ದೂರವಾಣಿ : 080-69999676
ಇಮೇಲ್ : Info@Vijayataranga.com


 

hh

 ಕಳೆಗಟ್ಟಿದ 90 ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ

 ಮಾರ್ಚ್ 05

 

ಲಾಸ್ ಏಂಜಲೀಸ್ : 2018 ನೇ ಸಾಲಿನ ಆಸ್ಕರ್ ಪ್ರಶಸ್ತಿ ಅಥವಾ ಅಕಾಡೆಮಿ ಪ್ರಶಸ್ತಿ ಇಂದು ಘೋಷಣೆಯಾಗಿದ್ದು, ಹಾಲಿವುಡ್ ನ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಅಮೆರಿಕ ಪೆಸಿಫಿಕ್ ಕಾಲಮಾನದ ಪ್ರಕಾರ ಮಾ.4 ರ ಸಂಜೆ ಕಾರ್ಯಕ್ರಮ ಆರಂಭವಾಗಿದ್ದು, ಇದು 90 ನೇ ಆಸ್ಕರ್ ಸಮಾರಂಭವಾಗಿದೆ. ಈ ವರ್ಷ ಆಸ್ಕರ್ ಪ್ರಶಸ್ತಿಗೆ ಒಟ್ಟು 13 ಸಿನಿಮಾಗಳು ಆಯ್ಕೆಯಾಗಿದ್ದವು.

ಅಮೆರಿಕದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಹಾಸ್ಯನಟ ಜಿಮ್ಮಿ ಕಿಮ್ಮೆಲ್ ನಿರೂಪಣೆ ಮಾಡುತ್ತಿದ್ದಾರೆ. 'ತ್ರಿಬಲ್ ಬೋರ್ಡ್' ಸಿನೆಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಸ್ಯಾಮ್ ರಾಕ್ವೆಲ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರೆ, 'ಐ ಟೋನ್ಯಾ' ಚಿತ್ರದ ನಟನೆಗಾಗಿ ಆಲಿಸನ್ ಜನ್ನಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.
ತಮ್ಮ 'ಎ ಫ್ಯಾಂಟಾಸ್ಟಿಕ್ ವುಮನ್' ಚಿತ್ರದ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಈ ಸಾಧನೆ ಮಾಡಿದ ಮೊದಲ ಲಿಂಗ ಅಲ್ಪಸಂಖ್ಯಾತರು ಎಂಬ ಕೀರ್ತಿಗೆ ಡೇನಿಯಾಲಾ ವಾಗಾ ಪಾತ್ರರಾಗಿದ್ದು ಈ ಬಾರಿಯ ಆಸ್ಕರ್ ವಿಶೇಷ.

 

pp

 ಪಾಕ್ ಮೇಲ್ಮನೆಗೆ ಭಾರತದ ಹಿಂದೂ ಮಹಿಳೆ ಆಯ್ಕೆ

ಮಾರ್ಚ್ 05

 

ಕರಾಚಿ: ಪಾಕಿಸ್ತಾನ ಸಂಸತ್ನ ಮೇಲ್ಮನೆಯ ಸದಸ್ಯರಾಗಿ ಹಿಂದೂ ಸಮುದಾಯದ ದಲಿತ ನಾಯಕಿ ಕೃಷ್ಣಾಕುಮಾರಿ ಕೊಹ್ಲಿ ಆಯ್ಕೆಯಾಗಿದ್ದಾರೆ. ಈ ಮೂಲ ಕ ಹೊಸ ಸಾಧನೆ ಮಾಡಿದ್ದಾರೆ.
ಕೃಷ್ಣಾ ಕುಮಾರಿ ಅವರನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಲ್ಪ ಸಂಖ್ಯಾತರ ಕೋಟಾದಡಿ ಟಿಕೆಟ್ ನೀಡಿ ಆಯ್ಕೆ ಮಾಡಿದೆ. ಪಾಕ್ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕೃಷ್ಣಾ ಆಯ್ಕೆ ಪ್ರಮುಖ ಮೈಲುಗಲ್ಲಾಗಲಿದೆ ಎಂದೇ ಬಣ್ಣಿಸಲಾಗು ತ್ತಿದೆ.
ಸಿಂಧ್ ಪ್ರಾಂತ್ಯದ ಥಾರ್ ಪ್ರದೇಶಕ್ಕೆ ಸೇರಿದ ಕೃಷ್ಣಾ 16ನೇ ವಯಸ್ಸಿನಲ್ಲಿಯೇ ವಿವಾಹವಾದರೂ, ಬಳಿಕ ವಿದ್ಯಾಭ್ಯಾಸ ಮುಂದುವರೆಸಿ, 2013ರಲ್ಲಿ ಪದವಿ ಪಡೆದು ನಂತರ ಪಿಪಿಪಿ ಜೊತೆ ಸೇರಿ ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡರು.

 

 

27

 ಜುಕರ್ಬರ್ಗ್ ಆಸ್ತಿ ಮೌಲ್ಯ ಇಳಿಕೆ!

ಮಾರ್ಚ್ 5

 

ನ್ಯೂಯಾರ್ಕ್: ಜಾಗತಿಕ ಷೇರುಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಭಾರಿ ಕುಸಿತ ಕಂಡುಬರುತ್ತಿದ್ದು, ವಿಶ್ವದ ಅಗ್ರ ಶ್ರೀಮಂತರು ಹತ್ತಾರು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಬಳಿಯಿದ್ದ ಷೇರುಗಳ ಒಟ್ಟೂ ಮೌಲ್ಯ ಸುಮಾರು 20 ಸಾವಿರ ಕೋಟಿ ರೂ. ಇಳಿಕೆ ಕಂಡಿದೆ. ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಲಾರ್ಜ್ ಕ್ಯಾಪ್ ಷೇರುಗಳಲ್ಲಿ ಇಳಿಕೆ ಕಂಡು ಬರುತ್ತಿರುವುದು ಇದಕ್ಕೆ ಕಾರಣವಾಗಿದೆ. ಗೂಗಲ್ ಸಹ ಸಂಸ್ಥಾಪಕ ಲಾರ್ರಿ ಪೇಜ್ ಹಾಗೂ ಸರ್ಜಿ ಬ್ರಿನ್ ತಲಾ 13 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ವಿಶ್ವದ 500 ಅತಿ ಶ್ರೀಮಂತರ ಬಳಿಯಿರುವ ಷೇರು ಮೌಲ್ಯ 7 ಲಕ್ಷ ಕೋಟಿ ರೂ. ಇಳಿಕೆಯಾಗಿದೆ.

 

 

    12

 ಕಿಮ್ ಜಾಂಗ್-ಉನ್ ವಿರುದ್ಧ ಅಮೆರಿಕ ವಾಗ್ದಾಳಿ

 ಜನೆವರಿ-4

 ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಎಚ್ಚರಿಕೆಯನ್ನು ಲೆಕ್ಕಿಸದೇ ಪದೇ ಪದೇ ವಿನಾಶಕಾರಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಾ ಜಗತ್ತಿನಲ್ಲಿ ಆತಂಕ ಸೃಷ್ಟಿಸಿ ಉದ್ಧಟನತನದ ಹೇಳಿಕೆ ನೀಡುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ವಿರುದ್ಧ ಅಮೆರಿಕ ವಾಗ್ದಾಳಿ ಮುಂದುವರಿಸಿದೆ. ಕಿಮ್ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಪ್ರಶ್ನಿಸಿರುವ ಶ್ವೇತಭವನ, ಆತ ಬಹುಶಃ ಮಾನಸಿಕ ಅಸ್ವಸ್ಥನಿರಬಹುದು ಎಂಬ ವ್ಯಂಗವಾಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ , ಕಿಮ್ ಮತ್ತೆ ಮತ್ತೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಅನೇಕ ವರ್ಷಗಳಿಂದ ಅಗಾಗ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಿ ವಿಶ್ವದಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಆತನ ಮಾನಸಿಕ ಸ್ವಾಸ್ಥ್ಯದ ಬಗ್ಗೆ ನಮಗೆ ಅನುಮಾನವಿದೆ ಎಂದು ಲೇವಡಿ ಮಾಡಿದ್ದಾರೆ.

 

   12

 ಕರ್ನಾಟಕಕ್ಕೂ ತಟ್ಟಿದ ಮುಂಬೈ ಬಂದ್ ಬಿಸಿ

 ಜನೆವರಿ-3

 ಮುಂಬೈ: ಭೀಮ ಕೊರೆಗಾಂವ್ ಕದನದ 200ನೇ ವರ್ಷಾಚರಣೆಯ ವೇಳೆ ಮಹಾರಾಷ್ಟ್ರದ ಪುಣೆಯಲ್ಲಿ ಆರಂಭವಾದ ಹಿಂಸಾಚಾರ ವಿಕೋಪಕ್ಕೆ ತಲುಪಿದೆ. ಮರಾಠರು ಮತ್ತು ದಲಿತರ ನಡುವಿನ ಈ ಕಲಹದಿಂದಾಗಿ ಇಂದು ಮಹಾರಾಷ್ಟ್ರದಾದ್ಯಂತ ಬಂದ್ ಆಚರಿಸಲಾಗುತ್ತಿದೆ.
ದಲಿತರ ಮೇಲೆ ಮರಾಠರು ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಬಿಬಿಎಂ (ಭರಿಪ ಬಹುಜನ ಮಹಾಸಂಘ) ಮುಖ್ಯಸ್ಥ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಮಹಾರಾಷ್ಟ್ರ ಬಂದ್ ಗೆ ಕರೆ ನೀಡಿದ್ದರು. ಇದಕ್ಕೆ ಬಹುಪಾಲು ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್ ನಿಮಿತ್ತ ಪುಣೆ, ಮುಂಬೈ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.ಜನವರಿ 1, 1818 ರಂದು ನಡೆದ ಕೊರೆಗಾಂವ್ ಕದನದಲ್ಲಿ ಪೇಶ್ವೆಗಳ ವಿರುದ್ಧ ಹೋರಾಡುವುದಕ್ಕೆ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪೆನಿಯೊಂದಿಗೆ ಕೈಜೋಡಿಸಿದ್ದ ಮೆಹರ್ ಸಮುದಾಯ ಈ ಹೋರಾಟದಲ್ಲಿ ಗೆಲುವು ಸಾಧಿಸಿತ್ತು. ಈ ಹೋರಾಟ ಬೀಮ ಕೊರೆಗಾಂವ್ ಎಂಬ ಪ್ರದೇಶದಲ್ಲಿ ನಡೆದಿದ್ದರಿಂದ ಇದನ್ನು ಭೀಮ ಕೊರೆಗಾಂವ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ.ಈ ದಿನದ 200 ವರ್ಷಾಚರಣೆಯನ್ನು ಜ.1 ರಂದು ಪುಣೆಯಲ್ಲಿ ಆಚರಿಸಲಾಗುತ್ತಿತ್ತು. ಈಸ್ಟ್ ಇಂಡಿಯಾ ಕಂಪೆನಿಯ ಗೆಲುವನ್ನು ಸಂಭ್ರಮಿಸುತ್ತಿರುವ ದಲಿತರ ನಡೆಯನ್ನು ಖಂಡಿಸಿ ಕೆಲವ ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಈ ಹಿಂಸಾಚಾರ ಆರಂಭವಾಗಿದೆ.

 

    12

 ಕೋರೆಗಾಂವ್ ಹಿಂಸಾಚಾರ: ಮಹಾರಾಷ್ಟ್ರ ಬಂದ್

 ಜನೆವರಿ-3

 ಮುಂಬೈ: ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬುಧವಾರ ಮಹಾರಾಷ್ಟ್ರ ರಾಜ್ಯವ್ಯಾಪಿ ಬಂದ್ ಕರೆ ನೀಡಿದ್ದು, ಬಂದ್ ಹಿನ್ನೆಲೆಯಲ್ಲಿ ಮುಂಬೈ ಸಹಿತ ರಾಜ್ಯದೆಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ.
1. ''ಮುಂಬೈನಲ್ಲಿ ಶಾಲಾ ಬಸ್ಗಳು ಓಡಾಡುತ್ತಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಭದ್ರತೆಯ ಬಗ್ಗೆ ರಿಸ್ಕ್ ತೆಗೆದುಕೊಳ್ಳಲಾರೆವು. ಬೆಳಗ್ಗೆ 11 ಗಂಟೆಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇವೆ'' ಎಂದು ಶಾಲಾ ಬಸ್ ಮಾಲಕರ ಸಂಸ್ಥೆಯ ಅನಿಲ್ ಗರ್ಗ್ ಹೇಳಿದ್ದಾರೆ.
2. ಜನವರಿ 4 ಮಧ್ಯರಾತ್ರಿ ತನಕ ಥಾಣೆ ಜಿಲ್ಲೆಯಲ್ಲಿ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.
3. ಮುಂಬೈ ಡಬ್ಬಾವಾಲಾಗಳ ಅಸೋಸಿಯೇಶನ್ ಬುಧವಾರ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಡಬ್ಬಾಗಳನ್ನು ಸಾಗಿಸಲು ಸಾರಿಗೆ ವ್ಯವಸ್ಥೆ ಸರಿಯಿಲ್ಲದ ಕಾರಣ ಈ ನಿರ್ಧಾರಕ್ಕೆ ಬಂದಿದ್ದಾರೆ.
4. ಥಾಣೆಯಲ್ಲಿ ಕೆಲವು ಪ್ರತಿಭಟನಾಕಾರರು ರೈಲ್ವೇ ಸೇವೆಗೆ ಧಕ್ಕೆ ಮಾಡಲು ಯತ್ನಿಸಿದ್ದು, ತಕ್ಷಣವೇ ಆರ್ಪಿಎಫ್ ಹಾಗೂ ಜಿಆರ್ಪಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
5.ಮುಂಬೈ ಪೊಲೀಸರು ಸೂಕ್ಷ್ಮ ಪ್ರದೇಶಗಳಾದ ಘಾಟ್ಕೋಪರ್ ರಮಾಬಾಯಿ ಕಾಲೋನಿ ಹಾಗೂ ಈಸ್ಟರ್ನ್ ಎಕ್ಸ್ಪ್ರೆಸ್ ಹೈವೇಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
6. ಪ್ರತಿಭಟನಾಕಾರರ ರ್ಯಾಲಿಯಿಂದ ಈಸ್ಟರ್ನ್ ಎಕ್ಸ್ಪ್ರೆಸ್ ಹೈವೇಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
7 ಪುಣೆಯ ಬಾರಾಮತಿ ಹಾಗೂ ಸತಾರಕ್ಕೆ ತೆರಳುವ ಬಸ್ ಸೇವೆಗಳನ್ನು ಮುಂದಿನ ಆದೇಶದ ತನಕ ಸ್ಥಗಿತಗೊಳಿಸಲಾಗಿದೆ.

8. ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಶಾಲೆಗಳ ಬಾಗಿಲು ತೆರೆದಿಲ್ಲ. ಶಾಲಾ ಬಸ್ಗಳು ಓಡಾಡುತ್ತಿಲ್ಲ. ಇಂದು ಕೆಲವು ಕಾಲೇಜುಗಳು ಬಾಗಿಲು ತೆರೆದಿವೆ. ಆದರೆ ಹಾಜರಾತಿ ಕೇವಲ ಶೇ.40ರಷ್ಟಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
9: ಕಲ್ಲುತೂರಾಟದ ಭಯದಿಂದ ಥಾಣೆ ಮುನ್ಸಿಪಲ್ ಸಾರಿಗೆಯ ಬೊರಿವಲಿ ಹಾಗೂ ಅಂಧೇರಿ ನಡುವೆ ಚಲಿಸುವ ಎಸಿ ವೋಲ್ವೊ ಬಸ್ ಸೇವೆಯನ್ನು ರದ್ದುಪಡಿಸಲಾಗಿದೆ.
10. ಔರಂಗಾಬಾದ್ ಜಿಲ್ಲೆಯ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಮಧ್ಯರಾತ್ರಿಯಿಂದ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
11. ಕೊಲ್ಲಾಪುರದಲ್ಲಿ ಮುನ್ಸಿಪಲ್ ಸಾರಿಗೆಯ ಎಲ್ಲ ಬಸ್ ಸೇವೆಗಳನ್ನು ನಿಲ್ಲಿಸಲಾಗಿದೆ.
12. ಬಂದ್ನಿಂದಾಗಿ ಪುಣೆ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮಬೀರಿದೆ. ಜನಜಂಗುಳಿಯಿರುವ ಸ್ವರ್ಗೆಟ್ ಹಾಗೂ ಶಿವಾಜಿನಗರದ ಬಸ್ ಡಿಪೋ ಬಿಕೋ ಎನ್ನುತ್ತಿದೆ. ಬಾರಾಮತಿ ಹಾಗೂ ಸತಾರದಿಂದ ಯಾವುದೇ ಬಸ್ ಆಗಮಿಸು.

 

    12

 ಮತ್ತೆ ಭಾರತ-ಚೀನಾ ಸೇನೆ ಮುಖಾಮುಖಿ?

 ಜನೆವರಿ-3

 ನವದೆಹಲಿ: ಡೊಕ್ಲಾಮ್ ವಿವಾದದ ನಂತರ ಭಾರತ ಮತ್ತು ಚೀನಾ ದೇಶದ ಭದ್ರತಾಪಡೆ ಕಳೆದೊಂದು ವಾರದಿಂದ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಬಿಶಿಂಗ್ ಸಮೀಪ ಮುಖಾಮುಖಿ ಯುದ್ಧಕ್ಕೆ ಸಜ್ಜಾಗಿದೆ ಎಂದು ಭದ್ರತಾ ಪಡೆ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.
ಬುಲ್ಡೊಝರ್ ಸಹಾಯದಿಂದ ಚೀನಾದ ರಸ್ತೆ ನಿರ್ಮಾಣ ತಂಡ ಭಾರತದೊಳಗೆ ಪ್ರವೇಶಿಸಿದೆ ಎಂದು ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಭಾರತೀಯ ಸೇನೆಗೆ ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ ನಂತರ ಭದ್ರತಾ ಪಡೆಗಳು ಗಡಿಯಲ್ಲಿ ನಿಯೋಜನೆಗೊಂಡು ಸಂಘರ್ಷಕ್ಕೆ ಸಜ್ಜಾಗಿವೆ.ಟ್ಯೂಟಿಂಗ್ ನಿಂದ ಮುಂದೆ ಸ್ಥಳವೊಂದರಲ್ಲಿ ನನ್ನ ಸ್ನೇಹಿತರು ವಾಹನ ಚಲಾಯಿಸುತ್ತಿದ್ದರು. ಅಲ್ಲಿ ಅವರನ್ನು ಸೇನಾಪಡೆ ತಡೆದು, ಚೀನಾ ಮತ್ತು ಭಾರತದ ಸೇನಾಪಡೆ ಅಲ್ಲಿ ನಿಲುಗಡೆಯಾಗಿದ್ದು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲಿನ ಸ್ಥಳೀಯರು ಕೂಡ ನನ್ನ ಸ್ನೇಹಿತನಿಗೆ ಈ ವಿಷಯ ದೃಢಪಡಿಸಿದ್ದಾರೆ ಎಂದು ಅರುಣಾಚಲ ಮೂಲದ ವಕೀಲ ಹಾಗೂ ಕಾರ್ಯಕರ್ತ ಹೇಳಿದ್ದಾರೆ.ಕನಿಷ್ಠ ಮೂರು ಸ್ವತಂತ್ರ ಮೂಲಗಳು ಈ ವಿಷಯವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ದೃಢಪಡಿಸಿದ್ದು ಸುಮಾರು 24 ಮಂದಿಯನ್ನು ಬಂಧಿಸಲಾಗಿದೆ. ಹೊಸ ವರ್ಷಕ್ಕೆ ಮುನ್ನ ಸೈನಿಕರು ನಿಲುಗಡೆಯಾಗಿದ್ದು ಈಗಲೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.ನಾವು ಈ ವಿಷಯವನ್ನು ದೊಡ್ಡದು ಮಾಡಿ ಇನ್ನೊಂದು ಡೊಕ್ಲಾಮ್ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಸರ್ಕಾರ ಈ ವಿಷಯವನ್ನು ಬಹಿರಂಗಪಡಿಸದಿರಲು ಹೇಳಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಅವರು ಕಳೆದ ವರ್ಷ ಭೂತಾನ್ ಭಾಗದಲ್ಲಿ ಭಾರತೀಯ ಮತ್ತು ಚೀನಾ ಸೇನಾಪಡೆಗಳು ಡೊಕ್ಲಾಮ್ ನಲ್ಲಿ 72 ದಿನಗಳ ಕಾಲ ನಡೆಸಿದ ಸಂಘರ್ಷದ ಬಗ್ಗೆ ಉಲ್ಲೇಖಿಸಿದ್ದಾರೆ. ಅಗತ್ಯ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಚೀನಾ ಭರವಸೆ ನೀಡಿದ ನಂತರ ಭಾರತೀಯ ಸೇನಾಪಡೆ ಸಿಕ್ಕಿಂ ಭಾಗದಲ್ಲಿ ಹಿಂತೆಗೆದುಕೊಂಡಿತ್ತು.

ಕಳೆದ ವಾರ ಅಂದರೆ ಡಿಸೆಂಬರ್ 28ರ ಸುಮಾರಿಗೆ ಅರುಣಾಚಲ ಪ್ರದೇಶದ ಗಡಿ ಮೂಲಕ ಭಾರತದೊಳಗೆ ಪ್ರವೇಶಿಸಿದ ರಸ್ತೆ ನಿರ್ಮಾಣ ತಂಡವನ್ನು ಗ್ರಾಮಸ್ಥರು ಗುರುತಿಸಿದ್ದರು. ತಂಡದಲ್ಲಿ ನಾಗರಿಕರು ಮತ್ತು ಸಮವಸ್ತ್ರ ಧರಿಸಿದ್ದವರು ಕೂಡ ಇದ್ದರು. ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಪೊಲೀಸರು ಇಂಡೊ-ಟಿಬೆಟಿಯನ್ ಗಡಿ ಸಿಬ್ಬಂದಿಗೆ ವಿಷಯ ತಲುಪಿಸಿದಾಗ ಬಿಶಿಂಗ್ ಸಮೀಪ ಮೆಡೊಗ್ ಎಂಬಲ್ಲಿ ಭದ್ರತಾಪಡೆಯನ್ನು ನಿಯೋಜಿಸಿದರು. ಯರ್ಲಂಗ್ ಸುಂಗ್ಪೋ ನದಿ ಭಾರತೀಯರು ಸಿಯಾಂಗ್ ಎಂದು ಕರೆಯುವ ನದಿಯ ಉತ್ತರ ಭಾಗವನ್ನು ಚೀನಾಪಡೆ ಪ್ರವೇಶಿಸಿದೆ. ಇಂಡೊ-ಟಿಬೆಟಿಯನ್ ಭದ್ರತಾ ಪಡೆ ಚೀನೀಯರಿಗೆ ಅಲ್ಲಿಂದ ಹೊರಟು ಹೋಗುವಂತೆ ಸೂಚಿಸಿದೆ. ಮಾತಿನ ಘರ್ಷಣೆ ಕೂಡ ನಡೆದಿದೆ. ಆದರೆ ಚೀನೀಯರು ಹಿಂತಿರುಗಲು ನಿರಾಕರಿಸಿದರು. ಇದಕ್ಕೆ ಭಾರತೀಯ ಸೇನೆ ಗಸ್ತುಪಡೆಯನ್ನು ಆ ಪ್ರದೇಶಕ್ಕೆ ಕಳುಹಿಸಿದ್ದು, ಇದೀಗ ಅಲ್ಲಿ ಭದ್ರತಾಪಡೆ ಠಿಕಾಣಿ ಹೂಡಿದೆ.ಈ ಬಗ್ಗೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಕಚೇರಿಯನ್ನು ವಿಚಾರಿಸಿದರೆ ಘಟನೆ ಬಗ್ಗೆ ಅಸಡ್ಡೆ ತೋರಿದರು. ಇನ್ನು ಸ್ಥಳೀಯ ಸಂಸದ ನಿನೊಂಗ್ ಎರಿಂಗ್ ಅವರಿಗೆ ಸೇನಾಪಡೆಯ ನಿಲುಗಡೆ ಬಗ್ಗೆ ಮಾಹಿತಿ ಇಲ್ಲ ಎಂದರು. ಗೆಲ್ಲಿಂಗ್ ಗ್ರಾಮ ದಾಟಿ ಜನರು ಹೋಗಲು ಸೇನಾಪಡೆ ಬಿಡುವುದಿಲ್ಲ. ಅಂತಾರಾಷ್ಟ್ರೀಯ ಗಿಡಿಭಾಗಕ್ಕೆ ಟ್ಯುಟಿಂಗ್ ಪಟ್ಟಣದ ನಂತರ ಗೆಲ್ಲಿಂಗ್ ಮುಂದಿನ ಆಡಳಿತಾತ್ಮಕ ವಲಯವಾಗಿದೆ ಎನ್ನುತ್ತಾರೆ ವಕೀಲ ಕಾರ್ಯಕರ್ತರು.ಡೊಕ್ಲಾಮ್ ಜೊತೆ ಹೋಲಿಕೆ ಮಾಡುವುದು ಸುಲಭವಾದರೂ ಈ ವಿಚಾರದಲ್ಲಿ ಸರಿಯಲ್ಲ. ಡೊಕ್ಲಾಮ್ ವಿವಾದದಲ್ಲಿ ಭೂತಾನ್ ದೇಶ ಕೂಡ ಒಳಗೊಂಡಿತ್ತು. ಆದರೆ ಈ ವಿಷಯದಲ್ಲಿ ಮೆಕ್ ಮೊಹಲ್ ರೇಖೆಯಿಂದ 4 ಕಿಲೋ ಮೀಟರ್ ದೂರದಲ್ಲಿ ಭಾರತದ ಪ್ರಾಂತ್ಯದೊಳಗೆ ಭಾರತ ಮತ್ತು ಚೀನಾ ಸೇನಾಪಡೆ ನಿಲುಗಡೆಯಾಗಿದೆ ಎಂಬುದು ಕೆಲವರು ಅಭಿಪ್ರಾಯ.

 

    12

 ಉದ್ಯೋಗ ಕಳೆದುಕೊಳ್ಳಲಿದ್ದಾರಾ ಐದು ಲಕ್ಷ ಭಾರತೀಯರು!

 ಜನೆವರಿ-3

 ವಾಷಿಂಗ್ಟನ್: ಅಮೆರಿಕದಲ್ಲಿರುವ ಭಾರತೀಯರ ಪಾಲಿಗೆ ಡೊನಾಲ್ಡ್ ಟ್ರಂಪ್ ವಿಲನ್ ಆಗಿಬಿಡುತ್ತಿದ್ದಾರಾ..? ಒಂದೊಮ್ಮೆ ಅವರ ಆಡಳಿತದ ಬಹು ನಿರೀಕ್ಷಿತ ಯೋಜನೆಯೊಂದು ಜಾರಿಗೆ ಬಂದಿದ್ದೇ ಆದಲ್ಲಿ ಅಮೆರಿಕದಲ್ಲಿರುವ 5 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಉದ್ಯೋಗ ಕಳೆದುಕೊಳ್ಳೋದು ಗ್ಯಾರಂಟಿ!
ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಅಗತ್ಯವಿರುವ ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿರುವವರ H-11 ವೀಸಾ ಅವಧಿಯನ್ನು ವಿಸ್ತರಿಸದಿರಲು ಡೊನಾಲ್ಡ್ ಟ್ರಂಪ್ ಆಡಳಿತ ತೀರ್ಮಾನಿಸಿದ್ದೇ ಆದಲ್ಲಿ ಇಲ್ಲಿರುವ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ.ಅಮೆರಿಕದ ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗ ಹೇಳುವ ಪ್ರಕಾರ, 'ಈ ಹೊಸ ನಿಯಮ ಜಾರಿಗೆ ಬಂದರೆ ಭಾರತೀಯರಿಗೆ ಅಮೆರಿಕದಲ್ಲಿ ಉದ್ಯೋಗ ಪಡೆಯಲು ಅಗತ್ಯವಾದ ಊ-1ಃ ವೀಸಾ ಅವಧಿಯನ್ನು ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೇ ಹೆಚ್ಚು ಉದ್ಯೋಗ ನೀಡುವ, ಅಮೆರಿಕ ಪ್ರಜೆಗಳನ್ನು ಹೆಚ್ಚು ಆರ್ಥಿಕವಾಗಿ ಭದ್ರಗೊಳಿಸುವ ಉದ್ದೇಶ ಹೊಂದಿರುವುದರಿಂದ ಈ ನಿಯಮ ಜಾರಿಗೆ ಬರುವ ಎಲ್ಲಾ ಸಾಧ್ಯತೆಗಳಿವೆ'ಈಗಿರುವ ನಿಯಮದ ಪ್ರಕಾರ H-11 ವೀಸಾ ಹೊಂದಿರುವ ವಿದೇಶಿಯರಿಗೆ ಮೂರು ವರ್ಷಗಳ ಕಾಲ ವೀಸಾ ಕಾಲಾವಧಿ ನಿಗದಿಯಾಗಿರುತ್ತದೆ. ನಂತರ ಅದನ್ನು ಮತ್ತೆ ಮೂರು ವರ್ಷದವರೆಗೆ ವಿಸ್ತರಿಸಬಹುದು. ಈ ಆರು ವರ್ಷದ ನಂತರ ವ್ಯಕ್ತಿ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಗ್ರೀನ್ ಕಾರ್ಡ್ ಪಡೆಯುವವರೆಗೆ ಅನಿರ್ದಿಷ್ಟಾವಧಿ ಈ H-11 ವೀಸಾ ಕಾಲಾವಧಿಯನ್ನು ಇಷ್ಟು ದಿನ ವಿಸ್ತರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಯಾವುದೇ ರೀತಿಯಲ್ಲಿ ಇದನ್ನು ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ ಎಂಬುದು ಈ ನಿಯಮದ ಸಾರ.ಈಗಾಗಲೇ ಚೀನಾ ಮತ್ತು ಭಾರತದಿಂದ ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಸಾಕಷ್ಟಿದೆ. ಅವರೆಲ್ಲ 10-12 ವರ್ಷಗಳಿಂದ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿದ್ದಾರೆ. ಯಾರ್ಯಾರ ಗ್ರೀನ್ ಕಾರ್ಡ್ ಪ್ರಕ್ರಿಯೆ ಪ್ರಗತಿಯಲ್ಲಿದೆಯೋ ಅವರು ಗ್ರೀನ್ ಕಾರ್ಡ್ ಪಡೆಯುವವರೆಗೂ ಅಮೆರಿಕದಲ್ಲಿ ನೆಲೆಸಲು ಈಗಲೂ ಅವಕಾಶ ಕಲ್ಪಿಸಲಾಗಿದೆ.

 

 

    12

 ನ್ಯೂಕ್ಲಿಯರ್ ಬಾಂಬ್ ಬಟನ್ ನನ್ನ ಬಳಿ ಇದೆ: ಟ್ರಂಪ್

 ಜನೆವರಿ-3

 ವಾಷಿಂಗ್ಟನ್: ಸದಾಕಾಲ ಯುದ್ಧೋತ್ಸಾಹದ ಹೇಳಿಕೆ ನೀಡುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ತಿರುಗೇಟು ನೀಡಿದ್ದಾರೆ.
ಹೊಸ ವರ್ಷದ ಮೊದಲ ಭಾಷಣದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದ ಕಿಮ್ ಜಾಂಗ್ ಉನ್ ಅವರು, ಅಣ್ವಸ್ತ್ರದ ಬಟನ್ ಸದಾ ನನ್ನ ಮೇಜಿನ ಮೇಲೆಯೇ ಇರುತ್ತದೆ ಹುಷಾರಾಗಿರಿ ಎಂದು ಎಚ್ಚರಿಸಿದ್ದರು.ಪಯೋಂಗ್ಯಾಂಗ್ ಮತ್ತು ಸಿಯೋಲ್ ಜೊತೆಗಿನ ಉನ್ನತ ಮಟ್ಟದ ಮಾತುಕತೆಗೆ ನಿರಾಕರಿಸಿರುವ ಟ್ರಂಪ್ ಅವರು, ಟ್ವಿಟರ್ ನಲ್ಲಿ ಕಿಮ್ ಜಾಂಗ್ ಉನ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರದ ಬಟನ್ ಸದಾಕಾಲ ತಮ್ಮ ಟೇಬಲ್ ಮೇಲಿರುತ್ತದೆ ಎಂದು ಹೇಳಿದ್ದಾರೆ. ದಯವಿಟ್ಟು ಅವರಿಗೂ ತಿಳಿಸಿ ನನ್ನ ಬಳಿಯೂ ಅಣ್ವಸ್ತ್ರದ ಬಟನ್ ಇದ್ದು, ಅದು ಉತ್ತರ ಕೊರಿಯಾ ನಾಯಕನ ಬಳಿಯಿರುವ ಅಣ್ವಸ್ತ್ರಕ್ಕಿಂತಲೂ ದೊಡ್ಡದಾಗಿದೆ ಹಾಗೂ ಪ್ರಭಾವಶಾಲಿಯಾಗಿದೆ. ನನ್ನ ಬಳಿಯಿರುವ ಬಟನ್ ಕೆಲಸಮಾಡುತ್ತಿದೆ ಎಂದು ಎಂದು ಹೇಳಿದ್ದಾರೆ.

 

 

     12

 ಪಾಕಿಗೆ ಎಲ್ಲ ನೆರವು ನಿಲ್ಲಿಸುವೆವು: ನಿಕ್ಕಿ ಹ್ಯಾಲಿ ಖಡಕ್

 ಜನೆವರಿ-3

 ವಾಷಿಂಗ್ಟನ್ : ಪಾಕಿಸ್ಥಾನಕ್ಕೆ 25.50 ಕೋಟಿ ಡಾಲರ್ಗಳ ಮಿಲಿಟರಿ ನೆರವನ್ನು ಅಮಾನತುಗೊಳಿಸಿದ ಒಂದು ದಿನದ ತರುವಾಯ ಅಮೆರಿಕ "ಪಾಕಿಸ್ಥಾನ ಹಲವಾರು ವರ್ಷಗಳಿಂದ ಅಮೆರಿಕದ ವಿರುದ್ಧ ಡಬಲ್ ಗೇಮ್ ಆಡಿಕೊಂಡು ಬಂದಿದೆ' ಎಂದು ಹೇಳಿದ್ದು ಆ ಮೂಲಕ ಆ ದೇಶಕ್ಕೆ ಮಿಲಿಟರಿ ನೆರವನ್ನು ತಡೆಹಿಡಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. 
ಈ ನುಡವೆ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ, ಭಾರತೀಯ ಮೂಲದವರಾಗಿರುವ ನಿಕ್ಕೀ ಹ್ಯಾಲಿ ಅವರು "ಪಾಕಿಸ್ಥಾನ ಇಷ್ಟು ವರ್ಷವೂ ಭಯೋತ್ಪಾದನೆಯನ್ನು ಮಟ್ಟ ಹಾಕುವುದಾಗಿ ಹೇಳಿಕೊಂಡು ಅಮೆರಿಕದ ಜತೆಗೂಡಿ ತೋರಿಕೆಯ ಕೆಲಸ ಮಾಡಿಕೊಂಡಿ ಬಂದಿದೆ; ಅದರ ಜತೆಗೇ ಅದು ತನ್ನ ನೆಲದಲ್ಲಿ ವಿವಿಧ ಉಗ್ರ ಸಂಘಟನೆಗಳನ್ನು ಪೋಷಿಸಿಕೊಂಡು ಆಸರೆ ನೀಡಿ ಅಮೆರಿಕದ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿದೆ' ಎಂದು ಹೇಳಿದರು."ಪಾಕಿಸ್ಥಾನ ಈ ರೀತಿ ನಮ್ಮನ್ನು ಮೂರ್ಖರನ್ನಾಗಿಸಿ ಅಫ್ಘಾನಿಸ್ಥಾನದಲ್ಲಿನ ನಮ್ಮ ಸೈನಿಕರನ್ನೇ ಕೊಂದು ಮುಗಿಸುವ ಡಬಲ್ ಗೇಮ್ ಆಡುತ್ತಾ ಬಂದಿರುವುದನ್ನು ನಾವಿನ್ನು ಸಹಿಸಿಕೊಳ್ಳುವಂತಿಲ್ಲ. ಆದುದರಿಂದ ಪಾಕಿಸ್ಥಾನಕ್ಕೆ ನಾವು ಕೊಡುತ್ತಿರುವ ಎಲ್ಲ ನೆರವನ್ನು ನಿಲ್ಲಿಸಲು ಬಯಸಿದ್ದೇವೆ' ಎಂದು ನಿಕ್ಕಿ ಹ್ಯಾಲಿ ಹೇಳಿದರು. ಅಮೆರಿಕಕ್ಕೆ ಇರಾನ್ ಮತ್ತು ಉತ್ತರ ಕೊರಿಯದ ಬಳಿಕ ಮೂರನೇ ಕಳವಕಳಕಾರಿ ರಾಷ್ಟ್ರವಾಗಿರುವುದು ಪಾಕಿಸ್ಥಾನ; ಆದುದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ಥಾನಕ್ಕೆ ನೀಡುವ ಎಲ್ಲ ನೆರವುಗಳನ್ನು ಶಾಶ್ವತವಾಗಿ ನಿಲ್ಲಿಸಲು ಬಯಸಿದ್ದಾರೆ' ಎಂದು ಹ್ಯಾಲಿ ಹೇಳಿದರು.

 

      12

 ಬಂದೂಕುಧಾರಿಗಳ ಅಟ್ಟಹಾಸಕ್ಕೆ 20ಕ್ಕೂ ಹೆಚ್ಚು ಬಲಿ

 ಜನೆವರಿ-2

 ನೈಜಿರಿಯಾ: ಚರ್ಚ್ನಲ್ಲಿ ಹೊಸ ವರ್ಷದ ಮಧ್ಯರಾತ್ರಿ ಪ್ರಾರ್ಥನೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಭಕ್ತರ ಮೇಲೆ ಬಂದೂಕುದಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಹತರಾಗಿರುವ ಘಟನೆ ನೈಜಿರಿಯಾದ ರಿವರ್ಸ್ ಸ್ಟೇಟ್ನಲ್ಲಿ ನಡೆದಿದೆ. ತೈಲ ಸಮೃದ್ಧ ಪ್ರಾಂತ್ಯದಲ್ಲಿ ನಡೆದ ಇತ್ತೀಚಿನ ಭೀಕರ ಹಿಂಸಾಚಾರ ಇದಾಗಿದೆ.ದೇಶದ ದಕ್ಷಿಣ ತೈಲ ತಾಣ ಪೋರ್ಟ್ ಹರ್ಕೋರ್ಟ್ನಿಂದ 80 ಕಿ.ಮೀ.ದೂರದಲ್ಲಿರುವ ಒಮೊಕು ಪಟ್ಟಣದಲ್ಲಿ ಹೊಸ ವರ್ಷದ ಮೊದಲ ದಿನವೇ ನಡೆದ ಈ ಬರ್ಬರ ಹತ್ಯಾಕಾಂಡದಿಂದ ಆಫ್ರಿಕನ್ನರು ಹೆದರಿ ಕಂಗಲಾಗಿದ್ದಾರೆ. ನಿನ್ನೆ ಮಧ್ಯರಾತ್ರಿ 12.30ರ ಸಮಯದಲ್ಲಿ ಬಂದೂಕುದಾರಿಗಳು ಚರ್ಚ್ ಭಕ್ತರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ 12 ಮಂದಿ ಸ್ಥಳದಲ್ಲೇ ಹತರಾದರೆ, ಇತರ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ರಿವರ್ಸ್ ಸ್ಟೇಟ್ನ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ನಮ್ಡಿ ಒಮೋನಿ ಹೇಳಿದ್ದಾರೆ. ಈ ನರಮೇಧ ನಡೆಸಿದ ಬಂಡುಕೋರರ ವಿರುದ್ಧ ಮಾನವ ಬೇಟೆ ಆರಂಭಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅಹಮದ್ ಜಾಖಿ ಹೇಳಿದ್ದಾರೆ.

 

88

 ವಿಶ್ವಸಂಸ್ಥೆ ನಿರ್ಬಂಧದ ಹೊರತಾಗಿಯೂ ಇಂಧನ ರಫ್ತು!

ಡಿಸೆಂಬರ್-28
ವಾಷಿಂಗ್ಟನ್: ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಮೂಲಕ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ನಿರ್ಬಂಧಕ್ಕೆ ಗುರಿಯಾಗಿರುವ ಉತ್ತರ ಕೊರಿಯಾಗೆ ಆ ದೇಶದ ಆಪ್ತ ರಾಷ್ಟ್ರ ಚೀನಾ ಇಂಧನ ರಫ್ತು ಮಾಡುವ ಮೂಲಕ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದೆ.
ಚೀನಾದ ಈ ನಡೆ ಇದೀಗ ವಿಶ್ವಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದು, ಚೀನಾ ದೇಶದ ವಿರುದ್ಧ ಅಮೆರಿಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡಿದ್ದು, ಚೀನಾ ದೇಶ ಉತ್ತರ ಕೊರಿಯಾಗೆ ಇಂಧನ ರಫ್ತು ಮಾಡುವ ಮೂಲಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ಚೀನಾದ ದೇಶದ ನಡೆ ಅಮೆರಿಕಕ್ಕೆ ನಿಜಕ್ಕೂ ಆಘಾತ ತಂದಿದೆ. ಕೊರಿಯನ್ನರ ಸಮಸ್ಯೆಗಳಿಗೆ ಇದು ಎಂದಿಗೂ ಶಾಶ್ವತ ಪರಿಹಾರವಾಗಲು ಸಾಧ್ಯವಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕದ ಉಪಗ್ರಹಗಳು ಚೀನಾದ ಶಿಪ್ ಗಳು ಉತ್ತರ ಕೊರಿಯಾಗೆ ಇಂಧನ ರಫ್ತು ಮಾಡಿರುವ ಚಿತ್ರಗಳನ್ನು ಸೆರೆ ಹಿಡಿದಿದ್ದವು. ಕಳೆದ ಮೂರು ತಿಂಗಳಿನಿಂದ ಚೀನಾ ಪಶ್ಚಿಮ ಸಮುದ್ರದ ಮೂಲಕ ಸುಮಾರು 30 ಬಾರಿ ಉತ್ತರ ಕೊರಿಯಾಗೆ ಇಂಧನ ರಫ್ತು ಮಾಡಿರುವ ಕುರಿತು ಉಪಗ್ರಹಗಳು ಚಿತ್ರಗಳ ಸಾಕ್ಷ್ಯ ಒದಗಿಸಿದ್ದವು. ಇನ್ನು ಈ ಹಿಂದೆ ವಿಶ್ವಸಂಸ್ಥೆ ಅಣ್ವಸ್ತ್ರ ಪರೀಕ್ಷೆ ಬಳಿಕ ಉತ್ತರ ಕೊರಿಯಾ ಇಂಧನ ರಫ್ತಿನ ಮೇಲೆ ನಿಯಂತ್ರಣ ಹೇರಿತ್ತು.
ಇನ್ನು ಅಮೆರಿಕ ಆರೋಪವನ್ನು ಚೀನಾ ತಿರಸ್ಕರಿಸಿದ್ದು, ತಾನು ಉತ್ತರ ಕೊರಿಯಾಗಿ ಇಂಧನ ಮಾರಾಟ ಮಾಡಿಲ್ಲ ಎಂದು ಹೇಳಿದೆ.

 

 

33

  ಬೆಂಕಿ ಅವಘಡಕ್ಕೆ 12 ಮಂದಿ ಬಲಿ

ಡಿಸೆಂಬರ್-28

ನ್ಯೂಯಾರ್ಕ್ : ನ್ಯೂಯಾರ್ಕ್ ನಲ್ಲಿ ಕಳೆದ ಒಂದು ದಶಕದಲ್ಲೇ ಸಂಭವಿಸಿರುವ ಅತ್ಯಂತ ಭೀಕರ ಅಗ್ನಿ ದುರಂತದ ಘಟನೆಯಾಗಿ ಬ್ರಾಂಕ್ಸ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ನಿನ್ನೆ ರಾತ್ರಿ ಸಂಭವಿಸಿರುವ ಬೆಂಕಿ ಅವಘಡದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ತೀವ್ರ ಸುಟ್ಟ ಗಾಯಗಳಿಗೆ ಗುರಿಯಾಗಿರುವ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಾಂಕ್ಸ್ ಝೂ ಎದುರುಗಡೆ ಇರುವ 25 ಅಪಾರ್ಟ್ಮೆಂಟ್ ಐದು ಅಂತಸ್ತುಗಳ ಬ್ರಾಂಕ್ಸ್ ಅಪಾರ್ಟ್ಮೆಂಟಿನಲ್ಲಿ ಸ್ಥಳೀಯ ಕಾಲಮಾನ ರಾತ್ರಿ 7 ಗಂಟೆಯ ಹೊತ್ತಿಗೆ ಅಗ್ನಿ ದುರಂತ ಸಂಭವಿಸಿತು. ಬ್ರಾಂಕ್ಸ್ ಝೂ ನ್ಯೂಯಾರ್ಕ್ ಮಹಾನಗರದ ಅತ್ಯಂತ ಪ್ರಸಿದ್ಧ ಪ್ರವಾಸೀ ತಾಣವಾಗಿದೆ.
ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾಗಿರುವ 12 ಮಂದಿಯಲ್ಲಿ ಒಂದು ವರ್ಷದ ಹಸುಳೆ ಕೂಡ ಸೇರಿದೆ. ಶೂನ್ಯಕ್ಕಿಂತ ಕೆಳಗಿನ ತಾಪಮಾನದಲ್ಲಿ ನಡುಗುವ ಚಳಿಯಲ್ಲಿ ಕಟ್ಟಡದಿಂದ ಹೊರ ಧಾವಿಸಿ ಬಂದವರಿಗೆ ಬ್ಲಾಂಕೆಟ್ಗಳನ್ನು ಕೊಟ್ಟು ಅವರನ್ನು ಸಮೀಪದ ಶಾಲೆಯಲ್ಲಿನ ತಾತ್ಕಾಲಿಕ ಆಸರೆ ತಾಣಕ್ಕೆ ಕಳುಹಿಸುವ ಕೆಲಸದಲ್ಲಿ ರೆಡ್ ಕ್ರಾಸ್ ಕಾರ್ಯಕರ್ತರು ನಿರತರಾಗಿರುವ ದೃಶ್ಯ ಕಂಡು ಬಂದಿದೆ.
ಮೊದಲು ಒಂದನೇ ಅಂತಸ್ತಿನಲ್ಲಿ ಕಾಣಿಸಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆಯೇ ಎಲ್ಲ ಐದು ಮಹಡಿಗಳಿಗೂ ಹಬ್ಬಿತು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಈ ತನಕವೂ ಗೊತ್ತಾಗಿಲ್ಲ.
ಸಮರೋಪಾದಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿ ಸಿಲುಕಿಕೊಂಡವರನ್ನು ಪಾರುಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕನಿಷ್ಠ 12 ಮಂದಿಯನ್ನು ಅವರು ರಕ್ಷಿಸಿ ಕಟ್ಟಡದಿಂದ ಹೊರ ತಂದಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿ ಕಳೆದ ಎರಡೇ ವಾರಗಳಲ್ಲಿ ಸಂಭವಿಸಿರುವ ಎರಡನೇ ಅಗ್ನಿ ದುರಂತ ಇದಾಗಿದೆ. ಕಳೆದ ಡಿ.18ರಂದು ಬ್ಲೂಕ್ಲಿನ್ನ ಶೀಪ್ಶೆಡ್ ಬೇ ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ತಾಯಿ ಮತ್ತು ಆಕೆಯ 3 ವರ್ಷದ ಮಗು ಮೃತಪಟ್ಟಿತ್ತು.

 

 

030  ಭೀಕರ ಸ್ಫೋಟ, ಕನಿಷ್ಟ 40 ಸಾವು, ಹಲವರಿಗೆ ಗಾಯ
ಡಿಸೆಂಬರ್-28
ಕಾಬುಲ್: ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಕನಿಷ್ಛ 40 ಮಂದಿ ಸಾವಿಗೀಡಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ.
ಕಾಬುಲ್ ನ ಟೆಬಿಯಾನ್ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರದಲ್ಲಿ ಇಂದು ಉಗ್ರರು ತಮ್ಮ ಅಟ್ಟಹಾಸ ಮೆರೆದಿದ್ದು, ಆತ್ಮಹತ್ಯಾ ದಾಳಿಕೋರನೋರ್ವ ತುಂಬಿದ ಸಭೆಯಲ್ಲಿ ತನ್ನನು ತಾನು ಸ್ಫೋಟಿಸಿಕೊಳ್ಳುವ ಮೂಲಕ 40 ಮಂದಿಯ ಸಾವಿಗೆ ಕಾರಣನಾಗಿದ್ದಾನೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಾಕಿಸ್ತಾನದ ಸುದ್ದಿ ಸಂಸ್ಥೆ ಅಲ್ ಜಜೀರಾ ವರದಿ ಮಾಡಿರುವಂತೆ ಆಫ್ಘಾನಿಸ್ತಾನದ ಸುದ್ದಿ ವಾಹಿನಿ ಆಫ್ಘನ್ ವಾಯ್ಸ್ ಕಚೇರಿಯ ಸಮೀಪದಲ್ಲಿರುವ ಟೆಬಿಯಾನ್ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರದಲ್ಲಿ ಉಗ್ರರು ದಾಳಿ ಮಾಡಿದ್ದು, ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಉಗ್ರ ದಾಳಿಯ ವೇಳೆ ಆಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಸೇರಿದ್ದರು ಎಂದು ವರದಿ ಮಾಡಿದೆ. ಘಟನೆಯಲ್ಲಿ ಸುದ್ದಿ ಸಂಸ್ಥೆಯ ಕಚೇರಿ ಹಾಗು ಪತ್ರಕರ್ತರಿಗೆ ತೊಂದರೆ ಅಥವಾ ಸಾವುನೋವುಗಳಾದ ಕುರಿತು ವರದಿಯಾಗಿಲ್ಲ.
ಘಟನೆಯನ್ನು ಆಫ್ಘಾನಿಸ್ತಾನ ಪತ್ರಕರ್ತರ ಸಂಘ ಕಟು ಶಬ್ದಗಳಿಂದ ಖಂಡಿಸಿದ್ದು, ಸೂಕ್ತ ಭದ್ರತೆ ಕೈಗೊಳ್ಳುವಂತೆ ಆಪ್ಘನ್ ಸರ್ಕಾರಕ್ಕೆ ಆಗ್ರಹಿಸಿದೆ. ಇನ್ನು ದಾಳಿ ಸಂಬಂಧ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ. ಸ್ಥಳೀಯ ತಾಲಿಬಾನ್ ಸಂಘಟನೆ ಕೂಡ ದಾಳಿಯನ್ನು ತಾನು ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.

 

 

444 ಲಂಡನ್ ವಿಶ್ವಚೆಸ್ ಕೂಟದ 'ಕಾಮಸೂತ್ರ ಭಂಗಿ'ಚಿಹ್ನೆ ವಿವಾದ!
ಡಿಸೆಂಬರ್-27
ಲಂಡನ್: 2018ರ ವಿಶ್ವ ಚೆಸ್ ಕೂಟಕ್ಕೆ ಲಂಡನ್ ಆತಿಥ್ಯ ವಹಿಸಲಿದ್ದು ಟೂರ್ನಿ ಆರಂಭಕ್ಕೂ ಮುನ್ನ ವಿವಾದಕ್ಕೆ ಸಿಲುಕಿದೆ.
ಪಂದ್ಯಾವಳಿಗೆ ಸಂಬಂಧಿಸಿದಂತೆ ಸಂಘಟಕರು ಕೂಟದ ಚಿಹ್ನೆಯನ್ನು ಬಿಡುಗಡೆ ಮಾಡಿದ್ದು ಲೈಂಗಿಕ ಕ್ರಿಯೆ ನಡೆಸುವ ಭಂಗಿಯಲ್ಲಿ ಚಿಹ್ನೆ ರಚಿಸಲಾಗಿದೆ. ಇದು ಇದೀ ವಿವಾದಕ್ಕೆ ಕಾರಣವಾಗಿದೆ.
ಚಿಹ್ನೆಯನ್ನು ಕೂಲಂಕುಶವಾಗಿ ಗಮನಿಸಿದಾಗ ಕಾಮಸೂತ್ರ ಭಂಗಿಯನ್ನು ಹೋಲುತ್ತದೆ. ಅದೇ ಚಿಹ್ನೆಯನ್ನು ವತ್ತೆ ಸರಿಯಾಗಿ ದಿಟ್ಟಿಸಿದರೆ ಇಬ್ಬರು ವ್ಯಕ್ತಿಗಳು ಚೆಸ್ ಆಡುವಂತೆಯೂ ಕಾಣುತ್ತದೆ.
ವಿವಿಧ ಅರ್ಥ, ಅನರ್ಥಕ್ಕೆ ದಾರಿ ಮಾಡಿಕೊಡುವ ಚಿಹ್ನೆಯನ್ನು ಹಲವಾರು ಮಂದಿ ಟೀಕಿಸಿದ್ದಾರೆ. ಭವಿಷ್ಯದ ಆಟಗಾರರ ಮೇಲೆ ಕೂಟದ ಚಿಹ್ನೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

 

 

    12

 ಕುಲಭೂಷಣ್ ಜಾಧವ್ ರನ್ನು ಭೇಟಿಯಾದ ಪತ್ನಿ, ತಾಯಿ

 ಡಿಸೆಂಬರ್-25

 ಇಸ್ಲಾಮಾಬಾದ್: ಪಾಕಿಸ್ತಾನ ತಲುಪಿರುವ ಕುಲಭೂಷಣ್ ಜಾಧವ್ ಅವರ ಪತ್ನಿ ಹಾಗು ತಾಯಿ ಕುಲಭೂಷಣ್ ರನ್ನು ಭೇಟಿಯಾಗಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿಯು ಜಾಧವ್ ಅವರ ಪತ್ನಿ ಹಾಗು ತಾಯಿ ಕಚೇರಿಯಲ್ಲಿ ಕುಳಿತಿರುವ ಫೋಟೊವನ್ನು ಟ್ವೀಟ್ ಮಾಡಿದೆ. ಜಾಧವ್ ರ ತಾಯಿ ಆವಂತಿ ಜಾಧವ್ ಮತ್ತು ಪತ್ನಿ ಚೇತಂಕುಲ್ ಜಾಧವ್ ಜೊತೆ ಭಾರತೀಯ ಡೆಪ್ಯುಟಿ ಹೈ ಕಮಿಷನರ್ ಜೆ.ಪಿ. ಸಿಂಗ್ ಇದ್ದರು,ಜಾಧವ್ ಹಾಗು ಕುಟುಂಬಸ್ಥರ ಭೇಟಿಯ ಹಿನ್ನೆಲೆಯಲ್ಲಿ ಭಿಗಿ ಭದ್ರತೆಯನ್ನು ಕಲ್ಪಿಸಲಾಗಿತ್ತು,. ಸುಮಾರು 30 ನಿಮಿಷಗಳ ಕಾಲ ಇವರು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಆದರೆ ಜಾಧವ್ ಹಾಗು ಕುಟುಂಬಸ್ಥರನ್ನು ಬೇರೆ ಬೇರೆ ಕೋಣೆಯಲ್ಲಿ ಇರಿಸಲಾಗಿತ್ತು. ಕೋಣೆಗಳ ನಡುವೆ ಕನ್ನಡಿ ಇದ್ದು ಆ ಮೂಲಕ ಪರಸ್ಪರ ನೋಡಿದರು ಹಾಗು ಮಾತುಕತೆ ನಡೆಸಿದರು.

 

44

 ಅಮೆರಿಕದಲ್ಲಿ ಯುದ್ಧ : ಸೇನಾಧಿಕಾರಿಯಿಂದ ಸುಳಿವು..!

 ಡಿಸೆಂಬರ್ -25
ವಾಷಿಂಗ್ಟನ್ : ಯುದ್ಧ ಸಮೀಪಿಸುತ್ತಿದೆ, ಸಿದ್ಧರಾಗಿರಿ ಎಂದು ಅಮೆರಿಕದ ನೌಕಾ ಪಡೆಯ ಕಮಾಂಡೆಂಟ್, ನಾರ್ವೆಯ ತಮ್ಮ ಸೇನಾ ತುಕಡಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. 'ನಾನು ಹೇಳುತ್ತಿರುವುದು ಸುಳ್ಳಾಗಿರಲಿ ಎಂದು ಬಯಸುತ್ತೇನೆ. ಆದರೆ ಯುದ್ಧ ಬರುತ್ತಿದೆ.
ನೀವು ಒಂದು ಹೋರಾಟಕ್ಕಾಗಿ ಇಲ್ಲಿದ್ದೀರಿ, ಅದು ಒಂದು ಮಾಹಿತಿಯುಕ್ತ ಹೋರಾಟ, ಒಂದು ರಾಜಕೀಯ ಹೋರಾಟ' ಎಂದು ಜನರಲ್ ರಾಬರ್ಟ್ ನೆಲ್ಲರ್ ಹೇಳಿದ್ದಾರೆ.
ಕೊರಿಯಾ ವಲಯದಲ್ಲಿ 'ಚಂಡಮಾರುತದ ಮೋಡಕವಿಯುತ್ತಿವೆ' ಎಂದು ವಿದೇಶಾಂಗ ಸಚಿವ ಜಿಮ್ ಮ್ಯಾಟಿಸ್ ಫೋರ್ಟ್ ಬ್ರೇಗ್ನಲ್ಲಿ ಹೇಳಿರುವುದಕ್ಕೆ ಮುನ್ನಾ ದಿನ, ನಾರ್ವೆಯಲ್ಲಿ ನೆಲೆಸಿರುವ ಸೇನಾ ತುಕಡಿಗಳಿಗೆ ಸೇನಾಧಿಕಾರಿಗಳು ಈ ಎಚ್ಚರಿಕೆ ಬಂದಿದೆ.

 

 

11

 ಕ್ರಿಸ್ ಮಸ್ ಗೆ ಹೋಗುತ್ತಿದ್ದ ಬಸ್ ಅಪಘಾತ: 20 ಸಾವು

 ಡಿಸೆಂಬರ್ -25
ಮನಿಲಾ : ಪವಿತ್ರ ಕ್ರಿಸ್ ಮಸ್ ದಿನದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಯಾತ್ರಿಕರ ಬಸ್ ಇನ್ನೊಂದು ವಾಹನಕ್ಕೆ ಮುಖಾಮುಖೀ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 20 ಮಂದಿ ಮೃತಪಟ್ಟ ದಾರುಣ ಘಟನೆ ಉತ್ತರ ಫಿಲಿಪ್ಪೀನ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮನಿಲಾದಿಂದ ಉತ್ತರಕ್ಕೆ 200 ಕಿ.ಮೀ. ದೂರದಲ್ಲಿರುವ ಆಯಗೂ ಪಟ್ಟಣದಲ್ಲಿ ವಿಸ್ತೃತ ಕುಟುಂಬದ ಸದಸ್ಯರನ್ನು ಕ್ರಿಸ್ ಮಾಸ್ ಪ್ರೇಯರ್ಗೆ ಒಯ್ಯುತ್ತಿದ್ದ ಸಣ್ಣ ಬಸ್ ಎದುರುಗಡೆಯಿಂದ ಬರುತ್ತಿದ್ದ ದೊಡ್ಡ ಬಸ್ ಗೆ ಮುಖಾಮುಖೀ ಢಿಕ್ಕಿಯಾಯಿತು.

ಸಣ್ಣ ಬಸ್ ನಲ್ಲಿದ್ದವರ ಪೈಕಿ 20 ಮಂದಿ ಮೃತಪಟ್ಟರೆ ಇತರ 9 ಮಂದಿ ಗಾಯಗೊಂಡರು. ದೊಡ್ಡ ಬಸ್ ನಲ್ಲಿದವರ ಪೈಕಿ 15 ಮಂದಿ ಗಾಯಗೊಂಡರು.
ಸಣ್ಣ ಬಸ್ ನಲ್ಲಿದ್ದವರು ಈ ಕ್ಯಾಥೋಲಿಕ್ ರಾಷ್ಟ್ರದ ಶತಮಾನದಷ್ಟು ಹಳೆಯ ಅವರ್ ಲೇಡಿ ಆಫ್ ಮನೋವಾಗ್ ಚರ್ಚಿನಲ್ಲಿ ಕ್ರಿಸ್ ಮಾಸ್ ಪ್ರೇಯರ್ನಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸಣ್ಣ ಬಸ್ ನ ಚಾಲಕ ಅಬುಬೋ ಅಪಘಾತ ಸಂಭವಿಸಿದ ವೇಳೆ ನಿದ್ದೆಗೆ ಜಾರಿದ್ದನೇ ಅಥವಾ ಕುಡಿದ ಅಮಲಿನಲ್ಲಿ ಇದ್ದನೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯಗೂ ಪೊಲೀಸ್ ಮುಖ್ಯಸ್ಥ ರಾಯ್ ವಿಲಾನುಯೇವ ಹೇಳಿದ್ದಾರೆ

 

 

77

 103 ವರ್ಷಗಳ ಬಳಿಕ ಪತ್ತೆಯಾಯ್ತು ಜಲಾಂತರ್ಗಾಮಿ

ಡಿಸೆಂಬರ್ -22
ಸಿಡ್ನಿ : ಆಸ್ಟ್ರೇಲಿಯಾದ ಅತ್ಯಂತ ಹಳೆಯ ನೌಕಾ ರಹಸ್ಯವೊಂದು ಬಗೆಹರಿದಿದೆ. ಪ್ರಥಮ ಮಹಾ ಯುದ್ಧದ ಸಂದರ್ಭದಲ್ಲಿ 35 ಯೋಧರೊಂದಿಗೆ ಕಣ್ಮರೆಯಾಗಿದ್ದ ಆಸ್ಟ್ರೇಲಿಯಾದ ಮೊದಲ ಜಲಾಂತರ್ಗಾಮಿ(ಸಬ್ಮರೀನ್) ಅವಶೇಷಗಳು 103 ವರ್ಷಗಳ ಬಳಿಕ ಪತ್ತೆಯಾಗಿದ್ದು, ಕುತೂಹಲ ಮೂಡಿಸಿದೆ. ಸೆಪ್ಟೆಂಬರ್ 14, 1914ರಲ್ಲಿ ಸಬ್ಮರೀನ್-ಎಇ1 ಇಂಗ್ಲೆಂಡ್ನ ನ್ಯೂ ಗಿನಿ ದ್ವೀಪದಿಂದ ಕಾಣೆಯಾಗಿತ್ತು. ಅದರಲ್ಲಿದ್ದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಬ್ರಿಟನ್ ಮಿತ್ರಪಡೆಯ 35 ಸಿಬ್ಬಂದಿ ಇದ್ದರು.
ಇದು ಮಿತ್ರಪಡೆಗಳ ಕಣ್ಮರೆಯಾದ ಮೊದಲ ಜಲಾಂತರ್ಗಾಮಿ ಆಗಿತ್ತು ಹಾಗೂ ರಾಯಲ್ ಆಸ್ಟ್ರೇಲಿಯನ್ ನೇವಿಗೆ(ಆರ್ಎಎನ್) ಸಮರದಲ್ಲಿ ದೊಡ್ಡ ಹಿನ್ನಡೆಯಾಗಿತ್ತು. ಕಳೆದ 103 ವರ್ಷಗಳ ಅವಧಿಯಲ್ಲಿ ಈ ಸಬರ್ಮರೀನ್ನನ್ನು ಪತ್ತೆ ಮಾಡಲು ಹಲವು ಬಾರಿ ಯತ್ನಿಸಲಾಗಿತ್ತು. ನೆದೆರ್ಲೆಂಡ್ಸ್ ಒಡೆತನದ ಸರ್ವೆ ನೌಕೆ ಬಳಸಿ ಕಳೆದ ವಾರ ಆರಂಭಗೊಂಡ ಶೋಧದ ವೇಳೆ ನ್ಯೂ ಗಿನಿ ದ್ವೀಪದ ಸಾಗರದ 300 ಮೀಟರ್ಗಳ ಆಳದಲ್ಲಿ ಇದನ್ನು ಪತ್ತೆ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ರಕ್ಷಣಾ ಸಚಿವೆ ಮ್ಯಾರಿಸ್ ಪೇಸ್ ತಿಳಿಸಿದ್ದಾರೆ. ಅತ್ಯಂತ ಹಳೆಯ ನೌಕಾ ರಹಸ್ಯ ಈಗ ಬೆಳಕಿಗೆ ಬಂದಿರುವುದರಿಂದ ಈ ದುರಂತಕ್ಕೆ ನಿಖರ ಕಾರಣಗಳನ್ನು ಪತ್ತೆ ಮಾಡಬಹುದಾಗಿದೆ

 

44  ಇಸ್ರೇಲ್ ರಾಜಧಾನಿಯಾಗಿ ಜರುಸಲೇಂ: 128 ದೇಶಗಳ ವಿರೋಧ
 ಡಿಸೆಂಬರ್ -22
ನ್ಯೂಯಾರ್ಕ್: ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿಯಾಗಿ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಯ ವಿರುದ್ಧ ಭಾರತ ಸೇರಿದಂತೆ 128 ದೇಶಗಳು ವಿಶ್ವಸಂಸ್ಥೆಯಲ್ಲಿ ಮತಚಲಾಯಿಸಿವೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕ ನಡೆಯ ವಿರುದ್ಧವೇ ಹೆಚ್ಚು ಮತ ಚಲಾವಣೆಯಾಗಿದೆ. ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಡಿ.6 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸುತ್ತಿದ್ದಂತೆಯೇ ಹಲವು ದೇಶಗಳು ಈ ನಿರ್ಧಾರದ ವಿರುದ್ಧ ದನಿ ಎತ್ತಿದ್ದವು.
ಇಸ್ರೇಲ್ ಮಾತ್ರವೇ ಈ ನಡೆಯನ್ನು ಸ್ವಾಗತಿಸಿದ್ದು, ಐಸಿಸ್ ಸೇರಿದಂತೆ ಇನ್ನಿತರ ಉಗ್ರ ಸಂಘಟನೆಗಳು ಟ್ರಂಫ್ ನಿರ್ಧಾರದಿಂದ ಭಾರೀ ಬೆಲೆತೆರಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದ್ದವು.
'ಪೂರ್ವ ಜೆರುಸಲೇಂ ಅನ್ನು ತಮ್ಮ ರಾಜಧಾನಿಯನ್ನಾಗಿ ಪ್ಯಾಲಿಸ್ತೇನ್ ಎಂದೋ ಮಾಡಿಕೊಂಡಿದೆ. ಈಗ ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸುವುದರಿಂದ ಪ್ಯಾಲಿಸ್ತೇನ್ ಮತ್ತು ಇಸ್ರೇಲ್ ನಡುವೆ ಮತ್ತಷ್ಟು ವೈಮನಸ್ಯ ಬೆಳೆಯುತ್ತದೆ' ಎಂಬುದು ಹಲವು ದೇಶಗಳ ಅಂಬೋಣ.
ಆದರೆ ಅಮೆರಿಕ ಮಾತ್ರ ತನ್ನ ನಿಲುವಿಗೆ ಬದ್ಧವಾಗಿದ್ದು, ತನ್ನ ನಿರ್ಧಾರದ ವಿರುದ್ಧ ಮಾತನಾಡುವ ದೇಶಗಳು ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದೆ.

 

 

     123 

ಹೆರಿಗೆ ನೋವಿನಲ್ಲೂ ಪರೀಕ್ಷೆ ಬರೆದ ಗರ್ಭಿಣಿ.!

 ಡಿಸೆಂಬರ್-20

 ಅಮೆರಿಕ: ಪರೀಕ್ಷೆ ಅಂದ್ರೆ ಸಾಕು ಎಲ್ರೂ ಭಯ ಬೀಳ್ತಾರೆ. ಯಾಕಾದ್ರೂ ಈ ಎಕ್ಸಾಮ್ ಬರುತ್ತೋ ಅಂದುಕೊಳ್ತಾರೆ. ಅಂಥವರೆಲ್ಲ ಈ ಮಹಿಳೆಯನ್ನೊಮ್ಮೆ ಭೇಟಿ ಮಾಡಬೇಕು. ಯಾಕೆ ಗೊತ್ತಾ? ನೈಜಿಯಾ ಥಾಮಸ್ ಹೆರಿಗೆ ನೋವಿನ ನಡುವೆಯೂ ಪರೀಕ್ಷೆ ಬರೆದಿದ್ದಾಳೆ.ಡಿಸೆಂಬರ್ 11 ರಂದು ಗರ್ಭಿಣಿ ನೈಜಿಯಾಗೆ ಹೆರಿಗೆ ನೋವು ಶುರುವಾಗಿತ್ತು. ಆಕೆ ಆಸ್ಪತ್ರೆಗೆ ದಾಖಲಾಗಿದ್ಲು. ಆಸ್ಪತ್ರೆಯ ಬೆಡ್ ಮೇಲೆ ಕುಳಿತು ಅಲ್ಲೇ ಲ್ಯಾಪ್ಟಾಟ್ ಇಟ್ಟುಕೊಂಡು ಆಕೆ ಪರೀಕ್ಷೆ ಬರೆದಿದ್ದಾಳೆ. ನೈಜಿಯಾಳ ತಾಯಿ ಕ್ಲಿಕ್ಕಿಸಿರೋ ಈ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕದ ಜಾನ್ಸನ್ ಕೌಂಟಿ ಕಮ್ಯೂನಿಟಿ ಕಾಲೇಜಿನಲ್ಲಿ ನೈಜಿಯಾ ಮನಃಶಾಸ್ತ್ರ ಓದುತ್ತಿದ್ದಾಳೆ. ಗರ್ಭಿಣಿಯಾಗಿದ್ದ ನೈಜಿಯಾ 39ನೇ ವಾರದವರೆಗೂ ತರಗತಿಗೆ ಹಾಜರಾಗಿದ್ಲು. ಸದ್ಯ ಪರೀಕ್ಷೆ ಬರೆಯುತ್ತಿರೋ ಫೋಟೋ ವೈರಲ್ ಆಗಿದ್ದು, 1.3 ಲಕ್ಷ ಲೈಕ್ಸ್, 23,000 ಕ್ಕೂ ಹೆಚ್ಚು ರಿಟ್ವೀಟ್ಸ್ ಬಂದಿವೆ. ಡಿಸೆಂಬರ್ 12ರಂದು ನೈಜಿಯಾಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ತಾಯಿಯಾಗಿದ್ದಾಳೆ.

 

 

    123 

 ಬೀದಿ ನಾಯಿಗು ಇವರಿಗೂ ಏನು ವ್ಯತ್ಯಾಸ!

ಡಿಸೆಂಬರ್-20

 ನ್ಯೂಜಿಲೆಂಡ್: ನಗರದ ಮಧ್ಯಭಾಗದಲ್ಲಿರೋ ಪ್ರತಿಮೆ ಮೇಲೆ ಯುವ ಜೋಡಿ ಸೆಕ್ಸ್ ಮಾಡಿದ್ದಾರೆ. ಡ್ಯುನೆಡಿನ್ ನಗರದಲ್ಲಿ ಬೆಳಗಿನ ಜಾವ 1 ಗಂಟೆ ವೇಳೆಗೆ ಈ ಕೃತ್ಯ ಎಸಗಿದ್ದಾರೆ. 
ಸುತ್ತ ಮುತ್ತ ಇದ್ದ ಸಾರ್ವಜನಿಕರು ಯುವ ಜೋಡಿಯ ಸರಸ ಸಲ್ಲಾಪವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.ಒಂದಷ್ಟು ಯುವಕರು ಅವರನ್ನು ನೋಡಿ ಚಪ್ಪಾಳೆ ತಟ್ಟಿ, ತಮಾಷೆ ಮಾಡಿದ್ರೂ ಕ್ಯಾರೇ ಎನ್ನಲಿಲ್ಲ. ಪ್ರತಿಮೆ ಮೇಲೆ ಸಂಭೋಗ ಮುಂದುವರಿಸಿದ್ದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಇಬ್ಬರ ಮೇಲೂ ಪ್ರಕರಣ ದಾಖಲಾಗಿದ್ದು, 2 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.ಇಂತಹ ಅಶ್ಲೀಲ ವರ್ತನೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ದೃಶ್ಯದ ವಿಡಿಯೋ ಆನ್ ಲೈನ್ ನಲ್ಲಿ ವೈರಲ್ ಆಗಿದೆ.

 

 

44   ವಿಶ್ವಾದ್ಯಂತ ಈ ವರ್ಷ 65 ಪತ್ರಕರ್ತರ ಹತ್ಯೆ
ಡಿಸೆಂಬರ್-20
ಪ್ಯಾರಿಸ್: ವಿಶ್ವದ ವಿವಿಧೆಡೆ ಕಳೆದ ವರ್ಷ 65 ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹತ್ಯೆ ಮಾಡಲಾಗಿದೆ ಎಂದು ರಿಪೋಟರ್ಸ್ ವಿತೌಟ್ ಬಾರ್ಡರ್ಸ್ (ಆರ್ಎಸ್ಎಫ್) ನಿನ್ನೆ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಯುದ್ಧ, ಹಿಂಸಾಚಾರ ಮತ್ತು ಭಯೋತ್ಪಾದಕರ ದಾಳಿಯಿಂದ ತತ್ತರಿಸಿರುವ ಸಿರಿಯಾ ಈಗಲೂ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಅಲ್ಲಿ 2017ರಲ್ಲಿ 12 ಮಾಧ್ಯಮ ಪ್ರತಿನಿಧಿಗಳನ್ನು ಕೊಲ್ಲಲಾಗಿದೆ. ನಂತರದ ಸ್ಥಾನದಲ್ಲಿ ಮೆಕ್ಸಿಕೊ ಇದ್ದು. ಡ್ರಗ್ಸ್ ದಂಧೆಯ ಕಾರಾಸ್ಥಾನವಾದ ಅಲ್ಲಿ ಈ ವರ್ಷ 11 ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ.
ಈ ವರ್ಷ ಹತ್ಯೆಯಾದ 65 ಪತ್ರಕರ್ತರಲ್ಲಿ 50 ಮಂದಿ ವೃತ್ತಿನಿರತರು. ಮೆಕ್ಸಿಕೋದಲ್ಲಿ ನಡೆಯುತ್ತಿರುವ ವ್ಯವಸ್ಥಿತ ಮಾದಕವಸ್ತು ಜಾಲದ ಬಗ್ಗೆ ತನಿಖಾ ವರದಿ ಪ್ರಕಟಿಸಿದ್ದ ಖ್ಯಾತ ಪತ್ರಕರ್ತ ಕ್ಷೇವಿಯರ್ ವಾಲ್ಟೇಜ್ರನ್ನು ಮಾದಕ ಲೋಕದ ಪಾತಕಿಗಳು ಅತ್ಯಂತ ಭೀಕರವಾಗಿ ಕೊಂದು ಹಾಕಿದ್ದರು. ಮೇ ತಿಂಗಳಿನಲ್ಲಿ ನಡೆದ ಈ ಘಟನೆ ಭಾರೀ ಕೋಲಾಹಲ ಸೃಷ್ಟಿಸಿತ್ತು.

 

    123 

 ಹೊಸ ಮಾರ್ಗದಲ್ಲಿ ಹಳಿ ತಪ್ಪಿದ ರೈಲು, 6 ಸಾವು

 ಡಿಸೆಂಬರ್ -19

ವಾಷಿಂಗ್ಟನ್: ಇಂದು (ಯುಎಸ್) ಮೊದಲ ಬಾರಿಗೆ ಹೊಸ ಮಾರ್ಗದಲ್ಲಿ ಚಲಿಸುತ್ತಿದ್ದ ಆಮ್ಟ್ರಾಕ್ ಪ್ಯಾಸೆಂಜರ್ ರೈಲು ಹಳಿ ತಪ್ಪಿದೆ. ಪರಿಣಾಮ ಘಟನೆಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹೊಸ ಹಳಿ ನಿರ್ಮಾಣ ಮಾಡಲಾಗಿದ್ದರಿಂದ ಇದೇ ಮೊದಲ ಬಾರಿಗೆ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿಲಾಗಿತ್ತು. ಆದರೆ, ಮೊದಲ ಸಂಚಾರದಲ್ಲಿ ಈ ಅವಘಡ ಸಂಭವಿಸಿರುವುದು ದುರದೃಷ್ಟಕರ.
ಬ್ರಿಡ್ಜ್ ನ ಮೇಲಿಂದ ರೈಲಿನ ಬೋಗಿಗಳು ರಸ್ತೆಗೆ ಉರುಳಿ ಕಾರಿನ ಮೇಲೆ ಬಿದ್ದಿವೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ರೈಲಿನಲ್ಲಿ ಸುಮಾರು 78 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

 

 

   ಗಗ   ಅಕ್ರಮ ಮೀನುಗಾರಿಕೆ ಆರೋಪ ಭಾರತದ 43 ಮೀನುಗಾರರ ಬಂಧನ
ಡಿಸೆಂಬರ್.16
ಕರಾಚಿ: ಅರಬ್ಬಿ ಸಮುದ್ರದ ಪಾಕ್ ಜಲಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ 43 ಭಾರತೀಯ ಮೀನುಗಾರರನ್ನು ಗುರುವಾರ ಬಂಧಿಸಿರುವುದಾಗಿ ಪಾಕಿಸ್ತಾನ ಸರಕಾರ ತಿಳಿಸಿದೆ. ಬಂಧಿತರಿಂದ ಏಳು ಹಡಗುಗಳನ್ನು ವಶಪಡಿಸಿಕೊಂಡಿದ್ದಾಗಿ ಪಾಕ್ ಅಧಿಕಾರಿಗಳು ಹೇಳಿದ್ದಾರೆ.
ಮೀನುಗಾರರನ್ನು ಡಾಕ್ಸ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪಾಕಿಸ್ತಾನ ನೌಕಾ ಭದ್ರತಾಪಡೆಯ ವಕ್ತಾರ ಶುಕ್ರವಾರ ತಿಳಿಸಿದ್ದಾರೆ.
ಕಳೆದೊಂದು ತಿಂಗಳಲ್ಲಿ 144 ಭಾರತೀಯ ಮೀನುಗಾರರನ್ನು ಪಾಕ್ ಬಂಧಿಸಿದೆ. ವರ್ಷದ ಲೆಕ್ಕ ತೆಗೆದುಕೊಂಡರೆ, 2017ರಲ್ಲಿ 400ಕ್ಕೂ ಹೆಚ್ಚು ಭಾರತೀಯ ಮೀನುಗಾರರು ಪಾಕಿಸ್ತಾನದ ಜೈಲು ಸೇರಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಭಾರತ ಹಾಗೂ ಪಾಕಿಸ್ತಾನ ಗಡಿ ಗುರುತಿಸುವಂಥ ಯಾವುದೇ ನಿಖರ ಗುರುತು ಇಲ್ಲದಿರುವುದರಿಂದ ಹಾಗೂ ಅವರ ಹಡಗುಗಳಲ್ಲಿ ತಂತ್ರಜ್ಞಾನ ಕೊರತೆಯಿರುವುದರಿಂದ ಉಭಯ ದೇಶಗಳ ಬಡ ಮೀನುಗಾರರು ತಿಳಿಯದೆ ಮಾಡಿದ ತಪ್ಪಿಗೆ ಆಗಾಗ್ಗೆ ಅಕ್ರಮ ಮೀನುಗಾರಿಕೆ ಆರೋಪದಡಿ ಬಂಧಿತರಾಗುತ್ತಲೇ ಇದ್ದಾರೆ.

 

   ºÀºÀ    ಕಟಾಸ್ ದೇವಾಲಯದ ಶ್ರೀರಾಮ, ಹನುಮಾನ್ ಮೂರ್ತಿ ಕಣ್ಮರೆ
ಡಿಸೆಂಬರ್.13
ಇಸ್ಲಾಮಾಬಾದ್: ಪಂಜಾಬ್ ಪ್ರಾಂತದ ಚಕ್ವಾಲ್ ಜಿಲ್ಲೆಯಲ್ಲಿರುವ ಐತಿಹಾಸಿಕ ಕಟಾಸ್ ರಾಜ್ ದೇವಾಲಯ ಸಂಕೀರ್ಣದಲ್ಲಿದ್ದ ಶ್ರೀರಾಮ ಹಾಗೂ ಹನುಮಾನ್ ಮೂರ್ತಿಗಳು ಕಣ್ಮರೆಯಾಗಿರುವ ಬಗ್ಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.
ದೇವಾಲಯ ಸಂಕೀರ್ಣದಲ್ಲಿರುವ ಕೊಳ ಬರಿದಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಸ್ವಯಂ ಪ್ರೇರಣೆ ಮೊಕದ್ದಮೆಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಕಿಬ್ ನಿಸಾರ್ ಅವರು, ''ಮೂರ್ತಿಗಳು ಅಧಿಕಾರಿಗಳ ಬಳಿಯೇ ಇವೆಯೇ? ಅಥವಾ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆಯೇ?'' ಎಂದು ಪ್ರಶ್ನಿಸಿದರು. ಅಕ್ಕಪಕ್ಕದಲ್ಲಿರುವ ಸಿಮೆಂಟ್ ಕಾರ್ಖಾನೆಗಳು ನಿರಂತರವಾಗಿ ಕೊಳವೆ ಬಾವಿಗಳನ್ನು ತೋಡಿ ಅಪಾರ ಪ್ರಮಾಣದ ನೀರನ್ನು ಬಳಸಿಕೊಳ್ಳುತ್ತಿರುವುದರಿಂದ ಅಂತರ್ ಜಲದ ಮಟ್ಟ ಗಣನೀಯ ಪ್ರಮಾಣದಲ್ಲಿ ಮಟ್ಟದಲ್ಲಿ ಕುಸಿದಿದ್ದು, ಕಟಾಸ್ ರಾಜ್ ಕೊಳ ಬತ್ತಿದೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ನ್ಯಾ.ನಿಸಾರ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರು.
ಮಂಗಳವಾರದ ವಿಚಾರಣೆಯ ಕೊನೆಯಲ್ಲಿ ನ್ಯಾ.ನಿಸಾರ್ ಸಾರಥ್ಯದ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠವು, ದೇವಸ್ಥಾನದ ಆಸುಪಾಸಿನಲ್ಲಿರುವ ಸಿಮೆಂಟ್ ಕಾರ್ಖಾನೆಗಳಿಗೆ 'ವಿಧ್ವಂಸಕ' ಪಟ್ಟ ಕಟ್ಟಿತು. ಅದೇ ವೇಳೆ ಅಂತಹ ಸಿಮೆಂಟ್ ಕಾರ್ಖಾನೆಗಳ ಹೆಸರುಗಳನ್ನು ತಿಳಿಯಬಯಸಿತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಆಗ ಪಂಜಾಬ್ ಸರಕಾರದ ವಕೀಲರು ಸಿಮೆಂಟ್ ಕಾರ್ಖಾನೆಗಳ ವಿವರ ನೀಡಿದರು ಎಂದು ಪತ್ರಿಕೆ ತಿಳಿಸಿದೆ.
ಅಂತಿಮವಾಗಿ, ವಿಗ್ರಹ ನಾಪತ್ತೆ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು. ಇದು ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿರುವ ಹೆಸರಾಂತ ಹಿಂದೂ ದೇವಾಲಯ. 'ಕಟಾಸ್' ಎಂಬುದು 'ಕಟಾಕ್ಷ'ದ ಸಂಕ್ಷಿಪ್ತ ರೂಪ. 'ಕಟಾಕ್ಷ' ಅಂದರೆ ಸಂಸ್ಕೃತದಲ್ಲಿ 'ಕಂಬನಿ ತುಂಬಿದ ಕಣ್ಣುಗಳು' ಎಂದರ್ಥ.
ತನ್ನ ಪತ್ನಿ 'ಸತಿ'ಯ ನಿಧನದಿಂದ ದುಃಖತಪ್ತನಾದ ಶಿವ ಎಡೆಬಿಡದೆ ಅತ್ತಿದ್ದರ ಫಲವಾಗಿ ಅಲ್ಲೊಂದು ಪವಿತ್ರ ಕೊಳ ನಿರ್ಮಾಣವಾಯಿತು ಎಂಬುದು ಐತಿಹ್ಯ.
2005ರಲ್ಲಿ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಕಟಾಸ್ ರಾಜ್ ದೇವಾಲಯಕ್ಕೆ ಭೇಟಿ ನೀಡಿ, ಪಾಕಿಸ್ತಾನ ಸರಕಾರ ಹಮ್ಮಿಕೊಂಡಿದ್ದ 'ಸಂರಕ್ಷಣೆ ಕಾರ್ಯ'ಕ್ಕೆ ಚಾಲನೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

 

 

    123 

 ಬಕಿಂಗಂ ಪ್ಯಾಲೇಸ್ ಗೋಡೆ ಏರಲೆತ್ನಿಸಿದಾತ ಸೆರೆ

 ಡಿಸೆಂಬರ್.12

 ಲಂಡನ್ : ಇಲ್ಲಿನ ಇತಿಹಾಸ ಪ್ರಸಿದ್ಧ ಬಕಿಂಗಂ ಪ್ಯಾಲೇಸ್ ಆವರಣ ಗೋಡೆಯನ್ನು ಹೊರ ಭಾಗದಿಂದ ಏರಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಭಯೋತ್ಪಾದನೆಗೆ ಸಂಬಂಧಿಸಿದ ಘಟನೆ ಅಲ್ಲ ಎಂಬುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಬಕಿಂಗಂ ಪ್ಯಾಲೇಸ್ 91ರ ಹರೆಯದ ಎರಡನೇ ರಾಣಿ ಎಲಿಜಬೆತ್ ಅವರ ಅಧಿಕೃತ ನಿವಾಸವಾಗಿದೆ. ಎರಡನೇ ರಾಣಿ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲಿ ಅತೀ ದೀರ್ಘಾವಧಿ ಆಡಳಿತೆ ನಡೆಸಿರುವ ರಾಣಿ ಎನಿಸಿಕೊಂಡಿದ್ದಾರೆ. 24ರ ಹರೆಯದದ ವ್ಯಕ್ತಿಯು ಬಕಿಂಗಂ ಪ್ಯಾಲೇಸ್ ಆವರಣ ಗೋಡೆಯನ್ನು ಏರಲು ಯತ್ನಿಸಿದ ಕೇವಲ 3 ನಿಮಿಷಗಳ ಒಳಗೆ ಮೆಟ್ರೋಪಾಲಿಟನ್ ಪೊಲೀಸ್ ದಳದ ರಾಯಲ್ಟಿ ಮತ್ತು ಸ್ಪೆಶಲಿಸ್ಟ್ ಪ್ರೊಟೆಕ್ಷನ್ ಕಮಾಂಡ್ನ ಸಿಬಂದಿಗಳು ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.

 

                                              ದಾಳಿಕೋರನಿಗೆ ಐಎಸ್ ಉಗ್ರರ ಲಿಂಕ್
ಡಿಸೆಂಬರ್.12
ನ್ಯೂಯಾರ್ಕ್:ಇಲ್ಲಿನ ಜನದಟ್ಟಣೆಯ ಮೆಟ್ರೋ ಸ್ಟೇಷನ್ನಲ್ಲಿ ಸ್ಫೋಟ ನಡೆಸಿ ಅನೇಕರನ್ನು ಗಾಯಗೊಳಿಸಿ ಆತಂಕ ಸೃಷ್ಟಿಸಿದ ಬಾಂಗ್ಲಾದೇಶ ಮೂಲದ ದಾಳಿಕೋರನಿಗೆ ಅತ್ಯಂತ ಕ್ರೂರ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್) ಜೊತೆ ಸಂಪರ್ಕ ಇರುವುದು ದೃಢಪಟ್ಟಿದೆ. ಅಕಾಯೆದ್ ಉಲ್ಲಾ(27) ಎಂಬ ಬಾಂಬರ್ ತನ್ನ ದೇಹದಲ್ಲಿ ಪೈಪ್ ಬಾಂಬ್ ಮತ್ತು ತಂತಿಗಳನ್ನು ಸುತ್ತಿಕೊಂಡಿದ್ದನು. ಈ ಸ್ಫೋಟಕ ಸಾಧನವು ಅಮೆರಿಕದ ಅತ್ಯಂತ ಬೃಹತ್ ಬಸ್ ನಿಲ್ದಾಣದ ಎರಡು ಸಬ್ವೇ ಫ್ಲಾಟ್ ಫಾರಂಗಳ ನಡುವೆ ಸ್ಫೋಟಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಐಎಸ್ ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಧ್ಯಪ್ರಾಚ್ಯದ ಗಾಜಾ ಪ್ರದೇಶದಲ್ಲಿ ಅಮೆರಿಕ ಬೆಂಬಲಿತ ಇಸ್ರೇಲ್ ನಡೆಸಿದ ಹಿಂಸಾಚಾರಕ್ಕೆ ಪ್ರತೀಕಾರವಾಗಿ ನ್ಯೂಯಾರ್ಕ್ನಲ್ಲಿ ಈ ದಾಳಿ ನಡೆಸಿರುವುದಾಗಿ ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಕಠಿಣ ವಲಸೆ ನೀತಿಗೆ ಟ್ರಂಪ್ ಒಲವು : ಅಮೆರಿಕದಲ್ಲಿ ಏಳು ವರ್ಷಗಳಿಂದ ನೆಲೆಸಿರುವ ಬಾಂಗ್ಲಾ ಅಕಾಯೆದ್ ಉಲ್ಲಾ ನ್ಯೂಯಾರ್ಕ್ನಲ್ಲಿ ದಾಳಿ ನಡೆಸಿದ ನಂತರ ಆತಂಕಗೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶದ ಜನರನ್ನು ರಕ್ಷಿಸಲು ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

 

                                          ರಾಜತಾಂತ್ರಿಕರಿಗೆ ವಿಶ್ವಸಂಸ್ಥೆ ದೀಪಾವಳಿ ಪ್ರಶಸ್ತಿ
ಡಿಸೆಂಬರ್.12
ನ್ಯೂಯಾರ್ಕ್: ಭಾರತದ ಲಕ್ಷ್ಮೀ ಪುರಿ ಸೇರಿದಂತೆ ಆರು ಉನ್ನತ ರಾಜತಾಂತ್ರಿಕರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಏಕ ಶಕ್ತಿ (ದೀವಳಿ ಪವರ್ ಆಪ್ ಒನ್) ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗಿದೆ.
ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ನೆಲೆಗೊಳ್ಳಲು ನೀಡಿದ ಅನುಪಮ ಸೇವೆಯನ್ನು ಗುರುತಿಸಿ ಇದೇ ಮೊದಲ ಬಾರಿಗೆ ಈ ಪುರಸ್ಕಾರ ನೀಡಲಾಗಿದೆ. ನ್ಯೂಯಾರ್ಕ್ನ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಿನ್ನೆ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮುಖ್ಯಸ್ಥೆ ಲಕ್ಷ್ಮೀ ಪುರಿ, ವಿಶ್ವಸಂಸ್ಥೆಗೆ ಬ್ರಿಟಿಷ್ ರಾಯಭಾರಿ ಮ್ಯಾಥ್ಯೂ ರೇಕ್ರೋಫ್ಟ್, ಲೆಬನಾನ್ ರಾಯಭಾರಿ ನವಾಜ್ ಸಲಾಂ, ಹಿರಿಯ ರಾಜತಾಂತ್ರಿಕರಾದ ಈಜಿಪ್ಟ್ನ ಮಗೆಡ್ ಅಬ್ದುಲ್ ಅಜಿಜ್, ಮೋಲ್ಡಾವಾದ ಇಯಾನ್ ಬೊಟ್ನರು ಹಾಗೂ ಉಕ್ರೇನ್ನ ಯುರಿ ಸೆರ್ಗೆವೆವ್ ಅವರಿಗೆ ಈ ಗೌರವ ನೀಡಿ ಪುರಸ್ಕರಿಸಲಾಗಿದೆ. ಕಳೆದ ವರ್ಷ ಚಿರಸ್ಥಾಯಿ ದೀಪಾವಳಿ ಅಂಚೆ ಚೀಟಿಯನ್ನು ಅಮೆರಿಕ ಅಂಚೆ ಸೇವೆಗಳ ಇಲಾಖೆ ಬಿಡುಗಡೆ ಮಾಡಿದ ವರ್ಷಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

 

                                                              

ನವಜೋಡಿಗಳಾಗಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ…!

ಡಿಸೆಂಬರ್ 12 

ಇಟಲಿ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆಯಾಗಿಬಿಟ್ಟರು. ಹೌದು, ಕೊಹ್ಲಿ-ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಟಲಿಯ ಮಿಲನ್ ನಗರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಮದುವೆಯಾಗುತ್ತಾರಂತೆ ಎಂಬ ಊಹಾಪೋಹ ಈಗ ಎಂಬ ಊಹೆ ಈಗ ನಿಜವಾಗಿದೆ. ಅನುಷ್ಕಾ ಶರ್ಮಾ ತಮ್ಮ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಮದುವೆಯಾದ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮದುವೆಯ ಸುಂದರ ಫೋಟೋದೊಂದಿಗೆ ನಾವಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆಂದು ಟ್ವಿಟ್ ಮಾಡಿದ್ದಾರೆ.

 

             ನ್ಯೂಯಾರ್ಕ್ ಬಾಂಬ್ ಸ್ಫೋಟ: ಅಕಾಯೆದ್ ಬಂಧನ
ಡಿಸೆಂಬರ್.12
ನ್ಯೂಯಾರ್ಕ್: ಐಸಿಸ್ ಪ್ರೇರಿತ ಬಾಂಗ್ಲಾದೇಶ ಮೂಲದ ವ್ಯಕ್ತಿಯೊಬ್ಬ ಇಲ್ಲಿನ ಮೆಟ್ರೋ ನಿಲ್ದಾಣದ ಜನನಿಬಿಡ ಪ್ರದೇಶದ ಬಳಿ ಸೋಮವಾರ ಮುಂಜಾನೆ ಬಾಂಬ್ಸ್ಫೋಟ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಮನೆಯಲ್ಲೇ ತಯಾರಿಸಿದ ಪೈಪ್ ಬಾಂಬ್ ಹಾಗೂ ಬ್ಯಾಟರಿ ಪ್ಯಾಕ್ ಸ್ಫೋಟಕ ಧರಿಸಿದ್ದ 27 ವರ್ಷದ ಅಕಾಯೆದ್ ಉಲ್ಲಾ ಹೆಸರಿನ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
''ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಶಂಕಿತನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನು ಐಸಿಸ್ನಿಂದ ಪ್ರೇರಿತನಾಗಿದ್ದಾನೆ ಎಂದು ಮಾಜಿ ಪೊಲೀಸ್ ಆಯುಕ್ತ ಬಿಲ್ ಬ್ರಾಟನ್ ತಿಳಿಸಿದ್ದಾರೆ.
''ಇದೊಂದು ಭಯೋತ್ಪಾದಕ ದಾಳಿಯತ್ನ. ಆದರೆ, ಥ್ಯಾಂಕ್ ಗಾಡ್! ಉಗ್ರನು ತನ್ನ ಅಂತಿಮ ಗುರಿ ತಲುಪುವಲ್ಲಿ ವಿಫಲವಾಗಿದ್ದಾನೆ,'' ಎಂದು ನ್ಯೂಯಾರ್ಕ್ ಮೇಯರ್ ಬಿಲ್ ಡಿ ಬ್ಲೇಸಿಯೋ ಹೇಳಿದ್ದಾರೆ.

 

               ಶ್ರೀಲಂಕಾ ಬಂದರು ಚೀನಾಗೆ ಅಧಿಕೃತವಾಗಿ ಹಸ್ತಾಂತರ
ಡಿಸೆಂಬರ್.12
ಕೊಲಂಬೋ: ಶ್ರೀಲಂಕಾದ ಆಯಕಟ್ಟಿನ ಹಂಬನ್ಟೋಟ ಬಂದರಿನ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀಲಂಕಾ ಚೀನಾಗೆ ಅಧಿಕೃತವಾಗಿ ಹಸ್ತಾಂತರಿಸಿದೆ.
99 ವರ್ಷಗಳ ಅವಧಿಗೆ ಬಂದರನ್ನು ಭೋಗ್ಯಕ್ಕೆ ನೀಡಲಾಗಿದೆ. ಶ್ರೀಲಂಕಾ ಬಂದರು ಪ್ರಾಧಿಕಾರ ಹಾಗೂ ಚೀನಾದ ಎರಡು ಸಂಸ್ಥೆಗಳಾದ 'ಹಂಬನ್ಟೋಟ ಇಂಟರ್ನ್ಯಾಷನಲ್ ಪೋರ್ಟ್ ಗ್ರೂಪ್ (ಎಚ್ಐಪಿಜಿ) ಮತ್ತು 'ಹಂಬನ್ಟೋಟ ಇಂಟರ್ನ್ಯಾಷನಲ್ ಪೋರ್ಟ್ ಸರ್ವಿಸಸ್' ಇದನ್ನು ನಿರ್ವಹಣೆ ಮಾಡಲಿವೆ.
ಕಳೆದ ಏಪ್ರಿಲ್ನಲ್ಲಿ ಚೀನಾಗೆ ಭೇಟಿ ನೀಡಿದ್ದ ಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಈ ಸಂಬಂಧ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದರು. ಚೀನಾಗೆ ಶ್ರೀಲಂಕಾ ನೀಡಬೇಕಿರುವ ಸಾಲದ ಮರುಪಾವತಿಯ ಭಾಗವಾಗಿ, ಶ್ರೀಲಂಕಾದ ಬಂದರಲ್ಲಿ ಚೀನಾದ ಹೂಡಿಕೆಗೆ ಅವಕಾಶ ನೀಡುತ್ತಿರುವುದಾಗಿ ಅವರು ಘೋಷಿಸಿದ್ದರು.
ಚೀನಾಕ್ಕೆ ಶ್ರೀಲಂಕಾ ಒಟ್ಟು 8 ಶತಕೋಟಿ ಡಾಲರ್ನಷ್ಟು ಸಾಲ ಪಾವತಿ ಮಾಡಬೇಕಿದ್ದು, ಒಪ್ಪಂದದ ಭಾಗವಾಗಿ ಚೀನಾದ ಕಂಪನಿಗಳಿಗೆ ಭಾರಿ ತೆರಿಗೆ ರಿಯಾಯಿತಿಯನ್ನೂ ಲಂಕಾ ಸರಕಾರ ಪ್ರಕಟಿಸಿದೆ.
ಪ್ರತಿಪಕ್ಷಗಳು ಚೀನಾದೊಂದಿಗಿನ ಒಪ್ಪಂದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸರಕಾರ ದೇಶದ ಆಸ್ತಿಯನ್ನು ಚೀನಾಕ್ಕೆ ಮಾರುತ್ತಿದೆ ಎಂದು ಆರೋಪಿಸಿವೆ.
ಕಳೆದ ಜುಲೈನಲ್ಲಿ ಲಂಕಾ ಸರಕಾರ ಚೀನಾ ಜತೆ 1.1 ಶತಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿ, ಹಬನ್ಟೋಟ ಬಂದರಿನಲ್ಲಿ ಶೇ. 70ರಷ್ಟು ಪಾಲನ್ನು ಚೀನಾಕ್ಕೆ ಮಾರಾಟ ಮಾಡಿತ್ತು.
99 ವರ್ಷಗಳ ಲೀಸ್ ಒಪ್ಪಂದದ ಭಾಗವಾಗಿ, ಶ್ರೀಲಂಕಾಕ್ಕೆ ಚೀನಾ 300 ದಶಲಕ್ಷ ಡಾಲರ್ ಮುಂಗಡ ಹಣವನ್ನು ಪಾವತಿಸಿದೆ.
''ಈ ಒಪ್ಪಂದೊಂದಿಗೆ ಚೀನಾಕ್ಕೆ ಲಂಕಾ ಸಾಲ ಮರುಪಾವತಿ ಆರಂಭವಾಗಲಿದೆ. ಹಬನ್ಟೋಟ ಬಂದರನ್ನು ಹಿಂದೂ ಮಹಾಸಾಗರದ ಪ್ರಮುಖ ಬಂದರಾಗಿ ಅಭಿವೃದ್ಧಿಪಡಿಸಲಾಗುವುದು,'' ಎಂದು ವಿಕ್ರಮಸಿಂಘೆ ಬಂದರು ಹಸ್ತಾಂತರದ ವೇಳೆ ಸಂಸತ್ತಿನಲ್ಲಿ ಹೇಳಿದ್ದಾರೆ.

 

                                        

ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

ಡಿಸೆಂಬರ್.11 

ಚಿಕಾಗೋ: ಅಮೆರಿಕದಲ್ಲಿರುವ ಭಾರತೀಯರ ಹತ್ಯೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೇ, ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬನ ಮೇಲೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಚಿಕಾಗೋದ ಅಲ್ ಬನಿ ಪಾರ್ಕ್ ನಲ್ಲಿ ನಿನ್ನೆ ನಡೆದಿದೆ. 
ಗುಂಡೇಟಿನಿಂದ ತೀವ್ರ ಗಾಯಗೊಂಡಿರುವ ಮಹಮದ್ ಅಕ್ಬರ್ (30) ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ಆರೈಕೆಗಾಗಿ ತಕ್ಷಣ ಅಮೆರಿಕಾಗೆ ತೆರಳಲು ನೆರವಾಗಬೇಕೆಂದು ಹೈದರಾಬಾದ್ ಉಪ್ಪಲ್ನಲ್ಲಿರುವ ಆತನ ಪೋಷಕರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.
ಮಹಮದಕ್ ಅಕ್ಬರ್ ಇಲಿನೊಯ್ಸ್ ನಲ್ಲಿರುವ ಡಿವೆರಿ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸಿಸ್ಟಮ್ಸ್ ನೆಟ್ವರ್ಕಿಂಗ್ ಅಂಡ್ ಟೆಲಿಕಮ್ಯೂನಿಕೇಷನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ಧಾರೆ. 
ನಿನ್ನೆ ಬೆಳಗ್ಗೆ 8.45ರಲ್ಲಿ ಚಿಕಾಗೋದ ಅಲಬನಿ ಪಾರ್ಕ್ ಬಳಿ ನಿಲುಗಡೆ ಮಾಡಿದ್ದ ಕಾರಿನ ಬಳಿ ಅವರು ತೆರಳುತ್ತಿದ್ದಾಗ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಪರಾರಿಯಾದ. ಕೆನ್ನೆಯ ಭಾಗಕ್ಕೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅಮೆರಿಕದ ಕನ್ಸಾಸ್ನಲ್ಲಿ ನಡೆದ ವರ್ಣದ್ವೇಷದ ದಾಳಿಯೊಂದರಲ್ಲಿ ಹೈದರಾಬಾದ್ ಎಂಜಿನಿಯರ್ ಶ್ರೀನಿವಾಸ ಕುಚಿಬೋಟ್ಲಾ ಹತರಾಗಿದ್ದರು.

 

                                        

ಕೊಂದ 60 ವರ್ಷ ಬಳಿಕ ಪಾದ್ರಿಗೆ ಜೀವಾವಧಿ

ಡಿಸೆಂಬರ್-9 

ಸ್ಯಾನ್ ಅಂಟಾನಿಯೋ : 60 ವರ್ಷಗಳ ಹಿಂದೆ ತನ್ನ ಬಳಿ ಪಾಪ ನಿವೇದನೆಗಾಗಿ ಬಂದಿದ್ದ ಓರ್ವ ಮಾಜಿ ಸೌಂದರ್ಯ ರಾಣಿ ಯನ್ನು ಕೊಲೆಗೈದ ಅಪರಾಧಕ್ಕಾಗಿ 87ರ ಹರೆಯದ ನಿವೃತ್ತ ಕ್ಯಾಥೋಲಿಕ್ ಪ್ರೀಸ್ಟ್ ಗೆ ದಕ್ಷಿಣ ಟೆಕ್ಸಾಸ್ನ ನ್ಯಾಯಾಧೀಶರು ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದಾರೆ.
ಪಾದ್ರಿ ಜಾನ್ ಫೀಟ್ ಅವರು ಈ ಕೊಲೆ ನಡೆಸಿದ್ದಾಗ 27ರ ಹರೆಯದ ತರುಣರಾಗಿದ್ದರು. ಕೊಲೆಗೀಡಾಗಿದ್ದ ಸೌಂದರ್ಯ ರಾಣಿ ಐರೀನ್ ಗಾರ್ಜಾ 25ರ ಹರೆಯದವಳಾಗಿದ್ದಳು. 1960ರ ಆ ದಿನಗಳಲ್ಲಿ ಪಾದ್ರಿ ಜಾನ್ ಫೀಟ್, ಟೆಕ್ಸಾಸ್ನ ಮೆಕಾಲೆನ್ ನಲ್ಲಿ ಸಂದರ್ಶಕ ಪಾದ್ರಿಯಾಗಿದ್ದರು. ಪವಿತ್ರ ಸಪ್ತಾಹದ ಒಂದು ದಿನ ಐರೀನ್ ಗಾರ್ಜಾ ಪಾಪ ನಿವೇದನೆಗಾಗಿ ಚರ್ಚಿಗೆ ಬಂದಿದ್ದಳು. ಆಗ ಪಾದ್ರಿ ಜಾನ್ ಫೀಟ್ ಅವರು ಪಾಪ ನಿವೇದನ ಕಾರ್ಯಕ್ರಮವನ್ನು ನಡೆಸಿಕೊಡತ್ತಿದ್ದರು. ಆಗಲೇ ಗಾರ್ಜಾಳೊಂದಿಗೆ ಸಂಪರ್ಕ ಬೆಳೆಸಿಕೊಂಡ ಪಾದ್ರಿ ಫೀಟ್ ಆಕೆಯನ್ನು ಕೊಂದು ಮುಗಿಸಿದರು. ಈ ಕೊಲೆ ಕೃತ್ಯ ನಡೆದ 60 ವರ್ಷಗಳ ತರುವಾಯ ಅಪರಾಧ ಸಾಬೀತಾಗಿ ಆರೋಪಿ ಪಾದ್ರಿಯು ದೋಷಿ ಎಂದು ನಿರ್ಧಾರವಾದದ್ದು ಮೊನ್ನೆ ಗುರುವಾರ. ಅಂದು ಟೆಕ್ಸಾಸ್ ನ್ಯಾಯಾಲಯ, ಈಗ 87ರ ಹರೆಯದವರಾಗಿರುವ ಆರೋಪಿ ಪಾದ್ರಿ ಜಾನ್ ಫೀಟ್ ಅವರನ್ನು ಕೊಲೆ ಅಪರಾಧಿ ಎಂದು ಘೋಷಿಸಿತ್ತು. ನಿನ್ನೆ ಶುಕ್ರವಾರ ಅವರಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿತು.
ಪಾದ್ರಿ ಹುದ್ದೆಯಿಂದ ನಿವೃತ್ತರಾದ ಬಳಿಕ ಫೀಟ್ ಅವರು ಅರಿಜೋನಾದಲ್ಲಿನ ವಿಶ್ರಾಂತಿ ಗೃಹದಲ್ಲಿ ವಾಸಿಸಿಕೊಂಡಿದ್ದರು. ಅವರ ವಿರುದ್ಧ ದೋಷಾರೋಪ ದಾಖಲಾದೊಡನೆಯೇ ಅವರನ್ನು ಟೆಕ್ಸಾಸ್ಗೆ ಗಡೀಪಾರು ಮಾಡಿಸಿಕೊಳ್ಳಲಾಯಿತು. ಗಾರ್ಜಾಳನ್ನು ತಾನು ಕೊಂದದ್ದು ಹೌದೆಂದು ಪಾದ್ರಿ ಫೀಟ್ ನನ್ನಲ್ಲಿ ತಪ್ಪೊಪ್ಪಿಕೊಂಡಿದ್ದರು ಎಂದು ಮಿಸೋರಿ ಮೊನಾಸ್ಟರಿಯಿಂದ ಸಾಕ್ಷ್ಯ ನುಡಿಯಲು ಬಂದಿದ್ದ ನಿವೃತ್ತ ಟ್ರ್ಯಾಪಿಸ್ಟ್ ಸನ್ಯಾಸಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿದ್ದರು. ಪಾದ್ರಿ ಫೀಟ್ ಅವರು ಗಾರ್ಜಾಳ ಕೊಲೆ ಮಾಡಿದ್ದ ಸಂದರ್ಭದಲ್ಲಿ ಟೆಕ್ಸಾಸ್ನ ಕ್ರೈಸ್ತ ಸಮುದಾಯ ತುಂಬಾ ವಿಚಲಿತವಾಗಿತ್ತು. ಆಗ ಜಾನ್ ಎಫ್ ಕೆನಡಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದರು. ಕೆನಡಿ ಅವರು ಕ್ರೈಸ್ತ ಮತಸ್ಥರಾಗಿರುವುದರಿಂದ ಅವರಿಗೆ ಕ್ರೈಸ್ತ ಪಾದ್ರಿ ಫೀಟ್ ನಡೆಸಿದ ಗಾರ್ಜಾ ಕೊಲೆಯ ಕಳಂಕ ತಟ್ಟದಿರಲೆಂಬ ಕಾರಣಕ್ಕೆ ಗಾರ್ಜಾಳ ಕೊಲೆಯನ್ನು ಮುಚ್ಚಿ ಹಾಕುವ ಹುನ್ನಾರವೂ ನಡೆದಿತು. ಈಗ 60 ವರ್ಷಗಳ ತರುವಾಯ ಕೊಲೆಗಾರ ಪಾದ್ರಿ ಫೀಟ್ನ ಅಪರಾಧ ಸಾಬೀತಾಗಿ, 87ರ ಹರೆಯದಲ್ಲಿರುವ ಆತನಿಗೆ ಜೀವಾವಧಿ ಜೈಲು ಶಿಕ್ಷೆಯಾಗಿರುವುದು ಕಾನೂನು ಕೈಗಳು ಎಷ್ಟು ಉದ್ದ ಎಂಬುದು ಅಮೆರಿಕದ ನ್ಯಾಯಾಂಗ ಚರಿತ್ರೆಯಲ್ಲಿ ದಾಖಲಾಗುವಂತಾಯಿತು.

 

                                       

ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ಎಸಗಿ ಬೆಂಕಿ ಹಚ್ಚಿದ ಕಾಮುಕರು

ಡಿಸೆಂಬರ್-9 

ಭೋಪಾಲ್: 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಹೇಯ ಕೃತ್ಯ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ.
ಘಟನೆಯಲ್ಲಿ ಬಾಲಕಿಯ ದೇಹ 95ರಷ್ಟು ಸುಟ್ಟು ಹೋಗಿದ್ದು, ಆಕೆಯನ್ನು ಬುಂದೇಲ್ ಖಂಡ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಮಧ್ಯಪ್ರದೇಶದ ಗೃಹ ಸಚಿವ ಭೂಪೇಂದ್ರ ಸಿಂಗ್ ತವರು ಜಿಲ್ಲೆಯಲ್ಲಿ ನಡೆದ ಎರಡನೇ ಗ್ಯಾಂಗ್ ರೇಪ್ ಇದಾಗಿದೆ.
ಆರೋಪಿ ಶುಭಂ ಯಾದವ್ (20) ಹಾಗೂ ರಾಘವೇಂದ್ರ ಸೇನ್ (25) ಬಾಲಕಿಯ ಮನೆಗೆ ಹೋಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಸಂತ್ರಸ್ತ ಬಾಲಕಿ ಅಳುತ್ತಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ವಿಷಯ ಯಾರಿಗಾದರೂ ಗೊತ್ತಾಗುತ್ತದೆ ಎಂದು ಹೆದರಿದ ಕಾಮುಕರು ಆಕೆಯ ಮನೆಯಲ್ಲಿದ್ದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

     456 

ಕೊಹ್ಲಿ-ಅನುಷ್ಕಾ ಮದುವೆ : ಇಬ್ಬರು ಆಟಗಾರರಿಗೆ ಮಾತ್ರ ಆಹ್ವಾನ

 ಡಿಸೆಂಬರ್-9

 ಇಟಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ತಯಾರಿಯಲ್ಲಿರುವ ಕೊಹ್ಲಿ ಹಾಗೂ ಅನುಷ್ಕಾ ಕುಟುಂಬ ಬೇರೆ ಬೇರೆ ವಿಮಾನ ನಿಲ್ದಾಣದಿಂದ ಇಟಲಿಗೆ ಪ್ರಯಾಣ ಬೆಳೆಸಿದೆ. ಮೂಲಗಳ ಪ್ರಕಾರ ಅನುಷ್ಕಾ ಶರ್ಮಾ ಪಂಡಿತರನ್ನೂ ತಮ್ಮ ಜೊತೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ವಿಶ್ರಾಂತಿಗಾಗಿ ಶ್ರೀಲಂಕಾ ವಿರುದ್ಧ ನಡೆಯುವ ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ ಎನ್ನಲಾಗಿತ್ತು. ಆದರೆ ಅನುಷ್ಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರಜೆ ಪಡೆದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರನ್ನು ಮಾತ್ರ ಕೊಹ್ಲಿ ಮದುವೆಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ ಡಿಸೆಂಬರ್ 10ರಂದು ಮೊದಲ ಏಕದಿನ ಪಂದ್ಯವನ್ನಾಡಲಿದೆ. ಆಟಗಾರರು ಪಂದ್ಯದಲ್ಲಿ ಬ್ಯುಸಿಯಿರುವುದರಿಂದ ಕೊಹ್ಲಿ ಟೀಂ ಇಂಡಿಯಾ ಆಟಗಾರರಿಗೆ ಆಹ್ವಾನ ನೀಡಿಲ್ಲ. ಆಪ್ತ ಮೂಲಗಳ ಪ್ರಕಾರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಗೆ ಮಾತ್ರ ಕೊಹ್ಲಿ ಇಟಲಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಕೊಹ್ಲಿ ಬಾಲ್ಯದ ತರಬೇತುದಾರ ರಾಜ್ಕುಮಾರ್ ಶರ್ಮಾ ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ರಾಜ್ಕುಮಾರ್ ಶರ್ಮಾ ಈಗಾಗಲೇ ರಜೆ ಪಡೆದಿದ್ದಾರೆಂದು ಮೂಲಗಳು ಹೇಳಿವೆ.ಹೊಸ ವರ್ಷವನ್ನು ಕೊಹ್ಲಿ-ಅನುಷ್ಕಾ ದಂಪತಿಯಾಗಿ ಸ್ವಾಗತಿಸುವ ತಯಾರಿಯಲ್ಲಿದ್ದು, ಡಿಸೆಂಬರ್ 20ರಂದು ಮುಂಬೈನಲ್ಲಿ ಅದ್ಧೂರಿ ಪಾರ್ಟಿ ನೀಡುವ ಸಾಧ್ಯತೆಯಿದೆ.

 

 

                                                                     

ಕೊಂದ 60 ವರ್ಷ ಬಳಿಕ ಪಾದ್ರಿಗೆ ಜೀವಾವಧಿ

ಡಿಸೆಂಬರ್-9 

ಸ್ಯಾನ್ ಅಂಟಾನಿಯೋ : 60 ವರ್ಷಗಳ ಹಿಂದೆ ತನ್ನ ಬಳಿ ಪಾಪ ನಿವೇದನೆಗಾಗಿ ಬಂದಿದ್ದ ಓರ್ವ ಮಾಜಿ ಸೌಂದರ್ಯ ರಾಣಿ ಯನ್ನು ಕೊಲೆಗೈದ ಅಪರಾಧಕ್ಕಾಗಿ 87ರ ಹರೆಯದ ನಿವೃತ್ತ ಕ್ಯಾಥೋಲಿಕ್ ಪ್ರೀಸ್ಟ್ ಗೆ ದಕ್ಷಿಣ ಟೆಕ್ಸಾಸ್ನ ನ್ಯಾಯಾಧೀಶರು ಜೀವಾವಧಿ ಜೈಲು ಶಿಕ್ಷೆ ವಿಧಿಸಿದ್ದಾರೆ.
ಪಾದ್ರಿ ಜಾನ್ ಫೀಟ್ ಅವರು ಈ ಕೊಲೆ ನಡೆಸಿದ್ದಾಗ 27ರ ಹರೆಯದ ತರುಣರಾಗಿದ್ದರು. ಕೊಲೆಗೀಡಾಗಿದ್ದ ಸೌಂದರ್ಯ ರಾಣಿ ಐರೀನ್ ಗಾರ್ಜಾ 25ರ ಹರೆಯದವಳಾಗಿದ್ದಳು. 1960ರ ಆ ದಿನಗಳಲ್ಲಿ ಪಾದ್ರಿ ಜಾನ್ ಫೀಟ್, ಟೆಕ್ಸಾಸ್ನ ಮೆಕಾಲೆನ್ ನಲ್ಲಿ ಸಂದರ್ಶಕ ಪಾದ್ರಿಯಾಗಿದ್ದರು. ಪವಿತ್ರ ಸಪ್ತಾಹದ ಒಂದು ದಿನ ಐರೀನ್ ಗಾರ್ಜಾ ಪಾಪ ನಿವೇದನೆಗಾಗಿ ಚರ್ಚಿಗೆ ಬಂದಿದ್ದಳು. ಆಗ ಪಾದ್ರಿ ಜಾನ್ ಫೀಟ್ ಅವರು ಪಾಪ ನಿವೇದನ ಕಾರ್ಯಕ್ರಮವನ್ನು ನಡೆಸಿಕೊಡತ್ತಿದ್ದರು. ಆಗಲೇ ಗಾರ್ಜಾಳೊಂದಿಗೆ ಸಂಪರ್ಕ ಬೆಳೆಸಿಕೊಂಡ ಪಾದ್ರಿ ಫೀಟ್ ಆಕೆಯನ್ನು ಕೊಂದು ಮುಗಿಸಿದರು. ಈ ಕೊಲೆ ಕೃತ್ಯ ನಡೆದ 60 ವರ್ಷಗಳ ತರುವಾಯ ಅಪರಾಧ ಸಾಬೀತಾಗಿ ಆರೋಪಿ ಪಾದ್ರಿಯು ದೋಷಿ ಎಂದು ನಿರ್ಧಾರವಾದದ್ದು ಮೊನ್ನೆ ಗುರುವಾರ. ಅಂದು ಟೆಕ್ಸಾಸ್ ನ್ಯಾಯಾಲಯ, ಈಗ 87ರ ಹರೆಯದವರಾಗಿರುವ ಆರೋಪಿ ಪಾದ್ರಿ ಜಾನ್ ಫೀಟ್ ಅವರನ್ನು ಕೊಲೆ ಅಪರಾಧಿ ಎಂದು ಘೋಷಿಸಿತ್ತು. ನಿನ್ನೆ ಶುಕ್ರವಾರ ಅವರಿಗೆ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿತು. ಪಾದ್ರಿ ಹುದ್ದೆಯಿಂದ ನಿವೃತ್ತರಾದ ಬಳಿಕ ಫೀಟ್ ಅವರು ಅರಿಜೋನಾದಲ್ಲಿನ ವಿಶ್ರಾಂತಿ ಗೃಹದಲ್ಲಿ ವಾಸಿಸಿಕೊಂಡಿದ್ದರು. ಅವರ ವಿರುದ್ಧ ದೋಷಾರೋಪ ದಾಖಲಾದೊಡನೆಯೇ ಅವರನ್ನು ಟೆಕ್ಸಾಸ್ಗೆ ಗಡೀಪಾರು ಮಾಡಿಸಿಕೊಳ್ಳಲಾಯಿತು.  

ಗಾರ್ಜಾಳನ್ನು ತಾನು ಕೊಂದದ್ದು ಹೌದೆಂದು ಪಾದ್ರಿ ಫೀಟ್ ನನ್ನಲ್ಲಿ ತಪ್ಪೊಪ್ಪಿಕೊಂಡಿದ್ದರು ಎಂದು ಮಿಸೋರಿ ಮೊನಾಸ್ಟರಿಯಿಂದ ಸಾಕ್ಷ್ಯ ನುಡಿಯಲು ಬಂದಿದ್ದ ನಿವೃತ್ತ ಟ್ರ್ಯಾಪಿಸ್ಟ್ ಸನ್ಯಾಸಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿದ್ದರು. ಪಾದ್ರಿ ಫೀಟ್ ಅವರು ಗಾರ್ಜಾಳ ಕೊಲೆ ಮಾಡಿದ್ದ ಸಂದರ್ಭದಲ್ಲಿ ಟೆಕ್ಸಾಸ್ನ ಕ್ರೈಸ್ತ ಸಮುದಾಯ ತುಂಬಾ ವಿಚಲಿತವಾಗಿತ್ತು. ಆಗ ಜಾನ್ ಎಫ್ ಕೆನಡಿ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿದ್ದರು. ಕೆನಡಿ ಅವರು ಕ್ರೈಸ್ತ ಮತಸ್ಥರಾಗಿರುವುದರಿಂದ ಅವರಿಗೆ ಕ್ರೈಸ್ತ ಪಾದ್ರಿ ಫೀಟ್ ನಡೆಸಿದ ಗಾರ್ಜಾ ಕೊಲೆಯ ಕಳಂಕ ತಟ್ಟದಿರಲೆಂಬ ಕಾರಣಕ್ಕೆ ಗಾರ್ಜಾಳ ಕೊಲೆಯನ್ನು ಮುಚ್ಚಿ ಹಾಕುವ ಹುನ್ನಾರವೂ ನಡೆದಿತು. ಈಗ 60 ವರ್ಷಗಳ ತರುವಾಯ ಕೊಲೆಗಾರ ಪಾದ್ರಿ ಫೀಟ್ನ ಅಪರಾಧ ಸಾಬೀತಾಗಿ, 87ರ ಹರೆಯದಲ್ಲಿರುವ ಆತನಿಗೆ ಜೀವಾವಧಿ ಜೈಲು ಶಿಕ್ಷೆಯಾಗಿರುವುದು ಕಾನೂನು ಕೈಗಳು ಎಷ್ಟು ಉದ್ದ ಎಂಬುದು ಅಮೆರಿಕದ ನ್ಯಾಯಾಂಗ ಚರಿತ್ರೆಯಲ್ಲಿ ದಾಖಲಾಗುವಂತಾಯಿತು.

 

                                                                                                                                                                                                                                                                                           

ಇಂಗ್ಲೆಂಡ್ ಗೆ ಷರತ್ತು ವಿಧಿಸಿದ ಯುರೋಪ್

ಡಿಸೆಂಬರ್-8

ಬ್ರುಸ್ಸೆಲ್ಸ್(ಬೆಲ್ಜಿಯಂ): ಐರೋಪ್ಯ ಸಮುದಾಯದಿಂದ ಹೊರಬರಬೇಕೆಂಬ ಬ್ರಿಟನ್ ನ ಬ್ರಿಕ್ಸಿಟ್ (ಬ್ರಿಟನ್ ಎಕ್ಸಿಟ್ನ ಸಂಕ್ಷಿಪ್ತ ರೂಪ) ಒಪ್ಪಂದ ಪ್ರಕ್ರಿಯೆಯಲ್ಲಿ ಇಂದು ಪ್ರಗತಿ ಕಂಡುಬಂದಿದೆ. ಬ್ರಿಕ್ಸಿಟ್ ವಿಚ್ಛೇದನ ಒಪ್ಪಂದ ಆಗದ ಹೊರತು ವ್ಯಾಪಾರ ವ್ಯವಹಾರ ಹಾಗೂ ಪರಿವರ್ತನಾ ಅವಧಿ ಕುರಿತು ಚರ್ಚಿಸಲು ತನಗೆ ಸಾಧ್ಯವಾಗುವುದಿಲ್ಲ ಎಂಬ ನಿಬಂಧನೆಯನ್ನು ಯುರೋಪ್ ಒಕ್ಕೂಟ (ಇಯು) ವಿಧಿಸಿದೆ. ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರು ಇಂದು ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್ನಲ್ಲಿ ಯೂರೋಪ್ ಆಯೋಗದ ಅಧ್ಯಕ್ಷ ಜೀನ್ ಕ್ಲೌಡ್ ಜಂಕುರ್ ಅವರೊಂದಿಗೆ ಇಂದು ಬ್ರಿಕ್ಸಿಟ್ ಒಪ್ಪಂದ ಕುರಿತು ಮಹತ್ವದ ಮಾತುಕತೆ ನಡೆಸಿದರು.
ವಿಚ್ಛೇದನ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮೊದಲ ಹಂತದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಬ್ರಿಕ್ಸಿಟ್ ಮಾತುಕತೆಯು ವ್ಯಾಪಾರ ವಿಷಯಗಳ ಮೇಲೆ ಮುಂದುವರಿಯಬೇಕು ಎಂದು ಐರೋಪ್ಯ ಒಕ್ಕೂಟ ತಿಳಿಸಿದೆ. ಈ ಸಂಬಂಧ ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಅಲ್ಲಿ ಹೊರಹೊಮ್ಮುವ ನಿರ್ಧಾರದ ಮೇಲೆ ಮುಂದಿನ ಕ್ರಮ ಅವಲಂಬಿತವಾಗಿದೆ. ಇದಕ್ಕೂ ಮುನ್ನ ಜುಂಕರ್ ಅವರು ಐರ್ಲೆಂಡ್ ಪ್ರಧಾನಿ ಲಿಯೋ ವರದ್ಕರ್ ಅವರೊಂದಿಗೆ ಈ ಸಂಬಂಧ ಸಮಾಲೋಚನೆ ನಡೆಸಿದರು. ಇದೇ ಸಂದರ್ಭದಲ್ಲಿ ಮೇ ಅವರು ಐರೋಪ್ಯ ಮಂಡಳಿ ಅಧ್ಯಕ್ಷ ಡೊನಾಲ್ಡ್ ಟಸ್ಕ್ ಅವರೊಂದಿಗೆ ಚರ್ಚೆ ನಡೆಸಿದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ನಿರ್ಧಾರ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

 

456   ಬಾಲನ್ ಡಿ'ಓರ್ ಪ್ರಶಸ್ತಿ ಗೆದ್ದು: ರೊನಾಲ್ಡೋ
 ಡಿಸೆಂಬರ್-8
ಪ್ಯಾರಿಸ್ : ರಿಯಲ್ ಮ್ಯಾಡ್ರಿಡ್ ಫಾರ್ವಡ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ 5ನೇ ಬಾರಿಗೆ ಪ್ರತಿಷ್ಠಿತ ಬಾಲನ್ ಡಿ'ಓರ್ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಈ ಮೂಲಕ ಬಾರ್ಸಿಲೋನಾದ ಸ್ಟಾರ್ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ಸಾಧನೆಯನ್ನು ಸರಿಗಟ್ಟಿದ್ದಾರೆ.
ಪ್ಯಾರಿಸ್'ನಲ್ಲಿ ಗುರುವಾರ ತಡರಾತ್ರಿ ನಡೆದ ಸಮಾರಂಭದಲ್ಲಿ ಪೋರ್ಚುಗೀಸ್ ಸ್ಟಾರ್ ಆಟಗಾರನಿಗೆ ಬಾಲನ್ ಡಿ'ಓರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ರೋನಾಲ್ಡೋ, ನೇಯ್ಮರ್ ಅವರನ್ನು ಹಿಂದಿಕ್ಕಿ ರೊನಾಲ್ಡೋ ಪ್ರಶಸ್ತಿ ಬಾಚಿಕೊಂಡಿದ್ದಾರೆ.
32 ವರ್ಷದ ರೊನಾಲ್ಟೋ 2016-17ರಲ್ಲಿ ರಿಯಲ್ ಮ್ಯಾಡ್ರಿಡ್ ಪರ 42 ಗೋಲು ಬಾರಿಸಿ ಮಿಂಚಿದ್ದರು. ಅಲ್ಲದೇ ಸತತ ಎರಡನೇ ಬಾರಿಗೆ ಬಾಲನ್ ಡಿ'ಓರ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

 

 

                                                                       

ಭಾರತದ ಜೈಲಲ್ಲಿ ಮಲ್ಯಗಿಲ್ಲ ತೊಂದರೆ: ಅಧಿಕಾರಿ

ಡಿಸೆಂಬರ್.8 

ಲಂಡನ್: ಭಾರತದ ಜೈಲುಗಳ ಬಗ್ಗೆ ತಲೆಮರೆಯಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಚಿಂತಿತರಾಗಿದ್ದು, ಆ ಕಾರಣಕ್ಕೆ ಗಡಿಪಾರು ಮಾಡದಂತೆ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಹಿರಿಯ ಅಧಿಕಾರಿಯೊಬ್ಬರು, 'ದೇಶದ ಜೈಲಿನಲ್ಲಿ ಮಲ್ಯ ಆರಾಮಾಗಿರುವಂತೆ ನೋಡಿಕೊಳ್ಳುತ್ತೇವೆ,' ಎಂದಿದ್ದಾರೆ.
ವೈಯಕ್ತಿಕ ಶೌಚಾಲಯ, ಟಿವಿ, ಮನೆ ಆಹಾರದೊಂದಿಗೆ ಮಲ್ಯ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ, ಎಂದು ಅಧಿಕಾರಿಗಳು ಹೇಳಿದ್ದಾರೆ.
'ಭಾರತೀಯ ಜೈಲಲ್ಲಿ ಜೂನ್ 23ರಂದು ಹತ್ಯೆಯಾದ ದೋಷಿ ಮಂಜುಲಾ ಶೇಟೆ ಅವರನ್ನು ಉಲ್ಲೇಖಿಸಿದ ಮಲ್ಯ, ಅಲ್ಲಿ ನನಗೆ ಜೀವ ಭಯವಿದ್ದು, ಗಡೀಪಾರು ಮಾಡುವುದು ಬೇಡ,' ಎಂದು ನ್ಯಾಯಾಧೀಶರ ಬಳಿ ಆಗ್ರಹಿಸಿದ್ದಾರೆ. ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವ ಸಂಬಂಧ ವ್ಯವಹರಿಸುತ್ತಿರುವ ಭಾರತೀಯ ಹಿರಿಯ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿ, 'ಭಾರತೀಯ ಜೈಲಲ್ಲಿ ಅವರು ಆತಂಕ ಪಡುವ ಅಗತ್ಯವೇ ಇಲ್ಲ. ಅವರು ಯೋಚಿಸುವುದು ಅನಗತ್ಯ. ಜೈಲಲ್ಲಿ ನೀಡುವ ಆಹಾರವೂ ಉತ್ತಮ ಗುಣಮಟ್ಟದಲ್ಲಿರುತ್ತದೆ. ಅಲ್ಲದೇ ಜೈಲಿನ ಮೆನುವಂತೆ ಮನೆಯಿಂದ ಆಹಾರ ತರಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ,' ಎಂದಿದ್ದಾರೆ.
'ಭಾರತೀಯ ಜೈಲಿನ ಸ್ಥಿತಿಗತಿ ಬಗ್ಗೆ ವಿದೇಶಿ ಮಾದ್ಯಮದಲ್ಲಿ ಋಣಾತ್ಮಕ ಭಾವನೆಗಳಿದ್ದು, ಗಡೀಪಾರು ಮಾಡುವ ವಿಷಯ ಬಂದಾಗ ಇದನ್ನೇ ವೈಭವೀಕರಿಸಲಾಗುತ್ತಿದೆ. ಈ ಬಗ್ಗೆ ಅಲ್ಲಿಯವರು ಭಾವನೆಯನ್ನು ಬದಲಾಯಿಸಲು ಯತ್ನಿಸಲಾಗುತ್ತಿದೆ,' ಅವರು ಹೇಳಿದ್ದಾರೆ.

 

                                                

ಪ್ರಿಯಾಂಕಾ ಚೋಪ್ರಾ ಏಷ್ಯಾದ ಸೆಕ್ಸಿ ಮಹಿಳೆ

ಡಿಸೆಂಬರ್.8 

ಲಂಡನ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ "ಏಷ್ಯಾದ ಸೆಕ್ಸಿ ಮಹಿಳೆ' ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ನ ನಿಯತಕಾಲಿಕೆ ಈಸ್ಟರ್ನ್ ಐ ಈ ಸಮೀಕ್ಷೆಯನ್ನು ನಡೆಸಿತ್ತು.
ಕಳೆದ ವರ್ಷ ಇದೇ ಸಮೀಕ್ಷೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ಬಾರಿ ದೀಪಿಕಾ ಮೂರನೇ ಸ್ಥಾನದಲ್ಲಿದ್ದಾರೆ. ನಟಿ ನಿಯಾ ಶರ್ಮಾ ಎರಡನೇ ಸ್ಥಾನಕ್ಕೇರಿದ್ದಾರೆ. ಹಾಲಿವುಡ್ನಲ್ಲಿ ಟಿವಿ ಶೋ ಕ್ವಾಂಟಿಕೋ ಮತ್ತು ಸಿನಿಮಾ ಬೇವಾಚ್ನಿಂದಾಗಿ ಪ್ರಿಯಾಂಕಾ ಜನರ ಮನಸೂರೆಗೊಂಡಿದ್ದಾಳೆ ಎಂದು ವಿವರಿಸಲಾಗಿದೆ. ಉಳಿದಂತೆ ಆಲಿಯಾ ಭಟ್, ಮಹಿರಾ ಖಾನ್, ದೃಷ್ಟಿ ಧಮಿ ಕೂಡ "ಮಾದಕ ಮಹಿಳೆಯರು' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

 

                                             

ಸಂಸತ್ ಕ್ಷೇತ್ರಗಳಲ್ಲಿ ಎಡ ಮೈತ್ರಿಕೂಟ ಗೆಲುವು

ಡಿಸೆಂಬರ್.8

ಕಠ್ಮಂಡು: ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ನಡೆದ ಪ್ರಾಂತೀಯ ಮತ್ತು ಸಂಸದೀಯ ಚುನಾವಣೆಯ ಮತ ಎಣಿಕೆ ಮುಂದುವರಿದಿದ್ದು, ಎಡ ಮೈತ್ರಿಪಕ್ಷಗಳು ಮೂರು ಸಂಸದೀಯ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.
ವಿರೋಧ ಪಕ್ಷ ಸಿಪಿಎನ್-ಯುಎಂಎಲ್ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ. ಅದರ ಮಿತ್ರ ಪಕ್ಷವಾದ ಸಿಪಿಎನ್-ಮಾವೋಯಿಸ್ಟ್ ಸೆಂಟರ್, ನೇಪಾಳಿ ಕಾಂಗ್ರೆಸ್ನನ್ನು ಮಣಿಸಿ ಜಯಗಳಿಸಿದೆ. ಗುರುವಾರ ಎರಡನೇ ಹಂತದ ಮತದಾನ ಭಾರೀ ಬಂದೋಬಸ್ತ್ ನಡುವೆ ನಡೆದಿದ್ದರೂ, ಎರಡು ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಲಿಲ್ಲ.
ವಿಶ್ವದ ಏಕೈಕ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುವ ನೇಪಾಳದ 45 ಜಿಲ್ಲೆಗಳಲ್ಲಿ ನ.7ರಂದು ಬೆಳಗ್ಗೆಯಿಂದಲೇ ಚುರುಕಿನ ಮತದಾನ ನಡೆದಿತ್ತು. ಎರಡನೇ ಹಂತದ ಮತದಾನಕ್ಕಾಗಿ 12.2 ದಶಲಕ್ಷ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸುವ ಅಧಿಕಾರ ಪಡೆದಿದ್ದರು. 45 ಜಿಲ್ಲೆಗಳ 128 ಸಂಸದೀಯ ಕ್ಷೇತ್ರಗಳು ಹಾಗೂ 256 ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ. ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ ಸೇರಿದಂತೆ ಒಟ್ಟು 4,482 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ. ನೇಪಾಳದಲ್ಲಿ 2015ರಲ್ಲಿ ಹೊಸ ಸಂವಿಧಾನ ಜನರಿಗೆ ಬಂದ ನಂತರ ಮೊದಲ ಬಾರಿ ಈ ಚುನಾವಣೆ ನಡೆಯುತ್ತಿದೆ.

 

            

ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ಆಸ್ಟ್ರೇಲಿಯಾ

ಡಿಸೆಬರ್.8
ಸಿಡ್ನಿ: ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ವಿಶ್ವದ 26 ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾವೂ ಇದೀಗ ಸೇರಿಕೊಂಡಿದೆ. ಆ ಮೂಲಕ ಈ ಕಾನೂನು ಬಾಹಿರವಾಗಿದ್ದ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಸರಕಾರದ ಕ್ರಮವನ್ನು ಸ್ವಾಗತಿಸಿ, ಸಲಿಂಗ ಪ್ರೇಮಿಗಳು 'ಡೇ ಫಾರ್ ಲವ್' ಎಂದು ಸಂಭ್ರಮಿಸಿದ್ದಾರೆ.
ಸಲಿಂಗ ವಿವಾಹವನ್ನು ವಿರೋಧಿಸಿದ ಸಾಂಪ್ರಾದಾಯವಾದಿ ಸಂಸದರಿಗೆ ಮುಖಭಂಗವಾದಂತಾಗಿದೆ. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ, 150 ಸಂಸದರಲ್ಲಿ ಐದಕ್ಕೂ ಕಡಿಮೆ ಮಂದಿ ಈ ಕಾನೂನು ಜಾರಿಗೊಳಿಸುವುದನ್ನು ವಿರೋಧಿಸಿದ್ದರು.
'ಎಂಥ ಅದ್ಭುತ ದಿನ, ಪ್ರೀತಿ, ಸಮಾನತೆ ಮತ್ತು ಗೌರವಕ್ಕೆ ಬೆಲೆ ಸಿಕ್ಕ ದಿನ. ಇಂಥ ಮದುವೆಗಳು ಮತ್ತಷ್ಟು ನಡೆಯಲಿವೆ,' ಎಂದು ಪ್ರಧಾನಿ ಮಲ್ಕೋಲ್ಮ್ ಟರ್ಲ್ಬಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಲಿಂಗ ಮದುವೆ ಶನಿವಾರದಿಂದ ಕಾನೂನುಬದ್ಧಗೊಳ್ಳಲಿದೆ. ಮದುವೆಯನ್ನು ಮಾನ್ಯ ಮಾಡಲು ತಿಂಗಳ ಕಾಲ ಅಗತ್ಯವಿರುವುದಿಂದ ಜನೇವರಿಯಲ್ಲಿ ನೆರವೇರುವ ಸಲಿಂಗಿ ವಿವಾಹ ಕಾನೂನುಬದ್ಧವಾಗಲಿದೆ.

 

                                            

ನೇಪಾಳದಲ್ಲಿ 2ನೇ ಹಂತ ಚುನಾವಣೆಗೆ ಬಿರುಸಿನ ಮತದಾನ

ಡಿಸೆಂಬರ್-7

ಕಠ್ಮಂಡು: ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಐತಿಹಾಸಿಕ ಪ್ರಾಂತೀಯ ಮತ್ತು ಸಂಸದೀಯ ಚುನಾವಣೆಯ ಎರಡನೇ ಮತ್ತು ಕೊನೆ ಹಂತದ ಚುನಾವಣೆಗೆ ಇಂದು ಭಾರೀ ಬಂದೋಬಸ್ತ್ ನಡುವೆ ಬಿರುಸಿನ ಮತದಾನ ನಡೆಯಿತು. ವಿಶ್ವದ ಏಕೈಕ ಸಂಪೂರ್ಣ ಹಿಂದೂ ರಾಷ್ಟ್ರವಾಗಿರುವ ನೇಪಾಳದ 45 ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಚುರುಕಿನ ಮತದಾನ ನಡೆದಿದ್ದು, ಬಹು ನಿರೀಕ್ಷಿತ ರಾಜಕೀಯ ಸ್ಥಿರತೆ ಸ್ಥಾಪನೆಯಾಗುವ ಆಶಾಭಾವನೆ ಮತದಾರರಲ್ಲಿದೆ.
ಎರಡನೇ ಹಂತದ ಮತದಾನಕ್ಕಾಗಿ 12.2 ದಶಲಕ್ಷ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸುವ ಅಧಿಕಾರ ಪಡೆದಿದ್ದಾರೆ. ೪೫ ಜಿಲ್ಲೆಗಳ 128 ಸಂಸದೀಯ ಕ್ಷೇತ್ರಗಳು ಹಾಗೂ 256 ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಏರ್ಪಟ್ಟಿದ್ದು, ಕೊರೆಯುವ ಚಳಿಯನ್ನು ಲೆಕ್ಕಿಸದೇ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು. ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ ಸೇರಿದಂತೆ ಒಟ್ಟು 4,482 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ.

 

                                                          

ಜೆರುಸಲೆಂ ಘೋಷಣೆ : ನಾಳೆ ವಿಶ್ವಸಂಸ್ಥೆ ಮಹತ್ವದ ಸಭೆ

ಡಿಸೆಂಬರ್.7 

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಮಾನ್ಯ ಮಾಡಲು ಘೋಷಿಸಿರುವ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಬಿಕ್ಕಟ್ಟು ಕುರಿತು ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಾಳೆ ಮಹತ್ವದ ಸಭೆಯೊಂದನ್ನು ಕರೆದಿದೆ. ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಾಳೆ ಈ ವಿಶೇಷ ಸಭೆ ನಡೆಯಲಿದ್ದು, ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳಲ್ಲಿ ಎಂಟು ದೇಶಗಳ ಮನವಿ ಮೇರೆಗೆ ಭದ್ರತಾ ಮಂಡಳಿ ಸಮಾವೇಶಗೊಳ್ಳಲಿದೆ.
ಎರಡು ಖಾಯಂ ಸದಸ್ಯ ದೇಶಗಳಾದ ಬ್ರಿಟನ್ ಮತ್ತು ಫ್ರಾನ್ಸ್ ಹಾಗೂ ಇತರ ಶಾಶ್ವತರಹಿತ ರಾಷ್ಟ್ರಗಳಾದ ಬೊಲಿವಿಯಾ, ಈಜಿಪ್ಟ್, ಇಟಲಿ, ಸೆನೆಗಲ್, ಸ್ವೀಡನ್ ಮತ್ತು ಉರುಗ್ವೆ ವಿಶೇಷ ಸಭೆ ಕರೆಯುವಂತೆ ಕೋರಿದ್ದವು. ವಿಶ್ವಸಂಸ್ಥೆ ಮುಖ್ಯಸ್ಥ ಅಂಟೊನಿಯೊ ಗುಟೆರ್ರೆಸ್ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡುವರು. ಈ ವಿಷಯವನ್ನು ನೇರ ಮಾತುಕತೆ ಮೂಲಕ ಇತ್ಯರ್ಥಗೊಳಿಸಬೇಕೆಂದು ಅವರು ಈ ಹಿಂದೆ ಮನವಿ ಮಾಡಿದ್ದರು. ಟ್ರಂಪ್ ನಿನ್ನೆ ರಾತ್ರಿ ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಮಾನ್ಯ ಮಾಡಿರುವುದಾಗಿ ಘೋಘಿಸಿದ್ದು ಅಮೆರಿಕದ ರಾಯಭಾರಿ ಕಚೇರಿಯನ್ನು ಟೆಲ್ಅವಿವ್ನಿಂದ ಜೆರುಸಲೆಂಗೆ ಸ್ಥಳಾಂತರಿಸಲು ವಿದೇಶಾಂಗ ಇಲಾಖೆಗೆ ಸೂಚನೆ ನೀಡಿದ್ದಾರೆ.
ಪ್ರಾಚೀನ ಕಾಲದಿಂದಲೂ ಜೆರುಸಲೆಂ ಯಹೂದಿಯರಿಗೆ ರಾಜಧಾನಿಯಾಗಿದೆ. ಅಲ್ಲದೇ ಈಗಲೂ ಅಲ್ಲಿ ಸರ್ಕಾರದ ಕೇಂದ್ರ ಕಚೇರಿ, ಪ್ರಮುಖ ಸಚಿವಾಲಯಗಳು ಮತ್ತು ಸುಪ್ರೀಂಕೋರ್ಟ್ ಇದೆ. ಹೀಗಾಗಿ ಟ್ರಂಪ್ ಟೆಲ್ಅವಿವ್ ಬದಲು ಜೆರುಸಲೆಂನನ್ನೇ ಇಸ್ರೇಲ್ ರಾಜಧಾನಿಯಾಗಿ ಪರಿಗಣಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟ್ರಂಪ್ರ ಈ ನಡೆಯಿಂದ ಇಸ್ರೇಲ್ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟುಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅರಬ್ ರಾಷ್ಟ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಐತಿಹಾಸಿಕ ನಿರ್ಧಾರ: ಜೆರುಸಲೆಂನನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾನ್ಯ ಮಾಡಿರುವುದು ಟ್ರಂಪ್ ಅವರ ಚಾರಿತ್ರಿಕ ನಿರ್ಧಾರ ಎಂದು ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲಿ ಪ್ರಶಂಸಿಸಿದ್ದಾರೆ.

 

                                       

ಭಾರತೀಯ ಡ್ರೋನ್ ಪತನ ?

ಡಿಸೆಂಬರ್.7

ಬೀಜಿಂಗ್: ಭಾರತೀಯ ಡ್ರೋನ್ ಒಂದು (ಚಾಲಕನಿಲ್ಲದ ದೂರ ನಿಯಂತ್ರಿತ ವಾಯು ವಾಹನ) ತನ್ನ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳಗೆ ಬಂದು ಪತನಗೊಂಡಿರುವುದಾಗಿ ಚೀನಾ ಮಾಧ್ಯಮ ವರದಿ ಮಾಡಿದೆ. ಆದರೆ ಈ ಘಟನೆ ಯಾವಾಗ, ಎಲ್ಲಿ ನಡೆಯಿತು ಎಂಬಿತ್ಯಾದಿ ಅಗತ್ಯ ಮಾಹಿತಿಗಳನ್ನು ಅದು ನೀಡಿಲ್ಲ.
ಭಾರತೀಯ ಡ್ರೋನ್ ಒಂದು ಚೀನಾ ವಾಯು ಗಡಿಯನ್ನು ಅತಿಕ್ರಮಿಸಿ ಒಳಬಂದು ಪತನಗೊಂಡಾಗ ಚೀನಾ ಸೈನಿಕರು ವೃತ್ತಿಪರ ಹಾಗೂ ಹೊಣೆಯರಿತ ದೃಷ್ಟಿಕೋನದಿಂದ ಪತನಗೊಂಡ ವಾಯು ವಾಹನದ ಗುರುತು ಪರಿಶೀಲಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಚೀನಾ ಸೇನೆಯ ಹಿರಿಯಕ ಅಧಿಕಾರಿಯೋರ್ವರು ಹೇಳಿರುವುದನ್ನು ಚೀನಾ ದ ಸರಕಾರಿ ಒಡೆತನದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಆರೋಪಿತ ಕ್ರಮದಿಂದಾಗಿ ಭಾರತವು ಚೀನದ ಭೌಗೋಳಿಕ ಸಾರ್ವಭೌಮತೆಯ ಉಲ್ಲಂಘನೆ ಮಾಡಿದಂತಾಗಿದೆ ಎಂದು ಚೀನಾದ ಹಿರಿಯ ರಕ್ಷಣಾ ಅಧಿಕಾರಿ ಹೇಳಿದ್ದು ಘಟನೆಯ ಬಗ್ಗೆ ಅತೃಪ್ತಿ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ನಿನ್ನೆ ಚೀನಾ ದ ಗ್ಲೋಬಲ್ ಟೈಮ್ಸ್, "ಭಾರತವು ಚೀನದ ಹೆಚ್ಚುತ್ತಿರುವ ನೌಕಾ ಸಾಮರ್ಥ್ಯವನ್ನು ತಡೆಯುವ ದುರುದ್ದೇಶದಲ್ಲಿ ಅಮೆರಿಕವನ್ನು ಎತ್ತಿ ಕಟ್ಟುತ್ತಿದೆ' ಎಂದು ಆಪಾದಿಸಿತ್ತು.

 

                                                          

ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ಮನೆ, ಅರಣ್ಯ ನಾಶ

ಡಿಸೆಂಬರ್-6

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ವೆಂಚುರಾ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿರುವ ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ನೂರಾರು ಮನೆಗಳು ಆಹುತಿಯಾಗಿವೆ. ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ಹೆದರಿ ಸಾವಿರಾರು ಮಂದಿ ಸುರಕ್ಷಿತ ಸ್ಥಳಗಳಿಗೆ ಪಲಾಯನವಾಗಿದ್ದಾರೆ. ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚಿನೊಂದಿಗೆ ಅಧಿಕ ಉಷ್ಣಾಂಶ, ಶುಷ್ಕ ವಾತಾವರಣ ಮತ್ತು ಬಲವಾದ ಗಾಳಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.
ವೆಂಚುರಾದ ಪರ್ವತ ತಪ್ಪಲಿನ ಪ್ರದೇಶದಲ್ಲಿ ಸೋಮವಾರ ಸಂಜೆಯಿಂದ ಕಾಣಿಸಿಕೊಂಡ ಥಾಮಸ್ ಫೈರ್ ಎಂಬ ಕಾಡ್ಗಿಚ್ಚಿನ ರುದ್ರನರ್ತನ ಸುತ್ತಮುತ್ತ ಪ್ರದೇಶಗಳಿಗೂ ವ್ಯಾಪಿಸಿ ನೂರಾರು ಮನೆಗಳನ್ನು ಆಪೋಶನ ತೆಗೆದುಕೊಂಡಿದೆ. ಅಲ್ಲದೇ ಬೆಂಕಿ ಜ್ವಾಲ್ವೆಗಳಿಗೆ 50,000 ಎಕರೆಗಳಿಗೂ ಹೆಚ್ಚು ಪ್ರದೇಶ ಸುಟ್ಟು ಬೂದಿಯಾಗಿದೆ. ಕ್ಯಾಲಿಫೋರ್ನಿಯಾ ರಾಜ್ಯಪಾಲ ಜೆರ್ರಿ ಬ್ರೌನ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. 1,000ಕ್ಕೂ ಹೆಚ್ಚು ಅಗ್ನಿ ಶಾಮಕ ಸಿಬ್ಬಂದಿ ಅಗ್ನಿಯ ಪ್ರಕೋಪವನ್ನು ನಂದಿಸಲು ಹಗಲಿರುಳು ಹರಸಾಹಸ ಮಾಡುತ್ತಿದ್ದಾರೆ.

 

                                                      

ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹತ್ಯೆ ಸಂಚು ವಿಫಲ

ಡಿಸೆಂಬರ್-6 

ಬ್ರಿಟನ್: ಪ್ರಧಾನಿ ಥೆರೆಸಾ ಮೇ ಹತ್ಯೆಗೆ ಯತ್ನಕ್ಕೆ ರೂಪಿಸಿದ್ದ ಸಂಚನ್ನು ಭದ್ರತಾ ಪಡೆ ಭಗ್ನಗೊಳಿಸಿದೆ. ಇಬ್ಬರು ಉಗ್ರರು ಅವರನ್ನು ಹತ್ಯೆ ಮಾಡಲು ಮುಂದಾಗಿದ್ದರು. ಈ ವಿಷಯವನ್ನು ಯುಕೆ ಮೆಟ್ರೊಪಾಲಿಟನ್ ಪೊಲೀಸರು ಬುಧವಾರ ಬಹಿರಂಗಪಡಿಸಿದ್ದಾರೆ.
ಕಳೆದ ವಾರ ಇಬ್ಬರು ವ್ಯಕ್ತಿಗಳು ಥೆರೆಸಾರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು, ಅವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ನವೆಂಬರ್ 29ರಂದು ಇವರನ್ನು ಕೌಂಟರ್ ಟೆರರ್ ಕಮಾಂಡ್ ಅಧಿಕಾರಿಗಳು ಬಂಧಿಸಿದ್ದರು.
ಆರೋಪಿಗಳನ್ನು ಉತ್ತರ ಲಂಡನ್ ಮೂಲದ ರೆಹಮಾನ್ (20), ಬಿರ್ಮಿಂಗ್ಮನ್ನ ಇಮ್ರಾನ್ (21) ಎಂದು ಗುರುತಿಸಲಾಗಿದೆ. ಸ್ಥಳೀಯ ಡೌನಿಂಗ್ ಸ್ಟ್ರೀಟ್ ಪ್ರದೇಶದಲ್ಲಿ ಥೆರೆಸಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಾರೆಂದು ತಿಳಿದು ಸ್ಫೋಟಕಗಳನ್ನು ಬಳಸಿ ಹತ್ಯೆಗೆ ಸಂಚು ರೂಪಿಸಿದ್ದರು. ಅವರ ಮೇಲೆ ಅನುಮಾನ ಬಂದು ಪೊಲೀಸರು ವಶಕ್ಕೆ ಪಡೆದ ಮೇಲೆ ವಿಷಯ ಬಹಿರಂಗವಾಗಿದೆ.
ಕಳೆದ ಹನ್ನೆರಡು ತಿಂಗಳಲ್ಲಿ ಥೆರೆಸಾರನ್ನು ಹತ್ಯೆಗಯ್ಯಲು ಒಂಬತ್ತು ಸಲ ಯೋಜನೆ ರೂಪಿಸಿದ್ದರೆಂದು, ಅವರ ಯೋಜನೆಗಳನ್ನು ಬ್ರಿಟನ್ ಪೊಲೀಸರು ಚಾಕಚಕ್ಯತೆಯಿಂದ ಭಗ್ನಗೊಳಿಸಿದ್ದರು ಎಂದು ಥೆರೆಸಾ ಪ್ರತಿನಿಧಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿದ್ದಾರೆ.

 

                                                                                              

ಭ್ರಷ್ಟಾಚಾರಿ ಪಾಕ್ ಗೆ ಚೀನಾ ಹೇಗೆ ನೀಡ್ತು ಶಾಕ್ ಗೋತ್ತಾ?

ಡಿಸೆಂಬರ್.6

ಇಸ್ಲಾಮಾಬಾದ್: ನಮ್ಮ ಸ್ನೇಹ ಉಕ್ಕಿಗಿಂತಲೂ ಗಟ್ಟಿ ಎಂದು ಪಾಕಿಸ್ತಾನವನ್ನು ಹಾಡಿ ಹೊಗಳುತ್ತಿದ್ದ ಚೀನಾಕ್ಕೆ ಇದೀಗ ನೆರೆ ರಾಷ್ಟ್ರದ ಕಪಟತನದ ಅರಿವಾಗಿದೆ. ಪಾಕಿಸ್ತಾನ ನಡೆಸುತ್ತಿರುವ ಭಾರಿ ಭ್ರಷ್ಟಾಚಾರದ ಸುಳಿವನ್ನು ಪಡೆದ ಚೀನಾ ಮೂರು ಪ್ರಮುಖ ರಸ್ತೆ ಯೋಜನೆಗಳಿಗೆ ನೀಡುವ ಅನುದಾನವನ್ನು ನಿಲ್ಲಿಸಿದೆ.
3.21 ಲಕ್ಷ ಕೋಟಿ ರೂ. ವೆಚ್ಚ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪೆಕ್) ಯೋಜನೆಯ ಭಾಗವಾಗಿ ಮೂರು ಪ್ರಮುಖ ಹೆದ್ದಾರಿಗಳ ನಿರ್ಮಾಣಕ್ಕೆ ಮುಂದಾಗಿತ್ತು. ಇದಕ್ಕೆ 1 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಕಂಡ ಹಿನ್ನೆಲೆಯಲ್ಲಿ ಅನುದಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಚೀನಾ ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ನಡೆಯುತ್ತಿದ್ದ ಯೋಜನೆಗಳಿಗೆ ಚೀನಾ ಬ್ರೇಕ್ ಹಾಕಿರುವುದು ಪಾಕಿಸ್ತಾನಕ್ಕೆ ಆಘಾತ ಉಂಟು ಮಾಡಿದೆ ಎಂದು ಅಲ್ಲಿನ ಡಾನ್ ಪತ್ರಿಕೆ ವರದಿ ಮಾಡಿದೆ. ಚೀನಾ ಸರಕಾರ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ ಬಳಿಕವಷ್ಟೇ ಇನ್ನು ಹಣ ಬಿಡುಗಡೆಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಯಾವ ಯೋಜನೆಗಳಿಗೆ ಅನುದಾನ ತಡೆ?
ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ 3.21 ಲಕ್ಷ ಕೋಟಿ ವೆಚ್ಚ ಸಿಪೆಕ್ ಯೋಜನೆಯ ಭಾಗ ಇದು. ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಿಂದ ಪಾಕಿಸ್ತಾನದ ಬಲೂಚಿಸ್ತಾನಕ್ಕೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಹಾದು ಹೋಗುತ್ತದೆ. ಇದರಡಿ ಬರುವ ಮೂರು ಬೃಹತ್ ರಸ್ತೆ ಯೋಜನೆಗಳಿಗೆ ಅನುದಾನ ತಡೆಯಾಗಿದೆ.
1. 210 ಕಿ.ಮೀ. ಉದ್ದದ ಡೇರಾ ಇಸ್ಮಾಯಿಲ್ ಖಾನ್-ಝೋಬ್ ರೋಡ್: 8100 ಕೋಟಿ
2. 110 ಕಿ.ಮೀ. ಉದ್ದದ ಖುಜ್ದಾರ್-ಬಾಸಿಮಾ ರೋಡ್: 2000 ಕೋಟಿ ವೆಚ್ಚ
3. 136 ಕಿ.ಮೀ. ಉದ್ದದ ರಾಯ್ಕೋಟ್-ತಕೋಟ್ ನಡುವಿನ ಕಾರಕೋರಮ್ ಹೆದ್ದಾರಿ: 850 ಕೋಟಿ ವೆಚ್ಚ
ಪಾಕಿಸ್ತಾನದ್ದೇ ಮೂಲ ಯೋಜನೆ
ಮೂರು ಹೆದ್ದಾರಿಗಳ ಅಭಿವೃದ್ಧಿ ಮೂಲತಃ ಪಾಕಿಸ್ತಾನ ಸರಕಾರದ ಯೋಜನೆಗಳೇ. 2016ರಲ್ಲಿ ಚೀನಾವು ಈ ಯೋಜನೆಗಳನ್ನೂ ತನ್ನ ಮಹತ್ವಾಕಾಂಕ್ಷಿ ಸಿಪೆಕ್ ಯೋಜನೆಗಳಡಿ ಸೇರಿಸಿಕೊಳ್ಳುವುದಾಗಿ ಘೋಷಿಸಿತ್ತು.
ಆದರೆ, ಸಿಪೆಕ್ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮಾಡಿದ ವರದಿಗಳನ್ನು ಗಮನಿಸಿ ಚೀನಾ ಅನುದಾನ ತಡೆಯ ಕಠಿಣ ನಿರ್ಧಾರಕ್ಕೆ ಬಂದಿದೆ.

 

                                    

ಇಸ್ರೇಲ್ ರಾಜಧಾನಿ ಜೆರುಸಲೆಂ ಘೋಷಣೆಗೆ ಟ್ರಂಪ್ ಸಜ್ಜು

ಡಿಸೆಂಬರ್.6 

ವಾಷಿಂಗ್ಟನ್: ಕೆಲವು ನಿರ್ಧಾರಗಳಿಂದ ವಿವಾದಗಳಿಗೆ ಗುರಿಯಾಗಿರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಇಸ್ರೇಲ್ ರಾಜಧಾನಿಯನ್ನಾಗಿ ಟೆಲ್ಅವಿವ್ ಬದಲು ಜೆರುಸಲೆಂನನ್ನು ಗುರುತಿಸಲು ಮುಂದಾಗಿದ್ದಾರೆ. ಟ್ರಂಪ್ ಅವರ ಈ ನಡೆ ಭಾರೀ ಬಿಕ್ಕಟ್ಟಿಗೆ ಎಡೆ ಮಾಡಿಕೊಡುವ ಸ್ಪಷ್ಟ ಸೂಚನೆಗಳು ಲಭಿಸಿವೆ. 
ಟ್ರಂಪ್ ಅವರು ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಂನನ್ನು ಮಾನ್ಯ ಮಾಡಲಿದ್ದಾರೆ ಹಾಗೂ ಅಮೆರಿಕದ ರಾಯಭಾರಿ ಕಚೇರಿಯನ್ನು ಟೆಲ್ಅವಿವ್ನಿಂದ ಜೆರುಸಲೆಂಗೆ ಸ್ಥಳಾಂತರಿಸಲು ವಿದೇಶಾಂಗ ಇಲಾಖೆಗೆ ಸೂಚನೆ ನೀಡಲಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಇಂದು ರಾತ್ರಿ ಟ್ರಂಪ್ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಪ್ರಾಚೀನ ಕಾಲದಿಂದಲೂ ಜೆರುಸಲೆಂ ಯಹೂದಿಯರಿಗೆ ರಾಜಧಾನಿಯಾಗಿದೆ. ಅಲ್ಲದೇ ಈಗಲೂ ಅಲ್ಲಿ ಸರ್ಕಾರದ ಕೇಂದ್ರ ಕಚೇರಿ, ಪ್ರಮುಖ ಸಚಿವಾಲಯಗಳು ಮತ್ತು ಸುಪ್ರೀಂಕೋರ್ಟ್ ಇದೆ. ಹೀಗಾಗಿ ಟ್ರಂಪ್ ಟೆಲ್ಅವಿವ್ ಬದಲು ಜೆರುಸಲೆಂನನ್ನೇ ಇಸ್ರೇಲ್ ರಾಜಧಾನಿಯಾಗಿ ಪರಿಗಣಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟ್ರಂಪ್ರ ಈ ನಡೆಯಿಂದ ಇಸ್ರೇಲ್ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟುಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಇಸ್ರೇಲ್ನಲ್ಲಿರುವ ಮುಸ್ಲಿಮರು, ಯಹೂದಿಗಳು ಮತ್ತು ಕ್ರೈಸ್ತರ ನಡುವೆ ದೊಡ್ಡ ಭಿನ್ನಾಭಿಪ್ರಾಯಗಳಿಗೂ ಕಾರಣವಾಗಲಿದೆ.

 

                               

   ಲಂಡನ್ ನಲ್ಲಿ ವಿಜಯ ಮಲ್ಯ ವಿಚಾರಣೆ ಆರಂಭ

ಡಿಸೆಂಬರ್-5 

ಲಂಡನ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಇಲ್ಲಿನ ನ್ಯಾಯಾಲಯದಲ್ಲಿ ಆರಂಭವಾಯಿತು.
ಆದರೆ, ಅಗ್ನಿ ಅವಘಡದಿಂದಾಗಿ ವಿಚಾರಣೆಯನ್ನು ಮೊಟಕುಗೊಳಿಸಿ ಮುಂದೂಡಲಾಯಿತು. ಬೆಂಕಿ ನಂದಿಸುವ ಸಂದರ್ಭದಲ್ಲಿ ಮಲ್ಯ ಮತ್ತು ಇತರರು ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣ ಹೊರಗೆ ಕಾದರು.
ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಡಿಸೆಂಬರ್ 4ರಿಂದ 14ರ ವರೆಗೆ ವಿಚಾರಣೆ ನಡೆಯಲಿದೆ. ಬಳಿಕ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸಲಿದೆ.
ಭಾರತ–ಬ್ರಿಟನ್ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಸ್ಕರಿಸಿದ್ದು, ಹಸ್ತಾಂತರಿಸುವ ಕುರಿತು ವಿಚಾರಣೆ ನಡೆಯುತ್ತಿದೆ.

                                          

ಭೂಕಂಪ ತೀವ್ರತೆ: ಶೀಘ್ರ ಪತ್ತೆಗೆ ನೂತನ ವಿಧಾನ

ಡಿಸೆಂಬರ್-5 

ಲಂಡನ್: ದೊಡ್ಡ ಮಟ್ಟದಲ್ಲಿ ಸಂಭವಿಸುವ ಭೂಕಂಪದ ತೀವ್ರತೆಯನ್ನು ಶೀಘ್ರ ಪತ್ತೆ ಹಚ್ಚಲು ವಿಜ್ಞಾನಿಗಳು ನೂತನ ವಿಧಾನ ಕಂಡುಹಿಡಿದಿದ್ದಾರೆ. ಪ್ರಸ್ತುತ ವಿಜ್ಞಾನಿಗಳು ಭೂಕಂಪದಿಂದ ಉಂಟಾಗುವ ತರಂಗಾಂತರಗಳನ್ನು ಆಧರಿಸಿ ತೀವ್ರತೆ ಅಂದಾಜಿಸುತ್ತಿದ್ದಾರೆ.
2011ರಲ್ಲಿ ಜಪಾನ್ನ ತೊಹೊಕುವಿನಲ್ಲಿ ಸಂಭವಿಸಿದ ಭೂಕಂಪನದ ವೇಳೆ ಫ್ರಾನ್ಸ್ನ ಪ್ಯಾರಿಸ್ ಡಿಡೆರೊಟ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ನಡೆಸಿದ ಅಧ್ಯಯನದಿಂದ, ಗುರುತ್ವಾಕರ್ಷಣೆಯಲ್ಲಿ ಉಂಟಾಗುವ ಬದಲಾವಣೆಯಿಂದ ತ್ವರಿತವಾಗಿ ಭೂಕಂಪದ ತೀವ್ರತೆ ಪತ್ತೆ ಮಾಡಬಹುದು ಎಂದು ತಿಳಿದುಬಂದಿದೆ.
ಭೂಕಂಪ ಸಂಭವಿಸಿದ ತಕ್ಷಣ ಗುರುತ್ವಾಕರ್ಷಣ ವಲಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ತರಂಗಾಂತರಗಳ ವಿಧಾನಕ್ಕಿಂತ ಹೆಚ್ಚು ವೇಗವಾಗಿ ಈ ವಿಧಾನದಿಂದ ಭೂಕಂಪನದ ತೀವ್ರತೆ ಪತ್ತೆ ಮಾಡಬಹುದು ಎಂದು ’ಸೈನ್ಸ್ ಜರ್ನಲ್’ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಭೂಕಂಪದಿಂದ ಭೂಮಿಯ ಗುರುತ್ವಾಕರ್ಷಣ ವಲಯಕ್ಕೆ ಅಡ್ಡಿ ಉಂಟಾಗುತ್ತದೆ. ಇದರಿಂದ ಭಿನ್ನವಾದ ತರಂಗಾಂತರಗಳು ಉಂಟಾಗುತ್ತವೆ. ಈ ತರಂಗಾಂತರಗಳು ಬೆಳಕಿನಷ್ಟು ವೇಗವಾಗಿ ಇರುವುದರಿಂದ ಭೂಕಂಪದ ತೀವ್ರತೆಯನ್ನು ತ್ವರಿತವಾಗಿ ಪತ್ತೆ ಮಾಡಲು ಸಾಧ್ಯ ಎಂದು ಸಂಶೋಧಕರು ವಿವರಿಸಿದ್ದಾರೆ.

 
2011ರಲ್ಲಿ ತೊಹೊಕುವಿನಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 9.1 ತೀವ್ರತೆ ದಾಖಲಿಸಿತ್ತು. ಈ ಭೂಕಂಪದ ವೇಳೆ ಮೊದಲ ಬಾರಿಗೆ ವಿಜ್ಞಾನಿಗಳು 10 ಸೆಸ್ಮೊಮೀಟರ್ಗಳನ್ನು ಬಳಸಿ ಗುರುತ್ವಾಕರ್ಷಣೆಯಲ್ಲಿ ಉಂಟಾದ ಬದಲಾವಣೆಗಳ ಸಂಕೇತಗಳನ್ನು ದಾಖಲಿಸಿದರು. ಭೂಕಂಪದ ತೀವ್ರತೆಗೆ ಗುರುತ್ವಾಕರ್ಷಣೆಯ ವಲಯ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಆದ್ದರಿಂದ, ಭೂಕಂಪದ ತೀವ್ರತೆಯನ್ನು ತ್ವರಿತವಾಗಿ ಪತ್ತೆ ಮಾಡಲು ಇದು ಉತ್ತಮ ವಿಧಾನ ಎನ್ನುವುದನ್ನು ವಿಜ್ಞಾನಿಗಳು ಈ ಸಂದರ್ಭ ಕಂಡುಕೊಂಡಿದ್ದಾರೆ. 8–8.5ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪದ ಸಂದರ್ಭಗಳಲ್ಲೂ ಈ ನೂತನ ವಿಧಾನ ಬಳಸಲು ಸಾಧ್ಯವಾಗುವಂತೆ ಮಾಡುವುದು ಸದ್ಯಕ್ಕೆ ವಿಜ್ಞಾನಗಳಿಗೆ ಇರುವ ಸವಾಲಾಗಿದೆ. ಏಕೆಂದರೆ 8ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪದ ವೇಳೆ, ಭೂಕಂಪದ ತೀವ್ರತೆಯಿಂದ ಉಂಟಾಗುವ ತರಂಗಾಂತರಗಳಿಗಿಂತಲೂ ಗುರುತ್ವಾಕರ್ಷಣ ವಿಧಾನದಲ್ಲಿ ಉಂಟಾಗುವ ತರಂಗಾಂತರಗಳು ದುರ್ಬಲವಾಗಿರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

 

                                                              

ಭಾರತೀಯ ವನಿತೆ 5ನೇ ಸ್ಥಾನ ಪ್ರಬಲ ರಾಜಕಾರಣಿ ಪಟ್ಟಿಯಲ್ಲಿ

ಡಿಸೆಂಬರ್-5 

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕದ ಕಾಂಗ್ರೆಸ್ನ ನಾಯಕಿ ಪ್ರಮೀಳಾ ಜಯಪಾಲ್ ಅವರು 2018ರ ರಾಜಕೀಯ ಪ್ರಬಲ ರಾಜಕಾರಣಿ ಪಟ್ಟಿಯಲ್ಲಿ(ಪೊಲಿಟಿಕೊಸ್ ಪವರ್ ಲಿಸ್ಟ್) ಐದನೇ ಸ್ಥಾನ ಗಳಿಸಿದ್ದಾರೆ. ಡೆಮೊಕ್ರಾಟಿಕ್ ಪಕ್ಷದ ತಾರೆ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಟೀಕಾಕಾರರೂ ಆದ ಸಂಸತ್ ಸದಸ್ಯೆ ಪ್ರಮೀಳಾ 18 ಪ್ರಭಾವಿಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ ಎಂದು ನಿಯತಕಾಲಿಕ ತಿಳಿಸಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಮೂಲದ ಅಮೆರಿಕ ವನಿತೆ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ. ಮೊದಲು ಕಾಕಸ್ನ ಕಾಂಗ್ರೆಸ್ ಪ್ರಗತಿಪರ ಸಂಘಟನೆಯ ಉಪಾಧ್ಯಕ್ಷೆಯಾಗಿದ್ದ ಪ್ರಮೀಳಾ ನಂತರ ಮಾನವ ಹಕ್ಕುಗಳು ಮತ್ತು ವಲಸೆ ಸುಧಾರಣೆಗಾಗಿ ಪ್ರಭಾವಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದರು.

 

                                                  

ಹಿಂದೂಸ್ಥಾನ್ ಜಿಂದಾಬಾದ್ ಘೋಷಣೆ: ಯುವಕನ ಬಂಧನ

ಡಿಸೆಂಬರ್-5

ಪೇಶಾವಾರ: ಪಾಕಿಸ್ತಾನದಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ ಯುವಕನನ್ನು ಬಂಧಿಸಲಾಗಿದೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತನ್ನ ಮನೆಯಲ್ಲಿ ಹಿಂದೂಸ್ಥಾನ ಜಿಂದಾಬಾದ್ ಘೋಷಣೆ ಬರೆದು ಕೂಗಿದ್ದ ಯುವಕನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಹಿಂದೂಸ್ಥಾನದ ಪರವಾದ ಘೋಷಣೆ ದೇಶದ ಅಸ್ಮಿತೆಗೆ ಧಕ್ಕೆ ಉಂಟುಮಾಡುತ್ತದೆ ಆದ್ದರಿಂದ ಅದನ್ನು ಅಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

 

                                           

2018ರ ಪಾಕ್ ಚುನಾವಣೆಯಲ್ಲಿ ಹಫೀಜ್ ಸಯೀದ್ ಮುಷರ್ರಫ್ ಮೈತ್ರಿ

ಡಿಸೆಂಬರ್.5 

ಇಸ್ಲಾಮಾಬಾದ್: ಇತ್ತೀಚಿಗಷ್ಟೇ ಲಷ್ಕರ್ ಇ ತೊಯಿಬಾ(ಎಲ್ ಇಟಿ) ಮತ್ತು ಜಾಮಾತ್ ಉದ್ ದಾವಾ(ಜೆಯುಡಿ) ಉಗ್ರ ಸಂಘಟನೆಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಅವರು ಮುಂದಿನ ವರ್ಷ ನಡೆಯಲಿರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಜೆಯುಡಿ ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಸಂದರ್ಶನವೊಂದರಲ್ಲಿ ಜೆಯುಡಿ ಮುಖ್ಯಸ್ಥ ಸಯೀದ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಪಾಕ್ ಮಾಜಿ ಅಧ್ಯಕ್ಷ, ಈ ಸಂಬಂಧ ಇದುವರೆಗೂ ಯಾವುದೇ ಮಾತುಕತೆ ನಡೆದಿಲ್ಲ. ಆದರೆ ಹಫೀಜ್ ಸಯೀದ್ ಮೈತ್ರಿ ಮಾಡಿಕೊಳ್ಳಲು ಬಯಸಿದರೆ ತಾವು ಅದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ಮುಷರ್ರಫ್ ಅವರು ಇತ್ತಿಚೀಗೆ ಸುನ್ನಿ ತೆಹ್ರೀಕ್, ಮಜ್ಲಿಸ್-ಇ-ವಹ್ದತುಲ್ ಮುಸ್ಲಿಮೀನ್, ಪಾಕಿಸ್ತಾನ ಅವಾಮಿ ತೆಹೀರಿಕ್ ಸೇರಿದಂತೆ ಸುಮಾರು ಎರಡು ಡಜನ್ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ, ಮಹಾ ರಾಜಕೀಯ ಮೈತ್ರಿಕೂಟ ರಚಿಸುವುದಾಗಿ ಘೋಷಿಸಿದ್ದರು.
ಹಫೀಜ್ ಸಯೀದ್ ಪಾಕಿಸ್ತಾನದ ಕೆಲವು ಧಾರ್ಮಿಕ ಸಂಘಟನೆಗಳಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾನೆ.

 

 

ಹಹ

ದೇಶಕ್ಕೆ ಮಲ್ಯ ಮೊಸಗಾರ: ಇಂಗ್ಲೆಂಡ್ ನ ಈ ಹಳ್ಳಿಗೆ ಆಸ್ತಿಯಂತೆ!!

ಡಿಸೆಂಬರ್.4
ತೆವಿನ್ (ಇಂಗ್ಲೆಂಡ್): ಮಾಡಿದ ಸಾಲ ತೀರಿಸದೆ, ವಿದೇಶಕ್ಕೆ ಪರಾರಿಯಾಗಿ ಇದೀಗ ಭಾರತ ಬಯಸುತ್ತಿರುವ ಆರೋಪಿ, ಮದ್ಯ ದೊರೆ ವಿಜಯ್ ಮಲ್ಯ ಭಾರತೀಯರ ಪಾಲಿಗೆ ತಪ್ಪಿತಸ್ಥನಾದರೆ, ಇಂಗ್ಲೆಂಡ್ನ ಈ ಹಳ್ಳಿಗರು ದೊಡ್ಡ ಆಸ್ತಿಯೆಂದೇ ಪರಿಗಣಿಸುತ್ತಿದ್ದಾರೆ. ಅಲ್ಲಿನ ಜನರೊಂದಿಗೆ ಸ್ನೇಹದಿಂದ ವರ್ತಿಸುತ್ತಿರುವ ಮಲ್ಯನನ್ನು ಭಾರತಕ್ಕೆ ಗಡೀಪಾರು ಮಾಡಲು ಈ ಹಳ್ಳಿಗರ ವಿರೋಧವಿದೆ.
ಇಂಗ್ಲೆಂಡ್ನಲ್ಲಿ ನಡೆದ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಹೋದಾಗ, ಭಾರತೀಯರು 'ಕಳ್ಳ ಕಳ್ಳ' ಎಂದು ಕೂಗಿದ್ದರು. ಆದರೆ, 'ಸಿರಿವಂತರು ಎಂದ ಮೇಲೆ ಆರೋಪಗಳು ಬರೋದು ಸಹಜ. ಏನೇ ಆದರೂ ಮಲ್ಯ ಈ ಹಳ್ಳಿಗೆ ಆಸ್ತಿ ಇದ್ದಂತೆ. ಇಲ್ಲಿಯೇ ಇರಲಿ, ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ,' ಎಂದು ಹಾರೈಸುತ್ತಾರೆ ತೆವಿನ್ ಎಂಬ ಈ ಗ್ರಾಮದ ಜನತೆ.
ಲಂಡನ್ ಉತ್ತರ ಭಾಗದ 48 ಕಿ.ಮೀ.ದೂರದಲ್ಲಿರುವ ಈ ಹಳ್ಳಿಗೆ ಮಲ್ಯ ಹೀರೋ. ಆದರೆ, ಭಾರತದ 17 ಬ್ಯಾಂಕ್ಗಳಿಗೆ ಸುಳ್ಳು ದಾಖಲೆ ನೀಡಿ, 9 ಸಾವಿರ ಕೋಟಿ ರೂ. ಸಾಲ ಪಡೆದು, ದುರಪಯೋಗ ಪಡಿಸಿಕೊಂಡ ಆರೋಪ ಮಲ್ಯ ಮೇಲಿದೆ. ಇಲ್ಲಿ ಸಾಲ ಪಡೆದು ಬ್ರಿಟಿಷ್ ಕಂಪನಿಗಳಲ್ಲಿ ಹೂಡಿರುವ ಆರೋಪವೂ ಮಲ್ಯ ಮೇಲಿದೆ. ಆದರೆ, ಇಂಗ್ಲೆಂಡ್ಗೆ ಪರಾರಿಯಾಗಿ, ಈ ಹಳ್ಳಿಯಲ್ಲಿ ನೆಲೆಸಿರುವ ಮಲ್ಯ ಜನಪ್ರಿಯತೆ ಮಾತ್ರ ಸ್ವಲ್ಪವೂ ಕುಂದಿಲ್ಲ. ಅಲ್ಲದೇ ಸುಮಾರು 1.30 ಲಕ್ಷ ರೂ. ನೀಡಿ ಕ್ರಿಸ್ಮಸ್ ಗಿಡವನ್ನು ಕೊಂಡಿದ್ದು, ಗ್ರಾಮಸ್ಥರಿಗೆ ಈ ಮದ್ಯ ದೊರೆ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಫಾರ್ಮುಲಾ ಒನ್ನಲ್ಲಿಯೂ ಪಾಲ್ಗೊಳ್ಳುವಿಕೆಯೂ ಮಲ್ಯ ಮೇಲಿನ ಪ್ರೀತಿ, ವಿಶ್ವಾಸ ಹೆಚ್ಚಲು ಮತ್ತೊಂದು ಕಾರಣ. ಇಲ್ಲಿ ಮಲ್ಯ ಹೊಂದಿರುವ ಆಸ್ತಿ ಮೌಲ್ಯವೇ ಸುಮಾರು 100 ಕೋಟಿ ರೂ. ಬೆಲೆ ಬಾಳುತ್ತದೆ. ಕಾರಿನಲ್ಲಿ ಈ ಊರಿನಲ್ಲಿ ಅಡ್ಡಾಡುವ ಮಲ್ಯ ಫಾರ್ಮುಲಾ ಒನ್ ವ್ಕಕ್ತಿ ಎಂಬುವುದೇ ಗ್ರಾಮಸ್ಥರಿಗೆ ಎಲ್ಲಿಲ್ಲದ ಖುಷಿ.
ದನ, ಕುರಿ, ಕುದುರೆಗಳಿರುವ ಎಸ್ಟೇಟ್ ಮಧ್ಯೆ ವಾಸಿಸುತ್ತಿರುವ ಮಲ್ಯ ಬಂಗಲೆ ಮುಂದೆ ಐಷಾರಾಮಿ ಕಾರುಗಳೂ ನಿಂತಿರುತ್ತೆ. ಆದರೆ, ಅವರ ಬಗ್ಗೆ ಮಾಧ್ಯಮದೊಂದಿಗೆ ಹೆಚ್ಚು ಮಾತನಾಡಲು ಇಲ್ಲಿ ಗ್ರಾಮಸ್ಥರು ನಿರಾಕರಿಸುತ್ತಾರೆ.

 

                                                         

ಸೆಕ್ಸ್ ಭಾಗ್ಯ; ಟ್ರಾವೆಲ್ ಪ್ಯಾಕೇಜ್!

ಡಿಸೆಂಬರ್-2

ಲಂಡನ್: ಕೆಲವು ಟೂರ್ ಏಜೆನ್ಸಿಗಳು ಒಂದಷ್ಟು ಪ್ರವಾಸಿ ತಾಣಗಳಿಗೆ ಟೂರ್ ಪ್ಯಾಕೇಜ್ ಇಟ್ಟುಕೊಂಡು ಜನರನ್ನು ಕರೆದೊಯ್ಯುವುದು ನಮಗೆ ಗೊತ್ತು. ಆದರೆ ಇಲ್ಲೊಂದು ಟ್ರಾವೆಲ್ ಸಂಸ್ಥೆ ಸೆಕ್ಸ್ ಟೂರ್ ಆಯೋಜಿಸಿದೆ!
ಲಂಡನ್ ಮೂಲದ ಟ್ರಾವೆಲ್ ಸಂಸ್ಥೆ ಗುಡ್ ಗರ್ಲ್ಸ್ ಕಂಪನಿ ತನ್ನ ಗ್ರಾಹಕರಿಗಾಗಿ ಇಂತಹದ್ದೊಂದು 'ವಿಶೇಷ' ಪ್ಯಾಕೇಜ್ ನೀಡಿದೆ. ನಾಲ್ಕು ದಿನ ಕೆರೆಬಿಯನ್ ದ್ವೀಪದಲ್ಲಿ ಪ್ರವಾಸದ ಜತೆಗೆ ಅನಿಯಮಿತ ಹುಡುಗಿಯರೊಂದಿಗೆ ಕಾಮದಾಟವಾಡುವ ವಿವಾದಾತ್ಮಕ ಪ್ಯಾಕೇಜ್ ಘೋಷಣೆ ಮಾಡಿದೆ.
ವಿಶೇಷವೆಂದರೆ ಈ ಪ್ಯಾಕೇಜ್ ಟೂರ್ ಗೆ ಖ್ಯಾ ಬ್ರಿಟಿಷ್ ಪಾಪ್ ತಾರೆಯೊಬ್ಬರು 3,100 ಡಾಲರ್ ಶುಲ್ಕ ಪಾವತಿಸಿ ಬುಕಿಂಗ್ ಮಾಡಿದ್ದಾರಂತೆ. ಇವರಷ್ಟೇ ಅಲ್ಲ, ಈ ಪ್ಯಾಕೇಜ್ ಜಾಹೀರಾತು ನೋಡುತ್ತಲೇ ಹಲವರು ತಮ್ಮ ಹೆಸರು ನೊಂದಾಯಿಸಿದ್ದಾರಂತೆ.
ಕೆರೆಬಿಯನ್ ದ್ವೀಪದ ಸುಂದರ ತಾಣದ ಪ್ರವಾಸದ ಜತೆಗೆ ವಿಶಾಲವಾದ ಬಂಗಲೆಯಲ್ಲಿ ಹುಡುಗಿಯರ ಜತೆ ಮಜಾ ಮಾಡುವ ಅವಕಾಶವನ್ನೂ ನೀಡುತ್ತಿದ್ದೇವೆ ಎಂದು ಸಂಸ್ಥೆ ಜಾಹೀರಾತು ನೀಡುತ್ತಿದೆ.

 

                                                                     

ರಾಷ್ಟ್ರಗಳ ನಡುವೆ ಗುಪ್ತಚರ ಮಾಹಿತಿ ವಿನಿಮಯ ಅಗತ್ಯ

ಡಿಸೆಂಬರ್.2

ಸೋಚಿ(ರಷ್ಯಾ): ವಿಶ್ವದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಉಗ್ರರ ದಮನಕ್ಕಾಗಿ ಭದ್ರತಾ ಸಮೂಹ ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ಗುಪ್ತಚರ ಮಾಹಿತಿ ವಿನಿಮಯದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ರಷ್ಯಾದ ಸೋಚಿಯಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಶೃಂಗಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ರೀತಿಯ ಭಯೋತ್ಪಾದನೆ ಕೃತ್ಯಗಳು ಖಂಡನಾರ್ಹ. ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಭಯೋತ್ಪಾದನೆ ಯಾವುದೇ ಧರ್ಮ, ಜನಾಂಗ, ರಾಷ್ಟ್ರೀಯತೆ ಅಥವಾ ನಾಗರಿಕತೆ ಜೊತೆ ಸಂಬಂಧ ಕಲ್ಪಿಸುವಂತಿಲ್ಲ. ಅದು ಇಡೀ ಮನುಕುಲ ವಿರುದ್ಧದ ದೊಡ್ಡ ಅಪರಾಧ. ಆದ್ದರಿಂದ ಎಲ್ಲ ದೇಶಗಳು ಗುಪ್ತಚರ ವರದಿ, ಕಾನೂನು ಜಾರಿ, ತಂತ್ರಜ್ಞಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಈ ಪಿಡುಗನ್ನು ನಿವಾರಿಸಬೇಕು ಎಂದು ಅವರು ಸಭೆಯಲ್ಲಿ ಮನವಿ ಮಾಡಿದರು. ಎನ್ಸಿಒ ಚೌಕಟ್ಟಿನಲ್ಲಿ ಸಹಕಾರವನ್ನು ಮತ್ತಷ್ಟು ದೃಢಗೊಳಿಸಲು ಭಾರತ ಬದ್ಧವಾಗಿದೆ. ಸುಸ್ಥಿರ ಭದ್ರತೆ ಹಾಗೂ ಸಹಕಾರದ ಸಮಗ್ರತೆಗಾಗಿ ಜಂಟಿಯಾಗಿ ಕಾರ್ಯನಿರ್ವಸಲು ಸಿದ್ಧವಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

 

                                                                                       

ವಿಶ್ವದ ವಿವಿಧೆಡೆ ಸಂಭ್ರಮದ ಈದ್ ಆಚರಣೆ

ಡಿಸೆಂಬರ್.2 

ಮೆಕ್ಕಾ/ರಿಯಾದ್/ಇಸ್ಲಾಮಾಬಾದ್: ಪ್ರವಾದಿ ಮಹಮದ್ ಅವರ ಜನ್ಮದಿನವಾದ ವಿಶ್ವದ ವಿವಿಧೆಡೆ ಮುಸ್ಲಿಂ ಬಾಂಧವರು ಇಂದು ಈದ್ ಮೀಲಾದ್-ಉನ್ ನಬಿಯನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ಮುಸ್ಲಿಂ ಬಾಂಧವರ ಪವಿತ್ರ ಸ್ಥಳ ಮೆಕ್ಕಾ, ಇಸ್ರೇಲ್ನ ಜರುಸಲೇಂ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳು, ಪಾಕಿಸ್ತಾನ ಹಾಗೂ ಏಷ್ಯಾ ಖಂಡದ ಮಹಮದೀಯರ ದೇಶಗಳೂ ಸೇರಿದಂತೆ ವಿಶ್ವದ ವಿವಿಧೆಡೆಗಳಲ್ಲಿ ಈದ್ ಮಿಲಾದ್ನ್ನು ಆಚರಿಸಲಾಯಿತು. ಮಸೀದಿಗಳು, ಪ್ರಾರ್ಥನಾ ಮಂದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರೂ ಸೇರಿದಂತೆ ಕೆಲವು ಮುಸ್ಲಿಂ ಉಗ್ರಗಾಮಿ ಸಂಘಟನೆಗಳ ದಾಳಿ ಆತಂಕದ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

 

                                                                       

ಪಾಕ್ ನಲ್ಲಿ ಉಗ್ರರ ಅಟ್ಟಹಾಸ: 12 ಸಾವು ಪೇಶಾವರ

ಡಿಸೆಂಬರ್:2

ಪಾಕಿಸ್ತಾನ್: ಮೂವರು ಬುರ್ಖಾಧಾರಿ ತಾಲಿಬಾನ್ ಉಗ್ರರು ಪೇಶಾವರ ಸಮೀಪದ ಕೃಷಿ ತರಬೇತಿ ಸಂಸ್ಥೆಯೊಂದಕ್ಕೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿ 6 ವಿದ್ಯಾರ್ಥಿಗಳು ಸೇರಿದಂತೆ 12 ಮಂದಿಯನ್ನು ಹತ್ಯೆ ಮಾಡಿದ ಘಟನೆ ಶುಕ್ರವಾರ ನಡೆದಿದೆ. ಗುಂಡಿನ ದಾಳಿಗೆ ಬಲಿಯಾದವರಲ್ಲಿ ವಿದ್ಯಾರ್ಥಿಗಳಷ್ಟೇ ಅಲ್ಲದೇ ಒರ್ವ ಭದ್ರತಾ ಸಿಬ್ಬಂದಿ ಹಾಗೂ ಐವರು ಸ್ಥಳೀಯರು ಸೇರಿದ್ದಾರೆ. ದಾಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.
ಬೆಳಗ್ಗೆ ಆಟೊರಿಕ್ಷಾದಲ್ಲಿ ಬಂದ ಭಯೋತ್ಪಾದಕರು ಪೇಶಾವರದ ಯೂನಿವರ್ಸಿಟಿ ರೋಡ್ನಲ್ಲಿರುವ ಕೃಷಿ ವಿಸ್ತರಣಾ ನಿರ್ದೇಶನಾಲಯದ ವಿದ್ಯಾರ್ಥಿಗಳ ಹಾಸ್ಟೆಲ್ಗೆ ನುಗ್ಗಿ ಗುಂಡಿನ ಮಳೆ ಸುರಿಸಿದರು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಆರು ವಿದ್ಯಾರ್ಥಿಗಳು ಹಾಗೂ ಒರ್ವ ಭದ್ರತಾ ಸಿಬ್ಬಂದಿ ಹೆಣವಾಗಿದ್ದರು. ಈ ಕೃತ್ಯ ವೆಸಗಿ ಹಾಸ್ಟೆಲ್ನಿಂದ ಹೊರಬಂದ ರಕ್ತ ಪಿಪಾಸುಗಳು ಆವರಣದಲ್ಲಿ ಸ್ವಯಂ ಚಾಲಿತ ರೈಫಲ್ಗಳಿಂದ ಸಿಕ್ಕ ಸಿಕ್ಕ ಕಡೆ ಗುಂಡು ಹಾರಿಸಿದ ಪರಿಣಾಮ ಐವರು ಸ್ಥಳೀಯರು ಅಸುನೀಗಿದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

                                                                                                      

ಏ.30ಕ್ಕೆ ಜಪಾನ್ ಚಕ್ರವರ್ತಿ ಅಕಿಹಿಟೋ ಪದತ್ಯಾಗ

ಡಿಸೆಂಬರ್-1 

ಟೋಕಿಯೊ: ಉದಯರವಿ ನಾಡು ಜಪಾನ್ ಚಕ್ರವರ್ತಿ ಅಕಿಹಿಟೋ ಮುಂದಿನ ವರ್ಷ ಏಪ್ರಿಲ್ 30ರಂದು ಪದತ್ಯಾಗ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಶಿಂಜೋ ಅಬೆ ಇಂದು ಘೋಷಿಸಿದ್ದಾರೆ. ವಿಶ್ವದ ಅತ್ಯಂತ ಪುರಾತನ ರಾಜಮನೆತನಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಜಪಾನ್ ಚಕ್ರಾಧಿಪತ್ಯದ ಎರಡು ಶತಮಾನಗಳ ಇತಿಹಾಸದಲ್ಲಿ ನಿವೃತ್ತಿ ಘೋಷಣೆಯಾಗುತ್ತಿರುವುದು ಇದೇ ಮೊದಲು.
ಅನಾರೋಗ್ಯ ಕಾರಣಗಳಿಂದಾಗಿ 83 ವರ್ಷದ ಜನಪ್ರಿಯ ಚಕ್ರವರ್ತಿ ಅವರು ಪದತ್ಯಾಗ ಮಾಡುತ್ತಿದ್ದಾರೆ. ಅವರ ನಿವೃತ್ತಿ ದಿನಾಂಕ ನಿರ್ಧರಿಸಲು ನಡೆದ ರಾಜಸ್ಥ ಮಂಡಳಿಯ ವಿಶೇಷ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬೆ ತಿಳಿಸಿದರು. ಎಂಟು ದಶಕಗಳಿಗೂ ಹೆಚ್ಚು ಕಾಲ ಉದಯರವಿ ನಾಡಿನ ಚಕ್ರವರ್ತಿಯಾಗಿರುವ ಅಕಿಹಿಟೋ ಅವರ ನಿವೃತ್ತಿ ಸಮಾರಂಭವನ್ನು ಜಪಾನೀಯರು ಅತ್ಯಂತ ಸಂತೋಷದಿಂದ ಆಚರಿಸಲು ಹಾಗೂ ಮುಂದಿನ ರಾಜಕುಮಾರ ಪಟ್ಟಾಭಿಷೇಕಕ್ಕೆ ಅನುವು ಮಾಡಿಕೊಡಲು ಸರ್ಕಾರ ಅಗತ್ಯವಾದ ಸಕಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

 

                                                                     

6 ವರ್ಷದ ಬಾಲಕ, ವೈದ್ಯಲೋಕಕ್ಕೆ ಶಾಕ್..!

ಡಿಸೆಂಬರ್.1 

ವಾರಣಾಸಿ: ಇದೊಂದು ನಂಬಲಾಗದ ಮತ್ತು ಅಚ್ಚರಿಯ ಸುದ್ದಿ. ವೈದ್ಯಲೋಕದ ವಿಸ್ಮಯ ಎನ್ನಲೂಬಹುದು. 6 ವರ್ಷದ ಬಾಲಕನೊಬ್ಬ ಗರ್ಭಿಣಿಯಾಗಿದ್ದಾನೆ ಎಂಬ ಸಮಾಚಾರ ಈಗ ವೈದ್ಯಕೀಯ ಕ್ಷೇತ್ರದಲ್ಲಿ ಬಹು ಚರ್ಚಿ ವಿಷಯವಾಗಿದೆ. ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದ ಕುತೂಹಲಕಾರಿ ಘಟನೆ ಇದು. ಕಳೆದ ಕೆಲವು ದಿನಗಳಿಂದ ರಮೇಶ್(ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ.
ಆತನ ಪೋಷಕರು ಕೆಲವು ವೈದ್ಯರ ಬಳಿ ಬಾಲಕನನ್ನು ತಪಾಸಣೆಗೆ ಒಳಪಡಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಭಾಲಕನ ಸಮಸ್ಯೆ ಬಗೆಹರಿಯದಿದ್ದಾಗ. ರಮೇಶ್ನನ್ನು ಪ್ರೈವೇಟ್ ಹಾಸ್ಪಿಟಲ್ನಲ್ಲಿ ಪರಿಶೀಲಿಸಿದಾಗ ಆತನ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ಉದರ ಗಂಟನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ನಡೆಸಿದ ತಜ್ಞ ವೈದ್ಯರಿಗೆ ಅಚ್ಚರಿ ಕಾದಿತ್ತು. ಆದು ಗಡ್ಡೆಯಾಗಿರಲಿಲ್ಲ, ಬೆಳವಣಿಗೆಯಾಗದ ಭ್ರೂಣವಾಗಿತ್ತು…! ಎರಡು ಗಂಟೆಗಳ ದೀರ್ಘ ಶಸ್ತ್ರಕ್ರಿಯೆ ನಂತರ ಅದನ್ನು ವೈದರು ತೆಗೆದುಹಾಕಿದರು.
ವೈದ್ಯರು ನಂಬಿರುವಂತೆ ಇದು 5 ಲಕ್ಷ ಮಕ್ಕಳಲ್ಲಿ ಒಬ್ಬರಲ್ಲಿ ಮಾತ್ರ ಕಂಡುಬರುವ ಅತ್ಯಂತ ವಿರಳಾತಿ ವಿರಳ ಪ್ರಕರಣ. ಇದನ್ನು ಟುರೋ ಥೀರಿ ಎನ್ನುವರು. ಇಂಥ ಅತಿ ಅಪರೂಪದ ಪ್ರಕರಣದಲ್ಲಿ ಈ ಹಿಂದೆ ತಾಯಿಯ ಗರ್ಭದಲ್ಲಿ ಅಭಿವೃದ್ದಿಯಾಗದಿದ್ದ ಭ್ರೂಣ ಮಗುವಿನ ಉದರಕ್ಕೆ ಸೇರುತ್ತದೆ ಹಾಗೂ ನಿಧಾನವಾಗಿ ಅಭಿವೃದ್ಧಿಯಾಗುತ್ತದೆ. ಭಾರತದಲ್ಲಿ ಈವರೆಗೆ ಇಂಥ 9 ಪ್ರಕರಣಗಳು ಮಾತ್ರ. ಪತ್ತೆಯಾಗಿದ್ದರೂ ಇಷ್ಟು ದೊಡ್ಡದಾಗಿ ಬೆಳೆದ ಪ್ರಥಮ ಸಂಗತಿ ಇದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

 

                                                                                                                         

ಚೀನಾದ "ಶೌಚಾಲಯ ಕ್ರಾಂತಿ'ಗೆ ಮೋದಿಯ ಸ್ವತ್ಛ ಭಾರತ ಸ್ಫೂರ್ತಿ

ಡಿಸೆಂಬರ್.1

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರ "ಸ್ವತ್ಛ ಭಾರತ'ದ ಕರೆ ನೆರೆಯ ಚೀನಾದವರೆಗೂ ತಲುಪಿದೆ! ಆಶ್ಚರ್ಯವಾದರೂ ಇದು ಸತ್ಯ. ಪ್ರಧಾನಿ ಮೋದಿ ಅವರಿಂದಲೇ ಸ್ಫೂರ್ತಿ ಪಡೆದು ಈಗ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ "ಸ್ವತ್ಛ ಚೀನಾ'ಕ್ಕಾಗಿ ಪಣ ತೊಟ್ಟಿದ್ದಾರೆ. ಚೀನದಾದ್ಯಂತ ಸ್ವತ್ಛ ಶೌಚಾ ಲಯ ಸ್ಥಾಪಿಸುವಂತೆ ಕರೆ ನೀಡಿದ್ದಾರೆ.
ಪ್ರಧಾನಿ ಹುದ್ದೆಗೇರಿದ ಅನಂತರ ಮೋದಿ ಅವರು ಆರಂಭಿಸಿದ ಅತಿದೊಡ್ಡ ಆಂದೋಲನವೇ "ಸ್ವತ್ಛ ಭಾರತ'. 2014ರಲ್ಲಿ ಈ ಯೋಜನೆ ಯನ್ನು ಘೋಷಿಸಿದ ಮೋದಿ, ತಾವು ಎಲ್ಲೇ ಹೋದರೂ ಭಾಷಣದಲ್ಲಿ ಸ್ವತ್ಛತೆಯ ಕುರಿತು ಒಂದೆರಡು ವಿಚಾರ ಪ್ರಸ್ತಾವಿಸದೇ ಇರುತ್ತಿರಲಿಲ್ಲ. ದೇವಾಲಯಗಳಿಗಿಂತಲೂ ಶೌಚಾಲಯಗಳ ಅಗತ್ಯತೆ ಹೆಚ್ಚಿದೆ ಎಂಬುದನ್ನೂ ಒತ್ತಿಹೇಳಿದ್ದರು. ಶೌಚಾಲಯಗಳನ್ನು ನಿರ್ಮಿಸಲು ಸರಕಾರದಿಂದಲೇ ಹಣಕಾಸಿನ ನೆರವು ನೀಡುವುದರಿಂದ ಹಿಡಿದು, ತ್ಯಾಜ್ಯ ಸಂಸ್ಕರಣೆ, ತ್ಯಾಜ್ಯದಿಂದ ರಸಗೊಬ್ಬರ ಉತ್ಪಾದನೆ ಅಥವಾ ವಿದ್ಯುತ್ ಉತ್ಪಾದನೆಯವರೆಗೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟರು. ಅದರ ಜತೆಗೆ ಬಯಲು ಶೌಚ ಮುಕ್ತ ಭಾರತ ನಿರ್ಮಾಣಕ್ಕೂ ಮುಂದಾದರು.

  ಜಿನ್ಪಿಂಗ್ಗೂ ಮೋದಿ ಮಾದರಿ: ಪ್ರಧಾನಿ ಮೋದಿ ಅವರ ಸ್ವತ್ಛ ಭಾರತ ಆಂದೋಲನದಿಂದ ಪ್ರೇರಣೆಗೊಂಡು 2015ರಲ್ಲಿ ಚೀನಾ ಪ್ರಧಾನಿಯೂ ಪ್ರವಾಸಿ ತಾಣಗಳಲ್ಲಿ ಟಾಯ್ಲೆಟ್ ನಿರ್ಮಿಸುವಂಥ "ಶೌಚಾಲಯ ಕ್ರಾಂತಿ'ಗೆ ಕರೆಕೊಟ್ಟರು. ಈಗ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಇಡೀ ದೇಶದಲ್ಲೇ ಟಾಯ್ಲೆಟ್ ಕ್ರಾಂತಿ ನಡೆಯಬೇಕು ಎಂದು ಜನತೆಗೆ ಕರೆನೀಡಿದ್ದಾರೆ. "ಟಾಯ್ಲೆಟ್ ಎನ್ನುವುದು ಸಣ್ಣ ವಿಚಾರವಲ್ಲ. ನಾಗರಿಕ ಸಮಾಜವನ್ನು ನಿರ್ಮಿಸುವಂಥ ಪ್ರಮುಖ ಅಂಶ' ಎಂದಿದ್ದಾರೆ ಜಿನ್ಪಿಂಗ್.
ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಟಾಯ್ಲೆಟ್ನದ್ದೇ ಸಮಸ್ಯೆ. ಕೆಲವರು ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ತಾತ್ಕಾಲಿಕ ಟೆಂಟ್ ಥರ ಶೌಚಾಲಯ ನಿರ್ಮಿಸಿಕೊಂಡಿದ್ದರೆ, ಇನ್ನು ಕೆಲವರು ಸಣ್ಣ ಗುಂಡಿ ತೋಡಿ ಅಲ್ಲೇ ಶೌಚಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನು ಪ್ರವಾಸಿತಾಣಗಳಲ್ಲಂತೂ ಸೂಕ್ತ ಟಾಯ್ಲೆಟ್ಗಳಿಲ್ಲ, ಇದ್ದರೂ ಸ್ವತ್ಛವಾಗಿಲ್ಲ ಎಂಬ ದೂರುಗಳೇ ಹೆಚ್ಚು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಮೋದಿ ಮಾದರಿಯನ್ನು ಅನುಸರಿಸ ಹೊರಟಿದ್ದಾರೆ ಜಿನ್ಪಿಂಗ್. ಅದರಂತೆ, ಈ ವರ್ಷದ ಅಕ್ಟೋ ಬರ್ ಅಂತ್ಯದವರೆಗೆ, ಚೀನಾದ ಪ್ರವಾಸಿ ತಾಣಗಳಲ್ಲಿ 68 ಸಾವಿರ ಶೌಚಾಲಯ ಗಳನ್ನು ನಿರ್ಮಿಸಲಾಗಿದೆ. ಇದು ಚೀನ ಹಾಕಿಕೊಂಡಿದ್ದ ಗುರಿಗಿಂತ ಶೇ.19.3ರಷ್ಟು ಹೆಚ್ಚು. 2018ರಿಂದ 2020ರ ಅವಧಿ ಯಲ್ಲಿ ಗ್ರಾಮೀಣ ಪ್ರದೇಶಗಳ ಪ್ರವಾಸಿ ಸ್ಥಳಗಳಲ್ಲಿ ಇನ್ನೂ 64 ಸಾವಿರ ಟಾಯ್ಲೆಟ್ಗಳನ್ನು ನಿರ್ಮಿಸುವ ಅಥವಾ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಚೀನಾ ರಾಷ್ಟ್ರೀಯ ಪ್ರವಾಸೋದ್ಯಮ ಆಡಳಿತವು ಹಾಕಿಕೊಂಡಿದೆ.

 

                                                                                               

ವಿನಾಶಕಾರಿ ಚಂಡಮಾರುತ, 24 ಸಾವು, ಹಲವರು ಕಣ್ಮರೆ

ನವೆಂಬರ್-30

ಜಕಾರ್ತ: ಇಂಡೋನೆಷ್ಯಾದ ಜಾವಾ ದ್ವೀಪಕ್ಕೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ ಮತ್ತು ಭೂಕುಸಿತದಿಂದ 24 ಮಂದಿ ಮೃತಪಟ್ಟು, ಅನೇಕರು ಕಣ್ಮರೆಯಾಗಿದ್ದಾರೆ. ಭಾರೀ ಬಿರುಗಾಳಿಯಿಂದ ಕೂಡಿದ ಮಳೆಯಿಂದ ಈ ದ್ವೀಪದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಭೂಕುಸಿತಗಳೂ ಸಂಭವಿಸಿವೆ. 
ಈ ನೈಸರ್ಗಿಕ ದುರಂತದಲ್ಲಿ 24ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಸಾವಿರಾರು ಮನೆಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಮತ್ತು ಭೂಕುಸಿತದಿಂದ ನಾಪತ್ತೆಯಾಗಿರುವ ಹಲವು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಅಂಗ್ಮೌಂೆಟ್ ಅಗ್ನಿ ಪರ್ವತ ಬಾಯ್ತೆರೆದು ಬೋರ್ಗರೆಯುತ್ತಿರುವಾಗಲೇ ಇತ್ತ ಜಾವಾ ದ್ವೀಪದಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿದೆ.

 

                                                                                                                                       

ನ್ಯೂಯಾರ್ಕ್ ನಲ್ಲಿ ಗುಂಡಿಗೆ ಭಾರತೀಯ ಬಲಿ

ನವೆಂಬರ್-29

ನ್ಯೂಯಾರ್ಕ್: ಅಮೆರಿಕದಲ್ಲಿ ದುಷ್ಕರ್ಮಿಗಳ ದಾಳಿಗೆ ಭಾರತೀಯರು ಹತರಾಗುತ್ತಿರುವ ಆತಂಕಕಾರಿ ಸುದ್ದಿಗಳ ಬೆನ್ನಲ್ಲೇ ರಾಜ್ಯದಲ್ಲಿ 21 ವರ್ಷ ಯುವಕನೊಬ್ಬ ದರೋಡೆಕೋರರ ಗುಂಡಿಗೆ ಬಲಿಯಾಗಿದ್ದಾನೆ. 
ಜಾಕ್ಸನ್ ಸಿಟಿಯಲ್ಲಿ ಸೋಮವಾರ ನಡೆದ ದರೋಡೆ ವೇಳೆ ಸಂದೀಪ್ ಸಿಂಗ್ನನ್ನು ಆತನ ಮನೆಯ ಮುಂದೆಯೇ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಕ್ರೂರ ದರೋಡೆಕಾರರ ಗುಂಪೊಂದು ಈ ಪ್ರಾಂತ್ಯದಲ್ಲಿ ಸಕ್ರಿಯರಾಗಿದ್ದಾರೆ. ಮುಸುಕುಧಾರಿಗಳು ಸಂದೀಪ್ ಮತ್ತು ಇತರ ಇಬ್ಬರು ವ್ಯಕ್ತಿಗಳನ್ನು ಪಿಸ್ತೂಲಿನಿಂದ ಬೆದರಿಸಿ ಹಣ ಮತ್ತು ಸೆಲ್ ಫೋನ್ ಕಿತ್ತುಕೊಂಡು ಪರಾರಿಯಾಗುವ ವೇಳೆ ಹಾರಿಸಿದ ಗುಂಡು ಸಂದೀಪ್ ಹೊಟ್ಟೆಗೆ ತಗಲಿ ಮೃತಪಟ್ಟಿದ್ದಾನೆ ಎಂದು ಜಾಕ್ಸನ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಅಮೆರಿಕದಲ್ಲಿ ನಡೆದ ಭಾರತೀಯರ 2ನೆ ಹತ್ಯೆ ಇದಾಗಿದೆ. ನ.16ರಂದು ಕ್ಯಾಲಿಫೋರ್ನಿಯಾ ಕಿರಾಣಿ ಅಂಗಡಿಗೆ ನುಗ್ಗಿದ ನಾಲ್ವರು ಶಸ್ತ್ರಸಜ್ಜಿತ ದರೋಡೆಕೋರರು 21 ವರ್ಷದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದು ಪರಾರಿಯಾಗಿದ್ದರು.

 

 

                                                                     

ಅವಶೇಷಗಳ ಪತ್ತೆಗೆ ಸೆನ್ಸರ್ ಉಡಾವಣೆ

ನವೆಂಬರ್-28 

ವಾಷಿಂಗ್ಟನ್; ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ(ಐಎಸ್ಎಸ್) ಕಕ್ಷೆಯಲ್ಲಿರುವ ಅವಶೇಷಗಳಿಂದ ಗಗನಯಾತ್ರಿಗಳು ಮತ್ತು ಉಪಗ್ರಹಗಳಿಗೆ ಅಪಾಯವಾಗುವುದನ್ನು ತಪ್ಪಿಸಲು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಮುಂದಾಗಿದೆ. 
ಈ ಉದ್ದೇಶಕ್ಕಾಗಿ ಡಿ.4ರಂದು ಸಂವೇದಿ (ಸೆನ್ಸರ್) ಸಾಧನವೊಂದನ್ನು ನಭಕ್ಕೆ ಉಡಾವಣೆ ಮಾಡಲಿದೆ. ಐಎಸ್ಎಸ್ ಸುತ್ತಲಿನ ಕಕ್ಷೆಯಲ್ಲಿರುವ ಅವಶೇಷಗಳ ಪ್ರಮಾಣದ ಬಗ್ಗೆ ಈ ಸೆನ್ಸರ್ ಅಂದಾಜು ಮಾಡಲಿದ್ದು, ಅವುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲಿದೆ.
ಈ ಸೆನ್ಸರ್ ಉಡ್ಡಯನ ಮೂಲಕ ನಡೆಸಲಾಗುವ ಸಂಶೋಧನೆಯು ಬಾಹ್ಯಾಕಾಶ ಮಾರ್ಗದಲ್ಲಿರುವ ಅವಶೇಷಗಳು ವ್ಯೋಮಾಯಾನಿಗಳು ಮತ್ತು ಉಪಕರಣಗಳಿಗೆ ಎದುರಾಗುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ ಎಂದು ನಾಸಾ ತಿಳಿಸಿದೆ.
ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣದ ಹೊರಭಾಗದಲ್ಲಿ ಜೋಡಿಸಲ್ಪಡುವ ಬಾಹ್ಯಾಕಾಶ ಸಂವೇದಿ ಸಾಧನ (ಸ್ಪೇಸ್ ಡೆಬ್ರಿಸ್ ಸೆನ್ಸರ್-ಎಸ್ಡಿಎಸ್) ಸುಮಾರು ಮೂರು ವರ್ಷಗಳ ಕಾಲ ಅದರ ಸುತ್ತಲಿನ ಕಕ್ಷೆಯಲ್ಲಿರುವ ಅವಶೇಷಗಳ ಪ್ರಮಾಣ, ಸ್ಥಿತಿಗತಿಗಳನ್ನು ಅಂದಾಜು ಮಾಡಲಿದೆ.

 

                                                                                                      

ಚೀನಾದಲ್ಲಿದೆ ವಿಶ್ವದ ಅತಿದೊಡ್ಡ ಈಜುಕೋಳ..!

ನವೆಂಬರ್-27

ಚೀನಾ: ದೇಶದ ರಾಜಧಾನಿ ಸ್ಯಾಂಟಿಯಾಗೋದಿಂದ 100 ಕಿ.ಮೀ.ದೂರದಲ್ಲಿರುವ ಅಲಗ್ಯಾರ್ರೋಬೊ ನಗರದಲ್ಲಿ ಸ್ಯಾನ್ ಅಲ್ಫೇನ್ಸೊ ಡೆಲ್ ಮಾರ್ ಎಂಬ ಖಾಸಗಿ ರೆಸಾರ್ಟ್ ಇದೆ. ಇಲ್ಲಿರುವ ಬೃಹತ್ ಜಲರಾಶಿಯ ಸ್ವಿಮ್ಮಿಂಗ್ ಪೂಲ್ ವಿಶ್ವದ ಅತಿದೊಡ್ಡ ಈಜುಕೋಳ ಎಂಬ ಹೆಗ್ಗಳಿಕೆ ಪಡೆದಿದೆ. ಈ ಈಜುಕೋಳ 3,323 ಅಡಿಗಳಷ್ಟು ಉದ್ದವಿದ್ದು, 20 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಇದು 250 ದಶಲಕ್ಷ ಅಂದರೆ 66 ದಶಲಕ್ಷ ಗ್ಯಾಲನ್ ಸಮುದ್ರ ನೀರನ್ನು ಒಳಗೊಂಡಿದೆ. ಈಜು ಕೊಳದ ಆಳ 11.5 ಅಡಿಗಳು. ಪೆಸಿಫಿಕ್ ಮಹಾಸಾಗರ ದಿಂದ ಈ ಸ್ಮಿಮ್ಮಿಂಗ್ ಪೂಲ್ಗೆ ನೀರನ್ನು ಪಂಪ್ ಮಾಡಲಾಗುತ್ತದೆ. ಫಿಲ್ಟರ್ ಮಾಡಲಾಗುತ್ತದೆ ಹಾಗೂ ಶುದ್ಧೀಕರಿಸಲಾಗುತ್ತದೆ.

 

                                                          

ಪಾಕ್ ಕಾನೂನು ಸಚಿವ ಝಾಹಿದ್ ಹಮೀದ್: ರಾಜೀನಾಮೆ

ನವೆಂಬರ್-27

ಇಸ್ಲಾಮಾಬಾದ್: ಇಸ್ಲಾಮಿಕ್ ಮೂಲಭೂತವಾದಿಗಳ ಪ್ರತಿಭಟನೆಗೆ ಮಣಿದು ಪಾಕಿಸ್ತಾನದ ಕಾನೂನು ಸಚಿವ ಝಾಹಿದ್ ಹಮೀದ್ ಭಾನುವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಹಮೀದ್ ರಾಜೀನಾಮೆ ಬಳಿಕ ಇಸ್ಲಾಮಿಕ್ ತೀವ್ರವಾದಿಗಳು ಮೂರು ವಾರಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ. ಇದಕ್ಕೆ ಮುನ್ನ, ಸಚಿವರು ರಾಜೀನಾಮೆ ನೀಡಿದರೆ ಪ್ರತಿಭಟನೆ ಕೈಬಿಡಬೇಕೆಂದು ಪಾಕ್ ಸರಕಾರ ಪ್ರತಿಭಟನೆಕಾರರೊಂದಿಗೆ ಒಪ್ಪಂದಕ್ಕೆ ಬಂದಿತ್ತು.
'ನಮ್ಮ ಮುಖ್ಯ ಬೇಡಿಕೆ ಈಡೇರಿದೆ' ಎಂದು ತೆಹ್ರೀಕ್-ಇ-ಲಬೈಕ್ ಇಸ್ಲಾಮಿಸ್ಟ್ ಗುಂಪಿನ ವಕ್ತಾರ ಇಜಾಜ್ ಅಶ್ರಫಿ ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದರು. 'ನೂತನ ಕಾನೂನು ಸಚಿವರ ಹೆಸರನ್ನು ಸರಕಾರ ಪ್ರಕಟಿಸಲಿದೆ. ನಮ್ಮ ಪ್ರತಿಭಟನೆಯನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇವೆ'ಎಂದು ಅವರು ತಿಳಿಸಿದರು.
ರಾಜಕಾರಣಿಗಳು ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವ ವಿಧಿವಿಧಾನವನ್ನು ಬದಲಿಸಲು ಕಾನೂನು ಸಚಿವ ಹಮೀದ್ ಮುಂದಾಗಿದ್ದರು. ಇದು 'ದೈವನಿಂದನೆ' ಎಂದು ಆರೋಪಿಸಿ ಸಚಿವರ ತಲೆದಂಡಕ್ಕೆ ಆಗ್ರಹಿಸಿ ಮೂಲಭೂತವಾದಿಗಳು ಪ್ರತಿಭಟನೆ ನಡೆಸಿದ್ದರು.'ನಾನು ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ' ಎಂದು ಹಮೀದ್ ಅವರನ್ನು ಉಲ್ಲೇಖಿಸಿ 'ಡಾನ್' ಪತ್ರಿಕೆ ವರದಿ ಮಾಡಿದೆ.

 

                                                                     

ಪಾಕ್ ಪರಮಾಣು: ಏಷ್ಯಾ ವಲಯಕ್ಕೆ ಗಂಡಾಂತರ

ನವೆಂಬರ್-27

ವಾಷಿಂಗ್ಟನ್: ಪಾಕಿಸ್ತಾನದ ಕುಟಿಲ ಯುಕ್ತಿಯ ಅಣ್ವಸ್ತ್ರ ಕಾರ್ಯಕ್ರಮ ಏಷ್ಯಾ ವಲಯದ ಸುರಕ್ಷತೆ ಹಾಗೂ ಭದ್ರತೆಗೆ ಗಂಡಾಂತರ ತಂದೊಡ್ಡಿರುವುದಷ್ಟೇ ಅಲ್ಲ, ಸಾಂಪ್ರದಾಯಕ ಸಮರವನ್ನು ಅಣ್ವಸ್ತ್ರ ಸಮರದ ಮಟ್ಟಕ್ಕೆ ಕೊಂಡೊಯ್ಯುವ ನಿಚ್ಚಳ ರಹದಾರಿ ಎನಿಸಿಕೊಂಡಿದೆ ಎಂದು ಅಮೆರಿಕದ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿದೆ.
ಏನೇ ಆದರೂ, ಇಲ್ಲಿಯವರೆಗೆ ತನ್ನ ಕುಟಿಲ ಪರಮಾಣು ಸಮರದ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವ ದುಸ್ಸಾಹಸಕ್ಕೆ ಪಾಕಿಸ್ತಾನ ಕೈಹಾಕಿದಂತೆ ಗೋಚರವಾಗುತ್ತಿಲ್ಲ ಎಂದು ಅಟ್ಲಾಂಟಿಕ್ ಕೌನ್ಸಿಲ್ ಈ ತಿಂಗಳು ಪ್ರಕಟಗೊಂಡ 'ದ್ವಿತೀಯ ಅಣು ಯುಗದಲ್ಲಿ ಏಷ್ಯಾ' ಎಂಬ ವರದಿಯಲ್ಲಿ ಉಲ್ಲೇಖಿಸಿದೆ.
ಏಷ್ಯಾ ವಲಯದಲ್ಲಿ ಬೃಹತ್ತಾದ, ಅತ್ಯಾಧುನಿಕ ಹಾಗೂ ವೈವಿಧ್ಯಮಯ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯಿಂದ ಗಂಡಾಂತರ ಎದುರಾಗುತ್ತಿರುವುದಲ್ಲ, ಅದರ ಬದಲು ಅವುಗಳನ್ನು ಕಾವಲು ಕಾಯುತ್ತಿರುವ ಸಂಸ್ಥೆಗಳ ನಿರಂತರ ಸ್ಥಿರತೆಯಿಂದ ಗಂಡಾಂತರ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಪಾಕಿಸ್ತಾನದ ಸ್ಥಿರತೆ ವೈಲ್ಡ್ ಕಾರ್ಡ್ ಆಗಿಯೇ ಉಳಿದುಕೊಳ್ಳಲಿದೆ,'' ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಂತೆಯೇ ಉಭಯ ದೇಶಗಳ ವಿತರಣಾ ವ್ಯವಸ್ಥೆ ಕೂಡ ಸ್ವಾಧೀನ ಚಕ್ರದಲ್ಲಿ ಮೊದಲನೆಯದು ಎಂದು ವರದಿಯಲ್ಲಿ ಹೇಳಲಾಗಿದೆ. ಉಭಯ ದೇಶಗಳಿಗೆ ಹೋಲಿಸಿದರೆ ಚೀನಾದ ಪರಮಾಣು ಸಾಮರ್ಥ್ಯ ಮೇಲ್ಮಟ್ಟದ್ದಾಗಿದೆ ಎನ್ನಲಾಗಿದೆ.

 

     hh ಭಾರತ, ಅಮೆರಿಕದ ಭಾಂದವ್ಯ ಹೆಚ್ಚಿಸಲಿರುವ ಉದ್ಯಮಿಗಳ ಸಮಾವೇಶ
ನವೆಂಬರ್.23
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಮೊದಲು ನೀತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಕರೆಯು ಪರಸ್ಪರ ಬೆರೆಯದ ವೈರುಧ್ಯವಲ್ಲ ಎಂದು ಅಮೆರಿಕ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ರ ಸಲಹೆಗಾರ್ತಿ, ಪುತ್ರಿ ಇವಾಂಕಾ ಟ್ರಂಪ್(36) ಮುಂದಿನ ವಾರ ಹೈದರಾಬಾದ್ನಲ್ಲಿ ನಡೆಯಲಿರುವ ಜಾಗತಿಕ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಈ ನಿಟ್ಟಿನಲ್ಲಿ ನಡೆಸಿದ ಕಾನ್ಫರೆನ್ಸ್ ಕಾಲ್ನಲ್ಲಿ ಅಧಿಕಾರಿ ಈ ಹೇಳಿಕೆ ನೀಡಿದ್ದಾರೆ.
''ಅಮೆರಿಕ ಮೊದಲು ಎಂದರೆ ಬೇರೆ ಜಗತ್ತು ಹೊರಗಿಟ್ಟಿದ್ದೇವೆ ಎಂದಲ್ಲ. ಬಹುತೇಕ ಸರಕಾರಗಳು ತಮ್ಮ ದೇಶದ ಜನರಿಗೆ ಮೊದಲ ಆದ್ಯತೆ ನೀಡುತ್ತವೆ,'' ಎಂದ ಅವರು, ಟ್ರಂಪ್ ಆಡಳಿತವು ಉಭಯ ದೇಶಗಳ ಆರ್ಥಿಕ ಅಭಿವೃದ್ಧಿಗೆ ಭಾರತದೊಂದಿಗೆ ಧೃಡ ಸಹಭಾಗಿತ್ವವನ್ನು ಎದುರು ನೋಡುತ್ತದೆ ಎಂದು ತಿಳಿಸಿದರು.
ಪ್ರಧಾನಿ ಭೇಟಿಗೆ ಉತ್ಸುಕ: ಕರೆಯಲ್ಲಿ ದನಿಗೂಡಿಸಿದ ಇವಾಂಕಾ, ತಾವು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿಯನ್ನು ಎದುರು ನೋಡುತ್ತಿದ್ದು, ಇದೇ ಮೊದಲ ಬಾರಿಗೆ ಎರಡೂ ದೇಶಗಳು ಜಂಟಿಯಾಗಿ ಆಯೋಜಿಸಿರುವ ಮಹಿಳಾ ಉದ್ಯಮಿಗಳ ಕುರಿತ ಸಮಾವೇಶದಲ್ಲಿ ಭಾಗವಹಿಸಲು ಉತ್ಸುಕವಾಗಿರುವುದಾಗಿ ಹೇಳಿದರು. ''ಈ ವರ್ಷದ ಜಾಗತಿಕ ಉದ್ಯಮಿಗಳ ಸಮಾವೇಶವು ಭಾರತ ಅಮೆರಿಕ ನಡುವಿನ ಉತ್ತಮ ಸಹಭಾಗಿತ್ವವನ್ನು ರುಜುವಾತುಪಡಿಸುತ್ತಿದೆ,'' ಎಂದರು.
ನ.28ರಂದು ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮೋದಿಯೊಂದಿಗೆ ಭಾಗವಹಿಸಿ, ಮಾತನಾಡಲಿದ್ದು, ನ.29ರಂದು ಎರಡು ಅಧಿವೇಶಗಳಲ್ಲಿ ಉಪಸ್ಥಿತಿ ಇರುವುದಾಗಿ ಇವಾಂಕಾ ತಿಳಿಸಿದರು.
ಭಾರತಕ್ಕೆ ಪ್ರಥಮ ಭೇಟಿ ನೀಡುತ್ತಿರುವ ಇವಾಂಕಾರೊಂದಿಗೆ ಅಮೆರಿಕದ ಉನ್ನತಾಧಿಕಾರಿಗಳು, ಮಹಿಳಾ ಉದ್ಯಮಿಗಳು ಇರಲಿದ್ದಾರೆ. 170 ದೇಶಗಳ 1500 ವಾಣಿಜ್ಯೋದ್ಯಮಿಗಳು ಮೂರು ದಿನಗಳ ಶೃಂಗದಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕದ ಬಹುತೇಕ ಭಾರತೀಯ ಅಮೆರಕನ್ನರನ್ನೊಳಗೊಂಡ ಸುಮಾರು 350 ಮಂದಿ ತಂಡ ಹೈದರಾಬಾದ್ಗೆ ಆಗಮಿಸಲಿದೆ.
ಜಿಇಎಸ್ 2017ನಲ್ಲಿ ಮಹಿಳಾ ಉದ್ಯಮಿಗಳು, ಹೂಡಿಕೆದಾರರೇ ಶೇ.52.5ರಷ್ಟಿರಲಿದ್ದಾರೆ. ಅಫಘಾನಿಸ್ತಾನ, ಸೌದಿ ಅರೇಬಿಯಾ ಹಾಗೂ ಇಸ್ರೇಲ್ ಸೇರಿದಂತೆ ಸುಮಾರು 10 ದೇಶಗಳಿಂದ ಮಹಿಳಾ ಉದ್ಯಮಿಗಳು ಮಾತ್ರ ಅತಿಥಿಗಳಾಗಿ ಬರಲಿದ್ದಾರೆ. ಇನ್ನು, ಜಿಇಎಸ್ನಲ್ಲಿ ಭಾಗವಹಿಸುವ ಉದ್ಯಮಿಗಳಲ್ಲಿ ಶೇ.31.5ರಷ್ಟು ಮಂದಿ 30 ವರ್ಷದೊಳಗಿನವರು ಎಂಬುದು ವಿಶೇಷ. ಅತಿ ಚಿಕ್ಕ ವಯಸ್ಸಿನ ಉದ್ದಿಮೆದಾರನ ವಯಸ್ಸು 13 ಆದರೆ, 84 ವರ್ಷದ ವ್ಯಕ್ತಿಯು ಹಿರಿಯ ಉದ್ದಿಮೆದಾರರಾಗಿ ಭಾಗವಹಿಸುತ್ತಿದ್ದಾರೆ.

 

                                                    

ಆಫ್ರಿಕಾದಲ್ಲಿ ಭಾರತದ ರಾಜತಾಂತ್ರಿಕ ಮನೆ ಲೂಟಿ

ನವೆಂಬರ್.21

ದರ್ಬಾನ್: ದಕ್ಷಿಣ ಆಫ್ರಿಕಾದಲ್ಲಿ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯ ಅಧಿಕೃತ ನಿವಾಸಕ್ಕೆ ದರೋಡೆಕೋರರು ನುಗ್ಗಿ 5 ವರ್ಷದ ಮಗನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಮನೆ ಲೂಟಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾರಿ ಶಶಾಂಕ್ ಶರ್ಮ ಅವರು ಈ ಬಗ್ಗೆ ಭಾರತ ಸರ್ಕಾರಕ್ಕೆ ದೂರು ಸಲ್ಲಿಸಿ, ಅಧಿಕೃತ ನಿವಾಸಕ್ಕೆ ದಕ್ಷಿಣ ಆಫ್ರಿಕಾದಲ್ಲಿರುವ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ದರ್ಬಾನ್ನ ಇನ್ನೆಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಶಶಾಂಕ್ ವಿಕ್ರಮ್ ಕುಟುಂಬದ ಜತೆ, ಗೃಹಕೃತ್ಯ ಸಿಬ್ಬಂದಿ, ಸಂದರ್ಶಕ ಶಿಕ್ಷಕರು ಇದ್ದರು. ಐದು ಹಾಗೂ ಹತ್ತು ವರ್ಷದ ಇಬ್ಬರು ಮಕ್ಕಳು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ ಎಂದು ವಿವರ ನೀಡಿದ್ದಾರೆ. ಪ್ರವೇಶದ್ವಾರ ಕೊರೆದು ದರೋಡೆಕೋರರು ಒಳಕ್ಕೆ ಪ್ರವೇಶಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಅಲ್ಲಿನ ಉನ್ನತ ಅಧಿಕಾರಿಗಳ ಜತೆ ಚರ್ಚಿಸಲಾಗುತ್ತಿದೆ. ಶರ್ಮ ಹಾಗೂ ಅವರ ಕುಟುಂಬದ ಯೋಗಕ್ಷೇಮವನ್ನು ವಿದೇಶಾಂಗ ಸಚಿವೆ ವಿಚಾರಿಸಿದ್ದಾರೆ ಎಂದು ಹೇಳಿದ್ದಾರೆ.

 

 

                                    

ಅಫ್ಘಾನಿಸ್ತಾನದಲ್ಲಿ ಶಿಕ್ಷಣದಿಂದ ವಂಚಿತರಾದ 30 ಲಕ್ಷ ಮಕ್ಕಳು

ನವೆಂಬರ್.20

ಕಾಬೂಲ್: ಆಫ್ಘನ್ನಲ್ಲಿ 30,50 ಲಕ್ಷ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಹಾಗೂ 6 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಂಥ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಸಮರಸಂತ್ರಸ್ತ ಅಫ್ಘಾನಿಸ್ತಾನದಲ್ಲಿ ಮಕ್ಕಳ ದುಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. 
ಆಫ್ಘಾನಿಸ್ತಾನದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬಗ್ಗೆ ನಮಗೆ ತೀವ್ರ ಕಳವಳ ಇದೆ. ಶಾಲೆಗೆ ಹೋಗಬೇಕಾಗಿರುವ 30.50 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಕಾಬೂಲ್ನಲ್ಲಿರುವ ಯುನಿಸೆಫ್ ಪ್ರತಿನಿಧಿ ಅದೆಲ್ ಖೊದ್ರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

 

                                                                              

ಇಂಡೋ-ಟಿಬೆಟ್-ಚೀನಾ ಗಡಿಯಲ್ಲಿ ಭಾರಿ ಭೂಕಂಪ

ವೆಂಬರ್-18 

ಬೀಜಿಂಗ್: ಭಾರತ-ಟಿಬೆಟ್-ಚೀನಾ ಗಡಿಯಲ್ಲಿ ಇಂದು ಮುಂಜಾನೆ ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆಯ ಭಾರೀ ಭೂಕಂಪ ಸಂಭವಿಸಿದ್ದು, ಸಾವು-ನೋವಿನ ವರದಿಯಾಗಿಲ್ಲ. ಟಿಬೆಟ್ನ ನೈಯಿಂಗ್ಚಿ ಪ್ರಸ್ಥಭೂಮಿಯಲ್ಲಿ ಬೆಳಗ್ಗೆ 6.34ರಲ್ಲಿ (ಬೀಜಿಂಗ್ ಸಮಯ) ಭೂಕಂಪ ಸಂಭವಿಸಿದ್ದು, ಅರುಣಾಚಲ ಪ್ರದೇಶದ ಗಡಿ ಹಾಗೂ ದಕ್ಷಿಣ ಚೀನಾದ ಸರಹದ್ದು ಪ್ರದೇಶಗಳಲ್ಲೂ ಇದರ ಅನುಭವವಾಗಿದೆ.
ಭೂಮಿಯ 10 ಕಿ.ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ ಎಂದು ಚೀನಾ ಭೂಕಂಪ ಜಾಲಗಳ ಕೇಂದ್ರ (ಸಿಇಎನ್ಸಿ) ಹೇಳಿದೆ. ಈ ಭೂಕಂಪ ಸಂಭವಿಸಿದ ನಂತರ ಬೆಳಗ್ಗೆ 8.31ರಲ್ಲಿ (ಬೀಜಿಂಗ್ ಸಮಯ) ಟಿಬೆಟ್ನ ಸ್ವಾಯತ್ತ ಪ್ರದೇಶದಲ್ಲಿ ಮತ್ತೆ 5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಚೀನಾ ವಾರ್ತಾ ಸಂಸ್ಥೆಯೊಂದು ವರದಿ ಮಾಡಿದೆ.

 

                                                        

 

ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ ಆಕಸ್ಮಿಕ

ನವೆಂಬರ್.18

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಹಜ್ರತ್ ಶಹಜ್ಲಾಲ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೋಲ್ಕತಾಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನವೊಂದಕ್ಕೆ ನಿನ್ನೆ ಬೆಂಕಿ ಹೊತ್ತಿಕೊಂಡಿತು.
ಅದೃಷ್ಟವಶಾತ್ ಪ್ರಯಾಣಿಕರಿಗೆ ಅಪಾಯವಾಗಲಿಲ್ಲ. ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ 74 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತೆರವುಗೊಳಿಸಲಾಯಿತು. ವಿಮಾನ ಚಾಲು ಆಗಿ ಟ್ಯಾಕ್ಸಿ ವೇನಿಂದ ರನ್ವೇನತ್ತ ತೆರಳುತ್ತಿದ್ದ ವೇಳೆ ಬೆಳಗ್ಗೆ 10.40ರಲ್ಲಿ ಮುಂದಿನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿತು.
ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಇದರಿಂದ ವಿಮಾನ ಹಾರಾಟಕ್ಕೆ ಒಂದು ಗಂಟೆ ತಡವಾಯಿತು. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

 

                                                                                                                  

ನಾಳೆಯಿಂದ ಜಗತ್ಪ್ರಳಯವೋ! ಆರಂಭವೋ!

ನವೆಂಬರ್.18

ವಾಷಿಂಗ್ಟನ್: ಪ್ಲಾನೆಟ್ ಎಕ್ಸ್ ಎಂಬ ಕ್ಷುದ್ರಗ್ರಹ ಇಳೆಗೆ ಅಪ್ಪಳಿಸಲಿದ್ದು, ಪೃಥ್ವಿ ಚೂರು ಚೂರಾಗಿ ಸಕಲ ಜೀವ ಸಂಕುಲಗಳು ನಶಿಸಲಿವೆ ಎಂದು ಕೆಲವು ವಿಜ್ಞಾನಿಗಳು ತಿಳಿಸಿದ ದಿನಾಂಕ ನ.19 ಸಮೀಪಿಸಿದ್ದು, ಇದು ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.
ಪ್ಲಾನೆಟ್ ಎಕ್ಸ್ ಎಂಬ ನಿಬಿರು ಗ್ರಹ( ಅಸ್ಟಿರಾಯ್ಡ್) 3,600 ವರ್ಷಗಳಿಗೊಮ್ಮೆ ಮಾತ್ರ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದು, ಅದರಿಂದ ಹೊರಹೊಮ್ಮುವ ಪ್ಲಾಸ್ಮಟಿಕ್ ಇಂಧನವೊಂದು ಜಗತ್ತಿನ ಸರ್ವನಾಶಕ್ಕೆ ಕಾರಣವಾಗಲಿದೆ ಎಂದು ಅಮೆರಿಕದ ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞ (ನ್ಯೂಮರಾಲಜಿಸ್ಟ್) ಡೇವಿಡ್ ಮೀಡೇ ಹೇಳಿರುವುದು ಆತಂಕಕ್ಕೀಡು ಮಾಡಿದೆ.
ಅಲ್ಲದೆ ನಾಳೆಯೇ ಕ್ಷುದ್ರ ಗ್ರಹ ಯಾವುದೇ ಕ್ಷಣದಲ್ಲಿ ಧರೆಯ ಒಡಲಿಗೆ ಬಡಿದು ಭಾರೀ ಅಲ್ಲೋಲಕಲ್ಲೋಲ ಉಂಟು ಮಾಡಲಿದೆ ಎಂದು ಹೇಳಿದ್ದಾರೆ. ಇದರಿಂದ ಭೂಮಿಯೇ ಹೊತ್ತಿ ಉರಿಯಬಹುದು ಅಥವಾ ಇಳೆಯನ್ನೇ ಕಬಳಿಸುವ ಜಲಪ್ರಳಯವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮೀಡೇ ಭವಿಷ್ಯವಾಣಿಯ ಬಗ್ಗೆ ಜಗತ್ತಿನಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ಹಿಂದೆಯೂ ಕೂಡ ಮಹಾನಗರದ ಗಾತ್ರದ ಕ್ಷುದ್ರ ಗ್ರಹಗಳು ಭೂಮಿಗೆ ಅಪ್ಪಳಿಸಲಿವೆ ಎಂದು ದಿನಾಂಕವನ್ನು ಸಹ ಹೇಳಲಾಗಿತ್ತು. ಆದರೆ ಅಂಥ ಆತಂಕಕಾರಿ ವಿದ್ಯಮಾನಗಳು ಸಂಭವಿಸಿಲ್ಲ. ಹೀಗಾಗಿ ಮೀಡೇ ಹೇಳಿಕೆ ಸುಳ್ಳಾಗಬಹುದು ಎಂದು ವಿಜ್ಞಾನಿಗಳು ವಾದಿಸಿದ್ದಾರೆ. ಆದಾಗ್ಯೂ ನಾಳಿನ ಸಂಭವನೀಯ ಕ್ಷುದ್ರ ಗ್ರಹ ಕಂಟಕದ ಬಗ್ಗೆ ಜಗತ್ತಿನಾದ್ಯಂತ ಕುತೂಹಲವಂತೂ ಇದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಮೀಡೇಯ ಭವಿಷ್ಯವಾಣಿಯನ್ನು ತಳ್ಳಿ ಹಾಕಿದೆ. ನಿಬಿರು ಗ್ರಹ ಭೂಮಿಯ ಕಡೆಗೆ ಬರುತ್ತಿರುವುದು ನಿಜವೇ ಆಗಿದ್ದರೆ ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ ಸಾಧಿಸಿರುವ ವಿಜ್ಞಾನಿಗಳ ಕಣ್ಣಿಗೆ ಅದು ಗೋಚರಿಸುತ್ತಿರಲಿಲ್ಲವೇ ಎಂದು ಪ್ರಶ್ನಿಸಿದೆ.

  ಮೇಲಾಗಿ ಸೌರವ್ಯೂಹದ ಪ್ರತಿಯೊಂದು ವಿದ್ಯಮಾನಗಳ ಬಗ್ಗೆಯೂ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಅನುಕ್ಷಣವೂ ತೀವ್ರ ನಿಗಾವಹಿಸಿದ್ದು, ಅಂಥ ಯಾವುದೇ ಕ್ಷುದ್ರ ಗ್ರಹಗಳಾಗಲಿ, ಬೃಹದಾಕಾರದ ಆಕಾಶ ಕಾಯಗಳಾಗಲಿ ಸದ್ಯಕ್ಕೆ ಭೂಮಿಯ ಸನಿಹಕ್ಕೆ ಬಂದಿರುವ ಸಾಧ್ಯತೆಗಳೇ ಇಲ್ಲ ಎಂದು ನಾಸಾ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ ಡೇವಿಡ್ ಮೀಡೇ ಅವರ ವಾದವನ್ನು ಒಪ್ಪಿರುವ ಕೆಲವು ಸಂಖ್ಯಾಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳು ಇಂತಹ ಕ್ಷುದ್ರ ಗ್ರಹಗಳು ಯಾವುದೇ ಸಂದರ್ಭದಲ್ಲಿ ಊಹಾತೀತ ವೇಗದಲ್ಲಿ ಭೂಮಿಯ ಕಡೆಗೆ ಧಾವಿಸಿ ಅಪ್ಪಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅತ್ಯಾಧುನಿಕ ವಿಜ್ಞಾನವನ್ನೂ ಮೀರಿದ ವಿಸ್ಮಯಗಳು ಮತ್ತು ಅತ್ಯಂತ ಅಪಾಯಕಾರಿ ಆಕಾಶಕಾಯಗಳು ಸೌರಮಂಡಲ ದಲ್ಲಿ ಇವೆ. ಹೀಗಾಗಿ ನಾಳೆಯೇ ಕ್ಷುದ್ರ ಗ್ರಹಗಳು ಅಪ್ಪಳಿಸದಿದ್ದರೂ ಮುಂದೊಂದು ದಿನ ಯಾವುದೇ ಸಂದರ್ಭದಲ್ಲಿ ವಸುಂಧರೆಯ ಒಡಲನ್ನು ಬಗೆಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಕತಾಳೀಯ ಎಂಬಂತೆ ವಿಶ್ವದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ವಿನಾಶಕಾರಿ ಭೂಕಂಪಗಳು, ಪ್ರವಾಹಗಳು ಸೇರಿದಂತೆ ಇತರ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ಒಟ್ಟಾರೆ ನಾಳೆ ಪೃಥ್ವಿಯನ್ನು ಚೂರು ಚೂರು ಮಾಡಬಹುದಾದ `ಕ್ಷುದ್ರ ಗ್ರಹ’ದ ದಾಳಿ ಬಗ್ಗೆ ವಿಶ್ವದಲ್ಲಿ ಭಯ ಮಿಶ್ರಿತ ಕುತೂಹಲವಂತೂ ಇದ್ದೇ ಇದೆ.

 

                                                                                                                                                                                                                                 

ಸಮುದ್ರಮಟ್ಟ ಗುರುತಿಸಲು ಟೂಲ್ ಅಭಿವೃದ್ಧಿಪಡಿಸಿದ ನಾಸಾ

ನವೆಂಬರ್.18

 ಲಾಸ್ ಏಂಜಲೇಸ್: ಜಾಗತಿಕ ತಾಪಮಾನದ ಹೆಚ್ಚಳದಿಂದ ನೀರ್ಗಲ್ಲು ಕರಗುತ್ತಿದ್ದು, ಸಮುದ್ರದ ಮಟ್ಟ ಹೆಚ್ಚುತ್ತಿದೆ. ಇದರಿಂದ ಕರಾವಳಿ ತೀರದ ನಗರಗಳು ಅಪಾಯದ ಅಂಚಿನಲ್ಲಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಪಾಯದ ಚಿನಲ್ಲಿರುವ ಈ ನಗರಗಳು ಯಾವುದೆಂದು ಪತ್ತೆ ಹಚ್ಚಲು ನಾಸಾ ಟೂಲ್ವೊಂದನ್ನು ಅಭಿವೃದ್ಧಿಪಡಿಸಿದ್ದು, ಯಾವ ನಗರ ಎಷ್ಟು ಪಾಯದಲ್ಲಿದೆ ಎಂಬ ಮಾಹಿತಿ ನೀಡುತ್ತದೆ. ಮಂಗಳೂರು ಹೆಚ್ಚು ಅಪಾಯದ ಮಟ್ಟ ತಲುಪಿದೆ ಎಂದು ತೋರಿಸುತ್ತಿದ್ದು, ರಾಜ್ಯದ ಜನರು ಚಿಂತಿಸುವಂತೆ ಮಾಡಿದೆ.
ಭೂಮಿಯ ಪರಿಭ್ರಮಣೆ ಹಾಗೂ ಗುರುತ್ವಾಕರ್ಷಣೆ ಪರಿಣಾಮದ ಬಗ್ಗೆ ಮಾಹಿತಿ ನೀಡಬಲ್ಲ ಈ ಟೂಲ್, ಜಾಗತಿಕವಾಗಿ ನೀರು ಹೇಗೆ ಹಂಚಲ್ಪಡುತ್ತಿದೆ, ಎಂಬುದನ್ನು ವಿಶ್ಲೇಷಿಸಬಹುದು.
ನೀವು ಇರುವ ನಗರ ಸೇಫಾ?
ನೀರ್ಗಲ್ಲು, ಮಂಜಿನ ಹಾಳೆ, ಮಂಜುಗಡ್ಡೆಗಳು ಪ್ರತೀ ನಗರಗಳ ಮೇಲೂ ತನ್ನದೇ ಪ್ರಭಾವ ಬೀರುತ್ತವೆ. ನಾಸಾ ಅಭಿವೃದ್ಧಿಪಡಿಸಿದ ಈ ಟೂಲ್ನಿಂದ ಯಾವ ನಗರ, ಯಾವಾಗ ಅಪಾಯದ ಮಟ್ಟ ತಲುಪಲಿದೆ ಎಂಬುದನ್ನೂ ಕಂಡುಕೊಳ್ಳಬಹುದು. ಇದರ ಆಧಾರದ ಮೇಲೆ ಮುಂದಿನ 100 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು, ನಗರದ ನಕ್ಷೆಯನ್ನು ರೂಪಿಸಬೇಕಾಗುತ್ತದೆ.
ಲಂಡನ್ ಸಮುದ್ರ ಮಟ್ಟ ಹೆಚ್ಚಳದಿಂದ ವಾಯುವ್ಯ ಭಾಗದ ಗ್ರೀನ್ಲ್ಯಾಂಡ್ ಮೇಲೆ ಪರಿಣಾಮ ಬೀರಲಿದೆ, ಎಂಬ ಸುಳಿವು ನೀಡುತ್ತಿದೆ ಈ ಟೂಲ್.

 

                         

ಭಾರತೀಯನಾರಿ ಬ್ರಿಟಿಷ್ ಪೊಲೀಸ್ ಸಂಸ್ಥೆ ಮುಖ್ಯಸ್ಥೆ: ಮಿಲ್ಲೀ ಬ್ಯಾನರ್ಜಿ

ನವೆಂಬರ್-17

ಲಂಡನ್: ಬ್ರಿಟನ್ನ ಕಾಲೇಜ್ ಆಫ್ ಪೊಲೀಸಿಂಗ್ ಎಂಬ ನೂತನ ಸಂಸ್ಥೆಯ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಮಹಿಳಾ ಉದ್ಯಮಿ ಮಿಲ್ಲೀ ಬ್ಯಾನರ್ಜಿ ಅವರನ್ನು ಬ್ರಿಟಿಷ್ ಸರ್ಕಾರ ನೇಮಕ ಮಾಡಿದೆ. ಕೋಲ್ಕತಾ ಮೂಲದ ಮಿಲ್ಲೀ ಯುನೈಟೆಡ್ ಕಿಂಗ್ಡಂನ ಪೊಲೀಸ್ ಸಂಸ್ಥೆಯೊಂದರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯವಾಗಿರುವ ಕೌಶಲ್ಯಗಳು ಮತ್ತು ಜ್ಞಾನವನ್ನು ಅವರು ಹೊಂದಲು ಅಗತ್ಯವಾದ ಮಾರ್ಗದರ್ಶನ ನೀಡಿ ಅವರನ್ನು ಸಜ್ಜುಗೊಳಿಸುವ ಹೊಣೆ ಹೊಂದಿದ್ದಾರೆ.

 

                                                

ಮಹಿಳೆಯರಿಗೆ ಗುಪ್ತಾಂಗ ಪ್ರದರ್ಶಿಸಿದ ಕ್ರಿಕೆಟರ್!

ನವೆಂಬರ್-17 

ಲಂಡನ್: ಭಾರತೀಯ ಮೂಲದ ಕ್ರಿಕೆಟಿಗ ಇಬ್ಬರು ಮಹಿಳೆಯರಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪವನ್ನು ಒಪ್ಪಿಕೊಂಡಿದ್ದಾರೆ.
ಡರ್ಬಿಶೈರ್ ಕ್ರಿಕೆಟ್ ಕ್ಲಬ್ನ ಆಲ್-ರೌಂಡರ್ ಮತ್ತು ಇಂಗ್ಲೆಂಡ್ನ ಅಂಡರ್ 19 ತಂಡದ ಮಾಜಿ ನಾಯಕ ಶಿವ್ ಠಾಕೂರ್ ಅವರು ಮಹಿಳೆಯರ ಮುಂದೆ ಗುಪ್ತಾಂಗ ಪ್ರದರ್ಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಜೂನ್ನಲ್ಲಿ ಬಂಧನಕ್ಕೊಳಗಾಗಿದ್ದರು.
'ಶಿವ್ ಠಾಕೂರ್ ವರ್ತನೆಯಿಂದ ಇಬ್ಬರು ಅಮಾಯಕ ಮಹಿಳೆಯರಿಗೆ ತೊಂದರೆಯಾಗಿದೆ' ಎಂದು ದಕ್ಷಿಣ ಡರ್ಬಿಶೈರ್ ಮಾಜಿಸ್ಟ್ರೇಟ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
'ಠಾಕೂರ್ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದೋಷಿ ಎಂದು ಘೋಷಿಸಲಾಗಿದೆ' ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಂಡ್ರ್ಯೂ ಮೆಚಿನ್ ತೀರ್ಪು ಪ್ರಕಟಿಸಿದ್ದಾರೆ. ಡರ್ಬಿಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಶಿವ್ ಠಾಕೂರ್ ಅವರ ವೇತನವನ್ನು ಅಮಾನತುಗೊಳಿಸಿತ್ತು.

 

 

                                                                          

ಕನ್ನಡ ರಾಜ್ಯೋತ್ಸವದಲ್ಲಿ ಶಿವಶಂಕರಪ್ಪಗೆ ಕನ್ನಡ ರತ್ನ ಪ್ರಶಸ್ತಿ

ನವೆಂಬರ್-17

ದುಬೈ: ಜೆಎಸ್ಎಸ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಅದ್ಧೂರಿಯಾಗಿ ಕನ್ನಡ ರಾಜೋತ್ಸವ ಆಚರಿಸಲಿದ್ದು, ಶಿಕ್ಷಣ ಕ್ಷೇತ್ರ ಮತ್ತು ಸಮಾಜ ಸೇವೆಗೆ ಕೊಡುಗೆ ನೀಡಿರುವ ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. 
ನಮ್ಮ ಮಣ್ಣಿಗೆ ನಮ್ಮ ಗೌರವ ಎಂಬ ಶೀರ್ಷಿಕೆಯೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕವಿಗಳು, ಸಾಹಿತಿಗಳು, ಲೇಖಕರು, ಚಿಂತಕರು, ಹಾಗೂ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ನ.24ರಂದು ಸಂಜೆ ಕನ್ನಡ ರಾಜೋತ್ಸವ ಸಮಾರಂಭ ನಡೆಯಲಿದ್ದು, ಸಂಘದ ಅಧ್ಯಕ್ಷ ವೀರೇಂದ್ರ ಬಾಬು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಡಾ.ಬಿ.ಆರ್.ಶೆಟ್ಟಿ ಮತ್ತು ಎಸ್.ಎಸ್.ಗಣೇಶ್, ಹಾಸ್ಯ ನಟ ಮಾಸ್ಟರ್ ಆನಂದ್, ಗಾಯಕಿಯರಾದ ಅಂಜಲಿ ಹಳಿಯಾಳ್ ಮತ್ತು ವೀಣಾ ಹಾನಗಲ್ ಮೊದಲಾದವರು ಭಾಗವಹಿಸುವರು. ಯುಎಇನಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಂದ ಕನ್ನಡ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.

 

11  ಹಂತಕರ ಗುಂಡಿಗೆ ಪಂಜಾಬ್ ಯುವಕ ಬಲಿ
 ನವೆಂಬರ್-16
ಲಾಸ್ ಏಂಜಲಿಸ್ : ಅಮೆರಿಕದಲ್ಲಿ ಭಾರತೀಯ ಮೂಲದವರ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಪಂಜಾಬ್ ಮೂಲದ ಯುವಕನೊಬ್ಬ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಘಟನೆ ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಆ ಪ್ರಾಂತ್ಯದಲ್ಲಿನ ಭಾರತೀಯರು ಭಯಭೀತರಾಗಿದ್ದಾರೆ. ಪಂಜಾಬ್ನ ಬಂಗ ಜಿಲ್ಲೆಯ ಕೊತ್ರಾನ್ ಗ್ರಾಮದ ಧರಂಪ್ರೀತ್ ಸಿಂಗ್(21) ಗುಂಡಿಗೆ ಬಲಿಯಾದ ನತದೃಷ್ಟ ಯುವಕ. ಆತನನ್ನು ಕಿರಾಣಿ ಅಂಗಡಿಯಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ. ದರೋಡೆಕೋರರ ದಾಳಿಯಲ್ಲಿ ಸಿಂಗ್ ಬಲಿಯಾಗಿರಬೇಕೆಂದು ಶಂಕಿಸಲಾಗಿದೆ.
ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಸಿಂಗ್ ತನ್ನ ಮಾವ ಮತ್ತು ಅತ್ತೆಯೊಂದಿಗೆ ವಾಸವಾಗಿದ್ದರು. ಅವರು ಪೆಟ್ರೋಲ್ ಪಂಪ್ಗೆ ಹೊಂದಿಕೊಂಡಿರುವ ಪ್ರಾವಿಷನ್ ಸ್ಟೋರ್ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಸ್ಥಳೀಯ ನಾಲ್ವರು ದರೋಡೆ ಕೃತ್ಯ ಎಸಗುವ ಉದ್ದೇಶದಿಂದ ಅಂಗಡಿಗೆ ಬಂದು ದಾಳಿ ನಡೆಸಿದ್ದರು ಎಂದು ಹೇಳಲಾಗಿದೆ.

 

                                                          

ಶತಕೋಟಿ ಡಾಲರ್ ಸಾಲ ತಿರಸ್ಕರಿಸಿದ ಪಾಕಿಸ್ತಾನ

ನವೆಂಬರ್-16 

ಬೀಜಿಂಗ್: ಚೀನಾದ ಮಿತ್ರ ದೇಶವಾದ ಪಾಕಿಸ್ತಾನ ಆ ದೇಶಕ್ಕೆ ತಲೆಸುತ್ತುವಂತಹ ಶಾಕ್ ನೀಡಿದೆ. ಚೀನಾದ ಪ್ರತಿಷ್ಠಿತ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿಚಾರದಲ್ಲಿ ಆ ದೇಶದ ಆಫರನ್ನು ಪಾಕ್ ತಿರಸ್ಕರಿಸಿದೆ. ಸಿಪಿಇಸಿ ಭಾಗವಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ಯಲ್ಲಿ ಡೈಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕೆ 14 ಶತಕೋಟಿ ಡಾಲರ್ ಸಾಲವನ್ನು ನೀಡಲು ಚೀನಾ ಮುಂದೆ ಬಂದಿದ್ದು, ಪಾಕ್ ಅದನ್ನು ನಿರಾಕರಿಸಿದೆ.
ಸುಮಾರು 60 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಿಪಿಇಸಿಯಿಂದ ಈ ಯೋಜನೆಯನ್ನು ತಪ್ಪಿಸಲು, ಈ ಅಣೆಕಟ್ಟೆಯನ್ನು ನಾವೇ ನಿರ್ಮಿಸಿಕೊಳ್ಳೂತ್ತೇವೆಂದು ಪಾಕ್ ನೇರವಾಗಿ ಚೀನಾಗೆ ಹೇಳಿದೆ. ಭಾರತ ತನ್ನ ಭಾಗವಾಗಿ ಭಾವಿಸಿರುವ ಪಿಓಕೆಯಲ್ಲಿ ಈ ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೆ ಏಷ್ಯಾ ಅಭಿವೃದ್ದಿ ಬ್ಯಾಂಕ್ ಸಾಲ ಕೊಡಲು ನಿರಾಕರಿಸಿರುವುದು ಗೊತ್ತೇ ಇದೆ. ಈ ವಿವಾದಾತ್ಮಕ ಪ್ರದೇಶದಲ್ಲಿ ಬಂಡವಾಳ ಹೂಡಲು ಹಲವು ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ನಿರಾಕರಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಸಿಪಿಇಸಿಯಲ್ಲಿ ಮುಖ್ಯವಾಗಿರುವ ಈ ಅಣೆಕಟ್ಟೆಗೆ ಸಾಲ ನೀಡಲು ಚೀನಾ ಕಂಪೆನಿಗಳು ಮುಂದೆ ಬಂದಿವೆ. ಆದರೆ ಈ ಪ್ರಾಜೆಕ್ಟ್ ಅಂದಾಜು ಖರ್ಚಿನಲ್ಲಿ 5 ಶತಕೋಟಿ ಡಾಲರ್ಗಳಿಂದ ಸುಮಾರು 14 ಶತಕೋಟಿ ಡಾಲರ್ಗೆ ಏರಿಸಿದೆ. ಈ ಹಿನ್ನೆಲೆಯಲ್ಲಿ ಸಾಲ ಕೊಡಲು ಚೀನಾ ಕಂಪೆನಿಗಳು ಕಠಿಣ ಷರತ್ತುಗಳನ್ನು ಇಟ್ಟಕಾರಣ ಪಾಕ್ ಕಂಗಾಲಾಗಿತ್ತು. ಹಾಗಾಗಿ ಚೀನಾದ ಷರತ್ತುಗಳನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದು, ಹಾಗಾಗಿಯೇ ಸ್ವತಃ ತಾವೇ ಪ್ರಾಜೆಕ್ಟ್ ಕೈಗೊಳ್ಳುತ್ತೇವೆಂದು ಪಾಕಿಸ್ತಾನ ಸರಕಾರ ಸ್ಪಷ್ಟಪಡಿಸಿರುವುದಾಗಿ ಅಲ್ಲಿನ ದೈನಿಕ 'ಎಕ್ಸ್ಪ್ರೆಸ್ ಟ್ರೈಬ್ಯೂನ್' ಪ್ರಕಟಿಸಿದೆ.
ಡೈಮರ್-ಭಾಷಾ ಅಣೆಕಟ್ಟು ವಿಚಾರದಲ್ಲಿ ಚೀನಾ ಹಾಕಿರುವ ಷರತ್ತುಗಳನ್ನು ಅಂಗೀಕರಿಸಲು ಸಾಧ್ಯವಿಲ್ಲ. ಅವು ದೇಶದ ಅಭಿವೃದ್ಧಿಗೆ ಮಾರಕವಾಗಿವೆ ಎಂದು ಪಾಕಿಸ್ತಾನದ ಜಲ ಮತ್ತು ವಿದ್ಯುತ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಜಾಮಿಲ್ ಹುಸ್ಸೇನ್ ಸ್ಪಷ್ಟಪಡಿಸಿದ್ದಾರೆ.

 

                                                   

ಮಂಜಿನಿಂದಾಗಿ 30 ವಾಹನಗಳು ಡಿಕ್ಕಿ, 19 ಸಾವು

ನವೆಂಬರ್-16

ಶಾಂಘೈ: ಚೀನಾದ ಅನ್ಹುಯಿ ಪ್ರಾಂತ್ಯದ ಫುಯಂಗ್ ನಗರದಲ್ಲಿ ದಟ್ಟ ಮಂಜಿನಿಂದಾಗಿ 30ಕ್ಕೂ ಹೆಚ್ಚು ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತಗಳಲ್ಲಿ 19 ಮಂದಿ ಮೃತಪಟ್ಟು, ಇತರ 21 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 11 ಪ್ರಯಾಣಿಕರ ಸ್ಥಿತಿ ಶೋಚನೀಯವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆಯಿಂದ ದಟ್ಟ ಮಂಜು ಆವರಿಸಿದ್ದು, ಮುಂದಿನ ರಸ್ತೆ ಕಾಣದೆ ಕಾರುಗಳೂ ಸೇರಿದಂತೆ 30ಕ್ಕೂ ಹೆಚ್ಚು ವಾಹನಗಳು ಒಂದಾದ ಮೇಲೆ ಒಂದರಂತೆ ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಪಘಾತದ ತೀವ್ರತೆಯಿಂದಾಗಿ ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. ಈ ಅಗ್ನಿ ಅವಘಡಗಳಿಂದಲೂ ಕಾರುಗಳು ಸುಟ್ಟು ಭಸ್ಮವಾಗಿವೆ. ಈ ಭೀಕರ ಸರಣಿ ಅಪಘಾತ ಮತ್ತು ಸಾವು-ನೋವಿಗೆ ವಾಯುಮಾಲಿನ್ಯ ಮುಖ್ಯ ಕಾರಣವಾಗಿದೆ. ಈ ಪ್ರದೇಶದಲ್ಲಿ ಭಾರೀ ಮಾಲಿನ್ಯದಿಂದ ಹೊಗೆ ಕವಿದ ದಟ್ಟ ಮಂಜು ಆವರಿಸಲಿದೆ ಎಂದು ಫುಯಂಗ್ ಪ್ರಾಂತ್ಯದ ಸರ್ಕಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

 

 

 

                                    

ದೇಶದಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿ?

ನವೆಂಬರ್-16 

ವಾಷಿಂಗ್ಟನ್: ಭಾರತದ ರಾಜಕಾರಣಿಗಳಲ್ಲಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದು ಇತ್ತೀಚೆಗೆ ನಡೆಸಿದ ಪ್ಯೂ (Peತಿ) ಸಮೀಕ್ಷೆ ಹೇಳಿದೆ.
ಫೆಬ್ರವರಿ 21ರಿಂದ ಮಾರ್ಚ್ 10ರ ನಡುವೆ ನಡೆಸಿದ ಸಮೀಕ್ಷೆಯಲ್ಲಿ 2,464 ಜನರು ಭಾಗವಹಿಸಿದ್ದರು. ಮೋದಿಯವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗಿಂತ (58%) 30 ಪಾಯಿಂಟ್ (ಮೋದಿ 88%)ಮುಂದಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗಿಂತ(57%) 49 ಪಾಯಿಂಟ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗಿಂತ (39%) ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಭಾರತೀಯ ಆರ್ಥಿಕತೆ ಸುಧಾರಿಸುತ್ತಿರುವುದರಿಂದ ಜನರು ಮೋದಿ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಹತ್ತರಲ್ಲಿ ಎಂಟು ಜನರು 2014ರ ಚುನಾವಣೆ ಬಳಿಕ ಭಾರತದ ಅರ್ಥ ವ್ಯವಸ್ಥೆ ಸುಧಾರಣೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ. 30ರಷ್ಟು ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ 10ರಲ್ಲಿ 7 ಜನರಲ್ಲಿ ಮೋದಿ ಆಡಳಿತದ ಬಗ್ಗೆ ತೃಪ್ತಿ ಇದೆ. 2014ಕ್ಕೆ ಹೋಲಿಸಿದರೆ ಮೋದಿ ಜನಪ್ರಿಯತೆ ದುಪ್ಪಟಾಗಿದೆ ಎಂದು Peತಿ ತಿಳಿಸಿದೆ.
ದಕ್ಷಿಣ ಭಾರತದ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಶ್ಚಿಮದಲ್ಲಿ ಮಹಾರಾಷ್ಟ್ರ, ಗುಜರಾತ್, ಚತ್ತೀಸ್ಗಢದಲ್ಲಿ ಮೋದಿ ಜನಪ್ರಿಯತೆ ಹೆಚ್ಚಿದೆ ಎಂದು ಪ್ಯೂ ತಿಳಿಸಿದೆ.

 

 

                                                

ಕ್ಯಾಲಿಫೋರ್ನಿಯಾದಲ್ಲಿ ಗುಂಡಿಗೆ , ನಾಲ್ಕು ಸಾವು

ನವೆಂಬರ್-15

ಲಾಸ್ ಏಂಜಲಸ್: ಅಪರಿಚಿತ ಬಂದೂಕು ಧಾರಿಯೊಬ್ಬ ಯದ್ವತದ್ವಾ ಗುಂಡು ಹಾರಿಸಿ ನಾಲ್ವರನ್ನು ಸ್ಥಳದಲ್ಲೇ ಹತ್ಯೆ ಮಾಡಿ ಇಬ್ಬರು ಮಕ್ಕಳು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿರುವ ಘಟನೆ ಉತ್ತರ ಕ್ಯಾಲಿಫೋರ್ನಿಯಾದ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.
ಇಂದು ಬೆಳಗ್ಗೆ 8 ಗಂಟೆಗೆ ಒಂದು ಪ್ರಾಥಮಿಕ ಶಾಲೆಯೂ ಸೇರಿದಂತೆ ಇತರ ಕೆಲವು ಪ್ರದೇಶಗಳಲ್ಲಿ ಈ ಅಪರಿಚಿತ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದು, ಗಾಯಾಳುಗಳನ್ನು ದಾಖಲಿಸಲಾಗಿದೆ. ಗಾಯಗೊಂಡಿರುವವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿರುವ ತೆಹಾಮಾ ಪ್ರಾಂತ್ಯದ ಹಿರಿಯ ಅಧಿಕಾರಿ ಫಿಲ್ ಜಾನ್‍ಸ್ಪನ್, ಯಾತಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಹಿಂಸಾಚಾರ ನಡೆಸಿದ ಅಪರಿಚಿತ ಬಂದೂಕುಧಾರಿಯನ್ನು ಪೊಲೀಸರು ಹೊಡೆದು ಕೆಡವಿದ್ದಾರೆ. ಅದೃಷ್ಟವಶಾತ್ ಮೃತಪಟ್ಟಿರುವವರಲ್ಲಿ ಶಾಲಾ ಮಕ್ಕಳು ಯಾರೂ ಇಲ್ಲ. ಮೃತರೆಲ್ಲರೂ ದೊಡ್ಡವರೇ ಆಗಿದ್ದಾರೆ. ದಾಳಿಯ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಹಳೆ ವೈಷಮ್ಯವಾದ ಕಾರಣದಿಂದ ವ್ಯಕ್ತಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ಪುಟ್ಟ ಮಕ್ಕಳಲ್ಲಿ ಒಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಈ ಮಗುವನ್ನು ಅದರ ತಾಯಿ ಕಾರಿನಲ್ಲಿ ಶಾಲೆಗೆ ಕರೆತರುತ್ತಿದ್ದಾಗ ಈ ಘಟನೆ ನಡೆದಿದ್ದು, ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಾಯಿ-ಮಗು ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಇದು ಉಗ್ರರ ಕೃತ್ಯವಲ್ಲ ಎಂಬುದಂತೂ ಸ್ಪಷ್ಟವಾಗಿದೆ ಎಂದು ಫಿಲ್ ಜಾನ್‍ಸ್ಪನ್ ತಿಳಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಮಿಲಿಟರಿ ಸಮಸ್ತ್ರ ಧರಿಸಿದ್ದು, ನಿಜಕ್ಕೂ ಅವನು ಯಾರು, ಯಾತಕ್ಕಾಗಿ ಈ ದಾಂಧಲೆ ನಡೆಸಿದ ಎಂಬುದು ಇನ್ನಷ್ಟೇ ನಿಚ್ಚಳವಾಗಬೇಕಾಗಿದೆ. ನಾಲ್ವರು ಮೃತರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾಳೆ. ಇತ್ತೀಚೆಗೆ ಅಮೆರಿಕದ ವಿವಿಧೆಡೆ ಉಗ್ರರ ನರಮೇಧ ಕೃತ್ಯಗಳು ಹೆಚ್ಚುತ್ತಿರುವುದರಿಂದ ನಾಗರಿಕರು ಈ ಘಟನೆಯಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ.

 

\

                                                                  

ಕೋಳಿ ಮೇಲೆ ಲೈಂಗಿಕ ಕೃತ್ಯ: ಅಪ್ರಾಪ್ತನ ಬಂಧನ

ನವೆಂಬರ್-15

ಇಸ್ಲಾಮಾಬಾದ್: ಅಪ್ರಾಪ್ತ ಬಾಲಕನೊಬ್ಬ ಕೋಳಿಯ ಮೇಲೆ ಲೈಂಗಿಕ ಕೃತ್ಯ ಎಸಗಿ ಅದನ್ನು ಸಾಯಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ಘಟನ ಪಾಕಿಸ್ತಾನದ ಪಂಜಾಬ್ನ ಹಫೀಜಾಬಾದ್ನಲ್ಲಿ ನವೆಂಬರ್ 11ರಂದು ನಡೆದಿದೆ.


ಜಾಲಾಲ್ಪೂರ್ ಭಟ್ಟಿಯಾನ್ ಮೂಲದ 14 ವರ್ಷದ ಬಾಲಕ ಕೋಳಿ ಮೇಲೆ ಲೈಂಗಿಕ ಕೃತ್ಯ ಎಸಗಿ ಅದನ್ನು ಸಾಯಿಸಿದ್ದಾಗಿ ಪಾಕಿಸ್ತಾನ ಪೊಲೀಸರು 'ಎಕ್ಸ್ಪ್ರೆಸ್ ಟ್ರಿಬ್ಯೂನ್' ಪತ್ರಿಕೆಗೆ ತಿಳಿಸಿದ್ದಾರೆ. ಈ ಸಂಬಂಧ ಬಾಲಕನ ವಿರುದ್ಧ ಕೋಳಿಯ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು.


ಆರೋಪಿಯು ತನ್ನ ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾಗಿ ಕೋಳಿಯ ಮಾಲೀಕ ದೂರುನಲ್ಲಿ ತಿಳಿಸಿದ್ದಾನೆ. ಇಬ್ಬರು ವ್ಯಕ್ತಿಗಳು ಆ ಘಟನೆಯನ್ನು ಪ್ರತ್ಯಕ್ಷ ನೋಡಿದ್ದಾರೆಂದು ಎಂದೂ ಪೊಲೀಸರು ತಿಳಿಸಿದ್ದಾರೆ.


ಜಲಾಲಾಪೂರ್ ಭಟ್ಟಿಯಾನ್ ಪೊಲೀಸ್ ಅಧಿಕಾರಿ ಸರ್ಫರಾಜ್ ಅಂಜುಮ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ,'ಆ ಬಾಲಕನನ್ನು ಬಂಧಿಸಿದ್ದೇವೆ. ಕೋಳಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದಾಗ ಕೃತ್ಯ ನಡೆದಿರುವುದು ಬಹಿರಂಗವಾಗಿದೆ. ಲೈಂಗಿಕ ಆಸೆ ಪೂರೈಸಿಕೊಳ್ಳಲು 14 ವರ್ಷ ಬಾಲಕ ಈ ಕೆಲಸ ಮಾಡಿದ್ದಾನೆಂದು' ಸರ್ಫರಾಜ್ ತಿಳಿಸಿದ್ದಾರೆ.

 

 

                      v                       

ಉತ್ತರ ಕೊರಿಯಾಕ್ಕೆ ರಾಯಭಾರಿ ಚೀನಾ

ನವೆಂಬರ್-15

ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉತ್ತರ ಕೊರಿಯಾದ ಅಣ್ವಸ್ತ್ರ ಬೆದರಿಕೆ ವಿರುದ್ಧದ ಆಸಿಯನ್ ಸದಸ್ಯ ದೇಶಗಳ ಪ್ರವಾಸ ಮುಗಿಸಿದ ಬೆನ್ನಲ್ಲೇ ಚೀನಾ ಸರ್ಕಾರ ಆ ರಾಷ್ಟ್ರ(ಉತ್ತರ ಕೊರಿಯ)ಕ್ಕೆ ತನ್ನ ವಿಶೇಷ ರಾಯಭಾರಿಯನ್ನು ಕಳುಹಿಸಿಕೊಡಲು ತೀರ್ಮಾನಿಸಿದೆ. 
ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಪ್ರತಿನಿಧಿ ಸೊಂಗ್ ತಾವೊ ಅವರು ಶುಕ್ರವಾರ ಉತ್ತರ ಕೊರಿಯಕ್ಕೆ ತೆರಳಲಿದ್ದು, ಕಳೆದ ತಿಂಗಳು ಅಸ್ತಿತ್ವಕ್ಕೆ ಬಂದಿರುವ ಚೀನಾದ ಕಮ್ಯುನಿಸ್ಟ್ ಕಾಂಗ್ರೆಸ್ ಜೊತೆ ಚರ್ಚಿಸಲಿದ್ದಾರೆ ಎಂದು ಹೇಳಿರುವ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ, ಈ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ನೀಡಿಲ್ಲ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಐದು ಆಸಿಯಾ ಸದಸ್ಯ ರಾಷ್ಟ್ರಗಳ ಪ್ರವಾಸ ಅಂತ್ಯಗೊಂಡ ಒಂದೇ ದಿನದ ಅಂತರದಲ್ಲಿ ಚೀನಾ ಈ ಕ್ರಮ ಕೈಗೊಂಡಿದೆ. ಟ್ರಂಪ್ ಅವರ ಐದು ದೇಶಗಳ ಪ್ರವಾಸದಲ್ಲಿ ಚೀನಾ ಕೂಡ ಸೇರಿತ್ತು. ತಮ್ಮ ಭೇಟಿ ವೇಳೆ ಟ್ರಂಪ್ ಅವರು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾನ್ ಉಂಗ್ ಅವರ ಹಠಮಾರಿತನದ ಧೋರಣೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಚೀನಾದ ತಮ್ಮ ಸಹವರ್ತಿಯ ಮೇಲೆ ಒತ್ತಡ ಹೇರಿದ್ದರು.

 

 

                                             

ವಿದೇಶದಲ್ಲಿ ಉದ್ಯೋಗ ಸೃಷ್ಟಿಸಿದ ಸ್ವದೇಶಿ ಕಂಪನಿಗಳು

ನವೆಂಬರ್-15

ವಾಷಿಂಗ್ಟನ್: ಅಮೆರಿಕದಲ್ಲಿನ ಭಾರತೀಯ ಕಂಪೆನಿಗಳು ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿವೆ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಸಿಐಐ ವರದಿ ಸ್ಪಷ್ಟಪಡಿಸಿದೆ. ಭಾರತ ಮೂಲದ ಸುಮಾರು 100 ಕಂಪೆನಿಗಳು ಅಮೆರಿಕಾದಲ್ಲಿ ವರ್ಷಕ್ಕೆ 18 ಶತಕೋಟಿ ಡಾಲರ್ ಬಂಡವಾಳ ಹೂಡುತ್ತಿದ್ದು, 1,13,000 ಉದ್ಯೋಗಗಳನ್ನು ಕಲ್ಪಿಸಿವೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ.
'ಇಂಡಿಯನ್ ರೂಟ್ಸ್, ಅಮೆರಿಕನ್ ಸಾಯಿಲ್' ಹೆಸರಿನ ವರದಿ ಬಿಡುಗಡೆ ಮಾಡಲಾಗಿದೆ. ಯುಎಸ್‌ನಲ್ಲಿ ಭಾರತ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ 147      ದಶಲಕ್ಷ ಡಾಲರ್‌ಗಳು, ಸಂಶೋಧನೆ ಅಭಿವೃದ್ದಿಯಡಿ 588 ದಶಲಕ್ಷ ಡಾಲರ್ ಖರ್ಚು ಮಾಡುತ್ತಿವೆ ಎಂದು ತಿಳಿಸಿದೆ.
ಭಾರತ ಮೂಲದ ಸುಮಾರು 100 ಕಂಪೆನಿಗಳು 50 ರಾಜ್ಯಗಳಲ್ಲಿ 1,13,423 ಮಂದಿಗೆ ಉದ್ಯೋಗ ನೀಡಿವೆ. ನ್ಯೂಜರ್ಸಿ (8,572), ಟೆಕ್ಸಾಸ್ (7,271), ಕ್ಯಾಲಿಫೋರ್ನಿಯಾ (6,749), ನ್ಯೂಯಾರ್ಕ್ (5,135), ಜಾರ್ಜಿಯಾ (4,554) ಪ್ರದೇಶಗಳಲ್ಲಿ ಅತ್ಯಧಿಕ ಉದ್ಯೋಗಿಗಳಿದ್ದಾರೆ. ಈ ಐದು ರಾಜ್ಯಗಳಲ್ಲಿ ಭಾರತ ಭಾರಿ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮಾಡಿದೆ ಎಂದು ಸಿಐಐ ವರದಿಯಲ್ಲಿ ಹೇಳಿದೆ.
ನ್ಯೂಯಾರ್ಕ್ (1.57 ಶತಕೋಟಿ ಡಾಲರ್), ನ್ಯೂಜೆರ್ಸಿ (1.56 ಶತಕೋಟಿ ಡಾಲರ್), ಮೆಸಾಚುಸೆಟ್ಸ್ (931 ದಶಲಕ್ಷ ಡಾಲರ್), ಕ್ಯಾಲಿಫೋರ್ನಿಯಾ (542 ದಶಲಕ್ಷ  ಡಾಲರ್), ಓಮಿಂಗ್ (435 ದಶಲಕ್ಷ ಡಾಲರ್)ನಲ್ಲಿ ಭಾರತದ ಕಂಪೆನಿಗಳು ಬಂಡವಾಳ ಹೂಡಿಕೆ ಮಾಡಿವೆ. ಅಮೆರಿಕದಲ್ಲಿನ ರಾಜ್ಯಗಳಲ್ಲಿ ಭಾರತ ಕಂಪೆನಿಗಳು ಹೂಡಿರುವ ಬಂಡವಾಳ ಒಟ್ಟು ಮೌಲ್ಯ 187 ದಶಲಕ್ಷ ಡಾಲರ್‌ಗಳಷ್ಟಿರುತ್ತದೆ.
ಮುಂಬರುವ ಐದು ವರ್ಷಗಳಲ್ಲಿ ಶೇ.87ರಷ್ಟು ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕೆಂದು ಯೋಚಿಸುತ್ತಿವೆ. ಈ ಬಗ್ಗೆ ಅಮೆರಿಕದಲ್ಲಿನ ಭಾರತ ರಾಯಭಾರಿ ನವತೇಜ್ ಸರ್ನಾ ಮಾತನಾಡುತ್ತಾ, 'ಭಾರತದ ತಜ್ಞರು, ಉದ್ಯಮಗಳು ಅಮೆರಿಕ ಆರ್ಥಿಕ ವ್ಯವಸ್ಥೆಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಎರಡೂ ದೇಶಗಳ ಅಭಿವೃದ್ಧಿಗೆ ಇದು ಸಾಕಷ್ಟು ಸಹಕಾರಿಯಾಗಲಿದೆ' ಎಂದಿದ್ದಾರೆ.
ಅಮೆರಿಕದಲ್ಲಿನ ಭಾರತದ ಕಂಪೆನಿಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು, ಅದೇ ರೀತಿ ಯುಎಸ್ ಆರ್ಥಿಕ ವ್ಯವಸ್ಥೆಗೂ ಸಹಕಾರಿಯಾಗಿವೆ ಎಂದು ಸೆನೇಟರ್ ಕ್ರಿಸ್ ವಾನ್ ಹೊಲೆನ್ ಅಭಿಪ್ರಾಯಪಟ್ಟಿದ್ದಾರೆ. ಎರಡೂ ದೇಶಗಳ ನಡುವೆ ವಾಣಿಜ್ಯ, ವ್ಯೂಹಾತ್ಮಕ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳುತ್ತಿವೆ ಎಂಬುದಕ್ಕೆ ಇದೀಗ ಬಿಡುಗಡೆಯಾಗಿರುವ ಸಿಐಐ ವರದಿಯೇ ಇದಕ್ಕೆ ನಿದರ್ಶನ ಎಂದಿದ್ದಾರೆ ಸೆನೇಟರ್.

 

                                                          

ಕ್ರಿಶ್ಚಿಯನ್ನರಿಗೆ ಚೀನಾ ಸರಕಾರ ಆದೇಶ

ನವೆಂಬರ್-15

ಬೀಜಿಂಗ್: ಸರಕಾರ ಬಡವರಿಗೆ ಕೊಡುವ ಸೌಲಭ್ಯಗಳು ಸಿಗಬೇಕೆಂದರೆ ಮನೆಯಲ್ಲಿ ಯೇಸುಕ್ರಿಸ್ತನ ಫೋಟೋಗಳನ್ನು ತೆಗೆದು ಆ ಜಾಗದಲ್ಲಿ ಅಧ್ಯಕ್ಷ ಜಿನ್‍ಪಿಂಗ್ ಫೋಟೋಗಳನ್ನು ಹಾಕಿಕೊಳ್ಳುವಂತೆ ಕ್ರಿಶ್ಚಿಯನ್ನರಿಗೆ ಚೀನಾ ಸರಕಾರ ಆದೇಶಿಸಿದೆ.

ಅಷ್ಟೇ ಅಲ್ಲದೆ ಯುಗಾನ್ ಕೌಂಟಿಯಲ್ಲಿನ ಕ್ರಿಶ್ಚಿಯನ್ನರ ಮನೆಗಳಿಗೆ ಭೇಟಿ ನೀಡಿರುವ ಅಧಿಕಾರಿಗಳು 'ಯೇಸು ಕ್ರಿಸ್ತ ನಿಮ್ಮನ್ನು ಬಡತನದಿಂದ ಹೊರಗೆ ತರಲ್ಲ. ಕೇವಲ ಚೀನಾ  ಕಮ್ಯುನಿಸ್ಟ್ ಪಕ್ಷ ಮಾತ್ರ ಆ ಕೆಲಸ ಮಾಡುತ್ತದೆ. ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ. ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ. ನಿಮ್ಮ ಮನೆಯಲ್ಲಿರುವ ಯೇಸು ಕ್ರಿಸ್ತನ              ಫೋಟೋಗಳನ್ನುತೆಗೆದು ಜಿನ್‌ಪಿಂಗ್ ಫೋಟೋಗಳನ್ನು ಆ ಜಾಗದಲ್ಲಿಡಿ' ಎಂದು ಸೂಚಿಸಿದ್ದಾರೆ.
ಅಧಿಕಾರಿಗಳ ಅಂಕಿಅಂಶಗಳ ಪ್ರಕಾರ ಚೀನಾದಲ್ಲಿ ಶೇ.11ರಷ್ಟು ಮಂದಿ ಬಡತನದಲ್ಲಿದ್ದಾರೆ. ಅವರಲ್ಲಿ ಬಹುತೇಕರು ಶೇ.10ರಷ್ಟು ಕ್ರಿಶ್ಚಿಯನ್ನರು. ಇದನ್ನೇ ಅನುಕೂಲವಾಗಿ ಪರಿಗಣಿಸಿದ ಚೀನಾ ಸರಕಾರ ಕ್ರಿಶ್ಚಿಯನ್ನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಬಡತನದಿಂದ ಹೊರಗೆ ತರುತ್ತೇವೆಂದು. ಯೇಸುಕ್ರಿಸ್ತನ ಫೋಟೋಗಳನ್ನು ಮನೆಯಿಂದ ಹೊರಗಾಕಿ ಜಿನ್‌ಪಿಂಗ್ ಫೋಟೋಗಳನ್ನು ಹಾಕಿಕೊಳ್ಳಬೇಕೆಂದು ವಿನಂತಿಸಿಕೊಂಡಿದೆ.

ಸರಕಾರದ ಆದೇಶದ ಮೇರೆಗೆ ಈಗಾಗಲೆ 624 ಕ್ರಿಶ್ಚಿಯನ್ ಕುಟುಂಬಗಳು ಜೀಸಸ್ ಫೋಟೋಗಳನ್ನು ತೆಗೆದು ಹಾಕಿದ್ದು, ಅವರಲ್ಲಿ 453 ಮಂದಿ ಕ್ರಿಸ್ತನ ಫೋಟೋಗಳ ಜಾಗದಲ್ಲಿ ಜಿನ್‌ಪಿಂಗ್ ಫೋಟೋಗಳನ್ನು ಹಾಕಿಕೊಂಡಿರುವುದಾಗಿ ಚೀನಾ ಪತ್ರಿಕೆಗಳು ಪ್ರಕಟಿಸಿವೆ.

 

                                                        

ಯೋಗಿ ಭೇಟಿ ಮಾಡಿದ ಶಂಕರಜೀ

ನವೆಂಬರ್-15

ಲಖನೌ: ಅಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ತಮ್ಮ ಅಯೋಧ್ಯೆ (ರಾಮ ಜನ್ಮಭೂಮಿ) ಭೇಟಿಯ ಮುನ್ನಾ ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇದೊಂದು ಸೌಜನ್ಯದ ಭೇಟಿಯಾಗಿದ್ದು, ಸುಮಾರು 15-20 ನಿಮಿಷಗಳ ಕಾಲ ಇಬ್ಬರೂ ಪರಸ್ಪರ ಮಾತನಾಡಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಆದಿತ್ಯನಾಥ್ ಅವ ನಿಲುವು ನಿಚ್ಚಳವಾಗಿದೆ.
ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಪಾರ್ಟಿಯಾಗಿಲ್ಲ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ. ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ. ಯವುದೇ ರೀತಿಯ ಇತ್ಯರ್ಥವನ್ನೂ ನಾವು ಸ್ವಾಗತಿಸುತ್ತೇವೆ ಎಂದು ಭೇಟಿಯ ನಂತರ ರವಿಶಂಕರ್ ಗುರೂಜಿ ಹೇಳಿದ್ದಾರೆ. ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲು ರವಿಶಂಕರ್ ಅವರು ಸ್ವಇಚ್ಛೆಯಿಂದ ನಾಳೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

                                                          

ಕೇಜ್ರಿವಾಲ್ ಕಾಂಗ್ರೆಸ್ ಕರಿ ಬಾವುಟ ಪ್ರದರ್ಶನ

ನವೆಂಬರ್-15

ಮೊಹಾಲಿ: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಇಂದು ಬುಧವಾರ ಕಾಣಲು ಬಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಅಕಾಲಿ ದಳ ಮತ್ತು ಕಾಂಗ್ರೆಸ್ ಸದಸ್ಯರು ಕಪ್ಪು ಬಾವುಟ ತೋರಿಸಿದರು.


ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರಗೆ ಪ್ರತಿಭಟನಕಾರರು ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕನಾಗಿರುವ ಸುಖಪಾಲ್ ಸಿಂಗ್ ಖೈರಾ ಅವರ ರಾಜೀನಾಮೆಯನ್ನು ಪಡೆಯುವಂತೆ ಕೇಜ್ರಿವಾಲರನ್ನು ಒತ್ತಾಯಿಸಿ ಘೋಷಣೆ ಕೂಗಿದರು.

 

 

                            

ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ

ನವೆಂಬರ್ -15 

ಲಖನೌ: ಮುಂದಿನ ವರ್ಷ ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ತರಪ್ರದೇಶ ಸರ್ಕಾರ ಆಧಾರ್ ಕಾರ್ಡ್ನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.


ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಶಾಲಾ ನೋಂದಣಿ ಕಾರ್ಡ್ ಜತೆಗೆ ಆಧಾರ್ ಕಾರ್ಡ್ನ್ನು ತರುವ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.


ಒಂದು ವೇಳೆ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಇಲ್ಲದ ಕಾರಣ ಪರೀಕ್ಷೆಗಳಿಗೆ ಹಾಜರಾಗದಿದ್ದಲ್ಲಿ ಅದರ ಜವಾಬ್ದಾರಿಯನ್ನು ಶಿಕ್ಷಣಸಂಸ್ಥೆಯೇ ಹೊರಬೇಕಾಗುತ್ತದೆ ಎಂದಿದ್ದಾರೆ. 'ಪರೀಕ್ಷೆಗಳಲ್ಲಿ ನಡೆಯುವ ನಕಲಿ ವಿದ್ಯಾರ್ಥಿಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ 1 ರಿಂದ 8ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ನ್ನು ಕಡ್ಡಾಯಗೊಳಿಸಲಾಗುವುದು' ಎಂದು ಹೇಳಿದ್ದಾರೆ.

 

                                         

ಅಮೆರಿಕದ ವಯಸ್ಕರಲ್ಲಿ ಅರ್ಧದಷ್ಟು ಜನರಿಗೆ ಅಧಿಕ ರಕ್ತದೊತ್ತಡ

ನವೆಂಬರ್-15 

ವಾಷಿಂಗ್ಟನ್: ಅಮೆರಿಕದ ಪ್ರಮುಖ ಹೃದಯತಜ್ಞರು ಇತ್ತೀಚಿಗೆ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ನೂತನ ನಿಯಮಗಳನ್ನು ಹೊರಡಿಸಿದ್ದಾರೆ. ಇದರಂತೆ ಮಿಲಿಯಗಟ್ಟಲೆ ಅಮೆರಿಕನ್ನರು ಅಧಿಕ ರಕ್ತದೊತ್ತಡವನ್ನು ಹೊಂದಿದವರ ವ್ಯಾಪ್ತಿಗೆ ಸೇರಲಿದ್ದಾರೆ. ತಮ್ಮ ರಕ್ತದೊತ್ತಡವನ್ನು ಹತೋಟಿಯಲ್ಲಿರಿಸಲು ಅವರೀಗ ತಮ್ಮ ಜೀವನ ಶೈಲಿಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ ಅಥವಾ ಔಷಧಿಗಳನ್ನು ಸೇವಿಸಬೇಕಾಗುತ್ತದೆ.
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ರೂಪಿಸಿರುವ ನೂತನ ಮಾರ್ಗಸೂಚಿಗಳಡಿ ಅಧಿಕ ರಕ್ತದೊತ್ತಡವನ್ನು ಹೊಂದಿರುವ 45 ವರ್ಷಕ್ಕಿಂತ ಕೆಳಗಿನ ವಯೋಮಾನದವರ ಸಂಖ್ಯೆ ಮೂರು ಪಟ್ಟುಗಳ ಷ್ಟಾಗಲಿದೆ ಮತ್ತು ಇದೇ ವಯೋಗುಂಪಿನ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಲಿದೆ.
ಈ ಸಂಖ್ಯೆಗಳು ಆತಂಕವನ್ನು ಸೃಷ್ಟಿಸಿವೆ ಎನ್ನುತ್ತಾರೆ ವರ್ಜೀನಿಯಾ ವಿವಿಯ ಔಷಧಿ ವಿಭಾಗದ ಪ್ರೊಫೆಸರ್ ಹಾಗೂ ನೂತನ ಮಾರ್ಗಸೂಚಿಗಳನ್ನು ರೂಪಿಸಿದ ಸಮಿತಿಯ ಸಹ ಅಧ್ಯಕ್ಷ ಡಾ.ರಾಬರ್ಟ್ ಎಂ.ಕ್ಯಾರಿ. ಹಿಂದಿನ ಮಾರ್ಗಸೂಚಿಗಳಂತೆ 71 ಮಿಲಿಯನ್ ಇದ್ದ ಅಧಿಕ ರಕ್ತದೊತ್ತಡ ಹೊಂದಿರುವ ವಯಸ್ಕರ ಸಂಖ್ಯೆ ನೂತನ ಮಾರ್ಗಸೂಚಿಗಳಡಿ 103 ಮಿಲಿಯನ್ಗೆ ಹೆಚ್ಚಲಿದೆ.
ಆದರೆ ಅಧಿಕ ರಕ್ತದೊತ್ತಡಕ್ಕಾಗಿ ಔಷಧಿಗಳನ್ನು ಸೇವಿಸುವವರ ಗುಂಪಿಗೆ ಸೇರಲಿರುವ ಹೊಸಬರ ಸಂಖ್ಯೆ ಕೇವಲ ಅಂದಾಜು 4.2 ಮಿಲಿಯನ್ಗಳಷ್ಟು ಹೆಚ್ಚಲಿದೆ ಎಂದು ಡಾ.ಕ್ಯಾರಿ ತಿಳಿಸಿದರು.
ಅಮೆರಿಕನ್ನರು ನೂತನ ಮಾರ್ಗಸೂಚಿಯನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚು ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಅಥವಾ ವೈದ್ಯಕೀಯ ಚಿಕಿತ್ಸೆಯಿಂದ ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಈಗಾಗಲೇ ತಗ್ಗುತ್ತಿರುವ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದ ಸಾವುಗಳ ಸಂಖ್ಯೆಯನ್ನು ಇನ್ನಷ್ಟು ತಗ್ಗಿಸಲು ಸಾಧ್ಯ ಎನ್ನುತ್ತಾರೆ ತಜ್ಞರು.
ಹಿಂದಿನ ಮಾರ್ಗಸೂಚಿಗಳಂತೆ ರಕ್ತದೊತ್ತಡ 140/90 ಎಂಎಂಎಚ್ಜಿಗಿಂತ ಹೆಚ್ಚಿದ್ದರೆ ಅದನ್ನು ಅಧಿಕ ರಕ್ತದೊತ್ತಡವೆಂದು ಪರಿಗಣಿಸಲಾಗುತ್ತಿತ್ತು. ನೂತನ ಮಾರ್ಗಸೂಚಿಯಡಿ ಈ ಮಾನದಂಡವನ್ನು 130/80 ಎಂಎಂಎಚ್ಜಿಗೆ ಇಳಿಸಲಾಗಿದೆ. ಅಧಿಕ ರಕ್ತದೊತ್ತಡವು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

 

 

 

          

ರಕ್ತರಹಿತ ಕ್ರಾಂತಿ ತಳ್ಳಿದ: ಜಿಂಬಾವ್ವೆ ಸೇನೆ

ನವೆಂಬರ್-15

ಹರಾರೆ: ಕ್ಷಿಪ್ರ (ರಕ್ತರಹಿತ) ಕ್ರಾಂತಿ ನಡೆಯಲಿದೆ ಎಂಬುದನ್ನು ತಳ್ಳಿ ಹಾಕಿರುವ ಜಿಂಬಾವ್ವೆ ದೇಶ ಮಿಲಿಟರಿ ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ. 
ಯಾವುದೆ ಕಾರಣಕ್ಕೂ ಅಂತಹ ಗುರಿಯನ್ನು ಭದ್ರತಾ ಪಡೆಗಳು ಹೊಂದಿಲ್ಲ. ಅಧ್ಯಕ್ಷ ರಾಬರ್ಟ್ ಮುಗಾಬೆ ಅವರ ನಿವಾಸದ ಬಳಿ ಜಮಾಯಿಸಬಹುದಾದ ಕ್ರಿಮಿನಲ್ಗಳ ಬೇಟೆಗಾಗಿ ರಾಜಭವನದ ಪ್ರದೇಶದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 
ಖಂಡಿತಾ ರಾಷ್ಟ್ರದ ಆಡಳಿತಾಧಿಕಾರವನ್ನು ವಶಕ್ಕೆ ಪಡೆಯುವ ಉದ್ದೇಶ ಮಿಲಿಟರಿಗಿಲ್ಲ. ಘನವೆತ್ತ ರಾಷ್ಟ್ರಾಧ್ಯಕ್ಷರಾದ 93ರ ಹರೆಯದ ರಾಬರ್ಟ್ ಮುಗಾಬೆ ಮತ್ತವರ ಕುಟುಂಬದ  ಎಲ್ಲಾ ಸದಸ್ಯರು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಇದ್ದಾರೆ. ನಮ್ಮ ಭದ್ರತಾ ಪಡೆಗಳು ಅವರನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಸುರಕ್ಷಿಕತೆಯ ಬಗ್ಗೆ ನಾವು ಖಾತ್ರಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ರಾಷ್ಟ್ರಾಧ್ಯಕ್ಷರನ್ನು ತಮ್ಮ ಗುರಿಯಾಗಿಸಿಕೊಂಡಿರುವವರನ್ನು ಮಟ್ಟ ಹಾಕುವುದೇ ನಮ್ಮ ಗುರಿ. ಬಂಡುಕೋರರ ಮಟ್ಟ ಹಾಕುವ ನಮ್ಮ ಕಾರ್ಯಾಚರಣೆ ಮುಗಿದ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ. ನಿನ್ನೆಯಿಂದ ಶಸ್ತ್ರಸಜ್ಜಿತ ಸೈನಿಕರು ಮತ್ತು ಸೇನಾ ವಾಹನಗಳು ರಾಜಭವನದ ಸುತ್ತಮುತ್ತ ಠಳಾಯಿಸುತ್ತಿದ್ದುದನ್ನು ಕಂಡ ಜನತೆ ಸೇನೆಯು ಅಧ್ಯಕ್ಷರ ವಿರುದ್ಧ ಕ್ಷಿಪ್ರ ಕ್ರಾಂತಿಗೆ ಸಜ್ಜಾಗಿದ್ದಾರೆ ಎಂದೇ ನಾಗರಿಕರು ಭಾವಿಸಿದ್ದರು. ಏನೇ ಆದರೂ ಮುಗಾಬೆ ವಿರುದ್ದ ಅವರ ವಿರೋಧಿ ಬಣ ಕೆಲವು ಕಾಲಗಳಿಂದಲೂ ಕತ್ತಿ ಮಸೆಯುತ್ತಲೇ ಇದೆ.
1980ರ ಬ್ರಿಟನ್ನಿನ ಆಡಳಿತದಲ್ಲಿ ಸ್ವಾತಂತ್ರ್ಯ ಪಡೆದು ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದಂದಿನಿಂದಲೂ ಜಿಂಬಾಬ್ವೆಯ ಅಧ್ಯಕ್ಷರಾಗಿ 93 ವರ್ಷದ ರಾಬರ್ಟ್ ಮುಗಾಬೆ ಆಡಳಿತ ನಡೆಸುತ್ತಿದ್ದಾರೆ. ಇತ್ತೀಚೆಗಂತೂ ಮುಗಾಬೆ ಮತ್ತು ಮಿಲಟರಿ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ.

 

 

     

ಗೊಂಬೆಗಳ ಲೋಕಕ್ಕೆ ಹಿಜಬ್ಧಾರಿ ಬಾರ್ಬಿ

ನವೆಂಬರ್-15

 

ಆಸ್ಪ್ರೇಲಿಯಾ: ಬಾರ್ಬಿ ಮಕ್ಕಳ ಗೊಂಬೆ ತಯಾರಿಕಾ ಸಂಸ್ಥೆಯು ಹಿಜಬ್ ಧರಿಸಿದ ಬಾರ್ಬಿಯನ್ನು ಇದೇ ಮೊದಲ ಬಾರಿಗೆ ಸೋಮವಾರ ಬಿಡುಗಡೆ ಮಾಡಿದೆ.


ಅಮೆರಿಕದ ಒಲಿಂಪಿಕ್ ಆಟಗಾರ್ತಿ ಇಬ್ತಿಹಾಜ್ ಮುಹಮದ್ ಗೌರವಾರ್ಥ ಈ ಗೊಂಬೆ ವಿನ್ಯಾಸಗೊಳಿಸಲಾಗಿದೆ. ಒಲಿಂಪಿಕ್ ಗೇಮ್ಸ್ನಲ್ಲಿ ಸ್ಪರ್ಧಿಸಿದ ಮೊದಲ ಹಿಜಬ್ಧಾರಿ ಮಹಿಳೆ ಎಂಬ ಹೆಸರಿಗೆ ಇಬ್ತಿಹಾಜ್ ಪಾತ್ರರಾಗಿದ್ದಾರೆ.

 

     

ವಿದೇಶಿದಲ್ಲಿ ವಿದ್ಯಾರ್ಥಿಗಳು: ಭಾರತಕ್ಕೆ ದ್ವಿತೀಯ ಸ್ಥಾನ

ನವೆಂಬರ್-14 

ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದೊಂದು ವರ್ಷದಲ್ಲಿ ವಿದ್ಯಾಭ್ಯಾಸ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಡಬಲ್ ಡಿಜಿಟ್ (ಶೇ.12.3) ಬೆಳವಣಿಗೆ ದಾಖಲಾಗಿದೆ. ಚೀನಾ ಹೊರತುಪಡಿಸಿದರೆ ಅಮೆರಿಕದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 2ನೇ ಅತೀ ದೊಡ್ಡ ಗುಂಪಾಗಿ ಭಾರತ ಗಮನ ಸೆಳೆದಿದೆ. ವರದಿಯೊಂದರ ಪ್ರಕಾರ, 2016ರಲ್ಲಿ ಅಮೆರಿಕದ ಆರ್ಥಿಕತೆಯಲ್ಲಿ ಭಾರತದ ದೇಣಿಗೆ 42556 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು.
2016-17ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಮೆರಿಕದಲ್ಲಿ 1,86,267 ಭಾರತದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದರು ಎಂದು ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್ (ಐಐಇ) ಸಂಸ್ಥೆ ಬಿಡುಗಡೆ ಮಾಡಿದ ವಾರ್ಷಿಕ 'ಓಪನ್ ಡೋರ್ಸ್' ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವ ಚೀನಾ ವಿದ್ಯಾರ್ಥಿಗಳ ಸಂಖ್ಯೆ ಶೇಕಡ 6.8ರಷ್ಟು ಹೆಚ್ಚಳಗೊಂಡಿದೆ. ಅಲ್ಲೀಗ 3,50,755 ವಿದ್ಯಾರ್ಥಿಗಳಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಪದವಿ ಹಂತದ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದು ಎಂದು ವರದಿ ಹೇಳುತ್ತದೆ. ಐಐಇ ಪ್ರಕಾರ 2016-17ನೇ ಶೈಕ್ಷಣಿಕ ಸಾಲಿನ ವಿವರ ಹೀಗಿದೆ: ಪದವಿಪೂರ್ವ ಹಂತ-ಶೇಕಡ 11.8, ಪದವಿ ಹಂತ-ಶೇ.56.3, ಇತರ-1.2, ಒಪಿಟಿ (ಆಪ್ಶನಲ್ ಪ್ರ್ಯಾಕ್ಟಿಕಲ್ ಟ್ರೈನಿಂಗ್)-ಶೇ.30.7.
ಕಳೆದ ವರ್ಷ ಅಮೆರಿಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಅಲ್ಲಿನ ಆರ್ಥಿಕತೆಗೆ 42,556 ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಮೊತ್ತದ ಕಾಣಿಕೆ ನೀಡಿದ್ದಾರೆ ಎಂದು ವಾಣಿಜ್ಯ ಇಲಾಖೆಯ ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ಐಐಇ ವರದಿ ಹೇಳುತ್ತದೆ

 

 

2016-17ರಲ್ಲಿ, ಸತತ 2ನೇ ವರ್ಷ, ಅಮೆರಿಕದ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ದಾಖಲೆಗೈದಿವೆ. ಒಟ್ಟು 10 ಲಕ್ಷದ 80 ಸಾವಿರ ವಿದೇಶಿ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ.2017ರ ಓಪನ್ ಡೋರ್ಸ್ ವರದಿಯನ್ವಯ, ಇದೀಗ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಶೇ.3ರಷ್ಟು ವೃದ್ಧಿಸಿದೆ. ಇದೇ ವೇಳೆ, ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವ ಅಮೆರಿಕ ವಿದ್ಯಾರ್ಥಿಗಳ ಸಂಖ್ಯೆ ಶೇ.4ರಷ್ಟು ಹೆಚ್ಚಳಗೊಂಡಿದೆ.
ಸಾಮಾನ್ಯವಾಗಿ ಚೀನಾ, ಭಾರತ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಕೆನಡಾ, ವಿಯೆಟ್ನಾಂ, ತೈವಾನ್, ಜಪಾನ್, ಮೆಕ್ಸಿಕೊ ಹಾಗೂ ಬ್ರೆಜಿಲ್ ದೇಶಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳುತ್ತಾರೆ. ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಅಮೆರಿಕದ ರಾಜ್ಯಗಳ ಪೈಕಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಟೆಕ್ಸಾಸ್, ಮಸ್ಸಾಚುಸೆಟ್ಸ್, ಇಲಿನೊಯಿಸ್, ಪೆನ್ಸಿಲ್ವೇನಿಯಾ, ಫೋರಿಡಾ, ಒಹಿಯೊ, ಮಿಶಿಗನ್ ಹಾಗೂ ಇಂಡಿಯಾನಾ ಮುಖ್ಯವಾದವು. 2016-17ನೇ ಸಾಲಿನಲ್ಲಿ ಈ ಎಲ್ಲಾ ರಾಜ್ಯಗಳಲ್ಲಿ ವಿದೇಶೀ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.
ವಿದೇಶೀ ವಿದ್ಯಾರ್ಥಿಗಳು ಹೇಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುತ್ತಾರೋ ಹಾಗೆಯೇ ಅಮೆರಿಕದ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳುತ್ತಾರೆ. 2015-16ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಅಮೆರಿಕದ ವಿದ್ಯಾರ್ಥಿಗಳು ಇಂಗ್ಲೆಂಡ್, ಇಟಲಿ, ಸ್ಪೇನ್, ಫ್ರಾನ್ಸ್ ಹಾಗೂ ಜರ್ಮನಿಗೆ ತೆರಳಿದ್ದಾರೆ ಎಂದು ವರದಿ ಹೇಳುತ್ತದೆ. ಇದಕ್ಕೆ ಭಾರತ ಕೂಡ ಹೊರತಲ್ಲ.
ಭಾರತದಲ್ಲಿ ವಿದ್ಯಾಭ್ಯಾಸ ಮಾಡುವ ಅಮೆರಿಕದ ವಿದ್ಯಾರ್ಥಿಗಳ ಸಂಖ್ಯೆ 4,438ರಿಂದ 4,181ಕ್ಕೆ ಕುಸಿತ ಕಂಡಿದೆ. ಅಂತೆಯೇ ಭಾರತದ ರಾರಯಂಕಿಂಗ್ ಕೂಡ 15ಕ್ಕೆ ಕುಸಿದಿದೆ.

 

 

                             

ಕಾಲ್ ಸೆಂಟರ್ ಅವ್ಯವಹಾರ: ಅಮೆರಿಕ ಪ್ರಜೆ ದೋಷಿ

ನವೆಂಬರ್-14

ವಾಷಿಂಗ್ಟನ್: ಕಾಲ್ ಸೆಂಟರ್ ಮೂಲಕ ಭಾರೀ ಪ್ರಮಾಣದ ಹಣಕಾಸು ಅವ್ಯವಹಾರ ನಡೆಸಿದ ಭಾರತೀಯ ಮೂಲದ ಅಮೆರಿಕ ಪ್ರಜೆಯನ್ನು ದೋಷಿ ಎಂದು ಪರಿಗಣಿಸಲಾಗಿದೆ.
ಇಲಿನೋಯ್ಸ್ ನಿವಾಸಿ ಮಿತೇಶ್ಕುಮಾರ್ ಪಟೇಲ್(42) ಹಾಗೂ ಇತ್ತೀಚೆಗಷ್ಟೇ ಇದೇ ಆರೋಪದ ಮೇಲೆ ಅಪರಾಧಿಗಳಾಗಿ ಘೋಷಿಸಲ್ಪಟ್ಟ ಇತರ ಆರು ತಪ್ಪಿಸ್ಥರ ವಿರುದ್ಧ ಅಮೆರಿಕ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ. ಟೆಕ್ಸಾಸ್ನ ಸನ್ನಿ ಜೋಷಿ ಮತ್ತು ರಾಜೇಶ್ ಭಟ್, ಅಲಾಬಾಮಾದ ಜಗದೀಶ್ ಕುಮಾರ್ ಚೌಧರಿ, ಅರಿಜೋನಾದ ರಮಣ್ ಪಟೇಲ್, ಫ್ಲಾರಿಡಾದ ಪ್ರಫುಲ್ ಪಟೇಲ್ ಹಾಗೂ ಕ್ಯಾಲಿಫೋರ್ನಿಯಾದ ಜೆರ್ರಿ ನೋರಿಸ್ ಇತರ ಆರು ದೋಷಿಗಳು.
ಭಾರತೀಯ ಮೂಲದ ಕಾಲ್ ಸೆಂಟರ್ ಮೂಲಕ ಟೆಲಿಫೋನ್ ಕರೆ ಮಾಡಿ ವಂಚನೆ ಎಸಗಿದ್ದಲ್ಲದೇ. ಭಾರೀ ಪ್ರಮಾಣದ ಹಣ ದುರ್ವ್ಯವಹಾರವನ್ನೂ ನಡೆಸಿರುವ ಆರೋಪಗಳು ಸಾಬೀತಾಗಿದೆ. ಇವರ ವಿರುದ್ದ ಅಮೆರಿಕ ಜಿಲ್ಲಾ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.

 

 

                                                                    

ಪಿಒಕೆ ವಿರೋಧಿಸಿ ಪಾಕ್ ವಿರುದ್ಧ ಕಾಶ್ಮೀರಿಗಳ ಪ್ರತಿಭಟನೆ

ನವೆಂಬರ್-13 

ರಾವಲ್ಪಿಂಡಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ನಡೆಯುತ್ತಿರುವ ರಾಜಕೀಯ ಕಾರ್ಯಕರ್ತರ ಅಪಹರಣವನ್ನು ವಿರೋಧಿಸಿ ಯೂನೈಟೆಡ್ ಕಾಶ್ಮೀರಿ ಪೀಪಲ್ಸ್ ನ್ಯಾಷಿನಲ್ ಪಾರ್ಟಿ ಸೋಮವಾರ ಪಾಕಿಸ್ತಾನದ ವಿರುದ್ಧ ಸರಣಿ ಪ್ರತಿಭಟನೆ ಹಾಗೂ ಸಮಾವೇಶವನ್ನು ನಡೆಸಿದೆ.ಕಾರ್ಯಕರ್ತರ ಅಪಹರಣವನ್ನು ನಿಲ್ಲಿಸಿ, ಆಜಾದ್ ಕಾಶ್ಮೀರಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮವನ್ನು ನಿಲ್ಲಿಸಿ. ಪಾಕಿಸ್ತಾನದಿಂದ ನಮಗೆ ಸ್ವಾತಂತ್ರ್ಯ ಬೇಕು ಎಂದು ಘೋಷಣೆಗಳನ್ನು ಕೂಗುತ್ತ ಸಂಘದ ಕಾರ್ಯಕರ್ತರು ರಾವಲ್ಪಿಂಡಿಯಲ್ಲಿ ಬೃಹತ್ ಪ್ರತಿಭಟನಾ ಯಾತ್ರ ನಡೆಸಿದರು. ಅಲ್ಲದೆ ಚೀನಾ ಪಾಕ್ ಆಕ್ರಮಿತ ಪ್ರದೇಶವನ್ನು ತೊರೆಯಬೇಕು ಎಂದು ಒತ್ತಾಯಿಸಿದ್ದಾರೆ.ಇನ್ನು ಪಾಕ್ ಆಕ್ರಮಿತಿ ಮುಜಾಫರಬಾದ್ ನಲ್ಲೂ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಲುವಳಿ ಸೂಚನೆಯಂತೆ ಪಾಕಿಸ್ತಾನ ಪಿಒಕೆಯಿಂದ ಭದ್ರತಾ ಪಡೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

 

                                   

ಟ್ರಂಪ್ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

ನವೆಂಬರ್- 13 

ಮನೀಲಾ: 15ನೇ ಆಸೀಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆ ಜತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ವೃದ್ಧಿಸುತ್ತಿದೆ. ನಾವು ಏಷ್ಯಾ ಮತ್ತು ಮಾನವೀಯತೆಯ ಭವಿಷ್ಯದ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇವೆ. ಭಾರತ ಮತ್ತು ಅಮೆರಿಕಾ ನಡುವಿನ ಬಂಧವೇ ಅಂಥಹದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಕ್ಕೂ ಮೊದಲು ಲಾಸ್ ಬನೊಸ್ ನಲ್ಲಿರುವ ಅಂತಾರಾಷ್ಟ್ರೀಯ ಭತ್ತದ ಕೃಷಿ ಸಂಶೋಧನಾ ಕೇಂದ್ರ(IಖಖI)ಕ್ಕೆ ಮೋದಿ ಭೇಟಿ ನೀಡಿದರು. ಈ ಸಂಶೋಧನಾ ಕೇಂದ್ರದಲ್ಲಿ ಹೊಸದಾಗಿ ಸಂಶೋಧಿಸಿರುವ ಭತ್ತದ ತಳಿಯೊಂದಕ್ಕೆ ಭಾರತದ ಪ್ರಧಾನಿ ಮೋದಿ ಅವರ ಹೆಸರಿಡಲು ಸಂಶೋಧನಾ ಕೇಂದ್ರ ಮುಂದಾಗಿದೆ.
ಮೂರು ದಿನಗಳ ಭೇಟಿಗಾಗಿ ಭಾನುವಾರ ಫಿಲಿಪ್ಪೀನ್ಸ್ ರಾಜಧಾನಿಗೆ ಭೇಟಿ ನೀಡಿದ ಮೋದಿ ಆಸಿಯಾನ್ - ಭಾರತ ಶೃಂಗಸಭೆ ಹಾಗೂ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದರ ಜತೆ ಜಪಾನ್ ಮತ್ತು ಆಸ್ಟ್ರೇಲಿಯಾ ನಾಯಕರೊಂದಿಗೆಯೂ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

 

 

                        

ಭತ್ತ ಸಂಶೋಧನಾ ಸಂಸ್ಥೆಗೆ ಚಾಲನೆ ನೀಡಿದ ಮೋದಿ

ನವೆಂಬರ್.13


ಮನಿಲಾ: ಫಿಲಿಪ್ಪೀನ್ಸ್ ಪ್ರಯಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆ ಆರಂಭಕ್ಕೂ ಮೊದಲು ಇಲ್ಲಿನ ಇಂಟರ್ನ್ಯಾಶನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ)ಗೆ ಭೇಟಿ ನೀಡಿದ್ದು, ರೈಸ್ ಫೀಲ್ಡ್ ಲ್ಯಾಬೊರೇಟರಿಗೆ ಚಾಲನೆ ನೀಡಿದರು.

ಗುದ್ದಲಿಯ ಮೂಲಕ ಮಣ್ಣನ್ನು ಎತ್ತಿ ಹಾಕಿ, ಭತ್ತದ ಸಸಿಗಳನ್ನು ನೆಟ್ಟಿದ್ದು, ಈ ಫೋಟೋಗಳನ್ನು ಪ್ರಧಾನಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.

 

         

ಭೂಕಂಪಕ್ಕೆ 130 ಬಲಿ: ಜನ ತತ್ತರ

ನವೆಂಬರ್.13

ಬಗ್ದಾದ್/ಅಂಕಾರ : ಇರಾನ್ ಸಮೀಪ ಇರಾಕ್ ಗಡಿ ಪ್ರದೇಶದಲ್ಲಿ ರಾತ್ರಿ ಭಾರಿ ಭೂಕಂಪ ಸಂಭವಿಸಿದ್ದು 130 ಮಂದಿ ಮೃತಪಟ್ಟಿದ್ದಾರೆ.
ಇರಾಕ್ಗೆ ಸಮೀಪವಿರುವ ಇರಾನ್ನ ಕೆರ್ಮಾನ್ಶಾಹ್ ವಲಯದಲ್ಲಿ 129 ಮಂದಿ ಅಸು ನೀಗಿದ್ದಾರೆ. ಇವರಲ್ಲಿ 60 ಮಂದಿ ಗಡಿಯಿಂದ ಹದಿನೈದು ಕಿ.ಮೀ ದೂರವಿರುವ ಶರ್ಪೊಲ್ ಇ ಜಹಾಬ್ ಪ್ರದೇಶವರು. ಇರಾಕ್ನೊಳಗೆ ನಾಲ್ವರು ಬಲಿಯಾಗಿದ್ದು, 50 ಎಂದು ಗಾಯಗೊಂಡಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಜಿಯಾಲಾಜಿಕಲ್ ಸರ್ವೆ ಪ್ರಕಾರ ಹಲಾಭಾಜ್ನಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದು, ಇರಾನ್ ಗಡಿ ಭಾಗದಲ್ಲಿ 7.2 ತೀವ್ರತೆಯ ಭೂಕಂಪನ ಸಂಭವಿಸಿದೆ. ಅದೇ ವೇಳೆ ಇರಾನ್ ಭೂಕಂಪನಶಾಸ್ತ್ರ ಕೇಂದ್ರ ಪ್ರಕಾರ ಅಜ್ಗಲೇಹ್ ಬಳಿ 7.3 ತೀವ್ರತೆಯ ಭೂಕಂಪನವುಂಟಾಗಿದೆ.
ಅವಶೇಷಗಳಡಿ ಸಿಕ್ಕಿ ಹಾಕಿಕೊಂಡವರ ರಕ್ಷಣಾ ಕಾರ್ಯಾಚರಣೆ ರಾತ್ರಿಯೇ ಆರಂಭಗೊಂಡಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಸ್ಥಳೀಯ ಡೆಪ್ಯುಟಿ ಗವರ್ನರ್ ಮುಜಾತಬ್ ನಿಕ್ಕೆರ್ದಾರ್ ತಿಳಿಸಿದ್ದಾರೆ.
ಇರಾನ್ ಮತ್ತು ಇರಾಕ್ನ ನಗರಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದೆ. ಸಾವಿರಾರು ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಭೂಕಂಪಪೀಡಿತ ಪ್ರದೇಶಗಳಲ್ಲಿ ವಿಮಾನಗಳ ಹಾರಾಟಕ್ಕೂ ತೊಡಕಾಗಿದೆ. ರಸ್ತೆ ಸಂಪರ್ಕಗಳು ಕಡಿದು ಹೋಗಿವೆ. ಹೀಗಾಗಿ ದುರ್ಗಮ ಹಳ್ಳಿಗೆಳಿಗೆ ಬಹಳಷ್ಟು ತೊಂದರೆಯಾಗಿದೆ. ಹಲಬ್ಹಾದಲ್ಲಿ 12 ವರ್ಷದ ಬಾಲಕನೊಬ್ಬ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾನೆ ಎಂದು ಸ್ಥಳೀಯಾಡಳಿತ ಸಚಿವ ಅಬ್ದೊಲ್ರೆಜ್ಹ ರಹಮಾನಿ ಫಜ್ಹಿಲ್ ಹೇಳಿದ್ದಾರೆ.
ಹಳ್ಳಿಗಳಲ್ಲಿ ಬಹಳಷ್ಟು ಮನೆಗಳನ್ನು ಮಣ್ಣಿನ ಇಟ್ಟಿಗೆಯಿಂದ ನಿರ್ಮಿಸಿದ್ದು, ಭೂಕಂಪಕ್ಕೆ ಸುಲಭ ತುತ್ತಾಗುತ್ತವೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ. ಕುರ್ದಿಸ್ತಾನ್ ವಲಯದಲ್ಲಿ ಬರುವ ಇರಾಕ್ನ ದರ್ಬಂದಿಖಾನ್ ನಗರದಲ್ಲಿ ಬಹಳಷ್ಟು ಹಾನಿಯಾಗಿದೆ. ಇಲ್ಲಿ 30 ಮಂದಿ ಗಾಯಗೊಂಡಿದ್ದಾರೆ. ಒಟ್ಟಿನಲ್ಲಿ ಭೂಕಂಪಪೀಡಿತ ಪ್ರದೇಶಗಳ ಪರಿಸ್ಥಿತಿ ಹದಗೆಟ್ಟಿದೆ. ವಿದ್ಯುತ್ ಸಂಪರ್ಕ ಹಾನಿಗೊಂಡ ಕಾರಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಸವಾಲಾಗಿದೆ.

 

                           
  

ಶಿಕ್ಷಕಿ ನಿವಾಸಕ್ಕೆ ದುಷ್ಕರ್ಮಿಗಳ ದಾಳಿ

 

ನವೆಂಬರ್.11

 

ರಾಂಚಿ: ಜಾರ್ಖಂಡ್ನ ಮುಸ್ಲಿಂ ಯೋಗ ಶಿಕ್ಷಕಿ ರಫಿಯಾ ನಾಝ್ ಅವರ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.


ಯೋಗ ಬೋಧಿಸುವ ಮೂಲಕ ಜೀವನ ರೂಪಿಸಿಕೊಂಡಿರುವ ಮುಸ್ಲಿಂ ಯುವತಿ ರಫಿಯಾ ನಾಝ್ ವಿರುದ್ಧ ಸಮುದಾಯದ ನಾಯಕರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಫತ್ವಾ ಹೊರಡಿಸಿದ್ದರು. ಆದರೆ, ಈ ದಿಟ್ಟ ಶಿಕ್ಷಕಿ ಫತ್ವಾ ವಿರುದ್ಧ ಸಿಡಿದೆದ್ದಿದ್ದರು.


ಯೋಗ ತರಬೇತಿ ಮುಂದುವರಿಸಿದರೆ ಕೊಲೆಗೈಯುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಅವರ ರಫಿಯಾ ನಾಝ್ ಅವರಿಗೆ ಪೊಲೀಸ್ ಭದ್ರತೆ ಒದಗಿಸಿದ್ದರು.


ಸಮುದಾಯದ ನಾಯಕರು ಫತ್ವಾ ಹೊರಡಿಸಿದ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಹಾಗೂ ಮಾಧ್ಯಮ ಮಿತ್ರರು ರಫಿಯಾ ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೆ ದುಷ್ಕರ್ಮಿಗಳು ಅವರ ನಿವಾಸದ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

 

 

                                                                       

ಜಿಎಸ್‍ಟಿ ಮಂಡಳಿ ಸಭೆ: ಎಲ್ಲ ವಸ್ತುಗಳ ತೆರಿಗೆ ಇಳಿಕೆ

ನವೆಂಬರ್-10

ಗುವಾಹಟಿ: ಸರಕು ಮತ್ತು ಸೇವೆಗಳ ತೆರಿಗೆ ಮಂಡಳಿ (ಜಿಎಸ್‍ಟಿ )ಯ 23ನೇ ಸಭೆ ಇದೀಗ ನಡೆಯುತ್ತಿದ್ದು ಜನ ಸಾಮಾನ್ಯರ ಬಳಕೆಯ ಕೆಲವು ವಸ್ತುಗಳ ತೆರಿಗೆಯನ್ನು ಶೇ 28ರ ಮಿತಿಯಿಂದ ಶೇ 18ರ ಮಿತಿಗೆ ಇಳಿಸಲಾಗಿದೆ.
227 ವಸ್ತುಗಳ ತೆರಿಗೆಯನ್ನು ಇಳಿಸುವ ಸಾಧ್ಯತೆಯಿದೆ ಎಂದು ಈ ಹಿಂದೆ ವರದಿಯಾಗಿದ್ದರೂ, ಕೇವಲ 50 ವಸ್ತುಗಳ ತೆರಿಗೆಯನ್ನು ಶೇ 28ರ ಮಿತಿಗೆ ಒಳಪಡಿಸಿ, ಉಳಿದೆಲ್ಲ ವಸ್ತುಗಳ ತೆರಿಗೆಯನ್ನು ಶೇ 18ರ ಮಿತಿಗೆ ಇಳಿಸಿರುವುದಾಗಿ ಜಿಎಸ್ಟಿ ಮಂಡಳಿ ತಿಳಿಸಿದೆ.
'ಇದೊಂದು ಐತಿಹಾಸಿಕ ನಿರ್ಧಾರ. ಶೇ 28ರ ತೆರಿಗೆ ಸ್ಲ್ಯಾಬ್ನಲ್ಲಿ ಕೇವಲ 50 ವಸ್ತುಗಳನ್ನು ಮಾತ್ರ ಇರಿಸಿ ಉಳಿದೆಲ್ಲವನ್ನೂ ಶೇ 18ರ ಸ್ಲ್ಯಾಬ್ಗೆ ಇಳಿಸಲು ನಿರ್ಧರಿಸಲಾಗಿದೆ' ಎಂದು ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದರು.
ಕೇವಲ ಅನಾರೋಗ್ಯಕರ, ದುಶ್ಚಟಗಳು ಹಾಗೂ ದುರ್ಬಳಕೆಯಾಗುವ ವಸ್ತುಗಳು ಮತ್ತು ಐಷಾರಾಮಿ ವಸ್ತುಗಳನ್ನು ಮಾತ್ರ ಶೇ 28ರ ತೆರಿಗೆ ಮಿತಿಯಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

 

 

                                                                                                       

ಟ್ರಂಪ್ ಸ್ಥಾನ ಕುತ್ತು: ಕನ್ಸರ್‍ವೇಟಿವ್ ಪಕ್ಷಕ್ಕೆ ಚಿಂತೆ

ನವೆಂಬರ್-10

 

ವಾಷಿಂಗ್ಟನ್: ದೇಶ ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಪ್ರಿಯತೆ ಕುಸಿಯುತ್ತಿದೆ ಎಂದು ಅಮೆರಿಕದ ಕನ್ಸರ್ವೇಟಿವ್ ಪಕ್ಷವನ್ನು ಚಿಂತೆಗೀಡುಮಾಡಿದೆ.


ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಪ್ರಿಯತೆ ಕುಸಿಯುತ್ತಿದೆಯೇ..? ವಿವಾದಾತ್ಮಕ ಅತ್ಯಂತ ಶ್ರೀಮಂತ ಉದ್ಯಮಿಯೂ ಆದ ವರ್ಣರಂಜಿತ ಟ್ರಂಪ್ ಅಧಿಕಾರಕ್ಕೆ ಬಂದು ಇನ್ನೂ ಒಂದು ವರ್ಷವಾಗಿಲ್ಲ ವಾದರು ಟ್ರಂಪ್ ಅವರನ್ನು ಚಿಂತೆಗಿಡಾಗೀಸಿದೆ.

ಟ್ರಂಪ್ ವಿರುದ್ಧ ಅಮೆರಿಕದ ಗ್ರಾಮಾಂತರ ಸಮುದಾಯಗಳಲ್ಲಿ ಈಗಾಗಲೇ ಅವರ ಜನಪ್ರಿಯತೆ ಕುಗ್ಗಿರುವ ಬೆನ್ನಲ್ಲೇ, ನಗರ ಪ್ರದೇಶಗಳಲ್ಲೂ ಅವರ ಆಡಳಿತ ವೈಖರಿ ಮತ್ತು ದುಡುಕಿನ ನಿರ್ಧಾರಗಳ ಬಗ್ಗೆ ಶೇ.47 ಮಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಕೆಲವು ಪ್ರಮುಖ ದಿನಪ್ರತಿಕೆಗಳು ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.

 

 


 

                                 

 ಐಎಸ್ ಉಗ್ರರ ವಿರುದ್ಧ ಗೆಲುವು: ಸಿರಿಯಾ ಘೋಷಣೆ

ನವೆಂಬರ್.10

ಬೈರೂತ್: ವಿಶ್ವದ ಯಾವುದೇ ಭಾಗದಲ್ಲಿ ನಡೆಯುವ ಭೀಕರ ಭಯೋತ್ಪಾದನೆ ಕೃತ್ಯಗಳಿಗೆ ಪ್ರಮುಖ ಕಾರಣವಾಗಿರುವ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿರುವುದಾಗಿ ಸಿರಿಯಾ ಘೋಷಿಸಿದೆ.
ಸಿರಿಯಾದಲ್ಲಿ ಐಎಸ್ ಉಗ್ರರು ನಿಯಂತ್ರಣ ಹೊಂದಿದ್ದ ಕಟ್ಟಕಡೆಯ ಪಟ್ಟಣವನ್ನು ಭಾರೀ ಹೋರಾಟದ ನಂತರ ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ವಿರುದ್ಧ ದೊಡ್ಡ ಮಟ್ಟದ ಗೆಲುವು ಸಾಧಿಸಲಾಗಿದೆ ಎಂದು ಸಿರಿಯಾ ಸೇನೆ ಇಂದು ಘೋಷಿಸಿದೆ.
ಅಲ್ಪು ಪಟ್ಟಣದಲ್ಲಿ ಉಗ್ರರ ಪ್ರಾಬಲ್ಯವನ್ನು ಹೊಸುಕಿ ಹಾಕಲಾಗಿದೆ. ಬಂಡುಕೋರರು ಪಲಾಯವಾಗಿದ್ದು, ಪಟ್ಟಣದ ಹೊರವಲಯದ ಮರುಭೂಮಿಯಲ್ಲಿ ಅವರ ದಮನ ಕಾರ್ಯಾಚರಣೆ ಮುಂದುವರಿದಿದೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 


 

                                                                      

ಲಂಕಾ ಸೈನಿಕರಿಂದ ತಮಿಳರಿಗೆ ಗ್ಯಾಂಗ್ ರೇಪ್

ನವೆಂಬರ್.10

 

ಕೊಲೊಂಬೊ/ಲಂಡನ್: ಸೈನಿಕರು ಮತ್ತು ಪೊಲೀಸರು ತಮ್ಮನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಲಂಕಾದ 60ಕ್ಕೂ ಹೆಚ್ಚು ತಮಿಳರು ಆರೋಪಿಸಿದ್ದಾರೆ.
ಶ್ರೀಲಂಕಾದಲ್ಲಿ ಮತ್ತೆ ಅಂತರ್ಯುದ್ಧ ಭುಗಿಲೇಳುವ ಲಕ್ಷಣಗಳು ಗೋಚರಿಸತೊಡಗಿವೆ. ಈ ಕುರಿತು ತನಿಖೆ ನಡೆಸುವುದಾಗಿ ಸರ್ಕಾರ ಹೇಳಿದೆ. ಶ್ರೀಲಂಕಾದಲ್ಲಿ ಅಂತರ್ಯದ್ಧ ಮುಕ್ತಾಯಗೊಂಡ ಹಲವು ವರ್ಷಗಳ ಬಳಿಕ ಭದ್ರತಾಪಡೆಯಿಂದ ತಮಿಳು ನಾಗರಿಕರ ಮೇಲೆ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಗ್ನ ದೇಹದ ಮೇಲೆ ಬರೆ ಹಾಕಿ ವಿವಿಧ ರೀತಿಯ ಚಿತ್ರಹಿಂಸೆಗಳನ್ನು ನೀಡಲಾಗಿದೆ ಎಂದು ತಮಿಳರು ನೀಡಿರುವ ಹೇಳಿಕೆಗಳನ್ನು ಚಿತ್ರ ಸಹಿತ ಲಂಡನ್ನ ಅಸೋಸಿಯೇಟೆಡ್ ಪ್ರೆಸ್ ನಿನ್ನೆ ಪ್ರಕಟಿಸಿದೆ. ಈ ಘಟನೆಯಿಂದ ಶ್ರೀಲಂಕಾದಲ್ಲಿರುವ ತಮಿಳು ಸಮುದಾಯದಲ್ಲಿ ವ್ಯಾಪಕ ಆಕ್ರೋಶ ಉಲ್ಬಣಗೊಂಡಿದೆ. ಯೋಧರು ಮತ್ತು ಪೊಲೀಸರ ವಿರುದ್ಧ ತಮಿಳು ಪ್ರತೀಕಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ದ್ವೀಪರಾಷ್ಟ್ರದಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದೆ. ತಮಿಳರ ಮೇಲೆ ನಡೆದಿದೆ ಎನ್ನಲಾದ ಹಿಂಸಾಕೃತ್ಯಗಳನ್ನು ಸರ್ಕಾರ ಖಂಡಿಸುವುದಾಗಿ ಹೇಳಿರುವ ಶ್ರೀಲಂಕಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಈ ಘಟನೆಗಳ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ.

 

                  

ರಾಜಕುಮಾರನ ವದಂತಿ ತಳ್ಳಿಹಾಕಿದ ಸರ್ಕಾರ!

ನವೆಂಬರ್-9

 

ರಿಯಾದ್: ಸೌದಿ ಅರೇಬಿಯಾದ ರಾಜಕುಮಾರ ಅಬ್ದುಲ್ಲಾ ಜೀಜ್ ಬಿನ್ ಫಾಹ್ದ್ ಸಾವನ್ನಪ್ಪಿದ್ದಾರೆ ಎಂದು ವದಂತಿ ಹಬ್ಬಿದ್ದು, ಇದನ್ನು ಸರ್ಕಾರ ತಳ್ಳಿಹಾಕಿದೆ.
ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಬ್ದುಲ್ಲಾ ಜೀಜ್ ಸೇರಿದಂತೆ 11 ರಾಜಕುಮಾರರನ್ನು ಬಂಧಿಸಿದ್ದರು. ಇದಾದ ನಂತರ ಭ್ರಷ್ಟಾಚಾರ ನಿಗ್ರಹ ದಳದ ಕಸ್ಟಡಿಯಲ್ಲಿದ್ದ ಅಬ್ದುಲ್ಲಾ ಜೀಜ್ ಮೃತಪಟ್ಟಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿತ್ತು. ಆದರೆ, ಇದೀಗ ರಾಜಕುಮಾರ ಅಬ್ದುಲ್ಲಾ ಜೀಜ್ ಜೀವಂತವಾಗಿದ್ದು, ಅವರು ಚೆನ್ನಾಗಿದ್ದಾರೆ ಎಂದು ಸೌದಿ ಅರೇಬಿಯಾದ ಮಾಹಿತಿ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿರುವ ಅಬ್ದುಲ್ಲಾ ಜೀಜ್ ಸಾವಿನ ಸುದ್ದಿ ಶುದ್ಧ ಸುಳ್ಳು. ಅಬ್ದುಲ್ಲಾ ಜೀಜ್ ಜೀವಂತವಾಗಿದ್ದಾರೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಭ್ರಷ್ಟಾಚಾರಿಗಳನ್ನು ಹಾಗೂ ತಮ್ಮ ಹಿತಾಸಕ್ತಿಗೆ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯುತ್ತಿರುವವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯಾಚರಣೆ ನಡೆಸಲಿದೆ ಎಂದು ಸೌದಿ ಸರ್ಕಾರ ತಿಳಿಸಿತ್ತು. ಇದರ ಬೆನ್ನಲ್ಲೇ ಮೂವರು ಸೌದಿ ಸಚಿವರು ಸೇರಿ 11 ರಾಜಕುಮಾರರ ಬಂಧನವಾಗಿತ್ತು. ಭ್ರಷ್ಟಾಚಾರ ನಿಗ್ರಹ ದಳದ ಆಪರೇಷನ್... ಸೌದಿಯ 11 ರಾಜಕುಮಾರರಿಗೆ ಶಾಕ್! ಇನ್ನು, ಇತ್ತೀಚೆಗಷ್ಟೇ ಆಸಿರ್ ಪ್ರಾಂತ್ಯದಲ್ಲಿ ಹೆಲಿಕಾಪ್ಟರ್ ಪತನಗೊಂಡು ಉಪ ಗವರ್ನರ್, ರಾಜಕುಮಾರ ಮನ್ಸೌರ್ ಬಿನ್ ಮುಕ್ರಿನ್ ಹೆಲಿಕಾಪ್ಟರ್ ಮೃತಪಟ್ಟಿದ್ದರು. ಇದಾದ ಎರಡೇ ದಿನದಲ್ಲಿ ರಾಜಕುಮಾರ ಅಬ್ದುಲ್ಲಾ ಜೀಜ್ ಸಾವನ್ನಪ್ಪಿರುವ ವದಂತಿ ಹಬ್ಬಿತ್ತು. ಹೆಲಿಕಾಪ್ಟರ್ ಪತನ: ಸೌದಿ ರಾಜಕುಮಾರ ಸೇರಿ 8 ಮಂದಿ ದಾರುಣ ಸಾವು

 

 

                                                                                  

ಭಾರತ ಮೂಲದ ಬ್ರಿಟನ್ ಸಚಿವೆ ಪ್ರೀತಿ ಪಟೇಲ್ ರಾಜೀನಾಮೆ

ನವೆಂಬರ್-9

 

ಲಂಡನ್: ಭಾರತ ಮೂಲದ ಹಿರಿಯ ರಾಜಕಾರಣಿ ಬ್ರಿಟನ್ನ ಸಚಿವೆ ಪ್ರೀತಿ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಇಸ್ರೇಲ್ನಲ್ಲಿ ರಜಾ ದಿನದ ಪ್ರವಾಸದ ವೇಳೆ ಅಲ್ಲಿನ ಅಧಿಕಾರಿಗಳ ಜತೆ ಗೌಪ್ಯ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ಇಂದು ಪ್ರಧಾನಿ ತೆರೇ ಸಾಮೆ ಅವರೊಂದಿಗೆ ಸಭೆ ನಡೆಸಿದ ನಂತರ ಪ್ರೀತಿ ಪಟೇಲ್ ತಮ್ಮ ರಾಜೀನಾಮೆ ಘೋಷಿಸಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ಸಭೆಗಳನ್ನು ನಡೆಸಿದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು.

 

 

                                                                                                         

ಹಿಮಾಚಲ ಪ್ರದೇಶ ಚುನಾವಣೆ:ಬಿರುಸಿನ ಮತದಾನ

ನವೆಂಬರ್-9

 

ಶಿಮ್ಲಾ: ಹಿಮಾಯಲ ತಪ್ಪಲಿನ ರಾಜ್ಯ ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳ ಚುನಾವಣೆಗಾಗಿ ಇಂದು ಬಿರುಸಿನ ಮತದಾನ ನಡೆದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಫರ್ಧಾ ಕಣವಾಗಿರುವ ದೇವಭೂಮಿ ರಾಜಕೀಯ ಸಂಗ್ರಾಮಕ್ಕೆ ಸಾಕ್ಷಿಯಾಗಿದೆ. 
ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು 61 ಶಾಸಕರೂ ಸೇರಿದಂತೆ 337 ಹುರಿಯಾಳುಗಳು ಕಣದಲ್ಲಿದ್ದಾರೆ. 50,25,941 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ.
ಬೆಳಗಿನ ಚುಮು ಚುಮು ಚಳಿಯನ್ನೂ ಲೆಕ್ಕಿಸದೆ ಮತದಾರರು ಮತಗಟ್ಟೆಗಳ ಬಳಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಬೆಳಗ್ಗೆ ಕಂಡುಬಂದಿತು. ಬಿಸಿಲೇರುತ್ತಿದ್ದಂತೆ ಮತದಾನ ಬಿರುಸುಗೊಂಡಿತು. ರಾಜ್ಯದಾದ್ಯಂತ 7,252 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 37,605 ಚುನಾವಣಾ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ 17,850 ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಗಳು ಹಾಗೂ ಕೇಂದ್ರೀಯ ಅರೆ ಸೇನಾ ಪಡೆಯ 65 ತುಕಡಿಗಳನ್ನು ನಿಯೋಜಿಸಲಾಗಿದೆ.

 

 

                                                    

ಹಿಮಾಚಲ ಪ್ರದೇಶ ಶಾಸಕರ ಆಸ್ತಿಯಲ್ಲಿ ಶೇ.80ರಷ್ಟು ಸಂಪತ್ತು?

 

ನವೆಂಬರ್-8

 

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ 60 ಶಾಸಕರ ಸಂಪತ್ತು ಕಳೆದ ಐದು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿರುವುದು ಅಧಿಕೃತ ಅಂಕಿ-ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. 60 ಶಾಸಕರ ಒಟ್ಟು ಸಂಪತ್ತು 314.3 ಕೋಟಿ ರೂ.ಗಳಿಂದ ಒಂದೇ ವರ್ಷದಲ್ಲಿ 566.9 ಕೋಟಿ ರೂ.ಗಳಿಗೆ ಏರಿದ್ದು, ಶೇ.80ರಷ್ಟು ಹೆಚ್ಚಾಗಿದೆ. ಅಭ್ಯರ್ಥಿಗಳು ನಾಮಪತ್ರಗಳ ಸಲ್ಲಿಕೆ ವೇಳೆ ಲಗತ್ತಿಸಿರುವ ಪ್ರಮಾಣಪತ್ರದಲ್ಲಿ ಈ ಅಂಕಿ ಅಂಶಗಳು ಅಡಕವಾಗಿವೆ.
ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾಮ್ರ್ಸ್(ಎಡಿಆರ್) ವಿಶ್ಲೇಷಿಸಿದೆ. ಹೊಸ ಆಸ್ತಿ ಖರೀದಿಸದಿದ್ದರೂ, ಸಂಪತ್ತಿನ ಮೌಲ್ಯ ಹೆಚ್ಚಬಹುದು. ನಮ್ಮ ಬಹುತೇಕ ಆಸ್ತಿಗಳು ಜಮೀನಿನ ರೂಪದಲ್ಲಿವೆ. ಭೂಮಿಯ ಮೌಲ್ಯ ಹೆಚ್ಚಾದಂತೆಲ್ಲಾ ಸಂಪತ್ತಿನ ಬೆಲೆಯೂ ಸಹಜವಾಗಿ ವೃದ್ಧಿಸುತ್ತದೆ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ.

 

                                                     

ಸರ್ವಾಧಿಕಾರಕ್ಕೆ ಅಮೆರಿಕ ಟ್ರಂಪ್ ಆಕ್ರೋಶ

ನವೆಂಬರ್-8

 

ಸಿಯೋಲ್: ಮಾರಕ ಅಣ್ವಸ್ತ್ರಗಳ ಮೂಲಕ ಜಗತ್ತಿಗೆ ಕಂಟಕ ಪ್ರಾಯವಾಗಿರುವ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಕ್ರೂರ ಸರ್ವಾಧಿಕಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಏಷ್ಯಾ ಪ್ರವಾಸದಲ್ಲಿರುವ ಟ್ರಂಪ್ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನ ಸಂಸತ್ತಿನಲ್ಲಿ ಮಾತನಾಡಿ ಉತ್ತರಕೊರಿಯಾದ ಸರ್ವಾಧಿಕಾರಿಯಿಂದಾಗಿ ಆ ದೇಶದ ಜನತೆ ತೀವ್ರ ಯಾತನೆ ಮತ್ತು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕಿಮ್ನ ಸರ್ವಾಧಿಕಾರದ ಆಡಳಿತವು ಪೌರರನ್ನು ಸಮನಾಗಿ ಕಾಣುತ್ತಿಲ್ಲ. ಅದು ಜನರ ಆಶೋತ್ತರಗಳನ್ನು ಧಿಕ್ಕರಿಸಿದೆ ಎಂದು ತೀವ್ರ ಅಸಮಾಧಾನ ಸೂಚಿಸಿದರು.


ಕಿಮ್ ಹೊಂದಿರುವ ಶಸ್ತ್ರಾಸ್ತ್ರಗಳು ನಿಮ್ಮನ್ನು ಎಂದಿಗೂ ಸುರಕ್ಷಿತವಾಗಿಡುವುದಿಲ್ಲ. ಅವುಗಳು ನಿಮ್ಮ ಆಡಳಿತಕ್ಕೆ ದೊಡ್ಡ ಅಪಾಯ ತಂದೊಡ್ಡುತ್ತವೆ. ಈ ಕರಾಳ ಮಾರ್ಗದಲ್ಲಿ ನೀನು ಇಡುವ ಪ್ರತಿಯೊಂದು ಹೆಜ್ಜೆಯೂ ನಿಮ್ಮ ಮುಖದಲ್ಲಿ ಗಂಡಾಂತರವನ್ನು ಹೆಚ್ಚಿಸುತ್ತದೆ ಎಂದು ಕಿಮ್ಗೆ ನೇರ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷರು, ದೇಶದ ಉತ್ತಮ ಭವಿಷ್ಯಕ್ಕಾಗಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಸಲಹೆ ಮಾಡಿದರು.

 

                                                                                                                                                                                                                        

ಬಾಕ್ಸಿಂಗ್ ಚಾಂಪಿಯನ್‍ಶಿಪ್:ಮೇರಿಗೆ ಚಿನ್ನ

ನವೆಂಬರ್-8


ವಿಯೆಟ್ನಾಂ: ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತದ ಹೆಮ್ಮೆಯ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ನಲ್ಲೂ ಐದನೆ ಪ್ರಶಸ್ತಿ ಗೆದ್ದು ದೇಶದ ಗೌರವ ಹೆಚ್ಚಿಸಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಒಲಂಪಿಕ್ ಕಂಚು ಪದಕ ವಿಜೇತ ಮೇರಿಕೋಂ ಉತ್ತರ ಕೊರಿಯಾದ ಚಿಮ್ ಹ್ಯಾಂಗ್ ಮಿ ಅವರನ್ನು ಮಣಿಸಿ ಚಿನ್ನದ ಪದಕ ಗೆದ್ದರು.

2014ರ ಏಷ್ಯನ್ ಗೇಮ್ ನಂತರ ಇದು ಮೇರಿಕೋಮ್ಗೆ ಮೊದಲ ಅಂತಾರಾಷ್ಟ್ರೀಯ ಬಂಗಾರದ ಪದಕವಾಗಿದೆ ಮತ್ತು ಈ ವರ್ಷದ ಚೊಚ್ಚಲ ಮೆಡಲ್ ಆಗಿದೆ. ಮಂಗಳವಾರ ನಡೆದ ಸೆಮಿಫೈನಲ್ನಲ್ಲಿ ಅವರು ಜಪಾನ್ ತ್ಸುಬಾಸ ಕೊಮುರ ಅವರನ್ನು 5-0ಯಿಂದ ಮಣಿಸಿ ಅಂತಿಮ ಹಣಾಹಣಿಗೆ ಪ್ರವೇಶಿಸಿದ್ದರು.

   
     

 

 

                                                                                                                                                                                             

ಭೀಕರ ಚಂಡಮಾರುತಕ್ಕೆ 70ಕ್ಕೂ ಹೆಚ್ಚು ಸಾವು

ನವೆಂಬರ್-8

ಡನಾಂಗ್: ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿಯಲ್ಲಿ ಭೀಕರ ಚಂಡಮಾರುತ ಮತ್ತು ಭಾರೀ ಮಳೆಯಿಂದಾಗಿ ಸತ್ತವರ ಸಂಖ್ಯೆ 70ಕ್ಕೇರಿದೆ. ನೈಸರ್ಗಿಕ ವಿಕೋಪದಲ್ಲಿ ಅನೇಕರು ನಾಪತ್ತೆಯಾಗಿದ್ದಾರೆ.

ವಿಯೆಟ್ನಾಂನ ಕೆಲವು ಪ್ರಾಂತ್ಯಗಳ ಮೇಲೆ ಇತ್ತೀಚೆಗೆ ಡ್ರಾಮೆ ಎಂಬ ವಿನಾಶಕಾರಿ ಚಂಡಮಾರುತ ಅಪ್ಪಳಿಸಿತ್ತು. ಇದರಿಂದಾಗಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆಯಿಂದಾಗಿ ಪ್ರವಾಹವುಂಟಾಗಿ ಸಾವು-ನೋವು ಸಂಭವಿಸಿತು. ಈವರೆಗೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ .


ವಿಪತ್ತು ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆನೆರೆ ಹಾವಳಿಯಿಂದ 100ಕ್ಕೂ ಅಧಿಕ ಮನೆಗಳು ಸಂಪೂರ್ಣ ನಾಶವಾಗಿದ್ದು, ನೂರಾರು ವಸತಿ ಗೃಹಗಳಿಗೆ ಹಾನಿಯಾಗಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

 

 

  

 ಪತ್ನಿಗೆ ಜೀವನಾಂಶ ನೀಡಲು ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ

.ನವೆಂಬರ್-7
ವಿದಿಶಾ: ಹೆಂಡತಿಯಿಂದ ವಿಚ್ಛೇದನ ಪಡೆದ ಗಂಡ ಆಕೆಗೆ ಜೀವನಾಂಶ ನೀಡಲು ತನ್ನ ಕಿಡ್ನಿಯನ್ನೇ ಮಾರಾಟ ಮಾಡಲು ಹೊರಟಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.
ವಿದಿಶಾ ಮೂಲದ ವ್ಯಕ್ತಿಯೊಬ್ಬರು ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಂಸಾರಿಕ ಗಲಾಟೆಗಳ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದಿದ್ದರು. ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಪತ್ನಿ ಜತೆ ಜಗಳ ಮಾಡಿಕೊಂಡು ಕೆಲ ದಿನಗಳ ಹಿಂದೆ ವಿಚ್ಛೇದನ ಪಡೆದಿದ್ದ. ಆದರೆ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಬೇಕೆಂದು ಸ್ಥಳೀಯ ನ್ಯಾಯಾಲಯ ಆದೇಶಿಸಿತ್ತು.
     

     

 

 

                                                                                                                                                                                                                                                                                                                                                                                        

ಟ್ರಂಪ್ ಗೆ ಮಧ್ಯದ ಬೆರಳು ತೋರಿಸಿ:ಉದ್ಯೋಗದಿಂದ ವಜಾ

ನವೆಂಬರ್-7

ವಾಷಿಂಗ್ಟನ್: ಸೈಕಲ್ ತುಳಿಯುತ್ತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮಧ್ಯದ ಬೆರಳು ತೋರಿಸಿದ ಮಹಿಳೆ ಉದ್ಯೋಗ ಕಳೆದುಕೊಂಡಿದ್ದಾರೆ. ಆಕೆ ಕೆಲಸ ಮಾಡುತ್ತಿರುವ ಕಂಪೆನಿ ಆಕೆಯನ್ನು ಉದ್ಯೋಗದಿಂದ ವಜಾ ಮಾಡಿದೆ.
ಜೂಲಿ ಬ್ರಿಸ್ಕ್ಮ್ಯಾನ್ ಎಂಬ 50 ವರ್ಷದ ಮಹಿಳೆ ಕಳೆದ ತಿಂಗಳು ಸ್ಟಿರ್ಲಿಂಗ್ಲ್ಲಿ ಸೈಕಲ್ ತುಳಿಯುತ್ತಾ ಹೋಗುತ್ತಿದ್ದರು. ಅದೇ ಸಮಯದಲ್ಲಿ ಟ್ರಂಪ್ ತನ್ನ ಬೆಂಗಾವಲು ಪಡೆಯ ಜತೆ ಗಾಲ್ಫ್ ಕೋರ್ಸ್‍ಗೆ ತೆರಳುತ್ತಿದ್ದರು. ವಾಹನಗಳು ತನ್ನನ್ನು ಹಾದುಹೋಗುತ್ತಿದ್ದ ಸಂದರ್ಭದಲ್ಲಿ ಆಕೆ ತನ್ನ ಕೈಯ ಮಧ್ಯ ಬೆರಳನ್ನು ಬೆಂಗಾವಲು ಪಡೆ ಕಡೆಗೆ ತೋರಿಸಿದ್ದಾರೆ. ಮುಂಬರುವ ಚುನಾವಣೆಗೆ ಆಕೆ ನಿಲ್ಲಬೇಕೆಂದು ಸೂಚಿಸಿದ್ದರು. ಅಮೆರಿಕದ ಕೆಲವು ಕಾಮಿಡಿ ಶೋಗಳಲ್ಲೂ ಈ ಘಟನೆಯನ್ನು ಪ್ರಸ್ತಾಪಿಸಿದ್ದರು. ಆದರೆ ಘಟನೆಯೇ ಆಕೆಯ ಉದ್ಯೋಗಕ್ಕೆ ಮುಳುವಾಗಿದೆ.

 

 

                                                                                                                                                                                                                                                                                                             

ಉತ್ತರ ಕೊರಿಯಾ ಆತಂಕ : 4 ಶತಕೋಟಿ ಡಾಲರ್ ಬೇಡಿಕೆ ಟ್ರಂಪ್

ನವೆಂಬರ್-7

ವಾಷಿಂಗ್ಟನ್: ದೇಶದ ಕ್ಷಿಪಣಿ ರಕ್ಷಣಾ ಸುಧಾರಣೆಗಳಿಗಾಗಿ 4 ಶತಕೋಟಿ ಡಾಲರ್ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಣಕಾಸು ಮಂಜೂರಾತಿ ಅಧಿಕಾರ ಹೊಂದಿರುವ ಕಾಂಗ್ರೆಸ್ಗೆ ಈ ಕುರಿತು ಮನವಿ ಸಲ್ಲಿಸಿರುವ ಟ್ರಂಪ್, ದಕ್ಷಿಣ ಏಷ್ಯಾ ರಕ್ಷಣೆಗಾಗಿ ತಾವು ರೂಪಿಸಿರುವ ಹೊಸ ಕಾರ್ಯತಂತ್ರಕ್ಕೂ ನೆರವು ನೀಡುವಂತೆ ಕೋರಿದ್ದಾರೆ. ಅಫ್ಘಾನಿಸ್ತಾನ ಹೆಚ್ಚುವರಿಯಾಗಿ 3,500 ಯೋಧರನ್ನು ರವಾನಿಸಲು 1.2 ಶತಕೋಟಿ ಡಾಲರ್ಗಳ ಹಣದ ಅಗತ್ಯವಿದೆ ಎಂದೂ ತಿಳಿಸಿದ್ದಾರೆ. ಇದಲ್ಲದೆ ಅಮೆರಿಕ ನೌಕಾ ಪಡೆಯ ಯುದ್ಧ ನೌಕೆಗಳ ದುರಸ್ತಿಗಾಗಿ 0.7 ಶತಕೋಟಿ ಡಾಲರ್ ಬಿಡುಗಡೆ ಮಾಡುವಂತೆಯೂ ಮನವಿ ಮಾಡಿದ್ದಾರೆ. ಪ್ರಸ್ತುತ ಏಷ್ಯಾ ಪ್ರವಾಸದಲ್ಲಿರುವ ಟ್ರಂಪ್ ಈ ಸಂಬಂಧ ಸಲ್ಲಿಸಿರುವ ಮನವಿಯಲ್ಲಿ ಈ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸುವಂತೆ ಕೋರಿದ್ದಾರೆ.

 

 

                                                                                                                                        

ವಿಯೆಟ್ನಾಂ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಸಾವು

 ನವೆಂಬರ್-6

ಹನೋಯಿ: ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿ ಪ್ರಾಂತ್ಯಕ್ಕೆ ಅಪ್ಪಳಿಸಿದ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿ, 22 ಜನ ನಾಪತ್ತೆಯಾಗಿದ್ದಾರೆ. ವಿಯೆಟ್ನಾಂನ ಬಿನ್ಡಿನ್ ಪ್ರಾಂತ್ಯದ ಕಡಲತೀರದ ಬಳಿ ಮುಳುಗಡೆಯಾಗಿರುವ ಸರಕು ನೌಕೆಯಲ್ಲಿದ್ದ 17 ಮಂದಿ ಸಿಬ್ಬಂದಿ ಕಣ್ಮರೆಯಾದವರಲ್ಲಿ ಸೇರಿದ್ದಾರೆ ಈ ನೌಕೆಯಲ್ಲಿದ್ದ 74 ಮಂದಿಯನ್ನು ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಚಂಡಮಾರುತ ಮತ್ತು ಧಾರಾಕಾರ ಮಳೆಯಿಂದ 600ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿವೆ. 40,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. 228 ದೋಣಿಗಳು ಮುಳುಗಡೆಯಾಗಿವೆ ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗಿವೆ. ವಾಹನಗಳು ಮತ್ತು ರೈಲು ಸಂಚಾರ ಸಂಪೂರ್ಣ ನಿಲುಗಡೆಯಾಗಿದೆ. ಮಂಗಳವಾರದವರೆಗೂ ಭಾರಿ
ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 

 

                                                                                                                                     

ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಶವಪತ್ತೆ

ನವೆಂಬರ್-6

ರಾಂಚಿ: ಇಲ್ಲಿನ ಯುವತಿಯರ ಹಾಸ್ಟೆಲ್ವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಶವಪತ್ತೆಯಾಗಿದೆ.
ಹಾಸ್ಟೆಲ್ನ ಹೊರಭಾಗದಛಾವಣಿಯ ಮೇಲಿದ್ದಕಂಬಿಗೆ ನೇಣುಬಿಗಿದಸ್ಥಿತಿಯಲ್ಲಿ ಶವಪತ್ತೆಯಾಗಿದೆ.
ಯುವತಿಯ ಶವಪತ್ತೆಯಾದ ವಿಷಯತಿಳಿದು ರಾಂಚಿಯ ಸಿಟಿಡಿಎಸ್ಪಿರಾಜ್ಕುಮಾರ್ಮೆಹ್ತಾ ಘಟನಾಸ್ಥಳಕ್ಕೆ ಭೇಟಿನೀಡಿದ್ದು, ಪರಿಶೀಲನೆನಡೆಸಿದ್ದಾರೆ. ಯುವತಿ ಇಲ್ಲಿನ ಮಾರ್ವಾಡಿ ಕಾಲೇಜಿನಲ್ಲಿ ಬಿಎ ವ್ಯಾಸಂಗಮಾಡುತ್ತಿದ್ದಳು. ಆರ್ಜಿಸ್ಟ್ರೀಟ್ನ ವಿನಾಯಕ ಗಲ್ಸ್ ಹಾಸ್ಟೆಲ್ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆ ಬುಂಡು ಮೂಲದವಳಾಗಿದ್ದು ವಿದ್ಯಾಭ್ಯಾಸಕ್ಕಾಗಿ ರಾಂಚಿಗೆ ಬಂದಿದ್ದಳು. ಮಗಳ ಸಾವಿನ ಸುದ್ದಿಕೇಳಿ ಪೋಷಕರು ರಾಂಚಿಗೆ ಆಗಮಿಸಿದ್ದಾರೆ 
ಘಟನಾಸ್ಥಳದಲ್ಲಿ ಪೊಲೀಸರು ಡೆತ್ನೋಟ್ವ ಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಯುವತಿ ಪರೀಕ್ಷೆಯ ಒತ್ತಡದಲ್ಲಿದ್ದಳು ಎಂದು ತಿಳಿದುಬಂದಿದೆ. ಮರಣೊತ್ತರ ಪರೀಕ್ಷೆಗಾಗಿ ಯುವತಿಯ ಶವವನ್ನು ಪೊಲೀಸರು ಇಲ್ಲಿನ ರಿಮ್ಸ್ ಆಸ್ಪತ್ರೆ ಗೆರವಾನಿಸಿದ್ದಾರೆ. ಘಟನಗೆ ಸಂಬಂಧಿಸಿದಂತೆ ಹಾಸ್ಟೆಲ್ವಾರ್ಡನ್, ಮಾಲೀಕ ಹಾಗೂ ಯುವತಿಯ ಸ್ನೇಹಿತೆಯರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಫೋರೆನ್ಸಿಕ್ತಂಡಕೂಡ ಘಟನಾಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಸಾವಿನ ಬಗ್ಗೆ ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. 
ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ?: ಯುವತಿಯು ನವೆಂಬರ್ 3ರಂದು ಬಿಎ ಪಾರ್ಟ್-2 ಪರೀಕ್ಷೆ ಬರೆದಿದ್ದಳು. ಅದರಲ್ಲಿ ಆಕೆಗೆ ಒಂದು ಪ್ರಶ್ನೆಗೆ ಮಾತ್ರ ಉತ್ತರಗೊತ್ತಿತ್ತು ಎಂದು ಡಿಎಸ್ಪಿ ಮೆಹ್ತಾ ಹೇಳಿದ್ದಾರೆ. ಯುವತಿ ಈ ಹಿಂದೆಯೂ ಒಂದು ಬಾರಿಪರೀಕ್ಷೆಯಲ್ಲಿ ಫೇಲ್ಆಗಿದ್ದಳು. ಈಬಗ್ಗೆ ತನ್ನ ಸಹೋದರಿಯ ಬಳಿ ಹೇಳಿಕೊಂಡಿದ್ದಳು. ಸಹೋದರಿಯೂಕೂಡ ಅದೇ ಹಾಸ್ಟೆಲ್ನಲ್ಲಿ ಇದ್ದಳು ಎಂದು ತಿಳಿದು ಬಂದಿದೆ. ಹಾಸ್ಟೆಲ್ನ ನಾಲ್ಕನೇ ಮಹಡಿಯ ರೂಮಿನಲ್ಲಿದ್ದ ಯುವತಿ ಜೊತೆ ಆಕೆಯ ಇತರೆ ಮೂವರು ಸ್ನೇಹಿತೆಯರು ಕೂಡ ನೆಲೆಸಿದ್ದರು. ಆದ್ದರಿಂದ ಆಕೆರೂಮಿನಲ್ಲಿ ಆತ್ಮಹತ್ಯೆಮಾಡಿಕೊಳ್ಳದೆ ಹಾಸ್ಟೆಲ್ಛಾವಣಿಯ ಮೇಲೆ ಆತ್ಮಹತ್ಯೆಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. 
ವಾಟ್ಸಪ್ಸ್ಟೇಟಸ್: ತನ್ನ ದಾವಣಿಯನ್ನ ಕುತ್ತಿಗೆಗೆಬಿಗಿದು ಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂಮುನ್ನ ವಾಟ್ಸಪ್ಸ್ಟೇಟಸ್ನಲ್ಲಿ ಅನ್ಲಕ್ಕಿಮೀ, ಅನ್ಲಕ್ಕಿಮಂತ್ (ನಾನುನತದೃಷ್ಟೆ, ನತದೃಷ್ಟ ತಿಂಗಳು) ಎಂದು ಬರೆದುಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಸೂಸೈಡ್ನೋಟ್ನಲ್ಲಿ ತಂದೆ ತಾಯಿ ಕ್ಷಮೆಕೋರಿದ್ದಾ ಳೆ.

 

 

                                                                                                                       

ಟೆಕ್ಸಾಸ್ ಚರ್ಚಿನಲ್ಲಿ ಗುಂಡೆಗೆ:27 ಸಾವು,20 ಮಂದಿಗೆ ಗಾಯ

ನವೆಂಬರ್-6

 ಟೆಕ್ಸಾಸ್: ಅಮೆರಿದ ಟೆಕ್ಸಾಸ್ನಲ್ಲಿ ನಿನ್ನೆ ಭಾನುವಾರ ಬ್ಯಾಪ್ಟಿಸ್ಟ್ ಚಚ್ನ ಒಳಗೆ ಹಂತಕನೋರ್ವ ಯದ್ದಾತದ್ವಾ ಗುಂಡು ಹಾರಿಸಿ 27 ಮಂದಿಯನ್ನು ಬಲಿತೆಗೆದುಕೊಂಡ ದಾರುಣ ಘಟನೆ ನಡೆದಿದೆ. ಮೃತದಲ್ಲಿ ಪ್ಯಾಸ್ಟರ್ ಓರ್ವರ 14ರ ಹರೆಯದ ಪುತ್ರಿ ಕೂಡ ಸೇರಿದ್ದಾಳೆ.
ಸುಮಾರು 20 ಮಂದಿ ಗಾಯಗೊಂಡ ಈ ಘಟನೆಯು ವಿಲ್ಸನ್ ಕೌಂಟಿಯ ಸುದರ್ಲ್ಯಾಂಡ್ ಸ್ಪ್ರಿಂಗ್ಸ್ ನ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್ನಲ್ಲಿ ನಡೆಯಿತು. ಶಸ್ತ್ರ ಸಜ್ಜಿತನಾಗಿ ಬಂದಿದ್ದ ವ್ಯಕ್ತಿಯೋರ್ವ ಫುಲ್ ಗೇರ್ನಲ್ಲಿ ಚರ್ಚ್ ಪ್ರವೇಶಿಸಿ ಅಲ್ಲಿದ್ದ ಪ್ಯಾರಿಶನರ್ ಗಳ ಮೇಲೆ ಗುಂಡಿನ ಮಳೆಗರೆದ.
ಹೀಗೆ ಗುಂಡಿನ ಸುರಿಮಳೆಗೈದು 27 ಜನರನ್ನು ಬಲಿಪಡೆದ ಹಂತಕರನನ್ನು ಅನಂತರ ಗುಂಡಿಕ್ಕಿ ಸಾಯಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ಪೊಲೀಸರ ಮಾಹಿತಿಯನ್ನು ಉಲ್ಲೇಖೀಸಿ ವರದಿ ಮಾಡಿವೆ. ಶೂಟರ್ ನನ್ನು ಪೊಲೀಸರೇ ಕೊಂದರೇ ಆಥವಾ ಆತನೇ ತನ್ನನ್ನು ತಾನು ಗುಂಡಿಕ್ಕಿ ಕೊಂಡನೇ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ.
27 ಅಮಯಾಕರು ಮೃತ ಪಟ್ಟಿರುವುದನ್ನು ವಿಲ್ಸನ್ ಕೌಂಟಿ ಕಮಿಷನರ್ ಆಲ್ಬರ್ಟ್ ಗಾಮೆಜ್ ಜೂನಿಯರ್ ದೃಢಪಡಿಸಿದ್ದಾರೆ. ಮೃತರಲ್ಲಿ ಒಬ್ಟಾಕೆ ಚರ್ಚಿನ ಪ್ಯಾಸ್ಟ