ದೂರವಾಣಿ : 080-69999676
ಇಮೇಲ್ : Info@Vijayataranga.com


 

12

 ಗುಜರಾತ್ ನಲ್ಲಿ ನಾವು ಸೋತು ಗೆದ್ದಿದ್ದೀವಿ: ಸಿದ್ದು
 ಡಿಸೆಂಬರ್-18

ಯಾದಗಿರಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೇರುತ್ತಿದೆಯಾದರೂ, ಕಳೆದ ಬಾರಿಗಿಂತ ಕನಿಷ್ಟ 13 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಕಾಂಗ್ರೆಸ್ ಉತ್ತಮ ಪೈಪೋಟಿ ನೀಡಿದೆ.
ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಹಲವು ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಗುಜರಾತ್ ನಲ್ಲಿ ನಾವು ಸೋತು ಗೆದ್ದಿದ್ದೀವಿ. ರಾಹುಲ್ ಗಾಂಧಿಯವರನ್ನು ಯುವನಾಯಕ ಎಂದು ಜನತೆ ಒಪ್ಪಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಮೋದಿ ಸರ್ಕಾರದ ನೀತಿಗಳನ್ನು ಜನತೆ ಒಪ್ಪಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

 

 

             ಹಿಂದೂ ಕಾರ್ಯಕರ್ತರನ್ನುಕೇರಳ ಮಾದರಿಯಲ್ಲಿ ಕೊಲೆ: ಪ್ರಮೋದ
ಡಿಸೆಂಬರ್.13
ಯಾದಗಿರಿ: ಕೇರಳ ಮಾದರಿಯಲ್ಲಿಯೇ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪರ ಪ್ರಮೋದ ಮುತಾಲಿಕ್ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವ ರಕ್ಷಣೆಗಾಗಿ ಅನುಮತಿ ಪಡೆದುಕೊಂಡು ಹಿಂದೂ ಕಾರ್ಯಕರ್ತರು ಶಸ್ತ್ರ ಹೊಂದಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಸರಕಾರ ಮುಸ್ಲಿಮರ ಮತಕ್ಕಾಗಿ ಹಿಂದುಗಳನ್ನು ಬಲಿ ಕೊಡುತ್ತಿದೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದರು.
ಹೊನ್ನಾವರದ ಮುಗ್ದ ಯುವಕ ಪರೇಶ್ ಮೆಸ್ತಾ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಆಗ್ರಸಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್,ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.

 

    45 

ಲಂಚ ಪಡೆಯುತ್ತಿದ್ದ ಭೂಮಾಪನ ಅಧಿಕಾರಿ ಎಸಿಬಿ ಬಲೆಗೆ

ಡಿಸೆಂಬರ್-7

ಯಾದಗಿರಿ : ಶಹಪೂರ ತಾಲೂಕಿನ ಭೂ ಮಾಪನ ಅಧಿಕಾರಿಯೊಬ್ಬರು ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.ದತ್ತು ಎಂಬ ಅಧಿಕಾರಿ ಖಾನಪುರ ಮೂಲದ ಮಾಳಿಂಗರಾಯ ಜಮೀನು ಸರ್ವೆ ಮಾಡಲು 5 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಹೋಟೆಲ್ ನಲ್ಲಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಈ ಕುರಿತು ದೂರ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

 

 

 

     45


ಪತ್ನಿಯನ್ನು ಕೊಂದ ಪಾಪಿ ಪತಿ..!

ಡಿಸೆಂಬರ್.5
ಯಾದಗಿರಿ: ಪ್ರೀತಿಸಿ ಮದುವೆಯಾಗಿದ್ದ ಎರಡನೆ ಪತ್ನಿಯನ್ನು ಹೊಡೆದು ಕೊಂದ ಪತಿ ತನ್ನ ಬೈಕ್ನಲ್ಲಿ ಶವ ಸಾಗಿಸಿ ಆಸ್ಪತ್ರೆ ಬಳಿ ಎಸೆದು ಹೋಗಿರುವ ಅಮಾನವೀಯ ಘಟನೆ ಸುರಪುರ ತಾಲ್ಲೂಕು ರತ್ನಾಪುರ ಗ್ರಾಮದಲ್ಲಿ ನಡೆದಿದೆ. ಶಾಂತ ಕೊಲೆಯಾದ ದುರ್ದೈವಿ. ವೆಂಕಟೇಶ ಪತ್ನಿಯನ್ನು ಕೊಲೆ ಮಾಡಿರುವ ಪತಿ.
ವೆಂಕಟೇಶ , ಶಾಂತ ಬೆಂಗಳೂರಿನ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿ ಕಳೆದ ಮೇ ತಿಂಗಳಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಆದರೆ ವೆಂಕಟೇಶನಿಗೆ ಈ ಮೊದಲೇ ಮದುವೆಯಾಗಿ ಮೂವರು ಮಕ್ಕಳಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿದೆ. ಈ ನಡುವೆ ವೆಂಕಟೇಶ ಶಾಂತಳನ್ನು ಹೊಡೆದು ಕೊಲೆ ಮಾಡಿದ್ದಾನೆ. ಬೆಳಗ್ಗೆ ಆಕೆಯ ದೇಹವನ್ನು ತನ್ನ ಬೈಕ್ನಲ್ಲಿ ಸಾಗಿಸಿ ಆಸ್ಪತ್ರೆ ಮುಂಭಾಗ ಎಸೆದು ಆಕೆಯ ದೇಹದ ಮೇಲೆ ಅವಳ ಗುರುತಿನ ಚೀಟಿ ಬಿಸಾಡಿ ಪರಾರಿಯಾಗಿದ್ದಾನೆ. ಈ ದೃಶ್ಯಾವಳಿಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲಗಲ ಈ ಪ್ರಕರಣ ದಾಖಲಾಗಿದೆ.

 

 

 

     hh ಕಾಲುವೆಗೆ ನಿರಂತರ ನೀರು ಬಿಡಲು ರೈತರ ಪ್ರತಿಭಟನೆ
ನವೆಂಬರ್.25
ಯಾದಗಿರಿ: ಜಿಲ್ಲೆಯ ಸುರುಪುರದ  ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೆ ನಿರಂತರವಾಗಿ ನೀರು ಮುಟ್ಟಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲೂಕು ಜಾತ್ಯತೀತ ಜನತಾ ದಳದ ಮುಖಂಡರು ಸಮೀಪದ ಹಸನಾಪುರದ ಕಾಡಾ ಕಚೇರಿ ಮುಂದೆ ಶುಕ್ರವಾರ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಧಾರದಂತೆ ನ.25 ರಿಂದ ಡಿ.9 ರವರೆಗೆ 15 ದಿನಗಳ ಕಾಲ ನೀರು ನಿಲ್ಲಿಸುವುದಾಗಿ ತಿಳಿಸಿರುತ್ತಾರೆ. ಕಾಲುವೆಗಳಲ್ಲಿ ಚಾಲು-ಬಂದ್ ಪದ್ಧತಿಯಿಂದ ಕಾಲುವೆಯ ಕೊನೆ ಭಾಗದ ರೈತರಿಗೆ ಮಾರಕವಾಗಲಿದೆ ಎಂದು ದೂರಿದರು.
ರೈತರು ಈಗಾಗಲೇ ಶೇಂಗಾ, ಸಜ್ಜೆ, ಹತ್ತಿ, ಜೋಳ, ಕಡಲೆ, ತೊಗರಿ ಬೆಳೆಗಳನ್ನು ಬೆಳೆದಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಮಳೆ ಬೀಳದಿರುವುದರಿಂದ ಬೆಳೆಗಳಿಗೆ ತೇವಾಂಶದ ಕೊರತೆಯಾಗಿದ್ದು ಇಳುವರಿಯಲ್ಲಿ ಗಣನೀಯ ಕುಸಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುವ ಸಂಭವವಿದೆ ಎಂದು ತಿಳಿಸಿದರು.
ಕಾರಣ ಕಾಲುವೆಗೆ ನಿರಂತರವಾಗಿ ನೀರು ಹರಿಸಬೇಕು. ಇದರಿಂದ ಕೊನೆ ಭಾಗದ ರೈತರು ತಮ್ಮ ಹೊಲಗಳಿಗೆ ನೀರು ಉಣಿಸಲು ಅನುವಾಗುತ್ತದೆ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೇಳಿದರು. ಪಕ್ಷ ದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ, ಮುಖಂಡರಾದ ಮಲ್ಲಯ್ಯ ಕಮತಗಿ, ಶಿವಪ್ಪ ಸದಬ, ದೇವಿಂದ್ರಪ್ಪ ಪತ್ತಾರ, ಹಣಮಂತ್ರಾಯ ಮಡಿವಾಳ ಸೇರಿದಂತೆ ಅನೇಕ ಗ್ರಾಮಗಳ ರೈತರು ಇದ್ದರು.                                                                                                                                                                               
     
22          ಚಿರತೆ ಹಾವಳಿಗೆ ಗ್ರಾಮಸ್ಥರಲ್ಲಿ ಆತಂಕ
 ನವೆಂಬರ್-4
ಯಾದಗಿರಿ : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರಾಯನಗೋಳ, ಹಣಮಸಾಗರ, ಹುಲ್ಲಿಕೇರಾ ಸೇರಿದಂತೆ ಸುಮಾರು ಎಂಟತ್ತು ಗ್ರಾಮಗಳ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ.
ಕಣ್ಣಾಡಿಸಿದಷ್ಟು ಗುಡ್ಡ-ಗಾಡು ಪ್ರದೇಶ ಚಿರತೆಗಳು ಆಗಾಗ ಪ್ರತ್ಯಕ್ಷವಾಗುತ್ತಿವೆ. ಇತ್ತೀಚೆಗೆ ಚಿರತೆ ಪ್ರತ್ಯಕ್ಷವಾಗಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಆಂತಕ ಮನೆ ಮಾಡಿದೆ. ಚಿರತೆ ಸೆರೆ ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರುವುದು ಒಳಿತು.
ಕಳೆದ ಎರಡ್ಮೂರು ವರ್ಷಗಳಿಂದ ಚಿರೆತಗಳು ಪ್ರತ್ಯಕ್ಷವಾಗುತ್ತಿರುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ರಾಯನಗೋಳ ಗ್ರಾಮದಲ್ಲಿ ನಾಯಿ ಮೇಲೆ ದಾಳಿ ಮಾಡಿತ್ತು.
ಇದಕ್ಕೂ ಮೊದಲು ಜಮೀನಿನಲ್ಲಿದ್ದ ಹೋರಿಯನ್ನ ತಿಂದು ಹಾಕಿತ್ತು. ಅಲ್ಲದೇ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದರಿಂದ ಗ್ರಾಮಸ್ಥರಲ್ಲಿ ಚಿರತೆ ಭೀತಿ ಕಾಡುತ್ತಿದೆ.
ಸುರಪುರ ವಲಯದ ರಾಯನಗೋಳ ಸುತ್ತಮುತ್ತ ಗುಡ್ಡಗಾಡು ಪ್ರದೇಶವಿದೆ. ಗುಡ್ಡಗಳ ನಡುವೆ ಗವಿಗಳಿದ್ದು ಚಿರತೆ ವಾಸಿಸಲು ಅನುಕೂಲವಿದೆ.
ದಾಳಿ ಮತ್ತು ಹೆಜ್ಜೆ ಗುರುತು ಪತ್ತೆಯಾದ ಮೇಲೆ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಪ್ರಯತ್ನ ಮಾಡುತ್ತಿದ್ದಾರೆ. ಚಿರತೆ ಸೆರೆಗೆ ಅಲ್ಲಲ್ಲಿ ಬೋನ್ಗಳನ್ನ ಇಡಲಾಗಿದೆ. ಆದರೆ, ಚಿರತೆ ಮಾತ್ರ ಸಿಗುತ್ತಿಲ್ಲ. ಇದರಿಂದ ಕುರಿ, ದನಗಾಯಿಗಳು ಬೆಟ್ಟದ ಕಡೆ ಹೋಗುವುದನ್ನ ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ.

 

 

   hh ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಪ್ರತಿಭಟನೆ
ಅಕ್ಟೋಬರ್.31
ಯಾದಗಿರಿ: ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸುವಂತೆ ಎಲ್ಲ ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕೇಂದ್ರ, ತಾಲೂಕು, ಹೋಬಳಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಕೂಡ ಕನ್ನಡದ ನಾಮಫಲಕಗಳು ಕಾಣುವುದಿಲ್ಲ. ಎಲ್ಲೆಡೆ ಆಂಗ್ಲ ಭಾಷೆಯ ನಾಮಫಲಕಗಳ ಹಾವಳಿಯೇ ತೀವ್ರವಾಗಿ ಕಂಡು ಬರುತ್ತಿರುವುದು ಮಾರಕ ಬೆಳವಣಿಗೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ಕನ್ನಡ ಭಾಷೆಯ ನಾಮಫಲಕಗಳು ಕಾಣೆಯಾಗುತ್ತಿವೆ. ಇದು ಆತಂಕಕಾರಿ ಬೆಳವಣಿಗೆ. ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಮುಂದುವರೆದರೇ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿವೆ. ಇವುಗಳ ಮೇಲೆ ಸಹ ಜಿಲ್ಲಾಡಳಿತ ನಿಯಂತ್ರಣ ಮಾಡಲು ಮುಂದಾಗಬೇಕು. ವ್ಯಾಪರಸ್ಥರಿಗೆ ಹಣದ ದಾಹ ಮುಖ್ಯವಾಗಿದೆ ಹೊರತು ಭಾಷೆಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಖಾಸಗಿ ಶಾಲಾ ಕಾಲೇಜುಗಳಲ್ಲಿ ಆಂಗ್ಲ ಭಾಷೆಯಲ್ಲಿಯೇ ನಾಮಫಲಕಗಳನ್ನು ಅಳವಡಿಸಲಾಗಿದೆ. ಕಡಿವಾಣ ಹಾಕುವುದು ಅಗತ್ಯವಿದೆ. ಕಟ್ಟುನಿಟ್ಟಿನ ಕಾನೂನು ನಿಯಮಗಳನ್ನು ರೂಪಿಸಲು ಮುಂದಾಗುವುದು ಅಗತ್ಯವಿದೆ ಎಂದು ತಿಳಿಸಿದರು. ನವೆಂಬರ್ ತಿಂಗಳು ಮುಗಿಯುವುದರೊಳಗೆ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಹಾಕಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ನಡೆಸುವುದಾಗಿ ಎಂದು ಉಕ ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.
ಉಕ ಕರವೇ ಅಧ್ಯಕ್ಷ ಶರಣು ಗದ್ದುಗೆ, ರವಿಕುಮಾರ ದೇವರಮನಿ, ಸಿದ್ದುರಡ್ಡಿ, ಕಾಶೀಂ ಅಲಿ, ಸಿದ್ದಲಿಂಗ ರಡ್ಡಿ, ಅಮರೇಶ್, ಅರುಣ ಇನ್ನಿತರರಿದ್ದರು.

 

 

55  ಅಲೆಮಾರಿ ಜನಾಂಗದವರಿಗೆ ಸಿಕ್ಕಲಿದೆ ಸೂರು: ಜೆ.ಮಂಜುನಾಥ್
 ಅಕ್ಟೋಬರ್ -26
ಯಾದಗಿರಿ: ಯಾದಗಿರಿ ನಗರದ ಹೊರ ವಲಯದ ಎಂ.ಹೊಸಳ್ಳಿ ಬಳಿ ವಾಸವಿರುವ ಅಲೆಮಾರಿ ಜನಾಂಗದವರಿಗೆ ಶೀಘ್ರವೇ ಮನೆಗಳು ಸಿಗಲಿವೆ. ಮುಂದಿನ ಆರು ತಿಂಗಳೊಳಗಾಗಿ 124 ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭರವಸೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಎಂ.ಹೊಸಳ್ಳಿ ಬಳಿಯಲ್ಲಿ ಅಲೆಮಾರಿ ಜನಾಂಗದವರು ವಾಸ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಡಾ.ಬಿ.ಆರ್ ಅಂಬೇಡ್ಕರ್ ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಮನೆ ನಿರ್ಮಿಸಲಾಗುವುದು. ಸುಮಾರು 3.09 ಎಕರೆಯಲ್ಲಿ 20-30 ವಿಸ್ತೀರ್ಣದ 124 ಮನೆಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಮನೆಗೆ 4 ಲಕ್ಷ ರೂ. ವೆಚ್ಚವಾಗಲಿದೆ' ಎಂದರು.
ರಾಜ್ಯ ಮಟ್ಟದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ಕೋಶದ ನೋಡಲ್ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ನಿವಾಸಿಗಳ ಜೊತೆ ಮಾತುಕತೆ ನಡೆಸಿದರು. ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮನೆಗಳ ನಿರ್ಮಾಣದ ಬಗ್ಗೆ ಚರ್ಚಿಸಿದರು.
'ಅಲೆಮಾರಿ ಸಮುದಾಯದ 95 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. 29 ಮಂದಿಗೆ ಒಂದೆರೆಡು ದಿನಗಳಲ್ಲಿ ಹಕ್ಕು ಪತ್ರ ವಿತರಿಸಲಾಗುವುದು. ಮನೆಗಳ ನಿರ್ಮಾಣದ ಸಂದರ್ಭದಲ್ಲಿ ಶೌಚಾಲಯ, ಚರಂಡಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು' ಎಂದು ಭರವಸೆ ನೀಡಿದರು.
'ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 971 ಅಲೆಮಾರಿ ಕುಟುಂಬಗಳಿವೆ. ಈ ಪೈಕಿ ಹಲವರಿಗೆ ನಿವೇಶನ ಇಲ್ಲ. ಕೆಲವರಿಗೆ ಜಾಗ ಇದೆ. ಅರ್ಹ ಫಲಾನುಭವಿಗಳ ಪಟ್ಟಿ ನೀಡಿ, ಆಯಾ ತಾಲೂಕಿನಲ್ಲಿಯೇ ಮನೆ ನಿರ್ಮಿಸಿಕೊಡಲಾಗುತ್ತದೆ' ಎಂದು ಜಿಲ್ಲಾಧಿಕಾರಿಗಳು ಹೇಳಿದರು.

 

000

 ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾವು

 

 ಅಕ್ಟೋಬರ್-25
ಶಹಾಪುರ : ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿಲ್ಪಾ (18) ಮೃತ ಯುವತಿ. ಕುರಿ ಮೇಯಿಸಲು ಹೋದಾಗ ಕುರಿಗೆ ವಿದ್ಯುತ್ ತಂತಿ ತಗುಲಿದೆ. ಈ ವಿದ್ಯುತ್ ತಂತಿಯನ್ನು ಬಿಡಿಸಲು ಹೋದ ಯುವತಿಗೂ ಕೂಡ ವಿದ್ಯುತ್ ಸ್ಪರ್ಶಿಸಿದೆ. ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

hh


 ಗೌರಿ ಹಂತಕರನ್ನು ಶೀಘ್ರದಲ್ಲೇ ಬಂಧನ

ಅಕ್ಟೋಬರ್-23
ಯಾದಗಿರಿ: ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳ ಸುಳಿವು ದೊರೆತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಭಾನುವಾರ ನೂತನ ಜಿಲ್ಲಾ ಪೊಲೀಸ್ ಕಚೇರಿ ಉದ್ಘಾಟಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಅದನ್ನು ಮಾಧ್ಯಮ ಹಾಗೂ ಸಾರ್ವಜನಿಕರ ಮುಂದೆ ಹೇಳಲು ಸಾಧ್ಯವಿಲ್ಲ ಎಂದರು. ಪ್ರಕರಣ ಕುರಿತಂತೆ ಎಸ್ಐಟಿ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂಬ ಮಾಧ್ಯಮಗಳ ವರದಿ ಉಹಾಪೋಹದಿಂದ ಕೂಡಿದ್ದು, ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅಧಿಕಾರಿಗಳ ನೇಮಕ ಮಾಡಲಾಗುವುದು ಎಂದರು. ಶಂಕಿತ ಆರೋಪಿಯು ಹಣೆಗೆ ಕುಂಕುಮ ಧರಿಸಿರುವ ರೇಖಾ ಚಿತ್ರ ಬಿಡುಗಡೆ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎಸ್ಐಟಿ ಅಧಿಕಾರಿಗಳು ಸ್ಥಳೀಯರ ಮಾಹಿತಿ ಆಧರಿಸಿ ರೇಖಾ ಚಿತ್ರರಚಿಸಿದ್ದಾರೆ. ಬಲಪಂಥೀಯ, ಎಡಪಂಥೀಯರು ಎಂಬ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಬಿಜೆಪಿಯವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದು ಎಂದರು. ಬಿಎಸ್ ವೈ ಗೆ ಗೊಂದಲ: ಟಿಪ್ಪು ಜಯಂತಿ ಸರ್ಕಾಕಾರದ ಕಾರ್ಯಕ್ರಮವಾಗಿದ್ದು, ಜಯಂತಿ ನಡೆಯುತ್ತದೆ. ಇನ್ನೂ ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿಯಲ್ಲಿದ್ದಾಗ ಟಿಪ್ಪುವಿನ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರಂತೆ ಟೊಪ್ಪಿಗೆ ಹಾಗೂ ಕೈಯಲ್ಲಿ ಖಡ್ಗ ಹಿಡಿದಿದ್ದರು ಈಗ ಅವರು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ಟಿಪ್ಪು ಜಯಂತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿಯೇ ಗೊಂದಲವಿದೆ ಎಂದು ಹೇಳಿದರು.

 

 



 

11   ಜಿಎಸ್ಟಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ  ಮುಖಭಂಗವಾಗಿದೆ: ಮಲ್ಲಿಕಾರ್ಜುನ
 ಅಕ್ಟೋಬರ್-23
ಯಾದಗಿರಿ: ಜಿಎಸ್ಟಿ ವಿಚಾರದಲ್ಲಿ ನ್ಯಾಯಬದ್ಧವಾಗಿ ತೆರಿಗೆ ಹಾಕಲಾಗಿಲ್ಲ ಆದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಜಿಎಸ್ಟಿ ಜಾರಿಯ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಯಾದಗಿರಿಯಲ್ಲಿ ಭಾನುವಾರ ಮಾತನಾಡಿದ ಅವರು, 'ಜಿಎಸ್ಟಿ ಜಾರಿ ವಿಚಾರದಲ್ಲಿ ಕೆಲವು ವಸ್ತುಗಳ ಮೇಲೆ ತೆರಿಗೆ ಬೇಡ ಎಂದು ಹಲವು ರಾಜ್ಯಗಳು ಹೇಳಿದ್ದವು. ಆದರೆ, ರಾಜ್ಯಗಳ ಮನವಿಗೆ ಸ್ಪಂದಿಸದೇ ಕೇಂದ್ರ ಸರ್ಕಾರ ಜಾರಿಗೆ ತಂದಿತು' ಎಂದು ಆರೋಪಿಸಿದರು.
'ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆರ್ಎಸ್ಎಸ್ನ ಒಂದು ವಿಂಗ್ ನವರು ಮನವಿ ಕೊಡುತ್ತಿದ್ದಾರೆ. ಬಳಿಕ ಕೇಂದ್ರ ಸರ್ಕಾರ ಸಭೆ ಕರೆದು ಬಡವರ ಪರ ಕ್ರಮ ಕೈಗೊಂಡಿದ್ದೇವೆ ಎನ್ನುತ್ತಾರೆ. ಜಿಎಸ್ಟಿ ಬಗ್ಗೆ ಮಾತನಾಡಲು ಹೋದ ತಮಿಳು ಚಿತ್ರಕ್ಕೆ ಸೆನ್ಸಾರ್ ಕತ್ತರಿ ಹಾಕಲಾಗಿದೆ' ಎಂದು ದೂರಿದರು.
'ಜಿಎಸ್ಟಿಇಂದ ಆದ ಮುಖಭಂಗ ತಪ್ಪಿಸಿಕೊಳ್ಳಲು ಗುಜರಾತ್ ಚುನಾವಣೆ ಮುಂದಕ್ಕೆ ತಳ್ಳಲಾಗುತ್ತಿದೆ. ಹಿಮಾಚಲ ಪ್ರದೇಶ ಚುನಾವಣೆ ಮೊದಲು ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಸ್ವಾಯತ್ತತೆ ಎಲ್ಲಿ ಕಳೆದುಕೊಂಡಿದೆ ಗೊತ್ತಿಲ್ಲ. ಚುನಾವಣೆ ದಿನಾಂಕವನ್ನು ಆಯೋಗ ನಿಗದಿ ಮಾಡುವ ಸ್ಥಿತಿಯಲ್ಲಿಲ್ಲ. ಮೋದಿ ಹೇಳಿಕೆ ಮೇಲೆ ದಿನಾಂಕ ನಿಗದಿ ಮಾಡುವ ಸ್ಥಿತಿಗೆ ಬಂದಿರುವ ಸಂಶಯ ಕಾಡುತ್ತಿದೆ' ಎಂದರು.
'ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ. ಶೀಘ್ರದಲ್ಲಿಯೇ ಅವರು ಅಧ್ಯಕ್ಷರಾಗುತ್ತಾರೆ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಗಳು ನಡೆಯುತ್ತವೆ. ಈಗಾಗಲೇ ಸಾಕಷ್ಟು ಕೆಲಸಗಳನ್ನು ರಾಹುಲ್ ಮಾಡುತ್ತಿದ್ದಾರೆ' ಎಂದು ಹೇಳಿದರು.

 

Ads




;