ದೂರವಾಣಿ : 080-69999676
ಇಮೇಲ್ : Info@Vijayataranga.com


    45

ಇನ್ನೋವೇಟಿವ್ ಫಿಲಂ ಸಿಟಿ ಮೇಲು ಬಿತ್ತು ಐಟಿ ಕಣ್ಣು

ನವೆಂಬರ್.16
ರಾಮನಗರ : ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಸೇರಿದಂತೆ ಇತರರ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು, ರಾಜ್ಯದ ಇನ್ನೋವೇಟಿವ್ ಫಿಲಂ ಸಿಟಿ ಮೇಲೂ ಇಂದು ಲಗ್ಗೆ ಹಾಕಿದ್ದಾರೆ.
ಬಿಡದಿ ಸಮೀಪವಿರುವ ಇನ್ನೋಪೇಟಿವ್ ಫಿಲಿಂ ಸಿಟಿ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮಹತ್ವದ ಕಡತಗಳ ಹುಡುಕಾಟದಲ್ಲಿ ತೊಡಗಿದ್ದಾರೆ.ರಾಜ್ಯದಲ್ಲಿ ಇನ್ನೋವೇಟಿವ್ ಫಿಲಂ ಸಿಟಿ, ಬಹು ಸಂಖ್ಯೆ ಪ್ರವಾಸಿಗರನ್ನು ಆಕರ್ಷಿಸುವತ್ತಿರುವ ಮನರಂಜನಾ ತಾಣ. ಇಂತಹ ಮನರಂಜನಾ ತಾಣಕ್ಕೆ ಲಗ್ಗೆ ಹಾಕಿರುವ 5ಕ್ಕೂ ಹೆಚ್ಚಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಅಲ್ಲದೇ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿನ ಸಿಇಓ ಉಪಾಸನರವರ ವಿಚಾರಣೆಯಲ್ಲೂ ನಿರತರಾಗಿದ್ದಾರೆ.ಅಂದಹಾಗೇ, ಇನ್ನೋವೇಟಿವ್ ಫಿಲಂ ಸಿಟಿ ಸುಮಾರು 500 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮನರಂಜನಾ ತಾಣದಲ್ಲಿಯೇ, ಬಿಗ್ ಬಾಸ್ ರಿಯಾಲಿಟಿ ಶೋ ನಡೆದಿತ್ತು. ಇಂತಹ ತಾಣಕ್ಕೆ ಇದೀಗ ಲಗ್ಗೆ ಹಾಕಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ತೆರಿಗೆ ವಂಚನೆ ಸೇರಿದಂತೆ, ಇತರೆ ಮಾಹಿತಿಗಳ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

 

45

ಶಾಲಾ ಬಸ್ ಭೀಕರ ಅಪಘಾತ : 3 ಮಕ್ಕಳ ಸಾವು

ನವೆಂಬರ್.16
ಕನಕಪುರ: ಸರ್ಕಾರಿ ಬಸ್ ಹಾಗೂ ಶಾಲಾ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಶಾಲಾ ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳಗ್ಗೆ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಅವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಶೀತಲವಾಡಿ, ಜಟ್ಟಿಪಾಳ್ಯ, ಕತರಿನಾಥ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳನ್ನು ಎಂದಿನಂತೆ ಶಾಲಾ ವಾಹನದಲ್ಲಿ 9.15ರಲ್ಲಿ ಅನ್ನಪೂರ್ಣೇಶ್ವರಿ ಆಶ್ರಮದ ಶಾಲೆಗೆ ಕರೆದುಕೊಂಡು ಬರಲಾಗುತ್ತಿತ್ತು.ತೇರುಬೀದಿ ಕಡೆಯಿಂದ ಕನಕಪುರಕ್ಕೆ ವಾಪಸ್ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಹಾರೋಹಳ್ಳಿ ಬಳಿ ಅತಿ ವೇಗವಾಗಿ ಮುನ್ನುಗ್ಗಿ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸುತ್ತಮುತ್ತಲ ಗ್ರಾಮದವರು ಸ್ಥಳಕ್ಕೆ ದೌಡಾಯಿಸಿ ವಾಹನದಲ್ಲಿ ಸಿಲುಕಿದ್ದ ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮಾರ್ಗಮಧ್ಯೆ ಮತ್ತೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು, ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಬಳಿ ರೋದಿಸುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಸುದ್ದಿ ತಿಳಿದ ಹಾರೋಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದರೆ.

 

   ff ಅಕ್ರಮ ಆರೋಪ ಸಾಬೀತಾದರೇ ಆಸ್ತಿ ಉಡುಗೊರೆಯಾಗಿ ಕೊಡುವೇ..!
ನವೆಂಬರ್.2
ರಾಮನಗರ: ನನ್ನ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡಿರುವ ಶಾಸಕ ಸಿ.ಪಿ. ಯೋಗೇಶ್ವರ್ ಅದಕ್ಕೆ ಸೂಕ್ತ ದಾಖಲೆ ಬಹಿರಂಗ ಪಡಿಸಿದಲ್ಲಿ ಪೂರ್ಣ ಆಸ್ತಿಯನ್ನು ಅವರಿಗೇ ಉಡುಗೊರೆ ನೀಡುತ್ತೇನೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬುಧವಾರ ಸವಾಲು ಹಾಕಿದರು.
ಪಾವಗಡ ಸೌರ ವಿದ್ಯುತ್ ಯೋಜನೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ್ದೇನೆ ಎಂಬುದೆಲ್ಲ ಸುಳ್ಳು. ಆ ಕುರಿತು ದಾಖಲೆ ನೀಡಿದರೆ ಅಷ್ಟೂ ಆಸ್ತಿಯನ್ನು ಅವರ ಹೆಸರಿಗೇ ನೋಂದಣಿ ಮಾಡಿಸುತ್ತೇನೆ' ಎಂದು ಅವರು ಪ್ರತಿಕ್ರಿಯೆ ನೀಡಿದರು.
ಯೋಗೇಶ್ವರ್ ನಾಲ್ಕು ವರ್ಷಗಳಿಂದ ನನ್ನ ವಿರುದ್ಧ ಪಿತೂರಿ ಮಾಡುತ್ತಲೇ ಬಂದಿದ್ದಾರೆ, ಅವರ ನಡೆ ಏನೆಂಬುದನ್ನೂ ಆಗಿನಿಂದಲೂ ಬಲ್ಲೆ ಎಂದರು.
ಬೆಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಧ್ವಜದ ಜೊತೆಗೆ ನಾಡಧ್ವಜ ಹಾರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು ಅದರಲ್ಲಿ ತಪ್ಪೇನೂ ಇಲ್ಲ. ರಾಷ್ಟ್ರಧ್ವಜಕ್ಕೆ ಯಾವ ಗೌರವ ಕೊಡಬೇಕೋ ಕೊಡುತ್ತೇವೆ. ಆದರೆ ನಮ್ಮಲ್ಲಿ ಆಗಿನಿಂದಲೂ ನಾಡಧ್ವಜ ಬಳಕೆಯಲ್ಲಿದೆ. ಈ ಮೂಲಕ ನಾವು ಹಕ್ಕಿನ ಪ್ರತಿಪಾದನೆ ಮಾಡಿದ್ದೇವೆ ಅಷ್ಟೇ ಎಂದರು.

 

 

    99  ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡ ತಾ.ಪಂ ಸದಸ್ಯರು
ಅಕ್ಟೋಬರ್.24
ರಾಮನಗರ: ತಾ.ಪಂ ಸದಸ್ಯರಿಂದಲೇ ಸರಕಾರಿ ಜಮೀನು ಒತ್ತುವರಿ ಮಾಡಿ ಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಬ್ಬಾಳು ರಸ್ತೆಯಲ್ಲಿ ಹೊಸಹಳ್ಳಿ ಸರ್ವೇ ನಂ. ಜಮೀನಿನಲ್ಲಿ ರಸ್ತೆ ಹಾದುಹೋಗಿರುವ ಕಚ್ಚುವನಹಳ್ಳಿ ಗೇಟ್ ಬಳಿಯಲ್ಲಿ ರಸ್ತೆ ಅಭಿವೃದ್ಧಿ ಹಾಗೂ ತಂಗುದಾಣ ನಿರ್ಮಾಣ ಮಾಡಲು ಮೀಸಲಿರಿಸಿದ್ದ ಸರಕಾರಿ ಜಾಗವನ್ನು ತಾ.ಪಂ. ಸದಸ್ಯ ಧನಂಜಯ ಹಾಗು ರವಿಶಂಕರ್ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ರವಿಕುಮಾರ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
5ಗುಂಟೆ ಜಾಗವನ್ನು ರಾಜಕೀಯ ಪ್ರಭಾವ ಬಳಸಿ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಾಂಪೌಂಡು ನಿರ್ಮಾಣ ಮಾಡುತ್ತಿದ್ದಾರೆ. ಈ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಜಾಗವನ್ನು ತೆರವುಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕು. ಇಲ್ಲಿನ ಸಾರ್ವಜನಿಕರು ಕೂಡ ಈ ಒತ್ತುವರಿಯನ್ನು ಮಾಡದಂತೆ ತಡೆಯೊಡ್ಡಿದ್ದು, ಜನಪ್ರತಿನಿಧಿಗಳಾಗಿರುವ ಇವರೇ ಸಾರ್ವಜನಿಕರ ಉದ್ದೇಶದ ಜಾಗವನ್ನು ಕಬಳಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

 

 

       gg  

ಟ್ರಾಫಿಕ್ ಜಾಮ್ ನಿಂದ ಸಾಕು ಸಾಕಾಯ್ತು

ಅಕ್ಟೋಬರ್.21
ರಾಮನಗರ: ತಾಲ್ಲೂಕಿನ ಚನ್ನಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರು ಟ್ರಾಫಿಕ್‌ ಜಾಮ್‌ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಪಟ್ಟಣದ ರಸ್ತೆ ದಿನದಿಂದ ದಿನಕ್ಕೆ ಹೆಚ್ಚು ವ್ಯಾಪಾರಿ ಕೇಂದ್ರವಾಗಿ ಆಕರ್ಷಿತವಾಗುತ್ತಿದೆ. ಇದು ಟ್ರಾಫಿಕ್‌ ಜಾಮ್‌ಗೆ ಪ್ರಮುಖ ಕಾರಣ. ಈ ರಸ್ತೆಯು ರಾಜಧಾನಿಗೆ ತಲುಪುವ ಬೆಂ.ಮೈಸೂರು ರಸ್ತೆಯನ್ನು ಮೀರುಸುತ್ತಿವೆ. ಪೇಟೆ ಬೀದಿಗೆ ಹೋಗುವ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಜತೆಗೆ ಇಲ್ಲಿ ಕಸದ ರಾಶಿ ಹಾಕುವುದರಿಂದ ಗಬ್ಬು ವಾಸನೆ ಬರುತ್ತದೆ.

ಯಾವಾಗ ಎಲ್ಲಿ ಅಪಘಾತವಾಗುತ್ತದೋ, ಎಂದು ಸದಾ ಜೀವ ಕೈಯಲ್ಲಿ ಹಿಡಿದು ತಿರುಗಾಡುವಂತಾಗಿದೆ. ಫುಟ್‌ಪಾತ್‌ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದ್ದು, ನಗರಸಭೆಯ ಕಾರ್ಯವೈಖರಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ನಗರಸಭೆ ಮತ್ತು ಪೊಲೀಸ್‌ ಅಧಿಕಾರಿಗಳು ಒಂದು ದಿನ ಬಂದು ರಸ್ತೆ ಬದಿಯ ವ್ಯಾಪಾರಿಗಳನ್ನು ಸ್ಥಳಾಂತರಿಸುತ್ತಾರೆ. ಆದರೆ, ಇನ್ನೊಂದು ದಿನ ಬಂದು ನೋಡಿಕೊಂಡು ಹೋಗುತ್ತಾರೆ. ಇದರಿಂದಾಗಿ ರಸ್ತೆಯಲ್ಲಿ ಸುಗಮವಾಗಿ ಸಂಚಾರ ಮಾಡಲು ಆಗುತ್ತಿಲ್ಲ. ಆಟೋ ನಿಲ್ದಾಣ, ಅತ್ತ ಶತಮಾನೋತ್ಸವ ಭವನಕ್ಕೆ ಮತ್ತು ಸರಕಾರಿ ಬಾಲಕರ ಕಾಲೇಜಿಗೆ ಹೋಗಲು ದಾರಿಯಿದ್ದು ಹಬ್ಬ ಹರಿದಿನ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಅವಧಿಯಲ್ಲಿ ಹಾಗೂ ಕಾಲೇಜು ಬಿಡುವ ವೇಳೆ ರಸ್ತೆ ಜನದಟ್ಟಣಿಯಿಂದ ತುಂಬಿರುತ್ತದೆ. ಇದರ ಮಧ್ಯೆ ವಾಹನಗಳ ದಟ್ಟಣೆ. ಇಷ್ಟೆಲ್ಲ ಗೊತ್ತಿದ್ದರೂ ಮೌನವಹಿಸಿರುವ ಶಾಸಕರ ಮೌನವಾಗಿದ್ದಾರೆ.

Ads
;