ದೂರವಾಣಿ : 080-69999676
ಇಮೇಲ್ : Info@Vijayataranga.com


 

88   ಬಿಎಸ್ ವೈ ಅಭ್ಯರ್ಥಿಗಳ ಘೋಷಣೆ. ಈಶ್ವರಪ್ಪ ಏನಂದ್ರು?
ಡಿಸೆಂಬರ್-26
ಶಿವಮೊಗ್ಗ : ಪರಿವರ್ತನಾ ಯಾತ್ರೆಯಲ್ಲಿ ಬಿ.ಎಸ್. ಯಡಿಯೂರಪ್ಪ ಟಿಕೆಟ್ ಘೋಷಣೆ ಮಾಡುತ್ತಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡದಿ ಅವರು, ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಬಿ.ಎಸ್. ಯಡಿಯೂರಪ್ಪನವರು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತಿದ್ದು, ಈ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಬಿಎಸ್ ವೈ ಜೊತೆ ಮಾತನಾಡುತ್ತೇನೆ ಎಂದರು.
ಪಕ್ಷದ ವತಿಯಿಂದ ಎರಡು ಬಾರಿ ಸರ್ವೆ ನಡೆಸಲಾಗುತ್ತಿದ್ದು, ಸರ್ವೆ ನಡೆಸಿದ ನಂತರ ಸಮರ್ಥ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಲಿದೆ ಎಂದು ಈಶ್ವರಪ್ಪ ಹೇಳಿದರು.

 

 

44   ಕಾಂಗ್ರೆಸ್ ಮಣ್ಣು ಮುಕ್ಕುಲಿದೆ : ಈಶ್ವರಪ್ಪ
 ಡಿಸೆಂಬರ್ -20
ಶಿವಮೊಗ್ಗ: 'ಗುಜರಾತ್, ಹಿಮಾಚಲ ಪ್ರದೇಶದಂತೆ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪಕ್ಷ ಮಣ್ಣುಮುಕ್ಕಲಿಗೆ. 2018ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ, 'ಗುಜರಾತ್, ಹಿಮಾಚಲ ಪ್ರದೇಶದ ಫಲಿತಾಂಶ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲ ಸಲ್ಲದ ಹೇಳಿಕೆ ನೀಡತೊಡಗಿದ್ದಾರೆ' ಎಂದು ಲೇವಡಿ ಮಾಡಿದರು.
'ಜಾತಿ ಹಾಗೂ ಧರ್ಮ ಒಡೆಯುವ ಪ್ರಯತ್ನವನ್ನು ಚುನಾವಣೆಯಲ್ಲಿ ನಡೆಸಲಾಗಿತ್ತು. ಆದರೆ, ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮಣ್ಣುಮುಕ್ಕಿದೆ. ಅದೇ ರೀತಿ ಕರ್ನಾಟಕದಲ್ಲೂ ಆಗುತ್ತದೆ' ಎಂದರು.
'ಧರ್ಮ ಹಾಗೂ ಜಾತಿ ಒಡೆದು ಆಳಿದರೆ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದರೆ. ಅದರಿಂದ ಹೊರಬರಬೇಕು. ಧರ್ಮ, ಜಾತಿ ನಡುವೆ ಬೆಂಕಿ ಹಚ್ಚುವುದನ್ನು ನಿಲ್ಲಿಸಬೇಕು. ಸರ್ಕಾರದ ಸಾಧನೆ ಹಾಗೂ ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು' ಎಂದು ಹೇಳಿದರು.
'ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಯಾವುದೇ ಕಾರಣಕ್ಕೂ ಹಿಂದು-ಮುಸ್ಲಿಂ, ವೀರಶೈವ-ಲಿಂಗಾಯತ ಎಂದು ಗಲಾಟೆ ಹೆಚ್ಚಬಾರದು. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿದರೆ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ' ಎಂದರು.
'ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳಬೇಕು. ಅದು ಬಿಟ್ಟು ವಿದ್ಯುನ್ಮಾನ ಮತಯಂತ್ರ ದೋಷಪೂರಿತವಾಗಿದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಸೋಲು ಒಪ್ಪಿಕೊಳ್ಳುವ ಪ್ರವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಬೇಕಿದೆ' ಎಂದು ಸಲಹೆ ನೀಡಿದರು.
'ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತದೆ. ಇನ್ನು ಬಿಜೆಪಿ ಸ್ಪಷ್ಟ ಬಹುಮತ ಗಳಿಸುವುದು ನಿಶ್ಚಿತ. ಬಿ.ಎಸ್.ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

 

       ಬಬಬ   ಪರೇಶ್ ಮೇಸ್ತ ಸಾವಿನ ಹಿನ್ನೆಲೆ ಪ್ರತಿಭಟನಾ ಮೆರವಣಿಗೆ
ಡಿಸೆಂಬರ್.15
ಸಾಗರ: ಪರೇಶ್ ಮೇಸ್ತ ಸಾವಿನ ಹಿನ್ನೆಲೆಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ಆಯೋಜನೆಗೊಂಡು ನಗರದಲ್ಲಿ ಅಹಿತಕರ ಘಟನೆ ನಡೆಯಬಾರದೆಂಬ ಮುನ್ನೆಚ್ಚರಿಕೆಯಿಂದ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ ಕಾರಣ ಯಾವುದೇ ಆಘಾತಕಾರಿ ಘಟನೆ ಸಂಭವಿಸಿಲ್ಲ. ಬುಧವಾರ ಸಂಜೆಯಿಂದಲೇ 144 ಸೆಕ್ಷ ನ್ ಜಾರಿಗೊಳಿಸಿದ ರಕ್ಷ ಣಾ ಇಲಾಖೆ ತೀವ್ರ ಗಸ್ತು ಕಾಪಾಡಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಸಂಜೆವರೆಗೆ ಯಾವುದೇ ಅಹಿತಕರ ಘಟನೆ ಆಗಿಲ್ಲ.
ಪೇಟೆಯೊಳಗಿನ ಬಹುತೇಕ ಅಂಗಡಿಗಳು ಗುರುವಾರ ಬೆಳಗಿನಿಂದಲೇ ಮುಚ್ಚಿದ್ದವು. ಬಸ್ ಹಾಗೂ ಆಟೋ ಸಂಚಾರ ಎಂದಿನಂತೆ ಇರಲಿಲ್ಲ. ಸರಕಾರಿ ಹಾಗೂ ಖಾಸಗಿ ಬಸ್ ಸಂಚಾರ ಎಂದಿನಂತಿತ್ತು. ಸರಕಾರಿ ಕಚೇರಿ, ಬ್ಯಾಂಕ್ಗಳು, ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸಿದರೂ ಸಾರ್ವಜನಿಕರ ಭೇಟಿ ಕಡಿಮೆ ಸಂಖ್ಯೆಯಲ್ಲಿತ್ತು. ಐದಾರು ಕಲ್ಯಾಣ ಮಂಟಪಗಳಲ್ಲಿ ವಿವಾಹ ಮಹೋತ್ಸವವಿದ್ದರೂ ಬಂದ್ ವದಂತಿ ಹಿನ್ನೆಲೆಯಲ್ಲಿ ಅತಿಥಿಗಳ ಸಂಖ್ಯೆಯಲ್ಲಿ ಕೊರತೆಯನ್ನು ವಿವಾಹ ಸಮಾರಂಭ ನಡೆಸಿದವರು ನಿರೀಕ್ಷಿಸಿ ಎಚ್ಚರ ವಹಿಸಿದ್ದರು.
ಈ ಮೊದಲೇ ಪ್ರಕಟಿಸಿದಂತೆ 144 ಸೆಕ್ಷ ನ್ ಜಾರಿಯಲ್ಲಿದ್ದ ಕಾರಣ ಗುರುವಾರದ ಸಂತೆ ರದ್ದಾಗಿತ್ತು. ಆದರೆ ವಿಷಯ ಗೊತ್ತಿಲ್ಲದೆ ತರಕಾರಿ ತಂದವರು ಅಲ್ಲಲ್ಲಿ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದರೆ ಪೊಲೀಸರು ಅವರ ಮನವೊಲಿಸಿ ಅಂಗಡಿ ಮುಚ್ಚಿಸುವುದು ಕಂಡುಬಂತು. ಸರಕಾರಿ ಪಿಯು ಕಾಲೇಜು ಸೇರಿದಂತೆ ವಿವಿಧ ಖಾಸಗಿ ಶಿಕ್ಷ ಣ ಸಂಸ್ಥೆಗಳು ರಜೆ ಘೋಷಿಸಿದ್ದವು
ನಗರದಲ್ಲಿ ಗುರುವಾರದ ಸಂತೆಯನ್ನು 144 ಸೆಕ್ಷ ನ್ ಜಾರಿ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದರೂ ಬೇರೆ ತಾಲೂಕುಗಳಿಂದ ಬಂದಿದ್ದ ತರಕಾರಿ ವ್ಯಾಪಾರಿಗಳು ಮತ್ತು ರೈತರು ಪರದಾಡುವಂತಾಗಿತ್ತು. ಶಿಕಾರಿಪುರ ತಾಲೂಕಿಂದ ವಿವಿಧ ಸೊಪ್ಪು ಮಾರಾಟ ಮಾಡಲು ಸಾಗರಕ್ಕೆ ಬಂದಿದ್ದ ಉಡುಗುಣಿಯ ರಮೇಶ್ ಮತ್ತು ಕುಮಾರ್ ಮಧ್ಯಾಹ್ನದ ನಂತರ ನಗರದ ವಿವಿಧ ರಸ್ತೆಗಳಲ್ಲಿ ತಮ್ಮ ವಾಹನದಲ್ಲಿ ತೆರಳಿ ವ್ಯಾಪಾರ ನಡೆಸಿದರು.

 

12  ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ಶಾಸಕ!
 ಡಿಸೆಂಬರ್-9
ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳಿದ್ದರೂ, ಉಳ್ಳವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಇನ್ನು ಕೆಲವೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಕಾರಣ, ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ.
ಶಿವಮೊಗ್ಗ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದು ಗಮನ ಸೆಳೆದಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕರು ಅಲ್ಲಿಂದ ಬಂದ ನಂತರ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಪ್ರಸನ್ನಕುಮಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದನ್ನು ಕಂಡ ಸಾರ್ವಜನಿಕರು ಅಚ್ಚರಿಯಾಗಿದ್ದಾರೆ. ಶಾಸಕರು ಚಿಕಿತ್ಸೆಗೆ ತೆರಳಲು ದಾರಿ ಮಾಡಿಕೊಟ್ಟಿದ್ದಾರೆ. ಆಸ್ಪತ್ರೆಯ ತಜ್ಞ ವೈದ್ಯರು ಶಾಸಕರನ್ನು ಪರೀಕ್ಷಿಸಿದ್ದು, ಆಹಾರ ವ್ಯತ್ಯಾಸದಿಂದ ಸಮಸ್ಯೆಯಾಗಿರುವ ಕಾರಣ ಚಿಕಿತ್ಸೆ, ಸಲಹೆ ನೀಡಲಾಗಿದೆ.
ವಾರದ ಹಿಂದೆಯೇ ಅವರು ಚಿಕಿತ್ಸೆ ಪಡೆದಿದ್ದು, ಸಂಪೂರ್ಣ ಸುಧಾರಿಸದ ಹಿನ್ನಲೆಯಲ್ಲಿ ಮತ್ತೆ ಆಸ್ಪತ್ರೆಗೆ ಆಗಮಿಸಿ ವೈದ್ಯರ ಸಲಹೆ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಎಲ್ಲಾ ಸೌಲಭ್ಯ ಒದಗಿಸಿದೆ. ಜನ ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕರು ಹೇಳಿದ್ದಾರೆ.

 

 

456  ಸ್ವಾಮೀಜಿ ಜೊತೆ ರಾಸಲೀಲೆ ಪ್ರಕರಣದ ನಟಿ ತಮ್ಮನ ಕೊಲೆ ಯತ್ನ
 ಡಿಸೆಂಬರ್-8
ಶಿವಮೊಗ್ಗ: ಸ್ವಾಮೀಜಿ ಜೊತೆ ರಾಸಲೀಲೆ ಪ್ರಕರಣದಿಂದ ಸುದ್ದಿಯಾಗಿದ್ದ ನಟಿಯ ಸಹೋದರನ ಮೇಲೆ ಕೊಲೆ ಯತ್ನ ಹಾಗೂ ಅವರ ತಾಯಿಯವರಿಗೆ ಅಪರಿಚಿತರು ಜೀವ ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಕಳೆದ ಗುರುವಾರ ರಾತ್ರಿ ಮಂಗಳೂರಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ತೀರ್ಥಹಳ್ಳಿ ಸಮೀಪ ಶಿವರಾಜಪುರದ ಬಳಿ ಓಮ್ನಿಯಲ್ಲಿ ಬಂದಿದ್ದ ಐದು ಜನ ಅಪರಿಚಿತ ವ್ಯಕ್ತಿಗಳು ಇವರ ಕಾರು ಅಡ್ಡ ಹಾಕಿ ಕಾವ್ಯಾ ಆಚಾರ್ಯ ಎಲ್ಲಿ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಅಪರಿಚಿತರು ನಡೆದ ಘಟೆ ಬಗ್ಗೆ ಕೇಸು, ಕಂಪ್ಲೇಂಟ್ ಎಂದು ಹೋದಲ್ಲಿ ಇಡೀ ಕುಟುಂಬದ ಎಲ್ಲರನ್ನೂ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ಕೃಷ್ಣ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಕೂಡ ಯತ್ನಿಸಿದ್ದಾರೆ. ಈ ವೇಳೆ ಕೃಷ್ಣ ಅವರ ತಾಯಿ ಕೂಗಿಕೊಂಡಿದ್ದರಿಂದ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಗಾಯಾಳು ಕೃಷ್ಣ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

 

33      ನಾಳೆ ಕುವೆಂಪು ವಿವಿಯ 28ನೇ ಘಟಿಕೋತ್ಸವ
 ಡಿಸೆಂಬರ್-1
 ಶಿವಮೊಗ್ಗ : ಕುವೆಂಪು ವಿವಿಯ 28ನೇ ಘಟಿಕೋತ್ಸವ ಕಾರ್ಯಕ್ರಮ, ನಾಳೆ ಜಿಲ್ಲೆಯ ಲಕ್ಕವಳ್ಳಿಯಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ  ಹೊಸ ಭವನದಲ್ಲಿ ನಾಳೆ ಬೆಳಿಗ್ಗೆ 11ಕ್ಕೆ ನಡೆಯಲಿದೆ. ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕೇಂದ್ರ ಮಾನವ ಸಂಪನ್ಮೂವ ಅಭಿವೃದ್ದಿ  ಖಾತೆಯ ಸಚಿವ ಪ್ರಕಾಶ್ ಜಾವ್ಡೇಕರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
 ನೂತನವಾಗಿ ನಿರ್ಮಿಸಿರುವ ಘಟಿಕೋತ್ಸವ ಭವನದಲ್ಲಿ, ಈ ಬಾರಿಯ ಘಟಿಕೋತ್ಸವ ನಡೆಯಲಿದೆ. ಈ ಬಾರಿ 11 ಸಾವಿರದ 775 ಪುರುಷರು ಹಾಗೂ  15 ಸಾವಿರದ 775 ಮಹಿಳೆಯರು ಸೇರಿ ಒಟ್ಟು 27 ಸಾವಿರದ 550 ವಿದ್ಯಾರ್ಥಿಗಳು ವಿವಿಧ ಪದವಿ ಪಡೆಯಲಿದ್ದಾರೆಂದು, ಕುವೆಂಪು ವಿವಿ ಕುಲಪತಿ  ಪ್ರೊ.ಜೋಗನ್ ಶಂಕರ್ ತಿಳಿಸಿದ್ದಾರೆ.
 ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್ ಶಂಕರ್, ಈ ಬಾರಿಯ ಘಟಿಕೋತ್ಸವದಲ್ಲಿ  77 ಪುರುಷರು, 37 ಮಹಿಳೆಯರು ಸೇರಿ ಒಟ್ಟು 114 ಅಭ್ಯರ್ಥಿಗಳು ಸಂಶೋಧನಾ ಪದವಿ(ಪಿ.ಎಚ್.ಡಿ) ಪಡೆಯಲಿದ್ದಾರೆ. 112 ವಿದ್ಯಾರ್ಥಿಗಳು,  ಚಿನ್ನದ ಪದಕ ಪಡೆಲಿದ್ದಾರೆ ಎಂದು ಹೇಳಿದರು.
 ಅಂದಹಾಗೇ ತೀವ್ರ ಕುತೂಹಲ ಮೂಡಿಸಿದ್ದ, ಗೌರವ ಡಾಕ್ಟರೇಟ್ ಈ ಬಾರಿಯ ಯಾರಿಗೆ ಕುವೆಂಪು ವಿವಿಯಿಂದ ನೀಡಬಹುದು ಎನ್ನುವ ಬಗ್ಗೆ, ಸದ್ಯಕ್ಕೆ  ರಾಜ್ಯಪಾಲರಿಗೆ ಕಳಿಸಿದ್ದ ಪಟ್ಟಿಗೆ ಇನ್ನೂ ಅಂಕಿತ ದೊರೆತಿಲ್ಲ. ರಾಜ್ಯಪಾಲರ ಅಂಗಳದಲ್ಲಿ ಗೌರವ ಡಾಕ್ಟರೇಟ್ ಪಟ್ಟಿ ಇದ್ದು, ಯಾರಿಗೆ ಈ ಬಾರಿ ಸಿಗಲಿದೆ  ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ ನಾಳೆಯ ಘಟಿಕೋತ್ಸವದ ವೇಳೆಗೆ ಪಟ್ಟಿಗೆ ರಾಜ್ಯಪಾಲರ ಅಂಕಿತ ದೊರೆತರೇ, ನಾಳೆ ನಡೆಯುವ  ಘಟಿಕೋತ್ಸವದಲ್ಲಿ, ಪ್ರಶಸ್ತಿ ಪುರಸ್ತೃತರಿಗೆ, ಗೌರವ ಡಾಕ್ಟರೇಟ್ ಪ್ರಧಾನ ಮಾಡುವ ನಿರೀಕ್ಷೆ ಕೂಡ ಇದೆ.
 ಈ ಸುದ್ದಿಗೋಷ್ಠಿಯಲ್ಲಿ ಪರೀಕ್ಷಾಂಗ ಕುಲಸಚಿವ ರಾಜಾ ನಾಯ್ಕ್ ಮಾತನಾಡಿ, ಈ ಬಾರಿಯ ಘಟಿಕೋತ್ಸವದಲ್ಲಿ ಜ್ಞಾನ ಸಹ್ಯಾದ್ರಿ ಕನ್ನಡ ಅಧ್ಯಯನ  ವಿಭಾಗದ ಕನ್ನಡ ಎಂ.ಎ ವಿದ್ಯಾರ್ಥಿನಿ ಎಸ್.ಶಿಲ್ಪ ಅತಿ ಹೆಚ್ಚು ಅಂದರೇ, 6 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆಯುತ್ತಿದ್ದಾರೆ ಎಂಬ  ಮಾಹಿತಿಯನ್ನು ತಿಳಿಸಿದರು.
 ಇದಲ್ಲದೇ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಎಸ್.ಅಶ್ವಿನಿ ಮತ್ತು ಶಿವಮೊಗ್ಗ ಎ.ಟಿ.ಎಸ್.ಪಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ಎಂ.ಹರ್ಷಿತ ತಲಾ  5 ಸ್ವರ್ಣ ಪದಕ ಪಡೆಯುತ್ತಿದ್ದು, ಉಳಿದಂತೆ, ಎಂ.ಎಸ್ಸಿ, ಪರಿಸರ ವಿಜ್ಞಾನದ ಸುಶ್ಮಿತಾ ಸಿ, ರಸಾಯನ ಶಾಸ್ತ್ರ ವಿಭಾಗದ ವಿ.ಎನ್.ಸ್ವಾತಿ, ಸಮಾಜ  ಶಾಸ್ತ್ರ ವಿಭಾಗದ ಎ.ಎಂ ಸಪ್ತಮಿ ಮತ್ತು ಎಂ.ಬಿಎ ವಿದ್ಯಾರ್ಥಿನಿ ಹೆಚ್.ಜೆ.ಮಾಧವಿ ತಲಾ 4 ಸ್ವರ್ಣ ಪದಕಗಳನ್ನು ಪೆಡಯಿಲಿದ್ದಾರೆ ಎಂದು ತಿಳಿಸಿದರು.
 ಅಂತೂ ಇಂತೂ ನಾಳೆ ಕುವೆಂಪು ವಿವಿ 28ನೇ ಘಟಿಕೋತ್ಸವ ವಿವಿಯ ಹೊಸ ಘಟಿಕೋತ್ಸವ ಭವನದವಲ್ಲಿ ನಡೆಯಲಿದೆ. ಈ ಘಟಿಕೋತ್ಸವದಲ್ಲಿ ವಿವಿಧ  ವಿಭಾಗದ ವಿದ್ಯಾರ್ಥಿಗಳು ಸ್ವರ್ಣ ಪದಕ ಪಡೆದರೇ, ಸಂಶೋಧನಾರ್ಥಿಗಳು ಸಂಶೋಧನಾ ಪದವಿ ಪಡೆದು ಹೊರಬಲಿದ್ದಾರೆ. ಆದರೇ, ಗೌರವ  ಡಾಕ್ಟರೇಟ್ ಯಾರಿಗೆ ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, ಯಾವ ಸಾಧಕರಿಗೆ ಸಲ್ಲಲಿದೆ ಎಂಬುದನ್ನು ನಾಳೆಯವರೆಗೆ ಕಾದು  ನೋಡಬೇಕಿದೆ.ಮುಜರಾಯಿ ಇಲಾಖೆಯಡಿ ಬರುವ ಸಣ್ಣಪುಟ್ಟ ದೇವಸ್ಥಾನಗಳಲ್ಲಿ ಅರ್ಚಕರಿಗೆ ವೇತನ ಎಂಬುದಿರುವುದಿಲ್ಲ. ಭಕ್ತರು ನೀಡಿದ ಹಣದಲ್ಲಿ ಸ್ವಲ್ಪ  ಭಾಗವನ್ನು ಅರ್ಚಕರಿಗೆ ನೀಡಲಾಗುತ್ತದೆ. ಕೊಲ್ಲೂರು ಮುಕಾಂಬಿಕೆ, ಕುಕ್ಕೆ ಸುಬ್ರಹ್ಮಣ್ಯದಂತಹ ದೇವಸ್ಥಾನಗಳಲ್ಲಿ ಭಕ್ತರು ಮಾಡಿಸುವ ಅರ್ಚನೆ,  ಸೇವೆಗಳಲ್ಲಿ ಒಂದು ಭಾಗವನ್ನು ಅರ್ಚಕರಿಗೆ ನೀಡಲಾಗುತ್ತದೆ.

 

 

555   ವೃದ್ಧನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
 ನವೆಂಬರ್-28
 ಭದ್ರಾವತಿ : ಅಪ್ರಾಪ್ತ ಬಾಲಕಿ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಭದ್ರಾವತಿ ತಾಲೂಕಿನ ಅರಬಿಳಚಿ  ಗ್ರಾಮದಲ್ಲಿ ನಡೆದಿದೆ.
 ಅಕ್ರಂಪಾಷ (55) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಈತ ಬಾಲಕಿಯನ್ನು ಮನೆ ಕೆಲಸಕ್ಕೆಂದು ಕರೆಸಿಕೊಂಡು ಅವಳ ಮೇಲೆ  ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೂಡಲೇ ಬಾಲಕಿ ಕಾಮುಕನಿಂದ ತಪ್ಪಿಸಿಕೊಂಡು ಪೋಷಕರಿಗೆ ನಡೆದ ವಿಷಯ ತಿಳಿಸಿದ್ದಾಳೆ.  ವಿಷಯ ತಿಳಿದ ಪೋಷಕರು ಹೊಳೆಹೊನ್ನೂರು ಠಾಣೆಗೆ ದೂರು ದಾಖಲಿಸಿದ್ದಾರೆ.
 ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಕ್ರಂಪಾಷನನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

 

 

   hh ವಾಲ್ಮೀಕಿ ನಾಯಕರ ಯುವ ಸಮಾವೇಶ
ನವೆಂಬರ್.25
ಶಿವಮೊಗ್ಗ: ರಾಜ್ಯ ವಾಲ್ಮೀಕಿ ಯುವ ಪಡೆ ವತಿಯಿಂದ ನ.26ರಂದು ನಗರದ ಎನ್ಡಿವಿ ಹಾಸ್ಟೆಲ್ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ರಾಜ್ಯ ವಾಲ್ಮೀಕಿ ನಾಯಕರ ಯುವ ಸಮಾವೇಶ ನಡೆಯಲಿದೆ.
ಯುವ ಪಡೆಯ ಜಿಲ್ಲಾಧ್ಯಕ್ಷ ಆರ್.ಹರೀಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಸಮಾಜದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಸಾನ್ನಿಧ್ಯ ವಹಿಸುವರು. ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಬಳ್ಳಾರಿ ಸಂಸದ ಬಿ.ಶ್ರೀರಾಮುಲು, ಹೊದಿಗೆರೆ ರಮೇಶ್, ದೇವದುರ್ಗ ಶಾಸಕ ಶಿವನಗೌಡ ನಾಯಕ, ವಿಧಾನ ಪರಿಷತ್ ಸದಸ್ಯ ಉಗ್ರಪ್ಪ, ಬಿಜೆಪಿ ಮುಖಂಡ ರಾಜುಗೌಡ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಪಾಲಯ್ಯ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಆರ್.ಲಕ್ಷ್ಮಣ್, ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಕೆ.ಬಿ.ಪ್ರಸನ್ನಕುಮಾರ್, ಗ್ರಾಮಾಂತರ ಶಾಸಕಿ ಶಾರದಾ ಪೂರಾರಯನಾಯ್ಕ, ಶಿಕಾರಿಪುರ ಶಾಸಕ ಬಿ.ವೈ.ರಾಘವೇಂದ್ರ ಹಾಜರಿರುವರು ಎಂದರು.
ವಾಲ್ಮೀಕಿ ಜನಾಂಗದ ಜನಸಂಖ್ಯೆಗನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮುದಾಯಕ್ಕೆ ಉದ್ಯೋಗ, ಶಿಕ್ಷಣ ಕ್ಷೇತ್ರಗಳಲ್ಲಿ ಈಗಿರುವ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಎಸ್ಟಿಗೆ ಸೇರದಿದ್ದರೂ ಅನೇಕ ಜಾತಿಗೆ ಜನರಿಗೆ ಕಾನೂನು ಬಾಹಿರವಾಗಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಯರಾಮ್, ಗುಡ್ಡಪ್ಪ, ಪುನೀತ್, ಮಂಜಪ್ಪ ಹಾಜರಿದ್ದರು.

 

    

 ಚಿತ್ರಮಂದಿರದಲ್ಲಿ ಯೋಧನಿಗೆ ಗೂಸಾ!

 ನವೆಂಬರ್-20
ಶಿವಮೊಗ್ಗ: ಚಿತ್ರಮಂದಿರಲ್ಲಿ ಚಿತ್ರಪ್ರದರ್ಶನದ ವೇಳೆ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಕಿರುಕುಳ ನೀಡಿದ ಸಿಆರ್ಪಿಎಫ್ ಯೋಧನೊಬ್ಬನಿಗೆ ಪ್ರೇಕ್ಷಕರು ಥಳಿಸಿದ ಘಟನೆ ನಡೆದಿದೆ.ಮಲ್ಲಿಕಾರ್ಜುನ ಥಿಯೇಟರ್ನಲ್ಲಿ ಭರ್ಜರಿ ಚಿತ್ರಪ್ರದರ್ಶನದ ವೇಳೆ ಘಟನೆ ನಡೆದಿದ್ದು, ರವಿ ಬಿ. ಎಂಬ ಯೋಧ ಯುವತಿಯ ಪಕ್ಕದ ಸೀಟಿ ನಲ್ಲಿ ಕುಳಿತು ಪದೇ ಪದೇ ತೊಂದರೆ ಕೊಡುತ್ತಿದ್ದ. ಈ ವೇಳೆ ರೊಚ್ಚಿ ಗೆದ್ದ ಯುವತಿ ಮತ್ತು ಇತರ ಪ್ರೇಕ್ಷಕರು ಚೆನ್ನಾಗಿ ಥಳಿಸಿದ್ದಾರೆ.ಥಳಿತಕ್ಕೊಳಗಾದ ಬಳಿಕ ಯೋಧ ಕಿರುಕುಳ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ.

 

33  ಮೆಗ್ಗಾನ್ ಆಸ್ಪತ್ರೆಗೆ ಶಾಸಕ ಪ್ರಸನ್ನ ಕುಮಾರ್ ಭೇಟಿ
 ನವೆಂಬರ್-16
 ಶಿವಮೊಗ್ಗ : ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ  ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ  ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ಅನಾನುಕೂಲ ಉಂಟಾಗಬಾರದು ಎಂಬ ಕಾರಣಕ್ಕೆ  ಹಾಗೂ  ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ದೊರಕುತ್ತಿರುವ ಚಿಕಿತ್ಸೆ ಮಾಹಿತಿ ಪಡೆಯಲು  ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
 ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಶಾಸಕರು ,  ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಯಾವುದೇ ಕಾರಣಕ್ಕೂ ಅನಾನುಕೂಲ ಉಂಟಾಗಬಾರದು.  ವೈದ್ಯರು ಹಾಗೂ ಸಿಬ್ಬಂದಿಗಳು, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.
 ಖಾಸಗಿ ವೈದ್ಯರುಗಳು ಮುಷ್ಕರದಿಂದಾಗಿ ಆರೋಗ್ಯ ಸೇವೆಯಲ್ಲಿ ಅನಾನುಕೂಲ ಉಂಟಾಗಿದೆ.  ಆದರೆ ರೋಗಿಗಳಿಗೆ ಇದರಿಂದ ಸಮಸ್ಯೆಯಾಗಬಾರದು. ಸರ್ಕಾರಿ ವೈದ್ಯರು ಹಾಗೂ ಸಿಬ್ಬಂದಿಗಳು  ಕಾರ್ಯೋನ್ಮುಖರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಚಿಕಿತ್ಸೆಯಲ್ಲಿ ಯಾವುದೇ  ವ್ಯತ್ಯಯ ಆಗಬಾರದು ಎಂದರು.
 ಆಸ್ಪತ್ರೆಯ ಕೆಲವು ವಾರ್ಡ್ ಗಳಿಗೆ ಭೇಟಿ ನೀಡಿದ ಶಾಸಕರು ರೋಗಿಗಳು ಹಾಗೂ ಅವರ  ಸಂಬಂಧಿಕರೊಂದಿಗೆ ಚರ್ಚೆ ನಡೆಸಿದರು. ಆಸ್ಪತ್ರೆಯಲ್ಲಿ ದೊರಕುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ  ಕಲೆಹಾಕಿದರು.

 

66  ಯಡಿಯೂರಪ್ಪ ಶಿಕಾರಿಪುರದಿಂದಲೇ ಸ್ಪರ್ಧೆ : ರಾಘವೇಂದ್ರ
 ನವೆಬರ್-13
ಶಿವಮೊಗ್ಗ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದ ಬಿಎಸ್ ಯಡಿಯೂರಪ್ಪ ಸರ್ಧಿಸುತ್ತಾರೆ ಎಂದು ಶಿಕಾರಿಪುರ ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಚುನಾವಣೆ ಎದುರಿಸಲಿದ್ದೇನೆ ಎಂದು ತಿಳಿಸಿದರು.
ಬಿಎಸ್ ಯಡಿಯೂರಪ್ಪನವರು ತಮಗೆ ರಾಜಕೀಯ ಮರುಜನ್ಮ ನೀಡಿದ ಶಿಕಾರಿಪುರದಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಹೀಗಾಗಿ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಯಡಿಯೂರಪ್ಪ ಪರವಾಗಿ ಚುನಾವಣಾ ಕಾರ್ಯದಲ್ಲಿ ಭಾಗಿಯಾಗಲಿದ್ದೇನೆ ಎಂದು ಹೇಳಿದರು.

 

 

11  ಹೋರಿ ತಿವಿದು ವ್ಯಕ್ತಿ ಸಾವು
 ನವೆಂಬರ್-13
ಶಿವಮೊಗ್ಗ: ಇಲ್ಲಿನ ಆಯನೂರಿನ ಕೋಟೆ ಗ್ರಾಮದಲ್ಲಿ ನಿಷೇಧದ ನಡುವೆಯೂ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗಿದ್ದು, ಹೋರಿಯೊಂದು ತಿವಿದು ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಅವಘಡ ಸೋಮವಾರ ನಡೆದಿದೆ.
ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಹೋರಿಯೊಂದು ಸಿಟ್ಟಿಗೆದ್ದು ಏಕಾಏಕಿ ವೀಕ್ಷಕರ ಸಾಲಿನಲ್ಲಿ ನಿಂತಿದ್ದ ಬಾಳೆಕೊಪ್ಪದ ಚಂದ್ರಶೇಖರ್ (40)ಅವರತ್ತ ನುಗ್ಗಿ ಬಲವಾಗಿ ತಿವಿದಿದೆ. ದಾಳಿಗೆ ಚಂದ್ರಶೇಖರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಅದಾಗಲೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಕುಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

 

     

 'ಚುನಾವಣೆಗೆ ಪ್ರಜ್ವಲ್ ರೇವಣ್ಣಗಿಲ್ಲ ಟಿಕೇಟ್'

 ನವೆಂಬರ್-3

ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಉತ್ಸುಕರಾಗಿದ್ದ ಹೆಚ್.ಡಿ. ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣನವರಿಗೆ ನಿರಾಸೆಯಾಗಿದೆ. ಪ್ರಜ್ವಲ್ ರೇವಣ್ಣ ಸ್ಪರ್ಧೆ ವದಂತಿಯನ್ನು ತಳ್ಳಿ ಹಾಕಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ತಾವು ಹಾಗೂ ಹೆಚ್.ಡಿ. ರೇವಣ್ಣ ಮಾತ್ರ ಸ್ಪರ್ಧೆಗಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಕುರಿತ ವರದಿಗಳು ಪ್ರಕಟವಾಗುತ್ತಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಹಲವಾರು ಆಕಾಂಕ್ಷಿಗಳಾಗಿರುತ್ತಾರೆ. ಹಾಗೆಯೇ ಪ್ರಜ್ವಲ್ ಕೂಡಾ ಆಕಾಂಕ್ಷಿಗಳಾಗಿದ್ದಾರೆ. ಆದರೆ ಅವರಿಗೆ ಗ್ರೀನ್ ಸಿಗ್ನಲ್ ನೀಡಿಲ್ಲವೆಂದಿದ್ದಾರೆ.ಟಿಕೇಟ್ ಹಂಚಿಕೆ ವೇಳೆ ಜೆಡಿಎಸ್ ವಿವಾದಕ್ಕೆ ಒಳಗಾಗಬಾರದೆಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ನಿರ್ಧಾರಕ್ಕೆ ತಮ್ಮ ಕುಟುಂಬದವರೆಲ್ಲರೂ ಬದ್ದರಾಗಿದ್ದು, ತಾವು ಹಾಗೂ ಹೆಚ್.ಡಿ. ರೇವಣ್ಣ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

 

99  ತಿಂಡಿ ತಿನಿಸುಗಳ ದರ ಕಡಿಮೆಯಾಗಲಿದೆ
 ನವೆಂಬರ್-3
ಶಿವಮೊಗ್ಗ: ಬೆಂಗಳೂರಿನ ಬಿಬಿಎಂಪಿ ವ್ಯಾಪಿಯಲ್ಲಿ ಮಾತ್ರ ನಿರ್ಮಾಣವಾಗಿದ್ದ ಇಂದಿರಾ ಕ್ಯಾಂಟೀನ್ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿಯೂ ಸರ್ಕಾರ ನಿರ್ಮಿಸಲು ಹೊರಟಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಅನೇಕ ಕಡೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಸರಿ ಸಮಾನವಾಗಿ ದರ ಸಮರದಲ್ಲಿ ಇಳಿಕೆ, ಏರಿಕೆ ನಡೆಸಲು ಪ್ರತಿಷ್ಠಿತ ಹೋಟೆಲ್ ಗಳು ಸಜ್ಜಾಗಿವೆ.
ಮಲೆನಾಡಿನ ಹೆಬ್ಬಾಗಿಲೆಂದೇ ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯ ನಗರ ಪಾಲಿಕೆ ವ್ಯಾಪ್ಯಿಯಲ್ಲಿ, ಮೊದಲ ಹಂತದಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್ ನಿರ್ಮಾಣವಾಗಲಿದೆ. ನಗರದ ಎಪಿಎಂಸಿ ಆವರಣ, ವಿನೋಬಾನಗರದ ಪೊಲೀಸ್ ಚೌಕಿ, ಮುಖ್ಯ ಬಸ್ ನಿಲ್ದಾಣ ಮತ್ತು ಹೊಸ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಈ ಸುದ್ದಿ ಜಿಲ್ಲೆಯಲ್ಲಿ ಹರಡುತ್ತಿದ್ದಂತೇ, ಜಿಲ್ಲೆಯ ಪ್ರತಿಷ್ಠಿತ ಹೋಟೆಲ್ ಗಳು, ಪುಡ್ ಕೋರ್ಟ್ ಗಳು ತಿಂಡಿ ತಿನಿಸಿನಲ್ಲಿ ದರ ಸಮರಕ್ಕೆ ಇಳಿದಿವೆ.
ಕೆಲವು ಹೋಟೆಲ್ ಗಳು ರೂ.10ಕ್ಕೆ ತಿಂಡಿ ನೀಡಲು ಪ್ರಕಟಣೆ ನೀಡಿದ್ದರೇ, ಊಟದ ದರದಲ್ಲಿ ರೂ.60 ಇದ್ದದ್ದು, ರೂ.40ಕ್ಕೆ ಇಳಿಸಿವೆ. ಅಲ್ಲದೇ ಕೆಲವು ಹೋಟೆಲ್ ಗಳು ಪ್ಯಾಕೇಜ್ ಮೂಲಕ ದರ ಇಳಿಕೆಗೆ ನಾಂದಿ ಹಾಡುವ ಮೂಲಕ, ಗ್ರಾಹಕರನ್ನು ಸೆಳೆಯಲು ಕಸರತ್ತು ನಡೆಸಿವೆ. ಇಂದಿರಾ ಕ್ಯಾಂಟೀನ್ ದರಕ್ಕೆ ಸಮಾನವಾಗಿ ತಮ್ಮಲ್ಲಿನ ತಿಂಡಿ ತಿನಿಸುಗಳನ್ನು ನೀಡದೇ ಹೋದರೂ, ಇದುವರೆಗೂ ಇದ್ದಕ್ಕಿಂದ ಕೊಂಚಮಟ್ಟಿನ ದರವನ್ನು ಇಳಿಕೆ ಮಾಡಿರುವುದು ಕಂಡುಬಂದಿದೆ.
ಶಿವಮೊಗ್ಗದ ಪುಡ್ ಕೋರ್ಟ್ ನಲ್ಲಿ ಹೊಟ್ಟೆ ತುಂಬಾ ತಿನ್ನಲು ಕನಿಷ್ಠ ರೂ.100 ಖರ್ಚು ಮಾಡಬೇಕು.
ಇಂದಿರಾ ಕ್ಯಾಂಟೀನ್ ಜಿಲ್ಲೆಯಲ್ಲಿ ಕಾಲಿಟ್ಟಿತೆಂದರೇ, ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆ ಆಗುವ ಭಯದಿಂದಾಗಿ, ಪುಟ್ ಕೋರ್ಟ್ ನಲ್ಲಿಯೂ, ದರ ಇಳಿಕೆಯ ಸಮರ ನಡೆಸುತ್ತಿವೆ.
ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಇಂದಿರಾ ಕ್ಯಾಂಟೀನ್ ದರದಂತೆಯೇ ಜಿಲ್ಲೆಯಲ್ಲೂ ರೂ.5ಕ್ಕೆ ಬೆಳಗಿನ ತಿಂಡಿ, ರೂ.10ಕ್ಕೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ಲಭ್ಯವಾಗಲಿದೆ. ಈ ದರ ನೀಡಿ ಗ್ರಾಹಕರು, ಇಂದಿರಾ ಕ್ಯಾಂಟೀನ್ ನತ್ತ ಮುಖ ಮಾಡಬಹುದು ಎಂಬ ಮುಂಜಾಗ್ರತಾ ಕ್ರಮದಂತೆ, ಜಿಲ್ಲೆಯ ಹೋಟೆಲ್ ಮಾಲೀಕರು, ದರ ಸಮರಕ್ಕೆ ಇಳಿದಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಡಿಮೆಯಾಗಲಿದೆ ಎಂದು ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣದ ನಂತ್ರ ನೋಡಬೇಕಿದೆ. ಅದೇನೇ ಆದರೂ, ಶಿವಮೊಗ್ಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡರೇ, ತಿಂಡಿ, ಊಟದಲ್ಲಿ ಕೊಂಚಮಚ್ಚಿಗಾದರೂ ದರ ಇಳಿಕೆಯಾಗುತ್ತದೆ ಎಂಬುದೇ ಸಂತಸದ ಸುದ್ದಿ.

 

 

 

                        

ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಿಗೆ ಬಿಜೆಪಿ ಅಡ್ಡಗಾಲು: ಆರೋಪ

 

ನವೆಂಬರ್.2

ಮಡಿಕೇರಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಮಾಧ್ಯಮದವರು ನನಗೆ ಹೇಳುತ್ತಿದ್ದಾರೆ. ಆದರೆ, ಅಮಿತ್ ಶಾರ ಬಗ್ಗೆ ನಮಗೆ ಯಾರಿಗೂ ಹೆದರಿಕೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಪ್ರತಿನಿಧಿಗಳ ಸಭೆಯಲ್ಲಿ ಬುಧವಾರ ಭಾಗವಹಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾವು ಭ್ರಷ್ಟರಲ್ಲ. ನಾವು ಯಾರಿಗೂ ಮೋಸ ಮಾಡಿಲ್ಲ. ನಾವು ಬಿಜೆಪಿಯವರಂತೆ ಚೆಕ್ ಮೂಲಕ ಲಂಚ ತೆಗೆದುಕೊಂಡಿಲ್ಲ. ಮತ್ತೇಕೆ ನಮಗೆ ಭಯ?. ಒಂದು ವೇಳೆ ನಮ್ಮ ಸರಕಾರ ಭ್ರಷ್ಟಾಚಾರ ನಡೆಸಿದಲ್ಲಿ ಅದಕ್ಕೆ ಪೂರಕವಾದ ದಾಖಲೆ ನೀಡಿ,'' ಎಂದು ಸವಾಲು ಹಾಕಿದರು.

''ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಈಗಿನ ಚರ್ಚಿತ ವಿಷಯವೇ ಅಲ್ಲ,'' ಎಂದ ಅವರು, ''ಮುಂದಿನ ಚುನಾವಣೆ ನಂತರ ಶಾಸಕಾಂಗ ಪಕ್ಷ ಸಭೆ ಸೇರಿ ತಮ್ಮ ನಾಯಕನನ್ನು ಆಯ್ಕೆ ಮಾಡಲಿದೆ. ಆಯ್ಕೆಯಾದವರು ಮುಖ್ಯಮಂತ್ರಿ ಆಗುತ್ತಾರೆ. ಶಾಸಕರು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದರೆ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದು ಈಗ ಅಪ್ರಸ್ತುತ,''ಎಂದು ಹೇಳಿದರು.

''ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಮೀಸಲು ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ, ಬಿಜೆಪಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಈಗ ಜಿಎಸ್ಟಿಯಿಂದಾಗಿ ಜನರ ನೆಮ್ಮದಿ ಹಾಳಾಗಿದೆ. ಮಜ್ಜಿಗೆಗೆ ಕೂಡ ಟ್ಯಾಕ್ಸ್ ಹಾಕುತ್ತಿದ್ದಾರೆ. ಸಾಮಾನ್ಯ ಜನರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಕರಿಗೆ 7 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ, ಕೇವಲ 3.5 ಲಕ್ಷ ಉದ್ಯೋಗ ಮಾತ್ರ ಸೃಷ್ಟಿಯಾಗಿದೆ'' ಎಂದು ಟೀಕಿಸಿದರು.

 

                                                                                                                                            

 

 

 

 

 

   gg  ರೈತರ ಸಾಲ ಮನ್ನ ಮಾಡಿ: ಬಸವರಾಜಪ್ಪ
ಅಕ್ಟೋಬರ್.31
ಶಿವಮೊಗ್ಗ: ಸಾಲ ಬಾದೆಯಿಂದ ದಿನೇ ದಿನೇ ರೈತರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ರೈತರ ಬಾದೆಯನ್ನು ಕಡಿಮೆ ಮಾಡಲು ಸಾಲ ಮನ್ನ ಮಾಡಿ, ಪ್ರತಿ ವರ್ಷ ಸರಕಾರವೇ ಬಂಡವಾಳ ನೀಡಬೇಕು ಎಂದು ರೈತ ಸಂಘದ ಮುಖಂಡ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಪಟ್ಟಣದಲ್ಲಿ ಹಸಿರು ಸೇನೆ, ರೈತ ಸಂಘ ಆಯೋಜಿಸಿದ್ದ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದಾಗಿಂದಲೂ ರೈತ ದೇಶದ ಜನರ ಆಹಾರ ಉತ್ಪಾದನೆ ಮಾಡುತ್ತಿದ್ದಾನೆ. ಆತನೊಂದಿಗೆ ಸಾಲದ ಶೂಲವೂ ಬೆಂಬಿಡದೆ ಕಾಡುತ್ತಿದೆ. ಇದನ್ನು ತಪ್ಪಿಸುವ ಕೆಲಸಕ್ಕೆ ಸರಕಾರಗಳು ಚಿಂತನೆ ನಡೆಸದೆ ಸದಾ ಉದ್ಯಮಿಗಳ ಪರ ಯೋಜನೆ ರೂಪಿಸುತ್ತಿರುವುದು ದುರದೃಷ್ಟಕರ ಎಂದರು.
ರೈತನ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಆಗುತ್ತಿಲ್ಲ, ಹವಾಮಾನ ವೈಪರೀತ್ಯ ಉತ್ತಮ ಫಸಲು ಕೈಸೇರಲು ಬಿಡುತ್ತಿಲ್ಲ. ಮಾರುಕಟ್ಟೆ ನಿಯಂತ್ರಣ ಮಾಡದ ಸರಕಾರದ ನೀತಿ ಪರಿಣಾಮ ದರ ಕುಸಿತವೂ ರೈತನಿಗೆ ಪೆಟ್ಟು ಕೊಡುತ್ತಿದೆ. ದೇಶದ ಜನರ ಆಹಾರ ಉತ್ಪಾದನೆ ಮಾಡುವ ರೈತನ ಕಷ್ಟಕ್ಕೆ ಯಾವ ಸರಕಾರವೂ ಸ್ಪಂದಿಸಿಲ್ಲ ಎಂದು ಹೇಳಿದರು.
ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಉದ್ಯಮಿಗಳ ಸಾಲ ಮನ್ನಾ ಮಾಡುವ ಬದಲು ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

 

 

hh 

       ವಿಷಪೂರಿತವಾದ ಸಿಹಿ ಬೆಲ್ಲ

ಅಕ್ಟೋಬರ್-21
ಶಿವಮೊಗ್ಗ: ರಾಜ್ಯದಲ್ಲಿ ಗುಣಮಟ್ಟದ ಬೆಲ್ಲ ತಯಾರಿಕೆಯಲ್ಲಿ ಭದ್ರಾವತಿ ನಂಬರ್ 1 ಸ್ಥಾನ ಪಡೆದಿತ್ತು, ಆದರೆ ದಿನ ಕಳೆದಂತೆಲ್ಲಾ ವಿಷಪೂರಿತ ನಕಲಿ ಬೆಲ್ಲ ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾವತಿ ಬೆಲ್ಲಕ್ಕೆ ಕೆಟ್ಟ ಹೆಸರು ಬರುತ್ತಿದೆ. ವಿಷಪೂರಿತ ಬೆಲ್ಲ ತಯಾರಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಡಳಿತ ಆಲೆಮನೆಗಳ ಮೇಲೆ ದಾಳಿ ನಡೆಸಿದಾಗ ಬೆಲ್ಲ ತಯಾರಿಕೆಗೆ ಪ್ರಮುಖವಾದ ಅಂಶವಾದ ಕಬ್ಬನ್ನು ಬಳಸದೇ ಕೇವಲ ರಸಾಯನಿಕಗಳನ್ನು ಉಪಯೋಗಿಸಿ ಬೆಲ್ಲ ತಯಾರಾಗುತ್ತಿರುವುದನ್ನು ಕಂಡು ಅಧಿಕಾರಿಗಳು ಹೌಹಾರಿದ್ದಾರೆ. ಬಾಗಲಕೊಟೆಯ ಮಹಾಲಿಂಗಪುರ, ಮಂಡ್ಯದ ಪಾಂಡವಪುರದ ಬಳಿಕ ಭದ್ರಾವತಿಯಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಬೆಲ್ಲ ಉತ್ಪಾದನೆಯಾಗುತ್ತದೆ. ದಶಕಗಳ ಹಿಂದೆ 150ಕ್ಕೂ ಹೆಚ್ಚು ಸಾಂಪ್ರದಾಯಿಕ ಆಲೆಮನೆಗಳಿದ್ದವು. ಈಗ ಅವುಗಳ ಸಂಖ್ಯೆ 92 ಕ್ಕೆ ಇಳಿದಿದೆ. ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದ್ದರೂ ಗುಣಮಟ್ಟದಲ್ಲಿ ಮಾತ್ರ ಭದ್ರಾವತಿ ಬೆಲ್ಲ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದೆ. ಬೇಡಿಕೆಯನ್ನು ಲಾಭವಾಗಿ ಮಾಡಿಕೊಳ್ಳಲು ಅಡ್ಡದಾರಿ ಹಿಡಿದ ಕೆಲವರು ನಕಲಿ ಬೆಲ್ಲ ತಯಾರಿಕೆಗೆ ಕೈ ಹಾಕಿದ್ದಾರೆ. ಖಚಿತ ಮಾಹಿತಿ ಮೇರೆಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಈ ಸಂಗತಿ ಬಯಲಿಗೆ ಬಂದಿದೆ. ಪಾಂಡವಪುರ ಮತ್ತು ಮಹಾಲಿಂಗಪುರದಲ್ಲಿ ಬೆಲ್ಲ ತಯಾರಿಯ ಕೊನೆಯಲ್ಲಿ ಉಳಿಯುವ ಬಿಸಾಡುವಂತಹ ಅಂಟು ಬೆಲ್ಲ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿನ ಕಳಪೆ ದರ್ಜೆ ಸಕ್ಕರೆಯನ್ನು ತಂದು ಅದಕ್ಕೆ ನೀರು, ರಸಗೊಬ್ಬರ ಮತ್ತು ಇತರೆ ರಾಸಾಯನಿಕವನ್ನು ಬೆರೆಸಿ, ಬೇಯಿಸಿ ಹದ ತೆಗೆದು ಬೆಲ್ಲ ಮಾಡಲಾಗುತ್ತದೆ. ಇಂತಹ ಬೆಲ್ಲ ಅಸಲಿಯಂತೆ ಕಾಣುತ್ತದೆ. ಕಡಿಮೆ ದರಕ್ಕೆ ಲಭ್ಯವಾಗುವುದರಿಂದ ಡೀಲರ್ಗಳು ವ್ಯಾಪಾರಿಗಳಿಗೆ ಸಾಮಾನ್ಯ ಬೆಲ್ಲದಷ್ಟೇ ದರ ವಿಧಿಸಿ ಮಾರಾಟ ಮಾಡುತ್ತಾರೆ. ನಕಲಿ ಬೆಲ್ಲ ತಯಾರಿಸುವವರು ಬೆಲ್ಲ ಕಾಯಿಸಲು ಉರುವಲಾಗಿ ದ್ವಿಚಕ್ರವಾಹನಗಳ ಹಳೇ ಟೈರ್ಯಗಳು ಮತ್ತು ಪ್ಲಾಸ್ಟಿಕ್ಗಳನ್ನು ಬಳಸುತ್ತಿದ್ದಾರೆ. ಅವುಗಳನ್ನು ಬೆಂಗಳೂರಿಂದ ಲಾರಿಗಳಲ್ಲಿ ಲೋಡ್ಗಟ್ಟಲೆ ತರಿಸಿ ಆಲೆಮನೆಗಳ ಆವರಣದಲ್ಲಿ ತುಂಬಿಕೊಂಡಿರುವುದು ಪತ್ತೆಯಾಗಿದೆ. ಆಲೆಮನೆ ಮಾಲೀಕರು ನಕಲಿ ಬೆಲ್ಲ ತಯಾರಿಸಿ ಜನರಿಗೆ ವಿಷ ತಿನ್ನಿಸುವುದರ ಜತೆಗೆ ಟೈರ್ ಮತ್ತು ಪ್ಲಾಸ್ಟಿಕ್ಕನ್ನು ಭಾರಿ ಪ್ರಮಾಣದಲ್ಲಿ ಸುಟ್ಟು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ಆಲೆಮನೆಗಳಲ್ಲಿ ದಟ್ಟ ಹೊಗೆ ಎದ್ದು ಸುತ್ತಮುತ್ತಲ ಪ್ರದೇಶದಲ್ಲಿ ಟೈರ್ ಸುಟ್ಟ ವಾಸನೆ ಬೀರಿ ನಿವಾಸಿಗಳಿಗೆ ಮೂಗು ಮತ್ತು ಎದೆಯುರಿ ಕಾಣಿಸಿಕೊಳ್ಳುತ್ತಿದ್ದು. ಈ ಬಗ್ಗೆ ನಿವಾಸಿಗಳು ಪೊಲೀಸ್ ಠಾಣೆಗೆ ದೂರು ನೀಡಿದಾಗ ಅಸಲಿ ಸಂಗತಿ ಬಯಲಿಗೆ ಬಂದಿದೆ. ನಕಲಿ ಬೆಲ್ಲ ತಯಾರಿಕೆ ಭದ್ರಾವತಿಯ ಗುಣಮಟ್ಟದ ಬೆಲ್ಲದ ಗೌರವಕ್ಕೆ ಧಕ್ಕೆ ತಂದಿದೆ. ನಿನ್ನೆ ಬೆಳಗ್ಗೆ ಆಲೆಮನೆ ಮಾಲೀಕರ ಸಭೆ ಕರೆದು ನಕಲಿ ಬೆಲ್ಲ ತಯಾರಿಸುವವರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಆಲೆಮನೆಗಳ ಮಾಲೀಕರ ಸಂಘದ ಅಧ್ಯಕ್ಷರು ಮಣಿಶೇಖರ್ ತಿಳಿಸಿದ್ದಾರೆ . ಈ ಸಂಬಂಧ ಹಲವು ಗ್ರಾಮಸ್ಥರು ದೂರು ನೀಡಿದ ಮೇಲೆ ಅಂಥ ಆಲೆಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ, ಈ ವೇಳೆ ಈ ನಕಲಿ ಬೆಲ್ಲ ಮತ್ತು ಹೆಚ್ಚಿನ ಪ್ರಮಾಣದ ಟೈರ್ ಮತ್ತು ಕೆಮಿಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

 

 

qq ಮುಸ್ಲಿಂ ಗೂಂಡಾಗಳಿಗೆ ಸಿಎಂ ಬೆದರುತ್ತಿದ್ದಾರೆ: ಕೆ.ಎಸ್. ಈಶ್ವರಪ್ಪ.
 ಅಕ್ಟೋಬರ್-18
ಶಿವಮೊಗ್ಗ: ಪಾಕಿಸ್ತಾನ ಪರ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರ ಬೆದರಿದೆ ಎಂಬ ಅಭಿಪ್ರಾಯ ಜನರಲ್ಲಿ ಮೂಡಿದ್ದು ಕೆಲವು ಗೂಂಡಾಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ರಾಮಲಿಂಗಾರೆಡ್ಡಿ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ ಅಂತಾ ವಿಧಾನಸಭಾ ಪರಿಷತ್ ಸದ್ಯಸ ಮಾಜಿ ಸಿಎಂ ಈಶ್ವರಪ್ಪ ಆರೋಪಿಸಿದ್ದಾರೆ.
ಅವರು ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ವೇಳೆ ಅವರು ನಿನ್ನೆ ಬೆಂಗಳೂರಿನ ಯಲಹಂಕದ ಬೆಟ್ಟಳ್ಳಿಯಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಗೆ ನೋಟಿಸ್ ಕೊಡಲು ಹೋದ ಅಧಿಕಾರಿಗಳ ಮೇಲೆ ಮುಸ್ಲಿಂ ಗೂಂಡಾಗಳು ಮುಗಿಬಿದ್ದಿದ್ದಾರೆ ಅಂತಾ ಕಿಡಿಕಾರಿದ್ದಾರೆ.
ಇದೇ ವೇಳೆ ಅವರು ಪ್ರಾಣಿ ದಯಾಸಂಘದ ಸದಸ್ಯೆ ಟೆಕ್ಕಿ ನಂದಿನಿ ಗೋಹತ್ಯೆ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆ ವಿರುದ್ಧ ದೂರು ನೀಡಿದ್ದಕ್ಕೆ ಆಕೆಯ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಎರಡು ಘಟನೆಗಳೂ ಆತಂಕಕ್ಕೀಡು ಮಾಡಿದ್ದು ಮಾತನಾಡದ ವಿಚಾರವಾದಿಗಳು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಅವರು ಗೌರಿ ಲಂಕೇಶ್ ಹಂತಕರ ಬಂಧನ ಮರೀಚಿಕೆಯಾಗಿದೆ. ಸುಳಿವೇ ಸಿಗದಂತಾಗಿರುವ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಅವರು ಇದೇ ವೇಳೆ ಆಗ್ರಹಿಸಿದರು. ಇನ್ನು ನಮ್ಮ ಸಂಸ್ಕೃತಿ, ಆಚರಣೆಗಳನ್ನ ಗಮನದಲ್ಲಿಟ್ಟುಕೊಂಡು ಮೌಢ್ಯ ನಿಷೇಧ ಕಾನೂನು ಜಾರಿಗೆ ತರಲಿ, ಈ ಕಾನೂನಿನಲ್ಲೇನಾದರೂ ಎಡವಟ್ಟು ಮಾಡಿಕೊಂಡರೆ ಇಡೀ ಸರ್ಕಾರ ಪತನವಾಗುವುದು ನಿಶ್ಚಯ ಎಂದು ಭವಿಷ್ಯ ನುಡಿದರು.

 

Ads
;