ದೂರವಾಣಿ : 080-69999676
ಇಮೇಲ್ : Info@Vijayataranga.com


 

44  ಶೋಭಾ ವಿರುದ್ಧ ಅವಹೇಳನಕಾರಿ ಪೋಸ್ಟ್ : ಹೆಬ್ಬಾಳ್ಕರ್ ಅಭಿಮಾನಿ ಕೃತ್ಯ
 ಡಿಸೆಂಬರ್
ಬೆಳಗಾವಿ : ಫೇಸ್ ಬುಕ್ ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವ ಘಟನೆ ನಡೆದಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿ ಎನ್ನಲಾದ ಸವದತ್ತಿ ಮೂಲದ ಇಂತಿಯಾಜ್ ಸಂಗ್ರೇಸಕೊಪ್ಪ ಎಂಬಾತ ಅವಾಚ್ಯವಾಗಿ ಪೋಸ್ಟ್ ಮಾಡಿರುವುದಕ್ಕೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಮೇಶ್ ರೆಡ್ಡಿ ಹಿಂದೂವಾಗಿದ್ದರೆ ಮಹಿಳೆಯರನ್ನು ರೇಪ್ ಮಾಡಿದ್ದಾನೆ. ಒಂದು ವೇಳೆ ಆತ ಮುಸ್ಲಿಂ ಆಗಿದ್ದರೆ ಕರಂದ್ಲಾಜೆ ಅವರು ಬೇರೆ ಥರ ಓಡಾಡುತ್ತಿದ್ದರು ಎಂದು ಕೋಮು ಸಾಮಾರಸ್ಯ ಕದಡುವ ಪೋಸ್ಟ್ ಮಾಡಿದ್ದಾನೆ.

 

 

11  ಗೋವಾ ಸಿಎಂ ಪರ್ರಿಕರ್ 'ಡರ್ಟಿ ಪಾಲಿಟಿಕ್ಸ್': ಪಾಟೀಲ್
ಡಿಸೆಂಬರ್-22
ಬೆಳಗಾವಿ: ಮಹದಾಯಿ ವಿಚಾರವಾಗಿ ಗೋವಾ ಸಿಎಂ ಮನೋಹರ್ ಪರ್ರಿಕರ್ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಗೋವಾ ಸಿಎಂ ಸಂವಿಧಾನಾತ್ಮಕವಾಗಿ ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು, ಆದರೆ ಯಡಿಯೂರಪ್ಪನವರಿಗೆ ಬರೆದಿದ್ದಾರೆ. ಗೋವಾ ಸಿಎಂ ಪರ್ರಿಕರ್ ಅವರದ್ದು 'ಡರ್ಟಿ ಪಾಲಿಟಿಕ್ಸ್' ಎಂದು ಸಚಿವ ಪಾಟೀಲ್ ಹೇಳಿದ್ದಾರೆ.
ಗೋವಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಗೋವಾ ಸಿಎಂಗೆ 2 ಸಲ ಪತ್ರ ಬರೆದಿದ್ದರು, ದರೆ ಅದಕ್ಕೆ ಗೋವಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಸಂದರ್ಭದಲ್ಲಿ ಗೋವಾ ನೀರಾವರಿ ಸಚಿವ ಪಾಲೇಕರ್ ಕರ್ನಾಟಕ ಸರ್ಕಾರದ ಕ್ರಮವನ್ನು 'ಡರ್ಟಿ ಪಾಲಿಟಿಕ್ಸ್' ಎಂದಿದ್ದರು.
ಅವರು ಪತ್ರದಲ್ಲಿ ಕೆಟ್ಟ ಶಬ್ದ ಬಳಸಿ ಸಿಎಂ ಸಿದ್ದರಾಮಯ್ಯಗೆ ಅವಮಾನ ಮಾಡಿದ್ದರು; ಈಗ ಗೋವಾ ಸಿಎಂ ಮಾಡುತ್ತಿರುವುದೂ ಡರ್ಟಿ ಪಾಲಿಟಿಕ್ಸ್, ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಟಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
' ಪ್ರತಿಷ್ಠೆ ಇಲ್ಲ, ಚರ್ಚೆಗೆ ಸಿದ್ಧ'
ಕರ್ನಾಟಕ ಸರ್ಕಾರದ ನಿಲುವು ಪ್ರಕಟಿಸಿದ ಸಚಿವ ಎಂ.ಬಿ. ಪಾಟೀಲ್, ರಾಜ್ಯದ ಜನ, ರೈತರ ಸಲುವಾಗಿ ಪ್ರತಿಷ್ಠೆ ಬದಿಗಿಟ್ಟು ಮಾತುಕತೆಗೆ ಸಿದ್ಧ. ಯಾವುದೇ ಸ್ಥಳ, ಯಾವುದೇ ದಿನಾಂಕದಂದು ಚರ್ಚಿಸಲು ಸಿದ್ಧವಿದ್ದೇವೆ. 2-3 ದಿನದಲ್ಲಿ ಸಭೆ ಕರೆಯಬೇಕೆಂದು ನಮ್ಮ ಕೋರಿಕೆ, ಸಿದ್ದರಾಮಯ್ಯ ಪೂರ್ವ ನಿಯೋಜಿತ ಕಾರ್ಯಕ್ರಮ ಬಿಟ್ಟು ಚರ್ಚೆಗೆ ಬರುತ್ತಾರೆ, ಎಂದು ಸಚಿವ ಪಾಟೀಲ್ ಹೇಳಿದ್ದಾರೆ.

 

 

    122 

 ದಲಿತರ ವಿರುದ್ಧ ಅಸಂವಿಧಾನಿಕ ಪದ: ಉಮೇಶ್ ಗೆ ಜಾಮೀನು

 ಡಿಸೆಂಬರ್-22

 ಬೆಳಗಾವಿ: ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರು ದಲಿತರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ನೀಡಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಉಮೇಶ್ ಕತ್ತಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 
ಡಿಸೆಂಬರ್ 8ರಂದು ಜಿಲ್ಲೆಯಲ್ಲಿ ನಡೆದಿದ್ದ ಸಾರ್ವಜನಿಕರ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಭಾಷಣ ಮಾಡುತ್ತಾ ಮಾತಿನ ಭರದಲ್ಲಿ ದಲಿತರ ಕುರಿತು ಅಸಂವಿಧಾನಿಕ ಪದ ಬಳಸಿದ್ದರು. ಈ ಬಗ್ಗೆ ದಲಿತ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ, ಅಣಕು ಶವ ಯಾತ್ರೆ, ಜಿಲ್ಲಾ ಬಂದ್ ಗಳನ್ನು ಮಾಡಿ ಉಮೇಶ್ ಕತ್ತಿ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಲು ಒತ್ತಾಯಿಸಿದ್ದರು. ಪ್ರತಿಭಟನಾಕಾರರ ಮನವಿಯಂತೆ ಉಮೇಶ್ ಕತ್ತಿ ಅವರು ಬೇಷರತ್ ಕ್ಷಮೆ ಯಾಚಿಸಿದ್ದರು. ಆದರೆ ಉಮೇಶ್ ಕತ್ತಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಬಗ್ಗೆ ಡಿಸೆಂಬರ್ 15ರಂದು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಸುನೀಲ ಕಾತೇದಾರ ಎಂಬುವವರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗೆ ಉಮೇಶ ಕತ್ತಿ ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಳಗಾವಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಉಮೇಶ್ ಕತ್ತಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

 

445  ಗೋವಾ ಸಿಎಂ ಪರ್ರಿಕರ್ 'ಡರ್ಟಿ ಪಾಲಿಟಿಕ್ಸ್': ಪಾಟೀಲ್
 ಡಿಸೆಂಬರ್-22
ಬೆಳಗಾವಿ: ಮಹದಾಯಿ ವಿಚಾರವಾಗಿ ಗೋವಾ ಸಿಎಂ ಮನೋಹರ್ ಪರ್ರಿಕರ್ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಗೋವಾ ಸಿಎಂ ಸಂವಿಧಾನಾತ್ಮಕವಾಗಿ ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು, ಆದರೆ ಯಡಿಯೂರಪ್ಪನವರಿಗೆ ಬರೆದಿದ್ದಾರೆ. ಗೋವಾ ಸಿಎಂ ಪರ್ರಿಕರ್ ಅವರದ್ದು 'ಡರ್ಟಿ ಪಾಲಿಟಿಕ್ಸ್' ಎಂದು ಸಚಿವ ಪಾಟೀಲ್ ಹೇಳಿದ್ದಾರೆ.
ಗೋವಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಗೋವಾ ಸಿಎಂಗೆ 2 ಸಲ ಪತ್ರ ಬರೆದಿದ್ದರು, ದರೆ ಅದಕ್ಕೆ ಗೋವಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆ ಸಂದರ್ಭದಲ್ಲಿ ಗೋವಾ ನೀರಾವರಿ ಸಚಿವ ಪಾಲೇಕರ್ ಕರ್ನಾಟಕ ಸರ್ಕಾರದ ಕ್ರಮವನ್ನು 'ಡರ್ಟಿ ಪಾಲಿಟಿಕ್ಸ್' ಎಂದಿದ್ದರು.
ಅವರು ಪತ್ರದಲ್ಲಿ ಕೆಟ್ಟ ಶಬ್ದ ಬಳಸಿ ಸಿಎಂ ಸಿದ್ದರಾಮಯ್ಯಗೆ ಅವಮಾನ ಮಾಡಿದ್ದರು; ಈಗ ಗೋವಾ ಸಿಎಂ ಮಾಡುತ್ತಿರುವುದೂ ಡರ್ಟಿ ಪಾಲಿಟಿಕ್ಸ್, ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಟಿ. ಪಾಟೀಲ್ ತಿರುಗೇಟು ನೀಡಿದ್ದಾರೆ.
' ಪ್ರತಿಷ್ಠೆ ಇಲ್ಲ, ಚರ್ಚೆಗೆ ಸಿದ್ಧ'
ಕರ್ನಾಟಕ ಸರ್ಕಾರದ ನಿಲುವು ಪ್ರಕಟಿಸಿದ ಸಚಿವ ಎಂ.ಬಿ. ಪಾಟೀಲ್, ರಾಜ್ಯದ ಜನ, ರೈತರ ಸಲುವಾಗಿ ಪ್ರತಿಷ್ಠೆ ಬದಿಗಿಟ್ಟು ಮಾತುಕತೆಗೆ ಸಿದ್ಧ. ಯಾವುದೇ ಸ್ಥಳ, ಯಾವುದೇ ದಿನಾಂಕದಂದು ಚರ್ಚಿಸಲು ಸಿದ್ಧವಿದ್ದೇವೆ. 2-3 ದಿನದಲ್ಲಿ ಸಭೆ ಕರೆಯಬೇಕೆಂದು ನಮ್ಮ ಕೋರಿಕೆ, ಸಿದ್ದರಾಮಯ್ಯ ಪೂರ್ವ ನಿಯೋಜಿತ ಕಾರ್ಯಕ್ರಮ ಬಿಟ್ಟು ಚರ್ಚೆಗೆ ಬರುತ್ತಾರೆ, ಎಂದು ಸಚಿವ ಪಾಟೀಲ್ ಹೇಳಿದ್ದಾರೆ.

 

44

 ಗಡಿ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಕುಸಿಯುತ್ತಿದೆ ಭೂಮಿ!
ಡಿಸೆಂಬರ್-19
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಭೂಮಿ ಕುಸಿಯುತ್ತಿದೆ. ಇದು ಇಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಅಥಣಿ ತಾಲೂಕಿನ ಕವಟಕೊಪ್ಪ ಗ್ರಾಮದಲ್ಲಿ ಈ ರೀತಿಯ ಭೂ ಕುಸಿತವಾಗುತ್ತಿದೆ. ಇಲ್ಲಿನ ನಿವಾಸಿಯಾಗಿರುವ ಅಜಿತ್ ಎನ್ನುವವರ ಮನೆಯ ಪಕ್ಕದಲ್ಲಿ 30 ರಿಂದ 40 ಅಡಿ ಆಳದಲ್ಲಿ ಕಂದಕವೊಂದು ಪತ್ತೆಯಾಗಿದೆ.
ಇದರಿಂದ ಇಲ್ಲಿ ವಾಸವಾಗಿರುವ ಜನರು ಮನೆಯಿಂದ ಹೊರಗೆ ಬರಲೂ ಆಗದೇ ಹೊರಗೂ ಹೋಗಲಾಗದೇ ಭಯಗೊಂಡಿದ್ದಾರೆ.
ಕಳೆದ 3 ದಿನಗಳ ಹಿಂದೆಯೂ ಕೂಡ 4ರಿಂದ 5 ಅಡಿ ಆಳದಷ್ಟು ಭೂಮಿ ಕುಸಿತವಾಗಿದೆ. ಇದರಿಂದ ಇಲ್ಲಿ ವಾಸವಾಗಿರುವ ಜನರು ತಾವು ನಿಂತಿರುವ ಜಾಗ ಯಾವ ಸಂದರ್ಭದಲ್ಲಿ ಕುಸಿಯುವುದೇ ಎನ್ನುವ ಆತಂಕದಲ್ಲಿಯೇ ಬದುಕುವಂತಾಗಿದೆ.

 

 

44  ದಿಢೀರ್ ಕಲ್ಲು ತೂರಾಟ, ಎಸಿಪಿ ಸೇರಿ ಮೂವರು ಪೊಲೀಸರಿಗೆ ಗಾಯ
 ಡಿಸೆಂಬರ್-19
ಬೆಳಗಾವಿ: ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ದಿಢೀರ್ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಎಸಿಪಿ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡ್ಡಾರೆ ಮತ್ತು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನಿನ್ನೆ ರಾತ್ರಿ 10.50ರ ಸುಮಾರಿಗೆ ಖಾಡಕ್ ಗಲ್ಲಿ, ಖಂಜಾರ ಗಲ್ಲಿ ಮತ್ತು ಖಡೆ ಬಜಾರ್ ನಲ್ಲಿ ದುಷ್ಕರ್ಮಿಗಳು ಕೆಲ ಅಂಗಡಿ, ಮನೆಗಳ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಕೆಲ ಬೈಕ್ ಮತ್ತು ಕಾರುಗಳಿಗೆ ಬೆಂಕಿ ಸಹ ಹಚ್ಚಿ ಘೋಷಣೆ ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ಶಂಕರ್ ಮಾರಿಹಾಳ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ದಿಢೀರ್ ಈ ಹಿಂಸಾಚಾರ ಘಟನೆಗೆ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ಆದರೆ ಈ ಸಂಬಂಧ ಪೊಲೀಸರು ಇಂದು 23 ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ನಿವಾಸಿಗಳ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಿಮಿಸಿದ ಪೊಲೀಸರ ಮೇಲೂ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಇದೊಂದು ಯೋಜಿತ ದಾಳಿ ಎನ್ನಲಾಗಿದೆ.

 

   ggg ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ವೇತನ ಸಹಿತ ರಜೆ
ಡಿಸೆಂಬರ್.16
ಬೆಳಗಾವಿ: ಹಾರೂಗೇರಿಯಲ್ಲಿ ಜ.6,7ರಂದು ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಸಾಹಿತ್ಯಾಸಕ್ತ ಶಿಕ್ಷಕರು ಪಾಲ್ಗೊಳ್ಳಲು ಅನುವಾಗುವಂತೆ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳು ವೇತನ ಸಹಿತ ರಜೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಪಿ.ರಾಜೀವ್ ಹೇಳಿದರು.
ಪಟ್ಟಣದ ಶ್ರೀ ಸಿದ್ಧಿವಿನಾಯಕ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಹಾರೂಗೇರಿಯಲ್ಲಿ ಕನ್ನಡ ನುಡಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಜವಾಬ್ದಾರಿ ಹೊತ್ತಿರುವ ಸಮಿತಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಡಾ.ಎಲ್.ಎಸ್.ಜಂಬಗಿ, ಪ್ರಜ್ಞಾವಂತರು ಸಮ್ಮೇಳನದಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಸಮ್ಮೇಳನ ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ಅದು ಕನ್ನಡಿಗರ ಕಾರ್ಯಕ್ರಮ, ನಮ್ಮ ಹಬ್ಬ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಡಾ.ರತ್ನಾ ಬಾಳಪ್ಪನವರ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಿ.ಆರ್.ಗುಡಸಿ ಜಿಲ್ಲಾ ಸಮ್ಮೇಳನ ಸಮಿತಿಗಳ ಅಧ್ಯಕ್ಷರು ಮತ್ತು ಅವುಗಳ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು.
ಗಣ್ಯರಾದ ರಾಮಣ್ಣ ಗಸ್ತಿ, ಈರನಗೌಡ ಪಾಟೀಲ, ಡಾ.ಎಲ್.ಎಸ್.ಧರ್ಮಟ್ಟಿ, ಬಿ.ಬಿ.ಮುಗಳಿಹಾಳ, ವೆಂಕಟೇಶ ಸಣ್ಣಕ್ಕಿನವರ, ಸಂತೋಷ ಸಿಂಗಾಡಿ, ಡಾ.ಪಿ.ಯು.ಪೂಜಾರಿ, ಪ್ರೊ.ಎಸ್.ಬಿ.ಸದಲಗಿ ಮತ್ತಿತರರು ಉಪಸ್ಥಿತರಿದ್ದರು.

 

 

                 

 

ಕೈದಿಗಳಿಗೆ ಸಂಭ್ರಮದ ಬಿಡುಗಡೆ ಸಂದರ್ಭ
ಡಿಸೆಂಬರ್.14
ಬೆಳಗಾವಿ: ಅನೇಕ ವರ್ಷಗಳ ಕಾಲ ಶಿಕ್ಷೆ ಅನುಭವಿಸಿದವರಿಗೆ ಇದು ಬಿಡುಗಡೆಯ ಸಂಜೆ. ಈ ಸಂಜೆ ಇಲ್ಲಿನ ಇನ್ನುಳಿದವರಿಗೆ ಸನ್ಮಾರ್ಗ ತೋರುವ ಸಂಜೆಯಾಗಲಿ ಎಂದು ಎಸ್‌ಪಿ ಡಾ. ಬಿ.ಆರ್‌. ರವಿಕಾಂತೇಗೌಡ ಹೇಳಿದರು.
ಬುಧವಾರ ಸಂಜೆ ನಗರದ ಹಿಂಡಲಗಾ ಕಾರಾಗೃಹದಲ್ಲಿ ಸನ್ನಡತೆ ಆಧಾರದಲ್ಲಿ 12 ಕೈದಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
''ನೀವೆಲ್ಲ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅನುಭವಿಸಿ, ಮತ್ತೆ ಸಮಾಜಕ್ಕೆ ಮರಳುವ ಸಂದರ್ಭದಲ್ಲಿ ನಿಮ್ಮಿಂದ ಒಂದು ಕಾಲಕ್ಕೆ ತೊಂದರೆಗೊಳಗಾದವರ ಬಗ್ಗೆಯೂ ಚಿಂತಿಸಿ. ಜೈಲು ನಿಮ್ಮ ಪಾಲಿಗೆ ರೋಗ ವಾಸಿ ಮಾಡುವ ಆಸ್ಪತ್ರೆಯಾಗಲಿ. ಮತ್ತೆ ರೋಗ ಬರದಂತೆ ಜೀವನದಲ್ಲಿ ಮುನ್ನೆಚ್ಚರಿಕೆ ವಹಿಸಿ ಬಾಳಿ'', ಎಂದು ಕಿವಿಮಾತು ಹೇಳಿದರು.
''ಎಲ್ಲ ಸಂತರಿಗೂ ಒಂದು ಭೂತಕಾಲವಿರುತ್ತದೆ. ಎಲ್ಲ ಪಾಪಿಗಳಿಗೂ ಭವಿಷ್ಯವಿರುತ್ತದೆ. ಜೈಲಿನಲ್ಲಿ ಕಲಿತ ಉದ್ಯೋಗ ತರಬೇತಿಯಿಂದ ಒಳ್ಳೆಯ ಜೀವನ ಕಟ್ಟಿಕೊಳ್ಳಿ. ಬಿಡುಗಡೆಯಾಗುತ್ತಿರುವ ಎಲ್ಲರನ್ನೂ ಜಿಲ್ಲೆಯ ಆಯಾ ಊರುಗಳಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆಯ ಸದಸ್ಯರನ್ನಾಗಿ ಮಾಡಿ ಸಮಾಜದಲ್ಲಿ ಗೌರವಾನ್ವಿತರಾಗಿ ಬಾಳಲು ಪೊಲೀಸ್‌ ಇಲಾಖೆ ಸಹಕಾರ ನೀಡಲಿದೆ'', ಎಂದು ರವಿಕಾಂತೇಗೌಡ ಭರವಸೆ ನೀಡಿದರು.
ಉತ್ತರ ವಲಯ ಐಜಿಪಿ ರಾಮಚಂದ್ರ ರಾವ್‌, ''ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ ಮತ್ತೆ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಿ. ಸಾಧ್ಯವಾದರೆ ನಿಮ್ಮಿಂದ ನೊಂದ ಕುಟುಂಬದವರ ಕ್ಷಮೆ ಕೇಳಿ'', ಎಂದರು.
ಜೈಲು ಅಧೀಕ್ಷಕ ಟಿ.ಪಿ. ಶೇಷ, ''ಅಪರಾಧಿಯನ್ನು ಹಂತ ಹಂತವಾಗಿ ಬದಲಾಯಿಸಿ, ಮನಃಪರಿವರ್ತನೆಯ ಮೂಲಕ ಸಮಾಜಕ್ಕೆ ಕಳಿಸುವುದು ಜೈಲು ಅಧಿಕಾರಿಗಳ ಜವಾಬ್ದಾರಿ. ಇಲ್ಲಿಂದ ಹೊರ ಹೋದ ಮೇಲೆ ನಿಮ್ಮ ಜೀವನಕ್ಕೆ ಸಹಕಾರಿಯಾಗುವಂತೆ ಅನೇಕ ರೀತಿಯ ತರಬೇತಿ ನೀಡಲಾಗಿದೆ. ಅದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಒಳ್ಳೆಯವರಾಗಿ ಬಾಳಿ ಎಂದರು.
ಬಿಡುಗಡೆಗೊಂಡ 12 ಜನರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಡಿಸಿಪಿ ಸೀಮಾ ಲಾಟ್ಕರ್‌, ಜೈಲು ಅಧಿಕಾರಿ ಮೂಲಿಮನಿ, ಕಾರಾಗೃಹ ಸ್ಥಾಯಿ ಸಲಹಾ ಮಂಡಳಿ ಸದಸ್ಯರಾದ ಮಲ್ಲೇಶ ಚೌಗುಲೆ, ಅನುಶ್ರೀ ದೇಶಪಾಂಡೆ, ಅಭಿಮನ್ಯು, ವಿಜಯ ಮೋರೆ, ವಾಘೇಲಾ, ಜಮಾತೆ ಇಸ್ಲಾಮಿ ಹಿಂದ್‌ ಅಧ್ಯಕ್ಷ ರಿಯಾಜ ಅಹ್ಮದ್‌ ಅವಟಿ, ಯೂನುಸ್‌ ಸರಾಫ್‌ ಮುಂತಾದವರು ಉಪಸ್ಥಿತರಿದ್ದರು.
ಕಾನೂನು ಗೊತ್ತಿಲ್ಲದೆ 13 ವರ್ಷಗಳ ಹಿಂದೆ ಯಾವುದೋ ಸಂದರ್ಭದಲ್ಲಿ ತಪ್ಪು ಮಾಡಿದ್ದೆ. ಮತ್ತೆ ತಪ್ಪು ಮಾಡಲಾರೆ. ಜೈಲಿನಲ್ಲಿ ನೇಕಾರಿಕೆ, ಎಲೆಕ್ಟ್ರಿಕಲ್‌ ಕೆಲಸ, ಪೇಂಟಿಂಗ್‌ ಕಲಿತುಕೊಂಡಿದ್ದೇನೆ. ಅದನ್ನು ಬಳಸಿಕೊಂಡು ಜೀವನದಲ್ಲಿ ಚೆನ್ನಾಗಿ ಬಾಳುವೆ ಎಂದು ಬಿಡುಗಡೆಗೊಂಡ ಯುವಕ ಸುಭಾಶ ಶ್ಯಾಮ ವಲ್ಲೇಪುರಕರ ಹೇಳಿದರು.
ಜೈಲಿನಿಂದ ಬಿಡುಗಡೆಯಾಗಲು ದಂಡದ ಹಣ ತುಂಬಲಾಗದ ಬಂಧಿಯೊಬ್ಬರಿಗೆ ನಗರದ ಜಮಾತೆ ಇಸ್ಲಾಮಿ ಹಿಂದ್‌ ಸದಸ್ಯರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಬಂಧಿಯಾಗಿದ್ದ ವಿಠ್ಠಲ ಅಪ್ಪಾಜಿ ಜಾಧವ ಎಂಬುವರ ಪರವಾಗಿ ಜಮಾತೆ ಇಸ್ಲಾಮಿ ಸದಸ್ಯರು 5 ಸಾವಿರ ರೂಪಾಯಿ ದಂಡದ ಹಣ ಪಾವತಿಸಿದ್ದಾರೆ.
ಬಿಡುಗಡೆಗೊಂಡವರು:
ಸಾಹೀಬ್‌ ಪಾಷಾ ಬಾಬಾಸಾಬ ನಸರದ್ದಿ, ಕುತುಬುದ್ದೀನ್‌ ಕರೀಂಸಾಬ್‌ ಚಮನಶೇಖ, ಕಮಲವ್ವ ಯಲ್ಲಪ್ಪ ಮುನ್ನೇನಿ, ಸಿದ್ಧವ್ವ ರುದ್ರಪ್ಪ ಪಾಟೀಲ, ನಾಗವ್ವ ನಿಂಗಪ್ಪ ಕೊಟಬಾಗಿ, ರಾಜು ಹನಮಂತ ಖಾನಾಪುರೆ, ಸುಭಾಶ ಶ್ಯಾಮ ವಲ್ಲೇಪುರಕರ, ಕೃಷ್ಣಾ ಸದಾಶಿವ ಮಲಬಾ, ಉಮೇಶ ಬಸವಣ್ಣಿ ಗುಂಜೀಕರ, ಶೌಕತಲಿ ಕರೀಮಸಾಬ ಬಾಗವಾನ, ವಿಠ್ಠಲ ಅಪ್ಪಾಜಿ ಜಾಧವ, ಮಹಾಬಳೇಶ್ವರ ಹೊನ್ನಪ್ಪ ನಾಯ್ಕ.

 

    123 

 ಕೋತಿಯನ್ನು ಕೊಂದ ವ್ಯಕ್ತಿಯನ್ನು ಬಂಧಿಸಲು ಒತ್ತಾಯ

 ಡಿಸೆಂಬರ್.12

 ಬೆಳಗಾವಿ: ಕೋತಿಯ ಸಾವಿಗೆ ಮರುಗಿದ ಜನ, ಕೋತಿಯನ್ನು ಗುಂಡಿಟ್ಟು ಕೊಂದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿ ಮಾನವೀಯ ಘಟನೆಯೊಂದು ನಿನ್ನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.ನಿಪ್ಪಾಣಿಯ ನಿಲೇಶ ಕುರುಬೆಟ್ಟ(55) ಎಂಬುವರ ಮನೆಯ ಬಳಿ ತೊಂದರೆ ಕೊಡುತ್ತಿದ್ದ ಕೋತಿಯೊಂದನ್ನು ಆತ ಬಂದೂಕಿನಿಂದ ಶೂಟ್ ಮಾಡಿ ಕೊಂದುಬಿಟ್ಟಿದ್ದಾನೆ.ಸತ್ತ ಕೋತಿಯ ಶವವನ್ನು ಪೊಲೀಸ್ ಠಾಣೆ ಬಳಿ ಎತ್ತೊಯ್ದ ನಿಪ್ಪಾಣಿ ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಕೋತಿ ಶವವಿಟ್ಟು, ಕೋತಿಯನ್ನು ಕೊಂದ ನಿಲೇಶ ಕುರುಬೆಟ್ಟ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.ಮಾನವೀಯತೆ ಮರೆತು ಮೃಗದಂತೆ ವರ್ತಿಸಿದ ವ್ಯಕ್ತಿಯನ್ನು ಬಂಧಿಸಿ ಪ್ರಾಣಿ ಹಿಂಸೆ ಮಾಡುವ ವ್ಯಕ್ತಿಗಳಿಗೆ ಬುದ್ಧಿ ಕಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.ಆದರೆ ನಿಪ್ಪಾಣಿ ಪೊಲೀಸರು ಕೋತಿ ಕೊಲೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಸಮಜಾಯಿಷಿ ನೀಡಿ ಕಳಿಸಿಬಿಟ್ಟಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ತಾವು ಪ್ರಕರಣವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವುದಾಗಿ ಹೇಳಿ ನುಣುಚಿಕೊಂಡಿದ್ದಾರೆ. ಆದರೆ ಇಂದು ಚಿಕ್ಕೋಡಿ ಅರಣ್ಯಾಧಿಕಾರಿ ಎಂ.ಬಿ.ಗಣಾಚಾರಿ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳ ಇಬ್ಬಂದಿತನದಿಂದ ಬೇಸತ್ತ ಪ್ರತಿಭಟನಾಕಾರರು ಹಿಡಿಶಾಪ ಹಾಕಿ ಕೊನೆಗೆ ಕೋತಿಯ ಅಂತ್ಯಕ್ರಿಯೆ ಮಾಡಿ ಪ್ರತಿಭಟನೆ ಕೈಬಿಟ್ಟಿದ್ದಾರೆ.

 

 

    123 

ರಾಜಕೀಯದಲ್ಲಿ 'ರಿಯಲ್ ಸ್ಟಾರ್ ಉಪ್ಪಿಯಿಂದ' ಹೊಸ ಪ್ರಯೋಗ! ಏನದು ಗೊತ್ತಾ?

ಡಿಸೆಂಬರ್ -11
ಬೆಳಗಾವಿ: ಇಂದು ಕೆಪಿಜೆಪಿ ಪಕ್ಷದ ಪ್ರಚಾರಕ್ಕಾಗಿ ಕುಂದಾನಗರಿ ಬೆಳಗಾವಿಗೆ ರಿಯಲ್ ಸ್ಟಾರ್ ಉಪೇಂದ್ರ ಆಗಮಿಸಿದರು. ಇದೇ ವೇಳೆ ಅವರು ನಗರದ ಚನ್ನಮ್ಮ ವೃತ್ತದಲ್ಲಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದ ಉಪ್ಪಿ, ಅಲ್ಲಿಂದ ಸುದ್ದಿಗೋಷ್ಠಿ ಏರ್ಪಡಿಸಿದ್ದ ಮಿಲನ್ ಹೋಟೆಲ್ವರೆಗೂ ಆಟೋ ಓಡಿಸಿದರು. ಎಲ್ಲರಿಗೂ ಈಗಿರುವ ರಾಜಕೀಯ ವ್ಯವಸ್ಥೆ ಬೇಸತ್ತು ಹೋಗಿದೆ. ವಿಷಯಾಧಾರಿತ ರಾಜಕೀಯ ನಡೆಯುತ್ತಿದೆ. ಹೊಸ ರಾಜಕಾರಣಕ್ಕೆ ವೇದಿಕೆ ರೂಪಿಸಿದ್ದೇನೆ ಸಾಕಷ್ಟು ಜನರು ನನಗೆ ಕೈಜೋಡಿಸುತ್ತಿದ್ದಾರೆ. ಕೇವಲ 20ರಷ್ಟು ಜನರ ಕೈಯಲ್ಲಿ ಅಧಿಕಾರವಿದೆ ಹಾಗೂ ಶೇ.80 ಜನರು ಸುಮ್ಮನಾಗಿದ್ದೇವೆ. ಅಕೌಂಟೇಬಲಿಟಿ ನಮಗೆ ಬೇಕಾಗಿದೆ. ಹಿಂದೆ ರಾಜರ ಆಡಳಿತ ಕಾಲವಿತ್ತು. ಆದರೆ ಈಗ ರಾಜಕಾರಣವಾಗಿದೆ ರಾಜಕೀಯ ವ್ಯವಸ್ಥೆ. ನಾನು ನಮ್ಮಣ್ಣ ಸೇರಿ ಜಮೀನು ತೆಗೆದುಕೊಂಡಿದ್ದೇವೆ. ಕೃಷಿಗೆಂದು ತೆಗೆದುಕೊಂಡ ಸ್ಥಳದಲ್ಲಿ ಕೃಷಿ ಮಾಡುತ್ತಿದ್ದೇವೆ.ರೆಸಾರ್ಟ್ ಹಿಂಭಾಗದಲ್ಲಿ ಈ ಕೃಷಿ ಭೂಮಿಯಿದೆ. ಕೆ.ಎಸ್.ಡಿಯಿಂದ ನಾನು ರೆಸಾರ್ಟ್ ಪಡೆದಿದ್ದೇವೆ. ಕೋರ್ಟ್ ನಿರ್ಧಾರ ತೆಗೆದುಕೊಂಡಿದೆ. ಹಿರೇಮಠ ಅವರು ಕೋರ್ಟ್ ನಿರ್ಧಾರವನ್ನು ಪ್ರಶ್ನೆ ಮಾಡ್ತಾರೆ.ವಿಚಾರ ಇರೋರು ರಾಜಕಾರಣಕ್ಕೆ ಬರದಂತೆ ಹೆದರಿಸುತ್ತಾರೆ. ನಮ್ಮ ಮೈಂಡ್ ಸೆಟ್ ಹೇಗಾಗಿದೆ ಅಂದರೆ ಹಣವಿದ್ದರೆ ಮಾತ್ರ ರಾಜಕಾರಣ ಎಂಬಂತಾಗಿದೆ ಎಂದರು. ಮೈಕ್ರೋ ಲೆವೆಲ್ ಪ್ಲ್ಯಾನಿಂಗ್ ರಾಜ್ಯ ಮಟ್ಟದ ಪ್ಲಾನಿಂಗ್ ನಮ್ಮ ಪ್ರಣಾಳಿಕೆಯಲ್ಲಿದೆ. ಜನವರಿ ಅಂತ್ಯದಲ್ಲಿ ಕೆಪಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡುವ ಉದ್ದೇಶವಿದೆ. ಅರ್ಹತೆ ಇರುವ ಅಭ್ಯರ್ಥಿಗಳನ್ನ ಸಂದರ್ಶನ ಮಾಡಿ ಆಯ್ಕೆ ಮಾಡುತ್ತೇವೆ ಎಂದು ಅವರು ಹೇಳಿದರು. ನಟ ಉಪೇಂದ್ರ ಅವರನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾದ ಕಾರಣ ವೇಳೆ ಮಿಲನ್ ಹೋಟೆಲ್ನ ದ್ವಾರದ ಗಾಜು ಪುಡಿ ಪುಡಿಯಾಗಿದೆ.ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು


 

 

    123 

ಮಹಾರಾಷ್ಟ್ರ ಪರ ಬ್ಯಾಟಿಂಗ್ ಮಾಡಿದ ಬಿಜೆಪಿ ಶಾಸಕ

 ಡಿಸೆಂಬರ್ -11

ಬೆಳಗಾವಿ : ಗಡಿ ವಿವಾದದಲ್ಲಿ ಮೊದಲಿನಿಂದಲೂ ಮರಾಠಿಗರ ಪರ ನಿಲುವು ವ್ಯಕ್ತಪಡಿಸುತ್ತಾ ಬಂದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಇದೇ ಮೊದಲ ಬಾರಿಗೆ ವೇದಿಕೆ ಮೇಲೆ ಬಹುರಂಗವಾಗಿಯೇ ತಮ್ಮ ಮಹಾರಾಷ್ಟ್ರ ಪ್ರೇಮ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮತನಾಡಿದ ಸಂಜಯ್ ಪಾಟೀಲ್, ಕರ್ನಾಟಕ-ಮಹಾರಾಷ್ಟ್ರ ಗಡಿ ಕುರಿತು ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯದ ತೀರ್ಪು ಮರಾಠಿಗರ ಪರವಾಗಿ ಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ್ದು ನನಗೆ ಮರಾಠಿ ಭಾಷೆ ಕುರಿತು ಅಪಾರವಾದ ಪ್ರೇಮವಿದೆ. ಪ್ರಸ್ತುತ ಸಾಹಿತ್ಯ ಸಮ್ಮೇಳನಕ್ಕೆ ಶಾಸಕನಾಗಿ ಬಂದಿಲ್ಲ. ಒಬ್ಬ ಮರಾಠಿಗನಾಗಿ ಪಾಲ್ಗೊಂಡಿದ್ದೇನೆ. ಮರಾಠಿಗರ ಆಸೆ, ಕನಸಿನಂತೆ ಬೆಳಗಾವಿ ವಿವಾದ ಬೇಗ ಇತ್ಯರ್ಥಗೊಳ್ಳಲಿ. ಮರಾಠಿಗರ ಪರವಾಗಿಯೇ ನಿರ್ಣಯ ಬರಲಿ ಎಂಬುದು ನನ್ನ ಹಾರೈಕೆ ಎಂದು ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದಾರೆ.
ತೀವ್ರ ಆಕ್ರೋಶ ಸಂಜಯ್ ಪಾಟೀಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಕನ್ನಡ ನೆಲದಲ್ಲಿ ಮರಾಠಿಗರ ಓಲೈಕೆ ಮಾಡುತ್ತಿದ್ದಾರೆ. ಈ ಸಂಬಂಧ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.

 

 

 

 

44  ಮರಾಠ ಯುವ ಮಂಚ್ ಮತ್ತೆ ಪುಂಡಾಟ ಮೆರೆದಿದೆ.
 ಡಿಸೆಂಬರ್ -8
ಬೆಳಗಾವಿ : ಬೆಳಗಾವಿಯಲ್ಲಿ ಮರಾಠಾ ಯುವಮಂಚ್ ತನ್ನ ಪುಂಡಾಟ ಮುಂದುವರೆಸಿದೆ , ನಗರದ ಪ್ರಾದೇಶಿಕ ಕಚೇರಿ ಮುಂದಿರುವ ಕನ್ನಡ ಧ್ವಜವನ್ನು ಹಾರಿಸಂದತೆ ಅದು ಒತ್ತಾಯಿಸಿ ಪುಂಡಾಟಿಕೆ ಮೆರೆದಿದೆ.
ನಗರದ ಪ್ರಾದೇಶಿಕ ಕಚೇರಿ ಮುಂದೆ ಹಾರಿಸಲಾಗಿರುವ ಕನ್ನಡ ಧ್ವಜವನ್ನು ಕೂಡಲೆ ತೆರವುಗೋಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಅವರು ಪ್ರತಿಭಟನೆ ವೇಳೆ ಕರ್ನಾಟಕ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಧೃತರಾಷ್ಟ್ರನಿಗೆ ಹೋಲಿಸಿದರು.
ರಾಷ್ಟ್ರೀಯ ಧ್ವಜ ದಿನದಂದು ಬೇಕೆಂದೆ ಶಾಂತಿ ಕದಡಲು ಪ್ರತಿಭಟನೆ ಮಾಡಿದ ಮರಾಠಾ ಯುವಮಂಚ್ ಸದಸ್ಯರು, ಕಣ್ಣಿಗೆ ಕಪ್ಪು ಪಟ್ಟಿಕಟ್ಟಿಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು
ಇದೇ ಸಂದರ್ಭದಲ್ಲಿ ಭಾಷಣ ಮಾಡಿದ ಮರಾಠಾ ಯುವ ಮಂಚ್ ಕಾರ್ಯಕರ್ತ ಸೂರಜ್ ಕಣಬರಕರ್ ರಾಜ್ಯದ ಯಾವ ಸರ್ಕಾರಿ ಕಚೇರಿ ಎದುರು ಕೂಡ ಕರ್ನಾಟಕ ಧ್ವಜ ಹಾರಿಸಬಾರದು, ಇದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತೆ ಎಂದು ಹೇಳಿದ್ದಾರೆ.

 

 

                                                           

ಪಕ್ಷದ ವಿರುದ್ಧ ಕತ್ತಿ ತುಗಾಡಿಸುತ್ತಿರುವ: ಕತ್ತಿ

ಡಿಸೆಂಬರ್-8 

ಚಿಕ್ಕೋಡಿ: 'ಬಿಜೆಪಿಯವರು ಹರಾಮ್ ಕೋರ್ ಮಕ್ಳು ನನ್ನನ್ನು ಲಿಂಗಾಯತ ಹೋರಾಟಕ್ಕೆ ಹೋಗಬೇಡ ಅಂದಿದ್ದರು'.. ಇದು ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ,ಮಾಜಿ ಸಚಿವ ಉಮೇಶ್ ಕತ್ತಿ ಅವರು ಪಕ್ಷದ ವಿರುದ್ಧ ತಮ್ಮ ಅಸಮಧಾನವನ್ನು ಹೊರ ಹಾಕಿದ ಪರಿ.
ಬಿಜೆಪಿ ತೊರೆಯುತ್ತಿದ್ದಾರೆ ಎನ್ನುವ ಸುದ್ದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕತ್ತಿ ಈ ಹೇಳಿಕೆ ನೀಡಿದ್ದಾರೆ. 'ನಾನು ಹುಟ್ಟಿನಿಂದ ಲಿಂಗಾಯತ. ಸಾಯುವಾಗಲೂ ಲಿಂಗಾಯತ. ಬಿಜೆಪಿಯವರು ಹಿಂದೂ ಅಂತ ಹೇಳುತ್ತಾರೆ, ಆದರೆ ನಾನು ಲಿಂಗಾಯತ ಅಂತ ಹೇಳುತ್ತೇನೆ. ನಮ್ಮಪ್ಪ ವೀರಶೈವ ಧರ್ಮದಲ್ಲಿ ಹುಟ್ಟಿ ಬಂದವರು ಲಿಂಗಾಯತರಾಗಿ ಬದುಕಿದವರು.ವಿರಶೈವ -ಲಿಂಗಾಯತ ಬೇರೆಯಲ್ಲ' ಎಂದರು.
ನಾನು ಪ್ರತಿಕ್ರಿಯೆ ನೀಡುವುದಿಲ್ಲ 'ಕತ್ತಿ ಹೇಳಿಕೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

 

 

   45

ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಹತ್ಯೆ, ಆರೋಪಿ ಬಂಧನ

 ಡಿಸೆಂಬರ್-6

ಬೆಳಗಾವಿ: ಲೈಂಗಿಕ ಕ್ರಿಯೆಗೆ ನಿರಾಕರಿಸಿ ಮಹಿಳೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಖದೀಮನನ್ನು ಕೊನೆಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪೊಲೀಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೈಲಹೊಂಗಲ ತಾಲೂಕಿನ ತಿಗಡೋಳ್ಳಿ ಗ್ರಾಮದ ತಮ್ಮಣ್ಣ ಮಹಾದೇವ ಕರಡಿ ಬಂಧಿತ ಆರೋಪಿ. ಅಕ್ಟೋಬರ್ 13ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಹಿರೇಹಟ್ಟಿಹೊಳಿ ಗ್ರಾಮದ ರೇಣುಕಾ ಸಹದೇವ ಕಣಬುರಗಿ (30) ಕೊಲೆಯಾಗಿತ್ತು. ಕೊಲೆ ಮಾಡಿ ಪರಾರಿಯಾದ ಆರೋಪಿಯು ಮಹಿಳೆಯ ಮೊಬೈಲ್ ಉಪಯೋಗಿಸುತ್ತಿದ್ದ ಆಧಾರದ ಮೇಲೆ ಅರೋಪಿಯನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 13ರಂ ರಾತ್ರಿ ಎಂ.ಕೆ. ಹುಬ್ಬಳ್ಳಿ ಗ್ರಾಮದಿಂದ ಬೈಲಹೊಂಗಲಕ್ಕೆ ಹಾಲಿನ ವಾಹನದಲ್ಲಿ ಡ್ರಾಪ್ ಕೊಡುವಾಗ ಲೈಂಗಿಕ ಕ್ರಿಯೆ ಯತ್ನಿಸಿದ್ದಾನೆ. ಆದರೆ, ರೇಣುಕಾ ಇದಕ್ಕೆ ನಿರಾಕರಿಸಿದಕ್ಕೆ ಹತ್ಯೆಗೈದು ತಲೆಮರೆಸಿಕೊಂಡಿದ್ದ. ಇಂದು ಆರೊಪಿಯನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ.

 

 

 

444  ಖಾರದ ಪುಡಿ ಎರಚಿ 24 ಲಕ್ಷ ರೂ. ದೋಚಿದ ಕಳ್ಳರು
 ಡಿಸೆಂಬರ್-6
 ಬೆಳಗಾವಿ: ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ 24 ಲಕ್ಷ ರೂ. ದೋಚಿದ ಘಟನೆ ಬೆಳಗಾವಿಯಲ್ಲಿ   ನಡೆದಿದೆ.  ತುಮಕೂರು ಮೂಲದ ನಾರಾಯಣ ಮುದ್ದಪ್ಪ ಹಣ ಕಳೆದುಕೊಂಡವರು.
 ತಡರಾತ್ರಿ ಬೆಳಗಾವಿ ಸಾಗರ್ ಹೋಟೆಲ್ ಬಳಿ ನಾರಾಯಣ ಮುದ್ದಪ್ಪ ಅವರನ್ನು ಅಡ್ಡಗಟ್ಟಿದ   ದುಷ್ಕರ್ಮಿಗಳು   ಚಾಕುವಿನಿಂದ ಬೆದರಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಹಣವಿದ್ದ ಬ್ಯಾಗ್ ಅಪಹರಿಸಿದ್ದಾರೆ.
 ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು   ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

 

22  ಮಗಳ ನೆನಪಿನಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಿದ ತಂದೆ!
 ಡಿಸೆಂಬರ್-5
 ಗೋಕಾಕ್ : ಮಗಳು ಅಗಲಿದ ನೆನಪಿನಲ್ಲಿ ತಂದೆಯೊಬ್ಬರು ಪಟ್ಟಣದಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ  ಘಟಕವನ್ನು ನಿರ್ಮಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
 ತಾಲೂಕಿನ ಮೂಡಲಗಿ ಪಟ್ಟಣದ ನಿವಾಸಿ ಮಲಿಕಸಾಬ ಚಾಂದಖಾನ ಅವರು ತಮ್ಮ ಮಗಳು ತಸ್ಮೀಯಾ ಸ್ಮರಣಾರ್ಥ  ಪುರಸಭೆ ಮತ್ತು ಭಾಜಿ ಮಾರ್ಕೆಟ್ ಹತ್ತಿರ ನೂತನವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ.
 ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿ ಹೊಳಿ ಅವರು, ಹಣಕ್ಕಾಗಿ  ಹೊಡೆದಾಡುತ್ತ ವೈಶ್ಯಮ್ಯ ಕಟ್ಟಿಕೊಂಡು ಸಂಬಂಧಗಳನ್ನು ಮುರಿದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಚಾಂದಖಾನ್  ತಮ್ಮ ಮಗಳಿಗೆ ಬಂದ ಪರಿಹಾರ ಧನದಲ್ಲಿ ಒಂದು ರೂಪಾಯಿಯನ್ನೂ ಬಳಕೆ ಮಾಡದೆ, ಎಲ್ಲ ಹಣವನ್ನು  ಸಾರ್ವಜನಿಕರಿಗಾಗಿ ಉಪಯೋಗಿಸಿದ್ದು, ನಿಜಕ್ಕೂ ಶ್ಲಾಘನೀಯ ಎಂದರು.

 

444  ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ
 ಡಿಸೆಂಬರ್-2
 ಬೈಲಹೊಂಗಲ : ಸಂಸದ ಪ್ರತಾಪ್ ಸಿಂಹ ಅವರ ಬೆಂಬಲಿಗರು  ಫೇಸ್ ಬುಕ್ ಪೇಜ್ ನಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮ ಹಾಗೂ ಓಬವ್ವ  ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆಂದು  ಆರೋಪಿಸಿದ ಬೈಲಹೊಂಗಲ ಕಿತ್ತೂರ ಚನ್ನಮ್ಮ, ಸಂಗೋಳ್ಳಿ  ರಾಯಣ್ಣ ಹಾಗೂ ಓಬವ್ವ ಅಭಿಮಾನಿಗಳು ಅವರನ್ನು ಗಡಿಪಾರು  ಮಾಡಬೇಕೆಂದು ಆಗ್ರಹಿಸಿದ್ದಾರೆ.
 ಪ್ರತಾಪ್ ಸಿಂಹ ದೇಶ ದ್ರೋಹಿ, ಸ್ವಾಸ್ಥ ಸಮಾಜದಲ್ಲಿ ಕಲಹ  ಸೃಷ್ಟಿಸುವ ಉಗ್ರಗಾಮಿ, ವೀರಯೋಧ ಟಿಪ್ಪು ಜಯಂತಿ  ವಿರೋಧಿಸಿ ರಾಜ್ಯಾದ್ಯಂತ ಇಸ್ಲಾಂ ಧರ್ಮಿಯರ ವಿರುದ್ಧ  ರಾಜಕೀಯ ಆಟ ನಡೆಸುತ್ತಿದ್ದಾರೆ ಎಂದು ಪ್ರತಿಭಟನಕಾರರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

333  ಪೊಲೀಸರ ಕಾರ್ಯಾಚರಣೆ ವೇಳೆ ಬಾವಿಗೆ ಬಿದ್ದ ಯುವಕ: ಸಾವು
 ಡಿಸೆಂಬರ್-2
 ಬೆಳಗಾವಿ: ಅಬಕಾರಿ ಪೊಲೀಸ್ ಕಾರ್ಯಾಚರಣೆ ವೇಳೆ ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ  ಬೆಳಗಾವಿಯ ಹೊನಗಾ ಗ್ರಾಮದ ಬಳಿ ಇಂದು ನಡೆದಿದೆ.
 ಬೆಳಗಿನ ಜಾವ ಈ ಘಟನೆ ನಡೆದಿದ್ದು ಅಡಿವೆಪ್ಪಾ(24) ಎನ್ನುವವರು ಕಳ್ಳಬಟ್ಟಿ ತೆಗೆದುಕೊಂಡು ಹೋಗುವಾಗ ಅಬಕಾರಿ  ಪೊಲೀಸರು ಚೇಸ್ ಮಾಡಿದ್ದಾರೆ. ಸಂದರ್ಭದಲ್ಲಿ ಬಾವಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
 ಅಡಿವೆಪ್ಪಾ ಸಂಬಂಧಿಕರಿಂದ ಅಬಕಾರಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ  ನಿರ್ಮಾಣವಾಗಿದ್ದು, ಶವಪರೀಕ್ಷೆ ನಡೆಸಲು ಪೋಷಕರು ಅಡ್ಡಿ ಮಾಡಿದ್ದಾರೆ. ಸ್ಥಳಕ್ಕೆ ಕಾಕತಿ ಪೊಲೀಸರು ಆಗಮಿಸಿ  ಪರಿಶೀಲನೆ ನಡೆಸುತ್ತಿದ್ದಾರೆ.

  

333  ಅಂಗನವಾಡಿ ನೌಕರರ ಪ್ರತಿಭಟನೆ
 ಡಿಸೆಂಬರ್-1
 ಗೋಕಾಕ: ಬಾಲವಿಕಾಸ ಸಮಿತಿ ಜಂಟಿ ಖಾತೆ ತೆರೆಯುವ ಆದೇಶವನ್ನು ವಿರೋಧಿಸಿ ಹಾಗೂ ಇತರ  ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ ನಡೆಸಿ ಶಿಶು  ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
 ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸೇರಿದ ಅಂಗನವಾಡಿ ಕಾರ್ಯಕರ್ತರು ಸಿಡಿಪಿಒ ಕಚೇರಿಯವರೆಗೆ  ಪ್ರತಿಭಟನಾ ಮೆರವಣಿಗೆ ನಡೆಸಿ ಸಿಡಿಪಿಒ ಅರುಣ್ ನೀರಗಟ್ಟಿ ಅವರಿಗೆ ಮನವಿ ಅರ್ಪಿಸಿದರು. ಬಾಲವಿಕಾಸ ಸಮಿತಿ  ಅಧ್ಯಕ್ಷರ ಜೊತೆ ಜಂಟಿ ಖಾತೆ ತೆರೆಯಲು ಹೇಳಲಾಗುತ್ತಿದೆ. ಈ ಹಿಂದೆ ಇಂಥದೇ ಆದೇಶ ಪ್ರಕಾರ ಜಂಟಿ ಖಾತೆ  ತೆರೆದಾಗ ಹಲವಾರು ಸಮಸ್ಯೆಗಳು ಉದ್ಭವಿಸಿವೆ ಪುನಃ ಅದೇ ಆಗುವುದು ಬೇಡ. ಹಿಂದಿನ ಪದ್ಧತಿಯೇ  ಮುಂದುವರಿಸಬೇಕು.
 ತರಕಾರಿ, ಅಡುಗೆ ಅನಿಲ ಹಣ ಮುಂಚಿತವಾಗಿ ಕಾರ್ಯಕರ್ತರ ಖಾತೆಗೆ ಜಮಾ ಮಾಡಬೇಕು, ಅಡುಗೆ ಸಲಕರಣೆ  ಹಾಗೂ ಶುದ್ಧ ಕುಡಿವ ನೀರು ಪೂರೈಸಬೇಕು, ಅಂಗನಾಡಿ ದಾಖಲೆಗಳ ಹೊರೆ ಕಡಿಮೆ ಮಾಡಬೇಕು, ಪ್ರತಿ  ತಿಂಗಳು 5ನೇ ತಾರೀಖು ಒಳಗಾಗಿ ಗೌರವಧನ ಬಿಡುಗಡೆ ಮಾಡಬೇಕು,
 ನಿವೃತ್ತಿಯಾದಾಗ ಅಂಗನವಾಡಿ ಸಿಬ್ಬಂದಿಗೆ ನಿವೃತ್ತಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಮರಣ  ಹೊಂದಿದವರಿಗೆ ಪರಿಹಾರ ಧನ ಬಿಡುಗಡೆ ಮಾಡಬೇಕು, ಗುಣಮಟ್ಟದ ಆಹಾರ ಸರಿಯಾಗಿ ಸರಬರಾಜು  ಆಗಬೇಕು ಸೇರಿದಂತೆ 17 ಬೇಡಿಕೆ ಈಡೇರಿಸಲು ಮನವಿ ಒತ್ತಾಯಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು  ಅಂಗನವಾಡಿ ಕಾರ್ಯಕರ್ತೆ ಸಂಘದ ಅಧ್ಯಕ್ಷೆ ದೊಡ್ಡವ್ವ ಪೂಜೇರಿ, ಕಾರ್ಯದರ್ಶಿ ಮುನೀರ್ ಮುಲ್ಲಾ, ಖಂಜಾಚಿ  ಕಲ್ಲಪ್ಪ ಮಾದರ ವಹಿಸಿದ್ದರು.

 

444   ಕುಲಕರ್ಣಿ ಧಮ್ಕಿ ಆರೋಪ : ಕಲಾಪ ಬಹಿಷ್ಕರಿಸಿದ ವಕೀಲರು
 ನವೆಂಬರ್-29
 ಚಿಕ್ಕೋಡಿ : ಸಚಿವ ವಿನಯ್ ಕುಲಕರ್ಣಿ ಅವರು ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಹತ್ಯೆ  ಪ್ರಕರಣದಲ್ಲಿ ತನ್ನ ವಿರುದ್ಧ ಧಾವೆ ನಡೆಸದಂತೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯ ಕಲಾಪ  ಬಹಿಷ್ಕರಿಸಿ ನ್ಯಾಯವಾದಿಗಳು ಪ್ರತಿಭಟನೆ ನಡೆಸಿದರು.
 ಸಚಿವರು ನ್ಯಾಯವಾದಿ ಆನಂದ ಬ್ಯಾಳಿ ಅವರಿಗೆ ಪ್ರಕರಣ ಕೈ ಬಿಡುವಂತೆ ಧಮ್ಕಿ ಹಾಕಿದ್ದಾರೆ. ಈ ರೀತಿ  ದೌರ್ಜನ್ಯ ತೋರಿರುವ ವಿನಯ್ ಕುಲಕರ್ಣಿ ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು. ಒಂದು  ವೇಳೆ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

 

 

444   10 ದಿನದ ಅಧಿವೇಶನಕ್ಕೆ 30 ಕೋಟಿ ಖರ್ಚು
ನವೆಂಬರ್-24
ಬೆಳಗಾವಿ : 10 ದಿನ ನಡೆದ ಚಳಿಗಾಲದ ಅಧಿವೇಶನದ ಒಟ್ಟು ಖರ್ಚು ಕೇಳಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೌಹಾರಿಬಿಟ್ಟರು. ಕಳೆದ ಬಾರಿಯ ಅಧಿವೇಶನಕ್ಕೆ ಹೋಲಿಸಿದರೆ ಈ ಬಾರಿಯ ಖರ್ಚು ದ್ವಿಗುಣಗೊಂಡಿದೆ. ಇದು ಸಿದ್ದರಾಮಯ್ಯ ಅವರ ಅನುಮಾನಕ್ಕೆ ಕಾರಣವಾಗಿದೆ.
ಒಟ್ಟಾರೆ ಅಧಿವೇಶನದ ಖರ್ಚಿನ ಲೆಕ್ಕ ಕೊಟ್ಟಿರುವ ವಿಧಾನಸೌಧದ ಸಚಿವಾಲಯ 30 ಕೋಟಿ ರೂಪಾಯಿ ಬಿಲ್ ಅನ್ನು ಸರ್ಕಾರಕ್ಕೆ ನೀಡಿದೆ. ಖರ್ಚು ನೋಡಿ ಹೌಹಾರಿದ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಬಾರಿ 18.75 ಕೋಟಿ ಖರ್ಚಾಗಿತ್ತು ಆದರೆ ಈಗ ಯಾಕೆ 30 ಕೋಟಿ ಖರ್ಚಾಗಿದೆ ಯಾವ ಯಾವದಕ್ಕೆ ಎಷ್ಟು ಖರ್ಚು ಮಾಡಿದಿರಿ ಲೆಕ್ಕ ತೋರಿಸಿ ಎಂದು ಸಿದ್ದರಾಮಯ್ಯ ಅವರು ಅಧಿಕಾರಿಗಳ ಮೇಲೆ ಹರಿಹಾಯ್ದರು.
ಒಂದು ಊಟಕ್ಕೆ ಎಷ್ಟು ಲೆಕ್ಕ ಹಾಕಿದ್ದೀರಾ? ವಸತಿಗೆಷ್ಟು, ವಾಹನಕ್ಕೆಷ್ಟು, ಎಲ್ಲ ಲೆಕ್ಕ ಕೊಡಿ ಎಂದು ಸಿದ್ದರಾಮಯ್ಯ ಸೂಚಿಸಿದರು. ಇದರಿಂದ ಅವಕ್ಕಾದ ಅಧಿಕಾರಿಗಳು ಒಂದು ಊಟಕ್ಕೆ 475 ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿದರು.
ಖರ್ಚು ವೆಚ್ಚದ ಕಡತದಲ್ಲಿ 30 ಕೋಟಿ ಹಣಕ್ಕೆ 5 ಕೋಟಿ ಜಿ.ಎಸ್.ಟಿ ಇದ್ದದ್ದು ಕಂಡ ಸಿದ್ದರಾಮಯ್ಯ ಯಾವ ಯಾವುದಕ್ಕೆ ಎಷ್ಟೆಷ್ಟು ಜಿ.ಎಸ್.ಟಿ ವಿವರಾಗಿ ನಮೂದು ಮಾಡಿ, ಇಲ್ಲವಾದರೆ ಕಡತಕ್ಕೆ ಸಹಿ ಮಾಡುವುದಿಲ್ಲ ಎಂದು ಸಚಿವಾಲಯದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಒಟ್ಟಿನಲ್ಲಿ ಸಚಿವಾಲಯ ಅಧಿಕಾರಿಗಳ 'ಬಿಲ್ವಿದ್ಯೆಗೆ' ಅವಕ್ಕಾದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಪರಾಮರ್ಶಿಸಿ ಸವಿವರವಾದ ಖರ್ಚು ವೆಚ್ಚದ ಕಡತ ಕೊಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

  

555

 ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಬಸ್ : ಇಬ್ಬರು ಸುಟ್ಟು ಭಸ್ಮ

ನವೆಂಬರ್-24
ಚಿಕ್ಕೋಡಿ : ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬಸ್ ನಲ್ಲಿದ್ದ ಇಬ್ಬರು ಪ್ರಯಾಣಿಕರು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗೋವಾದಿಂದ ಕೊಲ್ಲಾಪುರ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ನಲ್ಲಿ ಬೆಳಗಿನ ಜಾವ 3 ಗಂಟೆಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

 

 

151 ಚಳಿಗಾಲ ಅಧಿವೇಶನದಲ್ಲಿ ಖಾಲಿ ಕುರ್ಚಿಗಳ: ಸ್ಪೀಕರ್ ಅಸಮಾಧಾನ
ನವೆಂಬರ್-24
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆದ ಈ ಬಾರಿಯ ಚಳಿಗಾಲ ಅಧಿವೇಶನ ಉತ್ತರ ಕರ್ನಾಟಕ ಜನತೆಯ ನಿರೀಕ್ಷೆಗಳನ್ನು ಹುಸಿ ಮಾಡಿದೆ.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯದೆಯೇ ಈ ಭಾಗದ ಜನತೆಗೆ ಈ ಭಾಗದ ಜನತೆಯಲ್ಲಿ ನಿರಾಸೆಯನ್ನು ಮೂಡಿಸಿದೆ.
ಜನಪ್ರತಿನಿಧಿಗಳು ಕಲಾಪದಲ್ಲಿ ಭಾಗವಸಿದ್ದಕ್ಕಿಂತಲೂ ಪಕ್ಷ ಸಂಘಟನೆಯಲ್ಲಿ ಮಗ್ನರಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನು ಮೂಡಿಸಿದೆ. ಅಲ್ಲದೆ, ಸದನದಲ್ಲಿ ಖಾಲಿ ಕುರ್ಚಿಗಳನ್ನು ಕಂಡು ಸ್ಪೀಕರ್ ಕೋಳಿವಾಡ ಅವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಉತ್ತರ ಕರ್ನಾಟಕದಲ್ಲಿರುವ ಸಮಸ್ಯೆಗಳ ಕುರಿತಂತೆ ಅಧಿವೇಶನದಲ್ಲಿ ವಿಶೇಷವಾಗಿ ಚರ್ಚೆ ನಡೆಸುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಆಗ್ರಹಿಸಿದ್ದರು. ನಾಲ್ಕು ದಿನಗಳ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಭಾಗವಹಿಸಿದೇ ಸದನದಲ್ಲಿ ಕುರ್ಚಿಗಳು ಖಾಲಿಯಾಗಿದ್ದುದ್ದನ್ನು ಕಂಡ ಸ್ಪೀಕರ್ ಕೋಳಿವಾಡ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆಲಮಟ್ಟಿ ಯೋಜನೆಯಿಂದಾಗಿ ಭೂಮಿಯನ್ನು ಕಳೆದುಕೊಂಡ ರೈತರ ಸಮಸ್ಯೆಗಳ ಕುರಿತಂತೆ ಶಾಸಕ ಗೋವಿಂದ್ ಕಿರ್ಜೋಲ್, ಹೆಚ್.ವೈ.ಮೇಟಿ, ಜೆ.ಟಿ. ಪಾಟೀಲ್ ಮತ್ತು ಸಿಧು ನ್ಯಾಮಗೌಡ ಅವರು ವಿಶೇಷ ಅಧಿವೇಶ ನಡೆಸುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕೋಳಿವಾಡ ಅವರು. ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸುವಂತೆ ಆಗ್ರಹಿಸಲಾಗುತ್ತಿದೆ. ಆದರೆ, ಚರ್ಚೆ ನಡೆಸುವಂತೆ ಕೇವಲ ನಾಲ್ವರು ನಾಯಕರು ಮಾತ್ರ ಆಗ್ರಹಿಸುತ್ತಿದ್ದಾರೆ. ಕಬ್ಬು, ತೆಂಗಿನ ಬಗ್ಗೆ ಮಾತನಾಡುತ್ತಿರುವವರು ಮೆಕ್ಕೆಜೋಳ ಇತರೆ ಬೆಳೆಗಳ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಅರ್ಧಕರ್ಧ ಜನಪ್ರತಿನಿಧಿಗಳು ಕಲಾಪದಲ್ಲಿ ಭಾಗವಹಿಸದೇ ನಿರ್ಲಕ್ಷ್ಯವಹಿಸಿದ್ದು, ಬಹುದಿನದ ಬೇಡಿಕೆಯಾದ ಮಹದಾಯಿ ಸಮಸ್ಯೆ ತಾರ್ಕಿಕ ಅಂತ್ಯ ಕಾಣದಿರುವುದು, ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯದೇ ಕೇವಲ ಕಾಲಹರಣ ಮಾಡಿದ್ದಾರೆಂದು ಇದೀಗ ಜನರು ತೀವ್ರ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿನ ಜಲ್ವಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಬೆಳಗಾವಿಯಲ್ಲಿ ರಾಜ್ಯ ಸರ್ಕಾರ ಬಹುಕೋಟಿ ವೆಚ್ಚದಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಿದೆ.
ನ.13 ರಿಂದ ನ.24ರವರೆಗೆ ಒಟ್ಟು 10 ದಿನಗಳ ಕಾಲ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಚಳಿಗಾಲದ ಅಧಿವೇಶನದಲ್ಲಿ 224 ಶಾಸಕರಲ್ಲಿ ಅರ್ಧದಷ್ಟು ಶಾಸಕರು ಹಾಗೂ 75 ವಿಧಾನ ಪರಿಷತ್ ಸದಸ್ಯರಲ್ಲಿ 35ಕ್ಕೂ ಹೆಚ್ಚು ಸದಸ್ಯರು ಕಲಾಪದಿಂದ ದೂರ ಉಳಿದಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಭಾಗದ ಬಹುಬೇಡಿಕೆಯಾದ ಮಹದಾಯಿ ಸಮಸ್ಯೆಗೆ ಈ ಸಲ ಪರಿಹಾರ ಸಿಗಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಶಿಕ್ಷಣ, ರಸ್ತೆ, ವಿದ್ಯುತ್, ಆರೋಗ್ಯ, ಉದ್ಯೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತ ಪರಿಹಾರಕ್ಕೆ ಯಾವೊಬ್ಬ ಜನಪ್ರತಿನಿಧಿಗಳು ಈ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೇ ಇರುವುದು ಇದೀಗ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

 

 

 

   gg ರೋಗಿಗಳಿಂದ ಹೆಚ್ಚಿನ ಬಿಲ್ ಬರಿಸಿಕೊಂಡರೆ ದಂಡ
ನವೆಂಬರ್.23
ಬೆಳಗಾವಿ: ವಿಧಾನಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಆರೋಗ್ಯ ಸಚಿವ ರಮೇಶ್ ಕುಮಾರ್ ವೈದ್ಯಕೀಯ ಸಂಹಿತೆ ಮತ್ತು ಖಾಸಗಿ ಆಸ್ಪತ್ರೆಗಳು ಪಾಲಿಸಬೇಕಾದ ನೈತಿಕ ನಿಯಮಗಳ ಬಗ್ಗೆ ಮಾತನಾಡಿದರು. ಜತೆಗೆ, ವಿಧೇಯಕರ ಕೆಲವೊಂದು ವಿವರಗಳನ್ನು ಒದಗಿಸಿದರು.
ರೋಗಿ ಮೃತಪಟ್ಟರೆ ಬಾಕಿ ಹಣ ಪಾವತಿಗೆ ಒತ್ತಡ ಹೇರದೆ ತಕ್ಷ ಣ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಬೇಕು. ಇದು ಬಿಪಿಎಲ್, ಎಪಿಎಲ್ ಸೇರಿ ಎಲ್ಲ ವರ್ಗದವರಿಗೂ ಅನ್ವಯವಾಗುತ್ತದೆ. ಬಿಪಿಎಲ್ನವರ ಸಂಪೂರ್ಣ ಹಣವನ್ನು ಸರಕಾರ ಭರಿಸುತ್ತದೆ. ಎಪಿಎಲ್ನವರಿಗೆ ಶೇ. 30ರಷ್ಟು ವೆಚ್ಚ ನೀಡಲಾಗುತ್ತದೆ. ಅದಕ್ಕಾಗಿ ಯೂನಿವರ್ಸಲ್ ಹೆಲ್ತ್ ಸ್ಕೀಮ್ ತರಲಾಗುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸನ್ನದು ಕಡ್ಡಾಯವಾಗಲಿದೆ.
ವೈದ್ಯ ಸಂಸ್ಥೆಗಳ ನೋಂದಣಿ ಮತ್ತು ನವೀಕರಣಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚಿಸಲಾಗುತ್ತದೆ. ಅಹವಾಲು ಸಂಬಂಧವೂ ಜಿಲ್ಲಾಧಿಕಾರಿ ಅಧ್ಯಕ್ಷ ತೆಯ ಪ್ರತ್ಯೇಕ ಪ್ರಾಧಿಕಾರವಿರುತ್ತದೆ. ರೋಗಿಗಳಿಂದ ಹೆಚ್ಚಿನ ಬಿಲ್ ಪಾವತಿಸಿಕೊಂಡರೆ ದಂಡ ಹಾಕಲಾಗುತ್ತದೆ.
ನಕಲಿ ವೈದ್ಯ ಸಂಸ್ಥೆ ನಡೆಸುವವರನ್ನು ಜೈಲು ಶಿಕ್ಷೆಗೆ ಗುರಿ ಪಡಿಸುವ ಹಾಗೂ ದಂಡ ವಿಧಿಸುವುದನ್ನು ಹಳೆಯ ಕಾಯಿದೆಯಲ್ಲಿ ಇರುವಂತೆ ಮುಂದುವರಿಸಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ದರ ನಿಗದಿ ಮಾಡುವುದಿಲ್ಲ. ಬದಲಾಗಿ ಖಾಸಗಿ, ಸರಕಾರದ ಪ್ರತಿನಿಧಿಗಳು, ಸ್ವತಂತ್ರ ವ್ಯಕ್ತಿಗಳು ಹಾಗೂ ತಜ್ಞರು ಸಮಾಲೋಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಅದನ್ನು ಆಧರಿಸಿ ಸರಕಾರ ಅಧಿಸೂಚನೆ ಹೊರಡಿಸಲಿದೆ.
ವಿಧೇಯಕದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ದ ನಾಯಕ ಜಗದೀಶ ಶೆಟ್ಟರ್, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ, ಸಿ.ಟಿ. ರವಿ, ಎಚ್.ಎಸ್. ಪ್ರಕಾಶ್, ಡಿ.ಎನ್. ಜೀವರಾಜ್, ಎ.ಎಸ್.ಪಾಟೀಲ್ ನಡಹಳ್ಳಿ, ಡಾ. ಶಿವರಾಜ್ ಪಾಟೀಲ್, ರವಿ ಸುಬ್ರಹ್ಮಣ್ಯ ಇನ್ನಿತರರಿದ್ದರು.

 

333  ಜೈಲು ಶಿಕ್ಷೆ ಇಲ್ಲದೆಯೆ ವೈದ್ಯಕೀಯ ಮಸೂದೆ ವಿಧಾನಸಭೆಯಲ್ಲಿ ಮಂಡನೆ
 ನವೆಂಬರ್ -22
 ಬೆಳಗಾವಿ: ವೈದ್ಯರ ಇತ್ತೀಚಿನ ಮುಷ್ಕರದ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ   ವೈದ್ಯಕೀಯ ತಿದ್ದುಪಡಿ   ಮಸೂದೆ-2017ರಿಂದ ಖಾಸಗಿ ಆಸ್ಪತ್ರೆಗಳ ಮಾಲಿಕರು ಮತ್ತು ವೈದ್ಯರಿಗೆ ಜೈಲು   ಶಿಕ್ಷೆಯನ್ನು ಕೈಬಿಟ್ಟಿದೆ.
 ನಿನ್ನೆ ಬೆಳಗಾವಿಯ ವಿಧಾನ ಸಭೆ ಕಲಾಪದಲ್ಲಿ ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಪರಿಷ್ಕೃತ   ಮಸೂದೆಯನ್ನು ಮಂಡಿಸಿದರು. ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕಾಯ್ದೆಯನ್ನು ಉಲ್ಲಂಘಿಸಿದ ಖಾಸಗಿ   ಆಸ್ಪತ್ರೆಗಳ ವೈದ್ಯರಿಗೆ ಮತ್ತು ಮಾಲಿಕರಿಗೆ 6 ತಿಂಗಳಿನಿಂದ 5 ವರ್ಷದವರೆಗೆ ಶಿಕ್ಷೆ ನೀಡಬಹುದಾಗಿತ್ತು. ಆದರೆ   ಪರಿಷ್ಕೃತ ಮಸೂದೆಯಲ್ಲಿ 25,000ದಿಂದ 1 ಲಕ್ಷದವರೆಗೆ ದಂಡ ಮಾತ್ರ ವಿಧಿಸಲಾಗುತ್ತದೆ.

   

22

   ಸಾರಾಯಿ ನಿಷೇಧದಿಂದ ಭ್ರಷ್ಟಚಾರ ಹೆಚ್ಚಳ : ಸಿದ್ದು

ನವೆಂಬರ್-21
  ಬೆಳಗಾವಿ : ರಾಜ್ಯದಲ್ಲಿ ಸಾರಾಯಿ ನಿಷೇಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಸಿ.ಎಂ ಸಿದ್ದರಾಮಯ್ಯ    ಅವರು ಸದನಲ್ಲಿ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
 ಅವರು ಇಂದು ಮದ್ಯಪಾನ ನಿಷೇಧ ಚರ್ಚೆ ವೇಳೆ ವಿಧಾನಸಭೆಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರು  ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ನಿಷೇಧ ಮಾಡಿದ್ದರು. ಇದರಿಂದ ಪೂರ್ತಿ ಪ್ರಮಾಣದಲ್ಲಿ ಸಹಾಯವಾಗದಿದ್ದರೂ ಕೊಂಚ  ಮಟ್ಟಿನ ಬದಲಾವಣೆಯಾಗಿದೆಯಷ್ಟೆ ಅಂತ ಹೇಳಿದರು ಅವರು ನಿಷೇಧದಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಸಿ.ಎಂ ಸಿದ್ದರಾಮಯ್ಯ  ಅವರು ಹೇಳಿದರು.
 ಇದೇ ವೇಳೆ ಅವರು ಅಂದು ಸಾರಾಯಿ ಪಾಕೇಟ್ಗೆ 12 ರೂಪಾಯಿ ಇತ್ತು. ಕ್ವಾರ್ಟರ್ಗೆ 40 ರೂಪಾಯಿ ಬೆಲೆ ಇತ್ತು. ಆದರೆ,  ಸಾರಾಯಿ ನಿಷೇಧರಿಂದ ಭ್ರಷ್ಟಾಚಾರ ಜಾಸ್ತಿಯಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಭ್ರಷ್ಟಾಚಾರ ಹೆಚ್ಚಾಗುವುದನ್ನು  ತಡೆಯಬೇಕಾದ ಕರ್ತವ್ಯ ಇವರದ್ದಲ್ಲವೇ.? ಅಂತ ಸಿ.ಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಇದೇ ವೇಳೆ ಅವರು ಈಗ ಕ್ವಾರ್ಟರ್ಗೆ 70 ರೂಪಾಯಿ ಇದ್ದು. 2 ಕ್ವಾರ್ಟರ್ಗೆ 140 ರೂ.ಆಗಿದೆ. ಎಚ್ಡಿಕೆ ಸಿಎಂ ಆಗಿದ್ದಾಗ ಮದ್ಯ ನಿಷೇಧಕ್ಕೆ ಮುಂದಾಗಿದ್ರು. ಆದರೆ, ಬಿಎಸ್ ಯಡಿಯೂರಪ್ಪನವರಿಂದಲೇ ವಿರೋಧವಿತ್ತು ಎಂದು ಬಿಜೆಪಿಗೆ ಸಿಎಂ ಟಾಂಗ್ ನೀಡಿದ್ದಾರೆ.

 

 

22  ಯುವಕನಿಗೆ ಕಪಾಳಮೋಕ್ಷ ಮಾಡಿದ ಸಚಿವ ಡಿ.ಕೆ.ಶಿ
 ನವೆಂಬರ್-21
 ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳಲು ಯತ್ನ ನಡೆಸಿದ್ದ ಯುವಕನೊಬ್ಬನಿಗೆ ಸಚಿವ ಡಿ.ಕೆ.ಶಿವಕುಮಾರ್ ಅವರು ಕಪಾಳಮೋಕ್ಷ  ಮಾಡಿರುವ ಘಟನೆ ಸೋಮವಾರ ನಡೆದಿದೆ.
 ಡಿ.ಕೆ.ಶಿವಕುಮಾರ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹತ್ತಿರ ಬಂದಿರುವ ಯುವಕನೊಬ್ಬ ಸೆಲ್ಫಿ  ಕ್ಲಿಕ್ಕಿಸಿಕೊಳ್ಳಲು ಯತ್ನ ನಡೆಸಿದ್ದ. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಡಿ.ಕೆ. ಶಿವಕುಮಾರ್ ಅವರು ಕಪಾಳಮೋಕ್ಷ  ಮಾಡಿದ್ದಾರೆ.
 ಬಳಿಕ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಸಾಮಾನ್ಯ ಪರಿಜ್ಞಾನವೆಂಬುದು ಇರಬೇಕು. ಮಾಧ್ಯಮಗಳೊಂದಿಗೆ  ಮಾತನಾಡುತ್ತಾ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಂದು ಸೆಲ್ಫಿ ಹೇಗೆ ಕ್ಲಿಕ್ಕಿಸುತ್ತಾನೆ?  ಇದೆಲ್ಲಾ ಸಾಮಾನ್ಯ ಪ್ರಕರಣಗಳು ಎಂದು ತಿಳಿಸಿದ್ದಾರೆ.

 

 

 

     

ಬಿಜೆಪಿ ಗೆಲ್ಲೋದು ಖಚಿತ: ಸಂಜಯ್ ಪಾಟೀಲ್

 ನವೆಂಬರ್-20
ಬೆಳಗಾವಿ: ಬೆಳಗಾವಿಯ ಹಿರೆಬಾಗೇವಾಡಿಯಲ್ಲಿ ನಡೆಯುತ್ತಿರುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಪರೋಕ್ಷವಾಗಿ ಶಾಸಕ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದರು.
'ಕಳೆದ ನಾಲ್ಕೂವರೆ ವರ್ಷದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದಂತೆ ವ್ಯವಸ್ಥಿತವಾಗಿ ಕಾಂಗ್ರೆಸ್ ಸರ್ಕಾರ ನೋಡಿಕೊಂಡಿದೆ. ನನ್ನ ಕ್ಷೇತ್ರದ ಜನರಿಗೆ ನಿನ್ನೆ ಪ್ರವಾಸದ ಆಮೀಷವನ್ನ ಒಡ್ಡಿದ್ದಾರೆ. ಇಂಥ ಆಮಿಷ ಒಡ್ಡುವವರು, ವೋಟಿಗಾಗಿ ಸೀರೆ ಕೊಡುವವರು ಕಳ್ಳರು. ಕಾಂಗ್ರೆಸ್ ಏನೇ ಭಾಗ್ಯಗಳನ್ನು ನೀಡಿದರೂ, ಬಿಜೆಪಿ ಕಾರ್ಯಕರ್ತರು ನನ್ನನ್ನು ಗೆಲ್ಲಿಸುತ್ತಾರೆ' ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.'ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಚಾರ ವಿಚಾರ ಸಂಸ್ಕೃತಿ ಗೊತ್ತಿಲ್ಲ, ಮೀನು ತಿಂದು ಧರ್ಮಸ್ಥಳಕ್ಕೆ ಹೊಗುತ್ತಾರೆ! ಹಣ ನೀಡಿ ಸಮಾವೇಶಕ್ಕೆ ಕರೆದು ತರುವ ಪ್ರವೃತ್ತಿ ಕಾಂಗ್ರೆಸ್ ನದು. ಆದರೆ ಬಿಜೆಪಿ, ಜನರನ್ನು ಹಣ ನೀಡಿ ಸಮಾವೇಶಕ್ಕೆ ಕರೆತಂದಿಲ್ಲ'.ನವೆಂಬರ್ 2 ರಿಂದ ಆರಂಭವಾಗಿರುವ ಬಿಜೆಪಿಯ ಪರಿವರ್ತನಾ ಯಾತ್ರೆ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೂ ತೆರಳಲಿದ್ದು, ಇಂದು ಬೆಳಗಾವಿಯಲ್ಲಿ ಪ್ರಚಾರ ಸಭೆ ನಡೆಸಲಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಗಣ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

 

     

ನೈಸ್ ಒಪ್ಪಂದ ರದ್ದು, ವಿಧಾನಸಭೆಯಲ್ಲಿ ಇಂದು ಚರ್ಚೆ

 ನವೆಂಬರ್-20
ಬೆಳಗಾವಿ: ಇಂದು ನಡೆಯುತ್ತಿರುವ ಅಧಿವೇಶನದಲ್ಲಿ ನೈಸ್ ಒಪ್ಪಂದ ರದ್ದುಗೊಳಿಸುವಂತೆ ಕಾನೂನು ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದೆ ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಬಹಳಷ್ಟು ಷರತ್ತುಗಳನ್ನು ನೈಸ್ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಅಗತ್ಯಕ್ಕಿಂತಲೂ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿಗಿಂತ ಅನಧಿಕೃತ ಬೆಳವಣಿಗೆಗಳು ಹೆಚ್ಚಾಗಿವೆ. ಕೆಐಎಡಿಬಿಯ ನಿರಾಕ್ಷೇಪಣಾ ಪತ್ರ ಆಧರಿಸಿ ಭೂಸ್ವಾಧೀನದಿಂದ ಕೈಬಿಡಲಾಗಿದೆ. ಇದರಿಂದ ಕೆಲವು ಪ್ರಭಾವಿಗಳು ವ್ಯಾಪಕ ವಿಸ್ತೀರ್ಣದ ಜಮೀನನ್ನು ಬೇನಾಮಿಯಾಗಿ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೈಸ್ ಅಕ್ರಮ ಕುರಿತು ಸದನ ಸಮಿತಿ ನೀಡಿದ್ದ 392 ಪುಟಗಳ ಬೃಹತ್ ವರದಿಯನ್ನು ಕಾನೂನು ಸಚಿವ ಜಯಚಂದ್ರ ಮಂಡಿಸಿದ್ದರು. ಈ ಅಕ್ರಮಗಳ ಕುರಿತು ಸಿಬಿಐ- ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಲಾಗಿತ್ತು. ವರದಿ ಇನ್ನೂ ಲೋಕೋಪಯೋಗಿ ಇಲಾಖೆಯಲ್ಲಿ ಧೂಳು ಹಿಡಿಯುತ್ತಿದೆ. ವರ್ಷ ಕಳೆದರೂ ದಾಖಲೆ ಎ.ಜಿ ಕಚೇರಿ ತಲುಪಿಲ್ಲ. ಲೋಕೋಪಯೋಗಿ ಇಲಾಖೆ ಗೊಂದಲದಲ್ಲಿದೆ. ನೈಸ್ ಒಪ್ಪಂದ ರದ್ದು ಕುರಿತು ವಿಧಾನಸಭೆಯಲ್ಲಿಂದು ಚರ್ಚೆ ನಡೆಯಲಿದೆ.

 

22  ರಾಜ್ಯವು ಇಂದು ದೇಶದ್ರೋಹಿಗಳಿಗೆ ಸುರಕ್ಷಿತ ತಾಣ : ಹೆಗಡೆ
 ನವೆಂಬರ್-18
 ಬೆಳಗಾವಿ : ಇದೊಂದು ಧರ್ಮದ್ರೋಹಿ ಸರ್ಕಾರ, ಕರ್ನಾಟಕ ರಾಜ್ಯ ಇಂದು ದೇಶದ್ರೋಹಿಗಳಿಗೆ ಸುರಕ್ಷಿತ ತಾಣ ಎಂದು ಸಚಿವ  ಅನಂತ  ಕುಮಾರ್ ಹೆಗೆಡೆ ಹೇಳಿಕೆ ನೀಡಿದ್ದಾರೆ.
 ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಓಟು ಮತ್ತು ಸೀಟಿಗಾಗಿ ಸಿಎಂ ಸಿದ್ದರಾಮಯ್ಯ ಮತ್ತೊಬ್ಬರ ಬೂಟು  ನೆಕ್ಕಲು   ಹಿಂಜರಿಯುವದಿಲ್ಲ ಎಂದು ಹೇಳಿದ್ದಾರೆ.
  ಸಿಎಂ ಸಿದ್ದರಾಮಯ್ಯ ಕಿತ್ತೂರು ಚೆನ್ನಮ್ಮ ಜಯಂತಿಗೆ ಸಮಯ ಕೊಡುವುದಿಲ್ಲ. ಟಿಪ್ಪು ಜಯಂತಿಗೆ ಓಡೋಡಿ ಹೋಗುತ್ತಾರೆ.    ಮುಂದೊಂದು ದಿನ ಕಸಬ್, ಲಾಡೆನ್, ಹೈದರಾಲಿಗಳ ಜನ್ಮದಿನವನ್ನು ಆಚರಿಸಿ, ಮೇಣಬತ್ತಿ ಹಿಡಿದರೂ ಆಶ್ಚರ್ಯ  ಪಡಬೇಕಾಗಿಲ್ಲ ಎಂದು  ಟೀಕಿಸಿದರು.

 

 

 

  645

ಮೊಬೈಲ್ ಬ್ಯಾಟರಿ ಸ್ಪೋಟ: ಬಾಲಕಿಗೆ ಗಾಯ

ನವೆಂಬರ್-16
ಚಿಕ್ಕೋಡಿ : ಮೊಬೈಲ್ ಬ್ಯಾಟರಿ ಸ್ಪೋಟಗೊಂಡು 5 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕೋಡಿಯ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುಪ್ರಿಯಾ ನಾವಿ (5) ಗಂಭೀರ ಗಾಯಗೊಂಡಿದ್ದ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಆಟ ಆಡುವಾಗ ಮೊಬೈಲ್ ಬ್ಯಾಟರಿಯನ್ನು ನೀರು ಕಾಯಿಸುವ ಒಲೆಯಲ್ಲಿ ಹಾಕಿದ್ದಾಳೆ. ಇದರಿಂದ ಬ್ಯಾಟರಿ ಬ್ಲಾಸ್ಟ್ ಆಗಿ ಬಾಲಕಿಯ ಕಣ್ಣಿಗೆ ಗಾಯವಾಗಿದೆ.ಖಾಸಗಿ ವೈದ್ಯರ ಪ್ರತಿಭಟನೆ ನಡೆಸುತ್ತಿದ್ದರಿಂದ ಪಟ್ಟಣದಲ್ಲಿ ಚಿಕಿತ್ಸೆ ಕೊಡಿಸಲು ಕಣ್ಣಿನ ವೈದ್ಯರಿಗಾಗಿ ಪೋಷಕರು ಪರದಾಡುವಂತಾಗಿದೆ.

 

22 ಒಗ್ಗದ ಉತ್ತರ ಕರ್ನಾಟಕದ ಊಟಕ್ಕೆ 20ಕ್ಕೂ ಹೆಚ್ಚು ಪತ್ರಕರ್ತರು ಅಸ್ವಸ್ಥ
 ನವೆಂಬರ್-16
ಬೆಳಗಾವಿ : ಕೆಪಿಎಂಇ ಕಾಯ್ದೆ ವಿರೋಧಿಸಿ ವೈದ್ಯರು ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೆ ಅಧಿವೇಶನದ ವರದಿ ಮಾಡಲು ಕುಂದಾನಗರಿಗೆ ತೆರಳಿದ್ದ ಬೆಂಗಳೂರಿನ 20ಕ್ಕೂ ಹೆಚ್ಚು ಪತ್ರಕರ್ತರು ಅಸ್ವಸ್ಥಗೊಂಡಿದ್ದಾರೆ. ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದಲ್ಲಿ ಉತ್ತರ ಕರ್ನಾಟಕ ಮಾದರಿಯ ಅಡುಗೆ ಹಿಡಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ 20ಕ್ಕೂ ಹೆಚ್ಚು ಪತ್ರಕರ್ತರಿಗೆ ವಾಂತಿ-ಬೇಧಿ, ಜ್ವರ ಕಾಣಿಸಿಕೊಂಡಿದೆ.
ಅಧಿವೇಶನ ಆರಂಭವಾದ ದಿನದಿಂದಲೂ ಪತ್ರಕರ್ತರು ಅಸ್ವಸ್ಥಗೊಂಡಿದ್ದು, ಅವರಿಗೆ ಸೂಕ್ತ ಚಿಕಿತ್ಸೆಯಿಲ್ಲದೆ ನರಳಾಡುವಂತಾಗಿದೆ. ಸುವರ್ಣಸೌಧದಲ್ಲಿ ತಯಾರಿಸಿದ ಉತ್ತರ ಕರ್ನಾಟಕ ಮಾದರಿ ಊಟ ಸೇವಿಸಿದ ನಂತರ ಪತ್ರಕರ್ತರಿಗೆ ವಾಂತಿ-ಬೇಧಿ ಆರಂಭವಾಗಿರುವುದರಿಂದ ಸಭಾಧ್ಯಕ್ಷರು ಸೂಕ್ತ ಊಟ-ತಿಂಡಿ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ವರದಿಗಾರರ ಬೇಡಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ವೃತ್ತಿ ಜೀವನ ನಡೆಸುತ್ತಿರುವ ಪತ್ರಕರ್ತರು ಏಕಾಏಕಿ ಬೆಳಗಾವಿಯ ಊಟ-ತಿಂಡಿ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟ. ಆದರೂ ಅನಿವಾರ್ಯವಾಗಿ ಹೊಂದಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಅನಾರೋಗ್ಯಕ್ಕೆ ತುತ್ತಾಗಿರುವ ಪತ್ರಕರ್ತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ನಡೆಸುತ್ತಿರುವ ಮುಷ್ಕರ ಅಡ್ಡಿಯಾಗಿದೆ. ಆದರೂ ವಾರ್ತಾ ಇಲಾಖೆಯವರ ಪ್ರಥಮ ಚಿಕಿತ್ಸೆ ಪಡೆದು ಕೆಲಸ ಮಾಡಬೇಕಾಗಿದೆ. ಕೆಲ ಪತ್ರಕರ್ತರ ಸ್ಥಿತಿಯಂತೂ ತೀರ ಬಿಗಡಾಯಿಸಿದ್ದು, ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಪತ್ರಕರ್ತ ಸಮೂಹದ ಆಗ್ರಹವಾಗಿದೆ. ಕೆಲ ವರ್ಷಗಳ ಹಿಂದೆ ಬೆಳಗಾವಿ ಅಧಿವೇಶನದ ವರದಿಗೆ ತೆರಳಿದ್ದ ಬೆಂಗಳೂರಿನ ಆಂಗ್ಲ ಮಾಧ್ಯಮದ ವರದಿಗಾರರಾಗಿದ್ದ ಎನ್.ಡಿ.ಶಿವಕುಮಾರ್ ಅವರು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

 

 

  45

ಕಾಂಗ್ರಸ್ ಗೆ ಗುಡ್ ಬೈ :ಇಬ್ರಾಹಿಂ

ನವೆಂಬರ್ 16
ಬೆಳಗಾವಿ : ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷ ಮಾಡಿಕೊಂಡಿರುವ ಕೆಲವೊಂದು ಎಡವಟ್ಟುಗಳಿಂದ ಮುಂದಿನ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯತೆಗಳಿಲ್ಲ ಸಿಎಂ ಸಿದ್ದರಾಮಯ್ಯ ಅವರಿಗೆ ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅತ್ಯಾಧಿಕ ಸ್ಥಾನಗಳಲ್ಲಿ ಜಯಗಳಿಸಿದರೂ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವುದು ಅನಿವಾರ್ಯವಾಗುತ್ತದೆ. ಅದಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗಿನ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದು ಇಬ್ರಾಹಿಂ ಕಿವಿ ಮಾತು ಹೇಳಿದ್ದಾರೆ ಎನ್ನಲಾಗಿದೆ.ಶಿವಾನಂದ ಪಾಟೀಲ್ ಹಾಗೂ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಸಿಎಂ ಇಬ್ರಾಹಿಂ ಅವರು ಸಂಪುಟ ಸೇರಲು ಕಾತುರರಾಗಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಈ ಮೂವರನ್ನು ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಅಂದಿನಿಂದ ಸಿಎಂ ಜೊತೆ ಅಂತರ ಕಾಯ್ದುಕೊಂಡಿರುವ ಇಬ್ರಾಹಿಂ ಅವರು ಜಿಡಿಎಸ್ ವರಿಷ್ಠರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಸಕಾರಾತ್ಮಕ ಬೆಳವಣಿಗೆಗಳಾಗಿವೆ ಎಂದು ತಿಳಿದು ಬಂದಿದೆ.

 

 

 45

ಶಿರಾಡಿ ಘಾಟ್ನಲ್ಲಿ ವಾಹನ ಸಂಚಾರ ಬಂದ್


ನವೆಂಬರ್ 14
ಬೆಳಗಾವಿ: 'ಜನವರಿಯಿಂದ ಏಪ್ರಿಲ್ ತನಕ ಬೆಂಗಳೂರು-ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ' ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. 2ನೇ ದಿನದ ಕಲಾಪಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.'ಶಿರಾಡಿ ಘಾಟ್ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆಯಾಗಿ ಮಾಡಲು ಸರ್ಕಾರ ಉದ್ದೇಶಿಸಿದೆ. ಅರ್ಧ ಭಾಗವನ್ನು ಭಾರತೀಯ ಹೆದ್ದಾರಿ ಪ್ರಾಧಿಕಾರ ಮತ್ತೆ ಉಳಿದ 26 ಕಿ.ಮೀ. ಕಾಮಗಾರಿಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ' ಎಂದರು.'13 ಕಿ.ಮೀ ಕಾಂಕ್ರೀಟ್ ಕಾಮಗಾರಿ ಮುಗಿದಿದೆ. ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ಸ್ಥಗಿತವಾಗಿತ್ತು. ಜನವರಿಯಿಂದ ಮತ್ತೆ ಕಾಮಗಾರಿ ಆರಂಭಿಸಿ ಏಪ್ರಿಲ್ ನಲ್ಲಿ ಪೂರ್ಣಗೊಳಿಸಲಾಗುತ್ತದೆ' ಎಂದು ಸಚಿವರು ಉತ್ತರ ನೀಡಿದರು.'ಕಾಮಗಾರಿ ನಡೆಯುವ ವೇಳೆಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗುತ್ತದೆ. ಚಾರ್ಮಾಡಿ ಘಾಟ್ ಮೂಲಕ ಪರ್ಯಾಯ ರಸ್ತೆ ಸೌಲಭ್ಯ ಕಲ್ಪಿಸಲಾಗುತ್ತದೆ' ಎಂದು ಸಚಿವರು ವಿವರಣೆ ನೀಡಿದರು.ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಂಪುಹೊಳೆ ಸೇತುವೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆ ಸೇತುವೆ ತನಕ 12.37 ಕಿ.ಮೀ.ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿ ಮಾಡುವ ಕಾಮಗಾರಿ ಬಾಕಿ ಇದೆ. 

 

22

 ರೈತರಿಂದ ಸುವರ್ಣಸೌಧ ಮುತ್ತಿಗೆಗೆ ಯತ್ನ
ನವೆಂಬರ್-13
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಅನ್ನದಾತರ ಅಳಲು, ಸಾಲಮನ್ನಾ, ಕಬ್ಬಿನ ದರ ನಿಗದಿ, ರೈತರ ಬೆಳೆಗೆ ಮಾರುಕಟ್ಟೆ ಬೆಲೆ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಸುವರ್ಣ ಸೌಧಕ್ಕೆ ಇಂದು ಮುತ್ತಿಗೆ ಹಾಕುವ ಪ್ರಯತ್ನ ಮಾಡಲಾಯಿತು.

ಅಪಾರ ಸಂಖ್ಯೆಯಲ್ಲಿ ಆಗಮಿಸಿದ ರೈತರು ಸುವರ್ಣ ಸೌಧವನ್ನು ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದಾಗ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಂದಗಢದಿಂದ ಪಾದಯಾತ್ರೆ ಮೂಲಕ ಬೆಳಗಾವಿಗೆ ಆಗಮಿಸಿದ ರೈತರ ದಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಸತತ ಬರಗಾಲದಿಂದ ರಾಜ್ಯದಲ್ಲಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸಹಕಾರ ಸಂಘಗಳ ರೈತರ ಕೇವಲ 50 ಸಾವಿರ ರೂ. ಮನ್ನಾ ಮಾಡಿದೆ. ಕೃಷಿಕರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಕಬ್ಬಿಗೆ ಪ್ರತಿ ಟನ್ಗೆ 3 ಸಾವಿರ ರೂ. ದರ ನಿಗದಿ ಮಾಡಬೇಕು. ರೈತ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ದೊರೆಯುವಂತೆ ಮಾಡಬೇಕೆಂದು ಆಗ್ರಹಿಸಲಾಯಿತು.
ಪ್ರತಿ ಬಾರಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ನಾವು ಪ್ರತಿಭಟನೆ ನಡೆಸುತ್ತೇವೆ. ಯಾವುದೇ ಬೇಡಿಕೆಗಳೂ ಈಡೇರಿಲ್ಲ. ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

 

 

 

      78 

ಕರ್ತವ್ಯನಿರತ ಕಾನ್ಸ್ಟೆಬಲ್ ಸಾವು

ನವೆಂಬರ್-13
ಬೆಳಗಾವಿ: ವಿಧಾನಮಂಡಲದ ಅಧಿವೇಶನದ ಭದ್ರತೆಗೆ ನಿಯೋಜಿಸಲಾಗಿದ್ದ ಕೆಎಸ್ಆರ್ಪಿ ತುಕಡಿಯ ಕಾನ್ಸ್ಟೆಬಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ಕಾನ್ಸ್ಟೆಬಲ್ರನ್ನು ಶಿವಮೊಗ್ಗ ಕೆಎಸ್ಆರ್ಪಿ ತುಕಡಿಯ ಸಿಬ್ಬಂದಿ ತಿಪ್ಪೇಸ್ವಾಮಿ(57) ಎಂದು ಗುರುತಿಸಲಾಗಿದೆ. ಸುವರ್ಣವಿಧಾನಸೌಧದ ಭದ್ರತೆಗೆ ನಿಯೋಜಿಸಲಾಗಿದ್ದ ಕೆಎಸ್ಆರ್ಪಿ ತುಕಡಿಗೆ ಖಾನಾಪುರ ಪಂಚಾಯ್ತಿ ಕಲ್ಯಾಣಮಂಟಪದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭದ್ರತೆಗಾಗಿ ನಿನ್ನೆಯೇ ಬೆಳಗಾವಿಗೆ ಆಗಮಿಸಿದ್ದ ತುಕಡಿ ಕಲ್ಯಾಣ ಮಂಟಪದಲ್ಲಿ ಬೀಡು ಬಿಟ್ಟಿದ್ದ ವೇಳೆ ತಿಪ್ಪೇಸ್ವಾಮಿಗೆ ಹೃದಯಾಘಾತವಾಗಿದೆ. ತಕ್ಷಣ ಸಹೋದ್ಯೋಗಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

       78 

 ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಎಚ್ ಡಿ ಕೆ

ನವೆಂಬರ್-13
ಬೆಳಗಾವಿ : ಕೃಷ್ಣ ನದಿ ನೀರು ಸದ್ಬಳಕೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಬಗ್ಗೆ ಕೈಗೊಂಡ ಯೋಜನೆ ಮತ್ತು ಕಾರ್ಯ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ರಾಜಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಕೃಷ್ಣ ನದಿ ನೀರಿನ ಪಾಲನ್ನು ಎಷ್ಟು ಸದ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ಎಷ್ಟು ಗುರಿ ತಲುಪಲಾಗಿದೆ, ಬಿ ಸ್ಕೀಮ್ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೈಗೊಂಡ ಕಾರ್ಯಕ್ರಮಗಳ ವೇಗ ಮೊದಲಾದವುಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನ ರಾಜ್ಯ ಸರ್ಕಾರದ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಕೊನೆಯ ಅಧಿವೇಶನವಾಗಿದ್ದು, ಅರ್ಥಪೂರ್ಣವಾಗಿ ನಡೆಯಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಹತ್ತರ ಚರ್ಚೆ ನಡೆದು ಪರಿಹಾರ ದೊರೆಯಬೇಕು ಎಂದು ಹೇಳಿದರು. ನಿರೀಕ್ಷೆ ಮತ್ತು ಭಾವನೆಗಳಿಗೆ ತಕ್ಕಂತೆ ಅಧಿವೇಶನ ನಡೆಯಬೇಕು. ಕಾಟಾಚಾರಕ್ಕೆ ಅಧಿವೇಶನ ನಡೆಯುತ್ತದೆ ಎಂಬ ಭಾವನೆ ಹೋಗಲಾಡಿಸಬೇಕು. ಕಳೆದ ಮೂರೂವರೆ ವರ್ಷಗಳಿಂದ ನಾಡಿನ ರೈತರು ಸಂಕಷ್ಟದಲ್ಲಿದ್ದು, ಅತಿವೃಷ್ಟಿ, ಅನಾವೃಷ್ಟಿ ಎರಡರಿಂದಲೂ ಬೆಳೆ ಹಾನಿ ಸಂಭವಿಸಿದೆ. ಬೆಳೆದ ಬೆಳೆಗೆ ಬೆಲೆಯಿಲ್ಲದ ಪರಿಸ್ಥಿತಿ ಇದೆ ಎಂದರು. ಕಬ್ಬಿಗೆ ಯೋಗ್ಯ ಬೆಲೆ ನಿಗದಿ ಮಾಡಿಲ್ಲ. ಮೆಕ್ಕೆಜೋಳ, ಶೇಂಗಾ ಮುಂತಾದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರೊಂದಿಗೆ ಚೌಕಾಸಿ ಮಾಡುತ್ತಿದ್ದಾರೆ. ಸಕ್ಕರೆ ಬೆಲೆ ಹೆಚ್ಚಿದ್ದರೂ ಯೋಗ್ಯ ಬೆಲೆ ನೀಡುತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚುವ ವಾತಾವರಣ ನಿರ್ಮಿಸಿ ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರು ಹಿಡಿತ ಸಾಧಿಸಲು ಹೊರಟಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂದರು. ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇವರು ಯಾವಾಗ ನಿಯೋಗ ಕೊಂಡೊಯ್ಯುತ್ತಾರೆ, ಯಾವಾಗ ಬೆಂಬಲ ಬೆಲೆ ನಿಗದಿಪಡಿಸುತ್ತಾರೆ ಎಂದು ಪ್ರಶ್ನಿಸಿದರು.

 

                          

       ಗಣಪತಿ ಪ್ರಕರಣದಲ್ಲಿಜಾರ್ಜ್

             ರಾಜೀನಾಮೆ ಇಲ್ಲ

ನವೆಂಬರ್-13

ಬೆಳಗಾವಿ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಈಗಾಗಲೇ ರಾಜೀನಾಮೆ ನೀಡಿದ್ದರು. ಈಗ ಮತ್ತೊಮ್ಮೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಚಿವ ಎಂ.ಆರ್.ಸೀತಾರಾಂ ಸ್ಪಷ್ಟಪಡಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿ, ಜಾರ್ಜ್ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ. ಸಿಐಡಿ ಈ ಪ್ರಕರಣದಲ್ಲಿ ಕ್ಲೀನ್ಚಿಟ್ ಕೊಟ್ಟಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಸತ್ಯಾಂಶ ಹೊರಬರಲಿದೆ. ಅವರು ಮತ್ತೊಮ್ಮೆ ರಾಜೀನಾಮೆ ಕೊಡುವ ಅಗತ್ಯವೇನಿದೆ ಎಂದು ತಿಳಿಸಿದರು.


ಸಿಎಂ ವಿರುದ್ಧ ಈಶ್ವರಪ್ಪ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಯೋಚಿಸಿ ಮಾತನಾಡುವುದಿಲ್ಲ. ಮಾತನಾಡಿದ ಬಳಿಕ ಯೋಚಿಸುತ್ತಾರೆ. ಅವರ ಮಾತು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಅವರ ಬಗ್ಗೆ ನಾನು ಮಾತನಾಡಿದರೆ ಅವರಿಗೂ ನನಗೂ ವ್ಯತ್ಯಾಸವಿರುವುದಿಲ್ಲ ಎಂದು ತಿಳಿಸಿದರು.

77   ಎಂ.ಬಿ.ಪಾಟೀಲ್ ಪ್ರತಿಕೃತಿಗೆ ಚಪ್ಪಲಿ ಹಾರ
 ನವೆಂಬರ್ 11
ಚಿಕ್ಕೋಡಿ : ಪ್ರತ್ಯೇಕ ಧರ್ಮ ಬೇಡಿಕೆ ಇರಿಸಿಕೊಂಡು ಮಾಡಿದ್ದ ಬೃಹತ್ ಲಿಂಗಾಯತರ ಸಮಾವೇಶದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರು ಬಿಜೆಪಿ ಲೋಕಸಭಾ ಸದಸ್ಯ ಪ್ರಭಾಕರ್ ಕೋರೆ ಅವರ ವಿರುದ್ಧ ಲಘುವಾದ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಚಿಕ್ಕೋಡಿಯಲ್ಲಿ ಎಂ.ಬಿ.ಪಾಟೀಲ್ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಯಿತು.
ಚಿಕ್ಕೋಡಿಯ ಪರಟಿ ಲಿಂಗೇಶ್ವರ ಸ್ವಾಮಿ ದೇವಾಲಯದಿಂದ ಪ್ರಾರಂಭಗೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಘೊಷಣೆಗಳನ್ನು ಕೂಗಿದರು ಹಾಗೂ ಚಪ್ಪಲಿ ಹಾರ ಹಾಕಿದ್ದ ಎಂ.ಬಿ.ಪಾಟೀಲ್ ಅವರ ಪ್ರತಿಕೃತಿಯನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡಿದರು.
ಪ್ರತಿಭಟನೆಯಲ್ಲಿ ನಿಡಸೋಸಿ ಮಠದ ಪಂಚಮ ಲಿಂಗೇಶ್ವರ ಸ್ವಾಮೀಜಿ ಹಾಗೂ ಇನ್ನು ವಿವಿಧ ಮಠದ ಸ್ವಾಮಿಗಳು ಪಾಲ್ಗೊಂಡಿದ್ದರು. ಜೊತೆಗೆ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ದುರ್ಯೋದನ ಐಹೊಳೆ, ರಾಜು ಕಾಗೆ, ಪಿ.ರಾಜೀವ್ ಭಾಗವಹಿಸಿದ್ದರು.
ಅಂತಿಮವಾಗಿ ಸಚಿವ ಎಂ.ಬಿ.ಪಾಟೀಲ್ ಅವರ ಪ್ರತಿಕೃತಿಯನ್ನು ಧಹಿಸಲಾಯಿತು.

 

22       ಮಹಾರಾಷ್ಟ್ರ ಸಚಿವರನ್ನು ಆಹ್ವಾನಿಸಿದ ಎಂಇಎಸ್
 ನವೆಂಬರ್- 10
ಬೆಳಗಾವಿ : ಕರ್ನಾಟಕ ಸರ್ಕಾರದ ವಿಧಾನಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಮಹಾಮೇಳಾವ ಆಯೋಜನೆ ಮಾಡಲಿದೆ. ಮಹಾಮೇಳಾವಕ್ಕೆ ಮಹಾರಾಷ್ಟ್ರದ ಸಚಿವರನ್ನು ಆಹ್ವಾನಿಸಲಾಗಿದೆ.
ನವೆಂಬರ್ 13 ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ದಿನ ಮರಾಠಿ ಮಹಾ ಮೇಳಾವ ಆಯೋಜಿಸಲು ಎಂಇಎಸ್ ಸಿದ್ಧತೆ ನಡೆಸಿದೆ.
ಈ ಮೇಳಾವ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಸಲಾಗುತ್ತಿದೆ. ಅವರ ಕೈಯಿಂದ ಭಾಷಾ ವೈಷಮ್ಯದ ಭಾಷಣ ಮಾಡಿಸಲು ಎಂಇಎಸ್ ನಾಯಕರು ಉದ್ದೇಶಿಸಿದ್ದು, ಮಹಾರಾಷ್ಟ್ರದ ನಾಯಕರಿಗೆ ಆಹ್ವಾನವನ್ನು ನೀಡಿದ್ದಾರೆ.
ಈ ಬಾರಿ ಮಹಾಮೇಳಾವಗೆ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ ದಾದಾ ಪಾಟೀಲ ಮುಖ್ಯ ಅತಿಥಿಯಾಗಿ ಬರುತ್ತಿದ್ದಾರೆ. ಕಂದಾಯ ಖಾತೆಯ ಜೊತೆ ಮಹಾರಾಷ್ಟ್ರದ ಗಡಿ ಉಸ್ತುವಾರಿ ಮಂತ್ರಿಯೂ ಇವರೇ ಆಗಿದ್ದಾರೆ. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಧನಂಜಯ ಮುಂಡೆ ಅವರನ್ನು ಕೂಡಾ ಆಹ್ವಾನಿಸಲಾಗಿದೆ.
ಕಳೆದ ವರ್ಷ ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಂ ಅವರು ಮರಾಠಿ ಮೇಳಾವದಲ್ಲಿ ಮಹಾರಾಷ್ಟ್ರದ ನಾಯಕರು, ಮಂತ್ರಿಗಳು ಭಾಗವಹಿಸದಂತೆ ನಿಷೇಧ ಹೇರಿದ್ದರು. ಕರ್ನಾಟಕದ ಪೋಲೀಸರು ಮಹಾರಾಷ್ಟ್ರದ ನಾಯಕರನ್ನು ಕಾಗಲ್ ಗ್ರಾಮದಲ್ಲಿ ತಡೆದು, ವಾಪಸ್ ಕಳುಹಿಸಿದ್ದರು.
ಈ ಬಾರಿ ಮಹಾ ನಾಯಕರಿಗೆ ಯಾವುದೇ ರೀತಿಯ ನಿಷೇಧ ಇಲ್ಲವಾಗಿದೆ. ಮೇಳಾವದಲ್ಲಿ ಮೇಯರ್ ಮತ್ತು ಎಂಇಎಸ್ ನಗರ ಸೇವಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಮೌಖಿಕ ಸೂಚನೆ ನೀಡಿದೆ.
ಈಗಾಗಲೇ ಎಂಇಎಸ್ ಮೇಳಾವಕ್ಕೆ ಅನುಮತಿ ನೀಡುವಂತೆ ಕೋರಿ ಬೆಳಗಾವಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

 

 

 

   

ಬೈಕ್ ಅಪಘತಾದಲ್ಲಿ ಬಾವಿಗೆ ಸಾವರ ಸ್ಥಳದಲ್ಲೆ ಸಾವು

ನವೆಂಬರ್-9

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮೀರಾಪೂರಹಟ್ಟಿ ಗ್ರಾಮದ ಹೊರ ವಲಯದ ಪಾಳು ಬಾವಿಯೊಂದಕ್ಕೆ ಬೈಕ್ ಸವಾರರು ಬಿದ್ದಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಲಕ್ಕಪ್ಪ ಬೂದಿಹಾಳ ಸ್ಥಳದಲ್ಲೆ ಸಾವನಪ್ಪಿದ್ದಾರೆ ಹಿಂಬದಿಯಲ್ಲಿ ಕುಳಿತಿದ್ದ ಅಕ್ಕವ್ವ ಖೋತ್ ಎಂಬ ಮಹಿಳೆ ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 130 ಅಡಿ ಅಳದ ಬಾವಿಗೆ ಬೈಕ್ ಬಿದ್ದ ವೇಳೆ ಸನಿಹದಲ್ಲಿ ಯಾರೂ ಇರದ ಕಾರಣ ಹಲವು ಗಂಟೆಗಳ ಕಾಲ ಅಕ್ಕವ್ವ ಖೋತ್, ಲಕ್ಕಪ್ಪ ಬೂದಿಹಾಳನ ಶವದ ಜೊತೆ ಬಾವಿಯೊಳಗೆ ಇದ್ದರೆನ್ನಲಾಗಿದೆ. ಅಕ್ಕವ್ವ ಖೋತ್ ಸಹಾಯಕ್ಕಾಗಿ ಜೋರಾಗಿ ಕಿರುಚಾಟ ನಡೆಸಿದ್ದು, ಇದನ್ನು ಕೇಳಿ ಕೆಲ ಗ್ರಾಮಸ್ಥರ ಸಹಕಾರದಿಂದ ಆಕೆಯನ್ನು ರಕ್ಷಿಸಿದ್ದಾರೆ.ಇಂದು ಬೆಳಿಗ್ಗೆ ಬೈಕ್ ಹಾಗೂ ಲಕ್ಕಪ ಶವ ಹೊರ ತೆಗೆಯಲಾಗಿದ್ದು, ಗಾಯಗೊಂಡಿದ್ದ ಅಕ್ಕವ್ವ ಖೋತ್ ರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

11 ಎಂಇಎಸ್ ನಿಂದ 10 ದಿನದ ಮಹಾ ಮೇಳ ಆಯೋಜನೆ
 ನವೆಂಬರ್-8
ಬೆಳಗಾವಿ : ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕ ವಿಧಾನಸಭೆ ಚಳಿಗಾಲದ ಅಧಿವೇಶನದ ಮೊದಲ ದಿನ ಮಹಾ ಮೇಳಾವ ಆಯೋಜನೆ ಮಾಡಲು ನಿರ್ಧರಿಸಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಬೆಳಗಾವಿ ಪೊಲೀಸರಿಗೆ ಮನವಿ ಮಾಡಿದೆ.
ನ.13ರಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ದಿನ ಮಹಾ ಮೇಳಾವ ಆಯೋಜನೆ ಮಾಡಲು ಎಂಇಎಸ್ ನಿರ್ಧರಿಸಿದೆ.
ಬೆಳಗಾವಿಯಲ್ಲಿ ಮಹಾ ಮೇಳಾವ ಆಯೋಜನೆ ಮಾಡಲು ಅನುಮತಿ ನೀಡುವಂತೆ ಕೋರಿ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ನ.1ರ ಕನ್ನಡ ರಾಜ್ಯೋತ್ಸವದ ದಿನದಂದು ಸಹ ಎಂಇಎಸ್ ಕರಾಳ ದಿನಾಚರಣೆಯನ್ನು ಆರಿಸಿತ್ತು.
ಎಂಇಎಸ್ ಬೆಂಬಲಿಸಿದ ಮೇಯರ್ ವಿರುದ್ಧ ಕ್ರಮ: ರಮೇಶ್ ಜಾರಕಿಹೊಳಿ
ಮಹಾ ಮೇಳಾವ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದ ರಾಜಕೀಯ ನಾಯಕರನ್ನು ಆಹ್ವಾನಿಸಲು ಎಂಇಎಸ್ ನಿರ್ಧರಿಸಿದೆ. ಸಚಿವ ಜಯಂತ ಪಾಟೀಲ, ವಿರೋಧ ಪಕ್ಷದ ನಾಯಕ ಧನಂಜ ಮುಂಡೆ ಸೇರಿದಂತೆ ವಿವಿಧ ನಾಯಕರನ್ನು ಕರೆಸಲು ನಿರ್ಧರಿಸಲಾಗಿದೆ.

 

 

 

      

 

ಸಿಎಂನನ್ನು ಪಾಕಿಸ್ಥಾನಕ್ಕೆ ಕಳುಹಿಸಿದ್ರೆ ತಪ್ಪಿಲ್ಲ: ಸಂಜಯ್ ಪಾಟೀಲ್

ನೆವಂಬರ್ 07 

ಬೆಳಗಾವಿ: ಅವ್ನ ಜಾತಿ ಯಾವುದು ..ಸಿದ್ದರಾಮಯ್ಯನನ್ನು ಪಾಕಿಸ್ಥಾನಕ್ಕೆ ಕಳುಹಿಸಿದರೂ ತಪ್ಪಿಲ್ಲ..ಇದು ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ ಪರಿ .ಮಂಗಳವಾರ ಟಿಪ್ಪು ಜಯಂತಿ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಜಯ್ ಪಾಟೀಲ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.'ಸ್ವಾತಂತ್ರ್ಯ ಬಂದು 70 ವರ್ಷಗಳಾಗಿವೆ. ಎಷ್ಟೊಂದ್ ಜನ ಮುಖ್ಯಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಒಮ್ನೆ ಬುದ್ಧಿವಂತ ಮುಖ್ಯಮಂತ್ರಿ ಅದ್ಕೊಂಡಿದ್ದಾರೆ'ಎಂದರು'ನಾವು ನೀನ್ ಯಾರಾ ಎಂದು ಕೇಳಬೇಕಾಗುತ್ತೆ.ಇದೇ ರೀತಿ ಹಿಂದೂ ವಿರೋಧಿ ಧೋರಣೆ ತೋರಿದರೆ ಸಿದ್ದರಾಮಯ್ಯ ರನ್ನು ಪಾಕಿಸ್ಥಾನಕ್ಕೆ ಕಳುಹಿಸಿದರೂ ತಪ್ಪಿಲ್ಲ' ಎಂದು ಗುಡುಗಿದರು.ಇದೇ ವೇಳೆ 'ನಾವು ಮುಸಲ್ಮಾನ ವಿರೋಧಿ ಅಲ್ಲ. ಟಿಪ್ಪು ಸುಲ್ತಾನ ವಿರೋಧಿಗಳು' ಎಂದರು.

 

 


 

 

 

55  ಹೊತ್ತಿ ಉರಿದ ವಾಹನಗಳು
 ನವೆಂಬರ್-3
ಬೆಳಗಾವಿ : ನಗರದ ಜನತೆಯನ್ನು ಕೆಲ ಕಾಲ ಆತಂಕಕ್ಕೀಡು ಮಾಡಿದ್ದ ಘಟನೆಯೊಂದು ಮಾಳಮಾರುತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಳೇ ಗಾಂಧಿನಗರದ ರಸ್ತೆ ಬದಿ ನಿಲ್ಲಿಸಲಾಗಿದ್ದ ಟಾಟಾಏಸ್ ವಾಹನ ಹಾಗೂ ಎರಡು ಕಾರುಗಳು ನಿಲ್ಲಿಸಿದ್ದ ಜಾಗದಲ್ಲಿ ಕಸಕ್ಕೆ ಹಾಕಿದ್ದ ಬೆಂಕಿ ಕಾರಿಗೆ ತಾಗಿ ಇದರ ಕಿಡಿ ಅಲ್ಲಿದ್ದ ವಾಹನಗಳಿಗೂ ಆವರಿಸಿದ ಪರಿಣಾಮ ಈ ಘಟನೆ ನಡೆದಿದೆ.
ಬೆಳ್ಳಂಬೆಳಗ್ಗೆ ಈ ಅವಘಡಿದಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಅವಘಡ ಸಂಭವಿಸಿದ ಕೆಲವೇ ಅಂತರದಲ್ಲಿ ಗ್ಯಾಸ್ ಬಂಕ್ ಇದ್ದುದರಿಂದ ಗಾಂಧಿನಗರ ಜನ ಭಯಭೀತರಾಗಿದ್ದರು. ಸ್ಥಳೀಯರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಸ್ಥಳಕ್ಕೆ ಬೇಗ ಆಗಮಿಸಲಿಲ್ಲ ಎಂಬ ಆರೋಪ ಸಹ ಕೇಳಿ ಬಂದಿದೆ.

 

                                                                                                                                                                                                                                                                            

ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು 2 ಮೃತ

 

ನವೆಂಬರ್.2

ಕುಡಚಿ: ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ಮಾವರಕರ ತೋಟದಲ್ಲಿ ನೀರು ತರಲು ಹೋದ ಸಹೋದರಿಯರಿಬ್ಬರು ಕೃಷಿ ಹೊಂಡದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.
ಮಂಜುಳಾ ಶಿವಪ್ಪ ಮಾಳಿ(16) ಹಾಗೂ ನಿರ್ಮಲಾ ಶಿವಪ್ಪ ಮಾಳಿ(11) ಮೃತರು. ಬುಧವಾರ ಬೆಳಗ್ಗೆ ಶಾಲೆಗೆ ಹೋಗಿ ರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಿದ್ದ ಇವರು ನೀರು ತರಲು ಕೃಷಿ ಹೊಂಡಕ್ಕೆ ಹೋಗಿದ್ದರು. ಅಕ್ಕ ಮಂಜುಳಾ ಮೊದಲು ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ತಂಗಿ ನಿರ್ಮಲಾ ಕೂಡ ಕಾಲು ಜಾರಿ ಬಿದ್ದಿದ್ದಾಳೆ.

 

 

                                                                                           

ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆ

ನವೆಂಬರ್.1

 

ಬೆಳಗಾವಿ : ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆ ಮಾಡಲು ಎಂಇಎಸ್ ಗೆ ನಗರ ಪೊಲೀಸ್ ಕಮೀಷನರ್ ಷರತ್ತು ಬದ್ಧ ಅನುಮತಿ ನೀಡಿದ್ದಾರೆ.ರಾಜ್ಯದೆಲ್ಲೆಡೆ ಕನ್ನಡ ಸಂಭ್ರಮ ಮೊಳಗಿದರೆ ಗಡಿನಾಡಿನಲ್ಲಿ ಎಂಇಎಸ್ ಕರಾಳ ದಿನಾಚರಣೆಯನ್ನು ಆಚರಿಸಲಿದೆ. ಈ ಜಾಥದಲ್ಲಿ ಮಹಾರಾಷ್ಟ್ರದ ಕೆಲವು ಮುಖಂಡರು ಭಾಗಿಯಾಗುವ ಸಾಧ್ಯತೆಗಳು ಇದೆ.ಕನ್ನಡಿಗರ ವಿರುದ್ಧ ಪ್ರಚೋಧನಕಾರಿ ಭಾಷಣ, ಘೋಷಣೆ ಕೂಗದಂತೆ ಹಲವು ಷರತ್ತು ಪೊಲೀಸರು ವಿಧಿಸಿದ್ದಾರೆ. ಅಲ್ಲದೇ ಐದು ಲಕ್ಷ ರೂ. ಶೂರಿಟಿಯನ್ನು ಪಡೆಯಲಾಗಿದೆ. ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

 

 

 

 

rr  ಬೆಳಗಾವಿಯಷ್ಟೇ ಅಲ್ಲ, ಕಾರವಾರ, ನಿಪ್ಪಾಣಿ ಕೂಡ ನಮ್ಮದೇ : ಫಡ್ನವಿಸ್
 ಅಕ್ಟೋಬರ್-31
ಬೆಳಗಾವಿ : ಗಡಿನಾಡಿನಲ್ಲಿ ನಾಡವಿರೋಧಿಗರ ಪುಂಡಾಟ ಮಿತಿಮೀರಿ ಬೆಳೆಯುತ್ತಿದೆ. ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಯುವಕರು ಹೇಳುವ ದೊಡ್ಡೊಂದು ದುಷ್ಟ ಅಭಿಯಾನವು ಕುಂದಾನಗರಿಯಾದ್ಯಂತ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪುಂಡರ ರೋಷಾವೇಶದ ಹೇಳಿಕೆಗಳು ರಾರಾಜಿಸುತ್ತಿವೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಹಾರಾಷ್ಟ್ರ ಮುಖ್ಯಮತ್ತಿ ದೇವೇಂದ್ರ ಫಡ್ನವಿಸ್ ಅವರು ನಾಡವಿರೋಧಿ ಮರಾಠಿಗರ ಪುಂಡಾಟಕ್ಕೆ ಧ್ವನಿಗೂಡಿಸಿದ್ದಾರೆ. ಬೆಳಗಾವಿಯಷ್ಟೇ ಅಲ್ಲ, ಕಾರವಾರ, ನಿಪ್ಪಾಣಿ ಮೊದಲಾದ ಅನೇಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಸಿಎಂ ಫಡ್ನವಿಸ್ ಹೇಳಿಕೆ ನೀಡುವ ಮೂಲಕ ಉದ್ಧಟತನ ಪ್ರದರ್ಶಿಸಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರ ಮೇಲೆ ನಿರಂತರ ಅನ್ಯಾಯ ನಡೆಯುತ್ತಿದೆ. ಅಲ್ಲಿಯ ಯುವ ಮರಾಠ ಸಮುದಾಯದವರು ಕರ್ನಾಟಕದ ವಿರುದ್ಧ ಧ್ವನಿ ಎತ್ತುತ್ತಿರುವುದು ನ್ಯಾಯಯುತವಾಗಿಯೇ ಇದೆ ಎಂದು ಬಿಜೆಪಿ ಮುಖಂಡರೂ ಆಗಿರುವ ದೇವೇಂದ್ರ ಫಡ್ನವಿಸ್ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ.
ಬೆಳಗಾವಿಯನ್ನು ಕರ್ನಾಟಕದಿಂದ ಬೇರ್ಪಡಿಸಬೇಕು ಎಂದು ಒತ್ತಾಯಿಸುವ ಮರಾಠಿಗರ ನಾಡವಿರೋಧಿ ಧೋರಣೆ ಹಾಗೂ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಅವರ ಉದ್ಧಟತನದ ಹೇಳಿಕೆಗಳ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

11  ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
 ಅಕ್ಟೋಬರ್-30
ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಯಲ್ಲಮ್ಮ ದೇವಿ ಮೂರ್ತಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಮೂರ್ತಿ ಮೇಲೆ ಇದ್ದ ಬಂಗಾರ, ಬೆಳ್ಳಿ ಹಾಗೂ ತಾಮ್ರದ ಮೂರ್ತಿ ಸೇರಿದಂತೆ ಸುಮಾರು 3 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಈ ಘಟನೆಯಿಂದಾಗಿ ನಿಡಗುಂದಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಈ ಯಲ್ಲಮ್ಮ ದೇವಿಗೆ ಪೂಜಾ ಮಾಡುವುದರಲ್ಲಿ ಅರ್ಚಕ ಮಾರುತಿ ಕಲ್ಲಾಪ್ಪ ಭಂಡಾರಿ ಹಾಗೂ ಅವರ ಸಂಬಂಧಿಕರಲ್ಲಿ ಭಿನ್ನಾಭಿಪ್ರಾಯಗಳು ಇದ್ದವು. ಇದರಿಂದ ಇವರ ಕುಟುಂಬದವರೇ ಈ ಕೃತ್ಯ ಎಸಗಿದ್ದಾರೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

 

 

 

33  ತೆಲಗಿ ಶವ ಹುಟ್ಟೂರಿಗೆ ರವಾನೆ
 ಅಕ್ಟೋಬರ್- 28
ಬೆಳಗಾವಿ: ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂಲಾಲ್ ತೆಲಗಿ ಶವ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಖಾನಾಪೂರಕ್ಕೆ ಸಾಗಿಸಲಾಗಿದೆ. ಈ ವೇಳೆ ತೆಲಗಿ ಕುಟುಂಬಸ್ಥರು ಒಬ್ಬರಿಗೊಬ್ಬರು ಗಲಾಟೆ ನಡೆಸಿದ್ದಾರೆ. ಕರೀಂ ಲಾಲ್ ತೆಲಗಿ ಮಗಳು ಮತ್ತು ತೆಲಗಿ ತಮ್ಮನ ನಡುವೆ ವಾಗ್ವಾದ ನಡೆದಿದ್ದು, ಆಸ್ತತ್ರೆಯಲ್ಲಿ ಇದ್ದಾಗ ನೋಡಲು ಬಾರದ ನೀವು ಈಗ ಅಂತ್ಯ ಕ್ರಿಯೆಗೆ ಬಂದಿದ್ದೇಕೆ ಎಂದು ತೆಲಗಿ ಮಗಳು ಸನಾ ಚಿಕ್ಕಪ್ಪನಿಗೆ ತರಾಟೆಗೆ ತೆಗೆದುಕೊಂಡರು.
ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂಲಾಲ್ ತೆಲಗಿ (56) ಗುರುವಾರ ಬಹು ಅಂಗ ವೈಫಲ್ಯದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

 

 

 

  

 

   ವೈದ್ಯನ ಯಡವಟ್ಟಿನಿಂದ ರೋಗಿ                        ಪರದಾಟ

 ಅಕ್ಟೋಬರ್.28
ಚಿಕ್ಕೋಡಿ: ಶಂಕರ್ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಬಳಿಯ ಗೋಟುರು ಗ್ರಾಮದ ನಿವಾಸಿ. ಕಳೆದ ತಿಂಗಳು ಸಣ್ಣದಾಗಿ ಜ್ವರ ಕಾಣಿಸಿಕೊಂಡಿದೆ ಎಂದು ಸಂಕೇಶ್ವರ ಪಟ್ಟಣದ ಗುರುನಾಥ್ ಕ್ಲಿನಿಕ್'ಗೆ ಬಂದಿದ್ದಾರೆ. ಇವರನ್ನ ತಪಾಸಣೆ ಮಾಡಿದ ವೈದ್ಯ ಗುರುನಾಥ್ ಎರಡು ಇಂಜಕ್ಷನ್ ಕೊಟ್ಟು ಮಾತ್ರೆ ನೀಡಿ ಗುಣವಾಗುತ್ತೆ ಎಂದು ಕಳುಹಿಸಿಕೊಟ್ಟಿದ್ದಾರೆ. ಆದರೆ ಆಗಿದ್ದೇ ಬೇರೆ ಆ ವೈದ್ಯ ಮಹಾಶಯ ಸೂಜಿ ಚುಚ್ಚಿದ ಜಾಗದಲ್ಲಿ ಕಿವು ಸೋರೋಕೆ ಪ್ರಾರಂಭವಾಗಿದೆ ಮತ್ತೆ ಹೋಗಿ ಡಾ ಗುರುನಾಥ್'ಗೆ ಕೇಳಿದರೆ ಬೇರೆ ಆಸ್ಪತ್ರೆಗೆ ರೆಪರ್ ಮಾಡಿದ್ದಾನೆ.ಆಪರೇಷನ್ ಮಾಡಿಸಿಕೊಂಡ ಶಂಕರ್ ಈಗ ಹಾಸಿಗೆ ಹಿಡಿದಿದ್ದಾರೆ.ಇನ್ನು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷಮೆಂಟ್ ಖಾಯಿದೆ ಪ್ರಕಾರ ಹೊಮಿಯೋಪತಿ ಕಲಿತ ಡಾಕ್ಟರ್ ಅಲೋಪತಿ ಮಾಡೋಹಾಗಿಲ್ಲ. ಆದರೆ ಹೋಮಿಯೋಪತಿ ಡಾಕ್ಟರ್ ಗುರುನಾಥ್ ಆಲೋಪತಿ ಟ್ರೀಟ್ಮೇಂಟ್ ಕೊಡ್ತಿದ್ದಾನೆ. ಆದ್ರೆ, ಡಾಕ್ಟರ್ ಗುರುನಾಥ್ ಮಾತ್ರ ಹೇಳೋದೇ ಬೇರೆ. ವೈದ್ಯನ ಯಡವಟ್ಟಿಗೆ ಹಾಸಿಗೆ ಹಿಡಿದ ಶಂಕರ್ ನ್ಯಾಯಕ್ಕಾಗಿ ಸಂಕೇಶ್ವರ ಠಾಣೆ ಮೆಟ್ಟಿಲೇರಿದ್ದಾರೆ. ವೈದ್ಯಕೀಯ ಕಾನೂನು ಗಾಳಿಗೆ ತೂರಿ ಬಡವರ ಜೀವದ ಜೊತೆ ಚಲ್ಲಾಟವಾಡೋ ಧನದಾಹಿ ವೈದ್ಯರಿಗೆ ತಕ್ಕ ಶಿಕ್ಷೆ ಆಗಲೇಬೇಕಿದೆ.

 

 

 

ff    ದಲಿತ ಕುಟುಂಬದ ಮೇಲೆ ಹಲ್ಲೆ
 ಅಕ್ಟೋಬರ್.25
ಬೆಳಗಾವಿ: ತಾಲೂಕಿನ ಅಥಣಿಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ದಲಿತ ಕುಟುಂಬದ ಮೇಲೆ ಹಲ್ಲೆ ನಡೆದಿದೆ.
ಗಂಡೇವಾಡ ಗ್ರಾಮದ ಭೀಮರಾವ್ ಸಾಳೇ ಎಂಬುವರ ಜಮೀನಲ್ಲಿ ಸದಾಶಿವ ಶಿಂಗಾಡೆ ಜೆಸಿಬಿ ಬಳಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆ ವೇಳೆ ಭೀಮರಾವ್ ಸಾಳೇ ಕುಟುಂಬ ವಿರೋಧ ವ್ಯಕ್ತಪಡಿಸಿದ್ದಕ್ಕೆ ಶಿಂಗಾಡೆ ಕುಟುಂಬದ ಮೇಲೆ ಹಲ್ಲೆ ನಡೆದಿದೆ.
ವಯೋವೃದ್ಧರೂ ಎನ್ನದೆ ಸದಾಶಿವ ಶಿಂಗಾಡೆ ಕುಟುಂಬ ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ ನಿಂದನೆ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಸದಾಶಿವ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಾವು ದಲಿತರು ಎನ್ನುವ ಕಾರಣಕ್ಕೆ ನಮ್ಮನ್ನು ಬೆದರಿಸಿ ಓಡಿಸಲು ಈ ರೀತಿ ಮಾಡುತ್ತಿದ್ದಾರೆ. ನಾವು ಇಲ್ಲೇ ಬದುಕಲು ಅವಕಾಶ ಮಾಡಿಕೊಡಿ ಎಂದು ದಲಿತ ಕುಟುಂಬ ಪೊಲೀಸರನ್ನು ಒತ್ತಾಯಿಸಿದ್ದಾರೆ.

 

 

 

77         ವಿದ್ಯಾರ್ಥಿ ಮನವಿಗೆ ಸ್ಪಂದಿಸಿದ ಪ್ರಧಾನಿ
 ಅಕ್ಟೋಬರ್-24
ಬೆಳಗಾವಿ : ವಿದ್ಯಾರ್ಥಿನಿಯೊಬ್ಬರು ಆತವಾಡ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಸಂಸ್ಥೆ ನಿಯಮಿತವಾಗಿ ಬಸ್ ಸೌಕರ್ಯ ಕಲ್ಪಿಸಲು ಮುಂದಾಗಿದೆ.
ಬೆಳಗಾವಿ ತಾಲೂಕಿನ ಆತವಾಡ ಗ್ರಾಮದ ವಿದ್ಯಾರ್ಥಿನಿ ಸೀಮಾ ಜ್ಯೋತಿಬಾ ಪಾಟೀಲ್, ಬೆಳಗಾವಿ-ಆತವಾಡ ಮಧ್ಯೆ ಪ್ರತಿ ಗಂಟೆಗೊಂದು ಬಸ್ ಸಂಚಾರ ಆರಂಭಿಸುವಂತೆ ಸಾರಿಗೆ ಇಲಾಖೆಗೆ ಆದೇಶಿಸುವಂತೆ ರಾಷ್ಟ್ರಪತಿ, ಪ್ರಧಾನಿಗೆ ಆನ್ ಲೈನ್ ಮೂಲಕ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಪ್ರಧಾನ ಮಂತ್ರಿ ಕಾರ್ಯಲಯ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ಪ್ರತಿ ಎರಡು ಗಂಟೆಗೆ ಒಂದರಂತೆ ಬಸ್ ಸಂಚಾರ ನಡೆಸಲು ಒಪ್ಪಿಗೆ ಸೂಚಿಸಿ, ವಿದ್ಯಾರ್ಥಿನಿಗೆ ಪ್ರತಿಕ್ರಿಯೆ ನೀಡಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಗಮನಿಸಿ ಬಸ್ ಗಳ ಸಂಖ್ಯೆ ಹೆಚ್ಚಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

 

 

  

   ಕಲ್ಲಿದ್ದಲು ಹಗರಣ ಸಿಬಿಐಗೆ ಒಪ್ಪಿಸಿ: ಸುರೇಶ
ಅಕ್ಟೋಬರ್.23
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ 418 ಕೋಟಿ ರೂ. ಜನರ ತೆರಿಗೆ ಹಣವನ್ನು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ತೊಡಗಿಸಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದಾಖಲೆ ಬಿಡುಗಡೆ ಮಾಡಿದ್ದು, ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಂಸದ ಸುರೇಶ ಅಂಗಡಿ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಹಿತಾಸಕ್ತಿ ಬಲಿಕೊಟ್ಟು ಯಾವುದೊ ಒಂದು ಕಂಪನಿಯ ಲಾಭಕ್ಕೆ ಬಡವರ ತೆರಿಗೆ ಹಣವನ್ನು ಬಳಕೆ ಮಾಡಿಕೊಂಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರಿಗೆ ಜನರ ಹಿತಾಸಕ್ತಿಗಿಂತ ಖಾಸಗಿ ಕಂಪನಿಯ ಲಾಭವೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ರಾಜ್ಯ ರಾಜಕಾರಣಕ್ಕೆ ಬರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದ ಅಂಗಡಿ, ಮೂರನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದೇನೆ. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದ ಅವರು, ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.

 

 

 

       

ಮುಷ್ಕರ ಕೈ ಬಿಟ್ಟ ಮಹಾರಾಷ್ಟ್ರ ಸಾರಿಗೆ ನೈಕರರು

ಅಕ್ಟೋಬರ್.21

ಬೆಳಗಾವಿ: ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರ ಕೈಬಿಟ್ಟಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ಮಧ್ಯೆ ಬಸ್ ಸಂಚಾರ ಆರಂಭಗೊಂಡಿದೆ.

ಏಳನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ ಆರಂಭಿಸಿದ್ದರು. ನೌಕರರು ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರ ಎಂದು ಮುಂಬೈ ಹೈಕೋರ್ಟ್ ಹೇಳಿದ ಬೆನ್ನಲ್ಲೇ ಸಾರಿಗೆ ನೌಕರರ ಮಹಾಮಂಡಳಿ ಮುಷ್ಕರ ಹಿಂಪಡೆದಿದೆ.

ಮುಷ್ಕರ ನಿಲ್ಲಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್, ನೌಕರರು ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರ ಎಂದು ಹೇಳಿದೆ. ಕಾರ್ಮಿಕರ ಬೇಡಿಕೆಗಳ ಪರಿಶೀಲನೆಗೆ ಸೋಮವಾರದ ವೇಳೆಗೆ ಉನ್ನತ ಮಟ್ಟದ ಸಮಿತಿ ನೇಮಿಸಬೇಕು. ನ. 15 ರೊಳಗೆ ಕಾರ್ಮಿಕರ ವೇತನ ಹೆಚ್ಚಳ ಕುರಿತು ಮಧ್ಯಂತರ ಆದೇಶ ಹಾಗೂ ನ. 22 ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

 

 

 

                        

ಶಾಸಕ ಸತೀಶ್ ಗೆ ಲಕ್ಷ್ಮಿ ಹೆಬ್ಬಾಳಕರ ದಮ್ಕಿ

ಅಕ್ಟೋಬರ್.17

ಬೆಳಗಾವಿ: ಶಾಸಕ ಸತೀಶ್‌ ಜಾರಕಿಹೊಳಿ ಆಪ್ತ ವಿಜಯ ತಳವಾರ ಎಂಬುವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಧಮ್ಕಿ ಹಾಕಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ನಾಲ್ಕೈದು ದಿನಗಳ ಹಿಂದೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ವಾಲ್ಮೀಕಿ ಸಂಘಟನೆ ಮುಖಂಡ ವಿಜಯ ತಳವಾರ ಅವರಿಗೆ ಕರೆ ಮಾಡಿರುವ ಲಕ್ಷ್ಮಿ ಹೆಬ್ಬಾಳಕರ 'ಮಗನೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.

ತಿಂಗಳ ಹಿಂದೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳಕರ ಸೀರೆ ಹಂಚಿದ ವಿಷಯದ ಕುರಿತು ಸತೀಶ್‌ ಜಾರಕಿಹೊಳಿ ಮತ್ತು ಹೆಬ್ಬಾಳಕರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ವಿಜಯ ತಳವಾರ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮಿ ಹೆಬ್ಬಾಳಕರ ಅಭಿಮಾನಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದ್ದು, ಅದಕ್ಕೆ ಪ್ರತಿಯಾಗಿ ಲಕ್ಷ್ಮಿ ಹೆಬ್ಬಾಳಕರ ಕೂಡ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಹೇಳಲಾಗಿದೆ.

ಬುದ್ಧಿ ಹೇಳಿದರೂ ಧಮ್ಕಿ ಅಂತಾರೆ: ''ವಿಜಯ ತಳವಾರ ನನಗೆ ಚಿರಪರಿಚಿತರು. ಅವರು ತಪ್ಪು ಮಾಡಿದ್ದಾರೆ. ಆದ್ದರಿಂದ ಅವರಿಗೆ ಬುದ್ಧಿ ಹೇಳಿದ್ದೇನೆ. ಬುದ್ಧಿ ಹೇಳಿರೋದನ್ನು ಧಮ್ಕಿ ಅಂದರೆ ನಾನೇನೂ ಮಾಡೋಕೆ ಆಗೊಲ್ಲ'', ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಸ್ಪಷ್ಟನೆ ನೀಡಿದ್ದಾರೆ.

Ads
;