ದೂರವಾಣಿ : 080-69999676
ಇಮೇಲ್ : Info@Vijayataranga.com


   45

ಮತ್ತೊಂದು ಮಲ್ಟಿಸ್ಟಾರ್ ಚಿತ್ರ : ತೆರೆ ಮೇಲೆ ವಿಜಿ-ಗಣಿ ಕಾಂಬೀನೇಷನ್!

 ಡಿಸೆಂಬರ್-6

 ಸಿನಿಮಾಡೆಸ್ಕ್ : ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆದಿದ್ದ ಮುಂಗಾರು ಮಳೆ ಮತ್ತು ದುನಿಯಾ ಚಿತ್ರಗಳ ನಾಯಕರುಗಳಾದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬ್ಲ್ಯಾಕ್ ಕೋಬ್ರಾ ವಿಜಯ್ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಜಿ-ಗಣೇಶ್   ಕಾಂಬಿನೇಷನ್ ನ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸುತ್ತಿದ್ದಾರೆ. ಈ ಇಬ್ಬರೂ ನಟರಿಗೂ ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗ ಇದೆ. ಇಬ್ಬರು ಬಿಗ್ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಕಾಣಸಿಕೊಳ್ಳುತ್ತಿದ್ದು, ನಿರೀಕ್ಷೆ ಹೆಚ್ಚಾಗಿದೆ.ಇನ್ನು ಗಣೇಶ್ ಆರೇಂಜ್   ಚಿತ್ರದಲ್ಲಿ ಬ್ಯುಸಿಯಾಗಿದ್ದು, ದುನಿಯಾ ವಿಜಯ್ ಅವರು ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಎರಡು ಚಿತ್ರಗಳು ಮುಗಿದ ನಂತರ ಇವರಿಬ್ಬರ ಕಾಂಬೀನೇಷನ್ ನ ಚಿತ್ರ ಸೆಟ್ಟೇರಲಿದೆ. ಇನ್ನು ಉಳಿದ ತಾರಾಗಣ ಕತೆ, ತಂತ್ರಜ್ಞರು     ಯಾರು ಎಂಬುದು ನಿರ್ಧಾರವಾಗಿಲ್ಲ.

 

 

  gg

ಕುರುಕ್ಷೇತ್ರ ಚಿತ್ರದ ಮೇಘನಾ ರಾಜ್ ಫಸ್ಟ್ ಲುಕ್ ರಿಲೀಸ್

ನವೆಂಬರ್.27
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುಕೋಟಿ ವೆಚ್ಚದ'ಕುರುಕ್ಷೇತ್ರ' ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಚಿತ್ರದ ಫೋಟೋಗಳು ಸಿನಿ ಪ್ರೇಮಿಗಳನ್ನು ಸೆಳೆಯುತ್ತಿವೆ. ಇದೀಗ ಇನ್ನೊಂದು ಭರ್ಜರಿ ಫೋಟೋ ಬಿಡುಗಡೆಯಾಗಿದ್ದು ಇನ್ನಷ್ಟು ಸ್ವಾರಸ್ಯಕ್ಕೆ ಕಾರಣವಾಗಿದೆ.
ಈ ಚಿತ್ರದಲ್ಲಿ ಮೇಘನಾ ರಾಜ್ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಆದರೆ ಅವರ ಪಾತ್ರ ಹೇಗಿರುತ್ತದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಈಗ ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ.
ದುರ್ಯೋಧನನಾಗಿ ಅಭಿನಯಿಸಿರುವ ದರ್ಶನ್‌ ಮಡದಿಯಾಗಿ ಭಾನುಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮೇಘನಾ ರಾಜ್. ಇದೇ ಪ್ರಥಮ ಬಾರಿಗೆ ದರ್ಶನ್ ಜತೆ ಮೇಘನಾ ರಾಜ್ ಅಭಿನಯಿಸುತ್ತಿರುವುದು. ನಾಗಣ್ಣ ನಿರ್ದೇಶನದ ಈ ಚಿತ್ರವನ್ನು ಮುನಿರತ್ನ ನಿರ್ಮಿಸುತ್ತಿದ್ದು ಜೆ ಕೆ ಭಾರವಿ ಕಥೆ, ಚಿತ್ರಕಥೆ ರಚಿಸಿದ್ದಾರೆ.
ಈ ಚಿತ್ರದಲ್ಲಿ ಅಂಬರೀಶ್ (ಭೀಷ್ಮ), ವಿ.ರವಿಚಂದ್ರನ್ (ಕೃಷ್ಣ), ಅರ್ಜುನ್ ಸರ್ಜಾ (ಕರ್ಣ), ಸ್ನೇಹಾ (ದ್ರೌಪದಿ), ಲಕ್ಷ್ಮಿ (ಕುಂತಿ), ನಿಖಿಲ್ ಗೌಡ (ಅಭಿಮನ್ಯು), ರವಿಶಂಕರ್ (ಶಕುನಿ), ಸೋನು ಸೂದ್ (ಅರ್ಜುನ), ಪಿ ರವಿಶಂಕರ್ (ದುಶ್ಯಾಸನ). ಶಶಿಕುಮಾರ್ (ಧರ್ಮರಾಯ) ನಾಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

     
  ಗಗ ಬಿಗ್ ಬಾಸ್ ಮನೆಲಿ ಬದಲಾಗುತ್ತಿದೆ ನಿವೇದಿತಾ ಇಮೇಜ್
ನವೆಂಬರ್.27
ಬಿಗ್ಬಾಸ್ ಸೀಸನ್ 5 ನಿವೇದಿತಾ ಗೌಡ ಸ್ಪರ್ಧಿಯಾಗಿ ಕಾಲಿಟ್ಟಾಗ ಆಕೆಯ ಕನ್ನಡ ಕೇಳಿ ಕನ್ನಡಿಗರು ಬೆಚ್ಚಿ ಬಿದ್ದರು. ಆಕೆಯ ಕನ್ನಡದಿಂದಲೇ ಟ್ರೋಲ್ ಆಗಿದ್ದಳು ನಿವೇದಿತಾ. ಮೊದಲನೇ ವಾರದಲ್ಲಿ ನಾಮಿನೇಷನ್ ಕೂಡ ಆದರು.
ಅದೇ ನಿವೇದಿತಾಳ ಇಮೇಜ್ ಇದೀಗ ಮೆಲ್ಲನೆ ಬದಲಾಗುತ್ತಿದೆ. ಕನ್ನಡವನ್ನು ಇಂಗ್ಲಿಷ್ನಂತೆ ಮಾತನಾಡಿದರೂ ಆಕೆ ಬಿಗ್ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ಪ್ರೇಕ್ಷಕನಿಗೆ ಇಷ್ಟವಾಗುತ್ತಿದೆ. ಬಿಗ್ಬಾಸ್ ಮನೆಯಲ್ಲಿ ಹಾಫ್ ಸೆಂಚುರಿ ಬಾರಿಸಿರುವ ನಿವೇದಿತಾ ಈ ಬಾರಿಯ ಬಿಗ್ಬಾಸ್ ವಿನ್ನರ್ ಆಗಬಹುದೆಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಟೀಚರ್ ಪಾತ್ರದಲ್ಲಿ ಕಾಣಿಸಿದ ಶಾಲಿನಿ, ಕಿರಿಕ್ ಕೀರ್ತಿ, ನಿರಂಜನ್ ದೇಶ್ಪಾಂಡೆ, ಶೀತಲ್ಶೆಟ್ಟಿ ಕೂಡ ಇದೇ ಅಭಿಪ್ರಾಯ ವ್ಯಕ್ತ ಪಡಿಸಿದರು.
     
11  ತಂದೆ ಹುಟ್ಟುಹಬ್ಬದಂದು ಮಹಾನ್ ಕೆಲಸಕ್ಕಿಳಿದ ಐಶ್
 ನವೆಂಬರ್-20
 ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ತಂದೆ ಜನ್ಮದಿನದ ಹಿನ್ನೆಲೆಯಲ್ಲಿ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಐಶ್ವರ್ಯ ರೈ ತಂದೆ ಜನ್ಮದಿನ  ಸದಾ ನೆನಪಿನಲ್ಲಿರುವಂತೆ ಮಾಡಲು ಈ ಮಹಾನ್ ಕೆಲಸ ಮಾಡ್ತಿದ್ದಾರೆ. ನವೆಂಬರ್ 20ರಂದು ಸುಮಾರು 100 ಮಕ್ಕಳ ಶಸ್ತ್ರಚಿಕಿತ್ಸೆಗೆ ಐಶ್ವರ್ಯ ರೈ  ಹಣ ಸಹಾಯ ಮಾಡಲು ನಿರ್ಧರಿಸಿದ್ದಾರೆ.
 ಸೀಳು ತುಟಿ ಸಮಸ್ಯೆಯಿಂದ ಜನಿಸುವ ಮಕ್ಕಳ ಶಸ್ತ್ರಚಿಕಿತ್ಸೆಗೆ ಐಶ್ವರ್ಯ ರೈ ಮುಂದಾಗಿದ್ದಾರೆ. ಈ ಕಾರ್ಯಕ್ಕಾಗಿ ಎನ್ ಜಿ ಒ ಸ್ಮೈಲ್ ಟ್ರೈನ್  ಇಂಡಿಯಾ ಜೊತೆ ಕೈಜೋಡಿಸಿದ್ದಾರೆ. ಎನ್ಜಿಒ ಬ್ರಾಂಡ್ ಅಂಬಾಸಿಡರ್ ಆಗಿರುವ ಐಶ್ವರ್ಯ ಕಳೆದ 9 ವರ್ಷಗಳಿಂದ ಸಮಾಜ ಸೇವೆ ಮಾಡುತ್ತ  ಬಂದಿದ್ದಾರೆ.
 2014ರಲ್ಲಿ ಐಶ್ ತಂದೆ 100 ಮಕ್ಕಳ ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಹಾಯ ನೀಡಿದ್ದರು. ಐಶ್ವರ್ಯ, ತನ್ನ ತಾಯಿ ವೃಂದಾ ಹಾಗೂ ಮಗಳು ಆರಾಧ್ಯ  ಜೊತೆ ಮುಂಬೈನ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅಂಗ ವೈಫಲ್ಯ ಹಾಗೂ ಸೀಳು ತುಟಿ ಸಮಸ್ಯೆಯಿರುವ ಮಕ್ಕಳನ್ನು ಭೇಟಿಯಾಗಿ ಅವರಿಗೆ ಹೊಸ ಜೀವನ ನೀಡುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗ್ತಿದೆ.

 

44 

 

ಸಿನಿಮಾಗಾಗಿ ಕಿಚ್ಚ ಸುದೀಪ್ ವರ್ಕೌಟ್

ನೆವಂಬರ್ 13
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ದಿ ವಿಲನ್' ಬಳಿಕ 'ಪೈಲ್ವಾನ್' ಚಿತ್ರಕ್ಕಾಗಿ ರೆಡಿಯಾಗುತ್ತಿದಾರೆ. ಅವರ ಮೊದಲ ಹಾಲಿವುಡ್ ಚಿತ್ರ 'ರೈಸನ್'ಗಾಗಿ ತಯಾರಿ ಕೂಡ ನಡೆದಿದೆ.
ಸುದೀಪ್ ಈ ಹಿಂದೆ ಅಭಿನಯಿಸಿದ್ದ 'ಹೆಬ್ಬುಲಿ' ಭರ್ಜರಿ ಯಶಸ್ಸು ಕಂಡಿತ್ತು. ಆರ್ಮಿ ಆಫೀಸರ್ ಪಾತ್ರದಲ್ಲಿ ಅವರು ಮಿಂಚಿದ್ದರು.ಸುದೀಪ್ 'ಪೈಲ್ವಾನ್' ಚಿತ್ರದಲ್ಲಿ ಕುಸ್ತಿಪಟು ಮತ್ತು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕೆ ತಕ್ಕಂತೆ ತಯಾರಿ ನಡೆಸಿದ್ದಾರೆ.ಬ್ಯಾಡ್ಮಿಂಟನ್, ಕ್ರಿಕೆಟ್ ಮೂಲಕ ಫಿಟ್ ಅಂಡ್ ಫೈನ್ ಆಗಿರುವ ಸುದೀಪ್, 'ಪೈಲ್ವಾನ್' ಮತ್ತು 'ರೈಸನ್'ಗಾಗಿ ದೇಹವನ್ನು ದಂಡಿಸಲಿದ್ದಾರೆ. ಇದಕ್ಕಾಗಿ ವಿಶೇಷ ತರಬೇತಿ ಕೂಡ ಪಡೆಯಲಿದ್ದಾರೆ ಎನ್ನಲಾಗಿದೆ.ಕೃಷ್ಣ ನಿರ್ದೇಶನದ 'ಪೈಲ್ವಾನ್' ಮತ್ತು ಎಡ್ಡಿ ಆರ್ಯ ನಿರ್ದೇಶನದ 'ರೈಸನ್' ಚಿತ್ರದಲ್ಲಿ ಸುದೀಪ್ ನೀವೆಂದು ನೋಡಿರದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

44  'ಪದ್ಮಾವತಿ' ವಿರುದ್ದ ಸಿಡಿದೆದ್ದ ಬೆಂಗಳೂರಿನ ಜನ
ನೆವಂಬರ್ 13
ಬೆಂಗಳೂರು: ಡಿಸೆಂಬರ್ 1 ರಂದು ತೆರೆಗೆ ಬರಲು ಸಿದ್ದವಾಗಿರುವ 'ಪದ್ಮಾವತಿ' ಸಿನಿಮಾದ ವಿರುದ್ದ್ ನಗರದ ಜನತೆ ಗರಂ ಆಗಿದ್ದಾರೆ.
ಇಲ್ಲಿ ವಾಸವಾಗಿರುವ ರಜಪೂತರು ಸಿನಿಮಾ ಬಿಡುಗಡೆ ಮಾಡದಂತೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.ಪ್ರೆಸ್ ಕ್ಲಬ್ ನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಸಂಘಟನಾಕಾರರು, ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಸ್ವಾಭಿಮಾನ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.ಭಾರತೀಯ ಇತಿಹಾಸವನ್ನ ತಿರುಚಿ 'ಪದ್ಮಾವತಿ' ಸಿನಿಮಾ ಮಾಡಲಾಗಿದೆ. ಹಿಂದೂ ಸಂಸ್ಕೃತಿಯ ಉಡುಗೆ ತೊಡುಗೆಯನ್ನ ಮತ್ತು ಅಂಗಪ್ರದರ್ಶನವನ್ನ ತಿರುಚಿ ತೋರಿಸಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರ ಮತ್ತು ಅತ್ಯಾಚಾರಿ. ಈತನನ್ನ ಮುಖ್ಯ ನಾಯಕನನ್ನಾಗಿ ತೋರಿಸಿದ್ದಾರೆ ಎಂದು ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಸಂಘಟನಾಕಾರರು ಕಿಡಿ ಕಾರಿದ್ದಾರೆ. ಸದ್ಯ, ದೇಶದಲ್ಲೆಡೆ 'ಪದ್ಮಾವತಿ' ವಿರುದ್ದ ಪ್ರತಿಭಟನೆ ಹೆಚ್ಚಾಗಿರುವ ಕಾರಣ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ರಜಪೂತ್ ಕರಣಿ ಸಂಘಟನಾಕಾರರಿಗೆ ಸಿನಿಮಾ ತೋರಿಸಲು ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡ್ತಿವೆ.

 

 

hh

 

   ಕೆಂಡಸಂಪಿಗೆ ಬೆಡಗಿ ಮಾನ್ವಿತಾ                      ನಿರ್ದೇಶಕಿಯಾಗಲಿದ್ದಾರೆ

ಅಕ್ಟೋಬರ್-23

ಸಿನಿಮಾಡೆಸ್ಕ್ : ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಅವರು ಈಗ ಟಗರು ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಸದ್ಯಕ್ಕೊಂದು ಕಿರುಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೌದು, ಇನ್ನೂ ಹೆಸರಿಡದ ಈ ಕಿರುಚಿತ್ರದಲ್ಲಿ ಮಾನ್ವಿತಾ ಸಹಾಯಕ ಗುಣ ಎಂಬುವವರೇ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ನಮ್ಮ ಭರವಸೆ ದೃಢವಾಗಿದ್ದರೆ ಅನೇಕ ಬಾರಿ ಅದು ನಿಜವಾಗುತ್ತದೆ. ಈ ಒಂದು ಅಂಶವನ್ನು ಇಟ್ಟುಕೊಂಡು ಕಥೆ ಹೆಣೆದಿದ್ದೇನೆ. ಅದರಲ್ಲಿ ಬರುವ ಒಬ್ಬ ಟ್ರಾವೆಲ್ ಗೈಡ್ ಪಾತ್ರಕ್ಕೆ ಗುಣ ಅವರ ಬಾಡಿ ಲಾಂಗ್ವೇಜ್ ಸರಿಹೊಂದುತ್ತಿರುವುದರಿಂದ ಅವರೇ ಅಭಿನಯಿಸುವುದು ಸೂಕ್ತ ಎನಿಸಿತು. ಎನ್ನುತ್ತಾರೆ ಮಾನ್ವಿತಾ. ಸದ್ಯದಲ್ಲೇ ಫೋಟೋ ಶೂಟ್ ಮಾಡಿ, ಒಂದು ಟೀಸರ್ ರಿಲೀಸ್ ಮಾಡಬೇಕೆಂಬ ಪ್ಲ್ಯಾನ್ ಕೂಡ ಅವರಿಗಿದೆ. ಅಂದಹಾಗೆ ಈ ಚಿತ್ರವನ್ನು ಅವರ ಸ್ನೇಹಿತರ ಜೊತೆ ಸೇರಿ ನಿರ್ಮಾಣ ಮಾಡಲಿದ್ದಾರೆ. ಬಹುತೇಕ ತಂತ್ರಜ್ಞರು ಸ್ನೇಹಿತರೇ ಆಗಲಿದ್ದಾರಂತೆ. ೆಂದು ತಿಳಿದು ಬಮದಿದೆ.

 

 

 

 

 

 

 

 

 

 

11   ಮೆರ್ಸಲ್' ಡೈಲಾಗ್ ಗೆ ಖ್ಯಾತ ನಟ ಕಮಲ್ ಬೆಂಬಲ
 ಅಕ್ಟೋಬರ್-21
ಚೆನ್ನೈ: ಇಳಯದಳಪತಿ ವಿಜಯ್ ಅಭಿನಯದ 'ಮೆರ್ಸಲ್' ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದಲ್ಲಿನ ಡೈಲಾಗ್ ಪರ, ವಿರೋಧ ಚರ್ಚೆಗೆ ಕಾರಣವಾಗಿದೆ.
'ಮೆರ್ಸಲ್' ಚಿತ್ರದ ಸನ್ನಿವೇಶವೊಂದರಲ್ಲಿ ಸಿಂಗಾಪೂರದಲ್ಲಿ ಶೇ. 8 ರಷ್ಟು ತೆರಿಗೆ ಇದ್ದರೆ, ಭಾರತದಲ್ಲಿ ಶೇ. 28 ರಷ್ಟು ತೆರಿಗೆ ಇದೆ ಏಕೆ ಎಂದು ಪ್ರಶ್ನಿಸುವ ನಟ ವಿಜಯ್, ಜಿ.ಎಸ್.ಟಿ. ಅಡಿ ಮದ್ಯವನ್ನು ತಂದಿಲ್ಲ ಏಕೆ ಎಂದು ಕೂಡ ಕೇಳುತ್ತಾರೆ.
ಈ ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ತಮಿಳುನಾಡು ಬಿ.ಜೆ.ಪಿ. ನಾಯಕರಾದ ತಮಿಳ್ ಸಾಯಿ ಸೌಂದರ್ ರಾಜನ್ ಒತ್ತಾಯಿಸಿದ್ದಾರೆ. ಚಿತ್ರದಲ್ಲಿನ ದೃಶ್ಯಗಳು ರಾಜಕೀಯ ಪ್ರೇರಿತವಾಗಿದ್ದು, ಅದನ್ನು ಕೈಬಿಡದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
'ಮೆರ್ಸಲ್' ಚಿತ್ರದ ಡೈಲಾಗ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಖ್ಯಾತ ನಟ ಕಮಲ್ ಹಾಸನ್ ಬೆಂಬಲ ಸೂಚಿಸಿದ್ದಾರೆ. 'ಮೆರ್ಸಲ್' ಚಿತ್ರದ ಡೈಲಾಗ್ ಸರಿಯಾಗಿಯೇ ಇದೆ. ಆ ದೃಶ್ಯಗಳಿಗೆ ಕತ್ತರಿ ಹಾಕಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಚಿತ್ರ ಮೂಡಿಬಂದಿದೆ. ಅದಕ್ಕೆ ಪೂರಕವಾಗಿ ಡೈಲಾಗ್ ಗಳಿವೆ. ಇಂತಹ ದೃಶ್ಯಗಳಿಗೆ ಕತ್ತರಿ ಹಾಕಬಾರದು ಎಂದು ಹೇಳಿದ್ದಾರೆ.

 

 

 

 

 

 

 

ರಾಜಸ್ಥಾನಿ ಉಡುಪಿನಲ್ಲಿ ಪದ್ಮಾವತಿಯಾದ ದೀಪಿಕಾ...

ಅಕ್ಟೋಬರ್.14: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ ' ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರ ಸಿಂಗಾರಕ್ಕೆ ಬಳಸಲಾದ ಆಭರಣಗಳ ತಯಾರಿಕೆಗೆ ಬರೋಬ್ಬರಿ 400 ಕೆ.ಜಿ ಚಿನ್ನ ಬಳಕೆಯಾಗಿದೆ. ಸುಮಾರು 200 ಕುಶಲಕರ್ಮಿಗಳು 600 ದಿನಗಳನ್ನು ಆಭರಣ ತಯಾರಿಕೆಗಾಗಿ ತೆಗೆದುಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಈ 'ಪದ್ಮಾವತಿ' ಚಿತ್ರದ ಪ್ರತಿಯೊಂದು ಪ್ರೇಮ್ ಸಹ ಶ್ರೀಮಂತವಾಗಿದೆ. ರಣವೀರ್, ದೀಪಿಕಾ ಪಡುಕೋಣೆ ಮತ್ತು ಶಾಹಿದ್ ಮಾತ್ರವಲ್ಲ, ಸಿನಿಮಾದಲ್ಲಿ ಬಳಕೆಯಾಗಿರುವ ಆಭರಣಗಳೂ ಗಮನ ಸೆಳೆಯುವಂತಿವೆ. ರಾಜಸ್ಥಾನಿ ಉಡುಪು ಮತ್ತು ವಿಶೇಷ ಆಭರಣಗಳಲ್ಲಿ ರಾಣಿ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಮಿಂಚಿದ್ದಾರೆ.


ದೀಪಿಕಾ ಪಡುಕೋಣೆ
ನ್ಯೂ ‘ಲುಕ್’

ಅಕ್ಟೋಬರ್.12: ನಟಿ ದೀಪಿಕಾ ಪಡುಕೋಣೆ ತಾವು ಬಾಲಿವುಡ್ ಕ್ವೀನ್ ಮಾತ್ರವಲ್ಲ, ಬದಲಾಗಿ ಫ್ಯಾಷನ್ ರಾರಯಂಪ್ನಲ್ಲೂ ಕ್ವೀನ್ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇತ್ತೀಚೆಗೆ ಅವರು ಫ್ಯಾಷನ್ ಡಿಸೈನರ್ ಜೋಡಿ ಗೌರಿ ಮತ್ತು ನೈನಿಕಾ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ಶೋ ಸ್ಟಾಪರ್ ಆಗಿ ಗಮನ ಸೆಳೆದರು. ಇದರಲ್ಲಿ ಅವರು ಧರಿಸಿದ್ದ ಪೀಚ್ ಮತ್ತು ಬಿಳಿ ಬಣ್ಣ ಮಿಶ್ರಿತ ಫ್ಲೋರ್ ಲೆಂತ್ ಮತ್ತು ಶೋಲ್ಡರ್ ರಫಲ್ ಗೌನ್ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಈ ಸುಂದರವಾದ ಫ್ಲೋರಲ್ ಗೌನ್ನಲ್ಲಿ ಅವರು ರಾಣಿಯಂತೆ ಮಿಂಚುತ್ತಿದ್ದರು. ರಾರಯಂಪ್ನಲ್ಲಿ ಅವರು ಕ್ಯಾಟ್ವಾಕ್ ಮಾಡುತ್ತಿದ್ದಾಗ ಥೇಟ್ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ಸದ್ಯಕ್ಕೆ ಪದ್ಮಾವತಿ ಸಿನಿಮಾದಲ್ಲೂ ರಾಣಿಯ ಪಾತ್ರ ಮಾಡುತ್ತಿರುವ ದೀಪಿಕಾ ಈ ಲುಕ್ ಕೂಡಾ ರಾಯಲ್ ಆಗಿತ್ತು.

ಫಾರ್ಚುನ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ದಿಗಂತ, ಸೋನು ಗೌಡ

ಬೆಂಗಳೂರು ಅಕ್ಟೋಬರ್.12 : ಇತ್ತೀಚೆಗೆ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ನಟಿಸಿದ್ದ ನಟಿ ಸೋನು ಗೌಡ ಈಗ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಮೊದಲ ಬಾರಿಗೆ ದಿಗಂತ್ ಗೆ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ದಿಗಂತ್ ಅಭಿನಯದ ಚೌಕ ಮತ್ತು ಹ್ಯಾಪಿ ನ್ಯೂ ಇಯರ್ನಲ್ಲಿ ನಟಿಸಿದ್ದು, ಈಗ ಫಾರ್ಚುನ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿರುವ ನಿರ್ದೇಶಕ ಮಂಜುನಾಥ್ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ. ಕೆಲವೇ ದಿನಗಳಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಚಿತ್ರವನ್ನು ಬೆಂಗಳೂರಿನಲ್ಲಿ ಶೂಟ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಹಾಡುಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸುವ ಆಲೋಚನೆ ಇದೆ ಎಂದಿದೆ ಚಿತ್ರತಂಡ.ಮಧುಸೂದನ್ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಮುಆಯ್ ಥಾಯ್ ಕ್ರೀಡೆಯಲ್ಲಿ ಮಿಂಚಿದ ಗಣೇಶ್...

 

 


ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಈಗ ಮುಆಯ್ ಥಾಯ್ ಬಾಗ್ಲರ್ ಕ್ರೀಡೆಯನ್ನು ಕಲಿಯುತ್ತಿದ್ದು, ಕಾಮಿಡಿ ಟೈಮ್ ಗಣೇಶ್ ಟಿವಿಯ ಮುಖಾಂತರ ಕಾಮಿಡಿ ಮಾಡುತ್ತಲೇ ಕನ್ನಡಿಗರ ಮನಗೆದ್ದು ರಾಜ್ಯದಾದ್ಯಂತ ಜನಪ್ರೀಯವಾಗುತ್ತಲೇ ಕನ್ನಡದ ಸ್ಟಾರ್ ನಟರ ಸಾಲಿಗೆ ಸೇರಿ ಗೋಲ್ಡನ್ ಸ್ಟಾರ್ ಎಂಬ ಪಟ್ಟಕ್ಕೇರಿ ವರ್ಷಗಳೇ ಕಳೆದು ಹೋಗಿದೆ ಈಗ

ಗಣೇಶ ಮೈನವಿರೇಳಿಸುವ ಮುಆಯ್ ಥಾಯ್ ಕಲೆಯನ್ನು ಸುಮಾರು ಏಳು ತಿಂಗಳಿಂದ ಕಲಿತು ಈ ವಿದ್ಯೆಯನ್ನು ಕರಗತ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.ಅಂತರಾಷ್ಟ್ರೀಯ ಮುಆಯ್ ಥಾಯ್‍ಗೆ ಮೊದಲ ಬಾರಿಗೆ ಬಬ್ಬ ಕನ್ನಡದ ನಟ ಬ್ರಾಂಡ್ ಅಂಬಾಸಿಡರ್ ಆಗಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಿ ಕನ್ನಡಿಗರು ಹೆಮ್ಮೆ ಪಡುವಂತ ಕೆಲಸಕ್ಕೆ

ಗಣೇಶ್ ಭಾಜಿನರಾಗಿದ್ದಾರೆ. 2018ರ ಜನೇವರಿಯಲ್ಲಿ ಈ ಕಲೆಯನ್ನು ಸ್ವತ: ಗಣೇಶ ಪ್ರದರ್ಶಿಸಲಿದ್ದಾರೆ. ಸಮಾರು 50 ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿನಿಧಿಯಾಗಿ ಮುಆಯ್ ಥಾಯ್ ಕ್ರೀಡಾಪಟುವಾಗಿ ಪ್ರತಿನಿಧಿಸಿ ಭಾರತದ ಕೀರ್ತಿಯನ್ನು ಇಮ್ಮಡಿಗೊಳಿಸಿರುವ ಹೇಮಂತ ಕಮಾರ್, ಗಣೇಶ್‍ಗೆ ಈ ಕ್ರೀಡೆಯನ್ನು ಕಲಿಸುತ್ತಿದ್ದಾರೆ.

 

 

 

Ads
;