳಲ್ಲಿ ಲಾಂಗ್, ಮಚ್ಚು ಜಳಪಿಸಿದ ಕಥೆಯನ್ನು ಕ್ರೈಂ ಡೈರಿ ಮತ್ತು ಭೀಮಾತೀರದಲ್ಲಿ ರವಿಬೆಳಗೆರೆ ತೋರಿಸ್ತಾ ಇದ್ದ. ಇದೆಲ್ಲಾ ನೋಡಿದ್ರೆ ನಂಗೆ ನಗು ಬರುತ್ತೆ ಎಂದರು. ನಾನು ಪತ್ರಿಕೆ ಆರಂಭಿಸ್ತೀನಿ ಅಂದಾಗ ಬೇಡ ಎಂದು ಕಾಲು ಎಳೆದಿದ್ದರೆಂದು ನೆನಪಿಸಿಕೊಂಡ ಶ್ರೀಧರ್ ಅವರು, ನನ್ನ ಪತ್ರಿಕೆ ವಿರುದ್ಧ ಮಾತನಾಡಿದ್ದ ಬೆಳಗೆರೆ ಪ್ರಗತಿಪರರ ಪಾಂಪ್ಲೆಟ್ ಎಂದಿದ್ದರು ಎಂದು ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರು. ಸಾಹಿತ್ಯದ ಬಗ್ಗೆ ತಿಳಿದು ಕೊಂಡಿದ್ದು ಒಂದು ಕಡೆಯಾದರೆ, ಜೀವನವನ್ನು ಬೆಳಗೆರೆ ನಡೆಸುತ್ತಿದ್ದರು. ಒಂದೊಂದು ಕ್ಷಣಕ್ಕೂ ಒಂದೊಂದು ಮಾತನಾಡುತ್ತಾರೆ. ಬೆಳಗೆರೆ ಮಾತು ನನಗೆ ಅಸಹ್ಯ ಹುಟ್ಟಿಸುತ್ತದೆ ಎಂದು ತಿಳಿಸಿದರು.

 

                                             

ಸ್ಟೀಲ್ ಬ್ರಿಡ್ಜ್ ಯೋಜನೆಗೆ ಮರುಜೀವ..!

 ಡಿಸೆಂಬರ್.11 

ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿ ಪ್ರತಿಪಕ್ಷಗಳ ಆರೋಪಕ್ಕೆ ತುತ್ತಾಗಿ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನೇ ಕೈಬಿಟ್ಟಿದ್ದ ಸರ್ಕಾರ ಮತ್ತೆ ಆ ಯೋಜನೆಗೆ ಮರುಜೀವ ನೀಡಲು ತೀರ್ಮಾನಿಸಿದೆ. 
ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗ ಮಾತನಾಡಿ, ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಟ್ಟಿಲ್ಲ. ರಾಷ್ಟ್ರೀಯ ಹಸಿರು ಪೀಠ ತಡೆ ನೀಡಿದ್ದರಿಂದ ವಿಳಂಬವಾಗಿದೆ. ಇನ್ನೂ ಆ ಯೋಜನೆ ಜೀವಂತವಾಗಿದೆ. ಯೋಜನೆಯನ್ನು ಪುನರ್ ಪರಿಶೀಲಿಸಲಾಗುವುದು. ಸಂಚಾರ ದಟ್ಟಣೆ ನಿಯಂತ್ರಿಸಲು ಯೋಜನೆ ಅಗತ್ಯವಿದೆ. ಈ ಯೋಜನೆ ಸದ್ಯಕ್ಕೆ ಮುಂದೂಡಲಾಗಿದೆ. ಎನ್.ಜಿ.ಇ.ಟಿ ತಡೆಯಾಜ್ಞೆ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಚುನಾವಣೆ ಬಳಿಕ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ನಂತರ ಇದನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸುವ ಕುರಿತು ತೀರ್ಮಾನಿಸಲಾಗುವುದು ಎಂದು ಹೇಳಿದರು. ಪ್ರಸಕ್ತ ಬೆಂಗಳೂರು ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ಜೋಡಿಸುವ ಎಲಿವೇಟೆಡ್ ಕಾರಿಡಾರ್ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಯೋಜನೆ ರೂಪಿಸುತ್ತಿದೆ. 25 ಸಾವಿರ ಕೋಟಿ ಅಂದಾಜು ವೆಚ್ಚದ ಈ ಯೋಜನೆ ಭಾಗವಾಗಿ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದು ಟೋಲ್ ಯೋಜನೆ, ಸಿಬಿಡಿ ಪ್ರದೇಶಕ್ಕೆ ವಾಹನ ದಟ್ಟಣೆ ತಪ್ಪಿಸಲು ಈ ಯೋಜನೆ ಅನಿವಾರ್ಯ ಇದಲ್ಲದೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಾಗವಾರ ನಡುವೆ ಮೆಟ್ರೋ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಜಾರ್ಜ್ ತಿಳಿಸಿದರು.

 

                                                                                                       

ನೀರಿಗಾಗಿ ಹೋರಾಟ:ಮೊಕದ್ದಮೆ ವಾಪಸ್ '

ಸೆಂಬರ್.11 

ಬೆಂಗಳೂರು: ರಾಜ್ಯದಲ್ಲಿ ಮಹದಾಯಿ, ಕಳಸಾ-ಬಂಡೂರಿ ಹಾಗೂ ಕಾವೇರಿ ನೀರಿಗಾಗಿ ನಡೆದಿರುವ ಹೋರಾಟದ ವೇಳೆ ರೈತರು ಹಾಗೂ ಸಾರ್ವಜನಿಕರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಸರ್ಕಾರ ಬೇಷರತ್ ವಾಪಸು ಪಡೆಯಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಇಂದಿಲ್ಲಿ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ನೀರಿಗಾಗಿ ನಡೆದ ಹೋರಾಟಗಳಲ್ಲಿ ರೈತರು ಹಾಗೂ ಸಾರ್ವಜನಿಕರ ಮೇಲೆ ಮೊಕದ್ದಮೆ ಹೂಡಲಾಗಿದೆ. ಅದನ್ನು ಕೂಡಲೇ ಸರ್ಕಾರ ಹಿಂಪಡೆಯಬೇಕು. ಬಸ್ ಸುಟ್ಟು ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದಂತಹವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಅಮಾಯಕರ ಮೇಲೆ ಹಾಕಿರುವ ಕೇಸ್ಗಳನ್ನು ವಾಪಸ್ ಪಡೆಯಿರಿ ಎಂದು ಹೇಳಿದರು.
ನವಲಗುಂದ, ಯಮಲೂರಿನಲ್ಲಿ ನಡೆದ ಪೆÇಲೀಸ್ ದೌರ್ಜನ್ಯ ಕುರಿತಂತೆ ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೀಡಿರುವ ವರದಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಅವರು, ಈ ಭಾಗದ 187 ಜನರ ಮೇಲೆ ಹಾಕಿರುವ ಖೊಟ್ಟಿ ಕೇಸನ್ನು ವಾಪಸು ಪಡೆಯಬೇಕು ಎಂದು ತಿಳಿಸಿದರು. ಅದೇ ರೀತಿ ಕಾವೇರಿ ಗಲಾಟೆಯಲ್ಲೂ ಅಮಾಯಕರ ಮೇಲೆ ಕೇಸು ದಾಖಲಾಗಿದೆ. ಇದನ್ನೂ ಸಹ ಪರಿಶೀಲಿಸಿ ಬಿಡುಗಡೆಗೊಳಿಸಬೇಕು ಎಂದರು. ಕಾವೇರಿ ಹಾಗೂ ಮಹಾದಾಯಿ ಈ ಎರಡೂ ನದಿಗಳ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದ ಅವರು, ಈಗಾಗಲೇ ನಾವು ಹಾಗೂ ಪ್ರಹ್ಲಾದ್ ಜೋಷಿ ಅವರು ಕೇಂದ್ರ ಸಚಿವ ಅನಂತ್ಕುಮಾರ್ ನೇತೃತ್ವದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮಹದಾಯಿ ವಿಚಾರದಲ್ಲಿ ಮಾತುಕತೆ ನಡೆಸಿದ್ದೇವೆ. ಅಲ್ಲದೆ, ಇದೇ 21ರಂದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಮಾತುಕತೆಗೆ ವೇದಿಕೆ ನಿರ್ಮಿಸಿದ್ದೇವೆ. ಹಾಗಾಗಿ ಈ ಸಂಧಾನದಲ್ಲಿ ಯಶಸ್ಸು ಕಾಣುವ ಎಲ್ಲ ಭರವಸೆ ನಮಗಿದೆ ಎಂದು ತಿಳಿಸಿದರು.

 

                                           

“ಭಾರತ ರತ್ನ” ಪ್ರಶಸ್ತಿಗೆ ದಿ. ನಿಜಲಿಂಗಪ್ಪ ಆಯ್ಕೆ, ಶಿಫಾರಸು:ಸಿಎಂ

ಡಿಸೆಂಬರ್-11 

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ ಅವರಿಗೆ "ಭಾರತ ರತ್ನ' ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್. ನಿಜಲಿಂಗಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ನಿಜಲಿಂಗಪ್ಪನವರು ರಾಜ್ಯ ಮತ್ತು ದೇಶ ಕಂಡ ಅಪ್ರತಿಮ ನಾಯಕ. ದೇಶದಲ್ಲೇ ಅವರಿಗೆ ಉನ್ನತ ಸ್ಥಾನ ಸಿಗಬೇಕಿತ್ತು. ಹಾಗಾಗಿ, ಅವರಿಗೆ ಭಾರತ್ನ ರತ್ನ ನೀಡುವ ಬಗ್ಗೆ ಶಿಫಾರಸು ಮಾಡಲಾಗುವುದು ಎಂದರು.
ಅಲ್ಲದೇ ನಿಜಲಿಂಗಪ್ಪನವರು ರಾಷ್ಟ್ರ ನಾಯಕರಾಗಿದ್ದರಿಂದ ಸಂಸತ್ ಭವನದಲ್ಲಿ ಅವರ ಪ್ರತಿಮೆ ಸ್ಥಾಪನೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಚಿತ್ರದುರ್ಗದಲ್ಲಿರುವ ಅವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡಲಾಗಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಯವರು ಇದೇ ವೇಳೆ ಭರವಸೆ ನೀಡಿದರು.
ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ, ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಕೈ ಮತ್ತು ಬಾಯಿ ಶುದ್ಧವಾಗಿಟ್ಟುಕೊಂಡಿದ್ದ ಜನ ನಾಯಕ. ನೀರಾವರಿ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಮರೆಯುಂತಿಲ್ಲ ಎಂದು ಸಿದ್ದರಾಮಯ್ಯ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್, ಮೇಯರ್ ಸಂಪತ್ರಾಜ್, ನಿಜಲಿಂಗಪ್ಪನವರ ಕುಟುಂಬದ ಸದಸ್ಯರು ಇದ್ದರು.

\

 

   123 

ವಿಷ್ಣು ಸ್ಮಾರಕ : ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ ಕಿಚ್ಚ

 ಡಿಸೆಂಬರ್.11

ಬೆಂಗಳೂರು : ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯವನ್ನು ಬೆಂಗಳೂರಿನಲ್ಲೇ ನಿರ್ಮಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ನಟ ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ. 
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಇಂದು ನಟ ಸುದೀಪ್ ಭೇಟಿ ನೀಡಿ ಕೆಲಕಾಲಮಾತುಕತೆ ನಡೆಸಿದರು. ವಿಷ್ಣು ಸ್ಮಾರಕದ ಕುರಿತು ಚರ್ಚೆ ನಡೆಸಿದ ಸುದೀಪ್ ವಿಷ್ನುವರ್ಧನ್ ಅವರ ಸಮಾಧಿ ಸ್ಥಳಾಂತರ ಬೇಡ ಎಂದು ಮನವಿ ಮಾಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಿಚ್ಚ ಸುದೀಪ್ ಅವರು, ವಿಷ್ಣು ಸಮಾಧಿ ಸ್ಥಳ, ಪುಣ್ಯಭೂಮಿ, ಅದನ್ನು ಅಭಿವೃದ್ಧಿ ಪಡಿಸುವಂತೆ ಕೇಳಿಕೊಂಡಿದ್ದೇನೆ. ಸಮಾಧಿ ಸ್ಥಳವನ್ನು ಕನ್ನಡ ಚಿತ್ರರಂಗವೇ ಖರೀದಿಸಲಿದೆ ಎಂದು ಹೇಳಿದರು.

 

    123 

ಸುಪಾರಿ ಪ್ರಕರಣ: ರವಿ ಬೆಳಗೆರೆಗೆ ಜೈಲಾ? ಬೇಲಾ? ಇಂದು ನಿರ್ಧಾರ

 ಡಿಸೆಂಬರ್-11

ಬೆಂಗಳೂರು: ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಅವರ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ಆದರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರವಿ ಬೆಳಗೆರೆಯಿಂದ ಹೆಚ್ಚಿನ ಮಾಹಿತಿ ಪೊಲೀಸರಿಗೆ ಸಿಗದಿರುವುದರಿಂದ ಇನ್ನು ಕೆಲ ದಿನಗಳವರೆಗೆ ಪೊಲೀಸ್ ಕಸ್ಟಡಿ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.ಸಿಸಿಬಿ ಅಕ್ರಮ ಶಸ್ತ್ರಾಸ್ತ್ರ, ಕೊಲೆ ಸಂಚು ಸೇರಿ ಇನ್ನಿತರ ಜಾಮೀನು ರಹಿತ ಸೆಕ್ಷನ್ ಹಾಕಿದ್ದಾರೆ.
ರವಿ ಬೆಳಗೆರೆ ಅವರನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅವರು ಬಿ.ಪಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅನಾರೋಗ್ಯದ ಕಾರಣ ನೀಡಿ ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು.
'' ಬಂಧನಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳು ನಮ್ಮ ಕೈಸೇರಿಲ್ಲ. ಇಂದು ಸಂಜೆ ವೇಳೆಗೆ ದಾಖಲೆಗಳು ಕೈ ಸೇರಿದರೆ ಜಾಮೀನಿಗೆ ಅರ್ಜಿಸಲ್ಲಿಸಲಾಗುವುದು'' ಎಂದು ರವಿ ಬೆಳಗೆರೆ ಪರ ವಕೀಲ ದಿವಾಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

  

 

    123 

ಕಸ ಮಾರಿ ಹಣ ಮಾಡಿ, ತ್ಯಾಜ್ಯ ವಿಲೇವಾರಿಗೆ ಹೊಸ ಮಂತ್ರ

 ಡಿಸೆಂಬರ್ 11

 ಬೆಂಗಳೂರು : ನಂದಿನಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ವಿನೂತನ ತ್ಯಾಜ್ಯ ಬೇರ್ಪಡಿಸುವಿಕೆ ಹಾಗೂ ವಿಲೇವಾರಿ ವ್ಯವಸ್ಥೆ ಜಾರಿಗೊಳಿಸಿದ್ದು ಜನಪ್ರಿಯತೆ ಗಳಿಸುತ್ತಿದೆ.
ಬೆಂಗಳೂರಿನ ಅನೇಕ ಬಡಾವಣೆಗಳು ತ್ಯಾಜ್ಯದ ವೈಜ್ಞಾನಿಕ ಮತ್ತು ಸಮರ್ಪಕ ನಿರ್ವಹಣೆಗೆ ಪರಿತಪಿಸುತ್ತಿದೆ, ಆದರೆ ನಂದಿನಿ ಲೇಔಟ್ ನಿವಾಸಿಗಳ ಸಂಘ ಕಳೆದ ಒಂದು ವರ್ಷದಿಂದ 'ಕಸ ಮಾರಿ, ದುಡ್ಡು ಮಾಡಿ' ಎಂಬ ಘೋಷ ವಾಕ್ಯವನ್ನು ಬಿಬಿಎಂಪಿ ಸಹಯೋಗದಲ್ಲಿ ಅನುಷ್ಠಾನಗೊಳಿಸಿದೆ.
ಕಸ ಮಾರಿ ದುಡ್ಡು ಮಾಡಿ ಯೋಜನೆಯ ವೈಶಿಷ್ಟ್ಯತೆ ಎಂದರೆ ನಂದಿನಿ ಬಡಾವಣೆಯ ಸುಮಾರು ೨೦ ಸಾವಿರ ಮನೆಗಳು ತಮ್ಮ ಮನೆಯ ತ್ಯಾಜ್ಯಗಳನ್ನು ಸಮರ್ಪಕವಾಗಿ ಬೇರ್ಪಡಿಸಿ ಬಿಬಿಎಂಪಿಗೆ ಮಾರಾಟ ಮಾಡುವ ಮೂಲಕ ಗಣ ಗಳಿಸುತ್ತಿದ್ದಾರೆ. ದಿನಪತ್ರಿಕೆ ಪ್ರತಿ ಕೆಜಿಗೆ 8ರೂ. ಪ್ಲಾಸ್ಟಿಕ್ಗೆ 14 ರೂ. ಕಾರ್ಡ್ ಬೋರ್ಡ್ ಹಾಗೂ ಪುಸ್ತಕಗಳಿಗೆ ತಲಾ 5ರೂ. ಹೀಗೆ ನಾನಾ ರೀತಿಯ ತ್ಯಾಜ್ಯಕ್ಕೆ ನಾನಾ ದರವನ್ನು ಪಾಲಿಕೆ ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಘ ದರ ನಿಗದಿ ಮಾಡಿದೆ.
ಪ್ರತಿದಿನ ಬೆಳಗ್ಗೆ 11ಗಂಟೆಗೆ ಪೌರಕಾರ್ಮಿಕರು ತಮ್ ನಿತ್ಯದ ಕೆಲಸದ ನಂತರ ಮನೆಮನೆಗೆ ತೆರಳಿ ಬೇರ್ಪಟ್ಟ ತ್ಯಾಜ್ಯ ಸಂಗ್ರಹಿಸುತ್ತಾರೆ. ಇದೇ ವೇಳೆ ತ್ಯಾಜ್ಯಕ್ಕೆ ತಕ್ಕ ಹಣ ಪಾವತಿಸುತ್ತಾರೆ. ಈ ರೀತಿ ನಿತ್ಯ 20 ಸಾವಿರ ಮನೆಗಳಿಂದ90 ಸಾವಿರ ಜನಸಂಖ್ಯೆಯ ಬಡಾವಣೆಯಿಂದ 12 ಟನ್ ಕಸ ಸಂಗ್ರಹಿಸುವ ಪೌರ ಕಾರ್ಮಿಕರು ಪಾಲಿಕೆ ತೆರೆದಿರುವ ಕಸ ಸಂಗ್ರಹ ಕೇಂದ್ರಕ್ಕೆ ರವಾನಿಸುತ್ತಾರೆ.

 

    456 

"ಬೆಳಗೆರೆ ಕನ್ನಡದ ಸನ್ನಿ ಲಿಯೋನ್": ಅಗ್ನಿ ವ್ಯಂಗ್ಯ

 ಡಿಸೆಂಬರ್.11

ಬೆಂಗಳೂರು:  ಸೆಕ್ಸ್ ಹಾಗೂ ಕ್ರೈಂ ಬಗ್ಗೆ ಜನರಿಗಿರುವ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡಿರುವ ರವಿ ಬೆಳಗೆರೆ ಕನ್ನಡದ ಸನ್ನಿ ಲಿಯೋನ್ ಎಂದು ಅಗ್ನಿ ಶ್ರೀಧರ್ ವ್ಯಂಗ್ಯವಾಡಿದ್ದಾರೆ.

ರವಿ ಬೆಳಗೆರೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿ ಶ್ರೀಧರ್, ಬೆಳಗೆರೆ 'ಪಾಪಿಗಳ ಲೋಕದಲ್ಲಿ' ಎಂದು ರೌಡಿಗಳ ಬಗ್ಗೆ ಬರೆಯುತ್ತಿದ್ದ, ಬರಹದ ಮೂಲಕವೇ ರೌಡಿಗಳ ನಡುವೆ ದ್ವೇಷ ಹುಟ್ಟು ಹಾಕ್ತಾಯಿದ್ದ ಎಂದು ಶ್ರೀಧರ್ ಆರೋಪ ಮಾಡಿದ್ದಾರೆ. ಲೇಔಟ್ ಮಂಜನ ಹತ್ಯೆಗೆ, ಜೇಡರಹಳ್ಳಿ ಕೃಷ್ಣಪ್ಪನ ದ್ವೇಷಕ್ಕೆ ಬೆಳಗೆರೆ ಕಾರಣ ಎಂಬ ಗಂಭೀರ ಆರೋಪವನ್ನು ಅಗ್ನಿ ಶ್ರೀಧರ್ ಮಾಡಿದ್ದಾರೆ.

 

 

 

 

    456 

ರವಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

 ಡಿಸೆಂಬರ್-11
ಬೆಂಗಳೂರು : ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಪತ್ರಕರ್ತ ರವಿ ಬೆಳೆಗೆರೆ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನವಾಗಿದೆ. ಆದರೆ ಹೆಚ್ಚಿನ ವಿಚಾರಣೆಗಾಗಿ ಪ್ರಕರಣ ಕುರಿತು ವಿಚಾರಣೆ ನಡೆಸಲು 1 ಗಂಟೆಗೆ ಮುಂದೂಡಿದೆ ಕೇಂದ್ರ ಅಪರಾಧ ವಿಭಾಗದಿಂದ ರವಿ ಬೆಳೆಗೆರೆ ಮೇಲೆ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 115 ರ ಅಡಿ ಅಪರಾಧಕ್ಕೆ ಪ್ರಚೋದನೆ ನೀಡಿದ ಆಧಾರದ ಮೇಲೆ ಕೇಸ್ ದಾಖಲಾಗಿದೆ. ಕೊಲೆ ಮಾಡಲು ಒತ್ತಡ ಹಾಗೂ ಶಸ್ತ್ರಾಸ್ತ್ರ ನೀಡಿರುವ ಆರೋಪ ಎದುರಿಸುತ್ತಿರುವ ರವಿ ಬೆಳೆಗೆರೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

 

 

    456 

ರವಿ ಜೈಲಲ್ಲಿ ಫೋನ್ ಮಾಡಿದ್ದಾದರೇ? ಅದು ತಪ್ಪು: ರಾಮಲಿಂಗಾ ರೆಡ್ಡಿ

 ಡಿಸೆಂಬರ್-11
ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಬಂಧನದಲ್ಲಿರುವ ರವಿ ಬೆಳಗೆರೆ ಅವರು ಬೇರೊಬ್ಬರಿಗೆ ಫೋನ್ ಮಾಡಿದ್ದಾರೆ ಎಂಬ ಬಗ್ಗೆ ಆಯುಕ್ತರಿಂದ ವರದಿ ಕೇಳಿದ್ದೇನೆ. ಒಂದು ವೇಳೆ ಅವರು ಕರೆ ಮಾಡಿದ್ದರೆ ಅದು ತಪ್ಪು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿಬೆಳಗೆರೆ ಪೊಲೀಸ್ ಜೀಪ್ನಲ್ಲಿ ಸಿಗರೇಟ್ ಸೇದುವುದು ಮತ್ತು ಸಿಗರೇಟ್ಗಾಗಿ ಹಠ ಹಿಡಿದಿರುವ ವಿಚಾರವನ್ನು ಟಿವಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆರೋಪಿಗಳಿಗೆ ಹೀಗೆ ಮಾಡಲು ಅವಕಾಶವಿಲ್ಲ. ಈ ವಿಚಾರದ ಬಗ್ಗೆ ಪೊಲೀಸರ ಜೊತೆ ಚರ್ಚಿಸುವುದಾಗಿ ಹೇಳಿದರು. ಸಿಸಿಬಿ ಕಸ್ಟಡಿಯಲ್ಲಿರುವಾಗಲೇ ರವಿ ಬೆಳಗೆರೆ, ಸುನಿಲ್ ಹೆಗ್ಗರವಳಿ ಅವರಿಗೆ ಕರೆ ಮಾಡಿರುವ ಬಗ್ಗೆ ಆಯುಕ್ತರಿಂದ ವರದಿ ಕೇಳಿದ್ದೇನೆ. ಒಂದು ವೇಳೆ ಅವರು ಕರೆ ಮಾಡಿದ್ದರೆ ಅದು ತಪ್ಪು. ಯಾರ ಮೊಬೈಲ್ನಿಂದ ಕರೆ ಮಾಡಿದ್ದಾರೋ ಆ ಬಗ್ಗೆಯೂ ವಿವರಣೆ ಕೇಳಿದ್ದೇನೆ ಎಂದು ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ಆರೋಪಕ್ಕೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ಯಾರ ಕಾಲದಲ್ಲಿ ಏನು ಆಗಿದೆ ಅಂತ ಚರ್ಚಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಗೋವಿಂದೇಗೌಡ ಕೊಲೆ ಪ್ರಕರಣದ ಬಗ್ಗೆ ಇವರು ಮಾತನಾಡುತ್ತಾರೆ. ಆದರೆ ಯಾರು ಮಾಡಿದ್ದಾರೆ ಎಂಬ ಬಗ್ಗೆ ಹೇಳುವುದಿಲ್ಲ ಎಂದು ತಿಳಿಸಿದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ದಿಕ್ಕು ತಪ್ಪಿಸಲು ರವಿಬೆಳಗೆರೆ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಇವರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿ ಹಂತಕರನ್ನು ಸಾಕ್ಷ್ಯಾಧಾರ ಸಮೇತ ಬಂಧಿಸುತ್ತೇವೆ ಎಂದು ಹೇಳಿದರು.

 

 

    231 

ರವಿ ಹೇಡಿಯಂಥ ಕೆಲಸ ಮಾಡಿದ್ದಾರೆ : ಹೆಗ್ಗರವಳ್ಳಿ

 ಡಿಸೆಂಬರ್-9

 ಬೆಂಗಳೂರು: ರವಿ ಬೆಳಗೆರೆಗೂ ಸುಪಾರಿ ಹಂತಕ ಶಶಿಧರನಿ ಮುಂಡೆವಾಡಿಗೂ ಯಾವುದೇ ವ್ಯತ್ಯಾಸವಿಲ್ಲ. ಇಬ್ಬರನ್ನೂ ಕರ್ನಾಟಕ ಪೊಲೀಸರು ಸಮನಾಗಿ ನೋಡುತ್ತಿದ್ದಾರೆ. ಕೊಲೆ ಮಾಡುವ ಹೇಡಿಯಂಥ ಕೆಲಸ ಇಬ್ಬರೂ ಮಾಡಿದ್ದಾರೆ ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಹದಿನಾರು ವರ್ಷಗಳ ಕಾಲ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ವರದಿಗಾರನಾಗಿ ದುಡಿದ ಸುನೀಲ್ ಹೆಗ್ಗರವಳ್ಳಿಯನ್ನು ಸುಪಾರಿ ಹಂತಕನಿಂದ ಕೊಲೆ ಮಾಡಿಸಲು ಯತ್ನಿಸಿದ ಆರೋಪದ ಮೇಲೆ ರವಿ ಬೆಳಗೆರೆಯನ್ನು ಸಿಟಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು, ರಾಜ್ಯದೆಲ್ಲೆಡೆ ಈ ಪ್ರಕರಣ ಸುದ್ದಿಗೆ ಗ್ರಾಸವಾಗಿದೆ.ಖಾಸಗಿ ಸುದ್ದಿ ಚಾನಲ್ಲಿಗೆ ನೀಡಿದ ಸಂದರ್ಶನದಲ್ಲಿ, ರವಿ ಬೆಳೆಗೆರೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುನೀಲ್ ಹೆಗ್ಗರವಳ್ಳಿ, ನನ್ನ ಕುಟುಂಬಕ್ಕೆ ಗೊತ್ತಿಲ್ಲದಂತೆ ಹತ್ಯೆಗೆ ಸಂಚು ರೂಪಿಸಿದ್ದರು, ಒಂದು ವೇಳೆ ಹತ್ಯೆ ನಡೆದಿದ್ದರೆ ನನ್ನ ಇಡೀ ಕುಟುಂಬ ಬೀದಿಗೆ ಬೀಳುತ್ತಿತ್ತು. ಅದೃಷ್ಟವಶಾತ್ ಹಾಗಾಗಲಿಲ್ಲ ಎಂದು ಅವರು ಹೇಳಿದ್ದಾರೆ.ರವಿ ಬೆಳಗೆರೆಗೆ ನೂರೆಂಟು ಗೆಳತಿಯರಿದ್ದಾರೆ. ನನಗೂ ಅವರ ಎರಡನೇ ಹೆಂಡತಿಗೂ ಯಾವುದೇ ರೀತಿಯ ಅನೈತಿಕ ಸಂಬಂಧವಿರಲಿಲ್ಲ. ನನ್ನ ಅವರ ನಡುವೆ ಕಚೇರಿಗೆ ಸಂಬಂಧಿಸಿದಂತೆ ವ್ಯಾವಹಾರಿಕ ಸಂಬಂಧ ಮಾತ್ರ ಇತ್ತು. ಅವರ ಗರ್ಲ್ ಫ್ರೆಂಡ್ ಗಳಲ್ಲಿ ನನಗಾಗದವರು ಯಾರೋ ಈ ಅನೈತಿಕ ಸಂಬಂಧದ ಬಗ್ಗೆ ರವಿ ಅವರ ಕಿವಿಯೂದಿದ್ದಾರೆ ಎಂದು ಸುನೀಲ್ ಆರೋಪಿಸಿದರು.ಜೀವ ಬೆದರಿಕೆ, ರಕ್ಷಣೆಗೆ ಕೋರಿಕೆ : ಸುನೀಲ್ ಹೆಗ್ಗರವಳ್ಳಿ ಅವರ ಜೀವಕ್ಕೆ ಅಪಾಯವಿದ್ದು, ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಸುನೀಲ್ ಅವರ ತಂದೆ ನಂಜೇಗೌಡ ಮತ್ತು ಪತ್ನಿ ಸುಚಿತಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೋರಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದವರಾದ ಸುನೀಲ್ ಅವರು, ರವಿ ಬೆಳಗೆರೆಯವರು ಟಿವಿ ಚಾನಲ್ಲಿಗಾಗಿ 'ಕ್ರೈಂ ಡೈರಿ' ಸಂಚಿಕೆಗಳನ್ನು ಮಾಡಿದ್ದಾಗ, ಅವರಿಗೆ ವರದಿಗಳನ್ನು ಮಾಡಿಕೊಟ್ಟಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಆಗದಿದ್ದಾಗ ಸುನೀಲ್ ಅವರು ಹಾಯ್ ಬೆಂಗಳೂರ್ ಪತ್ರಿಕೆಯನ್ನು ತೊರೆದಿದ್ದರು.

 

                                                           

ಚುನಾವಣಾ ಕಣಕ್ಕೆ ಸ್ವಾಮೀಜಿಗಳ ದಂಡು

ಡಿಸೆಂಬರ್.9

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ದಿನ ಕಳೆದಂತೆ ರಂಗೇರುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಈ ಬಾರಿ ಚುನಾವಣೆಯಲ್ಲೂ ಬಣ್ಣವೂ ಬದಲಾಗುತ್ತದೆ. ಎಲ್ಲವೂ ಕೇಸರಿಮಯವಾಗುವ ಲಕ್ಷಣಗಳಿವೆ. ಕೇಸರಿಮಯ ಎಂದರೆ ಬಿಜೆಪಿಮಯ ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಸ್ವಾಮೀಜಿಗಳ ದಂಡೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಸ್ವಾಮೀಜಿಗಳು ರಾಜಕೀಯದಲ್ಲಿ ಒಂದು ಕೈ ನೋಡಲು ಸಜ್ಜಾಗಿದ್ದಾರೆ. ಈಗಾಗಲೇ ಹಲವಾರು ಸ್ವಾಮೀಜಿಗಳು ಈ ತಯಾರಿಯಲ್ಲಿದ್ದಾರೆ.
ಮಂಗಳೂರಿನ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಧಾರವಾಡದ ಮಾನಗುಂಡಿಯ ಬಸವಾನಂದ ಸ್ವಾಮೀಜಿ, ಚಿತ್ರದುರ್ಗದ ಶರಣ ಮಾದಾರ ಗುರು ಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಈಗಾಗಲೇ ರಾಜಕೀಯಕ್ಕೆ ಬರುವ ಸಿದ್ಧತೆ ನಡೆಸಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಸ್ವಾಮೀಜಿಗಳು ರಾಜಕೀಯ ಚದುರಂಗದಾಟ ಆಡಲು ತಯಾರಾಗಿದ್ದಾರೆ. ಬಿಜೆಪಿ ಈ ಬಾರಿ ಕೆಲವು ಸ್ವಾಮೀಜಿಗಳನ್ನು ಕಣಕ್ಕಿಳಿಸಬೇಕು ಎಂಬ ಚಿಂತನೆಯಲ್ಲಿದೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಕೆಲವು ಸ್ವಾಮೀಜಿಗಳ ಜತೆ ಬಿಜೆಪಿ ನಾಯಕರು ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ.
ಬಿಜೆಪಿಯ ತಂತ್ರಕ್ಕೆ ಕಾಂಗ್ರೆಸ್ ಕೂಡ ಇದೇ ಪ್ರತಿತಂತ್ರ ಮಾಡುತ್ತಿದೆ. ಸ್ವಾಮೀಜಿಗಳು ರಾಜಕೀಯಕ್ಕೆ ಧುಮಕುಲು ಕಾರಣ ಏನು ಎನ್ನುವುದಕ್ಕೆ ಇವರು ಕಾರಣವನ್ನೂ ನೀಡುತ್ತಾರೆ. ರಾಜಕಾರಣಿಗಳು ಒಳಿತನ್ನು ಮಾಡುತ್ತಿಲ್ಲ. ನಾಗರಿಕರ ಶ್ರೇಯಸ್ಸಿಗೆ ಪ್ರಯತ್ನ ಪಡುತ್ತಿಲ್ಲ. ಇಂಥ ಸಮಯದಲ್ಲಿ ರಾಜಕೀಯಕ್ಕೆ ಧುಮುಕುವುದು ಅನಿವಾರ್ಯವಾಗುತ್ತಿದೆ. ರಾಜಕೀಯ ಎಂದರೆ ಎಲ್ಲರಿಗೂ ಕೆಟ್ಟದು ಎಂಬ ಭಾವನೆ ಮೂಡಿದೆ. ಅದನ್ನು ಶುಚಿಗೊಳಿಸುವುದೇ ನನ್ನ ಗುರಿ ಎಂದು ಬಸವಾನಂದ ಸ್ವಾಮೀಜಿ ಹೇಳಿದ್ದಾರೆ.

 

 

                                                   

ವರ್ಷದ ವಿತರಣೆಯಲ್ಲಿ ಅಕ್ರಮದ ವಾಸನೆ

ಡಿಸೆಂಬರ್.9 

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ವಿವಿಧ ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಲ್ಯಾಪ್ಟಾಪ್ ಸಿಗುವುದೇ ಇಲ್ಲ ಎನ್ನುವ ಪರಿಸ್ಥಿತಿ ಒಂದೆಡೆಯಾದರೆ, ಕಳೆದ ಸಾಲಿನಲ್ಲಿ ಸೇರಿಕೊಂಡ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಇನ್ನೂ ಲ್ಯಾಪ್ಟಾಪ್ ಪೂರೈಸಲು ಸಾಧ್ಯವಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾರ್ಷಿಕ ಆದಾಯ 2.50 ಲಕ್ಷದ ಒಳಗಿರುವ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2016-17ನೇ ಸಾಲಿನಲ್ಲಿ ಎಸ್ ಸಿಪಿ, ಟಿ.ಎಸ್.ಪಿ ಯೋಜನೆಯಡಿ ಉಚಿತ ಲ್ಯಾಪ್ಟಾಪ್ ವಿತರಣೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ 25,276 ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ 9726 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಒದಗಿಸಲು ವರ್ಷದ ಹಿಂದೆಯೇ ಟೆಂಡರ್ ಆಹ್ವಾನಿಸಲಾಗಿತ್ತು.
ಒಂದೇ ರೀತಿಯ ಇ-ಕಂಟೆಂಟ್ ತುಂಬಿರುವ ಲ್ಯಾಪ್ ಟಾಪ್ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಒಂದೇ ಬಿಡ್ ದಾರರು ಎರಡು ದರವನ್ನು ವಿಧಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆಯ ವಿದ್ಯಾರ್ಥಿಯ ಒಂದು ಲ್ಯಾಪ್ಟಾಪ್ಗೆ 14,490 ರೂ. ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ವಿದ್ಯಾರ್ಥಿಯ ಒಂದು ಲ್ಯಾಪ್ಟಾಪ್ಗೆ 17,892 ರೂ. ಬಿಡ್ ಮಾಡಿದ್ದರು.
ಲ್ಯಾಪ್ಟಾಪ್ ಮಾದರಿ ಹಾಗೂ ಲ್ಯಾಪ್ಟಾಪ್ ಉತ್ಪಾದನೆ ಮಾಡುವ ಸಂಸ್ಥೆ ಒಂದೇ ಆಗಿದ್ದರೂ, ತಾಂತ್ರಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ತಲಾ ಒಂದು ಲ್ಯಾಪ್ ಟಾಪ್ ಬೆಲೆಯಲ್ಲಿ 3402 ರೂ. ಹೆಚ್ಚಿಸಿರುವುದಕ್ಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ 3.31 ಕೋಟಿ ರೂ.ಗಳಷ್ಟು ಹೆಚ್ಚುವರಿ ಹೊರೆಯಾಗಲಿದೆ
ಎಂದು ಸರ್ಕಾರದ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್ಟಾಪ್ಗ್ಳಲ್ಲೇ ಇನ್ನೂ ಶೇ.25 ಲ್ಯಾಪ್ಟಾಪ್ಗ್ಳನ್ನು ಹೆಚ್ಚುವರಿಯಾಗಿ ಪಡೆದು, ತಾಂತ್ರಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿದೆ. ಅದರಂತೆ ಒಂದೇ ಟೆಂಡರ್ ಅಡಿಯಲ್ಲಿ ಲ್ಯಾಪ್ಟಾಪ್ ಖರೀದಿಸಿ ಕಳೆದ ವರ್ಷದ ಎಸ್ಸಿ, ಎಸ್ಟಿ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸಲು ನಿರ್ಧರಿಸಿದೆ. ಇದರಿಂದ ಸರ್ಕಾರ ಹೆಚ್ಚುವರಿ ಹಣ ಭರಿಸುವುದು ತಪ್ಪಲಿದೆ.

 

                                                       

ಹರಿತವಾದ ಲೇಖನಿ ಕೈಯಲ್ಲಿ ಗುಂಡಿನ ದಾಳಿ

ಡಿಸೆಂಬರ್.9 

ಬೆಂಗಳೂರು: ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ "ಹಾಯ್ ಬೆಂಗಳೂರು' ಪತ್ರಿಕೆ ಸಂಪಾದಕ ರವಿ ಬೆಳೆಗೆರೆಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ "ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ರವಿ ಬೆಳೆಗೆರೆ ಬಳಿಯೇ ಕೆಲಸ ಮಾಡುತ್ತಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯನ್ನು ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲು ವಿಜಯಪುರದ ಶಶಿಧರ್ ರಾಮಚಂದ್ರ ಮುಂಡೆವಾಡಿ ಎಂಬುವರಿಗೆ 30 ಲಕ್ಷ ರೂ.ಗೆ ಸುಪಾರಿ ನೀಡಿ ಮುಂಗಡವಾಗಿ 15 ಸಾವಿರ ರೂ. ಜತೆಗೆ ಒಂದು ಗನ್ ಹಾಗೂ ನಾಲ್ಕು ಗುಂಡು ಸಹ ನೀಡಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ.
ಶಶಿಧರ್ ರಾಮಚಂದ್ರ ಮುಂಡೆವಾಡಿ ಭೀಮಾ ತೀರದ ಹಂತಕ ಖ್ಯಾತಿಯ ವಿಜಯಪುರದ ಚಂದಪ್ಪ ಹರಿಜನ ಸಹಚರನಾಗಿದ್ದ. ಈ ಹಿಂದೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಭೀಮಾ ತೀರದ ಹಂತಕರ ಬಗ್ಗೆ ವರದಿ ಮಾಡಲು ರವಿಬೆಳಗೆರೆ ವಿಜಯಪುರಕ್ಕೆ ಹೋಗಿದ್ದಾಗ ಪರಿಚಯವಾಗಿದ್ದ ಎಂದು ಹೇಳಲಾಗಿದೆ.
ಶುಕ್ರವಾರ ಪದ್ಮನಾಭನಗರದಲ್ಲಿರುವ ಹಾಯ್ ಬೆಂಗಳೂರ್ ಕಚೇರಿಯಿಂದ ರವಿ ಬೆಳಗೆರೆಯನ್ನು ಬಂಧಿಸಿ ಸಿಸಿಬಿ ಕಚೇರಿಗೆ ಕರೆತಂದು ಪ್ರಾಥಮಿಕ ವಿಚಾರಣೆ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸತೀಶ್ಕುಮಾರ್ ತಿಳಿಸಿದ್ದಾರೆ.
ರವಿ ಬೆಳಗೆರೆ ಅವರ ಕಚೇರಿಯಲ್ಲಿ ಒಂದು ರಿವಾಲ್ವಾರ್, 53 ಜೀವಂತ ಗುಂಡುಗಳು, ಒಂದು ಡಬ್ಬಲ್ ಬ್ಯಾರೆಲ್ ಗನ್, 41 ಜೀವಂತ ಗುಂಡುಗಳು, 1.5 ಅಡಿ ಉದ್ದ ಅಗಲದ ಆಮೆ ಚಿಪ್ಪು, ಜಿಂಕೆ ಚರ್ಮ ವಶಪಡಿಸಿಕೊಳ್ಳಲಾಗಿದೆ. ಅವರ ನಿವಾಸಕ್ಕೂ ಕರೆದೊಯ್ದು ಕೆಲವು ದಾಖಲೆ ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ.

 

 
 

ನಗರದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾಹಿರ್ ಹುಸೇನ್ ಅಲಿಯಾಸ್ ಅನೂಪ್ಗೌಡ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ವಿಜಯಪುರದ ಶಶಿಧರ್ ರಾಮಚಂದ್ರ ಮುಂಡೆವಾಡಿ ಸಹ ನಾಡಪಿಸ್ತೂಲ್ ಮತ್ತು ಎರಡು ಜೀವಂತ ಗುಂಡು ಪಡೆದಿರುವುದು ಪತ್ತೆಯಾಗಿದೆ. ಶಶಿಧರ್ನನ್ನು ಬಂಧಿಸಿದಾಗ ರವಿ ಬೆಳೆಗೆರೆ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ವಿಚಾರ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶಶಿಧರ್ ಮುಂಡೆವಾಡಿ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ನ್ಯಾಯಾಲಯದಿಂದ ಸರ್ಚ್ವಾರೆಂಟ್ ಪಡೆದಕೊಂಡು ಎರಡು ದಿನಗಳ ಹಿಂದೆಯಷ್ಟೇ ದಾಂಡೇಲಿಯಿಂದ ಆಗಮಿಸಿದ್ದ ರವಿಬೆಳಗೆರೆಯನ್ನು ಶುಕ್ರವಾರ ಬೆಳಗ್ಗೆ "ಹಾಯ್ ಬೆಂಗಳೂರು' ಪತ್ರಿಕೆಯ ಕಚೇರಿಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಬಂಧಿಸಿದರು. 

ಸುಫಾರಿ ಕೊಟ್ಟಿದ್ದು ನಿಜ
ರವಿಬೆಳಗೆರೆ ಮತ್ತು ಸುನೀಲ್ ಹೆಗ್ಗರವಳ್ಳಿ ನಡುವೆ ವೈಯಕ್ತಿಕ ವಿಚಾರವಾಗಿ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ರವಿಬೆಳಗೆರೆ ಆ.28ರಂದು ನನ್ನ ಸ್ನೇಹಿತ ವಿಜು ಬಡಿಗೇರ್ ಹಾಗೂ ನನ್ನನ್ನು ಕಚೇರಿಗೆ ಕರೆಸಿಕೊಂಡರು. ಒಂದು ಗನ್ ಮತ್ತು ನಾಲ್ಕು ಜೀವಂತ ಗುಂಡುಗಳು ಹಾಗೂ ಒಂದು ಚಾಕು ನೀಡಿ "ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಹೆಗ್ಗರವಳ್ಳಿ ನನಗೆ ದ್ರೋಹವೆಸಗಿದ್ದಾನೆ. ಆತನನ್ನು ಕೊಲ್ಲಬೇಕು. ನಿನಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇನೆ' ಎಂದಿದ್ದರು. ಇದಕ್ಕಾಗಿ ಮುಂಗಡವಾಗಿ 15 ಸಾವಿರ ರೂ.ಕೂಡ ನೀಡಿದ್ದರು. ಬಳಿಕ ರವಿ ಬೆಳಗೆರೆ ಕಚೇರಿಯ ಒಬ್ಬ ಯುವಕನನ್ನು ನಮ್ಮೊಂದಿಗೆ ಕಳುಹಿಸಿ ಉತ್ತರಹಳ್ಳಿಯಲ್ಲಿರುವ ಸುನೀಲ್ ಹೆಗ್ಗರವಳ್ಳಿ ಮನೆಯನ್ನು ತೋರಿಸಿದ್ದರು.
ಬಳಿಕ ನಾನು ಹಾಗೂ ವಿಜು ಬಡಿಗೇರ್, ಸುನೀಲ್ನನ್ನು ಕೊಲ್ಲಲು ಆತನ ಮನೆ ಬಳಿ ರಾತ್ರಿ ಕಾಯುತ್ತಿದ್ದೆವು. ಆದರೆ, ಆತ ಅಂದು ತಪ್ಪಿಸಿಕೊಂಡ ಹೀಗಾಗಿ ಹತ್ಯೆ ಮಾಡಲು ಸಾಧ್ಯವಾಗಲಿಲ್ಲ. ಅನಂತರ ಗನ್ ಮತ್ತು ಗುಂಡುಗಳನ್ನು ರವಿ ಬೆಳಗೆರೆ ಸೂಚನೆ ಮೇರೆಗೆ ವಾಪಸ್ ಕೊಟ್ಟು ಒಂದು ತಿಂಗಳ ನಂತರ ಕೆಲಸ ಮುಗಿಸಿಕೊಡುವುದಾಗಿ ಹೇಳಿ ವಿಜಯಪುರಕ್ಕೆ ವಾಪಸ್ ಹೋದೆವು ಎಂದು ಪ್ರಾಥಮಿಕ ಹೇಳಿಕೆಯಲ್ಲಿ ಶಶಿಧರ್ ರಾಮಚಂದ್ರ ಮುಂಡೆವಾಡಿ ತಿಳಿಸಿದ್ದಾನೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ಶಾರ್ಪ್ಶೂಟರ್ ಶಶಿಧರ್
ಶಶಿಧರ್ ಒಬ್ಬ ಶಾರ್ಪ್ಶೂಟರ್. ಈತನ ವಿರುದ್ಧ 2006ರಲ್ಲಿ ಮುತ್ತು ಮಾಸ್ತರ್ ಎಂಬಾತನ ಹತ್ಯೆ, 2013ರಲ್ಲಿ ಬಸಪ್ಪ ಹರಿಜನ್ ಕೊಲೆ, 2014ರಲ್ಲಿ ಸ್ನೇಹಿತ ಸುರೇಶ್ ಲಾಳಸಂಗಿ ಕೊಲೆ ಪ್ರಕರಣಗಳು ದಾಖಲಾಗಿದ್ದವು. 2016ರಲ್ಲಿ ಈತನ ವಿರುದ್ಧ ಇಂಡಿ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ 2017ರಲ್ಲಿ ಮಹಾರಾಷ್ಟ್ರದ ಮೀರಜ್ನ ಗಾಂಧಿಚೌಕ್ ಠಾಣೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು ಎಂದು ರವಿ ಬೆಳಗೆರೆ ನನಗೆ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ. ಹೀಗಾಗಿ, ಪ್ರಕರಣದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಆದರೆ, ರವಿ ಬೆಳಗೆರೆ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಒಂದು ವೇಳೆ ಬಂಧನಕ್ಕೆ ಒಳಗಾದರೆ, ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ನೀಡಬೇಕು.
- ದಿವಾಕರ್, ರವಿ ಬೆಳಗೆರೆ ಪರ ವಕೀಲ
ನನ್ನನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ನೀಡಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದಾಗ, ನನಗೆ ಒಂದು ಕ್ಷಣ ಶಾಕ್ ಆಯ್ತು. ಹಿಂದಿನ ಘಟನೆಗಳ ಮೆಲುಕು ಹಾಕಿದಾಗ, ಇಂತಹದ್ದೊಂದು ಯತ್ನ ನಡೆದಿದೆ ಅನ್ನಿಸಿತು."ಸಿಸಿಬಿ ಅಧಿಕಾರಿಗಳು ತಮ್ಮ ಕಚೇರಿಗೆ ಕರೆದು, ರವಿ ಬೆಳಗೆರೆ ಅವರು ನನ್ನ ಕೊಲೆಗಾಗಿ ಶಶಿಧರ ಮಂಡೆವಾಡಿ ಎಂಬುವನಿಗೆ ಸುಪಾರಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ರವಿ ಬೆಳಗೆರೆ ಅವರು ತಪ್ಪು ತಿಳಿವಳಿಕೆಯಿಂದ ಈ ಯತ್ನ ನಡೆಸಿರಬಹುದು ಅನಿಸಿತು.
- ಸುನೀಲ್ ಹೆಗ್ಗರವಳ್ಳಿ
ಗೌರಿ ಹತ್ಯೆಗೂ ಮತ್ತು ರವಿ ಬೆಳಗೆರೆ ಪ್ರಕರಣಕ್ಕೂ ಸಂಬಂಧ ಇಲ್ಲ. ಶಶಿಧರ್ ಮಂಡೆವಾಡಿ ಓರ್ವ ಸುಪಾರಿ ಕಿಲ್ಲರ್ ಆಗಿದ್ದು, ವಿಚಾರಣೆ ನಡೆಸುತ್ತಿರುವಾಗ ರವಿ ಬೆಳಗೆರೆ ಪ್ರಕರಣ ಬೆಳಕಿಗೆ ಬಂದಿದೆ ಅಷ್ಟೇ. ಶಶಿಧರ್ ಬಳಸಿದ ಗನ್ ಅನ್ನು ಫೋರೆನ್ಸಿಕ್ ಲ್ಯಾಬ್ಗ ಕಳುಹಿಸಲಾಗಿದೆ. ವರದಿ ಬಂದ ನಂತರ ಆ ಗನ್ ಎಲ್ಲೆಲ್ಲಿ ಬಳಸಿದ್ದನು ಎಂಬುದು ಗೊತ್ತಾಗಲಿದೆ.
- ರಾಮಲಿಂಗಾ ರೆಡ್ಡಿ, ಗೃಹ ಸಚಿವ
ಗೌರಿ ಹತ್ಯೆ ಪ್ರಕರಣ ವಿಷಯಾಂತರ ಮಾಡಲು ಈ ತಂತ್ರ. ನನ್ನ ತಂದೆ ರವಿ ಬೆಳಗೆರೆ ಹಾಗೂ ಸುನೀಲ್ ನಡುವೆ ಯಾವುದೇ ವೈಮನಸ್ಸು ಇಲ್ಲ
- ಭಾವನಾ ಬೆಳಗೆರೆ, ರವಿ ಬೆಳಗೆರೆ ಪುತ್ರಿ
ಸುಪಾರಿ ಕಿಲ್ಲರ್ ಶಶಿಧರ್ನ ವಿಚಾರಣೆ ವೇಳೆ ಪತ್ರಕರ್ತ ರವಿ ಬೆಳಗೆರೆ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಇದನ್ನು ಆಧರಿಸಿ ಬೆಳಿಗ್ಗೆ ರವಿ ಬೆಳಗೆರೆ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸುಪಾರಿ ನೀಡಿರುವ ಬಗ್ಗೆ ಮಾಹಿತಿ. ರವಿ ಬೆಳಗೆರೆ ಅವರನ್ನು 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು.
- ಸತೀಶ್ಕುಮಾರ್, ಜಂಟಿ ಪೊಲೀಸ್ ಆಯುಕ್ತ, ಸಿಸಿಬಿ

 

ಹಕ್ಕುಚ್ಯುತಿ ಪ್ರಕರಣದಲ್ಲೂ ಬಂಧನ ಭೀತಿ
ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದ ಮೇರೆಗೆ ರವಿ ಬೆಳೆಗೆರೆ ಅವರನ್ನು ಬಂಧಿಸಲು ಒಮ್ಮೆ ಪೊಲೀಸರು ಮುಂದಾಗಿದ್ದರು. ನ್ಯಾಯಾಲಯ ಮಧ್ಯಪ್ರವೇಶದಿಂದ ಸ್ಪೀಕರ್ ಆದೇಶ ಪರಿಶೀಲನೆಗೆ ಮನವಿ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಎರಡನೇ ಬಾರಿ ಇದೇ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಈ ಹಿಂದೆ ಕೈಗೊಂಡಿದ್ದ ತೀರ್ಮಾನವೇ ಅಂತಿಮ. ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಪರಿಶೀಲನೆ ಮನವಿ ತಳ್ಳಿಹಾಕಲಾಗಿತ್ತು. ಹೀಗಾಗಿ, ಆ ಪ್ರಕರಣದಲ್ಲಿ ರವಿ ಬೆಳೆಗೆರೆಗೆ ಬಂಧನ ಭೀತಿಯಿತ್ತು. ಶಾಕ್ ನೀಡಿದ ಸುಪಾರಿ ಸುದ್ದಿ ಸಿಸಿಬಿ ಅಧಿಕಾರಿಗಳಿಗೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹೇಳಿಕೆ.
ಹತ್ಯೆಗೆ ಸುಪಾರಿ ನೀಡಿದ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆವರು, "ಸಿಸಿಬಿ ಅಧಿಕಾರಿಗಳು ತಮ್ಮ ಕಚೇರಿಗೆ ಕರೆದು, ರವಿ ಬೆಳಗೆರೆ ಅವರು ನನ್ನ ಕೊಲೆಗಾಗಿ ಶಶಿಧರ ಮಂಡೆವಾಡಿ ಎಂಬುವನಿಗೆ ಸುಪಾರಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಆಗ, ಹಿಂದಿನ ಘಟನೆಗಳ ಮೆಲುಕು ಹಾಕಿದಾಗ, ರವಿ ಬೆಳಗೆರೆ ಅವರು ತಪ್ಪು ತಿಳಿವಳಿಕೆಯಿಂದ ಈ ಯತ್ನ ನಡೆಸಿರಬಹುದು ಅನಿಸಿತು ಎಂದು ಹೇಳಿದರು. ಈ ಹಿಂದೆ ಶಶಿಧರ್ ಮಂಡೆವಾಡಿ ನನ್ನ ಮನೆ ಕಡೆಗೆ ಓಡಾಡಿದ್ದು, ಮಂಜುನಾಥ್ ಎಂಬುವರಿಂದ ಕೊರಿರ್ ಬಂದಿದ್ದು, ರವಿ ಬೆಳಗೆರೆ ನನ್ನನ್ನು ಕಚೇರಿಗೆ ಕರೆಸಿಕೊಂಡಾಗ, ಅಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಇದ್ದದ್ದು ಸೇರಿದಂತೆ ಹಲವು ಘಟನೆಗಳು ನನ್ನ ಕೊಲೆಗೆ ಸುಪಾರಿ ಕೊಟ್ಟಿರುವುದನ್ನು ಪುಷ್ಟೀಕರಿಸುತ್ತವೆ ಎಂದು ಹೇಳಿದರು.
ಆದರೆ, ರವಿ ಬೆಳಗೆರೆ ಅವರಿಗೆ ಇಂತಹ ಆಲೋಚನೆ ಯಾಕೆ ಬಂತು ಎಂಬುದನ್ನು ಸ್ವತಃ ಅವರೇ ಪೊಲೀಸರ ಮುಂದೆ ಬಾಯಿಬಿಡಬೇಕು ಎಂದು ತಿಳಿಸಿದರು. ಈ ಹಿಂದೆ ಹಾಯ್ ಬೆಂಗಳೂರು ಪತ್ರಿಕೆ ತೊರೆದಿದ್ದೆ, ಸ್ವತಃ ರವಿ ಬೆಳಗೆರೆ ಕರೆ ಮಾಡಿ, ನೀನು ವಾಪಸ್ ಬಾ. ಪದೇ ಪದೇ ಫೋನ್ ಮಾಡಿ, ಉತ್ತಮ ಬರಹಗಾರನಾದ ನೀನು ಪತ್ರಿಕೋದ್ಯಮದಲ್ಲಿ ಇರಬೇಕು. ಹಾಯ್ ಬೆಂಗಳೂರು ನೀನೇ ನಡೆಸಿಕೊಂಡು ಹೋಗಬೇಕು' ಎಂದು ನಿರಂತರವಾಗಿ ಒತ್ತಡ ಹಾಕಿದ್ದರು. "ನಂತರ ಈ ಬಗ್ಗೆ ನಾನು ಈ ವಿಚಾರ ಫೇಸ್ಬುಕ್ನಲ್ಲಿ ಹಾಕಿದಾಗ, ನೂರಾರು ಸ್ನೇಹಿತರು ವಾಪಸ್ ಹೋಗು ಎಂದು ಸಲಹೆ ನೀಡಿದರು. ಅದರಂತೆ ನಾನು ಹಾಯ್ ಬೆಂಗಳೂರಿಗೆ ವಾಪಸ್ ಹೋದೆ ಎಂದು ಹೇಳಿದರು. ಸುನೀಲ್ ಹೆಗ್ಗರವಳ್ಳಿ ಹಲವು ವರ್ಷಗಳಿಂದ ರವಿ ಬೆಳಗೆರೆ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಒಂದು ವರ್ಷದಿಂದ ಪರಸ್ಪರ ದೂರವಾಗಿದ್ದರು. ಆಗಸ್ಟ್ನಲ್ಲಿ ಸುನೀಲ್ ಕೊಲೆಗೆ ರವಿ ಬೆಳಗೆರೆ ಸುಪಾರಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
                                                      

 

     

 

44  5.3 ಕೋಟಿ ರೂ.ಮೌಲ್ಯದ ಆಸ್ತಿ ದಾಖಲೆಯನ್ನು ಲಗತ್ತಿಸಿದ ಇಡಿ
 ಡಿಸೆಂಬರ್-9
ಬೆಂಗಳೂರು: ಕರ್ನಾಟಕ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಾಗಿರುವ ವಿ.ಭಾಸ್ಕರ್ ಅವರಿಗೆ ಸೇರಿದ್ದು ಎನ್ನಲಾದ 5.3 ಕೋಟಿ ರೂಪಾಯಿ ಆಸ್ತಿ ಮೊತ್ತದ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಲಗತ್ತಿಸಿದೆ.
ನಿನ್ನೆ ಜಾರಿ ನಿರ್ದೇಶನಾಲಯ ಹೊರಡಿಸಿರುವ ಹೇಳಿಕೆ ಪ್ರಕಾರ, ಕರ್ನಾಟಕ ಲೋಕಾಯುಕ್ತದಲ್ಲಿ ಕೇಳಿಬಂದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಕೇಸನ್ನು ವಿಶೇಷ ತನಿಖಾ ತಂಡ ದಾಖಲಿಸಿತ್ತು. ಅಂದಿನ ಲೋಕಾಯುಕ್ತ ವಿ,ಭಾಸ್ಕರ್ ಅವರ ಪುತ್ರ ವೈ.ಅಶ್ವಿನ್, ನ್ಯಾಯಮೂರ್ತಿ ಭಾಸ್ಕರ್ ರಾವ್ ಮತ್ತು ಇತರರ ವಿರುದ್ಧ ವಿಶೇಷ ತನಿಖಾ ತಂಡ ನಾಲ್ಕು ಆರೋಪಪಟ್ಟಿ ಸಲ್ಲಿಸಿತ್ತು. ಈ ಹಿಂದೆ ಅಕ್ರಮ ಹಣ ವರ್ಗಾವಣೆ ತಡೆಗಟ್ಟುವ ಕಾಯ್ದೆಯಡಿ(ಪಿಎಂಎಲ್ಎ) 6.2 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ದಾಖಲೆಗಳನ್ನು ಒದಗಿಸಿತ್ತು.
ಪಿಎಂಎಲ್ಎ ಕಾಯ್ದೆಯಡಿ ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭದಲ್ಲಿ ವಿ.ಭಾಸ್ಕರ್ ಅವರು 5.3 ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಆಸ್ತಿಗಳನ್ನು ಹೊಂದಿದ್ದಾರೆ. ಅದನ್ನು ಕ್ರಿಮಿನಲ್ ಪಿತೂರಿ, ಬೆದರಿಕೆ ಮತ್ತು ಸುಲಿಗೆ ಮೂಲಕ ಅನೇಕ ಸರ್ಕಾರಿ ಅಧಿಕಾರಿಗಳಿಂದ ಸಹ ಆರೋಪಿಗಳ ಜೊತೆ ಸೇರಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿರುವ ಪ್ರಸ್ತುತ ಮಾರುಕಟ್ಟೆ ಮೊತ್ತದಲ್ಲಿ 2.6 ಕೋಟಿ ರೂಪಾಯಿ ಮೌಲ್ಯದ ಆರು ವಾಣಿಜ್ಯ ಮತ್ತು ವಸತಿ ಆಸ್ತಿಗಳನ್ನು ಹಾಗೂ ವಿವಿಧ ಬ್ಯಾಂಕುಗಳಲ್ಲಿ 2.75 ಕೋಟಿ ರೂಪಾಯಿ ಹಣ ಠೇವಣಿಯಿಡಲಾಗಿದೆ ಎಂಬ ಬಗ್ಗೆ ದಾಖಲೆಗಳನ್ನು ಕೂಡ ನೀಡಿದೆ. ಒಟ್ಟಾರೆ ಜಾರಿ ನಿರ್ದೇಶನಾಲಯ ತೋರಿಸಿದ ದಾಖಲೆಗಳಲ್ಲಿ ಆಸ್ತಿ ಮೌಲ್ಯ ಒಟ್ಟಾರೆಯಾಗಿ 11.5 ಕೋಟಿಯಷ್ಟಾಗಿದೆ. ಪಿಎಂಎಲ್ಎ ಕಾಯ್ದೆಯಡಿ ವಿಚಾರಣೆ ಮುಂದುವರಿಯಲಿದೆ ಎಂದು ನಿರ್ದೇಶನಾಲಯ ತಿಳಿಸಿದೆ.
ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ವಿರುದ್ಧ ವಿಶೇಷ ತನಿಖಾ ತಂಡ ಆರೋಪಪಟ್ಟಿ ಸಲ್ಲಿಸಿತ್ತು. ಅಲ್ಲಿಂದ ನಂತರ ಭಾಸ್ಕರ್ ರಾವ್ ಲೋಕಾಯುಕ್ತ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈ ಎಲ್ಲಾ ಕೇಸುಗಳ ವಿಚಾರಣೆ ಬೆಂಗಳೂರಿನ ಲೋಕಾಯುಕ್ತ ವಿಶೇಷ ಕೋರ್ಟ್ ನಲ್ಲಿ ನಡೆಯುತ್ತಿದೆ.

 

 

                                              

ಮಹಿಳೆಯರೇ ಬೆತ್ತಲೆ ಮೆರವಣಿಗೆ ಮಾಡಿದರು..!

ಡಿಸೆಂಬರ್.8 

ನವದೆಹಲಿ: ದೆಹಲಿ ಹೊರವಲಯದ ನರೇಲಾದಲ್ಲಿ ಅಕ್ರಮ ಮದ್ಯ ದಂಧೆ ಬಗ್ಗೆ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗಕ್ಕೆ(ಡಿಸಿಡಬ್ಲ್ಯು) ದೂರು ನೀಡಿದಾಕೆ ಮೇಲೆ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿ ಬಟ್ಟೆ ಹರಿದು ನಗ್ನ ಮೆರವಣಿಗೆ ನಡೆಸಿದ ಆರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. 
ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಲ್, ನರೇಲಾ ಘಟನೆಗೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿನ್ನೆ ಸಂಜೆ ಪೊಲೀಸರಿಗೆ ತಿಳಿಸಲಾಗಿತ್ತು. ಆರು ಮಂದಿಯನ್ನು ಬಂಧಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನರೇಲಾ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಬಗ್ಗೆ ಆ ಮಹಿಳೆ ಬುಧವಾರ ರಾತ್ರಿ ಪೊಲೀಸರು ಮತ್ತು ಆಯೋಗಕ್ಕೆ ಮಾಹಿತಿ ನೀಡಿದ್ದರು ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಳ್ ತಿಳಿಸಿದ್ದಾರೆ.
ಮಹಿಳೆಯರೂ ಸೇರಿದಂತೆ 25 ಜನರ ಗುಂಪೊಂದು ನಿನ್ನೆ ಈಕೆ ಮೇಲೆ ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿ ಆಕೆಯ ಬಟ್ಟೆಯನ್ನು ಹರಿದು ಹಾಕಿ ಆ ಪ್ರದೇಶದಲ್ಲಿ ಬೆತ್ತಲೆ ಮೆರವಣಿಗೆ ಮಾಡಿತು. ಅಲ್ಲದೇ ದುಷ್ಕರ್ಮಿಗಳು ಇಡೀ ದೃಶ್ಯವನ್ನು ಚಿತ್ರೀಕರಿಸಿ ಆ ಪ್ರದೇಶದ ಇತರರೊಂದಿಗೆ ವಿನಿಮಯ ಮಾಡಿಕೊಂಡಿದ್ದರು.

 

                                                                

ವಿದೇಶಿ ಕೋಲ್‌ ಸ್ವದೇಶಕ್ಕೆ ಆಗಲ್ಲ

ಡಿಸೆಂಬರ್-8 

ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ "ಕೋಲ್' ತಿಕ್ಕಾಟದಿಂದಾಗಿ ವಿದೇಶಿ ಕಲ್ಲಿದ್ದಲಿನ ಮೊರೆ ಹೋಗಲು ಚಿಂತನೆ ನಡೆಸಿದ್ದ ಇಂಧನ ಇಲಾಖೆಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ರಾಜ್ಯದಲ್ಲಿನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಶೇ.20 ರಿಂದ ಶೇ.50 ರಷ್ಟು ಮಾತ್ರ ವಿದೇಶಿ ಕಲ್ಲಿದ್ದಲು ಬಳಸಬಹುದಾಗಿದ್ದು, ದೇಶೀಯ ಕಲ್ಲಿದ್ದಲೇ ಅನಿವಾರ್ಯವೆನಿಸಿದೆ!
ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳು ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ನಿತ್ಯ ಸುಮಾರು 70,000 ಟನ್ ದೇಶೀಯ ಕಲ್ಲಿದ್ದಲು ಅಗತ್ಯವಿದ್ದು, ಸದ್ಯ 26,000 ಟನ್ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ವಿದೇಶಿ ಕಲ್ಲಿದ್ದಲ್ಲಿನಿಂದ ತುರ್ತು ಪರಿಸ್ಥಿತಿ ನಿಭಾಯಿಸಬಹುದೆ ಹೊರತು ವರ್ಷವಿಡೀ ವಿದ್ಯುತ್ ಉತ್ಪಾದನೆಗೆ ದೇಶೀಯ ಕಲ್ಲಿದ್ದಲು ಅನಿವಾರ್ಯ. ಹಾಗಾಗಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯದೆ ಸೌಹಾರ್ದದಿಂದಲೇ ಹಂಚಿಕೆಯಾದಷ್ಟು ಕಲ್ಲಿದ್ದಲು ಪಡೆಯುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ ಎಂಬ ಮಾತು ಕೇಳಿಬಂದಿದೆ.
ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹಂಚಿಕೆಯಾದ ಕಲ್ಲಿದ್ದಲು ಗಣಿಗಳಿಂದ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾದರೆ ಗರಿಷ್ಠ ಉತ್ಪಾದನೆ ಸಹಜವಾಗಿ ನಡೆಯುತ್ತದೆ. ಆದರೆ ಕೆಲ ತಿಂಗಳಿನಿಂದ ರಾಜ್ಯಕ್ಕೆ ಶೇ.40ರಷ್ಟು ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿರುವುದರಿಂದ ಉತ್ಪಾದನೆ ಕುಸಿದಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆ ಕಾಣಿಸಿಕೊಳ್ಳಲಾರಂಭಿಸಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕೊಲಿರೀಸ್ ಕಂಪನಿ (ಎಸ್ಸಿಸಿಎಲ್), ವೆಸ್ಟರ್ನ್ ಕೋಲ್ ಫೀಲ್ಡ್ (ಡಬ್ಲ್ವೂಸಿಎಲ್) ಹಾಗೂ ಮಹಾನದಿ ಕೋಲ್ ಫೀಲ್ಡ್ (ಎಂಸಿಎಲ್) ಸಂಸ್ಥೆಗಳೊಂದಿಗೆ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಒಡಂಬಡಿಕೆ ಮಾಡಿಕೊಂಡಿದ್ದು, ಆರ್ಟಿಪಿಎಸ್ ಘಟಕಕ್ಕೆ ವಾರ್ಷಿಕ 80 ಲಕ್ಷ ಟನ್ ಕಲ್ಲಿದ್ದಲು ಪೂರೈಸಬೇಕಿದೆ. ಎಸ್ಸಿಸಿಎಲ್, ಎಂಸಿಎಲ್ ಶೇ.100ರಷ್ಟು ಕಲ್ಲಿದ್ದಲು ಪೂರೈಸುತ್ತಿದ್ದು, ಡಬ್ಲ್ಯುಸಿಎಲ್ ಸಂಸ್ಥೆ ಶೇ.25ರಷ್ಟು ಮಾತ್ರ ಪೂರೈಸುತ್ತಿರುವುದು ಸಮಸ್ಯೆ ಉಲ್ಪಣಕ್ಕೆ ಕಾರಣವಾಗಿದೆ. ಬಿಟಿಪಿಎಸ್ ಘಟಕಕ್ಕೆ ನಾನಾ ಕಾರಣಕ್ಕೆ ಕಲ್ಲಿದ್ದಲು ಪೂರೈಕೆ ಮೂಲವೇ ಇಲ್ಲದಂತಾಗಿದ್ದು, ಆರ್ಟಿಪಿಎಸ್ಗೆ ಪೂರೈಕೆಯಾಗುವ ಕಲ್ಲಿದ್ದಲಿನಲ್ಲೇ ಸ್ವಲ್ಪ ಬಳಸಿ ಒಂದೆರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

 

 

                                              

ಆರ್.ಟಿ.ಇ ಅನುದಾನ ಸ್ಥಗಿತ..? ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಶಾಕ್..!

ಡಿಸೆಂಬರ್-8

ಬೆಂಗಳೂರು: ಮೂಲಭೂತ ಸೌಕರ್ಯಗಳಿಲ್ಲದೆ ಸರ್ಕಾರಿ ಶಾಲೆಗಳು ಶಾಶ್ವತ ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ನು ಮುಂದೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ ) ಅಡಿ ನೀಡುತ್ತಿದ್ದ ಆರ್ಥಿಕ ನೆರವನ್ನು ಪ್ರಸಕ್ತ ವರ್ಷದಿಂದಲೇ ಸ್ಥಗಿತಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ 2009ರ ಆರ್.ಟಿ.ಇ ಕಾಯ್ದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ ವಿಧಾನಮಂಡಲದ ಉಭಯ ಸದನಗಳಲ್ಲಿ ಹೊಸ ಕಾಯ್ದೆಯನ್ನು ಮಂಡಿಸುವ ತೀರ್ಮಾನವನ್ನು ತೆಗೆದುಕೊಂಡಿದೆ.
ಆರ್ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಶೇ. 25ರಷ್ಟು ಸೀಟು ನೀಡಬೇಕೆಂಬ ನಿಯಮವಿದೆ. ಈ ಪ್ರಕಾರ ರಾಜ್ಯಾದ್ಯಂತ ಒಟ್ಟು 11,918 ಖಾಸಗಿ ಅನುದಾನ ಶಾಲೆಗಳಲ್ಲಿ 5,22,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ 16 ಸಾವಿರ ಹಣವನ್ನು ಖಾಸಗಿ ಶಾಲೆಗಳಿಗೆ ಮರು ಪಾವತಿಸಬೇಕು. ಇದರಿಂದ ವಾರ್ಷಿಕವಾಗಿ ಸರ್ಕಾರದ ಬೊಕ್ಕಸಕ್ಕೆ 850ರಿಂದ 900 ಕೋಟಿ ವೆಚ್ಚ ತಗಲುತ್ತದೆ.
ಇದೀಗ ಇಷ್ಟು ದೊಡ್ಡ ಮೊತ್ತದ ಹಣವನ್ನು ಖಾಸಗಿ ಶಾಲೆಗಳಿಗೆ ನೀಡುವ ಬದಲು ಸರ್ಕಾರಿ ಶಾಲೆಗಳಿಗೆ ಆರ್ಥಿಕ ನೆರವು ನೀಡಿ ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸಿ ಮೇಲ್ದರ್ಜೆಗೇರಿಸುವುದು ಸರ್ಕಾರದ ಉದ್ದೇಶವಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ಬೀಗ ಹಾಕಿವೆ. ಶಾಲಾ ಕೊಠಡಿ, ಶಿಕ್ಷಕರ ಕೊರತೆ, ಆಟದ ಮೈದಾನ, ಪ್ರತ್ಯೇಕ ಶೌಚಾಲಯ, ಕಪ್ಪು ಹಲಗೆಯ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಶಾಲೆಗಳು ಬಂದ್ ಆಗಿವೆ. ಕೆಲವು ಕಡೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಪಕ್ಕದ ಊರಿನಲ್ಲಿರುವ ಶಾಲೆಗಳಲ್ಲಿ ವೀಲಿನ ಮಾಡಲಾಗಿದೆ.

 

456  ಎಲೆಕ್ಷನ್ ಅಕ್ರಮ ತಡೆಗೆ ಹೊಸ ಮಾಸ್ಟರ್ ಪ್ಲ್ಯಾನ್? ಏನು ಗೊತ್ತಾ?
 ಡಿಸೆಂಬರ್-8
ಬೆಂಗಳೂರು: ಎಲೆಕ್ಷನ್ ನಲ್ಲಿ ಟೈಮ್ ನಲ್ಲಿ ಅಕ್ರಮ ದುಡ್ಡು ಸಾಗಾಟ ಮಾಡೋ ಜನರಿಗೆ ಐಪಿಎಸ್ ರೂಪಾ ಶಾಕ್ ನೀಡಲು ಮುಂದಾಗಿದ್ದಾರೆ.ಹೌದು, ಎಲೆಕ್ಷನ್ ನಲ್ಲಿ ಆಂಬುಲೆನ್ಸ್ ಗಳ ಮೂಲಕ ಹಣ ಸಾಗಾಟ ನಡೆಯುತ್ತಿದೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಈಗ ಇದಕ್ಕೆ ಸೂಪರ್ ಸುಪ್ರಿಂ ಐಡಿಯಾವನ್ನು ಐಪಿಎಸ್ ರೂಪಾ ಕೊಟ್ಟಿದ್ದಾರೆ.
ಆಂಬುಲೆನ್ಸ್ ನಲ್ಲಿ ಕೂಡ ದುಡ್ಡು ಸಾಗಿಸೋ ಸಾಧ್ಯತೆ ಇರೋದರಿಂದ ಇದಕ್ಕೆ ಬ್ರೇಕ್ ಹಾಕೋದಕ್ಕೆ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಅಯುಕ್ತೆ ರೂಪಾ ಮುಂದಾಗಿದ್ದಾರೆ ಎನ್ನಲಾಗಿದೆ.ಎಮರ್ಜೆನ್ಸಿ ಕೇಸ್ಗಳಿಗೆ ರೆಡ್ ಲೈಟ್ ಮತ್ತು ಲಾಂಗ್ ಸೈರನ್ ಇದ್ರೆ, ನಾರ್ಮಲ್ ಕೇಸ್ಗಳಾದ್ರೆ ನೀಲಿ ಬಣ್ಣದ ಲೈಟ್ ಹಾಗೂ ಸಪರೇಟ್ ಸೈರನ್ ನೀಡಲು ಚಿಂತನೆ ಮಾಡಿದ್ದಾರೆ.
ಟ್ರಾಫಿಕ್ನಲ್ಲಿ ತುರ್ತು ಸಮಯದಲ್ಲಿ ಪ್ರಾಣ ಹೋಗುವುದನ್ನು ತಡೆಯಲು ಹಾಗೂ ಆಂಬುಲೆನ್ಸ್ ಮಿಸ್ ಯೂಸ್ ಆಗದಂತೆ ತಡೆಯಲು ಈ ನಿರ್ಧಾರ ಮಾಡಿರೋದಾಗಿ ಮಾಧ್ಯಮದ ಜೊತೆ ಮಾತನಾಡುತ್ತ ಈ ವಿಷಯ ತಿಳಿಸಿದರು.

 

 

                                                                

ಜಿ.ಎಸ್.ಟಿ ಬೆಲೆ ಇಳಿಸದ 194 ವರ್ತಕರ ವಿರುದ್ಧ ಪ್ರಕರಣ

ಡಿಸೆಂಬರ್-8 

ಬೆಂಗಳೂರು: ಜನ ಸಾಮಾನ್ಯರು ಬಳಸುವ ಆಯ್ದ ವಸ್ತುಗಳಿಗೆ ಜಿ.ಎಸ್.ಟಿಯಡಿ ವಿಧಿಸಿದ್ದ ತೆರಿಗೆ ಪ್ರಮಾಣ ಇತ್ತೀಚೆಗೆ ಇಳಿಕೆಯಾದರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ದುಬಾರಿ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದ 194 ವರ್ತಕರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ಬಿಸಿ ಮುಟ್ಟಿಸಿದೆ.
ನವೆಂಬರ್ನಲ್ಲಿ 4 ದಿನ ವಿಶೇಷ ಅಭಿಯಾನದಡಿ ರಾಜ್ಯಾದ್ಯಂತ ದಿಢೀರ್ ತಪಾಸಣೆ ನಡೆಸಿದ ಇಲಾಖೆ ಅಧಿಕಾರಿಗಳು ಜಿ.ಎಸ್.ಟಿತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ವರ್ತಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯಾದ್ಯಂತ ದಾಖಲಾದ 194 ಪ್ರಕರಣಗಳ ಪೈಕಿ 102 ಪ್ರಕರಣ ಬೆಂಗಳೂರಿನಲ್ಲೇ ದಾಖಲಾಗಿವೆ. ವರ್ತಕರು ಮಾತ್ರವಲ್ಲದೆ ಉತ್ಪಾದಕರು, ವಿತರಕರ ಪಾತ್ರವೂ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಜರುಗಿಸಲು ಇಲಾಖೆ ಸಿದ್ಧತೆ ನಡೆಸಿದೆ.
ದೇಶಾದ್ಯಂತ ಜುಲೈ 1ರಿಂದ ಜಿ.ಎಸ್.ಟಿ ವ್ಯವಸ್ಥೆ ಜಾರಿಯಾಗಿದ್ದು, ಸರಕು, ಸೇವೆಗಳಿಗೆ ಕನಿಷ್ಠ ಶೇ.5 ರಿಂದ ಗರಿಷ್ಠ ಶೇ.28ರವರೆಗೆ ಒಟ್ಟು ನಾಲ್ಕು ಹಂತದ ತೆರಿಗೆ ವಿಧಿಸಿತ್ತು. ಆದರೆ ಆಯ್ದ ಸರಕುಗಳ ತೆರಿಗೆ ದುಬಾರಿಯಾಗಿದ್ದು, ಇಳಿಕೆ ಮಾಡುವಂತೆ ಸಾರ್ವಜನಿಕರು ಸೇರಿದಂತೆ ಉತ್ಪಾದನಾ, ವಿತರಣಾ ವಲಯದಿಂದ ನಿರಂತರವಾಗಿ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ನವೆಂಬರ್ನಲ್ಲಿ ನಡೆದ ಜಿ.ಎಸ್.ಟಿ ಕೌನ್ಸಿಲ್ ಸಭೆಯಲ್ಲಿ 177 ವಸ್ತುಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಸಿತ್ತು. ಇದರಲ್ಲಿ "ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತು'ಗಳೇ (ಎಫ್ಎಂಸಿಜಿ) ಹೆಚ್ಚಾಗಿದ್ದವು. ಬಹಳಷ್ಟು ವಸ್ತುಗಳ ತೆರಿಗೆ ಪ್ರಮಾಣವನ್ನು ಶೇ.28ರಿಂದ ಶೇ.18ಕ್ಕೆ ಹಾಗೂ ಶೇ.18 ಇದ್ದ ಆಯ್ದ ವಸ್ತುಗಳ ತೆರಿಗೆಯನ್ನು ಶೇ.12ಕ್ಕೆ ಇಳಿಕೆ ಮಾಡಲಾಗಿತ್ತು. ಹಾಗೆಯೇ ಕೆಲವೊಂದು ವಸ್ತುಗಳ ತೆರಿಗೆ ಶೇ.12ರಿಂದ ಶೇ.5ಕ್ಕೂ ಇಳಿಕೆಯಾಗಿದ್ದು, ಜನರಲ್ಲೂ ಹರ್ಷ ಮೂಡಿಸಿತ್ತು.
ಗ್ರಾಹಕರಿಗೆ ಸಿಗದ ಲಾಭ: ನವೆಂಬರ್ನಲ್ಲಿ 177 ವಸ್ತುಗಳ ಜಿ.ಎಸ್.ಟಿ ತೆರಿಗೆ ಪ್ರಮಾಣ ಇಳಿಕೆ ಮಾಡಿದ ಕೇಂದ್ರ ಸರ್ಕಾರವು ಪರಿಷ್ಕೃತ ತೆರಿಗೆ ಮೊತ್ತವನ್ನು ನ.15ರಿಂದ ಜಾರಿಗೊಳಿಸಿತ್ತು. ಅದ ರಂತೆ ತೆರಿಗೆ ಇಳಿಕೆಯಾದ ವಸ್ತುಗಳ ಬೆಲೆ ನ.15ರಿಂದಲೇ ಪರಿಷ್ಕರಣೆಯಾಗಿ ಗ್ರಾಹಕರಿಗೆ ಅದರ ಲಾಭ ಸಿಗಬೇಕಿತ್ತು. ಆದರೆ ಬಹಳಷ್ಟು ಕಡೆ ಗ್ರಾಹಕರಿಗೆ ತೆರಿಗೆ ಇಳಿಕೆ ಲಾಭ ಸಿಗದಿರುವುದು ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆ ನಡೆಸಿದ ತಪಾಸಣೆಯಿಂದ ಬಯಲಾಗಿದೆ.

 

                                        

ಹೆಸರಿನಲ್ಲಿ ಭೂ ಕಬಳಿಕೆ; ಜಾರ್ಜ್ ವಿರುದ್ಧ ಮತ್ತೊಂದು ದೂರು

ಡಿಸೆಂಬರ್-7 

ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ವಿರುದ್ಧ ಮತ್ತೊಂದು ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜಾರ್ಜ್ ವಿರುದ್ಧ ಎನ್ ಆರ್ ರಮೇಶ್ ಅವರು ಲೋಕಾಯುಕ್ತ, ಎಸಿಬಿ ಹಾಗೂ ಬಿಎಂಟಿಎಫ್ ನಲ್ಲಿ ದೂರು ದಾಖಲಿಸಿದ್ದಾರೆ.
ಸಚಿವ ಕೆಜೆ ಜಾರ್ಜ್ ಅವರ ಪಾಲುದಾರಿಕೆಯ ಎಂಬೆಸಿ ಗೋಲ್ಫ್ ಲಿಂಕ್ ಟೆಕ್ ಪಾರ್ಕ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವುದಾಗಿ ರಮೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಸುಮಾರು 600 ಪುಟಗಳ ದಾಖಲೆ ಬಿಡುಗಡೆ ಮಾಡಿರುವ ಅವರು, ಕೆಜೆ ಜಾರ್ಜ್ ಟೆಕ್ ಪಾರ್ಕ್ ಹೆಸರಿನಲ್ಲಿ . 52.03 ಎಕರೆ ಜಾಗ ಕಬಳಿಕೆ ಮಾಡಿರುವುದಾದಿ ದೂರಿದರು.

 

                                               

ಯದು ವಂಶಕ್ಕೆ ಪುತ್ರ ಸಂತಾನ

ಡಿಸೆಂಬರ್-7 

ಬೆಂಗಳೂರು: ಮೈಸೂರು ಸಂಸ್ಥಾನದ ಯುವ ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಆಸ್ಪತ್ರೆಗೆ ಮಂಗಳವಾರ ಸಂಜೆ ಅವರು ದಾಖಲಾಗಿದ್ದರು. ಬುಧವಾರ ರಾತ್ರಿ 10ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು ಸುಮಾರು 2.5 ಕೆ.ಜಿ.ತೂಕವಿದ್ದು, ಲವಲವಿಕೆಯಿಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 55 ವರ್ಷಗಳ ಬಳಿಕ ಮೈಸೂರು ಒಡೆಯರ ಮನೆತನದಲ್ಲಿ ಮಗು ಜನನವಾಗಿದೆ.

 

 

                                                            

ಪ್ರವೇಶಾತಿ ಪೂರ್ಣಗೊಳಿಸಿದ ಧನದಾಹಿ ಶಿಕ್ಷಣ ಸಂಸ್ಥೆಗಳು..!

ಡಿಸೆಂಬರ್-7

ಬೆಂಗಳೂರು: ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮುನ್ನವೇ ಆಗಲೇ ಪ್ರವೇಶಾತಿ ಮುಗಿಯುವ ಹಂತ ತಲುಪಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರತಿಷ್ಠಿತ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 2018-19ರ ಎಲ್ಕೆಜಿ, ಯುಕೆಜಿ ಹಾಗೂ ಪ್ರಥಮ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
ಸರ್ಕಾರದ ನಿಯಮದಂತೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮುನ್ನ ಯಾವುದೇ ಸರ್ಕಾರಿ ಅನುದಾನ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳು ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತಿಲ್ಲ. ಮಾರ್ಚ್ ಇಲ್ಲವೇ ಏಪ್ರಿಲ್ನಲ್ಲಿ ಸರ್ಕಾರ ವಾರ್ಷಿಕ ಶುಲ್ಕಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ ಬಳಿಕವೇ ಪ್ರವೇಶಾತಿ ಆರಂಭಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ ಬಳಿಕ ಶುಲ್ಕ ಸಂಬಂಧ ಅಭಿಪ್ರಾಯ ಪಡೆದ ನಂತರವೇ ಅಂತಿಮ ಅಧಿಸೂಚನೆ ಹೊರಡುತ್ತದೆ. ಬಳಿಕವಷ್ಟೇ ಶಾಲಾಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅನುಮತಿ ನೀಡಬೇಕು.
ಆದರೆ ಬೆಂಗಳೂರು ಸೇರಿದಂತೆ ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ , ಬಳ್ಳಾರಿ, ಕಲಬುರಗಿ, ಬೀದರ್, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಬಹುತೇಕ ಎಲ್ಲ ಕಡೆ ಆಗಲೇ ಪ್ರವೇಶಾತಿ ಪ್ರಕ್ರಿಯೆಯನ್ನೇ ಆಡಳಿತ ಮಂಡಳಿ ಪೂರ್ಣಗೊಳಿಸಿದೆ. ನವೆಂಬರ್ ತಿಂಗಳಿನಿಂದಲೇ ಪೋಷಕರು ತಮಗೆ ಬೇಕಾದ ಶಾಲಾ ಕಾಲೇಜುಗಳಲ್ಲಿ ಆಡಳಿತ ಮಂಡಳಿ ನಿಗದಿಪಡಿಸಿದ ಶುಲ್ಕವನ್ನು ಭರ್ತಿ ನೀಡಿ ತಮ್ಮ ಮಕ್ಕಳಿಗೆ ಪ್ರವೇಶಾತಿ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

                                                               

ಕಾಂಗ್ರೆಸ್’ಗೆ ಒಲಿಯುವಳೇ ವಿಜಯಲಕ್ಷ್ಮೀ..?

ಡಿಸೆಂಬರ್.7 

ಬೆಂಗಳೂರು: ಸಾಮಾಜಿಕ ನ್ಯಾಯ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ‘ಭಾಗ್ಯ’ ಸರಣಿಯ ಯೋಜನೆಗಳಿಂದಾಗಿ ಬೊಕ್ಕಸದ ಮೇಲೆ ಹೊರೆ ಬೀಳುತ್ತಿರಬಹುದು. ಟೀಕೆಗಳು ವ್ಯಕ್ತವಾಗುತ್ತಿರಬಹುದು.
ಕಾಂಗ್ರೆಸ್ ಸರ್ಕಾರದ ‘ಮತ ಬ್ಯಾಂಕ್’ಗೆ ಒಳ್ಳೆಯದೇ ಆಗುತ್ತಿದೆ ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ ಈ ಯೋಜನೆಗಳು ರಾಜಕೀಯ ತಂತ್ರಗಳಾಗಿದ್ದರೂ, ಕಾಂಗ್ರೆಸ್ಸಿನ ಮತ ಬ್ಯಾಂಕಿಗೆ ಸಹಾಯಕವಾಗಿವೆ ಎಂದು ರಾಜ್ಯದ ಶೇ.34 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೇ.17 ಮಂದಿ ನಿಶ್ಚಿತವಾಗಿಯೂ ಇದರಿಂದ ಸಹಾಯವಾಗಿದೆ ಎಂದು ಹೇಳಿದ್ದಾರೆ. ಇವೆರಡೂ ಅಭಿಪ್ರಾಯವನ್ನು ಕೂಡಿಸಿ ನೋಡುವುದಾದರೆ, ಸಿದ್ದು ಸರ್ಕಾರ ಖುಷಿ ಪಡಬಹುದು. ಲಿಂಗಾಯುತ ಪ್ರಾಬಲ್ಯವಿರುವ, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಮುಂಬೈ ಕರ್ನಾಟಕ ಭಾಗದಲ್ಲಿ ಶೇ.51ರಷ್ಟು ಮಂದಿ ಇದೇ ಅಭಿಪ್ರಾಯ ವ್ಯಕ್ತಪಡಿಸಿರುವುದು ಪ್ರತಿಪಕ್ಷದ ಪಾಲಿಗೆ ಎಚ್ಚರಿಕೆಯ ಗಂಟೆ.
ಕರಾವಳಿಯಲ್ಲಿ ತದ್ವಿರುದ್ಧ ಅಭಿಪ್ರಾಯವಿರುವು ದರಿಂದ ಬಿಜೆಪಿ ನಿಟ್ಟುಸಿರು ಬಿಡಬಹುದು. ಜನಪ್ರಿಯ ಯೋಜನೆಗಳಿಂದ ಜನರ ವಿಶ್ವಾಸ ಗಳಿಸಬಹುದು ಎಂಬ ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಫಲ ನೀಡುತ್ತಿರುವ ಸೂಚನೆ ಇದು.

 

                                                  

ಅಂಕಪಟ್ಟಿ ವಿಚಾರದಲ್ಲಿ ಯಾವುದೇ ಅಕ್ರಮ ಆಗಿಲ್ಲ: ಬಸವರಾಜ ರಾಯರೆಡ್ಡಿ

ಡಿಸೆಂಬರ್-7 

ಬೆಂಗಳೂರು: ವಿವಿಧ ವಿಶ್ವವಿದ್ಯಾನಿಲಯಗಳಿಗೆ ಖಾಲಿ ಅಂಕ ಪಟ್ಟಿಗಳನ್ನು ಖರೀದಿಸಲು ಬಹುಕೋಟಿ ರೂಪಾಯಿ ಹಗರಣವನ್ನು ನಡೆಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿರುದ್ಧ ಯೂತ್ ಕಾಂಗ್ರೆಸ್ ಆರೋಪವನ್ನು ಸಚಿವರು ತಳ್ಳಿಹಾಕಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಬಸವರಾಜ ರಾಯರೆಡ್ಡಿ ಯಾವುದೋ ಕಾರಣಕ್ಕಾಗಿ ಸ್ವ ಪ್ರತಿಷ್ಠೆಗಾಗಿ ಅನಾವಶ್ಯಕವಾಗಿ ಗೊಂದಲದ ವಾತಾವರಣ ನಿರ್ಮಾಣ ಮಾಡಿದ್ದಾರೆ, ಹಗಣರದ ಆರೋಪ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. ಅಂಕಪಟ್ಟಿ ವಿಚಾರದಲ್ಲಿ ಯಾವುದೇ ಅಕ್ರಮ ಆಗಿಲ್ಲ, ಭ್ರಷ್ಟಾಚಾರ ನಡೆದಿಲ್ಲ, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎಂದು ಸ್ಪಷ್ಠನೆ ನೀಡಿದ್ದಾರೆ.
ವಿವಿಗಳು ಸ್ವಾಯತ್ತ ಸಂಸ್ಥೆಗಳಾಗಿರವುದರಿಂದ ಅಂಕಪಟ್ಟಿ ದರ ನಿಗದಿಯನ್ನು ವಿವಿಗಳೇ ಮಾಡುತ್ತವೆ, ಅಂಕಪಟ್ಟಿ ದರ ನಿಗದಿಗೂ ಉನ್ನತ ಶಿಕ್ಷಣ ಇಲಾಖೆಗೂ ಸಂಬಂಧವಿಲ್ಲ ಇದರಲ್ಲಿ ಹಳೇ ಗುತ್ತಿಗೆದಾರರ ಕೈವಾಡ ಇರಬಹುದು ಎಂದು ಸಚಿವರು ಹೇಳಿದ್ದಾರೆ.

ಅಂಕಪಟ್ಟಿಗಳನ್ನು ಈ ಮೊದಲು ಎನ್ಎಫ್ಸಿ ತಂತ್ರಜ್ಞಾನದಿಂದ ಸಿದ್ಧಪಡಿಸಲಾಗುತ್ತಿತ್ತು. ಎಂಸಿಐ ಸೇರಿದಂತೆ ನಾನಾ ರಾಜ್ಯ ಸರಕಾರಗಳೂ ಇದೇ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಇದರಿಂದ ತಯಾರಾಗುವ ಅಂಕಪಟ್ಟಿಗಳನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಈಗ ಎಂಎಸ್ಐಎಲ್ ಮೂಲಕ ಮಹಾರಾಷ್ಟ್ರ ಮೂಲದ ಸಂಸ್ಥೆಗೆ ಇದರ ಗುತ್ತಿಗೆ ವಹಿಸಲಾಗಿದೆ. ಹಾಗಾಗಿ ಕಳಪೆ ಕಾಗದದಿಂದ ಅಂಕಪಟ್ಟಿ ತಯಾರು ಮಾಡುವಂತಾಗಿದೆ. ಇದನ್ನು ನಕಲು ಮಾಡುವುದೂ ಸುಲಭ. ವಿವಿ ಕುಲಸಚಿವರುಗಳೂ ನಕಲಿ ಅಂಕಪಟ್ಟಿ ನೀಡುವ ಜಾಲದೊಂದಿಗೆ ಶಾಮೀಲಾಗಿದ್ದಾರೆ ಎಂದು ವಿದ್ಯಾರ್ಥಿ ಕಾಂಗ್ರೆಸ್ ದೂರಿತ್ತು.

 

 

                                                                  

ಕೆ.ಜೆ.ಜಾರ್ಜ್’ರಿಂದ 850 ಕೋಟಿ ಬೆಲೆಬಾಳುವ 13 ಎಕರೆ ಭೂಮಿ ಸ್ವಾಹ..!

ಡಿಸೆಂಬರ್-7 

ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು 850 ಕೋಟಿ ಬೆಲೆಬಾಳುವ 13 ಎಕರೆ ಸರ್ಕಾರಿ ಸ್ವತ್ತು ಸ್ವಾಹ ಮಾಡಿರುವ ಪ್ರಕರಣವನ್ನು ಬಹಿರಂಗಗೊಳಿಸಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಈ ಸಂಬಂಧ 600 ಪುಟಗಳ ದಾಖಲೆ ಬಿಡುಗಡೆ ಮಾಡಿರುವುದಲ್ಲದೆ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್ ಹಾಗೂ ಎಸಿಎಂಎಂ ನ್ಯಾಯಾಲಯಲ್ಲಿ ದೂರು ದಾಖಲಿಸಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿ, ತಹಸೀಲ್ದಾರ್ಗಳು, ಹಿಂದಿನ ಆಯುಕ್ತರು, ಬಿಡಿಎ ನಗರ ಯೋಜನಾಧಿಕಾರಿ, ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಸರ್ಕಾರಿ ಭೂ ಕಬಳಿಕೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ, ವಂಚನೆ ಪ್ರಕರಣಗಳ ಸಂಬಂಧ ದೂರು ದಾಖಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಈ ಸಂಬಂಧ ವಿವರಗಳನ್ನು ನೀಡಿರುವ ಅವರು, ಕೆ.ಜೆ.ಜಾರ್ಜ್ ಪಾಲುದಾರಿಕೆಯ ಎಂಬೆಸ್ಸಿ ಗಾಲ್ಫ್ ಲಿಂಕ್ ಟೆಕ್ಪಾರ್ಕ್ ನಿರ್ಮಾಣದ ಹೆಸರಿನಲ್ಲಿ 850 ಕೋಟಿ ರೂ. ಬೆಲೆಬಾಳುವ 13 ಸಾವಿರ ಎಕರೆಯಷ್ಟು ಸರ್ಕಾರಿ ಸ್ವತ್ತನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಮಾಡಿರುವ ಅವರು, ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರಲ್ಲದೆ, ಸರ್ಕಾರಿ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ಎಂಬೆಸ್ಸಿ ಗಾಲ್ಫ್ ಲಿಂಕ್ ಟೆಕ್ಪಾರ್ಕ್ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳ ಸರ್ಕಾರಿ ಭೂಮಿ ಕಬಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. 4 ಸಾವಿರ ಕೋಟಿ ರೂ. ಬೆಲೆಬಾಳುವ 52.3 ಎಕರೆಗಳಷ್ಟು ಸರ್ಕಾರಿ ಸ್ವತ್ತುಗಳಿಗೆ ನಕಲಿ ಮ್ಯುಟೇಷನ್ ರಿಜಿಸ್ಟರ್ಗಳನ್ನು ಸೃಷ್ಟಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕ್ರಯಕ್ಕೆ ಪಡೆದಿರುವುದು 52.3 ಎಕರೆ. ಆದರೆ, 65 ಎಕರೆ ಪ್ರದೇಶಕ್ಕೆ ಬೇಲಿ ಹಾಕಿದ್ದಾರೆ. ಎಂಬೆಸ್ಸಿ ಸಂಸ್ಥೆಯ ಒಟ್ಟು ವಿಸ್ತೀರ್ಣ 65 ಎಕರೆಗಳಷ್ಟು ಎಂದು ಆ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಇದೆ. ಆದರೆ, ಕ್ರಯಪತ್ರದಲ್ಲಿರುವುದು 52 ಎಕರೆ. 13 ಎಕರೆಗಳಷ್ಟು ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಇದರ ಮೌಲ್ಯ ಸುಮಾರು 850 ಕೋಟಿ ರೂ. ಎಂದು ತಿಳಿಸಿದರು.

 

                                                     

ಜಾಹೀರಾತು ನೀಡಿ ಪತ್ರಿಕೆಗಳನ್ನು ಉಳಿಸುತ್ತಿರುವ: ಎಚ್.ಡಿ.ಕೆ

ಡಿಸೆಂಬರ್-7 

ಬೆಂಗಳೂರು: ಮುಖ್ಯಮಂತ್ರಿ ಜಾಹೀರಾತು ಕೊಟ್ಟು ಪತ್ರಿಕೆಗಳನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇವತ್ತಿನ ದಿನ ಪತ್ರಿಕೆಗಳನ್ನು ನಡೆಸಲು ಕಷ್ಟ ಇದೆ, ಅವರನ್ನಾದರೂ ಉಳಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಜಾಹೀರಾತಿಗೆ ಹಣ ಖರ್ಚು ಮಾಡುವುದನ್ನುಎಚ್ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ರಾಜ್ಯದ ಜನತೆಯ ತೆರಿಗೆ ಹಣವನ್ನು ಕಾರ್ಯಕ್ರಮದ ಹೆಸರಲ್ಲಿ ಪೋಲು ಮಾಡಲಾಗಿದೆ. ವರ್ಷಕ್ಕೆ ಐನೂರು ಕೋಟಿ ರೂ. ಜಾಹೀರಾತಿಗೆ ಖರ್ಚು ಮಾಡಲಾಗಿದೆ. ಈ ರೀತಿ ಜಾಹೀರಾತಿಗೆ ಇಷ್ಟು ಖರ್ಚು ಮಾಡುವ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು.
ನಾಲ್ಕೂವರೆ ವರ್ಷದ ಬಳಿಕ ಸಿಎಂ ಉತ್ತರ ಕರ್ನಾಟಕ ಪ್ರವಾಸ ಪ್ರಾರಂಭಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಉ.ಕ.ನೆನಪಾಗಿ ಬಂದಿದ್ದಾರೆ. ಭಟ್ಕಳದಲ್ಲಿ 1,500 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಜಿಲ್ಲಾಡಳಿತದಿಂದಲೇ ಕಾರ್ಯಕ್ರಮ ಆಯೋಜನೆಗೆ ನೂರಾರು ಕೋಟಿ ರೂ. ಟೆಂಡರ್ ಕರೆದಿದ್ದಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದು ಪಿಕ್ ಪಾಕೆಟ್ ಸರಕಾರ, 10 ರೂ. ಮದ್ಯದ ಮೇಲೆ ಮನ ಬಂದಂತೆ ತೆರಿಗೆ ಹಾಕಿ 70 ರೂ.ಗೆ ಮಾರಾಟ ಮಾಡುತ್ತಿರುವ ಸರಕಾರ ಈ ಹಣದಲ್ಲಿ ಹಾಲು, ಅನ್ನ ಯೋಜನೆ ಜಾರಿಗೆ ತಂದಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರ ಒಂದು ಲಕ್ಷದ ಇಪ್ಪತ್ತೆಂಟು ಸಾವಿರ ಕೋಟಿ ರೂ. ಸಾಲ ಮಾಡಿದೆ ಎಂದರು.

 

77  ಕಲುಷಿತಗೊಂಡಿದ್ದ ಕೆರೆಗೆ ಮರುಜೀವ
 ಡಿಸೆಂಬರ್ -7
 ಬೆಂಗಳೂರು: ಕಲುಷಿತಗೊಂಡಿದ್ದ ಬೆಂಗಳೂರಿನ ಕುಂದಲಹಳ್ಳಿ ಕೆರೆಯನ್ನು, ಅಮೇರಿಕಾದ ಬಹುರಾಷ್ಟ್ರೀಯ   ಕಂಪನಿಗಳಲ್ಲಿ  ಒಂದಾದ 'ಜನರಲ್ ಎಲೆಕ್ಟ್ರಿಕ್' (ಜಿಇ), 'ಯುನೈಟೆಡ್ ವೇ ಬೆಂಗಳೂರು' ಎಂಬ ಎನ್ ಜಿ ಒ   ನೆರವಿನೊಂದಿಗೆ ಪುನರುಜ್ಜೀವನಗೊಳಿಸಿದೆ.
 ವೈಟ್ ಫೀಲ್ಡ್ ಬಳಿ ಇರುವ ಕುಂದಲಹಳ್ಳಿ ಕೆರೆಯಲ್ಲಿದ್ದ ತುಂಬಿಹೋಗಿದ್ದ ತ್ಯಾಜ್ಯವನ್ನು ತೆಗೆದು ಹೊಸದಾಗಿ ಶುದ್ಧ ನೀರು   ತುಂಬಲು ಕೆರೆಯ ದಡದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಇ ಇಂಡಿಯಾ   ಟೆಕ್ನಾಲಜಿ ಸೆಂಟರ್ ನ ಮುಖ್ಯ ಕಾರ್ಯನುರ್ವಾಹಕ ಮನಿಜ್ ಮಖಿಜಾ ತಿಳಿಸಿದರು.
 ಇದರಿಂದ ಕುಂದಲಹಳ್ಳಿ ಕೆರೆಗೆ ಮರುಜೀವ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಸುಮಾರು 30 ಎಕರೆ   ಪ್ರದೇಶದಲ್ಲಿ ಹರಡಿರುವ ಕುಂದಲಹಳ್ಳಿ ಕೆರೆಯಲ್ಲಿ ಅರ್ಧದಷ್ಟು ಚರಂಡಿ ನೀರು ಹಾಗೂ ಕೊಳಚೆ ನೀರಿನಿಂದ   ಸಂಪೂರ್ಣವಾಗಿ ಹುದಿಗಿಹೋಗಿತ್ತು. ಸಂಸ್ಥೆಯ ಸ್ವಯಂ ಸೇವಕರು ನಿರಂತರ ಆರು ತಿಂಗಳ ಕಾಲ ಕೆರೆಯನ್ನು   ಸ್ವಚ್ಛಗೊಳಿಸಿ ಕೆರೆಯನ್ನು ಸಂಪೂರ್ಣ ಪುನಶ್ಚೇತನಗಿಳಿಸಲು ಶ್ರಮಿಸಿದ್ದಾರೆ ಎನ್ನುತ್ತಾರೆ ಮಖಿಜಾ.
ಹಸಿರು ಬೆಂಗಳೂರು ನಿರ್ಮಾಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಿಇ ಸೇರಿದಂತೆ ಸರ್ಕಾರಿ ಇತರೆ ಸಂಸ್ಥೆಗಳೊಂದಿಗೆ ಕೆರೆಗಳ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಇದರ ಭಾಗವಾಗಿ ಕುಂದಲಹಳ್ಳಿ ಕೆರೆಯನ್ನು ಜಿಇ ಸಂಸ್ಥೆ ಪುನಶ್ಚೇತನ ಗೊಳಿಸಿದೆ.
ಜನರಲ್ ಎಲೆಕ್ಟ್ರಿಕ್ ಹಾಗೂ ಯುನೈಟೆಡ್ ವೇ ಸಂಸ್ಥೆಗಳು ಜಂಟಿಯಾಗಿ 6 ಪರಿಸರ ಸ್ನೇಹಿ ಶೌಚಾಲಯವನ್ನು ಕೆರೆಯ ದಡದಲ್ಲಿ ನಿರ್ಮಿಸಿದ್ದು ಇದರಿಂದ ಕೆರೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡಲು ನೆರವಾಗುತ್ತದೆ. ಅಲ್ಲದೆ ಸುಮಾರು 5 ಸಾವಿರ ಸಸಿಗಳನ್ನು ಕೆರೆಯ ಸುತ್ತಲಿನ ಪ್ರದೇಶದಲ್ಲಿ ನೆಡಲಾಗಿದೆ ಎಂದು ಯುನೈಟೆಡ್ ವೇ ಮುಖ್ಯ ಕಾರ್ಯ ನಿರ್ವಾಹಕ ಮನೀಶ್ ಮಿಶೇಲ್ ತಿಳಿಸಿದ್ದಾರೆ.
ಯುನೈಟೆಡ್ ವೇ ಬೆಂಗಳೂರು ಎನ್ ಜಿ ಒ ಜಿಇ ಕಂಪನಿ ಸಹಯೋಗದಲ್ಲಿ ಇತರೆ ೧೫ ಕೆರೆಗಳ ಪುನಶ್ಚೇತನ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದು ಮುಂದಿನ ಆರು ತಿಂಗಳಲ್ಲಿ ಪುರುತ್ಥಾನಗೊಳ್ಳಲಿದೆ ಎಂದು ಹೇಳಿದರು.

 

 

 

   n 456 

ಬಯಲಾಯ್ತು ಮತ್ತೊಬ್ಬ ಸ್ವಾಮೀಜಿಯ ರಾಸಲೀಲೆ.?

ಡಿಸೆಂಬರ್-7

 ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ಮದ್ದೇವಣಾಪುರ ಮಠದಲ್ಲಿ ನಡೆದ ರಾಸಲೀಲೆ ಪ್ರಕರಣ ಬಯಲಾಗಿ ಅವಾಂತರ ಸೃಷ್ಠಿಸಿತ್ತು. ಇದೀಗ ಮತ್ತೊಬ್ಬ ಸ್ವಾಮೀಜಿಯ ರಾಸಲೀಲೆ ಪ್ರಕರಣ ಬಯಲಾಗಿದೆ. ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ಮಠದ ಸ್ವಾಮೀಜಿಯೊಬ್ಬರ ಕಾರು ಚಾಲಕನಾಗಿರುವ ಮಲ್ಲಯ್ಯ ಎಂಬುವವರು ಸ್ವಾಮೀಜಿ ರಾಸಲೀಲೆಯನ್ನು ಬಯಲು ಮಾಡಿದ್ದಾರೆ.ಕಳೆದ 20 ವರ್ಷಗಳಿಂದ ಸ್ವಾಮೀಜಿ ಬಳಿ ಸೇವಕರಾಗಿ, ಕಾರು ಚಾಲಕರಾಗಿ ಸ್ವಾಮೀಜಿ ಬಳಿ ಕೆಲಸ ಮಾಡುತ್ತಿರುವ ಮಲ್ಲಯ್ಯ, ಸ್ವಾಮಿಯ ಸೂಚನೆಯಂತೆ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದುದಾಗಿ ಹೇಳಿದ್ದಾರೆ.ಸ್ವಾಮೀಜಿ ಹಲವು ಹೆಣ್ಣುಮಕ್ಕಳೊಂದಿಗೆ ರಾಸಲೀಲೆ ನಡೆಸಿದ್ದಾರೆ. ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಸ್ವಾಮೀಜಿ ರಾಸಲೀಲೆ ನಡೆಸಿದ್ದಾಗಿ ಮಲ್ಲಯ್ಯ ಆರೋಪಿಸಿದ್ದಾರೆ. ಸ್ವಾಮೀಜಿ ಕೃತ್ಯಕ್ಕೆ ಇಷ್ಟು ದಿನ ಬೆಂಬಲ ನೀಡಿದ್ದ ಮಲ್ಲಯ್ಯ, ಹೀಗೆ ಮಾಡದಂತೆ ಹೇಳಿದ್ದಕ್ಕೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಬೆದರಿಕೆ ಹಾಕಲಾಗಿದೆ. ಮನಸ್ಸಿಗೆ ನೋವಾದರೂ ಕೆಲಸದ ಕಾರಣದಿಂದ ಅವರಿಗೆ ಸಹಕಾರ ನೀಡಿದ್ದಾಗಿ ಮಲ್ಲಯ್ಯ ಹೇಳಿದ್ದಾರೆ.

 

 

    456 

ಪತ್ನಿ, ಅಪ್ಪ-ಅಮ್ಮನಿಗೆ ಭರ್ಜರಿ ಗಿಫ್ಟ್ ಕೊಟ್ಟ ಯಶ್

ಡಿಸೆಂಬರ್-7

 ಬೆಂಗಳೂರು: ಡಿಸೆಂಬರ್ 9 ಕ್ಕೆ ಯಶ್ ಮತ್ತು ರಾಧಿಕಾ ಮದುವೆಯ ಪ್ರಥಮ ವಾರ್ಷಿಕೋತ್ಸವ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಮೊದಲೇ ಪತ್ನಿ ಹಾಗೂ ತಂದೆ-ತಾಯಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. 
ಯಶ್ ಒಂದೇ ಶೋ ರೂಂನಲ್ಲಿ ಬರೋಬ್ಬರಿ ಮೂರು ಮರ್ಸಿಡಿಜ್ ಬೆನ್ಜ್ ಕಾರುಗಳನ್ನು ಕೊಂಡಿದ್ದಾರೆ. ಬೆಂಗಳೂರಿನ ಬೆನ್ಜ್ ಶೋರೂಂನಿಂದ ಮೂರು ಮರ್ಸಿಡಿಜ್ ಕಾರುಗಳನ್ನು ಮನೆಗೆ ಕೊಂಡೊಯ್ದಿದ್ದಾರೆ ರಾಕಿಂಗ್ ಸ್ಟಾರ್. ಮೂರು ಕೂಡಾ ಟಾಪ್ ಎಂಡ್ ಮಾಡೆಲ್ ಕಾರುಗಳು ಎನ್ನುವುದು ಮತ್ತೊಂದು ವಿಶೇಷ. ಅಂದಹಾಗೆ ಒಂದೇ ಶೋರೂಂನಲ್ಲಿ ಮೂರು ಬೆನ್ಜ್ ಕಾರು ಖರೀದಿಸಿದ ಏಕೈಕ ವ್ಯಕ್ತಿ ಯಶ್ ಎಂದು ಶೋರೂಂನವರು ಯಶ್'ರನ್ನು ಕೊಂಡಾಡಿದ್ದಾರೆ. ಬೆನ್ಜ್ ಇ ಕ್ಕಾಸ್ ಕಾರು ಅಪ್ಪ-ಅಮ್ಮನಿಗೆ, ಬೆನ್ಜ್ ಜಿ ಎಲ್ ಎಸ್ ಪತ್ನಿ ರಾಧಿಕಾಗೆ ಮತ್ತು . ಬೆನ್ಜ್ ಜಿ ಎಲ್ ಸಿ ಎ ಎಂ ಜಿ ಕಾಪ್ ಕಾರು ಯಶ್ ಅವರಿಗೆ ಎಂದು ಪರ್ಚೇಸ್ ಮಾಡಲಾಗಿದೆ. ತಮ್ಮ ವೆಡ್ಡಿಂಗ್ ಆನಿವರ್ಸರಿಗೆ ಇಡೀ ಫ್ಯಾಮಿಲಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ ರಾಕಿಂಗ್ ಸ್ಟಾರ್. ಎಲ್ಲಾ ಕಾರುಗಳಿಗೂ ಪೂಜೆ ಮಾಡಿಸಿ ಖುಷಿಯಿಂದ ಮನೆಗೆ ಕೊಂಡೊಯ್ದಿದ್ದಾರೆ.

 

 

    466+

ಮೊಬೈಲ್ ನಲ್ಲಿ ಮಾತನಾಡಲು ಹೋಗಿ ಮಕ್ಕಳ ಪ್ರಾಣ ತೆಗೆದ ಚಾಲಕ

ಡಿಸೆಂಬರ್-7

 ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಶಾಲಾ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಒಬ್ಬ ವಿದ್ಯಾರ್ಥಿ ಸ್ಥಳದಲೇ ಸಾವನ್ನಪ್ಪಿದ್ದು, 6 ವಿದ್ಯಾರ್ಥಿಗಳು ಗಂಬೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯ ಘಟನೆ ನಡೆದಿದೆ.
ಮರಳುವಾಡಿ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಶಾಲಾ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಮರಳವಾಡಿ ಹೋಬಳಿಯ ಗೆಂಡೇಗೌಡನದೊಡ್ಡಿ ಗ್ರಾಮದ ಜಯಲಕ್ಷ್ಮೀ ಮತ್ತು ಗಣೇಶ್ ದಂಪತಿಯ 6 ವರ್ಷದ ಮಗು ಚರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಶರತ್, ಹೇಮಚಂದ್ರ, ಮಹೇಶ್, ಹರ್ಷಿತಾ ಹಾಗೂ ಲಿಖಿತಾಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ, ದಿವ್ಯಾ, ದೀಪು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ವಾಹನ ಚಾಲಕ ದಾನಪ್ಪ ಮೊಬೈಲ್ನಲ್ಲಿ ಮಾತನಾಡಿಕೊಂಡು ಅಜಾಗರೂಕತೆಯಿಂದ ಚಾಲನೆ ಮಾಡಿರುವುದೇ ಇಷ್ಟೆಲ್ಲಾ ಅವಘಡಕ್ಕೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಶಾಲಾ ಬಸ್ ಸಂಪೂರ್ಣ ಜಖಂಗೊಂಡಿದ್ದು, ಎರಡೂ ಬಸ್ಗಳ ಚಾಲಕರು ಗಾಯಗೊಂಡಿದ್ದಾರೆ. ಹಲವು ಗ್ರಾಮಗಳ ಸುಮಾರು 20 ಮಕ್ಕಳು ಪ್ರಭಾಕರ್ ಗುರೂಜಿ ಆಶ್ರಮಕ್ಕೆ ಸೇರಿದ ಭಾರತೀಯ ಋಷಿ ಸಂಸ್ಕೃತಿ ವಿದ್ಯಾಶಾಲೆಗೆ ವಾಹನದಲ್ಲಿ ತೆರಳುತ್ತಿದ್ದರು. ಸತ್ತ ವಿದ್ಯಾರ್ಥಿ ಶರಣ್ ಆಗಿದ್ದು, ಆಶ್ರಮದ 1ನೇ ತರಗತಿ ವಿದ್ಯಾರ್ಥಿ ಎನ್ನಲಾಗಿದ್ದು, ಆಶ್ರಮಕ್ಕೆ ಸೇರಿದ ಶಾಲೆಯ ವಾಹನದ ಚಾಲಕ ದಾನಪ್ಪನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿ ಮಗು ಮೃತಪಟ್ಟಿದೆ. ಉಳಿದ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರೂ ಶಾಲೆಗೆ ಸಂಬಂಧಿಸಿದವರು ಮಕ್ಕಳ ಆರೋಗ್ಯ ವಿಚಾರಿಸಿಲ್ಲ ಎಂದು ಆಕ್ರೋಶಗೊಂಡ ಪೋಷಕರು ಆಶ್ರಮದ ಮುಂದೆ ಮಗುವಿನ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಧಿಕಾರಿ ಡಾ.ಮಮತಾ, ಆಸ್ಪತ್ರೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು

 

 

    45 

ಅಪಘಾತವಾಗಿ ನಿಲ್ಲಿಸಿದ್ದ ಬಸ್ಸಿಗೆ ಲಾರಿ ಢಿಕ್ಕಿ: ಬಸ್ ಚಾಲಕ ಮೃತ್ಯು

 ಡಿಸೆಂಬರ್ -6

 ಆನೇಕಲ್ : ಅಪಘಾತಕ್ಕೊಳಗಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಸ್ಸಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ತಿರುಮಗೊಂಡನಹಳ್ಳಿ ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದೆ.
ಘಟನೆಯಲ್ಲಿ ಲಾರಿ ಕ್ಲೀನರ್ ಕೂಡಾ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಇಂದು ಮುಂಜಾನೆ ಹೆದ್ದಾರಿಯ ತಿರುಮಗೊಂಡನಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿತ್ತು. ಈ ಹಿನ್ನೆಲೆಯಲ್ಲಿ ಅದರಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ಬಸ್ಸಿಗೆ ವರ್ಗಾಯಿಸುವಲ್ಲಿ ಬಸ್ ಚಾಲಕ ಹಾಗೂ ಕ್ಲೀನರ್ ನಿರತರಾಗಿದ್ದರು. ಅಷ್ಟರಲ್ಲಿ ವೇಗವಾಗಿ ಬಂದ ಲಾರಿಯೊಂದು ಬಸ್ ಚಾಲಕನಿಗೆ ಢಿಕ್ಕಿ ಹೊಡೆದು ಬಸ್ಸಿಗೂ ಢಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಸೂರ್ಯ ಸಿಟಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

 

 

 

    45

ಕೇಂದ್ರದ ಮೇಲೆ ಪ್ರಭಾವಿಗಳ ಒತ್ತಡ : ಯು.ಟಿ. ಖಾದರ್ ಶಂಕೆ

 ಡಿಸೆಂಬರ್-6

 ಬೆಂಗಳೂರು : ರಾಜ್ಯ ಸರ್ಕಾರ ಬಡವರಿಗೆ ಗ್ಯಾಸ್ ಒದಗಿಸುವ ಅನಿಲ ಭಾಗ್ಯ ಯೋಜನೆ ಜಾರಿಯಾಗದಂತೆ ಪ್ರಭಾವಿಗಳು ಕೇಂದ್ರದ ಮೇಲೆ ಒತ್ತಡ ಹೇರಿರುವ ಕುರಿತು ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿಲ ಭಾಗ್ಯ ಯೋಜನೆಯ ಜಾರಿ ವಿಷಯದಲ್ಲಿ ಕೇಂದ್ರ ಸರ್ಕಾರ ಕೆಲ ಷರತ್ತುಗಳನ್ನು ಹಾಕಿದೆ. ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಎರಡನೇ ರಿಫಿಲ್ ನೀಡಬಾರದು. ಹೆಚ್ಚು ರಿಫಿಲ್ ಪೂರೈಸಲು ನಮಗೆ ಸಾಧ್ಯವಿಲ್ಲವೆಂದು ಹೇಳಿದೆ, ಯೋಜನೆಗೆ ಕೇಂದ್ರದ ಹೆಸರನ್ನೂ ಸೇರಿಸಬೇಕು ಎಂದು ಷರತ್ತು ಹಾಕಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ.ಮುಖ್ಯವಾಗಿ ಈ ಯೋಜನೆಯನ್ನು ಜಾರಿಗೊಳಿಸಿದರೆ ರಾಜ್ಯ ಸರ್ಕಾರಕ್ಕೆ ಹೆಸರು ಬರುತ್ತದೆ. ಹೀಗಾಗಿ ಅದನ್ನು ಜಾರಿಗೊಳಿಸಲು ಬಿಡಬೇಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿರುವ ಶಂಕೆ ಕಾಡುತ್ತಿದೆ ಎಂದು ಖಾದರ್ ಹೇಳಿದ್ದಾರೆ.

 

 

    45

ಪ್ರತ್ಯೇಕ ನಾಡಧ್ವಜದ ಬಗ್ಗೆ ಪ್ರಬಲವಾಗಿ ಜನರ ವಕಾಲತ್ತು

 ಡಿಸೆಂಬರ್-6

 ಬೆಂಗಳೂರು: ಕನ್ನಡಿಗರ ಅಸ್ಮಿತೆಯನ್ನು ಬಡಿದೆಬ್ಬಿಸಿ ಸ್ವಾಭಿಮಾನದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಸಿದ್ದರಾಮಯ್ಯ ಇತ್ತೀಚೆಗೆ ಪ್ರತ್ಯೇಕ ಕನ್ನಡ ಧ್ವಜದ ಪ್ರಸ್ತಾಪ ಮಾಡಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ರಾಷ್ಟ್ರೀಯವಾದವನ್ನು ಪ್ರತಿಪಾದಿಸುವ ಬಿಜೆಪಿಯವರು ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಬೇಕಿಲ್ಲ, ದೇಶಕ್ಕೊಂದೇ ತ್ರಿವರ್ಣ ಧ್ವಜ ಇರಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಸಮೀಕ್ಷೆಯಲ್ಲಿ ಕನ್ನಡಿಗರು ಪ್ರತ್ಯೇಕ ನಾಡಧ್ವಜದ ಬಗ್ಗೆ ಪ್ರಬಲವಾಗಿ ವಕಾಲತ್ತು ವಹಿಸಿರುವುದು ಕಾಣಿಸುತ್ತಿದೆ. ಶೇ.78ರಷ್ಟು ಜನರು ಕರ್ನಾಟಕಕ್ಕೆ ಅಧಿಕೃತ ರಾಜ್ಯಧ್ವಜ ಇರಬೇಕು ಎಂಬ ಅಭಿಪ್ರಾಯದ ಪರವಾಗಿದ್ದಾರೆ.
ಇದೂ ಕೂಡ ಬಿಜೆಪಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಬಹುದು. ಹೆಚ್ಚುಕಮ್ಮಿ ರಾಜ್ಯದ ಎಲ್ಲಾ ಭಾಗದಲ್ಲೂ ಪ್ರತ್ಯೇಕ ಧ್ವಜ ಇರಲಿ ಎನ್ನುವವರ ಸಂಖ್ಯೆ ಶೇ.70ಕ್ಕಿಂತ ಜಾಸ್ತಿಯಿದೆ. ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಂತೂ ಶೇ.90ಕ್ಕಿಂತ ಹೆಚ್ಚು ಜನ ಪ್ರತ್ಯೇಕ ಧ್ವಜದ ಪರವಾಗಿದ್ದಾರೆ. ವಿಶೇಷವೆಂದರೆ ಶೇ.70ಕ್ಕಿಂತ ಹೆಚ್ಚು ಮುಸ್ಲಿಮರು ಕೂಡ ಪ್ರತ್ಯೇಕ ಧ್ವಜದ ಪರ ಬ್ಯಾಟಿಂಗ್ ಮಾಡಿದ್ದು, ಇದು ಕಾಂಗ್ರೆಸ್ಸಿಗೆ ನಿಸ್ಸಂಶಯವಾಗಿ ಖುಷಿಯ ವಿಚಾರ.

 

 

    45

ರವಿ ಬೆಳೆಗೆರೆ, ಅನಿಲ್ ರಾಜ್ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ

 ಡಿಸೆಂಬರ್-6

ಬೆಂಗಳೂರು: ಪತ್ರಕರ್ತ ರವಿ ಬೆಳೆಗೆರೆ ಹಾಗೂ ಅನಿಲ್ ರಾಜ್ ಅವರನ್ನು ಅಂತಿಮ ಆದೇಶ ನೀಡುವವರೆಗೂ ಬಂಧಿಸಬಾರದು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಇಂದು ಮಧ್ಯಂತರ ಆದೇಶ ನೀಡಿದೆ. ರವಿಬೆಳೆಗೆರೆ ಹಾಗೂ ಅನಿಲ್ ರಾಜ್ ಗೆ ವಿಧಾನಸಭೆಯ ಹಕ್ಕುಬಾಧ್ಯತಾ ಸಮಿತಿ ಶಿಕ್ಷೆ ವಿಧಿಸಿತ್ತು. ಸಮಿತಿಯ ಆದೇಶವನ್ನು ಪ್ರಶ್ನಿಸಿ ಇಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಅಂತಿಮ ಆದೇಶ ನೀಡುವವರೆಗೂ ಇಬ್ಬರು ಪತ್ರಕರ್ತರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದೆ.

 

  45 

ಅಮಾನತುಗೊಂಡ ಬಿಬಿಎಂಪಿ ಎಂಜಿನಿಯರ್ ಗಳು ಸದ್ದಿಲ್ಲದೆ ಹಾಜರ್

 ಡಿಸೆಂಬರ್-6

 ಬೆಂಗಳೂರು: ನಗರದ ಗುಳಿ ಬಿದ್ದ ರಸ್ತೆಗಳ ತಗ್ಗುಗಳನ್ನು ಮುಚ್ಚಲು ಮುಗಿದು ಹೋಗಿದ್ದ ಡೆಡ್ ಲೈನ್ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ನಾಲ್ವರು ಸಹಾಯಕ ಎಂಜಿನಿಯರ್ ಗಳು ಸದ್ದಿಲ್ಲದೆ ಕೆಲಸಕ್ಕೆ ಹಾಜರಾಗಿದ್ದಾರೆ. ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ 6ಕ್ಕೆ ಗಡುವು ಮುಗಿದಿತ್ತು ಆದರೂ ಕೆಲಸ ಮುಗಿಯದ ಕಾರಣ ಮೇಯರ್ ಸಂಪತ್ ರಾಜ್ ಅವರು ನವೆಂಬರ್ 7 ರಂದು ಸಹಾಯಕ ಎಂಜಿನಿಯರ್ ಗಳಾದ ಸಿವಿ ರಾಮನ್ ನಗರ ವಲಯದ ಅಮೃತ್ ಕುಮಾರ್ ಸೌಳಂಕಿ ಹಾಗೂ ಶಿವಾಜಿನಗರ ಉಪ ವಿಭಾಗದ ಎಂಜಿನಯರ್ ಶೈಫುದ್ದೀನ್, ಬಾಣಸವಾಡಿ ಎಂಜಿನಿಯರ್ ಮಲ್ಲಿನಾಥ ಮಲ್ಕಾಪುರ, ಮೂಲಸೌಕರ್ಯ ವಿಭಾಗದ ಬಿಜ್ಜಳರಾಜ ಅವರನ್ನು ಎನ್ನುವವರನ್ನು ಅಮಾನತು ಮಾಡುವಂತೆ ಎರಡು ದಿನಗಳ ಬಳಿಕ ಪ್ರಸ್ತಾವ ಸಲ್ಲಿಸಿದ್ದರು. ಇದೀಗ ಎಂಜಿನಿಯರ್ ಗಳ ಅಭಾವವಿರುವ ಕಾರಣ ಪ್ರಸ್ತಾವವನ್ನು ತಳ್ಳಿಹಾಕಿ ಎಂಜಿನಿಯರ್ ಗಳನ್ನು ಪುನಹ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಚರ್ಚೆ ಮಾಡಲಾಗಿದೆ. ಕೌನ್ಸಿಲ್ ಸದಸ್ಯರು ಎಂಜಿನಿಯರ್ ಗಳ ಅಭಾವವಿದೆ ಯಾವ ಕೆಲಸವೂ ಪೂರ್ಣವಾಗುತ್ತಿಲ್ಲ ಎಂದು ದೂರಿದ್ದರು. ಹಾಗೆಯೇ ಆಡಳಿತ ಮಂಡಳಿಯು ಅಮಾನತು ಅದೇಶವನ್ನು ತಳ್ಳಿಹಾಕಿದ್ದಾರೆ. ಇದರ ಪರಿಣಾಮ ಎಂಜಿನಿಯರು ಗಳನ್ನು ಹಿಂಡಪಡೆಯಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.ಆನಂದ್ ರಾವ್ ವೃತ್ತದಲ್ಲಿ ಸಾಕಷ್ಟು ಗುಂಡಿಗಳಿದ್ದವು. ಎಂಜಿನಿಯರ್ ಬಾಲ್ ರಾಜ್ ಅದನ್ನು ವೀಕ್ಷಣೆ ಕೂಡ ಮಾಡಿದ್ದರು. ಆದರೆ ಉನ್ನತ ಅಧಿಕಾರಿಗಳು ತಕ್ಷಣವೇ ಆ ಗುಂಡಿಗಳನ್ನು ಮುಚ್ಚುವಂತೆ ಆದೇಶ ನೀಡಿದ್ದರು ಆದರೆ ಆದೇಶ ಪಾಲಿಸುವುದರಲ್ಲಿ ಬಾಲ ರಾಜ್ ಸೋತಿದ್ದರು. ಹಾಗಾಗಿ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಒತ್ತಾಯಿಸಲಾಯಿತು. ನಂತರ ಬಾಲ್ ರಾಜ್ ಅವರನ್ನು ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಗೆ ವರ್ಗಾವಣೆ ಮಾಡಲಾಗಿದೆ ಅಕ್ಟೋಬರ್ 21ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಎಂದು ಅಧಿಕಾರಿ ತಿಳಿಸಿದರು.

 

 

     465

ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ವಾಗತ ಕೇಂದ್ರ ಸ್ಥಾಪನೆ

 ಡಿಸೆಂಬರ್-6

 ಬೆಂಗಳೂರು: ಸಾರ್ವಜನಿಕರ ಸಮಸ್ಯೆ ಆಲಿಸುವುದಕ್ಕಾಗಿ ಶೀಘ್ರದಲ್ಲೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ತರಬೇತಿ ಪಡೆದ   ಸ್ವಾಗತಕಾರರ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಪೊಲೀಸ್ ಠಾಣೆಗಳನ್ನು ಸಾರ್ವಜನಿಕ ಸ್ನೇಹಿಯಾಗಿ   ಮಾಡುವ ಉದ್ದೇಶದಿಂದ 'ಜನ ಸ್ನೇಹಿ ಪೊಲೀಸ್ ಯೋಜನೆ' ಅಡಿ ಡಿಸೆಂಬರ್ 31ರೊಳಗೆ ಎಲ್ಲಾ ಪೊಲೀಸ್ ಠಾಣೆಯಲ್ಲಿ ಸ್ವಾಗತ ಕೇಂದ್ರ ಸ್ಥಾಪಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್ ರಾಜು ಅವರು ಆದೇಶ   ಹೊರಡಿಸಿದ್ದಾರೆ. ಅಲ್ಲದೆ ಸ್ವಾಗತಕಾರರ ಕೇಂದ್ರ ಸ್ಥಾಪಿಸಿದ ಬಗ್ಗೆ ಫೋಟೋ ಸಮೇತ ವರದಿ ಮಾಡುವಂತೆ ಸೂಚಿಸಿದ್ದಾರೆ. ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಇರಬಹುದಾದ ಅಪನಂಬಿಕೆ ತೊಡೆದು ಹಾಕಿ ಅವರಲ್ಲಿ ವಿಶ್ವಾಸ   ಮೂಡಿಸುವ ನಿಟ್ಟಿನಲ್ಲಿ ಪ್ರತಿ ಠಾಣೆಯಲ್ಲಿ 3ರಿಂದ 4 ಸಿಬ್ಬಂದಿಗೆ ಮೃದು ಕೌಶಲ್ಯಗಳ ಬಗ್ಗೆ ಎರಡು ದಿನ ತರಬೇತಿ ನೀಡಲಾಗುತ್ತಿದೆ. ಪ್ರತಿ ಸ್ವಾಗತ ಕೇಂದ್ರದಲ್ಲಿ  'ನಾನು ನಿಮಗೆ ಸಹಾಯ ಮಾಡಬಹುದೇ' ಎಂಬ ಬೋರ್ಡ್ ಅನ್ನು ಕನ್ನಡ   ಮತ್ತು ಆಂಗ್ಲ ಭಾಷೆಯಲ್ಲಿ ಹಾಕಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರು ಸೂಚಿಸಿದ್ದಾರೆ.

 

 

 

55  72 ಲಕ್ಷ ಹೊಸ ಮತದಾರರು ಸೇರ್ಪಡೆ, ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ
 ಡಿಸೆಂಬರ್ -5
 ಬೆಂಗಳೂರು : ಕಳೆದ ಬಾರಿಗಿಂತ 72 ಲಕ್ಷಕ್ಕೂ ಹೆಚ್ಚು ಮಂದಿ 2018ರ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ  ಪಡೆದುಕೊಂಡಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು 72 ಲಕ್ಷಕ್ಕೂ ಅಧಿಕ ಹೊಸ  ಮತದಾರರು ಸೇರ್ಪಡೆಗೊಂಡಿದ್ದಾರೆ.
 2013 ರಲ್ಲಿ ರಾಜ್ಯದಲ್ಲಿ 4,18,38,541 ಇತ್ತು, ಅದು ಈಗ 4,90,06,901 ಕ್ಕೆ ಹೆಚ್ಚಿದೆ. ಅಲ್ಲದೆ, ಮತಗಟ್ಟೆಗಳ ಸಂಖ್ಯೆಯೂ  2,433 ಹೆಚ್ಚಳವಾಗಲಿದೆ, ಬೆಂಗಳೂರಿನಲ್ಲಿ 574 ಮತಗಟ್ಟೆಗಳು ಹೆಚ್ಚಲಿವೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್  ಹೇಳಿದ್ದಾರೆ.
 ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಿಚ್ಚಿಸುವವರು ಇದೇ ಡಿಸೆಂಬರ್ 29 ರವರೆಗೆ ಮತದಾರರ ಪಟ್ಟಿಯಲ್ಲಿ  ಹೆಸರು ಸೇರಿಸಲು, ತೆಗೆದು ಹಾಕಲು ಮತ್ತು ತಿದ್ದುಪಡಿ ಮಾಡಬಹುದು. ಫೆಬ್ರುವರಿ 15 ರಂದು ಮತದಾರರ ಅಂತಿಮ ಪಟ್ಟಿಯನ್ನು  ಪ್ರಕಟಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
 ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು 5,58,670 ಹೊಂದಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ  ಕಡಿಮೆ 1,60,199 ಮತದಾರರನ್ನು ಹೊಂದಿದೆ. ಉಳಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾರರ ಸಂಖ್ಯೆ 2.18  ಲಕ್ಷ ಇದೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶ ಹೇಳುತ್ತಿದೆ.
 ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವಣೆವರೆಗೂ ಅವಕಾಶ ಇದೆ. ಇದರಿಂದ ಹೊಸ ಮತದಾರರ ಸಂಖ್ಯೆ 10 ರಿಂದ 15 ಲಕ್ಷ  ಹೆಚ್ಚುವ ನಿರೀಕ್ಷೆ ಇದೆ ಎಂದು ಸಂಜೀವ್ ಕುಮಾರ್ ಅವರ ಅಭಿಪ್ರಾಯ.
 ಕರಡು ಮತದಾರರ ಪಟ್ಟಿ ಈಗಾಗಲೇ ಚುನಾವಣಾ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಕರಡು ಪಟ್ಟಿಯನ್ನು  ರಾಜಕೀಯ ಮುಖಂಡರುಗಳಿಗೆ ತಲುಪಿಸಿದ್ದಾರೆ ಎಂದು ಅವರು ಹೇಳಿದರು.
 ಚುನಾವಣೆಗೆ ವಿದ್ಯುನ್ಮಾನ ಮತಯಂತ್ರವನ್ನೇ ಬಳಸುವುದಾಗಿ ಹೇಳಿದ ಅವರು, ಮೇ 28 ಹಾಲಿ ವಿಧಾನಸಭೆಯ ಅವಧಿ ಮುಗಿಯುತ್ತದೆ  ಚುನಾವಣೆ ಎಂದು ನಡೆಸಬೇಕು ಎಂಬುದನ್ನು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದರು.

 

45    ಸಿ.ಎಂ ಗೆ 2ನೇ ಹಂತದ ರಾಜ್ಯ ಪ್ರವಾಸ ಪಟ್ಟಿ ಬಿಡುಗಡೆ
  ಡಿಸೆಂಬರ್-5
 ಬೆಂಗಳೂರು: ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಚುನಾವಣೆ  ಚಟುವಟಿಕೆಗಳು ಗದಿಗೆದರಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಬಾರಿ ಶತಾಯಶತಾಯವಾಗಿ  ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಕಸರತ್ತು ಆರಂಭಿಸಿವೆ.
 ಇದಕ್ಕೆ ಪೂರಕವೆಂಬಂತೆ ಬಿಜೆಪಿ ರಾಜ್ಯಾದ್ಯಂತ ಪರಿವರ್ತಾನ ಯಾತ್ರೆ ಆರಂಭಿಸಿದ್ದು, ಜೆಡಿಎಸ್ ಕುಮಾರಪರ್ವ  ಆರಂಭಿಸಿದೆ. ಇನ್ನು ಆಡಳಿತ ರೂಢ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಎರಡು ಪಕ್ಷಗಳಿಗೆ ಸೆಡ್ಡು  ಹೊಡೆಯಲು 'ಜನಾಶೀರ್ವಾದ ಯಾತ್ರೆ' ಹೆಸರಿನಲ್ಲಿ ಚುನಾವಣೆ ಪ್ರಚಾರ ಆರಂಭಿಸಿದೆ.
 ಈ ಜನಾಶೀರ್ವಾದ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಹಂತದ ಪ್ರವಾಸದ ಪಟ್ಟಿ  ಬಿಡುಗಡೆಗೊಂಡಿದ್ದು, ಡಿಸೆಂಬರ್ 19ರಿಂದ ಜನವರಿ 13ರ ವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
 ಸಿದ್ದರಾಮಯ್ಯ ಪ್ರವಾಸ ಮಾಡಿರುವ ಜಿಲ್ಲೆಗಳು: ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹಾವೇರಿ, ಗದಗ,  ದಾವಣಗೆರೆ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ,  ಕೋಲಾರ, ರಾಮನಗರ, ಕೊಡಗು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಬಳ್ಳಪುರ,  ಹಾಸನ, ಶಿವವೊಗ್ಗ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸ ಕೈಗೊಳ್ಳಲಿದ್ದಾರೆ.

 

   45

ಹುಡುಗಿಗಾಗಿ ಗೆಳೆಯನ ಕೊಲೆ

ಡಿಸೆಂಬರ್-5

ಬೆಂಗಳೂರು: ಹುಡುಗಿ ವಿಚಾರದಲ್ಲಿ ಹಿಂದೆ ನಡೆದಿದ್ದ ಜಗಳ ಕೊನೆಗೆ ಯುವಕನ ಪ್ರಾಣವನ್ನೇ ಪಡೆದಿದೆ. ಹುಡುಗಿ ವಿಚಾರದಲ್ಲಿ ಹೊಡೆತ ತಿಂದಿದ್ದ ಯುವಕ ಹೊಡೆದವನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ. ಯುವಕ ಹೇಮಂತ ಕೊಲೆಗೀಡಾಗಿದ್ದು, ಹಳೆ ಗೆಳೆಯ ಮಧು ಕೊಲೆ ಮಾಡಿದ್ದಾನೆ. ಹೇಮಂತ ಗೆಳೆಯರ ಜೊತೆ ಪಾರ್ಟಿ ಮಾಡಿ ಮನೆಕಡೆ ಹೊರಟಿದ್ದಾಗ ಎದುರಾದ ಹಳೆ ಗೆಳೆಯ ಮಧು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ. ಈ ಹಿಂದೆ ಹುಡುಗಿ ವಿಚಾರದಲ್ಲಿ ಹೇಮಂತ ಮಧುನನ್ನು ಹೊಡೆದಿದ್ದ ಎನ್ನಲಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಅವಕಾಶಕ್ಕಾಗಿ ಕಾದು ಒಂಟಿಯಾಗಿ ಸಿಕ್ಕಿದ್ದ ಅವಕಾಶವನ್ನು ಬಳಕೆ ಮಾಡಿಕೊಂಡು ಕೊಲೆ ಮಾಡಿದ್ದಾನೆ.

 

 

 

     45

ಬಾಲಮಂದಿರದ ಶೌಚಾಲಯ ಕಿಟಕಿ ಮುರಿದು ಬಾಲಕರು ಪರಾರಿ

ಡಿಸೆಂಬರ್-5

ಬೆಂಗಳೂರು : ಶೌಚಾಲಯದ ಕಿಟಕಿ ಮುರಿದು ಎಂಟು ಬಾಲಕರು ಪರಾರಿಯಾದ ಘಟನೆ ಮಡಿವಾಳದ ಬಾಲಮಂದಿರದಲ್ಲಿ ನಡೆದಿದೆ.ಪರಾರಿಯಾದ ಬಾಲಕರು 16 ರಿಂದ 18 ವರ್ಷದ ವಯಸ್ಸಿನವರೆಂದು ಹೇಳಲಾಗುತ್ತಿದೆ. ಬಾಲಕರು ಊಟದ ವಿರಾಮದ ವೇಳೆ ಶೌಚಾಲಯಕ್ಕೆ ಹೋಗಿ ಕಿಟಕಿಯ ಸರಳುಗಳನ್ನು ಕೊರೆದು ಪರಾರಿಯಾಗಿದ್ದಾರೆ ಎಂದು ಬಾಲಮಂದಿರ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಕೆಲವು ನಿಮಿಷದಲ್ಲೇ ಬಾಲಕರು ಸರಳುಗಳನ್ನು ಕೊರೆದು ಎಸ್ಕೇಪ್ ಆಗಿದ್ದಾರೆ. ಕೆಲವು ಗಂಟೆಗಳ ನಂತರ ಬಾಲಕರನ್ನು ಎಣಿಸಿದಾಗ ಘಟನೆ ಬೆಳಕಿಗೆ ಬಂದಿದೆ.

 

456  ಮೈಸೂರು ಪಾಲಿಕೆ ಕಾರ್ಪೋರೇಟರ್ ಪುತ್ರಿ ವನಿತಾ ಆತ್ಮಹತ್ಯೆ
 ಡಿಸೆಂಬರ್-2
 ಬೆಂಗಳೂರು: ಮೈಸೂರು ಪಾಲಿಕೆ ಕಾರ್ಪೋರೇಟರ್ ನಾಗಭೂಷಣ್ ಅವರ  ಪುತ್ರಿ ನಿನ್ನೆ ರಾತ್ರಿ ಬೆಂಗಳೂರಿನ  ಹೆಚ್ಎಸ್ಆರ್ ಲೇಔಟ್ ನಲ್ಲಿರುವ ಗಂಡನ  ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 ಮೈಸೂರು ಕಾರ್ಪೋರೇಟರ್ ನಾಗಭೂಷಣ್ ಪುತ್ರಿ ವನಿತಾ ಆತ್ಮಹತ್ಯೆ  ಮಾಡಿಕೊಂಡಿರುವ ನವವಿವಾಹಿತೆ. ಏಳು  ತಿಂಗಳ ಹಿಂದೆಯಷ್ಟೇ ತಮಿಳುನಾಡು  ಮೂಲದ ಟೆಕ್ಕಿ ವಸಂತ್ ಎಂಬವರ ಜೊತೆ ಮದ್ವೆಯಾಗಿದ್ದು, ಬೆಂಗಳೂರಿನ  ಹೆಚ್ಎಸ್ಆರ್ ಲೇಔಟ್ ಗಂಡನ ಮನೆಯಲ್ಲಿ ವಾಸವಾಗಿದ್ದರು. ಆದರೆ, ವನಿತಾ  ನಿನ್ನೆ ರಾತ್ರಿ ಡೆತ್ ನೋಟ್  ಬರೆದಿಟ್ಟು ನೇಣು ಹಾಕಿಕೊಂಡಿದ್ದಾರೆ.
 ಮೃತ ವನಿತಾ ಸಾಯುವ ಮುಂಚೆ 4 ಪುಟದ ಡೆತ್ನೋಟ್ ಬರೆದಿದ್ದಾರೆ. ನನ್ನ  ಅತ್ತೆ ಗಾಯತ್ರಿ ಪ್ರತಿನಿತ್ಯ ಮನೆಯಲ್ಲಿ  ಕಿರುಕುಳ ನೀಡುತಿದ್ದಾರೆ. ಅಪ್ಪನ  ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಾರೆ.
 ಅಷ್ಟೇ ಅಲ್ಲದೇ ಸರಿಯಾಗಿ ಊಟ ತಿಂಡಿಯನ್ನು ಸಹ ನೀಡದೆ ಹಿಂಸೆ  ನೀಡುತ್ತಿದ್ದಾರೆ. ಇದರಿಂದ ನಾನು ಬೇಸತ್ತು  ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ  ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
 ಸ್ಥಳಕ್ಕೆ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಮೃತ ವನಿತಾಳ  ಗಂಡ ವಸಂತ್ ಮತ್ತು ಅತ್ತೆ  ಗಾಯತ್ರಿಯನ್ನು ವಶಕ್ಕೆ ಪಡೆದು ತನಿಖೆ  ನಡೆಸುತ್ತಿದ್ದಾರೆ.

 

 

33  ರಾಜ್ಯದ ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕ
 ಡಿಸೆಂಬರ್- 1
 ಬೆಂಗಳೂರು: ದೇವಸ್ಥಾನಗಳಲ್ಲಿ ದಲಿತ ಅರ್ಚಕರ ನೇಮಕಾತಿಗೆ ಕೇರಳ ರಾಜ್ಯವನ್ನು ಅನುಸರಿಸಲು ಕರ್ನಾಟಕ  ಸರ್ಕಾರ ಮುಂದಾಗಿದೆ. ದಲಿತ ಸಮುದಾಯದ ತಂಡವೊಂದು ಮುಜರಾಯಿ ಇಲಾಖೆ ನಡೆಸುವ ಆಗಮ ಶಾಲೆಯಲ್ಲಿ  ಹೆಸರು ನೋಂದಾಯಿಸಿಕೊಂಡಿದೆ.
 ಮುಜರಾಯಿ ಇಲಾಖೆ ದೇವಸ್ಥಾನದ ದಲಿತ ಅರ್ಚಕರಿಗೆ ಪ್ರಮಾಣಪತ್ರ ನೀಡುತ್ತದೆ. ನೋಂದಾವಣೆಗೊಂಡ ದಲಿತರು  ಪೂಜಾ ವಿಧಿ ವಿಧಾನದ ಕೋರ್ಸ್ ನ್ನು ಮುಗಿಸಿದರೆ ದೇವಸ್ಥಾನದ ಅರ್ಚಕರಾಗಿ ಸೇವೆ ಸಲ್ಲಿಸಬಹುದು.
 ರಾಜ್ಯಾದ್ಯಂತ 38 ಆಗಮ ಶಾಲೆಗಳನ್ನು ತೆರೆಯಲಾಗಿದ್ದು 18ರಿಂದ 40 ವರ್ಷದೊಳಗಿನವರು ಆಗಮ ಶಾಸ್ತ್ರ  ಕೋರ್ಸ್ ಗೆ ದಾಖಲಾತಿ ಮಾಡಿಕೊಳ್ಳಬಹುದು. ಅರ್ಚಕರಾಗುವ ಮುನ್ನ ಅಭ್ಯರ್ಥಿಗಳು ಪ್ರವರ, ಪ್ರವೀಣ ಮತ್ತು ವಿದ್ವತ್  ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.
 ಸರ್ಕಾರ ಆರಂಭಿಸಿರುವ ಆಗಮ ಶಾಸ್ತ್ರ ಕೋರ್ಸಿಗೆ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ಮಾತ್ರ  ನೋಂದಾಯಿಸಿಕೊಳ್ಳುತ್ತಿದ್ದರು. ದಲಿತ ಸಮುದಾಯದವರಿಗೆ ಹಿಂಜರಿಕೆ ಅಥವಾ ಸಾಮಾಜಿಕ ಒತ್ತಡ ಇದಕ್ಕೆ  ಕಾರಣವಾಗಿದ್ದಿರಬಹುದು. ಆದರೆ ಇದೀಗ ಕೆಲವು ದಲಿತ ಸಮುದಾಯದ ಅಭ್ಯರ್ಥಿಗಳು ಕೂಡ ಕೋರ್ಸ್ ಓದಲು ಮುಂದೆ  ಬರುತ್ತಿದ್ದಾರೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಯಾವುದೇ ಜಾತಿಗೆ ಸೇರಿದ  ಶಾಸ್ತ್ರ ಓದಿದ ಅಭ್ಯರ್ಥಿಗಳಿಗೆ ಅರ್ಚಕರಾಗಲು ಅನುವು ಮಾಡಿಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಲೇ  ಬಂದಿದೆ.
 ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲಮಣಿ,  ಉಡುಪಿಯಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ನಲ್ಲಿ ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಕ ಮಾಡುವ  ತೀರ್ಮಾನವನ್ನು ಹಲವು ಮಠಾಧೀಶರು ಸ್ವಾಗತಿಸಿದ್ದಾರೆ. ಇಲ್ಲಿಯವರೆಗೆ ದಲಿತರನ್ನು ಅಸ್ಪ್ರಶ್ಯರು ಎಂದು  ನೋಡಲಾಗುತ್ತಿತ್ತು. ಧಾರ್ಮಿಕ ಮುಖಂಡರು ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದಿರಿಸಿದಾಗ ಜಾತ್ಯತೀತ ಸರ್ಕಾರವಾಗಿ  ನಾವು ಮತ್ತೊಂದು ಹೆಜ್ಜೆ ಮುಂದಿಡುತ್ತೇವೆ. ದೇವಸ್ಥಾನಗಳಲ್ಲಿ ಪೂಜೆ ಮಾಡುವವರನ್ನು ಆಗಮ ಶಾಸ್ತ್ರ ಪಂಡಿತರಾಗಿ  ಕಾಣುತ್ತೇವೆಯೇ ಹೊರತು ಯಾವುದೇ ಜಾತಿಯಾಧಾರದಿಂದ ನೋಡುವುದಿಲ್ಲ ಎಂದರು.
 ರಾಜ್ಯದ 34,000 ದೇವಾಲಯಗಳು ಮುಜರಾಯಿ ಇಲಾಖೆಯಡಿ ಬರುತ್ತಿದ್ದು, ಇಲ್ಲಿ ಸುಮಾರು 1.2 ಲಕ್ಷ ಅರ್ಚಕರು  ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಬೇರೆ ಇಲಾಖೆಗಳಂತೆ ಇಲ್ಲಿ ನೇಮಕಾತಿ ನಡೆಯುವುದಿಲ್ಲ. ಬ್ರಾಹ್ಮಣ ಸಮುದಾಯದ  ನಿರ್ದಿಷ್ಟ ಕುಟುಂಬದ ವ್ಯಕ್ತಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅರ್ಚಕರು ತೀರಿಹೋದರೆ ಅಥವಾ ಅವರಿಗೆ ವಯಸ್ಸಾದ  ಮೇಲಷ್ಟೇ ಬೇರೆ ಅರ್ಚಕರು ಬರುತ್ತಿದ್ದರು. ಎಸ್.ಸಿ/ಎಸ್.ಟಿ/ಒಬಿಸಿ ಸಮುದಾಯಗಳಿಗೆ ಇಲ್ಲಿ ಮೀಸಲಾತಿ ಇರುತ್ತಿರಲಿಲ್ಲ.  ಆದರೆ ಇನ್ನು ಮುಂದೆ ಆಗಮ ಶಾಸ್ತ್ರ ಪ್ರಮಾಣಪತ್ರ ಹೊಂದಿರುವವರು ದೇವಸ್ಥಾನದ ಅರ್ಚಕರಾಗಬಹುದು ಎಂದರು.

 

 

535    ಕೈ-ಕಾಲು ಕಟ್ಟಿ ವೃದ್ಧ ದಂಪತಿ ಹತ್ಯೆ
ನವೆಂಬರ್-29
 ಬೆಂಗಳೂರು : ವೃದ್ಧ ದಂಪತಿಗಳ ಕೈ-ಕಾಲು ಕಟ್ಟಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೇಣು ಬಿಗಿದ  ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೊಮ್ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
 ಮಾರತ್ತಹಳ್ಳಿ ಸಮೀಪದ ಅಶ್ವಥ್ ನಗರದ ನಿವಾಸಿಗಳಾದ ಗೋವಿಂದನ್ (65), ಸರೋಜಮ್ಮ (62) ಅವರನ್ನು ಹತ್ಯೆ  ಮಾಡಲಾಗಿದೆ. ಎರಡು ದಿನಗಳ ಹಿಂದೆ ಹತ್ಯೆ ನಡೆದಿರುವ ಸಾಧ್ಯತೆ ಇದ್ದು, ನಿನ್ನೆ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
 ಬಿಇಎಲ್ ನಿವೃತ್ತ ನೌಕರರಾದ ಗೋವಿಂದನ್ ಮತ್ತು ಸರೋಜಾ ಇಬ್ಬರೇ ಅಶ್ವಥ್ ನಗರದಲ್ಲಿ ವಾಸವಾಗಿದ್ದರು. ಮಂಗಳವಾರ  ರಾತ್ರಿ ಮನೆಯಿಂದ ವಾಸನೆ ಬರುತ್ತಿತ್ತು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
 8.30ರ ಸುಮಾರಿಗೆ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಹತ್ಯೆಯಾಗಿರುವುದು ತಿಳಿದಿದೆ. ಹತ್ಯೆಯಲ್ಲಿ  ಮೊಮ್ಮಗನ ಕೈವಾಡವಿರುವ ಶಂಕೆ ಇದ್ದು, ಎಚ್.ಎ.ಎಲ್ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ  ನಡೆಸುತ್ತಿದ್ದಾರೆ.
 ದಂಪತಿಗಳ ಕೈ ಕಾಲು ಕಟ್ಟಿ ಹತ್ಯೆ ಮಾಡಲಾಗಿದೆ. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಇಬ್ಬರನ್ನು ನೇಣು ಹಾಕಲಾಗಿದೆ.  ದೇಹದ ಮೇಲೆ ಚಾಕುವಿನಿಂದ ಇರಿದ ಗುರುತುಗಳು ಪತ್ತೆಯಾಗಿವೆ.
 ಕೆಲವು ದಿನಗಳ ಹಿಂದೆ ಮೊಮ್ಮಗ ಮನೆಗೆ ಬಂದು ದಂಪತಿಗಳ ಜೊತೆ ಜಗಳವಾಡಿದ್ದ ಎಂದು ಸ್ಥಳೀಯರು ಪೊಲೀಸರಿಗೆ  ಮಾಹಿತಿ ನೀಡಿದ್ದಾರೆ. ಹತ್ಯೆಯಲ್ಲಿ ಪರಿಚಯಸ್ಥರೇ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ  ಮುಂದುವರೆದಿದೆ.

 

 

555   ಒನಕೆ ಒಬವ್ವ, ರಾಣಿ ಚೆನ್ನಮ್ಮ ವಿರುದ್ಧ ಕೀಳು ಪೋಸ್ಟ್
 ನವೆಂಬರ್-29
 ಬೆಂಗಳೂರು: ದೇಶಾದ್ಯಂತ ಪದ್ಮಾವತಿ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆ ಚಿತ್ರವನ್ನು ಖಂಡಿಸುವ  ಭರದಲ್ಲಿ 'ಪ್ರತಾಪ್ ಸಿಂಹ ಫೊರ್ ಸಿಎಂ' ಎಂಬ ಫೇಸ್ಬುಕ್ ಪೇಜ್ನಲ್ಲಿ ಇತಿಹಾಸದ ವೀರ ವನಿತೆಯರಿಬ್ಬರ ಕುರಿತು  ಅತ್ಯಂತ ಕೀಳು ಪೋಸ್ಟ್ ಹಾಕಿ ಅಪಮಾನ ಮಾಡಲಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
 ಪೋಸ್ಟ್ನಲ್ಲಿ ರಾಣಿ ಚೆನ್ನಮ್ಮ ಮತ್ತು ಓಬವ್ವ ವಿರುದ್ಧ ಅತ್ಯಂತಕೀಳು ಮಟ್ಟದಲ್ಲಿ ಬರೆದು, 'ಕೋಪ ಬಂತಲ್ವಾ, ಹಾಗಾದ್ರೆ  ಕನ್ನಡ ಚಿತ್ರರಂಗಕ್ಕೆ ಇಂಥ ಕಥೆಗಳ ವಿರುದ್ಧ ಕೋಪ ಬರ್ತಿಲ್ವಾ ?' ಎಂದು ಪ್ರಶ್ನಿಸಲಾಗಿದೆ.
 ಕನ್ನಡ ಪರ ಸಂಘಟನೆಗಳು ಮತ್ತು ಸಾರ್ವಜನಿಕರು ಪೋಸ್ಟ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಪೋಸ್ಟ್ ಹಾಕಿದವರನ್ನು  ತಕ್ಷಣ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

 

333   ವಾರ್ಡನ್ ಕಿರುಕುಳಕ್ಕೆ ಕೈ ಕುಯ್ದುಕೊಂಡ ವಿದ್ಯಾರ್ಥಿ
ನವೆಂಬರ್-28
 ರಾಮನಗರ : ವಾರ್ಡನ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯೋರ್ವ ಬ್ಲೇಡಿನಿಂದ ಕೈ ಕುಯ್ದುಕೊಂಡ ಘಟನೆ  ಇಲ್ಲಿನ ಕೆಂಪೇಗೌಡ ದೊಡ್ಡಿಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.
 ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಂತೋಷ್ (21) ಕೈ ಕುಯ್ದುಕೊಂಡ ವಿದ್ಯಾರ್ಥಿ. ಸದ್ಯ ಆತನನ್ನು  ಆಸ್ಪತ್ರೆಗೆ ದಾಖಲು ಮಾಡಲಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 'ಹಾಸ್ಟೆಲ್ ನಲ್ಲಿ ಮೂಲ ಸೌಕರ್ಯ ನೀಡಿ ಎಂದು  ಪ್ರಶ್ನಿಸಿದ್ದಕ್ಕೆ ವಾರ್ಡನ್ ನಮಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಹಾಸ್ಟೆಲ್ ನಿಂದಲೇ ಹೊರಹಾಕುವುದಾಗಿ ಎಚ್ಚರಿಸಿದ್ದಾರೆ' ಎಂದು  ವಿದ್ಯಾರ್ಥಿ ಪತ್ರ ಬರೆದಿಟ್ಟಿದ್ದನು.

 

 

555  ಯುವತಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
 ನವೆಂಬರ್-28
 ಬೆಂಗಳೂರು: ವ್ಯಕ್ತಿಯೊಬ್ಬ ಯುವತಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಸಮೀಪ  ಮಾರೇನಹಳ್ಳಿಯಲ್ಲಿ ನಿನ್ನೆ ನಡೆದಿದೆ.
 ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಕೃಷ್ಣ ಅಂಗಡಿ ಮಾಲಿಕ ಮಧು ಅವರ ಸೊಸೆಯನ್ನು ಕೊಂದು ತಾನು ಆತ್ಮಹತ್ಯೆ  ಮಾಡಿಕೊಂಡಿದ್ದಾನೆ. ದ್ವಿತೀಯ ಪದವಿಯಲ್ಲಿ ಓದುತ್ತಿರುವ ದಿವ್ಯ ಎಂಬಾಕೆಯನ್ನು ಕೊಂದ ನಂತರ ರಾಮಕೃಷ್ಣ ನಿನ್ನೆ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 ದಿವ್ಯಳನ್ನು ರಾಮಕೃಷ್ಣ ಪ್ರೀತಿಸುತ್ತಿದ್ದ ಆದರೆ ಆಕೆ ಅವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದು ಈ ಘಟನೆಗೆ ಕಾರಣವಾಗಿರಬಹುದು  ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಜಯನಗರ ಎಸಿಪಿ ಪರಮೇಶ್ವರ ಹೆಗ್ಡೆ, ಮಧು ಅವರ ಮಾಲಿಕತ್ವದ ಕೋಳಿ  ಅಂಗಡಿಯಲ್ಲಿ ಕಳೆದ 15 ವರ್ಷಗಳಿಂದ ರಾಮಕೃಷ್ಣ ಕೆಲಸ ಮಾಡುತ್ತಿದ್ದ. ಮಧುವಿನ ಸೋದರಿ ಸುಭಾಶಿಣಿ ಮದುವೆಯಾದ ನಂತರ  ತನ್ನ ಮಗಳು ದಿವ್ಯ ಜೊತೆಗೆ ಅದೇ ಕಟ್ಟಡದಲ್ಲಿ ವಾಸವಾಗಿದ್ದಾಳೆ.
 ಅನೇಕ ವರ್ಷಗಳಿಂದ ರಾಮಕೃಷ್ಣ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದ ರಿಂದ ಮಧುವಿನ ಕುಟುಂಬದವರು ಅವನ ಬಗ್ಗೆ  ಚೆನ್ನಾಗಿ ತಿಳಿದುಕೊಂಡಿದ್ದರು ಎನ್ನುತ್ತಾರೆ.
 ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ರಾಮಕೃಷ್ಣ ಮತ್ತು ದಿವ್ಯ ಮಾತನಾಡುತ್ತಿರುವುದನ್ನು ಮಧು ನೋಡಿದ್ದಾರೆ. ನಂತರ ದೂರವಾಣಿ  ಮೂಲಕ ಅವರಿಬ್ಬರನ್ನು ಸಂಪರ್ಕಿಸಲೆತ್ನಿಸಿದಾಗ ಪ್ರತಿಕ್ರಿಯೆ ಬರಲಿಲ್ಲ. ಸುಭಾಶಿಣಿ ಮನೆಗೆ ಹೋಗಿ ನೋಡಿದಾಗ ಮನೆ ಬೀಗ  ಹಾಕಲಾಗಿತ್ತು. ಬೀಗ ಮುರಿದು ಒಳಗೆ ಹೋಗಿ ಬೆಡ್ ರೂಂನಲ್ಲಿ ನೋಡಿದಾಗ ರಾಮಕೃಷ್ಣ ಮತ್ತು ದಿವ್ಯ ಇಬ್ಬರೂ ಮೃತಪಟ್ಟಿದ್ದರು.  ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ರಾಮಕೃಷ್ಣ ಶಾಲಿನಲ್ಲಿ ದಿವ್ಯಳ ಕುತ್ತಿಗೆ ಹಿಸುಕಿ ಸಾಯಿಸಿದ್ದ.
 ತನಗೆ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದು ರಾಮಕೃಷ್ಣ ದಿವ್ಯಳನ್ನು ಕೊಂದಿರಬೇಕು. ನಂತರ ಭಯದಿಂದ ತಾನು ಆತ್ಮಹತ್ಯೆ  ಮಾಡಿಕೊಂಡಿರಬೇಕು ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಶಂಕಿಸಿದ್ದಾರೆ.
 ದಿವ್ಯ ಕೆಟಿಎಸ್ ವಿ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಳು. ರಾಮಕೃಷ್ಣ ನೆಲಮಂಗಲ ಮೂಲದವನು.  ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

  hh

  ನ.26ಕ್ಕೆ ಭಾರತ್ ಕೋ ಜಾನೋ ರಸ ಪ್ರಶ್ನೆ ಕಾರ್ಯಕ್ರಮ
ನವೆಂಬರ್.25
ಬೆಂಗಳೂರು: ಭಾರತ್ ಕೋ ಜಾನೋ ಎಂಬ ವಿಷಯ ಕುರಿತು ಮಕ್ಕಳಿಗಾಗಿ ರಸ ಪ್ರಶ್ನೆ ಸ್ಪರ್ಧೆಯನ್ನು ನಗರದ ಜಯನಗರ ಶೈಕ್ಷಣಿಕ ಸಮಿತಿ 11ನೇ ಮುಖ್ಯ ರಸ್ತೆ, 5ನೇ ಬ್ಲಾಕ್, ಜಯನಗರನಲ್ಲಿ ನ.26 ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಭಾರತದ ಐದು ರಾಜ್ಯಗಳಿಂದ 300 ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾರತ್ ಕೋ ಜಾನೋ ಎಂಬ ವಿಷಯವಾಗಿ ರಸ ಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಭಾರತ್ ವಿಕಾಸ ಪರಿಷದ್ ಕಾರ್ಯಕ್ರಮ ಆಯೋಜಿಸಿದೆ.  
ದೆಹಲಿ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಸುರೇಶ್ ಜೈನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತಿ ಐಎಎಸ್ ಅಧಿಕಾರಿ  ಬಿ.ಎಫ್. ಪಟೇಲ್, ಶಾಸಕ ಬಿ.ಎನ್. ವಿಜಯಕುಮಾರ್ ಪಾಲ್ಗೊಳ್ಳಲಿದ್ದಾರೆ.  
ಮಧ್ಯಾಹ್ನ 3 ಗಂಟೆಗೆ ರಸ ಪ್ರಶ್ನೆ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ 10 ಮಂದಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ೆಂದು ಪತ್ರಿಕಾ ಪ್ರಕಟಣೆ ಮೂಲಕ ಶೋಭಾ ರಾಣಿ ತಿಳಿಸಿದ್ದಾರೆ.

 

 

555  3 ಜನ ಸೇರಿ ಕೊಲೆ ಮಾಡಿಸಿದ್ದಾರೆ; ಡಿಕೆ ರವಿ ತಾಯಿ
ನವೆಂಬರ್-24
 ಬೆಂಗಳೂರು: ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ನನ್ನ ಮಗನನ್ನು ಸಿಎಂ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್,  ವರ್ತೂರು ಪ್ರಕಾಶ್ ಹಾಗೂ ಮಾವ ಹನುಮಂತರಾಯಪ್ಪ ಸೇರಿ ಕೊಲೆ ಮಾಡಿಸಿದ್ದಾರೆ ಎಂದು ಮೃತ ಐಎಎಸ್ ಅಧಿಕಾರಿ  ಡಿಕೆ  ರವಿ ತಾಯಿ ಗೌರಮ್ಮ ಗಂಭೀರವಾಗಿ ಆರೋಪಿಸಿದ್ದಾರೆ.
 ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರಿಟ್ಟ ಅವರು, ಷಡ್ಯಂತ್ರದಿಂದ ನನ್ನ ಮಗನ ಕೊಲೆ ನಡೆದಿದೆ. ನನಗೆ  ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದರೂ ಕೂಡಾ ನ್ಯಾಯ ಸಿಕ್ಕಿಲ್ಲ.
 ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ, ಎಲ್ಲಾ ಸೇರಿ ಷಡ್ಯಂತ್ರದಿಂದ ಕೊಲೆ ಮಾಡಿಸಿದ್ದಾರೆ ಎಂದು ಕಣ್ಣೀರಿಟ್ಟರು.

 

 

474

  ಎಂ.ಕೆ.ಗಣಪತಿ ಆತ್ಮಹತ್ಯೆ : ಡಿಸೆಂಬರ್ನಲ್ಲಿ ವರದಿ

 ಬೆಂಗಳೂರು : ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನಿವೃತ್ತ ನ್ಯಾ.ಕೆ.ಎನ್.ಕೇಶವನಾರಾಯಣ   ಆಯೋಗ ಪೂರ್ಣಗೊಳಿಸಿದೆ. ಮತ್ತೊಂದು ಕಡೆ ಸುಪ್ರೀಂಕೋರ್ಟ್ ಆದೇಶದಂತೆ ಸಿಬಿಐ ಸಹ ತನಿಖೆಯನ್ನು ನಡೆಸುತ್ತಿದೆ.
 ಕರ್ನಾಟಕ ಸರ್ಕಾರ 2016ರ ಜುಲೈನಲ್ಲಿ ತಿಂಗಳಿನಲ್ಲಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಆಯೋಗವನ್ನು   ರಚನೆ ಮಾಡಿತ್ತು. ಡಿಸೆಂಬರ್ ಅಂತ್ಯದಲ್ಲಿ ಆಯೋಗ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ ಮಾಡಲಿದೆ.
 ಆಯೋಗ ಎಂ.ಕೆ.ಗಣಪತಿ ಕುಟುಂಬ ಸದಸ್ಯರು, ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು, ಮರಣೋತ್ತರ ಪರೀಕ್ಷೆ ನಡೆಸಿದ   ವೈದ್ಯರು, ಎಫ್ಎಸ್ಎಲ್ ವಿಜ್ಞಾನಿಗಳು ಸೇರಿ 49 ಜನರ ಹೇಳಿಕೆಯನ್ನು ಆಯೋಗ ಸಂಗ್ರಹ ಮಾಡಿದೆ.
 ಗಣಪತಿ ಅವರ ಬಳಸುತ್ತಿದ್ದ ಫೋನ್, ಅವರು ಕೊನೆಯದಾಗಿ ನೀಡಿದ ಹೇಳಿಕೆ, ಮಡಿಕೇರಿ ವಿನಾಯಕ ಲಾಡ್ಜ್ ನ ಸಿಸಿಟಿವಿ   ದೃಶ್ಯಾವಳಿಗಳು ಸೇರಿದಂತೆ ವಿವಿಧ ಸಾಕ್ಷಿಗಳನ್ನು ಆಯೋಗ ಸಂಗ್ರಹಿಸಿ ಪ್ರತ್ಯೇಕವಾದ ತನಿಖೆ ನಡೆಸಿದೆ.
 ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ   ಎ.ಎಂ.ಪ್ರಸಾದ್ ಆರೋಪಿಗಳಾಗಿದ್ದಾರೆ. ಕರ್ನಾಟಕದ ಸರ್ಕಾರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ   ಸಚಿವರಿಗೆ ಕ್ಲೀನ್ ಚಿಟ್ ನೀಡಿತ್ತು.
 ಎಂ.ಕೆ.ಗಣಪತಿ ಆತ್ಮಹತ್ಯೆ ಅವರ ತಂದೆ ಕುಶಾಲಪ್ಪ ಅವರು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ಗೆ   ಅರ್ಜಿ  ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ತನಿಖೆಗೆ ಆದೇಶ ನೀಡಿದೆ.
 ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿದ್ದ ಎಂ.ಕೆ.ಗಣಪತಿ ಅವರು ಜುಲೈ 7ರಂದು ಖಾಸಗಿ ಸುದ್ದಿವಾಹಿನಿಯ   ಸಂದರ್ಶನದಲ್ಲಿ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರು ಪ್ರಸ್ತಾಪಿಸಿದ್ದರು. ನಂತರ ಮಡಿಕೇರಿ ವಿನಾಯಕ   ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

 

 

222  ರಾಸಲೀಲೆ ಪ್ರಕರಣ : ರಾಮನಗರದಲ್ಲಿ ನಿತ್ಯಾನಂದನ ಗಡಿಪಾರಿಗೆ ಆಗ್ರಹ
 ನವೆಂಬರ್-24
 ರಾಮನಗರ : ತಾಲ್ಲೂಕಿನ ಬಿಡದಿ ಬಳಿಯ ನಿತ್ಯಾನಂದ ಆಶ್ರಮದ ಪೀಠಾಧಿಪತಿ ನಿತ್ಯಾನಂದ ಹಾಗೂ ಬಹುಭಾಷಾ ನಟಿ   ರಂಜೀತಾ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಸಲೀಲೆ ವೀಡಿಯೋದರಲ್ಲಿರುವುದು ನಿತ್ಯಾನಂದ ಎಂದು ಧೃಡಪಟ್ಟ   ಹಿನ್ನೆಲೆಯಲ್ಲಿ ನಿತ್ಯಾನಂದನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ   ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶಗೌಡ, ನಟಿಯೊಂದಿಗಿನ ರಾಸಲೀಲೆ ವೀಡಿಯೋದಲ್ಲಿರುವುದು   ನಾನಲ್ಲ ಎಂದು ನಿತ್ಯಾನಂದ ಹೇಳಿಕೊಂಡಿದ್ದರು. ಆದರೆ ವೀಡಿಯೋದಲ್ಲಿರುವುದು ನಿತ್ಯಾನಂದ ಎಂದು ಧೃಡಪಟ್ಟಿದೆ. ನಿತ್ಯಾನಂದ   ಸ್ವಾಮೀಜಿ ನಿಜ ಬಣ್ಣ ಬಯಲಾಗಿದೆ ಎಂದರು.
 ನಿತ್ಯಾನಂದ ರಾಜ್ಯದಲ್ಲಿರುವುದು ಸರಿಯಲ್ಲ ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಅವರು ಆಗ್ರಹಿಸಿದರು.

 

 

222

 ಕನ್ನಡ ಕಲಿಯೋದಿಲ್ವಾ ಅಮಿತ್ ಶಾ ಅವರೇ : ಸಿ ಎಂ

ನವೆಂಬರ್-22 
 ಬೆಂಗಳೂರು: ಕನ್ನಡ ಕಲಿಯೋದಿಲ್ವಾ ಅಮಿತ್ ಶಾ ಅವರೇ..? ಇದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪ್ರಶ್ನೆ.   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಮಿಳು, ಬಂಗಾಳಿ ಭಾಷೆ ಕಲಿಯುತ್ತಿ ದ್ದಾರೆ ಎಂಬ ವರದಿಯ   ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಟ್ವೀಟರ್ ಮೂಲಕ, ಕನ್ನಡ ಕಲಿಯೋದಿಲ್ವಾ ಅಮಿತ್ ಶಾ ಅವರೇ ಎಂದು ಟಾಂಗ್   ನೀಡಿದ್ದಾರೆ.
 ಸಿ.ಟಿ.ರವಿ ತಿರುಗೇಟು: ಸಿದ್ದರಾಮಯ್ಯ ಅವರ ಈ ಟಾಂಗ್ಗೆ ತಿರುಗೇಟು ನೀಡಿರುವ ಬಿಜೆಪಿಯ ರಾಜ್ಯ ಪ್ರಧಾನ   ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ. ರವಿ, ರಾಜ್ಯೋತ್ಸವ ದಿನದಂದು ಕನ್ನಡಿಗರಿಗೆ ಶುಭ ಕೋರದ ರಾಹುಲ್   ಗಾಂಧಿರನ್ನು ಪ್ರಶ್ನಿಸದ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರಿಗೆ ಕನ್ನಡ ಕಲಿಯೋದಿಲ್ವಾ ಎಂದು ಪ್ರಶ್ನಿಸಿರುವುದು   ಎಂದಿದ್ದಾರೆ.

 

 

 

444               ಖಾಸಗಿ ಶಾಲೆಗಳಿಗೆ ಶಾಕ್!
 ನವೆಂಬರ್-22
 ಬೆಂಗಳೂರು : ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಮಕ್ಕಳಿಲ್ಲದೇ ಬಡವಾಗುತ್ತಿವೆ. ಒಂದೊಂದೇ ಶಾಲೆಗಳು ಮುಚ್ಚುತ್ತಿವೆ.   ಹೀಗಿರುವಾಗ ಪರಿಷತ್ ಸದಸ್ಯರೊಬ್ಬರು ಇದೀಗ ಸರ್ಕಾರಿ ಶಾಲೆಗಳ ಉಳಿವಿಕೆಗೆ ಒಂದು ವಿಧೇಯಕ ಸಿದ್ಧಪಡಿಸಿದ್ದಾರೆ.
 ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಖಾಸಗಿ ಶಾಲೆಗಳ ಜೊತೆ ಸರ್ಕಾರಿ ಶಾಲೆಗಳಿಗೆ ಪೈಪೋಟಿ ನೀಡಲು ಆಗುತ್ತಿಲ್ಲ.   ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿವೆ. ಕೆಲವು ನಿರ್ವಹಣೆ ಕೊರತೆಯಿಂದ ಸೊರಗುತ್ತಿವೆ. ಇದಕ್ಕೆಲ್ಲಾ  ಬ್ರೇಕ್ ಹಾಕಲು ಖಾಸಗಿ ವಿಧೇಯಕವೊಂದು ರೆಡಿಯಾಗಿದೆ. ಅದೇನಂದರೆ ಜನಪ್ರತಿನಿಧಿಗಳು ಹಾಗೂ ಸರ್ಕಾರಿ   ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದುವಂತೆ ನಿಯಮ ಜಾರಿಗೊಳಿಸಬೇಕೆಂಬ ವಿಧೇಯಕ ನಾಳೆ ಪರಿಷತ್ನಲ್ಲಿ   ಮಂಡನೆಯಾಗಲಿದೆ. ಕಾಂಗ್ರೆಸ್ ಸದಸ್ಯ ರಘು ಆಚಾರ್ ಈ ಖಾಸಗಿ ವಿಧೇಯಕ ಮಂಡಿಸಲಿದ್ದಾರೆ.
 ಈ ವಿಧೇಯಕ ಅಂಗೀಕಾರವಾದರೆ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಾಗಲಿದೆ. ಇದರಿಂದ ಸರ್ಕಾರಿ ಶಾಲೆಗಳಿಗೆ ಮೂಲ   ಸೌಕರ್ಯ ಗಳನ್ನು ಒದಗಿಸುವ ಜೊತೆಗೆ , ಶಾಲೆಗಳನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಬೇಕಾಗುತ್ತದೆ.   ಇದರಿಂದ ಖಾಸಗಿ ಶಾಲೆಗಳ ಆಟಾಟೋಪಕ್ಕೆ ಬ್ರೇಕ್ ಬೀಳಲಿದೆ.

 

22 ಮದ್ಯ ನಿಷೇಧಕ್ಕೆ ಸಿಎಂ ಸಿದ್ಧತೆ : ರಾಜ್ಯದಲ್ಲಿ ಲಿಕ್ಕರ್ ಬ್ಯಾನ್ ಆಗುತ್ತಾ.?
 ನವೆಂಬರ್-18
 ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರು ರಾಜ್ಯದ ಆಡಳೀತಾರೂಡ ಕಾಂಗ್ರೆಸ್ ಸರ್ಕಾರ, ಹೆಂಗಳೆಯರ ಒಟ್ ಬ್ಯಾಂಕ  ಗಿಟ್ಟಿಸಿಕೊಳ್ಳೋಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಕದಲ್ಲಿ ಲಿಕ್ಕರ್ ಬ್ಯಾನ್ ಎನ್ನುವ ಸುದ್ದಿಯನ್ನು ಹರಿ ಬಿಟ್ಟಿದೆ. ಇದು ಅದೆಷ್ಟೋ ನೊಂದ ಹೆಣ್ಣುಮಕ್ಕಳಿಗೆ  ಸಂತಸ ಕೊಟ್ಟರೇ, ದಿನಂಪ್ರತಿ ಕುಡಿತದ ಚಟಕ್ಕೆ ಬಿದ್ದ ಮಧ್ಯಪ್ರಿಯರಿಗೆ ಇದೀಗ ಶಾಕ್ ನೀಡಿದೆ. ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಮಧ್ಯ ಮಾರಾಟ ನಿಷೇಧ  ಮಾಡಿ, ಕರ್ನಾಟಕವನ್ನು ಮದ್ಯ ಮುಕ್ತವಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಸಿದ್ಧತೆ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.
 ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಮಧ್ಯವನ್ನು ನಿಷೇಧ ಮಾಡಬೇಕು ಎಂಬ ಕೂಗು ರಾಜ್ಯದಲ್ಲಿ ಆಗಾಗ ಹೊರ ಬೀಳುತ್ತಲೇ ಇದೆ. ಇಂತಹ ಲಿಕ್ಕರ್ ನನ್ನು  ಬ್ಯಾನ್ ಮಾಡೋಕೆ ಸಿಎಂ ಸಿದ್ದರಾಮಯ್ಯ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ, ಈಗಾಗಲೇ ಮಧ್ಯ  ನಿಷೇಧ ಮಾಡಿರುವ ಬಿಹಾರಕ್ಕೆ, ರಾಜ್ಯದ ತಂಡವೊಂದನ್ನು ಕಳಿಸಿ, ಪರ್ಯಾಯ ಆದಾಯದ ಮೂಲಗಳು ಹೇಗೆ ಎಂಬ ಬಗ್ಗೆ ಪರಿಶೀಲನೆ ಮಾಡಿಸುತ್ತಿದ್ದಾರಂತೆ.    ಅದರಲ್ಲೂ ರಾಜ್ಯದಲ್ಲಿ ಮದ್ಯವನ್ನು ಬ್ಯಾನ್ ಮಾಡಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಮದ್ಯವಿಲ್ಲದೇ ಗೆಲ್ಲುವ ಯೋಜನೆಯಲ್ಲಿದ್ದಾರಂತೆ ಸಿಎಂ  ಸಿದ್ದರಾಮಯ್ಯ.
  ಅಂದಹಾಗೇ, ರಾಜ್ಯದಲ್ಲಿನ ರಾಷ್ಟ್ರೀಯ ಪಕ್ಷವಾಗ ಬಿಜೆಪಿ, ಪ್ರಾದೇಶಿಕಪಕ್ಷವಾದ ಜೆಡಿಎಸ್ ಪಕ್ಷಗಳ ಭರವಸೆಯನ್ನೇ ಬಂಡವಾಳ ಮಾಡಿಕೊಳ್ಳೋಕೆ ಹೊರಟ    ಸಿಎಂ, ಮದ್ಯದಿಂದ ರಾಜ್ಯಕ್ಕೆ ಬರುತ್ತಿದ್ದ 18 ಸಾವಿರ ಕೋಟಿ ರೂಪಾಯಿ ಆದಾಯವೇ ಬೇಡ ಎನ್ನುವ ಮಟ್ಟಿಗೆ ಬಂದು ನಿಂತಿದ್ದಾರಂತೆ.
  ಇನ್ನೂ, ಮದ್ಯ ನಿಷೇಧವಾದರೇ, ರಾಜ್ಯದಲ್ಲಿ ಮದ್ಯಪ್ರಿಯರು ಧಂಗೆ ಹೇಳುತ್ತಾರೆ.
  ಇದಕ್ಕೊಂದು ಪರ್ಯಾಯ ಚಿಂತನೆ ಕೂಡ ಮಾಡಬೇಕೆಂಬ ಆಲೋಚನೆಯಲ್ಲಿರುವ ಸಿಎಂ ಸಿದ್ದರಾಮಯ್ಯ, ಲಿಕ್ಕರ್ ಬ್ಯಾನ್ ಆದ್ರೆ, ರಾಜ್ಯದಲ್ಲಿ ಹೇರಳವಾಗಿ    ಲಭ್ಯವಿರುವ ನೈಸರ್ಗಿಕ ಮದ್ಯ, ನೀರಾ ವನ್ನು ಟೆಟ್ರಾ ಪ್ಯಾಕ್ಗಳ ಮೂಲಕ ಕೊಡೋಕೂ ಕೂಡ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕಾಗಿ ಅಬಕಾರಿ ಅಧಿಕಾರಿಗಳಿಗೆ ಸಿಎಂ    ಸೂಚನೆ ಸಹ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ, 2018ರ ಚುನಾವಣೆ ವೇಳೆಗೆ ರಾಜ್ಯದಲ್ಲಿ ಮದ್ಯ ಸಂಪೂರ್ಣ  ನಿಷೇಧವಾದರೇ, ಮದ್ಯವಿಲ್ಲದೇ, ಚುನಾವಣೆ ನಡೆಯೋದರಲ್ಲಿ ಎರಡು ಮಾತಿಲ್ಲ. ಹೆಂಗಳೆಯರ ಓಟ್ ಬ್ಯಾಂಕ್ ಸಿಎಂ ಸಿದ್ದರಾಮಯ್ಯ ಅವರಿಗೆ  ಲಭ್ಯವಾಗೋದರಲ್ಲಿ ಕಷ್ಟವಾಗಲ್ಲ ಎಂದು ಎಲ್ಲೆಡೆ ಬಿಸಿಬಿಸಿ ಚರ್ಚೆ ನಡೀತಾ ಇದೆ.

 

 

11  ರಾಗಿ ಮುದ್ದೆಗೆ ಫಿದಾ ಆದ ಬ್ರಿಟಿಷ್ ಪ್ರಜೆ!
 ನವೆಂಬರ್-18
 ಚಾಮರಾಜನಗರ : ಮಹಾತ್ಮಾ ಗಾಂಧಿಯಿಂದ ಪ್ರೇರಣೆಗೊಂಡ ಬ್ರಿಟೀಸ್ ಪ್ರಜೆಯೊಬ್ಬರು ಕಾಲ್ನಡಿಗೆಯಲ್ಲಿಯೇ ಇಡೀ  ಭಾರತವನ್ನು ನೋಡಬೇಕೆಂಬ ಆಸೆಯಿಂದ ಪಯಣ ಆರಂಭಿಸಿದ್ದು, ಸದ್ಯ ಚಾಮರಾಜನಗರಕ್ಕೆ ಆಗಮಿಸಿದ್ದಾರೆ.
 ಬ್ರಿಟಿಷ್ ಪ್ರಜೆ ಒಲೆವರ್ ಜೇಮ್ಸ್ ಹಂಟರ್ ಸ್ಮಾರ್ಟ್ ಕಾಶ್ಮೀರ ದಿಂದ ಏಪ್ರಿಲ್ 24 ರಂದು ಪಯಣ ಆರಂಭಿಸಿದ್ದಾರೆ. ಈಗಾಗಲೇ  5080 ಕಿ.ಮೀ ಕ್ರಮಿಸಿರುವ ಒಲೆವರ್ ಅವರು ಕರ್ನಾಟಕದ ನೆಚ್ಚಿನ ಖಾದ್ಯವಾಗಿರುವ ರಾಗಿ ಮುದ್ದೆ ಒಲೆವರ್ ಅವರ  ಅಚ್ಚುಮೆಚ್ಚಿನ ತಿನಿಸು. ಈ ತಿನಿಸಿನಲ್ಲಿ ಏನೋ ಸೊಗಡಿದೆ. ವಿಶಿಷ್ಟವಾದ ಸ್ವಾದವಿದೆ ಎಂದು ಹೇಳುತ್ತಾರೆ.
 ಒಲೆವರ್ ಅವರು ಪ್ರತಿದಿನ 35 ಕಿ.ಮೀ ಪಯಣಿಸುತ್ತಾರೆ ಹಾದಿಯಲ್ಲಿ ಸಿಗುವ ಎಲ್ಲ ಸುಂದರ ತಾಣಗಳನ್ನು ಸಂದರ್ಶಿಸುತ್ತ  ಸಾಗುತ್ತಾರೆ. ಇಂಗ್ಲೆಂಡ್ ನಲ್ಲಿ ಬಿಎಸ್ಸ್ ಜಿಯಾಗ್ರಫಿ ಅಧ್ಯಯನ ಮಾಡಿದ್ದು, ಭಾರತದ ಜನಜೀವನ, ನೈಸರ್ಗಿಕ ಸೌಂದರ್ಯ,  ವೈವಿಧ್ಯಮಯ ಸಂಸ್ಕೃತಿ, ರಾಜ್ಯ ರಾಜ್ಯಗಳಲ್ಲೂ ಇರುವ ಭಾಷೆಯ ವೈಶಿಷ್ಟ್ಯವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ.

 

 

22  ಪದ್ಮಾವತಿಗಾಗಿ ಭಾರತ್ ಬಂದ್ ಗೆ ಕರೆ ಕೊಟ್ಟ ರಜಪೂತರು
 ನವೆಂಬರ್- 16
ಬೆಂಗಳೂರು : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಡಿಸೆಂಬರ್ 01ರಂದು ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಪದ್ಮಾವತಿ ಚಿತ್ರ ಬಿಡುಗಡೆ ವಿರೋಧಿಸಿ ಶ್ರೀರಜಪೂತ ಕರ್ಣಿ ಸೇನಾ ಸಂಘಟನೆ ಡಿಸೆಂಬರ್ 1ರಂದು ಭಾರತ್ ಬಂದ್ಗೆ ಕರೆ ನೀಡಿದೆ.
ಭಾರತೀಯ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ಮಾಡಲಾಗಿದೆ, ಪದ್ಮಾವತಿ ಪಾತ್ರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಕರ್ನಾಟಕ ಸಂಘಟನೆ ಹಾಗೂ ಹಿಂದೂ ಸಂಘಟನೆಗಳು ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದು, ಡಿಸೆಂಬರ್ 1ರಂದು ಭಾರತ ಬಂದ್ಗೆ ಕರೆ ನೀಡಿವೆ.
ರಜಪೂತ ಸಮುದಾಯ ಅಥವಾ ಹಿಂದೂ ಸಂಘಟನೆಗಳು ಮಾತ್ರ ಈ ಚಿತ್ರವನ್ನು ವಿರೋಧಿಸುತ್ತಿಲ್ಲ. ಚಿತ್ರವನ್ನ ಮುಸ್ಲಿಂ ಮುಖಂಡರು ಕೂಡಾ ವಿರೋಧಿಸುತ್ತಿದ್ದಾರೆ. ದೇಶದೆಲ್ಲೆಡೆ ಪದ್ಮಾವತಿ ಚಿತ್ರದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ ಎಂದು ಸಂಘಟನೆಯ ಸ್ಥಾಪಕ ಲೋಕೇಂದ್ರ ಕಲ್ವಿ ಹೇಳಿದ್ದಾರೆ.
ಸಿನಿಮಾಟೋಗ್ರಫಿ ಕಾಯ್ದೆಯಂತೆ ಚಿತ್ರದ ಬಿಡುಗಡೆಯನ್ನು 3 ತಿಂಗಳ ಕಾಲ ನಿಷೇಧಿಸಬೇಕು, ಪ್ರಧಾನಿ ಮೋದಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ಎಂದು ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

 

 

22  ಮಧ್ಯಾಹ್ನದೊಳಗೆ ಸಮಸ್ಯೆ ಬಗೆಹರಿಸಿ; ಹೈಕೋರ್ಟ್ ಸೂಚನೆ
ನವೆಂಬರ್-16
ಬೆಂಗಳೂರು : ಖಾಸಗಿ ವೈದ್ಯರ ಮುಷ್ಕರ ಮಧ್ಯಾಹ್ನ 2.30ರೊಳಗೆ ಬಗೆಹರಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಇದೇವೇಳೆ ಸರ್ಕಾರ ಹಾಗೂ ವೈದ್ಯಕೀಯ ಸಂಘಟನೆಗಳು ತಮ್ಮ ನಿಲುವು ಸ್ಪಷ್ಟಪಡಿಸಲು ಸೂಚನೆ ನೀಡಿದೆ.
ಖಾಸಗಿ ವೈದ್ಯರ ಮುಷ್ಕರದ ಕುರಿತಂತೆ ಇಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ರಾಜ್ಯ ಉಚ್ಚ ನ್ಯಾಯಾಲಯ, ಸರ್ಕಾರ ಹಾಗೂ ವೈದ್ಯರ ಒಕ್ಕೂಟಗಳು ಸೇರಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಕೋರ್ಟ್ ಮಧ್ಯ ಪ್ರವೇಶಿಸುವುದಾಗಿ ಎಚ್ಚರಿಕೆ ನೀಡಿದೆ. ಹೈಕೋರ್ಟ್ ಹಂಗಾಮಿ ಸಿಜೆ ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ವೈದ್ಯರ ಮುಷ್ಕರದಿಂದಾಗಿ ಇದುವರೆಗು ರಾಜ್ಯದಾದ್ಯಂತ ಒಟ್ಟು 22 ಮಂದಿ ಮೃತಪಟ್ಟಿದ್ದಾರೆ

 

 

                                   

ತಂಡಕ್ಕೆ ರಾಹುಲ್ ದ್ರಾವಿಡ್ ರಾಯಭಾರಿ

ನವೆಂಬರ್ -15

ಬೆಂಗಳೂರು : ಇದೇ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನಲ್ಲಿ ಬೆಂಗಳೂರು ಎಫ್ಸಿ ಪದಾರ್ಪಣೆ ಮಾಡುತ್ತಿದೆ. ಬೆಂಗಳೂರು ಎಫ್ ಸಿ ಪರ ರಾಯಭಾರಿಯಾಗಿ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಕಾಣಿಸಿಕೊಳ್ಳಲಿದ್ದಾರೆ.
ನವೆಂಬರ್ 17ರಂದು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮುಂಬೈ ಎಫ್ಸಿ ವಿರುದ್ಧ ಅಭಿಯಾನ ಆರಂಭಿಸಲಿದೆ. ಭಾರತದ ಕಿರಿಯದ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಬೆಂಗಳೂರು ಎಫ್ ಸಿ ತಂಡದ ನೀಲಿ ಬಣ್ಣದ ಜರ್ಸಿ ತೊಟ್ಟು ಬೆಂಬಲ ಸೂಚಿಸಿದರು. ಈ ಸೀಸನ್ ಪೂರ್ತಿ ದ್ರಾವಿಡ್ ಅವರು ಬ್ಲೂ ಬಾಯ್ ಪರ ಚಿಯರ್ಸ್ ಮಾಡಲಿದ್ದಾರೆ.
ತವರಿನಂಗಳದಲ್ಲಿ ಜರುಗಲಿರುವ ಇಂಡಿಯನ್ ಸೂಪರ್ ಲೀಗ್ನ ಒಟ್ಟು ಒಂಬತ್ತು ಪಂದ್ಯಗಳ ಪೈಕಿ ಮೆನ್ ಇನ್ ಬ್ಲೂ ತಂಡ, ವಾರಂತ್ಯ ಭಾನುವಾರ ನಾಲ್ಕು ಪಂದ್ಯಗಳನ್ನಾಡಲಿದೆ.
ಉಳಿದಂತೆ, ಮೂರು ಪಂದ್ಯಗಳು ಗುರುವಾರ ನಡೆದರೆ ಇತರ ಎರಡು ಪಂದ್ಯಗಳು ಶುಕ್ರವಾರ ನಡೆಯಲಿವೆ. ಇದಲ್ಲದೆ ಚೆನ್ನೈಯಿನ್ ಎಫ್ಸಿ (ಡಿ.17) ಮತ್ತು ಎಟಿಕೆ ( ಜ.7) ವಿರುದ್ಧ ತವರಿನ ಎರಡು ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳು ಸಂಜೆ 5.30ಕ್ಕೆ ಆರಂಭವಾಗಲಿವೆ. ಇತರ ಎಲ್ಲಾ ಪಂದ್ಯಗಳು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ರಾತ್ರಿ 8ಕ್ಕೆ ಆರಂಭವಾಗಲಿವೆ.

                                          

ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ

ನವೆಂಬರ್-15 

ಬೆಂಗಳೂರು: ಯುವತಿಯನ್ನು ಪಾರ್ಟಿ ನೆಪದಲ್ಲಿ ಕರೆದು ಗ್ಯಾಂಗ್ ರೇಪ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವ ಘಟನೆ ನಗರದ ವೈಟ್ ಫೀಲ್ಡ್ನಲ್ಲಿರುವ ಕಾಡುಗುಡಿಯ ಸಮೀಪದ ಲಾಡ್ಜ್ ಒಂದರಲ್ಲಿ ನಡೆದಿದೆ.
ಪಾರ್ಟಿ ನೆಪದಲ್ಲಿ ಯುವತಿಯನ್ನು ಬಂಧನದಲ್ಲಿಟ್ಟು 10 ದಿನ ನಿರಂತರ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯ ನಡೆದಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಲಾಡ್ಜ್ ಮಾಲೀಕ ಸೇರಿದಂತೆ, ಉಡುಪಿಯ ರಾಘವೇಂದ್ರ, ಪಶ್ಚಿಮ ಬಂಗಾಳದ ಮನೋರಾಜನ್ ಪಂಡಿತ್, ದಾವಣಗೆರೆಯ ಸಾಗರ್, ಮೈಸೂರಿನ ಮಂಜುರಾಜ್ರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ತನ್ನ ಜೊತೆಯಲ್ಲಿ ಓದುತ್ತಿದ್ದ ಹುಡುಗನ ಮಾತನ್ನು ನಂಬಿ ಆಕೆ ಹೋಗಿದ್ದಾಳೆ ಎನ್ನಲಾಗಿದೆ. ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ್ದ ಕೆ.ಆರ್.ಪುರ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

445 ಬೆಳಗಾವಿ ಕರುನಾಡಿನ ಅವಿಭಾಜ್ಯ ಅಂಗ:ದೇವೇಗೌಡ
ನವೆಂಬರ್ 14
ರಾಮನಗರ: ಬೆಳಗಾವಿ ಕರುನಾಡಿನ ಅವಿಭಾಜ್ಯ ಅಂಗ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಅವರು ನಿನ್ನೆ ರಾಮನಗರ ಜಿಲ್ಲೆ, ಬಿಡದಿ ಹೋಬಳಿಯ ಅಬ್ಬನಕುಪ್ಪೆ ಗ್ರಾಮದಲ್ಲಿನ ಆಂಜನೇಯಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.
'ಬೆಳಗಾವಿಯಲ್ಲಿನ ಎಂಇಎಸ್ ಪುಂಡಾಟಿಕೆಯನ್ನ ಖಂಡಿಸಿದ ದೇವೇಗೌಡರು, ಅಂದೇ ಹೇಳಿದ್ದರು, 'ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ನಿಮಗೆ ಸಂಭಂದವಿಲ್ಲ, ಅದು ಮುಗಿದ ಅಧ್ಯಾಯ ಎಂದು ಅಂದೇ ಮೊರಾರ್ಜಿ ದೇಸಾಯಿಯವರು ಎಂಇಎಸ್ ನವರಿಗೆ ಖಡಾಖಂಡಿತವಾಗಿ ಹೇಳಿದ್ದರು. ವಿನಾಕಾರಣ ಬೆಳಗಾವಿ ವಿವಾದವನ್ನು ಕೆದುಕುತ್ತಿರುವ ಎಂಇಎಸ್ ನವರಿಗೆ ಕೇಂದ್ರಸರ್ಕಾರ ಬುದ್ಧಿ ಹೇಳಬೇಕು' ಎಂದು ತಾಕೀತು ಹಾಕಿದರು.ವೇದಿಕೆಯಲ್ಲಿ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿಗಳು ಮತ್ತು ಮಾಗಡಿ ಜೆಡಿಎಸ್ ಅಭ್ಯರ್ಥಿ ಎ.ಮಂಜು ಮತ್ತು ಶಾಸಕ ಬಾಲಕೃಷ್ಣ ಪಾಲ್ಗೊಂಡಿದ್ದರು. ಜೆಡಿಎಸ್ ನ ಬಂಡಾಯ ಶಾಸಕ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ ದೇವೇಗೌಡರವರು ರಾಜ್ಯಸಭಾ ಚುನಾವಣೆ ಬಳಿಕ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. 

 

       

ದುಬಾರಿ ಮಣಿ ಕಿತ್ತುಕೊಂಡು ಪರಾರಿ

ನವೆಂಬರ್ -14

ಬೆಂಗಳೂರು: ದುಬಾರಿ ಬೆಲೆಯ ಮಣಿ ಕೊಂಡುಕೊಳ್ಳುವ ನೆಪದಲ್ಲಿ ಮನೆಯೊಂದಕ್ಕೆ ಬಂದ ದರೋಡೆಕೋರರು ಮನೆಯಲ್ಲಿದ್ದ ಇಬ್ಬರಿಗೆ ಚಾಕು ತೋರಿಸಿ ಬೆದರಿಸಿ ಮಣಿ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಲ್ಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮಲ್ಲೇಶ್ವರಂನ 10ನೆ ಕ್ರಾಸ್ನಲ್ಲಿ ಶಶಿಕಾಂತ್ ಎಂಬುವರ ಮನೆ ಇದೆ. ಇವರ ಸ್ನೇಹಿತನ ಬಳಿ ದುಬಾರಿ ಬೆಲೆಯ ಮಣಿ ಇತ್ತು. ಇದನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ಇಬ್ಬರು ದರೋಡೆಕೋರರು ಮಣಿ ಕೊಳ್ಳುವ ನೆಪ ಮಾಡಿಕೊಂಡು ಶನಿವಾರ ಮಧ್ಯಾಹ್ನ ಶಶಿಕಾಂತ್ ಮನೆಗೆ ಬಂದಿದ್ದಾರೆ.
ಶಶಿಕಾಂತ್ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಮಣಿಕೊಳ್ಳುವ ನಾಟಕವಾಡಿ ಇವರಿಬ್ಬರಿಗೂ ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ದುಬಾರಿ ಬೆಲೆಯ ಮಣಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೋಸ ಹೋಗಿದ್ದು ಅರಿತ ಶಶಿಕಾಂತ್ ಈ ಸಂಬಂಧ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದರೋಡೆಕೋರರಿಗಾಗಿ ಬಲೆ ಬೀಸಿದ್ದಾರೆ.

11       ಉಚಿತ ಕಾಂಡೋಂ : 10 ಲಕ್ಷ ಖಾಲಿ! ಮುಗಿಬಿದ್ದ ಜನ
ನವೆಂಬರ್-13
ಬೆಂಗಳೂರು: ಅಂಗಡಿಗೆ ಹೋಗಿ ಕಾಂಡೋಂ ಖರೀದಿಸಲು ಸಂಕೋಚ ಪಟ್ಟುಕೊಳ್ಳುವ ದೇಶದ ಜನರು ಆನ್ಲೈನ್ ಮೂಲಕ ಉಚಿತವಾಗಿ ಸಿಗುವ ಕಾಂಡೋಂ ಖರೀದಿಗೆ ಮುಗಿಬಿದ್ದಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಇ-ಮೇಲ್ ಅಥವಾ ಫೋನ್ ಮೂಲಕ ಆರ್ಡರ್ ಮಾಡಿದವರ ಮನೆ ಬಾಗಿಲಿಗೇ ಉಚಿತವಾಗಿ ಕಾಂಡೋಂ ತಲುಪಿಸುವ 'ಫ್ರೀ ಕಾಂಡೋಂ ಸ್ಟೋರ್' ಸೇವೆ ದೇಶದಲ್ಲಿ ಆರಂಭವಾದ ಕೇವಲ 69 ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಂಗಳು ಖಾಲಿಯಾಗಿವೆ!
ಏಡ್ಸ್ ಹೆಲ್ತ್ಕೇರ್ -ಫೌಂಡೇಷನ್ ಏ.28ರಂದು ಫ್ರೀ ಕಾಂಡೋಂ ಸ್ಟೋರ್ ಆರಂಭಿಸಿತ್ತು. ಹಿಂದುಸ್ತಾನ್ ಲೇಟೆಕ್ಸ್ ಕಂಪನಿಯಿಂದ 10 ಲಕ್ಷ ಕಾಂಡೋಂಗಳ ಸರಕು ತರಿಸಿಕೊಂಡಿತ್ತು. ಭಾರತದಲ್ಲಿ ಜನರು ಕಾಂಡೋಂ ಖರೀದಿಸಲು ಹಿಂದೇಟು ಹಾಕುವ ಕಾರಣಕ್ಕೆ ವರ್ಷಾಂತ್ಯದವರೆಗೂ ಈ ಸರಕು ಸಾಕಾಗಬಹುದು ಎಂದು ಫೌಂಡೇಷನ್ ಅಂದಾಜಿಸಿತ್ತು. ಆದರೆ ಕೇವಲ 69 ದಿನಗಳಲ್ಲಿ 9.56 ಲಕ್ಷ ಕಾಂಡೋಂಗಳು ಬಿಕರಿಯಾಗಿವೆ.
ಈ ಪೈಕಿ 5.14ಲಕ್ಷ ಕಾಂಡೋಂಗಳನ್ನು ಸಮುದಾಯ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಖರೀದಿಸಿದ್ದರೆ, ಉಳಿದ 4.41 ಲಕ್ಷ ಕಾಂಡೋಂಗಳನ್ನು ಜನರು ತಮ್ಮ ಮನೆಗೆ ತರಿಸಿಕೊಂಡಿದ್ದಾರೆ.
ಈ ಪೈಕಿ ಅತಿ ಹೆಚ್ಚು ಬೇಡಿಕೆ ದೆಹಲಿಯಿಂದ ವ್ಯಕ್ತವಾಗಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಇದೆ. ಅಂಗಡಿಗೆ ಹೋಗಿ ಕಾಂಡೋಂ ಕೇಳಲು ಭಾರತೀಯರು ಮುಜುಗರ ಅನುಭವಿಸುತ್ತಾರೆ. ಆದರೆ ಆನ್ಲೈನ್ ಮೂಲಕ ಆರ್ಡರ್ ಮಾಡಿದರೆ, ಯಾರಿಗೂ ಗೊತ್ತಾಗುವುದಿಲ್ಲ. ಈ ಕಾರಣಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.
ಖರೀದಿಯಲ್ಲಿ ಕರ್ನಾಟಕ ನಂ.2
ಕುಟುಂಬ ಕಲ್ಯಾಣಕ್ಕೆ ಅತ್ಯಂತ ಅಗ್ಗದ ವಿಧಾನ ಕಾಂಡೋಂ. ಲೈಂಗಿಕವಾಗಿ ಹರಡುವ ರೋಗಗಳಿಂದಲೂ ಜನರನ್ನು ಇದು ರಕ್ಷಿಸುತ್ತದೆ. ಆದರೆ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯ ಪ್ರಕಾರ ಕೇವಲ ಶೇ.5.6 ಮಂದಿಯಷ್ಟೇ ದೇಶದಲ್ಲಿ ಕಾಂಡೋಂ ಬಳಸುತ್ತಾರೆ. ಪ್ರಗತಿಪರ ರಾಜ್ಯವಾದ ಕರ್ನಾಟಕದಲ್ಲಿ ಈ ಪ್ರಮಾಣ ಕೇವಲ ಶೇ.1.7ರಷ್ಟಿದೆ. ಬೆಂಗಳೂರಿನಲ್ಲಿ ಶೇ.3.6ರಷ್ಟು ಮಂದಿ ಕಾಂಡೋಂ ಬಳಕೆ ಮಾಡುತ್ತಾರೆ. ಆದರೆ ಕೋಲ್ಕತಾ (ಶೇ.19) ಹಾಗೂ ದೆಹಲಿ (ಶೇ.10) ಗೆ ಹೋಲಿಸಿದರೆ ಬೆಂಗಳೂರು ಹಿಂದಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

 

 

 

44

    ನೀಲಿ ಚಿತ್ರದ ಬಗ್ಗೆ ಪಾಠ ಮಾಡಿದ್ರು ಸಿಎಂ
 ನವೆಂಬರ್-11
ಬೆಂಗಳೂರು : ಮಾತಿನ ಬರಾಟೆಯಲ್ಲಿ ಕೆಲವೊಮ್ಮೆ ಮಾತು ಎತ್ತಲೋ ಸಾಗುತ್ತದೆ ಎಂಬುದಕ್ಕೆ ಸಿಎಂ ಇಂದು ನಡೆಸಿದ ವಿಜಯನಗರದಲ್ಲಿನ ಕಾರ್ಯಕ್ರಮದ ಮಾತು ಸಾಕ್ಷಿಯಾಯ್ತು. ಬಿಜೆಪಿಯನ್ನು, ಬಿಜೆಪಿಯ ಮುಖಂಡರನ್ನು ಬೈಯೋ ಬರಾಟೆಯಲ್ಲಿ, ಬ್ಲೂ ಫಿಲಂ ಬಗ್ಗೆ, ವೇದಿಕೆಯಲ್ಲಿದ್ದವರಿಗೆ ತಿಳಿಸಿಕೊಟ್ಟ ಪ್ರಸಂಗ ನಡೆಯಿತು.
ಇಂದು ಬೆಂಗಳೂರಿನ ವಿಜಯನಗರದಲ್ಲಿ ಕಾಂಗ್ರೆಸ್ ವತಿಯಿಂದ ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಿಗೆ ಚಾಲನೆ ಗೊಳಿಸಿ ಮಾತಿಗಿಳಿದ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪಗೆ ವಯಸ್ಸಾಗಿದೆ. ಹೀಗಾಗಿ ಅವರಿಗೆ ಅರಳು ಮರಳು. ಬಾಯಿಗೆ ಬಂದಂತೆ ಮಾತಾಡೋದು ಇದೇ ಕಾರಣಕ್ಕೆ. ಅಲ್ಲದೇ ಯಡಿಯೂರಪ್ಪ ಹಾಗೂ ಅಮಿತ್ ಷಾ ಜೈಲಿಗೆ ಹೋಗಿದ್ದನ್ನು ಜನ ಮರೆತಿಲ್ಲ ಎಂದು ವ್ಯಂಗ್ಯವಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯದ ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿದ ಬಿಜೆಪಿ ಶಾಸಕರ ಬಗ್ಗೆ ವಿಷಯ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಕೆಲವು ಮಂತ್ರಿಗಳು ಬ್ಲೂ ಫಿಲಂ ನೋಡಿ ಅಧಿಕಾರ ಕಳೆದುಕೊಂಡ್ರು. ಬ್ಲೂ ಫಿಲಂ ಅಂದ್ರೆ ಗೊತ್ತಾ.? ಬ್ಲೂ ಫಿಲಂ ಅಂದರೆ ನೀಲಿ ಚಿತ್ರ ಅಂತ ನಗೆಯ ಚಟಾಕಿಯನ್ನು ಆರಿಸುತ್ತಿದ್ದಂತೆ, ಸಭೆಯಲ್ಲಿದ್ದವರೆಲ್ಲಾ ಗೊಳ್ ಎಂದು ನಕ್ಕರು.

ಅಲ್ಲದೇ ಬಿಜೆಪಿಯ ಮುಖಂಡರ ಬಗ್ಗೆ ಕಾರವಾಗೇ ಮಾತು ಮುಂದುವರೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ನಯವಂಚಕರು. ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತಾಡ್ತಾರೆ. ಅವರಂತ ಭ್ರಷ್ಟರು ಎಲ್ಲೂ ಇಲ್ಲ ಎಂದು ಹೇಳಿದರು.
ಇನ್ನೂ ಪದೇ ಪದೇ ಬಿಜೆಪಿಯವರು ಟೀಕಿಸುವ ಕಾಂಗ್ರೆಸ್ ಆಡಳಿತದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು, ಟೀಕೆ ಮಾಡುವುದನ್ನು ಬಿಡಲಿ. ಇದನ್ನು ಬಿಟ್ಟು ಕಾಂಗ್ರೆಸ್ ಇಷ್ಟು ವರ್ಷಗಳ ಆಡಳಿತ ನಡೆಸಿ, ರಾಜ್ಯದಲ್ಲಿ ಅಭಿವೃದ್ದಿ ಪಡಿಸಿದ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲ್ ಹಾಕಿದರು.

 

                                                                       

ಬಿಗ್ ಬಾಸ್ ನಿಂದ ಎಕ್ಸಿಟ್ ಆದ ತೇಜಸ್ವಿನಿ

ನವೆಂಬರ್.10 

ಬೆಂಗಳೂರು: ಪ್ರತಿ ಶನಿವಾರ ಬಿಗ್ಬಾಸ್ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುವುದು ಸಾಮಾನ್ಯ. ಆದರೆ ಶನಿವಾರಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ತೇಜಸ್ವಿನಿ ಬಿಗ್ ಮನೆಯಿಂದ ಹೊರ ನಡೆದಿದ್ದಾರೆ.

ತೇಜಸ್ವಿನಿ ತಂದೆಯವರ ಆರೋಗ್ಯದಲ್ಲಿ ದಿಢೀರ್ ವ್ಯತ್ಯಾಸವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಿಡ್ನಿ ವೈಫಲ್ಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹಾಗಾಗಿ ತೇಜಸ್ವಿನಿ ಅವರ ಇರುವಿಕೆಯನ್ನು ತಂದೆ-ತಾಯಿ ಬಯಸುತ್ತಿದ್ದಾರೆ. ಈ ವಿಷಯವನ್ನು ಬುಧವಾರ ತೇಜಸ್ವಿನಿ ಅವರಿಗೆ ತಿಳಿಸಲಾಗಿತ್ತು. ಅದೇ ರೀತಿ ಬೆಳಗಿನವರೆಗೆ ತಮ್ಮ ನಿರ್ಧಾರವನ್ನು ತಿಳಿಸಬೇಕಾಗಿ ಬಿಗ್ಬಾಸ್ ಸೂಚಿಸಿದ್ದರು.

ತೇಜಸ್ವಿನಿ ಅವರ ಬೇಡಿಕೆ ಮೇರೆಗೆ ತಾಯಿಯೊಡನೆ ಮಾತನಾಡಲು ಬಿಗ್ಬಾಸ್ ಅನುವು ಮಾಡಿಕೊಟ್ಟರು. ಮಾತುಕತೆ ನಂತರ ಭಾವುಕರಾದ ತೇಜಸ್ವಿನಿ ಮನೆಯ ಸದಸ್ಯರ ಮುಂದೆ ತಮ್ಮ ನೋವು ತೋಡಿಕೊಂಡರು. ಅದೇ ರೀತಿ ತಾವು ಮನೆಯಿಂದ ಹೊರ ಹೋಗಲು ನಿರ್ಧರಿಸಿರುವುದಾಗಿಯೂ ಹೇಳಿಕೊಂಡರು.

ಭಾರವಾದ ಹೃದಯದಿಂದಲೇ ತೇಜಸ್ವಿನಿ ಬಿಗ್ಬಾಸ್ ಮನೆಗೆ ವಿದಾಯ ಹೇಳಿದರು. ಇನ್ನು ಈ ವಾರ ನಾಮಿನೇಟ್ಗೊಂಡ ಸ್ಪರ್ಧಿಗಳಲ್ಲಿ ತೇಜಸ್ವಿನಿ ಕೂಡ ಇದ್ದರು. ಬಿಗ್ಬಾಸ್ ಮನೆಗೆ ತೇಜಸ್ವಿನಿ ವಾಪಸ್ ಬರುತ್ತಾರೆಯೇ ಎನ್ನುವುದಿನ್ನೂ ಖಚಿತಗೊಂಡಿಲ್ಲ. ಬಿಗ್ ಮನೆಗೆ ಮರಳುವ ಆಶಯವನ್ನು ತೇಜು ವ್ಯಕ್ತಪಡಿಸಿದ್ದು, ಅವರನ್ನು ಬಿಗ್ಬಾಸ್ ವಾಪಸ್ ಕರೆಯಿಸಿಕೊಳ್ಳುತ್ತಾರೆಯೇ ಎಂದು ನೋಡಲು ಶನಿವಾರದ ಎಪಿಸೋಡ್ ನೋಡಬೇಕು.

                                                           

ಜಯಂತಿಗಳಿಗೆ ಸರ್ಕಾರಿ ರಜೆ ಘೋಷಿಸಬಾರದು : ಪ್ರೊ.ಚಂದ್ರಶೇಖರ್ ಪಾಟೀಲ

ನವೆಂಬರ್-9

 

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಕನ್ನಡ ರಾಜ್ಯೋತ್ಸವ ಇವುಗಳನ್ನು ಹೊರತುಪಡಿಸಿ ಯಾವುದೇ ಜಯಂತಿಗಳಿಗೆ ಸರ್ಕಾರಿ ರಜೆ ಘೋಷಿಸಬಾರದು ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ . ಚಂದ್ರಶೇಖರ್ ಪಾಟೀಲ ಅವರು ಸರ್ಕಾರಕ್ಕೆ ಮನವಿ ಮಾಡಿದರು. 

ನಗರದ ಪ್ರೆಸ್ಕ್ಲಬ್ ನಲ್ಲಿ ವರದಿಗಾರರ ಕೂಟ ಏರ್ಪಡಿಸಿದ್ದ ಸಂವಾದದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಕರ್ತರು, ಸಾಹಿತಿಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರ ಮೇಲೆ ಪ್ರಜಾಪ್ರಭುತ್ವ ಸದಾ ಕಣ್ಣಿಟ್ಟಿರುತ್ತದೆ. ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು.

ಟಿಪ್ಪು ಜಯಂತಿಯನ್ನು ವಿರೋಧಿಸುವಿರೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಚಂಪಾ ಅವರು, ಟಿಪ್ಪುವಿನ ಬಗ್ಗೆ ಎರಡು ವಾದಗಳಿವೆ. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ವೀರ ಸೇನಾನಿ ಎಂದು ಹೇಳಲಾಗುತ್ತದೆ. ಮತ್ತೊಂದು ವರ್ಗ ಟಿಪ್ಪು ಸ್ವಾರ್ಥಕ್ಕಾಗಿ ಹೋರಾಡಿದ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನಲ್ಲ. ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ದ ಹೋರಾಡಿದ್ದಾನೆ ಎಂದು ವಾದಿಸುತ್ತಾರೆ. ಹಾಗಾಗಿ ನಾನು ಇತಿಹಾಸದ ವಿದ್ಯಾರ್ಥಿ ಅಲ್ಲದಿರುವುದರಿಂದ ನಾನು ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಹೇಳಿದರು. ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಡಿಕೆ ವಿಷಯ ಹಳೆಯದು.


ನಮ್ಮ ರಾಜ್ಯಕ್ಕೆ ಲಾಂಛನ ಬೇಕೆಂಬ ಮನೋಭಾವ ಅನೇಕ ಕವಿಗಳಿಗೂ ಇತ್ತು. ಕರ್ನಾಟಕ ಏಕೀಕರಣದ ಸಂದರ್ಭದಲ್ಲೂ ಪ್ರತ್ಯೇಕ ಧ್ವಜದ ಬಗ್ಗೆ ಕೇಳಿಬಂದಿತ್ತು. ಕೆಂಪು-ಹಳದಿ ಬಣ್ಣದ ಬಾವುಟವನ್ನು ನಾವು ಭಾವನಾತ್ಮಕವಾಗಿ ಸ್ವೀಕರಿಸಿದ್ದೇವೆ. ಈ ಧ್ವಜಕ್ಕೆ ಕಾನೂನಿನ ಮಾನ್ಯತೆ ದೊರೆಯಬೇಕಿದೆ ಎಂದು ಹೇಳಿದರು. ಪ್ರತಿ ಬಾರಿ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಜಾರಿಗೊಳಿಸಲು ರಾಜ್ಯಾದ್ಯಂತ ಕಸಾಪ ಅಧ್ಯಕ್ಷರೊಂದಿಗೆ ಪ್ರವಾಸ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

 

                                                                                                                                                     

ನೋಟಿಸ್ ನೀಡಲು ಗೃಹ ಸಚಿವರ ಸೂಚನೆ

ನವೆಂಬರ್-4

ಬೆಂಗಳೂರು: ಪೊಲೀಸ್ ಠಾಣೆಗಳಿಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಅವರು ಸ್ವಚ್ಚತೆ ಕಾಪಾಡದೆ ಇರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ, ಠಾಣಾಧಿಕಾರಿ ಹಾಗೂ ಎಸಿಪಿಗೆ ನೋಟಿಸ್ ಜಾರಿ ಮಾಡುವಂತೆ ಸ್ಥಳದಲ್ಲೇ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದರು.

ಸಂಜೆ ಕಬ್ಬನ್ಪಾರ್ಕ್, ಅಶೋಕನಗರ, ಹಲಸೂರು ಮತ್ತು ಇಂದಿರಾನಗರ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ಠಾಣೆಗಳಿಗೆ, ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹಲಸೂರು ಠಾಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಅಸಮಾಧಾನಗೊಂಡ ಸಚಿವರು, ''ಏನ್ ರೀ ಇದು. ಇಷ್ಟೊಂದು ಕಸ ಇದೆ. ಪ್ರತಿನಿತ್ಯ ಸ್ವಚ್ಛ ಮಾಡುವುದಿಲ್ಲ? ನಿಮ್ಮ ಮನೆಯನ್ನು ಹೀಗೇ ಇಟ್ಟುಕೊಳ್ಳುತ್ತೀರಾ?. ಇನ್ಸ್ಪೆಕ್ಟರ್ಗೆ ಮತ್ತು ಎಸಿಪಿಗೆ ನೋಟಿಸ್ ಕೊಡಿ'' ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ನಿರ್ದೇಶನ ನೀಡಿದರು.

ಸಂಜೆ 4.45ಕ್ಕೆ ಕಬ್ಬನ್ಪಾರ್ಕ್ ಠಾಣೆಗೆ ಭೇಟಿ ನೀಡಿದ ರಾಮಲಿಂಗಾ ರೆಡ್ಡಿ, ಠಾಣಾ ಆವರಣದ ಒಳಗೆ ಸುತ್ತಾಡಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಯುಬಿ ಸಿಟಿ, ಎಂ.ಜಿ. ರಸ್ತೆ, ಕುಂಬ್ಳೆ ಸರ್ಕಲ್ ,ಕ್ವಿನ್ಸ್ ಸರ್ಕಲ್ ಸೇರಿ 18 ವೃತ್ತದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಮಾನಿಟರ್ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಠಾಣೆ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳು, ಕುಂದು ಕೊರತೆಗಳನ್ನು ಆಲಿಸಿದರು. ಶಾಲಾ ಕಾಲೇಜುಗಳ ಬೀಟ್ ವ್ಯವಸ್ಥೆ ಹೆಚ್ಚಳ ಮಾಡುವಂತೆ ಕೇಂದ್ರ ವಿಭಾಗ ಡಿಸಿಪಿ ಡಾ.ಚಂದ್ರಗುಪ್ತಗೆ ಅವರಿಗೆ ಸೂಚಿಸಿದರು.

ನಿಗದಿತ ಅವಧಿಗೆ ಬಾರ್, ವೈನ್ ಶಾಪ್ಗಳು, ಹುಕ್ಕಾ ಬಾರ್ಗಳು ಬಾಗಿಲು ಹಾಕಬೇಕು. ಕಬ್ಬನ್ ಪಾರ್ಕ್ನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪುಂಡರ ಮೇಲೆ ನಿಗಾ ವಹಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದರು. ಅಲ್ಲಿಂದ ಅಶೋಕನಗರ ಠಾಣೆಗೆ ತೆರಳಿ ಇನ್ಸ್ಪೆಕ್ಟರ್ ಶಶಿಧರ್ರಿಂದ ಹೊಯ್ಸಳ, ಚೀತಾ ಬೀಟ್ ವ್ಯವಸ್ಥೆ ಕುರಿತು ಮಾಹಿತಿ ಪಡೆದರು. ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾವಹಿಸಿ ಗುಸ್ತು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸೂಚಿಸಿದರು. ಭೇಟಿ ವೇಳೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್, ಡಿಸಿಪಿಗಳಾದ ಡಾ.ಚಂದ್ರಗುಪ್ತ, ಅಜಯ್ ಹಿಲೋರಿ ಇದ್ದರು.

 

 

44  ಕೆಎಸ್ಆರ್ಟಿಸಿ-ಬಿಎಂಟಿಸಿ ನೌಕರರ ಮುಷ್ಕರ
 ನವೆಂಬರ್-3
ಬೆಂಗಳೂರು: ವರ್ಗಾವಣೆ ತಾರತಮ್ಯ ಸರಿಪಡಿಸಬೇಕು, ಬಾಕಿ ಬೋನಸ್ ಪಾವತಿ, ಅಧಿಕಾರಿಗಳ ಕಿರುಕುಳ ನಿಲ್ಲಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರು ಸಿಐಟಿಯು ನೇತೃತ್ವದಲ್ಲಿ ಶಾಂತಿನಗರದ ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಬಳಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ನಿನ್ನೆಯಿಂದ ಮುಷ್ಕರ ಪ್ರಾರಂಭವಾಗಿದ್ದು, ಇಂದು ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಕೆಎಸ್ಆರ್ಟಿಸಿ ನೌಕರರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್. ಎಸ್.ಮಂಜುನಾಥ್(30 ದಿನಗಳ ಒಳಗೆ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಭರವಸೆ ನೀಡಿದ್ದರು. ಆದರೆ ನಮ್ಮ ಯಾವುದೇ ಬೇಡಿಕೆ ಈದುರೆಗೆ ಈಡೇರಿಲ್ಲ. ಹಾಗಾಗಿ ಮತ್ತೆ ಮುಷ್ಕರ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಶೇ.12.5ರಷ್ಟು ವೇತನವನ್ನು ಹೆಚ್ಚಿಸ ಲಾಗಿದೆಯೇ ಹೊರತು ಬೇರೆ ಯಾವುದೇ ಬೇಡಿಕೆ ಈಡೇರಿಲ್ಲ. ನಾವು ಒಟ್ಟು 55 ವಿವಿಧ ಬೇಡಿಕೆಗಳನ್ನು ಇಟ್ಟಿದ್ದೆವು. 1600 ಸಿಬ್ಬಂದಿಯನ್ನು ವರ್ಗಾವಣೆ ಮಾಡಿ 2016ರಲ್ಲಿ ಆದೇಶ ಹೊರಡಿಸಲಾಗಿತ್ತು. ಪುತ್ತೂರು ವಿಭಾಗ ದಿಂದ 250 ಸಿಬ್ಬಂದಿಯನ್ನು ಎಲ್ಲಿಗೆ ವರ್ಗಾವಣೆ ಮಾಡಲಾಗಿದೆಯೋ ಈವರೆಗೆ ಆ ಸ್ಥಳಕ್ಕೆ ಕಳುಹಿಸಿಲ್ಲ ಎಂದು ಹೇಳಿದರು. ನಾಲ್ಕು ನಿಗಮಗಳಲ್ಲಿ ಬಿಎಂಟಿಸಿ ನೌಕರರಿಗೆ 2014-15ನೆ ಸಾಲಿನ ಬೋನಸ್ ಹಣವನ್ನು ನೀಡಿಲ್ಲ. ಸರ್ಕಾರ ಹಾಗೂ ಸಾರಿಗೆ ಸಚಿವರ ಪ್ರಾಮಾಣಿಕ ಪ್ರಯತ್ನಕ್ಕೂ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿಫೋಗಳಲ್ಲಿ ಸಿಬ್ಬಂದಿಗೆ ವಿಪರೀತ ಕಿರುಕುಳ ನೀಡಲಾಗುತ್ತಿದೆ. ಅವರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಲಾಗಿದೆ. ಕೂಡಲೇ ಸಾರಿಗೆ ಸಚಿವರು ಮಧ್ಯಪ್ರವೇಶಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಅವರು ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದರೆ ಮುಷ್ಕರವನ್ನು ಇನ್ನೂ ತೀವ್ರಗೊಳಿಸುವುದಾಗಿ ಅವರು ತಿಳಿಸಿದರು.

 

                                                                                                                                                                               

11 ಸಾವಿರ ಮನೆಗಳ ನಿರ್ಮಾಣ: ರಾಮಲಿಂಗಾರೆಡ್ಡಿ

ಅಕ್ಟೋಬರ್ -3

ಕೆಂಗೇರಿ ಉಪನಗರ: ರಾಜ್ಯದಲ್ಲಿ ಪೊಲೀಸರಿಗಾಗಿ 11 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಕಾಂಗ್ರೆಸ್ ಸರಕಾರ ಒತ್ತು ನೀಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಉಲ್ಲಾಳ ವಾರ್ಡ್ನಲ್ಲಿ ನಿರ್ಮಿಸಲಿರುವ ಸಿಎಆರ್ ಪಶ್ಚಿಮ ಘಟಕದ ಹಲವಾರು ಕಟ್ಟಡಗಳ ಸಮುಚ್ಚಯದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿ, 'ಈ ಯೋಜನೆಯಲ್ಲಿ ಈಗಾಗಲೇ 2 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಉಳಿದವುಗಳಿಗೆ ಚಾಲನೆ ದೊರಕಿದ್ದು, ಕಾಮಗಾರಿ ನಡೆಯುತ್ತಿದೆ,' ಎಂದು ತಿಳಿಸಿದರು.
'ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 24 ಸಾವಿರ ಪೊಲೀಸರ ನೇಮಕವಾಗಿದೆ. ಪೊಲೀಸರ ಕಲ್ಯಾಣಕ್ಕಾಗಿ ನಾನಾ ಯೋಜನೆಗಳನ್ನು ನಮ್ಮ ಸರಕಾರ ಮಾಡಿದೆ,' ಎಂದರು.
ಉಲ್ಲಾಳದಲ್ಲಿ 21.34 ಎಕರೆಯಲ್ಲಿ 98 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಕಚೇರಿ ಸಭಾಂಗಣ, ಎಂಟಿಒ ಮತ್ತು ಮೋಟಾರ್ ಟ್ರಾನ್ಸ್ಪೋರ್ಟ್ ಶೆಡ್, ಕವಾಯತು ಮೈದಾನ ನಿರ್ಮಿಸಲಾಗುತ್ತಿದೆ,' ಎಂದರು.
'ನಗರದ ಮೂರು ಕಡೆ ಸಿಎಆರ್ ಘಟಕವನ್ನು ನಿರ್ಮಿಸಲು ಸಚಿವ ಸಂಪುಟದಲ್ಲಿ ತಿರ್ಮಾನಿಸಿದಂತೆ ಪಶ್ಚಿಮ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಇದಕ್ಕಾಗಿ ಬಜೆಟ್ನಲ್ಲಿ ಹಣ ಮೀಸಲಾಗಿರಿಸಿದೆ,' ಎಂದರು.

 

 

 

 

                                                                                                                                                                                                                       

ವೈದ್ಯರ ಪ್ರತಿಭಟನೆ ಸರಿ ಅಲ್ಲ: ಸಿಎಂ

ಅಕ್ಟೋಬರ್ -3

ಬೆಂಗಳೂರು: ವೈದ್ಯರು ಅನೇಕ ಬಾರಿ ಕರೆದು ಮಾತನಾಡಿದ್ದೇವೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ವಿಧೇಯಕ ಮಸೂದೆ ರೂಪಿಸಿದ್ದೇವೆ. ಅದು ವಿಧಾನಮಂಡಲ ಜಂಟಿ ಸದನ ಸಮಿತಿಯ ಮುಂದೆ ಹೋಗಿದೆ. ಅದರ ಬಗ್ಗೆ ಇನ್ನಷ್ಟೆ ವಿಧಾನ ಮಂಡಲದಲ್ಲಿ ಚರ್ಚೆ ಆಗಬೇಕು. ಈ ಹಂತದಲ್ಲಿ ವೈದ್ಯರ ಪ್ರತಿಭಟನೆ ಸರಿ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಇಂಡಿಯನ್ ರೋಡ್ ಕಾಂಗ್ರೆಸ್ ಅಧಿವೇಶನ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಸಿಎಂ ಮಾತನಾಡಿ, ರೋಗಿಗಳಿಗೆ ತೊಂದರೆ ಆಗದಂತೆ ಸರಕಾರಿ ಆಸ್ಪತ್ರೆ ಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಯಡಿಯೂರಪ್ಪ ಅವರಿಗೆ ಈಗಾಗಲೇ ಜನ ಬುದ್ದಿ ಕಲಿಸಿದ್ದಾರೆ. ಆದರೂ ಅವರಿಗೆ ಬುದ್ದಿ ಬಂದಿಲ್ಲ. ಅವರು ರಾಜ್ಯದಲ್ಲಿ ಪ್ರವಾಸ ಮಾಡಿದಷ್ಟು ಕಾಂಗ್ರೆಸ್ ಗೆ ಲಾಭ. ಕೇಂದ್ರದಿಂದ ರಾಜ್ಯಕ್ಕೆ ಬಂದ ಅನುದಾನ ಬಳಕೆ ಆಗದ ಬಗ್ಗೆ ಶಾ ಅವರಿಗೆ ಏನು ಗೊತ್ತು. ಈ ಬಗ್ಗೆ ಪ್ರಶ್ನೆ ಮಾಡಲು ವಿರೋಧ ಪಕ್ಷದ ನಾಯಕ ಇಲ್ವಾ, ಅವರೇಕೆ ಸುಮ್ಮನಿದ್ದಾರೆ. ಅಧಿವೇಶನದಲ್ಲಿ ಕೇಳಬಹುದಲ್ಲವೇ ಎಂದು ಪ್ರಶ್ನಿಸಿದರು.

 

66      ಎಚ್ಚರ ನಾಳೆ ಡಾಕ್ಟರ್ಸ್ ಸಿಗಲ್ಲ
ನವೆಂಬರ್-2
ಬೆಂಗಳೂರು : ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿಧೇಯಕದ ವಿರುದ್ದ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಭಾರತೀಯ ವೈದ್ಯಕೀಯ ಸಂಘಗಳ ಒಕ್ಕೂಟ ತಿಳಿಸಿದೆ. ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದರೆ ಇದು ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಿಂದ ಕಾಯ್ದೆ ಜಾರಿ ವಿರೋಧಿಸಿ ನವೆಂಬರ್ 3ರಂದು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.
ಈ ಹಿಂದೆ ಕಾಯ್ದೆ ಜಾರಿಗೆ ತಂದರೆ ಏನು ತೊಂದರೆಯಾಗುತ್ತದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು ಜಂಟಿ ಸದನ ಸಮಿತಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಆದಾಗ್ಯೂ ಸರ್ಕಾರ ನಮ್ಮ ಅಹವಾಲನ್ನು ಕಿವಿಗೆ ಹಾಕಿಕೊಳ್ಳದೆ ಕಾಯ್ದೆ ಜಾರಿಗೆ ಮುಂದಾಗಿದೆ. ಈ ಕಾಯ್ದೆಯನ್ನು ಒಂದು ವೇಳೆ ಸರ್ಕಾರ ಜಾರಿಗೆ ತಂದರೆ ನಾವು ನಮ್ಮ ವೃತ್ತಿಯನ್ನೇ ತ್ಯಜಿಸಬೇಕಾಗುತ್ತದೆ. ಅದರಿಂದಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಸಂಘಟನೆ ಹೇಳಿದೆ.
ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಆದರೆ ವೈದ್ಯರು ನೆಮ್ಮದಿಯಿಂದ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಚಿಕಿತ್ಸಾ ವೈಫಲ್ಯದಿಂದಾಗಿ ಆಸ್ಪತ್ರೆಗಳ ವೆಚ್ಚದ ಏರುಪೇರಿನ ಕಾರಣಕ್ಕೆ ವೈದ್ಯರಿಗೆ ಜೈಲು ಶಿಕ್ಷೆ ಮತ್ತು ದಂಡ ಎಂದಾದರೆ ನಾವು ಸದುದ್ದೇಶದಿಂದ ಚಿಕಿತ್ಸೆ ನೀಡಿದ ತಪ್ಪಿಗೆ ಅಕಸ್ಮಾತ್ ಅನಾಹುತಗಳಾದರೂ ನಾವು ಜೈಲು ಪಾಲಾಗುವುದು ಸರಿಯೇ. ಇಂತಹ ಕಾಯ್ದೆಯಿಂದ ಸಾರ್ವಜನಿಕರು ವೈದ್ಯರನ್ನು ಕೊಲೆಗಾರರೆಂದೇ ಭಾವಿಸುವ ಅಪಾಯವಿದೆ.
ದರ ನಿಗದಿ ಮಾಡುವ ತೀರ್ಮಾನ ಕೈಗೊಂಡು ಖಾಸಗಿ ಆಸ್ಪತ್ರೆಗಳ ಹಕ್ಕನ್ನು ಕಸಿದುಕೊಳ್ಳಬಾರದು. ಆಸ್ಪತ್ರೆಗಳನ್ನು ನಿಯಂತ್ರಿಸುವುದಾದರೆ ಈ ಹಿಂದೆ 2010ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಕೇಂದ್ರದ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯನ್ನು ಜಾರಿಗೆ ತನ್ನಿ. ಕೇರಳ ಸರ್ಕಾರ ಈಗಾಗಲೇ ಅದನ್ನು ಜಾರಿಗೆ ತಂದಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಧಕ್ಕೆ ಉಂಟು ಮಾಡುವ ಕರಾಳ ಕಾಯ್ದೆಗಳನ್ನು ತರಕೂಡದು ಎಂದು ಖಂಡಿಸಿ ನಾಳೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 15 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ನಾಳೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ.

 

11  ಸಿ.ಪಿ ಯೋಗಿಶ್ವರ್ ಇಂದು ಬಿಜೆಪಿ ಸೇರ್ಪಡೆ
 ನವೆಂಬರ್-2
ರಾಮನಗರ : ಚನ್ನಪಟ್ಟಣ ಶಾಸಕ ಸಿ.ಪಿ. ಯೋಗಿಶ್ವರ್ ಇಂದು ಅಧಿಕೃತವಾಗಿ ಬಿಜೆಪಿ ಸೇರಲಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.
ನನ್ನ ರಾಜಕೀಯ ಜೀವನವನ್ನು ಬಿಜೆಪಿಯಲ್ಲೇ ಕಳೆಯುತ್ತೇನೆ. ಕಾಂಗ್ರೆಸ್ ಪಕ್ಷದಿಂದ ಚನ್ನಪಟ್ಟಣವನ್ನು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸೇರುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ನನ್ನದು ಜನಪರವಾದ ರಾಜಕಾರಣ. ಡಿ.ಕೆ. ಶಿವಕುಮಾರ್ ಅವರದ್ದು ಸಹಾಯ ಮಾಡಿದವರನ್ನೇ ತುಳಿಯುವ ರಾಜಕಾರಣ ಎಂದು ಆರೋಪಿಸಿದರು.

 

77 ಬಿಜೆಪಿಯದ್ದು ಪರಿವರ್ತನಾ ಯಾತ್ರೆ ಅಲ್ಲ, ಪಶ್ಚಾತಾಪದ ಯಾತ್ರೆ: ರೆಡ್ಡಿ
 ನವೆಂಬರ್-2
ಬೆಂಗಳೂರು : ಬಿಜೆಪಿ ಇಂದು ನಡೆಸುತ್ತಿರುವುದು ಪರಿವರ್ತನಾ ಯಾತ್ರೆಯಲ್ಲ. ಬದಲಾಗಿ ಪಶ್ಚಾತಾಪದ ಯಾತ್ರೆ ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ ವ್ಯಂಗ್ಯವಾಡಿದ್ದಾರೆ.
ರಾಜ್ಯ ಕಾನೂನು ಸುವ್ಯವಸ್ಥೆ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗರೆಡ್ಡಿ, 2008 ರಲ್ಲಿ ಜನ ಬಿಜೆಪಿಗೆ ಅಧಿಕಾರ ಕೊಟ್ಟಿದ್ದರು. ಆದರೆ ಒಂದೇ ಅವಧಿಯಲ್ಲಿಯೇ 3 ಜನ ಮುಖ್ಯಮಂತ್ರಿಗಳು ಬಂದು ಹೋದರು. ಹಗರಣಗಳ ಮೇಲೆ ಹಗರಣ ಮಾಡಿದರು ಎಂದು ದೂರಿದರು.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದು ಮಾಡ್ತೀವಿ ಇದು ಮಾಡ್ತೀವಿ ಎಂದರು. ಆದರೆ ಏನೂ ಮಾಡಿಲ್ಲ. ಬರಕ್ಕೂ ಸರಿಯಾಗಿ ಕೇಂದ್ರ ಅನುದಾನ ನೀಡಿಲ್ಲ. ಬಿಜೆಪಿ ನಾಯಕರಿಗೆ ಅದನ್ನ ಕೇಳುವ ಧೈರ್ಯ ಇಲ್ಲ. ರಾಜ್ಯದ ಜನ ಇವರನ್ನ ಕ್ಷಮಿಸೊಲ್ಲ ಎಂದು ರಾಮಲಿಂಗ ರೆಡ್ಡಿ ವಾಗ್ದಾಳಿ ನಡೆಸಿದರು.

 

99   ಜಾತಿ ವಿನಾಶ ವೇದಿಕೆಯ ರಾಜ್ಯಾಧ್ಯಕ್ಷ, ಲಕ್ಷ್ಮಣ್ ನಿಧನ
 ನವೆಂಬರ್-2
ಬೆಂಗಳೂರು : ದಲಿತ ಕವಿ, ಪ್ರಗತಿಪರ ಹೋರಾಟಗಾರ, ಜಾತಿ ವಿನಾಶ ವೇದಿಕೆಯ ರಾಜ್ಯಾಧ್ಯಕ್ಷ, ಸಾಹಿತಿ, ಚಿಂತಕ ಲಕ್ಷ್ಮಣ್ ಬುಧವಾರ ರಾತ್ರಿ 10:30ರ ಸುಮಾರಿಗೆ ನಿಧನರಾದರು.
ದಲಿತ ಸಂಘಟನೆ ಮೂಲಕ ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಅವರು, ಆನಂತರದ ದಿನಗಳಲ್ಲಿ ನಾಡಿನ ಎಡ ಚಿಂತನೆಯ ಸಂಘಟನೆಗಳತ್ತ ಒಲವು ತೋರಿದ್ದರು. ಕರ್ನಾಟಕದಲ್ಲಿ ಕರ್ನಾಟಕ ವಿಮೋಚನಾ ರಂಗ ಶುರುವಾದ ದಿನಗಳಲ್ಲಿ ಅದರಲ್ಲಿ ತೊಡಗಿಸಿಕೊಂಡು ಕನ್ನಡ ನಾಡಿನ ನೆಲ, ಜಲ, ಭಾಷೆ ಉಳಿವಿನ ಅನೇಕ ಹೋರಾಟಗಳಲ್ಲಿ ಕಾಣಿಸಿಕೊಂಡರು. ಭಾಷೆ ಚಳವಳಿ ಒಂದು ಹಂತಕ್ಕೆ ತೀವ್ರತೆ ಪಡೆದ ಸಂದರ್ಭದಲ್ಲಿಯೇ ಗೆಳೆಯರ ಜತೆ ಸೇರಿ ಜಾತಿವಿನಾಶ ಹೋರಾಟಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಂಘಟನೆಯ ಅಧ್ಯಕ್ಷರಾಗಿದ್ದರೂ ವಿವಿಧ ವೇದಿಕೆಗಳಲ್ಲಿ ಕಾಣಿಕೊಳ್ಳುತ್ತಿದ್ದರು.
ಹೋರಾಟದ ಜತೆಗೆ ಸಾಹಿತ್ಯ ಕೃಷಿ ಮಾಡಿದ್ದರು. 'ಸಂಬೋಳಿ' ಆತ್ಮಕತೆ ಮೂಲಕ ವಿಭಿನ್ನ ಲೇಖಕರಾಗಿ ತೋರಿಸಿಕೊಂಡಿದ್ದರು. ಕಥಾ ಸಂಕಲನ 'ಜಡಿಮಳೆ', ಪ್ರವಾಸ ಕಥನ 'ಬೆಲೆ ಬಾಳುವ ತಂಗಿಯರು' ಕೃತಿಗಳನ್ನು ರಚಿಸಿದ್ದರು.
ಲಕ್ಷ್ಮಣ್ ಅವರ ಅಂತ್ಯಸಂಸ್ಕಾರವು ಇಂದು ಮಧ್ಯಾಹ್ನ 2 ಗಂಟೆಯ ನಂತರ ಕಂಠೀರವ ಸ್ಟುಡಿಯೊ ಹತ್ತಿರದ ಪೆಟ್ರೋಲ್ ಬಂಕ್ ಹಿಂಭಾಗದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದ್ದೆ

 

   ಗಗ ಯತೀಂದ್ರ ಕ್ಲೀನ್ ಚಿಟ್ ಆರೋಪ ಸಾಬೀತು
ನವೆಂಬರ್.2
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕ್ಲೀನ್ ಚಿಟ್ ನೀಡಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯೂನಿಟ್ ಆರಂಭಕ್ಕೆ ಟೆಂಡರನ್ನು ನಿಯಮ ಬಾಹಿರವಾಗಿ ಯತೀಂದ್ರ ನಡೆಸುತ್ತಿರುವ ಮ್ಯಾಟ್ರಿಕ್ಸ್ ಇಮೇಜಿಂಗ್ ಸೆಲ್ಯೂಷನ್ ಕಂಪೆನಿಗೆ ನೀಡಲಾಗಿದೆ. ತಂದೆಯ ಅಧಿಕಾರವನ್ನು ಯತೀಂದ್ರ ದುರುಪಯೋಗ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿ
ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರನ್ 2016ರ ಮೇ 23 ರಂದು ದೂರು ನೀಡಿದ್ದರು.
ಆರೋಪ ಸಾಬೀತಾಗದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

 

 

                                         

ಆರ್‍ಟಿಇ ಯೋಜನೆಯನ್ನು ರದ್ದುಪಡಿಸಿ: ವೈ.ಎಸ್.ವಿ. ದತ್ತ ಒತ್ತಾಯ

ನವೆಂಬರ್.1

ಬೆಂಗಳೂರು: ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಆರ್ಟಿಇ ಯೋಜನೆಯನ್ನು ರದ್ದುಪಡಿಸಿ, ಅದಕ್ಕೆ ಖರ್ಚು ಮಾಡುವ ಹಣವನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಲಿ ಎಂದು ಶಾಸಕ ವೈ.ಎಸ್.ವಿ. ದತ್ತ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಮತ್ತಿತರ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ 'ಸರಕಾರಿ ಶಾಲೆಗಳು ಉಳಿಯಲಿ, ಬೆಳೆಯಲಿ, ನೆರೆಹೊರೆಯ ಸಮಾನ ಶಾಲೆಗಳಾಗಲಿ' ಶೀರ್ಷಿಕೆಯಡಿ ರಾಜ್ಯಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶದಲ್ಲಿ ಮಂಗಳವಾರ ಅವರು ಮಾತನಾಡಿದರು.
''ಆರ್ಟಿಇಗೆ 2,400 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ.ಆದರೆ ಪ್ರತಿ ಶಾಲೆಯ ಅಭಿವೃದ್ಧಿಗಾಗಿ ವರ್ಷಕ್ಕೆ ಕೇವಲ 5 ಸಾವಿರ ರೂ. ನೀಡಲಾಗುತ್ತಿದೆ. ಇಷ್ಟು ಕಡಿಮೆ ಹಣದಲ್ಲಿ ಶಾಲೆಯನ್ನು ಹೇಗೆ ಅಭಿವೃದ್ಧಿಪಡಿಸುವುದು? ಕೆಲವೇ ಮಕ್ಕಳಿಗೆ ಆರ್ಟಿಇ ಅಡಿ ಶಿಕ್ಷಣ ಕೊಡಿಸಲು ಸರಕಾರ ಸಹಸ್ರಾರು ಕೋಟಿ ಹಣ ಖರ್ಚು ಮಾಡಿ, ಖಾಸಗಿ ಶಾಲೆಗಳ ಬಳಿ ಅಂಗಲಾಚುವುದು ಯಾವ ನ್ಯಾಯ? ಖಾಸಗಿಯವರಿಗೆ ಹಣ ಕೊಟ್ಟು ಬಡ ಮಕ್ಕಳನ್ನು ಅಲ್ಲಿಗೆ ಕಳುಹಿಸುವ ಬದಲು ಆ ಹಣವನ್ನು ಬಳಸಿ ಸರಕಾರಿ ಶಾಲೆಗಳನ್ನೇಕೆ ಅಭಿವೃದ್ಧಿಪಡಿಸಬಾರದು. ಆದ್ದರಿಂದ ಆರ್ಟಿಇ ಅನ್ನು ರದ್ದುಪಡಿಸಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಿ,'' ಎಂದು ಒತ್ತಾಯಿಸಿದರು.

 

 

  

33   ಜೆಪಿ ಪರಿವರ್ತನಾ ಯಾತ್ರೆಗೆ ಹೈಟೆಕ್ ಬಸ್ ರೆಡಿ
 ಅಕ್ಟೋಬರ್-31
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಪರಿವರ್ತನೆಗೆ ನಾಂದಿ ಹೇಳಲಾಗುತ್ತಿರುವ ನವಕರ್ನಾಟಕ ಪರಿವರ್ತನಾ ರಥಯಾತ್ರೆಗೆ ಹೈಟೆಕ್ ಬಸ್ ಸಿದ್ದಗೊಂಡಿದೆ. ನ.2 ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ಸೊಂದನ್ನು ಸಿದ್ಧಪಡಿಸಲಾಗಿದೆ. ಮಾಜಿ ಉಪಮೇಯರ್ ಎಸ್.ಹರೀಶ್ ನೇತೃತ್ವದಲ್ಲಿ ಈ ಬಸ್ ಸಿದ್ಧಪಡಿಸಲಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಸಂಚರಿಸಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರು ಸೇರಿದಂತೆ ಮತ್ತಿತರ ನಾಯಕರು ಈ ಬಸ್ನಲ್ಲಿ ಪ್ರಯಾಣಿಸಲಿದ್ದಾರೆ.
ಈಶ್ವರ್ ಕಂಪೆನಿ ತಯಾರಿಕೆಯ ಈ ಬಸ್ಗೆ ಸುಮಾರು ಒಂದು ಕೋಟಿಯಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ನಲ್ಲಿ ಮುಂಭಾಗ 12 ಮಂದಿ ನಿಂತುಕೊಂಡು ಭಾಷಣ ಮಾಡುವ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್ಕುಮಾರ್, ಅನಂತ್ಕುಮಾರ್ ಹೆಗಡೆ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಿಣಗಿ ರಾಜ್ಯ ಉಸ್ತುವಾರಿ ಮುರಳೀಧರ್ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್ ಸೇರಿದಂತೆ ಮತ್ತಿತರರು ಈ ವಾಹನದಲ್ಲೇ ಭಾಷಣ ಮಾಡಲಿದ್ದಾರೆ.
ಏನೇನು ಸೌಲಭ್ಯ:
ಈಗಾಗಲೇ ರಾಜ್ಯದ ನಾನಾ ಕಡೆ ಸುಡುಬಿಸಿಲು ಆವರಿಸಿರುವುದರಿಂದ ಬಸ್ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಕಚೇರಿ, ಹತ್ತು ಜನರು ಕುಳಿತು ಸಭೆ ನಡೆಸಲು ಹಾಲ್, ಶೌಚಾಲಯ, ಕಾಫಿ,ಟೀ ತಯಾರಿಕೆ, ಆಹಾರ ಬಿಸಿ ಮಾಡಲು ಮೈಕ್ರೋಒವನ್, ಮಲಗಲು ವ್ಯವಸ್ಥೆ, ಕಂಪ್ಯೂಟರ್,ಲ್ಯಾಪ್ಟಾಪ್ ಬಳಕೆ ಮಾಡಿಕೊಳ್ಳಲು ಕಚೇರಿ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಣ್ಣಪ್ಪ ಆಟೋ ಮೊಬೈಲ್ನಲ್ಲಿ ಬಸ್ ವಿನ್ಯಾಸಗೊಂಡಿದ್ದು, ಬಹುತೇಕ 2018ರ ವಿಧಾನಸಭೆ ಚುನಾವಣೆಗೂ ಇದೇ ಬಳಕೆಯಾಗಲಿದೆ ಎಂದು ತಿಳಿದು ಬಂದಿದೆ.
ಬಸ್ ಚಾಲನೆ ಮಾಡಲು ನುರಿತ ವಾಹನ ಚಾಲಕರನ್ನು ನೇಮಕ ಮಾಡಲಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಚಾಲನೆ ನೀಡಿದ ಬಳಿಕ ಕುಣಿಗಲ್ ಮೂಲಕ ರಾಜ್ಯದ 224 ಕ್ಷೇತ್ರಗಳಲ್ಲಿ ಬಸ್ ಸಂಚರಿಸಲಿದೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ಚೆನ್ನೈನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಅತ್ಯಾಧುನಿಕ ವಾಹನ ಸಿದ್ಧಪಡಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಕರ್ನಾಟಕದಲ್ಲೇ ಈ ಬಸ್ ಸಿದ್ಧಪಡಿಸಿದ್ದು, ಮೇಕ್ ಇನ್ ಕರ್ನಾಟಕಕ್ಕೆ ಒತ್ತು ನೀಡಿರುವುದು ವಿಶೇಷವಾಗಿದೆ.

 

                                                                                                                                                                                 

ಆಮದು ನಿಯಮಕ್ಕೆ ತಿದ್ದುಪಡಿ

ಅಕ್ಟೋಬರ್.31

ಬೆಂಗಳೂರು: ರಾಜ್ಯದಲ್ಲಿನ ಮರಳು ಬೇಡಿಕೆ ಪೂರೈಸಲು ವಿದೇಶಗಳಿಂದ ಆಮದು ಮಾಡಿಕೊಳ್ಳಲು ನಿಯಮಗಳಲ್ಲಿದ್ದ ಅಡೆತಡೆಗಳನ್ನು ನಿವಾರಿಸಲು ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಮುಂದಾಗಿದೆ.
ಈ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರು ಸೋಮವಾರ ಸಂಬಂಧಪಟ್ಟ ತಿದ್ದುಪಡಿಗಳನ್ನು ಅಂತಿಮಗೊಳಿಸಿದ್ದಾರೆ. ತಿದ್ದುಪಡಿ ನಿಯಮಗಳ ಅಧಿಸೂಚನೆ ಹೊರಬಿದ್ದ ಬಳಿಕ ವಿದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ಅನುಮತಿ ದೊರೆಯಲಿದೆ. ಕೇವಲ ಎಂಎಸ್ಐಎಲ್ ಸಂಸ್ಥೆ ಮಾತ್ರವಲ್ಲ ಖಾಸಗಿಯವರೂ ನೋಂದಾಯಿಸಿಕೊಂಡು ಮರಳು ಆಮದು ಮಾಡಿಕೊಳ್ಳಬಹುದಾಗಿದೆ.
ಇತ್ತೀಚಿಗೆ ನದಿ ಮರಳು ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆ-ಪೂರೈಕೆ ನಡುವೆ ಅಜಗಜಾಂತರ ವ್ಯತ್ಯಾಸ ಇರುವುದರಿಂದ ಎಂಸ್ಯಾಂಡ್ಗೆ ಹೆಚ್ಚಿನ ಉತ್ತೇಜನ ಕೊಡಲಾಗುತ್ತಿದೆ. ಜತೆಗೆ ವಿದೇಶಗಳಿಂದ ನದಿ ಮರಳು ಆಮದು ಮಾಡಿಕೊಂಡು ಪೂರೈಸುವುದಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ. ಕೆಲವೊಂದು ನಿಯಮಗಳು ಅಡ್ಡಿಯಾಗಿದ್ದವು, ಅವುಗಳಿಗೆ ತಿದ್ದುಪಡಿ ತರಲು ಸೂಚಿಸಲಾಗಿದೆ, ಮುಂದಿನ ಸಂಪುಟದಲ್ಲಿ ಅನುಮೋದಿಸಲಾಗುವುದು ಎಂದು ಸಚಿವ ಜಯಚಂದ್ರ ಅವರು ಸುದ್ದಿಗಾರರಿಗೆ ತಿಳಿಸಿದರು.
'ಒಂದು ವೇಳೆ ಮಲೇಷ್ಯಾ ಮತ್ತಿತರ ದೇಶಗಳಿಂದ ಮರಳು ಆಮದು ಮಾಡಿಕೊಂಡರೆ 10 ಟನ್ ಲೋಡ್ ಮರಳು 15 ರಿಂದ 20 ಸಾವಿರ ರೂ.ಗಳಿಗೆ ದೊರೆಯುತ್ತದೆ. ಗ್ರಾಹಕರಿಗೂ ಸುಲಭ ಬೆಲೆಯಲ್ಲಿ ಲಭ್ಯವಾಗಲಿದೆ,' ಎಂದರು.

 

 

 

 

                                                                                   

ನಾಯಿಯ ಸಾವು ಇಬ್ಬರ ಆತ್ಮಹತ್ಯೆಗೆ ಕಾರಣವಾಯ್ತು!

ಅಕ್ಟೋಬರ್ -31

 ಬೆಂಗಳೂರು : ಒಂದು ನಾಯಿಯ ಸಾವು ಇಬ್ಬರ ಆತ್ಮಹತ್ಯೆಗೆ ಕಾರಣವಾದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು,ತನ್ನ ಮುದ್ದಿನ ನಾಯಿ ಮರಿ ಮೃತಪಟ್ಟಿದ್ದಕ್ಕೆ ಯುವತಿಯೊಬ್ಬಳು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತನ್ನ ಸ್ನೇಹಿತೆ ಆತ್ಮಹತ್ಯೆ ಮಾಡಿಕೊಂಡಳು ಎಂದು ನೊಂದ ಆಕೆಯ ಸ್ನೇಹಿತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಮಿನಿ ಎಂಬ 19 ವರ್ಷದ ಯುವತಿ ಜಿಮ್ಮಿ ಎಂಬ ಪಮೋರಿಯನ್ ನಾಯಿಯನ್ನು ಸಾಕಿದ್ದಳು. ಅಲ್ಲದೇ ಈ ನಾಯಿಯನ್ನು ಬಹಳ ಹಚ್ಚಿಕೊಂಡಿದ್ದಳು. ಆ ನಾಯಿ ನಾಲ್ಕು ವರ್ಷಗಳಿಂದ ಅವರ ಜೊತೆಗೆ ಇತ್ತು ಎಂದು ಹೇಳಲಾಗಿದೆ.

 

 

77  ಸಿಲಿಂಡರ್ ಸ್ಫೋಟಗೊಂಡು ನಾಲ್ವರಿಗೆ ಗಾಯ
 ಅಕ್ಟೋಬರ್- 30
ಬೆಂಗಳೂರು: ಸೋರಿಕೆಯಾಗುತ್ತಿದ್ದ ಸಿಲಿಂಡರ್ ಸಿಡಿದು ಒಂದೇ ಕುಟುಂಬದ ನಾಲ್ವರು ಗಾಯಗೊಂಡ ಘಟನೆ ವೈಟ್ ಫೀಲ್ಡ್ ಸಮೀಪ ಕಾಡುಗೋಡಿಯಲ್ಲಿ ನಿನ್ನೆ ನಡೆದಿದೆ.
ನರೇಂದ್ರ ಶರ್ಮ ಅವರ ಪತ್ನಿ ಶಿಲ್ಪ ಅವರ 9 ತಿಂಗಳ ಮಗು ಆರ್ಯ ಮತ್ತು ನರೇಂದ್ರ ಅವರ ಸೋದರ ಹರೇಂದ್ರ ಗಾಯಗೊಂಡವರಾಗಿದ್ದಾರೆ. ಈ ದಂಪತಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಉತ್ತರ ಪ್ರದೇಶ ಮೂಲದವರಾದ ಇವರು ಕಾಡುಗೋಡಿ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ಘಟನೆ ನಿನ್ನೆ ಬೆಳಗ್ಗೆ ಸುಮಾರು 6.30ರ ಹೊತ್ತಿಗೆ ನಡೆದಿದೆ. ಹರೇಂದ್ರ ಎದ್ದು ಅಡುಗೆ ಮನೆಗೆ ಚಹಾ ಮಾಡಲೆಂದು ತೆರಳಿದರು. ಹಿಂದಿನ ದಿನ ರಾತ್ರಿ ಗ್ಯಾಸ್ ಸಿಲಿಂಡರ್ ನ್ನು ಆಫ್ ಮಾಡಿರಲಿಲ್ಲ. ಸೋರಿಕೆಯಾಗುತ್ತಿದ್ದ ಅನಿಲ ಅಡುಗೆ ಮನೆಯ ಸುತ್ತಲೂ ಆವರಿಸಿತ್ತು. ಹರೇಂದ್ರಗೆ ಗ್ಯಾಸ್ ವಾಸನೆ ಬರಲಿಲ್ಲ. ಸ್ಟೌವ್ ಆನ್ ಮಾಡಿದರು. ಆಗ ಸಿಡಿಯಿತು. ಕೋಣೆಯಲ್ಲಿ ಮಗುವಿನ ಜೊತೆ ಮಲಗಿದ್ದ ದಂಪತಿ ಕೂಡ ಗಾಯಗೊಂಡಿದ್ದಾರೆ. ಪಕ್ಕದ ಮನೆಗೆ ಕೂಡ ಹಾನಿಯಾಗಿದೆ.
ಸ್ಫೋಟದ ಸದ್ದು ಕೇಳಿದ ಪಕ್ಕದ ಮನೆಯವರು ಕೂಡಲೇ ಮನೆಗೆ ಧಾವಿಸಿ ಬಂದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಇವರ ಸಂಬಂಧಿಕರು ಉತ್ತರ ಪ್ರದೇಶದಿಂದ ನಗರಕ್ಕೆ ಆಗಮಿಸಬೇಕಷ್ಟೆ. ನಿರ್ಲಕ್ಷ್ಯದಿಂದ ಈ ಘಟನೆಯಾಗಿದೆ ಎಂದು ಕಾಡುಗೋಡಿ ಪೊಲೀಸರು ಹೇಳುತ್ತಾರೆ.

 

 

                                                                                                                                                              

ರಾಜ್ಯ ಪೊಲೀಸರ ಖಾಕಿ ಖದರ್: ಬದಲಾಗಲಿದೆ

ಅಕ್ಟೋಬರ್-30
ಬೆಂಗಳೂರು: ದುರ್ಗಂಧ ಹೆಚ್ಚಿಸುವ ಹಾಗೂ ಓಡಾಡಲು ಅನಾನುಕೂಲವಾಗುವ ಸಮವಸ್ತ್ರಗಳ ಬಗ್ಗೆ ಕರ್ನಾಟಕ ಪೊಲೀಸರು ಪದೆ ಪದೇ ದೂರುತ್ತಿದ್ದು, ಇದೀಗ ಇದನ್ನು ಬದಲಾಯಿಸಲು ಕರ್ನಾಟಕ ಪೊಲೀಸ್ ಇಲಾಖೆ ಮುಂದಾಗಿದೆ.

ಪೊಲೀಸರಿಗೆ ನೀಡುವ ಖಾಕಿ ಬಟ್ಟೆ ಬಗ್ಗೆ ಸಿಕ್ಕಾಪಟ್ಟೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬಟ್ಟೆಯ ಗುಣಮಟ್ಟ ಬದಲಾಯಿಸಲು ಚಿಂತಿಸಿದ್ದು, ಓಡಾಡಲು ಅನುಕೂಲವಾಗುವಂಥ ಬಟ್ಟೆಯನ್ನು ಬಳಸಲು ಚಿಂತಿಸಲಾಗುತ್ತಿದೆ. ಮೊದಲು ಪೊಲೀಸ್ ಪೇದೆಗಳಿಗೆ 500 ಸಮವಸ್ತ್ರಗಳು ನೀಡಲಿದ್ದು, ಪ್ರತಿಕ್ರಿಯೆ ನೋಡಿ ರಾಜ್ಯದ ಇತರೆ ಪೊಲೀಸರಿಗೂ ಇದೇ ಗುಣಮಟ್ಟದ ಸಮವಸ್ತ್ರ ನೀಡಲಾಗುತ್ತದೆ.

'ಇಲಾಖೆ ನೀಡುವ ಬಟ್ಟೆ ಉತ್ತಮ ಗುಣಮಟ್ಟವಲ್ಲದ ಕಾರಣ, ಪೊಲೀಸರು ಖುದ್ದು ತಾವೇ ಬಟ್ಟೆ ಕೊಂಡು ಸಮವಸ್ತ್ರವನ್ನು ಹೊಲಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಪೊಲೀಸರ ಸಮವಸ್ತ್ರ ವರ್ಣ ವಿಭಿನ್ನವಾಗಿದೆ. ಅಲ್ಲದೇ ಫೀಲ್ಡಿನಲ್ಲಿ ನಿಯೋಜಿತರಾಗುವ ಪುರುಷ ಪೊಲೀಸರು ದೇಹದ ದುರ್ಗಂಧದ ಬಗ್ಗೆ ದೂರುತ್ತಿದ್ದಾರೆ,' ಎಂದು ಎಡಿಜಿಪಿ ಭಾಸ್ಕರ್ ರಾವ್ ಹೇಳುತ್ತಾರೆ.

ಪ್ರಸ್ತುತ ಪಾಲಿಸ್ಟರ್ ಖಾಕಿ ಬಟ್ಟೆಯನ್ನು ನೀಡುತ್ತಿದ್ದು, ಇದರಿಂದ ಪೊಲೀಸರಿಗೆ ಇರಿಸು ಮುರಿಸಾಗುತ್ತಿದೆ. ಆದರಿನ್ನು ನೀಡುವ ಬಟ್ಟೆಯಲ್ಲಿ ಶೇ.67 ಪಾಲಿಸ್ಟರ್ ಹಾಗೂ ಶೇ.30 ಕಾಟನ್ ಹಾಗೂ ಶೇ.3ರಷ್ಟು ಸಿಂಥೆಟಿಕ್ ಇರಲಿದೆ. ಕೊಳೆಯಾಗದಂತೆ ತಡೆಯುವ ಹಾಗೂ ದೇಹದ ತೇವಾಂಶವನ್ನು ನಿರ್ವಹಿಸಬಲ್ಲ ಸಮವಸ್ತ್ರವನ್ನು ನೀಡುವ ಪ್ರಸ್ತಾವನೆ ಇತ್ತು. ಆದರೆ, ಇಲಾಖೆ ಬೆವರನ್ನು ಹೀರುವಂಥ ಬಟ್ಟೆಯನ್ನು ನೀಡಲು ನಿರ್ಧರಿಸಿದೆ.

 

 

 

77
 ಎಟಿಎಂ ದರೋಡೆ, 18 ಲಕ್ಷ ರೂ. ದೋಚಿ ಪರಾರಿ
 ಅಕ್ಟೋಬರ್-30
ಬೆಂಗಳೂರು: ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ.ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.
ಇಂದು ಬೆಳಗ್ಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಲು ತೆರಳಿದಾಗ ದಾಳಿ ಮಾಡಿದ ಮೂವರು ದುಷ್ಕರ್ಮಿಗಳು 18 ಲಕ್ಷ ರೂ.ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸೆಕ್ಯೂರ್ ವೆಲ್ ಏಜೆನ್ಸಿಯ ಸಿಬ್ಬಂದಿ ಕಸ್ಟೋಡಿಯನ್ ಮೋಹನ್ ಅವರ ಮೇಲೆ ದಾಳಿ ಮಾಡಿದ್ದಾರೆ. ಮೋಹನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
220 ಪಲ್ಸರ್ ಬೈಕ್ ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ರ್ಕಮಿಗಳು ಈ ದಾಳಿ ನಡೆಸಿದ್ದು ಸೆಕ್ಯೂರ್ ವೆಲ್ ಏಜ್ಸೇನಿಯ ಸಿಬ್ಬಂದಿಗಲಾದ ಮೋಹನ್, ಸಾಗರ್ ಹಾಗೂ ಪ್ರಸನ್ನ ಎಟಿಎಂ ಗೆ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು.ಅದರಲ್ಲಿ 18.5 ಲಕ್ಷವನ್ನು ದರೋಡೆ ಮಾಡಲಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

tt  ಹಿರಿಯ ಪತ್ರಕರ್ತ ಖಾದ್ರಿ ಎಸ್. ಅಚ್ಯುತನ್ ವಿಧಿವಶ
 ಅಕ್ಟೋಬರ್ -30
ಬೆಂಗಳೂರು: ನಾಡಿನ ಹೆಸರಾಂತ ಹಿರಿಯ ಪತ್ರಕರ್ತ, ಲೇಖಕ, ಅನುವಾದಕ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ನಿವೃತ್ತ ನಿರ್ದೇಶಕ ಖಾದ್ರಿ ಎಸ್.ಅಚ್ಯುತನ್( 72) ಅವರು ಭಾನುವಾರ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನೆರವೇರಲಿದೆ.
ಪತ್ರಿಕೋದ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದ ಅತ್ಯುತನ್ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದದ್ದರು.
ಇದೇ ವೇಳೆ ಮಾಜಿ ಪ್ರಧಾನಿ ಎಚ್ಡಿ.ದೇವೇಗೌಡ ಅವರು ಅತ್ಯುತನ್ ಅವರ ಸಾವಿಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದು, ಅಚ್ಯುತನ್ ಅವರ ನಿಧನದಿಂದ ವೈಯುಕ್ತಿಕವಾಗಿ ಬಹಳ ನೋವಾಗಿದೆ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ತುಂಬಲಿ ಅಂತಾ ಹೇಳಿದ್ದಾರೆ.

 

 

 

  

     ಸ್ಯಾಂಡಲ್ ವುಡ್ ನಿರ್ಮಾಪಕನ  ಬಂಧನ

ಅಕ್ಟೋಬರ್-28 

ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಸ್ಯಾಂಡಲ್ ವುಡ್ನಿ ನಿರ್ಮಾಪಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.ಬಂಧಿತ ನಿರ್ಮಾಪಕನನ್ನು ಪ್ರತಾಪ್ ರಂಗು ಅಲಿಯಾಸ್ ರಂಗ ಎಂದು ಗುರುತಿಸಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, 15 ದಿನಗಳ ಹಿಂದೆ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ್ದ. ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.ಆರೋಪಿ ನಿರ್ಮಾಪಕನನ್ನು ಬಸವೇಶ್ವರ ನಗರ ಪೊಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿ `ಡಬಲ್ ಮೀನಿಂಗ್' ಸಿನಿಮಾದ ನಿರ್ಮಾಪಕನಾಗಿದ್ದು, ಬಸವೇಶ್ವರನಗರ, ಮಹಾಲಕ್ಷ್ಮಿಲೇಔಟ್ ಸುತ್ತಮುತ್ತ ಸರಗಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

 

 

 

55  ಬೆಂಗಳೂರಿನಲ್ಲಿ ಸ್ಮಾರ್ಟ್ ಪಾರ್ಕಿಂಗ್ ಸೌಲಭ್ಯ ಜಾರಿಗೆ
 ಅಕ್ಟೋಬರ್-28
ಬೆಂಗಳೂರು : ನಗರದ ಪ್ರಮುಖ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಇದರಿಂದ ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ಆದಾಯ ಬರಲಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ ಗುಣಶೇಖರನ್ ಹೇಳಿದ್ದಾರೆ.
ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಿಂದ ಪಾಲಿಕೆಗೆ 10 ವರ್ಷಗಳಿಗೆ 315.60 ಕೋಟಿ ರೂ. ಆದಾಯ ಹರಿದು ಬರಲಿದೆ. ಈ ವ್ಯವಸ್ಥೆಯ ಗುತ್ತಿಗೆಯನ್ನು ಬಿಲ್ಡಿಂಗ್ ಕಂಟ್ರೋಲ್ ಸಲ್ಯೂಷನ್ಸ್ ಇಂಡಿಯಾ ಕಂಪೆನಿಯು ಪಡೆದುಕೊಂಡಿದೆ ಎಂದು ತಿಳಿಸಿದರು.
ನಗರದಲ್ಲಿ ಸುಮಾರು 70-80 ಲಕ್ಷ ವಾಹನಗಳಿವೆ. ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಲ್ಲದೇ ಪಾಲಿಕೆಗೂ ಯಾವುದೇ ರೀತಿಯ ಆದಾಯ ಬರುತ್ತಿಲ್ಲ. ಹೀಗಾಗಿ, ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

 

      ಹೆಲ್ಮೆಟ್ ಧರಿಸದವರಿಗೆ ಹೂ ಗುಚ್ಛ ನೀಡಿದ       ಮಕ್ಕಳು
ಅಕ್ಟೋಬರ್.28
ಬೆಂಗಳೂರು: ಕೃಷ್ಣರಾಜಪುರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆಲ್ಮೆಟ್ ಹಾಕದೆ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಶುಕ್ರವಾರ ಅಚ್ಚರಿ ಕಾದಿತ್ತು. ಅಂತಹವರನ್ನೆಲ್ಲ ಗುರುತಿಸಿ ಚಿಣ್ಣರು ಹೂಗುಚ್ಛ ಕೊಡುತ್ತಿದ್ದರು !
ಕೆಆರ್ಪುರ ವಿಧಾನಸಭಾ ಕ್ಷೇತ್ರದ ಕ್ಷೇಮಾಭಿವೃದ್ಧಿ ಸಂಘ ಮತ್ತು ಸಂಚಾರ ಪೊಲೀಸರ ಸಹಯೋಗದಲ್ಲಿ ಸಂಚಾರ ಅರಿವು ಅಭಿಯಾನದ ಅಂಗವಾಗಿ ಚಿಣ್ಣರು ಸವಾರರಿಗೆ ಹೂಗುಚ್ಛ ನೀಡುವ ಜತೆಗೆ ನಿಯಮ ಪಾಲನೆಯ ಅಗತ್ಯತೆ ಕುರಿತು ಮನವರಿಕೆ ಮಾಡಿದರು.
ಕೆಆರ್ಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಹೊರಟ ಜಾಥಾ ರಾಷ್ಟ್ರೀಯ ಹೆದ್ದಾರಿ 75 ರ ಮೂಲಕ ಸಾಗಿ ಬಿಬಿಎಂಪಿ ಕಚೇರಿಯವರೆಗೆ ಸಾಗಿತು. ಮಾರ್ಗದುದ್ದಕ್ಕೂ ವಿದ್ಯಾರ್ಥಿಗಳು ಜಾಗೃತಿ ಕೈಗೊಂಡರು. ಜಾಥಾದಲ್ಲಿ ವಿವಿಧ ಶಾಲೆಗಳ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸದಾ ಹೆಲ್ಮೆಟ್ ಧರಿಸಬೇಕು, ಅತಿ ವೇಗ ಬೇಡ, ಸದಾ ಜೀಬ್ರಾ ಕ್ರಾಸಿಂಗ್ ಬಳಸೋಣ, ಸಿಗ್ನಲ್ ಪಾಲಿಸೋಣ, ವ್ಹೀಲಿಂಗ್ ಬೇಡ ಮತ್ತಿತರ ನಾಮಪಲಕಗಳನ್ನು ಇದೇ ವೇಳೆ ಪ್ರದರ್ಶಿಸಲಾಯಿತು.

 

 

 

  

 ಸ್ವಾಮೀಜಿ ದಯಾನಂದ ಕುಟುಂಬವನ್ನು ಮಠದಿಂದ               ಓಡಿಸುವಂತೆ ಗ್ರಾಮಸ್ಥರು ಧರಣಿ
ಅಕ್ಟೋಬರ್-27
ಬೆಂಗಳೂರು: ಹುಣಸಮಾರನಹಳ್ಳಿ ಜಂಗಮಮಠದ ದಯಾನಂದ ಸ್ವಾಮೀಜಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಕುಟುಂಬವನ್ನು ಮಠದಿಂದ ಓಡಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮಠದ ಆಸ್ತಿ ಹೊಡೆಯಲು ಸ್ವಾಮೀಜಿ ಕುಟುಂಬ ಹುನ್ನಾರ ನಡೆಸಿದ್ದು, ಅವರನ್ನು ಇಲ್ಲಿಂದ ಖಾಲಿ ಮಾಡಿಸಿ ಬೇರೆಯವರನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಮತ್ತು ಟ್ರಸ್ಟಿಗಳು ಹಿರಿಯ ಮಠಾಧೀಶರಲ್ಲಿ ಮನವಿ ಮಾಡಿದ್ದಾರೆ. ನಿನ್ನೆ ಸ್ವಾಮೀಜಿಯ ರಾಸಲೀಲೆ ಪ್ರಕರಣದ ಸಿಡಿ ವೈರಲ್ ಆಗುತ್ತಿದ್ದಂತೆ ಮಠದ ಮುಂದೆ ಜಮಾಯಿಸಿದ್ದ ಭಕ್ತರು ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶಗೊಂಡು ಮಠದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ದಯಾನಂದಸ್ವಾಮಿ ಹಾಗೂ ಹಿರಿಯ ಸ್ವಾಮೀಜಿಯನ್ನು ಇಲ್ಲಿಂದ ಓಡಿಸಬೇಕು ಇಲ್ಲದಿದ್ದರೆ ಮಠದ ಆಶಯಗಳಿಗೆ, ಜನರ ಧಾರ್ಮಿಕ ಭಾವನೆಗಳಿಗೆ ಕುತ್ತು ಬರುತ್ತದೆ. ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಪಟ್ಟು ಹಿಡಿದಿದ್ದಾರೆ. ಇಂದು ಬೆಳೆಗ್ಗಯೂ ಧರಣಿ ಮುಂದುವರೆಸಿರುವ ಗ್ರಾಮಸ್ಥರು ಮಠಕ್ಕೆ ಸಂಬಂಧಿಸಿದ ಹಿರಿಯ ಮಠಾಧೀಶರು ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಕಾಮಿ ಸ್ವಾಮಿಯನ್ನು ಇಲ್ಲಿಂದ ಜಾಗ ಖಾಲಿ ಮಾಡಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಮಠದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಈ ಹಿಂದೆಯೇ ನಾವು ಧನಿ ಎತ್ತಿದ್ದೆವು. ಪೊಲೀಸರಿಗೂ ಕೂಡ ದೂರು ನೀಡಿದ್ದೆವಾದರೂ ಹಲವರು ಮಧ್ಯಸ್ಥಿಕೆ ವಹಿಸಿ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದರು. ಅದರಿಂದ ಇಂತಹ ಮರ್ಯಾದೆ ಹೋಗುವ ಪರಿಸ್ಥಿತಿ ಉಂಟಾಯಿತು. ಹಾಗಾಗಿ ಇದರಿಂದ ನಮಗೆ ನಮ್ಮ ಗ್ರಾಮಕ್ಕೆ ಮತ್ತು ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬಂತು. ಕೂಡಲೇ ನಮ್ಮ ವೀರಶೈವ ಸಮಾಜದ ಹಿರಿಯ ಮುಖಂಡರು, ಹಿರಿಯ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಗ್ರಾಮಸ್ಥರು, ಮಠದ ಟ್ರಸ್ಟಿಗಳು ಒತ್ತಾಯಿಸಿದ್ದಾರೆ.

 

 

 

 

qq

 ಹುಣಸಮಾರನಹಳ್ಳಿ ಸ್ವಾಮಿ ಕಾಮಕಾಂಡಕ್ಕೆ ಬಿಗ್ ಟ್ವಿಸ್ಟ್

 ಅಕ್ಟೋಬರ್-27

ಬೆಂಗಳೂರು : ದಯಾನಂದಸ್ವಾಮಿ ರಾಸಲೀಲೆ ಪ್ರಕರಣ ಬಹಿರಂಗವಾಗಿದ್ದು ಇದೇ ಮೊದಲಲ್ಲ ಅಂದಿನ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿಗೂ ಈ ಸಿಡಿ ವಿಚಾರ ತಿಳಿದಿತ್ತು. ರಾಸಲೀಲೆ ಸಿಡಿ ವಿಚಾರದಲ್ಲಿ ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಮಾಡಿದವರ ನಡುವೆ ಈ ಮೊದಲೇ ಸಂಧಾನ ನಡೆದಿದ್ದು, ಕಮಿಷನರ್ ಆಗಿದ್ದ ಜ್ಯೋತಿ ಪ್ರಕಾಶ್ ಮಿರ್ಜಿ ಮುಂದಾಳ್ವತದಲ್ಲಿ ಈ ಸಂಧಾನ ನಡೆದಿತ್ತು ಎಂಬ ವಿಚಾರ ತಿಳಿದು ಬಂದಿದೆ.

ಸ್ವಾಮೀಜಿ ಮತ್ತು ಹನಿಟ್ರ್ಯಾಪ್ ಮಾಡಿದವರ ನಡುವೆ ಕಮಿಷನರ್ ಆಗಿದ್ದ ಜ್ಯೋತಿಪ್ರಕಾಶ್ ಮಿರ್ಜಿ ಅವರ ಕಚೇರಿಯಲ್ಲಿ ಸಿಡಿ ವಿಚಾರದ ಸಂಧಾನ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಮಾಧ್ಯಮಗಳಿಗೆ ಸಿಡಿ ವಿಚಾರ ಬಹಿರಂಗವಾಗದಂತೆ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ತಡೆದಿದ್ದರಾ ಎಂಬ ಅನುಮಾನ ಮೂಡಿದೆ. ಹೀಗೆ ಮಾಡಿದ್ದರೂ ಹೀಗೆ ಮಾಡಲು ಕಾರಣವೇನು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.

ಇನ್ನು ಸ್ವಾಮೀಜಿಯ ರಾಸಲೀಲೇ ಹಿಂದೆ ಸಂಬಂಧಿಕರ ಕೈವಾಡ ಇದೆ ಎನ್ನಲಾಗುತ್ತಿದ್ದು, ಮಠದ ಆಸ್ತಿ ಹೊಡೆಯಲು ಸ್ವಾಮೀಜಿ ಸಂಬಂಧಿಕಕದ ಮಲ್ಲಿಕಾರ್ಜುನ, ಹಿಮಾಚಲ, ಚಂದ್ರು ಬಂಬವರು ಹನಿಟ್ರ್ಯಾಪ್ ಮಾಡಿದ್ದರೆಂಬ ಆರೋಪ ಕೇಳಿ ಬಂದಿದೆ. ಇವರೆಲ್ಲಾ ಮಠದಲ್ಲೇ ಕೆಲಸ ಮಾಡುತ್ತಿದ್ದರು ಅವರೇ ಹನಿಟ್ರ್ಯಾಪ್ ಮಾಡಿದ್ದಾರೆ ಎಂಸು ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ರಾಮಣ್ಣ ಗಂಭೀರ ಆರೋಪ ಮಾಡಿದ್ದಾರೆ

ಅಲ್ಲದೇ ರಾಸಲೀಲೆ ವಿಡಿಯೋ ಮೂಲಕ ಲಕ್ಷ,ಲಕ್ಷ ಹಣ ಲೂಟಿ ಹೊಡೆದಿದ್ದಾರೆ, ಈಗ ಪ್ರತಿಭಟನೆ ಮಾಡುತ್ತಿರುವವರೇ ಹೀಗೆಲ್ಲಾ ಮಾಡಿದ್ದು ಎಂದು ರಾಮಣ್ಣ ಹೇಳಿಕೆ ನೀಡಿದ್ದಾರೆ.

 

 

44

 ಸಿಎಂ ವಿರುದ್ಧ 30 ಲೋಕಾಯುಕ್ತ ಕೇಸ್ ಕ್ಲೋಸ್
 ಅಕ್ಟೋಬರ್-27
ಬೆಂಗಳೂರು: ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶರಣ್ಪ್ರಕಾಶ್ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಐಎಎಸ್, ಐಪಿಎಸ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಪೈಕಿ ಸುಮಾರು 288 ಪ್ರಕರಣಗಳಿಗೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ್ ಶೆಟ್ಟಿ ಅವರು ಇತಿಶ್ರೀ ಹಾಡಿದ್ದಾರೆ.
ಸೂಕ್ತ ದಾಖಲೆ ಇಲ್ಲದಿರುವುದು, ವಿಚಾರಣೆಗೆ ಅರ್ಹ ಇಲ್ಲ, ಸಾಕ್ಷ್ಯ ಕೊರತೆ ಸೇರಿದಂತೆ ನಾನಾ ಕಾರಣಗಳನ್ನು ತಿಳಿಸಿ ಪ್ರಕರಣಗಳನ್ನು ವಿಚಾರಣೆಯಿಂದ ಕೈಬಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣಗಳಿಗೆ ಲೋಕಾಯುಕ್ತರು ಮುಕ್ತಿ ನೀಡಿದ್ದಾರೆ. ಅಲ್ಲದೇ, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ವಿರುದ್ಧ ದಾಖಲಾದ ಪ್ರಕರಣವನ್ನು ಸಹ ಮುಕ್ತಾಯಗೊಳಿಸಲಾಗಿದೆ.
ಮುಖ್ಯಮಂತ್ರಿ, ಸಚಿವರು ಮಾತ್ರವಲ್ಲದೇ ವಿವಿಧ ಪ್ರಕರಣಗಳಲ್ಲಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದ್ದವು. ಅವುಗಳನ್ನು ಲೋಕಾಯುಕ್ತರು ಇತ್ಯರ್ಥ ಗೊಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ, ರೇವಣ್ಣ ಸಿದ್ಧಪ್ಪ, ಕೆ.ಆರ್.ರವೀಂದ್ರ, ಪೊಲೀಸ್ ಮಹಾಸಭಾದ ಅಧ್ಯಕ್ಷ ವಿ. ಶಶಿಧರ್ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಇವರ ದೂರುಗಳನ್ನು ಕೈಬಿಡಲಾಗಿದೆ.
ಮುಖ್ಯಮಂತ್ರಿಗಳ ವಿರುದ್ಧ 57 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 27 ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ನ್ಯಾ.ಭಾಸ್ಕರ್ ರಾವ್ ಅವರು ಲೋಕಾಯುಕ್ತ ಹುದ್ದೆ ತ್ಯಜಿಸಿದ ಬಳಿಕ ಕೆಲ ತಿಂಗಳುಗಳ ಕಾಲ ಲೋಕಾಯುಕ್ತರೇ ಇರಲಿಲ್ಲ. ಈ ವೇಳೆ ದಾಖಲಾಗುತ್ತಿದ್ದ ಪ್ರಕರಣಗಳು ಇತ್ಯರ್ಥಗೊಳ್ಳುತ್ತಿರಲಿಲ್ಲ. ಹೀಗಾಗಿ ದೂರುಗಳು ಸಹ ದಾಖಲಾಗುತ್ತಿರಲಿಲ್ಲ.
ಆದರೆ, ನ್ಯಾ.ಪಿ.ವಿಶ್ವನಾಥ್ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 938 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 288 ಪ್ರಕರಣ ಗಳನ್ನು ಅವರು ಮುಕ್ತಾಯಗೊಳಿಸಿದ್ದಾರೆ ಎಂದು ಹೇಳಲಾಗಿದೆ.
2017ರ ಫೆ.1ರಿಂದ ಸೆ.21ರವರೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ 2952 ಪ್ರಕರಣಗಳು ದಾಖಲಾಗಿದ್ದು, ಒಟ್ಟು 10126 ಪ್ರಕರಣಗಳಿದ್ದವು. 3832 ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿದೆ. ಇನ್ನೂ 6294 ಪ್ರಕರಣಗಳು ಬಾಕಿ ಇವೆ. ಲೋಕಾಯುಕ್ತರು, ಉಪಲೋಕಾಯುಕ್ತ-1 ಮತ್ತು ಉಪಲೋಕಾಯುಕ್ತ-2 ಅವರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣ ಇವುಗಳಾಗಿವೆ. ನ್ಯಾ.ಪಿ.ವಿಶ್ವನಾಥಶೆಟ್ಟಿ ಅವರ ಬಳಿ 900 ದೂರುಗಳು ದಾಖಲಾಗಿದ್ದು, ಒಟ್ಟು 3313 ಪ್ರಕರಣಗಳಿದ್ದವು. ಈ ಪೈಕಿ 941 ದೂರುಗಳ ವಿಚಾರಣೆ ನಡೆಸಿದ್ದು, ಇನ್ನೂ 2372 ದೂರಗಳು ಬಾಕಿ ಇವೆ.
ಉಪಲೋಕಾಯುಕ್ತ -1 ನ್ಯಾ.ಆನಂದ್ ಅವರ ಬಳಿ 757 ಪ್ರಕರಣಗಳು ದಾಖಲಾಗಿದ್ದು, ಒಟ್ಟು 2033 ಪ್ರಕರಣಗಳಿವೆ. ಇವು ಗಳಲ್ಲಿ 912 ಪ್ರಕರಣಗಳ ವಿಚಾರಣೆ ನಡೆಸಿದ್ದು, 1221 ಪ್ರಕರಣಗಳು ಬಾಕಿ ಇವೆ.
ಅಂತೆಯೇ, ಉಪಲೋಕಾಯುಕ್ತ-2 ನ್ಯಾ. ಬಿ.ಅಡಿ ಅವರಲ್ಲಿ 1295 ಪ್ರಕರಣಗಳು ದಾಖಲಾಗಿದ್ದು, 4780 ಪ್ರಕರಣಗಳಿವೆ. ಈ ಪೈಕಿ 1979 ಕೇಸ್ ವಿಚಾರಣೆ ನಡೆಸಲಾಗಿದ್ದು, 2801 ಪ್ರಕರಣಗಳು ಬಾಕಿ ಇವೆ ಎಂದು ಮೂಲಗಳು ತಿಳಿಸಿವೆ.

 

 

 

99  ಸಿಎಂ ವಿರುದ್ಧ ತನ್ವೀರ್ ಸೇಠ್ ಅಸಮಾಧಾನ
 ಅಕ್ಟೋಬರ್-26
ಬೆಂಗಳೂರು: ಐಎಎಸ್ ಅಧಿಕಾರಿಗಳ ವರ್ಗಾವಣೆ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಐಎಎಸ್ ಅಧಿಕಾರಿ ಅಜಯ್ ಸೇಠ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಇನ್ನೂ ಆರು ತಿಂಗಳ ಕಾಲ ಅಜಯ್ ಸೇಠ್ ಅವರನ್ನು ವರ್ಗಾವಣೆ ಮಾಡದಂತೆ ಸಿಎಂ ಬಳಿ ತನ್ವೀರ್ ಸೇಠ್ ಮನವಿ ಮಾಡಿದ್ದರು. ಪರೀಕ್ಷೆ ಸಿದ್ಧತೆ ಸಮಯ ಸಮೀಪಿಸುತ್ತಿರುವುದರಿಂದ ಅವರನ್ನು ಮಾತೃ ಇಲಾಖೆಯಲ್ಲಿಯೇ ಉಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪದೇ ಪದೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಸಂಬಂಧ ತನ್ವೀರ್ ಸೇಠ್ ಅಧಿಕೃತವಾಗಿ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ಅಜಯ್ ಸೇಠ್ ಅವರನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಲಾಗಿದೆ.
2017-18ರ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಮಾರ್ಚ್ 2018ರ ವೇಳೆಗೆ ಪೂರ್ಣಗೊಳಿಸಬೇಕಾದ ಅನಿವಾರ್ಯತೆಯಿದೆ. ಕಳೆದ ವರ್ಷದ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಯಾವುದೇ ಒಂದು ಸಣ್ಣ ತಪ್ಪುಗಳಿಲ್ಲದೇ ಪೂರ್ಣಗೊಂಡಿದ್ದವು. ಇದಕ್ಕಾಗಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು, 2018ರ ಮಾರ್ಚ್ ಪರೀಕ್ಷೆ ಕೂಡ ಇದೇ ರೀತಿ ಆಗಬೇಕಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಇಲಾಖೆಯ ಹಿತಾಸಕ್ತಿ ದೃಷ್ಟಿಯಿಂದ ಅಜಯ್ ಸೇಠ್ ಅವರನ್ನು ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿಯೇ ಮುಂದುವರಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

 

 

44    ಸೆಲ್ಫಿಗೆ ಬಲಿಯಾದ ಯುವಕ
 ಅಕ್ಟೋಬರ್-26
ಬೆಂಗಳೂರು (ದೇವನಹಳ್ಳಿ) : ದಿನೇ ದಿನೇ ಸೆಲ್ಫಿ ಕ್ರೇಜ್ ಗೆ ಅನೇಕ ಜನ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಇದೀಗ ಸೆಲ್ಪಿ ಕ್ರೇಜ್ ಗೆ ಮತ್ತೊಂದು ಯುವಕ ಬಲಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಕಮಲಾನಗರದ ನಿವಾಸಿ ದರ್ಶನ್ ಮೃತ ಯುವಕ. ಮನೆಯಲ್ಲಿ ದೇವಾಲಯಕ್ಕೆ ತೆರಳುವುದಾಗಿ ಹೇಳಿ, ಸ್ನೇಹಿತರೊಂದಿಗೆ ನಂದಿ ಬೆಟ್ಟಕ್ಕೆ ಹೋಗಿ ವಾಪಸ್ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ನೀರಿನ ಹೊಂಡದಲ್ಲಿ ಆಟವಾಡಲು ತೆರಳಿದ್ದಾನೆ. ಈ ವೇಳೆ ನೀರಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ಮುಳಗಿ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ದೇವನಹಳ್ಳಿ ತಾಲೂಕಿನ ಮಾಳಿಗೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

yy  ಲೈನ್ ಮನ್ ಇನ್ಮುಂದೆ ಪವರ್ ಮ್ಯಾನ್
 ಅಕ್ಟೋಬರ್-26
ಬೆಂಗಳೂರು : ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಲೈನ್ ಮನ್ ಹೆಸರಿನ ಬದಲಿಗೆ ಪವರ್ ಮ್ಯಾನ್ ಎಂದು ಬದಲಾಯಿಸಲಾಗುವುದು, ಈ ಸಂಬಂಧ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ನೌಕರರ ವೃತ್ತಿ ಗೌರವ ಹೆಚ್ಚಿಸುವ ಉದ್ದೇಶದಿಂದ ಹೆಸರು ಬದಲಾವಣೆ ಮಾಡಲಾಗುತ್ತಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಲಾಗುವುದು ಎಂದು ಡಿಕೆಶಿ ಹೇಳಿದರು.
ಬ್ರೀಟಿಷರ ಕಾಲದಿಂದಲೂ ಲೈನ್ ಮೆನ್ ಎನ್ನುವ ಹೆಸರು ಇತ್ತು. ಈಗ ತಜ್ಞರೊಂದಿಗೆ ಚರ್ಚಿಸಿ ಆ ಹೆಸರನ್ನು ಬದಲಿಸಿದ್ದೇವೆ,ಅ.28 ರಂದು ನಡೆಯುವ ರಾಜ್ಯ ಮಟ್ಟದ ಸನ್ಮಾನ ಸಮಾರಂಭದಲ್ಲಿ ಈ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

 

 

gg ಬನಶಂಕರಿ ದೇವಸ್ಥಾನದಲ್ಲಿ ಹಳೆ ನೋಟುಗಳು ಪತ್ತೆ
ಅಕ್ಟೋಬರ್.25
ಬೆಂಗಳೂರು: ಬನಶಂಕರಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯದಲ್ಲಿ 2.16 ಲಕ್ಷ ರದ್ದಾದ ನೋಟುಗಳು ಕಾಣಿಕೆಯಾಗಿ ಹುಂಡಿಯಲ್ಲಿ ಬಂದಿವೆ.
ಬನಶಂಕರಿ ದೇವಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೀರೆಯನ್ನು ಕಾಣಿಕೆಯಾಗಿ ಸಲ್ಲಿಸುತ್ತಾರೆ. ಹುಂಡಿಗೆ ಹಣ ಸೇರಿದಂತೆ ಕೆಲವರು ಚಿನ್ನ ಬೆಳ್ಳಿ ಆಭರಣಗಳು, ಪಾದಗಳನ್ನು ಸಮರ್ಪಿಸುತ್ತಾರೆ. 101 ವರ್ಷಗಳ ಇತಿಹಾಸ ಇರುವ ಈ ದೇಗುಲವು ಮುಜರಾಯಿ ಇಲಾಖೆಯ ಅಧೀನದಲ್ಲಿದೆ.

 

 

 

11        ಅಬ್ದುಲ್ ಕರೀಂ ಲಾಲ್ ಆರೋಗ್ಯ ಸ್ಥಿತಿ ಗಂಭೀರ
 ಅಕ್ಟೋಬರ್-24
 ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಬ್ದುಲ್ ಕರೀಂ ಲಾಲ್ ತೆಲಗಿ (66 ವರ್ಷ) ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಕ್ಕರೆ ಕಾಯಿಲೆ, ಬಿಪಿ ಮತ್ತು ಇತರೆ ಬಹು ಅಂಗಾಂಗ ವೈಫಲ್ಯದಿಂದಾಗಿ ಬಳಲುತ್ತಿರುವ ಅಬ್ದುಲ್ ಕರೀಂ ಲಾಲ್ ತೆಲಗಿ ಆರೋಗ್ಯ ಸೋಮವಾರ ರಾತ್ರಿ ಗಂಭೀರವಾಗಿತ್ತು. ಹೀಗಾಗಿ ರಾತ್ರಿ 8 ಗಂಟೆ ಸುಮಾರಿನಲ್ಲಿ ಆತನನ್ನು ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತೆಲಗಿಗೆ ಪ್ರಸ್ತುತ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೃತಕ ಉಸಿರಾಟ (ವೆಂಟಿಲೇಟರ್) ಮೂಲಕ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಬ್ದುಲ್ ಕರೀಂ ಲಾಲ ತೆಲಗಿ ಅವರಿಗೆ ಅನಾರೋಗ್ಯದ ಕಾರಣ ಅ.16 ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತಿತ್ತು. ಎರಡು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಸೋಮವಾರ ರಾತ್ರಿ 8 ಗಂಟೆಯಿಂದ ಅವರು ಗಂಭೀರ ಸ್ಥಿತಿಗೆ ತಲುಪಿರುವ ಹಿನ್ನಲೆಯಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಅಬ್ದುಲ್ ಕರೀಂ ಲಾಲ್ ತೆಲಗಿ ಬಹುಕೋಟಿ ಛಾಪಾ ಕಾಗದ ಹಗರಣದ ಪ್ರಕರಣದಲ್ಲಿ 2002 ರಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಅವರಿಗೆ ಮಧುಮೇಹ, ಬಿಪಿ, ಉಸಿರಾಟಗ ತೊಂದರೆ ಸೇರಿದಂತೆ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

 

ee    ಇಂದು ಬೆಂಗಳೂರಿಗೆ ರಾಷ್ಟ್ರಪತಿ ಕೋವಿಂದ್ ಆಗಮನ
 ಅಕ್ಟೋಬರ್-24
ಬೆಂಗಳೂರು : ನಾಳೆ ವಿಧಾನಸೌಧದ ವಜ್ರಮಹೋತ್ಸವ ಸಂಭ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಬೆಂಗಳೂರಿಗೆ ಬರಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಎಚ್'ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿರುವ ರಾಷ್ಟ್ರಪತಿ, ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ರಾತ್ರಿ ಎಂಟು ಗಂಟೆಗೆ ಔತಣಕೂಟದಲ್ಲಿ ಅವರು ಪಾಲ್ಗೊಳ್ಳುವರು. ನ.25ರಂದು ವಿಧಾನಸೌಧ ವಜ್ರಮಹೋತ್ಸವದ ಅಂಗವಾಗಿ ನಡೆಯಲಿರುವ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಅವರು ಭಾಷಣ ಮಾಡಲಿದ್ದಾರೆ. ಇನ್ನು ಸ್ಪೀಕರ್, ಸಭಾಪತಿ ಕೊಠಡಿಗಳೂ ಸಿಂಗಾರಗೊಂಡಿದ್ದು, ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಲಿರುವ ವಿಧಾನಸಭೆ ಆವರಣ ಹಾಗೂ ಮೊಗಸಾಲೆಯನ್ನು ಅಲಂಕರಿಸಲಾಗುತ್ತಿದೆ.
ಭಾನುವಾರದಿಂದಲೇ ವಿಧಾನಸೌಧಕ್ಕೆ ದೀಪಾಲಂಕಾರ ಮಾಡಲಾಗಿದ್ದು, ರಾತ್ರಿವೇಳೆ ಬಣ್ಣಬಣ್ಣದ ದೀಪದ ಬೆಳಕಿನಲ್ಲಿ ಕಟ್ಟಡ ಆಕರ್ಷಣೆ ಪಡೆದುಕೊಂಡಿದೆ. ವಿಧಾನಸಭೆ ಮತ್ತು ಮೇಲ್ಮನೆಯ ಎಲ್ಲ 300 ಸದಸ್ಯರು ರಾಷ್ಟ್ರಪತಿಯವರೊಟ್ಟಿಗೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗುವಂತೆ ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯದ ಆವರಣದ ಗಾಂಧಿ ಪ್ರತಿಮೆ ಬಳಿ ವಿಶೇಷ ವೇದಿಕೆ ಅಣಿಗೊಳಿಸಲಾಗಿದೆ. ಬ್ವಾಂಕ್ವೆಟ್ ಹಾಲ್'ಗೆ ಹೊಂದಿಕೊಂಡಂತಿರುವ ಹುಲ್ಲುಹಾಸಿನ ಮೇಲೆ ಸಚಿವರು, ಶಾಸಕರು ಮತ್ತಿತರ ಗಣ್ಯರ ಭೋಜನ ವ್ಯವಸ್ಥೆಗೆ ಸಿದ್ಧತೆ ಮಾಡಲಾಗಿದ್ದು,ಮೂರು ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದೆ.
ಸಂಜೆ ವಿಧಾನಸೌಧ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣಗೊಂಡಿದೆ. ಮೆಟ್ಟಿಲುಗಳ ಮೇಲೆಯೇ ಆಕರ್ಷಕವಾಗಿ ಸಿದ್ಧಪಡಿಸಿರುವ ವೇದಿಕೆಯಲ್ಲಿ ಅ.25ರ ಸಂಜೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದೆ. ಗಣ್ಯರ ವೀಕ್ಷಣೆಗಾಗಿ ಮೂರು ದಿನಗಳ ಮೊದಲೇ ಸೋಫಾ, ಕುರ್ಚಿಗಳನ್ನು ಜೋಡಿಸಲಾಗಿದೆ. ಪೂರ್ವದ್ವಾರದ ಎರಡೂ ಬದಿಯಲ್ಲಿ ನೀರಿನ ಕಾರಂಜಿಗಳಿಗೆ ಕಳೆಬಂದಿದೆ.

 

 

  h hhh

       ಅರೆಸ್ಟ್ ಮಾಡಲು ಬಂದ ಇನ್ಸ್ಪೆಕ್ಟರ್ ಗೆ ಇರಿದು                                     ಪರಾರಿಯತ್ನ

ಅಕ್ಟೋಬರ್24

ಕನಕಪುರ: ಬಂಧಿಸಲು ಬಂದ ಸಬ್ ಇನ್ಸ್ಪೆಕ್ಟರ್ ಗೆ ಚಾಕು ವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಗೆ ಗುಂಡು ಹಾರಿಸಿ ಸಾತನೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಇಂದು ಮುಂಜಾನೆ 3 ಗಂಟೆ ಸಂದರ್ಭದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಾಗ ಆರೋಪಿ ಚಂದ್ರು(20) ಪರಾರಿಯಾಗಲು ಪ್ರಯತ್ನಿಸಿ, ಕೊನೆಗೆ ಎಸ್ಐ ಮೇಲೆ ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಸೆರೆ ಹಿಡಿದಿದ್ದೇವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ತಿಳಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಸಾತನೂರು ಹೊರವಲಯದ ಪುಟ್ಟಸ್ವಾಮಿ ಗೌಡ ಎಂಬ ತೋಟದ ಮನೆಯಲ್ಲಿ ಕೆಂಪಮ್ಮ (80) ಎಂಬ ಮಹಿಳೆಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ರಮೇಶ್ ಅವರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಸಿಕ್ಕ ಮಾಹಿತಿಯನ್ನು ಆಧರಿಸಿ ಚಂದ್ರು ಕಳೆದ ರಾತ್ರಿ ಬೋರೆಗೌಡನ ದೊಡ್ಡಿಯ ನಿವಾಸಿ ಚಂದ್ರಪ್ಪ ಅವರನ್ನು ವಶಕ್ಕೆ ಪಡೆಯಲು ಮುಂದಾದರು. ಸರ್ಕಲ್ ಇನ್ಸ್ಪೆಕ್ಟರ್ ಮಲ್ಲೇಶ್, ಸಬ್ ಇನ್ಸ್ಪೆಕ್ಟ್ರ್ ಅನಂತ ರಾಮು, ಹೆಡ್ಕಾನ್ಸ್ಟೇಬಲ್ ಮೋಹನ್ ಮತ್ತಿತರ ಸಿಬ್ಬಂದಿಗಳು ಮನೆಯನ್ನು ಸುತ್ತುವರೆದಿದ್ದರು.ಬಾಗಿಲು ತಟ್ಟಿ ಒಳಹೋದ ನಂತರ ಚಂದ್ರು ಕೋಣೆಯಿಂದ ಹೊರಗೆ ಬಂದಿದ್ದಾನೆ. ಪೊಲೀಸರನ್ನು ನೋಡಿದ ತಕ್ಷಣ ಆತ ಗಾಬರಿಗೊಂಡು ಚಡಪಡಿಸಿದ್ದಾನೆ. ನಂತರ ಆತ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿ, ಚಿನ್ನ ಬಚ್ಚಿಟ್ಟಿರುವ ಹಾಗೂ ಸಹಕಾರ ನೀಡಿರುವ ಆರೋಪಿ ಪಕ್ಕದ ಮನೆಯಲ್ಲಿದ್ದಾನೆ ಎಂದು ಕರೆದೊಯ್ದಿದ್ದಾನೆ. ಈ ವೇಳೆ ಎಸ್ ಐ ಅನಂತರಾಮು ಅವರು ಆರೋಪಿಯ ಜೊತೆ ಆ ಮನೆಗೆ ಹೋದಾಗ ಅಡುಗೆ ಮನೆಗೆ ಕರೆದುಕೊಂಡು ಹೋಗಿ ಏಕಾಏಕಿ ಚಾಕುವಿನಿಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಎಸ್ಐ ಅನಂತ ರಾಮು ಅವರಿಗೆ ಕೈಗೆ ಇರಿತದ ಗಾಯವಾದರೂ ಛಲಬಿಡದೆ ಆತನ ಮನವೊಲಿಸಲು ಪ್ರಯತ್ನಿಸಿದರು. ಆದರೂ ಆತ ಹೊರಗೆ ಓಡಿಹೋಗುವಾಗ ಎಚ್ಚೆತ್ತ ಇನ್ಸ್ಪೆಕ್ಟರ್ ಮಹೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ.ಈ ವೇಳೆ ಒಂದು ಗುಂಡು ಆರೋಪಿ ಚಂದ್ರುವಿನ ಪಾದಕ್ಕೆ ಬಿದ್ದಿದ್ದೆ. ಗಂಡಿನ ಶಬ್ದ ಕೇಳಿ ನೆರೆಹೊರೆಯವರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ವಿಷಯ ತಿಳಿದು ಬೆಚ್ಚಿಬಿದ್ದಿದ್ದಾರೆ. ಕೊಲೆ ಮಾಡಿ ದೊಚ್ಚಿದ್ದ ಚಿನ್ನಾಭರಣವನ್ನು ಮಾರಾಟ ಮಾಡಿರುವುದು. ಇದಕ್ಕೆ ಆತನ ಅಣ್ಣ ಕೂಡ ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ.ಆಸ್ಪತ್ರೆಯಲ್ಲಿ ಸಬ್ಇನ್ಸ್ಪೆಕ್ಟರ್ ಅನಂತರಾಮು ಹಾಗೂ ಆರೋಪಿ ಚಂದ್ರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಮಹೇಶ್ ಪರಿಶೀಲನೆ ನಡೆಸಿದ್ದಾರೆ.

 

22 ಪರ-ವಿರೋಧ ಚರ್ಚೆ ವೇಳೆ ವೈರಲ್ ಆದ ಫೋಟೋ
 ಅಕ್ಟೋಬರ್-23
ಬೆಂಗಳೂರು : ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಸುಲ್ತಾನ್ ವೇ಼ಷ ಧರಿಸಿರುವ ಫೋಟೋ ಇದೀಗ ವೈರಲ್ ಆಗಿದ್ದು ಕೇಸರಿ ಪಕ್ಷಕ್ಕೆ ಮುಜುಗರವಾಗಿ ಪರಿಣಮಿಸಿದೆ.
ಈ ಫೋಟೋದಲ್ಲಿ ಬಿಜೆಪಿ ನಾಯಕರಾದ ಜಗದೇಶ್ ಶೆಟ್ಟರ್ , ಆರ್ ಅಶೋಕ್ ಟಿಪ್ಪು ಸುಲ್ತಾನನಂತೆ ವೇಷ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಪೋಸ್ ನೀಡಿರುವ ಫೋಟೋ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಅನಂತ್ ಕುಮಾರ್, ಟಿಪ್ಪು ಜಯಂತಿ ಆಚರಣೆ ಮಾಡಲು ನಿರಾಕರಿಸಿದ್ದು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕಬೇಡಿ ಎಂದು ಹೇಳಿದ್ದರು. ಜೊತೆಗೆ ಸಾಕಷ್ಟು ಬಿಜೆಪಿ ನಾಯಕರು ಕೂಡಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರ ಈ ಫೋಟೋ ಕಾಂಗ್ರೆಸ್'ಗೆ ಇದೀಗ ಅಸ್ತ್ರವಾಗಿದೆ. ಇದು ಬಿಜೆಪಿಯ ಆಷಾಢಭೂತಿತನ ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

 

hh

 ಆಹಾರಕ್ಕೆ ಜಿರಳೆ ಹಾಕಿದ ಆರೋಪಿಗಳ ಬಂಧನ

ಅಕ್ಟೋಬರ್-23
ಬೆಂಗಳೂರು: ಇಂದಿರಾ ಕ್ಯಾಂಟೀನ್ ಉಪಾಹಾರದಲ್ಲಿ ಜಿರಲೆ ಸಿಕ್ಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉಪಹಾರದಲ್ಲಿ ಜಿರಳೆ ಸಿಕ್ಕಿದ್ದ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಜಿರಳೆ ಹಾಕಿದ್ದ ಹೇಮಂತ್ ಮತ್ತು ದೇವರಾಜ್ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರು ಆಟೋ ಚಾಲಕರಾಗಿದ್ದು ಪ್ರಚಾರಕ್ಕೆ ಆಹಾರದಲ್ಲಿ ಜಿರಳೆ ಹಾಕಿದ್ದಾಗಿ ಬಾಯ್ ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ಟೋಬರ್ 20ರಂದು ಬೆಳಗ್ಗೆ ಹೇಮಂತ್ ಮತ್ತು ದೇವರಾಜ್ ನಾಗರಬಾವಿ ಮಾಲಗಾಳದ ಇಂದಿರಾ ಕ್ಯಾಂಟಿನಿನಲ್ಲಿ ಉಪಹಾರಕ್ಕೆ ಜಿರಳೆ ಹಾಕಿ ಅದನ್ನು ವಿಡಿಯೋ ಮಾಡಿದ್ದರು. ವಿಡಿಯೋದಲ್ಲಿ ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

 

 

 

 

 

22    ಕೆರೆಯಲ್ಲಿ ನೀರು ತರಲು ಹೋಗಿದ್ದ ಇಬ್ಬರು ಕೆರೆಪಾಲು
 ಅಕ್ಟೋಬರ್-23
ದೇವನಹಳ್ಳಿ: ನೀರು ತರಲು ತೆರಳಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಐಬಸಾಪುರ ಗ್ರಾಮದಲ್ಲಿ ಈ ದುರ್ಘಟನೆ ಸಂಬವಿಸಿದ್ದು ಗ್ರಾಮದ ನಿವಾಸಿಗಳಾದ ಮಾನಸಾ (12), ಲಕ್ಷ್ಮೀ (13) ಮೃತರು ಎಂದು ಗುರುತಿಸಲಾಗಿದೆ.
ಜೋಳದ ಬೆಳೆಗೆ ನೀರು ಹಾಕುವುದಕ್ಕಾಗಿ ಕೆರೆಗೆ ತೆರಳಿದ್ದ ಮಾನಸಾ, ಲಕ್ಷ್ಮೀ ಮತ್ತು ಶಶಾಂಕ್ ಕೆರೆಯಿಂದ ನೀರು ಎತ್ತಿಕೊಂಡು ಹೋಗುತ್ತಿದ್ದಾಗ ಕಾಲು ಜಾರಿದ ಕಾರಣ ಮೂವರೂ ನೀರಿಗೆ ಬಿದ್ದಿದ್ದರು. ಸ್ಥಳದಲ್ಲಿದ್ದ ರಾಜಣ್ಣ ಎನ್ನುವವರು ಬಾಲಕ ಶಶಾಂಕ್ ನನ್ನ ರಕ್ಷಣೆ ಮಾಡಿದ್ದಾರೆ. ಆದರೆ ಅಷ್ಟ್ರಲ್ಲಾಗಲೇ ನೀರಿನಲ್ಲಿ ಮುಳುಗಿದ್ದ ಮಾನಸಾ ಮತ್ತು ಲಕ್ಷ್ಮೀ ಮೃತಪಟ್ಟಿದ್ದಾರೆ.
ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

11    ಚಾಮರಾಜಪೇಟೆ ಬಿಟ್ಟು ಜಮೀರ್ ಬೇರೆಡೆ ನಿಲ್ಲಲಿ
 ಅಕ್ಟೋಬರ್-23
ಕೋಲಾರ: ಶಾಸಕ ಜಮೀರ್ ಅಹಮದ್'ಗೆ ತಾಕತ್ತಿದ್ದರೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರ ಬಿಟ್ಟು ರಾಜ್ಯದ ಇತರ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಶರವಣ ಸವಾಲೆಸೆದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಅವರನ್ನು ಸೋಲಿಸಲು ರೇವಣ್ಣ ಬೇಕಾಗಿಲ್ಲ, ನನ್ನಂಥ ಸಾಮಾನ್ಯ ಕಾರ್ಯಕರ್ತ ಸಾಕು ಎಂದು ಪುನರುಚ್ಚರಿಸಿದರು.
ಚಾಮರಾಜಪೇಟೆ ವಿಧಾನಸಭಾ ಚುನಾವಣೆಗೆ ನೀವು ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ, 'ಪಕ್ಷದ ವರಿಷ್ಠರು ಆದೇಶ ನೀಡಿದರೆ ರಾಜ್ಯದ ಯಾವುದೇ ಕ್ಷೇತ್ರದಲ್ಲಾದರೂ ಸ್ಪರ್ಧಿಸುತ್ತೇನೆ ಎಂದು ಶರವಣ ಉತ್ತರಿಸಿದರು.
ಶಾಸಕ ಜಮೀರ್ ಆಹಮದ್ ಅವರನ್ನು ಜೆಡಿಎಸ್ನಿಂದ ಹೊರಹಾಕಲಾಗಿದೆ. ಪಕ್ಷ ಹಾಗೂ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಗೌಡರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಯಾರೇ ಹಗುರವಾಗಿ ಮಾತನಾಡಿದರು ಬೆಲೆ ತೆರೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

 

 

55

                  ಮಸೀದಿ ಕಾಂಪೌಂಡ್ ತೆರವು

 ಅಕ್ಟೋಬರ್-23
ಬೆಂಗಳೂರು: ಜಾನ್ಸನ್ ಮಾರ್ಕೆಟ್ ಬಳಿ ಹೊಸೂರು ರಸ್ತೆಯಿಂದ ಬ್ರಿಗೇಡ್ ರಸ್ತೆ ಕಡೆಗೆ ವಾಹನಗಳು ಸಂಚರಿಸುವ ಮಾರ್ಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುವುದನ್ನು ತಡೆಯುವ ಸಲುವಾಗಿ ಇಲ್ಲಿನ ಶಿಯಾ ಮಸೀದಿ ಕಾಂಪೌಂಡ್ಅನ್ನು ಬಿಬಿಎಂಪಿ ತೆರವುಗೊಳಿಸಿದೆ.
ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಕ್ಕೆ ಕಾಂಪೌಂಡ್ ತೆರವು ಮಾಡಲು ಶಿಯಾ ಕಬ್ರಸ್ತಾನ ನಿರ್ವಹಣಾ ಸಮಿತಿ ಮುಂದೆ ಬಂದ ಹಿನ್ನೆಲೆಯಲ್ಲಿ ಕಾಂಪೌಂಡ್ ತೆರವು ಮಾಡಲಾಯಿತು. ಮೇಯರ್ ಆರ್.ಸಂಪತ್ರಾಜ್, ಸ್ಥಳೀಯ ಶಾಸಕ ಎನ್.ಎ.ಹ್ಯಾರಿಸ್ ನೇತೃತ್ವದಲ್ಲಿ ಮಸೀದಿಯ ಸುಮಾರು 1 ಸಾವಿರ ಚದರ ಅಡಿ ಜಾಗದ ಕಾಂಪೌಂಡ್'ಅನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.
ಮಸೀದಿ ಕಾಂಪೌಂಡ್ ತೆರವಿನಿಂದ ಹೊಸೂರು ರಸ್ತೆಯಿಂದ ಬ್ರಿಗೇಡ್ ರಸ್ತೆವರೆಗೆ ಸಂಚರಿಸುವಾಗ ಕಳೆದ ನಾಲ್ಕೈದು ವರ್ಷಗಳಿಂದ ಉಂಟಾಗುತ್ತಿದ್ದ ತೀವ್ರ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಆರ್.ಸಂಪತ್ ರಾಜ್, ಸರ್ಕಾರ ಹಾಗೂ ಬಿಬಿಎಂಪಿ ಮನವಿಗೆ ಸಹಕರಿಸಿ ಮಸೀದಿ ಕಾಂಪೌಂಡ್ ತೆರವಿಗೆ ಶಿಯಾ ಕಬ್ರಸ್ತಾನ್ ನಿರ್ವಹಣಾ ಸಮಿತಿಗೆ ಧನ್ಯವಾದ ತಿಳಿಸುತ್ತೇನೆ.
ಇದರಿಂದ ಈ ಮಾರ್ಗದಲ್ಲಿ ಇಲ್ಲಿಯವರೆಗೆ ಉಂಟಾಗುತ್ತಿದ್ದ ತೀವ್ರ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ. ಕಾಂಪೌಂಡ್ ತೆರವುಗೊಳಿಸಿದ ಜಾಗದಲ್ಲಿ ಸಮರ್ಪಕವಾದ ರಸ್ತೆ ಅಭಿವೃದ್ಧಿ ಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಬದಲೀ ಜಾಗಕ್ಕೆ ಬೇಡಿಕೆ : ಮಸೀದಿ ಕಾಂಪೌಂಡ್ ತೆರವು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಸರಿ ಮಸೀದಿ ಹಾಗೂ ಶಿಯಾ ಕಬ್ರಸ್ತಾನ್ ನಿರ್ವಹಣಾ ಸಮಿತಿ ಅಧ್ಯಕ್ಷ ಮಿರ್ ಅಲಿ ಜವಾದ್ ಅವರು, ಸರ್ಕಾರಕ್ಕಾಗಲಿ, ಜನಸಾಮಾನ್ಯರಿಗಾಗಲಿ ತೊಂದರೆ ಕೊಡುವು ಉದ್ದೇಶ ನಮಗಿಲ್ಲ. ಕಳೆದ ಐದಾರು ವರ್ಷದಿಂದ ಮಸೀದಿ ಮುಂಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿತ್ತು. ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಮಸೀದಿ ಕಾಂಪೌಂಡ್ ತೆರವಿಗೆ ಸಮಿತಿ ಒಪ್ಪಿಗೆ ನೀಡಿದೆ ಎಂದರು.
ಒಂದು ಸಾವಿರ ಚದರ ಅಡಿಯಷ್ಟು ಕಾಂಪೌಂಡ್ ಜಾಗ ತೆರವು ಮಾಡಲಾಗಿದ್ದು, ಇದಕ್ಕೆ ಪ್ರತಿಯಾಗಿ ನಮಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದೀಗ ಸಮಿತಿಯು ಟಿಡಿಆರ್ ಬದಲು ಬೇರೆಡೆ ಸೂಕ್ತ ಸ್ಥಳಾವಕಾಶ ನೀಡಿದರೆ ಅಲ್ಲಿ ಮಸೀದಿ ಕಟ್ಟಿಕೊಳ್ಳಲು ನಿರ್ಧರಿಸಿದೆ. ಹಾಗಾಗಿ ಬಿಬಿಎಂಪಿ ರಸ್ತೆ ಅಭಿವೃದ್ಧಿಗೆ ಸ್ವಾಧೀನ ಪಡಿಸಿಕೊಂಡಿರುವ ಜಾಗಕ್ಕೆ ಪರ್ಯಾಯವಾಗಿ ನಗರದ ಬೇರೆಡೆ ಸೂಕ್ತ ಜಾಗ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಮಸೀದಿ ಬಳಿಯ ವೆಲ್ಲಾರ್ ಜಕ್ಷನ್ಗೆ ಸರ್ ಮಿರ್ಜಾ ಇಸ್ಮಾಯಿಲ್ ಅವರ ಹೆಸರಿಡಬೇಕು. ಮಸೀದಿ ಪಕ್ಕದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಾದ ಇಮಾಮ್ ಹುಸೇನ್ ನಿಲ್ದಾಣ ಎಂದು ಹೆಸರಿಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಥಳೀಯ ಶಾಸಕ ಎನ್.ಎ.ಹ್ಯಾರಿಸ್ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮಸೀದಿಗೆ ಬೇರೆಡೆ ಸ್ಥಳಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ವೆಲ್ಲಾರ್ ಜಂಕ್ಷನ್ಗೆ ಸರ್ ಮಿರ್ಜಾ ಇಸ್ಮಾಯಿಲ್ ಅವರ ನಾಮಕರಣ ಮಾಡುವ ಬಗ್ಗೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ
ನಿರ್ಧಾರ ಕೈಗೊಳ್ಳುವುದಾಗಿ ಮೇಯರ್ ಸಂಪತ್ರಾಜ್ ಭರವಸೆ ನೀಡಿದರು. ಅಲ್ಲದೆ, ಮೆಟ್ರೋ ನಿಲ್ದಾಣಕ್ಕೆ ಇಮಾಮ್ ಹುಸೇನ್ ಹೆಸರಿಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಬಿಎಂಆರ್ಸಿಎಲ್ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

 

hh

 

      ದ್ವಿಚಕ್ರವಾಹನದಲ್ಲಿ ಹಿಂಬದಿ ಸವಾರರಿಗೆ                            ಅವಕಾಶವಿಲ್ಲ

ಅಕ್ಟೋಬರ್-21
ಬೆಂಗಳೂರು: ನೀವು ದ್ವಿಚಕ್ರ ವಾಹನ ಹೊಂದಿರುವಿರಾ? ಹಾಗಾದ್ರೇ ನಿಮಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಅನ್ನು ನೀಡುವುದುಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ. ಹೌದು, 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು. ಇದರ ಜೊತೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗಲು ಅವಕಾಶ ನೀಡದಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಹಿಂಬದಿ ಸವಾರರ ಹಿತದೃಷ್ಟಿಯಿಂದ ಈ ಹೊಸ ನಿಮಯವನ್ನು ಜಾರಿಗೆ ತರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ರಾಜ್ಯ ಸರ್ಕಾರ ಸಹ ಈ ಸಂಬಂಧ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ಇನ್ನೊಂದು ವಾರದಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಅಂದ ಹಾಗೇ ಚಾಲ್ತಿಗೆ ಬರಲು ಸಿದ್ದವಾಗಿರುವ ಈ ಹೊಸ ನಿಯಮವು ಈಗಾಗಲೇ ರಸ್ತೆಯಲ್ಲಿ ಓಡಾಡುತ್ತಿರುವ ದ್ವಿಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲವಂತೆ. ಆಂದರೆ ಹೊಸದಾಗಿ ಮಾರಾಟವಾಗುವ 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ ಎನ್ನಲಾಗಿದೆ. ಇದೇ ವೇಳೆ ಬೈಕ್ ತಯಾರಕರು ಕೇವಲ ಓರ್ವ ವ್ಯಕ್ತಿ ಮಾತ್ರ ಕುಳಿತು ಕೊಳ್ಳುವಂತೆ ಸೀಟಿನ ವ್ಯವಸ್ಥೆ ಮಾಡಬೇಕಿದೆ. ಗ್ರಾಹಕ ಬೈಕ್ ಕೊಂಡ ನಂತರ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ. ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿತ್ತು. ಈ ಪ್ರಕರಣದ ಸಂಬಂಧ ರಾಜ್ಯ ಸರ್ಕಾರ ಕೋರ್ಟ್ಗೆ ವಿವರಣೆ ನೀಡಿದ್ದು, 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರನ್ನು ನಿಷೇಧಿಸಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವುದಾಗಿ ತಿಳಿಸಿದೆ ಎಂದು ಸಾರಿಗೆ ಸಚಿವ ಎಚ್ ಎಂ ರೇವಣ್ಣ ತಿಳಿಸಿದ್ದಾರೆ.

 

 

 

 

 

11  ಇನ್ಮುಂದೆ ಫೇಸ್ಬುಕ್ ಮೂಲಕವೂ ಹಣದ ವಹಿವಾಟ
 ಅಕ್ಟೋಬರ್-21
ಬೆಂಗಳೂರ : ಭಾರತದಲ್ಲಿ ಕ್ಯಾಷ್'ಲೆಸ್ ಸಮಾಜ ನಿರ್ಮಾಣಕ್ಕೆ ಒತ್ತುಕೊಡಲಾಗುತ್ತಿರುವ ಈ ಸಂದರ್ಭದಲ್ಲಿ ಪೇಟಿಎಂ ಸೇರಿದಂತೆ ಸಾಕಷ್ಟು ಕಂಪನಿಗಳು ಆನ್'ಲೈನ್ ಪೇಮೆಂಟ್ ವ್ಯವಸ್ಥೆ ಮಾಡುತ್ತಿವೆ. ಎಲ್ಲಾ ಬ್ಯಾಂಕುಗಳು ಪ್ರತ್ಯೇಕ ಆನ್'ಲೈನ್ ಪೇಮೆಂಟ್ ವ್ಯವಸ್ಥೆ ಹೊಂದಿವೆ. ಜನರಿಗೆ ಈಗ ಹಣ ಕಳುಹಿಸಲು ಹಾಗೂ ಸ್ವೀಕರಿಸಲು ಸಾಕಷ್ಟು ಆಯ್ಕೆಗಳಿವೆ. ಜಗತ್ತಿನ ಅತೀ ಜನಪ್ರಿಯ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ ಫೇಸ್ಬುಕ್ ಕೂಡ ಆನ್'ಲೈನ್ ಪೇಮೆಂಟ್ ಸೇವೆಗೆ ಧುಮುಕಿದೆ. ಈ ವಿಚಾರದಲ್ಲಿ ಅಮೆರಿಕದ ಪ್ರಮುಖ ಪೇಮೆಂಟ್ ಸಂಸ್ಥೆ ಪೇಪಾಲ್ ಜೊತೆ ಫೇಸ್ಬುಕ್ ಒಪ್ಪಂದ ಮಾಡಿಕೊಂಡಿದೆ. ಫೇಸ್ಬುಕ್'ನ ಮೆಸೆಂಜರ್ ಮೂಲಕ ಹಣದ ವಹಿವಾಟು ನಡೆಸುವ ಅವಕಾಶ ನೀಡಲಾಗಿದೆ.
ಹಣ ಕಳುಹಿಸುವುದು ಹೇಗೆ?
ಜನರು ಫೇಸ್ಬುಕ್ ಮೆಸೆಂಜರ್ ಮತ್ತು ಪೇಪಾಲ್ ಅಕೌಂಟ್ ಎರಡನ್ನೂ ಹೊಂದಿರಬೇಕು. ಮೆಸೆಂಜರ್'ನಲ್ಲಿ ಮೆಸೇಜ್ ಟೈಪ್ ಮಾಡುವಾಗ ನೀಲಿ ಬಣ್ಣದ ಪ್ಲಸ್ ಚಿಹ್ನೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಕಾಣುವ ಹಸಿರು ಬಣ್ಣದ ಪೇಮೆಂಟ್ ಬಟನ್'ನ್ನು ಆಯ್ಕೆ ಮಾಡಿಕೊಂಡು ಫ್ರೆಂಡ್ಸ್'ಗೆ ಹಣ ಕಳುಹಿಸಬಹುದು; ಅಥವಾ ಹಣಕ್ಕಾಗಿ ಮನವಿ ಮಾಡಿಕೊಳ್ಳಬಹುದು.

 

33 

 

      ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ ಪಡೆದ ದರ್ಶನ್
 ಅಕ್ಟೋಬರ್-21
ಬೆಂಗಳೂರು: ನಟ ದರ್ಶನ್ ಲಂಡನ್ ಗೆ ತೆರಳಿರುವುದು ಅಲ್ಲಿನ ಕನ್ನಡಿಗರ ಆಹ್ವಾನದ ಮೇರೆಗೆ. ಇನ್ನು ಅವರಿಗೆ ನೀಡಿದ್ದು ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ. ಬ್ರಿಟನ್ ಸಂಸತ್ತು ನೀಡುವ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿಗೂ ದರ್ಶನ್ ಅವರಿಗೆ ನೀಡಿದ ಪ್ರಶಸ್ತಿಗೂ ಯಾವ ಸಂಬಂಧವೂ ಇಲ್ಲ ಅನ್ನೋದನ್ನು ಮತ್ತೆ ಸುದ್ದಿ ಮಾಡಬೇಕಿದೆ.
ಏಕೆಂದರೆ, ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ನಂತರ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನಮ್ಮ ಕನ್ನಡದ ನಟ ದರ್ಶನ್ ಗೆ ಬಂದಿದೆ ಎಂದು ಎಲ್ಲೆಡೆ ಗುಲ್ಲಾಗಿತ್ತು. ಆದರೆ ಈ ಬಗ್ಗೆ ಈಗ ಸ್ಪಷ್ಟನೆ ಸಿಕ್ಕಿದೆ. ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅವರು ಬ್ರಿಟನ್ ಕನ್ನಡಿಗರ ಪರವಾಗಿ ದರ್ಶನ್ ಗೆ ಲಂಡನ್ ಗೆ ಬರುವಂತೆ ಆಹ್ವಾನ ನೀಡಿದ್ದರು.
ಖಾಸಗಿಯಾಗಿ ಕಾರ್ಯಕ್ರಮವೊಂದನ್ನು ಕೂಡ ಏರ್ಪಡಿಸಿ, ಅಕ್ಟೋಬರ್ ಹತ್ತೊಂಬತ್ತನೇ ತಾರೀಕು ಸನ್ಮಾನ ಕೂಡ ಮಾಡಲಾಗಿದೆ. ಆ ನಂತರ ಬ್ರಿಟನ್ ನ ಸಂಸತ್ತಿಗೆ ಆಹ್ವಾನಿಸಲಾಗಿದೆ. ಅಲ್ಲಿಗೆ ಇದೊಂದು ವೈಯಕ್ತಿಕವಾದ ಆಹ್ವಾನ ಹಾಗೂ ಭೇಟಿ ಎಂಬುದು ನಿಕ್ಕಿಯಾಯಿತು. ಆದರೆ ಬ್ರಿಟನ್ ಸಂಸತ್ತಿನ ಪ್ರಶಸ್ತಿ ದರ್ಶನ್ ಗೆ ಬಂದಿದೆ ಎಂಬ ಸುದ್ದಿಯಾಗಿದ್ದು ಹೇಗೆ ಅನ್ನೋದನ್ನು ಪತ್ತೆ ಹಚ್ಚಬೇಕಿದೆ.
ಇನ್ನು ದರ್ಶನ್ ಅವರು ತಮ್ಮ ಮಗನ ಜತೆಗೆ ಲಂಡನ್ ಗೆ ತೆರಳಿ, ಅಪ್ಪ- ಮಗನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಇಂಡೋ ಬ್ರಿಟಿಷ್ ಆಲ್ ಪಾರ್ಲಿಮೆಂಟರಿ ಗ್ರೂಪ್ ನಿಂದ ಸಿಕ್ಕ ಆಹ್ವಾನಕ್ಕೆ ಸ್ಪಂದಿಸಿದ ದರ್ಶನ್ ಪ್ರೀತಿಯಿಂದ ಅಲ್ಲಿಗೆ ಹೋದರೆ, ಕರ್ನಾಟಕದ ಮಾಧ್ಯಮಗಳಲ್ಲಿ ಬೇರೆ ರೀತಿಯ ಸುದ್ದಿಯಾಗಿದೆ ಎಂಬುದು ಹಲವರ ಆಕ್ಷೇಪ.
ಇರಲಿ ಬಿಡಿ, ದರ್ಶನ್ ಸೂಟು- ಬೂಟು ಹಾಕಿಕೊಂಡು ಸಕತ್ತಾಗಿ ಮಿಂಚುತ್ತಿದ್ದಾರಲ್ಲ, ಎಂಥ ಕಾರ್ಯಕ್ರಮದಲ್ಲೂ ಹಾಗೆ ನೋಡುವುದಕ್ಕೆ ಆಗಲ್ಲ. ಈಗ ಹಾಗೆ ನೋಡುವುದೇ ಖುಷಿ ಎನ್ನುತ್ತಿದ್ದಾರೆ ಅಭಿಮಾನಿಗಳು.

 

 

 

 

11

 

 ಸಿಎಂ ಸಿದ್ದು ವಿರುದ್ಧ ಬಿಎಸ್ ಯಡಿಯೂರಪ್ಪ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲು

 ಅಕ್ಟೋಬರ್-21
ಬೆಂಗಳೂರು: ಭಾರತೀಯ ಜನತಾಪಕ್ಷ(ಬಿಜೆಪಿ) ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೆಪಿಸಿಎಲ್ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಕೆಪಿಸಿಎಲ್ ನಲ್ಲಿ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಗಳಿಗೆ ವಿರುದ್ಧವಾಗಿ 418 ಕೋಟಿ ರುಪಾಯಿ ಅವ್ಯವಹಾರ ನಡೆದಿದೆ ಎಂದು ಯಡಿಯೂರಪ್ಪನವರೂ ಆರೋಪಿಸಿದ್ದಾರೆ.
ಕೆಪಿಸಿಎಲ್ ನ ಅಧ್ಯಕ್ಷರಾಗಿ ಸಿದ್ದರಾಮಯ್ಯನವರು ಇದರಲ್ಲಿ ನೇರ ಭಾಗಿಯಾಗಿದ್ದಾರೆ. 11 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆದುಕೊಂಡು ಸುಮಾರು 418 ಕೋಟಿ ಹಗಲು ದರೋಡೆ ಮಾಡಿದ್ದಾರೆ ಎಂದು ಬಿಎಸ್ವೈ ಆರೋಪಿಸಿದ್ದಾರೆ.
ಕೆಪಿಸಿಎಲ್ ಮತ್ತು ಕೆಎಂಸಿಎಲ್ ನಡುವೆ ಒಪ್ಪಂದ ಹಲವು ಅನುಮಾನಗಳು ಬರುವಂತೆ ಮಾಡಿದೆ. ಇದೊಂದು ಸದ್ದುದ್ದೇಶದ ಒಪ್ಪಂದ ಆಗಿಲ್ಲ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತದೆ. ಕೆಪಿಸಿಎಲ್ ಸಹಭಾಗಿತ್ವದಲ್ಲಿ 2003ರ ಫೆಬ್ರವರಿಯಲ್ಲಿ ಜಂಟಿ ಕಂಪನಿ ಸ್ಥಾಪನೆಯಾಗಿದ್ದು, ಕೆಪಿಸಿಎಲ್ ಜವಾಬ್ದಾರಿ ಶೇಖಡ 24ರಷ್ಟು ಮಾತ್ರ ಇತ್ತು. ಇದಕ್ಕೆ ಸುಪ್ರೀಂಕೋರ್ಟ್ ಸಹ ದಂಡ ಹಾಕಿತ್ತು. ಮನೋಹರ್ ಲಾಲ್ ಶರ್ಮಾ ಕೇಸ್ ನಲ್ಲಿ ಹಲವು ಕಲ್ಲಿದ್ದಲು ಹಂಚಿಕೆಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಕೆಪಿಸಿಎಲ್ ಲೈಸೆನ್ಸ್ ಸಹ ರದ್ದಾಗಿತ್ತು ಎಂದು ಬಿಎಸ್ವೈ ಹೇಳಿದ್ದಾರೆ.

 

                                                                                                                                                                  

ಇಂದಿರಾ ಕ್ಯಾಂಟೀನ್ ಆರಂಭಿಸಲು ಗೊಂದಲ: ಬಿಬಿಎಂಪಿ ಮೌನ

 ಅಕ್ಟೋಬರ್-21

ಬೆಂಗಳೂರು: ಹಲಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಜಾಗದ ಕೊರತೆ ಉಂಟಾಗಿದ್ದು, ಉದ್ದೇಶಿತ ನಿವೇಶನವೊಂದನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಸೂಕ್ತ ದಾಖಲಾತಿಗಳಿಲ್ಲದೆ ಬಿಬಿಎಂಪಿ ಕೈಚೆಲ್ಲಿ ಕುಳಿತಿದೆ.
ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬಿಬಿಎಂಪಿ ಆದ್ಯತೆ ನೀಡಿದ್ದರೂ, ಹಲವೆಡೆ ಜಾಗದ ಕೊರತೆಯಿಂದ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ. ಹಲಸೂರಿನಲ್ಲಿ ಈ ಸಮಸ್ಯೆ ಸ್ವಲ್ಪ ಭಿನ್ನ ಹಾದಿ ಹಿಡಿದಿದೆ. ಇಲ್ಲಿನ ರಾಮಕೃಷ್ಣ ಮಠದ ರಸ್ತೆಯ ಆಂಡಾಳಮ್ಮನ ದೇವಸ್ಥಾನದ ಬದಿಯಿರುವ ನಿವೇಶನವನ್ನು ಕ್ಯಾಂಟೀನ್ಗೆ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ವಿವಾದ ಎದ್ದಿದೆ. ಆಂಡಾಳಮ್ಮನ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಸುಮಾರು 50/80 ಅಡಿ ವಿಸ್ತೀರ್ಣದ ನಿವೇಶನ ಇದೆ. ಇದನ್ನು ಇಂದಿರಾ ಕ್ಯಾಂಟೀನ್ಗೆ ಬಳಸಿಕೊಳ್ಳಲು ಸಲಹೆ ಕೇಳಿ ಬಂದಿದ್ದರೂ, ಸ್ವತ್ತಿನ ವಿವಾದದಿಂದಾಗಿ ಪಾಲಿಕೆ ದೂರ ಉಳಿದಿದೆ. ಜಮೀನಿನ ದಾಖಲಾತಿಗಳು ಸರಿ ಇಲ್ಲವೆಂಬ ಕಾರಣಕ್ಕೆ ಪಾಲಿಕೆ ಆಸಕ್ತಿ ತೋರಿಸುತ್ತಿಲ್ಲ. ಸ್ಥಳೀಯ ಕಾರ್ಪೊರೇಟರ್ ಕೂಡ ತಮ್ಮ ವಾರ್ಡ್ನಲ್ಲಿ ಖಾಲಿ ಜಾಗ ಇಲ್ಲವೆಂದು ಸುಮ್ಮನಿದ್ದಾರೆ.

 

 

 

 

                                                                                                                                                                                        

ಬ್ಯಾನ್ ಔಷಧಿ: ವೈದ್ಯರ ಅಕ್ರಮ ಮಾರಾಟ

ಅಕ್ಟೋಬರ್-21

ಹೈದರಾಬಾದ್: ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕ್ಯಾನ್ಸರ್ ರೋಗಿಗಳಿಗೆ ಬ್ಯಾನ್ ಆಗಿರುವ ಔಷಧಿಗಳನ್ನು ಅಕ್ರಮವಾಗಿ ಮಾರುತ್ತಾರೆ.
ಭಾರತೀಯ ಔಷಧ ನಿಯಂತ್ರಣ ಮಂಡಳಿ ನಿಷೇಧಿಸಿರುವ ಟ್ಯಾಬ್ಲೆಟ್ಗಳು ಆನ್ಲೈನ್ನಲ್ಲೂ ನಿರಾಯಾಸವಾಗಿ ದೊರೆಯುತ್ತಿವೆ. ಔಷಧ ಮಳಿಗೆಗಳಲ್ಲೂ ಬೇರೆ ದೇಶಗಳ ಹಲವಾರು ಬ್ರ್ಯಾಂಡ್ಗಳ ನಿಷೇಧಿತ ಔಷಧಗಳು ಸಿಗುತ್ತಿವೆ. ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಒಸಿಮೆರ್ಟಿನಿಬ್ (ಔsimeಡಿಣiಟಿib)ಎಂಬ ಬಾಂಗ್ಲಾದೇಶದಿಂದ ಆಮದು ಮಾಡಿದ ಟ್ಯಾಬ್ಲೆಟ್ ನೀಡಲಾಗುತ್ತಿದೆ.
ಒಸಿಮೆರ್ಟಿನಿಬ್ ಬಳಕೆಗೆ ಭಾರತದಲ್ಲಿ ಇನ್ನೂ ಅಂಗೀಕಾರ ನೀಡಿಲ್ಲ. ಅದರ ಗುಣಮಟ್ಟ, ಸುರಕ್ಷೆ ಮತ್ತು ಪರಿಣಾಮಗಳ ಬಗ್ಗೆ ಇನ್ನೂ ಪರಿಶೀಲನೆ ನಡೆಯುತ್ತಿದೆ. ,ಇನ್ಸೆಪ್ಟಾ ಎಂಬ ಔಷಧವನ್ನೂ ಬಾಂಗ್ಲಾದಿಂದ ಆಮದು ಮಾಡಿ ಮಾರಲಾಗುತ್ತಿದೆ ಎಂದು ಔಷಧ ನಿಯಂತ್ರಣ ಮಂಡಳಿಯ ಡಾ. ಜಿ.ಎನ್. ಸಿಂಗ್ ಹೇಳಿದ್ದಾರೆ.

 

                                                                                                                                    aa

ಪಟಾಕಿಯಿಂದ ದುರ್ಘಟನೆ

ಅಕ್ಟೋಬರ್ 19

ಬೆಂಗಳೂರು, : ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪಟಾಕಿ ಸಿಡಿಸುವಾಗ ಹಲವರು ಕಣ್ಣು ಕಳೆದುಕೊಂಡಿರುವುದು ಉಂಟು. ಪ್ರತಿವರ್ಷವೂ ಪಟಾಕಿಯಿಂದ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಲೇ ಇದೆ. ಪಟಾಕಿಯಿಂದ ಹಲವು ದುರ್ಘಟನೆಗಳು ನಡೆದಿವೆ.
ಈ ಬಾರಿಯ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿತದಿಂದಾಗಿ ನಗರದಲ್ಲಿ ಈ ವರೆಗೆ ಒಟ್ಟು 11 ಜನರು ಗಾಯಗೊಂಡಿರುವುದು ತಿಳಿದುಬಂದಿದೆ.
ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದ್ದರೆ, ಮತ್ತೊಂದೆಡೆ ಪಟಾಕಿ ಅವಘಡಗಳು ನಡೆಯುತ್ತಲೇ ಇವೆ.
ಇನ್ನು ಎಲ್ ಆರ್ ನಗರದ ನಿವಾಸಿಯಾದ ಶಾರುಕ್ ಎನ್ನುವರು ಬುಧವಾರ ರಾತ್ರಿ ಮನೆಗೆ ತೆರಳುತ್ತಿರುವ ವೇಳೆ ಬೇರೆಯವರು ಹಚ್ಚಿದ ರಾಕೆಟ್ ಪಟಾಕಿ ಬಂದು ಕಣ್ಣಿ ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಇಲ್ಲಿಯವರೆಗೆ ಒಟ್ಟು 8 ಜನರು ಚಿಕಿತ್ಸೆ ಪಡೆದಿದ್ದಾರೆ. ರಾಜಾಜಿನಗರದಲ್ಲಿ 5 ಜನ, ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಒಬ್ಬರು, ಬೊಮ್ಮಸಂದ್ರದಲ್ಲಿ 2.
ವಿಂಟೋ ಆಸ್ಟತ್ರೆಯಲ್ಲಿ ಒಟ್ಟು 3 ಜನರು ದಾಖಲಾಗಿದ್ದಾರೆ ಎಂದು ವರದಿ ಸಿಕ್ಕಿದೆ. ಅಷ್ಟೇ ಅಲ್ಲದೇ ಪಟಾಕಿ ಅನಾಹುತದಲ್ಲಿ ಕಣ್ಣಿಗೆ ಗಾಯ ಮಾಡಿಕೊಂಡು ಹೊರ ರೋಗಿಯಾಗಿ ನಗರದ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಮಿಂಟೋ ಹಾಸ್ಪಿಟಲ್ ಬಗ್ಗೆ:1913 ರಲ್ಲಿ ಆರಂಭವಾದ ಮಿಂಟೋ ಹಾಸ್ಪಿಟಲ್ ಲಕ್ಷಾಂತರ ಜನರ ಕಣ್ಣಿನ ದೋಷಗಳನ್ನು ನಿವಾರಿಸಿಕೊಂಡು ಬಂದಿದೆ. ಬೆಂಗಳೂರಿನ ಹೆಮ್ಮೆಯ ಸರಕಾರಿ ಆಸ್ಪತ್ರೆಗಳಲ್ಲಿ ಒಂದಾದ ಇಲ್ಲಿ 300 ಹಾಸಿಗೆ ಇದೆ. ಈ ಆಸ್ಪತ್ರೆ ಹೆಚ್ಚು ಸುದ್ದಿ ಮಾಡುವುದು ದೀಪಾವಳಿ ಹಬ್ಬ ಬಂದಾಗ. ಕಣ್ಣಿಗೆ ಪಟಾಕಿ ಕಿಡಿ ಬಡಿದು ಚಿಕಿತ್ಸೆಗಾಗಿ ಪ್ರತೀವರ್ಷ ನೂರಾರು ಜನ ಇಲ್ಲಿಗೆ ಬರ್ತಾರೆ. ಈ ವರ್ಷವೂ ಅದೇ ಕತೆ, ಅದೇ ವ್ಯಥೆ.

 

 

hh

  ರಾಜಕೀಯಕ್ಕೆ ಗುಡ್ ಬೈ ಹೇಳಲಿರುವ

                ಪರಮೇಶ್ವರ್

ಅಕ್ಟೋಬರ್.19

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು 2023 ರ ನಂತರ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದು, ಈ ಕುರಿತು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆ, ನಾನು ಈ ಚುನಾವಣೆಯಲ್ಲಿ ಕೊರಟಗೆರೆಯಿಂದಲೇ ಸ್ಪರ್ಧಿಸುತ್ತೇನೆ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಇತ್ತೀಚಿಗೆ ಕೊರಟಗೆರೆಯಲ್ಲಿ ಪರಮೇಶ್ವರ್ ಒಂದು ವಾರ ಕಾಲ ಬೀಡು ಬಿಟ್ಟಿದ್ದರು. hಕೆಲವೊಂದು ವೈಯಕ್ತಿಕ ಕಾರಣಗಳಿಂದ ಪರಮೇಶ್ವರ್ ಅವರು ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಆದರೆ ಪರಮೇಶ್ವರ್ ಅವರ ಮಾತು ಎಷ್ಟು ಸತ್ಯ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

 

 

 

33

 

ಬೆಳಕಿನ ಹಬ್ಬಕ್ಕೆ ಅಡ್ಡಿಯಾಗದ ಮಳೆ : ನಿರ್ದೇಶಕ ಎಸ್.ರೆಡ್ದಿ
 ಅಕ್ಟೋಬರ್-19
ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಆರ್ಭಟಿಸುತ್ತಿದ್ದ ಮುಂಗಾರು ಮಳೆ ಸದ್ಯಕ್ಕೆ ಮಂಕಾಗಿದ್ದು , ದೀಪಾವಳಿ ಹಬ್ಬದ ಆಚರಣೆಗೆ ಅಡ್ಡಿಯಾಗುವುದಿಲ್ಲ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಬಂದು ಜನಜೀವನ ಅಸ್ತವ್ಯಸ್ತಗೊಳಿಸಿತ್ತದಲ್ಲದೆ ಸಾವುನೋವು, ಆಸ್ತಿಪಾಸ್ತಿ ಹಾನಿ ಕೂಡ ಉಂಟಾಗಿತ್ತು. ಮಳೆಯ ಆರ್ಭಟ ನೋಡಿದರೆ ದೀಪಾವಳಿ ಹಬ್ಬ ಸಂಭ್ರಮದಿಂದ ಆಚರಿಸಲು ಅಡ್ಡಿಯಾಗಬಹುದು ಎಂಬ ನಿರೀಕ್ಷೆ ಜನರಲ್ಲಿ ಮನೆ ಮಾಡಿತ್ತು. ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ಇಳಿಕೆಯಾಗಿದ್ದು , ರಾಜ್ಯದಲ್ಲಿ ಅ.25ರವರೆಗೂ ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು , ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಚಂಡಮಾರುತ ಒರಿಸ್ಸಾ, ಪಶ್ಚಿಮ ಬಂಗಾಳದ ಕೊಲ್ಲಿಗೆ ಚಲಿಸುವುದರಿಂದ ರಾಜ್ಯದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಆಗುವುದಿಲ್ಲ. ಹಾಗಾಗಿ ಮಳೆ ಪ್ರಮಾಣ ಇಳಿಕೆಯಾಗುತ್ತಿದೆ. ಚದುರಿದಂತೆ ಕೆಲವೆಡೆ ಸಾಧಾರಣ ಮಳೆಯಾಗಬಹುದು ಅಷ್ಟೆ. ರಾಜ್ಯದ ಬೀದರ್, ಗುಲ್ಬರ್ಗ ಭಾಗದಲ್ಲಿ ಸಾಧಾರಣ ಮಳೆಯಾಗಬಹುದು ಅಷ್ಟೆ ಎಂದರು.
ನೈರುತ್ಯ ಮುಂಗಾರು ಇನ್ನೆರಡು ದಿನದಲ್ಲಿ ಮರಳಲಿದೆ. ಆನಂತರ ಈಶಾನ್ಯ ಹಿಂಗಾರು ಮಳೆ ಆರಂಭವಾಗಲಿದೆ. ಆದರೂ ಸದ್ಯಕ್ಕೆ ಪ್ರಮುಖ ಜಲಾಶಯಗಳು ಭರ್ತಿಯಾಗುವ ಪ್ರಮಾಣದಲ್ಲಿ ಮತ್ತೆ ಭಾರೀ ಮಳೆಯಾಗುವುದು ವಿರಳ. ಒಂದು ವೇಳೆ ತೀವ್ರ ಸ್ವರೂಪದ ವಾಯುಭಾರತ ಕುಸಿತ ಇಲ್ಲವೇ ಚಂಡಮಾರುತ ಉಂಟಾಗಿ ಹೆಚ್ಚಿನ ಮಳೆಯಾದರೆ ಮಾತ್ರ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದುಬರಲಿದೆ. ಅಕ್ಟೋಬರ್ 25ರ ನಂತರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಒಂದೆರಡು ದಿನ ಮತ್ತೆ ಮಳೆ ಬರುವ ಸಾಧ್ಯತೆಗಳು ಇವೆ ಎಂದು ಹೇಳಿದರು. ಈ ಬಾರಿ ಕುಂಭದ್ರೋಣ ಮಳೆಯಾಗಿ ಹೊಸ ದಾಖಲೆ ನಿರ್ಮಾಣವಾಗಿದ್ದರೂ ಕೆಲವೊಂದು ಕೆರೆಕಟ್ಟೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಿಗೆ ಇನ್ನು ಶೇ.40ರಷ್ಟು ನೀರಿನ ಸಂಗ್ರಹದ ಕೊರತೆ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.

 

 

     

ಡಿಸ್‌ಚಾರ್ಜ್‌ ಆದ ಬಿ.ಎಸ್.ಯಡಿಯೂರಪ್ಪ

ಅಕ್ಟೋಬರ್.19

ಬೆಂಗಳೂರು: ತೀವ್ರ ಜ್ವರ, ರಕ್ತದೊತ್ತಡದಿಂದ ಬಳಲುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೋಲೊ ಆಸ್ಪತ್ರೆಗೆ ಬಿಎಸ್‌ವೈ ನಿನ್ನೆ ರಾತ್ರಿ ದಾಖಲಾಗಿದ್ದರು. ಡಾ.ಪ್ರಮೋದ್ ಅವರು ಬಿಎಸ್‌ವೈಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯಿಂದ ಸುಧಾರಿಸಿಕೊಂಡಿರುವ ಯಡಿಯೂರಪ್ಪ ಡಿಸ್‌ಚಾರ್ಜ್‌ ಆಗಿದ್ದಾರೆ.

 

oo

 ಹಿಂದೆ ಬಿಜೆಪಿಯನ್ನು ಸೇರಲು ಯತ್ನಿಸಿದ್ದ                    ಸಿದ್ದರಾಮಯ್ಯ.

 ಅಕ್ಟೋಬರ್-18
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಜೆಡಿಎಸ್ ತೊರೆದ ನಂತರ ಕಾಂಗ್ರೆಸ್ ಸೇರುವ ಬದಲು ಬಿಜೆಪಿಗೆ ಸೇರುವ ಪ್ರಯತ್ನ ನಡೆಸಿದ್ದರು. ಎಂಬ ಅಂಶವನ್ನು ಕುಮಾರಸ್ವಾಮಿ ಬಹಿರಂಗಪಡಿಸಿದರು ಬಿಜೆಪಿ ವರಿಷ್ಠರ ಜತೆ ಮಾತುಕತೆಯೂ ನಡೆದಿತ್ತು. ಕೊನೆ ಗಳಿಗೆಯಲ್ಲಿ ಕಾಂಗ್ರೆಸ್'ಗೆ ಹೋದರು. ಸಿದ್ದರಾಮಯ್ಯ ಇದೀಗ ದುರಹಂಕಾರದ ಮಾತುಗಳನ್ನಾಡುತ್ತಿದ್ದು, ದುಡ್ಡಿನ ಮದ ಏರಿದೆ ಅವರಿಗೆ ಪೊಲೀಸ್ ಜೀಪ್ನಲ್ಲಿ ಹಣ ಸಾಗಿಸುವುದು ಕರಗತವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಮತ್ತು ಹುಣಸೂರಿನ ಕ್ಷೇತ್ರದಿಂದ ಎಚ್.ವಿಶ್ವನಾಥ್ ಅವರು ಸ್ಪರ್ಧಿಸುತ್ತಾರೆ. ಮುಖ್ಯಮಂತ್ರಿಗಳು ಬರಲಿ ನೋಡೋಣ ಎಂದು ಸವಾಲು ಹಾಕಿದರು. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸದಿದ್ದರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸ ಹೋಗುತ್ತಿರಲಿಲ್ಲ. ಅಲ್ಲಿ ಪ್ರತಿಪಕ್ಷದ ನಾಯಕರೂ ಆಗುತ್ತಿರಲಿಲ್ಲ ಎಂದರು.

 

11 


 ಜಮೀರ್ ಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್.
 ಅಕ್ಟೋಬರ್-18
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಶಾಸಕ ಜಮೀರ್ ಹೇಳಿಕೆಗೆ ಸಂಬಂಧಪಟ್ಟಂತೆ ಮಾಜಿ ಸಿ.ಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ದೇವೇಗೌಡರ ಮಗ ನಾನಿನ್ನೂ ಬದುಕಿದ್ದೇನೆ. ಯಾವುದೇ ಸಂದರ್ಭದಲ್ಲೂ ನಾನಾಗಲೀ ರೇವಣ್ಣ ಅವರಾಗಲೀ ಯಾವುದೇ ರಾಷ್ಟ್ರೀಯ ಪಕ್ಷದ ಬಾಗಿಲು ತಟ್ಟಲ್ಲ, ಅಂತಹ ಪರಿಸ್ಥಿತಿ ಬಂದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇವೆ ಅಂತಾ ಜಮೀರ್ ಅವರಿಗೆ ಟಾಂಗ್ ನೀಡಿದ್ದಾರೆ.
ಇದೇ ವೇಳೆ ಅವರು ಸ್ವಾಭಿಮಾನದಿಂದ ಪಕ್ಷ ಕಟ್ಟಲು ನಾವಿಬ್ಬರು ಕಂಕಣ ಬದ್ಧರಾಗಿದ್ದು, ಮುಂದಿನ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ರೇವಣ್ಣ ಮತ್ತು ನಾನು ಮಾತ್ರ ಸ್ಪರ್ಧಿಸುತ್ತೇವೆ. ಪ್ರಜ್ವಲ್ ರೇವಣ್ಣ ,ನಿಖಿಲ್ ಅವರು ಚುನಾವಣಾ ಪ್ರಚಾರದಲ್ಲಿ ಮಾತ್ರ ಭಾಗವಹಿಸುತ್ತಾರೆ ಎಂದು ಅವರು ಇದೇ ವೇಳ ಸ್ಪಷ್ಟಪಡಿಸಿದರು.

 

aa                        
 ಡೂಡಲ್ ಆರ್ಟ್ನಲ್ಲಿ ಚಿನ್ನದ ಪದಕ
ಅಕ್ಟೋಬರ್:18
ಬೆಂಗಳೂರು: 'ಈಕೆಗೆ ಚಿತ್ರ ಬಿಡಿಸೋದು ಅಂದರೆ ಪಂಚ ಪ್ರಾಣ. ಮನಸ್ಸಿನಲ್ಲಿ ಒಂದು ಚಿತ್ರದ ಕಲ್ಪನೆ ಮೂಡಿದ ಕೂಡಲೇ ಗೋಡೆ ಇರಲಿ, ನೋಟ್ ಪುಸ್ತಕವಿರಲಿ, ಬ್ಯಾಗ್ ಆಗಿರಲಿ, ಬಟ್ಟೆಯಾದರೂ ಸೈ, ಯಾವುದೂ ಇಲ್ಲ ಅಂದ್ರೆ ತನ್ನ ಕೈ-ಕಾಲಿನ ಮೇಲೆಯೇ ಆ ಚಿತ್ರವನ್ನು ಬಿಡಿಸಿಕೊಳ್ಳುವುದು ಇವಳ ಹವ್ಯಾಸ! ಇದು ಕಲೆಯಾಗಿ ಕರಗತಗೊಂಡು, ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿದೆ.
ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಗರದ ಐಟಿಪಿಎಲ್ನ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸ್ಲ್ಲಿ 10ನೇ ತರಗತಿ ಓದುತ್ತಿರುವ, ಈಕೆಯ ಹೆಸರು ಧನ್ಯಾ ಫಡ್ಕೆ.
ಇಂಡಿಯಾ ಆರ್ಟ್ ಸಂಸ್ಥೆಯು ಆನ್ಲೈನ್ ಮೂಲಕ ಏರ್ಪಡಿಸಿದ್ದ ಅಖಿಲ ಭಾರತ ಮಟ್ಟದ 'ಖುಲಾ ಆಸ್ಮಾನ್' ಹೆಸರಿನ ಚಿತ್ರಕಲಾ ಸ್ಪರ್ಧೆಯಲ್ಲಿ ಧನ್ಯಾ ಅವರು 'ಎಜುಕೇಷನ್ ಫಾರ್ ಆಲ್' ವಿಷಯ ಕುರಿತು ರಚಿಸಿದ ಡೂಡಲ್ ಚಿತ್ರಕ್ಕೆ ಮೊದಲ ಬಹುಮಾನ ದೊರೆತಿದೆ. ಚಿನ್ನದ ಪದಕ ಸಿಕ್ಕಿದೆ. 15 ರಿಂದ 24 ವರ್ಷದೊಳಗಿನವರ ವಿಭಾಗದಲ್ಲಿ ಧನ್ಯಾಳ ಚಿತ್ರಕ್ಕೆ ಪ್ರಶಸ್ತಿ ದೊರೆತಿದೆ.
ಧನ್ಯಾಳ ಮುತ್ತಾತ ಪ್ರತಿಷ್ಠಿತ ದೇವಾಲಯಗಳಲ್ಲಿನ ಪ್ರಭಾವಳಿಗಳನ್ನು ಚಿತ್ರದ ಮೂಲಕ ಅದ್ಭುತವಾಗಿ ಬಿಡಿಸುತ್ತಿದ್ದರು. ಧನ್ಯಾಳ ತಾಯಿ ವೃಂದಾ ಫಡ್ಕೆಯವರು ಕೂಡ ಫೈನ್ ಆರ್ಟ್ಸ್ ಕಲಾವಿದೆ. ಹೀಗಾಗಿ ಈಕೆಗೂ ಚಿತ್ರಕಲೆ ಎಂಬುದು ಹುಟ್ಟಿನಿಂದಲೇ ಬಂದ ಬಳುವಳಿಯಾಗಿದೆ ಎಂದರೆ ತಪ್ಪಾಗದು.
'ನಮ್ಮ ಮಗಳು ಚಿಕ್ಕಂದಿನಿಂದಲೂ ಏನಾದರೊಂದು ಗೀಚುತ್ತಲೇ ಇದ್ದಳು. ಯುಕೆಜಿಯಲ್ಲಿದ್ದಾಗ ಎರಡು ಬಹುಮಾನಗಳನ್ನೂ ಪಡೆದಳು. ಕಲೆಯಲ್ಲಿ ಒಳ್ಳೆಯ ಪ್ರತಿಭೆಯಿದೆ ಎಂದೆನಿಸಿ, ಚಿತ್ರಕಲಾ ತರಬೇತಿಗೆ ಸೇರಿಸಿದೆವು. ಅಂದಿನಿಂದ ಆಕೆ ಅತ್ಯದ್ಭುತ ಡೂಡಲ್ ಚಿತ್ರಗಳನ್ನು ಬಿಡಿಸುತ್ತಾಳೆ. ಗಾಯನವನ್ನೂ ಕಲಿತಿದ್ದಾಳೆ. ಇವೆಲ್ಲವೂ ಅವಳ ಪಠ್ಯಕ್ಕೂ ಪೂರಕವಾಗಿದ್ದು, ಓದಿನಲ್ಲೂ ಮುಂದಿದ್ದಾಳೆ' ಎನ್ನುತ್ತಾರೆ ತಂದೆ ದಿವಾಕರ ಫಡ್ಕೆ ಮತ್ತು ತಾಯಿ ವೃಂದಾ ಫಡ್ಕೆ.                                                                                                                                                                     

 

  

11

 ಕನ್ನಡಿಗರ ಮೇಲೆ ಹಲ್ಲೆ ನಡಿಸಿದ ತಮಿಳಿಗರು.!

ಅಕ್ಟೋಬರ್-18
''ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ'' ಎಂಬ ಮಾತಿದೆ. ಆದ್ರೆ, ಈ ಮಾತಿಗೆ ವಿರುದ್ಧವಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಕನ್ನಡಿಗರ ಮೇಲೆ ಕ್ಷುಲ್ಲಕ ಕಾರಣಕ್ಕೆ ತಮಿಳು ಅಭಿಮಾನಿಗಳು ಹಲ್ಲೆ ಮಾಡಿದ್ದಾರೆ. ರ್ನಾಟಕ ಸೇರಿದಂತೆ ದೇಶಾದ್ಯಂತ ತಮಿಳು ನಟ ವಿಜಯ್ ಅಭಿನಯದ 'ಮೆರ್ಸಲ್' ಸಿನಿಮಾ ತೆರೆಕಂಡಿದೆ. ಬೆಂಗಳೂರಿನ ಸಂಪಿಗೆ ಚಿತ್ರಮಂದಿರದಲ್ಲೂ 'ಮೆರ್ಸಲ್' ಬಿಡುಗಡೆಯಾಗಿದ್ದು, ಚಿತ್ರಮಂದಿರದ ಬಳಿ ವಿಜಯ್ ಅಭಿಮಾನಿಗಳು ಕನ್ನಡಿಗರನ್ನ ಕ್ಷುಲ್ಲಕ ಕಾರಣಕ್ಕೆ ಥಳಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಘಟನೆ.
ವಿಜಯ್ ಕೌಟೌಟ್ ನೋಡಿದ್ದಕ್ಕೆ ಗಲಾಟೆ
ಸಂಪಿಗೆ ಚಿತ್ರಮಂದಿರದಲ್ಲಿ 'ಮೆರ್ಸಲ್' ಸಿನಿಮಾ ಬಿಡುಗಡೆಯಾದ ಹಿನ್ನೆಲೆ ಚಿತ್ರಮಂದಿರದ ಎದುರು ದೊಡ್ಡ ದೊಡ್ಡ ಕಟೌಟ್ ಗಳನ್ನ ನಿಲ್ಲಿಸಲಾಗಿದೆ. ಈ ವೇಳೆ ಥಿಯೇಟರ್ ಮುಂದೆ ಹೋಗುತ್ತಿದ್ದ ಕನ್ನಡಿಗರು ಕಟೌಟ್ ನೋಡಿದ್ದಾರೆ. ಕೇವಲ ಕಟೌಟ್ ನೋಡಿದ್ದಕ್ಕೆ ಅಲ್ಲಿದ್ದ ವಿಜಯ್ ಅಭಿಮಾನಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದನೆ
'ನಮ್ಮ ಬಾಸ್' ಎಂದು ಅಟ್ಟಹಾಸ
''ನಮ್ಮ ಬಾಸ್, ನಮ್ಮ ಬಾಸ್ ಕಟೌಟ್ ತಲೆ ಎತ್ತಿ ನೋಡುತ್ತೀರಾ ಎಂದು'' ಅವಾಚ್ಯ ಶಬ್ದಗಳಿಂದ ನಿಂದಿಸಿ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಾರೆ. ಅತಿ ಕೆಟ್ಟ ಪದಗಳನ್ನ ಪದಪ್ರಯೋಗ ಮಾಡಿದ್ದಾರೆ. ಈ ಘಟನೆಯಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರೂ, ಅದನ್ನ ಲೆಕ್ಕಿಸಿದೆ ರಸ್ತೆಯಲ್ಲಿ ಹೊಡೆದಿದ್ದಾರೆ.
ತಮಿಳು-ತೆಲುಗು ಸಿನಿಮಾ
ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಹಾವಳಿ
ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ಪರಭಾಷೆಯ ಸಿನಿಮಾಗಳಿಗೆ ಆಧ್ಯತೆ ನೀಡಲಾಗುತ್ತಿದೆಯಾ ಎಂಬ ಪ್ರಶ್ನೆ ಮತ್ತೆ ಉದ್ಭವಾಗುತ್ತಿದೆ. ಯಾಕಂದ್ರೆ, ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳ ಕೊರತೆ ಇದೆ. ಹೀಗಿದ್ದರೂ, ತಮಿಳು ಮತ್ತು ತೆಲುಗು ಸಿನಿಮಾಗಳಿಗೆ ಚಿತ್ರಮಂದಿರ ಕೊಡ್ತಾರೆ. ಹೀಗೆ, ಅವಕಾಶ ಮಾಡಿಕೊಟ್ಟರು ಈ ರೀತಿಯ ದಬ್ಬಾಳಿಕೆ ನಡೆಸುತ್ತಿದ್ದಾರೆ.
ದೊಡ್ಡ ಹೋರಾಟದ ಎಚ್ಚರಿಕೆ
ಕನ್ನಡ ಹೋರಾಟಗಾರ ಖಂಡನೆ.
ಈ ಘಟನೆ ಸಾಮಾಜಿಕ ಮಾಧ್ಯಮ ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕನ್ನಡಪರ ಹೋರಾಟಗಾರರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಹಲ್ಲೆ ಮಾಡಿದವರನ್ನ ಕೂಡಲೇ ಬಂಧಿಸಬೇಕು ಮತ್ತು ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ, ದೊಡ್ಡ ಹೋರಾಟ ಮಾಡಲಾಗುತ್ತೆ ಎಂಬ ಎಚ್ಚರಿಕೆ ನೀಡಿದ್ದಾರೆ.

 

11

 ದಿಗ್ವಿಜಯ್ ಸಿಂಗ್ ಅಳಿಯನ ವಿರುದ್ಧ ವಂಚನೆ ಕೇಸ್ ದಾಖಲು.

ಅಕ್ಟೋಬರ್:18
ಬೆಂಗಳೂರು : ರಾಜ್ಯ ಕಾಂಗ್ರೆಸ್ ಮಾಜಿ ಉಸ್ತುವರಿ ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ ಮೇಲೆ ಎಲೆಕ್ಟ್ರಿಕ್ ಗುತ್ತಿಗೆ ಕೊಡಿಸುತ್ತೇನೆ ಎಂದು ವಂಚಿಸಿರುವ ಆರೋಪದ ಮೇಲೆ ಕೇಸ್ ದಾಖಲಾಗಿದೆ.
ಬೆಂಗಳೂರಿನ 22 ನೇ ಎಸಿಎಂಎಂ ಕೋರ್ಟ್ ನಲ್ಲಿ ಈ ಕೇಸ್ ದಾಖಲಾಗಿದೆ. ಬಾಲಾಜಿ ಎಲೆಕ್ಟ್ರಿಕಲ್ಸ್ ನ ಮಾಲೀಕ ಚಂದ್ರಬಾಬು ಎಂಬುವರು ಈ ಕೇಸ್ ದಾಖಲಿಸಿದ್ದಾರೆ. ಗುತ್ತಿಗೆ ಕೊಡಿಸುವುದಾಗಿ ದಿಗ್ವಿಜಯ್ ಸಿಂಗ್ ಅಳಿಯ ಭವಾನಿ ಸಿಂಗ್ 1.5 ಕೋಟಿ ರೂ. ಹಣ ಪಡೆದಿದ್ದರು. ದಿಗ್ವಿಜಯ್ ಸಿಂಗ್ ರಾಜ್ಯ ಕಾಂಗ್ರೆಸ್ ಉಸ್ತುವರಿಯಾಗಿದ್ದಾಗ ಈ ಡೀಲ್ ನಡೆದಿತ್ತು.
ಗುತ್ತಿಗೆ ಕೊಡಿಸದ ಹಿನ್ನೆಲೆಯಲ್ಲಿ ತಾವು ಕೊಟ್ಟಿದ್ದ 1.15 ಕೋಟಿ ರೂ. ಹಣವನ್ನು ವಾಪಸ್ ನೀಡುವಂತೆ ಚಂದ್ರಬಾಬು ಅವರು ಭವಾನಿ ಸಿಂಗ್ ಗೆ ಒತ್ತಡ ಹೇರಿದ್ದರು. ಒತ್ತಡಕ್ಕೆ ಮಣಿದ ಭವಾನಿ ಸಿಂಗ್ 3 ಚೆಕ್ ಗಳನ್ನು ಚಂದ್ರಬಾಬುಗೆ ನೀಡಿದ್ದರು. ಆದರೆ ಅವರು ನೀಡಿದ 25 ಲಕ್ಷ, 35 ಲಕ್ಷ ಮತ್ತು 55 ಲಕ್ಷದ ಮೂರು ಚೆಕ್ ಗಳು ಬೌನ್ಸ್ ಆಗಿವೆ. ಈ ಹಿನ್ನೆಲೆಯಲ್ಲಿ ಚಂದ್ರಬಾಬು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ.

 

11 

 ದೇವೇಗೌಡರ ಬಗ್ಗೆ ಜನರಲ್ಲಿ ಅಭಿಮಾನವಿದೆ : ಎಚ್.ವಿಶ್ವನಾಥ್

ಅಕ್ಟೋಬರ್:18

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮಚ್ಚಿಕೊಂಡು ಮತ್ತು ಜೆಡಿಎಸ್ ಪಕ್ಷವನ್ನು ಬಯಸುವ ಜನರು ರಾಜ್ಯದಲ್ಲಿ ಇದ್ದಾರೆ. ಆದರೆ, ಅವರನ್ನು ಮುನ್ನಡೆಸುವ ನಾಯಕರಿಗೆ ಕೊರತೆಯಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ದೇವೇಗೌಡರ ಬಗ್ಗೆ ಜನರಲ್ಲಿ ಅಭಿಮಾನವಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ದೇವೇಗೌಡ ಶ್ರಮ ಹಾಗೂ ಪ್ರಯತ್ನಗಲ ಬಗ್ಗೆ ಜನ ಮೆಚ್ಚುಗೆಯ ಮಾತನಾಡುತ್ತಿದ್ದಾರೆ, ಆದರೆ ಪಕ್ಷ ಹಾಗೂ ನಾಯಕತ್ವದ ಬಗ್ಗೆ ಒಲವಿರುವ ಈ ಜನರನ್ನು ಮುನ್ನೆಡೆಸಲು ನಾಯಕರ ಕೊರತೆ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಪ್ರವಾಸ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ 2013 ರಲ್ಲೇ ಜಾರಿಗೆ ಬಂದಿದೆ. ಆದರೆ, ಈವರೆಗೆ ಈ ಕಾಯಿದೆ ಆಧರಿಸಿ ಮೀಸಲು ಹುದ್ದೆಗಳ ಭರ್ತಿ ಆಗಿಲ್ಲ. ಸರ್ಕಾರ ಈವರೆಗೆ ಒಂದು ಸಭೆ ಮಾಡಿ ಅಸಮಾನತೆಯನ್ನು ಸಮಾನತೆಯ ದಾರಿಗೆ ತರುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.

 

ಸುಪ್ರೀಂ ಕೋರ್ಟ್ ಪಟಾಕಿ ಅಂಗಡಿಗಳ ತೆರವು

ಅಕ್ಟೋಬರ್:17

ಬೆಂಗಳೂರು: ದೀಪಾವಳಿ ಹಬ್ಬ ಶುಕ್ರವಾರ ಮುಗಿದ ಮೇಲೆ ಅದರ ಮರುದಿನವೇ ಆಟದ ಮೈದಾನಗಳಿಂದ ಎಲ್ಲ ಪಟಾಕಿ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್‌, ಬಿಬಿಎಂಪಿಗೆ ಸೂಚನೆ ನೀಡಿದೆ.

ರಾಜಾಜಿನಗರದ ರಾಮಮಂದಿರ ಆಟದ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡದೆ, ಬಿಬಿಎಂಪಿ ಕ್ರಮ ಪ್ರಶ್ನಿಸಿ ಜಾಹ್ನವಿ ಮತ್ತು ಇತರ 21 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ. ಯಾವ್ಯಾವ ಆಟದ ಮೈದಾನದಲ್ಲಿ ಪಟಾಕಿಗಳ ಮಾರಾಟಕ್ಕೆ ಅವಕಾಶವಿದೆ, ಎಷ್ಟು ದಿನ ಅವಕಾಶ ನೀಡಲಾಗಿದೆ ಎಂಬುದರ ಬಗ್ಗೆ ಬಿಬಿಎಂಪಿ ಆದೇಶ ಹೊರಡಿಸಬೇಕು ಮತ್ತು ಎಲ್ಲ ಅಂಗಡಿಗಳು ಕಡ್ಡಾಯವಾಗಿ ಷರತ್ತುಗಳನ್ನು ಪಾಲಿಸುವಂತೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿತು.

ಯಾವುದೇ ಸಗಟು ಪಟಾಕಿ ಮಾರಾಟಗಾರರು ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಮತ್ತು ಅನುಮತಿ ಅವಧಿ ಮುಗಿದ ನಂತರವೂ ಮಳಿಗೆ ಮುಂದುವರಿಸುವಂತಿಲ್ಲ ಮತ್ತು ಇತತರಿಗೆ ತೊಂದರೆ ಕೊಡುವಂತಿಲ್ಲ ಎಂದೂ ನ್ಯಾಯಾಲಯ ತನ್ನ ಆದೇಶದಲ್ಲಿ ಸೂಚಿಸಿದೆ.

Ads
;