ದೂರವಾಣಿ : 080-69999676
ಇಮೇಲ್ : Info@Vijayataranga.com


 

                    17 ತಿಂಗಳಿಂದ ಸಂಬಳವಿಲ್ಲದೆ ವಾಟರ್ ಮ್ಯಾನ್ ಆತ್ಮಹತ್ಯೆ
ಡಿಸೆಂಬರ್.15
ಹಾಸನ: ಕಳೆದ 17 ತಿಂಗಳಿಂದ ವೇತನ ನೀಡದೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮಂಡ್ಯದ ಕಿಕ್ಕೇರಿ ಮಾದಾಪುರ ಗ್ರಾಮಪಂಚಾಯತ್ನ ವಾಟರ್ ಮ್ಯಾನ್ ಗೋವಿಂದ ವಿಷ ಸೇವಿಸಿದ್ದಾರೆ.
ವಿಷ ಸೇವಿಸಿದ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವೇತನವಿಲ್ಲದ ಕಾರಣ ಜೀವನ ನಡೆಸುವುದು ಕಷ್ಟವಾಗಿದ್ದರಿಂದ ಮನನೊಂದು ಅವರು ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ.

 

        ಗಗಗ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖ: ವಿಜಯಕುಮಾರ್
ಡಿಸೆಂಬರ್.12
ಬೇಲೂರು: ಸಮಾಜದಲ್ಲಿ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ನಿಸ್ವಾರ್ಥ ಸೇವೆಯೊಂದಿಗೆ ನ್ಯಾಯದ ಪಾಲುಗಾರಿಕೆಯನ್ನು ಪಡೆಯಬೇಕಾಗುತ್ತದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಡಿಫೆಂಡರ್ ಸಂಸ್ಥೆಯ ಸದಸ್ಯ, ಉಪನ್ಯಾಸಕ ವಿಜಯಕುಮಾರ್ ತಿಳಿಸಿದರು.
ಸರಕಾರ ಅಸ್ಪತ್ರೆಯ ಆವರಣದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ನಿಸ್ವಾರ್ಥ ಸೇವಾ ಮನೋಭಾವ ರೂಢಿಸಿಕೊಳ್ಳುವ ಅಗತ್ಯ ಇದೆ. ನಿಸ್ವಾರ್ಥತೆಯೊಂದಿಗೆ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕಾದ ಅಗತ್ಯತೆ ಇದೆ ಎಂದು ಹೇಳಿದರು. ಉಪನ್ಯಾಸಕ ಚಿದಾನಂದ್ ಮಾತನಾಡಿ, ದೇಶದ ಪ್ರತಿಯೊಬ್ಬರು ಹಕ್ಕು ಬಾಧ್ಯತೆಗಳ ಬಗ್ಗೆ ಅರಿವು ಹೊಂದಬೇಕಾಗಿದೆ. ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಪ್ರಾಣಿ, ಪಕ್ಷಿಗಳಿಗೂ ತಮ್ಮದೇ ಆದಂತಹ ಹಕ್ಕುಗಳಿವೆ ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಪ್ರಸ್ತುತ ಉತ್ತಮ ಕೆಲಸ ಕಾರ್ಯಗಳಿಗೆ ಮೌಲ್ಯಗಳು ಸಮಾಜದಲ್ಲಿ ದೊರಕುತ್ತಿಲ್ಲ. ಜನರಲ್ಲಿ ಮಾನವೀಯತೆ ಮನೋಭಾವವನ್ನು ಬೆಳೆಸಲು ಮುಂದಾಗಬೇಕು ಎಂದರು.
ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಡಾ.ನರಸೇಗೌಡ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ಆರೋಗ್ಯಾಧಿಕಾರಿ ಡಾ.ನರಸೇಗೌಡ ಮಾತನಾಡಿ, ಸಮಾಜದ ಪ್ರತಿಯೊಬ್ಬರಿಗೂ ಸಮಾನವಾಗಿ ಸಹಾಯ ಸವಲತ್ತು ಹಾಗೂ ಸೌಲಭ್ಯಗಳು ದೊರಕಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದು ಸ್ವಾಗತಾರ್ಹ.
ಅದೇ ಸಮಯದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸರಕಾರಿ ನೌಕರರಾಗಲೀ, ಅಧಿಕಾರಿಗಳಾಗಲೀ ದೌರ್ಜನ್ಯಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಸುಧಾ, ತಾಲೂಕು ಮಾನವ ಹಕ್ಕುಗಳ ಸಂಸ್ಥೆಯ ಅಧ್ಯಕ್ಷ ಎಮ್.ಜಿ.ನಿಂಗರಾಜು, ಮಹಿಳಾ ಘಟಕದ ಅಧ್ಯಕ್ಷೆ ಲತಾ ಸುರೇಶ್, ಸದಸ್ಯರಾದ ಸ್ವಾಮಿ, ದಾಕ್ಷಾಯಣಿ, ಸುದಾ, ವೀನಾ, ಸುಜಾತಾ ಇನ್ನಿತರರಿದ್ದರು.

 

44  ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಬಲಿ
 ಡಿಸೆಂಬರ್-7
ಹಾಸನ : ಹಾಸನ ತಾಲ್ಲೂಕಿನ ಹಳೆಹೊಂಕರವಳ್ಳಿ ಗ್ರಾಮದ ಕಾಫಿ ತೋಟದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿದೆ. ಹಳೆ ಹೊಂಕರವಳ್ಳಿ ಗ್ರಾಮದ ಯೋಗೇಶ್ (44) ಮೃತಪಟ್ಟಿರುವ ಮೇಸ್ತ್ರಿ, ತೋಟದ ದಾರಿಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಒಂಟಿ ಸಲಗ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಸಿಎಫ್ ಲಿಂಗರಾಜು, ಆರ್ ಎಫ್ ಒ ಮೋಹನ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

23  ಮಹಿಳಾ ಹಾಸ್ಟೆಲ್ ಗೆ ನುಗ್ಗಿದ ಮುಸುಕುಧಾರಿ
 ಡಿಸೆಂಬರ್-7
 ಹಾಸನ : ಹಾಸನದ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ   ಮುಸುಕುದಾರಿಯೊಬ್ಬ ರಾತ್ರಿ ಪೈಪ್ ನೆರವಿನಿಂದ ಅಕ್ರಮವಾಗಿ ಮಹಿಳಾ ಹಾಸ್ಟೆಲ್ ಪ್ರವೇಶಿಸಿ   ಓಡಾಟ ನಡೆಸಿರುವ ಘಟನೆ ನಡೆದಿದೆ.
 ಮಸುಕುದಾರಿಯು ರಾತ್ರಿ ವೇಳೆ ವಿದ್ಯಾರ್ಥಿನಿಲಯದ ಒಳಗೆಲ್ಲಾ ಓಡಾಟ ನಡೆಸಿರುವ ದೃಶ್ಯ   ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೈಪ್ ನೆರವಿನಿಂದ ಹಾಸ್ಟೆಲ್ ಏರಿ ಮೊದಲ ಮಹಡಿಯಲ್ಲಿ   ಓಡಾಟ ನಡೆಸುತ್ತಿದ್ದ ಎನ್ನಲಾಗ್ಗಿದೆ. ಮಾರ್ಚ್ ನಲ್ಲೂ ಇದೇ ರೀತಿ ನಡೆದಿತ್ತು. ಇದೀಗ ಘಟನೆ   ಎರಡನೇ ಬಾರಿ ಮರುಕಳಿಸಿರುವುದು ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿದೆ.
 ಇನ್ನು ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿ ಬಡಾವಣೆ ಪೊಲೀಸ್ ಠಾಣೆಗೆ  ದೂರು ನೀಡಲಾಗಿದೆ.

 

 

   45

ಬಸ್ ಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

ಡಿಸೆಂಬರ್-5

ಹಾಸನ: ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಬಸ್ ಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಿನ್ನೆ ನಗರದ ರೈಲ್ವೆ ಗೇಟ್ ಬಳಿ ನಡೆದಿದೆ. ರಸ್ತೆ ಬದಿಯಲ್ಲಿ ನಿಂತಿದ್ದ 40 ವಯಸ್ಸಿನ ವ್ಯಕ್ತಿಯೊಬ್ಬ ಬಸ್ ಕೆಳಗೆ ನುಗ್ಗಲು ಕಾಯ್ದಿದ್ದಾರೆ. ಮೊದಲ ಎರಡು ಬಸ್ ಕೆಳಗೆ ನುಗ್ಗದ ವ್ಯಕ್ತಿ ಕೊನೆಗೆ ಮೂರನೇ ಬಸ್ ನ ಕೆಳಗೆ ನುಗ್ಗಿ ಆತ್ಮಹತ್ಯಗೆ ಶರಣಾಗಿದ್ದರೆ. ಮೃತ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

23    ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ
 ಡಿಸೆಂಬರ್-1
 ಹಾಸನ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ  ಘಟನೆ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಬಳ್ಳಿಯಲ್ಲಿ ನಡೆದಿದೆ.
 55 ವರ್ಷದ ಅನಂತೇಗೌಡ ಮೃತಪಟ್ಟವರೆಂದು ಗುರುತಿಸಲಾಗಿದೆ. ಅನಂತೇಗೌಡರ  ಮನೆಯಲ್ಲಿ ರಾತ್ರಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಾಸನಕ್ಕೆ  ರವಾನಿಸಲಾಗಿದೆ.
 ಶ್ರವಣಬೆಳಗೊಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ  ಕ್ರಮ ಕೈಗೊಂಡಿದ್ದಾರೆ.

 

33  ಚಪಲ ಚೆನ್ನಿಗರಾಯನಿಗೆ ಬಿತ್ತು ಗೂಸಾ
 ನವೆಂಬರ್-18
 ಹಾಸನ: ಇಬ್ಬರು ಪತ್ನಿಯರು ಮಕ್ಕಳಿದ್ದರೂ, 3 ನೇ ಮದುವೆಯಾಗಿದ್ದ ಭೂಪನನ್ನು ಮೊದಲ ಪತ್ನಿಯ ಸಂಬಂಧಿಕರು ಹಿಗ್ಗಾಮುಗ್ಗಾ  ಥಳಿಸಿದ ಘಟನೆ ಹಾಸನ ಜಿಲ್ಲೆಯ ಗೋರೂರಿನಲ್ಲಿ ನಡೆದಿದೆ.
 ಕೇಂದ್ರ ಸರ್ಕಾರಿ ನೌಕರನಾಗಿರುವ ವ್ಯಕ್ತಿ 3 ಮದುವೆಯಾದ ಭೂಪ. ಗೋರೂರಿನ ಯುವತಿಯನ್ನು ಮದುವೆಯಾಗಿ ಬೀಗರೂಟ  ನಡೆಯುವ ಸಂದರ್ಭದಲ್ಲಿ ಮೊದಲ ಪತ್ನಿ ಹಾಗೂ ಆಕೆಯ ಸಂಬಂಧಿಕರು ಬಂದು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
 ಚನ್ನಪಟ್ಟಣದಲ್ಲಿ ಮೊದಲ ಮದುವೆಯಾಗಿದ್ದ ರಾಜೇಶನಿಗೆ ಇಬ್ಬರು ಮಕ್ಕಳಿದ್ದು, ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಕೋರ್ಟ್  ಮೆಟ್ಟಿಲೇರಿದ್ದಾರೆ. ಮೊದಲ ಪತ್ನಿಯಿಂದ ದೂರವಾದ ರಾಜೇಶ್ ನಂತರದಲ್ಲಿ ಅರಕಲಗೂಡು ತಾಲ್ಲೂಕಿನ ಯುವತಿಯನ್ನು  ಮದುವೆಯಾಗಿದ್ದಾನೆ.
 2 ನೇ ಪತ್ನಿಗೂ ದೈಹಿಕ, ಮಾನಸಿಕ ಹಿಂಸೆ ನೀಡಿ ದೂರ ಮಾಡಿದ್ದಾನೆ. ಮತ್ತೆ ಮೂರನೇ ಮದುವೆಯಾಗಿದ್ದ ಈತನನ್ನು ಪ್ರಶ್ನಿಸಲು  ಹೋಗಿದ್ದ ಮೊದಲ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಮೊದಲ ಪತ್ನಿಯ ಸಂಬಂಧಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.  ಹಲ್ಲೆಗೊಳಗಾದ ಮೊದಲ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

 

 

     

ಗ್ರಾಮಲೆಕ್ಕಿಗರ ಹುದ್ದೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ನವೆಂಬರ್-9
ಹಾಸನ : ಜಿಲ್ಲೆಯ ಕಂದಾಯ ಘಟಕದಲ್ಲಿ ಬರುವ ತಾಲ್ಲೂಕುಗಳಲ್ಲಿ ಖಾಲಿ ಇರುವ 31 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಗ್ರಾಮಲೆಕ್ಕಿಗ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ವೇತನ 11,600-21,000 ರೂ. ನಿಗಿಧಿ ಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್,ಸಿ, ಎಸ್ಟಿ , ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹೆಚ್ಚುವರಿ 10 ವರ್ಷಗಳ ವಯೋಸಡಿಲಿಕೆ ಇದೆ.ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಬಳಿಕ ಚಲನ್ ಎಸ್ ಬಿಐ ಬ್ಯಾಂಕ್ ಮೂಲಕ 200 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಶುಲ್ಕ.ಅರ್ಜಿ ಮತ್ತು ಶುಲ್ಕ ಸಲ್ಲಿಸಲು ಡಿಸೆಂಬರ್ 6 ಕೊನೆಯ ದಿನವಾಗಿದೆ.

 

 

66   ಕೆಪಿಸಿಸಿ ಅಧ್ಯಕ್ಷರಿಗೇ ಬಿಜೆಪಿಯಿಂದ ಬಹಿರಂಗ ಆಹ್ವಾನ
ನವೆಂಬರ್-8
ಹಾಸನ : ರಾಜ್ಯ ರಾಜಕಾರಣದಲ್ಲಿ ಚುನಾವಣೆ ಮುನ್ನಾ, ಚುನಾವಣೆ ನಂತ್ರ, ಬಿಜೆಪಿ, ಕಾಂಗ್ರೆಸ್ ಮುಖಂಡರನ್ನು ಕುದುರೇ ವ್ಯಾಪಾರದ ಮೂಲಕ, ಒಂದು ಪಕ್ಷ ಮತ್ತೊಂದು ಪಕ್ಷದ ಮುಖಂಡರನ್ನು ಖರೀದಿಸಿದ್ದು ಮಾಲೂಲಿ. ಅದರಲ್ಲೂ ವಿರೋಧ ಪಕ್ಷವಾಗಿರುವ ಬಿಜೆಪಿ, ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿತ್ತು. ಇಂತಹ ಬಿಜೆಪಿ, ಇದೀಗ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಾ ಜಿ ಪರಮೇಶ್ವರ್ ರನ್ನೇ ಬಿಜೆಪಿಗೆ ಆಹ್ವಾನಿಸಿದೆ ಎಂಬ ಸುದ್ದಿ, ಕಾಂಗ್ರೆಸ್ ನಲ್ಲಿ ಕೋಲಾಹಲ ಸೃಷ್ಠಿಸುವಂತಿದೆ.
ಹೌದು. ಡಾ ಜಿ ಪರಮೇಶ್ವರ್ ಗೆ ಬಿಜೆಪಿಯಿಂದ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಇಂದು ಹಾಸನದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.
ಬಿಜೆಪಿಯಿಂದ ಹಲವು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಡಾ ಜಿ ಪರಮೇಶ್ವರ್ ಹೇಳಿದ್ದರು. ಕಾಂಗ್ರೆಸ್ ಅನ್ನುವುದು ಮುಳುಗುತ್ತಿರೊ ಹಡಗು. ಅಂತಹ ಮುಳುಗುವ ಹಡಗಿಗೆ ಯಾರೂ ಹತ್ತುವುದಿಲ್ಲ ಎಂದು ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ. ಮುಳುಗುತ್ತಿರೋ ಹಡಗನ್ನು ಬಿಟ್ಟು ಕಾಂಗ್ರೆಸ್ ಅಧ್ಯಕ್ಷ ಡಾ ಜಿ ಪರಮೇಶ್ವರ್ ಬಿಜೆಪಿಗೆ ಬರಬೇಕು.
ಅವರಿಗೆ ಬಹಿರಂಗವಾಗಿ ಆಹ್ವಾನ ನೀಡುತ್ತಿದ್ದೇನೆ. ಪರಮೇಶ್ವರ್ ಗೆ ಇದೇ ಕಡೇ ಆಹ್ವಾನ ಎಂದೂ ಸಿ.ಟಿ ರವಿ ಹೇಳಿದ್ದಾರೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತುಗಳು ಕಾಂಗ್ರೆಸ್ ಗೆ ವ್ಯಂಗ್ಯ ಮಾಡಿದ್ದಾದರೂ ನಿರ್ಲಕ್ಷಿಸುವಂತಿಲ್ಲ. ಉಧ್ಯಮಗಳನ್ನು ಹೊಂದಿರುವ ಕಾಂಗ್ರೆಸ್ಸಿಗರನ್ನು ಐಟಿ ಇಲಾಖೆಯನ್ನು ಬಳಸಿಕೊಂಡು ಬಿಜೆಪಿಗೆ ಸೆಳೆಯಲಾಗ್ತಿದೆ. ಈ ಹಿನ್ನಲೆಯಲ್ಲೂ ಸಿ ಟಿ ರವಿ ಮಾತುಗಳು ಕಾಂಗ್ರೆಸ್ ನಲ್ಲಿ ಕೋಲಾಹಲ ಸೃಷ್ಠಿಸಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದಂತಿದೆ.

 

 

22

 ಸರ್ಕಾರದ ವಿರುದ್ದ ಶೋಭಾ ಕರಂದ್ಲಾಜೆ ಕಿಡಿ

 ನವೆಂಬರ್-7
ಹಾಸನ: ಜಿಲ್ಲೆಯಲ್ಲಿ ಇಂದು ನಡೆದ ಪರಿವರ್ತನಾ ಸಮಾವೇಶದಲ್ಲಿ ಜನರನ್ನುದ್ದೇಶಿಸಿ, ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಅವರು ಸಿಎಂ ಸಿದ್ದರಾಮಯ್ಯನವರು ನಮ್ಮ ಪರಿವರ್ತನಾ ಯಾತ್ರೆಯನ್ನು ಲೇವಡಿ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಐದು ಸೀಟುಗಳನ್ನು ಗೆದ್ದಿತ್ತು. ಆದರೇ ಇಂದು ಯಾವುದೇ ಲೋಕಸಭಾ, ವಿಧಾನಸಭಾಯಲ್ಲಾಗಲೀ, ಬಿಜೆಪಿಯ ಸದಸ್ಯರಿಲ್ಲ. ಯಾವುದೇ ಸ್ಥಳೀಯ ಸಂಸ್ಥೆಗಳಾಗಲೀ, ಬಿಡೆಪಿ ಹಿಡಿತದಲ್ಲಿಲ್ಲ. ಆದರೇ, ಇಂದು ಇಲ್ಲಿ ಸೇರಿರುವ ಜನಸ್ತೋಮವನ್ನು ನೋಡುತ್ತಿದ್ದರೇ, ಈ ಬಾರಿ ಖುಷಿಯ ವಿಚಾರದಂತೆ ಗೋಚರಿಸುತ್ತಿದೆ.
ಈ ಬಾರಿ ಹಾಸನದಲ್ಲಿ ಪರಿವರ್ತನೆ ಖಂಡಿತಾ ಎಂದು ಹೇಳಿದರು.
ಇನ್ನು ಸಮಾವೇಶದಲ್ಲಿ ಅವರು ಮೊಟ್ಟ ಮೊದಲ ಬಾರಿಗೆ ಇಡೀ ದೇಶದಲ್ಲೇ ಯಾರು ಅನುಷ್ಠಾನ ಮಾಡಿರದ ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದು ವಯಸ್ಸಾದ ಹಿರಿಯ ಜೀವಿಗಳಿಗೆ 1000ರೂ ಪಿಂಚಣಿ ನೀಡುವ ಮೂಲಕ ಅನೇಕರಿಗೆ ಸಹಾಯ ಮಾಡಿದ್ದೇವು ಅಂತ ಅವರು ಹೇಳಿದರು.

 

 

                                                                                                                    

ಪ್ರಜ್ವಲ್ ರೇವಣ್ಣ ಕಣಕ್ಕೆ:ದೇವೇಗೌಡ ಗ್ರೀನ್ ಸಿಗ್ನಲ್

ನವೆಂಬರ್-6

ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದಾಗಿ ಅವರ ತಾಯಿ ಭವಾನಿ ರೇವಣ್ಣ ಬಹುತೇಕ ಖಚಿತಪಡಿಸಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ರೇವಣ್ಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾತುರನಾಗಿದ್ದು, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಅದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿಸಿದರು.
ಬೇಲೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಪರ ಒಲವಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಪ್ರಜ್ವಲ್ ಕಣಕ್ಕಿಳಿಯಲಿದ್ದಾನೆ ಎಂದರು. ಆದರೆ ಪ್ರಜ್ವಲ್ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಅವರ ತೀರ್ಮಾನವನ್ನು ಪ್ರಜ್ವಲ್ ಶಿರಸಾ ಪಾಲಿಸಲಿದ್ದಾನೆ ಎಂದು ಭವಾನಿ ರೇವಣ್ಣ ಹೇಳಿದರು.
ದೇವೇಗೌಡರ ಕುಟುಂಬದಿಂದ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಪ್ರಜ್ವಲ್ ರೇವಣ್ಣ, ಭವಾನಿರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಅವರನ್ನು ಚುನಾವಣೆಗೆ ನಿಲ್ಲಿಸುವಂತೆ ಒತ್ತಡ ತರುತ್ತಿದ್ದರು. ಕೊನೆಗೂ ಕಾರ್ಯಕರ್ತರ ಮಾತಿಗೆ ಮನ್ನಣೆ ದೊರಕಿದ್ದು, ಪ್ರಜ್ವಲ್ ರೇವಣ್ಣ ಅವರು ರಾಜಕೀಯಕ್ಕೆ ಬರಲು ಕಾಲ ಸನ್ನಿಹಿತವಾಗಿದೆ. ಆದರೆ ಭವಾನಿ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆಯೇ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ

 

   ಗಗ ನವಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಯಾತ್ರೆ
ನವೆಂಬರ್.1
ಹಾಸನ: ಬಿಜೆಪಿ ವತಿಯಿಂದ ನವಕರ್ನಾಟಕ ನಿರ್ಮಾಣಕ್ಕಾಗಿ ನ.2ರಿಂದ 2018ರ ಜನೇವರಿ 28ರ ವರೆಗೆ ಪಕ್ಷದ ರಾಜ್ಯ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಯೋಗಾರಮೇಶ್ ತಿಳಿಸಿದರು.
ಅರಕಲಗೂಡು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪರಿವರ್ತನಾಯಾತ್ರೆ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯದ 224ವಿಧಾನಸಭಾ ವ್ಯಾಪ್ತಿಯಲ್ಲಿ 75ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಹಾಸನ ಜಿಲ್ಲೆಯ ಪರಿವರ್ತನಾ ಯಾತ್ರೆ ನ.6ರಿಂದ 8ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಅರಕಲಗೂಡು ವಿಧಾನಸಭಾ ವ್ಯಾಪ್ತಿಯ ಕೊಣನೂರಿನ ಬಿಎಂಶೆಟ್ಟಿ ಕಾಲೇಜು ಆವರಣದಲ್ಲಿ ಯಾತ್ರೆ ಅಂಗವಾಗಿ ನ.8ರಂದು ಬೃಹತ್ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ವಿಶ್ವನಾಥ್,ಬಿ.ಸಿ.ರಾಜೇಶ್, ಬೇಲೂರೇಗೌಡ ಇನ್ನಿತರರಿದ್ದರು.

 

                                                                                                              

ನೀರಾವರಿ ಕಾಮಗಾರಿಗೆ 70 ಕೋಟಿ ಅನುದಾನ

ಅಕ್ಟೋಬರ್.31

ಅರಕಲಗೂಡು: ವಿಧಾನಸಭಾ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆ ವತಿಯಿಂದ ವಿವಿಧ ಕಾಮಗಾರಿ ಕೈಗೊಳ್ಳಲು 70 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅನುದಾನವನ್ನು ನಿಗದಿತ ಅವಧಿಯಲ್ಲಿ ಬಳಸಿಕೊಳ್ಳುವಲ್ಲಿ ಎಂಜಿನಿಯರ್ಗಳ ನಿರ್ಲಕ್ಷ ಕಂಡು ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ನೀರಾವರಿ ಇಲಾಖೆ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿ,2017ನೇ ಸಾಲಿಗೆ ಅರಕಲಗೂಡು,ದೊಡ್ಡಮಗ್ಗೆ,ಹಳ್ಳಿಮೈಸೂರು ಹಾಗೂ ಹೇಮಾವತಿ ಜಲಾಶಯ ವ್ಯಾಪ್ತಿಯ ಜನವಸತಿ ಪ್ರದೇಶ, ನಾಲೆ ಹಾಗೂ ರಸ್ತೆ ಮತ್ತು ಅಡಿಕೆಬೊಮ್ಮನಹಳ್ಳಿ ಏತ ನೀರಾವರಿ ಎರಡನೇ ಹಂತದ ಕೆಲಸ ಆರಂಭಿಸಲು ಅನುದಾನ ಬಿಡುಗಡೆಯಾಗಿದೆ. ಒಟ್ಟು 504 ಕಾಮಗಾರಿ ಪೈಕಿ 250ನ್ನು ಮಾತ್ರ ಸೆಪ್ಟೆಂಬರ್ ಅಂತ್ಯಕ್ಕೆ ಕೈಗೊಳ್ಳಲಾಗಿದ್ದು, ಇನ್ನೂ 254 ಕೆಲಸಗಳನ್ನು ಮಾಡಬೇಕಿದೆ ಎಂದು ಹೇಳಿದರು.

 

 

 

rr  ರಾಜ್ಯದಲ್ಲಿ ಜೆಡಿಎಸ್ ಜೀವಂತವಿದೆ: ಎಚ್.ಡಿ.ದೇವೇಗೌಡ
ಅಕ್ಟೋಬರ್.25
ಹಾಸನ: ರಾಜ್ಯದಲ್ಲಿ ಜೆಡಿಎಸ್ ಸತ್ತಿದೆ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಜೆಡಿಎಸ್ ಜೀವಂತವಾಗಿದೆ ಎಂಬುದನ್ನು ತೋರಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.
ಚುನಾವಣಾ ಆಯೋಗ ಕೇಂದ್ರದ ಹಿಡಿತದಲ್ಲಿ ಸಿಲುಕಿರುವ ಕಾರಣ ಮೋದಿ ಹೇಳಿದಂತೆ ಚುನಾವಣೆ ದಿನಾಂಕ ಪ್ರಕಟಿಸುತ್ತದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಜೆಡಿಎಸ್ ಜೀವಂತವಾಗಿದೆ. ಅನಿತಾ ಕುಮಾರಸ್ವಾಮಿ, ಪ್ರಜ್ವಲ್ ಗೆ ಟಿಕೆಟ್ ನೀಡುವ ‌ವಿಷಯದಲ್ಲಿ ದುಡುಕಿನ ‌ನಿರ್ಧಾರ ಕೈಗೊಳ್ಳುತ್ತಿಲ್ಲ. ಪಿಜಿಆರ್ ಸಿಂಧ್ಯಾ ಮತ್ತೆ ನಮ್ಮೊಂದಿಗೆ ಬರುತ್ತಾರೆ. ಚುನಾವಣೆ ಸಮೀಕ್ಷೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಿಎಂ ಮೀನು ತಿಂದು ಧರ್ಮಸ್ಥಳಕ್ಕೆ ಹೋದ ಬಗ್ಗೆ ಮಾತನಾಡುವುದಿಲ್ಲ. ಸಿದ್ದರಾಮಯ್ಯ ಹಿಂದೆ ದೇವರನ್ನು ನಂಬುತ್ತಿರಲಿಲ್ಲ. ಈಗ ಪೂಜೆ ಮಾಡುತ್ತಿದ್ದಾರೆ. ಅವರೀಗ ಸಂಪೂರ್ಣ ಬದಲಾಗಿದ್ದಾರೆ ಎಂದರು.
ನವೆಂಬರ್ ಎಂಟರಂದು ನಾವೂ ಪ್ರತಿಭಟನೆ ಮಾಡುತ್ತೇವೆ. ಪ್ರಧಾನಿ‌ ಮೋದಿ ಅವರು ಚುನಾವಣಾ ಆಯೋಗ, ಆರ್ ಬಿಐ, ಸಿಬಿಐ ಎಲ್ಲವನ್ನೂ ನಿಯಂತ್ರಣ ದಲ್ಲಿಟ್ಟುಕೊಂಡಿದ್ದಾರೆ ಎಂದು ದೂರಿದರು. ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಮತ್ತು ಪರಿಹಾರ ನೀಡುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡುತ್ತೇವೆ. ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

 

 

 

  

           ಪ್ರವಾಸಕ್ಕೆ ಪ್ರವಾಸಿಗರು ಫಿದಾ

 ಅಕ್ಟೋಬರ್.21
ಹಾಸನ: ಹಾಸನಾಂಬ ದರ್ಶನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ 'ಹಾಸನ ದರ್ಶನ' ಪ್ರವಾಸಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಲ್ಲದೆ ಪ್ರವಾಸಿಗರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕೆ ಬರುವ ಪ್ರವಾಸಿಗರಿಗೆ ಜಿಲ್ಲಾ ದರ್ಶನ ಕೈಗೊಳ್ಳುವ ಸಲುವಾಗಿ ಪೂರ್ವಭಾವಿಯಾಗಿ ಹಾಸನಾಂಬ ದರ್ಶನದ ವೇಳೆ ಹಾಸನ ದರ್ಶನ ಪ್ರವಾಸ ಕೈಗೊಂಡಿತ್ತು. 12 ರಿಂದ ಆರಂಭವಾದ ಪ್ರವಾಸ ಶುಕ್ರವಾರ ಅಂತ್ಯಗೊಂಡಿತು. 307 ಜನ ಪ್ರವಾಸಿಗರು ಪ್ರವಾಸ ಕೈಗೊಂಡಿದ್ದರು. ಶನಿವಾರದ ಪ್ರವಾಸಕ್ಕೆ 20 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ತಲಾ 200ರೂ. ಪಡೆದು ಕೊಂಡಜ್ಜಿ, ಕೋರವಂಗಲ, ರುದ್ರಪಟ್ಟಣ, ರಾಮನಾಥಪುರದ ನಂತರ ಮಧ್ಯಾಹ್ನ 2ಕ್ಕೆ ಹಾಸನಕ್ಕೆ ಆಗಮಿಸಿ ಮಧ್ಯಾಹ್ನದ ಊಟ ಮುಗಿಸಿ ನಂತರ ಮಧ್ಯಾಹ್ನ 3 ಕ್ಕೆ ದೊಡ್ಡಗದ್ದವಳ್ಳಿ, ಹಳೇಬೀಡು, ಬೇಲೂರು ಮಾರ್ಗವಾಗಿ ರಾತ್ರಿ 9ಕ್ಕೆ ಹಾಸನಕ್ಕೆ ಹಿಂದಿರುಗುತ್ತಿದ್ದರು.                                                                                                                              

Ads
;