ದೂರವಾಣಿ : 080-69999676
ಇಮೇಲ್ : Info@Vijayataranga.com


 

ಚಳಿಗಾಲದಲ್ಲಿನ ಕಿವಿ ನೋವು ತಡೆಗೆ ಕ್ರಮ
ಡಿಸೆಂಬರ್.29
ಚಳಿಗಾಲ ಎಂದರೆ ಹೆಸರೇ ಹೇಳುವಂತೆ ವಾತಾವರಣವೆಲ್ಲಾ ತಂಪಾಗಿ ಇರುತ್ತದೆ. ತಂಪಾದ ಗಾಳಿ ಹಾಗೂ ಚಳಿಯ ನಡುವೆ ಬಿಸಿ ಬಿಸಿಯಾದ ತಿನಿಸು ಹಾಗೂ ಪಾನೀಯವನ್ನು ಸೇವಿಸಬೇಕು ಎಂದು ಮನಸ್ಸು ಬಯಸುವುದು ಸಹಜ. ತಂಪಾದ ವಾತಾವರಣದಿಂದ ನಮ್ಮ ಮನಸ್ಸು ಎಷ್ಟು ಸಂತೋಷಗೊಳ್ಳುತ್ತದೆಯೋ ಅಷ್ಟೇ ಅಪಾಯವನ್ನು ಸಹ ಚಳಿಗಾಲ ತಂದಿಡುತ್ತದೆ. ಹೌದು, ವಾತಾವರಣದಲ್ಲಿ ಚಳಿ ಹೆಚ್ಚಾದಂತೆ ಸೂಕ್ಷ್ಮ ಜೀವಿಗಳ ಉತ್ಪಾದನೆ ಹೆಚ್ಚಾಗುತ್ತದೆ. ರೋಗಾಣುಗಳ ಹರಡುವಿಕೆ ಅಧಿಕಗೊಳ್ಳುತ್ತದೆ.


         
         ffffff

 ಮನೆಮದ್ದು:ಕಿವಿನೋವಿಗೆ ಹಳ್ಳಿ ಮದ್ದು, ತ್ವರಿತ ಸಾಂತ್ವನ:

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ನೆಗಡಿ, ಕೆಮ್ಮು, ಜ್ವರ, ಶೀತ, ಮೈಕೈ ನೋವು, ಉರಿಯೂತ ಹಾಗೂ ಕಿವಿ ಸೆಳೆತ. ತೇವಾಂಶದಿಂದ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಇವು ನಿಧಾನವಾಗಿ ವಿವಿಧ ಸಮಸ್ಯೆಗಳನ್ನು ಹುಟ್ಟಿಸುತ್ತವೆ. ಅದರಲ್ಲಿ ಕಿವಿನೋವು ಎನ್ನುವ ಸಮಸ್ಯೆಯು ಸಾಮಾನ್ಯವಾಗಿರುತ್ತದೆ. ಜೊತೆಗೆ ಸಹಿಸಲಾರದಷ್ಟು ನೋವನ್ನು ತಂದೊಡ್ಡುತ್ತದೆ. ಕಿವಿ ನೋವು ಎನ್ನುವ ಸಮಸ್ಯೆಯಿಂದ ನೀವು ಸಹ ಬಳಲುತ್ತಿದ್ದೀರಿ ಎಂದಾದರೆ ಅದಕ್ಕೆ ಸೂಕ್ತ ಪರಿಹಾರ ಕ್ರಮ ಹಾಗೂ ಮುನ್ನೆಚ್ಚರಿಕೆ ಪರಿಹಾರ ಇಲ್ಲಿದೆ.

  ಕಿವಿಯನ್ನು ಮುಚ್ಚಿಕೊಳ್ಳಿ: ಚಳಿಗಾಲದಲ್ಲಿ ತೇವಾಂಶ ಭರಿತವಾದ ಗಾಳಿ ಹೆಚ್ಚಾಗಿರುತ್ತವೆ. ಈ ಗಾಳಿಯು ಕಿವಿಯೊಳಗೆ ಸಿಕ್ಕಿಬಿದ್ದಾಗ ಬ್ಯಾಕ್ಟೀರಿಯಾಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಅಲ್ಲದೆ ವಿಪರೀತವಾದ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಚಳಿಗಾಲದಲ್ಲಿ ಆದಷ್ಟು ಕಿವಿಯನ್ನು ಬೆಚ್ಚಗಿಟ್ಟುಕೊಳ್ಳಲು ಮತ್ತು ಹತ್ತಿಯಿಂದ ಮುಚ್ಚಿಕೊಳ್ಳಲು ಸಲಹೆ ನೀಡಲಾಗುತ್ತದೆ.


 

ಚಳಿಗಾಲದ ಸಮಯದಲ್ಲಿ ಆರೋಗ್ಯಕರ ಆಹಾರದ ಜೊತೆಗೆ ನಿಯಮಿತವಾದ ವ್ಯಾಯಾಮ ವಿಶೇಷವಾಗಿ ಅತ್ಯಗತ್ಯವಾಗಿರುತ್ತದೆ. ಇದು ಉತ್ತಮ ರಕ್ತ ಪರಿಚಲನೆಯನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯ ಪೂರ್ಣರನ್ನಾಗಿ ಇರಿಸುತ್ತದೆ. ವ್ಯಾಯಾಮ ಜಿಮ್, ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಗಳನ್ನು ದಿನದಲ್ಲಿ 30 ನಿಮಿಷಗಳಕಾಲ ಮಾಡುವುದರಿಂದ ಆರೋಗ್ಯಕರವಾಗಿ ಇರಬಹುದು.
ವೈಯಕ್ತಿಕ ನೈರ್ಮಲ್ಯ:

ನೀವು ಆರೋಗ್ಯಕರವಾಗಿ ಉಳಿಯಲು ಮತ್ತು ಸೋಂಕಿನಿಂದ ಪಾರಾಗಲು ಬಯಸಿದರೆ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ತಿನ್ನುವ ಮೊದಲು ನಿಮ್ಮ ಕೈಗಳನ್ನು ತೊಳೆಯುವ ಪರಿ ಶೀತ ಮತ್ತು ಅಲರ್ಜಿಯನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಶೀತ ಮತ್ತು ಅಲರ್ಜಿಯ ಕಾರಣದಿಂದಾಗಿ ದ್ರವಗಳು ಕಿವಿಗೆ ಸಿಕ್ಕಿಬೀಳುತ್ತವೆ ಮತ್ತು ಕಿವಿ ಸೋಂಕುಗಳಿಗೆ ಕಾರಣವಾಗಬಹುದು. ಇದು ಕಿವಿಯ ನೋವಿಗೆ ಕಾರಣವಾಗಬಹುದು ಮತ್ತು ಕೇಳುವಲ್ಲಿ ತೊಂದರೆ ಉಂಟುಮಾಡಬಹುದು.

          
         

ಉತ್ತಮ ನಿದ್ರೆ:

ಆರೋಗ್ಯಕರ ಆಹಾರದ ಜೊತೆಗೆ ಉತ್ತಮ ನಿದ್ರೆ ಅತ್ಯಗತ್ಯ. ನಿಮ್ಮ ನಿರೋಧಕ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಸೋಂಕನ್ನು ತಡೆಗಟ್ಟಲು ಒಳ್ಳೆಯ ನಿದ್ರೆ ಸಹಾಯ ಮಾಡುತ್ತದೆ. ಕಿವಿ ಮತ್ತು ಸೋಂಕುಗಳಿಗೆ ಯಾವುದೇ ರೀತಿಯ ಕಿರಿಕಿರಿಯನ್ನು ತಡೆಗಟ್ಟಲು ಶೀತ, ಕೆಮ್ಮು, ಅಲರ್ಜಿಗಳು ಮತ್ತು ಜ್ವರವನ್ನು ದೂರವಿರಿಸಲು ಇದು ಬಹಳ ಮುಖ್ಯ.
ವೈದ್ಯರನ್ನು ಸಂಪರ್ಕಿಸಿ:
ಕಿವಿಗಳಲ್ಲಿನ ನೋವು ಮತ್ತು ಕಿರಿಕಿರಿಯು ದೀರ್ಘಕಾಲದವರೆಗೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ಅಗತ್ಯವಿರುವ ವೈದ್ಯಕೀಯ ಮಧ್ಯಸ್ಥಿಕೆ ತೆಗೆದುಕೊಳ್ಳುವುದು ಉತ್ತಮ. ಅದನ್ನು ಪರಿಶೀಲಿಸದೆ ಬಿಟ್ಟರೆ ಇತರ ಗಂಭೀರ ಕಿವಿ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಕಿವುಡುತನವನ್ನು ಉಂಟುಮಾಡಬಹುದು.
-ಕಲ್ಪನಾ ಮಠಪತಿ

 

 

66   ಅಡುಗೆ ಮನೆಯಲ್ಲೇ ಇದೇ ತೂಕ ಕಳೆದುಕೊಳ್ಳುವ ಮದ್ದು
 ಡಿಸೆಂಬರ್-27
ತೂಕ ಹೆಚ್ಚಿಸಿಕೊಳ್ಳಲು ಹೆಚ್ಚಿನವರಿಗೆ ಯಾವುದೇ ಕಷ್ಟವಾಗುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳುವುದು ಅವರಿಗೆ ದೊಡ್ಡ ಸಮಸ್ಯೆಯಾಗಿರುವುದು. ದೇಹದಲ್ಲಿ ತುಂಬಿರುವ ಬೊಜ್ಜಿನಿಂದ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವರಿಗೆ ಮನಸ್ಸಾಗುವುದಿಲ್ಲ. ಇಂತಹ ಸಮಯದಲ್ಲಿ ತೂಕ ಕಡಿಮೆ ಮಾಡಬೇಕೆಂದು ಶತಪ್ರಯತ್ನ ಮಾಡುತ್ತಾರೆ.
ಮಾರುಕಟ್ಟೆಯಲ್ಲಿ ಸಿಗುವಂತಹ ತೂಕ ಇಳಿಸಿಕೊಳ್ಳುವ ಮಾತ್ರೆ, ಹುಡಿ ಇತ್ಯಾದಿಗಳನ್ನು ಸೇವಿಸಲು ಆರಂಭಿಸುವರು. ಆದರೆ ಇದು ತೂಕ ಇಳಿಸಿದರೂ ಇದರ ಸೇವನೆ ನಿಲ್ಲಿಸಿದ ಕೂಡಲೇ ಮತ್ತೆ ತೂಕ ಹೆಚ್ಚಳವಾಗುವುದು. ಇಂತಹ ಸಮಯದಲ್ಲಿ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ಮನೆಮದ್ದನ್ನುಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ತೂಕ ಇಳಿಸಿಕೊಳ್ಳಲು ನೀವು ಬಳಸಬಹುದಾದ ಮನೆಮದ್ದುಗಳನ್ನು ಈ ಲೇಖನದಲ್ಲಿನಿಮಗಾಗಿ ನೀಡಿದ್ದೇವೆ. ಇದು ಯಾವುದೆಂದು ತಿಳಿಯಲು ಮುಂದೆ ಓದಿಕೊಳ್ಳಿ....
ಶುಂಠಿಯು ಹೊಟ್ಟೆಯಲ್ಲಿ ತುಂಬಿರುವಂತಹ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸುಲಭವಾಗುವುದು ಮತ್ತು ಹೊಟ್ಟೆಯು ಸಣ್ಣದಾಗಿ ಕಾಣಿಸುವುದು. ಶುಂಠಿ ಸೇವಿಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದು.
ಬೆಳ್ಳುಳ್ಳಿ ಸ್ವಲ್ಪ ಘಾಟು. ಆದರೆ ಹಸಿ ಬೆಳ್ಳುಳ್ಳಿಯ ಕೆಲವು ಎಸಲುಗಳನ್ನು ಸೇವಿಸಿದರೆ ತೂಕ ಇಳಿಸಬಹುದು. ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ.
ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವ ದಾಲ್ಚಿನ್ನಿಯು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಬೆಳಗ್ಗೆ ನಿಮ್ಮ ಕಾಫಿಗೆ ದಾಲ್ಚಿನಿ ಹುಡಿ ಹಾಕಿದರೆ ಅದರಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು.

 

676

ಮೆಣಸಿನಲ್ಲಿ ಕಡಿಮೆ ಕ್ಯಾಲರಿ ಇದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಹಸಿವನ್ನು ಕಡಿಮೆ ಮಾಡಬಹುದು ಮತ್ತು ಕ್ಯಾಲರಿ ದಹಿಸಲು ಸಹಕಾರಿ ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ತೂಕ ಕಳೆದುಕೊಳ್ಳಲು ಇದು ತುಂಬಾ ಪರಿಣಾಮಕಾರಿ ಮನೆಮದ್ದು.
ಇದು ಮೂಗುಕಟ್ಟುವಿಕೆಯನ್ನು ನಿವಾರಿಸುವ ನೈಸರ್ಗಿಕ ಔಷಧಿಯಾಗಿದ್ದು, ಇದು ಕೂಡ ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡುವುದು.
ಸಾಸಿವೆ ಕಾಳುಗಳಲ್ಲಿ ಸೆಲೇನಿಯಂ ಅಂಶವಿದೆ. ಈ ಖನಿಜಾಂಶವು ದೇಹದಲ್ಲಿ ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ಇದು ಕೂಡ ತೂಕ ಇಳಿಸಲು ಸಹಕಾರಿ.
ಲಿಂಬೆಯು ಆಹಾರದ ರುಚಿಯನ್ನು ಹೆಚ್ಚಿಸುವುದು ಎನ್ನುವುದರಲ್ಲಿ ಸಂಶಯವಿಲ್ಲ. ಇದರಲ್ಲಿ ಕ್ಯಾಲರಿ ಇಲ್ಲದಿರುವುದು ತೂಕ ಕಳೆದುಕೊಳ್ಳಲು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಬಹುದು.
ಈ ಅದ್ಭುತ ಆಹಾರದಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದರಿಂದ ನಿಮಗೆ ಹೊಟ್ಟೆ ತುಂಬಿದಂತೆ ಆಗುವುದು. ಇದು ತೂಕ ಕಳೆದುಕೊಳ್ಳಲು ಒಳ್ಳೆಯದು.
ಬಾದಾಮಿಯನ್ನು ನಿಯಮಿತವಾಗಿ ಸೇವನೆ ಮಾಡುವವರು ತೂಕ ಕಳೆದುಕೊಳ್ಳುವ ಆಹಾರ ಕ್ರಮ ಪಾಲಿಸಬೇಕಿಲ್ಲವೆಂದು ಅಧ್ಯಯನಗಳು ಹೇಳಿವೆ.

                           - ಸವಿತಾ ಕನ್ನೂರ 

 

 

22

    ದಾಳಿಂಬೆಯ ಉಪಯೋಗಗಳು
 ಡಿಸೆಂಬರ್-22
ಕೆಲವೊಂದು ಶಾರೀರಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬೇಕು ಎಂದಾದರೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದರೆ ಎಲ್ಲಾ ಸಮಸ್ಯೆಗಳಿಗೆ ಆಸ್ಪತ್ರೆ ಒಂದೇ ಪರಿಹಾರ ಅಲ್ಲ. ಕೆಲವೊಂದು ವಸ್ತುಗಳು ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ. ಅದರಲ್ಲಿ ದಾಳಿಂಬೆ ಹೂವು ಕೂಡ ಒಂದಾಗಿದೆ. ಹೌದು ದಾಳಿಂಬೆ ಹೂವಿನಿಂದ ಹಲವಾರು ಪ್ರಯೋಜನಗಳಿವೆ. ಇದರಿಂದ ಸೌಂದರ್ಯ ಹೆಚ್ಚಾಗೋದು ಗ್ಯಾರಂಟಿ.
ದಾಳಿಂಬೆಯ ಎಲೆ, ಸಿಪ್ಪೆ, ಹೂವು, ಹಣ್ಣು, ಬೇರು ಎಲ್ಲವೂ ಅತ್ಯಂತ ಲಾಭದಾಯಕವಾಗಿದೆ. ಇವೆಲ್ಲವನ್ನೂ ಮಿಕ್ಸಿ ಮಾಡಿ, ಅದಕ್ಕೆ ವಿನೆಗರ್ ಮತ್ತು ನಾಲ್ಕು ಚಮಚ ರೋಸ್ವಾಟರ್ ಮಿಕ್ಸ್ ಮಾಡಿ. ನಾಲ್ಕು ದಿನದ ನಂತರ ಅದಕ್ಕೆ ಸಾಸಿವೆ ಎಣ್ಣೆ ಮಿಕ್ಸ್ ಮಾಡಿ ಕುದಿಸಿ. ನಂತರ ಇದನ್ನು ಸೋಸಿ ಎಣ್ಣೆಯನ್ನು ತೆಗೆದಿಡಿ.
ಇದನ್ನು ಪ್ರತಿದಿನ ಮುಖಕ್ಕೆ ಮತ್ತು ಶರೀರಕ್ಕೆ ಹಚ್ಚಿ ಮಸಾಜ್ ಮಾಡಿದರೆ ಹಲವಾರು ಲಾಭಗಳಿವೆ. ಇದರಿಂದ ಶರೀರದಲ್ಲಿರುವ ಸುಕ್ಕು, ಕಲೆ ನಿವಾರಣೆಯಾಗುತ್ತದೆ. ಇದರಿಂದ ಏನೆಲ್ಲ ಪ್ರಯೋಜನಗಳಿವೆ ನೋಡಿ....

ಇದರ ರಸವನ್ನು ಮೂಗಿಗೆ ಹಾಕಿದರೆ ಅಥವಾ ಸುಗಂಧ ತೆಗೆದುಕೊಂಡರೆ ಮೂಗಿನಿಂದ ರಕ್ತ ಸೋರುವುದು ನಿಲ್ಲುತ್ತದೆ. ದಾಳಿಂಬೆ ಹೂವು ಮತ್ತು ಗರಿಕೆ ಹುಲ್ಲಿನ ರಸ ತೆಗೆದುಕೊಂಡು ಮೂಗಿಗೆ ಹಾಕಿದರೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
ದಾಳಿಂಬೆ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಇದರಿಂದ ದಿನದಲ್ಲಿ 2-3 ಬಾರಿ ಹಲ್ಲುಜ್ಜಿದ್ದರೆ ಹಲ್ಲಿನಿಂದ ರಕ್ತ ಸೋರುವುದು ನಿಲ್ಲುತ್ತದೆ. ಅಲ್ಲದೆ ಹಲ್ಲು ಸ್ಟ್ರಾಂಗ್ ಆಗುತ್ತದೆ.
ದಾಳಿಂಬೆ ಹೂವಿನ ಕಷಾಯ ಮಾಡಿ ಅದಕ್ಕೆ ಒಂದು ಗ್ರಾಂ ಎಳ್ಳು ಹಾಕಿ ಸೇವನೆ ಮಾಡಿದರೆ ಹೊಟ್ಟೆಯ ಹುಳು ಸಾಯುತ್ತದೆ.
ಹೂವಿನ ಪೇಸ್ಟ್ ಮಾಡಿ ಅದಕ್ಕೆ ಜೇನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖ ಹೊಳೆಯಲು ಆರಂಭವಾಗುತ್ತದೆ ಹಾಗೂ ಸ್ಮೂತ್ ಆಗುತ್ತದೆ.

                                                         -  ಸವಿತಾ ಕನ್ನೂರ

 

 

 

44

 ದೇಹದ ತೂಕ ಇಳಿಸಬೇಕೇ..? ಹಾಗಾದ್ರೇ ಈ ಹಣ್ಣನ್ನು ಸೇವಿಸಿ


 ಡಿಸೆಂಬರ್-21
ಹೆಚ್ಚಿನವರು ಬಾಳೆಹಣ್ಣು ಖರೀದಿಸುವಾಗ ಹಳದಿ ಸಿಪ್ಪೆಯ ಬಾಳೆಹಣ್ಣನ್ನ ಖರೀದಿಸುತ್ತಾರೆ. ಜೊತೆಗೆ ತಿನ್ನುವುದು ಇದನ್ನೇ. ಮಾರುಕಟ್ಟೆಯಲ್ಲಿ ಸಹ ಇದುವೇ ಹೇರಳವಾಗಿರುತ್ತದೆ. ಆದರೆ ಕೆಂಪು ಸಿಪ್ಪೆಯ ಬಾಳೆಹಣ್ಣನ್ನು ನೀವು ತಿಂದಿದ್ದೀರಾ..? ತಿನ್ನುವುದಕ್ಕಿಂತ ಮುಂಚೆ ಇದನ್ನ ನೋಡಿದವರು ಬಹಳ ವಿರಳ. ಕೆಂಪು ಬಾಳೆಹಣ್ಣಿನ ಪ್ರಯೋಜನ ಏನೆಂದು ನಿಮಗೆ ಗೊತ್ತೇ..?
 ಪ್ರಯೋಜನ:
* ಈ ಬಾಳೆಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುತ್ತದೆ. ಇದು ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಅಂಶ ವನ್ನ ಹೆಚ್ಚಿಸುತ್ತದೆ. ಅಲ್ಲದೇ ಇದು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವುದು.

*ದೇಹದ ತೂಕ ಇಳಿಸಬೇಕೇ..? ಹಾಗಾದರೆ ಕೆಂಪು ಬಾಳೆಹಣ್ಣನ್ನ ಸಾಕಷ್ಟು ಸೇವಿಸಿ. ಇದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶ ನಮ್ಮ ನಾಲಿಗೆ ಚಪಲಕ್ಕೂ ಕಡಿವಾಣ ಹಾಕುತ್ತದೆ.
* ಮೂತ್ರಪಿಂಡದಲ್ಲಿ ಕಲ್ಲು ಸಮಸ್ಯೆ ಬಾರದಂತೆ ತಡೆಯಲು ಪೊಟ್ಯಾಶಿಯಂ ಅಂಶವಿರುವ ಆಹಾರ ಸೇವಿಸಬೇಕು.
ಇದರಲ್ಲಿ ಪೊಟ್ಯಾಶಿಯಂ ಜೊತೆಗೆ ಸಾಕಷ್ಟು ಕ್ಯಾಲ್ಶಿಯಂ ಅಂಶವಿರುತ್ತದೆ.
ಇದು ಎಲುಬುಗಳ ಬೆಳವಣಿಗೆಗೂ ಸಹಕಾರಿ.
* ಪೊಟ್ಯಾಶಿಯಂ ಅಂಶ ಧೂಮಪಾನವನ್ನ ನಿಯಂತ್ರಿಸುತ್ತದೆ. ಮಾನಸಿಕವಾಗಿ ಶಕ್ತಿ ನೀಡುವುದರಿಂದ ಧೂಮಪಾನ ಮಾಡುವುದನ್ನ ನಿಯಂತ್ರಿಸುತ್ತದೆ.
* ಕೆಂಪು ಬಾಳೆಹಣ್ಣು ತಿನ್ನುವುದು ಅಥವಾ ಚರ್ಮಕ್ಕೆ ಬಾಳೆಹಣ್ಣು ಲೇಪಿಸಿಕೊಳ್ಳುವುದು ಉತ್ತಮ. ಸ್ವಲ್ಪ ಓಟ್ಸ್ ಪುಡಿ ಮತ್ತು ಜೇನು ತುಪ್ಪದ ಜತೆಗೆ ಕೆಂಪು ಬಾಳೆ ಹಣ್ಣನ್ನು ಕಿವುಚಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು.

 

77  

 

 

44  ಚರ್ಮದ ಸಮಸ್ಯೆಗಳಿಗೆ ಅದ್ಭುತ ಪರಿಹಾರಗಳು
 ಡಿಸೆಂಬರ್ -20
ದೇಹದ ಸೌಂದರ್ಯವು ನಮ್ಮ ಆರೋಗ್ಯವನ್ನು ಹೇಗೆ ಅವಲಂಬಿಸಿರುತ್ತದೆಯಾ ಅದೇ ರೀತಿಯ ಬಾಹ್ಯ ಹವಾಮಾನವು ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಅದರಲ್ಲೂ ಚಳಿಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಹೆಚ್ಚಿನ ಸಮಯ ನೀಡಬೇಕು. ಚಳಿಗಾಲದಲ್ಲಿ ಶೀತ ವಾತಾವರಣದಿಂದಾಗಿ ಚರ್ಮವು ತೇವಾಂಶ ಕಳೆದುಕೊಂಡು ಒಣಗುವುದು, ತುರಿಕೆ ಹಾಗೂ ಚರ್ಮವು ಎದ್ದು ಬರುವುದು. ಇದರಿಂದ ಚರ್ಮವು ನಿಸ್ತೇಜವಾಗುವುದು. ಒಣ ಚರ್ಮವು ಪುರುಷರು ಹಾಗೂ ಮಹಿಳೆಯರ ಮೇಲೆ ಪರಿಣಾಮ ಬೀರುವುದು.
ಚಳಿಗಾಲು ಸಮಸ್ಯಗಳ ನಿವಾರಣೆ ಮನೆ ಮದ್ದು
ಊತ
ತುರಿಕೆ
ಕೆಂಪಾಗುವುದು
ಬೊಕ್ಕೆಗಳು

 

ಪಪ್ಪಾಯಿಯಲ್ಲಿರುವಂತಹ ಅಧಿಕ ನೀರಿನಾಂಶವು ಚರ್ಮವನ್ನು ತುಂಬಾ ನಯ, ಮೃಧು ಹಾಗೂ ತೇವಾಂಶದಿಂದ ಇಡುವುದು.ಅವಕಾಡೋ ಮತ್ತು ಬಾಳೆಹಣ್ಣಿನಲ್ಲಿ ವಿಟಮಿನ್ ಇ ಮತ್ತು ಪೊಟಾಶಿಯಂ ಅತ್ಯಧಿಕವಾಗಿದೆ. ಇದರಿಂದ ಚರ್ಮದಲ್ಲಿ ಮೊಶ್ಚಿರೈಸರ್ ನ್ನು ಉಳಿಸಿಕೊಳ್ಳಬಹುದು.
ಬಳಸುವುದು ಹೇಗೆ?
ಬಾಳೆಹಣ್ಣಿನ ಸಿಪ್ಪೆ ತೆಗೆದು ಅದನ್ನು ಅವಕಾಡೋ ಮತ್ತು ಪಪ್ಪಾಯಿ ತಿರುಳಿನ ಜತೆ ಸೇರಿಸಿ. ಇದನ್ನು ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ.
ಪೇಸ್ಟ್ ನ್ನು ಸಂಪೂರ್ಣ ಮುಖಕ್ಕೆ ಹಚ್ಚಿಕೊಳ್ಳಿ.
ಮುಖದ ಮೇಲೆ ಸುಮಾರು 15 ನಿಮಿಷ ಕಾಲ ಇದನ್ನು ಹಾಗೆ ಬಿಡಿ.
ನೀರಿನಿಂದ ಮುಖ ತೊಳೆಯಿರಿ.
ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಿಸಿ
ಸೌತೆಕಾಯಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶ ಇರುವುದು ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶ ಗುಣಗಳಿವೆ. ದೇಹಕ್ಕೆ ತೇವಾಂಶ ನೀಡುವ ಗುಣ ಮತ್ತು ಪ್ರಮುಖ ಪೋಷಕಾಂಶಗಳು ಇದರಲ್ಲಿದೆ. ಇದರಲ್ಲಿರುವ ತಂಪುಕಾರಿ ಮತ್ತು ಶಮನಕಾರಿ ಗುಣವು ತುರಿಕೆ, ಉರಿಯೂತ ಮತ್ತು ಊತ ಕಡಿಮೆ ಮಾಡುವುದು.
ಬಳಸುವ ವಿಧಾನ
ಒಂದು ಸೌತೆಕಾಯಿ ತೆಗೆದುಕೊಳ್ಳಿ.
ಇದರ ಸಿಪ್ಪೆ ತೆಗೆದು ಪೇಸ್ಟ್ ಮಾಡಿಕೊಳ್ಳಿ.
ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ.
ನೀರಿನಿಂದ ತೊಳೆಯಿರಿ.
ಬಾಧಿತ ಜಾಗಕ್ಕೆ ಸೌತೆಕಾಯಿಯ ಸಣ್ಣ ತುಂಡುಗಳನ್ನು ಉಜ್ಜಬಹುದು. ಇದರಿಂದ ಕಿರಿಕಿರಿ ಕಡಿಮೆಯಾಗುವುದು.
ಎಣ್ಣೆಯು ಚರ್ಮವನ್ನು ರಕ್ಷಿಸಲು ನೆರವಾಗುವುದು ಮತ್ತು ನೈಸರ್ಗಿಕ ಮೊಶ್ಚಿರೈಸರ್ ಅಗಿ ಕೆಲಸ ಮಾಡುವುದು.
77

 

77

ತೆಂಗಿನೆಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಚರ್ಮಕ್ಕೆ ಮೊಶ್ಚಿರೈಸ್ ಮಾಡಲು ಬಳಸಬಹುದು.
ಸ್ನಾನದ ಬಳಿಕ ಸ್ವಲ್ಪ ಎಣ್ಣೆ ತೆಗೆದುಕೊಂಡು ಮಸಾಜ್ ಮಾಡಿ. ನಿಮ್ಮ ದೇಹಕ್ಕೆ ಬೇಕಾದಷ್ಟು ಎಣ್ಣೆ ಬಳಸಿ.
ದೇಹಕ್ಕೆ ಹಚ್ಚಿಕೊಳ್ಳುವ ಮೊದಲು ಎಣ್ಣೆ ಬಿಸಿ ಮಾಡಬಹುದು.
ಚರ್ಮದ ಕಿರಿಕಿರಿ ಮತ್ತು ತುರಿಕೆ ಕಡಿಮೆ ಮಾಡಲು ಪ್ರತಿನಿತ್ಯ ಇದನ್ನು ಬಳಸಿ. ಚಳಿಗಾಲದ ರದ್ದುಗಳು ಇದರಿಂದ ಕಡಿಮೆಯಾಗುವುದು.
ಹಾಲಿನ ಕೆನೆಯಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮವನ್ನು ಬಿಳಿಗೊಳಿಸುವುದು. ಇದು ಚರ್ಮಕ್ಕೆ ತೇವಾಂಶ ನೀಡಿ ಚರ್ಮವು ತುಂಬಾ ನಯ ಹಾಗೂ ಕಾಂತಿಯಿಂದ ಹೊಳೆಯುವಂತೆ ಮಾಡುವುದು.
ಬಳಸುವ ವಿಧಾನ
ಒಂದು ಸಣ್ಣ ಪಾತ್ರೆಯಲ್ಲಿ ಒಂದು ಕಪ್ ಹಾಲಿನ ಕೆನೆ ಮತ್ತು ಹಿಚುಕಿದ ಬಾಳೆಹಣ್ಣು ಹಾಕಿ.
ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷ ಕಾಲ ಹಾಗೆ ಬಿಡಿ.
ನೀರಿನಿಂದ ಮುಖ ತೊಳೆಯಿರಿ.
ಜೇನುತುಪ್ಪವು ನೈಸರ್ಗಿಕ ಮೊಶ್ಚಿರೈಸರ್ ಆಗಿದೆ. ಇದರಲ್ಲಿ ಇರುವಂತಹ ಸೂಕ್ಷ್ಮಾಣುಜೀವಿ ವಿರೋಧಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಹಾನಿಗೊಳಗಾಗಿರುವ ಚರ್ಮದ ಕೋಶಗಳನ್ನು ಸರಿಪಡಿಸಿ ಚರ್ಮದಲ್ಲಿ ಮಾಯಿಶ್ಚರೈಸರ್ ಅನ್ನು ತರುವುದು.
ಬಳಸುವ ವಿಧಾನ
2-3 ಚಮಚ ಜೇನುತುಪ್ಪ ಬಿಸಿ ಮಾಡಿ.
ಬಾಧಿತ ಪ್ರದೇಶಕ್ಕೆ ಇದನ್ನು ಹಚ್ಚಿ.
15-20 ನಿಮಿಷ ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ.
ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಯು ಚರ್ಮದಲ್ಲಿ ಮೊಶ್ಚಿರೈಸ್ ಉಂಟು ಮಾಡಿ ಒಣಚರ್ಮವನ್ನು ನಿವಾರಣೆ ಮಾಡುವುದು.
ಇದನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಚರ್ಮದಲ್ಲಿನ ತೇವಾಂಶ ಚಳಿಗಾಲದಲ್ಲಿ ಹಾಗೆ ಉಳಿಯುವುದು.
ಚಳಿಗಾಲದ ರದ್ದು ಬರದಂತೆ ತಡೆಯುವ ಮಾರ್ಗಗಳು
ಬಿಸಿ ನೀರಿನ ಸ್ನಾನ ಮಾಡಬೇಡಿ ಮತ್ತು ಸುಗಂಧವಿರುವ ಸಾಬೂನು ಬಳಸಬೇಡಿ.
ಹತ್ತಿ ಬಟ್ಟೆಗಳನ್ನು ಧರಿಸಿ. ಇದು ಚರ್ಮವು ಅತಿಯಾಗಿ ಬಿಸಿಯಾಗುವುದನ್ನು ತಡೆಯುವುದು ಮತ್ತು ಕಿರಿಕಿರಿ ತಪ್ಪಿಸುವುದು.
ಚಳಿಗಾಲದಲ್ಲಿ ಹೊರಗಡೆ ಹೋಗುವಾಗ ಕೈಗೆ ಕೈಗವಚ ಧರಿಸಲು ಮೆರೆಯಬೇಡಿ.
ಕೆಲವೊಂದು ಚಳಿಗಾಲದ ರದ್ದುಗಳು ಸಾಮಾನ್ಯವಾಗಿರುವುದು ಮತ್ತು ಮೇಲೆ ಹೇಳಿದಂತಹ ಮನೆಮದ್ದಿನಿಂದ ನಿವಾರಣೆ ಆಗಬಹುದು. ಗಂಭೀರವಾಗಿದ್ದರೆ ಆಗ ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯವಾಗಿದೆ.

                                                                                 -  ಸವಿತಾ ಕನ್ನೂರ

 

 

        456  

ದಪ್ಪ ಹಾಗೂ ದಟ್ಟ ಕೂದಲಿಗೆ ನೈಸರ್ಗಿಕ ಮನೆಮದ್ದುಗಳು

ಡಿಸೆಂಬರ್-19

 ಪ್ರತಿಯೊಬ್ಬ ಮಹಿಳೆಯ ಕನಸೆಂದರೆ ತಾನು ನಾಲ್ಕು ಜನರ ಮುಂದೆ ಸುಂದರವಾಗಿ ಕಾಣಬೇಕು. ಎಲ್ಲರೂ ನನ್ನ ಸೌಂದರ್ಯವನ್ನೇ ಹೊಗಳುತ್ತಿರಬೇಕು ಎನ್ನುವ ಆಸೆಯು ಪ್ರತಿಯೊಬ್ಬರಲ್ಲೂ ಇರುವುದು. ಸೌಂದರ್ಯ ಪಡೆಯಲು ಪ್ರಮುಖವಾಗಿ ಮುಖ, ದೇಹ ಹಾಗೂ ಕೂದಲು ತುಂಬಾ ಪ್ರಮುಖ ಪಾತ್ರ ವಹಿಸುವುದು. ಅದರಲ್ಲೂ ದಪ್ಪ ಹಾಗೂ ದಟ್ಟ ಕೂದಲು ಪ್ರತಿಯೊಬ್ಬ ಮಹಿಳೆಗೂ ತುಂಬಾ ಇಷ್ಟವಾಗುವುದು.
ಇಂತಹ ಕೂದಲು ಇರುವಂತಹ ಮಹಿಳೆಯರು ನಾಲ್ಕು ಜನರ ಮಧ್ಯೆ ನಿಂತಿದ್ದರೂ ತುಂಬಾ ಭಿನ್ನವಾಗಿ ಕಾಣಿಸಿಕೊಳ್ಳುವರು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಕಾಡುವಂತಹ ಸಮಸ್ಯೆಯೆಂದರೆ ಕೂದಲು ತೆಳುವಾಗುವುದು. ಈ ಸಮಸ್ಯೆಗೆ ಕಾರಣಗಳು ಹಲವಾರು ಇದ್ದರೂ ಪ್ರತಿಯೊಬ್ಬ ಮಹಿಳೆಗೂ ಇದು ತುಂಬಾ ಚಿಂತೆಯ ವಿಷಯವಾಗಿರುತ್ತದೆ.
ಇದರಿಂದ ನಿಮಗೆ ಎಲ್ಲಿಗೂ ಹೋಗಲು ಕೂಡ ಮನಸ್ಸಾಗುವುದಿಲ್ಲ. ನೀವು ಕೂಡ ಕೂದಲು ತೆಳ್ಳಗಾಗುವಂತಹ ಸಮಸ್ಯೆ ಎದುರಿಸುತ್ತಾ ಇದ್ದರೆ ಈ ಲೇಖನ ಓದಿದ ಬಳಿಕ ನಿಮ್ಮ ಸಮಸ್ಯೆ ದೂರವಾಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ದಪ್ಪ ಹಾಗೂ ದಟ್ಟ ಕೂದಲನ್ನು ನೈಸರ್ಗಿಕ ವಿಧಾನದಿಂದ ಹೇಗೆ ಪಡೆದುಕೊಳ್ಳುವುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದುತ್ತಾ ಸಾಗಿ...
ಹರಳೆಣ್ಣೆಯಲ್ಲಿರುವಂತಹ ಪೋಷಕಾಂಶಗಳು ಕೂದಲಿನ ಎಳೆಗಳನ್ನು ಬಲಗೊಳಿಸುವುದು ಮತ್ತು ಅವುಗಳನ್ನು ಬುಡದಿಂದಲೇ ಬಲಗೊಳಿಸುವುದು. ಇದರಿಂದ ಕೂದಲು ತುಂಡಾಗುವುದು ತಪ್ಪುವುದು.

ಬಳಸುವುದು ಹೇಗೆ
ವಾರದಲ್ಲಿ ಒಂದು ಸಲ ಹರಳೆಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡು ಸುಮಾರು 5-10 ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ. ಇದನ್ನು ಮಾಡಿದ ಬಳಿಕ ಕೂದಲನ್ನು ಹದ ಬೆಚ್ಚಗಿನ ನೀರು ಮತ್ತು ಶಾಂಪೂ ಹಾಕಿ ತೊಳೆಯಿರಿ.
ಕೂದಲಿನ ಬುಡವನ್ನು ದುರ್ಬಲಗೊಳಿಸಿ ಕೂದಲಿನ ಎಳೆಗಳನ್ನು ತುಂಬಾ ತೆಳು ಹಾಗೂ ನಿಸ್ತೇಜ ಮಾಡುವಂತಹ ಕಲ್ಮಶಗಳನ್ನು ಮೆಂತ್ಯೆ ಕಾಳುಗಳು ತೆಗೆದು ಹಾಕುವುದು.
ಬಳಸುವ ವಿಧಾನ
ಒಂದು ಹಿಡಿ ಮೆಂತೆ ಕಾಳುಗಳನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಂಡು ಲಿಂಬೆ ರಸ ಹಾಕಿಕೊಂಡು ಮಿಶ್ರಣ ಮಾಡಿ. ಇದನ್ನು ತಲೆಬುರುಡೆಗೆ 
ಹಚ್ಚಿಕೊಂಡು ಒಂದು ಗಂಟೆ ಬಳಿಕ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಇದನ್ನು ಬಳಸಿ.   
ಈರುಳ್ಳಿ ರಸದಲ್ಲಿ ಕೂದಲಿಗೆ ನೆರವಾಗುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ಕೂದಲಿನ ವಿನ್ಯಾಸ ಬದಲಿಸಿ ಕೂದಲು ದಪ್ಪ ಹಾಗೂ ದಟ್ಟವಾಗುವಂತೆ ಮಾಡುವುದು. 
ಬಳಸುವ ವಿಧಾನ
3-4 ಚಮಚ ಈರುಳ್ಳಿ ರಸವನ್ನು ಒಂದು ನೀರಿನೊಂದಿಗೆ ಬೆರೆಸಿಕೊಳ್ಳಿ ಮತ್ತು ಇದರಿಂದ ಕೂದಲು ತೊಳೆಯಿರಿ. ಸುಮಾರು 10-15 ನಿಮಿಷ ಕಾಲ ಇದನ್ನು ಹಾಗೆ ಬಿಡಿ. 
ಬಳಿಕ ಹದ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ. ವಾರದಲ್ಲಿ ಒಂದು ಸಲ ಈ ಮನೆಮದ್ದನ್ನು ಬಳಸಿ.
ಹಿಂದಿನ ಕಾಲದಿಂದಲೂ ಕೂದಲಿನ ಆರೈಕೆಗಾಗಿ ಸಂಪಿಗೆ ಎಲೆಗಳನ್ನು ಬಳಸುತ್ತಾ ಇದ್ದರು. ಇದರಲ್ಲಿ ಇರುವಂತಹ ಖನಿಜಾಂಶ ಮತ್ತು ಪೋಷಕಾಂಶಗಳು ಕೂದಲು ವೇಗವಾಗಿ ದಪ್ಪಗಾಗಲು ನೆರವಾಗುವುದು.
 12 3     
      123  

ಬಳಸುವುದು ಹೇಗೆ?

ಎಲೆಗಳನ್ನು ರುಬ್ಬಿಕೊಂಡು ಅದರ ಹುಡಿಯನ್ನು ಬಾದಾಮಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿಕೊಳ್ಳಿ. ತಯಾರಿಸಿದ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಿ ಮತ್ತು 15 ನಿಮಿಷ ಕಾಲ ಇದು ಹಾಗೆ ಇರಲಿ. ಹದ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಿರಿ. ತಿಂಗಳಲ್ಲಿ ಎರಡು ಸಲ ಇದನ್ನು ಬಳಸಿದರೆ ದಪ್ಪ ಹಾಗೂ ದಟ್ಟ ಕೂದಲು ನಿಮ್ಮದಾಗುವುದು.
ನೆಲ್ಲಿಕಾಯಿ ಎಣ್ಣೆಯನ್ನು ಬಳಸುವುದರಿಂದ ಕೂದಲು ಒಳ್ಳೆಯ ರೀತಿ ಬೆಳವಣಿಗೆಯಾಗುವುದು ಮತ್ತು ಇದು ಕೂದಲಿನ ಸಂಪೂರ್ಣ ವಿನ್ಯಾಸ ಬದಲಾಯಿಸಿ ದಪ್ಪ ಹಾಗೂ ದಟ್ಟ ಕೂದಲು ನಿಮಗೆ ನೀಡುವುದು.


ಬಳಸುವ ವಿಧಾನ
ನೆಲ್ಲಿಕಾಯಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಬೆಳಗ್ಗೆ ತಣ್ಣೀರು ಮತ್ತು ಶಾಂಪೂ ಬಳಸಿ ಕೂದಲು ತೊಳೆಯಿರಿ. ವಾರದಲ್ಲಿ 
2-3 ಸಲ ಇದನ್ನು ಬಳಸಿದರೆ ವೇಗವಾಗಿ ಫಲಿತಾಂಶ ಪಡೆಯಬಹುದು.
ಪ್ರೋಟೀನ್ ನಿಂದ ಸಮೃದ್ಧವಾಗಿರುವ ಮೊಟ್ಟೆಯ ಲೋಳೆಯು ಕೂದಲು ತೆಳ್ಳಗಾಗುವುದಕ್ಕೆ ಒಳ್ಳೆಯ ಪರಿಹಾರ. ಇದು ಕೂದಲು ತೆಳ್ಳಗಾಗುವುದನ್ನು ತಡೆದು ದಪ್ಪ ಹಾಗೂ ದಟ್ಟ ಕೂದಲು ನೀಡುವುದು.

ಬಳಸುವ ವಿಧಾನ
ಒಂದು ಸಣ್ಣ ಪಿಂಗಾಣಿಯಲ್ಲಿ ಒಂದು ಮೊಟ್ಟೆಯ ಲೋಳೆ ಹಾಕಿ. ಇದಕ್ಕೆ ಕೆಲವು ಹನಿ ಲ್ಯಾವೆಂಡರ್ ಎಣ್ಣೆ ಹಾಕಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಲು ಕಲಸಿಕೊಳ್ಳಿ. 30 ನಿಮಿಷ ಬಳಿಕ ಹರ್ಬಲ್ ಶಾಂಪೂ ಬಳಸಿ ಕೂದಲು ತೊಳೆಯಿರಿ. ಒಳ್ಳೆಯ ಫಲಿತಾಂಶಕ್ಕಾಗಿ ತಿಂಗಳಲ್ಲಿ ಎರಡು ಸಲ ಇದನ್ನು ಬಳಸಿ.
ವಿಟಮಿನ್ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಲಿವ್ ತೈಲವು ಕೂದಲನ್ನು ಬಲಗೊಳಿಸಿ ವಿನ್ಯಾಸವನ್ನು ಸುಧಾರಿಸುವುದು.


ಬಳಸುವ ವಿಧಾನ
ಆಲಿವ್ ತೈಲದಿಂದ ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಂಡ ಬಳಿಕ 3-4 ಗಂಟೆಗಳ ಕಾಲ ಹಾಗೆ ಬಿಡಿ. ಇದರ ಬಳಿಕ ಲಘು ಶಾಂಪೂ ಮತ್ತು ತಣ್ಣೀರಿನಿಂದ 
ಕೂದಲು ತೊಳೆಯಿರಿ. ವಾರದಲ್ಲಿ 2-3 ಸಲ ಹೀಗೆ ಮಾಡಿದರೆ ನಿಮಗೆ ಶ್ರೇಷ್ಠ ಫಲಿತಾಂಶ ಸಿಗುವುದರಲ್ಲಿ ಸಂಶಯವೇ ಇಲ್ಲ.                          

                                                                         - ಸವಿತಾ  ಕನ್ನೂರ

 123      

 

 

 

 

23

 ಆರೋಗ್ಯಕ್ಕೆ ಬಹು ಉಪಯೋಗಿ ನುಗ್ಗೆ ಎಲೆಗಳು
 ಡಿಸೆಂಬರ್-18
ನುಗ್ಗೆ ಎಲೆಗಳನ್ನು ಹಲವಾರು ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಮೂಲ್ಯ ಖನಿಜಗಳು, ವಿಟಮಿನ್ನುಗಳು ಹಾಗೂ ಪ್ರೋಟೀನುಗಳೂ ಇವೆ. ಸಾಮಾನ್ಯವಾಗಿ ಈ ಎಲೆಗಳನ್ನು ದಾಲ್, ಸಾಂಬಾರ್ ಅಥವಾ ಕೆಲವು ಸೂಪ್ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದರ ಸೇವನೆಯಿಂದ ಹೆಚ್ಚಿನ ಶಕ್ತಿ ದೊರಕುವುದು ಮಾತ್ರವಲ್ಲ, ಅಮೂಲ್ಯ ಪೋಷಕಾಂಶಗಳೂ ಲಭ್ಯವಾಗುತ್ತವೆ.
ನೂರಾರು ವರ್ಷಗಳಿಂದ ನುಗ್ಗೆ ಎಲೆಗಳನ್ನು ಆಹಾರದ ಹೊರತಾಗಿ ಕೆಲವಾರು ರೋಗಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲ್ಪಡುತ್ತಾ ಬರಲಾಗಿದೆ. ಇರರ ಪೋಷಕಾಂಶಗಳ ಪಟ್ಟಿಯಲ್ಲಿ ಪ್ರಮುಖವಾಗಿ ವಿಟಮಿನ್ನು ಹಾಗೂ ಪ್ರೋಟೀನುಗಳಿವೆ. ವಿಟಮಿನ್ ಎ, ಸಿ, ಬಿ6, ಪೊಟ್ಯಾಶಿಯಂ, ಪೋಲೇಟ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದವು ಉತ್ತಮ ಪ್ರಮಾಣದಲ್ಲಿರುವ ಕಾರಣ ಇದೊಂದು ಪರಿಪೂರ್ಣ ಆಹಾರವೆನ್ನ ಬಹುದು. ಒಂದು ವೇಳೆ ನುಗ್ಗೆ ಎಲೆಗಳ ಬಗ್ಗೆ ಇದುವರೆಗೆ ನಿಮಗೆ ತಿಳಿದೇ ಇಲ್ಲದಿದ್ದರೆ ಮುಂದಿನ ಬಾರಿ ಮಾರುಕಟ್ಟೆಗೆ ಹೋದಾಗ ನುಗ್ಗೆ ಎಲೆಗಳನ್ನು ಮರೆಯದೇ ತನ್ನಿ. ಈ ಎಲೆಗಳ ನಿಯಮಿತ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...
ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಹಾಗೂ ಕ್ಲೋರೋಜೆನಿಕ್ ಆಮ್ಲ ಎಂಬ ಆಂಟಿ ಆಕ್ಸಿಡೆಂಟು ಇದ್ದು ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ದೇಹ ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಕಡಿಮೆಗೊಳಿಸಿ ತೂಕ ಇಳಿಯಲು ನೆರವಾಗುತ್ತದೆ.
ಇದರಲ್ಲಿರುವ ಪೋಷಕಾಂಶಗಳು ಚರ್ಮದ ಬುಡದಿಂದ ಪೋಷಣೆ ನೀಡುವ ಕಾರಣ ಚರ್ಮದ ಅಡಿಯಲ್ಲಿ ಕೀವು ತುಂಬಿಕೊಳ್ಳುವುದರಿಂದ ರಕ್ಷಣೆ ದೊರಕಿದಂತಾಗುತ್ತದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಕಲ್ಮಶಗಳನ್ನು ನಿವಾರಿಸಿ ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆ ಪಡೆಯಲು ನೆರವಾಗುತ್ತದೆ.

 

ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿರುವ ಕಾರಣ ಸೇವನೆಯ ಅನತಿಹೊತ್ತಿನಲ್ಲಿಯೇ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣ ಹಾಗೂ ಮೆಗ್ನೀಶಿಯಂ ಇದಕ್ಕೆ ಕಾರಣ. ಪರಿಣಾಮವಾಗಿ ಸುಸ್ತು ಮತ್ತು ಬಳಲಿಕೆಯಿಂದ ಶೀಘ್ರವೇ ಹೊರಬರಲು ಸಾಧ್ಯವಾಗುತ್ತದೆ.

ಈ ಎಲೆಗಳಲ್ಲಿ ಸುಮಾರು ಹದಿನೆಂಟು ಬಗೆಯ ಅಮೈನೋ ಆಮ್ಲಗಳಿದ್ದು ಇವು ದೇಹದ ಜೀವರಾಸಾಯನಿಕ ಕ್ರಿಯೆಯ ಮೂಲಾಧಾರವಾಗಿವೆ. ವಿಶೇಷವಾಗಿ ಟ್ರಿಫ್ಟೋಫ್ಯಾನ್ ಎಂಬ ಅಮೈನೋ ಆಮ್ಲ ನಮ್ಮ ನಿದ್ದೆಯ ಆವರ್ತನವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ನಮ್ಮ ಮೆದುಳಿಗೆ ಮುದನೀಡುವ ರಸದೂತಗಳನ್ನು ಹೆಚ್ಚು ಸ್ರವಿಸಲು ನೆರವಾಗುವ ಮೂಲಕ ಗಾಢನಿದ್ದೆ ಪಡೆಯಲು ನೆರವಾಗುತ್ತದೆ.
ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಮ್ಮ ದೇಹದ ಜೀವಕೋಶಗಳನ್ನು ಸುಸ್ಥಿತಿಯಲ್ಲಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆಯಾಗಿ ಸುಮಾರು ಮೂವತ್ತು ಬಗೆಯ ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳು ಕರುಳು ಕ್ಯಾನ್ಸರ್ ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಆರೋಗ್ಯಕರ ತ್ವಚೆಯ ಮೂಲಕ ವೃದ್ಧಾಪ್ಯ ಆವರಿಸುವುದೂ ತಡವಾಗುತ್ತದೆ.
ಮಧುಮೇಹದ ಸೇವನೆಯಿಂದ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಇದರಲ್ಲಿರುವ ಆಸ್ಕಾರ್ಬಿಕ್ ಆಮ್ಲ ಕಾರಣವಾಗಿದ್ದು ಇದು ದೇಹದಲ್ಲಿ ಹೆಚ್ಚು ಇನ್ಸುಲಿನ್ ಸ್ರವಿಸಲು ನೆರವಾಗುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಈ ಎಲೆಗಳಲ್ಲಿ ಉರಿಯೂತ ನಿವಾರಕ ಹಾಗೂ ಗುಣಪಡಿಸುವ ಗುಣಗಳಿದ್ದು ಚಿಕ್ಕ ಪುಟ್ಟ ಗಾಯ, ಸುಟ್ಟ ಗಾಯ, ಜಜ್ಜಿದ ಭಾಗಗಳನ್ನು ಶೀಘ್ರವಾಗಿ ಗುಣಪಡಿಸುವುದರೊಂದಿಗೇ ದೇಹದಲ್ಲಿ ಎದುರಾಗುವ ಸೋಂಕುಗಳಿಂದಲೂ ರಕ್ಷಣೆ ಒದಗಿಸುತ್ತದೆ.
ನಿಮ್ಮ ನಿತ್ಯದ ಆಹಾರದಲ್ಲಿ ನುಗ್ಗೆಸೊಪ್ಪನ್ನು ಅಳವಡಿಸಿಕೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಹೊರಹಾಕಲು ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಕಲ್ಮಶಗಳನ್ನು ಶೀಘ್ರವಾಗಿ ಹೊರಹಾಕಲು ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳಿಂದ ರಕ್ಷಿಸುತ್ತದೆ.
ಈ ಎಲೆಗಳಲ್ಲಿರುವ ವಿಟಮಿನ್ ಸಿ ಮತ್ತು ಇ ಆರೋಗ್ಯವನ್ನು ವೃದ್ಧಿಸುತ್ತವೆ. ವಿಟಮಿನ್ ಸಿ ದೇಹದಲ್ಲಿ ನ್ಯೂರೋಟ್ರಾನ್ಸ್ ಮಿಟರ್ಗಳ ಹೆಚ್ಚು ಹೆಚ್ಚು ಉತ್ಪತ್ತಿಗೆ ನೆರವಾದರೆ ವಿಟಮಿನ್ ಇ ಮೆದುಳಿನ ಜೀವಕೋಶಗಳ ಸವೆತವನ್ನು ತಡೆದು ಇದರಿಂದ ಎದುರಾಗುವ ಮರೆಗುಳಿತನ ಹಾಗೂ ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ.

                                           -  ಸವಿತಾ ಕನ್ನೂರ

447  

 

 

 

 

  45

 ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವಿಸಲೇಬೇಕು ಯಾಕೆ ಗೊತ್ತಾ?
 ಡಿಸೆಂಬರ್-9
ಬೆಂಗಳೂರು: ಚಳಿಗಾಲ ಬಂತೆಂದರೆ ನೆಲ್ಲಿಕಾಯಿ ಸೀಸನ್ ಶುರು. ವಿಟಮಿನ್ ಸಿ, ಕಬ್ಬಿಣದಂಶ ಹೇರಳವಾಗಿರುವ ನೆಲ್ಲಿಕಾಯಿ ನಮ್ಮ ದೇಹಕ್ಕೆ ತುಂಬಾ ಉತ್ತಮ.
ನೆಲ್ಲಿಕಾಯಿ ತಿಂದರೆ ಆರೋಗ್ಯ ವೃದ್ಧಿಸುತ್ತದೆ, ಕೂದಲು ಚೆನ್ನಾಗಿ ಬೆಳೆಯುತ್ತದೆ, ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ ಎಂದೆಲ್ಲಾ ನಾವು ಕೇಳಿದ್ದೆವು. ಅದೇ ರೀತಿ ಇದು ಚಳಿಗಾಲದಲ್ಲಿ ಬರುವ ಶೀತ, ಕಫ ಸಂಬಂಧಿ ಸಮಸ್ಯೆಗೂ ಪರಿಹಾರ ನೀಡುತ್ತದೆ.

 ನಲ್ಲಿಕಾಯಿಯ ಉಪಯೋಗಗಳು
ಪ್ರತಿ ನಿತ್ಯ ನೆಲ್ಲಿ ಕಾಯಿ ರಸಕ್ಕೆ ಸಮಪ್ರಮಾಣದಲ್ಲಿ ಜೇನು ತುಪ್ಪು ಸೇರಿಸಿಕೊಂಡು ಸೇವಿಸುವುದರಿಂದ ಗಂಟಲು ಕೆರೆತ, ಶೀತ ಮತ್ತು ಕೆಮ್ಮಿನಿಂದ ಪರಿಹಾರ ಸಿಗುತ್ತದೆ. ಹಾಗೆಯೇ ನೆಲ್ಲಿಕಾಯಿ ರಸಕ್ಕೆ ಹದ ಬಿಸಿ ನೀರು ಸೇರಿಸಿಕೊಂಡು ಗಾರ್ಗಲ್ ಮಾಡಿಕೊಳ್ಳುವುದರಿಂದ ಬಾಯಿ ಹುಣ್ಣು ನಿವಾರಣೆಯಾಗಬಹುದು. ಅದೇ ರೀತಿ ನೆಲ್ಲಿಕಾಯಿ ಜ್ಯೂಸ್ ನಿಯಮಿತವಾಗಿ ಸೇವಿಸುತ್ತಿದ್ದರೆ, ಉಸಿರಾಟ ಸಂಬಂಧಿ ಸಮಸ್ಯೆಗೂ ಪರಿಹಾರ ಸಿಗುತ್ತದೆ.

                                           ಸವಿತಾ  ಕನ್ನೂರ

 

 

 

 

445

  ಬೆಳ್ಳುಳ್ಳಿಯ ಸೌಂದರ್ಯ ರಹಸ್ಯ...

ಡಿಸೆಂಬರ್.8

 

ಬೆಳ್ಳುಳ್ಳಿ ಕಂಡರೆ ಹೆಚ್ಚಿನ ಮಹಿಳೆಯರಿಗೆ ಆಗಲ್ಲ, ಅದರ ಘಾಟು ವಾಸನೆ ಕಂಡು ದೂರ ಓಡಿ ಹೋಗುವ ಮಹಿಳೆಯರಿಗೆ ಇಲ್ಲೊಂದು ಒಳ್ಳೆಯ ಸುದ್ದಿಯಿದೆ. ಮಹಿಳೆಯರಿಗೂ ಇನ್ನು ಮುಂದೆ ಬೆಳ್ಳುಳ್ಳಿ ಮೇಲೆ ಪ್ರೀತಿ ಮೂಡಬಹುದು. ಹೌದು, ಬೆಳ್ಳುಳ್ಳಿಯಲ್ಲಿ ಇರುವಂತಹ ಹಲವಾರು ಆರೋಗ್ಯಕಾರಿ ಗುಣಗಳ ಬಗ್ಗೆ ಈಗಾಗಲೇ ಬೋಲ್ಡ್ ಸ್ಕೈಯಲ್ಲಿ ನೀವು ಓದಿ ತಿಳಿದಿರಬಹುದು. ಆದರೆ ಬೆಳ್ಳುಳ್ಳಿಯಲ್ಲಿ ಸೌಂದರ್ಯವರ್ಧಕ ಗುಣಗಳು ಕೂಡ ಇವೆ ಎನ್ನುವುದು ಮಾತ್ರ ನಿಮಗೆ ತಿಳಿದಿರಲಿಕ್ಕಿಲ್ಲ.
ಬೆಳ್ಳುಳ್ಳಿಯಲ್ಲಿ ಆಯಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಈ ಗುಣಗಳಿಂದಾಗಿಯೇ ಬೆಳ್ಳುಳ್ಳಿಯು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡಲಿದೆ. ಇದು ತ್ವಚೆ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು. ನಿಯಮಿತವಾಗಿ ಬೆಳ್ಳುಳ್ಳಿ ಹಚ್ಚಿಕೊಂಡರೆ ತ್ವಚೆ ಹಾಗೂ ಕೂದಲು ಬದಲಾಗುವುದು.
ತಜ್ಞರು ಕೂಡ ಈ ನೈಸರ್ಗಿಕ ಸಾಮಗ್ರಿಯನ್ನು ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದಾರೆ. ಕ್ರೀಮ್ ಮತ್ತು ಇತರ ಕೆಲವೊಂದು ಸೌಂದರ್ಯವರ್ಧಕಗಳಿಗೆ ಹಣ ವ್ಯಯಿಸುವ ಬದಲು ಅಡುಗೆ ಮನೆಯಲ್ಲೇ ಸಿಗುವಂತಹ ಬೆಳ್ಳುಳ್ಳಿ ಬಳಸಿದರೆ ತುಂಬಾ ಒಳ್ಳೆಯದು. ತ್ವಚೆ ಹಾಗೂ ಕೂದಲು ನಿಮ್ಮ ಕನಸಿನಂತೆ ಇರಬೇಕೆಂದು ಬಯಸುವುದಾದರೆ ನೀವು ಬೆಳ್ಳುಳ್ಳಿಯನ್ನು ಸೌಂದರ್ಯವರ್ಧಕವಾಗಿ ಬಳಸಬೇಕು.

 

12

 

ಸೂಚನೆ: ಸೌಂದರ್ಯವರ್ಧಕವಾಗಿ ಬೆಳ್ಳುಳ್ಳಿ ಬಳಸಲು ಬಯಸುವವರು ತ್ವಚೆಗೆ ಮೊದಲು ಹಚ್ಚಿ ಪರೀಕ್ಷಿಸಿಕೊಳ್ಳಬೇಕು. ಕೆಲವರಿಗೆ ಬೆಳ್ಳುಳ್ಳಿಯು ಅಲರ್ಜಿ ಉಂಟು ಮಾಡಬಹುದು...

  ಚರ್ಮದ ರಂಧ್ರಗಳನ್ನು ತೆರೆಯಲು
ಚರ್ಮದ ರಂಧ್ರಗಳು ಮುಚ್ಚಿಹೋದರೆ ಆಗ ಬಿಳಿ ಮೊಡವೆಗಳು ಹಾಗೂ ಬೊಕ್ಕೆಗಳು ಇತ್ಯಾದಿ ಕಾಣಿಸಿಕೊಳ್ಳುವುದು. ಇದರಿಂದ ಚರ್ಮದ ರಂಧ್ರಗಳನ್ನು ಸ್ವಚ್ಛ ಹಾಗೂ ಅದು ತುಂಬದಂತೆ ಇಟ್ಟುಕೊಳ್ಳುವುದು ಅಗತ್ಯ. ಈ ಸಂದರ್ಭದಲ್ಲಿ ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಕಿತ್ತುಹಾಕುವ ಗುಣವು ಚರ್ಮದ ರಂಧ್ರವನ್ನು ತೆರೆಯುವುದು ಮತ್ತು ದೀರ್ಘ ಕಾಲ ತನಕ ಇದು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು.
 ಮೊಡವೆಗಳ ನಿವಾರಣೆಗೆ
ಫುಲ್ಲರ್ ಅರ್ಥ್ ಮಣ್ಣನ್ನು ತೆಗೆದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಎಣ್ಣೆ ಮತ್ತು ರೋಸ್ ವಾಟರ್ ಹಾಕಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಮುಖವನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಸಂಪೂರ್ಣವಾಗಿ ಒಣಗಿದ ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಮೆತ್ತಗಿನ ಟವೆಲ್ ನಿಂದ ಮುಖ ಒರೆಸಿಕೊಳ್ಳಿ.

 

 

  ಕಪ್ಪು ಕಲೆಗಳ ನಿವಾರಣೆ
ಕಪ್ಪು ಕಲೆಗಳು ಹೆಚ್ಚಾಗಿ ಮೂಗು ಮತ್ತು ಗಲ್ಲದ ಭಾಗದಲ್ಲಿ ಕಾಣಿಸಿಕೊಳ್ಳುವುದು. ಆದರೆ ಇದು ಮೊಡವೆಗಳಂತೆ ಪದೇ ಪದೇ ಬರುವುದಿಲ್ಲ. ಮುಖದ ಮೇಲೆ ಕಪ್ಪು ಕಲೆಗಳೂ ಇದ್ದರೆ ಅದರಿಂದ ಚರ್ಮವು ಸ್ವಚ್ಛವಾಗಿರದಂತೆ ಹಾಗೂ ಕಲ್ಮಷ ತುಂಬಿರುವಂತೆ ಕಂಡುಬರುವುದು. ಬೆಳ್ಳುಳ್ಳಿಯಲ್ಲಿ ಇರುವಂತಹ ಆಯಂಟಿಆಕ್ಸಿಡೆಂಟ್ ಚರ್ಮದ ಮೇಲ್ಭಾಗವನ್ನು ತಲುಪಿ ಕಪ್ಪು ಕಲೆಗಳು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಾಶ ಮಾಡುವುದು. ಚರ್ಮವನ್ನು ಕಪ್ಪು ಕಲೆಗಳಿಂದ ದೂರ ಮಾಡಲು ನಿಯಮಿತವಾಗಿ ಬೆಳ್ಳುಳ್ಳಿ ಹಚ್ಚಿಕೊಂಡರೆ ಒಳ್ಳೆಯದು.
 ವಯಸ್ಸಾಗುವ ಲಕ್ಷಣ ವಿಳಂಬಗೊಳಿಸುವುದು
ನೆರಿಗೆ, ಚರ್ಮ ಜೋತು ಬೀಳುವುದು, ಗೆರೆಗಳು ಮೂಡುವುದು ಇವು ವಯಸ್ಸಾಗುತ್ತಿರುವ ಪ್ರಮುಖ ಲಕ್ಷಣಗಳಾಗಿವೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನು ತ್ವಚೆಗೆ ಹಚ್ಚಿಕೊಂಡರೆ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸದಂತೆ ಮಾಡಬಹುದು. ವಾರದಲ್ಲಿ ಒಂದು ಸಲ ಬೆಳ್ಳುಳ್ಳಿಯನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಬಳಸಿಕೊಂಡರೆ ಚರ್ಮವು ಯೌವನಭರಿತವಾಗಿ ಕಾಣುವುದು.
 ಚರ್ಮ ಒತ್ತಿದ ಕಲೆಗಳ ತೆಗೆಯುವುದು
ಚರ್ಮದಲ್ಲಿ ಕಾಣಿಸಿಕೊಳ್ಳುವಂತಹ ಒತ್ತಿದ ಕಲೆಗಳನ್ನು ನಿವಾರಣೆ ಮಾಡಲು ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿ. ಚರ್ಮದಲ್ಲಿ ಕಾಣಿಸುತ್ತಿರುವ ಹಳೆಯ ಒತ್ತಿದ ಗುರುತುಗಳನ್ನು ತಡೆಯುವ ಇದು ಮತ್ತೆ ಇದು ಆಗದಂತೆ ತಡೆಯುವುದು. ಬೆಳ್ಳುಳ್ಳಿಯನ್ನು ಕೆಲವು ನೈಸರ್ಗಿಕ ತೈಲದೊಂದಿಗೆ ಬಳಸಿಕೊಂಡರೆ ಈ ಗುರುತುಗಳನ್ನು ಬೇಗನೆ ನಿವಾರಣೆ ಮಾಡಬಹುದು. ಬಾಧಿತ ಪ್ರದೇಶಕ್ಕೆ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಒಳ್ಳೆಯದು.

                               - ಸವಿತಾ ಈರಪ್ಪಾ ಕನ್ನೂರ

456

 

 

 

 

         

ತುಪ್ಪದಿಂದ ದೇಹಕ್ಕಾಗುವ ಅನೇಕ ಉಪಯೋಗಗಳನ್ನು ತಿಳಿಯಬೇಕೇ?

ಡಿಸೆಂಬರ್.8

ಸಾಮಾನ್ಯವಾಗಿ ಎಲ್ಲರು ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುತ್ತೇವೆ, ಹಲ್ಲುಜ್ಜುತ್ತೇವೆ, ವ್ಯಾಯಾಮ ಮಾಡುತ್ತೇವೆ ಎಂದು ಹೇಳುತ್ತಾರೆ. ಅದೇ ಯಾರಾದರೂ ತುಪ್ಪವನ್ನು ತಿನ್ನುತ್ತೇವೆ ಎಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು? ತುಪ್ಪ ಎಂದರೆ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಬರುವುದು. ಜಿಡ್ಡಿನ ಪದಾರ್ಥ, ಅತಿಯಾದ ಕೊಬ್ಬನ್ನು ಹೊಂದಿರುತ್ತದೆ, ಅದನ್ನು ಮಿತವಾಗಿ ಸೇವಿಸಬೇಕು, ಅತಿಯಾಗಿ ತಿಂದರೆ ಆರೋಗ್ಯ ಹಾಳಾಗುವುದು, ತೂಕ ಹೆಚ್ಚುವುದು ಸೇರಿದಂತೆ ಇನ್ನಿತರ ವಿಚಾರ ಮನಸ್ಸಿಗೆ ಬರಬಹುದು ಅಲ್ಲವೇ? ಬರೀ ಒಂದೆರಡು ಚಮಚ ತುಪ್ಪದಲ್ಲಿದೆ ಹತ್ತಾರು ಲಾಭ....

ಆದರೆ ಈ ಲೇಖನದಲ್ಲಿ ತುಪ್ಪ ತಿಂದರೆ ಯಾವೆಲ್ಲಾ ರೋಗವನ್ನು ನಿವಾರಿಸಬಹುದು ಎನ್ನುವ ವಿವರಣೆಯನ್ನು ನೀಡಲಾಗಿದೆ. ಹೌದು, ತುಪ್ಪ ಎಂದರೆ ಅದು ಕೇವಲ ಕೊಬ್ಬಿನ ಪದಾರ್ಥ ಎನ್ನುವುದಕ್ಕೆ ಸೀಮಿತವಾಗಿಲ್ಲ. ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಆದರೆ ಇದು ಸತ್ಯ. ತುಪ್ಪದ ಸೇವನೆಯಿಂದ ಯಾವೆಲ್ಲಾ ಸಮಸ್ಯೆಗಳಿಂದ ದೂರ ಇರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ..
ಜೀವಕೋಶದ ಚಟುವಟಿಕೆ ಹೆಚ್ಚುವುದು ಆಯುರ್ವೇದದ ಪ್ರಕಾರ ಖಾಳಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು. ಜೀವಕೋಶವನ್ನು ಪುನಃ ಶ್ಚೇತನಗೊಳಿಸಬೇಕು ಎಂದಾದರೆ ತುಪ್ಪವನ್ನು ಸೇವಿಸಬೇಕು. ಅಲ್ಲದೆ ದೇಹಕ್ಕೆ ಉತ್ತಮವಾದ ಆರೈಕೆಯನ್ನು ನೀಡುವುದು.
          
             ಚರ್ಮದ ಕಾಂತಿ ಹೆಚ್ಚುವುದು ತುಪ್ಪ ಜೀವಕೋಶಗಳ ಪೋಷಣೆ ಮತ್ತು ಪುನರುಜ್ಜೀವನ ಗೊಳಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುತ್ತದೆ. ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ, ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಸೋರಿಯಾಸಿಸ್ನಂತಹ ಚರ್ಮ ರೋಗಗಳನ್ನು ಇದು ತಡೆಯುವುದು.
ಸಂಧಿವಾತವನ್ನು ತಡೆಯುತ್ತದೆ ತುಪ್ಪ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ. ಹಾಗಾಗಿ ಇದನ್ನು ಕೀಲುಗಳಿಗೆ ಉತ್ತಮ ಆರೈಕೆ ಮಾಡುವುದು. ಸಂಧುಗಳ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪನವನ್ನು ಮಾಡಬಹುದು. ತುಪ್ಪದ ಸೇವನೆಯಿಂದ ಆಸ್ಟಿಯೊಪೊರೋಸಿಸ್ ಸೇರಿದಂತೆ ಅನೇಕ ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮಿದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ನೆನಪಿನ ಶಕ್ತಿ, ಕಲಿಕೆ, ಜ್ಞಾನ ಗ್ರಹಣ, ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತದೆ. ಅಲ್ಲದೆ ಬುದ್ಧಿಮಾಂಧ್ಯತೆ ಅಲ್ಝಮೈರ್ ನಂತಹ ಕಾಯಿಲೆ ಬರದಂತೆ ತಡೆಯುವುದು.
ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಅದು ಕೇಶರಾಶಿಯ ಸಂರಕ್ಷಣೆಗೆ ಸಹಾಯವಾಗುತ್ತದೆ. ಕೂದಲಿನ ಫೋಲಿಸೆಲ್ಸ್ ಗಳು ಆರೋಗ್ಯವಾಗಿರುವಂತೆ ಮಾಡುತ್ತದೆ. ಇದರಿಂದ ಹೊಳಪಿನಿಂದ ಕೂಡಿರುವ ದಟ್ಟವಾದ ಕೂದಲನ್ನು ನೀವು ಹೊಂದಬಹುದು.
  
         ಕೆಲವರಿಗೆ ಹಾಲು ಅಥವಾ ಹಾಲಿನಿಂದ ತಯಾರಿಸಿರುವ ಉತ್ಪನ್ನಗಳನ್ನು ಸೇವಿಸದಾಗ ಸೂಕ್ತ ರೀತಿಯ ಜೀರ್ಣಕ್ರಿಯೆ ಉಂಟಾಗುವುದಿಲ್ಲ. ಅದೇ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸ್ವೀಕರಿಸಿದರೆ ಲ್ಯಾಕ್ಟೋಸ್ ಸಮಸ್ಯೆಯು ಸುಧಾರಣೆ ಕಾಣುತ್ತದೆ. ಜೀರ್ಣ ಕ್ರಿಯೆಯೂ ಉತ್ತಮವಾಗಿ ನೆರವೇರುವುದು.
ಕ್ಯಾನ್ಸರ್ ನಿಂದ ದೂರ ಇಡುವುದು ನೈಸರ್ಗಿಕವಾದ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನೇಕ ಬಗೆಯ ಕ್ಯಾನ್ಸರ್ ಕಾಯಿಲೆಯಿಂದ ದೂರ ಇರಬಹುದು. ಆಯುರ್ವೇದದ ಪ್ರಕಾರ ತುಪ್ಪ ಕ್ಯಾನ್ಸರ್ ವಿರೋಧಿ ಲಕ್ಷಣವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.
ತುಪ್ಪದ ಇನ್ನಷ್ಟು ಪ್ರಯೋಜನಗಳನ್ನು ತಿಳಿಯಿರಿ...
ದೇಹದ ತೇವಕಾರಕ ಎಣ್ಣೆಯಾಗಿ ಒಂದು ವೇಳೆ ನಿಮ್ಮ ಚರ್ಮ ವಿಪರೀತ ಒಣದಾಗಿದ್ದರೆ ಈ ವಿಧಾನವನ್ನು ಅನುಸರಿಸಿ: ಎರಡು ದೊಡ್ಡ ಚಮಚ ಅಪ್ಪಟ ತುಪ್ಪವನ್ನು ಕರಗುವಷ್ಟು ಬಿಸಿಮಾಡಿ. ಬಳಿಕ ಉಗುರುಬೆಚ್ಚನೆಯ ತಾಪಮಾನಕ್ಕೆ ಬರುವಷ್ಟು ತಣಿಸಿ. ಬಳಿಕ ಈ ತುಪ್ಪವನ್ನು ತೆಳುವಾಗಿ ಒಣಚರ್ಮದ ಮೇಲೆಲ್ಲಾ ನಯವಾಗಿ ಮಸಾಜ್ ಮಾಡುತ್ತಾ ಸವರಿಕೊಳ್ಳಿ. ಸುಮಾರು ಒಂದು ಘಂಟೆ ಬಿಟ್ಟು ಸ್ನಾನ ಮಾಡಿ.
ಮುಖದ ಕಾಂತಿಗೆ ಒಂದು ದೊಡ್ಡ ಚಮಚ ಕಡ್ಲೆಹಿಟ್ಟು, ಒಂದು ದೊಡ್ಡ ಚಮಚ ಅಪ್ಪಟ ತುಪ್ಪ ಹಾಗೂ ಅಗತ್ಯವಿರುವಷ್ಟು ನೀರು ಬೆರೆಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಇದನ್ನು ಪೂರ್ಣವಾಗಿ ಒಣಗಲು ಬಿಡಿ. ಒಣಗಿದ ಬಳಿಕ ಈ ಲೇಪನ ಬಿರಿಬಿಡಲು ಪ್ರಾರಂಭಿಸುತ್ತದೆ. ಈಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ.
       
ಬಾಡಿ ಲೋಷನ್ ರೂಪದಲ್ಲಿ ದೇಹದ ತ್ವಚೆಯನ್ನು ಇಡಿಯ ದಿನ ಕೋಮಲ ಮತ್ತು ಮೃದುವಾಗಿಸಲು ತುಪ್ಪವೂ ಸಮರ್ಥವಾಗಿದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕೊಂಚ ಲ್ಯಾವೆಂಡರ್ ಎಣ್ಣೆಯ ಹನಿಗಳನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಸ್ನಾನದ ಬಳಿಕ ಈ ಲೇಪನವನ್ನು ತೆಳುವಾಗಿ ಕೊಂಚ ಮಸಾಜ್ ಮೂಲಕ ಸೂಕ್ಷ್ಮಭಾಗಗಳನ್ನು ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಿ.          ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ ಉತ್ತರ ಭಾರತದಲ್ಲಿ ಹೃದಯಸಂಬಂಧಿ ಕಾಯಿಲೆಗಳು ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇದರ ಮೂಲ ಕಾರಣವೇನೆಂದರೆ ಉತ್ತರ ಭಾರತದ ಜನರು ಎಣ್ಣೆಗೆ ಬದಲಾಗಿ ಹೆಚ್ಚಾಗಿ ತುಪ್ಪವನ್ನೇ ಸೇವಿಸುತ್ತಾರೆ. ಈ ಅಭ್ಯಾಸದಿಂದ ದೇಹದ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಕೆಟ್ಟಕೊಲೆಸ್ಟ್ರಾಲ್ ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಇದು ಹೃದಯದ ಮೇಲಿನ ಹೊರೆಯನ್ನು ತಗ್ಗಿಸಿ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.
-ಕಲ್ಪನಾ ಮಠಪತಿ 
     

 

 

 

 

 

  hh

ರಾತ್ರಿ ವೇಳೆ ಒಳ ಉಡುಪು ಧರಿಸುವುದು ಅಪಾಯಕಾರಿ!!

ಡಿಸೆಂಬರ್.7
ಮಹಿಳೇಯರೇ ಆಗಲಿ ಪುರುಷರೇ ಆಗಲಿ ನಾವು ಯಾವ ರೀತಿ ಬಟ್ಟೆ ಧರಿಸುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಜನರು ತಿರುಗಾಡುವಾಗ ಒಳ್ಳೆಯ ಬಟ್ಟೆ ಧರಿಸುತ್ತಾರೆ. ಅದೇ ರೀತಿ ಮಲಗುವಾಗಲು ಕೂಡ ಮಹಿಳೆಯರು, ಪುರುಷರು ತಮ್ಮ ಒಳ ಉಡುಪುಗಳನ್ನು ಹಾಕಿಕೊಂಡೆ ಮಲಗುತ್ತಾರೆ.
ಮಹಿಳೆಯರು ತಮ್ಮ ಒಳ ಉಡುಪುಗಳನ್ನು ತೊಳೆದು ಹೊರಗಡೆ ಹಾಕಲು ಮುಜುಗರ ಪಡುತ್ತಾರೆ. ಮನೆಯಲ್ಲಿ ಬೇರೆಯವರಿಗೆ ಕಾಣದಂತೆ ಇಡುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಒಳ ಉಡುಪುಗಳನ್ನು ಕಳಚಲು ಮುಜುಗರ ಪಟ್ಟುಕೊಂಡು ಒಂದಕ್ಕಿಂತ ಹೆಚ್ಚು ಒಳ ಉಡುಪುಗಳನ್ನು ಧರಿಸಿಕೊಂಡೆ ಮಲಗುತ್ತಾರೆ.


ಒಳ ಉಡುಪುಗಳನ್ನು ಹಾಕಿಕೊಂಡು ಮಲಗುವುದರಿಂದ ಸಾಕಷ್ಟು ತೊಂದರೆಗಳಾಗುತ್ತವೆ. ಉಸಿರಾಡಲು ಹೇಗೆ ಗಾಳಿ ಮುಖ್ಯವೋ, ಹಾಗೇಯೆ ದೇಹದ ಪ್ರತಿಯೊಂದು ಅಂಗಕ್ಕೂ ಗಾಳಿ ತಲುಪುವುದು ಅಷ್ಟೇ ಮುಖ್ಯವಾಗಿರುತ್ತದೆ. ಯಾವುದಾದರೂ ಒಂದು ಭಾಗಕ್ಕೆ ಸರೀಯಾಗಿ ಗಾಳಿ ತಲುಪದಿದ್ದರೆ ಅದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ.
ಸಾಮಾನ್ಯವಾಗಿ ನಾವು ಇಡೀ ದಿನ ಒಳ ಉಡುಪುಗಳನ್ನು ಧರಿಸುವ ಕಾರಣ ಚರ್ಮದ ಭಾಗ ಪೂರ್ಣ ಪ್ರಮಾಣಲ್ಲಿ ಉಸಿರಾಡಲು ಸಾಧ್ಯವಾಗದ ಕಾರಣ ಗಾಳಿ ತಗುಲದೆ ಸೂಕ್ಷ್ಮ ರಂಧ್ರಗಳಿಂದ ಬೆವರು ಹೊರ ಬರುವುದಿಲ್ಲ. ವಿಶೇಷವಾಗಿ ಮಹಿಳೆಯರಿಗೆ ಗಾಳಿಯ ಅವಶ್ಯಕತೆ ಹೆಚ್ಚಿರುತ್ತದೆ. ಗಾಳಿ ಸರಿಯಾಗಿ ತಗುಲದಿದ್ದಾಗ ಅಪಾಯಕಾರಿ ಬ್ಯಾಕ್ಟಿರಿಯಾಗಳು ಉತ್ಪತ್ತಿಯಾಗುವ ಸಾಧ್ಯತೆಗಳಿರುತ್ತವೆ.
  

ಒಳ ಉಡುಪುಗಳನ್ನು ತಯಾರಿಸಲು ಬಳಸಲಾಗುವ ಸಿಂಥೆಟಿಕ್, ಎಲಾಸ್ಟಿಕ್ ಬಟ್ಟೆಗಳು ಗಾಳಿಯನ್ನು ತಡೆದುಯುತ್ತವೆ. ಮಲಗುವಾಗ ಒಳ ಉಡುಪುಗಳನ್ನು ಕಳಚಿ ಮಲಗಬೇಕು.  
ದೇಹದ ಪ್ರತಿಯೊಂದು ಅಂಗಕ್ಕೂ ಗಾಳಿ ಅವಶ್ಯಕವಾಗಿದೆ.
ಶಿಲೀಂಧ್ರ ಸೋಂಕು ಮತ್ತು ಮೂತ್ರನಾಳದಲ್ಲಿ ಸೋಂಕು ಉಂಟಾಗಬಹುದು.
ಬ್ಯಾಕ್ಟೀರಿಯಾ ಉತ್ಟತ್ತಿಯಾಗಿ ಮೂತ್ರ ವಿಸರ್ಜಿಸುವ ಸ್ಥಳದಲ್ಲಿ ಸೋಂಕು ಉಂಟಾಗುವ ಸಾದ್ಯತೆಗಳಿವೆ.
ವೃಷಣದಲ್ಲಿ ವೀರ್ಯೋತ್ಪನ್ನ:
ವೃಷಣದಲ್ಲಿ ವೀರ್ಯಾಣುಗಳ ಉತ್ಪತ್ತಿಯಾಗುತ್ತವೆ. ಇದು ದೇಹದ ತಾಪಮಾನಕ್ಕಿಂತ ಕೊಂಚ ಕಡಿಮೆ ಇರಬೇಕೆಂದು, ಎಲ್ಲಾ ಗಂಡು ಸಸ್ತನಿಗಳ ವೃಷಣಗಳು ದೇಹದಿಂದ ಹೊರಹೋಗುತ್ತವೆ. ಬಿಗಿಯಾದ ಒಳ ಉಡುಪುಗಳಿಂದ ವೃಷಣಗಳ ಬಳಿ ತಾಪಮಾನ ಹೆಚ್ಚುತ್ತದೆ. ತಾಪಮಾನದಿಂದ ಸಾಕಷ್ಟು ವೀರ್ಯಾಣುಗಳು ಉತ್ಪತ್ತಿಯಾಗುವುದಿಲ್ಲ, ಇದರಿಂದ ದಾಂಪತ್ಯ ಜೀವನಕ್ಕೆ ತೊಂದರೆಯಾಗಬಹುದಾಗಿದೆ.  

ಒಳ ಉಡುಪು ಕಳಚುವುದರ ಉಪಯೋಗ:
ರಾತ್ರಿ ವೇಳೆ ಉಡುಪುಗಳನ್ನು ಕಳಚಿ ಮಲಗುವುದರಿಂದ ಹೊಟ್ಟೆ ನೋವು, ಬೆನ್ನು ನೋವು ಬರುವುದಿಲ್ಲ. ರಕ್ತ ಪಡಿಚಲನೆ ಮತ್ತು ಜೀರ್ಣಕ್ರೀಯೆ ಸರಾಗವಾಗಿ ಆಗುತ್ತದೆ. ಕಂಕುಳು ಮತ್ತು ಗುಪ್ತಾಂಗ ಭಾಗದಲ್ಲಿ ಬೆವರು ಗ್ರಂಥಿ, ಮೇಧಸ್ಸು ಗ್ರಂಥಿಗಳು ಹೆಚ್ಚು ಸಾಂದ್ರೀಕೃತವಾಗಿದ್ದು, ತೆರೆದ ಗಾಳಿಯಲ್ಲಿ ಇವು ಹೆಚ್ಚು ಕ್ರೀಯಾಶೀಲವಾಗಿರುತ್ತವೆ ಮತ್ತು ಆರೋಗ್ಯವು ಉತ್ತಮವಾಗಿರುತ್ತವೆ.  

ಗುಪ್ತಾಂಗ ತುರಿಕೆ:
ಬ್ಯಾಕ್ಟೀರಿಯಾ ಉತ್ಪತ್ತಿಯಿಂದ ತುರಿಕೆಯುಂಟಾಗುತ್ತದೆ. ಆನರ ಮಧ್ಯೆ ಇದ್ದಾಗ ತುರಿಕೆಯಿಂದಾಗಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಮಲಗುವಾಗ ತೆಳುವಾದ ಮತ್ತು ಸಡಿಲವಾದ ಒಳ ಉಡುಪನ್ನು ಧರಿಸಬೇಕು ಬ್ಯಾಕ್ಟೀರಿಯಾ ಹೆಚ್ಚಾಗಿ ಸೋಂಕು ತಗುಲಿದರೆ, ಅದು ಮೂತ್ರಳದ ಮೂಲಕ ಒಳ ಪ್ರವೇಶಿಸಿ ಮೂತ್ರಕೋಶದ ವರೆಗೂ ವ್ಯಾಪಿಸಬಹುದು.
ದುರ್ವಾಸನೆ:
ಒಳ ಉಡುಪು ಮಲಗುವಾಗ ಧರಿಸುವುದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗ, ದುರ್ವಾಸನೆ ಬರಲಾರಂಬವಾಗುತ್ತದೆ. ಮಹಿಳೆಯರಲ್ಲಿ ಇದು ಹೆಚ್ಚಾಗಿದೆ.
ಮಲಗುವಾಗ ಒಳ ಉಡುಪುಗಳನ್ನು ತೆಗೆದು ಅಥವಾ ತೆಳುವಾದ ಬಟ್ಟೆಗಳನ್ನು ಧರಿಸುವುದರಿಂದ ಈ ತೊಂದರೆಗಳಾಗುವುದಿಲ್ಲ.
-ಕಲ್ಪನಾ ಮಠಪತಿ  

                

 

444   ಅಚ್ಚರಿ ಮುಡಿಸುವ ಈರುಳ್ಳಿ ಉಪಯೋಗಗಳು
 ಡಿಸೆಂಬರ್-7
 ಪ್ರತಿಯೊಬ್ಬ ಸ್ತ್ರೀ ಕೂಡ ತನ್ನ ಕೂದಲಿನ ಆರೈಕೆಯತ್ತ ಹೆಚ್ಚಿನ ಗಮನ ನೀಡುತ್ತಾರೆ. ನೀವು ಕೂಡ ಸೊಂಪಾದ ಕೂದಲನ್ನು   ಹೊಂದಲು ಬಯಸಿದ್ದೀರಿ ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ಅತ್ಯದ್ಭುತವಾದ ಟಿಪ್ಸ್ ಒಂದನ್ನು ನೀಡುತ್ತಿದ್ದೇವೆ.   ಇಂದಿನ  ಕಲುಷಿತ ವಾತಾವರಣ ಮತ್ತು ಬೇಕಾಬಿಟ್ಟಿಯಾಗಿರುವ ಜೀವನ ಶೈಲಿಯಿಂದ ಹೆಚ್ಚಿನ ಕೂದಲುದುರುವಿಕೆಯಂತಹ   ಸಮಸ್ಯೆಗಳಿಗೆ ನಾವು ಒಳಗಾಗುತ್ತಿದ್ದೇವೆ. ಕೂದಲು ಬೆಳ್ಳಗಾಗುವುದು, ಕೂದಲು ಉದುರುವಿಕೆ, ಕೂದಲಿನ ಬಿರುಸುತನ   ಹೀಗೆ  ತಲೆಗೂದಲಿನ ಸಕಲ ಸಮಸ್ಯೆಗಳನ್ನು ಇಂದು ಪ್ರತಿಯೊಬ್ಬ ಸ್ತ್ರೀ ಕೂಡ ಅನುಭವಿಸುತ್ತಿದ್ದಾಳೆ.
 ಕೂದಲುದುರುವಿಕೆಯನ್ನು ತಡೆಗಟ್ಟಲು ನೀವು ಹಲವಾರು ವಿಧಾನಗಳನ್ನು ಅನುಸರಿಸುತ್ತಿರಬಹುದು, ಇದರಲ್ಲಿ ಹೆಚ್ಚಾಗಿ   ರಾಸಾಯನಿಕ ವಿಧಾನಗಳನ್ನೇ ನೀವು ಬಳಸುತ್ತಲೂ ಇರಬಹುದು. ಆದರೆ ಆಯುರ್ವೇದ ಪ್ರಕಾರ ಕೂದಲಿನ ಸಂರಕ್ಷಣೆಯನ್ನು   ಮಾಡಿಕೊಂಡರೆ ಹೆಚ್ಚಿನ ಪ್ರಯೋಜನಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.
 ಇಲ್ಲಿ ಪ್ರಸ್ತಾಪಿಸಿರುವಂತೆ ಕೂದಲಿನ ಬೆಳವಣಿಗೆಗೆ ಈರುಳ್ಳಿ ಉತ್ತಮವಾಗಿದೆ. ಇದರಲ್ಲಿ ಸಲ್ಫರ್ ಪ್ರಮಾಣ ಹೆಚ್ಚಿದ್ದು ಇದು   ನಿಮ್ಮ ಕೂದಲಿಗೆ ಪುಷ್ಟಿಯನ್ನು ನೀಡುತ್ತದೆ. ಕೂದಲಿನ ಹೊಸ ಕೋಶಗಳ ಉದಯಕ್ಕೆ ಕಾರಣವಾಗಿರುವ ಕೊಲ್ಯಾಜಿನ್   ಉತ್ಪಾದನೆಯನ್ನು ಈರುಳ್ಳಿ ಮಾಡುತ್ತದೆ ಅಂತೆಯೇ ಕೋಶಗಳಿಗೆ ರಕ್ತಪೂರೈಕೆಯನ್ನು ಮಾಡುತ್ತದೆ. ಬ್ಯಾಕ್ಟೀರಿಯಾ,   ಫಂಗಸ್  ಅನ್ನು ಇದು ದೂರಮಾಡುತ್ತದೆ ಕೂಡ.
 ಕೂದಲು ವಯಸ್ಸಾಗುವಿಕೆಗಿಂತ ಮುಂಚೆಯೇ ನೆರೆಯುವುದನ್ನು ಈರುಳ್ಳಿ ತಡೆಯುತ್ತದೆ
 ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು, ಬ್ಯಾಕ್ಟೀರಿಯಾ ಫಂಗಸ್ ಅನ್ನು ನಿವಾರಿಸುತ್ತದೆ
 ದಪ್ಪನೆಯ ಕೂದಲನ್ನು ಪಡೆದುಕೊಳ್ಳಲು ಇದು ಸಹಕಾರಿಯಾಗಿದೆ. ಕೊಲಾಜಿನ್ ಉತ್ಪಾದನೆಯನ್ನು ಇದು ಹೆಚ್ಚಿಸುತ್ತದೆ.
 ಇದರಲ್ಲಿರುವ ಸಲ್ಫರ್ ಅಂಶವು ಕೂದಲುದುರುವಿಕೆಗೆ ಕಾರಣವಾಗಿರುವ ಅಡ್ಡಪರಿಣಾಮಗಳನ್ನು ನಿವಾರಣೆ ಮಾಡುತ್ತದೆ.
 ವಂಶಪಾರಂಪರ್ಯ ಸಮಸ್ಯೆಗಳಿಂದ ಕೂದಲುದುರುವಿಕೆ ಬಕ್ಕತಲೆಗೆ ಇದು ಸೂಕ್ತ ಪರಿಹಾರ ಎಂದೆನಿಸಿದೆ.

 

 ನಿಮ್ಮ ನಿತ್ಯದ ಆಹಾರದಲ್ಲಿ ಈರುಳ್ಳಿಯನ್ನು ಬಳಸಿಕೊಳ್ಳಿ. ಅಂತೆಯೇ ಭಾರತೀಯ ಪಾಕ ಪದ್ಧತಿಯಲ್ಲಿ ಈರುಳ್ಳಿಗೆ ಪ್ರಮುಖ   ಸ್ಥಾನವಿದೆ. ಇನ್ನು ಈರುಳ್ಳಿಯ ರಸವನ್ನು ತೆಗೆದು ನಿಮ್ಮ ಕೂದಲಿಗೆ ಹಚ್ಚಿಕೊಂಡು ಹೆಚ್ಚಿನ ಸಮಸ್ಯೆಗಳನ್ನು   ನಿವಾರಿಸಿಕೊಳ್ಳಬಹುದಾಗಿದೆ. ಈರುಳ್ಳಿಯನ್ನು ಕತ್ತರಿಸಿಕೊಂಡು ನೀರು ಹಾಕಿಕೊಳ್ಳದೆಯೇ ಮಿಕ್ಸಿಯಲ್ಲಿ ತಿರುಗಿಸಿಕೊಳ್ಳಿ.   ಇದನ್ನು ಸೋಸಿಕೊಂಡು ಈ ರಸವನ್ನು ಕೂದಲಿಗೆ ಹಚ್ಚಿಕೊಳ್ಳಿ. ಇದರ ವಾಸನೆ ಸಹಿಸಲು ಸಾಧ್ಯವಾಗದೇ   ಇರಬಹುದು,   ಆದರೆ ಪ್ರಯೋಜನ ಮಾತ್ರ ಅಮೂಲಾಗ್ರವಾದುದಾಗಿದೆ.

 ಕೂದಲಿಗೆ ಈರುಳ್ಳಿ ರಸ-ಸ್ಟೆಪ್ ಬೈ ಸ್ಟೆಪ್ ಟಿಪ್ಸ್
 ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಕೊಂಚ ನೀರು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಈರುಳ್ಳಿ ಬೆಂದು ಮೃದುವಾದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರು   ತಣಿದು ಉಗುರುಬೆಚ್ಚಗಾದ ಬಳಿಕ ತಲೆಗೂದಲ ಬುಡಕ್ಕೆ ನವಿರಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿ. ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ.  ಈರುಳ್ಳಿಯ ವಾಸನೆ ಪೂರ್ಣವಾಗಿ ಹೋಗಲು ಎರಡು ಅಥವಾ ಮೂರು ಬಾರಿ ತೊಳೆದುಕೊಳ್ಳಬೇಕಾಗಿ ಬರಬಹುದು.
 ತಲೆಗೂದಲು ತೊಳೆದುಕೊಂಡ ಬಳಿಕ
 ತಲೆಸ್ನಾನದ ಬಳಿಕವೂ ಈರುಳ್ಳಿಯ ರಸವನ್ನು ಬಳಸಬಹುದು. ಇದಕ್ಕಾಗಿ ಈರುಳ್ಳಿಯ ರಸವನ್ನು ನೆನೆದ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಸೌಮ್ಯ ಶಾಂಪೂ ಮತ್ತು ಉಗುರುಬೆಚ್ಚನೆಯ ನೀರು ಬಳಸಿ   ತೊಳೆದುಕೊಳ್ಳಿ. ಮನೆಯಲ್ಲಿಯೇ ತಯಾರಿಸಿದ ಸೀರಂ ದ್ರಾವಣ ಬಳಸಿ ತೊಳೆದುಕೊಂಡರೆ ಇನ್ನೂ ಉತ್ತಮ.
 ಕೊಬ್ಬರಿ ಎಣ್ಣೆಯೊಂದಿಗೆ ಬಳಸಿ
 ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಕೊಂಚ ಈರುಳ್ಳಿ ರಸವನ್ನು ಬಿಸಿಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ತಲೆಗೂದಲ   ಬುಡದಿಂದ  ತುದಿಯವರೆಗೆ ಇದು ಆವರಿಸುವಂತೆ ನೋಡಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
 ಆಲಿವ್ ಎಣ್ಣೆಯೊಂದಿಗೆ
 ಬಳಸಿ ಕೊಬ್ಬರಿ ಎಣ್ಣೆಯ ಬಳಿಕ ಕೂದಲಿಗೆ ಆಲಿವ್ ಎಣ್ಣೆ ಉತ್ತಮ ಆಯ್ಕೆಯಾಗಿದೆ. ಮೊದಲು ಆಲಿವ್ ಎಣ್ಣೆಯಿಂದ ತಲೆಗೂದಲನ್ನು ಆವರಿಸಿ. ಹದಿನೈದು ನಿಮಿಷಗಳ ಬಳಿಕ ಈರುಳ್ಳಿಯ ರಸದಿಂದ ಎರಡನೆಯ ಪದರದಂತೆ ಹಚ್ಚಿ ಒಣಗಲು   ಬಿಡಿ. ಇದಕ್ಕೆ ಸುಮಾರು ಹತ್ತರಿಂದ ಇಪ್ಪತ್ತು ನಿಮಿಷ ಬೇಕಾಗಬಹುದು. ನಂತರ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಆಲಿವ್ ಎಣ್ಣೆ ಕೂದಲ ಬುಡವನ್ನು ದೃಢಗೊಳಿಸಿದರೆ ಈರುಳ್ಳಿ ರಸ ಕೂದಲ   ಬೆಳವಣಿಗೆಗೆ ಸಹಕರಿಸುತ್ತದೆ.

                                                                                                          - ಸವಿತಾ ಈರಪ್ಪಾ ಕನ್ನೂರ, ವಿಜಯಪುರ

                                                                                                         

 

   

 

  

563

  ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸಬೇಕು ಯಾಕೆ ಗೊತ್ತಾ?
 ಡಿಸೆಂಬರ್-6
 ಬೆಳಗಿನ ಉಪಾಹಾರಕ್ಕೆ ಯಾವುದು ಆರೋಗ್ಯಕರ ಉಪಾಹಾರ? ಮೊಟ್ಟೆ ಬೆಳಗ್ಗೆ ತಿನ್ನುವುದು ಅತ್ಯುತ್ತಮ ಎನ್ನಲಾಗುತ್ತದೆ.   ಅದಕ್ಕೆ ಕಾರಣ ಏನು ಗೊತ್ತಾ?
 ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೀರ್ಘಕಾಲ ಚೈತನ್ಯ ನೀಡುತ್ತದೆ. ಹೀಗಾಗಿ ತುಂಬಾ ಸಮಯದವರೆಗೆ   ನೀವು ಉಲ್ಲಾಸದಿಂದ ಇರಲು ಸಾಧ್ಯ. ಅಷ್ಟೇ ಅಲ್ಲ, ದೇಹ ತೂಕ ಕಳೆದುಕೊಳ್ಳಲು ಬಯಸುವವರೂ ಮೊಟ್ಟೆ   ಸೇವಿಸುವುದು  ಒಳ್ಳೆಯದು.
 ಮೊಟ್ಟೆಯಲ್ಲಿ ಕೊಬ್ಬಿನಂಶ ಹೆಚ್ಚಿಲ್ಲ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಮೆದುಳು, ಸ್ಮರಣ   ಶಕ್ತಿ ಹೆಚ್ಚಿಸಲು, ಕಣ್ಣಿನ ಆರೋಗ್ಯಕ್ಕೆ ಹೀಗೇ ಪ್ರತಿಯೊಂದಕ್ಕೂ ಮೊಟ್ಟೆ ಬೆಳಗ್ಗಿನ ಆಹಾರವಾಗಿ ಸೇವಿಸುವುದು ಒಳಿತು   ಮಾಡುತ್ತದೆ.

                                                                    ಸವಿತಾ ಈರಪ್ಪಾ ಕನ್ನೂರ

 

 

 

 

                                     

ಸ್ತ್ರೀ ಸಬಲತೆಗೆ ಶಿಕ್ಷಣ, ತಾಳ್ಮೆ ಮುಖ್ಯ

ಡಿಸೆಂಬರ್-5

ಹೆಣ್ಣು, ಹೊನ್ನು, ಮಣ್ಣು, ಈ ಮೂರು ಅಂಶಗಳಿದ್ದರೆ ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಈ ಅರಿಷ್ಟವರ್ಗಗಳು ಮನುಷ್ಯನಲ್ಲಿ ತುಂಬಿ ತುಳುಕಾಡುತ್ತವೆ. ಆದ್ರೆ ಹೊನ್ನು, ಮಣ್ಣು, ಯಾವುದು ಇಲ್ಲದೆ ದುರಅಹಂಕಾರ, ದರ್ಪ, ಹಣದ ವ್ಯಾಮೋಹದಿಂದ ಆ ವ್ಯಕ್ತಿಯಲ್ಲಿ ದಿಂದ ತುಂಬಿ ತುಳುಕಾಡುತ್ತಿದ್ದಾನೆ.

ಒಂದು ಅತ್ಯಂತ ಬಡ ಕುಟುಂಬ. ಆದರೆ ಹೆಣ್ಣು ಜನಿಸಿದರೆ ಹುಣ್ಣು ಎನ್ನುವ ಕಾಲ ಮಾನದಲ್ಲಿ ಸುಮಾರು ಅರ್ಧ ಡಜನ್ ಮಕ್ಕಳು ಹೆತ್ತಿದ್ದರು. ಹಿರಿಯ ಮಗಳನ್ನು ವಿವಾಹ ಅವಳಿಗೆ ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹವನ್ನು ಮಾಡಿದ್ದರು. ಈಗ ಅವರಿಗೆ 3 ಜನ ಮಕ್ಕಳು 2 ಹೆಣ್ಣು ಮಕ್ಕಳು, 1 ಗಂಡು ಮಗು ಅವನನ್ನು ತವರು ಮನೆಯಲ್ಲಿ ಬಿಟ್ಟು ಶಿಕ್ಷಣವನ್ನು ಕೊಡಿಸಲಾಗುತ್ತಿದೆ.

ಹೆಣ್ಣಿನ ಜನುಮ ನೋಡಿ ಸರ್ ತುಂಬಾ ಕಷ್ಟ. ನನ್ನ ಮಕ್ಕಳ ಶಿಕ್ಷಣಕ್ಕೆ ಆರ್‍ಟಿಐ ಗೆ 2ಬಾರಿ ಅರ್ಜಿ ಸಲ್ಲಿಸಿದ್ದರು ಪ್ರಯೋಜನವಾಗಲಿಲ್ಲ. ಸರ್ಕಾರದವರು ದುಡ್ಡು ಇದ್ದವರಿಗೆ ಹೆಚ್ಚು ಮಹತ್ವ ನೀಡೊದು ನಮ್ಮನ್ನ ಕ್ಯಾರೆ ಅನ್ನುವುದಿಲ್ಲ. ಇವಳು ಹತ್ತನೇ ತರಗತಿ ಅಭ್ಯಾಸ ಮಾಡಿದ್ದಾಳೆ. ಅವಳ ಗಂಡ ಮಧ್ಯಪಾನ ಸೇವಿಸುವ ಮಹಾ ಬೂಪ.

ಕುಡುಕನಿಗೆ ಒಂದು ದಿನ ಹೆಂಡತಿ ದುಡ್ಡು ಕೊಡದಿದ್ದಕ್ಕೆ ಮಾಗಂಲ್ಯ ಸರ ತೆಗೆದುಕೊಂಡು ಹೋಗಿದ್ದರು ಅವನ ಜೊತೆ ಜೀವನ ನೆಡೆಸಲು ಒಪ್ಪಿಕೊಂಡಿರುವ ಮಹಾನ್ ಮಾತೆ ಅವನ ಹೆಂಡತಿ. ಆದರೆ ಆ ದಿನ ಹೋದ ಕುಡುಕ ಮಹಾರಾಜ ಇನ್ನುವರೆಗೂ ಮನೆಕಡೆ ಕಣ್ಣು ಕೂಡ ಹಾಯಿಸಿಲ್ಲ. ಸ್ವಂತ ಮನೆ, ಜಾಗ, ಅದ್ಯಾವುದು ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾಳೆ ಇವರು ಮಹಿಳೆ ಎದೆ ಗುಂದದೆ ಧೈರ್ಯ ಶಾಲಿಯಾಗಿ ಸಾಗಲು ಇದು ಆದರ್ಶವಾಗಿದೆ.

ಅವನ ಹೆಂಡತಿ ಸುಮಾರು 5 ರಿಂದ 6 ತಾಸು ಚಕ್ಕಲಿ ಮಾಡಲು ತೆಗೆದು ಕೊಂಡು ನಾಲ್ಕು ನೂರು ರೂಪಾಯಿ ಖರ್ಚಾದರೆ ಅವಳಿಗೆ ಲಾಭ ಕೇವಲ ಅರವತ್ತ ರಿಂದ ಎಪ್ಪತ್ತುರೂಪಾಯಿ ಮಾತ್ತ. ಅಷೇ ಅಲ್ಲದೇ ಮನೆ-ಮನೆಗೆ, ಅಂಗಡಿಗಳಿಗೆ ಹೋಗಿ ಅಲೇದಾಡಿ ಮಾರಾಟ ಮಾಡಿ ಬರುತ್ತಾಳೆ.ಬೆಳಗಿನ ಜಾವ 4 ಗಂಟೆಗೆ ಚಕ್ಕುಲಿ ಮಾಡಲು ಕುಳಿತು ಕೊಂಡರೆ ಮಧ್ಯ್ಹಾನ 12 ಗಂಟೆಯವರೆಗೂ ಮಾಡುತ್ತಾರೆ. ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಹಂಬಲದಲ್ಲಿ ಅವರು ನರಕ ಯಾತನೆ ಅನುಭವಿಸುತ್ತಿದ್ದರು ತನ್ನ ಸ್ಥಿತಿ ಮಕ್ಕಳಿಗೆ ಬರಬಾರದು ಎನ್ನುವ ಉದ್ದೇಶದಿಂದ ಶಿಕ್ಷಣ ಕೊಡಿಸುವ ಆಸಕ್ತಿ ಹೊತ್ತಿದ್ದಾಳೆ.

ಮೂರು ವರ್ಷ ಕಳೆದ ನಂತರ ಅದು ವಿವಾಹಕ್ಕೆ ಅವಳು ಒಪ್ಪಿಕೊಂಡಿರುವುದಿಲ್ಲ ಆದರೂ ನಿಶ್ಚಿತಾರ್ಥ ಆಗಿತ್ತು, ಆವಾಗಲೂ ಒಪ್ಪಿಗೆ ನೀಡಿರುವುದಿಲ್ಲ ಆದರೂ ಒಂದು ವಿವಾಹ ಮಾಡುವುದು ಸವಾಲು ಕೂಡ, ಅದರ ಮಧ್ಯೆ ನಿಶ್ಚಿತಾರ್ಥ ಮುಗಿದಿದೆ ಕುಟುಂಬದ ಮರ್ಯಾದೆ ಪ್ರಶ್ನೆ ಕೂಡ ಎಂದು ವಿವಾಹ ಮಾಡಿದರು.

 

                                                                                                                           
                              

ಅವಳ ಬದುಕು ಇಂದು ನಿತ್ಯ ಹೋರಾಟ ಮದುವೆಯಾಗಿ ಸುಮಾರು ಹತ್ತು ವರ್ಷ ಕಿರುಕುಳದಲ್ಲಿಯೇ ಸಹನಾ ಮೂರ್ತಿಯಾಗಿ ಸಹಿಸಿಕೊಂಡವಳು. ಉಟ್ಟ ಬಟ್ಟೆಯಲ್ಲೇ ಹೊರಹಾಕಿದ ಅತ್ತೆ ಮಾವ ಹೊರ ಬಂದು ಸುಂದರ ಬದುಕು ನಡೆಸುತ್ತಾಳೆ ಎನ್ನುವಷ್ಟರಲ್ಲಿ ಗಂಡ ಅತೀ ಕುಡುಕ, ಅವನು ಸಮಾರಂಭಗಳಲ್ಲಿ ಅಡುಗೆ ಮಾಡಲು ಹೋಗುತ್ತಾನೆ. 

                                       
                                                                            

ಹೆಂಡತಿ ಚಕ್ಕಲಿ ಮಾಡಿ ಅಲೆದಾಡಿ ಅಂಗಡಿಗಳಿಗೆ ಹಾಕುತ್ತಾಳೆ. ದಿನಕ್ಕೆ ಲಾಭ ಅರವತ್ತರಿಂದ ಎಪ್ಪತ್ತು ರೂಪಾಯಿವರೆಗೆ ಕುಡುಕ ಗಂಡ ಅದನ್ನು ಕಿತ್ತುಕೊಳ್ಳುವ ದುಷ್ಟ ಹೀಗೆ ಅವ್ಯಾಚ್ಯ ಶಬ್ಧಗಳನ್ನು ತಿಂದು ಅವಳು ಬೇಸತ್ತು ತನ್ನಲ್ಲಿನ ನೋವು ಅಪ್ಪ ಅಮ್ಮನಿಗೆ ಹೇಳದೆ ತನ್ನಲ್ಲೇ ಅಡಗಿಸಿ ಕೊಂಡಿದ್ದಳು. ಒಂದು ದಿನ ಜಗಳ ಅತಿ ರೇಖಕ್ಕೆ ತಿರುಗಿತು ಮಾಂಗಲ್ಯ ಸರವನ್ನು ಕಿತ್ತು ಕೊಂಡು ಹೊರಟೆಹೋದ.

ಅಷ್ಟೇ ಅಲ್ಲದೇ ಇನ್ನೂ ಕೇಳಲಾಗದ ಶಬ್ಧಗಳನ್ನು ಕೂಗಾಡಿದ ಆ ಹಿಂಸೆ ತಾಳ್ಮೆ ಯಿಂದ ಸಹಿಸಿ ಕೊಂಡಿದ್ದ ಇಪ್ಪತ್ತೈದು ವರ್ಷ ತಿದ್ದಿ ಕೊಳ್ಳುವನೆಂದು ಕಾದು ಸುಸ್ತಾದಳು ನಿಜ ಆದರೆ ತಿದ್ದಿಕೊಳ್ಳುವ ಜಾಯ ಮಾನವೇ ಅಲ್ಲ. ಹೆಣ್ಣು ಸಹನಾ ಮೂರ್ತಿ ಸಹನೆ ಕಳೆದು ಕೊಂಡ ಅವಳು ದಿಕ್ಕು ತೋಚದೆ ಪೊಲೀಸ್ ಮೆಟ್ಟಿಲೇರಿದಳು. ಗಾಂಧೀಜಿ ಅವರು ಹೇಳಿದ್ದರು ಹೆಣ್ಣು ಮಧ್ಯರಾತ್ರಿ 12 ಗಂಟೆಗೆ ಹೋಡಾಡಿದರೆ ಅದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿದ್ದರು. ಅದು ಇಂದಿಗೂ ಕಷ್ಟಸಾಧ್ಯ. ಪ್ರಕರಣ ದಾಖಲಿಕೊಳ್ಳಲಿಲ್ಲ ತಿಳಿ ಹೇಳಿ ಮನೆಗೆ ಬಂದು ಬಿಟ್ಟರು. ಅದು ಅವನಿಗೆ ಅರ್ಥವಾಗಲಿಲ್ಲ ಯಾವನು ಬರತಾನೆ ಎಂದು ಕುಡಿದ ಅಮಲಿನಲ್ಲಿ ಕೂಗಾಡಿದ.

 

ನಂತರ ಮೂರುದಿನ ಒಂದು ಮಟ್ಟಿಗೆ ಸಮಾಧಾನದ ವಾತಾವರಣ ಮತ್ತೆ ಅದೇ. ಅವನ ಅಪ್ಪ ಅಮ್ಮ ಒಂದು ಬಿಡಿಗಾಸು ಕೊಡದೆ ಹೊರ ಹಾಕಿದರು. ಆಗ ಸಂಪೂರ್ಣ ಸಹಿಸಿದ ತಾಳ್ಮೆ ಕಳೆದು ಕೊಂಡ ಹೆಂಡತಿ ತನ್ನಲ್ಲಿನ ಶಕ್ತಿ ಸಾಮಥ್ರ್ಯ ಇರುವವರೆಗೂ ನಾನು ಏನು ಎಂಬುದನ್ನು ತೋರಿಸಲು ಒಂದು ಸಂಪೂರ್ಣ ಅವಕಾಶ ಗಂಡ ನೀಡದ ಎಂದುಕೊಳ್ಳಬಹುದು. ಗಂಡ ಒಂದು ದಿನ ತನ್ನ ಅಪ್ಪ, ಅಮ್ಮ, ಬಂಧು ಬಾಂಧವರು ಹೀಗೆ ಇತರರು ಜೊತೆಗೂಡಿ ಹೆಂಡತಿಯನ್ನು ಹೊರಹಾಕಿದರು ಇವಳಿಗೆ ಬೈದುರು, ಅದಕ್ಕೆ ಸಂಬಂಧ ಪಡದ ವ್ಯಕ್ತಿಗಳು ಅವಳಿಗೆ ತಿಳಿಹೇಳಿದರು ಸಹಿಸಿಕೊಂಡ ಸಹನಾ ಮೂರ್ತಿ ಈ ಮಹಿಳೆ.

ಸದಾ ಅನುಮಾನ ಪಡುವ ಗಂಡನೊಂದಿಗೆ ಸಂಸಾರ ನಡೆಸುವದು ಕಷ್ಟಸಾಧ್ಯ. ಅದು ಸಹಿಸಿಕೊಂಡು ತನ್ನ ಸಂಸಾರ, ಜೀವನಕ್ಕೆ ಕುಟುಂಬದ ವಿಷಯಕ್ಕೆ ಬಂದರೆ ಯಾವ ಹೆಣ್ಣು ಸುಮ್ಮನಿರಲ್ಲ ಯಾಕೆಂದ್ರೆ ನನ್ನ ಸರ್ವಸ್ವ ನನ್ನ ಸಂಸಾರ, ನಮ್ಮದು ಸಂಸ್ಕøತ ಶೀಲ ಕುಟುಂಬದಿಂದ ಬಂದದ್ದು. ಹೋರಾಟದ ಬದುಕು ಅರಿವಿಗೆ ತಂದ ಗುರು ನನ್ನ ತಂದೆ ನನ್ನ ಅಭಿನಂದನೆ. ಇಂದು ನನ್ನ ಬೆಂಬಲಕ್ಕೆ ತವರು ಆಸರೆ ತುಂಬು ಹೃದಯದ ಕೃತಜ್ಞತೆ. ಸಮಸ್ಯೆಗಳ ಮಧ್ಯೆ ಬದುಕಿನಲ್ಲಿ ಸೋಲು ಕಾಣಬಾರದು ಎಂದು ಜೀವನ ಸಾಗಿಸುತ್ತಿದ್ದಾರೆ. ನಿಜಕ್ಕೂ ಜೀವನ ಬಹುದೊಡ್ಡ ಸವಾಲು.

                                   -ಅರ್ಚನ ವೀರ ಗಣಪ ಆದಾಪುರ, ಗಂಗಾವತಿ.

                                                                                                                                                                                                                                                                            

 +++++++++++++++++++++++++++++++++++++++++++++++++++++++++++++++++++++++++++++++++++++++++++++++++++

                                     

ನೈಸರ್ಗಿಕ ಉಪಾಯಗಳು ತ್ವಚೆಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ

ಡಿಸೆಂಬರ್-5

 ಚಳಿಗಾಲ ಬಂತೆಂದರೆ ಸಾಮಾನ್ಯವಾಗಿ ತ್ವಚೆಯ ಆರೋಗ್ಯದಲ್ಲೂ ಸ್ವಲ್ಪ ವ್ಯತ್ಯಾಸ ಉಂಟಾಗುತ್ತದೆ. ಶುಷ್ಕವಾಗುವುದು,  ತುರಿಕೆ, ಉರಿಯೂತ ಹಾಗೂ ಒಡೆಯುವುದು ಹೀಗೆ ಅನೇಕ ಸಮಸ್ಯೆಗಳು ಕಾಡುತ್ತವೆ. ಬಹುತೇಕರು ಈ ಸಮಸ್ಯೆಗಳ ಬಗ್ಗೆ  ಹೆಚ್ಚು ಕಾಳಜಿ ವಹಿಸುವುದೇ ಇಲ್ಲ. ನಿತ್ಯದ ಸಮಸ್ಯೆಯಲ್ಲಿ ಇದೂ ಒಂದು ಸಮಸ್ಯೆಯಾಗಿಯೇ ಉಳಿದು ಬಿಟ್ಟಿರುತ್ತದೆ.  ಕೆಲವರು ಆರೈಕೆಗಾಗಿ ಒಂದಿಷ್ಟು ಹಣವನ್ನು ವ್ಯಯಮಾಡುತ್ತಾರೆ.
 ಈ ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೋಗ್ಯ ಕಾಪಾಡಲು ಕೆಲವು ಆರೈಕೆ ವಿಧಾನವನ್ನು ಬೋಲ್ಡ್ ಸ್ಕೈ ಪರಿಚಯಿಸುತ್ತದೆ.  ಇವು ಸಂಪೂರ್ಣವಾಗಿ ನೈಸರ್ಗಿಕ ವಿಧಾನವಾಗಿರುವುದರಿಂದ ಚರ್ಮದ ಮೇಲೆ ಯಾವುದೇ ಬಗೆಯ ಅಡ್ಡ ಪರಿಣಾಮ  ಬೀರದು. ಬದಲಾಗಿ ಚರ್ಮದ ಆರೋಗ್ಯ ಸುಧಾರಿಸುವುದರೊಂದಿಗೆ ಉತ್ತಮ ಗುಣಮಟ್ಟವನ್ನು ಪಡೆದುಕೊಳ್ಳುವುದು.
 ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಇವು ಪಡೆದುಕೊಂಡಿವೆ. ಚರ್ಮದ ಆಳಕ್ಕೆ ತಲುಪಿ ಸದಾ ತಾಜಾ  ಹಾಗೂ ಕಾಂತಿಯುತ ವಾಗಿರುವಂತೆ ಮಾಡುತ್ತದೆ. ಈ ಪರಿಹಾರವು ಸಾಮಾನ್ಯವಾಗಿ ಸುರಕ್ಷಿತವಾಗಿರಿಸುತ್ತದೆ. ಜೊತೆಗೆ  ನಿಮಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ಪಡೆಯಬಹುದು. ಹಾಗಾದರೆ ಆ ವಿಧಾನಗಳು ಯಾವವು? ಎನ್ನುವುದರ  ಸಂಪೂರ್ಣ ವಿವರಣೆ ಇಲ್ಲಿದೆ ನೋಡಿ....
 ಸೌತೆಕಾಯಿ:ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಇರುವುದರಿಂದ ನಿಮ್ಮ ಚರ್ಮವು ರಾತ್ರಿಯಿಂದ ಚೆನ್ನಾಗಿ  ಹೈಡ್ರೀಕರಿಸುತ್ತದೆ. ಜೊತೆಗೆ ಮುಂಜಾನೆಯ ಹೊತ್ತಿಗೆ ಹೆಚ್ಚು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.
 

                                                                         ವಿಧಾನ: ಒಂದೆರಡು ಚೂರು ಸೌತೆಕಾಯಿಯನ್ನು ತುರಿದು, ಪೇಸ್ಟ್ನಂತೆ ಮಾಡಿಕೊಳ್ಳಿ.
 ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.
 ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಟೊಮೆಟೊ: ನಿಮ್ಮ ಚರ್ಮದ ವಿನ್ಯಾಸವನ್ನು ರಾತ್ರಿಯಿಡೀ ಪುನಶ್ಚೇತನಗೊಳಿಸಲು, ಪುನರ್ಯೌವನಗೊಳಿಸುವುದಕ್ಕೆ ಮತ್ತು  ಬೆಳಿಗ್ಗೆ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ.
 
                                                                                                                                  

ವಿಧಾನ: ಒಂದು ಟೊಮೆಟೊ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ.
 ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.
 ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
 ಅಲೋವೆರಾ: ತಿರುಳನ್ನು ರಾತ್ರಿಹೊತ್ತು ತ್ವಚೆಯ ಮೇಲೆ ಅನ್ವಯಿಸಿಕೊಂಡು ಮಲಗುವುದರಿಂದ ನೈಸರ್ಗಿಕವಾಗಿ  ತೇವಾಂಶ ಹೆಚ್ಚುವುದು ಹಾಗೂ ಹೊಳಪನ್ನು ನೀಡುವುದು.
 ವಿಧಾನ: ಅಲೋವೆರಾ ತಿರುಳನ್ನು ತೆಗೆದುಕೊಳ್ಳಿ.
 ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.
 ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
 ಬಾದಾಮಿ ಎಣ್ಣೆ: ಚರ್ಮಕ್ಕೆ ಉತ್ತಮವಾದ ಆರೈಕೆಯನ್ನು ನೀಡುತ್ತದೆ. ಅಲ್ಲದೆ ಅನೇಕ ತ್ವಚೆಯ ಸಮಸ್ಯೆಯನ್ನು  ನಿವಾರಿಸುತ್ತದೆ.

ವಿಧಾನ: ಒಂದಿಷ್ಟು ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ
 ನಂತರ ಮುಖದ ಮೇಲೆ ಅನ್ವಯಿಸಿ ಮಲಗಿ
 

                                              

 ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ತ್ವಚೆಯನ್ನು ಶುದ್ಧೀಕರಿಸಿ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

 ವಿಧಾನ: ಅಲೋವೆರಾ ತಿರುಳನ್ನು ತೆಗೆದುಕೊಳ್ಳಿ.
 ಮಲಗುವ ಮುನ್ನ ಮುಖಕ್ಕೆ ಅನ್ವಯಿಸಿ ಮಲಗಿ.
 ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
 ಬಾದಾಮಿ ಎಣ್ಣೆ: ಚರ್ಮಕ್ಕೆ ಉತ್ತಮವಾದ ಆರೈಕೆಯನ್ನು ನೀಡುತ್ತದೆ. ಅಲ್ಲದೆ ಅನೇಕ ತ್ವಚೆಯ ಸಮಸ್ಯೆಯನ್ನು  ನಿವಾರಿಸುತ್ತದೆ.
 ವಿಧಾನ: ಒಂದಿಷ್ಟು ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ
 ನಂತರ ಮುಖದ ಮೇಲೆ ಅನ್ವಯಿಸಿ ಮಲಗಿ
 ಮುಂಜಾನೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ತ್ವಚೆಯನ್ನು ಶುದ್ಧೀಕರಿಸಿ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ           - ಸವಿತಾ ಈರಪ್ಪಾ ಕನ್ನೂರ ,ವಿಜಯಪುರ           

 +++++++++++++++++++++++++++++++++++++++++++++++++++++++++++++++++++++++++++++++++++++++++++++++++++

55 ಮೂತ್ರದಲ್ಲಿ ರಕ್ತ ಹೋಗುತ್ತಿದೆಯೇ...?
ಡಿಸೆಂಬರ್-2
ಅದು ಪ್ರಾಸ್ಟೇಟ್ ಕ್ಯಾನ್ಸರ್ನ ಸಂಕೇತವಾಗಿರಬಹುದು
 ನಿಮ್ಮ ಮೂತ್ರವನ್ನು ಪರೀಕ್ಷಿಸುವುದು ನಿಮಗೆ ರೇಜಿಗೆಯನ್ನು ಹುಟ್ಟಿಸಬಹುದು. ಆದರೆ ಈ ಕೆಲಸವನ್ನು ನೀವು  ಆಗಾಗ್ಗೆ ಮಾಡುತ್ತಿರಬೇಕು. ಮೂತ್ರದ ಬಣ್ಣ ಮತ್ತು ಹರಿವಿನಲ್ಲಿ ಬದಲಾವಣೆಗಳು ನಿಮ್ಮ ಆರೋಗ್ಯದ ಬಗ್ಗೆ  ಸಾಕಷ್ಟು ಹೇಳುತ್ತವೆ. ಮೂತ್ರದಲ್ಲಿ ರಕ್ತ ಕಂಡು ಬಂದರಂತೂ ಹೆಚ್ಚಿನ ಜಾಗರೂಕತೆ ಅಗತ್ಯವಾಗುತ್ತದೆ ಮತ್ತು  ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
 ಮೂತ್ರದಲ್ಲಿ ರಕ್ತ ಕಂಡುಬಂದರೆ ಅದು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ನ ಆರಂಭಿಕ ಸಂಕೇತವಾಗಿರಬಹುದು  ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ. ಮೂತ್ರದಲ್ಲಿ ರಕ್ತ ಕಂಡು ಬಂದರೆ ಅಂತಹ  ಸ್ಥಿತಿಯನ್ನು ಪೂರ್ಣ ರಕ್ತಮೇಹ ಎಂದು ಕರೆಯಲಾಗುತ್ತದೆ ಮತ್ತು ಮೂತ್ರವು ಗುಲಾಬಿ, ಕೆಂಪು ಅಥವಾ  ಕೋಲಾದ ಬಣ್ಣಕ್ಕೆ ತಿರುಗಬಹುದು.
 ಹಾಗೆಂದು ಮೂತ್ರದಲ್ಲಿ ರಕ್ತ ಕಂಡುಬರುವ ಎಲ್ಲ ಪ್ರಕರಣಗಳೂ ಪ್ರಾಸ್ಟೇಟ್ ಕ್ಯಾನ್ಸರ್ನ್ನು ಸೂಚಿಸುತ್ತವೆ ಎಂದು  ಅರ್ಥವೇನಲ್ಲ. ಆದರೂ ಮೂತ್ರದಲ್ಲಿ ರಕ್ತ ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು  ಉತ್ತಮ.
 ಮೂತ್ರ ವಿಸರ್ಜನೆಗೆ ತುಂಬ ಸಮಯ ಹಿಡಿಯುವುದು ಅಥವಾ ಮೂತ್ರದ ಹರಿವು ಕ್ಷೀಣವಾಗಿರುವುದು ಪ್ರಾಸ್ಟೇಟ್  ಕ್ಯಾನ್ಸರ್ನ ಇತರ ಲಕ್ಷಣಗಳಲ್ಲಿ ಸೇರಿವೆ. ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕು ಎಂದು ಅನಿಸಿದರೆ ಅಥವಾ  ಮೂತ್ರ ವಿಸರ್ಜನೆ ಮುಗಿದರೂ ಮೂತ್ರಕೋಶ ಇನ್ನೂ ಖಾಲಿಯಾಗಿಲ್ಲ ಎಂದು ಅನಿಸಿಕೆಯೂ ಪ್ರಾಸ್ಟೇಟ್  ಕ್ಯಾನ್ಸರ್ನ ಸಾಧ್ಯತೆಯನ್ನು ಸೂಚಿಸುತ್ತವೆ. ನಿಮಿರು ದೌರ್ಬಲ್ಯವೂ ಈ ರೋಗದ ಲಕ್ಷಣವಾಗಬ ಹುದು.
 ಆದರೆ ಯಾವ ಕಾರಣದಿಂದ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುತ್ತದೆ ಎನ್ನುವುದು ಈಗಲೂ ಹೆಚ್ಚುಕಡಿಮೆ  ನಿಗೂಢವಾಗಿಯೇ ಉಳಿದಿದೆ. ಆದರೆ ವ್ಯಕ್ತಿಗಳಿಗೆ ವಯಸ್ಸಾಗು ತ್ತಿದ್ದಂತೆ ಪ್ರಾಸ್ಟೇಟ್ ಕ್ಯಾನ್ಸರ್ನ ಅಪಾಯವೂ  ಹೆಚ್ಚುತ್ತ ಹೋಗುತ್ತದೆ. ಈ ರೋಗವು ನಿಧಾನವಾಗಿ ಬೆಳವಣಿಗೆಯಾಗುತ್ತದೆ ಮತ್ತು ಇಂತಹ ರೋಗವೊಂದು  ತಮ್ಮನ್ನು ಅಮರಿಕೊಂಡಿದೆ ಎನ್ನುವ ಯಾವುದೇ ಲಕ್ಷಣಗಳು ದಶಕಗಳು ಕಳೆದರೂ ರೋಗಿಗಳಿಗೆ  ಗೊತ್ತಾಗುವುದಿಲ್ಲ.
 ಪ್ರಾಸ್ಟೇಟ್ ಕ್ಯಾನ್ಸರ್ನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬಹುದು. ರೇಡಿಯೊ ಥೆರಪಿ ಅಥವಾ  ಹಾರ್ಮೋನ್ ಥೆರಪಿಯಿಂದಲೂ ಗುಣಪಡಿಸಬಹುದಾಗಿದೆ.

 ++++++++++++++++++++++++++++++++++++++++++++++++++++++++++++++++++++++++++++++++++++++++++++++++

  

ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಉತ್ತೇಜನ!
ಈ ಜಗತ್ತಿನ ಎಲ್ಲಾ ಜೀವಿಗಳಿಗೆ ಸಂತಾನೋತ್ಪತ್ತಿಯ ಮೂಲಕ ವಂಶಾಭಿವೃದ್ದಿ ಹಾಗೂ ಸಂಕುಲವನ್ನು ಉಳಿಸಿಕೊಳ್ಳಲು ಲೈಂಗಿಕ ಕ್ರಿಯೆಯನ್ನು ಜೀವನದ ಒಂದು ಭಾಗವಾಗಿ ಒದಗಿಸಿದೆ. ಒಂದು ವೇಳೆ ಲೈಂಗಿಕ ಕ್ರಿಯೆಯನ್ನು ಕೇವಲ ಸಂತೋಷಪಡೆಯುವ ಒಂದು ಕ್ರಿಯೆ ಮಾತ್ರವೇ ಎಂದು ತಿಳಿದುಕೊಂಡಿದ್ದವರಿಗೆ ನಿರಾಶೆಯ ಸುದ್ದಿ ಇದೆ. ಲೈಂಗಿಕ ಕ್ರಿಯೆ ಎಲ್ಲಾ ವಯಸ್ಕರಿಗೆ ಉತ್ತಮವಾದದ್ದು ಮಾತ್ರವಲ್ಲ, ನಿತ್ಯದ ಲೈಂಗಿಕ ಕ್ರಿಯೆ ಇನ್ನೂ ಉತ್ತಮ. ಇದರಿಂದ ಗಾಢನಿದ್ದೆ, ಒತ್ತಡದಿಂದ ಮುಕ್ತಿ ಹಾಗೂ ಕ್ಯಾಲೋರಿಗಳನ್ನು ದಹಿಸಿ ತೂಕದಲ್ಲಿ ಹೆಚ್ಚಳವಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಇತ್ತೀಚಿನ ಒಂದು ಅಧ್ಯಯನದಲ್ಲಿ ವಾರಕ್ಕೆರಡು ಬಾರಿ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುವ ಪುರುಷರಲ್ಲಿ ಹೃದಯಸ್ತಂಭದನ ಕಡಿಮೆ ಇರುತ್ತದೆ. ಅಲ್ಲದೆ ತಿಂಗಳಿಗೊಮ್ಮೆ ಲೈಂಗಿಕ ಕ್ರಿಯೆ ನಡೆಸುವರಲ್ಲಿ ಹೆಚ್ಚಾಗಿರುತ್ತದೆ. ಈ ಕ್ರಿಯೆ ನಿಯಮಿತವಾಗಿದ್ದಷ್ಟೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಣಗಳು ಹೆಚ್ಚುತ್ತವೆ ಹಾಗೂ ವೈರಸ್ ಆಧಾರಿತ ಸಾಮಾನ್ಯ ರೋಗಗಳಾದ ಜ್ವರ ಶೀತ ನೆಗಡಿಗಳಿಂದ ರಕ್ಷಿಸಿಕೊಳ್ಳಲು ದೇಹ ಇನ್ನಷ್ಟು ಸಬಲವಾಗುತ್ತದೆ.

ನಿತ್ಯದ ಲೈಂಗಿಕ ಕ್ರಿಯೆ ಆರೋಗ್ಯಕರ ಎನ್ನಲು ಕಾರಣಗಳು:
*ಒತ್ತಡ ಕಡಿಮೆಯಾಗಿಸುತ್ತದೆ ಸಾಮಾನ್ಯವಾಗಿ ನಾವೆಲ್ಲರೂ ಕೆಲಸದ ಅಥವಾ ಕೌಟುಂಬಿಕ ಕಾರಣಗಳಿಂದ ಕೆಲವು ಒತ್ತಡದಲ್ಲಿ ಇರುತ್ತೇವೆ. ಕೊಂಚ ಮಟ್ಟಿನ ಒತ್ತಡ ಉದ್ಯೋಗದಲ್ಲಿ ಮುನ್ನಡೆಗೆ ಅಗತ್ಯ ಕೂಡಾ! ಆದರೆ ಇದರಿಂದ ನಿಮ್ಮ ಲೈಂಗಿಕ ಜೀವನ ಬಾಧೆಗೊಳಗಾಗಬಾರದು. ನಿಯಮಿತವಾದ ಲೈಂಗಿಕ ಕ್ರಿಯೆಯಿಂದ ಮನೋಭಾವ ಉತ್ತಮಗೊಳ್ಳುವುದು ಮಾತ್ರವಲ್ಲ, ಕೆಲಸ ಹಾಗೂ ಕೌಟುಂಬಿಕ ಒತ್ತಡಗಳನ್ನು ಇನ್ನಷ್ಟು ಸಮರ್ಥವಾಗಿ ನಿಭಾಯಿಸಬಲ್ಲರು.
*ತಲೆನೋವನ್ನು ಕಡಿಮೆಗೊಳಿಸುತ್ತದೆ ಒಂದು ವೇಳೆ ನಿಮಗೆ ಸತತವಾಗಿ ತಲೆನೋವು ಕಾಡುತ್ತಿದ್ದರೆ ಇದನ್ನೇ ನೆಪವಾಗಿಸಿ ಲೈಂಗಿಕ್ ಕ್ರಿಯೆಗೆ ರಜೆ ಹಾಕುವುದನ್ನು ನಿಲ್ಲಿಸಿ. ಬದಲಿಗೆ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ. ಏಕೆಂದರೆ ಕಾಮೋತ್ಕಟತೆಯ ಸಮಯದಲ್ಲಿ ದೇಹದಲ್ಲಿ ಆಕ್ಸಿಟೋಸಿನ್ ಎಂಬ ರಸದೂತ ಸ್ರವಿಸುವ ಪ್ರಮಾಣ ಐದು ಪಟ್ಟು ಹೆಚ್ಚುತ್ತದೆ. ಇದು ಮನೋಭಾವವನ್ನು ಉತ್ತಮಗೊಳಿಸುತ್ತದೆ ಹಾಗೂ ನರಗಳನ್ನು ಸಡಿಲಿಸಿ ಹೆಚ್ಚಿನ ರಕ್ತಸಂಚಾರ ಹರಿಸುವ ಮೂಲಕ ತಲೆನೋವಿನ ಸಹಿತ ಹಲವಾರು ನೋವುಗಳನ್ನು ಕಡಿಮೆ ಮಾಡುತ್ತದೆ.

*ರಕ್ತಸಂಚಾರ ಹೆಚ್ಚಿಸುತ್ತದೆ ಕಾಮಕೇಳಿಯ ಸಮಯದಲ್ಲಿ ಹೃದಯದ ಬಡಿತ ಹೆಚ್ಚುತ್ತದೆ ಹಾಗೂ ಮೆದುಳು ಮತ್ತು ಜನನಾಂಗಗಳಿಗೆ ತಲುಪುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ಅಷ್ಟೇ ಅಲ್ಲ, ಹೊಸರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ತಲುಪುತ್ತದೆ. ತನ್ಮೂಲಕ ಹಳೆಯ ರಕ್ತ ಹಿಂದಿರುಗಿ ಕಲ್ಮಶಗಳನ್ನು ಕಳೆದುಕೊಳ್ಳುತ್ತದೆ.

 

ಪರಿಣಾಮವಾಗಿ ಕಲ್ಮಶಗಳು ದೇಹದಿಂದ ನಿವಾರಣೆಯಾಗುತ್ತದೆ. ಈ ಕಲ್ಮಶಗಳ ಹೊರೆಯಿಂದ ದೇಹ ಅನಗತ್ಯವಾಗಿ ಸುಸ್ತು ಅನುಭವಿಸುತ್ತಿರುತ್ತದೆ. ಈಗ ಈ ಕಲ್ಮಶಗಳು ನಿವಾರಣೆಯಾಗಿರುವ ಕಾರಣ ದೇಹ ಹಾಗೂ ಮನಸ್ಸು ಉಲ್ಲಸಿತವಾಗಿರುತ್ತದೆ.

*ಗಾಢ ನಿದ್ದೆ ಆವರಿಸುತ್ತದೆ. ನಿದ್ದೆ ಬರದೇ ಇದ್ದರೆ ಇನ್ನು ಮೇಲೆ ನಿದ್ದೆಮಾತ್ರೆ ಸೇವಿಸಬೇಕಾಗಿಲ್ಲ! ಬದಲಿಗೆ ಈ ಕ್ರಿಯೆಯ ಮೂಲಕ ಬಿಡುಗಡೆಯಾಗುವ ಆಕ್ಸಿಟೋಸಿನ್ ಹಾಗೂ ಪ್ರೋಲ್ಯಾಕ್ಟಿನ್ ಎಂಬ ರಸದೂತಗಳು ಮೆದುಳಿಗೆ ಹೆಚ್ಚಿನ ನಿರಾಳತೆ ನೀಡಿ ಗಾಢ ನಿದ್ದೆ ಆವರಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಹೆಚ್ಚಿನ ದಂಪತಿಗಳು ಲೈಂಗಿಕ ಕ್ರಿಯೆಯ ಬಳಿಕ ಗಾಢ ನಿದ್ದೆಗೆ ಜಾರುವುದನ್ನೇ ಹೆಚ್ಚಾಗಿ ಆಯ್ಕೇ ಮಾಡಿಕೊಳ್ಳುತ್ತಾರೆ.
*ವೃದ್ಧಾಪ್ಯ ದೂರಾಗುತ್ತದೆ ಸುಮಾರು ಹತ್ತು ವರ್ಷಗಳ ಕಾಲ ವಾರದಲ್ಲಿ ಎರಡು ಬಾರಿಯಾದರೂ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ದಂಪತಿಗಳಲ್ಲಿ ಸಾವಿಗೀಡಾಗುವ ಪ್ರಮಾಣ ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ದಂಪತಿಗಳಿಗಿಂತ ಶೇಖಡಾ ಐವತ್ತರಷ್ಟು ಕಡಿಮೆ ಇರುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಏಕೆಂದರೆ ಲೈಂಗಿಕ ಕ್ರಿಯೆಯ ಬಳಿಕ ದೇಹದದಲ್ಲಿ ಹೆಚ್ಚಾಗುವ ಟೆಸ್ಟೋಸ್ಟೆರಾನ್ ಹಾಗೂ ಆಮ್ಲಜನಕ ವೃದ್ಧಾಪ್ಯವನ್ನು ತಡವಾಗಿಸುವ ಗುಣ ಹೊಂದಿದೆ.
*ಕ್ಯಾನ್ಸರ್ ಗೆ ಗುಡ್ ಬೈ ಹೇಳಲು ಹೆಚ್ಚಿನ ಕಾಮೋತ್ಕಟಯೇ ಸಾಕು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳ ಸಂಗ್ರಹ ಹೆಚ್ಚಿದಷ್ಟೂ ವಿವಿಧ ಅಂಗಗಳು ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ನಮ್ಮ ದೇಹದಿಂದ ಕಲ್ಮಶಗಳನ್ನು ನಿಯಮಿತವಾಗಿ ಹೊರಹಾಕಿ ದೇಹದ ಒಳಭಾಗವನ್ನು ಸ್ವಚ್ಛಗೊಳಿಸುತ್ತಲೇ ಇರಬೇಕು. ಪ್ರತಿತಿಂಗಳೂ ಸುಮಾರು ಇಪ್ಪತ್ತೊಂದು ಸ್ಖಲನಗಳ ಸುಖವನ್ನನುಭವಿಸಿದ ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆ ನಾಲ್ಕರಿಂದ ಏಳು ಸ್ಖಲನಗಳನ್ನು ಪಡೆದ ಪುರುಷರಿಗಿಂತ ಕಡಿಮೆ ಇರುತ್ತದೆ.
*ತೂಕ ಇಳಿಸಲು ನೆರವಾಗುತ್ತದೆ ಲೈಂಗಿಕ ಕ್ರಿಯೆ ಒಂದು ಉತ್ತಮ ವ್ಯಾಯಾಮವೂ ಹೌದು. ಹೊಟ್ಟೆಯ ಕೊಬ್ಬನ್ನು ಇಳಿಸುವ ನಿಮ್ಮ ವ್ಯಾಯಾಮ ಹಾಗೂ ಇತರ ಕ್ರಮಗಳಿಗೆ ಲೈಂಗಿಕ ಕ್ರಿಯೆ ಖಂಡಿತಾ ಬೆಂಬಲ ನೀಡುತ್ತದೆ. ನಿಯಮಿತವಾದ ಲೈಂಗಿಕ ಕ್ರಿಯೆಯಿಂದ ವಿಶೇಷವಾಗಿ ಸೊಂಟದ ಕೊಬ್ಬು ಹೆಚ್ಚುಕರಗುತ್ತದೆ. ಸುಮಾರು ಅರ್ಧ ಘಂಟೆಯ ಲೈಂಗಿಕ ಕ್ರಿಯೆಯಿಂದ ಎಂಭತ್ತಕ್ಕೂ ಹೆಚ್ಚು ಕ್ಯಾಲೋರಿಗಳು ದಹಿಸಲ್ಪಡುತ್ತವೆ. ಇಷ್ಟೇ ಕ್ಯಾಲೋರಿಗಳನ್ನು ದಹಿಸಲು ಸಾಮಾನ್ಯ ವೇಗದಲ್ಲಿ ಸುಮಾರು ಅರ್ಧಘಂಟೆಗೂ ಹೆಚ್ಚು ಕಾಲ ಜಾಗಿಂಗ್ ಮಾಡಬೇಕಾಗುತ್ತದೆ.
*ಮನೋಭಾವವನ್ನು ಉತ್ತಮಗೊಳಿಸುತ್ತದೆ ಮಹಿಳೆಯರಲ್ಲಿ ಈಸ್ಟ್ರೋಜೆನ್ ಹಾಗೂ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ರಸದೂತಗಳು ಲೈಂಗಿಕ ಕ್ರಿಯೆಯ ಮೂಲಕ ಹೆಚ್ಚು ಸ್ರವಿಸಲ್ಪಡುತ್ತವೆ ಹಾಗೂ ಇವೇ ಮನೋಭಾವವನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಇದರಿಂದ ಲೈಂಗಿಕ ಕ್ರಿಯೆ ಸುಖದಾಯಕ, ಆತ್ಮೀಯವೆನಿಸುವುದು ಮಾತ್ರವಲ್ಲ, ದೇಹದ ಸ್ನಾಯು ಹಾಗೂ ಮೂಳೆಗಳೂ ಹೆಚ್ಚು ಬಲಿಷ್ಟವಾಗುತ್ತವೆ. ಹೃದಯದ ಕ್ಷಮತೆ ಹೆಚ್ಚುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟವೂ ನಿಯಂತ್ರಣದಲ್ಲಿರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈಸ್ಟ್ರೋಜೆನ್ ಮಹಿಳೆಯರ ದೇಹದ ವಾಸನೆಯನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ ಹಾಗೂ ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ.
ಲೈಂಗಿಕ ಕ್ರಿಯೆ ಜೀವನದ ಒಂದು ಭಾಗವಾಗಿದೆ. ಅದರಿಂದ ಸುಖ ಮಾತ್ರ ಸೀಗುತ್ತದೆ ಎಂದು ಎಲ್ಲರ ಭಾವನೆ. ಆದರೆ ಕೇವಲ ಸುಖ ಮಾತ್ರವಲ್ಲದೇ, ಅದರಿಂದ ಹೆಣ್ಣು ಮತ್ತು ಗಂಡಿಗೆ ಇಷ್ಟೇಲ್ಲಾ ಉಪಯೋಗಗಳಿವೆ. ಲೈಂಗಿಕ ಕ್ರಿಯೆಯಿಂದ ನಮ್ಮ ದೇಹ ಆರೋಗ್ಯಕರವಾಗಿರುತ್ತದೆ. ದೇಹದಲ್ಲಿ ಹೊಸ ಚೈತನ್ಯ, ಉತ್ಸಾಹ ಹೆಚ್ಚುತ್ತದೆ. ಲೈಂಗಿಕ ಕ್ರಿಯೆ ದಿನಾಲೂ ಮಾಡಿದರೂ ಕೂಡ ಅದರಿಂದ ಯಾವುದೇ ತೊಂದರೆಗಳಿಲ್ಲ. ಜೀವನದಲ್ಲಿನ ಒತ್ತಡಗಳನ್ನು ಮರೆಯಲು ಇದು ಸಹಾಯವಾಗಿದೆ ಅಲ್ಲದೇ, ಕ್ಯಾನ್ಸರ್ ನಂತಹ ಅನೇಕ ರೋಗಗಳಿಗೆ ಇದು ಮದ್ದಾಗಿದೆ.
-ಸಂಜನಾ ಸಾಬಡೆ, ಮೈಸೂರು

   

 

  +++++++++++++++++++++++++++++++++++++++++++++++++++++++++++++++++++++++++++++++++++++++++++++++++

                       

           ಕಸುಬು ನಂಬಿದ ಮೇದಾರ ಸಮುದಾಯದ ಅಳಲು

ಬಿದಿರೇ...ನಮಗ್ಯಾಕೆ ಈ ಗತಿ
ಹುಟ್ಟುತ್ತಾ ಹುಲ್ಲಾದೆ, ಬೆಳಿಯುತ್ತಾ ಮರವಾದೆ, ಅಂಬಿಗನ ಕೋಲಾದೆ, ಕಚ್ಚಾಯದ ಬುಟ್ಟಿಯಾದೆ... ಎನ್ನುವ ಕವಿವಾಣಿಯಂತೆ ಹಲವು ರೂಪದಲ್ಲಿ ವರವಾದೆ. ಬಿದಿರು ದಿನ ಕಳಿದಂತೆ ನಂಬಿದವರ ಪಾಲಿಗೆ ಅನ್ನದ ಬಟ್ಟಲಾಗಿ ಉಳಿದಿಲ್ಲ...!  ಪ್ಲಾಸ್ಟಿಕ್ ಹಾಗೂ ಬೇರೆ ವಸ್ತುಗಳ ಹಾವಳಿಯಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗಿದ್ದರಿಂದ ಬಿದಿರಿನ ವಸ್ತುಗಳನ್ನು ಕೇಳೋರಿಲ್ಲದಂತಾಗಿದೆ. ಪರಿಣಾಮ ಮೇದಾರ ಸಮುದಾಯ ಬಳಸುವ ಸ್ತಿತಿಯಲ್ಲಿದೆ. ತಯಾರಿಸಿದ ವಸ್ತುಗಳನ್ನು ನಾನಾ ಕಡೆ ಅಲೆದಾಡಿ ಮಾರಾಟ ಮಾಡಲು ಯತ್ನಿಸಿದರೂ ಹೊಟ್ಟೆ ತುಂಬುವ ಖಾತರಿ ಇಲ್ಲ ಆದರೂ, ತಲಾತಲಾಂತರದಿಂದ ಕಲಿತ ಕಸುಬು ಬಿಡಲಾಗದೇ, ಇತ್ತ ಉಳಿಸಿ ಕೊಳ್ಳಲಾಗದೆ  ಕೂಲಿಯೇ ಲೇಸು ಎನ್ನಲಾರಂಭಿಸಿದ್ದಾರೆ.        

ನಗರದ ಮೇದಾರ ಓಣಿಯಲ್ಲಿ ಬಿದಿರಿನಿಂದ ನಾನ ವಸ್ತುಗಳನ್ನು ತಯಾರಸುವ ಅನೇಕ ಕುಟುಂಬಗಳು ನೆಲೆಸಿವೆ. ಈ ಕುಟುಂಬಗಳು ತಮ್ಮ ಕುಲ ಕಸುಬು ನಂಬಿ ಬದುಕು ದೂಡುತ್ತಿವೆ. ಸದ್ಯ ಪ್ಲ್ಯಾಸ್ಟಿಕ್ ವಸ್ತುಗಳ ಭರಾಟೆ ಹೆಚ್ಚಿದ್ದರಿಂದ ಇವರಿಗೆ ಭವಿಷ್ಯ ಚಿಂತೆ ಎದುರಾಗಿದೆ. ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಕೇಳುವರು ಇಲ್ಲದಂತಾಗಿದೆ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಸರ್ಕಸ್ ಮಾಡಬೇಕಾಗಿದೆ. 

ತಗ್ಗಿದ ಬೇಡಿಕೆ: ಮನೆಗಳ ನಿರ್ಮಾಣಕ್ಕೆ ಬಳಸುತ್ತಿದ್ದ ತಟ್ಟಿ, ಬಲಿಸು ವಿಣಿ ಮುಂತಾದ ವಸ್ತುಗಳನ್ನು ಜನ ಕೊಳ್ಳುತ್ತಿದ್ದರು. ಇಂದು ಸರ್ಕಾರ ನಾನಾ ಯೋಜನೆಯಡಿ ಕುಟುಂಬಗಳಿಗೆ ಜನತಾ ಮನೆ ನೀಡುತ್ತಿದೆ. ಸ್ವಂತ ಮನೆ ನಿರ್ಮಿಸಿಕೊಳ್ಳಲು ಸರ್ಕಾರ ಸಾಲ ನೀಡುತ್ತಿದೆ. ಹೌಸ್ ಫಾರ್ ಆಲ್ ಯೋಜನೆಗಳ ಮೂಲಕ ನಗರವಾಸಿಗಳಿಗೂ ಸೂರಿನ ಅವಕಾಶ ಕಲ್ಪಿಸುತ್ತಿದೆ. ಹಾಗಾಗಿ ಮುಖ್ಯವಾಗಿ ಮನೆ ನಿಮಾರ್ಣಕ್ಕೆ ಸಂಬಂಧಿಸಿದಂತೆ ಮೇದಾರ ಸಮುದಾಯವು ತಯಾರಿಸುತ್ತಿದ್ದ ವಸ್ತುಗಳನ್ನು  ಳುವವರಿಲ್ಲದಂತಾಗಿದೆ.

ಬಿದಿರು ಬೆಲೆ: ದಾಂಡೇಲಿ, ಮಹಾರಾಷ್ಟ್ರ ಗಳಿಗೆ ನಾನಾ ರಾಷ್ಟ್ರಗಳಿಂದ ಬಿದಿರನ್ನು  ತರಿಸಿಕೊಳ್ಳುವ ಈ ಸಮುದಾಯ ಒಂದು ಬಿದಿರಿಗೆ 150ರೂ.ಗೆ ನೀಡುತ್ತಿದೆ. ಇದನ್ನು ಹದ ಮಾಡಿ ನಾನಾ ವಸ್ತುಗಳ ತಯಾರಿಗೆ ಬಳಸುತ್ತಿದೆ. ರೊಟ್ಟಿ ಬುಟ್ಟಿ, ಮೊರ, ಪ್ರಜಾ ಸಾಮಾನು ಕೊಂಡೊಯ್ಯವ ಬುಟ್ಟಿ, ಚಾಪೆ, ಬಲೀಸ್‍ಗಳಿಂದ, ಪಿಣಿ ಮುಂತಾದ ವಸ್ತುಗಳನ್ನು ತಯಾರಿಸಲಾಗುತ್ತದೆ. ಹಿಂದೆ 4-5 ನೂರು ವರೆಗೆ ಲಾಭ ಬರುತ್ತಿದ್ದದ್ದು ಇಂದು ನೂರು ರೂ.ಗೆ ಇಳಿದಿದೆ. 


ಕೂಲಿಯತ್ತ ಚಿಂತೆ: ಐದಾರು ವರ್ಷಗಳ ಹಿಂದೆ ಅಲಂಕಾರ ವಸ್ತುಗಳನ್ನೂ ತಯಾರಿಸುತ್ತಿದ್ದ ಕುಟುಂಬಗಳ ಬೇಡಿಕೆ ಕಡಿಮೆಯಾಗಿ ಲಾಭ ಕುಸಿದಿದ್ದರಿಂದ ಬಿದಿರಿನಿಂದ ನಾನಾ ವಸ್ತು ತಯಾರಿಸಿ ಮಾರಾಟ ಮಾಡಲು ಮುಂದಾದವು. ಸದ್ಯ ಈ ವಸ್ತುಗಳಿಗೂ ಬೇಡಿಕೆ ಇಲ್ಲದಂತಾಗಿದೆ.  ದಿನಕ್ಕೆ ನಾಲ್ಕರಿಂದ ಎಂಟು ನಾನಾ ಬಗೆಯ ಬುಟ್ಟಿಗಳನ್ನು ತಯಾರಿಸಿ ಊರೂರು ಅಲೆದು ಮಾರಾಟ ಮಾಡುತ್ತಿದೆ. ಇಷ್ಟಾದರೂ ಆದಾಯ ಅಷ್ಟಕ್ಕಷ್ಟೇ ಎಂಬಂತಾಗಿದೆ. ದಿನಕ್ಕೆ 150ರಿಂದ 200ರೂ ಮಾತ್ರ ಲಾಭ ದೊರೆಯುತ್ತದೆ. ನಷ್ಟದ ಹಿನ್ನಲೆಯಲ್ಲಿ ಕೂಲಿ ಕೆಲಸ ಮಾಡಲು ಮುಂದಾಗಿದೆ.                                         

                                                                                                                                

 

                          


ನಮಗೆ ಏನು ಲಾಭ ಇಲ್ಲ, ನಾವು ಇದುವರೆಗೂ ಹೊರಗಡೆ ಹೋಗಿ ದುಡಿಮೆ ಮಾಡಿಲ್ಲ, ಸ್ವ ಉದ್ಯೋಗ ಮಾಡಬೇಕು. ಖಾಲಿ ಇರೋಕ ಆಗಲ್ಲ. ಅದಕ್ಕೆ ಅನಿವಾರ್ಯ ಇದೇ ಕೆಲಸ ಮಾಡಿಕೊಂಡು ಹೋಗ್ತಿದ್ವೀವಿ.


                                                  - ಮಲ್ಲಮ್ಮ ಬಿದಿರಿನಿಂದ ತಯಾರಿಸಿದ ವಸ್ತು ಮಾರುವವರು.

 



ನಮ್ಮ ಕಸುಬಿನಿಂದ ಸದ್ಯ ನಮಗೆ ಏನೂ ಲಾಭ ದೊರೆಯುತ್ತಿಲ್ಲ. ನಾನಾ ಕಡೆ ಅಲೆದಾಡಿ ನಿರೀಕ್ಷಿತ ಲಾಭ ದೊರೆಯದಂತಾಗಿದೆ. ಇದರಿಂದ ಕೂಲಿ ಮಾಡುವುದೇ ಉತ್ತಮ  ಎನಿಸುತ್ತಿದೆ.


                                                                     - ಶಾರದಾ, ಮೇದಾರ ಸಮುದಾಯದ ಮಹಿಳೆ.


 -ಅರ್ಚನ ವೀರ ಗಣಪ ಆದಾಪುರ, ಗಂಗಾವತಿ.

  +++++++++++++++++++++++++++++++++++++++++++++++++++++++++++++++++++++++++++++++++++++++++++++++++++

hh ಹಲವು ತೊಂದರೆಗಳಿಗೆ ಹರಳೆಣ್ಣೆ ಮದ್ದು
ನವೆಂಬರ್.27
ಅಡುಗೆಗೆ ಬಳಸುವ ಎಣ್ಣೆಗಳಲ್ಲಿಯೇ ಅತಿ ಹೆಚ್ಚು ಒಳ್ಳೆಯದು ಹರಳೆಣ್ಣೆ. ಹೆಂದೆ ಈ ಹರಳೆಣ್ಣೆಯನ್ನೇ ಎಲ್ಲಾ ಅಡುಗೆಗೂ ಬಳಸುತ್ತಿದ್ದರು. ಅಲ್ಲದೇ, ಎತ್ತಿನ ಬಂಡಿಗಳಿಗೂ ಕೂಡ ಗ್ರೀಸ್ ಬದಲು ಈ ಹರಳೆಣ್ಣೆಯನ್ನು ಬಳಸುತ್ತಿದ್ದರು. ಈ ಎಣ್ಣೆ ಅನೇಕ ತೊಂದರೆಗಳಿಗೆ ಮದ್ದಾಗಿದೆ. ಇದು ಚರ್ಮ ಕೂದಲುಗಳ ಜೊತೆಗೇ ಹೊಟ್ಟೆಯ ತೊಂದರೆಗಳು, ವಿವಿಧ ನೋವುಗಳಿಗೂ ಉತ್ತಮ ಪರಿಹಾರ ಒದಗಿಸುತ್ತದೆ. ಈ ಎಣ್ಣೆಯಲ್ಲಿ ಪ್ರಮುಖವಾಗಿ ರಿಸಿನೋಲಿಕ್ ಆಮ್ಲ ಎಂಬ ಪೋಷಕಾಂಶವಾಗಿದ್ದು ಎಣ್ಣೆಯ 85%-95%ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ. ಉಳಿದಂತೆ ಇದರಲ್ಲಿ ಓಲಿಕ್ ಆಮ್ಲ, ಲಿನೋಲಿ ಆಮ್ಲ ಮೊದಲಾದ ಪೋಷಕಾಂಶಗಳಿವೆ. ಈ ಅಮ್ಲ ಅತಿ ಹೆಚ್ಚಿನ ಸಾಂದ್ರತೆಯಲ್ಲಿರುವುದೇ ಈ ಎಣ್ಣೆಯ ಪ್ರಾಮುಖ್ಯತೆಯಾಗಿದೆ. ಇದು ಸುಲಭವಾಗಿ ಬೆಳೆಯಲಾಗುವ ಮರಗಳ ಬೀಜದಿಂದ ಸಾಂಪ್ರಾದಾಯಿಕ ವಿಧಾನದಲ್ಲಿಯೂ ಹಿಂಡಿ ತೆಗೆಯಬಹುದಾದುದರಿಂದ ಅಗ್ಗವೂ ಆಗಿದೆ.

ಹರಳೆಣ್ಣೆಯಿಂದ ಸಾಕಷ್ಟು ಲಾಭಗಳು:

ಇದು ತ್ವಚೆಯ ಹೊಳಪಿಗೆ, ಕೂದಲ ಕಾಂತಿಗೆ ಮಾತ್ರವಲ್ಲ ಮೂಳೆಗಳ ಸಂದುಗಳಲ್ಲಿ ನೋವು ಅಥವಾ ಸಂಧಿವಾತಕ್ಕೂ ಉತ್ತಮ ಔಷಧಿಯಾಗಿದೆ.
ಸಂಧಿವಾತ ನಿವಾರಣೆಯಲ್ಲಿ ಹರಳೆಣ್ಣೆ:
ಸಂಧಿವಾತ ಗುಣಪಡಿಸಲು ನೆರವಾಗುತ್ತದೆ ಈ ಎಣ್ಣೆಯಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿರುವ ರಿಸಿನೋಲಿಕ್ ಆಮ್ಲ, ಓಲಿಕ್, ಲಿನೋಲಿಕ್ ಆಮ್ಲಗಳು ಹಾಗೂ ಇತರ ಕೊಬ್ಬಿನ ಆಮ್ಲಗಳು ಸಂಧಿವಾತ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲದೆ ಯೂಮಾಟಿಕ್ ನೋವು ಹಾಗೂ ಗಂಟುಗಳು ಊದಿಕೊಳ್ಳುವುದನ್ನೂ ಕಡಿಮೆ ಮಾಡುತ್ತದೆ. ಈ ತೊಂದರೆಗಳು ಇರುವ ಯಾವುದೇ ವಯೋಮಾನದ ವ್ಯಕ್ತಿಗಳಿಗೂ ಹರಳೆಣ್ಣೆಯನ್ನು ಸುರಕ್ಷಿತವಾಗಿ ಬಳಸಬಹುದು.
ಹರಳೆಣ್ಣೆಯನ್ನು ಕೊಂಚವೇ ಬಿಸಿಮಾಡಿ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡರೆ ಇದು ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಇಳಿದು ನೋವಿಗೆ ಕಾರಣವಾದ ಅಂಶಗಳನ್ನು ನಿವಾರಿಸಿ ನೋವು ಕಡಿಮೆ ಮಾಡುತ್ತದೆ. ಇನ್ನೂ ಉತ್ತಮ ಪರಿಣಾಮ ಪಡೆಯಲು ಹರಳೆಣ್ಣೆಯೊಂದಿಗೆ ಬೇರೆ ಔಷಧಿಗಳನ್ನು ಬೆರೆಸಿಯೂ ಬಳಸಬಹುದು.
ಗರ್ಭನಿರೋಧಕಕ್ಕೆ ಹರಳೆಣ್ಣೆ:
ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಹಲವು ಮಹಿಳೆಯರು ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ಮಾತ್ರೆಗಳು ಅಡ್ಡಪರಿಣಾಮದಿಂದ ಹೊರತಾಗಿರದ ಕಾರಣ ಬೇರೆ ತೊಂದರೆ ಎದುರಾಗುತ್ತದೆ. ಆದ್ದರಿಂದ ಮಹಿಳೆಯರು ಈ ಮಾತ್ರೆಗಳ ಬದಲಿಗೆ ಹರಳೆಣ್ಣೆಯನ್ನು ಬಳಸಬಹುದು. ಈ ಎಣ್ಣೆಯಲ್ಲಿರುವ ರಿಸಿನ್ ಎಂಬ ಪ್ರೋಟೀನುಗಳು, ಒಂದು ವೇಳೆ ಕಡಿಮೆ ಪ್ರಮಾಣದಲ್ಲಿ ಬಳಕೆಯಾದರೆ ಇದು ರೋಗಾಣುಹಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದೇಕಾರಣಕ್ಕೆ ಕೆಲವರು ಗರ್ಭನಿರೋಧಕ ಜೆಲ್ ಹಾಗೂ ಲೋಷನ್ ಗಳಲ್ಲಿ ಬಳಸಲಾಗುತ್ತದೆ. ಪ್ರಾರಂಭಿಕ ಹಂತದ ಗರ್ಭವತಿಯಾಗಿರುವ ಮಹಿಳೆ ಹರಳೆಣ್ಣೆಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಇದು ಬಲವಂತವಾಗಿ ಗರ್ಭಪಾತಕ್ಕೆ ಕಾರಣವಾಗುತ್ತದೆ. ಆದರೆ ಇದು ಅಪಾಯಕಾರಿಯಾದ ಕ್ರಮವಾಗಿದೆ ಹಾಗೂ ಇನ್ನೂ ಹುಟ್ಟದೇ ಇರುವ ಜೀವವೊಂದನ್ನು ಭೂಮಿಗೆ ಬರುವ ಮುನ್ನವೇ ಕೊಂದ ಪಾಪಭಾವನೆಯೂ ಎದುರಾಗುತ್ತದೆ.

ಮಾಸಿಕ ದಿನಗಳ ಏರುಪೇರು:
ಮಾಸಿಕ ದಿನಗಳ ಏರುಪೇರನ್ನು ಸರಿಪಡಿಸುತ್ತದೆ. ಇಂದು ಎಷ್ಟೋ ಮಹಿಳೆಯರು ತಮ್ಮ ಮಾಸಿಕ ದಿನಗಳು ಕ್ರಮಬದ್ದವಾಗಿಲ್ಲ ಎಂಬ ತೊಂದರೆಯನ್ನು ಹೇಳಿಕೊಳ್ಳುತ್ತಾರೆ. ಇದರಿಂದ ಮನೋಭಾವನೆಯಲ್ಲಿ ಏರುಪೇರು, ಅನಿಯಂತ್ರಿತ ರಕ್ತಸ್ರಾವ ಹಾಗೂ ಕೆಳಹೊಟ್ಟೆಯಲ್ಲಿ ನೋವು ಹಾಗೂ ಸೆಡೆತ ಕಾಣಿಸಿಕೊಳ್ಳುತ್ತದೆ. ಈ ತೊಂದರೆಗಳನ್ನು ನಿವಾರಿಸಲು ಹರಳೆಣ್ಣೆ ನೆರವಾಗುತ್ತದೆ. ಇದರಲ್ಲಿರುವ ರಿಸಿನೋಲಿಕ್ ಆಮ್ಲ ಮಾಸಿಕ ಸ್ರಾವದ ಪ್ರಮಾಣವನ್ನು ಹೆಚ್ಚಿಸುವ ಗುಣ ಹೊಂದಿದೆ. ಈ ಸ್ರಾವ ಹೊರಬರದೇ ಸಂಗ್ರಹವಾಗಿರುವ ಮೂಲಕವೇ ಹೊಟ್ಟೆನೋವಿನ ಸಹಿತ ಇತರ ತೊಂದರೆಗಳು ಎದುರಾಗಿರುತ್ತವೆ. ಯಾವಾಗ ಈ ಸ್ರಾವ ಹೊರಹೋಯಿತೋ ಈ ಮೂಲಕ ಎದುರಾಗಿದ್ದ ತೊಂದರೆಗಳೆಲ್ಲಾ ಸರಿಯಾಗುತ್ತವೆ.ತ್ವಚೆಯ ಆರೈಕೆಗೆ :
ತ್ವಚೆಯ ಆರೈಕೆಗೆ ನೆರವಾಗುತ್ತದೆ ಹೊಳಪುಳ್ಳ, ಕಲೆಯಿಲ್ಲದ ಹಾಗೂ ನುಣುಪಾದ ತ್ವಚೆಗಾಗಿ ಹರಳೆಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಾ ಬರಲಾಗಿದೆ. ಇದರಲ್ಲಿರುವ ಅಂಡಿಸೈಲೆನಿಕ್ ಆಮ್ಲ ತ್ವಚೆಯ ತೊಂದರೆಗಳನ್ನು ಸರಿಪಡಿಸುವ ಕ್ಷಮತೆ ಹೊಂದಿದ್ದು ವಿಶೇಷವಾಗಿ ಚರ್ಮದಲ್ಲಿ ಉಂಟಾಗಿರುವ ಕೀವು ಹಾಗೂ ಸೋಂಕುಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂಧ್ರ ನಿವಾರಕ ಗುಣಗಳು ತ್ವಚೆಯ ಆರೈಕೆಯಲ್ಲಿ ನೆರವಾಗುತ್ತವೆ.
ಮಲಬದ್ಧತೆಯಿಂದ ರಕ್ಷಣೆ:
ಮಲಬದ್ಧತೆಯಿಂದ ರಕ್ಷಿಸುತ್ತದೆ. ಹರಳೆಣ್ಣೆಯನ್ನು ನೇರವಾಗಿ ಕುಡಿಯುವ ಮೂಲಕ ಜೀರ್ಣಾಂಗಗಳಲ್ಲಿದ್ದ ಕಲ್ಮಶಗಳನ್ನು ಬಲವಂತವಾಗಿ ಹೊರಹಾಕಲು ಸಾಧ್ಯವಾಗುವ ಮೂಲಕ ಜೀರ್ಣಾಂಗಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮಲಬದ್ದತೆಯಿಂದ ನರಳುತ್ತಿರುವ ರೋಗಿಗಳಿಗೆ ದುಬಾರಿ ಔಷಧಿಯಿಂದಲೂ ಆಗದೇ ಇರುವ ಕಾರ್ಯ ಹರಳೆಣ್ಣೆ ಸುಲಭವಾಗಿ ನಿರ್ವಹಿಸುತ್ತದೆ.ಬಾಣಂತಿಯರ ಎದೆಹಾಲು ಹೆಚ್ಚಿಸುವಲ್ಲಿ ಹರಳೆಣ್ಣೆ ಪಾತ್ರ:
ಬಾಣಂತಿಯರ ದೇಹದಲ್ಲಿ ಹೆಚ್ಚಿನ ಹಾಲು ಉತ್ಪತ್ತಿಯಾಗಲು ಹರಳೆಣ್ಣೆ ಸಹಕರಿಸುತ್ತದೆ. ಅಲ್ಲದೇ ಹೆಚ್ಚಿನ ಪ್ರಮಾಣದ ಹಾಲು ಸುಲಭವಾಗಿ ಮಗುವಿಗೆ ಲಭ್ಯವಾಗುವ ಮೂಲಕ ಮಗುವಿನ ಆರೋಗ್ಯವೂ ಉತ್ತಮವಾಗಲು ನೆರವಾಗುತ್ತದೆ. ಆದರೆ ಹರಳೆಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ. ಏಕೆಂದರೆ ಹರಳೆಣ್ಣೆಯ ಪ್ರಮಾಣ ಹೆಚ್ಚಾದರೆ ಹಾಲಿನ ಗುಣಮಟ್ಟವೂ ಕೊಂಚ ಬದಲಾಗಬಹುದು ಹಾಗೂ ಮಗುವಿನ ಆರೋಗ್ಯವನ್ನು ಬಾಧಿಸಬಹುದು.
ಇದುವರೆಗೆ ಹರಳೆಣ್ಣೆಯ ಪ್ರಯೋಜನಗಳ ಬಗ್ಗೆ ಅರಿತೆವು. ಈಗ ಸಂಧಿವಾತಕ್ಕೆ ಹರಳೆಣ್ಣೆಯನ್ನು ಹೇಗೆ ಬಳಸುವುದು ಎಂಬುದನ್ನು ನೋಡೋಣ: ಈ ಎಣ್ಣೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು:
* ಸಾಂಪ್ರಾದಾಯಿಕ ವಿಧಾನದಲ್ಲಿ ಹಿಂಡಿ ತಗೆದ ಹರಳೆಣ್ಣೆ * ಎಣ್ಣೆ ಬಿಸಿಮಾಡಲು ದಪ್ಪತಳದ ಪಾತ್ರೆ * ಗಂಟುಗಳಿಗೆ ಸುತ್ತಲು ಪ್ಲಾಸ್ಟಿಕ್ ಹಾಳೆ * ಒಂದು ದೊಡ್ಡ ಸ್ನಾನದ ಟವೆಲ್ * ಉಣ್ಣೆಯ ಬಟ್ಟೆ, ಅಥವಾ ಹತ್ತಿಯ ದಪ್ಪನೆಯ ಬಟ್ಟೆ ಸುಮಾರು ಒಂದು ಚದರಡಿಯಷ್ಟು.
ವಿಧಾನ: ಪಾತ್ರೆಯಲ್ಲಿ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಉಣ್ಣೆಯ ಅಥವಾ ಹತ್ತಿಯ ಬಟ್ಟೆಯನ್ನು ಇದರಲ್ಲಿ ಮುಳುಗಿಸಿ ಚೆನ್ನಾಗಿ ಹೀರಿಕೊಳ್ಳುವಂತೆ ಮಾಡಿ. ನೋವಿರುವ ಭಾಗಕ್ಕೆ ಬೆಚ್ಚನೆಯ ಎಣ್ಣೆಯಿಂದ ಕೊಂಚ ಹೊತ್ತು ಮಸಾಜ್ ಮಾಡಿ ಬಳಿಕ ಎಣ್ಣೆಯಲ್ಲಿ ತೋಯ್ದಿರುವ ಬಟ್ಟೆಯನ್ನು ಗಂಟು ಆವರಿಸುವಂತೆ ಇರಿಸಿ ಪ್ಲಾಸ್ಟಿಕ್ ಹಾಳೆಯನ್ನು ಸುತ್ತಿಬಿಗಿಯಾಗಿಸಿ.
ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಈ ಭಾಗದ ಮೇಲೆ ದಪ್ಪನೆಯ ಟವೆಲ್ ಹಾಕಿ ರಾತ್ರಿಯಿಡೀ ಹಾಗೇ ಇರಿಸಿ. ಮರುದಿನ ಬೆಳಿಗ್ಗೆ ಎಲ್ಲವನ್ನೂ ಬಿಚ್ಚಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ನೋವಿನ ಪ್ರಮಾಣವನ್ನು ಅನುಸರಿಸಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಪುನರಾವರ್ತಿಸಬೇಕು.
ಹರಳೆಣ್ಣೆಯಿಂದ ಇಷ್ಟೇಲ್ಲಾ ಉಪಯೋಗಗಳಿವೆ.
-ಕಲ್ಪನಾ ಸಿ ಮಠಪತಿ

   

  +++++++++++++++++++++++++++++++++++++++++++++++++++++++++++++++++++++++++++++++++++++++++++++++++++

           

ಸೂರ್ಯನೇ ಜೀವನಕ್ಕೆ ಸರಿಸಾಟಿ
ಗತ್ತಿನಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ನೋವುಗಳಿದ್ದೇ ಇರುತ್ತವೆ. ಅದರೆ ಅವುಗಳನ್ನು ಎದುರಿಸುವ ಸಾಮಥ್ರ್ಯ ಎಲ್ಲರಿಗೂ ಇರುವುದಿಲ್ಲ. ನೋವುಗಳ ಮಧ್ಯೆ ಬೆಳೆದವರಿಗೆ ಜೀವನ ಏನೆಂದದು ಅರ್ಥವಾಗುವುದು ಆವಾಗಲೇ. ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಸುಖ ಹೆಚ್ಚಾದರೆ ವಿದ್ಯೆ ತಲೆಗೆ ಹತ್ತುವುದಿಲ್ಲ ಎನ್ನುವ ಮಾತು ಪ್ರಸಂಗದಲ್ಲಿರುವಾಗ ಈರಣ್ಯಾಕ್ಷ ಪ್ರಸ್ತಾಪ ಮಾಡುತ್ತಾನೆ. ಜಗತ್ತಿನಲ್ಲಿ ಅತ್ಯುತ್ಕøಷ್ಟವಾದ, ಮಹೋನ್ನತ ಯಶಸ್ಸುಗಳೆಲ್ಲವೂ ಕೂಡ, ಒಂದಲ್ಲ ಒಂದು ರೀತಿಯಿಂದ, ಸತತ ವೈಫಲ್ಯಗಳಿಂದಲೇ ಬಂದಿವೆ. ಈ ಸತ್ಯವನ್ನಂತೂ ನಮ್ಮಲ್ಲಿ ಅನೇಕರು ಖಂಡಿತವಾಗಿಯೂ ಸಹ ಒಪ್ಪಿಕೊಳ್ಳುತ್ತಾರೆ. ವೈಫಲ್ಯದ ಕಹಿಯನ್ನುಂಡ ನಮಗೆಲ್ಲರಿಗೂ ಅನ್ವಯವಾಗುವ ಒಂದು ಸಂಗತಿಯೇನೆಂದರೆ, ಇಂದಿನ ಸೋಲನ್ನು ನಾವು ಅವಲೋಕಿಸುವ ನಮ್ಮ ದೃಷ್ಟಿಕೋನವು ಭವಿಷ್ಯದ ಯಶಸ್ಸನ್ನು ನಿರ್ಧರಿಸುವ ಮಹತ್ತರ ಅಂಶವಾಗಿದೆ. ಇಂದಿನ ಸೋಲನ್ನೇ ನಾವು ಜೀವನದ ಅಂತ್ಯವೆಂದು ಭಾವಿಸಿಕೊಂಡರೆ. ಅಲ್ಲಿಗೆ ಮುಗಿಯಿತು. ನಮ್ಮಿಂದ ಮುಂದೇನೂ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬದಲಾಗಿ.

ಇಂದಿನ ಸೋಲನ್ನೇ ನಾವು ಹೊಸತಾಗಿ ಇನ್ನಷ್ಟು ಚಾತುರ್ಯದಿಂದ ತೊಡಗಿಸಿಕೊಳ್ಳಲು ದೊರೆತಿರುವ ಒಂದು ಅವಕಾಶ ಎಂದು ಭಾವಿಸಿದರೆ ನಾವು ಹೊಂದಬಹುದಾದ ಯಶಸ್ವುಗಳ ಸರಮಾಲೆಗೆ ಖಂಡಿತವಾಗಿಯೂ ಕೊನೆಯೆಂಬುರುವುದಿಲ್ಲ. ವೈಫಲ್ಯದಿಂದ ನಾವು ಕಲಿಯಬಹುದಾದ ಅಮೂಲ್ಯವಾದ ಜೀವನ ಪಾಠ ಹೇಳುತ್ತದೆ. ಕಷ್ಟವೂ ಬಡತನವೂ, ಬೋಧಿಸುವಂತೆ ಬೇರೆ ಯಾವುದೂ ಬೋಧಿಸಲಾರದು ಎನ್ನುವ ಗತಕಾಲದ ನಾಣ್ಮುಡಿ ಶತಶತಮಾನಕ್ಕೂ ಸತ್ಯ ಸಾರುತ್ತಿವೆ. ವೈಫಲ್ಯವು ಮುಂದಿನ ಯಶಸ್ಸಿಗೆ ಯಾವ ರೀತಿಯಲ್ಲಿ ಮಹತ್ತರವಾದದ್ದು ಎಂಬುದರ ಬಗ್ಗೆ ನಾವು ಈಗಾಗಲೇ ಖಂಡಿತವಾಗಿಯೂ ಹೇಳಿದ್ದೇವಾದರೂ ಕೂಡ, ವೈಫಲ್ಯದಿಂದ ನಾವೇನನ್ನೂ ಕಲಿಯದೇ ಹೋದರೆ, ಯಶಸ್ಸು ಎಂಬುದು ನಮಗೆ ಕೊನೆಯವರೆಗೂ ಸಹ ಕೈಗೆಟುಕದ ಗಗನಕುಸುಮವೇ ಆಗಬಹುದು. ಇಂತಹ ಶೋಚನೀಯ ಸ್ಥಿತಿಯ ಮತ್ತೊಂದು ಸೆರ್ಪಡೆಯೇನೆಂದು, ನಾನೇಕೆ ಯಾವಾಗಲೂ ಸೋಲುತ್ತೇನೆ? ಎಂಬ ಪ್ರಶ್ನೆಯು ಬೆಂಬಿಡದ ಪೇಡೆಂಭೂತದಂತೆ ಕಾಡಲಾರಂಭಿಸುತ್ತದೆ.

                       ವೈಫಲ್ಯದಿಂದ ನಾವು ಕಲಿಯಬುದಾದ ಈ ಅಪೂರ್ವ ಪಾಠಗಳ ಕುರಿತು ವೈಫಲ್ಯದಿಂದ ಕಲಿಯಬುದಾದ 10 ಪಾಠಗಳ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ. ಹೇಳಬೇಕು ಅಂದ್ರೆ ನಾ ಏನು ಲೇಖಕನು ಅಲ್ಲ, ಕವಿಯಂತೂ ಮೊದಲೇ ಅಲ್ಲ...ಮತ್ತೆ ಬರೆಯಲೇಬೇಕು ಅಂತ ಕೂತು ಬರಿಯೋ ಜೀವಿನೂ ಅಲ್ಲ...ಸಂಭ್ರಮಿಸುವ ರೀತಿ, ಅನಿಸಿದ ಅನಿಸಿಕೆ, ಮನಕುಳುಕುವ ತಳಮಳಗಳ ಹೆಸರು, ಅವುಗಳ ಉಸಿರು ಮೂಲೆ ಸೇರಬಾರದು ಅಂತ ಅದಕ್ಕೊಂದು ಭಾವದ ಬಯಲು ದಾರಿ ಅಲೆಮಾರಿಯ ಹಾದಿ ಜೀವನ ಕವಲುದಾರಿ. ಜೀವನ ನಿಂತ ನೀರಲ್ಲ. ಅದು ಮುಂದೆ ಸಾಗುವ ಹರಿಯುವ ನದಿ ಇದ್ದಂತೆ. ನೀರ್ ಬಗ್ಗೆ ಯಾಕೇ ಹೇಳ್ತಿದಿನಿ ಅಂದ್ರೆ ಜೀವನದ ಬಹುಪಾಲು ಭಾಗವನ್ನು ನೀರಿಗೆ ಹೋಲಿಸಬಹುದು. ಅದು ಪರೋಕ್ಷವಾಗಿ ನದಿಯಂತೆಯೇ. ಅದರ ಹರಿವು, ಮನುಷ್ಯನ ಜೀವನಕ್ರಮ ಒಂದೇ ನಾಣ್ಯದ ಎರಡು ಮುಖಗಳು.ಮುಷ್ಯನನಿಗೆಷ್ಟು ಮೋಹ!! ಹಾಗೆಯೇ ನದಿಗೇಷ್ಟು ಧಾವಂತ!? ದಾರಿ ತೋರಿದ ಕಡೆ ಓಡಲೋ? ಇಲ್ಲ ಮಧ್ಯದಲ್ಲೇ ಇಲ್ಲೇ ಇಲ್ಲೇ ಎಲ್ಲಾದರೂ ತನ್ನ ಪಯಣ ಕೊನೆಗೊಳಿಸಲೋ? ಇದ್ದರೂ ಎಲ್ಲಿರುವುದು? ಎಲ್ಲಿ ನೆಲೆ ನಿಲ್ಲುವುದು?ನಿಂತರೂ ಸಾರ್ಥಕವಾಗುವುದಾ? ಇಲ್ಲ ನಿಂತು ಸಾಮಾನ್ಯರಲ್ಲಿ ಸಾಮಾನ್ಯರಾಗಿ ತನ್ನ ಯಾತ್ರೆಯನ್ನು ಮುಗಿಸಿಬಿಡುವೆನಾ?! ಅನ್ನೋ ಹಿಂಜರಿಕೆ. ಹೌದಲ್ವಾ? ಬದುಕಲೇಬೇಕು ಬದುಕುವ ಈ ಮಾತು ಎಂದು ಖ್ಯಾತ ಹಿರಿಯ ಪತ್ರಕರ್ತ ಪಾಟಿಲ್ ಪುಟ್ಟಪ್ಪ ಅವರ ಪುಸ್ತಕದಲ್ಲಿ ಬದುಕಿನ ಶೈಲಿ, ಧಾವಂತದ ಬದುಕು, ಬವಣೆಗಳನ್ನು ಚಿಕ್ಕ ಕಥೆಗಳ ರೂಪದಲ್ಲಿ ಬದುಕಿಗೆ ಬೇಕಾದ ಅಗತ್ಯ ಅಂಶಗಳನ್ನು ತೆರೆದಿಟ್ಟಿದ್ದಾರೆ. ಬದುಕಲೇಬೇಕು ಸಾರ್ಥಕವಾಗಿ, ನಾವು ಬಯಸಿದ ಬದುಕು ನಮ್ಮದಾಗಲೇಬೇಕು! ಉತ್ಸಾಹದಿಂದ ಓಡುವ, ಹರಿಯುವ ನದಿಯಂತೆ ಎಷ್ಟೋ ಜೀವನ ಪಾಠ ಎಲ್ಲರಿಗೂ ಒಂದಲ್ಲಾ ಒಂದು ರೀತಿ ಕೊಡುತ್ತೆ ಅಲ್ವೇ! ಅದು ನಮ್ಮ ಜೀವ ಜಲ! ಮನುಷ್ಯ ಅನ್ನುವುದು, ನಿಜವಾಗಿಯೂ ಒಂದು ಜೀವ, ಅದು ನಿರಂತರವಾಗಿ ವಿಕಾಸಗೊಳ್ಳುತ್ತಾ ಮುಂದುಹರಿಯುತ್ತಿರಬೇಕು.

 

ಕೆಲವೊಂದು ಅನುಭವದ ಜೀವನ ಸಿಗುವುದು, ಈ ಮಾನವನ ದೇಹದಲ್ಲಿ. ಹಾಗಾಗಿ ಆತ್ಮಜೀವ ತಲೆಯುತ್ತದೆ. ಆತ್ಮಕ್ಕೆ ಈ ಜೀವನದಲ್ಲಿ ಏನೆಲ್ಲಾ ಮರೆತು , ಜೀವನದ ನಾಟಕರಂಗದಲ್ಲಿ ಸಿಕ್ಕುಹಾಕಿಕೊಳ್ಳುತ್ತದೆ. ಅಲ್ಲಿಂದ ಶುರು, ಕರ್ಮಕಾಂಡಗಳು, ಋಣ ತೀರಿಸುವುದರಲ್ಲೇ ಕಾಲ ಹರನವಾಗಿರುತ್ತದೆ. ಒಂದು ಜೀವ, ಅದು ನಿರಂತರವಾಗಿ ಅದನ್ನೆಲ್ಲಾ ಬದಿಗೊತ್ತಿ, ನದಿ ತನ್ನ ಗುರಿ ತಲುಪಲು ಕಡಲ ಸೇರಲಿಕ್ಕೆ ಓಡುವ ಹಾಗೇ, ನಾವೂ ನಮ್ಮ ಗುರಿ ಮುಟ್ಟುವ ತನಕ ಉತ್ಸಾಹದಿಂದ ಸಾಗೋಣ. ಇಷ್ಟೇಲ್ಲಾ ಅನಿಸಿದ್ದು ನಾನೂ ಬದುಕಿನ ಒಂದು ನೆಲೆಯ ಹೆಜ್ಜೆ ಹುಡುಕುತ್ತಾ ಹೇಳಿದ ಹಾಗೇ ಏನ್ ಏೀನೋ ಬರೆದುಕೊಂಡಿದ್ದೆ. ಆದ್ರೆ ಇವಾಗ ಕಾಣದಷ್ಟು ಧೂಳುಮಯವಾಗಲು ಬಿಟ್ಟಿರಲಿಲ್ಲ. ಯಾವುದೋ ದಾರಿಯಲ್ಲಿ ಹೊರಟಿದ್ದೆ ಆದ್ರೆ ಹಿಂದೆ ನಡೆದ  ಲವೊಂದು ಘಟನೆಗಳನ್ನು ಮತ್ತೆ ಮರಕಳಿಸಿಕೊಂಡಾಗ ಮೈ, ಮನ, ಹೃದಯ, ಎಲ್ಲಾ ನಡುಕ ಹುಟ್ಟಿಸಿದ್ದು ನೆನಪಾಯಿತು. ಅದಕ್ಕೆಂದು ಮತ್ತೆ ಕಣ್ಣಲ್ಲಿನ ಧೂಳನೆಲ್ಲ ತೆಗೆಯಲು ಇಡೀ ಕುಟುಂಬದ ಪರಿವಾರವೇ ಕಣ್ಣೀರಾಕಿ ಧೂಳು ಹೊರ ಹಾಕಿ. ಬದರದಲ್ಲಿ ಹೊರ ತಳ್ಳಿ ಹಾಕುವುದೆ ನನ್ನ ಆ ನೋವು ಈ ಬರಹ ಓದಲು ಅಣಿಯಾಗಿದೆ. ಗುರಿ
ಮುಟ್ಟುವ ತವಕದಲ್ಲಿ ಒಳಗೆ ನುಗ್ಗಿ ಬರಬೇಕು ಅನ್ನೋ ಆಸೆನೋ ಇಲ್ಲ ಭಾವನೇನೋ ಹುಟ್ಟೋದಂತು ನಿಜ. ಅವೆಲ್ಲ ಎಲ್ಲಿ ನನ್ನ ದಾರಿಗೆ ಅಡ್ಡ ಬರುತ್ತೋ ಅನ್ನೋ ನಿಸ್ಸಂಕೋಚ
ಪ್ರೀತಿ...ಜೊತೆಗೆ ಬೇಕಿದ್ದನ್ನ ಯಾರ ಬಳಿ ಕೇಳಬೇಕು ಎಂಬುದೇ ಮೊದಲಿನಿಂದ ತಿಳಿದಿಲ್ಲ, ಆದ ಕಾರಣ ಎಲ್ಲದಕ್ಕೂ ಹೊಂದಾಣಿಕೆ ಎಂಬ ಹಣೆ ಪಟ್ಟಿ ಅಂಟಿಸಿ ತೆಗೆದುಹಾಕಿ ಕಳುಹಿಸಿದ್ದೆನೆ. ಇನ್ನು ಮುಂದೆ ಯಾರನ್ನು ಕೇಳೋ ಅವಕಾಶ ಬರೋದಿಲ್ಲ ಕಣ್ರೀ, ಯಾಕಂದ್ರೆ ನನ್ನ ಪರಿವಾರ ನನ್ನ ಕಾಲ ಮೇಲೆ ನಿಲ್ಲಿಸಿದೆ...ಅದಕ್ಕೆ ನಾನು ಅಭಾರಿ!! ಸೂರ್ಯ ತಾನು ಮುಳುಗುತ್ತಾನೆ ಅಂತ ಗೊತ್ತಿದ್ರು ತನ್ನ ಕೆಲಸವನ್ನು ಸಂಪೂರ್ಣವಾಗಿ ಅದೇ ತಡೆ ಇಲ್ಲದೆ  ಭಾಯಿಸ್ತಾನೆ, ಯಾಕಂದ್ರೆ ಮತ್ತೆ ಹುಟ್ಟಿ ಪ್ರಕಾಶಿಸುತ್ತಾನೆ. ಎಂಬ ಆತ್ಮವಿಶ್ವಾಸ ಅವನಲ್ಲಿದೆ...ಹಾಗೆ ಮುಳುಗುವುದು ಒಂದು ನೋವೆಂದು ಪರಿಗಣಿಸಿದರೂ, ನಾವು ಕೂಡ ನೇಸರನಂತೆ ಆ ನೋವನ್ನು ಅನುಭವಿಸಿಕೊಳ್ಳಬೇಕು, ಅದಕ್ಕೆ ಆ ಸೂರ್ಯನೇ ಸರಿಸಾಟಿ!!


 -ಅರ್ಚನ ವೀರ ಗಣಪ ಆದಾಪುರ, ಗಂಗಾವತಿ.

                                                                                                                                                                                                                                                                                                                                                                                                                                                                       


 +++++++++++++++++++++++++++++++++++++++++++++++++++++++++++++++++++++++++++++++++++++++++++++++++++

                                                                                                                                                                                        

ಯುವಕರೇ ಎಚ್ಚೆತ್ತುಕ್ಕೋಳ್ಳಿ...!
ಜಾತಿವಂತನಾಗಿ ಬಾಳುವುದಕ್ಕಿಂತ ನೀತಿವಮತನಾಗಿ ಬಾಳು
ಕ್ಕಳು ದೇಶದ ಅಮೂಲ್ಯ ಆಸ್ತಿ. ಪ್ರತಿಯೊಬ್ಬ ಮಗುವನ್ನೂ ನೇತಾರನ್ನಾಗಿಯೂ, ದಕ್ಷ ಆಡಳಿತಗಾರನನ್ನಾಗಿಯೂ, ಉದ್ಯೋಗ ಕೌಶಲ್ಯ ಶಾಲಿಯನ್ನಾಗಿ, ಸ್ವಾವಲಂಬಿ ಬದುಕನ್ನು ನಿರ್ಮಿಸ ಬಲ್ಲನಾಗರಿಕನನ್ನಾಗಿಯೂ ರೂಪಿಸ ಬೇಕಾಗಿರುವುದು ಎಲ್ಲರ ಕರ್ತವ್ಯ. ಅದರಲ್ಲಿಯೂ ಶಿಕ್ಷಕರ ಜವಾಬ್ದಾರಿ ಅತ್ಯಂತ ಮುಖ್ಯವಾದುದಾಗಿದೆ ತಂದೆ-ತಾಯಿ ಪಾಲಕರು ಅದಕ್ಕಾಗಿಯೇ ಗುರುವಿನ ಗುಲಾಮನಾಗುವ ತನಕ ದೊರೆದಣ್ಣ ಮುಕುತಿ ಎಂದು ನಾಣ್ಣುಡಿಯಲ್ಲಿ ನೀಡಿದ್ದಾರೆ.

ಯಾವ ತಂದೆ- ತಾಯಿ ತನ್ನ ಮಗು ಭಯೋತ್ಪಾದಕನಾಗಲಿ, ಉಂಡಾಡಿಯಾಗಲಿ, ಕ್ರಿಮಿನಲ್ ಆಗಲಿ, ರೋಡ್ ರೋಮಿಯೊ ಆಗಲಿ, ಕಳ್ಳನೂ, ಕೊಲೆಗಾರನೂ, ಅತ್ಯಾಚಾರಿಯೂ, ಕುಡುಕನೂ, ದೇಶ ದ್ರೋಹಿಯೂ ಆಗಲಿ ಎಂದು ಬಯಸುತ್ತಾರೆ? ಹಾಳಾಗಲಿ ಎಂದು ಆಶಿಸುತ್ತಾರೆ? ಇದಾವ ಕೆಟ್ಟ ನಡತೆಗಳೂ ತಮ್ಮಮ ಗುರುವಿಗೆ ಬಾರದಿರಲಿ ಎಂದೇ ಎಲ್ಲರೂ ಆಶಿಡುತ್ತಾರೆ, ಆದರೆ ಕೆಲವು ಮಕ್ಕಳು ಕೆಟ್ಟು ಹೋಗುತ್ತಾರಲ್ಲ? ಯಾಕೆ? ಅದಕ್ಕೆ ಸರಿಯಾದ ಜೀವನ ಮೌಲ್ಯ ದೊರಕದೇ ಇರುವುದು, ಕೆಟ್ಟ ಜನರ ದೊರಕದೇ ಇರುವುದು, ಕೆಟ್ಟ ಜನರ ಸಹವಾಸ, ಅತಿ ಮುದ್ದು ಮಾಡಿಬೆಳೆಸಿದ್ದು, ಅತಿಯಾಗಿ ಹಣ ನೀಡಿದ್ದು ಮೊದಲಾದ ಕಾರಣಗಳು ಇವೆ. ಆದರೆ ಬಾಲ್ಯದಲ್ಲಿಯೇ ಮನೆಯಲ್ಲಿಯೂ ಶಾಲೆಯಲ್ಲಿಯೂ ಯಕ್ತವಾದ ಮೌಲ್ಯಾಧಾರಿತ ಶಿಕ್ಷಣ ದೊರೆತರೆ, ಆ ರೀತಿಯಾಗಿ ಮಗು ತರಬೇತುಗೊಂಡರೆ ಖಂಡಿತ ಮಕ್ಕಳು ಕೆಟ್ಟದಾರಿ ತಿಳಿಯುವುದಿಲ್ಲ.

 

ಅದಕ್ಕಾಗಿ ಬೆಳೆವಸಿರಿ ಮೊಳಕೆಯಲ್ಲಿ. ಎನ್ನುವಂತೆ ಬಾಲ್ಯದಲ್ಲಿಯೇ ಅವನು ಯಾವ ಕ್ಷೇತ್ರದಲ್ಲಿ ಕುಶಲಿಯಾಗ ಬಹುದು ಎಂಬುದನ್ನು ಕಂಡು ಹಿಡಿದು ಅದರಲ್ಲಿ ಅವನು ದಕ್ಷನಾಗುವಂತೆ, ಕೌಶಲವನ್ನು ಅಭ್ಯಾಸ ಮಾಡುವಂತೆ ಪ್ರೇರನೆ ನೀಡಬೇಕು. ನಿಗದಿತ ಶಿಕ್ಷಣವನ್ನು ಕೊಡುವುದರ ಜೊತೆಗೆ ಮೊಟ್ಟ ಮೊದಲು ಮಗು ಉತ್ತಮ ಗುಣ, ನಡತೆ, ತ್ಯಾಗಮನೋಭಾವನೆ, ಸೇವಾಭಾವನೆ, ದ್ವೇಷವಿಲ್ಲದ ಸಹಜ ಪ್ರೀತಿಯ ವರ್ತನೆಯೇ ಮೊದಲಾದ ಜೀವನ ಮೌಲ್ಯಗಳನ್ನು ಅರಿತು, ಅದರಲ್ಲಿ ತರಬೇತಿ ಹೊಂದಿ, ಜೀವನದಲ್ಲಿ ಅಳವಡಿಸಿಕೊಳ್ಳವಂತೆ ಪ್ರೇರೇಪಿಸಬೇಕು. ಅಂದಾಗ ಮಾತ್ರ ಜೀವನ ನಿಹಣೆಗಾಗಿ ಆತ ಯಾವುದೇ ಉದ್ಯೋಗವನ್ನು ಅವಲಂಬಿಸಿದರೂ ಒರ್ವಸತ್ತ್ ಪ್ರಜೆಯಾಗಿ ಬದುಕುತ್ತಾನೆ.ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ಸಮಾಜ ಸೇವಕನಾಗಿಯೂ, ಎಲ್ಲರಿಗೂ ಬೇಕಾದವನಾಗಿಯೂ, ಸಾಧಕನಾಗಿಯೂ ಹೆಸರು ಮಾಡುತ್ತಾನೆ. ಶಿಕ್ಷಣದ ಜೊತೆಗೆ ಬದುಕುವುದನ್ನು ಅಭ್ಯಾಸಮಾಡುವಂತೆ ಪರೋಕ್ಷವಾಗಿ ಶಿಕ್ಷಣ ನೀಡಬೇಕು. ಸಾಧಕನಾಗಿ ಹೆಸರುಮಾಡುತ್ತಾನೆ. ಶಿಕ್ಷಣದ ಜೊತೆಗೆ ಬದುಕುವುದನ್ನು, ಅಭ್ಯಾಸ ಮಾಡುವಂತೆ ಪರೋಕ್ಷವಾಗಿ ಶಿಕ್ಷಣ ನೀಡಬೇಕು. ಬದುಕಲು ಮಾತ್ರ ತಿಳಿದುಕೊ ಎನ್ನುವಂತೆ ಅನೇಕರಿರುತ್ತಾರೆ. ಅವರಿಗೆ ಸರಿಯಾದ ತರಬೇತಿ ಇಲ್ಲದಿರುವುದೇ ಅದಕ್ಕೆ ಕಾರಣ. ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಸ್ತ್ರಗಳಿಂದ ಕೇಳುತಂ, ಸರ್ವಜ್ಞ.

ಸರ್ವಜ್ಞನೆಂಬುವನು ಗರ್ವದಿಂದಾವನೆ ಎಲ್ಲರೊಳಗೊಂದು
ನುಡಿಗಲಿತು ವಿದ್ಯೆಯ ಪರ್ವತವಾದ ಸರ್ವಜ್ಞ.

ಭರತಖಂಡದ ಜೀವಾಳ ಆಧ್ಯಾತ್ಮಿಕ ಶಕ್ತಿ. ಚಾರಿತ್ರ್ಯಕ್ಕೆ ಅತ್ಯಂತ ಮಹತ್ವ ಕೊಟ್ಟ ದೇಶ ಭಾರತ. ಈ ನೆಲದ ಮೂಲದ್ರವ್ಯವಾದ ' ಆಧ್ಯಾತ್ಮಿಕತೆಯನ್ನು ನಾಶಮಾಡಿದರೆ, ಮರೆತರೆ ಭಾರತನಾಶವಾಗುತ್ತದೆ. ಎಂಬುದನ್ನು ಸ್ವಾಮಿ ವಿವೇಕಾನಂದರು, ಮಹಾತ್ಮಾ ಗಾಂಧೀಜಿ, ರಾಧಾಕೃಷ್ಣನ್ಮೊದಲಾ ಎಲ್ಲ ಸಾಧು-ಸಂತರು, ರಾಷ್ಟ್ರೀಯ ನೇತಾರರು, ಶಿಕ್ಷಣ ತಜ್ಞರು ಸಾರಿದರು. ನೈತಿಕಮೌಲ್ಯಗಳ ಆಧಾರದ ಮೇಲೆ ಶಿಕ್ಷಣದ ಮಹಾಸೌಧ ನಿರ್ಮಾಣ ಮಾಡಬೇಕಾಗಿದೆ. ನೈತಿಕ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಬೇಕಾಗಿದೆ.

ಮಾನವೀಯತೆಯ ಮೂಲ ನೆಲೆಯಲ್ಲಿ ರಾಷ್ಟ್ರ ಜನಶಕ್ತಿ ಮೇಲೆದ್ದು ನಿಲ್ಲಬೇಕಾಗಿದೆ. ಆದರ್ಶಮಾನವನ ಅತ್ತುತ್ತಮ ಮಾದರಿ ನಮ್ಮ ಯುವಜನಾಂಗ ಎನಿಸಬೇಕಾಗಿದ್ದು, ಅಹಿಂಸೆ, ಪ್ರೀತಿ, ನಿಸ್ಪøಹತೆ, ತ್ಯಾಗ, ಜೀವಮಂತ್ರವಾಗಬೇಕು. ಹೆಚ್ಚು ಹೆಚ್ಚು ಹಣಗಳಿಸುವ, ಕೂಡಿಡುವ, ಹುಚ್ಚು ಐಷಾರಾಮಿಯ ಬದುಕು ನೆಡಸಬೇಕೆಂಬ ಹುಚ್ಚು ಆಮಿಷಕ್ಕೆ ಪೈಪೋಟಿ ಬಲಿಯಾಗಿ ಭ್ರಷ್ಟಾಚಾರ, ಅಸಮಾನತೆ, ಬಡತನ ಮೊದಲಾದ ಅನಿಷ್ಟಗಳಿಗೆ ಕಾರಣವಾಗಿದೆ. ಮನುಷ್ಯನ ಮೂಲ ಮನಸ್ಸು ಬದಲಾಗದೆ ಇವನ್ನೆಲ್ಲ ನಿವಾರಣೆ ಮಾಡುತ್ತೆನೆ ಎಂದು ಹೊರಟರೆ ಅದೊಂದು ಭ್ರಮೆ ಅಷ್ಟೆ! ಮನಃ ಪರಿವರ್ತನೆಯೊಂದೇ ಸಾಮಾಜಿಕ ಅನಿಷ್ಟ ನಿವಾರಣೆಗೆ ಇರುವ ದಾರಿಯಾಗಿದ್ದು, ದುನೈತಿಕ ಆಧ್ಯಾತ್ಮ ಕತಳ ಹದಿಯ ಶಿಕ್ಷಣದಿಂದ ಮಾತ್ರ ಸಾಧ್ಯ.

ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಾರಣ ಏನೇ ಇರಬಹುದು. ಆದರೆ ತಮ್ಮ ಅಮೂಲ್ಯ ಜೀವನವನ್ನು ಕೊಂಡಿದ್ದಾರೆ. ಜೀವನ ಒಂದು ಅಮೂಲ್ಯವಾದದು. ತೋಟದಲ್ಲಿ ಕಲ್ಲು, ಮುಳ್ಳು, ಕಸ, ಇದ್ದಂತೆ ಜೀವನದಲ್ಲಿ ಕಷ್ಟ-ಕಾರ್ಪಣ್ಯ, ಕಣ್ಣಿರು, ಕಾಯಿಲೆ, ಇರುತ್ತದೆ. ಸಮಸ್ಯೆ ಎದುರಾದಾಗ ಕಣ್ಣಿರು ಹಾಕುವುದು ಸಹಜ. ಸಮಸ್ಯೆಗೆ ಪರಿಹಾರವು ಕೊಡ ನಮ್ಮಿಂದಲೇ ಸಾಧ್ಯ. ಆತುರದ ಚಾಲನೆ ಹೇಗೆ ಅಪಘಾತಕ್ಕೆ ಕಾರಣ ಅದೇ ರೀತಿ ಆತುರದ ನಿರ್ಧಾರ ಆತ್ಮಹತ್ಯೆಗೆ ಕಾರಣವಾಗುತ್ತದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳು ಬೇಕು. ಯಾರು ನನ್ನ ಜೀವನ ಅಮೂಲ್ಯವೆಂದು ಭಾವಿಸುತ್ತಾರೊ ಅಂತವರು ಆತ್ಮಹತ್ಯೆಯ ಆಲೋಚನೆ ಮಾಡುವುದಿಲ್ಲ. ಸತ್ಯ ವೇದದದಲ್ಲಿ ಆತ್ಮಹತ್ಯೆ ಪಾಪವೆಂದು ಬರೆದಿದೆ ಯಾರದರು ಜೀವನದಲ್ಲಿ ಬೇಸರ ಮಾಡಿಕೊಂಡಿದ್ದರೆ ಅವರನ್ನು ಅದರಣೆಪಡಿಸಿ. ನಿಮಗೆ ಹೆಚ್ಚನ ಮಾಹಿತಿ ಬೇಕಾದಲ್ಲಿ ಕೇಳಿ ನಿರೀಕ್ಷೆ ಮಾರ್ಗ ಕಾರ್ಯಕ್ರಮವನ್ನು ಇಂಡಿಯಾ ಟು ಡೇ ಇತ್ತೀಚೆಗಷ್ಟೇ ರಾಷ್ಟ್ರ ವ್ಯಾಪ್ತಿಯಾಗಿ ಸಮೀಕ್ಷೆಯನ್ನು ನಡೆಸಿತು ಆ ಸಮೀಕ್ಷೆಯ ಪ್ರಕಾರ ಈ ದೇಶದಲ್ಲಿ ನಡೆಯುವ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ಫಲಿತಗಳನ್ನು ತಿಳಿಸುತ್ತಾರೆ.

 

                                                                            

ಬಾಕ್ಸ್
ಕಳೆದ ಐದು ವರ್ಷದಿಂದ ವರ್ಷಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಎಂಟು ಶೇಕಡ ವೃದ್ಧಿಯಾಗುತ್ತಿದೆ.
ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣವನ್ನು ಗಮನಿಸಿದರೆ ಹಳ್ಳಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣದಲ್ಲಿ ಹೆಚ್ಚಿದೆ.
ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣವನ್ನು ಒಟ್ಟು ಗಮನಿಸಿದರೆ 88% ರಷ್ಟು ಆತ್ಮಹತ್ಯೆಗಳಾಗುತ್ತಿರುವುದು 16 ರಿಂದ 24 ವರ್ಷದ ಪ್ರಾಯದ ವಯಸ್ಸಿನವರ ಮಧ್ಯೆ.
ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಒಟ್ಟು ಸಂಖ್ಯೆ 65% ರಷ್ಟು ಹುಡುಗಯರು, 36% ರಷ್ಟು ಹುಡುಗಿಯರಿದ್ದಾರೆ.

 

ಈ ಫಲಿತಗಳನ್ನು ಗಮನಿಸಿದರೆ ಹದಿಹರೆಯದವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಸಂಶೋಧನೆ ಇಂದ ತಿಳಿದಿದೆ. ಸಾಮಾನ್ಯವಾಗಿ ಆತ್ಮಹತ್ಯೆಗೂ ಯೌವ್ವನಕ್ಕೂ ಅತ್ಯಂತ ನಿಕಟ ಸಂಬಂಧವಿದೆ. ಆತ್ಮಹತ್ಯೆ ಎನ್ನುವುದು ಹೊಸಬೆಳವಣಿಗೆಯೇನಲ್ಲ. ಎಷ್ಟೋಬಾರಿ ಆತ್ಮಹತ್ಯೆಗೆ ಮಾಧ್ಯಮಗಳ ಪ್ರಭಾವದಿಂದ ನಡೆದಿದ್ದಿದೆ. ಜನಸಂಖ್ಯೆ ಯಾವ ರೀತಿ ಬೆಳವಣಿಗೆ ಆಗುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ಆತ್ಮಹತ್ಯೆಗಳೂ ನಡೆಯುತ್ತಿವೆ. ಒಂದು ಸಂಗತಿ ನಮಗೆಲ್ಲ ಗೊತ್ತಿರುವುದೇ ನಾವು ಇಂಗ್ಲೀಷನಲ್ಲಿ ಯಾವುದನ್ನು ಟೀನೇಜ್ ಎಂದು ಕರೆಯುತ್ತೆವೆಯೋ ಅದೊಂದು ಸಾಕೇತಿಕ ಪರಿಭಾಷೆಯಷ್ಟೇ. ಇಲ್ಲಿ ಟೀನೇಜ ಮನಸ್ಸು, ದೇಹ ಬದಲಾಗುತ್ತಿದೆ ಎಂದಲಟೀನ್ ಎನ್ನುವ ಪದ ಬರುವುದರಿಂದ ನಾವು ಅದನ್ನು ಹಾಗೇ ಬಳಸುವುದಷ್ಟೆ. ಇಲ್ಲಿ ನಾವು ಗಮನಿಸಬೇಕಾದದು ಯೌವ್ವನಾವಸ್ಥೆ ಎಂದು ಯಾವುದನ್ನು ಗುರುತಿಸುತ್ತೇವೆಯೋ ಅಲ್ಲಿ ದೈಹಿಕವಾದ ಬದಲಾವಣೆಗಳಾಗುತ್ತವೆ. ನಮ್ಮ ಧ್ವನಿಯಲ್ಲಿ ಬದಲಾವಣೆಗಳಾಗಬಹುದು, ದೇಹದ ಅಂಗಾಂಗಾಗಳಲ್ಲಿ ವ್ಯತ್ಯಯವಾಗುವಂತಹದ್ದು. ಇವೆಲ್ಲ ಪ್ರಕಟವಾಗುತ್ತವೆ. ಆ ದೇಹದಲ್ಲಿ ಆಗುವ ಬದಲಾವಣೆ ನಮ್ಮೊಳಗೆ ಸಣ್ಣ ಪುಟ್ಟ ಆತಂಕ, ಕುತೂಹಲಗಳಿಗೋ ಎಡೆ ಮಾಡಿ ಕೊಡುತ್ತದೆ. ಅವು ನೇರವಾಗಿ ಆತ್ಮದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಹದಿಹರೆಯ ಎಂದು ಹೇಳುವುದೆ ಮೂಲಭೂತವಾಗಿ ದೇಹದಲ್ಲಾಗುವ ಬದಲಾವಣೆ, ದೇಹದಲ್ಲಾಗುವ ಬದಲಾವಣೆಯಿಂದ ಮನಸ್ಸು ಕೂಡ ಬದಲಾವಣೆಯ ಪ್ರಕ್ರಿಯೆಗೆ ಒಳಗಾಗುತ್ತಿದೆ. ಯೌವ್ವನದ ಅವಧಿಯಾದಷ್ಟು ಆಕರ್ಷಣೆ, ಸೌಂದರ್ಯದ ಬಗ್ಗೆ ಆಕರ್ಷಣೆ, ಉದ್ಯೋಗದ ಬಗ್ಗೆ ಆಕರ್ಷಣೆ, ದುಡ್ಡಿನ ಬಗ್ಗೆ ಆಕರ್ಷಣೆ, ವಿರುದ್ಧ ಲಿಂಗದ ಬಗ್ಗೆ ಆಕರ್ಷಣೆ, ಅಧಿಕಾರ ಈ ರೀತಿಯ ಹತ್ತು ಹಲವಾರು ಆಕರ್ಷಣೆಗಳು ಯೌವ್ವನ ಸಮಯದಲ್ಲಿ ಒಬ್ಬವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ. ನಾವು ಪ್ರೀತಿ, ಪ್ರೇಮದ ಬದುಕಿನ ಬಹಲ ಉಜ್ವಲವಾದಗುರಿ, ದೊಡ್ಡಧ್ಯೇಯ ಕೊಡುತ್ತದೆಂದು ಕೊಂಡಿರುತ್ತಾರೆ. ಆದರೆ ಇದು ಯಾವುದು ಆಗಿರುವುದಿಲ್ಲ ಆ ಸಮಯದಲ್ಲಿ ನಮ್ಮ ಉತ್ಸಾಹವಿರುತ್ತದೆ.

ಪಡೆದುಕೊಳ್ಳಬೇಕೆಂಬ ವಿಪರಿತ ಹಂಬಲವಿರುತ್ತದೆ. ಇಲ್ಲಿ ಆತ್ಮಹತ್ಯೆ ಎಲ್ಲಿಯಾಗುತ್ತದೆ ಎಂದರೆ ತನ್ನ ಮಿತಿ, ಸಾಮಥ್ರ್ಯವೇನು ಎಂಬುದನ್ನು ಹದಿಹರೆಯದ ವ್ಯಕ್ತಿ ಯಾಗುವಾಗ ಅರ್ಥವಾಗುವುದಿಲ್ಲವೊ ಆತ್ಮಹತ್ಯೆಗೆ ಎಡೆಮಾಡಿಕೊಡುತ್ತದೆ. ಭಾರತದಲ್ಲಿ ರಾಜ್ಯವಾರು ಅಂಕಿ ಅಂಶಗಳನ್ನು ನೋಡಿದರೆ ಅಭಿವೃದ್ಧಿಗೂ ಆತ್ಮಹತ್ಯೆಗಳಿಗೂ ಸಣ್ಣ ಪ್ರಮಾಣದ ಸಂಬಂಧವಿರುವುದು ಕಾಣುತ್ತದೆ. ಕೈಗಾರಿಕೀಕರಣದಲ್ಲಿ ಮುಂದೆ ಇರುವ ಇರುವ, ಜಗತ್ತಿನ ಸಂಸ್ಕøತಿಗಳ ಜಿತೆ ಹೆಚ್ಚು ಸಂವಾದ ಮಾಡುವ ರಾಜ್ಯಗಳಲ್ಲಿ ತುಸು ಹೆಚ್ಚು ಎಂದು ಕಾಣುತ್ತದೆ. ಅಂದಾಜಿನ ಪ್ರಕಾರ ಮಹಾರಾಷ್ಟ್ರ 43.2, ತಮಿಳುನಾಡು 24.9, ಕೇರಳ 24.3, ತ್ರಿಪುರಾ23, ಛತ್ತಿಸ್ಗಡ 22.9, ಕರ್ನಾಟಕ 21.2, ಗುಜರಾತ್11.8, ಬಿಹಾರ 0.8, ಪಂಜಾಬ್ 3.7, ಪಾಂಡಿಚೇರಿ 36.8, ಗೋವಾ 15.8, ಚಂಡಿಗಡ 7.4, ಮಾಹಿತಿಗಾಗಿ ಎನ್ಸಿಆರ್ಬಿ ದಾಖಲೆ 21.4.2014 ಮಾಹಿತಿ ನೀಡಿದ್ದಾರೆ. ಮಾಹಿತಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆತ್ಮಹತ್ಯೆಗಳ ಪ್ರಮಾಣ ಹೆಚ್ಚು. ಬಿಹಾರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ.
-

 - ಅರ್ಚನ ವೀರ ಗಣಪ

 

aaAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAaaaaaaaaaaaaaaaaaaaaaaaaaaaaaaaaaaaaaaaaaa

 

                                                                                                                        

ಆದ್ರಾ ಮಳೆಗೆ ದಾರಿದ್ರ್ಯ
ನಪದರಲ್ಲ ಮಳೆ ನಕ್ಷತ್ರಗಳನ್ನು ಒಂದೊಂದು ನುಡಿಗಟ್ಟನು ಪ್ರಭಾವಕ್ಕೆ ಹೋಲೈಸಿ ಹೇಳುತ್ತಿದ್ದರು. ಆದ್ರಾ ಮಳೆಗೆ ದಾರಿದ್ರ್ಯ ಹೋಗುತ್ತದೆ ಎಂದೂ ಸ್ವಾತಿ ಮಳೆ ಬಂದರೆ ನೆಲದಲ್ಲಿ ಮುತ್ತು ಬೆಳೆಯುತ್ತದೆ, ಪುನರ್ವಸು ಮಳೆಗೆ ಹೆಣ ಎತ್ತಲು ಆಗುವುದಿಲ್ಲ, ಭರಣಿ ಮಳೆಗೆ ಬೀಜಬಿತ್ತ ಬೇಕು. ಆಶ್ಲೇಷ ಮಳೆಗೆ ಮನೆಯಲ್ಲಿ ತಿನಿಸು ಇದ್ದವನು ಹೊರಗೆ ಹೋಗಲಾರ ಹೀಗೆ ಹಲವಾರು ಉದಾಹರಣೆಗಳು. ಇವೆಲ್ಲವೂ ಮಳೆಗಾಲ ಮಾತ್ರವೇ ಜನರ ಜೀವನದಲ್ಲಿ ಹಾಸುಹೊಕ್ಕಾದ ಪರಿಬೆರಗು ಮೂಡಿಸುತ್ತದೆ.


ಮಳೆಗೂ ಹಾಡಿಗೂ ಅವಿನಾಭಾವದ ಸಂಬಂಧ.ಮಳೆಯ ಹಾಡುಗಳೆಂದರೆ ಆದ್ರಗೊಳ್ಳುತ್ತದೆ. ಜನರಲ್ಲಿ ಪುಳಕಗೊಳ್ಳುತ್ತದೆ. ಮಳೆಯ ನಿನಾದವೇ ಸಂಗೀತ. ಜಿಟಿಜಿಟಿ ಮಳೆಯ ರಾಗ ಇನ್ನೂ ಚಂದ. ಹೀಗಿರುವಾಗ ಚಲನಚಿತ್ರಗಳ ಹಾಡೋಂದು ಮಳೆಯ ಬಗ್ಗೆ ಸುಮಧುರವಾಗಿ ಹೇಳಿರುವ ಹಾಡು ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ, ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ ಹೇಳುವುದು ಏನು ತಿಳಿಯದಾಗಿದೆ ಇದು ಜನರ ಮನಸು ಮಾಡಿದ್ದು ಚಿರಪರಿಚಿತವಾಗಿದೆ. ಮಳೆಯ ರಾಗದಿಂದಾಗಿ ಎಲ್ಲಾ ಕಡೆ ಮನಸಿನ ಮಾತು. ಬಾಲ್ಯದ ಹಾಡೊಂದು ಇಂದಿಗೂ ಜೀವಂತಿಕೆ ಪಡೆದಿದೆ.

 

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಹುಯೋ ಹುಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ ಇಂದಿಗೂ ಮಕ್ಕಳಿಂದ ವೃದ್ದರವರೆಗೂ ನೆನಪಿನಲ್ಲಿದೆ. ಭಾವಲೋಕದ ಪುಟ್ಟ ಯಕ್ಷಿಣಿಯಂತೆ ಭಾಸವಾಗುತ್ತದೆ, ಮಳೆಯ ಭಾವಗೀತೆ. ಅನುದಿನವು ಹೊಸತನ ಮೂಡಿಸುವ ಮಳೆ ಹಾಡಿನ ಭಾವಯಾನದಲ್ಲಿ ದಿನವೂ ನಮಗೆಲ್ಲ ಉಣಬಡಿಸುತ್ತಿವೆ.
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಚಲನ ಚಿತ್ರದ ಹಾಡು ಎಲ್ಲರ ತುಟಿಯಂಚಿನಲ್ಲಿರುವ ಹಾಡಾಗಿದೆ. ಬೇಂದ್ರೆಯವರ ಶ್ರಾವಣ ಬಂತು ಕಾಡಿಗೆ, ನಾಡಿಗೆ, ಬೀಡಿಗೆ ಭಾವಗೀತೆಯು ಹುಟ್ಟಿದ ಹಾಡು. ಶ್ರಾವಣ ಬಂತು ಹೋಳಿಗೆ ತಂತು ಅದೇ ಶುಭಗಳಿಗೆ, ಹೊಳೀಗೆ ಮಳಿಗೆ ಹಾಡು ತುಂಬಾ ಚನ್ನಾಗಿದೆ.
ಮಳೆಗಾಲದ ಕಾಯಿಲೆ:
ಮಳೆಗಾಲದಲ್ಲಿ ಬರುವ ಕಾಯಿಲೆಗಳಿಗೆ ಮೂಲ ನೀರು. ಮುಂಗಾರಿನ ಆರಂಭದ ಸೊಳ್ಳೆಗಳ ಸಂತಾನಾಭಿವೃದ್ದಿಯ ಪರ್ವಕಾಲ. ಸಾಮಾನ್ಯವಾಗಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಡೆಂಗ್ಯು, ಚಿಕ್ಕನ್ ಗುನ್ಯ ಅಂತಹ ರೋಗಗಳು ಉಲ್ಬಣಗೊಳ್ಳುತ್ತವೆ. ಹಾಗೇ ಆಹಾರ ಮೂಲಗಳಿಂದ ಕಾ¯ರಾ, ಚರ್ಮರೋಗ, ನೆಗಡಿ, ಹೀಗೆ ಸಂಕ್ರಾಮಿಕ ರೋಗಗಳು ಹರಡುತ್ತವೆ.
ಮುನ್ನೆಚ್ಚರಿಕೆ
ನೀರನ್ನು ಕುದಿಸಿ ಆರಿಸಿ ಕುಡಿಯ ಬೇಕು
ಆಹಾರ ಸೇವನೆಗೆ ಮೊದಲು ಸ್ವಚ್ಚವಾಗಿ ಕೈ ತೊಳೆಯಬೇಕು.
ಬೇಯಿಸದ ತಿನಿಸುಗಳ ಸೇವನೆ ಬೇಡ.
ಬಿಸಿಯಾದ ಮತ್ತು ಹೆಚ್ಚು ಶುಂಠಿ, ಅರಿಷಿಣ, ಮೆಣಸು ಕಾಳುಇರುವ ಪದಾರ್ಥಗಳನ್ನು ಸೇವಿಸಿ.
ಮಾರುಕಟ್ಟೆಯಲ್ಲಿ ತೆರೆದಿಟ್ಟ ತಿನಿಸು, ಹಣ್ಣು ತಿನ್ನಬೇಡಿ. ಖನಿಜಾಂಶ ಹೆಚ್ಚಾಗಿರುವ ಆಹಾರವನ್ನು ಈ ದಿನಮಾನಗಳಲ್ಲಿ ತೆಗೆದುಕೊಳ್ಳಿ, ಸಾಧ್ಯವಾದಷ್ಟು ನೀರು ಕುಡಿಯಿರಿ. ದೇಹ ನಿರ್ಜಲಿಕರಣಗೊಳ್ಳಲು ಬಿಡಬೇಡಿ.
ಸಮತೋಲಿನ ಆಹಾರ ಸೇವಿಸಿ, ವಿಶ್ರಾಂತಿ ಪಡೆಯಿರಿ. ಮನೆ ಮುಂದೆ ಸ್ವಚ್ಛತೆ ಕಾಯ್ದುಕೊಳ್ಳಿ , ನೀರು ನಿಲ್ಲಲು ಬಿಡಬೇಡಿ. ರಾತ್ರಿ ಮಲಗುವಾಗ ಬೇವಿನ ಎಣ್ಣೆ ಮೈಗೆ ಹಚ್ಚಿಕೊಳ್ಳಿ, ಸೊಳ್ಳೆ ಕಡಿಯುವುದಿಲ್ಲ.
  - ಅರ್ಚನ ವೀರ ಗಣಪ, ಗಂಗಾವತಿ

 

aaAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAAaaaaaaaaaaaaaaaaaaaaaaaaaaaaaaaaaaaaaaaaaaaaaa

 

                             


ಜೀವನವೇ ಒಂದು ಸವಾಲು...!

ಒಂದು ಕುಗ್ರಾಮ. ಅಲ್ಲಿ ಒಂದು ಅವಿಭಕ್ತ ಕುಟುಂಬ. ಆ ಕುಟುಂಬದಲ್ಲಿ ಮೂರು ಜನ ಹೆಣ್ಣು ಮಕ್ಕಳು ಮೂವರು ಗಂಡು ಮಕ್ಕಳು. ಮೂರು ಜನ ಹೆಣ್ಣು ಮಕ್ಕಳ ವಿವಾಹವಾಗಿತ್ತು, ಇಬ್ಬರು ಗಂಡುಮಕ್ಕಳ ವಿವಾಹವು ಮುಗಿದಿತ್ತು. ಕೆಲ ದಿನಗಳ ನಂತರ ಇಬ್ಬರು ಅಕ್ಕಂದಿರ ಗಂಡ ತೀರಿಕೊಂಡರು. ಆ ಅಕ್ಕಂದಿರು ತವರಿನ ಹಾದಿ ಹಿಡಿದರು. ಅವರಿಗಾಗಿ ಮನೆ ಹೊಲ ಕೊಟ್ಟು ಸುರಕ್ಷತೆಯಿಂದ ನೋಡಿಕೊಂಡರು. ನಂತರದ ದಿನಮಾನಗಳಲ್ಲಿ “ಹುಟ್ಟಿದಾಗ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿ”ಯೆನ್ನುವಂತೆ ವಿಭಕ್ತ ಕುಟುಂಬವಾಗಿ ಮಾರ್ಪಡು ಮಾಡಲು ನಿರ್ಧರಿಸಿದರು. ಕೊನೆಯವನು ಇನ್ನೂ ಚಿಕ್ಕವನಿರುವಾಗ ಆಸ್ತಿ ಹಂಚಿಕೆ ಮಾಡಿಕೊಂಡರು, ಅವನಿಗೆ ಅದರ ಅರಿವು ಇರುವುದಿಲ್ಲ. ಆಗ ತವರಿನ ಹಾದಿ ಹಿಡಿದರ ಅಕ್ಕಂದಿರು ಅವನಿಗೆ ಸಾತ್ ನೀಡಿ ಅವನ ಭಾಗ್ಯಕ್ಕೆ ಬಂದ ಆಸ್ತಿ ಸಂರಕ್ಷಿಸಿದರು. ಕುಟುಂಬಗಳು ಹೊಡೆಯುವ ದುರಾಲೋಚನೆ ಅಣ್ಣನಮನದಲ್ಲಿ ಮನೆಮಾಡಿತ್ತು. ಅವಿಭಕ್ತ ಕುಟುಂಬ ಇರುವಾಗಲೆ ವಿವಾಹವಾಗಿತ್ತು. ಸುಮಾರು ನಾಲ್ಕು ವಿವಾಹ. ಆದರೆ ತಮ್ಮನ ವಿವಾಹಕ್ಕೆ ಹಣ ಇಲ್ಲದಿರುವುದರಿಂದ ಸಾಲ ಪಡೆದಿರುತ್ತಾನೆ. ಅಣ್ಣ ಧಾರಾಳ ಮನಸ್ಥಿತಿಯಿಂದ ಕೊಟ್ಟಿದ್ದ. ಆದರೆ ಮನದಲ್ಲಿ ಬೇರೊಂದು ಸಂಚು ರೂಪಿಸಿಕೊಂಡಿದ್ದ. ತಮ್ಮನ ಹೆಂಡತಿ ಆಂಧ್ರದವರು ಇವರು ಕರ್ನಾಟಕ. ವಿವಾಹವೇನೊ ಆಯ್ತು ನಿಜ. ನಂತರ ತಮ್ಮ ಹೆಂಡತಿಯ ಊರಿಗೆ ಹೋದಾಗ ಅಪ್ಪ- ಅಮ್ಮ ಚಿಕ್ಕ ಮಗನ ಹತ್ತಿರವಿದ್ದರು.

 

ನಂತದ ದಿನಗಲ್ಲಿ “ಮನೆ ಕಟ್ಟಿನೋಡು ಮದುವೆ ಮಾಡಿ ನೋಡು” ಎಂಬಂತೆÀ ಚಿಕ್ಕವನ ಮಗಳು ಮದುವೆ ವಯಸ್ಸಿಗೆ ಬಂದಿದ್ದಳು ಯೋಚನೆಗಳು ಸುರು ಮಾಡಿದರು ಅಷ್ಟರಲ್ಲೇ ವಿವಾಹ ಮಾಡಿಕೊಳ್ಳಲು ಕೇಳಿಕೊಂಡು ಬಂದರು. ಒಪ್ಪಿಗೆ ಆಯ್ತು, ವಿವಾಹವು ಮುಗಿತು. ಎರಡನೇ ಮಗಳ ಮದುವೆಗೆ ಯೋಚನೆ ಶುರು ಮಾಡಿದರು. ಆಗ ಮೂರು ವರ್ಷ ಕಳೆದ ನಂತರ ಅದು ವಿವಾಹಕ್ಕೆ ಅವಳು ಒಪ್ಪಿಕೊಂಡಿರುವುದಿಲ್ಲ ಆದರೂ ನಿಶ್ಚಿತಾರ್ಥ ಆಗಿತ್ತು, ಆವಾಗಲೂ ಒಪ್ಪಿಗೆ ನೀಡಿರುವುದಿಲ್ಲ ಆದರೂ ಒಂದು ವಿವಾಹ ಮಾಡುವುದು ಸವಾಲು ಕೂಡ, ಅದರ ಮಧ್ಯೆ ನಿಶ್ಚಿತಾರ್ಥ ಮುಗಿದಿದೆ ಕುಟುಂಬದ ಮರ್ಯಾದೆ ಪ್ರಶ್ನೆ ಕೂಡ ಎಂದು ವಿವಾಹ ಮಾಡಿದರು. ಅವಳ ಬದುಕು ಇಂದು ನಿತ್ಯ ಹೋರಾಟ ಮದುವೆಯಾಗಿ ಸುಮಾರು ಹತ್ತು ವರ್ಷ ಕಿರುಕುಳದಲ್ಲಿಯೇ ಸಹನಾ ಮೂರ್ತಿಯಾಗಿ ಸಹಿಸಿ ಕೊಂಡವಳು. ಉಟ್ಟ ಬಟ್ಟೆಯಲ್ಲೇ ಹೊರಹಾಕಿದ ಅತ್ತೆ ಮಾವ ಹೊರ ಬಂದು ಸುಂದರ ಬದುಕು ನಡೆಸುತ್ತಾಳೆ ಎನ್ನುವಷ್ಟರಲ್ಲಿ ಗಂಡ ಅತೀ ಕುಡುಕ, ಅವನು ಸಮಾರಂಭಗಳಲ್ಲಿ ಅಡುಗೆ ಮಾಡಲು ಹೋಗುತ್ತಾನೆ. ಹೆಂಡತಿ ಚಕ್ಕಲಿ ಮಾಡಿ ಅಲೆದಾಡಿ ಅಂಗಡಿಗಳಿಗೆ ಹಾಕುತ್ತಾಳೆ. ದಿನಕ್ಕೆ ಲಾಭ ಐದು ನೂರುವರೆಗೆ ಕುಡುಕ ಗಂಡ ಅದನ್ನು ಕಿತ್ತುಕೊಳ್ಳುವ ದುಷ್ಟ ಹೀಗೆ ಅವ್ಯಾಚ್ಯ ಶಬ್ಧಗಳನ್ನು ತಿಂದು ಅವಳು ಬೇಸತ್ತು ತನ್ನಲ್ಲಿನ ನೋವು ಅಪ್ಪ ಅಮ್ಮನಿಗೆ ಹೇಳದೆ ತನ್ನಲ್ಲೇ ಅಡಗಿಸಿ ಕೊಂಡಿದ್ದಳು. ಒಂದು ದಿನ ಜಗಳ ಅತಿ ರೇಖಕ್ಕೆ ತಿರುಗಿತು ಮಾಂಗಲ್ಯ ಸರವನ್ನು ಕಿತ್ತು ಕೊಂಡು ಹೊರಟೆಹೋದ. ಅಷ್ಟೇ ಅಲ್ಲದೇ ಇನ್ನೂ ಕೇಳಲಾಗದ ಶಬ್ಧಗಳನ್ನು ಕೂಗಾಡಿದ ಆ ಹಿಂಸೆ ತಾಳ್ಮೆ ಯಿಂದ ಸಹಿಸಿ ಕೊಂಡಿದ್ದ ಇಪ್ಪತ್ತೈದು ವರ್ಷ ತಿದ್ದಿ ಕೊಳ್ಳುವನೆಂದು ಕಾದು ಸುಸ್ತಾದಳು ನಿಜ ಆದರೆ ತಿದ್ದಿಕೊಳ್ಳುವ ಜಾಯ ಮಾನವೇ ಅಲ್ಲ. ಹೆಣ್ಣು ಸಹನಾ ಮೂರ್ತಿ ಸಹನೆ ಕಳೆದು ಕೊಂಡ ಅವಳು ದಿಕ್ಕು ತೋಚದೆ ಪೊಲೀಸ್ ಮೆಟ್ಟಿಲೇರಿದಳು.


ಗಾಂಧೀಜಿ ಹೇಳಿz,À್ದ ಹೆಣ್ಣು ಮಧ್ಯರಾತ್ರಿ 12 ಗಂಟೆಗೆ ಹೋಡಾಡಿದರೆÉ ಅದು ನಿಜವಾದ ಸ್ವಾತಂತ್ರ್ಯ ಎಂದು ಹೇಳಿದ್ದರು. ಅದು ಎಂದಿಗೂ ಕಷ್ಟಸಾಧ್ಯ. ಪ್ರಕರಣ ದಾಖಲಿಕೊಳ್ಳಲಿಲ್ಲ ತಿಳಿ ಹೇಳಿ ಮನೆಗೆ ಬಂದು ಬಿಟ್ಟರು. ಅದು ಅವನಿಗೆ ಅರ್ಥವಾಗಲಿಲ್ಲ ಯಾವನು ಬರತಾನೆ ಎಂದು ಕುಡಿದ ಅಮಲಿನಲ್ಲಿ ಕೂಗಾಡಿದ. ನಂತರ ಮೂರುದಿನ ಒಂದು ಮಟ್ಟಿಗೆ ಸಮಾಧಾನದ ವಾತಾವರಣ ಮತ್ತೆ ಅದೇ. ಅವನ ಅಪ್ಪ ಅಮ್ಮ ಒಂದು ಬಿಡಿಗಾಸು ಕೊಡದೆ ಹೊರ ಹಾಕಿದರು. ಆಗ ಕೈ ಹಿಡಿದು ನಡೆಸಿದ್ದು ಅವನ ಹೆಂಡತಿ, ಮತ್ತು ಅವಳ ಅಪ್ಪ ಕಾನೂನಾತ್ಮಕವಾಗಿ ಮನೆಯನ್ನು ಕೊಡಿಸಿದ ಮೊದಲು ಎಲ್ಲವನ್ನು ಕೊಟ್ಟು ನೋಡಿದ ಆದರೆ ಅವರಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ ಜೊತೆಗೆ ತಂಟೆ ತೊಡರಲ್ಲಿಲ್ಲ ಅತ್ತೆಯನ್ನು ನಿಂದಿಸಿದ ಆ ಕುಡುಕ. ತನ್ನ ಪರಿವಾರವನ್ನೇ ನಾಶಗೊಳಿಸುವಾಗ ಸಾಥ್ ಕೊಟ್ಟು ಬೆಂಬಲಕ್ಕೆ ನಿಂತವರ ವಿರುದ್ಧ ಹೊಲಸು ಬಾಯಿಯಲ್ಲಿ ಕೆಟ್ಟ ಮಾತುಗಳಾಡಿದ. ಆಗ ಸಂಪೂರ್ಣ ಸಹಿಸಿದ ತಾಳ್ಮೆ ಕಳೆದು ಕೊಂಡ ಹೆಂಡತಿ ತನ್ನಲ್ಲಿನ ಶಕ್ತಿ ಸಾಮಥ್ರ್ಯ ಇರುವವರೆಗೂ ನಾನು ಏನು ಎಂಬುದನ್ನು ತೋರಿಸಲು ಒಂದು ಸಂಪೂರ್ಣ ಅವಕಾಶ ಗಂಡ ನೀಡದ ಅವಕಾಶ ಎಂದುಕೊಳ್ಳಬಹುದು.ಗಂಡ ಒಂದು ದಿನ ತನ್ನ ಅಪ್ಪ, ಅಮ್ಮ, ಬಂಧು ಬಾಂಧವರು ಹೀಗೆ ಇತರರು ಜೊತೆಗೂಡಿ ಹೆಂಡತಿಯನ್ನು ಹೊರಹಾಕಿದರು ಇವಳಿಗೆ ಬೈದುರು, ಅದಕ್ಕೆ ಸಂಬಂಧ ಪಡದ ವ್ಯಕ್ತಿಗಳು ಅವಳಿಗೆ ತಿಳಿಹೇಳಿದರು, ಕುಪಿತಗೊಂಡು ಅವಳು ನೀನು ಯಾರು? ನಿನಗೇನು ಕೆಲಸ ನಡೆ ಆಚೆ ಎಂದು ಗದರಿದಳು. ಅವಳ ಪಕ್ಕದಲ್ಲಿದ್ದ ಅವಳ ಸಹೋದರಿ ಇದ್ದಳು ಅದಕ್ಕೆ ಅವಳನ್ನು ಆಚೆ ಹಾಕಲು ಹೇಳಿದರೆ ಆಕೆ ನನ್ನ ರಕ್ತಗತ ಸಂಬಂಧ, ನನ್ನ ನೋಡಲು ಬಂದಾಗಿನಿಂದ ಇವರೆಗಿನ ಎಲ್ಲವನ್ನು ನೋಡಿದವಳು ನೀ ಇಂದು ಬಂದು ತಕರಾರು ಮಾಡಿದರೆ ನಡೆ ಆಚೆ ದುಡ್ಡು ಕೊಟ್ರು ಅಂತ ಜೊಲ್ಲು ಸುರಿಸಬೇಡ ನಡಿಯಲ್ಲ ಮಗನೆ ಲೊಫರ್! ಈ ಮೊದಲು ನನ್ನ ಮತ್ತು ನನ್ನ ಗಂಡನನ್ನ ಹೊಡೆದು ರಾಧಾಂತ ಮಾಡಿದೆ. ಈಗ ನನ್ನ ಗಂಡನನ್ನು ತಲೆ ಕೆಡಸಿ ಸಂಸಾರ ಒಂದಿಸುವ ಬದಲು ಹೊಡೆಯೋ ಕೆಲಸ ಮಾಡವ ಒಬ್ಬ ವಕೀಲನಾ? ಅವನ ಮುಖಕ್ಕೆ ಮಂಗಳಾರುತಿ ಮಾಡಿದಳು, ಮತ್ತೆ ಪೊಲೀಸ ಮಟ್ಟಿಲೇರಿ ಸ್ಥಳಕ್ಕೆ ಬಂದು ಕೂಗಾಗಿದ ಎಲ್ಲರ ಮೇಲು ಪ್ರಕರಣ ದಾಖಲಿಸಿದಳು.
ಆಗ ವಕೀಲ ನನ್ನ ಹೆಸರು ಯಾಕೇ ಬರೆಸಿದಿರಾ! ಎಂದು ಕೇಳಿದ. ಇದನ್ನೇಲ್ಲ ಮುಂದೆ ನಿಂತು ಮಾಡಿಸ್ಮತ್ತಿಯಾ ನಿನ್ನ ಬೆಂಬಲ ಇಲ್ಲದೆ ಯಾವುದು ಮಾಡುವುದಿಲ್ಲ ನಿನಗಷ್ಟೇ ಕಾನೂನು ಗೋತ್ತಿದೆ ಎಂದು ತಿಳಿಬೇಡ್ರಿ ವಕೀಲರೆ ನಮಗೂ ಜೀವನ ಅನೋದು ಒಂದು ಸವಾಲು ಅದನ್ನು ಹೇಗೆ ರಕ್ಷಣೆ ಮಾಡಕೊ ಬೇಕು ಅದು ಹೇಗೆ ಸರಿಮಾಡಿಕೊಳ್ಳಬೇಕು, ಜೀವನ ಸಂಸಾರ ರಕ್ಷಿಸಿಕೊಳ್ಳವ ಕಾನೂನು ನಮಗೂ ತಿಳಿದಿದೆ.

 

                                                                                                                                                                                                             

 

ನನ್ನ ಅಣ್ಣನೂ ವಕೀಲ, ನಮದು ಹಳ್ಳಿ ಆಗಿರ ಬಹುದು ನಮಗೆಲ್ಲ ಕಾನೂನು ಜ್ಞಾನ ಇದೆ. ಜೀವನಕ್ಕೆ ಆಪತ್ತಿನಿಂದ ರಕ್ಷಿಸಿಕೊಳ್ಳ ಬಹುದು. ಇಲ್ಲಿಯ ವರೆಗೆ ನಿನ್ನ ವೃತ್ತಿಗೆ ಧಕ್ಕೆ ಆಗಬಾರದೆಂದು ಇಷ್ಟು ದಿನಗಳ ಕಾಲ ಸಹಿಸಿಕೊಂಡೆ ಅವಕಾಶ ಕೋಟೆ ಆದರೆ ನೀವು ಹೆಣ್ಣು ಏನು ಮಾಡಲು ಸಾಧ್ಯ, ಅಸಾಹಯಕಳು ಅಂತ ತಿಳಿದಿರಬಹುದು “ಹೆಣ್ಣು ಬೆಳಗಿದರೆ ಜ್ಯೋತಿ, ಉರಿದರೆ ಬೆಂಕಿ ಇದು ನಿಮಗರಿವಿರಲಿ ವಕೀಲರೆ ನಿಮಗೂ ಮಕ್ಕಳಿದ್ದಾರೆ. ಅವರಿಗೂ ಮದುವೆ ಮಾಡಿ ಆಗ ನಿನ್ನ ಅನುಭವಕ್ಕೆ ಬರುತ್ತದೆ. ಓದು ಬೇರೆ ಅನುಭವ ಬೇರೆ ಅದಕ್ಕೆ ಬಸವಣ್ಣನವರು ಹೇಳಿದರೆ “ ವಿದ್ಯೆಗಿಂತ ಅನುಭವ ದೊಡ್ಡದು, ಅನುಭವಕ್ಕಿಂತ ಮತ್ತೊಂದಿಲ”್ಲ ಎಂದಿದ್ದಾರೆ. ನಿವ್ಮ್ಮಂತವರು ಇದ್ದರೆ ನರಕಯಾತನೆ ನೀಡುತ್ತಾರೆ, ಅದರಿಂದ ಮುಕ್ತಿ ಪಡೆಯಲು ಹೋರಾಡಲು ಇನ್ನೂ ನಾನು ಸಿದ್ಧ ಮತ್ತು ಬದ್ಧ ನೀನೂ ಹೋರಾಡು ಸತ್ವ ಇದ್ದವರು ಜಯಿಸುತ್ತಾರೆ ಎಂದು ಸವಾಲು ಹೊಡ್ಡಿದಳು. ನಿಜ ಇದು ಒಂದು ಸವಾಲೆ ಆದರೂ ಒಬ್ಬಂಟಿ ಹೆಣ್ಣು ತನ್ನ ರಕ್ಷಣೆಗೆ ಏನನ್ನಾದರು ಮಾಡತ್ತಾಳೆ. “ನಾರಿ ಮುನಿದರೆ ಮಾರಿ” ಎಂಬುದು ಗಮನದಲ್ಲಿ ಇರಲಿ. ಸ್ವತ ಇದ್ದವರು ಆಳುತ್ತಾರೆ ಎಂಬುದನ್ನು ದುರಹಂಕಾರದ ಮದದಲ್ಲಿ “ನೆಲಕ್ಕೆ ಬಿದ್ದರು ಮೀಸೆ ಮಣ್ಣಾಗಲಿಲ್ಲ” ಎಂಬಂತೆ ತಲೆ ಎತ್ತಿ ಮರೆದಾಡುವ ಜನರು ಇದು ಜಗದ ಜಾಹಿರಾತಾಗುತ್ತಾನೆ. ಹೊರ ಹಾಕಿದÀ ಗಂಡ ಅವನ ಅಪ್ಪ-ಅಮ್ಮ ಇತರ ಸಹಚರರು ವಕೀಲನ್ನು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಪೊಲೀಸರು ಆ ನಾರಿಗೆ ರಕ್ಷಣೆ ನೀಡಿ ಕರ್ತವ್ಯ ಬದ್ಧತೆಗೆ ಒಂದು ಸಲಾಂ ಅದು ಅವರ ಕರ್ತವ್ಯ ಇರಬಹುದು ಆದರೆ ಅದನ್ನು ಪಾಲಿಸುವ ಗುಣ ಎಲ್ಲರಲ್ಲೂ ಇರುವುದಿಲ್ಲ ಅವರಿಗೆ ನನ್ನದೊಂದು ಸಲಾಂ ಸಲ್ಲಿಸಿದಳು.


ಅವಳಿಗೆ ಮಕ್ಕಳಿಗೆ ಅವರಿಂದ ಪ್ರಾಣಾಪಾಯವಿದೆ ಎಂದು ಮುಚ್ಚಳಿಕೆ ಬರೆಯಿಸಿ ಅವರಿಗೆ ಹೊಡೆದು ಜೀವನದ ಪಾಠ ಹೇಳಿ ಅರಿವು ಮೂಡಿಸಿ ಒಂದು ಸುಂದರ ಜೀವನ ನಡೆಸಲು ಸಹಕರಿಸಿದ ಎಲ್ಲರಿಗೂ ಚಿರಋಣಿ ಯಾಗಿದ್ದಾಳೆ.ಸದಾ ಅನುಮಾನ ಪಡುವ ಗಂಡನೊಂದಿಗೆ ಸಂಸಾರ ನಡೆಸುವದು ಕಷ್ಟಸಾಧ್ಯ.ಅದು ಸಹಿಸಿಕೊಂಡು ತನ್ನ ಸಂಸಾರ, ಜೀವನಕ್ಕೆ ಕುಟುಂಬದ ವಿಷಯಕ್ಕೆ ಬಂದರೆ ಯಾವ ಹೆಣ್ಣು ಸುಮ್ಮನಿರಲ್ಲ ಯಾಕೆಂದ್ರೆ ನನ್ನ ಸರ್ವಸ್ವ ನನ್ನ ಸಂಸಾರ, ನಮ್ಮದು ಸಂಸ್ಕøತ ಶೀಲ ಕುಟುಂಬದಿಂದ ಬಂದದ್ದು. ಹೋರಾಟದ ಬದುಕು ಅರಿವಿಗೆ ತಂದ ಗುರು ನನ್ನ ತಂದೆ ನನ್ನ ಅಭಿನಂದನೆ. ಇಂದು ನನ್ನ ಬೆಂಬಲಕ್ಕೆ ತವರು ಆಸರೆ ತುಂಬು ಹೃದಯದ ಕೃತಜ್ಞತೆ. ಅವಿಭಕ್ತ ಕುಟುಂಬದಲ್ಲಿನ ತಮ್ಮನ ಮೂರನೇ ಮಗಳು ಕೋಟ್ಯಾಧಿಪತಿಗಳ ಸೊಸೆ, ಗಂಡ ಸರಕಾರಿ ನೌಕರಿ ಮಾಡುತ್ತಾರೆ. ಕಷ್ಟಗಳನ್ನು ಎದುರಿಸಿ ಉದ್ಯಮಿಯಾಗಿ ಬೆಳೆದು ಕೋಟ್ಯಾಧಿಪತಿಗಳಾಗಿದ್ದರು. ಆಗ ಸ್ವತ: ರೈಸ್ ಮಿಲ್ ನಿರ್ಮಿಸಿದ್ದರು ಅವರ ಮಾವನ ತಮ್ಮ ದುಶ್ಚಟಗಳ ಸರದಾರ ಅವನು ಈ ಕುಟುಂಬದ ಉದ್ಯಮದೊಂದಿ ಪಾಲುಗಾರಿಕೆ ಮಾಡಿಕೊಂಡಿದ್ದ ಒಂದು ದಿನ ಅವನು ಚಟಗಳಿಗೆ ಎರಡು ಕೋಟಿ ಸಾಲ ಮಾಡಿ ಪರಾರಿಯಾದ ಆಗ ಮಿಲ್, ಮನೆ ಮಾರಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದದಾರೆ. ಅವರ ಜೀನಕ್ಕೆ ಆಸರೆ ಬಂದದ್ದು ಸರಕಾರಿ ಕೆಲಸ ಮಾತ್ರ ಇಂದು ಅವರು ಸುಂದರವಾಗಿ ಸರಳ ಜೀವನ ನಡೆಸುತ್ತಿದ್ದರೆ. ಇನ್ನು ಗಂಡು ಮಗನ ವಿವಾಹಕ್ಕೆ ನೂರೆಂಟು ವಿಘ್ನ ಅದನ್ನು ಎದುರಿಸಬೇಕಾಯಿತು. ಅದರ ಮಧ್ಯೆ ಅಮ್ಮನ ಆರೋಗ್ಯದಲ್ಲಿ ವ್ಯತ್ಯಾಸ ಹೀಗೆ ಬದುಕು ನಿತ್ಯ ಹೋರಾಟ.ಇನ್ನೂ ಐದು ಹೆಣ್ಣು ಮಕ್ಕಳಲ್ಲಿ ಇಬ್ಬರು ಅಭ್ಯಾಸದಲ್ಲಿದ್ದಾರೆ ಅವರ ವಿವಾಹ ಮಾಡಲು ಹೆಣಗಾಡುತ್ತಿದ್ದಾg. ಆದರೆ ಆತುರ ಮಾಡುತ್ತಿಲ್ಲ. ಯಾಕೆಂದರೆ ತನ್ನ ಬದುಕಿಗೆ ಅವಶ್ಯವಿರುವಷ್ಟು ದುಡಿಯುವ ಸಾಮಥ್ರ್ಯ ಬೇಕು, ಕುಂಟುಬದಲ್ಲಿ ಶಿಕ್ಷಣ ಯಾರೊಬ್ಬರು ಪಡೆದಿಲ್ಲಾ ಇವರದು ಕುಟುಂಬದಲ್ಲಿ ದಾಖಲೆ ಯಾಗುತ್ತದೆ ಸಂತೋಷ ಪಡುತ್ತಿದ್ದಾರೆ. ತಮ್ಮ ಜವಬ್ದಾರಿ ಕಳೆದುಕೊಳ್ಳ ಬೇಕೆಂದು ಹಂಬಲಿಸುವುದು ಸಹಜ, ಅದರಂತೆ ಹಗಲಿರುಳು ಯೋಚಿಸುತ್ತಿದ್ದಾರೆ. ಸಆದರೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲಾ. ಇಂದು ಅಣ್ಣ ಕೋಟ್ಯಾಧಿಪತಿ ಊಟ ಮಾಡಲು ನೆಮ್ಮದಿ ಇಲ್ಲದಂತಾಗಿದೆ. ಮಗಳ ಬದುಕು ಹದಗೆಟ್ಟು ಸಂಸಾರದಿಂದ ವಂಚಿತಳಾಗಿ ಜನಗಳಿಂದ ಬಾಯಿಗೆ ಆಹಾರವಾಗಿ, ಮುದ್ದು ಮಕ್ಕಳ ಪ್ರೀತಿಯಿಂದ ವಂಚಿತಳಾಗಿದ್ದಾಳೆ. ಇನ್ನೂ ತಮ್ಮನ ಮಗಳು ಸಮಸ್ಯೆಗಳ ಮಧ್ಯೆ ಗಂಡನ ಮನೆಯಲ್ಲಿ ಚಾಲೇಂಜ್ಗೆ ಸೋಲು ಕಾಣಬಾರದು ಎಂದು ಜೀವನ ಸಾಗಿಸುತ್ತಿದ್ದಾರೆ. ನಿಜಕ್ಕೂ ಜೀವನ ಬಹುದೊಡ್ಡ ಸವಾಲು.
   - ಅರ್ಚನ ವೀರ ಗಣಪ, ಗಂಗಾವತಿ.



Ads




;