ದೂರವಾಣಿ : 080-69999676
ಇಮೇಲ್ : Info@Vijayataranga.com


    12

 ಮಹದಾಯಿ ಸಮಸ್ಯೆ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಲಿ

 ಡಿಸೆಂಬರ್ 25

 ಹಾವೇರಿ : ರಾಹುಲ್ ಗಾಂಧಿ ಅವರಿಂದ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಮಹದಾಯಿ ನೀರು ಬಿಡಿಸಲು ಮುಂದಾಗುವೆ ಎಂದು ಹೇಳಿಕೆ ಕೊಡಿಸಲಿ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ನಾಲಾ ವಿಚಾರದಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿ ಅಮಿತ್ ಷಾ ಸಮ್ಮುಖದಲ್ಲಿ ಮನೋಹರ್ ಪರಿಕ್ಕರ್ ಜೊತೆ ಚರ್ಚೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಕಳಸಾ ಬಂಡೂರಿ ಸಮಸ್ಯೆಗೆ ಪರಿಹಾರದ ಪ್ರಯತ್ವನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡೆಸಿಲ್ಲ. ಪರಿಕ್ಕರ್ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ನಾಟಕ ಮಾಡುತ್ತಿದ್ದಾರೆ ಎನ್ನುತ್ತೀರಿ, ಪರಿಕ್ಕರ್ ಪತ್ರ ಬರೆದಿದ್ದು ಸುಳ್ಳೇ ಎಂದು ಬಿಎಸ್ ವೈ ಪ್ರಶ್ನಿಸಿದರು.

 

 

 

 45

ಹೋರಿಯಿಂದ ರೈತನಿಗೆ ಬಂತಾ ಕಂಠಕ!

ಡಿಸೆಂಬರ್-5

ಹಾವೇರಿ : ಹೋರಿ ಹಾಯ್ದು ರೈತನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ನದಿನೀರಲಗಿ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಮಾದಪ್ಪ ದೊಡ್ಡಮನಿ (55) ಎಂದು ಗುರುತಿಸಲಾಗಿದೆ. ನಿನ್ನೆ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಹೋರಿ ಮೈ ತೊಳೆಯಲು ಹೋಗಿದ್ದಾಗ ಹೋರಿ ಹಾಯ್ದು ರೈತ ಗಂಭೀರವಾಗಿ ಗಾಯಗೊಂಡಿದ್ದನು. ನಂತರ ತಾಲೂಕು ಸರ್ಕಾರಿ ಆಸ್ಪತ್ರೆಗೆ ರೈತನನ್ನು ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೈತ ಮೃತಪಟ್ಟಿದ್ದಾನೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

       45 

ರೈಲಿಗೆ ಸಿಲುಕಿ ಇಬ್ಬರು ಕಾರ್ಮಿಕರ ಸಾವು, ಒರ್ವ ಗಂಭಿರ ಗಾಯ

ಡಿಸೆಂಬರ್-5

ಹಾವೇರಿ : ರೈಲ್ವೆ ಕಾಮಗಾರಿ ವೇಳೆ ಇಬ್ಬರು ಕಾರ್ಮಿಕರ ಸಾವು, ಒರ್ವ ಗಂಭಿರ ಗಾಯಗೊಂಡ ಘಟನೆ ತಾಲ್ಲೂಕಿನ ಕೋಳೂರು ಗ್ರಾಮದ ಬಳಿ ನಡೆದಿದೆ. ಪಶ್ಚಿಮ ಬಂಗಾಳದ ಶಂಭುದಾಸ (40), ಸುಖೇಶ್ ಮಲ್ಲಿಕ (28) ಮೃತ ವ್ಯಕ್ತಿಗಳು. ಬಿರ್ಸೋಜಿತ್ ಸರದಾರ (35) ಗಾಯಗೊಂಡಿದ್ದ ಇವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಳೂರು-ಕಳಸೂರು ಗ್ರಾಮದ ಬಳಿ ರೈಲ್ವೆ ಡಬಲ್ ಲೈನ್ ಕಾಮಗಾರಿಯ ಕೆಸಲಕ್ಕೆ ಬಂದಿದ್ದ ಇವರು ವರದಾ ನದಿಯ ಮೇಲಿನ ರೈಲು ಹಳಿ ಮೇಲೆ ಹೋಗುತ್ತಿದ್ದರು. ಇದೇ ಸಮಯಕ್ಕೆ ಹುಬ್ಬಳ್ಳಿ-ಮೈಸೂರು ರೈಲು ಬರುವುದನ್ನು ಗಮನಿಸಿದ ಇಬ್ಬರು ನದಿಗೆ ಹಾರಿದ್ದಾರೆ. ಓರ್ವ ಹಳಿಯ ನಡುವೆ ಮಲಗಿಕೊಂಡು ಪಾರಾಗಲು ಯತ್ನಿಸಿ ಸಾವೀಗಿಡಾಗಿದ್ದಾನೆ. ಮತ್ತೋರ್ವ ನದಿಗೆ ಹಾರಿ ಸಾವನ್ನಪ್ಪಿದ್ದಾನೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

333   ಶವಸಂಸ್ಕಾರದ ವೇಳೆ ಕಣ್ಣುಬಿಟ್ಟ ಮಹಿಳೆ
 ನವೆಂಬರ್-29
 ಹಾವೇರಿ: ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಿಂದ ಕಳುಹಿಸಲ್ಪಿಟ್ಟಿದ್ದ ಬಾಣಂತಿ ಅಂತ್ಯಸಂಸ್ಕಾರದ ಸಿದ್ಧತೆ ವೇಳೆ ಕಣ್ಣು ಬಿಟ್ಟಿದ್ದು,  ತಕ್ಷಣವೇ ಮರಳಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ    ನಡೆದಿದೆ.
 ದೇವರಗುಡ್ಡ ಗ್ರಾಮ ನಾಗಮ್ಮ ಯಮನಪ್ಪ ಕೋಡೇರ (25) ಮೃತ ಬಾಣಂತಿ. ನಿನ್ನೆ ತಡರಾತ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ    ಕೇಂದ್ರದಲ್ಲಿ ಗಂಡು ಮಗುವಿಗೆ ನಾಗಮ್ಮ ಜನ್ಮ ನೀಡಿದ್ದರು. ಹೆರಿಗೆ ನಂತರ ನಾಗಮ್ಮಗೆ ಬಿಪಿ ಕಡಿಮೆಯಾಗಿದ್ದರಿಂದ ಅವರನ್ನ    ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗೆ ರಾಣೇಬೆನ್ನೂರು ಹೆರಿಗೆ ಆಸ್ಪತ್ರೆಗೆ ರವಾನಿಸಿದ್ದರು.
 ಆದರೆ ಹೆರಿಗೆ ಆಸ್ಪತ್ರೆಯಲ್ಲಿ ಸರಿಯಾಗಿ ಪರೀಕ್ಷಿಸದೇ ನಾಗಮ್ಮ ಸಾವನ್ನಪ್ಪಿದ್ದಾಳೆ ಎಂದು ಬಾಣಂತಿಯನ್ನು ಕಳುಹಿಸಿದ್ದರು ಎನ್ನಲಾಗಿದೆ.   ಇತ್ತ ಕುಟುಂಬಸ್ಥರು ನಾಗಮ್ಮ ಸಾವನ್ನಪ್ಪಿರಬಹುದೆಂದು ಗ್ರಾಮಕ್ಕೆ ಕರೆತಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆಗ ನಾಗಮ್ಮ   ಕಣ್ಣು ತೆರೆದಿದ್ದನ್ನು ನೋಡಿ ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಮಾರ್ಗಮಧ್ಯೆಯೇ ನಾಗಮ್ಮ    ಮೃತಪಟ್ಟಿದ್ದಾರೆ.
 ಹೆರಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ತಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ನಾಗಮ್ಮ ಪೋಷಕರು ಆರೋಪಿಸಿದ್ದಾರೆ.
 ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

 

  

ಫೇಸ್ ಬುಕ್ ಕಂಕಣ ಭಾಗ್ಯ

ನವೆಂಬರ್.1

ಹಾವೇರಿ: ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ್ಳನ್ನು ಫೇಸ್ಬುಕ್ನಲ್ಲಿ ಪರಿಚಯಿಸಿಕೊಂಡು, ನಂತರ ಪ್ರೀತಿಸಿ ಮದುವೆಯಾಗಲು ಮುಂದಾದ ಘಟನೆಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಸೋಮವಾರ ತಡರಾತ್ರಿಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಪ್ರೇಮ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಮಂಗಳವಾರ ಸಿದ್ಧೇಶ್ವರ ದೇವಸ್ಥಾನದಿಂದ ನೋಂದಣಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿದವು. ಹಿರೇಕೆರೂರ ತಾಲೂಕು ಹಂಸಭಾವಿಯ ಮಧು (ಹೆಸರು ಬದಲಾಯಿಸಲಾಗಿದೆ) ಹಾಗೂ ಬ್ಯಾಡಗಿಯ ಇಮ್ರಾನ್ ಬಳ್ಳಾರಿ ಎಂಬುವವರೇ ಪ್ರೇಮ ಪ್ರಕರಣದ ರೂವಾರಿಗಳು. ಮೂಲತಃ ಹಂಸಬಾವಿಯ ಮಧುಳ ಕುಟುಂಬ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿತ್ತು. 2 ತಿಂಗಳ ಹಿಂದೆಯಷ್ಟೆ ಇಮ್ರಾನ್ ಹಾಗೂ ಮಧು ಫೇಸ್ಬುಕ್ನಲ್ಲಿ ಪರಿಚಿತರಾಗಿ ನಂತರ ಸಂಬಂಧ ಪ್ರೀತಿಗೆ ತಿರುಗಿತು ಎನ್ನಲಾಗಿದೆ.
ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಮಧು ಪಾಲಕರಿಗೆ ಸುಳ್ಳು ಹೇಳಿ ಅ. 5ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಪಾಲಕರು ಆಕೆಯನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಮಧು ತಾನು ಇಮ್ರಾನ್ನೊಂದಿಗೆ ಮದುವೆಯಾದ ಬಗ್ಗೆ ಮೊಬೈಲ್ ಫೋನ್ ಮೆಸೇಜ್ ಮೂಲಕ ಪಾಲಕರಿಗೆ ತಿಳಿಸಿದ್ದಳು. ನಂತರ ಮಧುಳ ಪಾಲಕರು ಮಗಳು ಕಾಣೆಯಾದ ಬಗ್ಗೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
                                                                                                                                          

 

22         ಕೋಳಿವಾಡ ಪುತ್ರ ಬಿಜೆಪಿಗೆ?
 ಅಕ್ಟೋಬರ್- 19
ಹಾವೇರಿ : ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ಪುತ್ರ ಪ್ರಕಾಶ್ ಕೋಳಿವಾಡ ಬಿಜೆಪಿ ಸೇರಲಿದ್ದಾರೆ?. ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಕಾಶ್ ಕೋಳಿವಾಡ ಅವರು ರಾಣೆಬೆನ್ನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಪ್ರಕಾಶ್ ಕೋಳಿವಾಡ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಾವೇರಿಯಲ್ಲಿ ಹಬ್ಬಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವ ಹಾವೇರಿ ಜಿಲ್ಲೆಯಲ್ಲಿ ಕೆಲಸ ಮಾಡಲಿದ್ದು, ಬಿಜೆಪಿ ಅಭ್ಯರ್ಥಿಗಳು ಸುಲಭವಾಗಿ ಜಯಗಳಿಸಲಿದ್ದಾರೆ ಎಂಬುದು ಲೆಕ್ಕಾಚಾರವಾಗಿದೆ.
ಕೆ.ಬಿ.ಕೋಳಿವಾಡ ಅವರು ರಾಣೆಬೆನ್ನೂರು ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್ ವಿರುದ್ಧ ಗೆಲುವು ಸಾಧಿಸಿದ್ದರು. 2018ರ ಚುನಾವಣೆಗೆ ಅವರು ಸ್ಪರ್ಧಿಸುವುದಿಲ್ಲ. ಅದೇ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸಲಿದ್ದಾರೆ. ಪ್ರಕಾಶ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಪ್ರಕಾಶ್ ಕೋಳಿವಾಡ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿಸಲು ಪಕ್ಷದ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿ.ಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ರಾಣೆಬೆನ್ನೂರು ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹಬ್ಬಿತ್ತು. ಸದ್ಯ, ಕೆ.ಬಿ.ಕೋಳಿವಾಡ ಅವರ ಪುತ್ರ ಬಿಜೆಪಿ ಸೇರುವ ಕುರಿತು ಚರ್ಚೆಗಳ ಆರಂಭವಾಗಿವೆ.
2013ರ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ 9,476 ಮತಗಳನ್ನು ಪಡೆದು 5ನೇ ಸ್ಥಾನಕ್ಕೆ ಕುಸಿದಿದ್ದರು. ಕೆಜೆಪಿ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಿಂದಾಗಿ ಮತಗಳು ಹಂಚಿ ಹೋಗಿದ್ದವು. ಈ ಬಾರಿ ಪ್ರಕಾಶ್ ಕೋಳಿವಾಡ ಅವರು ಪಕ್ಷಕ್ಕೆ ಬಂದರೆ ಜಯಗಳಿಸಲು ಬಿಜೆಪಿಯೂ ತಂತ್ರ ರೂಪಿಸುತ್ತಿದೆ.

Ads
;